IPL 2025: ಬಿಸಿಸಿಐ ಈ ನಿಯಮ ಜಾರಿಗೆ ತಂದರೆ ಧೋನಿ ಮುಂದಿನ ಐಪಿಎಲ್​ ಆಡುವುದು ಅನುಮಾನ! - Vistara News

ಕ್ರಿಕೆಟ್

IPL 2025: ಬಿಸಿಸಿಐ ಈ ನಿಯಮ ಜಾರಿಗೆ ತಂದರೆ ಧೋನಿ ಮುಂದಿನ ಐಪಿಎಲ್​ ಆಡುವುದು ಅನುಮಾನ!

IPL 2025: ಕ್ರಿಕ್‌ಬಜ್‌ ವರದಿಯ ಪ್ರಕಾರ, ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಮಾತ್ರ ನೀಡಲಿದೆ ಎನ್ನಲಾಗಿದೆ. ಹೀಗಾದಲ್ಲಿ ಧೋನಿಗೆ ಚೆನ್ನೈ(CSK) ತಂಡದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ.

VISTARANEWS.COM


on

IPL 2025
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಇದೀಗ ಮುಂದಿನ ಐಪಿಎಲ್​ಗಾಗಿ ನಡೆಯುವ ಮೆಗಾ ಹರಾಜಿಗೆ ಬಿಸಿಸಿಐ(BCCI) ಈ ನಿಯಯ ಜಾರಿಗೆ ತಂದರೆ ಧೋನಿ ಅವರು 18ನೇ ಆವೃತ್ತಿ ಐಪಿಎಲ್(IPL 2025)​ ಆಡುವುದು ಅನುಮಾನ ಎನ್ನಲಾಗಿದೆ.

ಹೌದು, ಡಿಸೆಂಬರ್​ನಲ್ಲಿ ನಡೆಯಲಿದೆ ಎನ್ನಲಾಗಿರುವ ಆಟಗಾರರ ಮೆಗಾ ಹರಾಜಿನ ಭಾಗವಾಗಿ ನಾಳೆ(ಜುಲೈ 31, ಬುಧವಾರ) ಮುಂಬೈಯಲ್ಲಿ ಬಿಸಿಸಿಐ ಮತ್ತು ಐಪಿಎಲ್ ಮಂಡಳಿ ಎಲ್ಲ 10 ಫ್ರಾಂಚೈಸಿಗಳ ಜತೆ ಸಭೆ ನಡೆಸಲಿದೆ. ಈ ಸಭೆಯಲ್ಲಿ ಒಂದು ಫ್ರಾಂಚೈಸಿ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು ಹೀಗೆ ಹಲವು ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಲಿದೆ.

ಕ್ರಿಕ್‌ಬಜ್‌ ವರದಿಯ ಪ್ರಕಾರ, ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಮಾತ್ರ ನೀಡಲಿದೆ ಎನ್ನಲಾಗಿದೆ. ಹೀಗಾದಲ್ಲಿ ಧೋನಿಗೆ ಚೆನ್ನೈ(CSK) ತಂಡದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶ್ರೀಲಂಕಾದ ವೇಗಿ ಮತಿಶಾ ಪತಿರಾಣ ಮತ್ತು ಶಿವಂ ದುಬೆ ಅವರನ್ನು ಉಳಿಸಿಕೊಳ್ಳುವ ಯೋಚನೆಯಲ್ಲಿದೆ ಎನ್ನಲಾಗಿದೆ. ಒಂದೊಮ್ಮೆ 4ಕ್ಕಿಂತ ಅಧಿಕ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ನೀಡಿದರೆ ಧೋನಿ ಚೆನ್ನೈ ತಂಡದ ಪರ ಇನ್ನೊಂದು ಐಪಿಎಲ್​ ಆಡಲಿದ್ದಾರೆ ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಕ್ರಿಕ್‌ಬಜ್‌ ವರದಿ ಮಾಡಿದೆ.

ಇದನ್ನೂ ಓದಿ IPL 2025: ಆರ್​ಸಿಬಿ ಇನ್​ಸ್ಟಾಗ್ರಾಮ್​ ಖಾತೆ ಅನ್​ಫಾಲೋ ಮಾಡಿದ ಮ್ಯಾಕ್ಸ್​ವೆಲ್; ಕಾರಣವೇನು?

ಇಂಪ್ಯಾಕ್ಟ್​ ನಿಯಮ ಕೈಬಿಡುವ ಸಾಧ್ಯತೆ!


ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ಹಲವು ಅನುಭವಿ ಆಟಗಾರರಿಂದ ಇಂಪ್ಯಾಕ್ಟ್​ ನಿಯಮದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಬಿಸಿಸಿಐ ಕೂಡ ಮುಂದಿನ ಬಾರಿ ಈ ನಿಯಮದ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿತ್ತು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಇಂಪ್ಯಾಕ್ಟ್​ ನಿಯಮ ಕೈ ಬಿಟ್ಟರೂ ಅಚ್ಚರಿಯಿಲ್ಲ. ಧೋನಿ ಅವರು ಇಂಪ್ಯಾಕ್ಟ್​ ನಿಯಮ ಇಲ್ಲವಾದರೆ ಮುಂದಿನ ಆವೃತ್ತಿ ಆಡುವುದು ಅನುಮಾನ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಹೇಳಿದ್ದರು. ಒಂದೊಮ್ಮೆ ಈ ನಿಯಮ ಕೈಬಿಟ್ಟರೆ ಆಗ ಧೋನಿ ಆಡುತ್ತಾರಾ ಎನ್ನುವ ಪ್ರಶ್ನೆಯೊಂದು ಮೂಡುವುದು ಸಹಜ.

ಐಪಿಎಲ್ ಮೆಗಾ ಹರಾಜನ್ನು ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವಂತೆಯೂ ಕೆಲವು ಫ್ರಾಂಚೈಸಿಗಳು ಮನವಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಒಂದೊಮ್ಮೆ ಈ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದರೆ. ಮುಂದಿನ ಮೆಗಾ ಹರಾಜು 2029ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Richest Cricketers: ವಿಶ್ವದ ಟಾಪ್‌ 5 ಶ್ರೀಮಂತ ಕ್ರಿಕೆಟಿಗರಿವರು! ಎಷ್ಟಿದೆ ಇವರ ಆಸ್ತಿ?

ಕ್ರಿಕೆಟ್ ಆಡುವುದರ ಹೊರತಾಗಿ ವಿಶ್ವದ ಶ್ರೀಮಂತ ಕ್ರಿಕೆಟಿಗರು ಕೆಲವು ಬ್ರ್ಯಾಂಡ್‌ಗಳಲ್ಲಿ ಪ್ರಮುಖ ಹೆಸರು ಮತ್ತು ಹೆಚ್ಚುವರಿ ಆದಾಯವನ್ನೂ ಗಳಿಸುತ್ತಾರೆ. ಅದು ಅವರ ನಿವ್ವಳ ಮೌಲ್ಯವನ್ನು ಹೆಚ್ಚಿಸುತ್ತದೆ. ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ (Richest Cricketers) ಭಾರತದ ಮೂವರು ಕ್ರಿಕೆಟಿಗರೂ ಸೇರಿದ್ದಾರೆ. ವಿಶ್ವದ ಐವರು ಶ್ರೀಮಂತ ಕ್ರಿಕೆಟಿಗರ ಸಂಪತ್ತಿನ ಮಾಹಿತಿ ಇಲ್ಲಿದೆ.

VISTARANEWS.COM


on

By

Richest Cricketers
Koo

ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ (most popular sports) ಒಂದಾಗಿರುವ ಕ್ರಿಕೆಟ್ (cricket) ತನ್ನ ಅಪಾರ ಅಭಿಮಾನಿಗಳ ಕಾರಣದಿಂದಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಆದಾಯ ಗಳಿಸುವ ಕ್ಷೇತ್ರವಾಗಿ ಬೆಳೆದಿದೆ. ಇದರಲ್ಲಿ ಕೆಲವು ಆಟಗಾರರು (Richest Cricketers) ಸಾಕಷ್ಟು ಹೆಸರು ಮಾತ್ರವಲ್ಲ ಸಂಪತ್ತನ್ನು ಗಳಿಸಿದ್ದಾರೆ. ಪ್ರಪಂಚದಾದ್ಯಂತದ ಅಭಿಮಾನಿಗಳಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿರುವ ಹಲವಾರು ಕ್ರಿಕೆಟಿಗರಲ್ಲಿ ಕೆಲವರು ಮಾತ್ರ ವಿಶ್ವದ ಶ್ರೀಮಂತ ಕ್ರಿಕೆಟಿಗರಿಗಾಗಿ (Cricketers) ಗುರುತಿಸಿಕೊಂಡಿದ್ದಾರೆ.

ಕ್ರಿಕೆಟ್ ಆಡುವುದರ ಹೊರತಾಗಿ ವಿಶ್ವದ ಶ್ರೀಮಂತ ಕ್ರಿಕೆಟಿಗರು ಕೆಲವು ಬ್ರ್ಯಾಂಡ್‌ಗಳಲ್ಲಿ ಪ್ರಮುಖ ಹೆಸರು ಮತ್ತು ಹೆಚ್ಚುವರಿ ಆದಾಯವನ್ನೂ ಗಳಿಸುತ್ತಾರೆ. ಅದು ಅವರ ನಿವ್ವಳ ಮೌಲ್ಯವನ್ನು ಹೆಚ್ಚಿಸುತ್ತದೆ. ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಭಾರತದ ಮೂವರು ಕ್ರಿಕೆಟಿಗರೂ ಸೇರಿದ್ದಾರೆ.

ಕೆಲವು ಕ್ರಿಕೆಟ್ ಆಟಗಾರರು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು, ಆದಾಯ ಗಳಿಸಿದ್ದರೆ ಇನ್ನು ಕೆಲವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಬಿಗ್ ಬ್ಯಾಷ್ ಲೀಗ್ (ಬಿಬಿಎಲ್), ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಮತ್ತು ಮತ್ತೆ ಅನೇಕರು ಕ್ರಿಕೆಟ್ ಲೀಗ್‌ಗಳಲ್ಲಿ ದುಬಾರಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದರಲ್ಲಿ ವಿಶ್ವದ ಅಗ್ರ ಐದು ಶ್ರೀಮಂತ ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದಾರೆ. ಅವರು ಯಾರು, ಅವರ ಸಂಪತ್ತು ಎಷ್ಟಿದೆ ಗೊತ್ತೇ?

ವಿಶ್ವದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ಮೂವರು ಕ್ರಿಕೆಟಿಗರು ಮೊದಲನೇ ಸ್ಥಾನದಲ್ಲಿದ್ದಾರೆ. ಅದರಲ್ಲೂ ಕ್ರಿಕೆಟ್ ದೇವರು ಸಚ್ಚಿನ್ ತೆಂಡೂಲ್ಕರ್ ವಿಶ್ವದ ಅತಿ ಹೆಚ್ಚು ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ.

Richest Cricketers
Richest Cricketers


1. ಸಚಿನ್ ತೆಂಡೂಲ್ಕರ್

ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿಶ್ವದ ಸಾರ್ವಕಾಲಿಕ ಶ್ರೀಮಂತ ಕ್ರಿಕೆಟಿಗ. ಭಾರತೀಯ ಶ್ರೇಷ್ಠ ಕ್ರಿಕೆಟಿಗರಾಗಿರುವ ಇವರು ಸುಮಾರು 172 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇವರ ಸಂಪತ್ತಿನ ಮೌಲ್ಯ ಸುಮಾರು 1,440 ಕೋಟಿ ರೂ.

Richest Cricketers
Richest Cricketers


2. ಎಂ.ಎಸ್. ಧೋನಿ

ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ವಿಶ್ವದ ಎರಡನೇ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ. ಹಲವು ದೊಡ್ಡ ಬ್ರ್ಯಾಂಡ್‌ಗಳಲ್ಲಿ ಪ್ರಮುಖ ಹೆಸರು ಗಳಿಸಿದ್ದಾರೆ. ವಿಕೆಟ್‌ಕೀಪರ್-ಬ್ಯಾಟರ್ ಆಗಿ ಸುಮಾರು 127 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದು, ಇವರ ಸಂಪತ್ತಿನ ಮೌಲ್ಯ 1,063 ಕೋಟಿ ರೂ.

Richest Cricketers
Richest Cricketers


3. ವಿರಾಟ್ ಕೊಹ್ಲಿ

ಸಕ್ರಿಯ ಆಟಗಾರರ ಪೈಕಿ ಶ್ರೀಮಂತ ಕ್ರಿಕೆಟಿಗ, ಸ್ಟಾರ್ ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕ್ರಿಕೆಟ್ ಆಡುವುದರ ಹೊರತಾಗಿ ಕೊಹ್ಲಿ ಹಲವು ಬ್ರ್ಯಾಂಡ್‌ಗಳಲ್ಲಿ ಹೆಸರನ್ನು ಮಾಡಿದ್ದಾರೆ. ಸುಮಾರು 122 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿರುವ ಇವರ ಸಂಪತ್ತಿನ ಮೌಲ್ಯ 1,021 ಕೋಟಿ ರೂ.

Richest Cricketers
Richest Cricketers


4. ರಿಕಿ ಪಾಂಟಿಂಗ್

ರಿಕಿ ಪಾಂಟಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಇವರು ಆಸ್ಟ್ರೇಲಿಯಾ ತಂಡಕ್ಕೆ ಎರಡು ಒಡಿಐ ವಿಶ್ವಕಪ್ ಪ್ರಶಸ್ತಿಗಳು ಮತ್ತು ಎರಡು ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆಲ್ಲುವಲ್ಲಿ ಕಾರಣರಾದರು. ಸುಮಾರು 100 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ನಾಲ್ಕನೇ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ. ಇವರ ಸಂಪತ್ತಿನ ಮೌಲ್ಯ ಸುಮಾರು 837 ಕೋಟಿ ರೂ.

ಇದನ್ನೂ ಓದಿ: Paris Olympics 2024 : ಕ್ರಿಕೆಟ್ ಕೆಲಸದಿಂದ ನಿರಾಳ; ಒಲಿಂಪಿಕ್ಸ್​​ವೀಕ್ಷಿಸಲು ತೆರಳಿದ ರಾಹುಲ್ ದ್ರಾವಿಡ್​

Richest Cricketers
Richest Cricketers


5. ಜಾಕ್ವೆಸ್ ಕಾಲಿಸ್

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಜಾಕ್ವೆಸ್ ಕಾಲಿಸ್ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಇವರು ಸುಮಾರು 586 ಕೋಟಿ ಮೊತ್ತದ ಸಂಪತ್ತನ್ನು ಹೊಂದಿದ್ದು, ಸುಮಾರು 70 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

Continue Reading

ಪ್ರಮುಖ ಸುದ್ದಿ

Dinesh Mongia : ಭಾರತ ತಂಡದ ಮಾಜಿ ಆಟಗಾರ ದಿನೇಶ್ ಮೋಂಗಿಯಾ ಗೋವಾ ಕ್ರಿಕೆಟ್​ ತಂಡದಲ್ಲಿ ಹೊಸ ಜವಾಬ್ದಾರಿ

Dinesh Mongia : ದಿನೇಶ್ ಮೊಂಗಿಯಾ ಭಾರತ ಪರ 57 ಏಕದಿನ ಮತ್ತು ಒಂದು ಟಿ 20 ಪಂದ್ಯವನ್ನು ಆಡಿದ್ದಾರೆ. ಮೊಂಗಿಯಾ ಏಕದಿನ ಪಂದ್ಯಗಳಲ್ಲಿ 1,230 ರನ್ ಮತ್ತು ಟಿ 20ಐನಲ್ಲಿ 38 ರನ್ ಗಳಿಸಿದ್ದಾರೆ. ಅವರು 2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಶ್ರೀಲಂಕಾದೊಂದಿಗೆ ಕಪ್​ ಹಂಚಿಕೊಂಡ ಭಾರತ ತಂಡದ ಭಾಗವಾಗಿದ್ದರು. ಭಾರತದ ಮಾಜಿ ಬ್ಯಾಟರ್​​ 2003 ರ ಏಕದಿನ ವಿಶ್ವಕಪ್​​ನಲ್ಲಿ ರನ್ನರ್ಸ್ ಅಪ್ ಸ್ಥಾನ ಪಡೆದ ತಂಡದ ಸದಸ್ಯರಾಗಿದ್ದರು.

VISTARANEWS.COM


on

Dinesh Mongia
Koo

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ ತಮ್ಮ ಕೋಚಿಂಗ್ ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅವರು ಗೋವಾ ಕ್ರಿಕೆಟ್ ಅಸೋಸಿಯೇಷನ್​​ನ ಹಿರಿಯ ಪುರುಷರ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಜೆ.ಪಿ.ಯಾದವ್ ಅವರು 23 ವರ್ಷದೊಳಗಿನವರ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ದಿನೇಶ್ ಮೊಂಗಿಯಾ ಭಾರತ ಪರ 57 ಏಕದಿನ ಮತ್ತು ಒಂದು ಟಿ 20 ಪಂದ್ಯವನ್ನು ಆಡಿದ್ದಾರೆ. ಮೊಂಗಿಯಾ ಏಕದಿನ ಪಂದ್ಯಗಳಲ್ಲಿ 1,230 ರನ್ ಮತ್ತು ಟಿ 20ಐನಲ್ಲಿ 38 ರನ್ ಗಳಿಸಿದ್ದಾರೆ. ಅವರು 2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಶ್ರೀಲಂಕಾದೊಂದಿಗೆ ಕಪ್​ ಹಂಚಿಕೊಂಡ ಭಾರತ ತಂಡದ ಭಾಗವಾಗಿದ್ದರು. ಭಾರತದ ಮಾಜಿ ಬ್ಯಾಟರ್​​ 2003 ರ ಏಕದಿನ ವಿಶ್ವಕಪ್​​ನಲ್ಲಿ ರನ್ನರ್ಸ್ ಅಪ್ ಸ್ಥಾನ ಪಡೆದ ತಂಡದ ಸದಸ್ಯರಾಗಿದ್ದರು.

47 ವರ್ಷದ ಮಾಜಿ ಕ್ರಿಕೆಟಿಗ ಮೇ 2007 ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊನೆಯ ಬಾರಿಗೆ ಭಾರತಕ್ಕಾಗಿ ಆಡಿದ್ದರು. ಮಾಜಿ ಎಡಗೈ ಬ್ಯಾಟ್ಸ್ಮನ್ ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ 50 ರ ಸರಾಸರಿಯಲ್ಲಿ 8,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ, ಗರಿಷ್ಠ ಸ್ಕೋರ್ 308. ಕಳೆದ ಋತುವಿನಲ್ಲಿ ಒಡಿಶಾ ತಂಡದ ಮುಖ್ಯ ಕೋಚ್ ಆಗಿದ್ದ ಅವರು ಕೋಚಿಂಗ್ ವಿಭಾಗದಲ್ಲೂ ಅನುಭವ ಹೊಂದಿದ್ದಾರೆ.

ಜೆಪಿ ಯಾದವ್​ ನೇಮಕ

ಸ್ವಪ್ನಿಲ್ ಅಸ್ನೋಡ್ಕರ್ ಅವರ ಸ್ಥಾನಕ್ಕೆ ಜೆಪಿ ಯಾದವ್ ಅವರು ಗೋವಾ ಅಂಡರ್-23 ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ರೈಲ್ವೇಸ್ ತಂಡ ತರಬೇತುದಾರರಾಗಿದ್ದ ಅವರು ರಾಜ್ಯದ ಉದಯೋನ್ಮುಖ ಪ್ರತಿಭೆಗಳಿಗೆ ಅಮೂಲ್ಯ ಮಾರ್ಗದರ್ಶನ ನೀಡುವ ನಿರೀಕ್ಷೆಯಿದೆ.

ರೋಹನ್ ಕದಮ್ ಮುಂದಿನ ಋತುವಿನಲ್ಲಿ ಗೋವಾ ಸೇರ್ಪಡೆ

ಗೋವಾ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಅರ್ಜುನ್ ತೆಂಡೂಲ್ಕರ್, ಕೆವಿ ಸಿದ್ಧಾರ್ಥ್ ಮತ್ತು ರೋಹನ್ ಕದಮ್ ಅವರನ್ನು ವೃತ್ತಿಪರ ಆಟಗಾರರಾಗಿ ಉಳಿಸಿಕೊಳ್ಳಲಿದೆ. ಅರ್ಜುನ್​ ತೆಂಡೂಲ್ಕರ್ ಮತ್ತು ಸಿದ್ಧಾರ್ಥ್ ಹಿಂದಿನ ಋತುವಿನಲ್ಲಿ ಗೋವಾ ತಂಡದ ಭಾಗವಾಗಿದ್ದರು. ಇದೀಗ ರೋಹನ್ ಕರ್ನಾಟಕದಿಂದ ಗೋವಾಕ್ಕೆ ಸ್ಥಳಾಂತರಗೊಂಡಿದ್ದಾರೆ. ರಾಹುಲ್ ತ್ರಿಪಾಠಿ ಮಹಾರಾಷ್ಟ್ರಕ್ಕೆ ಮರಳಿದ್ದಾರೆ.

ರೋಹನ್ ಕದಮ್ ಕಳೆದ ಋತುವಿನಲ್ಲಿ ಗೋವಾಕ್ಕೆ ಸೇರಲು ಕರ್ನಾಟಕದಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆದರು. ಆದಾಗ್ಯೂ, ರಾಹುಲ್ ತ್ರಿಪಾಠಿ ಸಹಿ ಹಾಕಿದ ಕಾರಣ ರೋಹನ್ ಕಳೆದ ಋತುವಿನಲ್ಲಿ ಅವಕಾಶ ತಪ್ಪಿಸಿಕೊಂಡರು. ಕಳೆದ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ 467 ರನ್ ಗಳಿಸಿದ್ದ ಕೆ.ವಿ.ಸಿದ್ಧಾರ್ಥ್ ಮುಂಬರುವ ಋತುವಿನಲ್ಲಿ ತಮ್ಮ ಬಲವಾದ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ತ್ರಿಪುರಾ ತಂಡವನ್ನು ಪ್ರತಿನಿಧಿಸಲಿರುವ ಮನ್ದೀಪ್ ಸಿಂಗ್

ಕಳೆದ ಋತುವಿನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ಮನ್ದೀಪ್ ಸಿಂಗ್ ಮುಂದಿನ ಋತುವಿನಲ್ಲಿ ತ್ರಿಪುರಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ) ಅಧ್ಯಕ್ಷ ಅಮರ್ಜೀತ್ ಸಿಂಗ್ ಮೆಹ್ತಾ ಅವರು ಮನ್ದೀಪ್ ಅವರ ಕ್ರಮವನ್ನು ಗಮನಾರ್ಹ ನಷ್ಟ ಎಂದು ಹೇಳಿದ್ದಾರೆ.

ಇದನ್ನೂ ಓದಿ: Hardik Pandya : ನನ್ನ ಅಪರಾಧದಲ್ಲಿ ನೀನು ಪಾಲುದಾರ; ಪುತ್ರನಿಗೆ ಈ ರೀತಿ ಬರ್ತ್​​ಡೇ ವಿಶ್ ಮಾಡಿದ ಪಾಂಡ್ಯ

“ನಾವು ಎನ್ಒಸಿಗಾಗಿ ಅವರ ಅರ್ಜಿಯನ್ನು ಸ್ವೀಕರಿಸಿದ್ದೇವೆ. ಇದು ಖಂಡಿತವಾಗಿಯೂ ಪಂಜಾಬ್ ಕ್ರಿಕೆಟ್​ಗೆ ದೊಡ್ಡ ನಷ್ಟ. ಆದರೆ ಒಬ್ಬ ಆಟಗಾರನು ಉತ್ತಮ ಭವಿಷ್ಯಕ್ಕಾಗಿ ಬೇರೆಡೆಗೆ ಹೋಗಲು ಬಯಸಿದರೆ, ನಾವು ಏಕೆ ನಿಲ್ಲಿಸಬೇಕು? ಪಿಸಿಎ ಅಧ್ಯಕ್ಷ ಅಮರ್ಜೀತ್ ಸಿಂಗ್ ಮೆಹ್ತಾ ಹೇಳಿದ್ದಾರೆ.

ಜೀವನ್ಜೋತ್ ಸಿಂಗ್ ಅವರು ಪಂಜಾಬ್​​ ಜತೆಗಿನ ದೀರ್ಘಾವಧಿಯ ನಂಟು ಕಡಿದುಕೊಂಡು ಉತ್ತರಾಖಂಡಕ್ಕೆ ತೆರಳಿದ್ದಾರೆ. ಮನ್ದೀಪ್ ಸಿಂಗ್ ಪಂಜಾಬ್ ತಂಡದ ದೀರ್ಘಕಾಲದ ನಾಯಕರಾಗಿದ್ದರು ಮತ್ತು ಅವರು 14 ವರ್ಷಗಳ ಗಮನಾರ್ಹ ವೃತ್ತಿಜೀವನವನ್ನು ಹೊಂದಿದ್ದಾರೆ. ಮನ್ದೀಪ್ 99 ಪ್ರಥಮ ದರ್ಜೆ ಮತ್ತು 131 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದಾರೆ.

ವೃದ್ಧಿಮಾನ್ ಸಹಾ ಮತ್ತು ಸುದೀಪ್ ಚಟರ್ಜಿ ಮತ್ತೆ ಬಂಗಾಳಕ್ಕೆ ಮರಳಿದ ನಂತರ ತ್ರಿಪುರಾ ಕ್ರಿಕೆಟ್ ಅಸೋಸಿಯೇಷನ್ ಜೀವನ್ಜೋತ್ ಸಿಂಗ್ ಮತ್ತು ಮನ್ದೀಪ್ ಸಿಂಗ್ ಅವರ ಜತೆ ಒಪ್ಪಂದ ಮಾಡಿಕೊಂಡಿದೆ.

Continue Reading

ಕ್ರೀಡೆ

Hardik Pandya : ನನ್ನ ಅಪರಾಧದಲ್ಲಿ ನೀನು ಪಾಲುದಾರ; ಪುತ್ರನಿಗೆ ಈ ರೀತಿ ಬರ್ತ್​​ಡೇ ವಿಶ್ ಮಾಡಿದ ಪಾಂಡ್ಯ

Hardik Pandya : ಸ್ಟಾರ್ ಆಲ್ರೌಂಡರ್ ತನ್ನ ಮಗನೊಂದಿಗೆ ಉತ್ತಮ ಬಂಧವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ಪುತ್ರನ ಜತೆಗಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಆದಾಗ್ಯೂ, ರೂಪದರ್ಶಿ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಜತೆ ವಿಚ್ಛೇದನ ಪಡೆದ ನಂತರ ಹಾರ್ದಿಕ್ ಈಗ ತಮ್ಮ ಮಗನೊಂದಿಗೆ ವಾಸಿಸುತ್ತಿಲ್ಲ.

VISTARANEWS.COM


on

Hardik Pandya
Koo

ಬೆಂಗಳೂರು: ಆಲ್​ರೌಂಡರ್​​ ಹಾರ್ದಿಕ್ ಪಾಂಡ್ಯ (Hardik Pandya) ತಮ್ಮ ಪುತ್ರ ಅಗಸ್ತ್ಯ ಪಾಂಡ್ಯನ 4 ನೇ ಹುಟ್ಟುಹಬ್ಬದಂದು ಹುಟ್ಟುಹಬ್ಬದ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಹಾರ್ದಿಕ್ ಮತ್ತು ನತಾಶಾ ಸ್ಟಾಂಕೋವಿಕ್ ಅವರ ಮಗ ಜುಲೈ 30, 2020 ರಂದು ಜನಿಸಿದ್ದಾನೆ. ಅಂದಿನಿಂದ, ಅವರ ಜೀವನದ ಬೆಳಕಾಗಿದ್ದಾನೆ. ಹಾರ್ದಿಕ್ ವಿಶೇಷ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅಗಸ್ತ್ಯ ತನ್ನ ತಂದೆ ಮಾಡುವುದನ್ನೇ ನಕಲು ಮಾಡುತ್ತಿರುವುದನ್ನು ಕಾಣಬಹುದು. ತಂದೆ-ಮಗ ಇಬ್ಬರೂ ಒಟ್ಟಿಗೆ ‘ಜೆಂಗಾ’ ಎಂಬ ಆಟವನ್ನು ಆಡುತ್ತಿದ್ದರು. ಅಗಸ್ತ್ಯನಿಂದ ಸುತ್ತುವರಿದಿದ್ದಾಗ ಹಾರ್ದಿಕ್ ನಗುತ್ತಿದ್ದರು. ಶೀರ್ಷಿಕೆಯಲ್ಲಿ, ಹಾರ್ದಿಕ್ ಅಗಸ್ತ್ಯ ನನ್ನು “ತನ್ನ ಅಪರಾಧದಲ್ಲಿ ಪಾಲುದಾರ” ಎಂದು ಕರೆದಿದ್ದಾರೆ.

“ನೀನು ಪ್ರತಿದಿನ ನನ್ನ ಮನದಲ್ಲಿ ಇರುತ್ತೀಯಾ. ನನ್ನ ಅಪರಾಧದಲ್ಲಿ ಪಾಲುದಾರನಾಗಿರುವ ನಿನಗೆ ಪ್ರೀತಿಯ ಆಗುಗೆ (ಅಗಸ್ತ್ಯ) ಜನ್ಮದಿನದ ಶುಭಾಶಯಗಳು. ಪದಗಳನ್ನು ಮೀರಿ ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಹಾರ್ದಿಕ್ ಪೋಸ್ಟ್​​ಗೆ ಶೀರ್ಷಿಕೆ ನೀಡಿದ್ದಾರೆ. ಸ್ಟಾರ್ ಆಲ್ರೌಂಡರ್ ತನ್ನ ಮಗನೊಂದಿಗೆ ಉತ್ತಮ ಬಂಧವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ಪುತ್ರನ ಜತೆಗಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಆದಾಗ್ಯೂ, ರೂಪದರ್ಶಿ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಜತೆ ವಿಚ್ಛೇದನ ಪಡೆದ ನಂತರ ಹಾರ್ದಿಕ್ ಈಗ ತಮ್ಮ ಮಗನೊಂದಿಗೆ ವಾಸಿಸುತ್ತಿಲ್ಲ.

ಹಾರ್ದಿಕ್-ನತಾಶಾ ವಿಚ್ಛೇದನ

ಹಾರ್ದಿಕ್ ಪಾಂಡ್ಯ ನಾಲ್ಕು ವರ್ಷಗಳ ಸಂಬಂಧದ ನಂತರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಬೇರ್ಪಡುವುದಾಗಿ ಘೋಷಿಸಿದ್ದರು. ಹಲವು ತಿಂಗಳುಗಳ ಊಹಾಪೋಹಗಳ ನಂತರ ಹಾರ್ದಿಕ್ ಜುಲೈ 18 ರ ಗುರುವಾರ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿದರು. ನತಾಶಾ ಸ್ಟಾಂಕೋವಿಕ್ ದೇಶದಿಂದ ಹೊರಹೋಗಲು ನಿರ್ಧರಿಸಿದ್ದು, ಮಗ ಅಗಸ್ತ್ಯನೊಂದಿಗೆ ಸೆರ್ಬಿಯಾದಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ. ಅವರು ಇತ್ತೀಚೆಗೆ ಮಗ ಅಗಸ್ತ್ಯ ಅವರೊಂದಿಗೆ ತಮ್ಮ ದಿನದ ಚಿತ್ರಗಳನ್ನು ಹಂಚಿಕೊಂಡಿದ್ದರು. ಹಾರ್ದಿಕ್ ಆ ಪೋಸ್ಟ್​ಗೆ ಕಾಮೆಂಟ್​​ ನೀಡಿದ್ದಾರೆ. ಅವರು ಪೋಸ್ಟ್​ಗೆ ಕೆಂಪು ಹೃದಯ ಮತ್ತು ದುಷ್ಟ ಕಣ್ಣಿನ ಎಮೋಜಿಗಳನ್ನು ಹಾಕಿದ್ದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಈಜುಪಟುವಿಗೆ ಕೊರೊನಾ ಸೋಂಕು!

ಲಂಕಾದಲ್ಲಿದ್ದಾರೆ ಪಾಂಡ್ಯ

ಹಾರ್ದಿಕ್ ಪ್ರಸ್ತುತ ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ 20 ಐ ಸರಣಿಗಾಗಿ ಶ್ರೀಲಂಕಾದಲ್ಲಿದ್ದಾರೆ. ರೋಹಿತ್ ಶರ್ಮಾ ಭಾರತ ತಂಡದ ಚುಟುಕು ಮಾದರಿಗೆ ನಿವೃತ್ತಿ ಘೋಷಿಸಿದ ನಂತರ ಅವರ ಮತ್ತು ಸೂರ್ಯಕುಮಾರ್ ನಡುವೆ ಟಿ 20 ಐ ನಾಯಕತ್ವದ ರೇಸ್ ಇತ್ತು. ಆದಾಗ್ಯೂ, ಸೂರ್ಯಕುಮಾರ್ ಹಾರ್ದಿಕ್ ಅವರನ್ನು ಹಿಂದಿಕ್ಕಿ ಟಿ 20 ಐ ನಾಯಕರಾದರು. ಟಿ 20 ವಿಶ್ವಕಪ್ ವಿಜೇತ ತಂಡದ ಉಪನಾಯಕರಾಗಿದ್ದ ಹಾರ್ದಿಕ್ ಅವರ ಸ್ಥಾನಕ್ಕೆ ಶುಭ್ಮನ್ ಗಿಲ್ ಅವರನ್ನು ನೇಮಿಸಲಾಗಿದೆ. ಹಾರ್ದಿಕ್ ಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಕೇವಲ ಎರಡು ವಿಕೆಟ್ ಜತೆಗೆ ಒಂಬತ್ತು ಎಸೆತಗಳಲ್ಲಿ 22 ರನ್ ಗಳಿಸುವ ಮೂಲಕ ತಮ್ಮ ಆಲ್ರೌಂಡ್ ಪರಾಕ್ರಮವನ್ನು ಪ್ರದರ್ಶಿಸಿದರು. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಹಾರ್ದಿಕ್ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿಲ್ಲ.

Continue Reading

ಕ್ರೀಡೆ

Paris Olympics 2024: ಭಾರತ-ಅರ್ಜೆಂಟೀನಾ ಹಾಕಿ ಪಂದ್ಯ ವೀಕ್ಷಿಸಿದ ರಾಹುಲ್​ ದ್ರಾವಿಡ್​

Paris Olympics 2024: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿರುವ ಇಂಡಿಯಾ ಹೌಸ್‌ನಲ್ಲಿ ಸೋಮವಾರ ‘ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌; ಹೊಸ ಯುಗದ ಉದಯ’ ವಿಷಯದ ಕುರಿತು ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಬಳಿಕ ದ್ರಾವಿಡ್​ ಹಾಕಿ ಪಂದ್ಯವನ್ನು ವೀಕ್ಷಿಸಿದ್ದಾರೆ.

VISTARANEWS.COM


on

Paris Olympics 2024
Koo

ಪ್ಯಾರಿಸ್​: ಭಾರತ ಕ್ರಿಕೆಟ್​ ತಂಡದ ಮಾಜಿ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್(Rahul Dravid)​ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics 2024) ಸೋಮವಾರ ನಡೆದಿದ್ದ ಭಾರತ ಮತ್ತು ಅರ್ಜೆಂಟೀನಾ ವಿರುದ್ಧ ಹಾಕಿ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ಪೋಟೊ ಇದೀಗ ವೈರಲ್​ ಆಗಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿರುವ ಇಂಡಿಯಾ ಹೌಸ್‌ನಲ್ಲಿ ಸೋಮವಾರ ‘ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌; ಹೊಸ ಯುಗದ ಉದಯ’ ವಿಷಯದ ಕುರಿತು ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಬಳಿಕ ದ್ರಾವಿಡ್​ ಹಾಕಿ ಪಂದ್ಯವನ್ನು ವೀಕ್ಷಿಸಿದ್ದಾರೆ. ಇದೇ ವೇಳೆ ಮುಂದಿನ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಸೇರ್ಪಡೆಯಾಗದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು.

“ಮುಂದಿನ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಅದ್ಭುತವಾಗಿ ನಡೆಯಬೇಕು. ಭಾರತದ ಪುರುಷ ಮತ್ತು ಮಹಿಳೆಯರ ತಂಡಗಳೆರಡು ಚಿನ್ನ ಗೆಲ್ಲಬೇಕೆಂಬುದು ನನ್ನ ಕನಸು. ನಾನು ಯಾವುದಾದರೊಂದು ಸ್ಥಾನದ ಮೂಲಕ ಒಲಿಂಪಿಕ್ಸ್‌ನಲ್ಲಿ ಹಾಜರಿರುತ್ತೇನೆ. ಕೊನೆಗೆ ಮಾಧ್ಯಮ ಪ್ರತಿನಿಧಿಯಾಗಿಯಾದರೂ ಬರುತ್ತೇನೆ’ ಎಂದು ಹೇಳಿ ದ್ರಾವಿಡ್ ನಕ್ಕರು. ಲಾಸ್ ಏಂಜಲೀಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕೂಡ ಸೇರ್ಪಡೆಗೊಂಡಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ತಾವರಣವನ್ನು ಕಲ್ಪಿಸಲು ಇದರ ಉದ್ದೇಶದಿಂದ ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್​”(India House)​ ಎಂಬ ವಿಶೇಷ ವ್ಯವಸ್ಥೆಯನ್ನು ಮಾಡಿದೆ. ಉದ್ಘಾಟನ ಸಮಾರಂಭದ ಬಳಿಕ ಮಾತನಾಡಿದ್ದ ಈ ನೀತಾ ಅಂಬಾನಿ, ಭಾರತ ಒಲಿಂಪಿಕ್ಸ್‌ ಆತಿಥ್ಯ ವಹಿಸುವ ದಿನ ದೂರವಿಲ್ಲ ಎಂದರು.

ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಸೇರ್ಪಡೆಗೊಳ್ಳುವಲ್ಲಿ ನೀತಾ ಅಂಬಾನಿ ಅವರ ಪಾತ್ರವೂ ಪ್ರಮುಖವಾಗಿತ್ತು. ಕಳೆದ ವರ್ಷ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನ(International Olympic Committee Session) ಮುಂಬೈಯಲ್ಲಿ ನಡೆದ ವೇಳೆಯೂ ನೀತಾ ಅಂಬಾನಿ ಈ ಸಭೆಯ ವಕಾಲತ್ತು ವಹಿಸಿದ್ದರು.

ಇದನ್ನೂ ಓದಿ Kerala Cyclist Reaches Paris: ನೀರಜ್​ ಚೋಪ್ರಾಗೆ ಬೆಂಬಲ ಸೂಚಿಸಲು ಬರೋಬ್ಬರಿ 22 ಸಾವಿರ ಕಿ.ಮೀ ಸೈಕಲ್​ ತುಳಿದು ಪ್ಯಾರಿಸ್​ ತಲುಪಿದ ಕೇರಳದ ಅಭಿಮಾನಿ

ಐಪಿಎಲ್​ ಕೋಚಿಂಗ್​ನತ್ತ ಮುಖ ಮಾಡಿದ ದ್ರಾವಿಡ್​


ಟಿ20 ವಿಶ್ವಕಪ್​ ಬಳಿಕ ಭಾರತ ತಂಡದ ಕೋಚಿಂಗ್​ ಹುದ್ದೆಯಿಂದ ನಿವೃತ್ತಿ ಹೊಂದಿರುವ ದ್ರಾವಿಡ್​ ಮುಂದಿನ ಐಪಿಎಲ್​ನಲ್ಲಿ ಈ ಹಿಂದೆ ಕೋಚಿಂಗ್​ ನಡೆಸಿದ್ದ ರಾಜಸ್ಥಾನ್ ರಾಯಲ್ಸ್​(Rajasthan Royals) ತಂಡದ ಪರವೇ ಮತ್ತೆ ಕೋಚಿಂಗ್​ ನಡೆಸಲಿದ್ದಾರೆ ಎನ್ನಲಾಗಿದೆ.

ರಾಜಸ್ಥಾನ್ ರಾಯಲ್ಸ್ ಪರ ನಾಯಕರಾಗಿ ದ್ರಾವಿಡ್ ಒಮ್ಮೆ ತಂಡವನ್ನು ಪ್ಲೇ ಆಪ್​ಗೆ ಕೊಂಡೊಯ್ದಿದ್ದರು. ಚಾಂಪಿಯನ್ಸ್ ಲೀಗ್​ನಲ್ಲಿ ತಂಡ ಫೈನಲ್​ಗೇರಿತ್ತು. ರಾಜಸ್ಥಾನ್ ತಂಡದ ಪರ 40 ಪಂದ್ಯಗಳಲ್ಲಿ ನಾಯಕರಾಗಿದ್ದ ದ್ರಾವಿಡ್ 23 ಗೆಲುವು ಕಂಡಿದ್ದಾರೆ. ಎರಡು ಸೀಸನ್​ಗಳಲ್ಲಿ ರಾಜಸ್ಥಾನ್ ತಂಡದ ಕೋಚ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಅಂಡರ್ 19 ತಂಡದ ಕೋಚ್ ಆದ ಕಾರಣ ಐಪಿಎಲ್​ ಕೋಚಿಂಗ್​ನಿಂದ ದೂರ ಉಳಿದಿದ್ದರು. ಇದಾದ ಬಳಿಕ ಟೀಮ್​ ಇಂಡಿಯಾ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಎಲ್ಲ ಹುದ್ದೆಗಳಿಂದ ನಿವೃತ್ತಿ ಹೊಂದಿರುವ ಅವರು ಐಪಿಎಲ್​ ಕೋಚಿಂಗ್​ ಕಡೆ ಗಮನಹರಿಸಿದ್ದಾರೆ.

Continue Reading
Advertisement
Custard Apple Benefits
Latest28 mins ago

Custard Apple Benefits: ಕ್ಯಾನ್ಸರ್‌ ಸೇರಿದಂತೆ ಹಲವು ರೋಗಗಳನ್ನು ತಡೆಯುವ ಶಕ್ತಿ ಸೀತಾಫಲಕ್ಕಿದೆ!

namma Metro
ಬೆಂಗಳೂರು35 mins ago

Namma Metro : ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ದೋಷ; ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವ್ಯತ್ಯಯ

Martin Movie
ಕರ್ನಾಟಕ44 mins ago

Martin Movie: ಆ.4ಕ್ಕೆ ಮಾರ್ಟಿನ್ ಚಿತ್ರದ ಟ್ರೈಲರ್‌ 1 ರಿಲೀಸ್‌; ವಿಎಫ್‌ಎಕ್ಸ್‌ ವಂಚನೆ ಬಗ್ಗೆ ನಿರ್ಮಾಪಕ ಹೇಳಿದ್ದೇನು?

Neeraj Chopra
ಪ್ರಮುಖ ಸುದ್ದಿ46 mins ago

Neeraj Chopra : ನಮಸ್ಕಾರ ಪ್ಯಾರಿಸ್​​; ಒಲಿಂಪಿಕ್ಸ್​ ಕ್ರೀಡಾಗ್ರಾಮ ತಲುಪಿದ ಚಿನ್ನದ ಹುಡುಗ ನೀರಜ್ ಚೋಪ್ರಾ

Nirmala Sitharaman
ದೇಶ56 mins ago

Nirmala Sitharaman: ಕಾಂಗ್ರೆಸ್‌ ಅವಧಿ ಬಜೆಟ್‌ನಲ್ಲಿ 26 ರಾಜ್ಯಗಳ ಹೆಸರೇ ಇರಲಿಲ್ಲ; ನಿರ್ಮಲಾ ಸೀತಾರಾಮನ್‌ ಟಾಂಗ್

Paris Olympics 2024
ಪ್ರಮುಖ ಸುದ್ದಿ1 hour ago

Paris Olympics 2024 : 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್​ ಫೆನ್ಸಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಪಂದ್ಯ ಗೆದ್ದ ಈಜಿಫ್ಟ್​​ನ ನಾದಾ ಹಫೀಜ್​

karnataka Rain
ಮಳೆ1 hour ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Actor Shahrukh Khan
ಸಿನಿಮಾ2 hours ago

Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

Girl
ದೇಶ2 hours ago

ಜಾಬ್‌ ಸಿಕ್ಕಿದೆ ಎಂದು ಗೆಳೆಯರಿಗೆ ಪಾರ್ಟಿ ಕೊಟ್ಟ ಯುವತಿ; ಕುಡಿದ ಸ್ನೇಹಿತರು ಆಕೆಯನ್ನೇ ರೇಪ್ ಮಾಡಿದರು!

Sarabjot Singh
ಪ್ರಮುಖ ಸುದ್ದಿ2 hours ago

Sarabjot Singh : ಭಾರತಕ್ಕೆ 2ನೇ ಒಲಿಂಪಿಕ್ಸ್ ಪದಕ ತಂದುಕೊಟ್ಟ ಮನು ಭಾಕರ್ ಶೂಟಿಂಗ್ ಪಾಲುದಾರ ಸರಬ್ಜೋತ್ ಸಿಂಗ್​ ಹಿನ್ನೆಲೆ ಇಲ್ಲಿದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 hour ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 day ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 day ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ1 day ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌