ICC World Cup 2023 : ಅಲ್ಲೇ ಡ್ರಾ, ಅಲ್ಲೇ ಬಹುಮಾನ; ಶಕಿಬ್​ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್​ - Vistara News

ಕ್ರಿಕೆಟ್

ICC World Cup 2023 : ಅಲ್ಲೇ ಡ್ರಾ, ಅಲ್ಲೇ ಬಹುಮಾನ; ಶಕಿಬ್​ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್​

ವಿವಾದಾತ್ಮಕ ತೀರ್ಪಿನ ಮೂಲಕ ತಮ್ಮನ್ನು ಔಟ್ ಮಾಡಿದ ಶಕಿಬ್ ವಿಕೆಟ್​ ಪಡೆಯುವ ಮೂಲಕ ಅವರು ಸೇಡು ತೀರಿಸಿಕೊಂಡಿದ್ದಾರೆ.

VISTARANEWS.COM


on

Shakib al hasan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಶಕೀಬ್ ಅಲ್ ಹಸನ್ ಮೇಲೆ ಏಂಜೆಲೊ ಮ್ಯಾಥ್ಯೂಸ್ ಸೇಡು ತೀರಿಸಿಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ತಮ್ಮ ವಿಶ್ವ ಕಪ್​ ಪಂದ್ಯದಲ್ಲಿ (ICC World Cup 2023) ಮೊದಲ ಇನ್ನಿಂಗ್ಸ್​ನಲ್ಲಿ ಶಕೀಬ್ ಅವರ ಮನವಿಯಿಂದಾಗಿ ಮ್ಯಾಥ್ಯೂಸ್ ಅವರನ್ನು ಟೈಮ್ಡ್​ ​ ಔಟ್​ ಎಂದು ಘೋಷಿಸಲಾಗಿತ್ತು. ಇದು ಶ್ರೀಲಂಕಾ ತಂಡದ ಮಾಜಿ ಆಟಗಾರನನ್ನು ಕೆರಳಿಸಿತ್ತು. ಅನವಶ್ಯಕವಾಗಿ ಔಟ್​ ಮಾಡಿದ್ದಾರೆ ಎಂಬ ಕೋಪ ವ್ಯಕ್ತಪಡಿಸಿದ್ದರು. ಅಂತೆಯೇ ಬಾಂಗ್ಲಾದೇಶ ಇನಿಂಗ್ಸ್​ನಲ್ಲಿ ಶಕೀಬ್ ಅವರನ್ನು ಏಂಜೆಲೋ ಮ್ಯಾಥ್ಯೂಸ್ ಪೆವಿಲಿಯನ್​ಗೆ ಕಳುಹಿಸಿದ್ದಾರೆ. ಈ ವೇಳೆ ಅವರು ಟೈಮ್ ಆಯಿತು ಹೋಗು ಎನ್ನುವಂತೆ ಸನ್ನೆ ಮಾಡುವ ಮೂಲಕ ತಮ್ಮ ಸೇಡು ತೀರಿಸಿಕೊಂಡಿದ್ದಾರೆ.

ನಾಯಕ ಶಕಿಬ್ ಅಲ್​ ಹಸನ್ ಪಂದ್ಯದಲ್ಲಿ 82 ರನ್ ಬಾರಿಸುವ ಮೂಲಕ ಗೆಲುವಿಗೆ ತಮ್ಮ ಕೊಡುಗೆ ಕೊಟ್ಟಿದ್ದಾರೆ. ಆದರೆ ಮ್ಯಾಥ್ಯೂಸ್​ ಎಸೆತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಅವರು ಅನವಶ್ಯಕವಾಗಿ ಟ್ರೋಲ್ ಆಗುವಂತಾಯಿತು.

ಮ್ಯಾಥ್ಯೂಸ್ ಯಾಕೆ ಔಟ್​?

ಶ್ರೀಲಂಕಾದ ಆಟಗಾರ ಏಂಜೆಲೊ ಮ್ಯಾಥ್ಯೂಸ್‌(Angelo Mathews) ಅವರು ಬ್ಯಾಟಿಂಗ್​ ನಡೆಸದೆಯೇ ಔಟ್​ ಆಗಿರುವುದು ಭಾರಿ ಚರ್ಚೆಗೆ ಕಾರಣವಾಯಿತು. ಬ್ಯಾಟಿಂಗ್​ ಆರಂಭಿಸಲು ತಡ ಮಾಡಿದ ಕಾರಣದಿಂದ ಅವರು ಟೈಮ್ಡ್‌ ಔಟ್‌(timed out) ಆಗಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿ ಔಟಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.

ಅಸಲಿಗೆ ಔಟ್​ ಆಗಲು ಕಾರಣವೇನು?

ನಾಲ್ಕನೇ ವಿಕೆಟ್​ ಬಿದ್ದ ಬಳಿಕ ಆಡಲಿಳಿದ ಏಂಜೆಲೊ ಮ್ಯಾಥ್ಯೂಸ್ ಅವರು ಕ್ರೀಸ್​ಗೆ ಬಂದಾಗ ಹೆಲ್ಮೆಟ್​ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಇದೇ ವೇಳೆ ಅವರು ಸಹ ಆಟಗಾರನ ಬಳಿ ಬೇರೆ ಹೆಲ್ಮೆಟ್ ತರುವಂತೆ ಹೇಳಿದ್ದಾರೆ. ಹೊಸ ಹೆಲ್ಮೆಟ್ ತರುವಲ್ಲಿ ಕೊಂಚ ತಡವಾಗಿದೆ. ಇದೇ ವೇಳೆ ಬಾಂಗ್ಲಾದೇಶ ಆಟಗಾರರು ಅಂಪೈರ್​ ಬಳಿ ಐಸಿಸಿ ನಿಯಮದಂತೆ ಟೈಮ್ ಔಟ್ ಅಫೀಲ್​ ಮಾಡಿದ್ದಾರೆ. ಇದನ್ನು ಅಂಪೈರ್​ ಕೂಡ ಮಾನ್ಯ ಮಾಡಿ ಓಟ್​ ಎಂದು ತೀರ್ಪು ನೀಡಿದರು. ಆದರೆ ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗಲೇ ಇಲ್ಲ. ಎಲ್ಲರೂ ಅಚ್ಚರಿಯಿಂದ ಚರ್ಚಿಸತೊಡಗಿದರು.

ಔಟ್​ ನೀಡಿದ ಬಳಿಕ ಮ್ಯಾಥ್ಯೂಸ್ ಕೂಡ ಅಂಪೈರ್​ ಬಳಿಕ ಚರ್ಚೆ ನಡೆಸಿದರು. ನಾನು ಉದ್ದೇಶ ಪೂರ್ವಕವಾಗಿ ಈ ರೀತಿ ಸಮಯ ವ್ಯರ್ಥ ಮಾಡಿಲ್ಲ. ಎಂದು ಮನವರಿಕೆ ಮಾಡಿದರು. ಅಲ್ಲದೆ ಬಾಂಗ್ಲಾದೇಶ ನಾಯಕ ಶಕೀಬ್​ ಅವರರಿಗೂ ತಮ್ಮ ಸಮಸ್ಯೆಯನ್ನು ತಿಳಿಸಿದರೂ ಆದರೆ ಇದಕ್ಕೆ ಶಕೀಬ್,​ ರೂಲ್ಸ್​ ಪ್ರಕಾರ ನಾವು ಅಫೀಲ್ ಮಾಡಿದ್ದೇವೆ ಎಂದು ಹೇಳಿ ಸುಮ್ಮನಾದರು.​

ಇದನ್ನೂ ಓದಿ: ICC World Cup 2023 : ಶ್ರೀಲಂಕಾ ವಿರುದ್ಧ ಬಾಂಗ್ಲಾ ತಂಡಕ್ಕೆ 3 ವಿಕೆಟ್​ ವಿಜಯ

ಮ್ಯಾಥ್ಯೂಸ್ ಪೆವಿಲಿಯನ್​ ಕಡೆ ಸಾಗುವ ವೇಳೆಯೂ ಬೇಸರಿಂದಲೇ ಹೆಜ್ಜೆ ಹಾಕಿದರು. ಅಲ್ಲದೆ ತಂಡದ ಸಿಬ್ಬಂದಿ ಬಳಿಯೂ ಇದೇ ವಿಚಾರವನ್ನು ಚರ್ಚಿಸಿದರು. ಈ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಹಂಚಿಕೊಂಡಿದೆ. ಎಂಸಿಸಿ ಪ್ರಕಾರ, ಈ ಕೆಳಗಿನ ಸಂದರ್ಭಗಳಲ್ಲಿ ಬ್ಯಾಟರ್ ಅನ್ನು ಸಮಯ ಮೀರಿದ ಔಟ್ ಎಂದು ಪರಿಗಣಿಸಲಾಗುತ್ತದೆ.

ಐಸಿಸಿ ನಿಯಮ ಏನು ಹೇಳುತ್ತದೆ?

ಆರ್ಟಿಕಲ್ 40.1.1 ನಿಯಮದ ಪ್ರಕಾರ, ಒಂದು ವಿಕೆಟ್ ಪತನದ ನಂತರ ಅಥವಾ ಬ್ಯಾಟರ್‌ನ ನಿವೃತ್ತಿಯ ಬಳಿಕ ಕ್ರೀಸ್​ಗೆ ಬರುವ ಆಟಗಾರ ನಿಗದಿತ ಸಮಯದಲ್ಲಿ ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಅಂದರೆ 3 ನಿಮಿಷಗಳ ಒಳಗೆ ಚೆಂಡನ್ನು ಎದುರಿಸಬೇಕು. ಒಂದು ವೇಳೆ ಈ ಪ್ರಕ್ರಿಯೆಯನ್ನು ಬ್ಯಾಟರ್ ಪೂರೈಸದಿದ್ದರೆ, ಆಗ ಸಮಯ ಮೀರಿದ (ಟೈಮ್ಡ್ ಔಟ್) ಎಂದು ತೀರ್ಪು ನೀಡಲಾಗುತ್ತದೆ.

40.1.2 ನಿಯಮದ ಪ್ರಕಾರ, ಯಾವುದೇ ಬ್ಯಾಟರ್ ಹೆಚ್ಚಿನ ವಿಳಂಬದ ಬಳಿಕ ಕ್ರೀಸ್‌ಗೆ ಬಂದರೆ, ಸ್ಟ್ಯಾಂಡಿಂಗ್ ಅಂಪೈರ್‌ಗಳು 16.3ರ ಕಾರ್ಯವಿಧಾನದ ಅಡಿಯಲ್ಲಿ ಅಳವಡಿಸಿಕೊಳ್ಳಬೇಕು. ಆದರೆ ಎದುರಾಳಿ ತಂಡದ ಆಟಗಾರರು ಔಟ್​ಗೆ ಮನವಿ ಮಾಡಿದರೆ ಮಾತ್ರ. ಅಂಪೈರ್​ ಅವರೇ ಸ್ವ ನಿರ್ಧಾರ ಕೈಗೊಳ್ಳುವಂತಿಲ್ಲ. ಈ ಟೈಮ್ಡ್ ಔಟ್ ವಿಕೆಟ್‌ ಬೌಲಿಂಗ್​ ನಡೆಸುತ್ತಿದ್ದ ಬೌಲರ್​ಗೆ ಸಿಗುವುದಿಲ್ಲ. ಇದು ತಂಡಕ್ಕೆ ಸಿಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Abhishek Sharma: ಮಾಡೆಲ್ ಆತ್ಮಹತ್ಯೆ; ಪೊಲೀಸ್‌ ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಅಭಿಷೇಕ್ ಶರ್ಮಾ

ಮಾಡೆಲ್ ತಾನಿಯಾ ಸಿಂಗ್(Model Tania Singh) ಆತ್ಮಹತ್ಯೆ(Tanya suicide case) ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಅಭಿಷೇಕ್ ಶರ್ಮಾ(Abhishek Sharma) ಅವರನ್ನು ಮಂಗಳವಾರ ಸೂರತ್​ ಪೊಲೀಸರು(Surat Police) ವಿಚಾರಣೆ ನಡೆಸಿದ್ದಾರೆ.

VISTARANEWS.COM


on

Abhishek Sharma
Koo

ಸೂರತ್ ಮೂಲದ ಜನಪ್ರಿಯ ಮಾಡೆಲ್ ತಾನಿಯಾ ಸಿಂಗ್(Model Tania Singh) ಆತ್ಮಹತ್ಯೆ(Tanya suicide case) ಪ್ರಕರಣಕ್ಕೆ ಸಂಬಂಧಿಸಿದಂತೆ, ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆಲ್‌ರೌಂಡರ್ ಅಭಿಷೇಕ್ ಶರ್ಮಾ(Abhishek Sharma) ಅವರನ್ನು ಮಂಗಳವಾರ ಸೂರತ್​ ಪೊಲೀಸರು(Surat Police) ವಿಚಾರಣೆ ನಡೆಸಿದ್ದಾರೆ.

ರೂಪದರ್ಶಿ ತನಿಯಾ ಸಿಂಗ್ (28) ಅವರು ಕಳೆದ ತಿಂಗಳು ಸೂರತ್‍ನ ತಮ್ಮ ಅಪಾರ್ಟ್‍ಮೆಂಟ್‍ನಲ್ಲಿ ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಆತ್ಮಹತ್ಯೆಯ ಕೇಸ್‌ನಲ್ಲಿ ಸ್ಥಳೀಯ ಪೊಲೀಸರು ವಿಚಾರಣೆಗೆ ಬರುವಂತೆ ಅಭಿಷೇಕ್​ಗೆ ಸಮನ್ಸ್‌ ಜಾರಿ ಮಾಡಿದ್ದರು. ಮಾಡೆಲ್‌ ತಾನಿಯಾ ಸಿಂಗ್‌ ತನ್ನ ಕೊನೆಯ ಫೋನ್​ ಕರೆಯನ್ನು ಅಭಿಷೇಕ್‌ ಶರ್ಮಗೆ ಮಾಡಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿತ್ತು. ಈ ನಿಟ್ಟಿನಲ್ಲಿ ಪೊಲೀಸರು ಅವರಿಗೆ ಸಮನ್ಸ್ ನೀಡಿ ತನಿಖೆ ಆರಂಭಿಸಿದ್ದರು. ಇಂದು ಸೂರತ್‌ನ ವೆಸು ಪೊಲೀಸ್ ಠಾಣೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.

ಕಳೆದ ಎರಡೂವರೆ ವರ್ಷಗಳಿಂದ ತಾನಿಯಾ ಫ್ಯಾಷನ್ ಡಿಸೈನಿಂಗ್ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದರು. ಫೆ. 20 ರಂದು ಮನೆಗೆ ತಡವಾಗಿ ಆಗಮಿಸಿದ್ದ ತಾನಿಯಾ ಶರ್ಮ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾನಿಯಾ ಕಾಲ್ ಡಿಟೇಲ್ಸ್​ನಲ್ಲಿ ಹಲವು ರಹಸ್ಯಗಳು ಅಡಗಿವೆ ಎಂದು ಪೊಲೀಸರು ತಿಳಿಸಿದ್ದರು. ಅಲ್ಲದೆ ಕೊನೆಯ ಕರೆ ಮತ್ತು ಸಂದೇಶವನ್ನು ತಾನಿಯಾ ಅವರು ಅಭಿಷೇಕ್​ಗೆ ಕಳುಹಿಸಿದ್ದರು. ಹೀಗಾಗಿ ತನಿಖೆಯ ಗಮನವು ಅವರತ್ತ ಸಾಗಿತ್ತು.

ಇದನ್ನೂ ಓದಿ Tushar Arothe: ಭಾರತ ತಂಡದ ಮಾಜಿ ಕೋಚ್ ಮನೆಯಲ್ಲಿ ಕೋಟಿ ರೂ. ಪತ್ತೆ; ವಶಕ್ಕೆ ಪಡೆದ ಪೊಲೀಸರು

“ಮೃತ ರೂಪದರ್ಶಿಯೊಂದಿಗೆ ಅಭಿಷೇಕ್ ಶರ್ಮಾ ಸ್ನೇಹಿತರಾಗಿದ್ದರು ಎಂದು ನಮಗೆ ತಿಳಿದು ಬಂದಿದೆ. ಹೆಚ್ಚಿನ ವಿವರಗಳು ತನಿಖೆಯಲ್ಲಿ ತಿಳಿಯುತ್ತದೆ” ಎಂದು ಕಳೆದ ತಿಂಗಳು ಸಹಾಯಕ ಪೊಲೀಸ್ ಆಯುಕ್ತ ವಿಆರ್ ಮಲ್ಹೋತ್ರಾ ಹೇಳಿದ್ದರು. ಮಂಗಳವಾರ ನಡೆದ ಪೊಲೀಸ್​ ವಿಚಾರಣೆಯಲ್ಲಿ ಅಭಿಷೇಕ್​ ಶರ್ಮ ಅವರು ತನಿಯಾ ಜತೆಗಿನ ಸಂಬಂಧದ ಬಗ್ಗೆ ಏನು ಹೇಳಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆಟಗಾರನಾಗಿದ್ದಾರೆ. 2022ರ ಐಪಿಎಲ್ ಹರಾಜಿನಲ್ಲಿ 6.5 ಕೋಟಿ ರೂ.ಗೆ ಖರೀದಿಸಿತ್ತು. ಇದುವೆಗೆ 47 ಪಂದ್ಯಗಳಳನ್ನಾಡಿರುವ ಅವರು 137.38 ಸ್ಟ್ರೈಕ್ ರೇಟ್‌ನಲ್ಲಿ 893 ರನ್ ಗಳಿಸಿದ್ದಾರೆ. 75 ರನ್ ಗರಿಷ್ಠ ಸ್ಕೋರ್. 4 ಅರ್ಧ ಶತಕ ಹಾಗೂ 9 ವಿಕೆಟ್‌ಗಳನ್ನು ಪಡೆದಿದ್ದಾರೆ.

Continue Reading

ಕ್ರೀಡೆ

Shubman Gill: 5ನೇ ಟೆಸ್ಟ್​ಗೂ ಮುನ್ನ ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದ ಗಿಲ್

ಶುಭಮನ್​ ಗಿಲ್​ ಅವರು ಧರ್ಮಶಾಲಾದ ಬೌದ್ಧ ಸನ್ಯಾಸಿಗಳೊಂದಿಗೆ ಕಾಲ ಕಳೆಯುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ

VISTARANEWS.COM


on

Shubman Gill
Koo

ಧರ್ಮಾಶಾಲಾ: ಟೀಮ್​ ಇಂಡಿಯಾದ ಯುವ ಆಟಗಾರ ಶುಭಮನ್​ ಗಿಲ್​ ಅವರು ಧರ್ಮಶಾಲಾದಲ್ಲಿ ನಡೆಯುವ ಇಂಗ್ಲೆಂಡ್(IND vs ENG)​ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯಕ್ಕೂ(IND vs ENG 5th test) ಮುನ್ನ ಇಲ್ಲಿನ ಬೌದ್ಧ ದೇವಾಲಯಕ್ಕೆ ಭೇಟಿ ನೀಡಿ ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶುಭಮನ್​ ಗಿಲ್​ ಅವರು ಧರ್ಮಶಾಲಾದ ಬೌದ್ಧ ಸನ್ಯಾಸಿಗಳೊಂದಿಗೆ ಕಾಲ ಕಳೆಯುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಗಿಲ್ ಅವರು ಈ ಫೋಟೊದಲ್ಲಿ ಸನ್ಯಾಸಿಗಳು ಮಾತಮಾಡುತ್ತಿರುವುದನ್ನು ದೂದರಲ್ಲಿ ಕುಳಿತು ಶ್ರದ್ಧೆಯಿಂದ ಕೇಳುತ್ತಿರುವುದನ್ನು ನೋಡಬಹುದಾಗಿದೆ. ಗಿಲ್​ ಅವರ ಧಾರ್ಮಿಕ ಶ್ರದ್ಧೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಗಿಲ್​ ಅವರ ಈ ಧಾರ್ಮಿಕ ಶ್ರದ್ಧೆಗೆ ಕೊಹ್ಲಿಯೇ ಪ್ರೇರಣೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ವಿರಾಟ್​ ಕೊಹ್ಲಿ ಕ್ರಿಕೆಟ್​ಗೆ ಬಂದ ಆರಂಭದಲ್ಲಿ ದೇವರು ಮತ್ತು ಪೂಜೆಯ ಮೇಲೆ ನಂಬಿಕೆಯಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆದರೆ, ಅನುಷ್ಕಾ ಶರ್ಮ ಅವರನ್ನು ಮದುವೆಯಾದ ಬಳಿಕ ಕೊಹ್ಲಿ ಕೂಡ ದೈವ ಭಕ್ತರಾದರು. 2 ವರ್ಷಗಳ ಕಾಲ ಬ್ಯಾಟಿಂಗ್​ ವೈಫಲ್ಯ ಕಂಡು ವಿಶ್ವಾದ್ಯಂತ ಟೀಕೆಗೆ ಗುರಿಯಾಗಿದ್ದ ಸಂದರ್ಭ ಕೊಹ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದಾದ ನಂತರ ಕೊಹ್ಲಿ ತಮ್ಮ ಬ್ಯಾಟಿಂಗ್​ ಫಾರ್ಮ್​ ಕಂಡುಕೊಂಡು ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಇದೀಗ ಕೊಹ್ಲಿ ಹಲವು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವುದನ್ನು ಮುಂದುವರಿಸಿದ್ದಾರೆ. ಇದೀಗ ಗಿಲ್​ ಕೂಡ ತಮ್ಮ ರೋಲ್​ ಮಾಡೆಲ್​ ಕೊಹ್ಲಿಯ ಹಾದಿಯನ್ನೇ ಹಿಡಿದಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಅಂತಿಮ ಟೆಸ್ಟ್​ಗೆ ಭಾರತ ತಂಡ


ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ಕೆ.ಎಸ್ ಭರತ್ (ವಿಕೆಟ್​ ಕೀಪರ್​), ದೇವದತ್ ಪಡಿಕ್ಕಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

ಇತ್ತೀಚೆಗೆ ಶುಭಮನ್​ ಗಿಲ್ ಅವರನ್ನು ಮುಂಬರುವ ಲೋಕಸಭಾ ಚುನಾವಣೆಗೆ ಪಂಜಾಬ್​​ನ ರಾಯಭಾರಿಯಾಗಿ ನೇಮಿಸಲಾಗಿತ್ತು. ಪ್ರತಿಭಾನ್ವಿತ ಬಲಗೈ ಬ್ಯಾಟರ್​ ಪಂಜಾಬ್ ರಾಜ್ಯಕ್ಕೆ “ರಾಜ್ಯ ಐಕಾನ್” ಆಗಿ ಕಾರ್ಯನಿರ್ವಹಿಸಲಿದ್ದಾರೆ. ಪಂಜಾಬ್​​ನ ಮುಖ್ಯ ಚುನಾವಣಾ ಅಧಿಕಾರಿ ಸಿಬಿನ್ ಸಿ ಈ ಗೌರವವನ್ನು ಯುವ ಆಟಗಾರನಿಗೆ ನೀಡಿದ್ದಾರೆ. ಶುಬ್ಮನ್ ಗಿಲ್ ಅವರಂತಹ ಪ್ರಭಾವಿ ವ್ಯಕ್ತಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಮುಂಬರುವ 2024 ರ ಚುನಾವಣೆಯಲ್ಲಿ 70% ಕ್ಕಿಂತ ಹೆಚ್ಚು ಮತದಾನವನ್ನು ಸಾಧಿಸುವ ಭರವಸೆಯನ್ನು ಚುನಾವಣಾ ಆಯೋಗ ಹೊಂದಿದೆ.

Continue Reading

ಕ್ರಿಕೆಟ್

WPL 2024: ಡಬ್ಲ್ಯುಪಿಎಲ್​ಗೂ ತಟ್ಟಿದ ಡಿಆರ್​ಎಸ್ ವಿವಾದ; ಅಸಮಾಧಾನ ಹೊರಹಾಕಿದ ಯುಪಿ ತಂಡ

ಚಾಮರಿ ಅಟಪಟ್ಟು(Chamari Athapaththu) ಅವರಿಗೆ ಮೂರನೇ ಅಂಪೈರ್​ ನೀಡಿದ ಡಿಆರ್​ಎಸ್​ ಎಲ್​ಬಿಡಬ್ಲ್ಯು ತೀರ್ಪಿನ ಬಗ್ಗೆ ತಂಡದ ನಾಯಕಿ, ಕೋಚ್​ ಸೇರಿ ಹಲವು ಕ್ರಿಕೆಟ್​ ಪಂಡಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

VISTARANEWS.COM


on

WPL 2024
Koo

ಬೆಂಗಳೂರು: ಎಷ್ಟೇ ತಂತ್ರಜ್ಞಾನ ಬಂದರೂ ಕ್ರಿಕೆಟ್​ನಲ್ಲಿ ಅಂಪೈರ್​ಗಳ ಕೆಲ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ಅಲ್ಲದೆ ಇದನ್ನು ಮಾನ್ಯ ಮಾಡುವ ರೀತಿಯೂ ಕೆಲವು ಬಾರಿ ವಿವಾದಕ್ಕೆ ಕಾರಣವಾಗುತ್ತದೆ. ಈ ರೀತಿಯ ತೀರ್ಪಿನಿಂದ ಪಂದ್ಯವನ್ನು ಸೋತ ಮತ್ತು ಆಟಗಾರರು ಅಂಪೈರ್​ ತೀರ್ಪಿಗೆ(DRS Controversy) ಆಕ್ರೋಶ ವ್ಯಕ್ತಪಡಿಸಿದ ಹಲವು ನಿದರ್ಶನವೂ ಇದೆ. ಇದೀಗ ಮಹಿಳಾ ಪ್ರೀಮಿಯರ್​ ಲೀಗ್​(ಡಬ್ಲ್ಯುಪಿಎಲ್​)ನಲ್ಲಿಯೂ(WPL 2024) ಮೂರನೇ ಅಂಪೈರ್​ ತೀರ್ಪಿಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದಿದ್ದ ಆರ್​ಸಿಬಿ(Royal Challengers Bangalore) ಮತ್ತು ಯುಪಿ ವಾರಿಯರ್ಸ್(UP Warriorz)​ ನಡುವಣ ಪಂದ್ಯದಲ್ಲಿ ಯುಪಿ ತಂಡದ ಆಟಗಾರ್ತಿ ಚಾಮರಿ ಅಟಪಟ್ಟು(Chamari Athapaththu) ಅವರಿಗೆ ಮೂರನೇ ಅಂಪೈರ್​ ನೀಡಿದ ಡಿಆರ್​ಎಸ್​ ಎಲ್​ಬಿಡಬ್ಲ್ಯು ತೀರ್ಪಿನ ಬಗ್ಗೆ ತಂಡದ ನಾಯಕಿ, ಕೋಚ್​ ಸೇರಿ ಹಲವು ಕ್ರಿಕೆಟ್​ ಪಂಡಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ, ಸ್ಮೃತಿ ಮಂಧಾನ(80) ಮತ್ತು ಎಲ್ಲಿಸ್​ ಪೆರ್ರಿ(58) ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ಕೇವಲ 3 ವಿಕೆಟ್​ ನಷ್ಟಕ್ಕೆ 198 ರನ್​ ಬಾರಿಸಿತು. ಯುಪಿ ವಾರಿಯರ್ಸ್ ಈ ಬೃಹತ್​ ಮೊತ್ತವನ್ನು​ ಬೆನ್ನಟ್ಟಲಾರಂಭಿಸಿತು. ಈ ವೇಳೆ ಆರಂಭಿಕ ಆಟಗಾರ್ತಿ ಕಿರಣ್ ನವಗಿರೆ ವಿಕೆಟ್​ ಪತನಗೊಂಡಿದು. ದ್ವಿತೀಯ ವಿಕೆಟ್​ಗೆ ಆಡಲಿಳಿದ ಲಂಕಾದ ಹಾರ್ಟ್ ಹಿಟ್ಟರ್​ ಚಾಮರಿ ಅಟಪಟ್ಟು 8 ರನ್​ ಗಳಸಿದ್ದ ವೇಳೆ ಜಾರ್ಜಿಯಾ ವೇರ್ಹ್ಯಾಮ್ ಅವರ ಎಸೆತವನ್ನು ಲೆಗ್​ಸೈಡ್​ ಕಡೆ ಬಾರಿಸಲು ಮುಂದಾದರು. ಆದರೆ ಚೆಂಡು ನೇರವಾಗಿ ಪ್ಯಾಟ್​ಗೆ ಬಡಿಯಿತು. ಆರ್​ಸಿಬಿ ಆಟಗಾರ್ತಿಯರು ಔಟ್​ಗೆ ಮನವಿ ಮಾಡಿದರು. ಫೀಲ್ಡ್​ ಅಂಪೈರ್​ ಇದನ್ನು ಮಾನ್ಯ ಮಾಡದೆ ನಾಟೌಟ್​ ತೀರ್ಪು ನೀಡಿದರು.

ಇದನ್ನೂ ಓದಿ WPL 2024 Points Table: ಡಬ್ಲ್ಯುಪಿಎಲ್​ನಲ್ಲಿ ಇನ್ನು 9 ಪಂದ್ಯಗಳು ಬಾಕಿ; ಅಂಕಪಟ್ಟಿ ಹೇಗಿದೆ?

ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಸಹ ಆಟಗಾರ್ತಿಯರಲ್ಲಿ ಚರ್ಚಿಸಿ ಡಿಆರ್​ಎಸ್​ ಮೊರೆ ಹೋದರು. ಮೂರನೇ ಅಂಪೈರ್ ಟಿವಿ ರೀಪ್ಲೆಯಲ್ಲಿ​ ಇದನ್ನು ಪರೀಕ್ಷಿಸುವಾಗ ಚೆಂಡು ಪ್ಯಾಡ್​ಗೆ ಬಡಿದು ಲೆಗ್ ಸೈಡ್​ನತ್ತ ಹೋಗುವುದು ಸ್ಪಷ್ಟವಾಗಿ ಕಂಡುಬಂತು. ಆದರೆ, ಪಿಚಿಂಗ್​ ಇನ್​ಸೈಡ್​ ಮಾರ್ಕ್ ಮತ್ತು ಬಾಲ್​ ಟ್ರ್ಯಾಕಿಂಗ್​ನಲ್ಲಿ ಲೆಗ್​ ಸೈಡ್​ಗೆ ಹೋಗಬೇಕಿದ್ದ ಚೆಂಡು ನೇರವಾಗಿ ಚಲಿಸಿ ವಿಕೆಟ್​ಗೆ ಬಡಿಯುತ್ತಿರುವಂತೆ ಕಂಡುಬಂತು. ಹೀಗಾಗಿ ಮೂರನೇ ಅಂಪೈರ್​ ಇದನ್ನು ಔಟ್​ ನೀಡಿದರು.

ಅಂಪೈರ್​ ಅವರ ಈ ನಿರ್ಧಾರ ಕಂಡು ಮೈದಾನದಲ್ಲಿದ್ದ ಯುಪಿ ನಾಯಕಿ ಅಲಿಸ್ಸಾ ಹೀಲಿ ಅರೆ ಇದು ಹೇಗೆ ಸಾಧ್ಯ, ಲೆಗ್​ಸೈಡ್​ ಹೋಗಬೇಕಿದ್ದ ಚೆಂಡು ವಿಕೆಟ್​ಗೆ ಹೇಗೆ ಬಡಿಯಿತು ಎಂದು ವಾಗ್ವಾದ ನಡೆಸಿದರು. ಚಾಮರಿ ಅಟಪಟ್ಟು ಕೂಡ ಈ ತೀರ್ಪಿಗೆ ಬೇಸರಗೊಂಡ ಪೆವಿಲಿಯನ್​ ಕಡೆ ಹೆಜ್ಜೆಹಾಕಿದರು. ಪಂದ್ಯ ಮುಕ್ತಾಯದ ಬಳಿಕ ಯುಪಿ ತಂಡದ ಕೋಚ್​ ಕೂಡ ಈ ತೀರ್ಪಿನ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಈ ಪಂದ್ಯದವನ್ನು ಯುಪಿ 23ರನ್​ ಅಂತರದಿಂದ ಕಳೆದುಕೊಂಡಿತ್ತು. ಈ ತೀರ್ಪು ಕೂಡ ತಂಡದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಒಂದೊಮ್ಮೆ ಈ ತೀರ್ಪು ಸರಿಯಾಗುತ್ತಿದ್ದರೆ, ಚಾಮರಿ ಅಟಪಟ್ಟು ಇನಷ್ಟು ರನ್​ ಬಾರಿಸಿ ತಂಡದ ಗೆಲುವಿಗೆ ಕಾರಣವಾಗುವ ಸಾಧ್ಯತೆಯೂ ಇರುತ್ತಿತ್ತು.

Continue Reading

ಕ್ರೀಡೆ

IND Vs ENG 5th Test: 100ನೇ ಟೆಸ್ಟ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ಬೇರ್‌ ಸ್ಟೊ, ಅಶ್ವಿನ್

ಜಾನಿ ಬೇರ್​ಸ್ಟೊ(Jonny Bairstow) ಮತ್ತು ರವಿಚಂದ್ರನ್​ ಅಶ್ವಿನ್(Ravichandran Ashwin)​ ಅವರಿಗೆ ಧರ್ಮಶಾಲಾದಲ್ಲಿ(Dharamshala) ನಡೆಯುವ 5ನೇ ಟೆಸ್ಟ್​ ಪಂದ್ಯ 100ನೇ ಟೆಸ್ಟ್​ ಪಂದ್ಯವಾಗಿದೆ.

VISTARANEWS.COM


on

Ravichandran Ashwin, Jonny Bairstow
Koo

ಧರ್ಮಶಾಲಾ: ಇಂಗ್ಲೆಂಡ್‌ ಮತ್ತು ಭಾರತ ನಡುವೆ(IND Vs ENG 5th Test) ಧರ್ಮಶಾಲಾದಲ್ಲಿ(Dharamshala) ನಡೆಯುವ 5ನೇ ಟೆಸ್ಟ್​ ಪಂದ್ಯ ಜಾನಿ ಬೇರ್​ಸ್ಟೊ(Jonny Bairstow) ಮತ್ತು ರವಿಚಂದ್ರನ್​ ಅಶ್ವಿನ್(Ravichandran Ashwin)​ ಅವರಿಗೆ ವಿಶೇಷ ಪಂದ್ಯವಾಗಲಿದೆ. ಉಭಯ ಆಟಗಾರರಿಗೂ ಇದು 100ನೇ ಟೆಸ್ಟ್​ ಪಂದ್ಯವಾಗಿದೆ.

ಅಶ್ವಿನ್​ ಅವರು 5ನೇ ಟೆಸ್ಟ್​ನಲ್ಲಿ ಕಣಕ್ಕಿಳಿಯುವ ಮೂಲಕ 100ನೇ ಟೆಸ್ಟ್‌ ಪಂದ್ಯವಾಡಿದ 13ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರಿಗೆ ಪಂದ್ಯ ಆರಂಭಕ್ಕೂ ಮುನ್ನ ವಿಶೇಷ ಗೌರವ ಸೂಚಿಸುವ ಕಾರ್ಯಕ್ರಮವೊಂದನ್ನು ಬಿಸಿಸಿಐ ಏರ್ಪಡಿಸಿದೆ. ಧರ್ಮಾಶಾಲಾ ಟೆಸ್ಟ್​ನಲ್ಲಿ ನಾಯಕ ರೋಹಿತ್‌ ಶರ್ಮ ಅವರು ಶತಕದ ಟೆಸ್ಟ್​ ಸಾಧಕ ಅಶ್ವಿ‌ನ್‌ ಅವರಿಗೆ ತಂಡವನ್ನು ಅಂಗಳಕ್ಕೆ ಮುನ್ನಡೆಸುವ ಗೌರವ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಕಳೆದ 13 ವರ್ಷಗಳಿಂದ ಭಾರತೀಯ ಟೆಸ್ಟ್‌ ತಂಡದ ಭಾಗವಾಗಿರುವ ಅಶ್ವಿ‌ನ್‌ ಸದ್ಯ 99* ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರನೇ ಟೆಸ್ಟ್​ ಪಂದ್ಯದಲ್ಲಿ ಅವರು 500 ಟೆಸ್ಟ್​ ವಿಕೆಟ್​ಗಳನ್ನು ಪೂರ್ತಿಗೊಳಿಸಿದ ಸಾಧನೆ ಕೂಡ ಮಾಡಿದ್ದರು. ಸದ್ಯ ಅವರ ಬತ್ತಳಿಕೆಯಲ್ಲಿ 507 ವಿಕೆಟ್​ಗಳಿವೆ. ಅತ್ಯಧಿಕ 35 ಸಲ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದ ಭಾರತೀಯ ದಾಖಲೆ ಕೂಡ ಇವರ ಹೆಸರಿನಲ್ಲಿದೆ. 8 ಬಾರಿ 10ಕ್ಕಿಂತ ಅಧಿಕ ವಿಕೆಟ್​ ಕಿತ್ತ ದಾಖಲೆ ಕೂಡ ಇವರದ್ದಾಗಿದೆ. ಬೌಲಿಂಗ್​ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಅಶ್ವಿನ್​ 3 ಸಾವಿರಕ್ಕೂ ಅಧಿಕ ರನ್​ ಬಾರಿಸಿದ್ದಾರೆ. ಇದರಲ್ಲಿ 5 ಶತಕಗಳು ಕೂಡ ಒಳಗೊಂಡಿದೆ. 14 ಅರ್ಧಶತಕ ಸೇರಿದೆ.

ಇದನ್ನೂ ಓದಿ IND vs ENG 5th Test: ವಿಶ್ವ ಟೆಸ್ಟ್​ನಲ್ಲಿ ದಾಖಲೆ ಬರೆಯಲು ರೋಹಿತ್​ಗೆ ಬೇಕು ಕೇವಲ ಒಂದು ಸಿಕ್ಸರ್​

ಭಾರತ ಪರ 100 ಟೆಸ್ಟ್​ ಪಂದ್ಯ ಆಡಿದ ಆಟಗಾರರು

ಆಟಗಾರಪಂದ್ಯ
ಸಚಿನ್‌ ತೆಂಡೂಲ್ಕರ್‌200
ರಾಹುಲ್‌ ದ್ರಾವಿಡ್‌163
ವಿವಿಎಸ್‌ ಲಕ್ಷ್ಮಣ್‌134
ಅನಿಲ್‌ ಕುಂಬ್ಳೆ132
ಕಪಿಲ್‌ದೇವ್‌131
ಸುನೀಲ್‌ ಗಾವಸ್ಕರ್‌125
ಸೌರವ್‌ ಗಂಗೂಲಿ113
ವಿರಾಟ್‌ ಕೊಹ್ಲಿ113*
ಇಶಾಂತ್‌ ಶರ್ಮ103*
ಹರ್ಭಜನ್‌ ಸಿಂಗ್‌103
ವೀರೇಂದ್ರ ಸೆಹವಾಗ್‌103
ಚೇತೇಶ್ವರ್‌ ಪೂಜಾರ103*
ಆರ್​.ಅಶ್ವಿನ್​99*

ಬೇರ್​ಸ್ಟೊಗೂ 100ನೇ ಪಂದ್ಯ

ಮತ್ತೊಂದೆಡೆ, ಬೈರ್‌ಸ್ಟೋ ಅವರಿಗೂ ಇದು 100ನೇ ಟೆಸ್ಟ್ ಪಂದ್ಯವಾಗಿದೆ. ಹೊಡಿಬಡಿ ಆಟಕ್ಕೆ ಖ್ಯಾತಿ ಪಡೆದಿರುವ ಬೇರ್​ಸ್ಟೊ ಈ ಬಾರಿ ತೀರಾ ಕಳಪೆ ಪ್ರದರ್ಶನ ತೋರಿದ್ದಾರೆ. ಭಾರತ ವಿರುದ್ಧ ಆಡಿದ 4 ಪಂದ್ಯಗಳಲ್ಲಿ ಕೇವಲ 21 ಸರಾಸರಿಯಲ್ಲಿ 170 ರನ್ ಮಾತ್ರ ಗಳಿಸಿದ್ದಾರೆ. ಅವರು ಇಂಗ್ಲೆಂಡ್​​ ವಿರುದ್ಧ 100ನೇ ಟೆಸ್ಟ್​ ಆಡಿದ 17ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಸ್ಮರಣೀಯ ಪಂದ್ಯದಲ್ಲಾದರೂ ಬೇರ್​ಸ್ಟೊ ನಿರೀಕ್ಷಿತ ಬ್ಯಾಟಿಂಗ್​ ಪ್ರದರ್ಶನ ತೋರುತ್ತಾರೋ ಎಂದು ಕಾದು ನೋಡಬೇಕಿದೆ. 99 ಟೆಸ್ಟ್‌ಗಳಲ್ಲಿ, ಬೈರ್‌ಸ್ಟೋ 36.42 ಸರಾಸರಿಯಲ್ಲಿ 12 ಶತಕ ಮತ್ತು 26 ಅರ್ಧಶತಕಗಳನ್ನು ಒಳಗೊಂಡಂತೆ 5974 ರನ್ ಗಳಿಸಿದ್ದಾರೆ.

Continue Reading
Advertisement
BJP MLA Shivaram Hebbar welcomes CM, Deputy CM by putting up flexes
ಕರ್ನಾಟಕ14 mins ago

Banavasi Kadambotsava: ಫ್ಲೆಕ್ಸ್‌ ಹಾಕಿ ಸಿಎಂ, ಡಿಸಿಎಂಗೆ ಭರ್ಜರಿ ಸ್ವಾಗತ ಕೋರಿದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌!

Shivaram Hebbar and ST Somashekar welcome if they agree with party ideology CM Siddaramaiah
ಉತ್ತರ ಕನ್ನಡ23 mins ago

CM Siddaramaiah: ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

Abhishek Sharma
ಕ್ರಿಕೆಟ್29 mins ago

Abhishek Sharma: ಮಾಡೆಲ್ ಆತ್ಮಹತ್ಯೆ; ಪೊಲೀಸ್‌ ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಅಭಿಷೇಕ್ ಶರ್ಮಾ

vande bharat train
ಕರ್ನಾಟಕ32 mins ago

Vande Bharat: ಮದುರೈನಿಂದ ಬೆಂಗಳೂರಿಗೆ ಶೀಘ್ರವೇ ವಂದೇ ಭಾರತ್‌ ರೈಲು; ಬೆಲೆ ಎಷ್ಟು?

Text book Revision Karnataka
ಬೆಂಗಳೂರು33 mins ago

Text Book Revision : ಸದ್ದಿಲ್ಲದೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಸರ್ಕಾರ, ಏನೇನು ಬದಲಾವಣೆ?

Shubman Gill
ಕ್ರೀಡೆ1 hour ago

Shubman Gill: 5ನೇ ಟೆಸ್ಟ್​ಗೂ ಮುನ್ನ ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದ ಗಿಲ್

Mohammed Shafi Nashipudi (1)
ಕರ್ನಾಟಕ1 hour ago

Sedition Case: ಬಂಧಿತ ಮೊಹಮ್ಮದ್‌ ಶಫಿ ನಾಶಿಪುಡಿ ಕೋಟ್ಯಂತರ ರೂ. ಆಸ್ತಿ ಒಡೆಯ; ಈತನ ಹಿನ್ನೆಲೆ ಏನು?

692 farmers commit suicide is Siddaramaiah achievement says HD DeveGowda
ಕರ್ನಾಟಕ1 hour ago

HD Devegowda: 692 ರೈತರು ಆತ್ಮಹತ್ಯೆಯೇ ಸಿದ್ದರಾಮಯ್ಯ ಸಾಧನೆಯ ಕಿರುನೋಟ: ಎಚ್‌.ಡಿ. ದೇವೇಗೌಡ ವ್ಯಂಗ್ಯ

HD DeveGowda reveals the reality of Karnataka drought
ರಾಜಕೀಯ1 hour ago

Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!

ED Raid Bangalore
ಬೆಂಗಳೂರು1 hour ago

ED Raid : ಬೆಂಗಳೂರಿನ 8 ಕಡೆ ಇ.ಡಿ ದಾಳಿ, 11.5 ಕೋಟಿ ನಗದು, 120 ಕೋಟಿಯ ದಾಖಲೆ ವಶ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌