Deepika Das And Chris Gayle: ಕ್ರಿಕೆಟಿಗ ಕ್ರಿಸ್​ ಗೇಲ್​ ಭೇಟಿಯಾದ ಬಿಗ್​ ಬಾಸ್​ ಸ್ಪರ್ಧಿ ದೀಪಿಕಾ ದಾಸ್ - Vistara News

ಕ್ರಿಕೆಟ್

Deepika Das And Chris Gayle: ಕ್ರಿಕೆಟಿಗ ಕ್ರಿಸ್​ ಗೇಲ್​ ಭೇಟಿಯಾದ ಬಿಗ್​ ಬಾಸ್​ ಸ್ಪರ್ಧಿ ದೀಪಿಕಾ ದಾಸ್

ದುಬೈಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ವೆಸ್ಟ್​ ಇಂಡೀಸ್​ ಕ್ರಿಕೆಟಿಗ ಕ್ರಿಸ್​ ಗೇಲ್​ ಜತೆ ಬಿಗ್​ ಬಾಸ್(bigg boss)​ ಸ್ಪರ್ಧಿ ದೀಪಿಕಾ ದಾಸ್ ಫೋಟೊ ಕ್ಲಿಕ್ಕಿಸಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Chris Gayle
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ: ಕಿರುತೆರೆ ನಟಿ, ಬಿಗ್​ ಬಾಸ್(bigg boss)​ ಸ್ಪರ್ಧಿ ದೀಪಿಕಾ ದಾಸ್(Deepika Das)​ ಅವರು ಯೂನಿವರ್ಸ್​ ಬಾಸ್​ ಖ್ಯಾತಿಯ ವಿಂಡೀಸ್​ ಕ್ರಿಕೆಟಿಗ ಕ್ರಿಸ್​ ಗೇಲ್(Chris Gayle)​​ ಅವರನ್ನು ಭೇಟಿ ಮಾಡಿ ಫೋಟೊ ಕ್ಲಿಕ್ಕಿಸಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದಾ ಆಕರ್ಷಕ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳಲ್ಲಿ ಕಾಣಿಸಿಕೊಳ್ಳುವ ಕಿರುತೆರೆ ನಟಿ ದೀಪಿಕಾ ದಾಸ್‌ ಈ ಬಾರಿ ಗೆಳೆಯರ ಜತೆ ದುಬೈಯಲ್ಲಿ ಮೋಜು ಮಸ್ತಿ ಮೂಲಕ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ ಕ್ರಿಸ್​ ಗೇಲ್​ ಅವರನ್ನು ಪಾರ್ಟಿಯೊಂದರಲ್ಲಿ ಭೇಟಿ ಮಾಡಿದ ಅವರು, ಗೇಲ್ ಜತೆ ಫೋಟೊ ತೆಗೆದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕ್ರಿಸ್​ ಗೇಲ್​ ಜತೆ ಫೋಟೊ ಹಂಚಿಕೊಂಡಿರುವ ದೀಪಿಕಾ ದಾಸ್​ ‘ಇದು ಗೇಲ್​ ಕ್ಷಣ​, ಅತ್ಯಂತ ಅನಿರೀಕ್ಷಿತ ಭೇಟಿ, ನಮ್ಮ ಆರ್​ಸಿಬಿಯ ದಿನಗಳನ್ನು ನೆನಪಿಸಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Star Fashion: ಸ್ಟೈಲಿಶ್‌ ಕಿರುತೆರೆ ನಟಿ ದೀಪಿಕಾ ದಾಸ್‌ ಬಿಂದಾಸ್‌ ಫ್ಯಾಷನ್‌ಗೆ ಅಭಿಮಾನಿಗಳು ಫಿದಾ

ನಾಗಿಣಿ ಸೀರಿಯಲ್‌ ಹಾಗೂ ಬಿಗ್‌ಬಾಸ್‌ನಲ್ಲಿ ಪಾಲ್ಗೊಂಡ ನಂತರ ದೀಪಿಕಾ ದಾಸ್‌ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಯಾವುದೇ ಇವೆಂಟ್‌ಗಳಾಗಲಿ, ಸಮಾರಂಭಗಳಾಗಲಿ ಆಕರ್ಷಕವಾಗಿ ಕಾಣಿಸಿಕೊಳ್ಳುವ ದೀಪಿಕಾ ದಾಸ್‌ ಸಖತ್‌ ಫ್ಯಾಷೆನಬಲ್‌ ನಟಿ. ಆಯಾ ಸಂದರ್ಭಕ್ಕೆ ತಕ್ಕಂತೆ ಔಟ್‌ಫಿಟ್‌ ಧರಿಸುವ ಕಿರುತೆರೆ ನಟಿಯರ ಪೈಕಿ ಇವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Virat Kohli : ಅಭ್ಯಾಸದ ಮಧ್ಯೆ ಮೊಬೈಲ್​ನಲ್ಲೇ ಡೆಲ್ಲಿ ವರ್ಸಸ್​​ ಮುಂಬೈ ಮ್ಯಾಚ್ ನೋಡಿದ ಕೊಹ್ಲಿ

Virat kohli: ಗುಜರಾತ್ ಜೈಂಟ್ಸ್ ವಿರುದ್ಧದ ಆರ್​ಸಿಬಿ ಪಂದ್ಯದ ಹಿನ್ನೆಲೆಯಲ್ಲಿ ಕೊಹ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅದರ ನಡುವೆಯೂ ಅವರು ಮೊಬೈಲ್​ನಲ್ಲಿ ಮ್ಯಾಚ್ ನೋಡಿ ಖುಷಿ ಪಟ್ಟಿದ್ದಾರೆ. ಆರ್​ಸಿಬಿಯ ತರಬೇತಿ ಅವಧಿಗೆ ಮುಂಚಿತವಾಗಿ ಕ್ರಿಕೆಟಿಗ ಊಟ ಮಾಡುತ್ತಿದ್ದಾಗಲೂ ಆಟವನ್ನು ವೀಕ್ಷಿಸುತ್ತಿದ್ದರು. ಹೋಟೆಲ್​​ನಲ್ಲಿ ಹಾದು ಹೋಗಿರುವ ವ್ಯಕ್ತಿಯೊಬ್ಬರು ಅದನ್ನು ರೆಕಾರ್ಡ್ ಮಾಡಿದ್ದಾರೆ.

VISTARANEWS.COM


on

virat kohli
Koo

ಅಹಮದಾಬಾದ್: ಐಪಿಎಲ್ 2024ರ (IPL 2024) 43 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲಿಸಿದೆ. ಈ ಪಂದ್ಯ ಸಿಕ್ಕಾಪಟ್ಟೆ ಕುತೂಹಲಕಾರಿಯಾಗಿತ್ತು. ಅಂತೆಯೇ ಅರ್​ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ((Virat Kohli) ) ಏಪ್ರಿಲ್ 27ರಂದು ತಂಡದ ಹೋಟೆಲ್​ನಲ್ಲಿ ಇರುವಾಗಲೇ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಗುಜರಾತ್ ಜೈಂಟ್ಸ್ ವಿರುದ್ಧದ ಆರ್​ಸಿಬಿ ಪಂದ್ಯದ ಹಿನ್ನೆಲೆಯಲ್ಲಿ ಕೊಹ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅದರ ನಡುವೆಯೂ ಅವರು ಮೊಬೈಲ್​ನಲ್ಲಿ ಮ್ಯಾಚ್ ನೋಡಿ ಖುಷಿ ಪಟ್ಟಿದ್ದಾರೆ. ಆರ್​ಸಿಬಿಯ ತರಬೇತಿ ಅವಧಿಗೆ ಮುಂಚಿತವಾಗಿ ಕ್ರಿಕೆಟಿಗ ಊಟ ಮಾಡುತ್ತಿದ್ದಾಗಲೂ ಆಟವನ್ನು ವೀಕ್ಷಿಸುತ್ತಿದ್ದರು. ಹೋಟೆಲ್​​ನಲ್ಲಿ ಹಾದು ಹೋಗಿರುವ ವ್ಯಕ್ತಿಯೊಬ್ಬರು ಅದನ್ನು ರೆಕಾರ್ಡ್ ಮಾಡಿದ್ದಾರೆ. ಏಪ್ರಿಲ್ 25 ರಂದು ಹೈದರಾಬಾದ್​ನಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ (ಎಸ್​ಆರ್​​ಎಚ್​​) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸಿದ್ದರು.

ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ

ಬೆಂಗಳೂರು: ಮುಂಬರುವ ಐಪಿಎಲ್ 2024 ರಲ್ಲಿ (IPL 2024) ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಇತರ ಆಟಗಾರರು ಅಹಮದಾಬಾದ್​ಗೆ ಆಗಮಿಸಿದ್ದಾರೆ. ಬಹುನಿರೀಕ್ಷಿತ ಮುಖಾಮುಖಿಗೆ ಒಂದು ದಿನ ಮೊದಲು ಬಂದ ಆರ್​ಸಿಬಿ ಪಡೆಗಳಿಗೆ ತಂಡದ ಹೋಟೆಟ್​ನಲ್ಲಿ ಭವ್ಯ ಸ್ವಾಗತ ದೊರೆಯಿತು.


ಹೋಟೆಲ್​ನಲ್ಲಿ ಸಿಕ್ಕಿರುತ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದವರಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಅದರ ತುಣುಕುಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: IPL 2024 : ದೊಡ್ಡ ಮೊತ್ತದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿಗೆ 10 ರನ್ ಜಯ

ವಿರಾಟ್ ಕೊಹ್ಲಿ ಏಪ್ರಿಲ್ 28 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದೊಂದಿಗೆ ಆರ್​ಸಿಬಿ ಫ್ರಾಂಚೈಸಿಗಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಸ್ಪರ್ಧೆಗೆ ಒಂದು ದಿನ ಮುಂಚಿತವಾಗಿ ಅವರು ಮತ್ತು ಅವರ ಉಳಿದ ಆಟಗಾರರ ಜತೆ ಹೋಟೆಲ್​ಗೆ ಆಗಮಿಸಿದರು. ಈ ಮೂಲಕ ಅವರು ಅಹಮದಾಬಾದ್​ನಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಿಕೊಂಡರು.

ಐಪಿಎಲ್ 2024 ರ ಸ್ಟಾರ್ ಆಕರ್ಷಣೆಗಳಲ್ಲಿ ಒಬ್ಬರಾದ ಕೊಹ್ಲಿ ಏಪ್ರಿಲ್ 27 ರಂದು ತಂಡದ ಹೋಟೆಲ್​ಗೆ ಹೋಗುವ ವೇಳೆ ಭವ್ಯ ಸ್ವಾಗತ ಪಡೆದರು.

ಆರೆಂಜ್ ಕ್ಯಾಪ್ ವೀರ ಕೊಹ್ಲಿ

ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ 2024 ರ ಋತುವಿನಲ್ಲಿ ‘ಆರೆಂಜ್ ಕ್ಯಾಪ್’ ಹೊಂದಿದ್ದಾರೆ. ಕ್ರಿಕೆಟಿಗ ಈಗಾಗಲೇ ಕೇವಲ ಒಂಬತ್ತು ಇನಿಂಂಗ್ಸ್​​​ಗಳಲ್ಲಿ 61 ಕ್ಕೂ ಹೆಚ್ಚು ಸರಾಸರಿಯಲ್ಲಿ 430 ರನ್ ಗಳಿಸಿದ್ದಾರೆ/ ಎರಡನೇ ಸ್ಥಾನದಲ್ಲಿರುವ ಸುನಿಲ್ ನರೈನ್ ಅವರನ್ನು 73 ರನ್​ಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ.
ಕೊಹ್ಲಿ ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ ಎಸ್ಆರ್​​ಎಚ್​ ತಂಡದ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಈ ಗೆಲುವು ಒಂದು ತಿಂಗಳಲ್ಲಿ ಆರ್​ಸಿಬಿಯ ಮೊದಲ ಗೆಲುವು ಮತ್ತು ಋತುವಿನ ಒಟ್ಟಾರೆ ಎರಡನೇ ಗೆಲುವು.

ಒಂಬತ್ತು ಲೀಗ್ ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳನ್ನು ಗಳಿಸಿರುವ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ಗುಂಪು ಐಪಿಎಲ್ 2024 ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಏಣಿಯನ್ನು ಏರುವ ಪ್ರಯತ್ನದಲ್ಲಿ ಅವರು ಪಂದ್ಯಾವಳಿಯ ಈ ಹಂತದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಬೇಕಾಗಿದೆ.

Continue Reading

ಕ್ರೀಡೆ

IPL 2024 : ದೊಡ್ಡ ಮೊತ್ತದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿಗೆ 10 ರನ್ ಜಯ

IPL 2024: ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಬಳಗ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ಗೆ 257 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ ನಷ್ಟಕ್ಕೆ 247 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

IPL 2024
Koo

ನವ ದೆಹಲಿ: ಮತ್ತೊಂದು ದೊಡ್ಡ ಮೊತ್ತದ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬಯಿ ಇಂಡಿಯನ್ಸ್ ವಿರುದ್ಧ. 10 ರನ್​ಗಳ ವಿಜಯ ದೊರಕಿದೆ. ಎರಡೂ ತಂಡಗಳು ಗೆಲುವಿಗಾಗಿ ಕೊನೇ ಕ್ಷಣದ ತನಕ ಹೋರಾಡಿದ್ದು ಹಲವು ಸೋಲಿನ ಬಳಿಕ ಪುಟಿದೆದ್ದಿರುವ ಡೆಲ್ಲಿ ತಂಡ ಪಾಂಡ್ಯ ಬಳಗಕ್ಕೆ ಗೆಲುವು ನಿಕರಾಕರಿಸಿದೆ. ಈ ಮೂಲಕ ಮುಂಬೈ ತಂಡದ ಸೋಲಿನ ಬವಣೆ ಮುಂದುವರಿದಿದ್ದು ಹಾಲಿ ಆವೃತ್ತಿಯಲ್ಲಿ 9ನೇ ಪರಾಜಯಕ್ಕೆ ಒಳಗಾಗಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ಗೆಲುವನ್ನು ತನ್ನದಾಗಿಸಿಕೊಂಡು ಒಟ್ಟು 10 ಅಂಕಗಳನ್ನು ಪಡೆದುಕೊಂಡಿದ್ದು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಇದೇ ವೇಳೆ ಮುಂಬಯಿ ಇಂಡಿಯನ್ಸ್​ ಬಳಗ ಕೇವಲ 6 ಅಂಕಗಳೊಂದಿಗೆ 9ನೇ ಸ್ಥಾನವನ್ನು ಪಡೆದುಕೊಂಡಿತು.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಬಳಗ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ಗೆ 257 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ ನಷ್ಟಕ್ಕೆ 247 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಮುಂಬಯಿ ಭರ್ಜರಿ ಹೋರಾಟ

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಮುಂಬೈ ತಂಡಕ್ಕೆ ಅದಕ್ಕೆ ಪೂರಕವಾಗಿರುವ ಆರಂಭ ದೊರಕಲಿಲ್ಲ. ರೋಹಿತ್ ಶರ್ಮಾ 8 ರನ್​ಗೆ ಔಟಾದರೆ ಇಶಾನ್ ಕಿಶನ್​ 20 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. 45 ರನ್​ಗೆ 2 ವಿಕೆಟ್​ ನಷ್ಟ ಮಾಡಿಕೊಂಡ ಮುಂಬೈಗೆ ಆತಂಕ ಎದುರಾಯಿತು. ಈ ವೇಳೆ ಆಡಲು ಬಂದ ಸೂರ್ಯಕುಮಾರ್ ಯಾದವ್​ 13 ಎಸೆತಕ್ಕೆ 26 ರನ್ ಬಾರಿಸಿ ಮಿಂಚುವ ಸೂಚನೆ ಕೊಟ್ಟರು. ಆದರೆ ಸೂರ್ಯನ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಆದರೆ, ಮತ್ತೊಂದು ಬದಿಯಲ್ಲಿ ತಿಲಕ್ ವರ್ಮಾ ಗಟ್ಟಿಯಾಗಿ ನಿಂತು ಡೆಲ್ಲಿ ಬೌಲರ್​ಗಳನ್ನು ದಂಡಿಸಿದರು. ಅದೇ ರೀತಿ ಹಾಲಿ ಆವೃತ್ತಿಯಲ್ಲಿ ಮೊದಲ ಬ್ಯಾರಿಗೆ ಬ್ಯಾಟಿಂಗ್​ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ 24 ಎಸೆತಕ್ಕೆ 46 ರನ್ ಬಾರಿಸಿದರು.

ನಂತರ ಬಂದ ನೇಹಲ್ ವದೇರಾ 4 ರನ್​ಗೆ ಔಟಾದಾಗ ಮತ್ತೆ ಮುಂಬೈಗೆ ಭಯ ಶುರುವಾಯಿತು. ಆದೆರ, ಟಿಮ್ ಡೇವಿಡ್ 17 ಎಸೆತಕ್ಕೆ 37 ರನ್ ಬಾರಿಸ ಗೆಲುವಿನ ಸನಿಹಕ್ಕೆ ಬರಲು ನೆರವಾದರು. ಡೆಲ್ಲಿ ಪರ ರಸಿಕ್​ ಸಲಾಂ ಹಾಗೂ ಮುಖೇಶ್ ಕುಮಾರ್​ ತಲಾ 3 ವಿಕೆಟ್​ ಉರುಳಿಸಿ ತಂಡ ಗೆಲುವಿಗೆ ನೆರವಾದರು.

ಇದನ್ನೂ ಓದಿ: IPL 2024 : ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ; ವಿಡಿಯೊ ಇದೆ

ಮೆಗ್​ಕುರ್ಕ್​ ಭರ್ಜರಿ ಬ್ಯಾಟಿಂಗ್​

ಗೆಲುವಿನೊಂದಿಗೆ ಚೈತನ್ಯ ಪಡೆದುಕೊಂಡಿದ್ದ ಡೆಲ್ಲಿ ತಂಡ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಜೇಕ್​ ಫೇಸರ್​ ಮೆಕ್​ಗುರ್ಕ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 27 ಎಸೆತಕ್ಕೆ 84 ರನ್ ಬಾರಿಸಿ ಮಿಂಚಿದರು. ಅವರು ಅಭಿಷೇಕ್ ಪೊರೆಲ್​ (36 ರನ್​) ಜತೆಗೂಡಿ 114 ರನ್ ಬಾರಿಸಿ ಮಿಂಚಿದರು. ಶಾಯ್​ ಹೋಪ್​ 17 ಎಸೆತಕ್ಕೆ 41 ರನ್ ಬಾರಿಸಿ ಮಿಂಚಿದ್ದಾರೆ. ರಿಷಭ್ ಪಂತ್​ 29 ರನ್ ಬಾರಿಸಿ ಮಿಂಚಿದರೆ ಟ್ರಿಸ್ಟಾನ್ 25 ಎಸೆತಕ್ಕೆ 48 ರನ್ ಬಾರಿಸಿದರು.

Continue Reading

ಪ್ರಮುಖ ಸುದ್ದಿ

IPL 2024 : ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ; ವಿಡಿಯೊ ಇದೆ

IPL 2024: ವಿರಾಟ್ ಕೊಹ್ಲಿ ಏಪ್ರಿಲ್ 28 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದೊಂದಿಗೆ ಆರ್​ಸಿಬಿ ಫ್ರಾಂಚೈಸಿಗಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಸ್ಪರ್ಧೆಗೆ ಒಂದು ದಿನ ಮುಂಚಿತವಾಗಿ ಅವರು ಮತ್ತು ಅವರ ಉಳಿದ ಆಟಗಾರರ ಜತೆ ಹೋಟೆಲ್​ಗೆ ಆಗಮಿಸಿದರು. ಈ ಮೂಲಕ ಅವರು ಅಹಮದಾಬಾದ್​ನಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಿಕೊಂಡರು.

VISTARANEWS.COM


on

Virat Kohli
Koo

ಬೆಂಗಳೂರು: ಮುಂಬರುವ ಐಪಿಎಲ್ 2024 ರಲ್ಲಿ (IPL 2024) ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಇತರ ಆಟಗಾರರು ಅಹಮದಾಬಾದ್​ಗೆ ಆಗಮಿಸಿದ್ದಾರೆ. ಬಹುನಿರೀಕ್ಷಿತ ಮುಖಾಮುಖಿಗೆ ಒಂದು ದಿನ ಮೊದಲು ಬಂದ ಆರ್​ಸಿಬಿ ಪಡೆಗಳಿಗೆ ತಂಡದ ಹೋಟೆಟ್​ನಲ್ಲಿ ಭವ್ಯ ಸ್ವಾಗತ ದೊರೆಯಿತು.

ಹೋಟೆಲ್​ನಲ್ಲಿ ಸಿಕ್ಕಿರುತ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದವರಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಅದರ ತುಣುಕುಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ವಿರಾಟ್ ಕೊಹ್ಲಿ ಏಪ್ರಿಲ್ 28 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದೊಂದಿಗೆ ಆರ್​ಸಿಬಿ ಫ್ರಾಂಚೈಸಿಗಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಸ್ಪರ್ಧೆಗೆ ಒಂದು ದಿನ ಮುಂಚಿತವಾಗಿ ಅವರು ಮತ್ತು ಅವರ ಉಳಿದ ಆಟಗಾರರ ಜತೆ ಹೋಟೆಲ್​ಗೆ ಆಗಮಿಸಿದರು. ಈ ಮೂಲಕ ಅವರು ಅಹಮದಾಬಾದ್​ನಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಿಕೊಂಡರು.

ಐಪಿಎಲ್ 2024 ರ ಸ್ಟಾರ್ ಆಕರ್ಷಣೆಗಳಲ್ಲಿ ಒಬ್ಬರಾದ ಕೊಹ್ಲಿ ಏಪ್ರಿಲ್ 27 ರಂದು ತಂಡದ ಹೋಟೆಲ್​ಗೆ ಹೋಗುವ ವೇಳೆ ಭವ್ಯ ಸ್ವಾಗತ ಪಡೆದರು.

ಆರೆಂಜ್ ಕ್ಯಾಪ್ ವೀರ ಕೊಹ್ಲಿ

ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ 2024 ರ ಋತುವಿನಲ್ಲಿ ‘ಆರೆಂಜ್ ಕ್ಯಾಪ್’ ಹೊಂದಿದ್ದಾರೆ. ಕ್ರಿಕೆಟಿಗ ಈಗಾಗಲೇ ಕೇವಲ ಒಂಬತ್ತು ಇನಿಂಂಗ್ಸ್​​​ಗಳಲ್ಲಿ 61 ಕ್ಕೂ ಹೆಚ್ಚು ಸರಾಸರಿಯಲ್ಲಿ 430 ರನ್ ಗಳಿಸಿದ್ದಾರೆ/ ಎರಡನೇ ಸ್ಥಾನದಲ್ಲಿರುವ ಸುನಿಲ್ ನರೈನ್ ಅವರನ್ನು 73 ರನ್​ಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: IPL 2024 : ಪಂದ್ಯದ ನಡುವೆ ಮೈದಾನದಲ್ಲೇ ಗಾಳಿಪಟ ಹಾರಿಸಿದ ಪಂತ್​, ರೋಹಿತ್! ಇಲ್ಲಿದೆ ವಿಡಿಯೊ

ಕೊಹ್ಲಿ ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ ಎಸ್ಆರ್​​ಎಚ್​ ತಂಡದ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಈ ಗೆಲುವು ಒಂದು ತಿಂಗಳಲ್ಲಿ ಆರ್​ಸಿಬಿಯ ಮೊದಲ ಗೆಲುವು ಮತ್ತು ಋತುವಿನ ಒಟ್ಟಾರೆ ಎರಡನೇ ಗೆಲುವು.

ಒಂಬತ್ತು ಲೀಗ್ ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳನ್ನು ಗಳಿಸಿರುವ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ಗುಂಪು ಐಪಿಎಲ್ 2024 ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಏಣಿಯನ್ನು ಏರುವ ಪ್ರಯತ್ನದಲ್ಲಿ ಅವರು ಪಂದ್ಯಾವಳಿಯ ಈ ಹಂತದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಬೇಕಾಗಿದೆ.

Continue Reading

ಕ್ರೀಡೆ

IPL 2024 : ಪಂದ್ಯದ ನಡುವೆ ಮೈದಾನದಲ್ಲೇ ಗಾಳಿಪಟ ಹಾರಿಸಿದ ಪಂತ್​, ರೋಹಿತ್! ಇಲ್ಲಿದೆ ವಿಡಿಯೊ

IPL 2024: ರಿಷಭ್ ಪಂತ್ ಮತ್ತು ಅವರ ತಂಡದ ವಿರುದ್ಧ 258 ರನ್​ಗಳ ಬೃಹತ್ ಗುರಿ ಬೆನ್ನಟ್ಟಲು ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಮುಂಬಯಿ ಪರ ಆಡಲು ಬಂದಾಗ ಈ ಘಟನೆ ಸಂಭವಿಸಿದೆ. ಮೊದಲ ಓವರ್​ನಲ್ಲಿ ಲಿಜಾದ್ ವಿಲಿಯಮ್ಸ್ ಬೌಲಿಂಗ್ ಮಾಡುತ್ತಿದ್ದಾಗ, ಎಲ್ಲಿಂದಲೋ ಗಾಳಿಪಟ ಹಾರಿ ಬಂತು. ರೋಹಿತ್ ಅದನ್ನು ಎತ್ತಿಕೊಂಡು ರಿಷಭ್ ಪಂತ್​ಗೆ ನೀಡಿದರು, ಅವರು ಅದನ್ನು ಲೆಗ್ ಅಂಪೈರ್ ನೀಡುವ ಮೂಲಕ ಅದನ್ನು ಹೊರಕ್ಕ ಕಳುಹಿಸಿದರು. ಇದು ಅವರಿಬ್ಬರೂ ಗಾಳಿಪಟ ಆಡುತ್ತಿದ್ದಾರೆ ಎಂಬಂತ ಸಂದರ್ಭವನ್ನು ಸೃಷ್ಟಿಸಿತು.

VISTARANEWS.COM


on

ipl 2024
Koo

ಬೆಂಗಳೂರು: ಐಪಿಎಲ್​ ಪಂದ್ಯ ನಡೆಯುವ ಕ್ರಿಕೆಟ್ ಮೈದಾನಗಳು ಗುಣಮಟ್ಟದ ಬ್ಯಾಟಿಂಗ್ ಮತ್ತು ಅದ್ಭುತ ಬೌಲಿಂಗ್​ಗಾಗಿ ಬೆರಗುಗೊಳಿಸುತ್ತವೆ. ಆದರೆ ಕೆಲವೊಮ್ಮೆ, ಬೇರೆ ಖುಷಿಯೂ ಸಿಗುತ್ತಿರುತ್ತವೆ. ಎಲ್ಲಿಂದಲೂ ಉಂಟಾಗುವ ಸಮಸ್ಯೆಗಳು ನೋಡುಗರ ಪಾಲಿಗೆ ಖುಷಿಯ ವಿಷಯವಾಗುತ್ತದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶನಿವಾರ ಮಧ್ಯಾಹ್ನ ನಡೆದ ಐಪಿಎಲ್ 2024 ರ (IPL 2024) 43ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇದೇ ರೀತಿಯ ಘಟನೆ ನಡೆಯಿತು. ಗಾಳಿಪವೊಂದು ತೂರಿಕೊಂಡು ಬಂದು ಮೈದಾನಕ್ಕೆ ಬಿದ್ದ ಬಳಿಕ ನಡೆದ ಈ ಪ್ರಸಂಗ ನೆಟ್ಟಿಗರ ಗಮನ ಸೆಳೆಯಿತು.

ರಿಷಭ್ ಪಂತ್ ಮತ್ತು ಅವರ ತಂಡದ ವಿರುದ್ಧ 258 ರನ್​ಗಳ ಬೃಹತ್ ಗುರಿ ಬೆನ್ನಟ್ಟಲು ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಮುಂಬಯಿ ಪರ ಆಡಲು ಬಂದಾಗ ಈ ಘಟನೆ ಸಂಭವಿಸಿದೆ. ಮೊದಲ ಓವರ್​ನಲ್ಲಿ ಲಿಜಾದ್ ವಿಲಿಯಮ್ಸ್ ಬೌಲಿಂಗ್ ಮಾಡುತ್ತಿದ್ದಾಗ, ಎಲ್ಲಿಂದಲೋ ಗಾಳಿಪಟ ಹಾರಿ ಬಂತು. ರೋಹಿತ್ ಅದನ್ನು ಎತ್ತಿಕೊಂಡು ರಿಷಭ್ ಪಂತ್​ಗೆ ನೀಡಿದರು, ಅವರು ಅದನ್ನು ಲೆಗ್ ಅಂಪೈರ್ ನೀಡುವ ಮೂಲಕ ಅದನ್ನು ಹೊರಕ್ಕ ಕಳುಹಿಸಿದರು. ಇದು ಅವರಿಬ್ಬರೂ ಗಾಳಿಪಟ ಆಡುತ್ತಿದ್ದಾರೆ ಎಂಬಂತ ಸಂದರ್ಭವನ್ನು ಸೃಷ್ಟಿಸಿತು.

ಇದಕ್ಕೂ ಮುನ್ನ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿದ್ದು, ಜೇಕ್ ಫ್ರೇಸರ್-ಮೆಕ್ಗುರ್ಕ್ 27 ಎಸೆತಗಳಲ್ಲಿ 84 ರನ್ ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಟ್ರಿಸ್ಟಾನ್ ಸ್ಟಬ್ಸ್, ಶಾಯ್ ಹೋಪ್ ಮತ್ತು ಪಂತ್ ಉತ್ತಮ ಕೊಡುಗೆ ನೀಡಿ ತಂಡವನ್ನು 250 ರನ್​ಗಳ ಗಡಿ ದಾಟಿಸಿದರು.

ಇಶಾನ್​ ಕಿಶನ್ ಕಳಪೆ ಆಟ ಮುಂದುವರಿಕೆ

ಇಶಾನ್ ಕಿಶನ್ ಭಾರತೀಯ ಕ್ರಿಕೆಟ್​​ನ ಅತ್ಯಂತ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟರ್​ಗಳಲ್ಲಿ ಒಬ್ಬರು. ಆದರೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಫಾರ್ಮ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಡಿರುವ 9 ಪಂದ್ಯಗಳಲ್ಲಿ 23.56ರ ಸರಾಸರಿಯಲ್ಲಿ ಕೇವಲ 212 ರನ್ ಗಳಿಸಿದ್ದಾರೆ. ಡಿಸಿ ಮತ್ತು ಎಂಐ ನಡುವಿನ ಋತುವಿನ 43 ನೇ ಪಂದ್ಯದಲ್ಲಿ, ಅವರು ಮತ್ತೊಮ್ಮೆ ಪ್ರದರ್ಶನ ನೀಡಲು ವಿಫಲರಾದರು ಮತ್ತು ಕೇವಲ 14 ಎಸೆತಗಳಲ್ಲಿ 20 ರನ್ ಗಳಿಸಿ ನಿರ್ಗಮಿಸಿದರು.

ಇದನ್ನೂ ಓದಿ: IPL 2024 : ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ಸಿಎಸ್​ಕೆ?

ಐದನೇ ಓವರ್ನ ಮೊದಲ ಎಸೆತದಲ್ಲಿ ಅವರು ಔಟಅದರು. ಅದು ಮುಖೇಶ್ ಕುಮಾರ್ ಅವರ ಬ್ಯಾಕ್ ಆಫ್ ಲೆಂಗ್ತ್ ಎಸೆತವಾಗಿತ್ತು. ಇಶಾನ್ ಕಿಶನ್ ಸ್ವಲ್ಪ ಸ್ಥಳಾವಕಾಶ ಕಲ್ಪಿಸಿ ಪಿಚ್​ನಿಂದ ಹೊರಕ್ಕೆ ಹೋಗಿ ಅದನ್ನು ಹೊಡೆಯಲು ಮುಂದಾದರು, ಚೆಂಡು ಗಾಳಿಯಲ್ಲಿ ಹಾರಿತು. ಅಲ್ಲಿ ಅಕ್ಷರ್ ಪಟೇಲ್ ಸುಲಭ ಕ್ಯಾಚ್ ಪಡೆದರು. ಇಶಾನ್ ಕಿಶನ್ ಮತ್ತೊಂದು ಆರಂಭವನ್ನು ಎಸೆದ ನಂತರ ನಿರಾಶೆಯಿಂದ ಹಿಂತಿರುಗಿದರು.

ಟಿ 20 ವಿಶ್ವಕಪ್ 2024 ರ ತಂಡದ ಆಯ್ಕೆಯು ಹತ್ತಿರದಲ್ಲಿದೆ. ಕಡಿಮೆ ಸ್ಕೋರ್​ಗಳು ಇಶಾನ್ ಕಿಶನ್ ಅವರ ಉದ್ದೇಶಕ್ಕೆ ಸಹಾಯ ಮಾಡುತ್ತಿಲ್ಲ. ಪ್ರಸ್ತುತ ರೇಸ್​ನಲ್ಲಿ ಮುಂದಿರುವ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರಗೆಇ ಸ್ಪರ್ಧೆಯೊಡ್ಡುತ್ತಿದ್ದಾರೆ. ಗಿದೆ

Continue Reading
Advertisement
Air Force Chopper
ದೇಶ5 mins ago

Air Force Chopper: ಉತ್ತರಾಖಂಡದಲ್ಲಿ ಕಾಡಿನ ಬೆಂಕಿ ನಂದಿಸಲು ವಾಯು ಪಡೆಯ ಹೆಲಿಕಾಪ್ಟರ್‌ ಬಳಕೆ

TCS World 10K
ಬೆಂಗಳೂರು8 mins ago

TCS World 10K : ನಾಳೆ ಬೆಂಗಳೂರಿನಲ್ಲಿ ವಿಶ್ವ ವಿಖ್ಯಾತಿಯ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಾಥಾನ್​

Lok Sabha Election 2024 special kit for the polling staff
ಉತ್ತರ ಕನ್ನಡ12 mins ago

Lok Sabha Election 2024: ಲೋಕಸಭಾ ಚುನಾವಣೆ ಸಿಬ್ಬಂದಿಗೆ ತಯಾರಾಗಿದೆ ವಿಶೇಷ ಕಿಟ್

virat kohli
ಪ್ರಮುಖ ಸುದ್ದಿ48 mins ago

Virat Kohli : ಅಭ್ಯಾಸದ ಮಧ್ಯೆ ಮೊಬೈಲ್​ನಲ್ಲೇ ಡೆಲ್ಲಿ ವರ್ಸಸ್​​ ಮುಂಬೈ ಮ್ಯಾಚ್ ನೋಡಿದ ಕೊಹ್ಲಿ

MDH, Everest Spices
ವಿದೇಶ56 mins ago

MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಅಮೆರಿಕ

Zameer Ahmed Khan‌
ಕರ್ನಾಟಕ1 hour ago

Zameer Ahmed Khan‌: ಸಚಿವ ಜಮೀರ್ ಅಹ್ಮದ್ ರೋಷಾವೇಶದ ಭಾಷಣಕ್ಕೆ ಗಾಜು ಪೀಸ್‌ ಪೀಸ್; ಇಲ್ಲಿದೆ ವಿಡಿಯೊ

Medical Negligence
ಕ್ರೈಂ1 hour ago

Medical Negligence: ಆಸ್ಪತ್ರೆ ನಿರ್ಲಕ್ಷ್ಯದಿಂದ ಬಾಲಕ ಸಾವು: 10 ಲಕ್ಷ ರೂ. ಪರಿಹಾರ ಘೋಷಿಸಿದ ಕೋರ್ಟ್​​

IPL 2024
ಕ್ರೀಡೆ2 hours ago

IPL 2024 : ದೊಡ್ಡ ಮೊತ್ತದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿಗೆ 10 ರನ್ ಜಯ

Viral News
ವೈರಲ್ ನ್ಯೂಸ್2 hours ago

Viral News: ಅಪ್ರಾಪ್ತ ಹಿಂದು ಹುಡುಗಿಗೆ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದ ಮುಸ್ಲಿಂ ಯುವಕನಿಗೆ ಬಿತ್ತು ಗೂಸಾ

Assault Case
ಕರ್ನಾಟಕ2 hours ago

Assault Case: ಬೆಂಗಳೂರಲ್ಲಿ ಟೀ ಶಾಪ್ ಯುವಕನ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ಯುವಕರು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 20245 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ10 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ17 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌