BCCI Prize Money Comparison: 2007, 2011, 2013ರಲ್ಲಿ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ನೀಡಿದ ಬಹುಮಾನ ಮೊತ್ತವೆಷ್ಟು? - Vistara News

ಕ್ರಿಕೆಟ್

BCCI Prize Money Comparison: 2007, 2011, 2013ರಲ್ಲಿ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ನೀಡಿದ ಬಹುಮಾನ ಮೊತ್ತವೆಷ್ಟು?

BCCI Prize Money Comparison: 2011ರ ಏಕದಿನ ವಿಶ್ವಕಪ್‌ಗಿಂತ ಮೊದಲೇ ಬಿಸಿಸಿಐ ಆಡಳಿತ ಮಂಡಳಿ ಪ್ರಶಸ್ತಿ ಗೆಲ್ಲುವ ತಂಡದ ಆಟಗಾರರಿಗೆ ತಲಾ 1 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿತ್ತು. ಆದರೆ ಪ್ರಶಸ್ತಿ ಗೆದ್ದ ಬಳಿಕ ಇದನ್ನು ತಲಾ 2 ಕೋಟಿ ರೂಪಾಯಿಗಳಿಗೆ ಪರಿಷ್ಕರಿಸಲಾಗಿತ್ತು.

VISTARANEWS.COM


on

BCCI Prize Money Comparison
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: 17 ವರ್ಷಗಳ ಬಳಿಕ 2ನೇ ಬಾರಿಗೆ ಟಿ20 ವಿಶ್ವಕಪ್(T20 World cup 2024)​ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಟೀಮ್​ ಇಂಡಿಯಾಕ್ಕೆ ಬಿಸಿಸಿಐ 125 ಕೋಟಿ ಬಹುಮಾನ ನೀಡಿತ್ತು. ಇದೀಗ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಹಿಂದಿನ ಐಸಿಸಿ ಪ್ರಶಸ್ತಿ ಗೆದ್ದಾಗ ನೀಡಿದ ಬಹುಮಾನ(BCCI Prize Money Comparison) ಮೊತ್ತಕ್ಕೆ ಹೋಲಿಸಲಾಗುತ್ತಿದೆ.

2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್​ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 12 ಕೋಟಿ ರೂಪಾಯಿಗಳ ಸಂಚಿತ ಮೊತ್ತವನ್ನು ಘೋಷಿಸಿತ್ತು. ಇದಾದ ಬಳಿಕ 2011ರ ಏಕದಿನ ವಿಶ್ವಕಪ್‌ಗಿಂತ ಮೊದಲೇ ಬಿಸಿಸಿಐ ಆಡಳಿತ ಮಂಡಳಿ ಪ್ರಶಸ್ತಿ ಗೆಲ್ಲುವ ತಂಡದ ಆಟಗಾರರಿಗೆ ತಲಾ 1 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿತ್ತು. ಆದರೆ ಪ್ರಶಸ್ತಿ ಗೆದ್ದ ಬಳಿಕ ಇದನ್ನು ತಲಾ 2 ಕೋಟಿ ರೂಪಾಯಿಗಳಿಗೆ ಪರಿಷ್ಕರಿಸಲಾಗಿತ್ತು. ಇದೇ ವೇಳೆ ಸಹಾಯಕ ಸಿಬ್ಬಂದಿಗೆ 50 ಲಕ್ಷ ರೂಪಾಯಿ, ಆಯ್ಕೆಗಾರರಿಗೆ ತಲಾ 25 ಲಕ್ಷ ರೂಪಾಯಿ ಬಹುಮಾನ ನೀಡಲಾಗಿತ್ತು.

ಇದನ್ನೂ ಓದಿ Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ

2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ, ಭಾರತ ತಂಡಕ್ಕೆ ಬಿಸಿಸಿಐ ಪ್ರತಿ ಆಟಗಾರನಿಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಅಲ್ಲದೆ, ಆ ಸಂದರ್ಭದಲ್ಲಿ ಸಹಾಯಕ ಸಿಬ್ಬಂದಿಗೆ ತಲಾ 30 ಲಕ್ಷ ರೂಪಾಯಿ ನೀಡಿತ್ತು.

ಈ ಬಾರಿ ಟಿ20 ವಿಶ್ವಕಪ್​ ಗೆದ್ದ ತಂಡದ ಭಾಗವಾಗಿದ್ದ 15 ಮಂದಿ ಆಟಗಾರರಿಗೆ ತಲಾ 5 ಕೋಟಿ ರೂ ಹಂಚಲಾಗುತ್ತದೆ. ಇಡೀ ಕೂಟದಲ್ಲಿ ಒಂದೇ ಒಂದು ಪಂದ್ಯವಾಡದ ಆಟಗಾರರಿಗೂ ಇಷ್ಟೇ ಮೊತ್ತದ ಹಣ ಸಿಗಲಿದೆ. ಅಲ್ಲದೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ 2.5 ಕೋಟಿ ರೂ. ನೀಡಲಾಗುತ್ತದೆ ಎಂದು ವರದಿ ಹೇಳಿದೆ. ಸಹಾಯಕ ಕೋಚ್ ಗಳಾದ ವಿಕ್ರಮ್ ರಾಥೋರ್, ಟಿ ದಿಲೀಪ್, ಪರಾಸ್ ಮಾಂಬ್ರೆ ಅವರಿಗೆ ತಲಾ 2.5 ಕೋಟಿ ರೂ ನೀಡಲಾಗುತ್ತದೆ. ತಲಾ 1 ಕೋಟಿ ರೂ ಅಜಿತ್ ಅಗರ್ಕರ್ ಸೇರಿ ಆಯ್ಕೆ ಸಮಿತಿ ಸದಸ್ಯರಿಗೆ ನೀಡಲಾಗುತ್ತದೆ. ತಂಡದೊಂದಿಗೆ ಪ್ರಯಾಣ ಬೆಳೆಸಿದ್ದ ನಾಲ್ವರು ಮೀಸಲು ಆಟಗಾರರಿಗೂ ತಲಾ 1 ಕೋಟಿ ಬಹುಮಾನ ಮೊತ್ತ ಸಿಗಲಿದೆ. ಶುಬ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹಮದ್, ಆವೇಶ್ ಖಾನ್ ಮೀಸಲು ಆಟಗಾರರಾಗಿದ್ದರು.

ಸಹಾಯಕ ಸಿಬ್ಬಂದಿಗಳಲ್ಲಿ ಮೂವರು ಫಿಸಿಯೋಥೆರಪಿಸ್ಟ್‌ ಗಳು, ಮೂವರು ಥ್ರೋಡೌನ್ ಸ್ಪೆಷಲಿಸ್ಟ್ ಗಳು, ಇಬ್ಬರು ಮಸಾಜರ್ ಗಳು ಮತ್ತು ಸ್ಟ್ರೆಂತ್ ಆಯಂಡ್ ಕಂಡೀಷನಿಂಗ್ ಕೋಚ್ ತಲಾ 2 ಕೋಟಿ ರೂ. ಪಡೆಯಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

R Ashwin : ಸುನೀಲ್ ನರೈನ್ ರೀತಿ ಆರಂಭಿಕರಾಗಿ 20 ಎಸೆತಕ್ಕೆ 45 ರನ್ ಬಾರಿಸಿದ ಆರ್.​ ಅಶ್ವಿನ್​; ಇಲ್ಲಿದೆ ವಿಡಿಯೊ

R Ashwin : ಟಿಎನ್​ಪಿಎಲ್​​ ಪ್ರಸಕ್ತ ಋತುವಿನಲ್ಲಿ ಆರ್ ಅಶ್ವಿನ್ ದಿಂಡಿಗಲ್ ಪರ ಬ್ಯಾಟಿಂಗ್ ಆರಂಭಿಸುತ್ತಿದ್ದಾರೆ. ತಿರುಚ್ಚಿ ಮತ್ತು ಸೇಲಂ ವಿರುದ್ಧ ಕೇವಲ 5 ಮತ್ತು 6 ರನ್ ಗಳಿಸಿದ್ದ ಅಶ್ವಿನ್ ಅಂತಿಮವಾಗಿ ಅಜೇಯ 45 ರನ್ ಗಳಿಸುವ ಮೂಲಕ ತಮ್ಮ ಹೊಣೆಗಾರಿಕೆ ಪ್ರದರ್ಶಿಸಿದರು.

VISTARANEWS.COM


on

R Ashwin
Koo

ಕೊಯಮತ್ತೂರು: ಕೊಯಮತ್ತೂರಿನಲ್ಲಿ ಭಾನುವಾರ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್ (TNPL) ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ಪರ ಆಡಿದ ಭಾರತ ತಂಡದ ಸ್ಪಿನ್ನ ಬೌಲರ್​ ಆರ್​. ಅಶ್ವಿನ್ ಕೆಕೆಆರ್​ ಪರ ಸುನೀಲ್ ನರೈನ್ ಅವರಂತೆಯೇ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಚೆಪಾಲ್ ಸೂಪರ್ ಗಿಲ್ಲಿಸ್ ವಿರುದ್ಧ ಪಂದ್ಯದಲ್ಲಿ ಅವರು ಕೇವಲ 25 ಎಸೆತಗಳಲ್ಲಿ 45 ರನ್ ಗಳಿಸಿದ್ದಾರೆ.

ಪಂದ್ಯದ ಎರಡನೇ ಓವರ್​ನಲ್ಲಿ ದಿಂಡಿಗಲ್ ಡ್ರ್ಯಾಗನ್ಸ್ 3 ವಿಕೆಟ್ ನಷ್ಟಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಭಿಷೇಕ್ ತನ್ವರ್ ಮೊದಲ ಓವರ್​ನಲ್ಲಿ ಎರಡು ಆರಂಭಿಕ ವಿಕೆಟ್​ಗಳನ್ನು ಪಡೆದರೆ, ರಾಹಿಲ್ ಶಾ ಎರಡನೇ ಓವರ್​ನಲ್ಲಿ ಬಾಬಾ ಇಂದ್ರಜಿತ್ ಅವರ ವಿಕೆಟ್ ಪಡೆದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆರ್.ವಿಮಲ್ ಕುಮಾರ್, ಗಣೇಶನ್ ಪೆರಿಯಸ್ವಾಮಿ ಹಾಕಿದ ಓವರ್​ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ಒತ್ತಡ ಕಡಿಮೆ ಮಾಡಲು ನೆರವಾದರು. ಆದಾಗ್ಯೂ, ಆರ್ ಅಶ್ವಿನ್ ಅವರು ನಾಲ್ಕನೇ ಓವರ್​ನಲ್ಲಿ ರಾಹಿಲ್ ಶಾ ಓವರ್​ಗೆ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿಗೆ ಹೊಡೆದು ತಮ್ಮ ಅಬ್ಬರದ ಆಟ ಆರಂಭಿಸಿದರು.

ಐದನೇ ಓವರ್ ನ ಮೊದಲ ಎಸೆತದಲ್ಲಿ ವಿಮಲ್ ಕುಮಾರ್ ಔಟಾದ ಕಾರಣ ಆರ್​. ಅಶ್ವಿನ್ ಪಾಲುದಾರರನ್ನು ಕಳೆದುಕೊಂಡರು. ಆದಾಗ್ಯೂ, ಬಾಲು ಸೂರ್ಯ ವಿರುದ್ಧದ ಓವರ್​ನಲ್ಲಿ ಅಶ್ವಿನ್ ಎರಡು ಬೌಂಡರಿ ಹೊಡೆದರು. ಅಭಿಷೇಕ್ ತನ್ವರ್ ವಿರುದ್ಧ ಆರನೇ ಓವರ್​ನಲ್ಲಿ ಅಶ್ವಿನ್ ಎರಡು ಸಿಕ್ಸರ್​​ ಬಾರಿಸುವ ಮೂಲಕ ದಿಂಡಿಗಲ್ 7 ಓವರ್​​ನಲ್ಲಿ 6 ವಿಕೆಟ್ ನಷ್ಟಕ್ಕೆ 64 ರನ್ ಪೇರಿಸುವಂತೆ ಮಾಡಿದರು.

ಇದನ್ನೂ ಓದಿ: Paris Olympics 2024 : ಟೋಕಿಯೊದಲ್ಲಿ ನಡೆದ 2020ರ ಒಲಿಂಪಿಕ್ಸ್​ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

ಸ್ಪಿನ್ನರ್​ಗಳ ವಿರುದ್ಧ ಬೃಹತ್ ಸಿಕ್ಸರ್ಗಳನ್ನು ಬಾರಿಸಿ ಮೇಲಗೈ ಸಾಧಿಸಿದರು. ಈ ಮೂಲಕ ಐಪಿಎಲ್ 2024 ರಲ್ಲಿ ಕೆಕೆಆರ್​​ ​ತಂಡಕ್ಕಾಗಿ ಸುನಿಲ್ ನರೈನ್ ವಹಿಸಿದ ಪಾತ್ರವನ್ನು ವಹಿಸಿದರು. ಅಶ್ವಿನ್ ನಾಲ್ಕು ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಬಾರಿಸುವ ಮೂಲಕ ಒಟ್ಟು 45 ರನ್ ಗಳಿಸಿದರು. ದಿಂಡಿಗಲ್​​ನ ಇತರ ಬ್ಯಾಟರ್​ಗಳು 15 ರನ್​​​ ದಾಟಲಿಲ್ಲ.

ಆರಂಭಿಕ ಬ್ಯಾಟಿಂಗ್ ಹೊಣೆ

ಟಿಎನ್​ಪಿಎಲ್​​ ಪ್ರಸಕ್ತ ಋತುವಿನಲ್ಲಿ ಆರ್ ಅಶ್ವಿನ್ ದಿಂಡಿಗಲ್ ಪರ ಬ್ಯಾಟಿಂಗ್ ಆರಂಭಿಸುತ್ತಿದ್ದಾರೆ. ತಿರುಚ್ಚಿ ಮತ್ತು ಸೇಲಂ ವಿರುದ್ಧ ಕೇವಲ 5 ಮತ್ತು 6 ರನ್ ಗಳಿಸಿದ್ದ ಅಶ್ವಿನ್ ಅಂತಿಮವಾಗಿ ಅಜೇಯ 45 ರನ್ ಗಳಿಸುವ ಮೂಲಕ ತಮ್ಮ ಹೊಣೆಗಾರಿಕೆ ಪ್ರದರ್ಶಿಸಿದರು.

ಆರ್ ಅಶ್ವಿನ್ ಈ ವರ್ಷದ ಕೊನೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಸಜ್ಜಾಗುತ್ತಿರುವುದರಿಂದ ಟಿಎನ್​ಪಿಎಲ್​ನಲ್ಲಿ ತಮ್ಮ ಬ್ಯಾಟಿಂಗ್ ಮೇಲೆ ಗಮನ ಹರಿಸುತ್ತಿದ್ದಾರೆ. ಆಫ್-ಸ್ಪಿನ್ನರ್ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿರಲಿಲ್ಲ. ಸೆಪ್ಟೆಂಬರ್​ನಲ್ಲಿ ತಂಡವು ಬಾಂಗ್ಲಾದೇಶವನ್ನು ಎರಡು ಟೆಸ್ಟ್ ಸರಣಿಯಲ್ಲಿ ಭಾರತ ಎದುರಿಸುವಾಗ ಅವರು ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ.

Continue Reading

ಕ್ರೀಡೆ

India at the Olympics: ಒಲಿಂಪಿಕ್ಸ್​ನಲ್ಲಿ ಭಾರತದ ಪದಕ ಸಾಧನೆಯ ಇಣುಕು ನೋಟ

India at the Olympics: ಒಲಿಂಪಿಕ್ಸ್​ ಇತಿಹಾಸದಲ್ಲಿ ಭಾರತ ಇದುವರೆಗೆ ಒಟ್ಟು 35 ಪದಕಗಳನ್ನು ಗೆದ್ದಿದೆ. ಇದರಲ್ಲಿ 10 ಚಿನ್ನ, 9 ಬೆಳ್ಳಿ ಮತ್ತು 16 ಕಂಚು ಒಳಗೊಂಡಿದೆ. ಈ ಬಾರಿ ಕನಿಷ್ಠ 20 ಪದಕ ಗೆಲ್ಲುವ ನಿರೀಕ್ಷೆ ಇದೆ. ನಿರೀಕ್ಷೆ ಮಾಡಿದಷ್ಟು ಪದಕ ಗೆದ್ದರೆ ಒಟ್ಟು ಪದಕಗಳ ಸಂಖ್ಯೆ 50ರ ಗಡಿ ದಾಟಲಿದೆ.

VISTARANEWS.COM


on

Koo

ಬೆಂಗಳೂರು: ಜಾಗತಿಕ ಕ್ರೀಡಾಕೂಟವಾದ ಒಲಿಂಪಿಕ್ಸ್​ನಲ್ಲಿ(India at the Olympics) ಭಾರತ ಇದುವರೆಗೂ ಹೆಚ್ಚಿನ ಪದಕ ಗೆಲ್ಲದಿದ್ದರೂ ಕೂಡ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾರತೀಯರು ಎಂದೂ ಹಿಂಜರಿಯಲಿಲ್ಲ. ಇತಿಹಾಸವನ್ನೊಮ್ಮೆ ಕೆದಕಿದರೆ ಪುರುಷರ ಹಾಕಿಯಲ್ಲಿ 8 ಬಾರಿ ಸ್ವರ್ಣ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆ ಭಾರತ ಉಳಿಸಿಕೊಂಡಿದೆ. ಈ ಬಾರಿ ಪ್ಯಾರಿಸ್​ಗೆ ತೆರಳುವ ಕ್ರೀಡಾಪಟುಗಳಿಗೆ ಹಿಂದೆಂದಿಗಿಂತ್ತಲೂ ದೊರೆಯದ ಬೆಂಬಲ ಸಿಕ್ಕಿದೆ. ಹಿಂದಿನ ಒಲಿಂಪಿಕ್ಸ್‌ನಲ್ಲಿ ಭಾರತೀಯರ ಪದಕ ಸಾಧನೆ ಹೇಗಿತ್ತು ಎನ್ನುವ ಇಣುಕು ನೋಟ ಇಲ್ಲಿದೆ.

1928ರಲ್ಲಿ ಮೊದಲ ಚಿನ್ನ


ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿದ್ದು. 1928ರಲ್ಲಿ ನೆದರ್ಲೆಂಡ್‌ನ‌ ಆ್ಯಮ್‌ಸ್ಟರ್ಡಾಮ್‌ನಲ್ಲಿ ನಡೆದ ಒಲಿಂಪಿಕ್‌ನಲ್ಲಿ ಭಾರತ ಹಾಕಿ ತಂಡ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಇಲ್ಲಿಂದ ಭಾರತ ಹಾಕಿ ತಂಡದ ಸುವರ್ಣ ಯುಗಾರಂಭವಾಯಿತು. ಹೆಚ್ಚು ಕಡಿಮೆ ಅರ್ಧಶತಮಾನದವರೆಗೆ ಒಲಿಂಪಿಕ್‌ನಲ್ಲಿ ಭಾರತ ಹಾಕಿಯಲ್ಲಿ ಪಾರುಪತ್ಯ ಸಾಧಿಸಿತು. 1956ರವರೆಗೆ ಸತತ 6 ಬಾರಿ ಸ್ವರ್ಣ ಜಯಿಸಿತು. ಧ್ಯಾನ್‌ಚಂದ್‌ ಎಂಬ ಮಹಾನ್‌ ಪ್ರತಿಭೆ ವಿಶ್ವಕ್ಕೆ ಪರಿಚಯವಾಗಿದ್ದೂ ಕೂಡ ಇಲ್ಲಿಯೇ.


ಸ್ವತಂತ್ರ ಭಾರತ ಗೆದ್ದ ಮೊದಲ ಪದಕ

1948ರಂದು ಇಂಗ್ಲೆಂಡ್‌ ರಾಜಧಾನಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್​ ಭಾರತದ ಪಾಲಿಗೆ ವಿಶೇಷವಾಗಿತ್ತು. ಏಕೆಂದರೆ ಸ್ವತಂತ್ರ ಭಾರತ ಆಡಿದ ಮೊದಲ ಒಲಿಂಪಿಕ್ಸ್​ ಕೂಟ ಇದಾಗಿತ್ತು. ಒಂದು ಕಾಲದಲ್ಲಿ ತನ್ನನ್ನು ಆಳಿದ್ದ ಇಂಗ್ಲೆಂಡ್​ ತಂಡವನ್ನೇ ಭಾರತ ಫೈನಲ್‌ನಲ್ಲಿ ಸೋಲಿಸಿ ಚಿನ್ನ ಗೆದ್ದಿತು!. ಗೆಲುವಿನ ಅಂತರ 4-0 ಗೋಲುಗಳು. ಬ್ರಿಟಿಷರ ವಸಾಹತುಶಾಹಿ ಅಹಂಕಾರಕ್ಕೆ ಭಾರತ ಕೊಟ್ಟ ಭಾರೀ ತಿರುಗೇಟಿನಂತಿತ್ತು ಈ ಗೆಲುವು.

ವೈಯಕ್ತಿಕ ವಿಭಾಗದಲ್ಲಿ ಮೊದಲ ಪದಕ


ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯಕ್ತಿಕ ವಿಭಾಗದಲ್ಲಿ ಪದಕ ಜಯಿಸಿದ್ದು 1952ರಲ್ಲಿ. ಮಹಾರಾಷ್ಟ್ರದ ಖಾಸಾಬಾ ದಾದಾ ಸಾಹೆಬ್‌ ಜಾಧವ್‌ ಕುಸ್ತಿಯ ಫ್ರೀಸ್ಟೈಲ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದು ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯಕ್ತಿಕ ವಿಭಾಗದಲ್ಲಿ ಗೆದ್ದ ಮೊದಲ ಪದಕ ಇದಾಗಿತ್ತು.

ಇದನ್ನೂ ಓದಿ Paris Olympics 2024 : ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಡಿಮೆ ಪದಕಗಳು ಸಿಗುವುದು ಯಾಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ


ಟೆನಿಸ್​ನಲ್ಲಿ ಮೊದಲ ಪದಕ


1996ರಲ್ಲಿ ಅಮೆರಿಕದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ ಏಕೈಕ ಕಂಚಿನ ಪದಕ ಜಯಿಸಿತ್ತು. ಲಿಯಾಂಡರ್‌ ಪೇಸ್‌ ಟೆನಿಸ್‌ ಸಿಂಗಲ್ಸ್‌ ವಿಭಾಗದಲ್ಲಿ ಕಂಚು ಜಯಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ 44 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಪದಕ ಇದಾಗಿತ್ತು. ಇಲ್ಲಿ ಲಿಯಾಂಡರ್‌ ಪೇಸ್‌ ಬ್ರಝಿಲ್‌ನ ಫೆರ್ನಾಂಡೊ ಮೆಲಿಗಿನಿ ಅವರನ್ನು ಮಣಿಸಿ ಪದಕಕ್ಕೆ ಕೊರಳೊಡ್ಡಿದ್ದರು.

ಕರ್ಣ ಮಲ್ಲೇಶ್ವರಿ ಐತಿಹಾಸಿಕ ಸಾಧನೆ


2000ದಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಆಂಧ್ರ ಪ್ರದೇಶ ಮೂಲದವರಾದ ಕರ್ಣ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊಟ್ಟ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದರು. 69 ಕೆಜಿ ವಿಭಾಗದಲ್ಲಿ ಮಲ್ಲೇಶ್ವರಿ ಈ ಸಾಧನೆ ಮಾಡಿದ್ದರು.


2004ರಲ್ಲಿ ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಏಕೈಕ ಪದಕ ಮಾತ್ರ ಲಭಿಸಿತು. ರಾಜಸ್ಥಾನದ ಶೂಟರ್‌ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಪುರುಷರ ಡಬಲ್‌ ಟ್ರಾಯಪ್‌ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಗುರಿ ಇರಿಸಿ ಈ ಪದಕ ತಂದುಕೊಟ್ಟಿದ್ದರು. ಈ ಸಾಧನೆಯೊಂದಿಗೆ ವೈಯಕ್ತಿಕ ವಿಭಾಗದಲ್ಲಿ ರಜತ ಗೆದ್ದ ಮೊದಲ ಭಾರತೀಯರೆನಿಸಿದರು.

ಇದನ್ನೂ ಓದಿ Paris Olympics 2024: ಮೊಟ್ಟಮೊದಲ ಒಲಿಂಪಿಕ್ಸ್ ಕ್ರೀಡಾಕೂಟದ 10 ಕುತೂಹಲಕರ ಸಂಗತಿಗಳಿವು

ಚಿನ್ನ ಗೆದ್ದ ಅಭಿನವ್‌ ಬಿಂದ್ರ


ಚೀನದ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯ ಕೂಟವಾಗಿದೆ. ಸ್ವತಂತ್ರ ಭಾರತದಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ವರ್ಣ ಸಾಧನೆ ಮಾಡಿದ್ದು ಇದೇ ಕೂಟದಲ್ಲಿ ಅಲ್ಲದೆ ಮೊಟ್ಟ ಮೊದಲ ಬಾರಿಗೆ ಒಂದೇ ಕೂಟದಲ್ಲಿ 3 ಪದಕಗಳು ಭಾರತದ ಪಾಲಾಗಿದ್ದವು. ಅಭಿನವ್‌ ಬಿಂದ್ರ 10 ಮೀ. ಏರ್‌ ರೈಫ‌ಲ್‌ನಲ್ಲಿ ಸ್ವರ್ಣ ಗೆದ್ದು ಇತಿಹಾಸ ನಿರ್ಮಿಸಿದ್ದರು. ಇತ್ತೀಚೆಗೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಕುಸ್ತಿಪಟು ಸುಸೀಲ್‌ ಕುಮಾರ್‌ ಪುರುಷರ ಕುಸ್ತಿಯ 75 ಕೆಜಿ ವಿಭಾಗದಲ್ಲಿ ಕಂಚು ಗೆದ್ದರೆ ಬಾಕ್ಸಿಂಗ್‌ನಲ್ಲಿ ವಿಜೇಂದರ್‌ ಸಿಂಗ್‌ 66 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದರು.


ಲಂಡನ್​ನಲ್ಲಿ ಕಮಾಲ್​…

2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಅಮೋಘ ಸಧನೆಯೊಂದನ್ನು ಮಾಡಿತು. ಭಾರತಕ್ಕೆ ಅರ್ಧ ಡಜನ್‌ ಪದಕ ಒಲಿದು ಬಂದಿತ್ತು. ಭಾರತದ ಶೂಟಿಂಗ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌, ಕ್ಷೇತ್ರಕ್ಕೆ ಹೊಸ ಆಯಾಮ ಸೃಷ್ಟಿಸಿದ ಕೂಟ ಇದಾಗಿತ್ತು. 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳು ಭಾರತದ ಪಾಲಾದವು. ಶೂಟಿಂಗ್‌ನಲ್ಲಿ ವಿಜಯ್‌ ಕುಮಾರ್‌ 25 ಮೀ. ರ್ಯಾಪಿಟ್‌ ಫೈರ್‌ ಪಿಸ್ತೂಲ್‌ನಲ್ಲಿ ಬೆಳ್ಳಿ ಗೆದ್ದರೆ, ಸುಶೀಲ್‌ ಕುಮಾರ್‌ ಪುರುಷರ 66 ಕೆಜಿ ಫ್ರೀ ಸ್ಟೈಲ್‌ನಲ್ಲಿ ರಜತ ಸಾಧನೆಯೊಂದಿಗೆ ಸತತ 2ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದರು. ಮತೋರ್ವ ಶೂಟರ್‌ ಗಗನ್‌ ನಾರಂಗ್‌ (10 ಮೀ ಏರ್‌ ರೈಫ‌ಲ್‌), ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಬಾಕ್ಸರ್‌ ಮೇರಿ ಕೋಮ್‌ ಹಾಗೂ ಮತೋರ್ವ ಕುಸ್ತಿಪಟು ಯೋಗೇಶ್ವರ್‌ ದತ್‌ ಕಂಚಿನ ಪದಕ ಜಯಿಸಿದರು.

ಇದನ್ನೂ ಓದಿ Paris Olympics 2024 : ಒಲಿಂಪಿಕ್ಸ್​ ಕ್ರೀಡಾಕೂಟದ ಇತಿಹಾಸ ಏನು? ಇದನ್ನು ಆಯೋಜಿಸುವವರು ಯಾರು?


ರಿಯೋದಲ್ಲಿ ಕೇವಲ 2 ಪದಕ


ಲಂಡನ್‌ನಲ್ಲಿ ಅರ್ಧ ಡಜನ್‌ ಪದಕ ಗೆದ್ದಿದ್ದ ಭಾರತದ ಕ್ರೀಡಾಪಟುಗಳ ಮೇಲೆ ರಿಯೋ ಒಲಿಂಪಿಕ್ಸ್‌ನಲ್ಲಿ ಅಪಾರ ಪದಕ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಎಲ್ಲ ನಿರೀಕ್ಷೆ ಹುಸಿಗೊಂಡಿತು. ಭಾರತ ಕೇವಲ 2 ಪದಕಕ್ಕೆ ಮಾತ್ರ ಸೀಮಿತವಾಯಿತು. ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಕೊನೆಯ ಹಂತದಲ್ಲಿ ಎಡವಿ ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಆದರೆ, ಸಿಂಧು ಬ್ಯಾಡ್ಮಿಂಟನ್‌ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಶಟ್ಲರ್‌ ಎನಿಸಿಕೊಂಡರು. ಇತ್ತೀಚೆಗೆ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಲೈಂಗಿಕ ಆರೋಪ ಹೊರಿಸಿ ಪ್ರತಿಭಟನೆ ನಡೆಸಿ ಕುಸ್ತಿಗೆ ನಿವೃತ್ತಿ ಹೇಳಿದ್ದ ಸಾಕ್ಷಿ ಮಲಿಕ್‌ ಕೂಡ ಈ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದರು.


ಚಿನ್ನ ಗೆದ್ದ ನೀರಜ್​ ಚೋಪ್ರಾ

ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ಹಲವು ಕಟ್ಟುಪಾಡುಗಳ ನಡುವೆ ಜಪಾನ್​ನ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್ ಚೋಪ್ರ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಿವಿ ಸಿಂಧು ಕಂಚಿನ ಪದಕ ಜಯಿಸಿ ಸತತವಾಗಿ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸಾಧನೆ ಮಾಡಿದರು. ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು 1980ರ ಬಳಿಕ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯಲ್ಲಿ ಪದಕ ಗೆದ್ದು ಸಂಭ್ರಮಿಸಿತ್ತು. ಬಾಕ್ಸರ್​ ಲವ್ಲೀನಾ ಬೋರ್ಗೊಹೈನ್ ಕಂಚು ಗೆದ್ದರೆ, ಮೀರಾಬಾಯಿ ಚಾನು ಬೆಳ್ಳಿಯೊಂದಿಗೆ ಮಿನುಗಿದರು. ಕುಸ್ತಿಪಟು ರವಿ ದಹಿಯಾ ಬೆಳ್ಳಿ, ಬಜರಂಗ್ ಪೂನಿಯಾ ಕಂಚು ಗೆದ್ದರು.​

35 ಪದಕ


ಒಲಿಂಪಿಕ್ಸ್​ ಇತಿಹಾಸದಲ್ಲಿ ಭಾರತ ಇದುವರೆಗೆ ಒಟ್ಟು 35 ಪದಕಗಳನ್ನು ಗೆದ್ದಿದೆ. ಇದರಲ್ಲಿ 10 ಚಿನ್ನ, 9 ಬೆಳ್ಳಿ ಮತ್ತು 16 ಕಂಚು ಒಳಗೊಂಡಿದೆ. ಈ ಬಾರಿ ಕನಿಷ್ಠ 20 ಪದಕ ಗೆಲ್ಲುವ ನಿರೀಕ್ಷೆ ಇದೆ. ನಿರೀಕ್ಷೆ ಮಾಡಿದಷ್ಟು ಪದಕ ಗೆದ್ದರೆ ಒಟ್ಟು ಪದಕಗಳ ಸಂಖ್ಯೆ 50ರ ಗಡಿ ದಾಟಲಿದೆ.

Continue Reading

ಕ್ರಿಕೆಟ್

Rishabh Pant: ಸಹ ಆಟಗಾರ ಖಲೀಲ್​ ಅಹ್ಮದ್​ರನ್ನು ಸ್ವಿಮ್ಮಿಂಗ್ ಪೂಲ್‌​ಗೆ ತಳ್ಳಿ ಹಾಕಿದ ಪಂತ್​; ವಿಡಿಯೊ ವೈರಲ್​

Rishabh Pant: ಪಂತ್​, ಅಕ್ಷರ್ ಪಟೇಲ್​​ ಮತ್ತು ಖಲೀಲ್​ ಉತ್ತಮ ಸ್ನೇಹಿತರಾಗಿದ್ದಾರೆ. ಜತೆಗೆ ಐಪಿಎಲ್​ನಲ್ಲಿಯೂ ಈ ಮೂರು ಆಟಗಾರರು ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡುತ್ತಿದ್ದಾರೆ.

VISTARANEWS.COM


on

Rishabh Pant
Koo

ಮುಂಬಯಿ: ಟಿ20 ವಿಶ್ವಕಪ್​ ಗೆದ್ದ ಬಳಿಕ ಟೀಮ್​ ಇಂಡಿಯಾದ ಆಟಗಾರರು ತಮ್ಮ ಗೆಳೆಯರ, ಕುಟುಂಬದ ಜತೆ ದೇಶ-ವಿದೇಶಕ್ಕೆ ಪ್ರವಾಸ ಕೈಗೊಳ್ಳುತ್ತಾ ಎಂಜಾಯ್​ ಮಾಡುತ್ತಿದ್ದಾರೆ. ವಿಶ್ವಕಪ್​ ತಂಡದ ಭಾಗವಾಗಿದ್ದ, ಆತ್ಮೀಯ ಗೆಳೆಯರು ಆಗಿರುವ ರಿಷಭ್​ ಪಂತ್(Rishabh Pant)​, ಅಕ್ಷರ್​ ಪಟೇಲ್​ ಮತ್ತು ಖಲೀಲ್​ ಅಹ್ಮದ್​(Khaleel Ahmed) ಕೂಡ ಪ್ರವಾಸ ಹೋಗಿದ್ದಾರೆ. ಈ ವೇಳೆ ಪಂತ್​ ಖಲೀಲ್ ಅವರನ್ನು ಸ್ವಿಮ್ಮಿಂಗ್ ಪೂಲ್‌​ಗೆ(Khaleel Ahmed in a swimming pool) ತಳ್ಳಿ ಹಾಕಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಮೂರು ಆಟಗಾರರು ವಿದೇಶ ಪ್ರವಾಸದಲ್ಲಿ ಎಂಜಾಯ್​ ಮಾಡುತ್ತಿದ್ದು, ಹೊಟೇಲ್​ನಿಂದ ಬೀಚ್​ಗೆ ನಡೆದುಕೊಂಡು ಹೋಗುವಾಗ ಪಂತ್​ ಅವರು ಖಲೀಲ್​ ಅವರನ್ನು ಮಾತನಾಡಿಸುವಂತೆ ಹತ್ತಿರಕ್ಕೆ ಬಂದು ಸ್ವಿಮ್ಮಿಂಗ್ ಪೂಲ್‌​ಗೆ ದೂಡಿ ಹಾಕಿದ್ದಾರೆ. ನೀರಿಗೆ ಬೀಳುವ ಮುನ್ನವೇ ಖಲೀಲ್​ ತಮ್ಮ ಕೈಯಲ್ಲಿದ್ದ ಮೊಬೈಲ್​ ಮೇಲಕ್ಕೆ ಎಸೆದು ಮೊಬೈಲ್​ ನೀರಿಗೆ ಬೀಳದಂತೆ ನೋಡಿಕೊಂಡಿದ್ದಾರೆ. ನೀರಿಗೆ ಬಿದ್ದ ಖಲೀಲ್​ ಕಂಡು ಪಂತ್​ ಮತ್ತು ಇಲ್ಲಿ ನೆರೆದಿದ್ದ ಇತರ ಪ್ರವಾಸಿಗರು ಜೋರಾಗಿ ನಕ್ಕಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಿಂದ ಮೇಲೆದ್ದು ಬಂದ ಬಳಿಕ ಪಂತ್​ ಖಲೀಲ್​ ಅವರನ್ನು ತಬ್ಬಿಕೊಂಡಿದ್ದಾರೆ.

ಪಂತ್​, ಅಕ್ಷರ್​ ಮತ್ತು ಖಲೀಲ್​ ಉತ್ತಮ ಸ್ನೇಹಿತರಾಗಿದ್ದಾರೆ. ಐಪಿಎಲ್​ನಲ್ಲಿಯೂ ಈ ಮೂರು ಆಟಗಾರರು ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡುತ್ತಾರೆ. ಪಂತ್​ ತಮಾಷೆಗೆಂದೇ ಖಲೀಲ್​ ಅವರನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಿದ್ದು. ಸದ್ಯ ಗೆಳೆಯರ ಈ ಚೇಷ್ಟೆಯ ವಿಡಿಯೊ ವೈರಲ್​ ಆಗಿದ್ದು ನೆಟ್ಟಿಗರು ಈ ವಿಡಿಯೊಗೆ ದೇಕೊ ಪಂತ್​ನೇ ಏ ಕ್ಯಾ ಕಿಯಾ(ನೋಡಿ ಪಂತ್​ ಏನು ಮಾಡಿದ್ದಾರೆ) ಎಂದು ಕಮೆಂಟ್ ಮಾಡಿದ್ದಾರೆ.​

ಮುಂದಿನ ವರ್ಷ ಪಂತ್​ ಅವರು ಡೆಲ್ಲಿ ತಂಡ ತೊರೆದು ಬೇರೆ ಫ್ರಾಂಷೈಸಿ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಪಂತ್​ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮಹೇಂದ್ರ ಸಿಂಗ್​ ಧೋನಿ ಮುಂದಿನ ವರ್ಷ ಐಪಿಎಲ್​ ಆಡುವುದು ಖಚಿತತೆ ಇಲ್ಲ. ಇಂಪ್ಯಾಕ್ಟ್​ ನಿಯಮ ಇದ್ದರೆ ಆಡುವುದಾಗಿ ಫ್ರಾಂಚೈಸಿ ಮೂಲಗಳು ಈಗಾಗಲೇ ಮಾಹಿತಿ ನೀಡಿದೆ. ಈ ಬಾರಿಯೇ ಧೋನಿ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು. ಧೋನಿ ಸ್ಥಾನಕ್ಕೆ ಪಂತ್​ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯೊಂದು ಕಂಡುಬಂದಿದೆ.

ಇದನ್ನೂ ಓದಿ Rishabh Pant: ಡೆಲ್ಲಿ ತೊರೆದು ಮುಂದಿನ ಐಪಿಎಲ್​ನಲ್ಲಿ ಈ ಫ್ರಾಂಚೈಸಿ ಪರ ಆಡಲಿದ್ದಾರೆ ರಿಷಭ್​ ಪಂತ್​

ಧೋನಿ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ, ರಿಷಭ್​ ಪಂತ್​ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಣ್ಣನ ಸ್ಥಾನದಲ್ಲಿ ನಿಂತು ಧೋನಿ ಅವರು ಪಂತ್​ಗೆ ಸಲಹೆ ನೀಡುತ್ತಾರೆ. ಪಂತ್​ ಕೂಡ ಧೋನಿ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಧೋನಿಯೇ ಪಂತ್​ ಅವರನ್ನು ಸಿಎಸ್​ಕೆ ತಂಡಕ್ಕೆ ಆಹ್ವಾನಿಸಬಹುದು. ಪಂತ್​ ಚೆನ್ನೈ ಸೇರಿದರೆ ಕೀಪಿಂಗ್​ ನಡೆಸಬಹುದು. ಧೋನಿ ಇಂಪ್ಯಾಕ್ಟ್​ ಆಟಗಾರನಾಗಿ ಬ್ಯಾಟಿಂಗ್​ ಮಾತ್ರ ನಡೆಸುವ ಸಾಧ್ಯತೆ ಇದೆ.

Continue Reading

ಕ್ರೀಡೆ

RCB: ಆರ್​ಸಿಬಿ ಕಪ್​ ಗೆಲ್ಲದಿರಲು ನೈಜ ಕಾರಣ ತಿಳಿಸಿದ ತಂಡದ ಮಾಜಿ ಆಟಗಾರ

RCB: ಆರ್​ಸಿಬಿ ತಂಡದಲ್ಲಿ ಸಂಸ್ಕೃತಿ ಎಂಬುದೇ ಇಲ್ಲ. ತಂಡದ ಪ್ರದರ್ಶನದ ಗಮನಿಸಿದರೆ ಎಲ್ಲವೂ ತಿಳಿಯುತ್ತದೆ. ಒಂದು ತಂಡವಾಗಿ ಆಡಲು ಬೇಕಾದ ಸಂಸ್ಕೃತಿ ಇಲ್ಲದೇ ಇರುವುದಕ್ಕೇ ಆರ್‌ಸಿಬಿ ಈವರೆಗೆ ಟ್ರೋಫಿ ಗೆದ್ದಿಲ್ಲ. ತಂಡದ ಎಲ್ಲ ಆಟಗಾರರನ್ನು ಒಂದೇ ರೀತಿಯಲ್ಲಿ ಕಂಡರೆ ಖಂಡಿತಾ ಕಪ್​ ಗೆಲ್ಲುವುದು ಖಚಿತ ಎಂದು ಪಾರ್ಥಿವ್‌ ಪಟೇಲ್‌ ಹೇಳಿದ್ದಾರೆ.

VISTARANEWS.COM


on

RCB
Koo

ಮುಂಬಯಿ: ಐಪಿಎಲ್​ನ ನತದೃಷ್ಠ ತಂಡಗಳಲ್ಲಿ ಒಂದಾಗಿರುವ ಆರ್​ಸಿಬಿ(RCB) ತಂಡ ಇದುವರೆಗೂ ಕಪ್​ ಗೆಲ್ಲಲು ಸಾಧ್ಯವಾಗಲಿಲ್ಲ ಏಕೆ ಎಂಬ ಸತ್ಯವನ್ನು ತಂಡದ ಮಾಚಿ ಆಟಗಾರ ಪಾರ್ಥಿವ್‌ ಪಟೇಲ್‌(Parthiv Patel) ರಿವೀಲ್​ ಮಾಡಿದ್ದಾರೆ. ತಂಡದಲ್ಲಿ ಉತ್ತಮ ಸಂಸ್ಕೃತಿ ಇಲ್ಲದೇ ಇರುವುದೇ ಕಪ್​ ಗೆಲ್ಲದಿರಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಆರ್‌ಸಿಬಿ(Royal Challengers Bengaluru) ತಂಡದಲ್ಲಿ ಆಡುತ್ತಿದ್ದ ದಿನಗಳನ್ನು ಸ್ಮರಿಸಿರುವ ಪಾರ್ಥಿವ್‌ ಪಟೇಲ್‌, “ನಾನೂ ಆರ್‌ಸಿಬಿ ತಂಡದಲ್ಲಿ ಹಲವು ವರ್ಷಗಳ ಕಾಲ ಆಡಿದ್ದೇನೆ. ಆ ತಂಡಕ್ಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಆದರೆ, ಆ ತಂಡದಲ್ಲಿ ಎಲ್ಲವೂ ವ್ಯಕ್ತಿ ಪೂಜೆಯ ಮೇಲೆ ನಿಂತಿದೆ. ಕೆಲವೇ ಕೆಲ ಸ್ಟಾರ್‌ ಆಟಗಾರರಿಗೆ ಮಾತ್ರ ವಿಶೇಷ ಸತ್ಕಾರ ನೀಡಲಾಗುತ್ತದೆ. ಈ ಆಟಗಾರರ ಸೇವೆಯ ಬಳಿಕವಷ್ಟೇ ತಂಡದ ಉಳಿದ ಆಟಗಾರರನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ಇದನ್ನೂ ನಾನು ಕಣ್ಣಾರೆ ಕಂಡಿದ್ದೇನೆ” ಎಂದು ಹೇಳಿದ್ದಾರೆ.

“ಆರ್​ಸಿಬಿ ತಂಡದಲ್ಲಿ ಸಂಸ್ಕೃತಿ ಎಂಬುದೇ ಇಲ್ಲ. ತಂಡದ ಪ್ರದರ್ಶನದ ಗಮನಿಸಿದರೆ ಎಲ್ಲವೂ ತಿಳಿಯುತ್ತದೆ. ಒಂದು ತಂಡವಾಗಿ ಆಡಲು ಬೇಕಾದ ಸಂಸ್ಕೃತಿ ಇಲ್ಲದೇ ಇರುವುದಕ್ಕೇ ಆರ್‌ಸಿಬಿ ಈವರೆಗೆ ಟ್ರೋಫಿ ಗೆದ್ದಿಲ್ಲ. ತಂಡದ ಎಲ್ಲ ಆಟಗಾರರನ್ನು ಒಂದೇ ರೀತಿಯಲ್ಲಿ ಕಂಡರೆ ಖಂಡಿತಾ ಕಪ್​ ಗೆಲ್ಲುವುದು ಖಚಿತ” ಎಂದು ಪಾರ್ಥಿವ್‌ ಪಟೇಲ್‌ ಹೇಳಿದ್ದಾರೆ.

ಪಾರ್ಥಿವ್‌ ಅವರ ಈ ಹೇಳಿಕೆಗೆ ನೆಟ್ಟಿಗರರು ಕಮೆಂಟ್​ ಮಾಡಿದ್ದು, ದೊಡ್ಡ ಚಿಂತಕ, ಕ್ರಿಕೆಟ್‌ ವಿಮರ್ಶಕ, ದೇಶಿಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆಟಗಾರ, ಯುವಕ, ಐಪಿಎಲ್‌ ಅನುಭವ ಹಾಗೂ ಆಟಗಾರರ ಸಾಮರ್ಥ್ಯದ ಅರಿವು ಹೊಂದಿರುವ ನೀವು ಏಕೆ ಆರ್​ಸಿಬಿ ಮ್ಯಾನೆಜ್​ಮೆಂಟ್​ ಸೇರಿ ಉತ್ತಮ ಸಂಸ್ಕೃತಿಯ ವಾತಾವರಣ ನಿರ್ಮಾಣ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.

ಮುಂದಿನ ವರ್ಷ ಮೆಗಾ ಹರಾಜು ಕೂಡ ನಡೆಯಲಿದೆ. (IPL 2025)​ 18ನೇ ಆವೃತ್ತಿಯಲ್ಲಿ ಬೆಂಗಳೂರು ತಂಡದಲ್ಲಿ ಕೂಡ ದೊಡ್ಡ ಬದಲಾವಣೆಯೊಂದು ಸಂಭವಿಸುವ ಮುನ್ಸೂಚನೆಯೊಂದು ಲಭಿಸಿದೆ. ಈ ಹಿಂದೆ ತಂಡದ ನಾಯಕನಾಗಿದ್ದ ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್​ ಅವರನ್ನು ಕೈ ಬಿಟ್ಟು ಮಾಜಿ ನಾಯಕ ವಿರಾಟ್​ ಕೊಹ್ಲಿ(Virat Kohli)ಗೆ ಮತ್ತೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ IPL 2025: ಕೆಕೆಆರ್​ ತಂಡದ ಮೆಂಟರ್​ ಆಗಲಿದ್ದಾರಾ ರಾಹುಲ್ ದ್ರಾವಿಡ್?

ವಿರಾಟ್​ ಕೊಹ್ಲಿ ಅವರು ಭಾರತ ತಂಡದ ಮೂರು ಮಾದರಿಯ ನಾಯಕತ್ವ ವಹಿಸಿಕೊಂಡಿದ್ದ ವೇಳೆ ಐಪಿಎಲ್​ನಲ್ಲಿಯೂ ತಂಡವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ, ಕೆಲಸದ ಒತ್ತಡದಿಂದಾಗಿ ಆಟದ ಕಡೆ ಸರಿಯಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಐಪಿಎಲ್​ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಸೂಕ್ತ ನಾಯಕನ ಸ್ಥಾನಕ್ಕೆ ಚೆನ್ನೈ ತಂಡದಲ್ಲಿದ್ದ ಫಾಫ್​ ಡುಪ್ಲೆಸಿಸ್​ ಅವರನ್ನು ಖರೀದಿ ಮಾಡಿ ಅವರಿಗೆ ನಾಯಕತ್ವ ನೀಡಲಾಗಿತ್ತು.

ಕಳೆದ ಮೂರು ಸೀಸನ್​ನಲ್ಲಿ ಡುಪ್ಲೆಸಿಸ್ ಆರ್​ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಕಳೆದ ಬಾರಿಯಂತೂ ಲೀಗ್​ನಿಂದಲೇ ಹೊರಬಿದ್ದಿತ್ತು. ಇದೀಗ ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿ ಮತ್ತೆ ನಾಯಕನಾದರೂ ಅಚ್ಚರಿಯಿಲ್ಲ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದರೂ ಕೂಡ ಕೊಹ್ಲಿ ಇದಕ್ಕೆ ಒಪ್ಪಲಿದ್ದಾರಾ ಎನ್ನುವುದು ಕುತೂಹಲ. ಈ ಐಪಿಎಲ್​ನಲ್ಲಿ ಕೊಹ್ಲಿ ಪ್ರಚಂಡ ಬ್ಯಾಟಿಂಗ್​ ಮೂಲಕ 700ಕ್ಕೂ ಅಧಿಕ ರನ್​ ಕಲೆ ಹಾಕಿ ಟೂರ್ನಿಯ ಅತ್ಯಧಿಕ ಸ್ಕೋರ್​ ಎನಿಸಿಕೊಂಡಿದ್ದರು.

Continue Reading
Advertisement
R Ashwin
ಪ್ರಮುಖ ಸುದ್ದಿ10 mins ago

R Ashwin : ಸುನೀಲ್ ನರೈನ್ ರೀತಿ ಆರಂಭಿಕರಾಗಿ 20 ಎಸೆತಕ್ಕೆ 45 ರನ್ ಬಾರಿಸಿದ ಆರ್.​ ಅಶ್ವಿನ್​; ಇಲ್ಲಿದೆ ವಿಡಿಯೊ

Children Mobile Addiction
ಆರೋಗ್ಯ14 mins ago

Children Mobile Addiction: ನಮ್ಮ ಮಕ್ಕಳು ಎಷ್ಟು ಹೊತ್ತು ಮೊಬೈಲ್‌ ನೋಡಬಹುದು?

Road Accident
ಕರ್ನಾಟಕ18 mins ago

Road Accident: ಕೊಡಗಿನ ಸುಂಟಿಕೊಪ್ಪ ಬಳಿ ಟಿಪ್ಪರ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ದುರ್ಮರಣ

Assembly Session Job reservation for Kannadigas in private sectors Cabinet meeting approves bill
ಕರ್ನಾಟಕ25 mins ago

Assembly Session: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ; ಏನೆಲ್ಲ ಅರ್ಹತೆ ಇರಬೇಕು?

Paris Olympics 2024
ಪ್ರಮುಖ ಸುದ್ದಿ1 hour ago

Paris Olympics 2024 : ಟೋಕಿಯೊದಲ್ಲಿ ನಡೆದ 2020ರ ಒಲಿಂಪಿಕ್ಸ್​ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Dog Ethnicwear
ಫ್ಯಾಷನ್1 hour ago

Dog Ethnicwear: ನಾಯಿಗಳಿಗೂ ಬಂತು ಎಥ್ನಿಕ್‌ ವೇರ್ಸ್! ಎಷ್ಟು ಮುದ್ದಾಗಿ ಕಾಣಿಸುತ್ತಿವೆ!

SIM Cards
ಗ್ಯಾಜೆಟ್ಸ್1 hour ago

SIM Cards: ಮಿತಿ ಮೀರಿ ಮೊಬೈಲ್‌ ಸಿಮ್ ಹೊಂದಿದ್ದೀರಾ? ಕಾದಿದೆ ಭಾರಿ ದಂಡ, ಶಿಕ್ಷೆ!

Assembly Session
ಕರ್ನಾಟಕ1 hour ago

Assembly Session: ಲೂಟಿಕೋರರ ಪಿತಾಮಹ ನೀನು: ಸದನದಲ್ಲಿ ಅಶ್ವತ್ಥ್ ನಾರಾಯಣ ವಿರುದ್ಧ ಗುಡುಗಿದ ಡಿಕೆಶಿ!

Ananth Ambani Fashion
ಫ್ಯಾಷನ್1 hour ago

Ananth Ambani Fashion: ಅನಂತ್‌ ಅಂಬಾನಿ ಬಳಿ ಇದೆ ಡೈಮಂಡ್‌ ಬ್ರೂಚ್‌ಗಳ ಕಲೆಕ್ಷನ್‌! ಇವುಗಳ ಮೌಲ್ಯ ಎಷ್ಟಿರಬಹುದು?

Entrepreneurship Development Training Concluding Ceremony at Kanakagiri
ಕೊಪ್ಪಳ2 hours ago

Koppala News: ಕನಕಗಿರಿಯಲ್ಲಿ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ9 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 day ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌