FIFA World Cup | ಮೆಸ್ಸಿಗೆ ಗೋಲ್ಡನ್ ಗಿಫ್ಟ್​; 36 ವರ್ಷಗಳ ಬಳಿಕ ಅರ್ಜೆಂಟೀನಾ ತಂಡ ವಿಶ್ವ ಕಪ್​ ಚಾಂಪಿಯನ್​ - Vistara News

ಕ್ರೀಡೆ

FIFA World Cup | ಮೆಸ್ಸಿಗೆ ಗೋಲ್ಡನ್ ಗಿಫ್ಟ್​; 36 ವರ್ಷಗಳ ಬಳಿಕ ಅರ್ಜೆಂಟೀನಾ ತಂಡ ವಿಶ್ವ ಕಪ್​ ಚಾಂಪಿಯನ್​

ಫೈನಲ್​ನಲ್ಲಿ ಫ್ರಾನ್ಸ್​ ತಂಡವನ್ನು ಬಗ್ಗು ಬಡಿದ ಅರ್ಜೆಂಟೀನಾ ತಂಡ ಫಿಫಾ ವಿಶ್ವ ಕಪ್​ ಟ್ರೋಫಿ ತನ್ನದಾಗಿಸಿಕೊಂಡಿತು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೋಹಾ : ಅತ್ಯಂತ ರೋಚಕವಾಗಿ ನಡೆದ ಫಿಫಾ ವಿಶ್ವ ಕಪ್​ ಫೈನಲ್​ ಪಂದ್ಯದಲ್ಲಿ ಫ್ರಾನ್ಸ್​ ತಂಡವನ್ನು ಸೋಲಿಸಿದ ಅರ್ಜೆಂಟೀನಾ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತು. ಪಂದ್ಯದ ಪೂರ್ಣ ಅವಧಿ 90 ನಿಮಿಷ ಹಾಗೂ ಹೆಚ್ಚುವರಿ 30 ನಿಮಿಷಗಳ ಆಟದಲ್ಲಿ ಇತ್ತಂಡಗಳು 3-3 ಗೋಲ್​ಗಳನ್ನು ಬಾರಿಸಿದ ಕಾರಣ ಪೆನಾಲ್ಟಿ ಮೊರೆ ಹೋಗಲಾಯಿತು. ಅಲ್ಲಿ 4-2 ಗೋಲ್​ಗಳ ಅಂತರದಿಂದ ಗೆದ್ದ ಅರ್ಜೆಂಟೀನಾ ತಂಡ ವಿಜಯೋತ್ಸವ ಆಚರಿಸಿತು.

ಫೈನಲ್​ ಎಂಬ ಘನತೆಗೆ ತಕ್ಕುದಾಗಿ ಹೋರಾಟ ನಡೆಯಿತು. ಅರ್ಜೆಂಟೀನಾ ತಂಡದ ಮೊದಲಾರ್ಧದಲ್ಲಿ ಎರಡು ಗೋಲ್​ ದಾಲಿಸಿದರೆ, ಫ್ರಾನ್ಸ್ ಬಳಗ ದ್ವಿತೀಯಾರ್ಧದಲ್ಲಿ ಸತತವಾಗಿ ಎರಡು ಗೋಲ್​ ಬಾರಿಸಿತು. ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್​ ಮೆಸ್ಸಿ (23ನೇ ನಿಮಿಷ), ಏಂಜೆಲೊ ಡಿ ಮಾರಿಯಾ (36ನೇ ನಿಮಿಷ) ಗೋಲ್​ಗಳನ್ನು ಬಾರಿಸಿದರೆ, ಫ್ರಾನ್ಸ್ ತಂಡದ ಕೈಲಿಯಾನ್​ ಎಂಬಾಪೆ 80 ಹಾಗೂ 81ನೇ ನಿಮಿಷದಲ್ಲಿ ಗೋಲ್​ ಬಾರಿಸಿ ಸಮಬಲದ ಸಾಧನೆ ಮಾಡಿದರು. ಬಳಿಕ ನಡೆದ 30 ನಿಮಿಷಗಳ ಹೆಚ್ಚುವರಿ ಆಟದಲ್ಲಿ ಅರ್ಜೆಂಟೀನಾ ಪರ ಲಿಯೋನೆಲ್​ ಮೆಸ್ಸಿ 108ನೇ ನಿಮಿಷದಲ್ಲಿ ಗೋಲ್​ ಬಾರಿಸಿದರೆ, ಎಂಬಾಪೆ 118 ನೇ ನಿಮಿಷದಲ್ಲಿ ಯಶಸ್ಸು ಸಾಧಿಸಿದರು.

ಫ್ರಾನ್ಸ್​ ತಂಡದ ಪರ ಕೈಲಿಯಾನ್​ ಎಂಬಾಪೆ ಹ್ಯಾಟ್ರಿಕ್​ ಗೋಲ್​ ದಾಖಲಿಸಿ ಸಾಧನೆ ಮಾಡಿದ ಹೊರತಾಗಿಯೂ ಅವರಿಗೆ ಗೆಲುವಿನ ಸವಿ ಸಿಗಲಿಲ್ಲ. ಒಟ್ಟಾರೆ ಟೂರ್ನಿಯಲ್ಲಿ ಒಟ್ಟು 8 ಗೋಲ್​ಗಳನ್ನು ಬಾರಿಸಿದ ಕೈಲಿಯಾನ್​ಗೆ ಗೋಲ್ಡನ್​ ಬೂಟ್​ ಗೌರವ ಲಭಿಸಿತು.

ಅರ್ಜೆಂಟೀನಾ ತಂಡ ಈ ಹಿಂದೆ 1978 ಹಾಗೂ 1986ರಲ್ಲಿ ವಿಶ್ವ ಕಪ್​ ಗೆದ್ದಿತ್ತು. ಇದೀಗ 36 ವರ್ಷಗಳ ಬಳಿಕ ಟ್ರೋಫಿ ಗೆದ್ದಂತಾಗಿದೆ. ಇದೇ ವೇಳೆ ಕಳೆದ ಬಾರಿಯ ಚಾಂಪಿಯನ್​ ಹಾಗೂ ಗೋಲ್​ಕೀಪರ್ ಹ್ಯೂಗೋ ಲೊರಿಸ್​ ನೇತೃತ್ವದ ಫ್ರಾನ್ಸ್​ ತಂಡದ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕಮರಿ ಹೋಯಿತು.

ಲುಸೈಲ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅರ್ಜೆಂಟೀನಾ ಬಳಗ ಪ್ರಥಮಾರ್ಧಕ್ಕೆ ಮೊದಲೇ ಎರಡು ಗೋಲ್​ಗಳನ್ನು ಬಾರಿಸಿ ವಿಶ್ವಾಸ ಪ್ರದರ್ಶಿಸಿತು. ಅದೇ ಲಯದಲ್ಲಿ ಆಡಿದರೂ ಎದುರಾಳಿ ತಂಡದಿಂದ ಪ್ರತಿರೋಧ ಎದುರಾಯಿತು. ನಿಗದಿತ ಅವಧಿ ಮುಕ್ತಾಯಕ್ಕೆ 10 ನಿಮಿಷ ಮೊದಲು ಕೈಲ್​ ಎಂಬಾಪೆ ಎರಡು ಗೋಲ್​ಗಳನ್ನು ಬಾರಿಸಿ ಅರ್ಜೆಂಟೀನಾ ತಂಡಕ್ಕೆ ಆಘಾತ ಕೊಟ್ಟರು. ಹೀಗಾಗಿ ಪಂದ್ಯ ಹೆಚ್ಚುವರಿ 30 ನಿಮಿಷಗಳ ಕಡೆಗೆ ಸಾಗಿತು. ಅಲ್ಲೂ 108ನೇ ನಿಮಿಷದಲ್ಲಿ ಮೆಸ್ಸಿ ಗೋಲ್​ ಬಾರಿಸಿದರೆ, 118ನೇ ನಿಮಿಷದಲ್ಲಿ ಎಂಬಾಪೆ ಗೋಲ್​ ಬಾರಿಸಿದರು.

ಫೈನಲ್ ಪಂದ್ಯ ಕ್ಷಣಕ್ಷಣಕ್ಕೂ ರೋಚಕವಾಗಿ ನಡೆಯಿತು. ಆರಂಭದಲ್ಲಿ ಅರ್ಜೆಂಟೀನಾ ತಂಡ ಪಾಸ್​ ಹಾಗೂ ನಿಖರತೆಯ ಮೂಲಕ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದರೆ, ದ್ವಿತೀಯಾರ್ಧದಲ್ಲಿ ಫ್ರಾನ್ಸ್ ತಂಡ ಹೆಚ್ಚು ಪ್ರಭಾವಿ ಆಟ ಪ್ರದರ್ಶಿಸಿತು. ಹೆಚ್ಚುವರಿ 30 ನಿಮಿಷದಲ್ಲಂತೂ ಇತ್ತಂಡಗಳು ರಣರಂಗದಲ್ಲಿರುವ ಸೇನಾನಿಗಳಂತೆ ಹೋರಾಟ ನಡೆಸಿದರು.

ಲುಸೈಲ್​ ಸ್ಟೇಡಿಯಮ್​ನಲ್ಲಿ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡದ ಅಭಿಮಾನಿಗಳೇ ಹೆಚ್ಚಿದ್ದರು. ಭಾರತೀಯ ಫುಟ್ಬಾಲ್​ ಅಭಿಮಾನಿಗಳೂ ಮೆಸ್ಸಿ ಬಗಳಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಮಲಯಾಳಂ ಸಿನಿಮಾ ನಟರಾದ ಮೋಹನ್​ ಲಾಲ್​ ಹಾಗೂ ಮಮ್ಮೂಟಿ ಕೂಡ ಪಂದ್ಯ ವೀಕ್ಷಿಸಿದರು.

ಅರ್ಜೆಂಟೀನಾ ಸಾಧನೆ

ಮೆಸ್ಸಿ ನಾಯಕ್ವದ ಅರ್ಜೆಂಟೀನಾ ತಂಡ 2021ರಲ್ಲಿ ನಡೆದ ಕೋಪಾ ಅಮೇರಿಕ ಫುಟ್ಬಾಲ್​ ಟೂರ್ನಿಯಲ್ಲಿ ಬಲಿಷ್ಠ ಪ್ರತಿಸ್ಪರ್ಧಿ ಬ್ರೆಜಿಲ್​ ವಿರುದ್ಧ 1-0 ಗೋಲ್​ಗಳನ್ನು ದಾಖಲಿಸಿ ಜಯ ಸಾಧಿಸಿತು. ಈ ಮೂಲಕ ವಿದಾಯಕ್ಕೆ ಮೊದಲು ಫುಟ್ಬಾಲ್​ ಕ್ಷೇತ್ರದ ಆರಾಧ್ಯ ದೈವ್ಯ ಲಿಯೋನೆಲ್​ ಮೆಸ್ಸಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಂತಾಯಿತು.

ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್​ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾದ ನೆಚ್ಚಿನ ತಂಡ ಯಾವುದು; ರಾಹುಲ್​ ಹೇಳಿದ ಉತ್ತರವೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

DC vS GT: ಗುಜರಾತ್​ ವಿರುದ್ಧ ಡೆಲ್ಲಿಗೆ ರೋಚಕ ಗೆಲುವು ; ಪ್ಲೇ ಆಫ್​ ರೇಸ್ ಜೀವಂತ

DC vS GT:ಗುಜರಾತ್​ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ರೋಚಕ 4 ರನ್​ಗಳ ಗೆಲುವು ಸಾಧಿಸಿ ತನ್ನ ಪ್ಲೇ ಆಫ್​ ರೇಸ್​ ಜೀವಂತವಿರಿಸಿದೆ.

VISTARANEWS.COM


on

DC vs GT
Koo

ನವದೆಹಲಿ: ಅಂತಿಮ ಎಸೆತದವರೆಗೂ ಅತ್ಯಂತ ರೋಚಕವಾಗಿ ಸಾಗಿದ ಬುಧವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ರೋಚಕ 4 ರನ್​ಗಳ ಗೆಲುವು ಸಾಧಿಸಿ ತನ್ನ ಪ್ಲೇ ಆಫ್​ ರೇಸ್​ ಜೀವಂತವಿರಿಸಿದೆ. ಡೆಲ್ಲಿಗೆ ತವರಿನಲ್ಲಿ ಒಲಿದ ಮೊದಲ ಗೆಲುವು ಇದಾಗಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ಹೀನಾಯ ಸೋಲು ಕಂಡಿತ್ತು.

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು.

ವಿಫಲಗೊಂಡ ಗಿಲ್​


ಚೇಸಿಂಗ್​ ವೇಳೆ 100ನೇ ಐಪಿಎಲ್​ ಪಂದ್ಯವನ್ನಾಡಿದ ಶುಭಮನ್​ ಗಿಲ್​ 6 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಆರಂಭಿಕ ಆಘಾತ ಕಂಡ ತಂಡಕ್ಕೆ, ವೃದ್ಧಿಮಾನ್​ ಸಾಹಾ ಮತ್ತು ಸಾಯಿ ಸುದರ್ಶನ್​ ನೆರವಾದರು. ಉಭಯ ಆಟಗಾರರು ಸೇರಿಕೊಂಡು ದ್ವಿತೀಯ ವಿಕೆಟ್​ಗೆ 82 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಸಾಹಾ 39 ರನ್​ ಗಳಿಸಿದರೆ, ಸಾಯಿ ಸುದರ್ಶನ್ 65 ರನ್​ ಬಾರಿಸಿದರು. ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಗುಜರಾತ್​ ಮತ್ತೆ ಕುಸಿತ ಕಂಡಿತು. ಬಳಿಕ ಬಂದ ಅಜ್ಮತುಲ್ಲಾ ಒಮರ್ಜಾಯ್(1), ಶಾರೂಖ್​ ಖಾನ್​(8) ಒಂದಂಕಕ್ಕೆ ಸೀಮಿತರಾಗಿ ನಿರಾಶೆ ಮೂಡಿಸಿದರು.

ಇದನ್ನೂ ಓದಿ IPL 2024: ಬ್ಲಾಕ್​ ಟಿಕೆಟ್ ಮಾರಾಟ ಜಾಲ ಭೇದಿಸಿದ ಚೆನ್ನೈ ಪೊಲೀಸರು; 12 ಮಂದಿ ಸೆರೆ

ಕೆಲ ಕ್ರಮಾಂಕದಲ್ಲಿ ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿದ ಡೇವಿಡ್​ ಮಿಲ್ಲರ್​ ಅರ್ಧಶತಕ ಬಾರಿಸುವ ಮೂಲಕ ಒಂದು ಹಂತದಲ್ಲಿ ಗುಜರಾತ್​ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ದೊಡ್ಡ ಹೊಡೆತಗಳಿಗೆ ಕೈ ಹಾಕಿ ರಾಸಿಖ್ ಸಲಾಂ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಪತನದ ಬಳಿಕ ರಶೀದ್​ ಖಾನ್​ ಮತ್ತು ಸಾಯಿ ಕಿಶೋರ್​ ಸಿಡಿದು ನಿಂತರು. ಅಂತಿಮ ಓವರ್​ನಲ್ಲಿ ಗೆಲುವಿಗೆ 19 ರನ್​ ತೆಗೆಯುವ ಸವಾಲಿನಲ್ಲಿ ರಶೀದ್​ ಅವರು ಮುಕೇಶ್​ ಕುಮಾರ್​ಗೆ ಸತತ 2 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಬೇಕಿದ್ದಾಗ ಇದನ್ನು ಬಾರಿಸುವಲ್ಲಿ ರಶೀದ್​ ಎಡವಿದರು. ಡೆಲ್ಲಿ ರೋಚಕ 4 ರನ್​ಗಳ ಗೆಲುವು ಸಾಧಿಸಿತು.

ಸಿಡಿದ ಪಂತ್​-ಅಕ್ಷರ್​


ಮೊದಲು ಇನಿಂಗ್ಸ್ ಆರಂಭಿಸಿದ ಡೆಲ್ಲಿಗೆ ಪೃಥ್ವಿ ಶಾ ಮತ್ತು ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸಿದರು. ಆದರೆ ಈ ಬ್ಯಾಟಿಂಗ್​ ಆರ್ಭಟ ಹೆಚ್ಚು ಹೊತ್ತು ಸಾಗಲಿಲ್ಲ. ಸಂದೀಪ್​ ವಾರಿಯರ್​ ಒಂದೇ ಓವರ್​ನಲ್ಲಿ ಉಭಯ ಆಟಗಾರರ ವಿಕೆಟ್​ ಕಿತ್ತು ಡೆಲ್ಲಿಗೆ ಅವಳಿ ಆಘಾತವಿಕ್ಕಿದರು. 5 ರನ್​ಗಳಿಸಿದ್ದ ವೇಳೆ ಜೀವದಾನ ಪಡೆದಿದ್ದ ಮ್ಯಾಕ್‌ಗುರ್ಕ್ 23 ರನ್​ಗಳಿಸಿ ಔಟಾದರು. ಇದರ ಬೆನ್ನಲ್ಲೇ ಪೃಥ್ವಿ ಶಾ(11) ವಿಕೆಟ್​ ಕೂಡ ಪತನಗೊಂಡಿತು. ನೂರ್ ಅಹ್ಮದ್ ಹಿಡಿದ ಅದ್ಭುತ ಕ್ಯಾಚ್​ಗೆ ಉಭಯ ಆಟಗಾರರು ಬಲಿಯಾದರು. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಶಾಯ್​ ಹೋಪ್​ ಕೂಡ ಡೆಲ್ಲಿಗೆ ಹೋಪ್​ ನೀಡುವಲ್ಲಿ ವಿಫಲರಾದರು. ಕೇವಲ 5 ರನ್​ಗೆ ಆಟ ಮುಗಿಸಿದರು.

44 ರನ್​ಗೆ ಮೂರು ವಿಕೆಟ್​ ಕಳೆದುಕೊಂಡ ವೇಳೆ ಕ್ರೀಸ್​ಗಿಳಿದ ಎಡಗೈ ಬ್ಯಾಟರ್​ಗಳಾದ ರಿಷಭ್​ ಪಂತ್​ ಮತ್ತು ಅಕ್ಷರ್​ ಪಟೇಲ್​ ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅರ್ಧಶತಕ ಪೂರ್ತಿಗೊಂಡ ತಕ್ಷಣ ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಗುಜರಾತ್​ ಬೌಲರ್​ಗಳ ಮೇಲೆ ಸವಾರಿ ಮಾಡಿದರು. 17ನೇ ಓವರ್​ ತನಕ ಕ್ರೀಸ್​ನಲ್ಲಿದ್ದ ಅಕ್ಷರ್​ ಪಟೇಲ್ 5 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ 66 ರನ್​ ಚಚ್ಚಿದರು. ಈ ಜೋಡಿ 4ನೇ ವಿಕೆಟ್​ಗೆ 113 ರನ್​ ಒಟ್ಟುಗೂಡಿಸಿತು.

18 ಎಸೆತಗಳಲ್ಲಿ 67 ರನ್ ದಾಖಲು​


ಅಕ್ಷರ್​ ಪಟೇಲ್​ ವಿಕೆಟ್​ ಪತನದ ಬಳಿಕ ಆಡಲಿಳಿದ ಟ್ರಿಸ್ಟಾನ್ ಸ್ಟಬ್ಸ್ ಬಿರುಸಿನ ಬ್ಯಾಟಿಂಗ್​ ಮೂಲಕ ಕೇವಲ 7 ಎಸೆತಗಳಿಂದ ಅಜೇಯ 26 (2 ಸಿಕ್ಸರ್​, 3 ಬೌಂಡರಿ) ರನ್​ ಬಾರಿಸಿದರು. ಮೋಹಿತ್​ ಶರ್ಮ ಎಸೆತ ಅಂತಿಮ ಓವರ್​ನಲ್ಲಿ ಪಂತ್​ 4 ಸಿಕ್ಸರ್​ ಮತ್ತು ಒಂದು ಬೌಂಡರಿ ಸಿಡಿಸಿ 31 ರನ್ ದೋಚಿದರು. ಹೀಗಾಗಿ ಅಂತಿಮ 18 ಎಸೆತಗಳಲ್ಲಿ ಡೆಲ್ಲಿಗೆ ಬರೋಬ್ಬರಿ 67 ರನ್​ ಹರಿದು ಬಂತು. ಮೋಹಿತ್​ ಶರ್ಮ 4 ಓವರ್​ಗೆ 73 ರನ್​ ಬಿಟ್ಟುಕೊಟ್ಟು ಐಪಿಎಲ್​ನಲ್ಲಿಯೇ ಅತ್ಯಧಿಕ ರನ್​ ಹೊಡೆಸಿಕೊಂಡ ಆಟಗಾರ ಎನ್ನುವ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಪಂತ್​ ಬರೋಬ್ಬರಿ 8 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿ ಅಜೇಯ 88 ರನ್​ ಬಾರಿಸಿದರು. ಎದುರಿಸಿದ್ದು ಕೇವಲ 43 ಎಸೆತ. ಸಂದೀಪ್​ ವಾರಿಯರ್​ 15 ರನ್​ಗೆ 3 ವಿಕೆಟ್​ ಕಿತ್ತು ಗುಜರಾತ್​ ಪರ ಉತ್ತಮ ಬೌಲಿಂಗ್​ ನಡೆಸಿದರು. ಉಳಿದೆಲ್ಲರು ದುಬಾರಿಯಾಗಿ ಕಂಡುಬಂದರು. ​

Continue Reading

ಕ್ರೀಡೆ

Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್​ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ

Sachin Tendulkar Birthday: 51ನೇ ವರ್ಷದ ಹುಟ್ಟು ಹಬ್ಬವನ್ನು ತೆಂಡೂಲ್ಕರ್​, ‘ಸಚಿನ್​ ತೆಂಡೂಲ್ಕರ್​ ಫೌಂಡೇಶನ್‌’ನ(sachin tendulkar foundation) ಮಕ್ಕಳೊಂದಿಗೆ ಆಚರಿಸಿದ್ದರು. ಇದರ ವಿಡಿಯೊವನ್ನು ಸಚಿನ್(Sachin Tendulkar)​ ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Sachin Tendulkar Birthday
Koo

ದುಬೈ: ಕ್ರಿಕೆಟ್‌ ದೇವರು ಎಂದು ಕರೆಯಲ್ಪಡುವ ಸಚಿನ್‌ ತೆಂಡೂಲ್ಕರ್‌(Sachin Tendulkar Birthday) ಅವರಿಗೆ ಇಂದು 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಐಸಿಸಿ(ICC), ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ (Artificial Intelligence) ಮೂಲಕ ಸಚಿನ್​ ಅವರ ವಿಶೇಷ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೊ ಕಂಡ ಸಚಿನ್​ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ಈಗಿನ ಬೌಲರ್​ಗಳಾದ ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಇಂಗ್ಲೆಂಡ್​ನ ಜೋಫ್ರಾ ಆರ್ಚರ್​, ಬಾಂಗ್ಲಾದೇಶದ ಮುಸ್ತಫಿಜುರ್​ ರೆಹಮಾನ್​ ಅವರ ವಿಶ್ವಕಪ್​ ಟೂರ್ನಿಯ ಬೌಲಿಂಗ್​ ಎಸೆತಗಳಿಗೆ ಸಚಿನ್​ ಅವರು ಬೌಂಡರಿ ಬಾರಿಸುವಂತೆ ಐಸಿಸಿ ಎಐ ತಂತ್ರಜ್ಞಾನದ ಮೂಲಕ ವಿಡಿಯೊ ಮಾಡಿದೆ. ಸಚಿನ್ ಬ್ಯಾಟಿಂಗ್ ಕಂಡು ಅಭಿಮಾನಿಗಳು ಕಿರುಚುತ್ತಿರುವ ದೃಶ್ಯಗಳು ಕೂಡ ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಆಟಕ್ಕೆ ಹೊಂದಿಕೆಯಾಗುವ ಕಾಮೆಂಟರಿ ಕೂಡ ಮೂಡಿಬಂದಿದೆ.

51ನೇ ವರ್ಷದ ಹುಟ್ಟು ಹಬ್ಬವನ್ನು ತೆಂಡೂಲ್ಕರ್​, ‘ಸಚಿನ್​ ತೆಂಡೂಲ್ಕರ್​ ಫೌಂಡೇಶನ್‌’ನ(sachin tendulkar foundation) ಮಕ್ಕಳೊಂದಿಗೆ ಆಚರಿಸಿದ್ದರು. ಇದರ ವಿಡಿಯೊವನ್ನು ಸಚಿನ್(Sachin Tendulkar)​ ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಸಚಿನ್​ ಅವರು ತಮ್ಮ ಹುಟ್ಟು ಹಬ್ಬವನ್ನು ಈ ಫೌಂಡೇಶನ್​ನ ಮಕ್ಕಳೊಂದಿದೆ ಕೆಲ ಕಾಲ ಫುಟ್ಬಾಲ್​ ಆಡಿ, ಊಟ ಮಾಡುವ ಜತೆಗೆ ಕೇಕ್​ ಕತ್ತರಿಸಿ ಆಚರಿಸಿದ್ದಾರೆ. ಬಳಿಕ ಮಕ್ಕಳಿಗೆ ವಿಶೇಷವಾಗಿ ಹಾರೈಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದ್ದಾರೆ.

ಸಚಿನ್​ ಅವರು ‘ಸಚಿನ್​ ತೆಂಡೂಲ್ಕರ್ ಫೌಂಡೇಶನ್‌’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

​ಕಳೆದ ವರ್ಷ ಸಚಿನ್​ ಅವರು ತಮ್ಮ 50ನೇ ವರ್ಷದ ಜನ್ಮ ದಿನಾಚರಣೆಯನ್ನು ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ಆಚರಿಸಿದ್ದರು. ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ಸಚಿನ್​ ಅವರು ತಮ್ಮ ಹುಟ್ಟು ಹಬ್ಬವನ್ನು ಮಾತ್ರ ಹಳ್ಳಿ ಸೊಗಡಿನಲ್ಲಿ ಆಚರಿಸಿದ್ದರು. ಪತ್ನಿ ಅಂಜಲಿ ಮತ್ತು ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಒಲೆಯ ಪಕ್ಕದಲ್ಲಿ ಕುಳಿತು ಸಚಿನ್ ಒಲೆ ಊದುತ್ತಿರುವ ಫೋಟೊವನ್ನು ಹಂಚಿಕೊಂಚಿಕೊಂಡಿದ್ದರು.

24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ಗೆ ಉಸೇನ್‌ ಬೋಲ್ಟ್ ಬ್ರ್ಯಾಂಡ್‌ ಅಂಬಾಸಿಡರ್

T20 World Cup 2024: ಜಮೈಕಾದ ಉಸೇನ್‌ ಬೋಲ್ಟ್(Usain Bolt) ಅವರನ್ನು ಐಸಿಸಿ ಪುರುಷರ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಕಮಾಡಲಾಗಿದೆ.

VISTARANEWS.COM


on

T20 World Cup 2024
Koo

ದುಬೈ: ಖ್ಯಾತ ಸ್ಟ್ರಿಂಟರ್‌, 8 ಒಲಿಂಪಿಕ್​ ಚಿನ್ನದ ಪದಕ ವಿಜೇತ,​ ಜಮೈಕಾದ ಉಸೇನ್‌ ಬೋಲ್ಟ್(Usain Bolt) ಅವರನ್ನು ಐಸಿಸಿ ಪುರುಷರ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಕಮಾಡಲಾಗಿದೆ. ವಿಶ್ವಕಪ್​ ಟೂರ್ನಿ ಜೂನ್​ 1ರಿಂದ 29ರ ತನಕ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಒಟ್ಟು 55 ಪಂದ್ಯಗಳು ಇರಲಿದೆ.

‘ಕ್ರಿಕೆಟ್ ಜೀವನದ ಭಾಗವಾಗಿರುವ ಕೆರಿಬಿಯನ್‌ನಿಂದ ಬಂದಿರುವ ಈ ಕ್ರೀಡೆಯು ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಪಡೆದಿದೆ ಮತ್ತು ಅಂತಹ ಪ್ರತಿಷ್ಠಿತ ಪಂದ್ಯಾವಳಿಯ ಭಾಗವಾಗಿರಲು ನನಗೆ ಗೌರವವಿದೆ’ ಎಂದು ಬೋಲ್ಟ್ ಐಸಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ವಿಶ್ವಕಪ್‌ಗೆ ನನ್ನ ಶಕ್ತಿ ಮತ್ತು ಉತ್ಸಾಹವನ್ನು ತರಲು ಮತ್ತು ಜಾಗತಿಕವಾಗಿ ಕ್ರಿಕೆಟ್ ಬೆಳವಣಿಗೆಗೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ” ಎಂದಿ ಬೋಲ್ಟ್​ ಹೇಳಿದರು.

ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್, ಐರ್ಲೆಂಡ್‌ ತಂಡಗಳಿಗೆ KMF ಪ್ರಾಯೋಜಕತ್ವ; ರಣಜಿ ತಂಡ ಕಾಣಲ್ಲವೇ ಎಂದ ಮೋಹನ್‌ದಾಸ್‌ ಪೈ

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

Continue Reading

ಕ್ರೀಡೆ

Madrid Open 2024: ಫಿಟ್​ನೆಸ್​ ಸಲುವಾಗಿ ಮ್ಯಾಡ್ರಿಡ್ ಓಪನ್‌ನಿಂದ ಹಿಂದೆ ಸರಿದ ಹಾಲೆಪ್‌

Madrid Open 2024: ದುರದೃಷ್ಟವಶಾತ್ ನನ್ನ ದೇಹವು ಸಿದ್ಧವಾಗಲು ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ಮ್ಯಾಡ್ರಿಡ್‌ನಲ್ಲಿ ಆಡದಿರಲು ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ” ಎಂದು ಸಿಮೋನಾ ಹಾಲೆಪ್‌(Simona Halep) ಹೇಳಿದ್ದಾರೆ.

VISTARANEWS.COM


on

Madrid Open 2024
Koo

ಬೂಖರೆಸ್ಟ್‌(ರೊಮೇನಿಯಾ): ಡೋಪಿಂಗ್‌ ಪ್ರಕರಣದಿಂದ ಮುಕ್ತರಾಗಿರುವ ರೊಮೇನಿಯಾದ ಟೆನಿಸ್‌ ತಾರೆ, 2 ಗ್ರ್ಯಾನ್‌ ಸ್ಲಾಂ ವಿಜೇತೆ ಸಿಮೋನಾ ಹಾಲೆಪ್‌(Simona Halep) ಮ್ಯಾಡ್ರಿಡ್ ಓಪನ್‌ನಿಂದ(Madrid Open 2024) ಹಿಂದೆ ಸರಿದಿದ್ದಾರೆ. ಫಿಟ್​ನೆಸ್​ ಕಂಡುಕೊಳ್ಳುವ ಸಲುವಾಗಿ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿಸಿದ್ದಾರೆ.

ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಗಾಗಿ ವಿಶ್ವದ ಮಾಜಿ ಅಗ್ರಮಾನ್ಯ ಟೆನಿಸ್‌ ಆಟಗಾರ್ತಿ ಸಿಮೊನಾ ಹಾಲೆಪ್ ಅವರಿಗೆ 2022ರ ಅಕ್ಟೋಬರ್‌ನಲ್ಲಿ 4 ವರ್ಷಗಳ ನಿಷೇಧ ಹೇರಿಲಾಗಿತ್ತು. ಇಂಟರ್‌ನ್ಯಾಷನಲ್‌ ಟೆನಿಸ್‌ ಇಂಟೆಗ್ರಿಟಿ ಏಜನ್ಸಿಯೂ ಅಂದು ಹಾಲೆಪ್‌ ನಿಷೇಧ ಶಿಕ್ಷೆಯನ್ನು ಪ್ರಕಟಿಸಿತ್ತು. ನಿಷೇಧ ಅವಧಿ ಇಳಿಸಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಹಾಲೆಪ್ ಮನವಿ ಮಾಡಿದ್ದರು. ಅವರ ಕೋರಿಕೆ ಮನ್ನಣೆ ನೀಡಿದ ನ್ಯಾಯಾಲಯ ನಿಷೇಧ ಅವಧಿಯನ್ನು 9 ತಿಂಗಳಿಗೆ ಇಳಿಕೆ ಮಾಡಿದೆ. 2023ರ ಜುಲೈ ವೇಳೆಗಾಗಲೇ 9 ತಿಂಗಳ ನಿಷೇಧ ಅವಧಿ ಮುಕ್ತಾಯಗೊಂಡಿದ್ದರಿಂದ ಹಾಲೆಪ್‌ ಅವರಿಗೆ 2 ತಿಂಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು.

32 ವರ್ಷದ ಸಿಮೋನಾ ಹಾಲೆಪ್​ಗೆ ನಿಷೇಧ ಶಿಕ್ಷೆಯಿಂದಾಗಿ ಹಲವು ಟೂರ್ನಿಗಳು ಕೈ ತಪ್ಪಿ ಹೋಗಿತ್ತು. ಸರಿ ಸುಮಾರು 18 ತಿಂಗಳಿನಿಂದ ಟೆನಿಸ್​ ಆಡದ ಕಾರಣ ಮತ್ತೆ ಉನ್ನತ ಮಟ್ಟದಲ್ಲಿ ಸ್ಪರ್ಧಿಸಲು ದೈಹಿಕವಾಗಿ ಸಿದ್ಧರಾಗುವ ನಿಟ್ಟಿನಲ್ಲಿ ಫಿಟ್​ನೆಸ್​ ಮೊರೆ ಹೋಗಲು ನಿರ್ಧರಿಸಿದ್ದಾರೆ. ಇದೇ ಕಾರಣದಿಂದ ಅವರು ಮ್ಯಾಡ್ರಿಡ್ ಓಪನ್‌ನಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ Simona Halep: ನಿಷೇಧ ಮುಕ್ತರಾದ ಹಾಲೆಪ್‌ ಮಿಯಾಮಿ ಓಪನ್​ನಲ್ಲಿ ಕಣಕ್ಕೆ

“ದುರದೃಷ್ಟವಶಾತ್ ನನ್ನ ದೇಹವು ಸಿದ್ಧವಾಗಲು ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ಮ್ಯಾಡ್ರಿಡ್‌ನಲ್ಲಿ ಆಡದಿರಲು ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಟೆನಿಸ್​ಗೆ ವಿದಾಯ ಹೇಳಿದ ಮುಗುರುಜಾ


ಸ್ಪೇನಿನ ಖ್ಯಾತ ಟೆನಿಸ್​ ಆಟಗಾರ್ತಿ, ಎರಡು ಬಾರಿಯ ಗ್ರ್ಯಾನ್‌ಸ್ಲ್ಯಾಮ್ ಚಾಂಪಿಯನ್, ಮಾಜಿ ವಿಶ್ವ ನಂ.1 ಆಟಗಾರ್ತಿ ಗಾರ್ಬಿನ್‌ ಮುಗುರುಜಾ(Garbine Muguruza) ಅವರು ಟೆನಿಸ್​ಗೆ ವಿದಾಯ(Garbine Muguruza retirement) ಹೇಳಿದ್ದಾರೆ. ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಮೆರಿಕದ ವಿಲಿಯಮ್ಸ್ ಸಹೋದರಿಯರನ್ನು ಸೋಲಿಸಿದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದು.

30 ವರ್ಷದ ಗಾರ್ಬಿನ್‌ ಮುಗುರುಜಾ, ಸುದ್ದಿಗೋಷ್ಠಿ ನಡೆಸಿ ತಮ್ಮ ವಿದಾಯವನ್ನು ಪ್ರಕಟಿಸಿದರು. ‘ಇದು ನಿವೃತ್ತಿ ಹೊಂದುವ ಸಮಯ ಮತ್ತು ನನ್ನ ಜೀವನದಲ್ಲಿ ಹೊಸ ಅಧ್ಯಾಯ ತೆರೆಯುವ ಸಮಯ ಎಂದು ಭಾವಿಸುವೆ’ ಎಂದು ಹೇಳುವ ಮೂಲಕ ತನ್ನ ನಿವೃತ್ತಿಯನ್ನು ಪ್ರಕಟಿಸಿದ್ದರು.

2016ರ ಫ್ರೆಂಚ್ ಓಪನ್ ಫೈನಲ್‌ ನಲ್ಲಿ ಸೆರೆನಾ ವಿಲಿಯಮ್ಸ್(Serena Williams) ಮತ್ತು 2017ರ ವಿಂಬಲ್ಡನ್ ಫೈನಲ್‌ನಲ್ಲಿ ವೀನಸ್ ವಿಲಿಯಮ್ಸ್(Venus Williams) ಅವರನ್ನು ಮುಗುರುಜಾ ಸೋಲಿಸಿ ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿದ್ದರು. ತಮ್ಮ ವೃತ್ತಿಜೀವನದಲ್ಲಿ ಒಟ್ಟು 10 ಪ್ರಮುಖ ಪ್ರಶಸ್ತಿ ಗೆದ್ದಿದ್ದಾರೆ. 2015ರ ವಿಂಬಲ್ಡನ್ ಮತ್ತು 2020ರ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಕೊನೆಯ ಬಾರಿಗೆ ಅವರು ಗೆಲುವು ಸಾಧಿಸಿದ್ದು, 2021 ರ ಎಟಿಪಿ ಟೂರ್ನಿಯಾಗಿತ್ತು. ಕಳೆದೊಂದು ವರ್ಷದಿಂದ ಅವರು ಯಾವುದೇ ಟೆನಿಸ್​ ಟೂರ್ನಿ ಆಡಿರಲಿಲ್ಲ.

Continue Reading
Advertisement
arijit singh rajamarga column 2
ಅಂಕಣ11 mins ago

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Karnataka Weather
ಕರ್ನಾಟಕ39 mins ago

Karnataka Weather: ಇಂದು ಮೈಸೂರು, ಕೊಡಗು ಸೇರಿ ವಿವಿಧೆಡೆ ಮಳೆ; ಮುಂದಿನ 5 ದಿನ ತಾಪಮಾನದಲ್ಲಿ ಭಾರಿ ಏರಿಕೆ!

Modi
ಪ್ರಮುಖ ಸುದ್ದಿ1 hour ago

ವಿಸ್ತಾರ ಸಂಪಾದಕೀಯ: ರೈಲ್ವೇ ಇಲಾಖೆಯ ಸುಧಾರಣೆ ಕ್ರಮಗಳು ಪ್ರಶಂಸಾರ್ಹ

Baking Soda
ಆರೋಗ್ಯ1 hour ago

Baking Soda: ಅಡುಗೆ ಸೋಡಾ ನಿಜಕ್ಕೂ ಆರೋಗ್ಯಕ್ಕೆ ಕೆಟ್ಟದ್ದಾ?

World Malaria Day
ಆರೋಗ್ಯ2 hours ago

World Malaria Day: ಭಾರತದಲ್ಲಿ ಮಲೇರಿಯಾಗೆ ಪ್ರತಿವರ್ಷ 20 ಸಾವಿರ ಬಲಿ; ಸೊಳ್ಳೆಗಳು ಭಾರಿ ಡೇಂಜರ್‌!

dina bhavishya read your daily horoscope predictions for April 25 2024
ಭವಿಷ್ಯ6 hours ago

Dina Bhavishya : ಇಂದು ಈ ನಾಲ್ಕು ರಾಶಿಯವರಿಗೆ 4 ಲಕ್ಕಿ ನಂಬರ್!

PM
ದೇಶ7 hours ago

ಪ್ರಧಾನಿ ವಿರುದ್ಧ ಪಿತೂರಿ ನಡೆಸುವುದು ದೇಶದ್ರೋಹ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ

Union Minister Pralhad Joshi Statement in Unakal
ಹುಬ್ಬಳ್ಳಿ7 hours ago

Lok Sabha Election 2024: ಹಿಂದೂ ಧರ್ಮದ ಉಳಿವಿಗಾಗಿ ಮತ್ತೆ ಮೋದಿ ಬೆಂಬಲಿಸಿ: ಪ್ರಲ್ಹಾದ್‌ ಜೋಶಿ

DC vs GT
ಕ್ರೀಡೆ8 hours ago

DC vS GT: ಗುಜರಾತ್​ ವಿರುದ್ಧ ಡೆಲ್ಲಿಗೆ ರೋಚಕ ಗೆಲುವು ; ಪ್ಲೇ ಆಫ್​ ರೇಸ್ ಜೀವಂತ

PUBG Love
ದೇಶ8 hours ago

PUBG Love: ಪಬ್ಜಿ ಆಡುವಾಗ ಸಿಕ್ಕ ಮುಸ್ಲಿಂ ಯುವಕನ ಜತೆ ಹಿಂದು ಯುವತಿ ಮದುವೆ; ಈಗ ಬಾಳೇ ನರಕ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌