AUS VS WI | ಆಸೀಸ್​ಗೆ 419 ರನ್​ಗಳ ಭರ್ಜರಿ ಗೆಲುವು; ವೆಸ್ಟ್​ ಇಂಡೀಸ್​ಗೆ ವೈಟ್ ​ವಾಶ್ ಮುಖಭಂಗ - Vistara News

ಕ್ರಿಕೆಟ್

AUS VS WI | ಆಸೀಸ್​ಗೆ 419 ರನ್​ಗಳ ಭರ್ಜರಿ ಗೆಲುವು; ವೆಸ್ಟ್​ ಇಂಡೀಸ್​ಗೆ ವೈಟ್ ​ವಾಶ್ ಮುಖಭಂಗ

ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಸತತ ಸೋಲು ಕಂಡ ವೆಸ್ಟ್​ ಇಂಡೀಸ್​ ತಂಡ ಸರಣಿ ಸೋಲಿನ ಅವಮಾನಕ್ಕೆ ಸಿಲುಕಿತು.

VISTARANEWS.COM


on

Australia won by 419 runs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಡಿಲೇಡ್​: ಪ್ರವಾಸಿ ವೆಸ್ಟ್​ ಇಂಡೀಸ್​(AUS VS WI) ವಿರುದ್ಧ ಅಡಿಲೇಡ್​ನಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ 419 ರನ್‌ಗಳಿಂದ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ಸರಣಿ ವಶಪಡಿಸಿಕೊಂಡಿದೆ. ವಿಂಡೀಸ್​ ಈ ಸೋಲಿನೊಂದಿಗೆ ವೈಟ್​ವಾಶ್​ ಮುಖಭಂಗಕ್ಕೆ ಒಳಗಾಯಿತು.

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿಯೂ ವೆಸ್ಟ್ ಇಂಡೀಸ್ 164 ರನ್​ಗ ಸೋಲಿಗೆ ಸಿಲುಕಿತ್ತು. ಇದೀಗ ಅಡಿಲೇಡ್​ ಪಿಂಕ್​ ಟೆಸ್ಟ್​ನಲ್ಲಿಯೂ ಮುಗ್ಗರಿಸಿ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋತು ನಿರಾಸೆ ಅನುಭವಿಸಿದೆ.

ಅಡಿಲೇಡ್‌ನಲ್ಲಿ ನಡೆದ ಅಹರ್ನಿಶಿ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ಗೆಲುವಿಗೆ 497 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಆದರೆ ಬೃಹತ್​ ಮೊತ್ತ ಕಂಡು ಕಂಗೆಟ್ಟ ವೆಸ್ಟ್ ಇಂಡೀಸ್ ತಂಡ ನಾಟಕೀಯ ಕುಸಿತ ಕಂಡು 77 ರನ್​ಗೆ ಆಟ ಮುಗಿಸಿತು. ಇದರಿಂದ ಇನ್ನು ಒಂದು ದಿನ ಬಾಕಿ ಇರುವಂತೆ ಪಂದ್ಯ ಮುಕ್ತಾಯಗೊಂಡಿತು.

ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಎರಡನೇ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ನಷ್ಟಕ್ಕೆ 38 ರನ್​ಗಳಿಂದ ಆಟ ಮುಂದುವರೆಸಿದ ವೆಸ್ಟ್ ಇಂಡೀಸ್ ಕೇವಲ 39 ರನ್​ ಸೇರಿಸುವಷ್ಟರಲ್ಲಿ ಉಳಿದ 6 ವಿಕೆಟ್‌ ಕಳೆದುಕೊಂಡು 419 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಇದಕ್ಕೂ ಮೊದಲು, ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 511 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 214 ರನ್​ಗಳಿಗೆ ಆಲೌಟ್ ಆಯಿತು.

ಮೊದಲ ಇನಿಂಗ್ಸ್​ನಲ್ಲಿ 297 ರನ್​ ಮುನ್ನಡೆ ಸಾಧಿಸಿದರೂ ಫಾಲೋ ಆನ್ ನೀಡದ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 199 ರನ್ ಗಳಿಸಿ ಡಿಕ್ಲೇರ್ ಮಾಡಿತು. ಒಟ್ಟು 497 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಮೂರನೇ ದಿನದಾಟದಲ್ಲಿಯೇ 4 ವಿಕೆಟ್ ಕಳೆದುಕೊಂಡು ಕೇವಲ 38 ರನ್​ಗಳಿಸಿತು. ಬಳಿಕ 4ನೇ ದಿನದಾಟವನ್ನು ಆರಂಭಿಸಿದ ವಿಂಡೀಸ್ ಪಡೆ ಇನ್ನುಳಿದ 6 ವಿಕೆಟ್‌ಗಳನ್ನು ಕಳೆದುಕೊಂಡು ಸೋಲು ಕಂಡಿತು.

ಇದನ್ನೂ ಓದಿ | IND VS BAN | ಬಾಂಗ್ಲಾ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಗೆ ಭಾರತ ತಂಡಕ್ಕೆ ಕೆ.ಎಲ್​. ರಾಹುಲ್​ ನಾಯಕ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs SL 1st ODI: ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ಮೊದಲ ಏಕದಿನ ಆಡಲು ಸಜ್ಜಾದ ಕೊಹ್ಲಿ, ರೋಹಿತ್​, ಬುಮ್ರಾ

IND vs SL 1st ODI:ಕಳೆದ ವರ್ಷ(2023) ನವೆಂಬರ್​ 19ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಏಕದಿನ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ ಅಂತರದ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ(jasprit bumrah) ಯಾವುದೇ ಏಕದಿನ ಪಂದ್ಯವನ್ನಾಡಿರಲಿಲ್ಲ.

VISTARANEWS.COM


on

IND vs SL 1st ODI
Koo

ಕೊಲಂಬೊ: ಭಾರತ ಮತ್ತು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ(IND vs SL 1st ODI) ನಾಳೆ ನಡೆಯಲಿದೆ. ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit sharma), ವಿರಾಟ್​ ಕೊಹ್ಲಿ(virat kohli) ಸೇರಿ ಕೆಲ ಆಟಗಾರರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.

ಕಳೆದ ವರ್ಷ(2023) ನವೆಂಬರ್​ 19ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಏಕದಿನ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ ಅಂತರದ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ(jasprit bumrah) ಯಾವುದೇ ಏಕದಿನ ಪಂದ್ಯವನ್ನಾಡಿರಲಿಲ್ಲ. ಇದೀಗ ಬರೋಬ್ಬರಿ 9 ತಿಂಗಳ ಬಳಿಕ ಏಕದಿನ ಸರಣಿಯನ್ನಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ IND vs SL : ಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ಜಯ, ಸರಣಿ ಕ್ಲೀನ್ ಸ್ವೀಪ್ ಮಾಡಿದ ಸೂರ್ಯಕುಮಾರ್ ಪಡೆ

ಮುಂದಿನ ವರ್ಷ ಪಾಕ್​ ಆತಿಥ್ಯದಲ್ಲಿ ನಡೆಯುವ ಏಕದಿನ ಮಾದರಿಯ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯ ನಿಟ್ಟಿನಲ್ಲಿ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ. ಟಿ20 ಕ್ರಿಕೆಟ್​ಗೆ ವಿದಾಯ ಹೇಳಿರುವ ವಿರಾಟ್​ ಕೊಹ್ಲಿ ಮತ್ತು ನಾಯಕ ರೋಹಿತ್​ ಅವರು 2027ರ ಏಕದಿನ ವಿಶ್ವಕಪ್​ ಆಡಬೇಕಿದ್ದರೆ ಈ ಸರಣಿಯಿಂದಲೇ ತಮ್ಮ ಸಾಮರ್ಥ್ಯ ತೋರಬೇಕಿದೆ. ನೂತನ ಕೋಚ್​ ಗಂಭೀರ್​ ಮಾರ್ಗದರ್ಶನಲ್ಲಿ ಆಡುತ್ತಿರುವ ಮೊದಲ ಏಕದಿನ ಸರಣಿ ಕೂಡ ಇದಾಗಿದೆ.

ಭಾರತ ಟಿ20 ಕ್ರಿಕೆಟ್​ ತಂಡದಿಂದ ಕೈಬಿಟ್ಟಿರುವ ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರಿಗೆ ತಂಡದಲ್ಲಿ ಭದ್ರ ಸ್ಥಾನವೊಂದನ್ನು ಗಿಟ್ಟಿಸಿಕೊಳ್ಳಲು ಈ ಸರಣಿ ಮುಖ್ಯವಾಗಿದೆ. ತೀವ್ರ ಪೈಪೋಟಿಯ ಮಧ್ಯೆಯೂ ಅವರು ಏಕದಿನ ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಂಡು ನಿರೀಕ್ಷಿತ ಬ್ಯಾಟಿಂಗ್​ ಪ್ರದರ್ಶನ ತೋದರೇ ಹೋದರೆ ಏಕದಿನ ತಂಡದಲ್ಲಿಯೂ ಅವರಿಗೆ ಬಾಗಿಲು ಬಂದ್​ ಆಗುವುದು ಖಚಿತ. ಈ ಹಿಂದೆ ಪಂತ್​ ಅನುಪಸ್ಥಿತಿಯಲ್ಲಿ ರಾಹುಲ್​ಗೆ ಕೀಪಿಂಗ್​ ಜವಾಬ್ದಾರಿ ನೀಡಿ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಈಗ ಪಂತ್​ ತಂಡಕ್ಕೆ ಆಗಮಿಸಿದ್ದಾರೆ.

ವಿರಾಟ್​ ಕೊಹ್ಲಿಗೆ(Virat Kohli) ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಹೌದು, ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಸದ್ಯ 292* ಏಕದಿನ ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 13,848* ರನ್(virat kohli odi runs)​ ಬಾರಿಸಿದ್ದಾರೆ. ಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 152 ರನ್​ ಬಾರಿಸಿದರೆ 14 ಸಾವಿರ ರನ್​ ಮೈಲುಗಲ್ಲು ತಲುಪಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 14000ಕ್ಕೂ ಹೆಚ್ಚು ರನ್ ಗಳಿಸಿದ ಸಾರ್ವಕಾಲಿದ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಹೆಸರಿನಲ್ಲಿದೆ. ಸಚಿನ್ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದರೆ, ಕುಮಾರ ಸಂಗಕ್ಕಾರ 404 ಪಂದ್ಯಗಳನ್ನಾಡಿ 14,234 ರನ್ ಬಾರಿಸಿದ್ದಾರೆ. ಕೊಹ್ಲಿಗೆ ಸಂಗಕ್ಕಾರ ದಾಖಲೆ ಮುರಿಯುವ ಅವಕಾಶವಿದೆ. ಆದರೆ ಸಚಿನ್​ ದಾಖಲೆ ಮುರಿಯುವುದು ಕಷ್ಟ ಸಾಧ್ಯ.

Continue Reading

ಕ್ರೀಡೆ

Anshuman Gaekwad: ಮಾಜಿ ಕ್ರಿಕೆಟಿಗ ಅಂಶುಮಾನ್‌ ಗಾಯಕ್ವಾಡ್‌ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ

Anshuman Gaekwad: ಭಾರತ ತಂಡದ ಮಾಜಿ ನಾಯಕರಾಗಿದ್ದ ದತ್ತಾಜಿರಾವ್‌ ಗಾಯಕ್ವಾಡ್‌ ಅವರ ಪುತ್ರನಾಗಿರುವ ಅಂಶುಮಾನ್‌ ಗಾಯಕ್ವಾಡ್‌, 1975 -1985ರ ಅವಧಿಯಲ್ಲಿ ಭಾರತದ ಪರ 40 ಟೆಸ್ಟ್‌ ಆಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಟೆಸ್ಟ್‌ ಬದುಕು ಆರಂಭಿಸಿದ ಗಾಯಕ್ವಾಡ್‌, ಬಳಿಕ ಆರಂಭಿಕನಾಗಿ ಭಡ್ತಿ ಪಡೆದಿದ್ದರು

VISTARANEWS.COM


on

Anshuman Gaekwad
Koo

ಮುಂಬಯಿ: ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್‌ ಆಗಿದ್ದ ಅಂಶುಮಾನ್‌ ಗಾಯಕ್ವಾಡ್‌(Anshuman Gaekwad) ನಿಧನ ಹೊಂದಿದ್ದಾರೆ. ಕೆಲವು ವಾರಗಳ ಹಿಂದಷ್ಟೇ ಅವರ ಚಿಕಿತ್ಸೆಗೆ ಬಿಸಿಸಿಐ ಒಂದು ಕೋಟಿ ರೂ. ಆರ್ಥಿಕ ನೆರವು ಘೋಷಿಸಿತ್ತು. ಮಾಜಿ ಕ್ರಿಕೆಟಿಗರಾದ ಕಪಿಲ್‌ದೇವ್‌, ಸಂದೀಪ್‌ ಪಾಟೀಲ್‌ ಮೊದಲಾದವರ ಮನವಿ ಹಾಗೂ ಕಳಕಳಿಗೆ ಸ್ಪಂದಿಸಿದ ಬಿಸಿಸಿಐ ಈ ಮಾನವೀಯ ನಿರ್ಧಾರಕ್ಕೆ ಪ್ರಕಟಿಸಿತ್ತು. ಆದರೆ, ಇದೀಗ ಅವರು ನಮ್ಮನ್ನು ಅಗಲಿದ್ದಾರೆ. ನಿನ್ನೆ(ಬುಧವಾರ ಜುಲೈ 31) ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.

ಅಂಶುಮಾನ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಆಟಗಾರರಾದ ಕಪಿಲ್‌ದೇವ್‌, ಸುನೀಲ್‌ ಗಾವಸ್ಕರ್‌, ಸಚಿನ್​ ತೆಂಡೂಲ್ಕರ್​, ರವಿಶಾಸ್ತ್ರಿ, ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ ಸೇರಿದಂತೆ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

ಭಾರತ ತಂಡದ ಮಾಜಿ ನಾಯಕರಾಗಿದ್ದ ದತ್ತಾಜಿರಾವ್‌ ಗಾಯಕ್ವಾಡ್‌ ಅವರ ಪುತ್ರನಾಗಿರುವ ಅಂಶುಮಾನ್‌ ಗಾಯಕ್ವಾಡ್‌, 1975 -1985ರ ಅವಧಿಯಲ್ಲಿ ಭಾರತದ ಪರ 40 ಟೆಸ್ಟ್‌ ಆಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಟೆಸ್ಟ್‌ ಬದುಕು ಆರಂಭಿಸಿದ ಗಾಯಕ್ವಾಡ್‌, ಬಳಿಕ ಆರಂಭಿಕನಾಗಿ ಭಡ್ತಿ ಪಡೆದಿದ್ದರು. ಸುನೀಲ್‌ ಗಾವಸ್ಕರ್‌ ಅವರೊಂದಿಗೆ ಅನೇಕ ಉತ್ತಮ ಜತೆಯಾಟ ನಡೆಸಿದ್ದರು. 1999 ರ ವಿಶ್ವಕಪ್ ಸಮಯದಲ್ಲಿ ಕೀನ್ಯಾ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಿದ್ದರು.

“ಅಂಶುಮಾನ್ ಗಾಯಕ್ವಾಡ್ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆ ಅಪಾರ. ಪ್ರತಿಭಾನ್ವಿತ ಆಟಗಾರ ಮತ್ತು ಅತ್ಯುತ್ತಮ ತರಬೇತುದಾರರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಮೋದಿ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

“ಭಾರತೀಯ ಕ್ರಿಕೆಟ್‌ನ ಹೆಮ್ಮೆಯನ್ನು ಹೆಚ್ಚಿಸಿದ ಕ್ರಿಕೆಟ್ ಕೌಶಲವನ್ನು ಹೆಚ್ಚಿಸಿದ ದಿಗ್ಗಜ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅವರ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪವಿದೆ. ಓಂ ಶಾಂತಿ” ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಸಂತಾಪ ಸೂಚಿಸಿದ್ದಾರೆ.

Continue Reading

ಕ್ರೀಡೆ

Rashid khan 600 wickets: ಟಿ20 ಕ್ರಿಕೆಟ್​ನಲ್ಲಿ 600 ವಿಕೆಟ್​ ಪೂರ್ತಿಗೊಳಿಸಿದ ರಶೀದ್​ ಖಾನ್​; ಮೊದಲ ಸ್ಪಿನ್ನರ್

Rashid khan 600 wickets: ಟಿ20 ವಿಕೆಟ್ ಸಾಧಕರ ಪಟ್ಟಿಯಲ್ಲಿ ಸದ್ಯ ಡ್ವೇನ್ ಬ್ರಾವೊ ಅವರೇ ಅಗ್ರಸ್ಥಾನ ಪಡೆದಿದ್ದಾರೆ. ಅವರು ಒಟ್ಟು 630 ವಿಕೆಟ್​ ಕಬಳಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ರಶೀದ್ ಖಾನ್​ಗೆ ಇನ್ನು 31 ವಿಕೆಟ್​ಗಳ ಅಗತ್ಯವಿದೆ.

VISTARANEWS.COM


on

Rashid khan 600 wickets
Koo

ದುಬೈ: ಅಫಘಾನಿಸ್ತಾನ ತಂಡದ ಸ್ಟಾರ್​ ಸ್ಪಿನ್ನರ್ ರಶೀದ್ ಖಾನ್ (Rashid Khan) ಅವರು ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ‘ದಿ ಹಂಡ್ರೆಡ್’ ಕ್ರಿಕೆಟ್​ ಲೀಗ್​ನಲ್ಲಿ 2 ವಿಕೆಟ್ ಕಬಳಿಸುವುದರೊಂದಿಗೆ ರಶೀದ್ ಖಾನ್ ಎಲ್ಲ ಮಾದರಿಯ ಟಿ20 ಕ್ರಿಕೆಟ್​ನಲ್ಲಿ 600 ವಿಕೆಟ್(Rashid khan 600 wickets)​ ಪೂರ್ತಿಗೊಳಿಸಿದ ವಿಶ್ವದ ಮೊದಲ ಸ್ಪಿನ್ನರ್ ಹಾಗೂ 2ನೇ ಬೌಲರ್​​ ಎನಿಸಿಕೊಂಡಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ 600 ವಿಕೆಟ್​ ಪೂರ್ತಿಗೊಳಿಸಿದ್ದ ವಿಶ್ವ ದಾಖಲೆಯನ್ನು ಮೊದಲ ನಿರ್ಮಿಸಿದ್ದು ವೆಸ್ಟ್ ಇಂಡೀಸ್​ನ ಮಾಜಿ ಆಟಗಾರ ಡ್ವೇನ್ ಬ್ರಾವೊ. ಇದೀಗ ರಶೀದ್​ ಖಾನ್​ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಅತೀ ವೇಗವಾಗಿ ಟಿ20 ಕ್ರಿಕೆಟ್​ನಲ್ಲಿ 600 ವಿಕೆಟ್ ಕಬಳಿಸಿದ ದಾಖಲೆ ರಶೀದ್ ಹೆಸರಿಗೆ ದಾಖಲಾಗಿದೆ. ಬ್ರಾವೊ 545 ಟಿ20 ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ್ದರೆ, ರಶೀದ್​ ಖಾನ್​ ಕೇವಲ 441 ಪಂದ್ಯಗಳನ್ನಾಡಿ ಈ ಮೈಲುಗಲ್ಲು ನಿರ್ಮಿಸಿದ್ದಾರೆ.

ಬ್ರಾವೊ ದಾಖಲೆ ಮುರಿಯಲು 31 ವಿಕೆಟ್​ ಅಗತ್ಯ


ಟಿ20 ವಿಕೆಟ್ ಸಾಧಕರ ಪಟ್ಟಿಯಲ್ಲಿ ಸದ್ಯ ಡ್ವೇನ್ ಬ್ರಾವೊ ಅವರೇ ಅಗ್ರಸ್ಥಾನ ಪಡೆದಿದ್ದಾರೆ. ಅವರು ಒಟ್ಟು 630 ವಿಕೆಟ್​ ಕಬಳಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ರಶೀದ್ ಖಾನ್​ಗೆ ಇನ್ನು 31 ವಿಕೆಟ್​ಗಳ ಅಗತ್ಯವಿದೆ. 25 ವರ್ಷದ ರಶೀದ್​ಗೆ ಈ ದಾಖಲೆ ಮುರಿಯುವು ಕಷ್ಟದ ಮಾತಲ್ಲ. ಬ್ರಾವೊ ಈಗಾಗಲೇ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ರಶೀದ್​ ಇನ್ನೂ ಕನಿಷ್ಠ 10 ವರ್ಷಗಳ ಕಾಲ ಕ್ರಿಕೆಟ್​ ಆಡುವುದರಲ್ಲಿ ಯಾವುದೇ ಅನುಮಾನ ಬೇಡ. ಉಳಿದಂತೆ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ 405 ಪಂದ್ಯಗಳಲ್ಲಿ 502 ವಿಕೆಟ್ ಪಡೆದರೆ, ಶಕೀಬ್ ಅಲ್ ಹಸನ್ 444 ಪಂದ್ಯಗಳಲ್ಲಿ 492 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ Rashid Khan: ರಶೀದ್ ಖಾನ್​ಗೆ ದಂಡ ವಿಧಿಸಿದ ಐಸಿಸಿ, ಅವರು ಮಾಡಿದ ತಪ್ಪೇನು?

ರಶೀದ್ ಖಾನ್ 93 ಅಂತಾರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ 14.14 ಸರಾಸರಿ ಮತ್ತು 6.08 ಎಕಾನಮಿ ರೇಟ್​ನಲ್ಲಿ 152 ವಿಕೆಟ್​ಗಳನ್ನು ಪಡೆದಿದ್ದಾರೆ. ಐಪಿಎಲ್​​ನಲ್ಲಿ 121 ಪಂದ್ಯಗಳಲ್ಲಿ 21.82ರ ಸರಾಸರಿಯಲ್ಲಿ 149 ವಿಕೆಟ್ ಪಡೆದಿದ್ದಾರೆ. ರಶೀದ್ 2017 ರಿಂದ 2021 ರವರೆಗೆ ಸನ್ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ಪರ ಆಡಿದ್ದರು. ನಂತರ ಗುಜರಾತ್​ ಟೈಟನ್ಸ್ ಸೇರಿಕೊಂಡಿದ್ದಾರೆ.

Continue Reading

ಕ್ರೀಡೆ

Virat Kohli: ಗಂಭೀರ್​ ಮಾರ್ಗದರ್ಶನದಂತೆ ಅತ್ಯಂತ ಜೋಶ್​ನಿಂದ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಕೊಹ್ಲಿ; ಫೋಟೊ ವೈರಲ್​

Virat Kohli: ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್​ ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

VISTARANEWS.COM


on

Virat Kohli
Koo

ಕೊಲಂಬೊ: ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದ ಜೋಶ್​ನಲ್ಲಿರುವ ಟೀಮ್​ ಇಂಡಿಯಾ ಇದೀಗ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಗಸ್ಟ್​ 2ರಂದು ನಡೆಯಲಿದೆ. ಈಗಾಗಲೇ ಲಂಕಾ ತಲುಪಿರುವ ಏಕದಿನ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಬುಧವಾರ ವಿರಾಟ್​ ಕೊಹ್ಲಿ(Virat Kohli) ಅವರು ನೂತನ ಕೋಚ್​ ಗೌತಮ್ ಗಂಭೀರ್(Head Coach Gambhir)​ ಜತೆ ಅತ್ಯಂತ ಆತ್ಮೀಯವಾಗಿ ಚರ್ಚಿಸುತ್ತಿರುವುದು ಕಂಡು ಬಂತು. ಈ ಫೋಟೊ(photo viral) ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿರಾಟ್​ ಕೊಹ್ಲಿ ಅವರು ಗಂಭೀರ್(Gautam Gambhir)​ ಜತೆ ಬ್ಯಾಟಿಂಗ್​ ಮಾರ್ಗದರ್ಶನ ಮತ್ತು ಆತ್ಮೀಯವಾಗಿ ಚರ್ಚಿಸುತ್ತಿರುವ ಫೋಟೊವನ್ನು ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಕಂಡ ಅನೇಕ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಗಂಭೀರ್​ ಕೋಚ್​ ಆಗುತ್ತಿದ್ದಂತೆಯೇ ಕೆಲ ನೆಟ್ಟಿಗರು ಗಂಭೀರ್​ ಮತ್ತು ಕೊಹ್ಲಿ ನಡುವಣ ಆನ್ ಫೀಲ್ಡ್ ಜಗಳ ಮತ್ತೆ ಶುರುವಾಗಿ ಇದು ತಂಡಕ್ಕೆ ಭಾದಿಸಲಿದೆ ಎಂದು ಹೇಳಿದ್ದರು. ನೆಟ್ಟಿಗರು ಈ ಮಾತು ಹೇಳಲು ಕೂಡ ಕಾರಣವಿತ್ತು. ಅದೇನೆಂದರೆ, ವಿರಾಟ್​ ಕೊಹ್ಲಿ ಮತ್ತು ಗಂಭೀರ್​ ಐಪಿಎಲ್​ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್​ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಕೂಡ ಗಂಭೀರ್ ಪ್ರದರ್ಶಿಸಿದ್ದರು. ಹೀಗಿರುವಾಗ ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಇಬರಿಬ್ಬರು ಎಲ್ಲ ಮುನಿಸು ಮರೆತು ಆತ್ಮೀಯವಾಗಿರುವಂತೆ ಕಾಣಿಸಿದೆ.

ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಕೊಹ್ಲಿ ಅವರು ಬಿಸಿಸಿಐ ಬಳಿ ತಾನು ಗಂಭೀರ್ ಜತೆಗೆ ನಡೆಸಿದ ಕಿತ್ತಾಟಗಳನ್ನು ಮರೆತು ಅವರೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ, ಗಂಭೀರ್​ ಕೂಡ ತಾನು ಕೊಹ್ಲಿ ಜತೆ ಉತ್ತಮ ಬಾಂಧವ್ಯದೊಂದಿಗೆ ಇರುವುದಾಗಿ ತಿಳಿಸಿದ್ದಾಗಿ ವರದಿಯಾಗಿತ್ತು.

ಇದನ್ನೂ ಓದಿ Virat Kohli: ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿ ಕೋಚ್​ ಗಂಭೀರ್​ ವಿಚಾರದಲ್ಲಿ ಕೊಹ್ಲಿ ಕೊಟ್ಟ ಆಶ್ವಾಸನೆ ಏನು?

ದಾಖಲೆ ಬರೆಯಲು ಕೊಹ್ಲಿ ಸಜ್ಜು

ವಿರಾಟ್​ ಕೊಹ್ಲಿಗೆ(Virat Kohli) ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಹೌದು, ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಸದ್ಯ 292* ಏಕದಿನ ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 13,848* ರನ್(virat kohli odi runs)​ ಬಾರಿಸಿದ್ದಾರೆ. ಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 152 ರನ್​ ಬಾರಿಸಿದರೆ 14 ಸಾವಿರ ರನ್​ ಮೈಲುಗಲ್ಲು ತಲುಪಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 14000ಕ್ಕೂ ಹೆಚ್ಚು ರನ್ ಗಳಿಸಿದ ಸಾರ್ವಕಾಲಿದ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಹೆಸರಿನಲ್ಲಿದೆ. ಸಚಿನ್ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದರೆ, ಕುಮಾರ ಸಂಗಕ್ಕಾರ 404 ಪಂದ್ಯಗಳನ್ನಾಡಿ 14,234 ರನ್ ಬಾರಿಸಿದ್ದಾರೆ. ಕೊಹ್ಲಿಗೆ ಸಂಗಕ್ಕಾರ ದಾಖಲೆ ಮುರಿಯುವ ಅವಕಾಶವಿದೆ. ಆದರೆ ಸಚಿನ್​ ದಾಖಲೆ ಮುರಿಯುವುದು ಕಷ್ಟ ಸಾಧ್ಯ.

Continue Reading
Advertisement
Supreme Court SC ST Quota
ಪ್ರಮುಖ ಸುದ್ದಿ12 mins ago

Supreme Court Sc St Quota: ಎಸ್‌ಸಿ ಎಸ್‌ಟಿ ಒಳಮೀಸಲು; ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಕೇಂದ್ರದಿಂದ ರಾಜ್ಯ ಸರ್ಕಾರದ ಅಂಗಳಕ್ಕೆ ಬಂದ ಚೆಂಡು

karnataka Rain
ಮಳೆ14 mins ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ32 mins ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ44 mins ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

Stock Market
ವಾಣಿಜ್ಯ54 mins ago

Stock Market: ಷೇರುಪೇಟೆಯಲ್ಲಿ ಗೂಳಿ ಜಿಗಿತ; ಮೊದಲ ಬಾರಿ 82,000 ಗಡಿ ದಾಟಿದ ಸೆನ್ಸೆಕ್ಸ್

ಕ್ರೀಡೆ1 hour ago

Paris Olympics: ಇಂದು ಲಕ್ಷ್ಯ ಸೇನ್‌-ಪ್ರಣಯ್ ಮಧ್ಯೆ ಪ್ರೀ ಕ್ವಾರ್ಟರ್​ ಮುಖಾಮುಖಿ; ಭಾರತಕ್ಕೆ ಒಂದು ಪದಕ ನಷ್ಟ

police firing gadag
ಕ್ರೈಂ1 hour ago

Police Firing: ದರೋಡೆ ಎಸಗಿದ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡು, ಬಂಧನ

Pushpa 2 Allu Arjun climax leaked Fans urge producers to take action
ಟಾಲಿವುಡ್1 hour ago

Pushpa 2: ಪುಷ್ಪ 2 ಕ್ಲೈ ಮ್ಯಾಕ್ಸ್‌ ದೃಶ್ಯ ಲೀಕ್‌; ಕೋಪ ಹೊರ ಹಾಕಿದ ಅರ್ಜುನ್‌ ಫ್ಯಾನ್ಸ್‌!

Supreme Court Sc St Quota
ದೇಶ2 hours ago

Supreme Court SC ST Quota: ಪರಿಶಿಷ್ಟ ಜಾತಿ- ಪಂಗಡ ಒಳಮೀಸಲಾತಿ ಕಾನೂನುಬದ್ಧ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Gold Rate Today
ಚಿನ್ನದ ದರ2 hours ago

Gold Rate Today: ಮತ್ತೆ ಶಾಕ್‌ ಕೊಟ್ಟ ಚಿನ್ನದ ದರ; ಬಂಗಾರ ಇಂದು ಇಷ್ಟು ದುಬಾರಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ14 mins ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ33 mins ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ44 mins ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌