Car Accident | ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐವರು ಖ್ಯಾತ ಕ್ರಿಕೆಟಿಗರು ಇವರು - Vistara News

Latest

Car Accident | ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐವರು ಖ್ಯಾತ ಕ್ರಿಕೆಟಿಗರು ಇವರು

ಅಪಘಾತದಲ್ಲಿ(Car Accident) ಈಗಾಗಲೇ ಹಲವು ಕ್ರಿಕೆಟಿಗರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹ ಕೆಲವು ಕ್ರಿಕೆಟಿಗರ ವರದಿ ಇಲ್ಲಿದೆ.

VISTARANEWS.COM


on

car crash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಟೀಮ್​ ಇಂಡಿಯಾ ಆಟಗಾರ ರಿಷಭ್​ ಪಂತ್​ ರಸ್ತೆ ಅಪಘಾತದಲ್ಲಿ ಗಾಯಗೊಂಡು ಸದ್ಯ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಗಂಭೀರ ಅಪಘಾತದಲ್ಲಿ ಅವರು ಪ್ರಾಣಪಾಯದಿಂದ ಪಾರಾಗಿದ್ದೇ ಪವಾಡ ಎಂಬಂತಿದೆ. ಆದರೆ ಇಂತಹ ಅಪಘಾತದಲ್ಲಿ ಈಗಾಗಲೇ ಹಲವು ಕ್ರಿಕೆಟಿಗರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹ ಕೆಲವು ಕ್ರಿಕೆಟಿಗರ ವರದಿ ಈ ಕೆಳಗಿನಂತಿದೆ.

ಆ್ಯಂಡ್ರೂ ಸೈಮಂಡ್ಸ್

ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್‌ ಆಟಗಾರ ಆ್ಯಂಡ್ರ್ಯೂ ಸೈಮಂಡ್ಸ್‌ ಮೇ 2022 ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಎಂಬಲ್ಲಿ ಈ ಅಪಘಾತ ಸಂಭವಿಸಿತ್ತು. ರಾತ್ರಿಯ ವೇಳೆ ಸೈಮಂಡ್ಸ್‌ ಒಬ್ಬರೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆಯಿಂದ ಹೊರಗೆ ಸಂಚರಿಸಿ, ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸೈಮಂಡ್ಸ್ ಅವರಿಗೆ ಕೇವಲ 46 ವರ್ಷವಾಗಿತ್ತು.

ರುನಾಕೊ ಮಾರ್ಟನ್

ವೆಸ್ಟ್ ಇಂಡೀಸ್ ಕ್ರಿಕೆಟಿಗ ಸ್ಟಾರ್​ ಕ್ರಿಕೆಟಿಗ ರುನಾಕೊ ಮಾರ್ಟನ್ ಅವರು ತಮ್ಮ 33 ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. ಮಾರ್ಚ್ 2012 ರಲ್ಲಿ ಈ ಘಟನೆ ಸಂಭವಿಸಿತ್ತು. ಹೆದ್ದಾರಿಯೊಂದರ ಕಂಬಕ್ಕೆ ರುನಾಕೊ ಮಾರ್ಟನ್ ಚಲಾಯಿಸುತಿದ್ದ ಕಾರು ನಿಯಂತ್ರಣ ತಪ್ಪಿ ಅಪ್ಪಳಿಸಿತ್ತು. ತಲೆಯ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ವಿಂಡೀಸ್ ಕ್ರಿಕೆಟಿಗ ಸ್ಥಳದಲ್ಲೇ ಕೊನೆಯುಸಿರೆಳೆದರು.

ಬೆನ್ ಹೋಲಿಯೋಕ್

ಮಾರ್ಚ್ 2002 ರಲ್ಲಿ ಇಂಗ್ಲೆಂಡ್​ ತಂಡದ ಆಟಗಾರ ಬೆನ್ ಹೋಲಿಯೋಕ್ ಅವರು ತಮ್ಮ ಗೆಳತಿಯೊಂದಿಗೆ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದರು. ಅತೀ ವೇಗವಾಗಿ ಚಲಿಸುತ್ತಿದ್ದ ಕಾರು ಏಕಾಏಕಿ ಸ್ಕಿಡ್ ಆಗಿ ರಸ್ತೆ ಬದಿಯಲ್ಲಿದ್ದ ಗೋಡೆಗೆ ಅಪ್ಪಳಿಸಿತು. ಡಿಕ್ಕಿ ಹೊಡೆದ ರಭಸಕ್ಕೆ ಬೆನ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಗಂಭೀರ ಗಾಯಗೊಂಡ ಅವರ ಗೆಳತಿ ಪ್ರಾಣಾಪಯದಿಂದ ಪಾರಾದರು.

ಮಂಜುರುಲ್ ಇಸ್ಲಾಂ ರಾಣಾ

ಅತಿ ಕಿರಿಯ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಕ್ರಿಕೆಟಿಗನೆಂದರೆ ಬಾಂಗ್ಲಾದೇಶ ತಂಡ ಆಟಗಾರ ಮಂಜುರುಲ್ ಇಸ್ಲಾಂ ರಾಣಾ. ಮಾರ್ಚ್ 16, 2007 ರಂದು ತಮ್ಮ 22 ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟರು. ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದ ಮಂಜುರುಲ್ ಇಸ್ಲಾಂ, ಮಿನಿ ಬಸ್​ಗೆ ಡಿಕ್ಕಿ ಹೊಡೆದಿದ್ದರು. ಬಳಿಕ ನಿಯಂತ್ರಣ ಕಳೆದುಕೊಂಡ ಬೈಕ್ ಗೇಟ್ ಅಂಚಿನಲ್ಲಿದ್ದ ಪಿಲ್ಲರ್​ಗೆ ಡಿಕ್ಕಿ ಹೊಡೆದಿತ್ತು. ಈ ಪರಿಣಾಮ ಮಂಜುರುಲ್ ಇಸ್ಲಾಂ ತೀವ್ರ ಗಾಯಗೊಂಡು ನಿಧನ ಹೊಂದಿದರು.

ಎಜ್ರಾ ಮೊಸ್ಲೆ

ವೆಸ್ಟ್ ಇಂಡೀಸ್ ಮಾಜಿ ವೇಗಿ ಎಜ್ರಾ ಮೊಸ್ಲೆ ಅವರು ಫೆಬ್ರವರಿ 2021 ರಲ್ಲಿ ನಿಧನಹೊಂದಿರು. 63 ವರ್ಷದ ಅವರು ಬಾರ್ಬಡೋಸ್‌ನ ಎಬಿಸಿ ಹೆದ್ದಾರಿಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾಗ ಹಿಂಬದಿಯಿಂದ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. 90 ದಶಕದಲ್ಲಿ ತಮ್ಮ ಘಾತಕ ಬೌಲಿಂಗ್​ ಮೂಲಕ ಹೆಸರುವಾಸಿಯಾಗಿದ್ದರು. ವಿಂಡೀಸ್​ ಪರ 9 ಏಕದಿನ ಪಂದ್ಯಗಳನ್ನಾಡಿದ್ದರು. ಜತೆಗೆ 279 ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ | Rishabh Pant | ಅಪಘಾತದಲ್ಲಿ ಗಂಭೀರ ಗಾಯಗೊಂಡ ಪಂತ್ ಫೋಟೊಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

Prajwal Revanna Case: ಮೇ 31ಕ್ಕೆ ಬೆಂಗಳೂರಿಗೆ ತಲುಪುವ ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಪ್ರಜ್ವಲ್ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ವಿಮಾನದ ಬ್ಯುಸಿನೆಸ್​ ಕ್ಲಾಸ್​ ವರ್ಗದಲ್ಲಿ ಅವರು ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಭಾರತ ಬಿಟ್ಟು ಪರಾರಿಯಾಗಿದ್ದ ಅವರು ವಾಪಸ್​ ಬರಲು ನಿರ್ಧರಿಸಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪೆನ್​ಡ್ರೈವ್ ಮೂಲಕ ಪ್ರಸರಣಗೊಂಡ ಅಶ್ಲೀಲ ವಿಡಿಯೊಗಳ ಪ್ರಕರಣದ (Prajwal Revanna Case) ಪ್ರಮುಖ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ವಾಪಸ್​ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಏರ್​ ಟಿಕೆಟ್​ ಬುಕ್ ಮಾಡಿದ ವಿವರ ‘ವಿಸ್ತಾರನ್ಯೂಸ್​’ಗೆ ಲಭ್ಯವಾಗಿದೆ. ಪ್ರಕರಣದ ತನಿಖೆ ನಡೆಸುವ ಎಸ್​ಐಟಿ ಪ್ರಜ್ವಲ್ ರೇವಣ್ಣಗಾಗಿ ಕಾಯುತ್ತಿದ್ದು ಭಾರತಕ್ಕೆ ಬಂದ ತಕ್ಷಣ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್​ನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಟಿಕೆಟ್​ ಬುಕ್​ ಮಾಡಿಕೊಂಡಿದ್ದು ಅಲ್ಲಿಂದಲೇ ಅವರನ್ನು ಎಸ್​ಐಟಿ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಿದ್ದಾರೆ.

ಮೇ 31ಕ್ಕೆ ಬೆಂಗಳೂರಿಗೆ ತಲುಪುವ ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಪ್ರಜ್ವಲ್ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ವಿಮಾನದ ಬ್ಯುಸಿನೆಸ್​ ಕ್ಲಾಸ್​ ವರ್ಗದಲ್ಲಿ ಅವರು ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಭಾರತ ಬಿಟ್ಟು ಪರಾರಿಯಾಗಿದ್ದ ಅವರು ವಾಪಸ್​ ಬರಲು ನಿರ್ಧರಿಸಿದ್ದಾರೆ. ಎಸ್​ಐಟಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸುವುದಕ್ಕಿಂತ ಮೊದಲೇ ಅವರು ಭಾರತದಿಂದ ಹೊರಟ್ಟಿದ್ದರು. ಪ್ರಕರಣ ಕಾವು ಪಡೆದು ಪ್ರತಿಭಟನೆ ಹಾಗೂ ಧರಣಿಗಳು ನಡೆಯುವ ಸಂದರ್ಭದಲ್ಲಿ ದೇಶದಿಂದ ದೂರವಿದ್ದರು. ಎಸ್​ಐಟಿ ಪೊಲೀಸರು ಪ್ರಜ್ವಲ್​ ವಶಕ್ಕೆ ಪಡೆಯಲು ನಾನಾ ರಾಜತಾಂತ್ರಿಕ ಸಮಸ್ಯೆ ಎದುರಾದ ಕಾರಣ ಕಾಯಬೇಕಾಯಿತು. ಅಂತಿಮವಾಗಿ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲರ ಒತ್ತಾಯ ಹಾಗೂ ತಮಗೆ ಹಾಜರಾಗಲು ನೀಡಿದ ನೋಟಿಸ್​ನ ಗಡುವು ಮುಗಿದ ಕಾರಣ ಜರ್ಮನಿಯಿಂದ ಬರಲಿದ್ದಾರೆ.

ಪ್ರಜ್ವಲ್‌ ರೇವಣ್ಣ ಮೇ 31ರ ಮೊದಲು ಬರಲೇಬೇಕು! ಕಾರಣ ಇಲ್ಲಿದೆ

ಅಶ್ಲೀಲ ವಿಡಿಯೋ ವೈರಲ್ (pen drive case video viral) ಪ್ರಕರಣದಲ್ಲಿ ವಿಶೇಷ ತನಿಖಾ ತಂಡಕ್ಕೆ ಬೇಕಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassan MP Prajwal Revanna Case) ನಾಪತ್ತೆಯಾಗಿ ಒಂದು ತಿಂಗಳ ಬಳಿಕ ಹೊಸ ವಿಡಿಯೋ ಮೂಲಕ ಪ್ರತ್ಯಕ್ಷವಾಗಿದ್ದಾರೆ. ಆದರೆ ಅವರು ದೇಶದೊಳಗೇ ಇದ್ದುಕೊಂಡೇ ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದರೇ ಎಂಬ ಸಂಶಯವೂ ವ್ಯಕ್ತವಾಗಿದೆ.

ಇದನ್ನೂ ಓದಿ: Prajwal Revanna Case: ಎರಡು ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಎಚ್.ಡಿ.ರೇವಣ್ಣ ಅರ್ಜಿ

ನಿನ್ನೆ ಹೊಸ ವಿಡಿಯೋ ಮಾಡಿ ಹರಿಬಿಟ್ಟಿರುವ ಪ್ರಜ್ವಲ್‌, ಶುಕ್ರವಾರ, ಮೇ 31ರಂದು ಎಸ್‌ಐಟಿ (SIT) ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಸದ್ಯ ವಿಡಿಯೋವನ್ನು ಎಸ್‌ಐಟಿ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ. ವಿಡಿಯೋದ ಮೂಲ ಯಾವುದು, ಯಾವ ಐಪಿ ಅಡ್ರೆಸ್‌ನಿಂದ ಆಪ್‌ಲೋಡ್ ಆಗಿದೆ ಎಂಬುದರ ಪತ್ತೆಗೆ‌ ಎಸ್‌ಐಟಿ ಮುಂದಾಗಿದೆ. ವಿಡಿಯೋ ಮೊದಲು ತಲುಪಿದ್ದು ಯಾರಿಗೆ, ಎಲ್ಲಿಂದ, ವಿಡಿಯೋ ಮಾಡಿರುವ ಮದರ್ ಡಿವೈಸ್ ಮಾಹಿತಿ ಪತ್ತೆಗೆ ಎಸ್‌ಐಟಿ ಯತ್ನಿಸುತ್ತಿದೆ. ಶುಕ್ರವಾರ ಪ್ರಜ್ವಲ್‌ ಎಸ್ಐಟಿ ಮುಂದೆ ಹಾಜರಾಗದಿದ್ದಲ್ಲಿ ಮದರ್ ಡಿವೈಸ್ ಲೋಕೆಷನ್ ಪತ್ತೆಗೆ ಯತ್ನಿಸುವ ಸಂಭವ ಇದೆ. ಸದ್ಯ ಪ್ರಜ್ವಲ್ ರೇವಣ್ಣ ಬರುವವರೆಗೂ ಕಾಯಲು ಇಷ್ಟವಿಲ್ಲದ ಎಸ್ಐಟಿ, ಅದಕ್ಕೂ ಮುನ್ನವೇ ಪತ್ತೆ ಮಾಡಿ ಬಂಧಿಸುವ ಚಿಂತನೆ ನಡೆಸಿದೆ.

ಯಾಕೆ ಮೇ 31 ?

ಮೇ 31ರಂದು ಪ್ರಜ್ವಲ್‌ ರೇವಣ್ಣ ಅವರ ಕಳೆದ ಬಾರಿಯ ಸಂಸದ ಸ್ಥಾನ ಅವಲಂಬಿಸಿ ನೀಡಲಾದ ರಾಜತಾಂತ್ರಿಕ ಪಾಸ್‌ಪೋರ್ಟ್‌ನ (Diplomatic passport) ಅವಧಿ ಅಂತ್ಯವಾಗಲಿದೆ. ಈ ಸಲ ಚುನಾಯಿತರಾದರೆ ಅವರು ಹೊಸದಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್‌ ಮಾಡಿಸಿಕೊಳ್ಳಬೇಕಿದೆ. ಹೀಗಾಗಿ ಹಳೆಯ ಪಾಸ್‌ಪೋರ್ಟ್‌ನಲ್ಲಿ ಓಡಾಡಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಪ್ರಜ್ವಲ್‌ ಮೇ 31ನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ಪ್ರಜ್ವಲ್ ರೇವಣ್ಣ ವಿರುದ್ಧದ ಎಸ್ಐಟಿ ತನಿಖೆ ಮಹತ್ವದ ಹಂತ ತಲುಪಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಲಾಗಿದೆ. ಪ್ರಜ್ವಲ್ ರೇವಣ್ಣ ಬಂದ ಬಳಿಕ ತನಿಖೆ ಮಾಡಬೇಕಿದೆ. ಅಶ್ಲೀಲ ವಿಡಿಯೋಗಳನ್ನು ಮಾಡಲಾದ ಡಿವೈಜ್ ಅನ್ನು ಪತ್ತೆಹಚ್ಚಬೇಕಿದೆ. ಅಶ್ಲೀಲ ವಿಡಿಯೋಗಳ ಕುರಿತು ಫಾರೆನ್ಸಿಕ್ ರಿಪೋರ್ಟ್‌ಗಾಗಿ ಎಸ್ಐಟಿ ಕಾಯುತ್ತಿದೆ. FSL ರಿಪೋರ್ಟ್ ಎಸ್ಐಟಿ ಕೈ ಸೇರಿದ ಕೂಡಲೇ ಚಾರ್ಜ್‌ಶೀಟ್‌ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್ ರೇವಣ್ಣ ಹೇಳಿಕೆ ದಾಖಲಿಸಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಬೇಕಿದೆ.

ಜೂನ್ ಮೊದಲ ವಾರದಲ್ಲಿ ಪ್ರಜ್ವಲ್ ಬಂದಿದ್ದೇ ಆದಲ್ಲಿ ತನಿಖೆ ನಡೆಸಿ ಸ್ಟೇಟ್ಮೆಂಟ್ ದಾಖಲಿಸಲಿದ್ದಾರೆ. ಒಂದು ವೇಳೆ ಪ್ರಜ್ವಲ್ ಜೂನ್‌ನಲ್ಲಿ ವಾಪಸ್ ಬರದೇ ಇದ್ದಲ್ಲಿ, ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ನ್ಯಾಯಾಲಯಕ್ಕೆ ಅಬ್‌ಸ್ಕಾಂಡ್‌ ಚಾರ್ಜ್‌ಶೀಟ್ ಸಲ್ಲಿಸಬೇಕಿದೆ.

ಗೃಹ ಸಚಿವರು ಏನೆಂದರು?

ಪ್ರಜ್ವಲ್ ವಿಡಿಯೋ ರಿಲೀಸ್ ವಿಚಾರದಲ್ಲಿ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ (home minister G Parameshwara) ಹೇಳಿಕೆ ನೀಡಿದ್ದಾರೆ. “ಮೇ 31ರಂದು ಪ್ರಜ್ವಲ್‌ ಸಂಸದ ಸ್ಥಾನ ಅಂತ್ಯವಾಗಲಿದೆ. ಆಗ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಸೀಜ್ ಆಗುತ್ತದೆ. ಇದೆಲ್ಲವನ್ನು ತಿಳಿದುಕೊಂಡು ಬರಲು ಯೋಚನೆ ಮಾಡಿದ್ದಾರೆ ಅನ್ಸುತ್ತೆ” ಎಂದಿದ್ದಾರೆ.

“ದೇಶದೊಳಗೆ ಏನು ಪ್ರಯತ್ನ ‌ಮಾಡಬೇಕು ನಾವು ಮಾಡಿದ್ದೇವೆ. ಕೇಂದ್ರ ಸರ್ಕಾರಕ್ಕೆ ಬರೆದಿದ್ದೇವೆ, ಕೇಂದ್ರ ಗೃಹ ಇಲಾಖೆಗೆ ವಾರೆಂಟ್ ಬಗ್ಗೆ ತಿಳಿಸಿದ್ದೇವೆ. ಬ್ಲೂ ಕಾರ್ನರ್ ನೋಟೀಸ್ (blue corner notice) ಇಶ್ಯೂ ಆಗಿದೆ. ಪ್ರಜ್ವಲ್‌ ಬರದೇ ಹೋದರೆ ಇಂಟರ್‌ಪೋಲ್‌ನವರು (Interpol) ಲೊಕೇಶನ್‌ ತಿಳಿದುಕೊಂಡು ನಮಗೆ ಮಾಹಿತಿ ನೀಡುವುದು ಎಂದಿತ್ತು. ಇಂತಹ ಸಂದರ್ಭದಲ್ಲಿ ನಾನು ಬರ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ” ಎಂದಿದ್ದಾರೆ.

ಈ ಸಲ ಸುಮ್ಮನಿರೋಲ್ಲ ಎಸ್‌ಐಟಿ

ಪ್ರಜ್ವಲ್ ರೇವಣ್ಣ ವಿಡಿಯೋ ಬಿಟ್ಟ ಬೆನ್ನಲ್ಲೇ ಎಸ್ಐಟಿ ಅಲರ್ಟ್ ಆಗಿದೆ. ವಿಡಿಯೋ ಬಿಟ್ಟಿದ್ದು ಎಲ್ಲಿಂದ, ಯಾವ ದೇಶದಿಂದ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಕಳೆದ ಬಾರಿ ಕೂಡ ಪ್ರಜ್ವಲ್ ರೇವಣ್ಣ ಇದೇ ರೀತಿ ಕಾಲಾವಕಾಶ ಕೋರಿದ್ದರು. ಹೇಳಿದಂತೆ ವಿಚಾರಣೆಗೆ ಹಾಜರಾಗದೆ ದೂರ ಉಳಿದಿದ್ದರು. ಈ ಬಾರಿಯೂ ಹಾಗೆಯೇ ಮಾಡುವ ಸಾಧ್ಯತೆ ಕೂಡ ಇದೆ. ಹೀಗಾಗಿ ಈಗಲೇ ಪ್ರಜ್ವಲ್ ರೇವಣ್ಣ ಕಾಂಟ್ಯಾಕ್ಟ್‌ಗೆ ಎಸ್‌ಐಟಿ ಮುಂದಾಗಿದೆ.

ಕೇಂದ್ರ ತನಿಖಾ ಸಂಸ್ಥೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಇಂಟರ್‌ಪೋಲ್‌ಗೂ ಎಸ್‌ಐಟಿ ಮಾಹಿತಿ ಕೋರಲಿದೆ. ಈಗಾಗಲೇ ಪ್ರಜ್ವಲ್‌ ವಿರುದ್ಧ ಲುಕ್‌ಔಟ್‌ ನೋಟೀಸ್‌ (lookout notice) ಹಾಗೂ ಬ್ಲೂ ಕಾರ್ನರ್‌ ನೋಟೀಸ್‌ ಜಾರಿ ಮಾಡಲಾಗಿದೆ. ಆತನ ವಿರುದ್ಧ ಆರೆಸ್ಟ್ ವಾರಂಟ್ ಕೂಡ ಇದೆ. ಹೀಗಾಗಿ ಎಸ್‌ಐಟಿ ಒಂದು ತಿಂಗಳಿಂದ ಏರ್‌ಪೋರ್ಟ್‌ನಲ್ಲೇ ಠಿಕಾಣಿ ಹೂಡಿದೆ. ಏರ್‌ಪೋರ್ಟ್‌ನಿಂದ ಹೊರಕ್ಕೆ ಕಾಲಿಡುವ ಮೊದಲೇ ಇಮಿಗ್ರೇಶನ್‌ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣನನ್ನು ವಶಕ್ಕೆ ಪಡೆದು ಎಸ್‌ಐಟಿಗೆ ಒಪ್ಪಿಸಲಿದ್ದಾರೆ.

Continue Reading

ಕರ್ನಾಟಕ

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Chakravarthy Sulibele: ಭಾರತ ಬಡತನದ ರಾಷ್ಟ್ರ, ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ, ಮೋದಿ ನೇತೃತ್ವದ ಬಿಜೆಪಿ ಈ ಬಾರಿ ಸೋಲುತ್ತದೆ ಎಂದು ಸುಳ್ಳನ್ನು ಸತ್ಯವೆಂದು ಎಲ್ಲ ಕಡೆಗಳಲ್ಲೂ ಹಬ್ಬಿಸುವ ಕೆಲಸ ನಡೆಯುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು. ಪ್ರಶಸ್ತಿಯು 1 ಲಕ್ಷ ರೂ. ನಗದನ್ನು ಒಳಗೊಂಡಿದೆ. ಆದರೆ ಪ್ರಶಸ್ತಿ ರೂಪದಲ್ಲಿ ನೀಡಲಾದ 1 ಲಕ್ಷ ರೂ. ಹಣವನ್ನು ಗೋಶಾಲೆ ಅಭಿವೃದ್ಧಿಗೆ ನೀಡುವುದಾಗಿ ಚಕ್ರವರ್ತಿ ಸೂಲಿಬೆಲೆ ಘೋಷಿಸಿದರು.

VISTARANEWS.COM


on

chakravarthy sulibele
Koo

ಮೈಸೂರು: ಮೈಸೂರಿನ ವೀರ ಸಾವರ್ಕರ್ ಪ್ರತಿಷ್ಠಾನವು ಮಂಗಳವಾರ ಸಂಜೆ ವಾಗ್ಮಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರಿಗೆ ‘ವೀರ ಸಾವರ್ಕರ್ ಸಮ್ಮಾನ್-2024’ ಪ್ರಶಸ್ತಿ ಪ್ರದಾನ ಮಾಡಿತು. ಕಲಾಮಂದಿರದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಕೊಡವವರು ನಿಲ್ಲುವುದು, ಸ್ವೀಕರಿಸುವುದು ಕೂರುವುದು ವಾಡಿಕೆ. ಆದರೆ ಚಕ್ರವರ್ತಿ ಸೂಲಿಬೆಲೆ ಅವರು ಭೈರಪ್ಪ ಅವರನ್ನು ಕೂರಿಸಿ ತಾವು ಮಂಡಿಯೂರಿ ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದಲ್ಲಿ ಮಾತನಾಡಿದ ಎಸ್​ ಎಲ್ ಭೈರಪ್ಪ ಅವರು, ತ್ರಿವಿಧ ದಾಸೋಹಿಯಾಗಿ ತುಮಕೂರಿನ ಸಿದ್ಧಗಂಗಾ ಶ್ರೀಗಳು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದರೂ, ಅವರಿಗೆ ಮರಣೋತ್ತರ ಭಾರತ ರತ್ನ ನೀಡದಿರುವುದು ಇಂದಿಗೂ ನನ್ನನ್ನು ಕಾಡುತ್ತಿದೆ ಎಂದು ಹೇಳಿದರು.

ಕೆಲವು ಸ್ವಾಮೀಜಿಗಳು ತಮಗೆ ಡಾಕ್ಟರೇಟ್‌ ಕೊಡಲಿ ಎಂದು ಹಪಹಪಿಸುತ್ತಾರೆ. ಆದರೆ ತುಮಕೂರಿನ  ಸಿದ್ದಗಂಗಾ ಶ್ರೀಗಳು ಯಾವುದೇ ಅಪೇಕ್ಷೆ ಇಲ್ಲದೆ, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಮಕ್ಕಳ ಜಾತಿ ಯಾವುದೆಂದು ಕೇಳದ ಸಿದ್ಧಗಂಗಾ ಸ್ವಾಮೀಜಿ ಅವರು, ಶಿಕ್ಷಣ ದಾಸೋಹ, ಅನ್ನ ದಾಸೋಹ ಮಾಡಿದ್ದಾರೆ. ಆ ಮೂಲಕ ಸಿದ್ದಗಂಗಾ ಸ್ವಾಮೀಜಿ ಅವರು ಸಮಾಜದ ಸೇವೆಗೆ ತಮ್ಮನ್ನು ಮುಡಿಪಾಗಿ ಇಟ್ಟಿದ್ದರು. ನಾನು ಸಹ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದೆ. ಆದರೆ ದುರಂತದ ಸಂಗತಿಯೆಂದರೆ ಸಾವರ್ಕರ್‌ ಅವರನ್ನು ಮೈಲಿಗೆಯಲ್ಲಿ ಇಟ್ಟಂತೆ ಸಿದ್ದಗಂಗಾ ಶ್ರೀಗಳನ್ನು ಇಡಲಾಗಿದೆ ಅನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ರಾಪಗಾಂಡ ವಾರ್​

ಸಮಾರಂಭದಲ್ಲಿ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಇಂದು ಯಾವ ದೇಶವು ಭಾರತದ ಮೇಲೆ ಪ್ರತ್ಯಕ್ಷ ಯುದ್ಧ ಮಾಡಲು ಸಾಧ್ಯವಾಗದ ಪರಿಣಾಮ ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಎಂದು ಪ್ರಚುರಪಡಿಸುವ ಪ್ರಾಪಗಾಂಡ ವಾರ್‌ ನಡೆಸಲಾಗುತ್ತಿದೆ. ಭಾರತದ ಬಡತನದ ರಾಷ್ಟ್ರ, ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ. ಮೋದಿ ಮತ್ತು ಬಿಜೆಪಿ ಈ ಬಾರಿ ಸೋಲುತ್ತಾರೆ ಎಂದು ಸುಳ್ಳನ್ನು ಸತ್ಯವೆಂದು ಎಲ್ಲ ಕಡೆಗಳಲ್ಲೂ ಹಬ್ಬಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Veer Savarkar flyover: ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿರೋದು ಅತ್ಯಂತ ಖಂಡನೀಯ: ವಿಜಯೇಂದ್ರ

ಪ್ರಶಸ್ತಿಯು 1 ಲಕ್ಷ ರೂ. ನಗದನ್ನು ಒಳಗೊಂಡಿದೆ. ಆದರೆ ಪ್ರಶಸ್ತಿ ರೂಪದಲ್ಲಿ ನೀಡಲಾದ 1 ಲಕ್ಷ ರೂ. ಹಣವನ್ನು ಗೋಶಾಲೆ ಅಭಿವೃದ್ಧಿಗೆ ನೀಡುವುದಾಗಿ ಚಕ್ರವರ್ತಿ ಸೂಲಿಬೆಲೆ ಘೋಷಿಸಿದರು.

ಸಮಾರಂಭದಲ್ಲಿ ಶಾಸಕ ಟಿ.ಎಸ್‌. ಶ್ರೀವತ್ಸ, ಮಾಜಿ ಮೇಯರ್‌ ಶಿವಕುಮಾರ್‌, ವೀರ ಸಾವರ್ಕರ್‌ ಪ್ರತಿಷ್ಠಾನದ ಅಧ್ಯಕ್ಷೆ ಯಶಸ್ವಿನಿ ಎಸ್‌., ಆದಿತ್ಯ ಅಧಿಕಾರಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ್‌ ಮತ್ತಿತರರು ಇದ್ದರು.

Continue Reading

ಸಿನಿಮಾ

Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

ಬಾಲಿವುಡ್ ನ ಆದರ್ಶ ಜೋಡಿಯಲ್ಲಿ ಶಾರುಖ್ ಮತ್ತು ಗೌರಿ ಅವರೂ ಸೇರಿದ್ದಾರೆ. ಈ ಜೋಡಿ ಮದುವೆಯಾಗಿ 33 ವರ್ಷಗಳಾಗಿದ್ದು ಮೂವರು ಮಕ್ಕಳ ಪೋಷಕರಾಗಿದ್ದರೆ. ಧರ್ಮದ ವಿಚಾರದಲ್ಲಿ ಗೌರಿ (Gauri Khan) ಈಗಲೂ ಹಿಂದುವಾಗಿಯೇ ಉಳಿದಿದ್ದಾರೆ. ಇದಕ್ಕೆ ಕಾರಣ ಏನೆಂಬುದನ್ನು ಅವರೇ ಹೇಳಿದ್ದಾರೆ.

VISTARANEWS.COM


on

By

Gauri Khan
Koo

ಬಾಲಿವುಡ್ ನ (bollywood) ಆದರ್ಶ ದಂಪತಿಗಳ ಸಾಲಿನಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan), ಗೌರಿ ಖಾನ್ (Gauri Khan) ದಂಪತಿಯೂ ಇದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರಿಬ್ಬರ ನಡುವಿನ ಪ್ರೀತಿ ಮತ್ತು ಹೊಂದಾಣಿಕೆ. ಇದು ಅವರ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಂತೆ ಮಾಡಿದೆ.

ಅಭಿಮಾನಿಗಳನ್ನು ಪ್ರೀತಿ, ವಾತ್ಸಲ್ಯದಿಂದ ಕಾಣುವ ಈ ದಂಪತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಾನು ನಿಮ್ಮೊಂದಿಗೆ ಬೆಳೆಯಲು ಬಯಸುತ್ತೇನೆ ಎಂದು ಹೇಳಿ ಮತ್ತೆ ಎಲ್ಲರ ಮನ ಗೆದ್ದಿದ್ದಾರೆ.

ಗೌರಿ ಮತ್ತು ಶಾರುಖ್ ಖಾನ್ ಅವರ ಧರ್ಮ ಬೇರೆಬೇರೆಯಾದರೂ ಇದು ಅವರಿಬ್ಬರ ನಡುವಿನ ಪ್ರೀತಿಗೆ ಅಡ್ಡಿಯಾಗಲಿಲ್ಲ. ಮದುವೆಯ ಮೊದಲು ಕೆಲವು ತೊಂದರೆಗಳು ಎದುರಾದರೂ ಮದುವೆಯ ಬಳಿಕ ದಂಪತಿ ಎಂದರೆ ಹೀಗಿರಬೇಕು ಎನ್ನುವಷ್ಟು ಇವರಿಬ್ಬರೂ ಮಾದರಿಯಾಗಿದ್ದಾರೆ.

ಕಿಂಗ್ ಖಾನ್ ಮೊದಲಿನಿಂದಲೂ ತನ್ನ ರಾಣಿಗೆ ಆದರ್ಶ ಪತಿ. ಶಾರುಖ್ ಖಾನ್ ಮುಸ್ಲಿಂ ಆಗಿರುವುದರಿಂದ ಮದುವೆಯಾದ ಬಳಿಕ ಗೌರಿ ಮುಸ್ಲಿಂ ಆಗಿ ಮತಾಂತರವಾಗುತ್ತಾರೆ ಎನ್ನುವ ಹೇಳಿಕೆಗಳು ಜೋರಾಗಿ ಕೇಳಿ ಬಂದಿತ್ತು. ಹೀಗಾಗಿ ಅವರಿಗೂ ಪದೇಪದೇ ತಾವು ಮುಸ್ಲಿಂ ಆಗಿ ಮತಾಂತರಗೊಳ್ಳುವುದಿಲ್ಲ ಎಂದು ಹೇಳಬೇಕಾದ ಸಂದರ್ಭಗಳು ಎದುರಾಗಿತ್ತು.

ಇತ್ತೀಚೆಗೆ ಕರಣ್ ಜೋಹರ್ ಅವರ ಕಾರ್ಯಕ್ರಮ ಕಾಫಿ ವಿತ್ ಕರಣ್‌ನಲ್ಲಿಹೃತಿಕ್ ರೋಷನ್ ಅವರ ಪತ್ನಿ ಸುಸ್ಸಾನ್ನೆ ಖಾನ್ ಅವರೊಂದಿಗೆ ಗೌರಿ ಆಗಮಿಸಿದ್ದರು. ಅಲ್ಲಿ ಗೌರಿ ಮುಸ್ಲಿಂ ಆಗಿ ಮತಾಂತರಗೊಳ್ಳದಿರುವ ಕುರಿತು ಚರ್ಚೆ
ನಡೆದಿತ್ತು.

ಯಾಕೆ ಮತಾಂತರವಾಗಲಿಲ್ಲ?

ಶಾರುಖ್ ಖಾನ್ ಅವರ ಧರ್ಮಕ್ಕೆ ನಾನು ಮತಾಂತರವಾಗುವುದಿಲ್ಲ ಎಂದು ಗೌರಿ ಖಾನ್ ಹೇಳಿರುವ ಹಳೆಯ ವಿಡಿಯೋ ಈಗ ಮತ್ತೆ ಸದ್ದು ಮಾಡಿದೆ. ಇದರಲ್ಲಿ ಅವರು ತಾವು ಇಸ್ಲಾಂ ಧರ್ಮಕ್ಕೆ ಮತಾಂತರವಾಗದೇ ಉಳಿಯಲು ಕಾರಣವನ್ನೂ ಕೊಟ್ಟಿದ್ದಾರೆ.

ನಮ್ಮಿಬ್ಬರ ಮಧ್ಯೆ ಸಮತೋಲನವಿದೆ. ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ. ಮತ್ತು ಅವರೂ ನನ್ನ ಧರ್ಮವನ್ನು ಗೌರವಿಸುತ್ತಾರೆ. ಹೀಗಾಗಿ ನಾನು ಮತಾಂತರಗೊಂಡು ಮುಸ್ಲಿಂ ಆಗಬೇಕು ಈ ಎನ್ನುವುದರಲ್ಲಿ ಅರ್ಥವಿಲ್ಲ. ಪರಸ್ಪರ ಜೊತೆಯಾಗಿ ಬಾಳಲು ಅದು ಅನಿವಾರ್ಯ ಎಂಬುದನ್ನು ನಾನು ನಂಬುವುದಿಲ್ಲ. ಪ್ರತಿಯೊಬ್ಬರೂ ವೈಯಕ್ತಿಕ ಮತ್ತು ಅವರ ಧರ್ಮವನ್ನು ಅನುಸರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?


ಶಾರುಖ್‌ನಂತೆ ನನ್ನ ಧರ್ಮವನ್ನು ಯಾವತ್ತೂ ಅಗೌರವಗೊಳಿಸುವುದಿಲ್ಲ. ಮಗ ಆರ್ಯನ್ ತನ್ನ ತಂದೆಯ ಧರ್ಮವನ್ನು ಅನುಸರಿಸುತ್ತಾನೆ. ಆರ್ಯನ್ ಗೆ ಶಾರುಖ್‌ ಎಂದರೆ ತುಂಬಾ ಇಷ್ಟ.ಹೀಗಾಗಿ ಆತ ಅವರ ಧರ್ಮವನ್ನು ಅನುಸರಿಸುತ್ತಾನೆ ಎಂದು ನಾನು ಭಾವಿಸುತ್ತೇನೆ. ನಾನು ಮುಸ್ಲಿಂ ಎಂದು ಅವರಿಬ್ಬರು ಯಾವಾಗಲೂ ಹೇಳುತ್ತಿರುತ್ತಾರೆ. ಅದನ್ನು ನಾನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ ಗೌರಿ ಖಾನ್.

ಶಾರುಖ್ ಖಾನ್ ಹಾಗೂ ಗೌರಿ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 33 ವರ್ಷಗಳಾಗಿವೆ. ಬಾಲಿವುಡ್‌ನ ಈ ಸುವರ್ಣ ದಂಪತಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಎಂಬ ಮೂರು ಮಕ್ಕಳಿದ್ದಾರೆ.

Continue Reading

ಪ್ರಮುಖ ಸುದ್ದಿ

Lok Sabha Election : ಷೇರು ಮಾರುಕಟ್ಟೆ ಸಂಸ್ಥೆಯ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲಿದೆ; ಲೆಕ್ಕಾಚಾರ ಹೀಗಿದೆ

Lok Sabha Election : ಏಪ್ರಿಲ್ 19ರಂದು ಚುನಾವಣೆಗಳು ಪ್ರಾರಂಭವಾದಾಗಿನಿಂದ ಪ್ರಮುಖ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ 3 ಪ್ರತಿಶತದಷ್ಟು ಪ್ರಗತಿ ಕಂಡಿದೆ. ಕಡಿಮೆ ಮತದಾನ ಹಾಗೂ ಸರ್ಕಾರದ ಅಸ್ಥಿರತೆಯ ಬಗ್ಗೆ ಇದ್ದ ಆರಂಭಿಕ ಕಳವಳಗಳು ನಿಧಾನವಾಗಿದೆ. ಆದರೆ, ಫಿಯರ್ ಗೇಜ್ ಇಂಡಿಯಾ ವಿಐಎಕ್ಸ್ ಪ್ರಕಾರ ಮಾರುಕಟ್ಟೆ ಚಂಚಲತೆ ಮುಂದುವರಿದಿದೆ.

VISTARANEWS.COM


on

Lok Sabha Election
Koo

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election) ಆರು ಹಂತಗಳ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಆನ್​ಲೈನ್​ ಸ್ಟಾಕ್ ಟ್ರೇಡಿಂಗ್ ಮತ್ತು ಹೂಡಿಕೆ ಸಂಸ್ಥೆಯಾಗಿರುವ ಐಐಎಫ್ಎಲ್ ಸೆಕ್ಯುರಿಟೀಸ್ ತನ್ನ ಸಮೀಕ್ಷೆಯನ್ನು ಪ್ರಕಟಿಸಿದೆ. ಅದರ ಪ್ರಕಾರ ಈ ಬಾರಿ ಬಿಜೆಪಿ 320 ಸ್ಥಾನಗಳನ್ನು ಸಲೀಸಾಗಿ ಗೆಲ್ಲಲಿದೆ. ಇದು 2019ರ 303 ಸೀಟ್​ಗಳಿಂತ ಅಧಿಕ. ಆರನೇ ಹಂತದ ಮತದಾನ ಸೇರಿದಂತೆ ಬಿಜೆಪಿಗೆ ಹೆಚ್ಚು ಮತಗಳು ಬೀಳುವ ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ 3 ಶೇಕಡಾ ಮತ ಚಲಾವಣೆ ಕುಸಿತ ಕಂಡಿದೆ. (ಹಿಂದಿಯೇತರ ರಾಜ್ಯಗಳಲ್ಲಿ 0.6 ಶೇಕಡಾ ಕುಸಿತ) ಇದು ಬಿಜೆಪಿಗೆ ನಷ್ಟ ಎಂದು ಅಂದಾಜಿಸಲಾಗುತ್ತದೆ. ಇದರ ಹೊರತಾಗಿಯೂ, ಉತ್ತರ ಪ್ರದೇಶ (ಎಸ್ಪಿ-ಬಿಎಸ್ಪಿ ಮೈತ್ರಿಯ ಅನುಪಸ್ಥಿತಿ), ಒಡಿಶಾ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸಿಗುವ ಸ್ಥಾನಗಳ ಲಾಭಗಳ ಮೂಲಕ ಬಿಜೆಪಿ ಬಹುಮತ ಹೆಚ್ಚಿಸಿಕೊಳ್ಳಲಿದೆ ಎಂದು ಬ್ರೋಕರೇಜ್ ಸಂಸ್ಥೆ ಅಂದಾಜಿಸಿದೆ.

ಒಟ್ಟು ಆರು ಹಂತಗಳ ಮತದಾನ ಮುಕ್ತಾಯವಾಗಿದ್ದು ಶೇಕಡಾ 89ರಷ್ಟು ಮತಗಳು ಚಲಾವಣೆಯಾಗಿದೆ. ಈ 486 ಸ್ಥಾನಗಳ ಪೈಕಿ ಬಿಜೆಪಿ 278 ಸ್ಥಾನಗಳಲ್ಲಿ ಗೆಲುವು ಸಾಧಿಸಿಲಿದೆ. ಜೂನ್ 1 ರಂದು ನಡೆಯಲಿರುವ ಕೊನೆಯ ಹಂತದ ಚುನಾವಣೆಗೆ ಮುಂಚಿತವಾಗಿ ಮೊದಲ ಎರಡು ಹಂತಗಳಲ್ಲಿ ಮತದಾನದ ಪ್ರಮಾಣ ಕುಸಿತ ಕಂಡಿದೆ. ಆದಾಗ್ಯೂ ಬಿಜೆಪಿ 320ರ ಗಡಿ ಮುಟ್ಟುವುದು ಖಚಿತ ಎಂದು ಅದು ಅಂದಾಜಿಸಿದೆ. ಇದೇ ವೇಳೆ ಕೊನೇ ಹಂತದ ಮತದಾನ 2019 ರ ಮಟ್ಟಕ್ಕಿಂತ ಸ್ವಲ್ಪ ಕಡಿಮೆಯಾಗಬಹುದು ಸಮೀಕ್ಷೆ ಹೇಳಿದೆ.

ಏಪ್ರಿಲ್ 19ರಂದು ಚುನಾವಣೆಗಳು ಪ್ರಾರಂಭವಾದಾಗಿನಿಂದ ಪ್ರಮುಖ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ 3 ಪ್ರತಿಶತದಷ್ಟು ಪ್ರಗತಿ ಕಂಡಿದೆ. ಕಡಿಮೆ ಮತದಾನ ಹಾಗೂ ಸರ್ಕಾರದ ಅಸ್ಥಿರತೆಯ ಬಗ್ಗೆ ಇದ್ದ ಆರಂಭಿಕ ಕಳವಳಗಳು ನಿಧಾನವಾಗಿದೆ ಕಡಿಮೆಯಾಗಿದೆ. ಆದರೆ, ಫಿಯರ್ ಗೇಜ್ ಇಂಡಿಯಾ ವಿಐಎಕ್ಸ್ ಪ್ರಕಾರ ಮಾರುಕಟ್ಟೆ ಚಂಚಲತೆ ಮುಂದುವರಿದಿದೆ.

ಇದನ್ನೂ ಓದಿ: Lok Sabha Election : ಲವ್​ ಜಿಹಾದ್ ಶುರುವಾಗಿದ್ದೇ ಜಾರ್ಖಂಡ್​ನಿಂದ; ಜೆಎಮ್​ಎಮ್​ ವಿರುದ್ಧ ಮೋದಿ ಗಂಭೀರ ಆರೋಪ

1951-67ನ್ನು ಹೊರತುಪಡಿಸಿ ಭಾರತದಲ್ಲಿ ಸತತವಾಗಿ ನಡೆದ 3 ಲೋಕಸಭಾ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳಗೊಂಡ ಉದಾಹರಣೆಗಳು ಇಲ್ಲ. ಅಂತೆಯೇ 2014 ಮತ್ತು 2019 ರ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳ ಕಂಡ ನಂತರ 2024 ರ ಚುನಾವಣೆಯಲ್ಲಿ ಯಥಾವತ್​ ಪ್ರಮಾಣ ಸ್ವಲ್ಪ ಕುಸಿತ ಕಂಡಿದೆ ಎಂದು ಐಐಎಫ್ಎಲ್ ಸೆಕ್ಯುರಿಟೀಸ್ ಹೇಳಿದೆ.

ಐಐಎಫ್ಎಲ್ ಸೆಕ್ಯುರಿಟೀಸ್ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ 2019 ರ ಒಟ್ಟು ಸ್ಥಾನಕ್ಕೆ ಇನ್ನೂ 10 ಸ್ಥಾನಗಳನ್ನು ಸೇರ್ಪಡೆಗೊಳಿಸಲಿದೆ. ಅಂದರೆ ಒಟ್ಟು 80ರಲ್ಲಿ 72 ಬಿಜೆಪಿ ಪಾಲಾಗಲಿದೆ. 2019ರಲ್ಲಿ ಅದು 62 ಆಗಿತ್ತು. ನರೇಂದ್ರ ಮೋದಿ ನೇತೃತ್ವದ ಪಕ್ಷವು ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ 2019ಕ್ಕಿಂತ ತಲಾ 5 ಹೆಚ್ಚುವರಿ ಸ್ಥಾನಗಳನ್ನು ಗಳಿಸಲದೆ. ಬಂಗಾಳದಲ್ಲಿ 18ರಿಂದ 23ಕ್ಕೆ ಏರಿಕೆಯಾದರೆ, ಒಡಿಶಾದಲ್ಲಿ 8ರಿಂದ 13ಕ್ಕೆ ಜಿಗಿಯಲಿದೆ. ಅಲ್ಲದೆ, ತೆಲಂಗಾಣ ಮತ್ತು ಆಂಧ್ರಪ್ರದೇಶ ತಲಾ 3 ಸ್ಥಾನಗಳನ್ನು ಪಡೆಯಲಿದೆ.

ಬೇಸ್​ ಪಾಯಿಂಟ್​ಗಳ ಕುಸಿತ

6 ಹಂತಗಳ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮತದಾನದ ಪ್ರಮಾಣದಲ್ಲಿ ಸರಾಸರಿ 150 ಬೇಸಿಸ್ ಪಾಯಿಂಟ್​​ಗಳ ಕುಸಿತ ಕಂಡುಬಂದಿದೆ. ಮೊದಲ ಹಂತದಲ್ಲಿ ಮತದಾನದ 400 ಬೇಸಿಸ್ ಪಾಯಿಂಟ್​ಗಳ ಕುಸಿತ ಹೋಲಿಸಿದರೆ ಇದು ಕಡಿಮೆ. ಹಂತ 4 ಮತ್ತು 5ನೇ ಹಂತದಲ್ಲಿ 2019 ಕ್ಕೆ ಹೋಲಿಸಿದರೆ ಅಲ್ಪ ಏರಿಕೆ ಕಂಡಿದ್ದು. 6 ನೇ ಹಂತವು ಅಲ್ಪ ಕುಸಿತ ದಾಖಲಾಗಿದೆ ಐಐಎಫ್ಎಲ್ ಸೆಕ್ಯುರಿಟೀಸ್ ಹೇಳಿದೆ.

2019 ರ ಚುನಾವಣೆಗೆ ಹೋಲಿಸಿದರೆ 486 ಸ್ಥಾನಗಳಲ್ಲಿ ಒಟ್ಟು 156 ಸ್ಥಾನಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ ಎಂದು ಐಐಎಫ್ಎಲ್ ಸೆಕ್ಯುರಿಟೀಸ್ ತಿಳಿಸಿದೆ.

ಅನಿರೀಕ್ಷಿತ ಫಲಿತಾಂಶ ಅಸಾಧ್ಯ

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ಪ್ರಮಾಣದ ಮತ ಹಂಚಿಕೆ ವ್ಯತ್ಯಾಸ ಆಗಿದೆ. ಹೀಗಾಗಿ 2024 ರ ಚುನಾವಣೆಯ ಫಲಿತಾಂಶ 2004 ರ ಚುನಾವಣೆಗಳಂತೆ ಅಚ್ಚರಿಯ ಫಲಿತಾಂಶವನ್ನು ಪ್ರಕಟಿಸುವುದಿಲ್ಲ ಎಂದು ಐಐಎಫ್ಎಲ್ ದೃಢವಾಗಿ ಹೇಳಿದೆ.

ಕರ್ನಾಟಕದಲ್ಲಿ ನಷ್ಟ

“ಮೈತ್ರಿ / ಅಭ್ಯರ್ಥಿ ಆಯ್ಕೆ ಸಮಸ್ಯೆಗಳಿಂದಾಗಿ ರಾಜಸ್ಥಾನ, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳಲ್ಲಿ ಬಿಜೆಪಿಗೆ ನಷ್ಟವಾಗಬಹುದು. ಆದರೆ, ಮಹಾರಾಷ್ಟ್ರದಲ್ಲಿ ಎನ್​ಡಿಎ 2 ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಅಂದಾಜಿಸಿದೆ. 2019 ರಲ್ಲಿ 224 ಸ್ಥಾನಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮತ ಪಡೆಯುವ ಮೂಲಕ ಬಿಜೆಪಿ ತನ್ನ ಬಹುಮತವನ್ನು ಉಳಿಸಿಕೊಳ್ಳುತ್ತದೆ ಐಐಎಫ್ಎಲ್ ಸೆಕ್ಯುರಿಟೀಸ್ ಹೇಳಿದೆ.

Continue Reading
Advertisement
Prajwal Revanna Case
ಪ್ರಮುಖ ಸುದ್ದಿ6 hours ago

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

chakravarthy sulibele
ಕರ್ನಾಟಕ6 hours ago

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Cyber Crime
ಪ್ರಮುಖ ಸುದ್ದಿ6 hours ago

Cyber Crime : ಹೆಣ್ಣು ಮಕ್ಕಳ ಫೋಟೋ ಅಶ್ಲೀಲಗೊಳಿಸಿ ಪೋಸ್ಟ್​ ಮಾಡುತ್ತಿದ್ದವನ ಬಂಧನ

Bomb Threat
ಪ್ರಮುಖ ಸುದ್ದಿ7 hours ago

Bomb Threat : ತೆಲಂಗಾಣ ಡಿಸಿಎಂ ಮನೆಗೆ ಬಾಂಬ್​ ಬೆದರಿಕೆ; ಆತಂಕ

Acid attack
ಕರ್ನಾಟಕ7 hours ago

Acid attack: ಮನೆ ಬಾಗಿಲು ತೆರೆಯದ ಹಿನ್ನೆಲೆ ವಿವಾಹಿತ ಪ್ರಿಯತಮೆಗೆ ಆ್ಯಸಿಡ್ ಎರಚಿದ ಪ್ರಿಯಕರ!

Cab service
ಪ್ರಮುಖ ಸುದ್ದಿ7 hours ago

Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

Gauri Khan
ಸಿನಿಮಾ8 hours ago

Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

Veer Savarkar flyover
ಕರ್ನಾಟಕ8 hours ago

Veer Savarkar flyover: ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿರೋದು ಅತ್ಯಂತ ಖಂಡನೀಯ: ವಿಜಯೇಂದ್ರ

Lok Sabha Election
ಪ್ರಮುಖ ಸುದ್ದಿ8 hours ago

Lok Sabha Election : ಷೇರು ಮಾರುಕಟ್ಟೆ ಸಂಸ್ಥೆಯ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲಿದೆ; ಲೆಕ್ಕಾಚಾರ ಹೀಗಿದೆ

Robbery Case Two accused arrested by yallapur police
ಕರ್ನಾಟಕ8 hours ago

Robbery Case: ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ದರೋಡೆ; ಇಬ್ಬರು ಆರೋಪಿಗಳ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ9 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು18 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 day ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ7 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌