Asia Cup 2023 : ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಸೆ.2ರಂದು ಭಾರತ, ಪಾಕ್ ಮುಖಾಮುಖಿ - Vistara News

ಕ್ರಿಕೆಟ್

Asia Cup 2023 : ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಸೆ.2ರಂದು ಭಾರತ, ಪಾಕ್ ಮುಖಾಮುಖಿ

ಪಾಕಿಸ್ತಾನ ಮತ್ತು ನೇಪಾಳ ನಡುವಿನ ಪಂದ್ಯದೊಂದಿಗೆ ಟೂರ್ನಿ ಉದ್ಘಾಟನೆಗೊಂಡರೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿಯೊಂದಿಗೆ ಟೂರ್ನಿ (Asia Cup 2023) ಕಳೆಗಟ್ಟಲಿದೆ.

VISTARANEWS.COM


on

Asia Cup 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ : ಪಾಕಿಸ್ತಾನ ಮತ್ತು ಶ್ರೀಲಂಕಾ ಕ್ರಿಕೆಟ್​ ಸಂಸ್ಥೆಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿರುವ 16ನೇ ಆವೃತ್ತಿಯ ಏಷ್ಯಾ ಕಪ್ ಕ್ರಿಕೆಟ್​ ಟೂರ್ನಿ (Asia Cup 2023) ಆಗಸ್ಟ್ 30 ರಂದು ಪ್ರಾರಂಭವಾಗಲಿದೆ. ಬುಧವಾರ ಸಂಜೆ ಅದರ ವೇಳಾಪಟ್ಟಿ ಪ್ರಕಟಗೊಂಡಿದ್ದು, ನೇಪಾಳ ಹಾಗೂ ಪಾಕಿಸ್ತಾನ ಉದ್ಘಾಟನಾ ಪಂದ್ಯದಲ್ಲಿ ಆಡಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್​ 2ರಂದು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ಸೇರಿದಂತೆ ಒಟ್ಟು ಆರು ತಂಡಗಳು ಕಾಂಟಿನೆಂಟಲ್ ಟೂರ್ನಮೆಂಟ್ ನಲ್ಲಿ ಭಾಗವಹಿಸಲಿವೆ. ಆರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪಾಕಿಸ್ತಾನ, ನೇಪಾಳ ಮತ್ತು ಭಾರತ ‘ಎ’ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ‘ಬಿ’ ಗುಂಪಿನಲ್ಲಿವೆ.

ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ‘ಸೂಪರ್ 4’ ಹಂತಕ್ಕೆ ಅರ್ಹತೆ ಪಡೆದರೆ, ‘ಸೂಪರ್ 4’ ನ ಅಗ್ರ ಎರಡು ತಂಡಗಳು ಸೆಪ್ಟೆಂಬರ್ 17 ರಂದು ನಡೆಯುವ ಫೈನಲ್​ನಲ್ಲಿ ಸೆಣಸಲಿವೆ. ಆದಾಗ್ಯೂ, ಇಡೀ ಕ್ರಿಕೆಟ್ ಕಾರಿಡಾರ್​ನ ಎಲ್ಲರ ಕಣ್ಣುಗಳು ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮೇಲೆ ನೆಟ್ಟಿದೆ. ಏಷ್ಯಾದ ದೈತ್ಯ ತಂಡಗಳು ಪಂದ್ಯಾವಳಿಯಲ್ಲಿ ಕನಿಷ್ಠ ಎರಡು ಬಾರಿ ಪರಸ್ಪರ ಮುಖಾಮುಖಿಯಾಗುವ ನಿರೀಕ್ಷೆಯಿದೆ/ ಅವರು ಮೂರು ಬಾರಿ ಮುಖಾಮುಖಿಯಾದರೆ ಅಭಿಮಾನಿಗಳಿಗೆ ರಸದೌತಣವಾಗಲಿದೆ.

2022ರ ಆವೃತ್ತಿಯಲ್ಲಿ ಟಿ20 ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಶ್ರೀಲಂಕಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2023 ರ ಏಕದಿನ ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್ 5 ರಂದು ಪ್ರಾರಂಭವಾಗಲಿದೆ. ಆದ್ದರಿಂದ, ಏಷ್ಯಾ ಕಪ್ 2023 ವಿಶ್ವ ಕಪ್​ಗೆ ಅಭ್ಯಾಸದಂತಿರಲಿದೆ. ಆದ್ದರಿಂದ ಇದನ್ನೂ ಏಕದಿನ ಮಾದರಿಯಲ್ಲಿ ಆಯೋಜಿಸಲಾಗಿದೆ.

ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಆಗಸ್ಟ್ 30 ರಂದು ಪಾಕಿಸ್ತಾನದ ಮುಲ್ತಾನ್​ನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಆಡಲಿವೆ. ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿದ್ದು, ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಉಳಿದ ಒಂಬತ್ತು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಟೂರ್ನಿಯ ಫೈನಲ್ ಪಂದ್ಯ ಸೆಪ್ಟೆಂಬರ್ 17ರಂದು ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿದೆ.

ಮುಗಿದ ವಿವಾದ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ನಡುವಿನ ವಿವಾದ ಕೊನೆಗೂ ಮುಗಿದಿದೆ. ಏಷ್ಯಾಕಪ್ 2023ರ ವೇಳಾಪಟ್ಟಿ ಪ್ರಕಟಗೊಂಡಿದೆ. ರೋಹಿತ್ ಶರ್ಮಾ ತಂಡ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ‘ಬಿ’ ಗುಂಪಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ನೇಪಾಳದೊಂದಿಗೆ ಭಾರತ ಸ್ಥಾನ ಪಡೆದಿದೆ. ಇದು ಭಾರತ ಮತ್ತು ಪಾಕಿಸ್ತಾನಗಳೆರಡೂ ತಂಡಕ್ಕೆ ಸೂಪರ್ 4 ಗೆ ಸಾಗಲು ಸಹಾಯ ಮಾಡುತ್ತದೆ ಮತ್ತು ಕನಿಷ್ಠ 2 ಭಾರತ ಮತ್ತು ಪಾಕ್ ಮುಖಾಮುಖಿಗಳನ್ನು ಖಾತರಿಪಡಿಸುತ್ತದೆ. ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದ್ದು, ಸೆಪ್ಟೆಂಬರ್ 4 ರಂದು ಭಾರತ ಕ್ರಿಕೆಟ್ ತಂಡ ನೇಪಾಳವನ್ನು ಎದುರಿಸಲಿದೆ.

ಇದನ್ನೂ ಓದಿ : ind vs wi : ಬ್ಯಾಟಿಂಗ್ ಸಲಹೆಗಳನ್ನು ಹಂಚಿಕೊಂಡ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕಿಸ್ತಾನದಲ್ಲಿ ಯಾವುದೇ ಪಂದ್ಯಗಳನ್ನು ಆಯೋಜಿಸಲು ಒಲವು ತೋರಿಲ್ಲ. ಮೂಲ ಆತಿಥ್ಯ ವಹಿಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಕ್ರಿಕೆಟ್ ತಂಡವನ್ನು ಕಳುಹಿಸಲು ಭಾರತೀಯ ಮಂಡಳಿ ನಿರಾಕರಿಸಿತು. ಆದಾಗ್ಯೂ, ಬಿಸಿಸಿಐ ಒಲ್ಲದ ಮನಸ್ಸಿನಿಂದ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡಿದ್ದರಿಂದ, ಪಾಕಿಸ್ತಾನವು 4 ಪಂದ್ಯಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ..

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : ಹಾರ್ದಿಕ್ ಪಾಂಡ್ಯಗೆ ನಿಷೇಧ ಹೇರಿದ ಬಿಸಿಸಿಐ; ಮುಂದಿನ ಪಂದ್ಯದಲ್ಲಿ ಆಡದಂತೆ ತಾಕೀತು

IPL 2024 : ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್ ಇಲೆವೆನ್​​ನ ಉಳಿದ ಸದಸ್ಯರಿಗೆ ತಲಾ 12 ಲಕ್ಷ ರೂ.ಗಳ ದಂಡ ಅಥವಾ ಆಯಾ ಪಂದ್ಯದ ಶುಲ್ಕದ 50 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ. ಮುಂಬೈ ತಂಡದ ಐಪಿಎಲ್​ 2024ರ ಅಭಿಯಾನ ಮುಕ್ತಾಯಗೊಂಡಿದೆ. ಹೀಗಾಗಿ ಅವರ ಬ್ಯಾನ್ ಯಾವ ರೀತಿಯಲ್ಲಿ ಪರಿಣಾಮಕಾರಿ ಎಂಬುದು ಅಸ್ಪಷ್ಟ.

VISTARANEWS.COM


on

IPL 2024
Koo

ಮುಂಬೈ: ಇಲ್ಲಿನ ವಿಶ್ವ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಐಪಿಎಲ್​ 2024 (IPL 2024 ) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ ನಿಯಮಗಳನ್ನು ಮೀರಿದ ಹಿನ್ನೆಲೆಯಲ್ಲಿ ಭಾರಿ ಮೊತ್ತದ ದಂಡ ಪಾವತಿ ಮಾಡಬೇಕಾಗಿದೆ. ಜತೆಗೆ ಅವರಿಗೆ ನಿಷೇಧವನ್ನೂ ಹೇರಿದೆ. ಪಂದ್ಯದಲ್ಲಿ ಅವರ ನೇತೃತ್ವದ ತಂಡವು ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿತ್ತು. ಹೀಗಾಗಿ ಬಿಸಿಸಿಐ 30 ಲಕ್ಷ ರೂ.ಗಳ ದಂಡ ವಿಧಿಸಿದೆ. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್​​ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೂರನೇ ಅಪರಾಧವಾಗಿದೆ. ಹೀಗಾಗಿ ಪಾಂಡ್ಯಗೆ 30 ಲಕ್ಷ ರೂ.ಗಳ ದಂಡ ವಿಧಿಸಲಾಯಿತು ಮತ್ತು ತಂಡದ ಮುಂದಿನ ಪಂದ್ಯವನ್ನು ಆಡದಂತೆ ನಿಷೇಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್ ಇಲೆವೆನ್​​ನ ಉಳಿದ ಸದಸ್ಯರಿಗೆ ತಲಾ 12 ಲಕ್ಷ ರೂ.ಗಳ ದಂಡ ಅಥವಾ ಆಯಾ ಪಂದ್ಯದ ಶುಲ್ಕದ 50 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ. ಮುಂಬೈ ತಂಡದ ಐಪಿಎಲ್​ 2024ರ ಅಭಿಯಾನ ಮುಕ್ತಾಯಗೊಂಡಿದೆ. ಹೀಗಾಗಿ ಅವರ ಬ್ಯಾನ್ ಯಾವ ರೀತಿಯಲ್ಲಿ ಪರಿಣಾಮಕಾರಿ ಎಂಬುದು ಅಸ್ಪಷ್ಟ.

ನಿಕೋಲಸ್ ಪೂರನ್ (28 ಎಸೆತಗಳಲ್ಲಿ 75 ರನ್) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ 45 ನಿಮಿಷಗಳ ಮಳೆ ವಿರಾಮದ ನಡುವೆ ಮುಂಬೈ ಇಂಡಿಯನ್ಸ್ ವಿರುದ್ಧ 18 ರರನ್​ಗಳ ಭರ್ಜರಿ ಜಯ ದಾಖಲಿಸಿದೆ. ಪೂರನ್ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅವರು 8 ಸಿಕ್ಸರ್ ಬಾರಿಸುವ ಮೂಲಕ ಐಪಿಎಲ್ 2024 ರಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದವರು (36) ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮುಂಬೈ ಇಂಡಿಯನ್ಸ್ 14 ಪಂದ್ಯಗಳಿಂದ 8 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಎಲ್ಎಸ್ಜಿ 14 ಅಂಕಗಳೊಂದಿಗೆ ಅಭಿಯಾನ ಮುಗಿಸಿತು.

ಪಂದ್ಯದ ವಿವರ ಈ ಕೆಳಗೆ ಇದೆ

ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ನೀಡಿದ್ದ ಮುಂಬೈ ಇಂಡಿಯನ್ಸ್ ತಂಡದ ಯೋಜನೆ ಸಂಪೂರ್ಣವಾಗಿ ಬುಡಮೇಲಾಗಿದೆ. ಹೀಗಾಗಿ ಐಪಿಎಲ್ 17ನೇ ಆವೃತ್ತಿಯ (IPL 2024) 14 ಪಂದ್ಯಗಳಲ್ಲಿ 10 ಸೋಲು ಮತ್ತು ಕೇವಲ 4 ಗೆಲುವಿನೊಂದಿಗೆ 8 ಅಂಕಗಳೊಂದಿಗೆ ಅಭಿಯಾನ ಮುಗಿಸಿದೆ. ತವರಿನಲ್ಲಿ ನಡೆದ ಕೊನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿಯೂ 18 ರನ್​ಗಳ ಸೋಲಿಗೆ ಒಳಗಾಗಿದೆ. ಎರಡೂ ತಂಡಗಳಿಗೆ ಇದು ಕೊನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಗೆದ್ದಿರುವ ಲಕ್ನೊ ಸೂಪರ್ ಜೈಂಟ್ಸ್ ತಂಡ ಒಟ್ಟು 7 ಗೆಲುವಿನೊಂದಿಗೆ 14 ಅಂಕಗಳ ಸಮೇತ ಏಳನೇ ಸ್ಥಾನ ಪಡೆದುಕೊಂಡಿದೆ. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಬ್ಯಾಟರ್​ಗಳು ಮತ್ತೊಂದು ಬಾರಿ ತಮ್ಮ ಅಸಮರ್ಥತೆಯನ್ನು ಪ್ರದರ್ಶಿಸಿ ಅತ್ಯಂತ ನಿರಾಶಾದಾಯಕ ಸೀಸನ್ ಅನ್ನು ಎದುರಿಸಿದರು.

ಇದನ್ನೂ ಓದಿ: IPL 2024 : ಆರ್​ಸಿಬಿ- ಚೆನ್ನೈ ಪಂದ್ಯದ ವೇಳೆ ಮಳೆ ಬಂದು ರದ್ದಾದರೆ ಮುಂದೇನಾಗುವುದು?

ಇಲ್ಲಿನ ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಚೇಸಿಂಗ್ ಸುಲಭ ಎಂಬ ಯೋಜನೆಯೊಂದಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿ ಮುಂಬೈ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ ನಷ್ಟಕ್ಕೆ 196 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಚೇಸಿಂಗ್ ಸುಲಭ ಎಂದುಕೊಂಡಿದ್ದ ಮುಂಬೈ ತಂಡಕ್ಕೆ ಮಧ್ಯದಲ್ಲಿ ಸುರಿದ ಮಳೆ ಅಡಚಣೆ ಮಾಡಿತು. ಏಕಾಏಕಿ ವಾತಾವರಣ ತಂಪುಗೊಂಡ ಕಾರಣ ಇಬ್ಬನಿ ಪರಿಣಾಮವನ್ನು ಅನುಭವಿಸಿ ಸುಲಭವಾಗಿ ಸ್ಕೋರ್ ಬಾರಿಸಿ ಗೆಲ್ಲುವ ಯೋಜನೆ ವಿಫಲಗೊಂಡಿತು.
ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಮುಂಬೈ ತಂಡ ಅದ್ಭುತ ಆರಂಭ ಪಡೆಯಿತು. ರೋಹಿತ್ ಶರ್ಮಾ 38 ಎಸೆತಕ್ಕೆ 6 ರನ್ ಬಾರಿಸಿ ಮಿಂಚಿದರು. ಡೀವಾಲ್ಡ್​ ಬ್ರೇವಿಸ್​ 23 ರನ್ ಹೊಡೆದರು. ಈ ಜೋಡಿ 8. 4 ಓವರ್​ಗಳಲ್ಲಿ ಮೊದಲ ವಿಕೆಟ್​ಗೆ 84 ರನ್ ಬಾರಿಸಿ ಗೆಲುವಿನ ನಿರೀಕ್ಷೆ ಹುಟ್ಟಿಸಿತು. ಆದರೆ, ಆ ಬಳಿಕ ಮುಂಬೈ ತಂಡ ಬ್ಯಾಟಿಂಗ್ ವೈಫಲ್ಯ ಪ್ರದರ್ಶನಗೊಂಡಿತು. ಸೂರ್ಯಕುಮಾರ್ ಶೂನ್ಯಕ್ಕೆ ಔಟಾದರೆ ಇಶಾನ್ ಕಿಶನ್ 14 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ ಕೊಡುಗೆ ಕೇವಲ 16 ರನ್​. ನೆಹಲ್ ವದೇರಾ 1 ರನ್​ಗೆ ಔಟಾಗುವ ಮೂಲಕ ಮುಂಬೈ ಆಸೆ ಕಮರಿತು. ಏತನ್ಮದ್ಯೆ ಮಧ್ಯಮ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನಮನ್​ ಧಿರ್ 28 ಎಸೆತಕ್ಎಕ 68 ರನ್ ಬಾರಿಸಿದರು. ಅದರೆ ಅವರಿಗೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ.

Continue Reading

ಪ್ರಮುಖ ಸುದ್ದಿ

IPL 2024 : ಸಹ ಆಟಗಾರ ರೊಮಾರಿಯೊ ಶೆಫರ್ಡ್​ಗೆ ಆಟೋಗ್ರಾಫ್​ ಕೊಟ್ಟ ರೋಹಿತ್​ , ಚಿತ್ರಗಳು ಇಲ್ಲಿವೆ

IPL 2024: ಐಪಿಎಲ್ 2024 ಪಂದ್ಯದ ಸಮಯದಲ್ಲಿ, ವೆಸ್ಟ್ ಇಂಡೀಸ್​​ನ ಯುವ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ಆಟೋಗ್ರಾಫ್​​ಗಾಗಿ ಪಡೆಯುವುದು ಕಂಡು ಬಂತು. ವಿಶೇಷವೆಂದರೆ, ಶುಕ್ರವಾರದ ಮುಖಾಮುಖಿಯಲ್ಲಿ, ರೋಹಿತ್ ಶರ್ಮಾ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಆಡಿಲ್ಲ. ಏಕೆಂದರೆ ಅವರನ್ನು ತಂಡದ ಮ್ಯಾನೇಜ್ಮೆಂಟ್ ಇಂಪ್ಯಾಕ್ಟ್ ಪ್ಲೇಯರ್ ಎಂದು ಗುರುತಿಸಿತ್ತು.

VISTARANEWS.COM


on

IPL 2024
Koo

ಬೆಂಗಳೂರು: ಕ್ರಿಕೆಟ್ನ ‘ಹಿಟ್​ಮ್ಯಾನ್​ ‘ ಯಾನೆ ರೋಹಿತ್ ಶರ್ಮಾ ಕ್ರಿಕೆಟ್ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಸಹ ಆಟಗಾರರಲ್ಲಿಯೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದ್ದರಿಂದ, ಮುಂಬೈ ಇಂಡಿಯನ್ಸ್ (Mumbai Indians) ಮಾಜಿ ನಾಯಕನನ್ನು ಡ್ರೆಸ್ಸಿಂಗ್ ರೂಮ್​​ನಲ್ಲಿ ಹೆಚ್ಚು ಸಂಚಲನ ಮೂಡಿಸುತ್ತಾರೆ. ಎಲ್ಲಾ ಆಟಗಾರರ ಬಗ್ಗೆ ಅವರ ಕಾಳಜಿಯ ಸ್ವಭಾವದಿಂದಾಗಿ ಅವರು ಹೆಚ್ಚು ಹತ್ತಿರವಾಗುತ್ತಾರೆ. ಅಂತೆಯೇ ಐಪಿಎಲ್​ 2024ರಲ್ಲೂ (IPL 2024 ) ಅವರು ಸಹ ಆಟಗಾರರ ಅಭಿಮಾನ ಗಿಟ್ಟಿಸಿಕೊಂಡಿದ್ದಾರೆ.

ಇದರ ಪರಿಣಾಮವಾಗಿ, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವೆ ನಡೆಯುತ್ತಿರುವ ಐಪಿಎಲ್ 2024 ಪಂದ್ಯದ ಸಮಯದಲ್ಲಿ, ವೆಸ್ಟ್ ಇಂಡೀಸ್​​ನ ಯುವ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ಆಟೋಗ್ರಾಫ್​​ಗಾಗಿ ಪಡೆಯುವುದು ಕಂಡು ಬಂತು. ವಿಶೇಷವೆಂದರೆ, ಶುಕ್ರವಾರದ ಮುಖಾಮುಖಿಯಲ್ಲಿ, ರೋಹಿತ್ ಶರ್ಮಾ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಆಡಿಲ್ಲ. ಏಕೆಂದರೆ ಅವರನ್ನು ತಂಡದ ಮ್ಯಾನೇಜ್ಮೆಂಟ್ ಇಂಪ್ಯಾಕ್ಟ್ ಪ್ಲೇಯರ್ ಎಂದು ಗುರುತಿಸಿತ್ತು. ಅವರು ಬ್ಯಾಟಿಂಗ್​ಗೆ ಮಾತ್ರ ಬಂದರು. ಅಲ್ಲದೆ ಭರ್ಜರಿ 68 ರನ್ ಬಾರಿಸಿದರು. ಹೀಗಾಗಿ ಅವರಿಗೆ ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಬಾಲ್ಕನಿಯಿಂದ ತಂಡದ ಬೌಲಿಂಗ್ ಅನ್ನು ಆನಂದಿಸಲು ಅವರಿಗೆ ಸಾಕಷ್ಟು ಸಮಯವನ್ನು ನೀಡಿತು. ಈ ವೇಳೆ ಅವರು ಆಟೋಗ್ರಾಫ್​ ನೀಡಿರುವ ಚಿತ್ರಗಳು ವೈರಲ್ ಆಗಿವೆ.

ಪಂದ್ಯದಲ್ಲಿ ಏನಾಯಿತು?

ಮುಂಬೈ: ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ನೀಡಿದ್ದ ಮುಂಬೈ ಇಂಡಿಯನ್ಸ್ ತಂಡದ ಯೋಜನೆ ಸಂಪೂರ್ಣವಾಗಿ ಬುಡಮೇಲಾಗಿದೆ. ಹೀಗಾಗಿ ಐಪಿಎಲ್ 17ನೇ ಆವೃತ್ತಿಯ (IPL 2024) 14 ಪಂದ್ಯಗಳಲ್ಲಿ 10 ಸೋಲು ಮತ್ತು ಕೇವಲ 4 ಗೆಲುವಿನೊಂದಿಗೆ 8 ಅಂಕಗಳೊಂದಿಗೆ ಅಭಿಯಾನ ಮುಗಿಸಿದೆ. ತವರಿನಲ್ಲಿ ನಡೆದ ಕೊನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿಯೂ 18 ರನ್​ಗಳ ಸೋಲಿಗೆ ಒಳಗಾಗಿದೆ. ಎರಡೂ ತಂಡಗಳಿಗೆ ಇದು ಕೊನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಗೆದ್ದಿರುವ ಲಕ್ನೊ ಸೂಪರ್ ಜೈಂಟ್ಸ್ ತಂಡ ಒಟ್ಟು 7 ಗೆಲುವಿನೊಂದಿಗೆ 14 ಅಂಕಗಳ ಸಮೇತ ಏಳನೇ ಸ್ಥಾನ ಪಡೆದುಕೊಂಡಿದೆ. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಬ್ಯಾಟರ್​ಗಳು ಮತ್ತೊಂದು ಬಾರಿ ತಮ್ಮ ಅಸಮರ್ಥತೆಯನ್ನು ಪ್ರದರ್ಶಿಸಿ ಅತ್ಯಂತ ನಿರಾಶಾದಾಯಕ ಸೀಸನ್ ಅನ್ನು ಎದುರಿಸಿದರು.

ಇದನ್ನೂ ಓದಿ: Aiden Markarm : ವಿಂಡೀಸ್ ವಿರುದ್ಧದ ಸರಣಿಗೆ ದ. ಆಫ್ರಿಕಾ ತಂಡದಲ್ಲಿ ಮಾರ್ಕ್ರಮ್​​ಗೆ ಇಲ್ಲ ಚಾನ್ಸ್​

ಇಲ್ಲಿನ ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಚೇಸಿಂಗ್ ಸುಲಭ ಎಂಬ ಯೋಜನೆಯೊಂದಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿ ಮುಂಬೈ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ ನಷ್ಟಕ್ಕೆ 196 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಚೇಸಿಂಗ್ ಸುಲಭ ಎಂದುಕೊಂಡಿದ್ದ ಮುಂಬೈ ತಂಡಕ್ಕೆ ಮಧ್ಯದಲ್ಲಿ ಸುರಿದ ಮಳೆ ಅಡಚಣೆ ಮಾಡಿತು. ಏಕಾಏಕಿ ವಾತಾವರಣ ತಂಪುಗೊಂಡ ಕಾರಣ ಇಬ್ಬನಿ ಪರಿಣಾಮವನ್ನು ಅನುಭವಿಸಿ ಸುಲಭವಾಗಿ ಸ್ಕೋರ್ ಬಾರಿಸಿ ಗೆಲ್ಲುವ ಯೋಜನೆ ವಿಫಲಗೊಂಡಿತು.
ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಮುಂಬೈ ತಂಡ ಅದ್ಭುತ ಆರಂಭ ಪಡೆಯಿತು. ರೋಹಿತ್ ಶರ್ಮಾ 38 ಎಸೆತಕ್ಕೆ 6 ರನ್ ಬಾರಿಸಿ ಮಿಂಚಿದರು. ಡೀವಾಲ್ಡ್​ ಬ್ರೇವಿಸ್​ 23 ರನ್ ಹೊಡೆದರು. ಈ ಜೋಡಿ 8. 4 ಓವರ್​ಗಳಲ್ಲಿ ಮೊದಲ ವಿಕೆಟ್​ಗೆ 84 ರನ್ ಬಾರಿಸಿ ಗೆಲುವಿನ ನಿರೀಕ್ಷೆ ಹುಟ್ಟಿಸಿತು. ಆದರೆ, ಆ ಬಳಿಕ ಮುಂಬೈ ತಂಡ ಬ್ಯಾಟಿಂಗ್ ವೈಫಲ್ಯ ಪ್ರದರ್ಶನಗೊಂಡಿತು. ಸೂರ್ಯಕುಮಾರ್ ಶೂನ್ಯಕ್ಕೆ ಔಟಾದರೆ ಇಶಾನ್ ಕಿಶನ್ 14 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ ಕೊಡುಗೆ ಕೇವಲ 16 ರನ್​. ನೆಹಲ್ ವದೇರಾ 1 ರನ್​ಗೆ ಔಟಾಗುವ ಮೂಲಕ ಮುಂಬೈ ಆಸೆ ಕಮರಿತು. ಏತನ್ಮದ್ಯೆ ಮಧ್ಯಮ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನಮನ್​ ಧಿರ್ 28 ಎಸೆತಕ್ಎಕ 68 ರನ್ ಬಾರಿಸಿದರು. ಅದರೆ ಅವರಿಗೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ.

Continue Reading

ಕ್ರೀಡೆ

IPL 2024 : ಆರ್​ಸಿಬಿ- ಚೆನ್ನೈ ಪಂದ್ಯದ ವೇಳೆ ಮಳೆ ಬಂದು ರದ್ದಾದರೆ ಮುಂದೇನಾಗುವುದು?

IPL 2024 : ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಹಾದಿಯೊಂದಿಗೆ ಸಾಗಲು ಆರ್​ಸಿಬಿ ಸಿಎಸ್​ಕೆ ವಿರುದ್ಧದ ಪಂದ್ಯವನ್ನು ಗೆಲ್ಲಬೇಕಾಗಿದೆ. ಇಲ್ಲಿ ಕೇವಲ ಗೆಲುವು ಮಾತ್ರ ಸಿಕ್ಕರೆ ಸಾಲುವುದಿಲ್ಲ. ಹಾಲಿ ಚಾಂಪಿಯನ್ ಗಳಿಗಿಂತ ಅವರ ನೆಟ್ ರನ್ ರೇಟ್ ಅನ್ನು ಉತ್ತಮಗೊಳಿಸಬೇಕು. ಅದಕ್ಕಾಗಿ ದೊಡ್ಡ ಅಂತರದಿಂದ ಗೆಲ್ಲಬೇಕಾಗಿದೆ.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್ 2024 ರ (IPL 2024) ಮುಕ್ತಾಯಕ್ಕೆ ಹತ್ತಿರವಾಗುತ್ತಿದೆ. ಇದರ ನಡುವೆ ರೋಚಕ ಪಂದ್ಯವೊಂದು ಎದುರಾಗಿದೆ. ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಮ್ಮ ಕೊನೆಯ ಲೀಗ್ ಹಂತದ ಮುಖಾಮುಖಿಯಲ್ಲಿ ಬಾಕಿ ಇರುವ ಒಂದು ಪ್ಲೇಆಫ್ ಸ್ಥಾನಕ್ಕಾಗಿ ಹೋರಾಡಬೇಕಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ಉತ್ಸಾಹವು ಉತ್ತುಂಗದಲ್ಲಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ (KKR), ರಾಜಸ್ಥಾನ್ ರಾಯಲ್ಸ್ (RR) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ಈಗಾಗಲೇ ನಾಕೌಟ್ ಹಂತಗಳಿಗೆ ತಮ್ಮ ಸ್ಥಾನವನ್ನು ಕಾಯ್ದಿರಿಸಿವೆ. ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್​ಗಳಿಂದ ಸೋಲಿಸಿದ ನಂತರ ಆರ್​ಸಿಬಿ ಐದು ಪಂದ್ಯಗಳ ಗೆಲುವಿನ ಹಾದಿಯಲ್ಲಿದೆ.

ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಹಾದಿಯೊಂದಿಗೆ ಸಾಗಲು ಆರ್​ಸಿಬಿ ಸಿಎಸ್​ಕೆ ವಿರುದ್ಧದ ಪಂದ್ಯವನ್ನು ಗೆಲ್ಲಬೇಕಾಗಿದೆ. ಇಲ್ಲಿ ಕೇವಲ ಗೆಲುವು ಮಾತ್ರ ಸಿಕ್ಕರೆ ಸಾಲುವುದಿಲ್ಲ. ಹಾಲಿ ಚಾಂಪಿಯನ್ ಗಳಿಗಿಂತ ಅವರ ನೆಟ್ ರನ್ ರೇಟ್ ಅನ್ನು ಉತ್ತಮಗೊಳಿಸಬೇಕು. ಅದಕ್ಕಾಗಿ ದೊಡ್ಡ ಅಂತರದಿಂದ ಗೆಲ್ಲಬೇಕಾಗಿದೆ.

ಮತ್ತೊಂದೆಡೆ, ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ 13 ಪಂದ್ಯಗಳಲ್ಲಿ 14 ಅಂಕಗಳನ್ನು ಹೊಂದಿದ್ದು, ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬೆಂಗಳೂರು ಮೂಲದ ತಂಡದ ವಿರುದ್ಧದ ಗೆದ್ದರೆ ಅವರಿಗೆ ಇನ್ಯಾವುದೇ ಮಂಡೆ ಬಿಸಿ ಇಲ್ಲ. ಅದೇ ರೀತಿ ಪಂದ್ಯ ಸೋತರೂ ನೆಟ್ ರನ್ ರೇಟ್ ಆಧಾರದ ಮೇಲೆಯೂ ಅರ್ಹತೆ ಪಡೆಯಬಹುದು. ಸಿಎಸ್​ಕೆ ತನ್ನ ನೆಟ್​​ರನ್​ರೇಟ್​​ ಅನ್ನು ಉಳಿಸಿಕೊಳ್ಳಲು ಸೋಲಿನ ಅಂತರವನ್ನು ಕಡಿಮೆ ಮಾಡಬೇಕಾಗಿದೆ.

ಇದನ್ನೂ ಓದಿ: Aiden Markarm : ವಿಂಡೀಸ್ ವಿರುದ್ಧದ ಸರಣಿಗೆ ದ. ಆಫ್ರಿಕಾ ತಂಡದಲ್ಲಿ ಮಾರ್ಕ್ರಮ್​​ಗೆ ಇಲ್ಲ ಚಾನ್ಸ್​

ಮಳೆ ಬಂದರೆ ಏನಾಗುವುದು?

ಶುಕ್ರವಾರ ಮತ್ತು ಶನಿವಾರ (ಪಂದ್ಯದ ದಿನ) ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿರುವುದರಿಂದ ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ವಾಶ್ ಔಟ್ ಅಥವಾ ಪಂದ್ಯ ರದ್ದಾದರೆ, ಆ ಸನ್ನಿವೇಶಗಳು ಆರ್ ಸಿಬಿಗಿಂತ ಆತಿಥೇಯರಿಗೆ ಹೆಚ್ಚು ಅನುಕೂಲಕರವಾಗಿರುತ್ತವೆ. ಫಲಿತಾಂಶವಿಲ್ಲದಿದ್ದರೆ ಎರಡೂ ತಂಡಗಳು ತಲಾ ಒಂದು ಪಾಯಿಂಟ್ ಪಡೆಯುತ್ತವೆ, ಆದರೆ ಓವರ್​ಗಳನ್ನು ಕಡಿಮೆ ಮಾಡಿದರೆ, ಗೆಲುವಿನ ನಂತರವೂ ಆರ್​ಸಿಬಿಗೆ ತನ್ನ ನೆಟ್​ರನ್​ರೇಟ್​ ಹೆಚ್ಚಿಸಲು ಕಷ್ಟವಾಗುತ್ತದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ತಂಡ ಬೆಂಗಳೂರು ತಂಡವನ್ನು ಎದುರಿಸಲಿದೆ. ಇದು ಹಾಲಿ ಆವೃತ್ತಿಯ ವರ್ಚುಯಲ್ ನಾಕೌಟ್ ಪಂದ್ಯ ಎಂದೇ ಹೇಳಲಾಗುತ್ತಿದೆ.

ಆರ್​ಸಿಬಿ ಆಟಗಾರರಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಲು ನೆರವಾದ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಮೇ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವು ಐಪಿಎಲ್​ನ (IPL 2024) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಲಭ್ಯವಿರುವ ಕೊನೆಯ ಪ್ಲೇಆಫ್ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ ಈ ಪಂದ್ಯವು ನಿರ್ಣಾಯಕವಾಗಿದೆ. ಇದನ್ನು ಸದರ್ನ್​ ಡರ್ಬಿ ಎಂದು ಕರೆಯಲಾಗಿದ್ದು ಪಂದ್ಯ ಅತ್ಯಂತ ರೋಚಕವಾಗಿರುವುದು ಖಚಿತ. ಅದರಲ್ಲೂ ಆರ್​ಸಿಬಿ ತಂಡಕ್ಕೆ ದೊಡ್ಡ ಸವಾಲಾಗಿದೆ. ಅದೇ ರೀತಿ ವಿರಾಟ್ ಕೊಹ್ಲಿಯ (Virat kohli) ಮೇಲೆ ಜವಾಬ್ದಾರಿ ಹೆಚ್ಚಿದೆ.

ಈ ದಕ್ಷಿಣ ಡರ್ಬಿ ಪಂದ್ಯಕ್ಕೆ ಮುಂಚಿತವಾಗಿ, ಆರ್​ಸಿಬಿ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಅಭ್ಯಾಸದ ಸಮಯದಲ್ಲಿ ಬೌಲಿಂಗ್​ ಮಾಡುವ ಮತ್ತು ಥ್ರೋಡೌನ್​ ಮಾಡುವ ಮೂಲಕ ಬ್ಯಾಟರ್​ಗಳಿಗೆ ನೆರವಾದರು. ಪಂದ್ಯದ ಮುನ್ನಾದಿನದಂದು ಫ್ರಾಂಚೈಸಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕೊಹ್ಲಿ ಸಹ ಆಟಗಾರ ಮಹಿಪಾಲ್ ಲೊಮ್ರೊರ್ ಅವರ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವುದನ್ನು ತೋರಿಸಲಾಗಿದೆ. ಕೊಹ್ಲಿ ಕೇವಲ ಥ್ರೋಡೌನ್​​ಗಳನ್ನು ನೀಡುತ್ತಿರಲಿಲ್ಲ; ಅವರು ಸಕ್ರಿಯವಾಗಿ ಲೊಮ್ರೊರ್​ಗೆ ತರಬೇತಿ ನೀಡುತ್ತಿದ್ದರು, ಸಲಹೆ ನೀಡುತ್ತಿದ್ದರು ಮತ್ತು ದೊಡ್ಡ ಶಾಟ್​ಗಳನ್ನು ಆಡಲು ಪ್ರೋತ್ಸಾಹಿಸುತ್ತಿದ್ದರು.

ಸ್ಫೋಟಕ ಇಂಗ್ಲಿಷ್ ಆಲ್ರೌಂಡರ್ ವಿಲ್ ಜಾಕ್ಸ್ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಈ ಪಂದ್ಯದ ನಡುವೆ ಅಭಿಮಾನಿಗಳ ಊಹಾಪೋಹಗಳನ್ನು ಹುಟ್ಟುಹಾಕಿದೆ. ರಾಷ್ಟ್ರೀಯ ಕರ್ತವ್ಯಗಳಿಂದಾಗಿ ಜಾಕ್ಸ್ ಈಗಾಗಲೇ ತಂಡದ ಶಿಬಿರವನ್ನು ತೊರೆದಿರುವುದರಿಂದ ಆರ್​ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಕನಿಷ್ಠ ಒಂದು ಬದಲಾವಣೆಯನ್ನು ಮಾಡಬೇಕಾಗುತ್ತದೆ.

Continue Reading

ಪ್ರಮುಖ ಸುದ್ದಿ

Aiden Markarm : ವಿಂಡೀಸ್ ವಿರುದ್ಧದ ಸರಣಿಗೆ ದ. ಆಫ್ರಿಕಾ ತಂಡದಲ್ಲಿ ಮಾರ್ಕ್ರಮ್​​ಗೆ ಇಲ್ಲ ಚಾನ್ಸ್​

Aiden Markarm: ಮುಂದಿನ ತಿಂಗಳು ನಡೆಯಲಿರುವ ಟಿ 20 ವಿಶ್ವಕಪ್ 2024 ಗೆ ಮುಂಚಿತವಾಗಿ, ಸಿಎಸ್ಎ ವೆಸ್ಟ್ ಇಂಡೀಸ್​ನಲ್ಲಿ ಮುಂಬರುವ ಮೂರು ಪಂದ್ಯಗಳ ಟಿ 20 ಐ ಸರಣಿಗಾಗಿ ತನ್ನ 15 ಸದಸ್ಯರ ತಂಡ ಆಯ್ಕೆ ಮಾಡಿದೆ. ಅದರಲ್ಲಿ ಹಲವಾರು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆಯ್ಕೆ ಸಮಿತಿಯು ವಿಶ್ರಾಂತಿ ಪಡೆದ ಹಿರಿಯ ಆಟಗಾರರಲ್ಲಿ ಡೇವಿಡ್ ಮಿಲ್ಲರ್ ಮತ್ತು ಹೆನ್ರಿಕ್ ಕ್ಲಾಸೆನ್ ಮತ್ತು ನಿಯಮಿತ ಸೀಮಿತ ಓವರ್​ಗಳ ನಾಯಕ ಐಡೆನ್ ಮಾರ್ಕ್ರಮ್ ಸೇರಿದ್ದಾರೆ.

VISTARANEWS.COM


on

Aiden Markram
Koo

ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) 15 ಸದಸ್ಯರ ತಂಡ ಪ್ರಕಟಿಸಿದೆ. ಜಮೈಕಾದಲ್ಲಿ ಮೇ 23 ರಿಂದ ಮೇ 26 ರವರೆಗೆ ನಡೆಯಲಿರುವ ಈ ಸರಣಿಯು ಮುಂದಿನ ತಿಂಗಳು ನಡೆಯಲಿರುವ 2024 ರ ಟಿ 20 ವಿಶ್ವಕಪ್​​ಗೆ ಮುಂಚಿತವಾಗಿ ಎರಡೂ ತಂಡಗಳಿಗೆ ಅಭ್ಯಾಸವಾಗಲಿದೆ. ವಿಶ್ವಕಪ್​​ನಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಲು ಸಜ್ಜಾಗಿರುವ ಏಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್ ಅವರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ನಿಯಮಿತ ನಾಯಕನ ಅನುಪಸ್ಥಿತಿಯಲ್ಲಿ ಸಂಕ್ಷಿಪ್ತ ಪ್ರವಾಸಕ್ಕೆ ರಾಸ್ಸಿ ವಾನ್ ಡೆರ್ ಡುಸೆನ್ ಅವರನ್ನು ದಕ್ಷಿಣ ಆಫ್ರಿಕಾ ನಾಯಕನಾಗಿ ನೇಮಿಸಲಾಗಿದೆ.

ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಮುಂದಿನ ತಿಂಗಳು ನಡೆಯಲಿರುವ ಟಿ 20 ವಿಶ್ವಕಪ್ 2024 ಗೆ ಮುಂಚಿತವಾಗಿ, ಸಿಎಸ್ಎ ವೆಸ್ಟ್ ಇಂಡೀಸ್​ನಲ್ಲಿ ಮುಂಬರುವ ಮೂರು ಪಂದ್ಯಗಳ ಟಿ 20 ಐ ಸರಣಿಗಾಗಿ ತನ್ನ 15 ಸದಸ್ಯರ ತಂಡ ಆಯ್ಕೆ ಮಾಡಿದೆ. ಅದರಲ್ಲಿ ಹಲವಾರು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆಯ್ಕೆ ಸಮಿತಿಯು ವಿಶ್ರಾಂತಿ ಪಡೆದ ಹಿರಿಯ ಆಟಗಾರರಲ್ಲಿ ಡೇವಿಡ್ ಮಿಲ್ಲರ್ ಮತ್ತು ಹೆನ್ರಿಕ್ ಕ್ಲಾಸೆನ್ ಮತ್ತು ನಿಯಮಿತ ಸೀಮಿತ ಓವರ್​ಗಳ ನಾಯಕ ಐಡೆನ್ ಮಾರ್ಕ್ರಮ್ ಸೇರಿದ್ದಾರೆ.

ದಕ್ಷಿಣ ಆಫ್ರಿಕಾದ ಟಿ 20 ವಿಶ್ವಕಪ್ 2024 ಗುಂಪಿನಿಂದ ಹೊರಗುಳಿದಿದ್ದ ರಾಸ್ಸಿ ವಾನ್ ಡೆರ್ ಡುಸೆನ್ ಅವರಿಗೆ ಮಾರ್ಕ್ರಮ್ ಅನುಪಸ್ಥಿತಿಯಲ್ಲಿ ತಂಡದ ಜವಾಬ್ದಾರಿ ನೀಡಲಾಗಿದೆ. ದಕ್ಷಿಣ ಆಫ್ರಿಕಾದ ಸಂಪೂರ್ಣ ತಂಡ ಮತ್ತು ಕೆರಿಬಿಯನ್ನಲ್ಲಿ ಮುಂಬರುವ ಮೂರು ಪಂದ್ಯಗಳ ಟಿ 20 ಐ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

ಇದನ್ನೂ ಓದಿ: T20 World Cup : ಭಾರತ- ಪಾಕಿಸ್ತಾನ ಟಿ20 ವಿಶ್ವ ಕಪ್​ ಪಂದ್ಯದ ಟಿಕೆಟ್ ಬೆಲೆ 1.8 ಕೋಟಿ ರೂಪಾಯಿ!

ಮೂರು ಪಂದ್ಯಗಳು ಮೇ 23, ಮೇ 25 ಮತ್ತು ಮೇ 26 ರಂದು ಜಮೈಕಾದ ಸಬೀನಾ ಪಾರ್ಕ್​ನಲ್ಲಿ ನಡೆಯಲಿವೆ. ಸರಣಿ ಮುಗಿದ ಒಂದೆರಡು ದಿನಗಳ ನಂತರ, ದಕ್ಷಿಣ ಆಫ್ರಿಕಾದ ಆಟಗಾರರು 2024 ರ ಟಿ 20 ವಿಶ್ವಕಪ್ ಸಿದ್ಧತೆಗಳ ಭಾಗವಾಗಿ ಫ್ಲೋರಿಡಾದಲ್ಲಿ ಇಂಟ್ರಾ-ಸ್ಕ್ವಾಡ್ ಪಂದ್ಯ ಆಡಲಿದ್ದಾರೆ.

‘ಡಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ನೆದರ್ಲೆಂಡ್ಸ್ ತಂಡಗಳಿವೆ. ಐಡೆನ್ ಮಾರ್ಕ್ರಮ್ ನಾಯಕತ್ವದಲ್ಲಿ ಭಾರತ ತಂಡ ಜೂನ್ 3ರಂದು ನ್ಯೂಯಾರ್ಕ್ನ ನಸ್ಸಾವು ಕೌಂಟಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದೊಂದಿಗೆ 2024ರ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

Continue Reading
Advertisement
Singer Suchitra makes shocking aligeations against shahrukh khan
ಬಾಲಿವುಡ್3 mins ago

Singer Suchitra: ಶಾರುಖ್ – ಕರಣ್ ಸಲಿಂಗಿಗಳು ಎಂದು ಹೇಳಿ ವಿವಾದ ಸೃಷ್ಟಿಸಿದ ತಮಿಳು ಗಾಯಕಿ!

Lok Sabha Election 2024
ವೈರಲ್ ನ್ಯೂಸ್12 mins ago

Lok Sabha Election 2024: ʼನನ್ನ ಸ್ಟೈಲು ಬೇರೇನೆ…ʼ; ಕತ್ತೆ ಮೂಲಕ ಪ್ರಚಾರ ನಡೆಸುವ ಅಭ್ಯರ್ಥಿಯ ಕಾರ್ಯ ವೈಖರಿ ಈಗ ವೈರಲ್‌

IPL 2024
ಕ್ರೀಡೆ14 mins ago

IPL 2024 : ಹಾರ್ದಿಕ್ ಪಾಂಡ್ಯಗೆ ನಿಷೇಧ ಹೇರಿದ ಬಿಸಿಸಿಐ; ಮುಂದಿನ ಪಂದ್ಯದಲ್ಲಿ ಆಡದಂತೆ ತಾಕೀತು

natural ice cream 1 rajamarga coumn
ಅಂಕಣ20 mins ago

ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

naturals ic cream raghunandan kamath
ಶ್ರದ್ಧಾಂಜಲಿ47 mins ago

Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

IPL 2024
ಪ್ರಮುಖ ಸುದ್ದಿ51 mins ago

IPL 2024 : ಸಹ ಆಟಗಾರ ರೊಮಾರಿಯೊ ಶೆಫರ್ಡ್​ಗೆ ಆಟೋಗ್ರಾಫ್​ ಕೊಟ್ಟ ರೋಹಿತ್​ , ಚಿತ್ರಗಳು ಇಲ್ಲಿವೆ

Kajal Aggarwal Kannappa Movie Entry
ಟಾಲಿವುಡ್1 hour ago

Kajal Aggarwal: ವಿಷ್ಣು ಮಂಚು `ಕಣ್ಣಪ್ಪ’ ಚಿತ್ರಕ್ಕೆ ಕಾಜಲ್ ಅಗರ್​ವಾಲ್​​ ಎಂಟ್ರಿ; ಪಾತ್ರ ಏನಿರಬಹುದು?

White House
ವಿದೇಶ1 hour ago

White House: ಭಾರತದಲ್ಲಿದೆ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ: ಅಮೆರಿಕದ ಮೆಚ್ಚುಗೆ; ಮೋದಿ ನಾಯಕತ್ವಕ್ಕೂ ಸಿಕ್ತು ಶಹಬ್ಬಾಸ್‌ಗಿರಿ

IPL 2024
ಕ್ರೀಡೆ1 hour ago

IPL 2024 : ಆರ್​ಸಿಬಿ- ಚೆನ್ನೈ ಪಂದ್ಯದ ವೇಳೆ ಮಳೆ ಬಂದು ರದ್ದಾದರೆ ಮುಂದೇನಾಗುವುದು?

hd deve gowda birthday
ಪ್ರಮುಖ ಸುದ್ದಿ1 hour ago

HD Deve Gowda: ಈ ಅವಮಾನದಿಂದ ಪಾರು ಮಾಡು: 93ರ ಜನ್ಮದಿನಂದು ದೇವೇಗೌಡರ ಮೌನ ಪ್ರಾರ್ಥನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ14 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌