Pooja Sihag | ಕಾಮನ್ವೆಲ್ತ್‌ ಗೇಮ್ಸ್‌ ಕಂಚು ವಿಜೇತೆ ಪೂಜಾ ಸಿಹಾಗ್‌ ಪತಿ ಸಾವು, ಡ್ರಗ್ಸ್‌ ಓವರ್‌ಡೋಸ್‌ ಕಾರಣ? - Vistara News

ಕ್ರೀಡೆ

Pooja Sihag | ಕಾಮನ್ವೆಲ್ತ್‌ ಗೇಮ್ಸ್‌ ಕಂಚು ವಿಜೇತೆ ಪೂಜಾ ಸಿಹಾಗ್‌ ಪತಿ ಸಾವು, ಡ್ರಗ್ಸ್‌ ಓವರ್‌ಡೋಸ್‌ ಕಾರಣ?

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಪೂಜಾ ಸಿಹಾಗ್‌ (Pooja Sihag) ಅವರ ಪತಿ ಅಜಯ್‌ ನಂದಾಲ್‌ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಡ್ರಗ್ಸ್‌ ಓವರ್‌ಡೋಸ್‌ನಿಂದಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

VISTARANEWS.COM


on

Pooja Sihag
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರೋಹ್ಟಕ್‌: ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಪೂಜಾ ಸಿಹಾಗ್‌ (Pooja Sihag) ಅವರ ಪತಿ ಅಜಯ್‌ ನಂದಾಲ್‌ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಹರಿಯಾಣದ ರೋಹ್ಟಕ್‌ನಲ್ಲಿರುವ ಮಹಾರಾಣಿ ಕಿಶೋರಿ ಜಾಟ್‌ ಕನ್ಯಾ ಮಹಾ ವಿದ್ಯಾಲಯದ ಬಳಿ ಶವ ಪತ್ತೆಯಾಗಿದ್ದು, ಮರಣೋತ್ತರ ವರದಿ ಲಭ್ಯವಾದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

“ಅಜಯ್‌ ನಂದಾಲ್‌ ಅವರ ಕುಟುಂಬಸ್ಥರು ಅಜಯ್‌ ಗೆಳೆಯ ರವಿ ಎಂಬುವವರ ವಿರುದ್ಧ ಆರೋಪಿಸಿದ್ದಾರೆ. ಡ್ರಗ್ಸ್‌ ಓವರ್‌ಡೋಸ್‌ನಿಂದ ಅಜಯ್‌ ನಂದಾಲ್‌ ಮೃತಪಟ್ಟಿದ್ದು, ಆತನ ಗೆಳೆಯ ರವಿಯೇ ಡ್ರಗ್ಸ್‌ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

“ಮಹಾರಾಣಿ ಕಿಶೋರಿ ಜಾಟ್‌ ಕನ್ಯಾ ಮಹಾ ವಿದ್ಯಾಲಯದ ಬಳಿ ಶವ ಪತ್ತೆಯಾಗಿದೆ. ಡ್ರಗ್ಸ್‌ ಓವರ್‌ನಿಂದಾಗಿ ಅಜಯ್‌ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಡಿಎಸ್‌ಪಿ ಮಹೇಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಮಹಾ ವಿದ್ಯಾಲಯದ ಬಳಿ ಅಜಯ್‌, ರವಿ, ಸೋನು ಸೇರಿ ಹಲವರು ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಡ್ರಗ್ಸ್‌ ಓವರ್‌ಡೋಸ್‌ ಆಗಿರಬಹುದು ಎನ್ನಲಾಗಿದೆ. ಆದಾಗ್ಯೂ, ರವಿ ಹಾಗೂ ಸೋನು ಅವರೂ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Sonali Phogat Death | ಡ್ರಗ್ಸ್‌ ಓವರ್‌ಡೋಸ್‌, ಅತ್ಯಾಚಾರ, ಹತ್ಯೆ, ಹಾರ್ಟ್‌ ಅಟ್ಯಾಕ್‌? ಸೋನಾಲಿ ಸಾವಿಗೆ ಕಾರಣವೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ ಟೂರ್ನಿಗೆ ಕಾಮೆಂಟರಿ ಬಳಗ ಘೋಷಿಸಿದ ಐಸಿಸಿ; ದಿನೇಶ್​ ಕಾರ್ತಿಕ್​ಗೂ ಸ್ಥಾನ

T20 World Cup 2024: ಬುಧವಾರವಷ್ಟೇ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದ ಆರ್​ಸಿಬಿ ತಂಡದ ದಿನೇಶ್​ ಕಾರ್ತಿಕ್​(Dinesh Karthik) ಅವರು ಇದೀಗ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ

VISTARANEWS.COM


on

T20 World Cup 2024
Koo

ದುಬೈ: 2 ದಿನಗಳ ಹಿಂದಷ್ಟೇ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದ ಆರ್​ಸಿಬಿ ತಂಡದ ದಿನೇಶ್​ ಕಾರ್ತಿಕ್​(Dinesh Karthik) ಅವರು ಇದೀಗ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ. ಇದೇ ಜೂನ್​ 1ರಿಂದ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುವ ಮಿನಿ ವಿಶ್ವಕಪ್​ ಸಮರದಲ್ಲಿ ಕಾರ್ತಿಕ್​ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಶುಕ್ರವಾರ ಐಸಿಸಿ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಪ್ರಕಟಿಸಿತು. ಈ ಪಟ್ಟಿಯಲ್ಲಿ ದಿನೇಶ್​ ಕಾರ್ತಿಕ್​ ಸೇರಿ ಹಲವು ದೇಶಗಳ ತಾರಾ ಕಾಮೆಂಟೇಟರ್ ಕಾಣಿಸಿಕೊಂಡಿದ್ದಾರೆ.

ರವಿಶಾಸ್ತ್ರಿ, ನಾಸರ್ ಹುಸೇನ್, ಇಯಾನ್ ಸ್ಮಿತ್, ಮೆಲ್ ಜೋನ್ಸ್, ಹರ್ಷಾ ಭೋಗ್ಲೆ ಮತ್ತು ಇಯಾನ್ ಬಿಷಪ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇವರ ಜತೆ ದಿನೇಶ್ ಕಾರ್ತಿಕ್, ಎಬೊನಿ ರೈನ್‌ಫೋರ್ಡ್-ಬ್ರೆನ್, ಸ್ಯಾಮುಯೆಲ್ ಬದ್ರಿ, ಕಾರ್ಲೊಸ್ ಬ್ರಾತ್ ವೇಟ್, ಸ್ಟೀವನ್​ ಸ್ಮಿತ್, ಫಿಂಚ್, ಲಿಸಾ ಸ್ತಾಲೆಕರ್ ಈ ಬಾರಿಯ ಕಾಮೆಂಟರಿ ಪ್ಯಾನೆಲ್​ನಲ್ಲಿ ಇರಲಿದ್ದಾರೆ.

ರಿಕಿ ಪಾಂಟಿಂಗ್, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್, ರಮಿಜ್ ರಾಜಾ, ಇಯಾನ್ ಮಾರ್ಗನ್, ಟಾಮ್ ಮೂಡಿ ಮತ್ತು ವಾಸಿಮ್ ಅಕ್ರಮ್ ಪಂದ್ಯಕ್ಕೂ ಮುನ್ನ ನಡೆಯುವ ವಿಶ್ಲೇಷಣೆಯಲ್ಲಿ ತಂಡಗಳ ಮತ್ತು ಆಟಗಾರರ ಸಾಮರ್ಥದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಉಳಿದಂತೆ ಡೇಲ್ ಸ್ಟೇನ್​, ಗ್ರೇಮ್ ಸ್ಮಿತ್, ಮೈಕೆಲ್ ಅಥರ್ಟನ್, ವಕಾರ್ ಯೂನಿಸ್, ಸೈಮನ್ ಡೌಲ್, ಶಾನ್ ಪೊಲಾಕ್, ಕೇಟಿ ಮಾರ್ಟಿನ್, ಎಂಪುಮೆಲೆಲೊ ಎಂಬಾಂಗ್ವಾ, ನಟಾಲಿ ಜರ್ಮನೋಸ್, ಡ್ಯಾನಿ ಮಾರಿಸನ್, ಅಲಿಸನ್ ಮಿಚೆಲ್, ಅಲನ್ ವಿಲ್ಕಿನ್ಸ್, ಬ್ರಿಯಾನ್ ಮುರ್ಗಟ್ರಾಯ್ಡ್, ಮೈಕ್ ಹೇಸ್‌ಮನ್, ಇಯಾನ್ ವಾರ್ಡ್, ಅಥರ್ ಅಲಿ ಖಾನ್, ರಸೆಲ್ ಅರ್ನಾಲ್ಡ್, ನಿಯಾಲ್ ಒ’ಬ್ರಿಯಾನ್, ಕಾಸ್ ನೈಡೋ ಮತ್ತು ಡ್ಯಾರೆನ್ ಗಂಗಾ ಕೂಡ ಟಿ20 ವಿಶ್ವಕಪ್ ನಲ್ಲಿ ಕಾಮೆಂಟರಿ ಮಾಡಲಿದ್ದಾರೆ.

ಇದನ್ನೂ ಓದಿ T20 World Cup 2024 : ಭಾರತ ತಂಡ ವಿಶ್ವ ಕಪ್​ ಗೆಲ್ಲುವುದಿಲ್ಲ; ಇಂಗ್ಲೆಂಡ್​ ಮಾಜಿ ಆಟಗಾರನ ಭವಿಷ್ಯ

ರಾಜಸ್ಥಾನದದ ರಾಯಲ್ಸ್​ ವಿರುದ್ಧದ ಎಲಿಮಿನೇಟರ್​ ಪಂದ್ಯವೇ ದಿನೇಶ್ ಕಾರ್ತಿಕ್(Dinesh Karthik)ಗೆ ವಿದಾಯ(dinesh karthik retirement) ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಆರ್​ಸಿಬಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತ್ತು. 17 ವರ್ಷಗಳ ಐಪಿಎಲ್​ ಜರ್ನಿಯಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಟ್ರೋಫಿ ಗೆದ್ದಿದ್ದರು. ಇದಾದ ಬಳಿಕ ಹಲವು ತಂಡಗಳ ಪರ ಆಡಿದರೂ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ.

2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟಿ20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

Continue Reading

ಕ್ರೀಡೆ

India Head Coach: ಕೋಚ್​ ಆಗುವ ಮುನ್ನ ಏನೆಲ್ಲಾ ಕಷ್ಟ ಇದೆ ಎಂದು ರಾಹುಲ್​ ನೀಡಿದ ಸಲಹೆಯನ್ನು ಬಹಿರಂಗಪಡಿಸಿದ ಲ್ಯಾಂಗರ್

India Head Coach: ಆಸ್ಟ್ರೇಲಿಯಾದ ಮಾಜಿ ಆಟಗಾರರು ಭಾರತ ತಂಡದ ಕೋಚ್​ ಹುದ್ದೆಯ ಬಗ್ಗೆ ನಿರಾಸಕ್ತಿಕ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಈ ಎಲ್ಲ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ನಾವು ಯಾವುದೇ ಆಸ್ಟ್ರೇಲಿಯಾದವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

VISTARANEWS.COM


on

India Head Coach
Koo

ಸಿಡ್ನಿ: ಟೀಮ್​ ಇಂಡಿಯಾದ ಮುಖ್ಯ ಕೋಚ್(India Head Coach)​ ಆಗಿ ಯಾರು ಆಯ್ಕೆ ಆಗುತ್ತಾರೆ ಎನ್ನುವ ಕುತೂಹಲ ಒಂದೆಡೆಯಾದರೆ, ಹಲವು ಮಾಜಿ ವಿದೇಶಿ ಆಟಗಾರರು ಭಾರತ ತಂಡದ ಕೋಚಿಂಗ್​ ಬಗ್ಗೆ ಆಸಕ್ತಿ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯದ ಮಾಜಿ ಕೋಚ್​ ಜಸ್ಟಿನ್ ಲ್ಯಾಂಗರ್(Justin Langer) ನೀಡಿದ ಹೇಳಿಕೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕೆಲವು ದಿನಗಳ ಹಿಂದೆ ಭಾರತ ತಂಡದ ಕೋಚ್​ ಆಗುವ ಬಗ್ಗೆ ಬಹಳ ಆಸಕ್ತಿ ಹೊಂದಿದ್ದೇನೆ ಎಂದಿದ್ದ, ಲ್ಯಾಂಗರ್​, ಇದೀಗ ಕೋಚಿಂಗ್​ ಬಗ್ಗೆ ಕೆ.ಎಲ್​ ರಾಹುಲ್​ ಜತೆ ನಡೆಸಿದ ಚರ್ಚೆಯನ್ನು ಬಹಿರಂಗಪಡಿಸಿದ್ದಾರೆ. “ನಾನು ರಾಹುಲ್​ ಜತೆ ಭಾರತ ತಂಡದ ಕೋಚಿಂಗ್​ ಬಗ್ಗೆ ಚರ್ಚಿಸುವ ವೇಳೆ ಅವರು ನನಗೆ ಉಪಯುಕ್ತ ಮಾಹಿತಿ ನೀಡಿದರು. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಎದುರಿಸುವ ‘ರಾಜಕೀಯ ಮತ್ತು ಒತ್ತಡ’ ಯಾವುದೇ ಐಪಿಎಲ್ ಕೋಚ್‌ಗಿಂತ ಸುಮಾರು ಸಾವಿರ ಪಟ್ಟು ಹೆಚ್ಚಾಗಿದೆ” ಎಂದು ಹೇಳಿರುವುದಾಗಿ ಲ್ಯಾಂಗರ್​ ತಿಳಿಸಿದ್ದಾರೆ.

“ಆಸ್ಟ್ರೇಲಿಯಾ ತಂಡದೊಂದಿಗೆ ನಾಲ್ಕು ವರ್ಷಗಳ ಕಾಲ ನಾನು ಎಲ್ಲ ಒತ್ತಡಗಳನ್ನು ನಿಭಾಯಿಸಿದ್ದೇನೆ. ಇದರಿಂದ ನಾನು ದಣಿದಿದ್ದೇನೆ. ರಾಹುಲ್​ ನೀಡಿದ್ದು ಉತ್ತಮ ಸಲಹೆಯಾಗಿದೆ ಎಂದು ನಾನು ಊಹಿಸುತ್ತೇನೆ” ಎಂದು ಹೇಳುವ ಮೂಲಕ ಕೋಚಿಂಗ್​ ಹುದ್ದೆಗೆ ಅರ್ಜಿಸಲ್ಲಿಸುವ ಕಾರ್ಯದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಂತಿದೆ. ಗುರುವಾರವಷ್ಟೇ ರಿಕಿ ಪಾಂಟಿಂಗ್, ಇಂದು(ಶುಕ್ರವಾರ) ಆರ್​ಸಿಬಿ ಕೋಚ್​ ಜಸ್ಟೀನ್​ ಲ್ಯಾಂಗರ್​ ಕೂಡ ಟೀಮ್​ ಇಂಡಿಯಾದ ಕೋಚ್ ಆಫರ್ ತಿರಸ್ಕರಿಸಿದ್ದಾರೆ.

ಇದನ್ನೂ ಓದಿ India Head Coach: ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂದ ಆರ್​ಸಿಬಿ ಕೋಚ್​

ತಿರುಗೇಟು ಕೊಟ್ಟ ಜಯ್​ ಶಾ

ಆಸ್ಟ್ರೇಲಿಯಾದ ಮಾಜಿ ಆಟಗಾರರು ಭಾರತ ತಂಡದ ಕೋಚ್​ ಹುದ್ದೆಯ ಬಗ್ಗೆ ನಿರಾಸಕ್ತಿಕ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಈ ಎಲ್ಲ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ನಾವು ಯಾವುದೇ ಆಸ್ಟ್ರೇಲಿಯಾದವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕೋಚಿಂಗ್​ ಹುದ್ದೆಯ ಬಗ್ಗೆ ನೀಡುತ್ತಿರುವ ವದಂತಿಗಳನ್ನು ನಂಬಬಾರದು ಎಂದು ತಿಳಿಸಿದ್ದಾರೆ.

“ನಾನು ಅಥವಾ ಬಿಸಿಸಿಐ ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಕೋಚಿಂಗ್‌ ಆಫರ್‌ನೊಂದಿಗೆ ಸಂಪರ್ಕಿಸಿಲ್ಲ. ಕೆಲವು ಮಾಧ್ಯಮ ವಿಭಾಗಗಳಲ್ಲಿ ಪ್ರಸಾರವಾಗುವ ವರದಿಗಳು ಸಂಪೂರ್ಣವಾಗಿ ತಪ್ಪಾಗಿದೆ. ನಮ್ಮ ರಾಷ್ಟ್ರೀಯ ತಂಡಕ್ಕೆ ಸರಿಯಾದ ತರಬೇತುದಾರನನ್ನು ಹುಡುಕುವುದು ಒಂದು ನಿಖರವಾದ ಮತ್ತು ಸಂಪೂರ್ಣ ಪ್ರಕ್ರಿಯೆಯಾಗಿದೆ” ಎಂದು ತಿಳಿಸಿದ್ದಾರೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

Continue Reading

ಕ್ರೀಡೆ

SRH vs RR Qualifier 2: ಕ್ವಾಲಿಫೈಯರ್​ ಪಂದ್ಯಕ್ಕೆ ಕ್ಷಣಗಣನೆ; ಇತ್ತಂಡಗಳ ಬಲಾಬಲ ಹೇಗಿದೆ?

SRH vs RR Qualifier 2: ಆಸ್ಟ್ರೇಲಿಯಾದ ಎಡಗೈ ಬ್ಯಾಟರ್​ ಟ್ರಾವಿಸ್​ ಹೆಡ್ ಕಳೆದ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್​ ಕಳೆದುಕೊಂಡಿದ್ದರು. ಅದು ಕ್ಲೀನ್​ ಬೌಲ್ಡ್​ ಆಗುವ ಮೂಲಕ. ಇದೀಗ ಮಹತ್ವದ ಪಂದ್ಯದಲ್ಲಿ ಅವರು ಆಡದೇ ಹೋದರೆ ಹೈದರಾಬಾದ್​ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಲಿದೆ. ಹೀಗಾಗಿ ಅವರು ಬ್ಯಾಟಿಂಗ್​ ಫಾರ್ಮ್​ಗೆ ಮರಳಬೇಕಾದ ಅನಿವಾರ್ಯವಿದೆ

VISTARANEWS.COM


on

SRH vs RR Qualifier 2
Koo

ಚೆನ್ನೈ: 17ನೇ ಆವೃತ್ತಿಯ ಐಪಿಎಲ್​ನ(IPL 2024) ದ್ವಿತೀಯ ಕ್ವಾಲಿಫೈಯರ್(SRH vs RR Qualifier 2)​ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜಸ್ಥಾನ್(Rajasthan Royals)​ ಮತ್ತು ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡಗಳು ಈ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಇತ್ತಂಡಗಳ ಈ ಮುಖಾಮುಖಿಗೆ ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲದ ಕಾರಣ ಪಂದ್ಯವನ್ನು ಅಭಿಮಾನಿಗಳು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.

ಸಿಡಿಯಬೇಕಿದೆ ಹೆಡ್​


ಲೀಗ್​ ಹಂತದ ಆರಂಭದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಮೂರು ಬಾರಿ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್​ ಟ್ರಾವಿಸ್​ ಹೆಡ್ ಕಳೆದ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್​ ಕಳೆದುಕೊಂಡಿದ್ದರು. ಅದು ಕ್ಲೀನ್​ ಬೌಲ್ಡ್​ ಆಗುವ ಮೂಲಕ. ಇದೀಗ ಮಹತ್ವದ ಪಂದ್ಯದಲ್ಲಿ ಅವರು ಆಡದೇ ಹೋದರೆ ಹೈದರಾಬಾದ್​ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಲಿದೆ. ಹೀಗಾಗಿ ಅವರು ಬ್ಯಾಟಿಂಗ್​ ಫಾರ್ಮ್​ಗೆ ಮರಳಬೇಕಾದ ಅನಿವಾರ್ಯವಿದೆ. ​25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ ಬ್ಯಾಟಿಂಗ್​ ಮೇಲು ತಂಡ ಹೆಚ್ಚಿನ ನಂಬಿಕೆ ಇರಿಸಿದೆ. ಅಭಿಷೇಕ್​ ಶರ್ಮ ಈ ಬಾರಿಯ ಕೂಟದಲ್ಲಿ 41 ಸಿಕ್ಸರ್​ ಬಾರಿಸಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

ಹೈದರಾಬಾದ್​ ನಾಕೌಟ್​/ ಪ್ಲೇ ಆಫ್​ ಸಾಧನೆ


2013ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಎಲಿಮಿನೇಟರ್​ನಲ್ಲಿ ಸೋಲು

2016ರಲ್ಲಿ ಲೀಗ್​ನಲ್ಲಿ 3ನೇ ಸ್ಥಾನ. ಚಾಂಪಿಯನ್‌

2017ರಲ್ಲಿ ಲೀಗ್​ನಲ್ಲಿ 3ನೇ ಸ್ಥಾನ. ಎಲಿಮಿನೇಟರ್​ನಲ್ಲಿ ಸೋಲು

2018ರಲ್ಲಿ ಮೊದಲ ಸ್ಥಾನ. ರನ್ನರ್ ಅಪ್‌

2019ರಲ್ಲಿ 4ನೇ ಸ್ಥಾನ. ಎಲಿಮಿನೇಟರ್​ನಲ್ಲಿ ಸೋಲು

2020ರಲ್ಲಿ 3ನೇ ಸ್ಥಾನ. ಕ್ವಾಲಿಫೈಯರ್‌-2ನಲ್ಲಿ ಸೋಲು

ಇದನ್ನೂ ಓದಿ RR vs SRH: ಹೈದರಾಬಾದ್-ರಾಜಸ್ಥಾನ್ ನಡುವಣ ಇಂದಿನ ಕ್ವಾಲಿಫೈಯರ್​ ಪಂದ್ಯಕ್ಕೆ ಮಳೆ ಕಾಟ ಇದೆಯೇ?

ರಾಜಸ್ಥಾನ್​ ಬೌಲಿಂಗ್​ ಬಲಿಷ್ಠ


ರಾಜಸ್ಥಾನ್​ ತಂಡದ ಬ್ಯಾಟಿಂಗ್​ ಅಷ್ಟಾಗಿ ಬಲಿಷ್ಠವಿಲ್ಲದಿದ್ದರೂ ಕೂಡ ಸಂಘಟಿತ ಪ್ರದರ್ಶನದಿಂದಾಗಿ ಪಂದ್ಯ ಗೆಲ್ಲುತ್ತಿದೆ. ಬೌಲಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಯಜುವೇಂದ್ರ ಚಹಲ್​, ಆರ್​ ಅಶ್ವಿನ್​, ಟ್ರೆಂಟ್​ ಬೌಲ್ಟ್​ ಘಾತಕ ಬೌಲಿಂಗ್​ ದಾಳಿಗೆ ಹೆಸರುವಾಸಿ. ಯಾವುದೇ ಕ್ಷಣದಲ್ಲಿಯೂ ಸತತವಾಗಿ ವಿಕೆಟ್​ ಕಿತ್ತು. ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಇವರಿಗಿದೆ.

ರಾಜಸ್ಥಾನ್​ ನಾಕೌಟ್​/ ಪ್ಲೇ ಆಫ್​ ಸಾಧನೆ


2008ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಚಾಂಪಿಯನ್​

2013ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2015ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2018ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2022ರಲ್ಲಿ ಲೀಗ್​ನಲ್ಲಿ 2ನೇ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

ಉಭಯ ತಂಡಗಳು ಇದುವರೆಗಿನ ಐಪಿಎಲ್ ಪಂದ್ಯದಲ್ಲಿ ಒಟ್ಟು 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಹೈದರಾಬಾದ್​ 10, ರಾಜಸ್ಥಾನ್​ 9 ಪಂದ್ಯಗಳನ್ನು ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹೈದರಾಬಾದ್​ ಬಲಿಷ್ಠವಾಗಿದೆ. ಜತೆಗೆ ಈ ಬಾರಿ ತಂಡ ಬಲಿಷ್ಠವಾಗಿಯೂ ಗೋಚರಿಸಿದೆ.

Continue Reading

ಕ್ರೀಡೆ

India Head Coach: ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂದ ಆರ್​ಸಿಬಿ ಕೋಚ್​

India Head Coach: ಆರ್​ಸಿಬಿ ತಂಡದ ಮುಖ್ಯ ಕೋಚ್​, ಜಿಂಬಾಬ್ವೆಯ ಮಾಜಿ ನಾಯಕ ಆ್ಯಂಡಿ ಫ್ಲವರ್‌(Andy Flower) ಅವರು ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಹುದ್ದೆಗೆ(India Head Coach) ಅರ್ಜಿ ಸಲ್ಲಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

VISTARANEWS.COM


on

India Head Coach
Koo

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ತಂಡಗಳಿಗೆ ಕೋಚಿಂಗ್‌ ಮಾಡಿದ ಅನುಭವ ಹೊಂದಿರುವ, ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕೋಚ್​ ಆಗಿದ್ದ, ಪ್ರಸ್ತುತ ಆರ್​ಸಿಬಿ ತಂಡದ ಮುಖ್ಯ ಕೋಚ್​, ಜಿಂಬಾಬ್ವೆಯ ಮಾಜಿ ನಾಯಕ ಆ್ಯಂಡಿ ಫ್ಲವರ್‌(Andy Flower) ಅವರು ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಹುದ್ದೆಗೆ(India Head Coach) ಅರ್ಜಿ ಸಲ್ಲಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಐಪಿಎಲ್​ ಎಲಿಮಿನೇಟರ್‌ ಪಂದ್ಯದಲ್ಲಿ ಆರ್​ಸಿಬಿ ಸೋಲು ಕಂಡಿತ್ತು. ಸೋಲಿನ ಬಳಿಕ ಮಾತನಾಡಿದ ಫ್ಲವರ್​, ನಾನು ಭಾರತ ತಂಡದ ಕೋಚ್​ ಹುದ್ದಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಕೆಲವರು ನನ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಆದರೆ ನಾನು ಯಾವುದೇ ಅರ್ಜಿ ಸಲ್ಲಿಸಿಲ್ಲ. ಸದ್ಯ ನಾನು ಫ್ರಾಂಚೈಸಿ ಕ್ರಿಕೆಟ್​ನಲ್ಲಿಯೇ ಮುಂದುವರಿಯಲು ಬಯಸಿದ್ದೇನೆ ಎಂದು ಹೇಳಿದರು. ಈ ಮೂಲಕ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಅನುಮಾನಕ್ಕೆ ತೆರೆ ಎಳೆದರು.

“ನಾನು ಫ್ರಾಂಚೈಸ್ ಲೀಗ್‌ನಲ್ಲಿ ಪಾಲ್ಗೊಳ್ಳುವಿಕೆಯಿಂದ ಸಂತೋಷವಾಗಿದ್ದೇನೆ. ನಾನು ಅದನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ಇದು ಆಕರ್ಷಕ ವಿಷಯವಾಗಿದೆ ಮತ್ತು ನಾನು ಕೆಲವು ಅದ್ಭುತ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ಈ ಸಮಯದಲ್ಲಿ ನಾನು ಸಂತೋಷವಾಗಿದ್ದೇನೆ” ಎಂದು ಹೇಳಿದರು.

ಗುರುವಾರವಷ್ಟೇ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್​ ಕೂಡ ತಾನು ಭಾರತ ತಂಡದ ಕೋಚ್​ ಆಗಲು ಆಸಕ್ತಿ ಹೊಂದಿಲ್ಲ. ಕೋಚ್​ ಹುದ್ದಗೆ ಅರ್ಜಿಯೂ ಸಲ್ಲಿಸಲ್ಲ ಎಂದು ಹೇಳಿದ್ದರು. ಇದೀಗ ಫ್ಲವರ್​ ಕೂಡ ಪಾಂಟಿಂಗ್​ ನಿಲುವನ್ನೇ ಹೊಂದಿದ್ದಾರೆ. ವಿವಿಎಸ್​ ಲಕ್ಷ್ಮಣ್​ ಕೂಡ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಕೋಚ್​, ಪ್ರಸ್ತುತ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕೋಚ್​ ಆಗಿರುವ ಜಸ್ಟಿನ್ ಲ್ಯಾಂಗರ್(Justin Langer) ಕೂಡ ಭಾರತ ತಂಡದ ಕೋಚಿಂಗ್​ ಬಗ್ಗೆ ಆಸಕ್ತರಾಗಿದ್ದಾರೆ. ಐಪಿಎಲ್​ ವೇಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ಭಾರತ ತಂಡ ಕೋಚಿಂಗ್​ ಮಾಡುವುದು ಅಸಾಮಾನ್ಯ ಪಾತ್ರವಾಗಿದೆ. ನನಗೂ ಕೋಚಿಂಗ್​ ಮಾಡಲು ಕುತೂಹಲವಿದೆ. ಇಲ್ಲಿ ಅಪಾರ ಸಂಖ್ಯೆಯ ಕ್ರಿಕೆಟ್ ಪ್ರತಿಭೆಗಳಿದ್ದಾರೆ ಎಂದು ಹೇಳಿದ್ದರು.

Continue Reading
Advertisement
Physical Abuse
ಕ್ರೈಂ15 mins ago

Physical Abuse: ರಾಬರಿ ಎಂದು ದೂರು ಕೊಟ್ಟವನೇ ಕಾಮುಕ; ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ಆಟೋ ಚಾಲಕ!

Jeans Fashion
ಫ್ಯಾಷನ್15 mins ago

Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್‌ ಐಡಿಯಾ

T20 World Cup 2024
ಕ್ರೀಡೆ29 mins ago

T20 World Cup 2024: ಟಿ20 ವಿಶ್ವಕಪ್​ ಟೂರ್ನಿಗೆ ಕಾಮೆಂಟರಿ ಬಳಗ ಘೋಷಿಸಿದ ಐಸಿಸಿ; ದಿನೇಶ್​ ಕಾರ್ತಿಕ್​ಗೂ ಸ್ಥಾನ

Viral Video
ವೈರಲ್ ನ್ಯೂಸ್32 mins ago

Viral Video: ಮೈದುನನ ಇಬ್ಬರು ಮಕ್ಕಳನ್ನು ವಿಷವಿಕ್ಕಿ ಕೊಂದಳು, ಮೂರನೇ ಮಗುವನ್ನು ಕೊಲ್ಲುವಾಗ ಸಿಕ್ಕಿ ಬಿದ್ದಳು!

Laila Khan Case
ದೇಶ34 mins ago

Laila Khan Case: ನಟಿ ಲೈಲಾ ಖಾನ್‌ ಸೇರಿ 6 ಜನರ ಹತ್ಯೆ;‌ ನಟಿಯ ತಂದೆ ಪರ್ವೇಜ್‌ ತಕ್‌ಗೆ ಗಲ್ಲು ಶಿಕ್ಷೆ!

Youngest Artist
ವಿದೇಶ34 mins ago

Youngest Artist: ಅಂಬೆಗಾಲಿಡುವ ಬಾಲಕ ಈಗ ವಿಶ್ವದ ಅತಿ ಕಿರಿಯ ಚಿತ್ರ ಕಲಾವಿದ!

Toothpaste Hacks
ಲೈಫ್‌ಸ್ಟೈಲ್45 mins ago

Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!

Bharathada dheera chethanagalu kruthi lokarpane in Bengaluru on May 26
ಕರ್ನಾಟಕ52 mins ago

Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

Kannada New Movie The movie is becoming a pendrive
ಸಿನಿಮಾ55 mins ago

Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

KPTCL Recruitment
ಕರ್ನಾಟಕ56 mins ago

KPTCL Recruitment: 902 ಹುದ್ದೆಗಳ ನೇಮಕಾತಿಗೆ ಕೆಪಿಟಿಸಿಎಲ್‌ ಆದೇಶ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌