Car Accident: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಖ್ಯಾತ ಕ್ರೀಡಾಪಟುಗಳು ಇವರು - Vistara News

ಕ್ರೀಡೆ

Car Accident: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಖ್ಯಾತ ಕ್ರೀಡಾಪಟುಗಳು ಇವರು

ಭಾನುವಾರ ತಡರಾತ್ರಿ ನೈರೋಬಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮ್ಯಾರಥಾನ್ ರನ್ನರ್ ಕೆಲ್ವಿನ್ ಕಿಪ್ಟಮ್ ಸಾವನ್ನಪ್ಪಿದ್ದರು. ವಿಶ್ವದಾಖಲೆ ಮುರಿದು ಐದು ತಿಂಗಳು ಕಳೆಯುವಷ್ಟರಲ್ಲಿ ಈ ದುರಂತ ಸಂಭವಿಸಿದೆ

VISTARANEWS.COM


on

marathon runner accident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೈರೋಬಿ: ಕೀನ್ಯಾದ ವಿಶ್ವ ದಾಖಲೆಯ ಮ್ಯಾರಥಾನ್(marathon world record holder) ರನ್ನರ್ ಕೆಲ್ವಿನ್ ಕಿಪ್ಟಮ್(Kelvin Kiptum) ಮತ್ತು ಅವರ ಕೋಚ್ ಕಾರು ಅಪಘಾತದಲ್ಲಿ(Car Accident) ಭಾನುವಾರ ಸಾವನ್ನಪ್ಪಿದ್ದರು. ಇತಂಹ ರಸ್ತೆ(Road accident) ಅಪಘಾತದಲ್ಲಿ ಈಗಾಗಲೇ ಹಲವು ಕ್ರೀಡಾಪಟುಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತ ವರದಿಯೊಂದು ಇಲ್ಲಿದೆ.

ಕೆಲ್ವಿನ್ ಕಿಪ್ಟಮ್


ಭಾನುವಾರ ತಡರಾತ್ರಿ ನೈರೋಬಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮ್ಯಾರಥಾನ್ ರನ್ನರ್ ಕೆಲ್ವಿನ್ ಕಿಪ್ಟಮ್ ಸಾವನ್ನಪ್ಪಿದ್ದರು. ವಿಶ್ವದಾಖಲೆ ಮುರಿದು ಐದು ತಿಂಗಳು ಕಳೆಯುವಷ್ಟರಲ್ಲಿ ಈ ದುರಂತ ಸಂಭವಿಸಿದೆ. ಕೇವಲ 24 ವರ್ಷ ವಯಸ್ಸಿನಲ್ಲಿ, ಕೆಲ್ವಿನ್ ಕಿಪ್ಟಮ್ ಅವರು ಈಗಾಗಲೇ ಕ್ರೀಡೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದರು. ಅಕ್ಟೋಬರ್ 8, 2023 ರಂದು ಚಿಕಾಗೊ ಮ್ಯಾರಥಾನ್​ನಲ್ಲಿ 2:00:35 ರ ಸಮಯದೊಂದಿಗೆ ಮ್ಯಾರಥಾನ್ ವಿಶ್ವ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದರು. ಟೊಯೊಟಾ ಪ್ರೀಮಿಯೊವನ್ನು ಚಲಾಯಿಸುತ್ತಿದ್ದಾಗ ವಾಹನದ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯಿಂದ ಆಚೆಗೆ ತಿರುಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಿಪ್ಟಮ್ ಹಾಗೂ ಅವರ ರುವಾಂಡನ್ ತರಬೇತುದಾರ ಗೆರ್ವೈಸ್ ಹಕಿಝಿಮಾನ ಕೂಡಾ ಮೃತಪಟ್ಟಿದ್ದರು.

ಆ್ಯಂಡ್ರೂ ಸೈಮಂಡ್ಸ್


ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್‌ ಆಟಗಾರ ಆ್ಯಂಡ್ರ್ಯೂ ಸೈಮಂಡ್ಸ್‌ ಮೇ 2022 ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಎಂಬಲ್ಲಿ ಈ ಅಪಘಾತ ಸಂಭವಿಸಿತ್ತು. ರಾತ್ರಿಯ ವೇಳೆ ಸೈಮಂಡ್ಸ್‌ ಒಬ್ಬರೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆಯಿಂದ ಹೊರಗೆ ಸಂಚರಿಸಿ, ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸೈಮಂಡ್ಸ್ ಅವರಿಗೆ ಕೇವಲ 46 ವರ್ಷವಾಗಿತ್ತು.

ಇದನ್ನೂ ಓದಿ Car Accident: ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮೂವರ ಸಾವು; ಹಬ್ಬದ ದಿನವೇ ಯಮನ ರೌದ್ರವ

ರುನಾಕೊ ಮಾರ್ಟನ್


ವೆಸ್ಟ್ ಇಂಡೀಸ್ ಕ್ರಿಕೆಟಿಗ ಸ್ಟಾರ್​ ಕ್ರಿಕೆಟಿಗ ರುನಾಕೊ ಮಾರ್ಟನ್ ಅವರು ತಮ್ಮ 33 ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. ಮಾರ್ಚ್ 2012 ರಲ್ಲಿ ಈ ಘಟನೆ ಸಂಭವಿಸಿತ್ತು. ಹೆದ್ದಾರಿಯೊಂದರ ಕಂಬಕ್ಕೆ ರುನಾಕೊ ಮಾರ್ಟನ್ ಚಲಾಯಿಸುತಿದ್ದ ಕಾರು ನಿಯಂತ್ರಣ ತಪ್ಪಿ ಅಪ್ಪಳಿಸಿತ್ತು. ತಲೆಯ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ವಿಂಡೀಸ್ ಕ್ರಿಕೆಟಿಗ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.

ಬೆನ್ ಹೋಲಿಯೋಕ್


ಮಾರ್ಚ್ 2002 ರಲ್ಲಿ ಇಂಗ್ಲೆಂಡ್​ ತಂಡದ ಆಟಗಾರ ಬೆನ್ ಹೋಲಿಯೋಕ್ ಅವರು ತಮ್ಮ ಗೆಳತಿಯೊಂದಿಗೆ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದರು. ಅತೀ ವೇಗವಾಗಿ ಚಲಿಸುತ್ತಿದ್ದ ಕಾರು ಏಕಾಏಕಿ ಸ್ಕಿಡ್ ಆಗಿ ರಸ್ತೆ ಬದಿಯಲ್ಲಿದ್ದ ಗೋಡೆಗೆ ಅಪ್ಪಳಿಸಿತು. ಡಿಕ್ಕಿ ಹೊಡೆದ ರಭಸಕ್ಕೆ ಬೆನ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಗಂಭೀರ ಗಾಯಗೊಂಡ ಅವರ ಗೆಳತಿ ಪ್ರಾಣಾಪಯದಿಂದ ಪಾರಾಗಿದ್ದರು.

ಮಂಜುರುಲ್ ಇಸ್ಲಾಂ ರಾಣಾ


ಅತಿ ಕಿರಿಯ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಕ್ರಿಕೆಟಿಗನೆಂದರೆ ಬಾಂಗ್ಲಾದೇಶ ತಂಡ ಆಟಗಾರ ಮಂಜುರುಲ್ ಇಸ್ಲಾಂ ರಾಣಾ. ಮಾರ್ಚ್ 16, 2007 ರಂದು ತಮ್ಮ 22 ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟರು. ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದ ಮಂಜುರುಲ್ ಇಸ್ಲಾಂ, ಮಿನಿ ಬಸ್​ಗೆ ಡಿಕ್ಕಿ ಹೊಡೆದಿದ್ದರು. ಬಳಿಕ ನಿಯಂತ್ರಣ ಕಳೆದುಕೊಂಡ ಬೈಕ್ ಗೇಟ್ ಅಂಚಿನಲ್ಲಿದ್ದ ಪಿಲ್ಲರ್​ಗೆ ಡಿಕ್ಕಿ ಹೊಡೆದಿತ್ತು. ಈ ಪರಿಣಾಮ ಮಂಜುರುಲ್ ಇಸ್ಲಾಂ ತೀವ್ರ ಗಾಯಗೊಂಡು ನಿಧನ ಹೊಂದಿದ್ದರು.

ಎಜ್ರಾ ಮೊಸ್ಲೆ


ವೆಸ್ಟ್ ಇಂಡೀಸ್ ಮಾಜಿ ವೇಗಿ ಎಜ್ರಾ ಮೊಸ್ಲೆ ಅವರು ಫೆಬ್ರವರಿ 2021 ರಲ್ಲಿ ನಿಧನಹೊಂದಿರು. 63 ವರ್ಷದ ಅವರು ಬಾರ್ಬಡೋಸ್‌ನ ಎಬಿಸಿ ಹೆದ್ದಾರಿಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾಗ ಹಿಂಬದಿಯಿಂದ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. 90 ದಶಕದಲ್ಲಿ ತಮ್ಮ ಘಾತಕ ಬೌಲಿಂಗ್​ ಮೂಲಕ ಹೆಸರುವಾಸಿಯಾಗಿದ್ದರು. ವಿಂಡೀಸ್​ ಪರ 9 ಏಕದಿನ ಪಂದ್ಯಗಳನ್ನಾಡಿದ್ದರು. ಜತೆಗೆ 279 ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳನ್ನು ಆಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Sean Williams : ಜಿಂಬಾಬ್ವೆ ತಂಡದ ಹಿರಿಯ ಆಲ್​ರೌಂಡರ್​ ಟಿ20 ಕ್ರಿಕೆಟ್​ನಿಂದ ನಿವೃತ್ತಿ

Sean Williams: ಜಿಂಬಾಬ್ವೆಯ ಟಿ 20ಐ ನಾಯಕ ಸಿಕಂದರ್ ರಾಜಾ ಕೂಡ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ವಿಲಿಯಮ್ಸ್ ಆಟದ ಕಿರು ಸ್ವರೂಪದಲ್ಲಿ ತಮ್ಮ ವೃತ್ತಿಜೀವನ ಮುಗಿಸಿದ್ದನ್ನು ಘೋಷಿಸಿದ್ದಾರೆ ವಿಶೇಷವೆಂದರೆ, ವಿಲಿಯಮ್ಸ್ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರೊಂದಿಗೆ 17 ವರ್ಷ, 166 ದಿನಗಳ ಜಂಟಿ ಸುದೀರ್ಘ ಟಿ 20 ವೃತ್ತಿಜೀವನವನ್ನು ಹೊಂದಿರುವ ದಾಖಲೆಯನ್ನು ಹೊಂದಿದ್ದಾರೆ.

VISTARANEWS.COM


on

Sean Williams
Koo

ನವ ದೆಹಲಿ: ಜಿಂಬಾಬ್ವೆ ರಾಷ್ಟ್ರೀಯ ಕ್ರಿಕೆಟ್ ತಂಡದ ಆಲ್​ರೌಂಡರ್ ಸೀನ್ ವಿಲಿಯಮ್ಸ್ (Sean Williams) ಬಾಂಗ್ಲಾದೇಶ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯ ಮುಕ್ತಾಯದ ನಂತರ ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ (T20 International) ವಿದಾಯ ಹೇಳುವುದಾಗಿ ಭಾನುವಾರ ಘೋಷಿಸಿದ್ದಾರೆ. ಮಿರ್​ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತಿಮ ಟಿ 20 ಪಂದ್ಯದಲ್ಲಿ ನಜ್ಮುಲ್ ಹುಸೇನ್ ಶಾಂಟೊ ನೇತೃತ್ವದ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ಧ ಜಿಂಬಾಬ್ವೆ 9 ವಿಕೆಟ್​ಗಳ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದ ನಂತರ ಜಿಂಬಾಬ್ವೆಯ ಕ್ರಿಕೆಟ್ ದಂತಕಥೆಗಳಲ್ಲಿ ಒಬ್ಬರಾದ ವಿಲಿಯಮ್ಸ್ ಟಿ 20 ಐ ಕ್ರಿಕೆಟ್​ನಿಂದ ನಿವೃತ್ತರಾಗಲು ನಿರ್ಧರಿಸಿದರು.

ಜಿಂಬಾಬ್ವೆ ಆತಿಥೇಯ ಬಾಂಗ್ಲಾದೇಶದ ವಿರುದ್ಧ 1-4 ಸರಣಿ ಸೋಲನ್ನು ಎದುರಿಸಬೇಕಾಯಿತು. ಬಾಂಗ್ಲಾ ವಿರುದ್ಧ ಸರಣಿಯ ಮೊದಲ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿತು. ವಿಶೇಷವೆಂದರೆ, ಬಾಂಗ್ಲಾದೇಶದ ವಿರುದ್ಧ ಜಿಂಬಾಬ್ವೆ 1-4 ಸರಣಿ ಸೋಲಿನ ಸಮಯದಲ್ಲಿ 37 ವರ್ಷದ ವಿಲಿಯಮ್ಸ್ ಕೇವಲ ಎರಡು ಟಿ 20 ಐ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು.

ಗುಡ್​ ಬೈ ಹೇಳಿದ ವಿಲಿಯಮ್ಸ್​


ಎಡಗೈ ಬ್ಯಾಟ್ಸ್ಮನ್ ಮೊದಲ ಟಿ 20 ಐನಲ್ಲಿ ಗೋಲ್ಡನ್ ಡಕ್​ ಆಗಿದ್ದರು. ತಸ್ಕಿನ್ ಅಹ್ಮದ್ ಎಸೆತಕ್ಕೆ ಕ್ಲೀನ್ ಬೌಲ್ ಅಗಿದ್ದರು. ನಂತರ ಅವರು ಬಾಂಗ್ಲಾದೇಶ ವಿರುದ್ಧದ ಐದನೇ ಟಿ 20 ಐನಲ್ಲಿ ಬ್ಯಾಟಿಂಗ್ ಮಾಡುವ ಅಗತ್ಯ ಬಂದಿರಲಿಲ್ಲ . , ಟಿ 20 ಐ ಕ್ರಿಕೆಟ್ನಿಂದ ಅವರ ನಿವೃತ್ತಿಯು ಸ್ಟಾರ್ ಆಟಗಾರನ ಕ್ರಿಕೆಟ್ ಪ್ರಯಾಣ ಅಂತ್ಯ ವಾಗುವುದಿಲ್ಲ. ಏಕೆಂದರೆ ವಿಲಿಯಮ್ಸ್ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಜಿಂಬಾಬ್ವೆಯನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿದ್ದಾರೆ.

ಇದನ್ನೂ ಓದಿ: IPL 2024 : ಕೆಕೆಆರ್ ತಂಡದ ಇನ್ನೊಬ್ಬರ ಆಟಗಾರನಿಗೆ ದಂಡ ವಿಧಿಸಿದ ಬಿಸಿಸಿಐ

ವಿಲಿಯಮ್ಸ್ ತಮ್ಮ ನಿವೃತ್ತಿಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಜಿಂಬಾಬ್ವೆ ಕ್ರಿಕೆಟ್ ತಂಡದೊಂದಿಗೆ ಸಂಬಂಧ ಹೊಂದಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧಿಕಾರಿಯೊಬ್ಬರು ಸ್ಟಾರ್ ಆಲ್ರೌಂಡರ್ ಢಾಕಾದಲ್ಲಿ ನಡೆದ ಅಂತಿಮ ಪಂದ್ಯದ ನಂತರ ಟಿ 20 ಐ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ ಎಂದು ದೃಢಪಡಿಸಿದ್ದಾರೆ.

ಜಿಂಬಾಬ್ವೆಯ ಟಿ 20ಐ ನಾಯಕ ಸಿಕಂದರ್ ರಾಜಾ ಕೂಡ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ವಿಲಿಯಮ್ಸ್ ಆಟದ ಕಿರು ಸ್ವರೂಪದಲ್ಲಿ ತಮ್ಮ ವೃತ್ತಿಜೀವನ ಮುಗಿಸಿದ್ದನ್ನು ಘೋಷಿಸಿದ್ದಾರೆ ವಿಶೇಷವೆಂದರೆ, ವಿಲಿಯಮ್ಸ್ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರೊಂದಿಗೆ 17 ವರ್ಷ, 166 ದಿನಗಳ ಜಂಟಿ ಸುದೀರ್ಘ ಟಿ 20 ವೃತ್ತಿಜೀವನವನ್ನು ಹೊಂದಿರುವ ದಾಖಲೆಯನ್ನು ಹೊಂದಿದ್ದಾರೆ.

ವಿಲಿಯಮ್ಸ್ ಸಾಧನೆ ಈ ರೀತಿ ಇದೆ

ಸೀನ್ ವಿಲಿಯಮ್ಸ್ 2006ರಲ್ಲಿ ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆ ಪರ ಟಿ20 ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದರು. ಅವರು ಈ ಸ್ವರೂಪದಲ್ಲಿ ಜಿಂಬಾಬ್ವೆ ತಂಡದ ಪ್ರಮುಖ ಆಟಗಾರನಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದರು. 81 ಟಿ 20 ಪಂದ್ಯಗಳಲ್ಲಿ, ವಿಲಿಯಮ್ಸ್ 23.48 ಸರಾಸರಿ ಮತ್ತು 126.38 ಸ್ಟ್ರೈಕ್ ರೇಟ್ನೊಂದಿಗೆ 1691 ರನ್ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದ್ದರು. ಅವರು ಟಿ 20 ಪಂದ್ಯಗಳಲ್ಲಿ 11 ಅರ್ಧಶತಕಗಳನ್ನು ಬಾರಿಸಿದ್ದಾರೆ, ಅವರ ಗರಿಷ್ಠ ಸ್ಕೋರ್ 66 ರನ್.

ವಿಲಿಯಮ್ಸ್ ತಮ್ಮ ಎಡಗೈ ಸ್ಪಿನ್ ಬೌಲಿಂಗ್​​ನಿಂದ ಜಿಂಬಾಬ್ವೆ ಪರ 6.93 ಎಕಾನಮಿ ರೇಟ್​ನಲ್ಲಿ 48 ವಿಕೆಟ್​​ ಪಡೆದಿದ್ದಾರೆ.ಈ ಸಾಧನೆ ಹೊರತಾಗಿ, ವಿಲಿಯಮ್ಸ್ ಏಕದಿನ ಕ್ರಿಕೆಟ್​ನ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಕಂಡುಕೊಂಡಿದ್ದಾರೆ. 156 ಪಂದ್ಯಗಳಿಂದ 38.06ರ ಸರಾಸರಿಯಲ್ಲಿ 4986 ರನ್ ಗಳಿಸಿದ್ದು, 86.69ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ತಮ್ಮ ಏಕದಿನ ವೃತ್ತಿಜೀವನದಲ್ಲಿ ಇದುವರೆಗೆ ಎಂಟು ಶತಕಗಳು ಮತ್ತು 35 ಅರ್ಧಶತಕಗಳನ್ನು ಬಾರಿಸಿದ್ದಾರೆ. ವಿಲಿಯಮ್ಸ್ ಏಕದಿನ ಪಂದ್ಯಗಳಲ್ಲಿ 83 ವಿಕೆಟ್ ಗಳನ್ನು ಪಡೆದು ತಮ್ಮ ಆಲ್ ರೌಂಡ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

ವಿಲಿಯಮ್ಸ್ ಏಕದಿನ ಕ್ರಿಕೆಟ್ನಲ್ಲಿ 1000 ರನ್, 50 ವಿಕೆಟ್ ಮತ್ತು 50 ಕ್ಯಾಟ್​​ನಲ್ಲಿ ಪಡೆದ ದಾಖಲೆ ಹೊಂದಿದ್ದಾರೆ. ಅವರು 14 ಟೆಸ್ಟ್ ಪಂದ್ಯಗಳಲ್ಲಿ ಜಿಂಬಾಬ್ವೆಯನ್ನು ಪ್ರತಿನಿಧಿಸಿದ್ದಾರೆ ಮತ್ತು ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕಗಳ ಸಹಾಯದಿಂದ 1034 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್​​ನಲ್ಲಿ 21 ವಿಕೆಟ್ ಕಬಳಿಸಿದ್ದಾರೆ.

Continue Reading

ಕ್ರೀಡೆ

IPL 2024 : ಕೆಕೆಆರ್ ತಂಡದ ಇನ್ನೊಬ್ಬ ಆಟಗಾರನಿಗೆ ದಂಡ ವಿಧಿಸಿದ ಬಿಸಿಸಿಐ

IPL 2024: 27 ವರ್ಷದ ಆಟಗಾರ ಅಪರಾಧ ಒಪ್ಪಿಕೊಂಡಿದ್ದಾರೆ. ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಮ್ಯಾಚ್ ರೆಫರಿ ತೆಗೆದುಕೊಂಡ ನಿರ್ಧಾರಗಳನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ.

VISTARANEWS.COM


on

IPL 2024
Koo

ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್​ನಲ್ಲಿ ಮೇ 11 ರಂದು ನಡೆದ ಐಪಿಎಲ್ 2024 ರ 60 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 18 ರನ್​ಗಳ ಗೆಲುವು ಸಾಧಿಸಿದ ಸಂದರ್ಭದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟ್ಸ್ಮನ್ ರಮಣ್​ದೀಪ್​ ಸಿಂಗ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.20 ರ ಪ್ರಕಾರ ರಮಣ್​​ದೀಪ್​ ಲೆವೆಲ್ 1 ಅಪರಾಧವನ್ನು ಮಾಡಿದ್ದಾರೆ ಎಂದು ಸಾಬೀತಾಗಿದೆ. ಈ ಅಪರಾಧಕ್ಕಾಗಿ ಕೆಕೆಆರ್ ಬ್ಯಾಟರ್​ಗೆ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿದೆ.

27 ವರ್ಷದ ಆಟಗಾರ ಅಪರಾಧ ಒಪ್ಪಿಕೊಂಡಿದ್ದಾರೆ. ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಮ್ಯಾಚ್ ರೆಫರಿ ತೆಗೆದುಕೊಂಡ ನಿರ್ಧಾರಗಳನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ.

ಎಷ್ಟು ದಂಡ


ಐಪಿಎಲ್​ನ ನೀತಿ ಸಂಹಿತೆಯ ಪ್ರಕಾರ, ಅನುಚ್ಛೇದ 2.20ರಲ್ಲಿ “ವಿಕೆಟ್​ಗಳಿಗೆ ಹೊಡೆಯುವುದು ಅಥವಾ ಒದೆಯುವುದು ಮತ್ತು ಉದ್ದೇಶಪೂರ್ವಕವಾಗಿ ಜಾಹೀರಾತು ಫಲಕಗಳು, ಬೌಂಡರಿ ಲೈನ್​, ಡ್ರೆಸ್ಸಿಂಗ್ ರೂಮ್ ಬಾಗಿಲುಗಳು, ಕನ್ನಡಿಗಳು, ಕಿಟಕಿಗಳಿಗೆ ಹಾನಿ ಉಂಟುಮಾಡುವ ಯಾವುದೇ ಕ್ರಮಗಳನ್ನು ಕೈಗೊಳ್ಳಬಹುದು. ಇತರ ಒಬ್ಬ ಆಟಗಾರನು ಹತಾಶೆಯಿಂದ ತನ್ನ ಬ್ಯಾಟ್ ಅನ್ನು ತೀವ್ರವಾಗಿ ತಿರುಗಿಸಿದಾಗ ಮತ್ತು ಜಾಹೀರಾತು ಫಲಕಗಳಿಗೆ ಹಾನಿಯನ್ನುಂಟುಮಾಡಿದಾಗ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ ರಮಣ್​ದೀಪ್​ ಬೌಂಡಿ ಲೈನ್​ಗಳ ಮೇಲೆ ಹೊಡೆದಿದ್ದರು.

ಇದನ್ನೂ ಓದಿ: IPL 2024: ರಾಜಸ್ಥಾನ ವಿರುದ್ಧ ಗೆದ್ದು ಬೀಗಿದ ಚೆನ್ನೈ; ಪ್ಲೇಆಫ್‌ ಆಸೆ ಜೀವಂತ, ಆರ್‌ಸಿಬಿಗೆ ಹೆಚ್ಚಿದ ಒತ್ತಡ

ಕೆಕೆಆರ್ ಶನಿವಾರ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 18 ರನ್ಗಳಿಂದ ಗೆಲ್ಲುವ ಮೂಲಕ ಐಪಿಎಲ್ 2024 ಪ್ಲೇಆಫ್​ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಮಣ್ದೀಪ್ 8 ಎಸೆತಗಳಲ್ಲಿ ಅಜೇಯ 17 ರನ್ ಗಳಿಸಿ ಕೆಕೆಆರ್ ಗೆಲುವಿಗೆ ಕಾರಣರಾದರು.

ಐಪಿಎಲ್ 2024 ರಲ್ಲಿ ಕೆಕೆಆರ್ ಇದುವರೆಗೆ ಆಡಿದ 12 ಪಂದ್ಯಗಳಿಂದ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ (ಆರ್ಆರ್) ಪ್ರಸ್ತುತ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು ಈ ಋತುವಿನಲ್ಲಿಯೂ ಪ್ಲೇಆಫ್ ತಲುಪುವುದು ಖಚಿತವಾಗಿದೆ.

ಶ್ರೇಯಸ್ ಅಯ್ಯರ್ ಏನಂದರು?

ಈ ಋತುವಿನಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಕೆಕೆಆರ್ ಪಾತ್ರವಾದ ನಂತರ, ಅವರ ನಾಯಕ ಶ್ರೇಯಸ್ ಅಯ್ಯರ್ ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಯ್ಯರ್, “ನಾನು ಇದನ್ನು ಪಂದ್ಯಕ್ಕೆ ಮೊದಲು ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.

Continue Reading

ಐಪಿಎಲ್ 2024

IPL 2024: ರಾಜಸ್ಥಾನ ವಿರುದ್ಧ ಗೆದ್ದು ಬೀಗಿದ ಚೆನ್ನೈ; ಪ್ಲೇಆಫ್‌ ಆಸೆ ಜೀವಂತ, ಆರ್‌ಸಿಬಿಗೆ ಹೆಚ್ಚಿದ ಒತ್ತಡ

IPL 2024: ರಾಜಸ್ಥಾನ ರಾಯಲ್ಸ್ ಸಿಎಸ್‌ಕೆ ಗೆಲುವಿನೊಂದಿಗೆ ಆರ್‌ಸಿಬಿ (RCB) ಮತ್ತಷ್ಟು ಒತ್ತಡಕ್ಕೆ ಸಿಲುಕಿದ್ದು, ಭಾನುವಾರವೇ (ಮೇ 12) ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆಲ್ಲುವ ಜತೆಗೆ ಕೊನೆಯ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ಗೆಲ್ಲಲೇಬೇಕಿದೆ. ಇದರೊಂದಿಗೆ ಬೇರೆ ತಂಡಗಳ ಸೋಲು-ಗೆಲುವು, ರನ್‌ರೇಟ್‌ ಲೆಕ್ಕಾಚಾರವೂ ನಿರ್ಣಾಯಕವಾಗಲಿದೆ.

VISTARANEWS.COM


on

IPL 2024
Koo

ಚೆನ್ನೈ: ಪ್ರಸಕ್ತ ಐಪಿಎಲ್‌ ಟೂರ್ನಿಯ (IPL 2024) ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ಗಳ ಅಂತರಿಂದ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸಿಎಸ್‌ಕೆ ಗೆಲುವಿನೊಂದಿಗೆ ಆರ್‌ಸಿಬಿ (RCB) ಮತ್ತಷ್ಟು ಒತ್ತಡಕ್ಕೆ ಸಿಲುಕಿದ್ದು, ಭಾನುವಾರವೇ (ಮೇ 12) ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆಲ್ಲುವ ಜತೆಗೆ ಕೊನೆಯ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ಗೆಲ್ಲಲೇಬೇಕಿದೆ. ಇದರೊಂದಿಗೆ ಬೇರೆ ತಂಡಗಳ ಸೋಲು-ಗೆಲುವು, ರನ್‌ರೇಟ್‌ ಲೆಕ್ಕಾಚಾರವೂ ನಿರ್ಣಾಯಕವಾಗಲಿದೆ.

ರಾಜಸ್ಥಾನ ಸಾಧಾರಣ ಮೊತ್ತ

ಟೂರ್ನಿಯುದ್ದಕ್ಕೂ ಅತ್ಯುತ್ತಮ ಆಟವಾಡಿರುವ ರಾಜಸ್ಥಾನ ರಾಯಲ್ಸ್‌ ತಂಡವು ಸಿಎಸ್‌ಕೆ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಸಾಧಾರಣ ಮೊತ್ತ ಪೇರಿಸಿತು. ನಿಗದಿತ 20 ಓವರ್‌ಗಳಲ್ಲಿ ಆರ್‌ಆರ್‌ 5 ವಿಕೆಟ್‌ ಕಳೆದುಕೊಂಡು ಕೇವಲ 141 ರನ್‌ ಗಳಿಸಲಷ್ಟೇ ಶಕ್ತವಾಯಿತು. ರಿಯಾನ್‌ ಪರಾಗ್‌ 47 ಹಾಗೂ ಧ್ರುವ್‌ ಜುರೆಲ್‌ 28 ಹೊರತುಪಡಿಸಿ ಯಾವೊಬ್ಬ ಆಟಗಾರನೂ ಸ್ಫೋಟಕ ಬ್ಯಾಟಿಂಗ್‌ ನಡೆಸದ ಕಾರಣ ಸಾಧಾರಣ ಮೊತ್ತ ದಾಖಲಾಯಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್‌ಕೆ 16 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಸಿಎಸ್‌ಕೆ ಪರ ಉತ್ತಮವಾಗಿ ಆಡಲು ರಚಿನ್‌ ರವೀಂದ್ರ ಮತ್ತೆ ವಿಫಲರಾದರು. ರಚಿನ್‌ ರವೀಂದ್ರ 27 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ಡೆರಿಲ್ ಮಿಚೆಲ್‌ 22, ಮೋಯಿನ್‌ ಅಲಿ 10, ಶಿವಂ ದುಬೆ 18 ರನ್‌ ಗಳಿಸಿದರು. ನಾಯಕನ ಆಟವಾಡಿದ ಋತುರಾಜ್‌ ಗಾಯಕ್ವಾಡ್‌ 42 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಆಡಿದ 13 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಗಳಿಸಿದ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ಜತೆಗೆ ಪ್ಲೇಆಫ್‌ ಕನಸಿಗೆ ಹತ್ತಿರವಾಯಿತು. ಮೇ 18ರಂದು ಸಿಎಸ್‌ಕೆ ಆರ್‌ಸಿಬಿ ವಿರುದ್ಧ ಆಡಲಿದ್ದು, ಗೆಲುವು ಸಾಧಿಸಿದರೆ ಪ್ಲೇಆಫ್‌ಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಆರ್‌ಸಿಬಿ ವಿರುದ್ಧ ಸೋಲನುಭವಿಸಿದರೆ ರನ್‌ರೇಟ್‌ ಲೆಕ್ಕಾಚಾರ ಆಧಾರವಾಗಲಿದೆ.

ಸಂಕ್ಷಿಪ್ತ ಸ್ಕೋರ್‌

ರಾಜಸ್ಥಾನ ರಾಯಲ್ಸ್‌ 20 ಓವರ್‌ಗಳಲ್ಲಿ 141/5
(ರಿಯಾನ್‌ ಪರಾಗ್‌ 47, ಧ್ರುವ್‌ ಜುರೆಲ್‌ 28, ಸಮರ್‌ಜೀತ್‌ ಸಿಂಗ್‌ 26ಕ್ಕೆ 3)

ಸಿಎಸ್‌ಕೆ 18.2 ಓವರ್‌ಗಳಲ್ಲಿ 145/5
(ಋತುರಾಜ್‌ ಗಾಯಕ್ವಾಡ್‌ 42, ರಚಿನ್‌ ರವೀಂದ್ರ 27, ಆರ್.ಅಶ್ವಿನ್‌ 35/2)

ಇದನ್ನೂ ಓದಿ: IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

Continue Reading

ಕ್ರಿಕೆಟ್

Queen’s Premier League: ಕಿರುತೆರೆ ,ಹಿರಿತೆರೆ ಹೆಣ್ಮಕ್ಕಳಿಗಾಗಿ ಶುರುವಾಯ್ತು ಕ್ವೀನ್ಸ್‌ ಪ್ರೀಮಿಯರ್ ಲೀಗ್!

Queen’s Premier League: ಈ‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ, ಸೀರಿಯಲ್, ಆಂಕರ್ಸ್, ಮಾಡೆಲ್ ಭಾಗವಹಿಸಲು ವೇದಿಕೆ‌ ಕಲ್ಪಿಸಿಕೊಡಲಾಗಿದೆ. ಅದರ ಭಾಗವಾಗಿ QPLನ ಲೋಗೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂಎನ್ ಸುರೇಶ್, ಉದ್ಯಮಿ ಪೂರ್ವಂಕರ್ ಸಿಇಒ ಮಲ್ಲಣ್ಣ, ಅಂತಾರಾಷ್ಟ್ರೀಯ ಕ್ರೀಡಾಪಟು ವೃಂದಾ ದಿನೇಶ್, ಮಹಿಳಾ ಕ್ರಿಕೆಟರ್ ಗಳಾದ ಪುಷ್ಪ ಕುಮಾರಿ, ಪ್ರತ್ಯುಷ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

VISTARANEWS.COM


on

Queen's Premier League start
Koo

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವಾರು ಕ್ರಿಕೆಟ್ ಪಂದ್ಯಾವಳಿಗಳಿವೆ. ಸಿಸಿಎಲ್, ಕೆಸಿಸಿ, ಟಿಪಿಎಲ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ರಿಕೆಟ್ ಟೂರ್ನಮೆಂಟ್ ಗಳಿವೆ. ಆದರೆ ಕಿರುತೆರೆ ಹಾಗೂ ಹಿರಿತೆರೆ ಮಹಿಳೆಯರಿಗಾಗಿ ಯಾವುದೇ ಕ್ರಿಕೆಟ್ ಪಂದ್ಯಾವಳಿಗಳಿಲ್ಲ. ಹೀಗಾಗಿ ಕ್ರಿಯೇಟಿವ್ ಫ್ರೆಂಡ್ಸ್ ಕಂಪನಿ ʻಕ್ವೀನ್ಸ್‌ ಪ್ರೀಮಿಯರ್ ಲೀಗ್ʼ (Queen’s Premier League) ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ.

ಈ‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ, ಸೀರಿಯಲ್, ಆಂಕರ್ಸ್, ಮಾಡೆಲ್ ಭಾಗವಹಿಸಲು ವೇದಿಕೆ‌ ಕಲ್ಪಿಸಿಕೊಡಲಾಗಿದೆ. ಅದರ ಭಾಗವಾಗಿ QPLನ ಲೋಗೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂಎನ್ ಸುರೇಶ್, ಉದ್ಯಮಿ ಪೂರ್ವಂಕರ್ ಸಿಇಒ ಮಲ್ಲಣ್ಣ, ಅಂತಾರಾಷ್ಟ್ರೀಯ ಕ್ರೀಡಾಪಟು ವೃಂದಾ ದಿನೇಶ್, ಮಹಿಳಾ ಕ್ರಿಕೆಟರ್ ಗಳಾದ ಪುಷ್ಪ ಕುಮಾರಿ, ಪ್ರತ್ಯುಷ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಲೋಗೊ ಬಿಡುಗಡೆ ಮಾಡಿದ ಪುಷ್ಪಕುಮಾರಿ, ʻʻಕ್ರಿಕೆಟ್ ಹುಡುಗರಿಗೆ ಮಾತ್ರ ಎನ್ನುವ ಕಾಲವಿತ್ತು. ಆದರೆ ನಾವು ಅಂದು ಛಲ ಬಿಡದೆ ಆಡಿದ್ದೇವೆ. ಮಹಿಳೆಯರಿಗಾಗಿ ಈ ರೀತಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಖುಷಿʼʼ ಎಂದರು.

ಇದನ್ನೂ ಓದಿ: Dolly Dhananjay:  ಡಾಲಿ ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ನಾಳೆ ಬಿಡುಗಡೆ

ನಟ ಹಾಗೂ QPL ಮೆಂಟರ್ ಆಗಿರುವ ಪ್ರಮೋದ್ ಶೆಟ್ಟಿ ಮಾತನಾಡಿ, ʻʻಜೂನ್ ತಿಂಗಳಲ್ಲಿ QPL ಪಂದ್ಯಾವಳಿ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಕಲಾವಿದರ ಜತೆಗೆ ಆಂಕರ್ಸ್, ಮಾಡೆಲ್‌ಗೆ ಇಲ್ಲಿ ಕ್ರಿಕೆಟ್ ಆಡಲು ಅವಕಾಶವಿದೆ. ಇವರನ್ನು ನೋಡಿಕೊಂಡು ಹೊಸ ಜನರೇಷನ್ ಕ್ರಿಕೆಟ್ ಆಡಲು ಪ್ರೇರಣೆಯಾಗಲಿ. ಈ ಪಂದ್ಯಾವಳಿ ನಾವು ಮಾಡುತ್ತಿಲ್ಲ.‌ಇದರಿಂದ ಬಂದ ದುಡ್ಡನ್ನು ನನ್ನ ತಂಡ ರಂಗಸೌರಭಕ್ಕೆ‌ ಮೀಸಲು ಇಡಲಾಗುತ್ತದೆ. ಶಾಲಾ ಕಾಲೇಜು ಮಟ್ಟದಿಂದಲೇ ಹಲವು ಪ್ರತಿಭೆಗಳನ್ನು ರಂಗಭೂಮಿಗೆ ಕರೆತಂದು ನಟನೆಯನ್ನು ಕಲಿಸುವ ಕೆಲಸವನ್ನು ರಂಗಸೌರಭ ಮಾಡುತ್ತಿದೆ. ಹೀಗಾಗಿ QPL ನಿಂದ ಬಂದ ಲಾಭವನ್ನು ಇಲ್ಲಿಗೆ ನೀಡಲಾಗುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲು ಹೆಚ್ಚು ನಟಿಮಣಿರು ಹೆಚ್ಚಾಗಿ ಕೈ ಜೋಡಿಸಬೇಕುʼʼ ಎಂದರು.

ನಟಿ ಭವ್ಯಾ ಗೌಡ ಮಾತನಾಡಿ, ʻʻಈ ಕಾನ್ಸೆಪ್ಟ್ ನನ್ನ ಮೈಂಡ್ ನಲ್ಲಿ ತುಂಬಾ ತಿಂಗಳಿನಿಂದ ಇತ್ತು. ಆರ್ ಸಿಬಿ ಹುಡುಗಿರು ಯಾವಾಗ ಕಪ್ ಎತ್ತಿದರೋ ಆಗ ನಮ್ಮ ಜೋಶ್ ಜಾಸ್ತಿಯಾಯ್ತು. ಹೆಣ್ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋದನ್ನು ತೋರಿಸಲು ಶುರು ಮಾಡಿದ್ದೇವೆ. ಈ ಕ್ರಿಕೆಟ್ ಪಂದ್ಯಾವಳಿಯನ್ನೂ ಒಂದೊಳ್ಳೆ ಉದ್ದೇಶ ಇಟ್ಟಿಕೊಂಡು ಮಾಡುತ್ತಿದ್ದೇವೆ. ಹೆಣ್ಮಕ್ಕಳಿಗೆ ಬ್ಯಾಟು ಬಾಲ್ ಹಿಡಿದು ಫೀಲ್ಡ್ ಗೆ ಇಳಿಯುತ್ತಿದ್ದೇವೆ. ಗಂಡು ಮಕ್ಕಳು ಚಿಯರ್ ಅಪ್ ಮಾಡಲು ರೆಡಿಯಾಗಿʼʼ ಎಂದರು.

ಕನ್ನಡ ಸಿನಿಮಾ ಪ್ರೇಮಿಗಳನ್ನು ರಂಜಿಸುವ ಕ್ವೀನ್ಸ್ ಗಳ ಮನರಂಜನೆಗಾಗಿ ಹಾಗೂ ಒಂದೊಳ್ಳೆ ಉದ್ದೇಶ ಇಟ್ಟುಕೊಂಡು ಈ ಪಂದ್ಯಾವಳಿ ನಡೆಸಲಾಗುತ್ತಿದೆ. ರಂಗಪ್ರತಿಭೆಗಳನ್ನು ಸಜ್ಜುಗೊಳಿಸುವ ರಂಗಸೌರಭಕ್ಕೆ QPL ಲಾಭವನ್ನು ನೀಡಲಾಗುತ್ತದೆ.

ʻಕ್ವೀನ್ಸ್‌ ಪ್ರೀಮಿಯರ್ ಲೀಗ್ʼ ಆಯೋಜಕರ ಬಳಗದಲ್ಲಿ ಮಹೇಶ್ ಕುಮಾರ್, ಪ್ರಮೋದ್ ಶೆಟ್ಟಿ, ಭವ್ಯ ಗೌಡ, ಸಾತ್ವಿಕ್, ಸಂತೋಷ್, ಚೇತನ್, ಸಚಿನ್ ಹಾಗೂ ಪ್ರೇಮ್ ಇದ್ದಾರೆ. ಸದ್ಯ QPL ಲೋಗೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ಮುಂದಿನ ದಿನಗಳಲ್ಲಿ auction, ಜೆರ್ಸಿ ಲಾಂಚ್, ಟ್ರೋಫಿ ಬಿಡುಗಡೆ ಮಾಡಲಾಗುತ್ತದೆ.

Continue Reading
Advertisement
Narendra modi
ದೇಶ8 mins ago

Narendra Modi : ಬಿಹಾರದಲ್ಲಿ 2019 ರಲ್ಲಿ ಒಂದು ಸ್ಥಾನದಲ್ಲಿ ಸೋತೆವು. ಈ ಬಾರಿ ಎಲ್ಲವೂ ನಮ್ಮದೇ ಎಂದ ಮೋದಿ

Viral Video
ದೇಶ30 mins ago

Viral Video: ವಂದೇ ಭಾರತ್ ರೈಲಿನಡಿ ಸಿಲುಕಿದರೂ ಹಸು ಪ್ರಾಣಾಪಾಯದಿಂದ ಪಾರಾಗಿದ್ದು ಹೇಗೆ?

Sean Williams
ಪ್ರಮುಖ ಸುದ್ದಿ31 mins ago

Sean Williams : ಜಿಂಬಾಬ್ವೆ ತಂಡದ ಹಿರಿಯ ಆಲ್​ರೌಂಡರ್​ ಟಿ20 ಕ್ರಿಕೆಟ್​ನಿಂದ ನಿವೃತ್ತಿ

Hoax bomb threat
ಕರ್ನಾಟಕ43 mins ago

Hoax Bomb Threat: ದೆಹಲಿ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ‌ ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ‌; ಆತಂಕ ಸೃಷ್ಟಿ

IPL 2024
ಕ್ರೀಡೆ52 mins ago

IPL 2024 : ಕೆಕೆಆರ್ ತಂಡದ ಇನ್ನೊಬ್ಬ ಆಟಗಾರನಿಗೆ ದಂಡ ವಿಧಿಸಿದ ಬಿಸಿಸಿಐ

Prajwal Revanna Case Basavaraj Bommai says DK Shivakumar should be questioned
ಕರ್ನಾಟಕ55 mins ago

Prajwal Revanna Case: ದಿಕ್ಕು ತಪ್ಪಿದೆ ಪ್ರಜ್ವಲ್ ರೇವಣ್ಣ ಕೇಸ್‌; ಡಿಕೆಶಿ ವಿಚಾರಣೆಯೂ ಆಗಲಿ ಎಂದ ಬಸವರಾಜ ಬೊಮ್ಮಾಯಿ

Bomb Threat
ದೇಶ1 hour ago

Bomb Threat:  ಏರ್​ಪೋರ್ಟ್​ ಸೇರಿ ದೆಹಲಿಯ ಹತ್ತಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ

BDA Complex
ಕರ್ನಾಟಕ1 hour ago

BDA Complex: ವಿರೋಧದ ನಡುವೆ ಖಾಸಗಿ ಕಂಪನಿ ತೆಕ್ಕೆಗೆ 7 ಬಿಡಿಎ ಕಾಂಪ್ಲೆಕ್ಸ್; ಆದಾಯದಲ್ಲಿ 70:30 ಪಾಲು

IPL 2024
ಐಪಿಎಲ್ 20242 hours ago

IPL 2024: ರಾಜಸ್ಥಾನ ವಿರುದ್ಧ ಗೆದ್ದು ಬೀಗಿದ ಚೆನ್ನೈ; ಪ್ಲೇಆಫ್‌ ಆಸೆ ಜೀವಂತ, ಆರ್‌ಸಿಬಿಗೆ ಹೆಚ್ಚಿದ ಒತ್ತಡ

French Yoga Teacher
ಮಹಿಳೆ2 hours ago

French Yoga Teacher: ಹಸಿರು ಸೀರೆ ಧರಿಸಿ ಪದ್ಮಶ್ರೀ ಸ್ವೀಕರಿಸಿದ 101 ವರ್ಷದ ವಿದೇಶಿ ಯೋಗ ಶಿಕ್ಷಕಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case I was never kidnapped and son has made a false complaint Video of victim goes viral
ಕ್ರೈಂ3 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ3 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ3 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ7 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ8 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ16 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

ಟ್ರೆಂಡಿಂಗ್‌