Bhuvneshwar Kumar | ಗಂಡನಿಗೆ ಬೈದವರಿಗೆ ಬೆಂಡೆತ್ತಿದ ಭುವನೇಶ್ವರ್ ಕುಮಾರ್ ಪತ್ನಿ ನೂಪುರ್‌ - Vistara News

ಕ್ರಿಕೆಟ್

Bhuvneshwar Kumar | ಗಂಡನಿಗೆ ಬೈದವರಿಗೆ ಬೆಂಡೆತ್ತಿದ ಭುವನೇಶ್ವರ್ ಕುಮಾರ್ ಪತ್ನಿ ನೂಪುರ್‌

ಭುವನೇಶ್ವರ್‌ ಕುಮಾರ್‌ ಅವರನ್ನು ಟೀಕಿಸುವ ವ್ಯಕ್ತಿಗಳಿಗೆ ಅವರ ಪತ್ನಿ ನೂಪುರ್‌ ಅವರು ಪಾಠ ಹೇಳಿದ್ದು, ವ್ಯರ್ಥಾಲಾಪ ಮಾಡಬೇಡಿ ಎಂದಿದ್ದಾರೆ.

VISTARANEWS.COM


on

bhuvaneshwar kumar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ : ಟೀಮ್‌ ಇಂಡಿಯಾದ ಮಧ್ಯಮ ವೇಗಿ ಭುವನೇಶ್ವರ್‌ ಕುಮಾರ್‌ ಅವರು ಡೆತ್‌ ಓವರ್‌ಗಳಲ್ಲಿ ಯಶಸ್ಸು ಸಾಧಿಸದ ಕಾರಣ ಟೀಕಾಕಾರರ ಬಾಯಿಗೆ ಈಡಾಗಿದ್ದಾರೆ. ಅನುಭವಿ ಬೌಲರ್‌, ತಂಡವನ್ನು ಗೆಲ್ಲಿಸಬೇಕಾದವರು ಸಿಕ್ಕಾಪಟ್ಟೆ ರನ್‌ ಸೋರಿಕೆ ಮಾಡಿ ತಂಡದ ಸೋಲಿಗೆ ಕಾರಣರಾಗುತ್ತಿದ್ದಾರೆ ಎಂಬುದು ಟೀಕಾಕಾರರ ಅಂಬೋಣ. ಅದಕ್ಕೆ ಕೆಲವು ನಿದರ್ಶನಗಳೂ ಇವೆ. ಆದರೆ, ಕ್ರಿಕೆಟ್‌ನಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ, ಫಾರ್ಮ್‌ ಏಕ ರೀತಿಯಲ್ಲಿಯಲ್ಲಿರುವುದಿಲ್ಲ ಎಂಬುದು ಒಪ್ಪಲೇಬೇಕಾದ ಮಾತು. ಹೀಗಾಗಿ ಭುವಿಯನ್ನು ಬೈಯುವುದರಲ್ಲಿ ಅರ್ಥವಿಲ್ಲ ಎಂಬುದು ನಿಜವಾದ ಕ್ರಿಕೆಟ್‌ ಪ್ರೇಮಿಗಳ ಇಂಗಿತ. ಏತನ್ಮಧ್ಯೆ, ಭುವನೇಶ್ವರ್‌ ಕುಮಾರ್‌ ಅವರ ಪತ್ನಿ ನೂಪುರ್ ಅವರು ಗಂಡನಿಗೆ ಬೈದವರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರೆಲ್ಲರಿಗೂ ತಕ್ಕ ಉತ್ತರ ಕೊಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೆಲವು ವ್ಯರ್ಥಾಲಾಪ ಮಾಡುತ್ತಿದ್ದಾರೆ. ಅಂಥವರಿಗೆ ಮಾಡುವುದಕ್ಕೆ ಯಾವುದೇ ಒಳ್ಳೆಯ ಕೆಲಸ ಇರುವುದಿಲ್ಲ. ಅವರಿಗೆಲ್ಲ ಇಲ್ಲದ ಉಸಾಬರಿಯೇ ಹೆಚ್ಚು. ಈ ಮಾದರಿಯ ಮಂದಿಗೆ ನನ್ನ ಸಲಹೆ ಏನೆಂದರೆ, ನಿಮ್ಮ ಮಾತುಗಳಿಂದ ಯಾರಿಗೂ ಏನೂ ಆಗುವುದಿಲ್ಲ. ನಿಮ್ಮ ಅಸ್ತಿತ್ವವನ್ನೂ ಯಾರೂ ಗುರುತಿಸುವುದಿಲ್ಲ. ದಯವಿಟ್ಟು ಏನಾದರೂ ಉತ್ತಮ ಕಾರ್ಯವನ್ನು ಮಾಡಲು ಶುರುಮಾಡಿಕೊಳ್ಳಿ. ಬೇಡದ ಕೆಲಸಕ್ಕೆ ಇಲ್ಲಿ ಜಾಗ ಕಡಿಮೆ,” ಎಂದು ಬರೆದುಕೊಂಡಿದ್ದಾರೆ.

”ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದಿರುವುದಕ್ಕೆ ಟೀಕೆಗಳನ್ನು ಮಾಡಲು ಶುರು ಮಾಡಿಕೊಂಡಿದ್ದಾರೆ. ಚೆನ್ನಾಗಿ ಆಡಿದ ಸಂದರ್ಭಗಳಲ್ಲಿ ಹೊಗಳುವುದಕ್ಕೆ ಆಗುವುದಿಲ್ಲ ಎಂದಾದರೆ, ಕೆಲವು ಪಂದ್ಯಗಳ ಪ್ರದರ್ಶನ ಮುಂದಿಟ್ಟುಕೊಂಡು ತೆಗಳುವ ಕೆಲಸವೂ ಮಾಡಬೇಡಿ. ಕಣ್ಮುಚ್ಚಿಕೊಂಡು ಕೆಲವು ಪಂದ್ಯಗಳ ಪ್ರದರ್ಶನವನ್ನು ವಿಮರ್ಶೆ ಮಾಡಬಾರದು. ಭುವನೇಶ್ವರ್‌ ಕುಮಾರ್‌ ಟೀಮ್‌ ಇಂಡಿಯಾದ ಒಬ್ಬರು ಪರಿಣಾಮಕಾರಿ ಸ್ವಿಂಗ್‌ ಬೌಲರ್‌. ಈ ವಿಷಯ ಎಲ್ಲಿಗೂ ಗೊತ್ತಿದೆ. ಅವರು ಉತ್ತಮ ಪ್ರದರ್ಶನ ನೀಡುತ್ತಾರೆ. ಅವರಿಗೆ ನಮ್ಮ ಬೆಂಬಲವಿದೆ,” ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Team India | ಭಾರತಕ್ಕೆ ಭುವಿಯದ್ದೇ ಚಿಂತೆ, ಹೀಗಾದರೆ ಡೆತ್‌ ಓವರ್‌ನಲ್ಲಿ ಬೌಲ್‌ ಮಾಡುವವರು ಯಾರು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

IPL 2024: ಅಂಪೈರ್​ ಜತೆ ವಾಗ್ವಾದ; ಸಂಜುಗೆ ಬಿತ್ತು ಭಾರೀ ದಂಡ

IPL 2024: ಐಪಿಎಲ್​ನಲ್ಲಿ 14 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಸಂಜು ಸ್ಯಾಮ್ಸನ್ ಶೇ.30ರ ಅನ್ವಯದಲ್ಲಿ 30 ಲಕ್ಷ ರೂ. ದಂಡ ಪಾವತಿಸಬೇಕಿದೆ. ಜತೆಗೆ ಇಂತಹ ತಪ್ಪುಗಳನ್ನು ಪುನರಾವರ್ತಿಸದಂತೆ ಮ್ಯಾಚ್ ರೆಫ್ರಿ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಮತ್ತೆ ಸಂಜು ಈ ರೀತಿಯ ತಪ್ಪು ಮಾಡಿದರೆ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಬೇಕಾಗುತ್ತದೆ.

VISTARANEWS.COM


on

IPL 2024
Koo

ನವದೆಹಲಿ: ಮಂಗಳವಾರ ರಾತ್ರಿ ನಡೆದ ಐಪಿಎಲ್​ನ 56ನೇ ಪಂದ್ಯದಲ್ಲಿ(IPL 2024) ರಾಜಸ್ಥಾನ್​ ರಾಯಲ್ಸ್​(Rajasthan Royals) ಮತ್ತು ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ರಾಜಸ್ಥಾನ್​ ನಾಯಕ ಸಂಜು ಸ್ಯಾಮ್ಸನ್(Sanju Samson)​ ತಮ್ಮ ವಿವಾದಾತ್ಮಕ ಕ್ಯಾಚ್​ಗೆ ಔಟ್​ ನೀಡಿದ್ದಕ್ಕಾಗಿ ಅಂಪೈರ್​ ಜತೆ ವಾಗ್ವಾದ ನಡೆಸಿದ್ದರು. ಈ ತಪ್ಪಿಗಾಗಿ ಸಂಜುಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿದೆ.

ಐಪಿಎಲ್​ನಲ್ಲಿ 14 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಸಂಜು ಸ್ಯಾಮ್ಸನ್ ಶೇ.30ರ ಅನ್ವಯದಲ್ಲಿ 30 ಲಕ್ಷ ರೂ. ದಂಡ ಪಾವತಿಸಬೇಕಿದೆ. ಜತೆಗೆ ಇಂತಹ ತಪ್ಪುಗಳನ್ನು ಪುನರಾವರ್ತಿಸದಂತೆ ಮ್ಯಾಚ್ ರೆಫ್ರಿ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಮತ್ತೆ ಸಂಜು ಈ ರೀತಿಯ ತಪ್ಪು ಮಾಡಿದರೆ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಬೇಕಾಗುತ್ತದೆ.

ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸ್ಯಾಮ್ಸನ್ 16ನೇ ಓವರ್​ನ 4ನೇ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ್ದರು. ಬೌಂಡರಿ ಲೈನ್​ನಲ್ಲಿದ್ದ ಶಾಯ್ ಹೋಪ್ ಅವರು ಈ ಕ್ಯಾಚ್​ ಪಡೆದರು. ಹೋಪ್​ ಕಾಲು ಬೌಂಡರಿ ಲೈನ್​ಗೆ ತಗುಲಿದಂತೆ ಕಂಡು ಬಂದ ಕಾರಣ ಮೂರನೇ ಅಂಪೈರ್​ ಇದನ್ನು ಪರೀಕ್ಷಿಸಿದ ಬಳಿಕ ಔಟ್​ ಎಂದು ತೀರ್ಪು ನೀಡಿದರು. ಈ ವೇಳೆ ಸಂಜು ಮರು ತೀರ್ಪನ್ನು ಮರು ಪರಿಶೀಲಿಸುವಂತೆ ಫೀಲ್ಡ್ ಅಂಪೈರ್ ಜತೆ ವಾಗ್ವಾದ ನಡೆಸಿದರು. ಅಂಪೈರ್​ ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರೂ ಕೂಡ ಸಂಜು ಇದಕ್ಕೆ ಒಪ್ಪದೆ ಅಂಪೈರ್​ ಜತೆ ವಾಗ್ವಾದ ನಡೆಸಿದರು. ಇದು ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಮೊದಲ ಹಂತದ ಅಪರಾಧವಾಗಿದೆ. ಹೀಗಾಗಿ ಅವರಿಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ IPL 2024 Points Table: ಡೆಲ್ಲಿಗೆ ಗೆಲುವು ಅಂಕಪಟ್ಟಿಯಲ್ಲಿ ಕುಸಿತ ಕಂಡ ಲಕ್ನೋ

ಸಂಜು ಸ್ಯಾಮ್ಸನ್​ ಕ್ರೀಸ್​ನಲ್ಲಿರುವ ತನಕ ಪಂದ್ಯ ರಾಜಸ್ಥಾನ್ ಪರವಾಗಿತ್ತು. ಆದರೆ, ಸಂಜು ವಿಕೆಟ್​ ಪತನದ ಬಳಿಕ ಏಕಾಏಕಿ ಕುಸಿತ ಕಂಡ ರಾಜಸ್ತಾನ್​ ಸೋಲಿಗೆ ಸಿಲುಕಿತು. ಕುಲ್​ದೀಪ್​​ ಯಾದವ್​ 25 ರನ್​ಗಳಗೆ ಪ್ರಮುಖ 2 ವಿಕೆಟ್ ಉರುಳಿಸುವ ಮೂಲಕ ಕೊನೇ ಹಂತದಲ್ಲಿ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಸಂಜು 46 ಎಸೆತಕ್ಕೆ 86 ರನ್ ಬಾರಿಸಿ ಹೋಪ್​ ಹಿಡಿದ ಸೂಪರ್​ ಕ್ಯಾಚ್​ಗೆ ವಿಕೆಟ್​ ಕೈಚೆಲ್ಲಿದರು.

ಅರುಣ್​ ಜೇಟ್ಲಿ ಕ್ರಿಕ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್​ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 201 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

Continue Reading

ಕ್ರಿಕೆಟ್

IPL 2024 Points Table: ಡೆಲ್ಲಿಗೆ ಗೆಲುವು ಅಂಕಪಟ್ಟಿಯಲ್ಲಿ ಕುಸಿತ ಕಂಡ ಲಕ್ನೋ

IPL 2024 Points Table: ಇಂದು ನಡೆಯುವ ಪಂದ್ಯದಲ್ಲಿ 4ನೇ ಸ್ಥಾನಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಮುಖಾಮುಖಿಯಅಗಲಿವೆ. ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಯಾರೇ ಗೆದ್ದರೂ 14 ಅಂಕದೊಂದಿಗೆ 3ನೇ ಸ್ಥಾನಕ್ಕೇರಲಿದ್ದಾರೆ. ಈ ತಂಡ ಯಾವುದು ಎನ್ನುವುದು ಈ ಪಂದ್ಯದ ಕುತೂಹಲ.

VISTARANEWS.COM


on

IPL 2024 Points Table
Koo

ನವದೆಹಲಿ: ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಬೃಹತ್​ ಮೊತ್ತದ ಪಂದ್ಯದಲ್ಲಿ(IPL 2024) ಆತಿಥೇಯ ಡೆಲ್ಲಿ ಕ್ಯಾಪಿಲಟ್ಸ್​ ತಂಡ 20 ರನ್​ಗಳ ಗೆಲುವು ಸಾಧಿಸಿ ತನ್ನ ಪ್ಲೇ ಆಫ್​ ರೇಸ್​ ಹಾದಿಯನ್ನು ಜೀವಂತವಿರಿಸಿದೆ. ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ(IPL 2024 Points Table) 5ನೇ ಸ್ಥಾನಕ್ಕೇರಿದೆ. ಈ ಹಿಂದೆ 5 ನೇ ಸ್ಥಾನಿಯಾಗಿದ್ದ ಲಕ್ನೋ ಸೂಪರ್​ ಜೈಂಟ್ಸ್​ ತಂಡ 6ನೇ ಸ್ಥಾನಕ್ಕೆ ಕುಸಿದಿದೆ. ಸೋಲು ಕಂಡರೂ ರಾಜಸ್ಥಾನ್​ 2ನೇ ಸ್ಥಾನದಲ್ಲೇ ಉಳಿದಿದೆ.

ಇಂದು ನಡೆಯುವ ಪಂದ್ಯದಲ್ಲಿ 4ನೇ ಸ್ಥಾನಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಮುಖಾಮುಖಿಯಅಗಲಿವೆ. ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಯಾರೇ ಗೆದ್ದರೂ 14 ಅಂಕದೊಂದಿಗೆ 3ನೇ ಸ್ಥಾನಕ್ಕೇರಲಿದ್ದಾರೆ. ಈ ತಂಡ ಯಾವುದು ಎನ್ನುವುದು ಈ ಪಂದ್ಯದ ಕುತೂಹಲ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​118316 (+1.453)
ರಾಜಸ್ಥಾನ್​ ರಾಯಲ್ಸ್​​​118316 (+0.476)
ಚೆನ್ನೈ​​116514 (+0.700)
ಹೈದರಾಬಾದ್​116512 (-0.065)
ಡೆಲ್ಲಿ126612 (-0.316)
ಲಕ್ನೋ116512 (-0.371)
ಆರ್​ಸಿಬಿ11478 (-0.049)
ಪಂಜಾಬ್​10468 (-0.062)
ಮುಂಬೈ12488 (-0.212)
ಗುಜರಾತ್​11478 (-1.320)

ಅರುಣ್​ ಜೇಟ್ಲಿ ಕ್ರಿಕ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್​ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 201 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

ಸಂಜು ಸ್ಯಾಮ್ಸನ್​ ಕ್ರೀಸ್​ನಲ್ಲಿರುವ ತನಕ ಪಂದ್ಯ ರಾಜಸ್ಥಾನ್ ಪರವಾಗಿತ್ತು. ಆದರೆ, ಸಂಜು ವಿಕೆಟ್​ ಪತನದ ಬಳಿಕ ಏಕಾಏಕಿ ಕುಸಿತ ಕಂಡ ರಾಜಸ್ತಾನ್​ ಸೋಲಿಗೆ ಸಿಲುಕಿತು. ಕುಲ್​ದೀಪ್​​ ಯಾದವ್​ 25 ರನ್​ಗಳಗೆ ಪ್ರಮುಖ 2 ವಿಕೆಟ್ ಉರುಳಿಸುವ ಮೂಲಕ ಕೊನೇ ಹಂತದಲ್ಲಿ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಸಂಜು 46 ಎಸೆತಕ್ಕೆ 86 ರನ್ ಬಾರಿಸಿ ಹೋಪ್​ ಹಿಡಿದ ಸೂಪರ್​ ಕ್ಯಾಚ್​ಗೆ ವಿಕೆಟ್​ ಕೈಚೆಲ್ಲಿದರು.

Continue Reading

ಪ್ರಮುಖ ಸುದ್ದಿ

IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

IPL 2024: ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್​ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 201 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

IPL 2024
Koo

ನವ ದೆಹಲಿ : ಜಿದ್ದಾಜಿದ್ದಿನಿಂದ ಕೂಡಿದ್ದ ಐಪಿಎಲ್​ 17ನೇ ಆವೃತ್ತಿಯ (IPL 2024) 56ನೇ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ 20 ರನ್​ಗಳಿಂದ ಗೆಲುವು ಸಾಧಿಸಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ಆಟಗಾರರು ಗೆಲುವು ತಮ್ಮದಾಗಿಸಿಕೊಂಡು. ಇದು ಡೆಲ್ಲಿ ತಂಡದಕ್ಕೆ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 6ನೇ ಗೆಲುವಾಗಿದೆ. 12 ಅಂಕಗಳನ್ನು ಸಂಪಾದಿಸಿರುವ ರಿಷಭ್​ ಪಂತ್ ಬಳಗ ಲಕ್ನೊ ಸೂಪರ್ ಜೈಂಟ್ಸ್​ ತಂಡವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿತು. ಅತ್ತ ರಾಜಸ್ಥಾನ್ ತಂಡ ಆಡಿರುವ 11 ಪಂದ್ಯಗಳಲ್ಲಿ 3ನೇ ಸೋಲಿಗೆ ಒಳಗಾಯಿತು. ಆದಾಗ್ಯೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಬಿಟ್ಟುಕೊಟ್ಟಿಲ್ಲ.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್​ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 201 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಸಂಜು ಹೋರಾಟ ವ್ಯರ್ಥ

ಸಂಜು ಸ್ಯಾಮ್ಸನ್​ 46 ಎಸೆತಕ್ಕೆ 86 ರನ್ ಬಾರಿಸಿದ್ದ ತನಕ ಪಂದ್ಯ ರಾಜಸ್ಥಾನ್ ತಂಡದ ಪರವಾಗಿತ್ತು. ಆದರೆ, ಸಂಜು ವಿಕೆಟ್​ ಪತನಗೊಳ್ಳುತ್ತಿದ್ದಂತೆ ಏಕಾಏಕಿ ಕುಸಿತ ಕಂಡ ಡೆಲ್ಲಿ ಕ್ಯಾಪಿಟಲ್ಸ್ ಬಳಗ ಸೋಲಿಗೆ ಸಿಲುಕಿತು. ಕುಲ್ದೀಪ್​ ಯಾದವ್​ 25 ರನ್​ಗಳಗೆ ಪ್ರಮುಖ 2 ವಿಕೆಟ್ ಉರುಳಿಸುವ ಮೂಲಕ ಕೊನೇ ಹಂತದಲ್ಲಿ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಏತನ್ಮಧ್ಯೆ ಸಂಜು ಸ್ಯಾಮ್ಸನ್​ ವಿಕೆಟ್ ವಿವಾದಾತ್ಮಕ ವಿಕೆಟ್ ಆಗಿ ಪರಿವರ್ತನೆಗೊಂಡಿತು. ಮುಖೇಶ್ ಕುಮಾರ್​ ಎಸೆತವನ್ನು ಸಂಜು ಬೌಂಡರಿ ಲೈನ್ ಮೇಲೆ ಹೊಡೆಯಲು ಯತ್ನಿಸಿದ್ದರು. ಆದರೆ, ಲೈನ್​ನಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿದ ಶಾಯ್​ ಹೋಪ್ ಕ್ಯಾಚ್ ನೀಡಿದರು. ಥರ್ಡ್​ ಅಂಪೈರ್ ಅದನ್ನು ಮರುಪರಿಶೀಲಿಸಿ ಔಟ್​ ನೀಡಿದರು. ಆದರೆ, ಸಂಜು ಸ್ಯಾಮ್ಸನ್​ ಫೀಲ್ಡರ್ ಕಾಲು ಬೌಂಡರಿ ಲೈನ್​ಗೆ ತಾಗಿದೆ ಎಂದು ಅಂಪೈರ್​ಗಳ ಜತೆ ವಾದ ಮಾಡಿದರು.

ರಾಜಸ್ಥಾನ್ ರಾಯಲ್ಸ್​ ಗುರಿ ಬೆನ್ನಟ್ಟುವ ಹಾದಿಯಲ್ಲಿ ಆರಂಭಿಕ ಆಘಾತ ಅನುಭವಿಸಿತು. ಯಶಸ್ವಿ ಜೈಸ್ವಾಲ್​ 4 ರನ್​ಗೆ ಔಟಾದರೆ ಜೋಸ್ ಬಟ್ಲರ್​ 19 ರನ್ ಬಾರಿಸಿದರು. ರಿಯಾನ್ ಪರಾಗ್​ 27 ಹಾಗೂ ಶುಭಂ ದುಬೆ 25 ರನ್ ಬಾರಿಸಿ ಗೆಲುವಿನ ಕನಸು ಬಿತ್ತಿದರು. ಆದರೆ, ಕೊನೇ ಹಂತದಲ್ಲಿ ಡೆಲ್ಲಿ ಬೌಲರ್​ಗಳು ಗೆಲುವಿನ ಅವಕಾಶವನ್ನು ತಮ್ಮದಾಗಿಸಿಕೊಂಡರು.

ಉತ್ತಮ ಆರಂಭ

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ದೊರಕಿತು. ಪ್ರೇಸರ್ ಮೆಕ್​ಗುರ್ಕ್​ 20 ಎಸೆತಕ್ಕೆ 50 ರನ್​ ಬಾರಿಸಿದರೆ ಅಭಿಷೇಕ್ ಪೊರೆಲ್​ 65 ರನ್​ ಬಾರಿಸಿದರು. ಶಾಯ್​ ಹೋಪ್​ ವಿಫಲರಾಗಿ 1 ರನ್​ಗೆ ಔಟಾದಾಗ ಡೆಲ್ಲಿ ರನ್ ಗಳಿಕೆ ವೇಗ ಕಡಿಮೆಯಾಯಿತು. ಅಕ್ಷರ್ ಪಟೇಲ್​ ಹಾಗೂ ರಿಷಭ್​ ಪಂತ್​ ತಲಾ 15 ರನ್ ಬಾರಿಸಿದರು. ಆದರೆ, ಕೊನೇ ಹಂತದಲ್ಲಿ ಟ್ರಿಸ್ಟಾನ್​ ಸ್ಟಬ್ಸ್​​ 20 ಎಸೆತಕ್ಕೆ 41 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಆರ್​ ಅಶ್ವಿನ್​ 24 ರನ್​ಗಳ ವೆಚ್ಚದಲ್ಲಿ 3 ವಿಕೆಟ್​ ಉರುಳಿಸುವ ಮೂಲಕ ಉತ್ತಮ ಸಾಧನೆ ಮಾಡಿದರು.

Continue Reading

ಕ್ರಿಕೆಟ್

Yuzvendra Chahal : ಟಿ20 ವಿಕೆಟ್​​ಗಳ ಗಳಿಕೆಯಲ್ಲಿ ನೂತನ ದಾಖಲೆ ಬರೆದ ಸ್ಪಿನ್ನರ್ ಯಜ್ವೇಂದ್ರ ಚಹಲ್​

Yuzvendra Chahal: ಆಟದ ಕಿರು ಸ್ವರೂಪದಲ್ಲಿ 350 ವಿಕೆಟ್​​ಗಳ ಕ್ಲಬ್​​ ಪ್ರವೇಶಿಸಲು ಭಾರತದ ಸ್ಪಿನ್ನ್ ತಾರೆಗೆ ಕೇವಲ ಒಂದು ವಿಕೆಟ್ ಅಗತ್ಯವಿತ್ತು. ಅವರು ಅದನ್ನು ಪೂರ್ಣಗೊಳಿಸಿದರು. ಚಹಲ್ ತಮ್ಮ ಸಹ ಆಟಗಾರ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರನ್ನು ಔಟ್ ಮಾಡಿ ಟಿ 20 ಯಲ್ಲಿ 350 ವಿಕೆಟ್​​​ಗಳನ್ನು ಪೂರೈಸಿದರು. ಅವರು ತಮ್ಮ 301 ನೇ ಟಿ 20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

VISTARANEWS.COM


on

Yuzvendra Chahal
Koo

ನವ ದೆಹಲಿ: ರಾಜಸ್ಥಾನ್​ ರಾಯಲ್ಸ್​ ತಂಡದ ಸ್ಪಿನ್ ಬೌಲರ್​ ಯಜುವೇಂದ್ರ ಚಹಲ್ (Yuzvendra Chahal) ಮಂಗಳವಾರ (ಮೇ 7) ಟಿ20 ಪಂದ್ಯಗಳಲ್ಲಿ 350 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್​ 17ನೇ ಆವೃತ್ತಿಯಲ್ಲಿ (IPL 2024) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ದೊಡ್ಡ ಮೈಲಿಗಲ್ಲನ್ನು ಸಾಧಿಸಿದರು.

ಆಟದ ಕಿರು ಸ್ವರೂಪದಲ್ಲಿ 350 ವಿಕೆಟ್​​ಗಳ ಕ್ಲಬ್​​ ಪ್ರವೇಶಿಸಲು ಭಾರತದ ಸ್ಪಿನ್ನ್ ತಾರೆಗೆ ಕೇವಲ ಒಂದು ವಿಕೆಟ್ ಅಗತ್ಯವಿತ್ತು. ಅವರು ಅದನ್ನು ಪೂರ್ಣಗೊಳಿಸಿದರು. ಚಹಲ್ ತಮ್ಮ ಸಹ ಆಟಗಾರ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರನ್ನು ಔಟ್ ಮಾಡಿ ಟಿ 20 ಯಲ್ಲಿ 350 ವಿಕೆಟ್​​​ಗಳನ್ನು ಪೂರೈಸಿದರು. ಅವರು ತಮ್ಮ 301 ನೇ ಟಿ 20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಪಿಯೂಷ್ ಚಾವ್ಲಾ ಮತ್ತು ರವಿಚಂದ್ರನ್ ಅಶ್ವಿನ್ 300 ಮತ್ತು ಅದಕ್ಕಿಂತ ಹೆಚ್ಚಿನ ಟಿ 20 ವಿಕೆಟ್ ಪಡೆದ ಇತರ ಭಾರತೀಯ ಬೌಲರ್​ಗಳು. ಚಾವ್ಲಾ 310 ವಿಕೆಟ್ ಪಡೆದರೆ, ಅಶ್ವಿನ್ 306 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ 297 ವಿಕೆಟ್​ಗಳೊಂಇಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಅಮಿತ್ ಮಿಶ್ರಾ 285 ಟಿ 20 ವಿಕೆಟ್​​ಗಳನ್ನು ಪಡೆದಿದ್ದಾರೆ.

ಟಿ20 ಕ್ರಿಕೆಟ್​ಬಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಸಾಧನೆಗಳು

  • ಯಜುವೇಂದ್ರ ಚಾಹಲ್: 350 ವಿಕೆಟ್​
  • ಪಿಯೂಷ್ ಚಾವ್ಲಾ: 310 ವಿಕೆಟ್​
  • ರವಿಚಂದ್ರನ್ ಅಶ್ವಿನ್: 306 ವಿಕೆಟ್​
  • ಭುವನೇಶ್ವರ್ ಕುಮಾರ್: 297 ವಿಕೆಟ್​
  • ಅಮಿತ್ ಮಿಶ್ರಾ: 285 ವಿಕೆಟ್​

ವೆಸ್ಟ್ ಇಂಡೀಸ್​ನ ಮಾಜಿ ಆಲ್ರೌಂಡರ್ ಡ್ವೇನ್ ಬ್ರಾವೋ 625 ವಿಕೆಟ್​​ಗಳನ್ನು ಕಬಳಿಸುವ ಮೂಲಕ ಟಿ20 ಕ್ರಿಕೆಟ್​​ಗೆ ತೆರೆ ಎಳೆದಿದ್ದಾರೆ. ವಿಶ್ವದ ಬೇರೆ ಯಾವುದೇ ಬೌಲರ್ ಇದುವರೆಗೆ 600 ವಿಕೆಟ್​ಗಳ ಗಡಿ ಮುಟ್ಟಲು ಸಾಧ್ಯವಾಗಿಲ್ಲ.

ಅಫ್ಘಾನಿಸ್ತಾನದ ಸೂಪರ್ ಸ್ಟಾರ್ ರಶೀದ್ ಖಾನ್ 572 ವಿಕೆಟ್​ಗಳೊಂಇಎಗ ಅತಿ ಹೆಚ್ಚು ಟಿ 20 ವಿಕೆಟ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಸುನಿಲ್ ನರೈನ್ 549 ವಿಕೆಟ್​ಗಳನ್ನು ಪಡೆದಿದ್ದಾರೆ. ಇಮ್ರಾನ್ ತಾಹಿರ್ (502) ಮತ್ತು ಶಕೀಬ್ ಅಲ್ ಹಸನ್ (482) ಮೊದಲ ಐದು ಸ್ಥಾನಗಳಲ್ಲಿದ್ದಾರೆ.

ಇದನ್ನೂ ಓದಿ:IPL 2024 : ಅಭಿಮಾನಿಯ 80 ಸಾವಿರ ರೂಪಾಯಿ ಮೊಬೈಲ್​ ಒಡೆದು ಹಾಕಿದ ಚೆನ್ನೈ ಸ್ಟಾರ್​; ಇಲ್ಲಿದೆ ವಿಡಿಯೊ

ಐಪಿಎಲ್​ನಲ್ಲಿ ಚಹಲ್ ಸಾಧನೆ

ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಯಜುವೇಂದ್ರ ಚಾಹಲ್ ಪಾತ್ರರಾಗಿದ್ದಾರೆ. ಕಳೆದ ತಿಂಗಳು ಜೈಪುರದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ನಬಿ ಅವರನ್ನು ಔಟ್ ಮಾಡುವ ಮೂಲಕ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.

ಚಹಲ್ ಈ ಋತುವಿನಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಈವರೆಗೆ 11 ಪಂದ್ಯಗಳನ್ನಾಡಿರುವ ಅವರು 14 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಋತುವಿನಲ್ಲಿ ಅವರ ಉತ್ತಮ ಪ್ರದರ್ಶನವು ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಹಾಯ ಮಾಡಿತು.

Continue Reading
Advertisement
IPL 2024
ಕ್ರೀಡೆ22 mins ago

IPL 2024: ಅಂಪೈರ್​ ಜತೆ ವಾಗ್ವಾದ; ಸಂಜುಗೆ ಬಿತ್ತು ಭಾರೀ ದಂಡ

gold rate today tapasi
ಚಿನ್ನದ ದರ43 mins ago

Gold Rate today: ಇದು ಚಿನ್ನದಂಥಾ ವಿಷಯ! ಬಂಗಾರದ ಬೆಲೆ ತುಸು ಇಳಿಕೆ; ಎಷ್ಟಿದೆ ಇಂದು?

IPL 2024 Points Table
ಕ್ರಿಕೆಟ್59 mins ago

IPL 2024 Points Table: ಡೆಲ್ಲಿಗೆ ಗೆಲುವು ಅಂಕಪಟ್ಟಿಯಲ್ಲಿ ಕುಸಿತ ಕಂಡ ಲಕ್ನೋ

sam pitroda pm narendra modi
ಪ್ರಮುಖ ಸುದ್ದಿ1 hour ago

PM Narendra Modi: “ಚರ್ಮದ ಬಣ್ಣದ ಮೇಲಿನ ಈ ಅವಮಾನವನ್ನು ಸಹಿಸುವುದಿಲ್ಲ…” ಪಿತ್ರೋಡಾಗೆ ಮೋದಿ ತಪರಾಕಿ

ವೈರಲ್ ನ್ಯೂಸ್1 hour ago

Viral Video: ಅಬ್ಬಾ.. ಎಂಥಾ ಭೀಕರ ದೃಶ್ಯ! ಕರೆಂಟ್‌ ಶಾಕ್‌ ಹೊಡೆದು ವ್ಯಕ್ತಿ ಒದ್ದಾಡಿ ಸಾವು

Double Murder Fakirappa stabs brothers to death for falling behind daughter
ಕ್ರೈಂ1 hour ago

Double Murder: ಮಗಳ ಹಿಂದೆ ಬಿದ್ದಿದ್ದಕ್ಕೆ ಸಹೋದರರನ್ನೇ ಚಾಕುವಿನಿಂದ ಇರಿದು ಕೊಂದ ಫಕೀರಪ್ಪ!

SSLC Exam Result 2024 to be declared tomorrow Here are the details
ಶಿಕ್ಷಣ2 hours ago

SSLC Exam Result 2024: ನಾಳೆ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಪ್ರಕಟ; ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು? ಇಲ್ಲಿದೆ ಡಿಟೇಲ್ಸ್‌

Srinidhi Shetty Attends Daiva Kola Festivities in Mangalore
ಸ್ಯಾಂಡಲ್ ವುಡ್2 hours ago

Srinidhi Shetty: ಕೋಲ ಸೇವೆ ಸಲ್ಲಿಸಿದ ಕೆಜಿಎಫ್‌ ಬೆಡಗಿ; ಶ್ರೀನಿಧಿ ಶೆಟ್ಟಿಗೆ ದೈವ ಅಭಯ ನೀಡಿದ್ದೇನು?

Pepper spray
ಕರ್ನಾಟಕ2 hours ago

Pepper Spray: ಪೆಪ್ಪರ್‌ ಸ್ಪ್ರೇ ಬಹಳ ಡೇಂಜರ್‌..ಅದನ್ನು ರಕ್ಷಣೆಗೆ ಬಳಸುವಂತಿಲ್ಲ- ಹೈಕೋರ್ಟ್‌

Prajwal Revanna Case Will resign says DK Shivakumar and slams HD Kumaraswamy
ರಾಜಕೀಯ2 hours ago

Prajwal Revanna Case: ಒಕ್ಕಲಿಗ ನಾಯಕರ ಪೈಪೋಟಿಯಂತೆ, ರಾಜೀನಾಮೆ ಬೇಕಂತೆ; ಕೊಡ್ತೇನೆ ಅಂದ್ರ ಡಿಕೆಶಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ18 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ21 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ23 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌