Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ - Vistara News

ಬ್ಯಾಡ್ಮಿಂಟನ್

Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ

Thailand Open 2024: ಇಂದು (ಭಾನುವಾರ) ನಡೆದ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌(Thailand Open 2024) ಫೈನಲ್​ ಪಂದ್ಯದಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(Satwiksairaj Rankireddy-Chirag Shetty) ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ.

VISTARANEWS.COM


on

Thailand Open 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬ್ಯಾಂಕಾಕ್‌: ಭಾರತದ ಸ್ಟಾರ್‌ ಡಬಲ್ಸ್‌ ಬ್ಯಾಡ್ಮಿಂಟನ್​ ಆಟಗಾರರಾದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(Satwiksairaj Rankireddy-Chirag Shetty) ಪ್ಯಾರಿಸ್​ ಒಲಿಂಪಿಕ್ಸ್​ ಟೂರ್ನಿ ಆರಂಭಕ್ಕೂ ಮುನ್ನವೇ ಶ್ರೇಷ್ಠ ಪ್ರದರ್ಶನವೊಂದನ್ನು ನೀಡಿದ್ದಾರೆ. ಇಂದು (ಭಾನುವಾರ) ನಡೆದ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌(Thailand Open 2024) ಫೈನಲ್​ ಪಂದ್ಯದಲ್ಲಿ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ.

ಏಕಪಕ್ಷೀಯವಾಗಿ ಸಾಗಿದ ಫೈನಲ್​ ಪಂದ್ಯದಲ್ಲಿ ಏಷ್ಯಾಡ್‌ ಚಾಂಪಿಯನ್‌ ಹಾಗೂ ಕೂಟದ ಅಗ್ರ ಶ್ರೇಯಾಂಕಿ ಭಾರತೀಯ ಜೋಡಿ ಚೀನದ ಚೆನ್‌ ಬೊ ಯಾಂಗ್‌-ಲಿಯು ಯಿ(Chen Bo Yang-Liu Yi) ವಿರುದ್ಧ 21-15, 21-15 ನೇರ ಗೇಮ್​ಗಳಿಂದ ಹಿಮ್ಮೆಟಿಸಿದರು. ಶನಿವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಚಿರಾಗ್‌- ಸಾತ್ವಿಕ್‌ ಜೋಡಿ ಚೈನೀಸ್‌ ತೈಪೆಯ ಲು ಮಿಂಗ್‌ ಚೆ-ಟಾಂಗ್‌ ಕೈ ವೀ ವಿರುದ್ಧವೂ 21-11, 21-12 ಅಂತರದ ಸುಲಭ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಫೈನಲ್​ನಲ್ಲಿಯೂ ಇದೇ ಪ್ರದರ್ಶನ ತೋರಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಕೆಲವು ವಾರಗಳ ಹಿಂದೆ ನಡೆದಿದ್ದ ಥಾಮಸ್‌ ಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫ‌ಲರಾಗಿದ್ದ ಚಿರಾಗ್​-ಸಾತ್ವಿಕ್​ ಜೋಡಿ ಇದೀಗ ಮರಳಿ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ದೊಡ್ಡ ಪದಕವೊಂದನ್ನು ಗೆಲ್ಲುವ ನೆಚ್ಚಿನ ಜೋಡಿಯಾಗಿ ಭರವಸೆ ಮೂಡಿಸಿದೆ.

ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಕರ್ನಾಟಕ ಮೂಲದ ಚಿರಾಗ್‌ ಶೆಟ್ಟಿ ಜೋಡಿಗೆ ಇದೇ ವರ್ಷ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಏಷ್ಯನ್​ ಗೇಮ್ಸ್​ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಈ ಜೋಡಿಯದ್ದಾಗಿದೆ. 1982ರಲ್ಲಿ ಲೆರೋಯ್‌ ಫ್ರಾನ್ಸಿಸ್‌-ಪ್ರದೀಪ್‌ ಗಾಂಧಿ ಕಂಚು ಗೆದ್ದಿದ್ದು ಭಾರತಕ್ಕೆ ಪುರುಷರ ಡಬಲ್ಸ್‌ನಲ್ಲಿ ಸಿಕ್ಕ ಏಕೈಕ ಪದಕವಾಗಿತ್ತು. ಆದರೆ, ಚಿರಾಗ್‌-ಸಾತ್ವಿಕ್‌ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದರು.

ಇದನ್ನೂ ಓದಿ Thomas Cup 2024: ಉಬೆರ್‌ ಕಪ್‌ ಬಳಿಕ ಥಾಮಸ್‌ ಕಪ್​ನಲ್ಲಿಯೂ ಮುಗ್ಗರಿಸಿದ ಭಾರತ

ಬಹುನಿರೀಕ್ಷಿತ ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಡಕ್ಕೆ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ ಸಿಂಧು(PV Sindhu) ಸೇರಿ 7 ಭಾರತೀಯ ಶಟ್ಲರ್​ಗಳು ಈಗಾಗಲೇ ಅರ್ಹತೆ ಪಡೆದಿದ್ದಾರೆ. ಮಹಿಳಾ ಡಬಲ್ಸ್​ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೂ ಒಲಿಂಪಿಕ್ಸ್​ ಟಿಕೆಟ್​ ಲಭಿಸಿದೆ.

ಅರ್ಹತೆ ಪಡೆದ ಶಟ್ಲರ್​ಗಳು

ಪಿವಿ ಸಿಂಧು, ಲಕ್ಷ್ಯ ಸೇನ್, ಎಚ್ ಎಸ್ ಪ್ರಣಯ್, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ, ಅಶ್ವಿನಿ ಪೊನ್ನಪ್ಪ, ತನಿಶಾ ಕ್ರಾಸ್ಟೊ.

ಜುಲೈ 26ಕ್ಕೆ ಒಲಿಂಪಿಕ್ಸ್​ ಆರಂಭ

ಮಹತ್ವದ ಕ್ರೀಡಾಕೂಡವಾದ ಪ್ಯಾರಿಸ್ ಒಲಿಂಪಿಕ್ಸ್‌ನ(Paris Olympics 2024) ಉದ್ಘಾಟನಾ ಸಮಾರಂಭಕ್ಕೆ(paris olympics 2024 opening ceremony) ದಿನಾಂಕ ನಿಗದಿಯಾಗಿದೆ. ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮ ನೆರವೇರಲಿದೆ.

ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಅಂಕಣ

ರಾಜಮಾರ್ಗ ಅಂಕಣ: ಪದಕವೊಂದೇ ಲಕ್ಷ್ಯ – ಲಕ್ಷ್ಯ ಸೇನ್!

ರಾಜಮಾರ್ಗ ಅಂಕಣ: ಇಡೀ ಕೋರ್ಟಿನಲ್ಲಿ ಚಿರತೆಯಂತೆ ಪಾದ ಚಲನೆ ಹೊಂದಿರುವ ಲಕ್ಷ್ಯ ಸೇನ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸನಲ್ಲಿ ಒಂದು ಪದಕಕ್ಕೆ ಲಕ್ಷ್ಯ ಇಡುವುದನ್ನು ಯಾರೂ ತಡೆಯಲು ಅಸಾಧ್ಯ ಎನ್ನುವುದು ಭಾರತೀಯರ ನಂಬಿಕೆ.

VISTARANEWS.COM


on

lakshya sen ರಾಜಮಾರ್ಗ ಅಂಕಣ
Koo

ಭಾರತದ ಬ್ಯಾಡ್ಮಿಂಟನ್ ಭರವಸೆಗೆ ಇಂದು ಹುಟ್ಟಿದ ಹಬ್ಬ(ಆಗಸ್ಟ್ 16)

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮೊನ್ನೆ ಮುಗಿದುಹೋದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ಭಾರತದ (India) ಕನಿಷ್ಠ ಆರು ಕ್ರೀಡಾಪಟುಗಳು ಕೂದಲೆಳೆಯ ಅಂತರದಲ್ಲಿ ಪದಕ ಮಿಸ್ ಮಾಡಿದ್ದರು. ಅದರಲ್ಲಿ ಒಂದು ಪ್ರಮುಖವಾದ ಹೆಸರು ಬ್ಯಾಡ್ಮಿಂಟನ್ (Badminton) ಪ್ರತಿಭೆ ಲಕ್ಷ್ಯ ಸೇನ್ (Lakshya Sen) . ಈ ಒಲಿಂಪಿಕ್ಸ್ ಕೂಟದಲ್ಲಿ ವಿಶ್ವ ಚಾಂಪಿಯನ್ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ( Victor Axelsen)ಗೆ ಬೆವರು ಇಳಿಸಿದ ಕೀರ್ತಿ ಈತನದ್ದು. ಇಂದಾತನಿಗೆ 24ನೇ ಹುಟ್ಟಿದ ಹಬ್ಬ (2001,ಆಗಸ್ಟ್ 16).

ಭಾರತದ ಬ್ಯಾಡ್ಮಿಂಟನ್ ಭರವಸೆ – ಲಕ್ಷ್ಯ ಸೇನ್

ಉತ್ತರಾಖಂಡ್ ರಾಜ್ಯದ ಅಲ್ಮೋರ ಎಂಬ ನಗರದಲ್ಲಿ ಹುಟ್ಟಿದ ಈತನಿಗೆ ಬಾಲ್ಯದಿಂದಲೂ ಅಪ್ಪ ಡಿ ಕೆ ಸೇನ್ ಅವರೇ ಕೋಚ್. ಹಾಗೆಯೇ ಆತನಿಗೆ ಲೆಜೆಂಡ್ ಪ್ರಕಾಶ್ ಪಡುಕೋಣೆ ಅವರೇ ಸ್ಫೂರ್ತಿ. ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಸಾಗಿದ ದಾರಿಯಲ್ಲಿ ಬೆಳೆಯಬೇಕು ಎಂದು ಹುರುಪು ತುಂಬಿದ್ದೇ ಅಪ್ಪ. ಈ ಹುಡುಗ ಕಠಿಣ ಪರಿಶ್ರಮಿ. ಬೆವರು ಹರಿಸುವುದರಲ್ಲಿ ಹೆಚ್ಚು ನಂಬಿಕೆ. ಈಗ ಅವನ ಕೋಚ್ ಆಗಿರುವ ವಿಮಲ್ ಕುಮಾರ್ ಹೇಳಿದ ಪ್ರತೀಯೊಂದು ಮಾತು ವೇದವಾಕ್ಯ. ‘ನಿನ್ನ ಹಿಂಗೈ ಹೊಡೆತ ಸ್ವಲ್ಪ ವೀಕ್ ಇದೆ ಹುಡುಗಾ’ ಎಂದು ಕೋಚ್ ಹೇಳಿದರೆ ‘ಮೂರು ದಿನ ಟೈಮ್ ಕೊಡಿ ಸರ್. ಸರಿ ಮಾಡಿಕೊಂಡು ಬರುತ್ತೇನೆ ‘ ಎಂದವನು. ನುಡಿದಂತೆಯೇ ನಡೆದವನು.

ಕೋಚ್ ಆತನಿಗೆ ಹೇಳಿದ ಮಾತುಗಳು

ಬ್ಯಾಡ್ಮಿಂಟನ್ ಆಟಕ್ಕೆ ದೇಹದ ಕಸುವು ತುಂಬಾ ಮುಖ್ಯ. ಫೋಕಸ್ ಅದಕ್ಕಿಂತ ಮುಖ್ಯ. ಕೊನೆಯ ಸರ್ವಿಸ್ ತನಕ ಆಟವನ್ನು ಕೈ ಚೆಲ್ಲಬಾರದು. ಎಷ್ಟು ಪಾಯಿಂಟ್ ಹಿಂದೆ ಇದ್ದರೂ ನಿನಗೆ ಕಮ್ ಬ್ಯಾಕ್ ಮಾಡಲು ಅವಕಾಶ ಇರುತ್ತದೆ. ಎದುರಾಳಿ ಎಷ್ಟು ಬಲಿಷ್ಠ ಎಂದು ತಲೆಗೆ ತೆಗೆದುಕೊಳ್ಳಬಾರದು. ನಿನ್ನ ಸಾಮರ್ಥ್ಯಗಳ ಮೇಲೆ ಭರವಸೆ ಇಟ್ಟು ಆಡು – ಇದು ಅವರ ಕೋಚ್ ಪದೇ ಪದೇ ಹೇಳುತ್ತಿದ್ದ ಮಾತುಗಳು. ಪ್ಯಾರಿಸ್ ಒಲಿಂಪಿಕ್ಸನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ವಿಕ್ಟರ್ ಅವರನ್ನು
ಎದುರಿಸುವಾಗಲೂ ಕಿವಿಯಲ್ಲಿ ರಿಬೌಂಡ್ ಆಗ್ತಾ ಇದ್ದದ್ದು ಕೋಚ್ ಹೇಳಿದ ಈ ಮಾತುಗಳೇ.

ಪ್ರಕಾಶ್ ಪಡುಕೋಣೆ – ನನ್ನ ಸ್ಫೂರ್ತಿ ದೇವತೆ

ಯಾಕೆಂದರೆ ಒಂದು ಕಾಲದಲ್ಲಿ ಇಂಡೋನೇಷಿಯಾ ಮತ್ತು ಚೀನಾ ಪ್ರಭುತ್ವ ಸ್ಥಾಪನೆ ಮಾಡಿದ್ದ ಈ ಕ್ರೀಡೆಯನ್ನು ಭಾರತದ ಮಗ್ಗುಲಿಗೆ ತಂದವರೇ ಪಡುಕೋಣೆ ಸರ್. 80ರ ದಶಕದಲ್ಲಿ ಅವರು ವರ್ಲ್ಡ್ ನಂಬರ್ ಒನ್ ಆಗಿದ್ದರು ಮತ್ತು ಅದೇ ವರ್ಷ ಅವರು ಆಲ್ ಇಂಗ್ಲೆಂಡ್ ಓಪನ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾದರು. ಆವಾಗ ಲಕ್ಷ್ಯ ಸೇನ್ ಹುಟ್ಟಿರಲೇ ಇಲ್ಲ. ಮುಂದೆ ಅವರನ್ನು ಅವರ ಟ್ರೈನಿಂಗ್ ಆಕಾಡೆಮಿಯಲ್ಲಿ ಭೇಟಿ ಆದಾಗ ಅವರು ಕೊಟ್ಟ ಟಿಪ್ಸ್, ಆಶೀರ್ವಾದ ನನ್ನನ್ನು ಬೆಳೆಸುತ್ತಿದೆ. ನಾನು ಅವರಿಗೆ ಆಭಾರಿ ಎನ್ನುತ್ತಾರೆ ನಮ್ಮ ಚಾಂಪ್.

ಈ ಬಾರಿ ಪ್ಯಾರಿಸ್ ಒಲಿಂಪಿಕ್ಸನಲ್ಲಿ..

ಪ್ರತೀಯೊಂದು ಪಂದ್ಯವು ಅವರಿಗೆ ಸ್ಪರ್ಧಾತ್ಮಕವಾಗಿಯೇ ಇತ್ತು. ಅವುಗಳನ್ನು ಗೆದ್ದು ಸೆಮೀಸ್ ಪ್ರವೇಶ ಮಾಡಿದಾಗ ಭಾರತಕ್ಕೆ ಒಂದಾದರೂ ಪದಕವನ್ನು ಗೆಲ್ಲಬೇಕು ಎಂಬ ಕನಸು ಸ್ಟ್ರಾಂಗ್ ಆಗಿತ್ತು. ಆದರೆ ಪಂದ್ಯದ ಆರಂಭದಲ್ಲಿಯೇ ಮೊಣಕೈಗೆ ಬಲವಾದ ಗಾಯವಾಗಿ ರಕ್ತ ಸುರಿಯಲು ಆರಂಭವಾಯಿತು. ಹಲವು ಬಾರಿ ಫಿಸಿಯೋ ಮೈದಾನಕ್ಕೆ ಕಿಟ್ ತೆಗೆದುಕೊಂಡು ಬಂದರೂ ನೋವು ಕಡಿಮೆ ಆಗಲಿಲ್ಲ. ಆದರೂ ವಿಶ್ವ ಚಾಂಪಿಯನ್ ಆಟಗಾರನಿಗೆ ಫೈಟ್ ಕೊಟ್ಟ ತೃಪ್ತಿ ಇದೆ. ಭಾರತಕ್ಕೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ನೋವು ಅದಕ್ಕಿಂತ ದೊಡ್ಡದು. ಮುಂದಿನ ಒಲಿಂಪಿಕ್ಸ್ ಕೂಟಕ್ಕೆ ಈಗಿನಿಂದಲೇ ಸಿದ್ಧತೆ ಮಾಡುತ್ತೇನೆ ಎಂದು ಲಕ್ಷ್ಯ ಸೇನ್ ಹೇಳಿದ್ದಾರೆ.

ಆತನ ಬಗ್ಗೆ ವಿಶ್ವಚಾಂಪಿಯನ್ ವಿಕ್ಟರ್ ಹೇಳಿದ ಮಾತುಗಳು ಇನ್ನೂ ಸ್ಫೂರ್ತಿದಾಯಕ ಆಗಿವೆ. ʼನಾನು ಇದುವರೆಗೂ ಎದುರಿಸಿದ ಅತ್ಯಂತ ಕಠಿಣ ಸ್ಪರ್ಧಿ ಎಂದರೆ ಲಕ್ಷ್ಯ ಸೇನ್. ಆತನಿಗೆ ಉಜ್ವಲ ಭವಿಷ್ಯ ಇದೆ. ಮುಂದಿನ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ನಾನು ಇರುವುದಿಲ್ಲ. ಆತನು ಖಂಡಿತವಾಗಿ ಪದಕ ಗೆಲ್ಲುವ ಫೇವರಿಟ್ ಆಗಿರುತ್ತಾನೆ!’ ಈ ಮಾತುಗಳು ಪದಕಕ್ಕಿಂತ ಹೆಚ್ಚು ಮೌಲ್ಯ ಹೊಂದಿವೆ ಎಂದು ನಿಮಗೆ ಅನ್ನಿಸುತ್ತದೆಯಾ?

ಅದ್ಭುತವಾದ ಟ್ರಾಕ್ ರೆಕಾರ್ಡ್

ವರ್ಲ್ಡ್ ಜ್ಯೂನಿಯರ್ ವಿಭಾಗದಲ್ಲಿ ಆತನು ನಂಬರ್ ಒನ್ ರಾಂಕ್ ಹೊಂದಿದ್ದ ಆಟಗಾರ. ಯೂತ್ ಒಲಿಂಪಿಕ್ಸನಲ್ಲಿ ಎರಡು ಪದಕ, ವರ್ಲ್ಡ್ ಚಾಂಪಿಯನ್ ಶಿಪ್ ಕೂಟದಲ್ಲಿ ಕಂಚಿನ ಪದಕ, ಥಾಮಸ್ ಕಪ್, ಕಾಮನ್ ವೆಲ್ತ್ ಗೇಮ್ಸ್, ಏಷಿಯನ್
ಬ್ಯಾಡ್ಮಿಮಿಂಟನ್ ಕೂಟ…ಎಲ್ಲ ಕಡೆಯಲ್ಲಿಯೂ ಲಕ್ಷ್ಯ ಸೇನ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಈಗಾಗಲೇ ಒಟ್ಟು 15 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಅವರ ಸಕ್ಸೆಸ್ ರೇಟ್ 236 ಗೆಲುವು/102 ಸೋಲು! ಇಂದಿನ ದಿನಕ್ಕೆ ಆತನ ವರ್ಲ್ಡ್ ರಾಂಕಿಂಗ್ 16. ಅದು ಇಂಪ್ರೂವ್ ಆಗ್ತಾ ಇದೆ ಅನ್ನೋದು ನಮಗೆ ಸಿಹಿಸುದ್ದಿ.

ಐದು ಅಡಿ 10 ಇಂಚು ಎತ್ತರದ, ಅಹಂಕಾರದ ಸೊಂಕೂ ಇಲ್ಲದ, ಕೀರ್ತಿ ಶನಿ ಇನ್ನೂ ತಲೆಗೆ ಹತ್ತದೆ ಇರುವ, ಬಲಿಷ್ಠ ಹಿಂಗೈ ಮತ್ತು ಮುಂಗೈ ಹೊಡೆತಗಳ ಆಟಗಾರ, ಇಡೀ ಕೋರ್ಟಿನಲ್ಲಿ ಚಿರತೆಯಂತೆ ಪಾದ ಚಲನೆ ಹೊಂದಿರುವ ಲಕ್ಷ್ಯ ಸೇನ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸನಲ್ಲಿ ಒಂದು ಪದಕಕ್ಕೆ ಲಕ್ಷ್ಯ ಇಡುವುದನ್ನು ಯಾರೂ ತಡೆಯಲು ಅಸಾಧ್ಯ ಎನ್ನುವುದು ಭಾರತೀಯರ ನಂಬಿಕೆ.

ಆಲ್ ದ ಬೆಸ್ಟ್ ಮತ್ತು ಹ್ಯಾಪಿ ಬರ್ತಡೇ ಚಾಂಪಿಯನ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸ್ವಾತಂತ್ರ್ಯದ ಕನವರಿಕೆಯಲ್ಲಿ ಮಿಂದೆದ್ದ ಭಾರತ

Continue Reading

ಕ್ರೀಡೆ

Sunil Gavaskar: ಪದಕ ಗೆಲ್ಲಲು ವಿಫಲವಾದ ಲಕ್ಷ್ಯ ಸೇನ್ ವಿರುದ್ಧ ವಾಗ್ದಾಳಿ ನಡೆಸಿದ ಗಾವಸ್ಕರ್

Sunil Gavaskar: ಲಕ್ಷ್ಯ ಸೇನ್​ ಮಹತ್ವದ ಪಂದ್ಯದ ವೇಳೆ ಏಕಾಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಎಡವಿದ್ದೇ ಸೋಲಿಗೆ ಕಾರಣ ಎಂದು ಮಾಜಿ ಕ್ರಿಕೆಟಿ ಸುನೀಲ್​ ಗವಾಸ್ಕರ್​ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

Sunil Gavaskar
Koo

ಮುಂಬಯಿ: ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics 2024) ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಸೆಮಿ ಫೈನಲ್​ ಪಂದ್ಯದ ತನಕ ಉತ್ತಮವಾಗಿ ಆಡಿ ಪದಕ ಭರಸವೆ ಮೂಡಿಸಿದ್ದ ಲಕ್ಷ್ಯ ಸೇನ್(Lakshya Sen)​ ಸೆಮಿ ಮತ್ತು ಕಂಚಿನ ಪದಕ ಸ್ಪರ್ಧೆಯಲ್ಲಿ ನಿರಾಶಾದಾಯಕ ಪ್ರದರ್ಶನ ತೋರುವ ಮೂಲಕ ಸೋಲು ಕಂಡು ಪದಕ ವಂಚಿತರಾಗಿದ್ದರು. ಇದೀಗ ಮಾಜಿ ಕ್ರಿಕೆಟಿಗ ಸುನೀಲ್​ ಗವಾಸ್ಕರ್(Sunil Gavaskar) ಅವರು ಲಕ್ಷ್ಯ ಸೇನ್​ ಸೋಲಿಗೆ ಕಾರಣ ಏನೆಂಬುದನ್ನು ತಿಳಿಸಿದ್ದಾರೆ.​ ಮಹತ್ವದ ಪಂದ್ಯದ ವೇಳೆ ಏಕಾಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಎಡವಿದ್ದೇ ಸೋಲಿಗೆ ಕಾರಣ ಎಂದಿದ್ದಾರೆ.

ಕೆಳ ದಿನಗಳ ಹಿಂದಷ್ಟೇ ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪ್ರಕಾಶ್ ಪಡುಕೋಣೆ ಕನಿಷ್ಠ 1 ಪದಕವನ್ನು ಕೂಡ ಗೆಲ್ಲಲಾಗದ ಬ್ಯಾಡ್ಮಿಂಟನ್​ ತಂಡದ ಬಗ್ಗೆ ವಾಗ್ದಾಳಿ ನಡೆಸಿದ್ದರು. ಇದೀಗ ಪಡುಕೋಣೆ ಅವರಿಗೆ ಸುನೀಲ್​ ಗವಾಸ್ಕರ್​ ಕೂಡ ಬೆಂಬಲಕ್ಕೆ ನಿಂತಿದ್ದಾರೆ. ಪ್ರಕಾಶ್ ಪಡುಕೋಣೆ ಹೇಳಿಕೆಯನ್ನು ಬೆಂಬಲಿಸಿರುವ ಸುನೀಲ್ ಗಾವಸ್ಕರ್, ಲಕ್ಷ್ಯಸೇನ್​ರಂತಹ ಆಟಗಾರರ ದುರ್ಬಲ ಮನಸ್ಥಿತಿಯು ಮಹತ್ವದ ಘಟ್ಟದಲ್ಲಿ ಬ್ಯಾಡ್ಮಿಂಟನ್​ನಲ್ಲಿ ಪದಕ ನಷ್ಟಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ Sunil Gavaskar Birthday: 60 ಓವರ್‌ ಆಡಿ 36 ರನ್‌ ಗಳಿಸಿದ್ದ ಗವಾಸ್ಕರ್‌, 88 ಚೆಂಡಿನಲ್ಲಿ ಸೆಂಚುರಿ ಬಾರಿಸಿದರು!

“ಆಟಗಾರರು ತಾವೇ ಮುಂದೆ ಬಂದು ಪದಕ ಗೆಲ್ಲಲುವ ಮನಸ್ಸು ಮಾಡಬೇಕು. ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡಲು ಅಗತ್ಯವಿರುವ ಎಲ್ಲಾ ಬೆಂಬಲ ಮತ್ತು ಹಣಕಾಸು ಭಾರತೀಯ ಆಟಗಾರರಿಗೆ ನೀಡಲಾಗುತ್ತಿದೆ. ನಮ್ಮ ಆಟಗಾರರಿಗೆ ಸೌಲಭ್ಯಗಳು ಮತ್ತು ಹಣದ ಕೊರತೆಯಿದ್ದ ಹಿಂದಿನ ದಿನಗಳಂತೆ ಈಗ ಆ ಪರಿಸ್ಥಿತಿ ಇಲ್ಲ” ಎಂದು ಹೇಳುವ ಮೂಲಕ ಬ್ಯಾಡ್ಮಿಂಟನ್​ ಆಟಗಾರರ ವೈಫಲ್ಯದ ಬಗ್ಗೆ ವಾಗ್ದಾಳಿ ನಡೆಸಿದ್ದರು.

“ಲಕ್ಷ್ಯ ಉತ್ತಮವಾಗಿ ಆಡಿದ್ದರು. ಸೋಲಿನೀಂದ ಸಹಜವಾಗಿ ನಾನು ಸ್ವಲ್ಪ ನಿರಾಶೆಗೊಂಡಿದ್ದೇನೆ. ಅವರು ಸೆಮಿಫೈನಲ್​ನಲ್ಲಿಯೂ ಉತ್ತಮವಾಗಿ ಆಡಿದ್ದರು. ಆದರೆ ಅಂಗಣದೊಳಗಿನ ಓಡಾಟ ಅವರಿಗೆ ಸಾಧ್ಯವಾಗಲಿಲ್ಲ, ಆ ನಿಟ್ಟಿನಲ್ಲಿ ಅವರು ಕೆಲಸ ಮಾಡಬೇಕಾಗಿದೆ” ಎಂದು ಪಡುಕೋಣೆ ಅಸಮಾಧಾನ ಹೊರಹಾಕಿದ್ದರು.

ಪುರುಷರ ಸಿಂಗಲ್ಸ್​ನ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ 22 ವರ್ಷದ ಲಕ್ಷ್ಯ ಸೇನ್ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ 21-13, 16-21, 11-21 ಅಂತರದಲ್ಲಿ ಸೋತು ನಿರಾಸೆ ಮೂಡಿಸಿದ್ದರು. ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌(Viktor Axelsen) ವಿರುದ್ಧ 20-22 21-14 ನೇರ ಗೇಮ್​ಗಳ ಅಂತರದಿಂದ ಸೋಲು ಕಂಡಿದ್ದರು. 

Continue Reading

ಕ್ರೀಡೆ

Paris Olympics: ವಿಕ್ಟರ್‌ ವಿರುದ್ಧ ಲಕ್ಷ್ಯ ಸೇನ್​ಗೆ ಒಲಿಯಲಿ ಗ್ರೇಟ್​ ವಿಕ್ಟರಿ; ಇಂದು ಸೆಮಿ ಫೈನಲ್​

Paris Olympics: ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಈಗಾಗಲೇ ಹಲವು ಪದಕ ಗೆದ್ದಿರುವ, 2 ಬಾರಿಯ ಚಾಂಪಿಯನ್​ ಹಾಗೂ ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ವಿಕ್ಟರ್‌ ಅಕ್ಸೆಲ್ಸೆನ್‌ ಮತ್ತು ಲಕ್ಷ್ಯ ಸೇನ್‌ ಇದುವರೆಗೂ ಒಟ್ಟು 8 ಬಾರಿ ವಿವಿಧ ಟೂರ್ನಿಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಗರಿಷ್ಠ 7 ಪಂದ್ಯಗಳನ್ನು ಅಕ್ಸೆಲ್ಸೆನ್‌ ಗೆದ್ದು ಬೀಗಿದ್ದಾರೆ.

VISTARANEWS.COM


on

Paris Olympics
Koo

ಪ್ಯಾರಿಸ್​: ಇದೇ ಮೊದಲ ಸಲ ಒಲಿಂಪಿಕ್ಸ್‌ನಲ್ಲಿ(Paris Olympics) ಸ್ಪರ್ಧಿಸುತ್ತಿರುವ ಲಕ್ಷ್ಯ ಸೇನ್‌(Lakshya Sen) ಅವರು ಇಂದು ನಡೆಯುವ ಪುರುಷರ ವಿಭಾಗದ ಬ್ಯಾಡ್ಮಿಂಟನ್‌ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಭಾರತದ ಕೊನೆಯ ಭರವಸೆಯಾಗಿ ಉಳಿದಿರುವ ಅವರು ಇಂದು ಖ್ಯಾತ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ ಹೋರಾಟ ನಡೆಸಲಿದ್ದಾರೆ.

ಒಲಿಂಪಿಕ್ ಕೂಟದ ಬ್ಯಾಡ್ಮಿಂಟನ್‌ನಲ್ಲಿ ಪುರುಷರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಮೊದಲ ಶಟ್ಲರ್​ ಎನಿಸಿಕೊಂಡಿರುವ ಲಕ್ಷ್ಯ ಸೇನ್ ಅವರು ಈ ಬಾರಿ ಗೆದ್ದು ಬಂದ ಹಾದಿಯನ್ನು ಮತ್ತು ಅವರ ಉತ್ಕೃಷ್ಟಮಟ್ಟದ ಆಟವನ್ನು ನೋಡುವಾಗ ಈ ಪಂದ್ಯವನ್ನು ಗೆಲ್ಲುವ ನಿರೀಕ್ಷೆ ಮಾಡಬಹುದು. ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್​ ಪಡುಕೋಣೆ ಮತ್ತು ವಿಮಲ್‌ಕುಮಾರ್ ಗರಡಿಯಲ್ಲಿ ಪಳಗಿದ ಈ 22 ವರ್ಷದ ಲಕ್ಷ್ಯ ಸೇನ್​ ಕಳೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಚೈನೀಸ್‌ ತೈಪೆಯ ಚೌ ತೀನ್‌ ಚೆನ್‌ ಅವರೆದುರು ಮೊದಲ ಗೇಮ್‌ ಕಳೆದುಕೊಂಡೂ ಆ ಬಳಿಕ ಗೆದ್ದು ಬಂದ ರೀತಿ ಅಮೋಘವಾಗಿತ್ತು. ಇದೇ ರೀತಿ ಇಂದು ಕೂಡ ಗೆಲುವು ಸಾಧಿಸಿಲಿ ಎನ್ನುವುದು ಭಾರತೀಯ ಕ್ರೀಡಾಭಿಮಾನಿಗಳ ಹಾರೈಕೆ.

ಮುಖಾಮುಖಿ


ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಈಗಾಗಲೇ ಹಲವು ಪದಕ ಗೆದ್ದಿರುವ, 2 ಬಾರಿಯ ಚಾಂಪಿಯನ್​ ಹಾಗೂ ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ವಿಕ್ಟರ್‌ ಅಕ್ಸೆಲ್ಸೆನ್‌ ಮತ್ತು ಲಕ್ಷ್ಯ ಸೇನ್‌ ಇದುವರೆಗೂ ಒಟ್ಟು 8 ಬಾರಿ ವಿವಿಧ ಟೂರ್ನಿಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಗರಿಷ್ಠ 7 ಪಂದ್ಯಗಳನ್ನು ಅಕ್ಸೆಲ್ಸೆನ್‌ ಗೆದ್ದು ಬೀಗಿದ್ದಾರೆ. ಸೇನ್​ ಕೇವಲ ಒಂದು ಬಾರಿ ಮಾತ್ರ ಗೆಲುವು ಕಂಡಿದ್ದಾರೆ. ಈ ಗೆಲುವು 2022ರ ಜರ್ಮನ್‌ ಓಪನ್‌ ಪಂದ್ಯಾವಳಿಯಲ್ಲಿ ಒಲಿದಿತ್ತು. ಈ ಅಂಕಿ ಅಂಶಗಳನ್ನು ನೋಡುವಾಗ ಅಕ್ಸೆಲ್ಸೆನ್‌ ಅವರೇ ಗೆಲ್ಲುವ ಫೇವರಿಟ್​ ಆಗಿ ಗೋಚರಿಸಿದರೂ ಕೂಡ ಸೇನ್​ ಈ ಬಾರಿ ಅಷ್ಟು ಸುಲಭದಲ್ಲಿ ಶರಣಾಗುವ ಸಾಧ್ಯತೆ ಕಡಿಮೆ. ಒಟ್ಟಾರೆ ಈ ಪಂದ್ಯ ರೋಚಕವಾಗಿ ಸಾಗುವುದರಲ್ಲಿ ಯಾವುದೇ ಅನುಮಾನ ಬೇಡ. ಸೋತರೆ ಕಂಚಿನ ಪದಕಕ್ಕಾಗಿ ಪ್ಲೇ ಆಫ್ ಸ್ಪರ್ಧೆಯಲ್ಲಿ ಆಡಬೇಕು. ಗೆದ್ದರೆ ಬೆಳ್ಳಿ ಅಥವಾ ಚಿನ್ನ ಖಚಿತ.

ಗ್ರೇಟ್​ ಬ್ರಿಟನ್ ಮಣಿಸಿ ಸೆಮಿಫೈನಲ್​ ಪ್ರವೇಶಿಸಲಿ ಭಾರತ ಹಾಕಿ ತಂಡ


ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫುಲ್​ ಜೋಶ್​ನಲ್ಲಿರುವ ಭಾರತ(Hockey India) ಪುರುಷರ ಹಾಕಿ ತಂಡ ಇಂದು ನಡೆಯುವ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ(Paris Olympics) ಗ್ರೇಟ್​ ಬ್ರಿಟನ್(hockey india vs great britain)​ ವಿರುದ್ಧ ಆಡಲಿದೆ. ಈ ಪಂದ್ಯವನ್ನು ಕೂಡ ಗೆದ್ದು ಸೆಮಿಫೈನಲ್​ ಪ್ರವೇಶಿಸುವುದು ಹರ್ಮನ್‌ಪ್ರೀತ್ ಸಿಂಗ್ ಪಡೆಯ ಯೋಜನೆಯಾಗಿದೆ.

ಇದನ್ನೂ ಓದಿ Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

ಸ್ಯಾರಸ್ಯವೆಂದರೆ ಕಳೆದ ಟೋಕಿಯೊ ಒಲಿಂಪಿಕ್ಸ್​ ಕ್ವಾರ್ಟರ್‌ ಫೈನಲ್​ನಲ್ಲೂ ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ 3-1 ಗೋಲ್​ಗಳ ಅಂತರದಿಂದ ಗೆದ್ದು ಸೆಮಿಪೈನಲ್‌ ಪ್ರವೇಶಿಸಿತ್ತು. ಈ ಬಾರಿಯೂ ಇದೇ ರೀತಿಯ ಫಲಿತಾಂಶ ಮರುಕಳಿಸಿ ಭಾರತ ಸೆಮಿ ಟಿಕೆಟ್​ ಪಡೆಯಲಿ ಎನ್ನುವುದು ಭಾರತೀಯರ ಹಾರೈಕೆ.

ಭಾರತದ ಪ್ರದರ್ಶನ ನೋಡುವಾಗ ಈ ಬಾರಿಯೂ ಪದಕವೊಂದನ್ನು ಗೆಲ್ಲುವುದು ಖಚಿತ ಎನ್ನಬಹುದು. ಕೊನೆಯ ಒಲಿಂಪಿಕ್ಸ್​ ಆಡುತ್ತಿರುವ ಗೋಲ್​ ಕೀಪರ್​ ಪಿ.ಆರ್ ಶ್ರೀಜೇಶ್ ಅವರಂತು ತಮ್ಮ ಎಲ್ಲ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ತಡೆಗೋಡೆಯಂತೆ ನಿಂತು ಗೋಲ್​ಗಳನ್ನು ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅದರಲ್ಲೂ 52 ವರ್ಷಗಳ ನಂತರ ಆಸ್ಟ್ರೇಲಿಯಾವನ್ನು ಮಣಿಸಿದ್ದು ಭಾರತಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದೆ. ಹರ್ಮನ್‌ಪ್ರೀತ್ ಸಿಕ್ಕ ಪೆನಾಲ್ಟಿ ಅವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡರೆ ಉತ್ತಮ. ರಕ್ಷಣಾ ವಿಭಾಗದಲ್ಲಿ ಅಮಿತ್ ರೋಹಿದಾಸ್‌ ಮತ್ತು ಜರ್ಮನ್‌ಪ್ರೀತ್‌ ಉತ್ತಮ ಫಾರ್ಮ್​ನಲ್ಲಿದ್ದಾರೆ.

Continue Reading

ಕ್ರೀಡೆ

PV Sindhu: ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಅವಳಿ ಒಲಿಂಪಿಕ್​ ಪದಕ ವಿಜೇತೆ ಪಿ.ವಿ. ಸಿಂಧು

PV Sindhu: ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಪಿ.ವಿ.ಸಿಂಧುಗೆ ಫಾರ್ಮ್‌ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

VISTARANEWS.COM


on

PV Sindhu
Koo

ಪ್ಯಾರಿಸ್‌: ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿಯೂ(paris olympics) ಪದಕ ನಿರೀಕ್ಷೆ ಮಾಡಿದ್ದ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ.ಸಿಂಧು(PV Sindhu) ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದ್ದರು. ಈ ಸೋಲಿನ ಬಳಿಕ ಅನೇಕರು ಸಿಂಧು ಒಲಿಂಪಿಕ್ಸ್​ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಿದ್ದರು. ಆದರೆ, ಈ ಬಗ್ಗೆ ಸ್ವತಃ ಸಿಂಧು ಸ್ಪಷ್ಟನೆ ನೀಡಿದ್ದಾರೆ. ವೃತ್ತಿ ಜೀವನದ ಅತೀ ಕಠಿಣ ಸೋಲು ಎದುರಿಸಿ ಬಂದಿರುವುದರಿಂದ ಸ್ವಲ್ಪ ವಿರಾಮ ಪಡೆದು ಮುಂದುವರಿಯುತ್ತೇನೆ ಎಂದಿದ್ದಾರೆ.

ಕಳೆದೊಂದು ವರ್ಷದಿಂದ ಫಿಟ್ನೆಸ್​ ಸಮಸ್ಯೆ ಎದುರಿಸಿದ್ದರೂ ಸಿಂಧು ಮೇಲೆ ಈ ಬಾರಿಯೂ ಪದಕ ನಿರೀಕ್ಷೆ ಮಾಡಲಾಗಿತ್ತು. ಪ್ರೀ ಕ್ವಾರ್ಟರ್​ ಫೈನಲ್​ ತನಕ ಅವರು ಗೆದ್ದು ಬಂದ ಹಾದಿಯನ್ನು ನೋಡುವಾಗ ಈ ಬಾರಿಯೂ ಪದಕ ಖಚಿತ ಎಂದು ನಂಬಲಾಗಿತ್ತು. ಆದರೆ, ಗುರುವಾರ ರಾತ್ರಿ ನಡೆದಿದ್ದ ಪ್ರೀ ಕ್ವಾರ್ಟರ್‌ ಫೈನಲ್​ನಲ್ಲಿ ಸಿಂಧು ಚೀನಾದ ಹಿ ಬಿಂಗ್‌ ಜಿಯಾವೊ ವಿರುದ್ಧ ಸೋಲು ಅನುಭವಿಸಿ ಒಲಿಂಪಿಕ್ಸ್​ ಅಭಿಯಾನ ಮುಗಿಸಿದ್ದರು.

‘ನನ್ನ ಭವಿಷ್ಯದ ಕುರಿತು ನಾನು ಸ್ಪಷ್ಟವಾಗಿದ್ದೇನೆ. ನಾನು ಸ್ವಲ್ಪ ವಿರಾಮ ಪಡೆದ ಮತ್ತೆ ಬ್ಯಾಡ್ಮಿಂಟನ್​ನಲ್ಲಿ ಮುಂದುವರಿಯುತ್ತೇನೆ. ನನ್ನ ದೇಹ ಮತ್ತು ಮನಸ್ಸಿಗೆ ವಿರಾಮ ಬೇಕು. ಮುಂದಿನ ಪ್ರಯಾಣವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಲು ನಾನು ಯೋಜನೆ ರೂಪಿಸಿದ್ದೇನೆ’ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ PV Sindhu: ನೂತನ ಕೋಚ್​ ಮೊರೆ ಹೋದ ಪಿ.ವಿ. ಸಿಂಧು

ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್‌ ಕಂಡುಕೊಳ್ಳಲು ಸಾಧ್ಯವಾಗಿಲ್ಲ. 2 ವರ್ಷಗಳಿಂದೀಚೆಗೆ ಆಡಿದ ಎಲ್ಲ ಟೂರ್ನಿಯಲ್ಲಿ ಹೀನಾಯ ಸೋಲು ಕಂಡಿದ್ದರು. 2ನೇ ಸುತ್ತು ಪ್ರವೇಶಿಸಲು ಕೂಡ ಹೆಣಗಾಡುತ್ತಿದ್ದರು.

ಆಗಸ್ಟ್ 3ರ ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ

ಮಧ್ಯಾಹ್ನ 12:30: ಶೂಟಿಂಗ್ – ಮಹಿಳಾ ಸ್ಕೀಟ್ ಅರ್ಹತಾ ಸುತ್ತಿನ ದಿನ ಮೊದಲ ದಿನ, ರೈಜಾ ಧಿಲ್ಲಾನ್ ಮತ್ತು ಮಹೇಶ್ವರಿ ಚೌಹಾಣ್.

ಮಧ್ಯಾಹ್ನ 1 ಗಂಟೆ: ಶೂಟಿಂಗ್; ಮಹಿಳೆಯರ 25 ಮೀಟರ್ ಪಿಸ್ತೂಲ್ ಫೈನಲ್​​ನಲ್ಲಿ ಮನು ಭಾಕರ್ (ಪದಕದ ಸ್ಪರ್ಧೆ)

ಮಧ್ಯಾಹ್ನ 1:52: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ದೀಪಿಕಾ ಕುಮಾರಿ ಮತ್ತು ಜರ್ಮನಿಯ ಮಿಚೆಲ್ ಕ್ರೊಪೆನ್ ನಡುವೆ ಹಣಾಹಣಿ

ಇದನ್ನೂ ಓದಿ: IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

ಮಧ್ಯಾಹ್ನ 2:05: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ಭಜನ್ ಕೌರ್ ಮತ್ತು ಡಯಾನಂದಾ ಕೊಯಿರುನ್ನಿಸಾ.

ಮಧ್ಯಾಹ್ನ 3:45 ಸೇಯ್ಲಿಂಗ್​​- ಪುರುಷರ ಡಿಂಗ್ಲೇ ರೇಸ್ 5 ಮತ್ತು 6ರಲ್ಲಿ ವಿಷ್ಣು ಸರವಣನ್ ಸ್ಪರ್ಧಿಸಲಿದ್ದಾರೆ.

ಸಂಜೆ 5:55: ಸೇಯ್ಲಿಂಗ್; ಮಹಿಳೆಯರ ಡಿಂಗ್ಲೇ ರೇಸ್ 5 ಮತ್ತು 6 ರಲ್ಲಿ ನೇತ್ರಾ ಕುಮನನ್ ಭಾಗಿಯಾಗಲಿದ್ದಾರೆ.

ರಾತ್ರಿ 11:05: ಶಾಟ್ ಪುಟ್ ಫೈನಲ್ ; ತಜಿಂದರ್ಪಾಲ್ ಸಿಂಗ್ ತೂರ್ (ಅರ್ಹತೆ ಪಡೆದರೆ).

ರಾತ್ರಿ 12:02 : ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್​​ನಲ್ಲಿ ನಿಶಾಂತ್ ದೇವ್ ಮತ್ತು ಮೆಕ್ಸಿಕೊದ ಮಾರ್ಕೊ ವರ್ಡೆ.

Continue Reading
Advertisement
Kodava Family Hockey Tournament Website Launched
ಕೊಡಗು2 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ3 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌