Asia Cup 2023: ಪಾಕ್​ನಲ್ಲೇ ನಡೆಯಲಿದೆ ಏಷ್ಯಾ ಕಪ್​; ಭಾರತದ ಪಂದ್ಯ ಎಲ್ಲಿ? - Vistara News

ಕ್ರಿಕೆಟ್

Asia Cup 2023: ಪಾಕ್​ನಲ್ಲೇ ನಡೆಯಲಿದೆ ಏಷ್ಯಾ ಕಪ್​; ಭಾರತದ ಪಂದ್ಯ ಎಲ್ಲಿ?

ಈ ಬಾರಿಯ ಏಷ್ಯಾ ಕಪ್(Asia Cup 2023) ಟೂರ್ನಿ ಹೈಬ್ರಿಡ್ ಮಾಡೆಲ್​ನಲ್ಲಿಯೇ ನಡೆಯಲಿದೆ ಎಂದು ಎಸಿಸಿ(Asian Cricket Council) ಮಂಡಳಿಯ ಅಧಿಕಾರಿಯಬ್ಬರು ಪಿಟಿಐಗೆ ನೀಡಿದ್ದಾರೆ.

VISTARANEWS.COM


on

Rohit Sharma And Babar Azam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ: ಬಿಸಿಸಿಐ(BCCI) ಮತ್ತು ಪಿಸಿಬಿ(PCB) ಮಧ್ಯೆ ನಡೆಯುತ್ತಿದ್ದ ಪ್ರತಿಷ್ಠಿತ ಏಷ್ಯಾ ಕಪ್(Asia Cup 2023) ಆತಿಥ್ಯ ವಿವಾದ ಇದೀಗ ಬಹುತೇಕ ಅಂತ್ಯಗೊಂಡಂತೆ ಕಾಣುತ್ತಿದೆ. ಎಸಿಸಿ(Asian Cricket Council) ಮಂಡಳಿಯ ಅಧಿಕಾರಿಯಬ್ಬರು ಪಿಟಿಐಗೆ ನೀಡಿದ ಮಾಹಿತಿ ಪ್ರಕಾರ ಪಾಕಿಸ್ತಾನ ಪಟ್ಟು ಹಿಡಿದಿದ್ದ ಹೈಬ್ರಿಡ್ ಮಾಡೆಲ್​ಗೆ ಒಪ್ಪಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ. ಈ ಮೂಲಕ ಪಾಕ್​ ಮೇಲುಗೈ ಸಾಧಿಸಿದಂತಾಗಿದೆ. ಸದ್ಯದ ಪ್ರಕಾರ ಟೂರ್ನಿಯ ನಾಲ್ಕು ಪಂದ್ಯಗಳು ಪಾಕಿಸ್ತಾನ ನಡೆಸಿ ಬಳಿಕದ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ಏಷ್ಯಾ ಕಪ್​ ಆರಂಭಕ್ಕೆ ಸರಿ ಸುಮಾರು ಒಂದು ವರ್ಷ ಬಾಕಿ ಇರುವಾಗಲೇ ಭಾರತ ಮತ್ತು ಪಾಕ್​ ಕ್ರಿಕೆಟ್​ ಕಂಡಳಿ ನಡುವೆ ಕಿತ್ತಾಟ ಆರಂಭವಾಗಿತ್ತು. ಪಾಕಿಸ್ತಾನದಲ್ಲಿ ಪಂದ್ಯಗಳು ನಡೆದರೆ ಭಾರತ ಇದರಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವುದು ಬಿಸಿಸಿಐ ವಾದವಾಗಿದರೆ, ಪಂದ್ಯಗಳು ನಡೆದರೆ ಅದು ಪಾಕ್​ ನೆಲದಲ್ಲಿಯೇ ನಡೆಯಬೇಕು ಇಲ್ಲವಾದಲ್ಲಿ ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್​ ಬಹಿಷ್ಕರಿಸುತ್ತೇಬವೆ ಎನ್ನುವುದು ಪಾಕ್​ ಕ್ರಿಕೆಟ್​ ಮಂಡಳಿಯ ಹಠವಾಗಿತ್ತು. ಇದೇ ವಿಚಾರವಾಗಿ ಉಭಯ ದೇಶಗಳ ಕ್ರಿಕೆಟ್​ ಮಂಡಳಿ ತಿಕ್ಕಾಟ ನಡೆಸುಸುತ್ತಲೇ ಇತ್ತು.

ಇದೇ ವಿಚಾರವಾಗಿ ಪಾಕ್​ ಕ್ರಿಕೆಟ್​ ಮಂಡಳಿ ಜತೆ ಏಷ್ಯನ್​ ಕ್ರಿಕೆಟ್​​ ಕೌನ್ಸಿಲ್​ ಹಲವು ಸಭೆಗಳನ್ನು ನಡೆಸಿದರೂ ಯಾವುದೂ ಫಲಪ್ರದವಾಗಿರಲಿಲ್ಲ. ಅಂತಿಮವಾಗಿ ಪಾಕ್​ ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ನಡೆಸುವ ಪ್ರಸ್ತಾವವನ್ನು ಐಸಿಸಿ ಮತ್ತು ಎಸಿಸಿ ಮಂಡಳಿ ಮುಂದಿಟ್ಟಿತ್ತು. ಆದರೆ ಇದಕ್ಕೂ ಬಿಸಿಸಿಐ ಕಟ್ಟಿ ಮುರಿದಂತೆ ನೋ ಎಂದಿತ್ತು. ಇದೇ ವೇಳೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿಯೂ ಹೈಬ್ರಿಡ್ ಮಾದರಿಯನ್ನು ನಿರಾಕರಿಸಿತ್ತು. ಆದರೆ ಪಾಕ್​ ಮಾತ್ರ ಇದ್ಯಾವುದಕ್ಕೂ ತಲೆಕಡೆಸಿಕೊಳ್ಳದೆ ಹೈಬ್ರಿಡ್ ಮಾದರಿಯ ಹೊರತು ನಾವು ಟೂರ್ನಿಯನ್ನು ಆಡುವುದಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ Asia Cup 2023 : ಪಾಕಿಸ್ತಾನ ತಂಡವನ್ನು ಹೊರಗಿಟ್ಟು ಏಷ್ಯಾ ಕಪ್​ ಆಯೋಜಿಸಲು ಜಯ್​ ಶಾ ಯೋಜನೆ

ಇದೀಗ ಬಂದ ಮಾಹಿತಿ ಪ್ರಕಾರ ಭಾರತ ಹೊರತುಪಡಿಸಿದ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಎಸಿಸಿ ಅಧ್ಯಕ್ಷ ಜಯ್ ಶಾ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಒಮಾನ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ, ಎಸಿಸಿ ಕಾರ್ಯಕಾರಿ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಪಂಕಜ್ ಖಿಮ್ಜಿ ಅವರಿಗೆ ಹೆಚ್ಚಿನ ದೇಶಗಳು ಹೈಬ್ರಿಡ್ ಮಾದರಿಯನ್ನು ನಿರಾಕರಿಸಿದ ಕಾರಣ ಇದಕ್ಕೆ ಸೂಕ್ತ ಪರಿಹಾರವನ್ನು ಹುಡುಕಿ ಕೊಡುವ ಜವಾಬ್ದಾರಿಯನ್ನು ವಹಿಸಲಾಯಿತು. ಇದೀಗ ನಾಲ್ಕು ಪಂದ್ಯಗಳು (ಪಾಕಿಸ್ತಾನ vs ನೇಪಾಳ, ಬಾಂಗ್ಲಾದೇಶ vs ಅಫ್ಘಾನಿಸ್ತಾನ, ಅಫ್ಘಾನಿಸ್ತಾನ vs ಶ್ರೀಲಂಕಾ ಮತ್ತು ಶ್ರೀಲಂಕಾ vs ಬಾಂಗ್ಲಾದೇಶ) ಪಾಕಿಸ್ತಾನದ ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಭಾರತ ಮತ್ತು ಪಾಕ್​ ವಿರುದ್ದದ ಪಂದ್ಯಗಳು ಮತ್ತು ಉಳಿದ ಎಲ್ಲ ಸೂಪರ್ ಫೋರ್ ಪಂದ್ಯಗಳು ಲಂಕಾದ ಪಲ್ಲೆಕೆಲೆ ಅಥವಾ ಗಾಲೆಯಲ್ಲಿ ನಡೆಯಲಿದೆ ಎಂದು ಎಸಿಸಿ ಮಂಡಳಿಯ ಸದಸ್ಯರೊಬ್ಬರು ಪಿಟಿಐಗೆ ತಿಳಿಸಿದ್ದಾರೆ

ವಿಶ್ವ ಕಪ್​ಗೆ ಯಾವುದೇ ಷರತ್ತು ಇಲ್ಲ

ಐಸಿಸಿ ಸಿಇಒ ಜೆಫ್ ಅಲಾರ್ಡೈಸ್ ಮತ್ತು ಚೇರ್ಮನ್ ಗ್ರೆಗ್ ಬಾರ್ಕ್ಲೇ ಕರಾಚಿಯಲ್ಲಿ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರನ್ನು ಭೇಟಿ ಮಾಡಿದ ವೇಳೆ ಪಾಕಿಸ್ತಾನವು ವಿಶ್ವಕಪ್​ಗೆ ಬರಲು ಯಾವುದೇ ಷರತ್ತುಗಳನ್ನು ಹಾಕುವುದಿಲ್ಲ ಎಂದು ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

BCCI Annual Contract: ಅಯ್ಯರ್, ಇಶಾನ್​ಗೆ ಗುತ್ತಿಗೆ ಪಟ್ಟಿ ಸೇರಲು ಇನ್ನೂ ಇದೆ ಅವಕಾಶ; ಈ ಷರತ್ತು ಅನ್ವಯ!

ಇಶಾನ್‌ ಕಿಶನ್​(Ishan Kishan) ಹಾಗೂ ಶ್ರೇಯಸ್‌ ಅಯ್ಯರ್​(Shreyas) ಮರಳಿ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಡೆಯಲು ಅಗತ್ಯವಿರುವಷ್ಟು ಪಂದ್ಯಗಳನ್ನು ಆಡಬೇಕಿದೆ.

VISTARANEWS.COM


on

Koo

ಮುಂಬಯಿ: ಹಲವು ಬಾರಿ ದೇಶಿಯ ಕ್ರಿಕೆಟ್​ನಲ್ಲಿ ಭಾಗಿಯಾಗುವಂತೆ ಬಿಸಿಸಿಐ(BCCI) ನೀಡಿದ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ಕಾರಣ ಕೇಂದ್ರ ಗುತ್ತಿಗೆ(BCCI Annual Contract) ಪಟ್ಟಿಯಿಂದ ಹೊರಬಿದ್ದ ಇಶಾನ್‌ ಕಿಶನ್​(Ishan Kishan) ಹಾಗೂ ಶ್ರೇಯಸ್‌ ಅಯ್ಯರ್​(Shreyas) ಮರಳಿ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಡೆಯುವ ಅವಕಾಶವಿದೆ. ಆದರೆ, ಇದಕ್ಕೆ ಒಂದು ಷರತ್ತು ಅನ್ವಯವಾಗಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಬಿಸಿಸಿಐ ಕೇಂದ್ರೀಯ ಒಪ್ಪಂದದಿಂದ ಆಟಗಾರರನ್ನು ಕೈಬಿಟ್ಟರೂ ಕೂಡ ಆ ಆಟಗಾರರು ಭಾರತದ ಪರ ಆಡಲು ಲಭ್ಯವಿರುತ್ತಾರೆ. ಆಟಗಾರರ ಪ್ರದರ್ಶನ ಮತ್ತು ಫಿಟ್ನೆಸ್ ಮೇಲೆ ಅವರ ಆಯ್ಕೆ ನಿರ್ಧಾರವಾಗುತ್ತದೆ. ಹೀಗಾಗಿ ಇಶಾನ್​ ಮತ್ತು ಅಯ್ಯರ್​ ಭಾರತ ಪರ ಆಡಲು ಯಾವುದೇ ಸಮಸ್ಯೆ ಇಲ್ಲ ಎನ್ನುವುದು ಈಗಾಗಲೇ ತಿಳಿದುಬಂದಿತ್ತು. ಇದೀಗ ಉಭಯ ಆಟಗಾರರಿಗೆ ಮತ್ತೆ ಕೇಂದ್ರ ಗುತ್ತಿಗೆ ಪಟ್ಟಿಗೆ ಸೇರುವ ಅವಕಾಶವಿದೆ. ಇದಕ್ಕಾಗಿ ಇವರು ಗುತ್ತಿಗೆ ಪಡೆಯಲು ಅಗತ್ಯವಿರುವಷ್ಟು ಪಂದ್ಯಗಳನ್ನು ಆಡಬೇಕಿದೆ. ಈಗಾಗಲೇ ಶ್ರೇಯಸ್​ ಅಯ್ಯರ್​ ಅವರು ರಣಜಿ ಟ್ರೋಫಿಗಾಗಿ ಮುಂಬೈ ಪರ ಆಡಲು ಆರಂಭಿಸಿದ್ದಾರೆ. ಇಶಾನ್​ ಮಾತ್ರ ಶೋಕಿ ಮಾಡುತ್ತಾ ಕೇವಲ ಐಪಿಎಲ್ ಕಡೆ ಮಾತ್ರ ಗಮನಹರಿಸಿದ್ದಾರೆ.​

ವೇತನ ಶ್ರೇಣಿ ಹೇಗೆ?


ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಪ್ರನಿಧಿಸುವ ಆಟಗಾರರಿಗೆ ಬಿಸಿಸಿಐ ಪ್ರತಿ ವರ್ಷ ಅಂದರೆ 12 ತಿಂಗಳಿಗೆ ಅನ್ವಯವಾಗುವಂತೆ ವೇತನ ಒಪ್ಪಂದವನ್ನು ನೀಡುತ್ತದೆ. ಈ ಒಪ್ಪಂದದ ಪ್ರಕಾರ ಆಟಗಾರರು ಈ ವರ್ಷದಲ್ಲಿ ಭಾರತ ಪರ ಆಡಲಿ ಅಥವಾ ಇಲ್ಲದಿರಲಿ ಅವರಿಗೆ ನಿಗದಿಪಡಿಸಿದ ಮೊತ್ತವನ್ನು ಬಿಸಿಸಿಐ ನೀಡುತ್ತದೆ. ಅದಂರಂತೆ ಬಿಸಿಸಿಐ ನಾಲ್ಕು ಗ್ರೇಡ್​ಗಳಾಗಿ ಆಟಗಾರರನ್ನು ವಿಂಗಡಿಸುತ್ತದೆ. A+ ಗ್ರೇಡ್​ ಪಡೆದ ಆಟಗಾರರು ವರ್ಷಕ್ಕೆ 7 ಕೋಟಿ ರೂ. ಮೊತ್ತ ಪಡೆದರೆ, A ಗ್ರೇಡ್​ ಆಟಗಾರರು 5 ಕೋಟಿ ರೂ, B ಗ್ರೇಡ್​ ಆಟಗಾರರು 3 ಕೋಟಿ ಮತ್ತು C ದರ್ಜೆಯ ಆಟಗಾರರು ವಾರ್ಷಿಕ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಇದನ್ನೂ ಓದಿ WPL Points Table: ಯುಪಿ​ಗೆ ಸತತ 2ನೇ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಮುಂಬೈ

2022-23 ಋತುವಿನಲ್ಲಿ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಶಿಖರ್ ಧವನ್, ದೀಪಕ್ ಹೂಡಾ, ಯಜುವೇಂದ್ರ ಚಹಲ್ ಮತ್ತು ಅಜಿಂಕ್ಯ ರಹಾನೆ ಈ ಬಾರಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇವರನ್ನು ಪ್ರಸಕ್ತ ಸಾಲಿನ ಆಟಗಾರರ ಒಪ್ಪಂದ ಪಟ್ಟಿಯಿಂದ ಬಿಸಿಸಿಐ ಕೈಬಿಟ್ಟಿದೆ. ಆಯ್ಕೆ ಸಮಿತಿಯು ವೇಗದ ಬೌಲಿಂಗ್ ಒಪ್ಪಂದಗಳಿಗಾಗಿ ಚೊಚ್ಚಲ ಟೆಸ್ಟ್​ ಆಡಿದ ಆಕಾಶ್ ದೀಪ್, ವಿಜಯ್ ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ ಅವರ ಹೆಸರನ್ನು ಶಿಫಾರಸು ಮಾಡಿದೆ.

ಬಿಸಿಸಿಐ ಕೇಂದ್ರ ಒಪ್ಪಂದಗಳ ಪಟ್ಟಿ

ಗ್ರೇಡ್ A+ (4 ಕ್ರಿಕೆಟಿಗರು): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಮತ್ತು ರವೀಂದ್ರ ಜಡೇಜಾ.

ಗ್ರೇಡ್ ಎ (6 ಕ್ರಿಕೆಟಿಗರು): ಆರ್ ಅಶ್ವಿನ್, ಮೊಹಮ್ಮದ್​ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

ಗ್ರೇಡ್ ಬಿ (5 ಕ್ರಿಕೆಟಿಗರು) ಸೂರ್ಯಕುಮಾರ್ ಯಾದವ್, ರಿಷಭ್​ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.

ಗ್ರೇಡ್ ಸಿ (15 ಕ್ರಿಕೆಟಿಗರು) ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.

Continue Reading

ದೇಶ

Gautam Gambhir: ರಾಜಕೀಯಕ್ಕೆ ಗುಡ್‌ಬೈ ಹೇಳಿದ ಗೌತಮ್‌ ಗಂಭೀರ್‌; ಮಾಜಿ ಕ್ರಿಕೆಟಿಗನ ಈ ನಿರ್ಧಾರಕ್ಕೆ ಕಾರಣವೇನು?

Gautam Gambhir: ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

VISTARANEWS.COM


on

gambhir
Koo

ನವದೆಹಲಿ: ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಅಚ್ಚರಿಯ ಬೆಳವಣಿಗೆಯೊಂದ ನಡೆದಿದ್ದು, ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ (Gautam Gambhir) ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಶನಿವಾರ (ಮಾರ್ಚ್‌ 2) ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ʼʼರಾಜಕೀಯ ಕರ್ತವ್ಯಗಳಿಂದ ಬಿಡುಗಡೆ ಮಾಡುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬಳಿ ಮನವಿ ಮಾಡಿರುವುದಾಗಿʼʼ ತಿಳಿಸಿದ್ದಾರೆ. ಮೈದಾನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದ್ದ ಗಂಭೀರ್‌ 2019ರಲ್ಲಿ ರಾಜಕೀಯಕ್ಕೆ ಧುಮಿಕ್ಕಿದ್ದರು. ಆ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಪೂರ್ವ ದೆಹಲಿಯಿಂದ ಆಯ್ಕೆಯಾಗಿದ್ದರು.

ಕಾರಣವೇನು?

ʼʼರಾಜಕೀಯ ಚಟುವಟಿಕೆಗಳಿಂದ ಬಿಡುಗಡೆ ಮಾಡುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮನವಿ ಮಾಡುತ್ತಿದ್ದೇನೆ. ಇದರಿಂದಾಗಿ ನಾನು ಮುಂಬರುವ ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಹೆಚ್ಚು ಗಮನಹರಿಸಬಹುದಾಗಿದೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಜೈ ಹಿಂದ್!ʼʼ ಎಂದು ಗಂಭೀರ್ ಬರೆದುಕೊಂಡಿದ್ದಾರೆ.

2019ರ ಮಾರ್ಚ್‌ನಲ್ಲಿ ಗಂಭೀರ್‌ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಳಿಕ ದೆಹಲಿ ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿಯಿಂದ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ಅರವಿಂದರ್ ಸಿಂಗ್ ಲವ್ಲಿ ವಿರುದ್ಧ ಜಯಗಳಿಸಿದ್ದರು. ಮುಂದಿನ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಸಿಗುವುದಿಲ್ಲ ಎನ್ನುವ ವರದಿ ಹಿನ್ನಲೆಯಲ್ಲಿ ಅವರು ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ ಎನ್ನಲಾಗುತ್ತಿದೆ.

ಮೊದಲ ಪಟ್ಟಿ ಶೀಘ್ರ

2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಶೀಘ್ರದಲ್ಲೇ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಪ್ರಮುಖರ ಹೆಸರಿರುವ ಸಾಧ್ಯತೆ ಇದೆ. ಹಲವು ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್‌ ಲಭಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Gautam Gambhir : ಪಾಕಿಸ್ತಾನ ವಿರುದ್ಧ ಸೋತರೆ… ಗಮನ ಸೆಳೆದ ಗಂಭೀರ್ ಹೇಳಿಕೆ

ಕ್ರಿಕೆಟ್‌ನಲ್ಲಿ ಛಾಪು

42 ವರ್ಷದ ಗಂಭೀರ್‌ ಭಾರತೀಯ ಕ್ರಿಕೆಟ್‌ ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು 147 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 39.68 ಸರಾಸರಿಯಲ್ಲಿ 5,238 ರನ್ ಗಳಿಸಿದ್ದಾರೆ. ಏಕದಿನದಲ್ಲಿ 11 ಶತಕ ದಾಖಲಿಸಿದ್ದಾರೆ. 2011ರ ವಿಶ್ವಕಪ್ ಫೈನಲ್‌ನಲ್ಲಿ 97 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಅನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇನ್ನು ಟೆಸ್ಟ್‌ ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅವರು 58 ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಾರೆ ಮತ್ತು 41.95 ರ ಸರಾಸರಿಯಲ್ಲಿ 4,154 ರನ್​​ ಗಳಿಸಿದ್ದಾರೆ. ಇದರಲ್ಲಿ ಒಂಬತ್ತು ಶತಕಗಳಿವೆ. ಮಾತ್ರವಲ್ಲ 2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿಯೂ ಗಂಭೀರ್‌ ಇದ್ದರು. ಐಪಿಎಲ್‌ನಲ್ಲಿಯೂ ಆಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಾಲಿವುಡ್

Shah Rukh Khan : ಶಾರುಖ್‌, ರಣವೀರ್‌ ಜತೆ ಪೋಸ್‌ ಕೊಟ್ಟ ಕ್ರಿಕೆಟಿಗ ಡ್ವೇನ್ ಬ್ರಾವೋ!

Shah Rukh Khan : ಜಾನ್ವಿ ಕಪೂರ್, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಮೆಗಾ ಬ್ಯಾಷ್‌ನಲ್ಲಿ ಕಂಡರು.

VISTARANEWS.COM


on

Shah Rukh Khan Chills With Dwayne Bravo at Anant Ambani Pre-Wedding
Koo

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಂಭ್ರಮಾಚರಣೆ ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ಕ್ರಿಕೆಟಿಗ ಡ್ವೇನ್ ಬ್ರಾವೋ ಅವರು ಶಾರುಖ್‌, ಹಾಗೂ ರಣವೀರ್‌ ಜತೆ ಪೋಸ್‌ ಕೊಟ್ಟಿದ್ದಾರೆ. “ವಿವಾಹದ ವೈಬ್ಸ್! ಚಿಲ್ಲಿಂಗ್‌ ವಿಥ್‌ ಬಿಗ್‌ ಬಾಯ್ಸ್‌!ʼʼಎಂದು (Dwayne Bravo) ಕ್ಯಾಪ್ಷನ್‌ ಕೊಟ್ಟಿದ್ದಾರೆ. ಶಾರುಖ್ ಹೊರತುಪಡಿಸಿ, ಸಲ್ಮಾನ್ ಖಾನ್, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಮಾಧುರಿ ದೀಕ್ಷಿತ್, ವರುಣ್ ಧವನ್, ಅನಿಲ್ ಕಪೂರ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಹಾಜರಿದ್ದರು.

ಜಾನ್ವಿ ಕಪೂರ್, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಮೆಗಾ ಬ್ಯಾಷ್‌ನಲ್ಲಿ ಕಂಡರು.

ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಕಾರ್ನಿವಲ್‌ನ ರಾಯಲ್ ಡ್ರೆಸ್‌ಕೋಡ್ಸ್!

ಮಾರ್ಚ್ 1: ಇವನಿಂಗ್‌ ಎವರ್‌ಲ್ಯಾಂಡ್‌ ಕಾಕ್‌ಟೈಲ್‌ ಡ್ರೆಸ್ ಕೋಡ್‌

ಇವನಿಂಗ್‌ ಎವರ್‌ಲ್ಯಾಂಡ್‌ ಹೆಸರಿನಲ್ಲಿ ನಡೆಯುವ ಮೊದಲ ದಿನದ ಸಂಜೆ ಕಾರ್ಯಕ್ರಮಕ್ಕೆ ಎಲ್ಲರಿಗೂ ಕಾಕ್‌ಟೈಲ್‌ ಡ್ರೆಸ್‌ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಅಂದು ನಡೆಯುವ ಮ್ಯಾಜಿಕಲ್‌ ಮ್ಯೂಸಿಕ್‌, ಡ್ಯಾನ್ಸ್‌ಗೆ ಹೊಂದುವಂತೆ ರಸಮಯ ಸಂಜೆಗೆ ಹೊಂದುವಂತಹ ವೆಸ್ಟರ್ನ್ ಗೌನ್ಸ್, ಪ್ಯಾಂಟ್‌ ಸೂಟ್‌, ಶಿಮ್ಮರ್‌ ಫ್ಲೂಯಿಂಗ್‌ಗೌನ್ಸ್, ಮಿನುಗುವ ಆಕ್ಸೆಸರೀಸ್ ಸೇರಿದಂತೆ ನಾನಾ ಕಾಕ್‌ಟೈಲ್‌ ಉಡುಪುಗಳು ಈ ಲಿಸ್ಟ್‌ನಲ್ಲಿ ಸೇರಿವೆ.

ಇದನ್ನೂ ಓದಿ: Shah Rukh Khan: ಅಲ್ಲು ಅರ್ಜುನ್ ಮಗನನ್ನು ಹಾಡಿ ಹೊಗಳಿದ ಶಾರುಖ್‌! ಅದ್ಯಾಕೆ?

ಮಾರ್ಚ್ 2: ವಾಕ್‌ ಆನ್‌ ದಿ ವೈಲ್ಡ್ ಸೈಡ್ – ಜಂಗಲ್‌ ಥೀಮ್‌ ಡ್ರೆಸ್‌ಕೋಡ್‌

ಮಾರ್ಚ್ 2ರಂದು ಅಂಬಾನಿ ರೆಸ್ಕ್ಯೂ ಸೆಂಟರ್‌ನಲ್ಲಿ ನಡೆಯಲಿರುವ ವಾಕ್‌ ಆನ್‌ ದಿ ವೈಲ್ಡ್ ಸೈಡ್‌ ಹೆಸರಿನ ಔಟ್‌ಡೋರ್‌ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆಲ್ಲರಿಗೂ ಅನಿಮಲ್‌ ಪ್ರಿಂಟ್ಸ್, ಸಫಾರಿ ಜಂಗಲ್‌ ಥೀಮ್‌ ಡ್ರೆಸ್‌ಕೋಡ್‌ ಫಿಕ್ಸ್ ಮಾಡಲಾಗಿದೆ. ಸುತ್ತಾಡುವ ಕಾರ್ಯಕ್ರಮ ಇದಾಗಿರುವುದರಿಂದ ಕಂಫರ್ಟಬಲ್‌ ಫುಟ್‌ವೇರ್‌ ಧರಿಸಲು ಸೂಚಿಸಲಾಗಿದೆ.

ಮಾರ್ಚ್ 3 : ಟಸ್ಕರ್‌ ಟ್ರಯಲ್ಸ್ – ಹೇರಿಟೇಜ್‌ ಇಂಡಿಯಾ

ಬೆಳಗ್ಗೆ ಶುರುವಾಗುವ ಟಸ್ಕರ್‌ ಟ್ರಯಲ್‌ ಹೆಸರಿನ ಔಟ್‌ಡೋರ್‌ ಆಕ್ಟಿವಿಟಿಯಲ್ಲಿ, ಅತಿಥಿಗಳು ಕ್ಯಾಶುವಲ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳಬೇಕಿದೆ. ಇನ್ನು, ಅದೇ ದಿನ ಸಂಜೆ ವೇಳೆ ನಡೆಯುವ ಹಸ್ತಾಕ್ಷರ್‌ ಕಾರ್ಯಕ್ರಮದಲ್ಲಿ ಹೆರಿಟೇಜ್‌ ಇಂಡಿಯನ್‌ ಡ್ರೆಸ್‌ಕೋಡ್‌ ನೀಡಿದ್ದು, ಇಲ್ಲಿ ನಡೆಯುವ ರಾಯಲ್‌ ಪಾರ್ಟಿಯಲ್ಲಿ ಅತಿಥಿಗಳು, ಭಾರತೀಯ ಸಂಸ್ಕೃತಿ ಬಿಂಬಿಸುವಂತಹ ರಾಯಲ್‌ ಲುಕ್ ನೀಡುವ ರೇಷ್ಮೆ ಸೀರೆ, ಲೆಹೆಂಗಾ, ಅನಾರ್ಕಲಿ, ಶೆರ್ವಾನಿ, ಟರ್ಬನ್‌, ಕುರ್ತಾದಂತಹ ದೇಸಿ ಅಟೈರ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.
ಒಟ್ಟಾರೆ, ಅಂಬಾನಿ ಫ್ಯಾಮಿಲಿಯ ಈ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳು ಹೈ ಸೊಸೈಟಿ ಫ್ಯಾಷನ್‌ನ ಅನಾವರಣಕ್ಕೆ ಸಾಕ್ಷಿಯಾಗಲಿದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Continue Reading

ಕ್ರೀಡೆ

WPL Points Table: ಯುಪಿ​ಗೆ ಸತತ 2ನೇ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಮುಂಬೈ

ಯುಪಿ ಗೆಲುವಿನಿಂದಾಗಿ ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಒಂದು ಸ್ಥಾನಗಳ ಕುಸಿತ ಕಂಡು ನಾಲ್ಕನೇ ಸ್ಥಾನಕ್ಕೆ ಜಾರಿದೆ

VISTARANEWS.COM


on

Sophie Ecclestone
Koo

ಬೆಂಗಳೂರು: ಶುಕ್ರವಾರ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ 2ನೇ ಆವೃತ್ತಿಯ ಡಬ್ಲ್ಯುಪಿಎಲ್(WPL 2024)​ ಟೂರ್ನಿಯ 8ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್(UP Warriorz)​ 6 ವಿಕೆಟ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(WPL Points Table) ಒಂದು ಸ್ಥಾನ ಮೇಲೇರಿದೆ. ಸದ್ಯ ಮೂರನೇ ಸ್ಥಾನ ಪಡೆದುಕೊಂಡಿದೆ.

ಯುಪಿ ಗೆಲುವಿನಿಂದಾಗಿ ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್(mumbai indians)​ ಒಂದು ಸ್ಥಾನಗಳ ಕುಸಿತ ಕಂಡು ನಾಲ್ಕನೇ ಸ್ಥಾನಕ್ಕೆ ಜಾರಿದೆ. ಹ್ಯಾಟ್ರಿಕ್​ ಸೋಲಿಗೆ ತುತ್ತಾದ ಗುಜರಾತ್​​ ಜೈಂಟ್ಸ್ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.

​ಸದ್ಯ 3 ಪಂದ್ಯಗಳನ್ನಾಡಿ 2 ಗೆಲುವು 1 ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ ಅಗ್ರಸ್ಥಾನದಲ್ಲಿದ್ದರೆ, ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ಡೆಲ್ಲಿ ಮತ್ತು ಆರ್​ಸಿಬಿ ಸಮಾನ 4 ಅಂಕ ಹೊಂದಿದ್ದರೂ ಕೂಡ ರನ್​ ರೇಟ್​ನಲ್ಲಿ ಮುಂದಿರುವ ಕಾರಣ ಡೆಲ್ಲಿಗೆ ಅಗ್ರಸ್ಥಾನ ಲಭಿಸಿದೆ.

ಅಂಕ ಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕ
ಡೆಲ್ಲಿ ಕ್ಯಾಪಿಟಲ್ಸ್​3214 (+1.271)
ಆರ್​ಸಿಬಿ​3214 (+0.705)
ಯುಪಿ ವಾರಿಯರ್ಸ್​​3214 (+0.211)
ಮುಂಬೈ ಇಂಡಿಯನ್ಸ್​​3214 (-0.182)
ಗುಜರಾತ್​ ಜೈಂಟ್ಸ್​3030 (-1.995)

ಹ್ಯಾಟ್ರಿಕ್​ ಸೋಲು ಕಂಡ ಗುಜರಾತ್​


ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಗುಜರಾತ್​ ತಂಡ ಹ್ಯಾಟ್ರಿಕ್​ ಸೋಲು ಕಂಡ ಅವಮಾನಕ್ಕೆ ಸಿಲುಕಿತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್​ ಜೈಂಟ್ಸ್​ ಫೋಬೆ ಲಿಚ್ಫೀಲ್ಡ್(35) ಮತ್ತು ಆಶ್ಲೀಗ್ ಗಾರ್ಡನರ್(30) ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 142ರನ್ ಬಾರಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್​ ತಂಡ ಆರಂಭದಲ್ಲಿ ನಾಟಕೀಯ ಕುಸಿತ ಕಂಡೂ ಕೂಡ ನಾಲ್ಕನೇ ಕ್ರಮಾಂಕದಲ್ಲಿ ಗ್ರೇಸ್​ ಹ್ಯಾರಿಸ್ ನಡೆಸಿದ ಬಿರುಸಿನ ಬ್ಯಾಟಿಂಗ್​ ಪ್ರದರ್ಶನದಿಂದ 15.4 ಓವರ್​ನಲ್ಲಿ 4 ವಿಕೆಟ್​ ಕಳೆದುಕೊಂಡು 143 ರನ್ ಬಾರಿಸಿ ಗೆಲುವು ದಾಖಲಿಸಿತು.

ಇದನ್ನೂ ಓದಿ WPL 2024: ಹ್ಯಾಟ್ರಿಕ್​ ಸೋಲಿಗೆ ತುತ್ತಾದ ಗುಜರಾತ್; ಯುಪಿಗೆ 6 ವಿಕೆಟ್​ ಜಯ

ಚೇಸಿಂಗ್​ ವೇಳೆ 90 ರನ್​ಗೆ 4 ಪ್ರಮುಖ ಆಟಗಾರ್ತಿಯರನ್ನು ಕಳೆದುಕೊಂಡ ಯುಪಿ ವಾರಿಯರ್ಸ್ ಒಂದು ಹಂತದಲ್ಲಿ​ ಆತಂಕಕ್ಕೆ ಸಿಲುಕಿತು. ಆದರೆ, ಕ್ರೀಸ್​ ಕಚ್ಚಿ ನಿಂತಿದ್ದ ಹ್ಯಾರಿಸ್ ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ ಸಿಕ್ಸರ್​ ಮತ್ತು ಬೌಂಡರಿ ಸುರಿಮಳೆಗೈದು ಗುಜರಾತ್​ ಬೌಲರ್​ಗಳ ಬೆವರಿಳಿಸಿದರು. 33 ಎಸೆತಗಳನ್ನು ಎದುರಿಸಿ ನಿಂತ ಅವರು 9 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ ಅಜೇಯ 60 ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದ ದೀಪ್ತಿ ಶರ್ಮಾ ಅಜೇಯ 17 ರನ್​ ಕಲೆಹಾಕಿದರು. ಗುಜರಾತ್​ ಪರ ತನುಜಾ ಕನ್ವರ್ 2 ವಿಕೆಟ್​ ಕಡೆವಿದರು.

Continue Reading
Advertisement
ಕ್ರೀಡೆ5 mins ago

BCCI Annual Contract: ಅಯ್ಯರ್, ಇಶಾನ್​ಗೆ ಗುತ್ತಿಗೆ ಪಟ್ಟಿ ಸೇರಲು ಇನ್ನೂ ಇದೆ ಅವಕಾಶ; ಈ ಷರತ್ತು ಅನ್ವಯ!

Minister MB Patil important meeting with senior officers of Lulu Group
ಕರ್ನಾಟಕ30 mins ago

Bengaluru News: ವಿಜಯಪುರದಲ್ಲಿ ರಫ್ತು ಆಧಾರಿತ ಆಹಾರ ಸಂಸ್ಕರಣ ಘಟಕ, ಸಚಿವ ಎಂ.ಬಿ.ಪಾಟೀಲ್ ಮಹತ್ವದ ಸಭೆ

Rameswaram Cafe blast sketched for 3 months without using a mobile phone
ಬೆಂಗಳೂರು48 mins ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ 3 ತಿಂಗಳಿಂದಲೇ ಸ್ಕೆಚ್‌? ಮೊಬೈಲ್‌ ಬಳಸದೇ ಕೃತ್ಯ!

Bjp Karnataka Former minister Manohar Tahsildar join BJP Is Haveri stronger
ರಾಜಕೀಯ51 mins ago

‌BJP Karnataka: ಬಿಜೆಪಿ ಸೇರಿದ ಮಾಜಿ ಸಚಿವ ಮನೋಹರ್‌ ತಹಸೀಲ್ದಾರ್; ಹಾವೇರಿ ಮತ್ತಷ್ಟು ಸ್ಟ್ರಾಂಗ್?

Unleashing the rage of Yuva The First Single
ಸ್ಯಾಂಡಲ್ ವುಡ್1 hour ago

Yuva Rajkumar: ಇಂದು ಚಾಮರಾಜನಗರದಲ್ಲಿ ‘ಯುವ’ ಪರ್ವ; ಅತಿಥಿಯಾಗಿ ಬರುವ ನಟ ಯಾರು?

Blast in Bengaluru Experimental preparation for serial blasts says CT Ravi
ರಾಜಕೀಯ1 hour ago

Blast in Bengaluru: ಸರಣಿ ಸ್ಫೋಟದ ಪ್ರಯೋಗಾರ್ಥ ರಾಮೇಶ್ವರಂ ಕೆಫೆ ಬ್ಲಾಸ್ಟ್? ಸರ್ಕಾರದ ವಿರುದ್ಧ ಗುಡುಗಿದ ಸಿ.ಟಿ.ರವಿ

mumbai attack
ವಿದೇಶ2 hours ago

Azam Cheema: 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ ಅಜಮ್‌ ಚೀಮಾ ಸಾವು

Rameswaram Cafe Blast Suspected travels in BMTC Volvo bus
ಬೆಂಗಳೂರು2 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

physical abuse
ದೇಶ2 hours ago

Jharkhand shocker: ಪ್ರವಾಸಕ್ಕೆ ಬಂದ ಸ್ಪೇನ್‌ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 10 ಕಿರಾತಕರು

Water crisis Bengaluru borewell water supply tankers to be handed over to govt DK Shivakumar
ಬೆಂಗಳೂರು2 hours ago

Water Crisis: ಬೆಂಗಳೂರಿನ ಕೊಳವೆಬಾವಿ ನೀರು ಪೂರೈಕೆ ಟ್ಯಾಂಕರ್‌ಗಳಿನ್ನು ಸರ್ಕಾರದ ಸುಪರ್ದಿಗೆ: ಡಿ.ಕೆ. ಶಿವಕುಮಾರ್

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameswaram Cafe Blast Suspected travels in BMTC Volvo bus
ಬೆಂಗಳೂರು2 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು21 hours ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು23 hours ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ24 hours ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ1 day ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ2 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ4 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ4 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ4 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

ಟ್ರೆಂಡಿಂಗ್‌