Team India's Victory Parade: ಟೀಮ್ ಇಂಡಿಯಾದ ವಿಕ್ಟರಿ ಪೆರೇಡ್​ನಲ್ಲಿ ಹಲವು ಅಭಿಮಾನಿಗಳಿಗೆ ಗಾಯ; ಆಸ್ಪತ್ರೆಗೆ ದಾಖಲು - Vistara News

ಕ್ರಿಕೆಟ್

Team India’s Victory Parade: ಟೀಮ್ ಇಂಡಿಯಾದ ವಿಕ್ಟರಿ ಪೆರೇಡ್​ನಲ್ಲಿ ಹಲವು ಅಭಿಮಾನಿಗಳಿಗೆ ಗಾಯ; ಆಸ್ಪತ್ರೆಗೆ ದಾಖಲು

Team India’s Victory Parade:ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ಹಲವರ ಚಪ್ಪಲಿಗಳು ಕಿತ್ತು ಹೋಗಿದೆ. ಶುಕ್ರವಾರ ಬೆಳಗ್ಗೆ ಮರೀನ್ ಡ್ರೈವ್‌ ಪ್ರೇಶದಲ್ಲಿ ಚಪ್ಪಲಿಗಳ ರಾಶಿಯೇ ಕಂಡು ಬಂದಿದೆ. ಸಾವಿರಾರು ಚಪ್ಪಳಿಗಳು ಬೀದಿಯಲ್ಲೇ ಅನಾಥವಾಗಿ ಬಿದ್ದಿದೆ.

VISTARANEWS.COM


on

Team India's Victory Parade
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಟಿ20 ವಿಶ್ವಕಪ್(T20 World Cup) ಗೆದ್ದ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ನಿನ್ನೆ(ಗುರುವಾರ) ಮುಂಬೈಯಲ್ಲಿ ಭರ್ಜರಿಯಾಗಿ ಅಭಿನಂದಿಸಲಾಗಿತ್ತು. ತಂಡದ ಈ ವಿಜಯೋತ್ಸವದ(Team India’s Victory Parade) ವೇಳೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಪೈಕಿ ಕೆಲವರಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ಇದೀಗ ವರದಿಯಾಗಿವೆ. ಸದ್ಯದ ಮಾಹಿತಿ ಪ್ರಕಾರ 11 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸಾಗರೋಪಾದಿಯಲ್ಲಿ ಸೇರಿದ್ದ ಅಭಿಮಾನಿಗಳ ಗುಂಪಿನಲ್ಲಿ ಮಹಿಳೆಯೊಬ್ಬರು ಉಸಿರಾಟ ಸಮಸ್ಯೆಗೆ ಸಿಲುಕಿ ಬಳಿಕ ಪೊಲೀಸ್​ ಅಧಿಕಾರಿಯೊಬ್ಬರು ಮಹಿಳೆಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ ದೃಶ್ಯ ಕೂಡ ವೈರಲ್​ ಆಗಿದೆ. ಒಟ್ಟು 9 ಮಂದಿ ಉಸಿರಾಟದ ಸಮಸ್ಯೆಗೆ ಸಿಲುಕಿ ಇಲ್ಲಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ.

17 ವರ್ಷಗಳ ಬಳಿಕ 2ನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡದ ವಿಜಯೋತ್ಸವವನ್ನು ಗುರುವಾರ ಮುಂಬೈನಲ್ಲಿ ಏರ್ಪಡಿಸಲಾಗಿತ್ತು. ದಕ್ಷಿಣ ಮುಂಬೈನ ಮರೀನ್ ಡ್ರೈವ್‌ ಪ್ರದೇಶ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ಹೋಗಿತ್ತು.

ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ಹಲವರ ಚಪ್ಪಲಿಗಳು ಕಿತ್ತು ಹೋಗಿದೆ. ಶುಕ್ರವಾರ ಬೆಳಗ್ಗೆ ಮರೀನ್ ಡ್ರೈವ್‌ ಪ್ರೇಶದಲ್ಲಿ ಚಪ್ಪಲಿಗಳ ರಾಶಿಯೇ ಕಂಡು ಬಂದಿದೆ. ಸಾವಿರಾರು ಚಪ್ಪಳಿಗಳು ಬೀದಿಯಲ್ಲೇ ಅನಾಥವಾಗಿ ಬಿದ್ದಿದೆ.

ಬಾರ್ಬಡೋಸ್‌ನಿಂದ ಬುಧವಾರ ಬೆಳಿಗ್ಗೆ ಪ್ರಯಾಣ ಆರಂಭಿಸಿದ್ದ ಭಾರತ ತಂಡವು ಗುರುವಾರ ಬೆಳಗ್ಗೆ ನವದೆಹಲಿಗೆ ಬಂದಿಳಿದಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯ ಸ್ವೀಕರಿಸಿದ ನಂತರ ಮಧ್ಯಾಹ್ನ 3.42ಕ್ಕೆ ಮುಂಬೈಗೆ ಪ್ರಯಾಣ ಬೆಳೆಸಿತ್ತು. ಸಂಜೆ ಐದು ಗಂಟೆಯ ನಂತರ ವಿಮಾನವು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಆಟಗಾರರು ಬಂದೊಡನೆಯೇ ಕ್ರಿಕೆಟ್‌ ಪ್ರೇಮಿಗಳ ಜಯಘೋಷ ಮೊಳಗಿತು. ಅಭಿಮಾನಿಗಳ ಅಬ್ಬರಕ್ಕೆ ಅರಬ್ಬಿ ಸಮುದ್ರ ಕೂಡ ಒಂದು ಕ್ಷಣ ಸ್ಥಬ್ಧವಾಗಿತ್ತು. ವಿಶೇಷ ವಿನ್ಯಾಸದ ತೆರೆದ ವಾಹನದಲ್ಲಿ ವಿಶ್ವಕಪ್‌ ಟ್ರೋಫಿ ಹಿಡಿದು ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಬೂಮ್ರಾ, ಪಾಂಡ್ಯ, ಕೋಚ್‌ ರಾಹುಲ್‌ ದ್ರಾವಿಡ್‌ ಸೇರಿದಂತೆ ಎಲ್ಲ ಆಟಗಾರರು ವಿಜಯಯಾತ್ರೆಯ ಮೆರವಣಿಗೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಸಾವಿರಾರು ಅಭಿಮಾನಿಗಳು ಘೋಷಣೆ ಕೂಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಇದನ್ನೂ ಓದಿ Team India: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ತೋರಿಸಿಕೊಟ್ಟ ಟೀಮ್ ಇಂಡಿಯಾ​ ಕ್ರಿಕೆಟಿಗರು

ಜೂನ್ 29ರಂದು ಬಾರ್ಬಾಡೋಸ್‌ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಜಯಿಸಿತ್ತು. ಆದರೆ ಕೆರೀಬಿಯನ್ ದ್ವೀಪದಲ್ಲಿ ಚಂಡಮಾರುತ ಬೀಸಿದ್ದ ಕಾರಣ ವಿಮಾನಯಾನ ಸೌಲಭ್ಯ ರದ್ದಾಗಿತ್ತು. ಆದ್ದರಿಂದ ಬುಧವಾರದವರೆಗೂ ತಂಡವು ಬಾರ್ಬಾಡೋಸ್‌ನಲ್ಲಿಯೇ ಉಳಿದಿತ್ತು.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಚಾಂಪಿಯನ್‌ ಭಾರತ ತಂಡಕ್ಕೆ ಘೋಷಿಸಿದ್ದ 125 ಕೋಟಿ ರೂಪಾಯಿ ಮೊತ್ತದ ಚೆಕ್‌ ಅನ್ನು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಕಾರ್ಯದರ್ಶಿ ಜಯ್‌ ಶಾ ಹಸ್ತಾಂತರಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ

Team India : ಬಿಸಿಸಿಐ ಹೊರತುಪಡಿಸಿ, ರಾಜ್ಯ ಸರ್ಕಾರಗಳು ಸಹ ಆಯಾ ಆಟಗಾರರಿಗೆ ಬಹುಮಾನದ ಮೊತ್ತ ಘೋಷಿಸಿವೆ. ಮಹಾರಾಷ್ಟ್ರ ಸರ್ಕಾರವು ರೋಹಿತ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ 11 ಕೋಟಿ ರೂ.ಗಳನ್ನು ನೀಡಿತ್ತು.

VISTARANEWS.COM


on

Team India
Koo

ಬೆಂಗಳೂರು: ಅಮೆರಿಕದ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ನಡೆದ 2024 ರ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡ (Team India ) ಟ್ರೋಫಿ ಗೆದ್ದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 125 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಜೂನ್ 4 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಬಹುಮಾನದ ಮೊತ್ತವನ್ನು ಹಸ್ತಾಂತರಿಸಲಾಗಿತ್ತು. ಅದರಲ್ಲಿ ಯಾರಿಗೆ ಎಷ್ಟು ಎಂಬ ಕುತೂಹಲ ಮೂಡಿತ್ತು. ಆ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ವರದಿಗಳ ಪ್ರಕಾರ, ತಂಡದ ಎಲ್ಲಾ 15 ಸದಸ್ಯರು ತಲಾ 5 ಕೋಟಿ ರೂ ಪಡೆದಿದ್ದಾರೆ. ಮುಖ್ಯ ಕೋಚ್ ದ್ರಾವಿಡ್ ಕೂಡ ಇದೇ ಮೊತ್ತವನ್ನು ಪಡೆದಿದ್ದಾರೆ. ಉಳಿದ ಕೋಚಿಂಗ್ ಗ್ರೂಪ್ ತಲಾ 2.5 ರೂಪಾಯಿ ಪಡೆದುಕೊಂಡಿದ್ದಾರೆ. ವಿಡಿಯೋ ನಿರ್ಮಾಣ ತಂಡ ಸೇರಿದಂತೆ ಬ್ಯಾಕ್ರೂಮ್ ಸಿಬ್ಬಂದಿಗೆ ತಲಾ 2 ಕೋಟಿ ರೂ., ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ತಲಾ 1 ಕೋಟಿ ರೂಪಾಯಿ, ಮೀಸಲು ಆಟಗಾರರಾದ ರಿಂಕು ಸಿಂಗ್, ಖಲೀಲ್ ಅಹ್ಮದ್, ಶುಭ್ಮನ್ ಗಿಲ್ ಮತ್ತು ಅವೇಶ್ ಖಾನ್ ಅವರಿಗೆ ತಲಾ 1 ಕೋಟಿ ರೂಪಾಯಿ ದೊರಕಿದೆ.

ಬಿಸಿಸಿಐ ಹೊರತುಪಡಿಸಿ, ರಾಜ್ಯ ಸರ್ಕಾರಗಳು ಸಹ ಆಯಾ ಆಟಗಾರರಿಗೆ ಬಹುಮಾನದ ಮೊತ್ತ ಘೋಷಿಸಿವೆ. ಮಹಾರಾಷ್ಟ್ರ ಸರ್ಕಾರವು ರೋಹಿತ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ 11 ಕೋಟಿ ರೂ.ಗಳನ್ನು ನೀಡಿತ್ತು.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೀಮ್ ಇಂಡಿಯಾಕ್ಕೆ 2.45 ಮಿಲಿಯನ್ ಡಾಲರ್ ಅಂದರೆ ಸುಮಾರು 20.37 ಕೋಟಿ ರೂಪಾಯಿ ಬಹುಮಾನ ಕೊಟ್ಟಿತ್ತು. ಬಿಸಿಸಿಐನ ಆರ್ಥಿಕ ಸ್ಥಿರತೆಯು ಎಲ್ಲಾ ಆಟಗಾರರಿಗೆ ಟ್ರೋಫಿ ಜತೆ ಸಿಕ್ಕ ಬಹುಮಾನ ಮೊತ್ತಕ್ಕಿಂತ ಸುಮಾರು ಆರು ಪಟ್ಟು ಹೆಚ್ಚು ನಗದು ಸಿಗಲು ಸಹಾಯ ಮಾಡಿತು. ಇದು ಇವರೆಗಿನ ಗರಿಷ್ಠ ಗಳಿಕೆಯಾಗಿದೆ. 1983 ರಲ್ಲಿ ಏಕದಿನ ವಿಶ್ವಕಪ್ ಗೆಲುವಿನ ನಂತರ, ಆಡಳಿತ ಮಂಡಳಿಯು ಪ್ರತಿ ಆಟಗಾರನಿಗೆ 25,000 ರೂ.ಗಳ ಬಹುಮಾನವನ್ನು ಘೋಷಿಸಿತು. ಇದು ಆಧುನಿಕ ಕಾಲದಲ್ಲಿ ಆಟಗಾರರು ಪಡೆದ ಮೊತ್ತಕ್ಕೆ ಹೋಲಿಸಿದರೆ ಕನಿಷ್ಠ ಪ್ರಮಾಣದ ಮೊತ್ತವಾಗಿದೆ.

ಇದನ್ನೂ ಓದಿ: Gautam Gambhir : ಗಂಭೀರ್ ಕೆಕೆಆರ್ ತೊರೆಯುವುದು ನಿಶ್ಚಿತ​; ಈಡನ್​ ಗಾರ್ಡನ್ಸ್​​ನಲ್ಲಿ ವಿದಾಯದ ಶೂಟಿಂಗ್

ಐಪಿಎಲ್​ನ ಶಕ್ತಿ ಮತ್ತು ಹಣಕಾಸಿನ ವಿಷಯದಲ್ಲಿ ಭಾರತೀಯ ಕ್ರಿಕೆಟ್ ದೊಡ್ಡ ಗಳಿಕೆಯಲ್ಲಿದೆ. ಆದಾಗ್ಯೂ ಆಟಗಾರರು ಐಪಿಎಲ್ ಕಡೆಗೆ ಹೆಚ್ಚಿನ ಗಮನ ಸೆಳೆಯುತ್ತಿದ್ದಾರೆ ಎಂಬ ಆರೋಪವಿದೆ. ಇದನ್ನು ನಿವಾರಿಸಲೂ ಬಿಸಿಸಿಐ 125 ಕೋಟಿ ರೂಪಾಯಿ ಘೋಷಿಸಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆದ್ಯತೆ ನೀಡಿದವರಿಗೂ ದೊಡ್ಡ ಮೊತ್ತ ಸಿಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಬಿಸಿಸಿಐ ಎಲ್ಲಾ ಆಟಗಾರರಿಗೆ ಕಳುಹಿಸಿದೆ.

“ಐಪಿಎಲ್ ಯುಗದಲ್ಲಿ, ಆಟಗಾರರಿಗೆ ಅವರ ಫ್ರಾಂಚೈಸಿಗಳು ಸಾಕಷ್ಟು ಸಂಭಾವನೆ ನೀಡುತ್ತವೆ. ಟಿ 20 ವಿಶ್ವಕಪ್ ಗೆದ್ದ ತಂಡಕ್ಕೆ 125 ಕೋಟಿ ರೂ.ಗಳು ಆಟಗಾರರಿಗೆ ಸರಳ ಸಂದೇಶವಾಗಿದೆ. ಭಾರತಕ್ಕಾಗಿ ಟ್ರೋಫಿಗಳನ್ನು ಗೆಲ್ಲಿರಿ ಮತ್ತು ನೀವು ಶ್ರೀಮಂತರಾಗುತ್ತೀರಿ” ಎಂಬುದು ಬಿಸಿಸಿಐ ಸಂದೇಶ ಎಂಬುದಾಗಿ ಅಧಿಕಾರಿ ಹೇಳಿದ್ದಾರೆ.

ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಮತ್ತು ಚಾಂಪಿಯನ್ಸ್ ಟ್ರೋಫಿಗೆ ರೋಹಿತ್ ನಾಯಕನಾಗಿ ಮುಂದುವರಿಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Virat Kohli : ಇನ್​ಸ್ಟಾಗ್ರಾಮ್ ಪೋಸ್ಟ್​ ಮೂಲಕ ಬಿಟಿಎಸ್​ ಬ್ಯಾಂಡ್​ನ ದಾಖಲೆ ಮುರಿದ ವಿರಾಟ್​ ಕೊಹ್ಲಿ

Virat Kohli: “ಇದಕ್ಕಿಂತ ಉತ್ತಮ ದಿನವನ್ನು ಊಹಿಸಲು ಸಾಧ್ಯವಿಲ್ಲ. ದೇವರು ದೊಡ್ಡವನು ಮತ್ತು ನಾನು ಋಣಿಯಾಗಿ ತಲೆ ಬಾಗುತ್ತೇನೆ. ನಾವು ಅಂತಿಮವಾಗಿ ಮಾಡಿ ತೋರಿಸಿದ್ದೇವೆ. ಜೈ ಹಿಂದ್ ಎಂದು ಕೊಹ್ಲಿ ಬರೆದುಕೊಂಡಿದ್ದರು. ಭಾರತವು ಟಿ 20 ವಿಶ್ವಕಪ್ 2024 ಗೆದ್ದ ಮರುದಿನ ಜೂನ್ 30 ರಂದು ಪೋಸ್ಟ್ ಮಾಡಿದ ಕೊಹ್ಲಿಯ ಭಾವನಾತ್ಮಕ ಸಂದೇಶವು ವಿಶ್ವದಾದ್ಯಂತದ ಅಭಿಮಾನಿಗಳ ಮನ ಸೆಳೆದಿದೆ.

VISTARANEWS.COM


on

Virat kohli
Koo

ನವದೆಹಲಿ: ಭಾರತದ ತಂಡದ ಟಿ20 ವಿಶ್ವಕಪ್ 2024 ರ ವಿಜಯವನ್ನು ಆಚರಿಸುವುದರ ಬಗ್ಗೆ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli ) ಹಾಕಿರುವ ಇನ್​​ಸ್ಟಾಗ್ರಾಮ್​ (instagram) ಪೋಸ್ಟ್​​ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಅವರ ಆ ಪೋಸ್ಟ್​​ ಇನ್ಸ್ಟಾಗ್ರಾಮ್ ಪೋಸ್ಟ್ ದಾಖಲೆಗಳನ್ನು ಮುರಿದಿದೆ, ಏಷ್ಯಾದಲ್ಲಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಎಂಬ ದಾಖಲೆ ಸೃಷ್ಟಿಸಿದೆ. ಜನಪ್ರಿಯ ಮ್ಯೂಸಿಕ್ ಬ್ಯಾಂಟ್​​ ಬಿಟಿಎಸ್​​ನ ಸದಸ್ಯ ವಿ (ಕಿಮ್ ಟೇಹ್ಯುಂಗ್) ಅವರ ಹಿಂದಿನ ದಾಖಲೆಯನ್ನೂ ಮೀರಿಸಿದೆ.

2.1 ಕೋಟಿಗೂ ಹೆಚ್ಚು ಲೈಕ್​ಗಳನ್ನು ಗಳಿಸಿದ ಕೊಹ್ಲಿಯ ಪೋಸ್ಟ್ ಈ ಹಿಂದಿನ ಎಲ್ಲ ದಾಖಲೆಗಳನ್ನು ಉಡಾಯಿಸಿದೆ. ಟೀಮ್ ಇಂಡಿಯಾ ತನ್ನ ವಿಜಯೋತ್ಸವವನ್ನು ಆಚರಿಸುವ ಕೊಲಾಜ್ ಮತ್ತು ಹೃತ್ಪೂರ್ವಕ ಶೀರ್ಷಿಕೆಯನ್ನು ಈ ಪೋಸ್ಟ್​ಗೆ ನೀಡಲಾಗಿದೆ. “ಇದಕ್ಕಿಂತ ಉತ್ತಮ ದಿನವನ್ನು ಊಹಿಸಲು ಸಾಧ್ಯವಿಲ್ಲ. ದೇವರು ದೊಡ್ಡವನು ಮತ್ತು ನಾನು ಋಣಿಯಾಗಿ ತಲೆ ಬಾಗುತ್ತೇನೆ. ನಾವು ಅಂತಿಮವಾಗಿ ಮಾಡಿ ತೋರಿಸಿದ್ದೇವೆ. ಜೈ ಹಿಂದ್ ಎಂದು ಕೊಹ್ಲಿ ಬರೆದುಕೊಂಡಿದ್ದರು. ಭಾರತವು ಟಿ 20 ವಿಶ್ವಕಪ್ 2024 ಗೆದ್ದ ಮರುದಿನ ಜೂನ್ 30 ರಂದು ಪೋಸ್ಟ್ ಮಾಡಿದ ಕೊಹ್ಲಿಯ ಭಾವನಾತ್ಮಕ ಸಂದೇಶವು ವಿಶ್ವದಾದ್ಯಂತದ ಅಭಿಮಾನಿಗಳ ಮನ ಸೆಳೆದಿದೆ.

ಈ ಗಮನಾರ್ಹ ಸಾಧನೆಯು ವಿರಾಟ್ ಕೊಹ್ಲಿಯನ್ನು ಎಲ್ಲಾ ವಿಭಾಗಗಳಲ್ಲಿ ಬಿಟಿಎಸ್​​ನ 2 ಕೋಟಿ ಲೈಕ್​ಗಳ ದಾಖಲೆಯನ್ನು ಮೀರಿಸಿದ ಏಷ್ಯಾದ ಮೊದಲ ವ್ಯಕ್ತಿ ಎಂಬ ದಾಖಲೆಗೆ ಅರ್ಹರನ್ನಾಗಿದೆ. ಕೊಹ್ಲಿ ಅವರ ಪೋಸ್ಟ್ ಬಾಲಿವುಡ್ ದಂಪತಿಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹ ಘೋಷಣೆಯ ಹಿಂದಿನ ದಾಖಲೆಯನ್ನು ಮುರಿದಿದೆ.

ಏಷ್ಯಾದ ದಾಖಲೆ ಮುರಿದ ಕೊಹ್ಲಿ

ಕೊಹ್ಲಿಯ ಪೋಸ್ಟ್ ಏಷ್ಯಾದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ ಮಾತ್ರವಲ್ಲ, 2 ಕೋಟಿ ಲೈಕ್​ಗಳ ಮೈಲಿಗಲ್ಲನ್ನು ತಲುಪಿದ ಏಷ್ಯಾದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಯು ಕೊಹ್ಲಿಯನ್ನು ವಿಶ್ವಾದ್ಯಂತ ಕ್ರೀಡಾಪಟುಗಳು ಹೆಚ್ಚು ಲೈಕ್ ಮಾಡಿದ ಮೊದಲ ಐದು ಪೋಸ್ಟ್​ಗಳಲ್ಲಿ ಒಂದಾಗಿದೆ. ಇದು ಅವರ ಅಪಾರ ಜಾಗತಿಕ ಅಭಿಮಾನಿ ಬಳಗವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: Smriti Mandhana : ಬಾಯ್​ಫ್ರೆಂಡ್​ ಜತೆಗಿನ ಐದು ವರ್ಷಗಳ ಬಾಂಧವ್ಯವನ್ನು ಕೇಕ್​ ಕಟ್​ ಮಾಡುವ ಮೂಲಕ ಸಂಭ್ರಮಿಸಿದ ಸ್ಮೃತಿ ಮಂದಾನಾ

ಈ ಐತಿಹಾಸಿಕ ಗೆಲುವಿನ ನಂತರ, ವಿರಾಟ್ ಕೊಹ್ಲಿ ಟಿ 20 ಅಂತರರಾಷ್ಟ್ರೀಯ ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ವಿರಾಟ್ ಕೊಹ್ಲಿ ಪ್ರಸ್ತುತ ಪತ್ನಿ ಅನುಷ್ಕಾ ಶರ್ಮಾ ಮತ್ತು ಅವರ ಮಕ್ಕಳೊಂದಿಗೆ ಲಂಡನ್​​ನಲ್ಲಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಬಳಿಕ ಲಂಡನ್​ನಲ್ಲಿ ವಾಸ ಮಾಡುತ್ತಾರೆ ಎಂಬುದಾಗಿಯೂ ಸುದ್ದಿಯಾಗಿದೆ. ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಯುಕೆ ಮೂಲದ ಸಂಸ್ಥೆಯೊಂದರ ನಿರ್ದೇಶಕರಾಗಿದ್ದಾರೆ. ಎರಡನೇ ಮಗು ಅಕಾಯ್​ಗೆ ಅನುಷ್ಕಾ ಲಂಡನ್​ನಲ್ಲಿಯೇ ಜನ್ಮ ನೀಡಿದ್ದರು. ಅಲ್ಲಿಂದ ಬಳಿಕ ಅವರು ಅಲ್ಲಿಯೇ ವಾಸವಾಗಿದ್ದಾರೆ. ಮೊದಲ ಮಗು ವಾಮಿಕಾ ಕೂಡ ತಾಯಿಯೊಂದಿಗೆ ಇದ್ದಾಳೆ.

ವಿರಾಟ್​ ಕೊಹ್ಲಿ ವಿಶ್ವ ಕಪ್​ ತಂಡ ಸೇರುವ ಮೊದಲು ಕೂಡ ಲಂಡನ್​ನಿಂದಲೇ ಪ್ರಯಾಣ ಆರಂಭಿಸಿದ್ದರು. ಅವರು ಐಪಿಎಲ್​ನ ಮುಗಿಸಿದ ತಕ್ಷಣ ಭಾರತವನ್ನು ಬಿಟ್ಟು ಲಂಡನ್ ಸೇರಿಕೊಂಡಿದ್ದರು. ಅವರು ಮೊದಲ ಹಂತದಲ್ಲಿ ಭಾರತ ತಂಡದ ಜತೆ ಅಮೆರಿಕಕ್ಕೆ ಪ್ರಯಾಣ ಮಾಡಿರಲಿಲ್ಲ. ತಂಡವಾಗಿ ತಂಡ ಸೇರಿಕೊಂಡಿದ್ದರು.

Continue Reading

ಕ್ರಿಕೆಟ್

Smriti Mandhana : ಬಾಯ್​ಫ್ರೆಂಡ್​ ಜತೆಗಿನ ಐದು ವರ್ಷಗಳ ಬಾಂಧವ್ಯವನ್ನು ಕೇಕ್​ ಕಟ್​ ಮಾಡುವ ಮೂಲಕ ಸಂಭ್ರಮಿಸಿದ ಸ್ಮೃತಿ ಮಂದಾನಾ

Smriti Mandhana : ನಟರಾದ ರುಬಿನಾ ದಿಲೈಕ್, ಅವಿಕಾ ಗೋರ್ ಮತ್ತಿರರರು ಈ ಪೋಸ್ಟ್​​ಗೆ ಹೃದಯದ ಎಮೋಜಿಳನ್ನು ಹಾಕಿ ಪ್ರತಿಕ್ರಿಯಿಸಿದ್ದಾರೆ. ರುಬಿನಾ ದಿಲೈಕ್ “ನೀವಿಬ್ಬರೂ” ಎಂದು ಬರೆದಿದ್ದರೆ, ನಟ ಪಾರ್ಥ್ ಸಮಥಾನ್ ಮತ್ತು ಅವಿಕಾ ಗೋರ್ ಕೂಡ ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

VISTARANEWS.COM


on

Smriti Mandhana
Koo

ಬೆಂಗಳೂರು ಖ್ಯಾತ ಕ್ರಿಕೆಟ್ ಆಟಗಾರ್ತಿ ಹಾಗೂ ಭಾರತ ತಂಡದ ಆರಂಭಿಕ ಬ್ಯಾಟರ್​ ಸ್ಮೃತಿ ಮಂದಾನ (Smriti Mandhana ) ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚಲ್ ಇತ್ತೀಚೆಗೆ ಐದು ವರ್ಷಗಳ ಬಾಂಧವ್ಯವನ್ನು ಒಟ್ಟಾಗಿ ಸಂಭ್ರಮಿಸಿದ್ದಾರೆ. ಈ ಜೋಡಿ ಕೇಕ್ ಕತ್ತರಿಸಿ ಫೋಟೋಗಳಿಗೆ ಪೋಸ್ ನೀಡುವ ಮೂಲಕ ಖುಷಿ ಪಟ್ಟಿದ್ದಾರೆ. ಪಲಾಶ್ ತನ್ನ ಇನ್​ಸ್ಟಾಗ್ರಅಮ್​ ಹ್ಯಾಂಡಲ್​ನಲ್ಲಿ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಲಾಶ್ ಅವರು ಅದಕ್ಕೆ ಸರಳ ಶೀರ್ಷಿಕೆ ಕೊಟ್ಟಿದ್ದು, ಕೇವಲ ‘ಐದು’ ಎಂದು ಬರೆದಿದ್ದಾರೆ. ಅವರು ಕ್ರೀಡಾಪಟುವಿನೊಂದಿಗೆ ಅವರು ಎಷ್ಟು ವರ್ಷಗಳ ಸಂಬಂಧ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ನಟರಾದ ರುಬಿನಾ ದಿಲೈಕ್, ಅವಿಕಾ ಗೋರ್ ಮತ್ತಿರರರು ಈ ಪೋಸ್ಟ್​​ಗೆ ಹೃದಯದ ಎಮೋಜಿಳನ್ನು ಹಾಕಿ ಪ್ರತಿಕ್ರಿಯಿಸಿದ್ದಾರೆ. ರುಬಿನಾ ದಿಲೈಕ್ “ನೀವಿಬ್ಬರೂ” ಎಂದು ಬರೆದಿದ್ದರೆ, ನಟ ಪಾರ್ಥ್ ಸಮಥಾನ್ ಮತ್ತು ಅವಿಕಾ ಗೋರ್ ಕೂಡ ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

ಅಭಿಮಾನಿಗಳು ಸಹ ಯುವ ಜೋಡಿಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದಾರೆ. . “5 ವರ್ಷಗಳು ಪೂರ್ಣಗೊಂಡಿವೆ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬರು “ಸ್ಮೃತಿ ಮಂದಾನಗೆ ಗೌರವ ತೋರಿದ್ದಾರೆ. “ಅಭಿನಂದನೆಗಳು, ಸುಂದರ ಜೋಡಿ , ಮತ್ತೊಂದು ಪಾಲುದಾರಿಕೆಗಾಗಿ” ಎಂದೆಲ್ಲ ಕಾಮೆಂಟ್​ಗಳು ಬಂದಿವೆ.

ಇದನ್ನೂ ಓದಿ: Yuzvendra Chahal : ಪತ್ನಿ ಧನಶ್ರೀ ವರ್ಮಾಗೆ ವಿಶ್ವ ಕಪ್​ ಪದಕ ಅರ್ಪಿಸಿದ ಯಜ್ವೇಂದ್ರ ಚಹಲ್​

ಸಂಗೀತ ಸಂಯೋಜಕ ಪಲಾಶ್ ಮುಚಲ್ ಇತ್ತೀಚೆಗೆ ರಾಜ್ಪಾಲ್ ಯಾದವ್ ಅಭಿನಯದ ಅರ್ಧ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರು ‘ಡಿಶ್ಕಿಯೂನ್’ ಮತ್ತು ‘ಸ್ವೀಟಿ ವೆಡ್ಸ್ ಎನ್ಆರ್​ಐ ‘ ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ಮೃತಿ ಮಂದಾನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಎಡಗೈ ಆರಂಭಿಕ ಬ್ಯಾಟ್ಸ್ಮನ್. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕ ದಿನ ಸರಣಿಯ ವೇಳೆ ಸತತ ಎರಡು ಶತಕ ಹಾಗೂ ಒಂದು ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ.

ಸ್ಮೃತಿ ಮಂದಾನ ಅವರು ಭಾರತ ಕ್ರಿಕೆಟ್ ತಂಡದ ಅತ್ಯಂತ ನೆಚ್ಚಿನ ಆಟಗಾರ್ತಿಯಾಗಿದ್ದಾರೆ. ಮಹಿಳೆಯ ಕ್ರಿಕೆಟ್ ತಂಡದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಬ್ಯಾಟಿಂಗ್ ಪ್ರದರ್ಶನವೂ ಅದಕ್ಕೆ ಪೂರಕವಾಗಿದೆ. 2024ರ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್​ನಲ್ಲಿ ಅವರು ಆರ್​ಸಿಬಿ ತಂಡವನ್ನು ಪ್ರಶಸ್ತಿಯ ಕಡೆಗೆ ಮುನ್ನಡೆಸಿದ್ದು ಅವರು ದೊಡ್ಡ ಸಾಧನೆಯಾಗಿದೆ.

ಮಂಧಾನ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲೂ ಶತಕ ಬಾರಿಸಿದ್ದಾರೆ. ಇದೀಗ ನಡೆಯುತ್ತಿರುವ ಟಿ20 ಸರಣಿಯ ಪಂದ್ಯದಲ್ಲೂ ಆಡುತ್ತಿದ್ದಾರೆ.

Continue Reading

ಕ್ರಿಕೆಟ್

Yuzvendra Chahal : ಪತ್ನಿ ಧನಶ್ರೀ ವರ್ಮಾಗೆ ವಿಶ್ವ ಕಪ್​ ಪದಕ ಅರ್ಪಿಸಿದ ಯಜ್ವೇಂದ್ರ ಚಹಲ್​

Yuzvendra Chahal : ತವರಿಗೆ ಮರಳಿದ ನಂತರ, ಯಜುವೇಂದ್ರ ಚಾಹಲ್ ಈಗ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಗೆ ಗೆಲುವಿನ ಪದಕವನ್ನು ಅರ್ಪಿಸಿದ್ದಾರೆ. ಟೀಮ್ ಇಂಡಿಯಾ ಪರ ಟ್ರೋಫಿ ಗೆಲ್ಲವಲು ‘ಲೇಡಿ ಲಕ್’ ತಂದಿರುವುದು ಪತ್ನಿ ಧನಶ್ರೀ ಎಂಬರ್ಥದಲ್ಲಿ ಹೇಳಿದ್ದಾರೆ. ಯಜ್ವೇಂದ್ರ ಹಾಗೂ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಪ್ರೀತಿಸಿ ಮದುವೆಯಾಗಿದ್ದು ಕ್ರಿಕೆಟ್​ನ ಸ್ಟಾರ್ ದಂಪತಿ ಎನಿಸಿಕೊಂಡಿದ್ದಾರೆ. ಆದಾಗ್ಯೂ ಅವರ ಸಂಬಂಧಗಳ ಬಗ್ಗೆ ಆಗಾಗ ಅನಗತ್ಯ ಮಾತುಗಳು ಕೇಳಿ ಬರುತ್ತಿರುತ್ತವೆ. ಆದರೆ ಚಹಲ್ ತಮ್ಮಿಬ್ಬರ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ.

VISTARANEWS.COM


on

Yuzvendra Chahal
Koo

ಬೆಂಗಳೂರು: ಜುಲೈ 4 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತದ 2024 ರ ಟಿ 20 ವಿಶ್ವಕಪ್ ವಿಜಯೋತ್ಸವದಲ್ಲಿ ಯುಜ್ವೇಂದ್ರ ಚಹಲ್ (Yuzvendra Chahal ತಮ್ಮ ಇತರ ಸಹ ಆಟಗಾರರೊಂದಿಗೆ ಭಾಗವಹಿಸಿದ್ದರು. ಅವರು ಟೂರ್ನಿಯಲ್ಲಿ ಆಡಲು ಅವಕಾಶ ಪಡೆಯದ ಹೊರತಾಗಿಯೂ ಪ್ರಭಾವ ಬೀರಬಲ್ಲ ಆಟಗಾರರಾಗಿದ್ದರು. ಆದಾಗ್ಯೂ ಗೆಲುವಿನ ಶ್ರೇಯಸ್ಸು ಅವರಿಗೂ ದೊರೆಯಬೇಕಾಗಿದೆ. ಅಂತೆಯೇ ಜೂನ್ 29 ರಂದು ಬಾರ್ಬಡೋಸ್​ನಲ್ಲಿ ನಡೆದ ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟಿ 20 ವಿಶ್ವ ಪ್ರಶಸ್ತಿ ಗೆದ್ದ ವಿಜೇತ ಭಾರತೀಯ ಗುಂಪಿನ ಭಾಗವಾಗಿದ್ದು ಅವರಿಗೆ ಹೆಮ್ಮೆಯ ಸಂಗತಿ.

ತವರಿಗೆ ಮರಳಿದ ನಂತರ, ಯಜುವೇಂದ್ರ ಚಹಲ್ (Yuzvendra Chahal) ಈಗ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಗೆ ಗೆಲುವಿನ ಪದಕವನ್ನು ಅರ್ಪಿಸಿದ್ದಾರೆ. ಟೀಮ್ ಇಂಡಿಯಾ ಪರ ಟ್ರೋಫಿ ಗೆಲ್ಲವಲು ‘ಲೇಡಿ ಲಕ್’ ತಂದಿರುವುದು ಪತ್ನಿ ಧನಶ್ರೀ ಎಂಬರ್ಥದಲ್ಲಿ ಹೇಳಿದ್ದಾರೆ. ಯಜ್ವೇಂದ್ರ ಹಾಗೂ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಪ್ರೀತಿಸಿ ಮದುವೆಯಾಗಿದ್ದು ಕ್ರಿಕೆಟ್​ನ ಸ್ಟಾರ್ ದಂಪತಿ ಎನಿಸಿಕೊಂಡಿದ್ದಾರೆ. ಆದಾಗ್ಯೂ ಅವರ ಸಂಬಂಧಗಳ ಬಗ್ಗೆ ಆಗಾಗ ಅನಗತ್ಯ ಮಾತುಗಳು ಕೇಳಿ ಬರುತ್ತಿರುತ್ತವೆ. ಆದರೆ ಚಹಲ್ ತಮ್ಮಿಬ್ಬರ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ.


ಯಜುವೇಂದ್ರ ಚಹಲ್ ಜುಲೈ 6 ರಂದು ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ತಮ್ಮ ಪತ್ನಿ ಧನಶ್ರೀ ಚಾಹಲ್ ಅವರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕ್ರಿಕೆಟಿಗ 2024 ರ ಟಿ 20 ವಿಶ್ವಕಪ್ ವಿಜೇತ ಪದಕವನ್ನು ಸಹ ಹಿಂದಿನಿಂದ ಹಿಡಿದುಕೊಂಡಿದ್ದರು. ಇದೇ ವೇಳೆ ಅವರು “ಲೇಡಿ ಲಕ್” ಎಂದು ಶೀರ್ಷಿಕೆಯಲ್ಲಿ ಕೊಟ್ಟಿದ್ದಾರೆ.

ಯಜುವೇಂದ್ರ ಚಾಹಲ್ ಜೂನ್​​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆದ 2024 ರ ಟಿ 20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರೂ, ಲೆಗ್ ಸ್ಪಿನ್ನರ್ ಪಂದ್ಯಾವಳಿಯುದ್ದಕ್ಕೂ ಪ್ಲೇಯಿಂಗ್ ಇಲೆವೆನ್​​ನಲ್ಲಿ ಒಂದೇ ಒಂದು ಅವಕಾಶ ಪಡೆಯಲಿಲ್ಲ. ಚಾಹಲ್ ಅವರು ಟೀಮ್ ಇಂಡಿಯಾಕ್ಕಾಗಿ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಗಸ್ಟ್ 2023 ರಲ್ಲಿ ಲಾಡರ್​ಹಿಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಆಡಿದ್ದರು.

ಇದನ್ನೂ ಓದಿ: Abhishek Sharma : ಅಭಿಷೇಕ್ ಶರ್ಮಾ ದಾಖಲೆಯ ಶತಕ ಬಾರಿಸಿದ್ದು ಶುಭ್​​ಮನ್ ಗಿಲ್​ ಬ್ಯಾಟ್​ನಲ್ಲಿ!

72 ಏಕದಿನ ಮತ್ತು 80 ಟಿ 20 ಐ ಪಂದ್ಯಗಳನ್ನು ಆಡಿದ ಅನುಭವಿ 34 ವರ್ಷದ ಸ್ಪಿನ್ನರ್​ ಇಲ್ಲಿಯವರೆಗೆ ಎರಡೂ ಸ್ವರೂಪಗಳಲ್ಲಿ ಒಟ್ಟು 217 ಅಂತರರಾಷ್ಟ್ರೀಯ ವಿಕೆಟ್​ಗಳನ್ನು ಪಡೆದಿದ್ದಾರೆ.

ಇತ್ತೀಚೆಗೆ, ಅವರು ಈ ವರ್ಷದ ಐಪಿಎಲ್ 2024 ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದರು.

ಈಗಿನಂತೆ, ಯಜುವೇಂದ್ರ ಚಾಹಲ್ ಸೀಮಿತ ಓವರ್ಗಳ ನಿಯೋಜನೆಗಾಗಿ ಭಾರತೀಯ ತಂಡಕ್ಕೆ ಮತ್ತೊಂದು ಕರೆಯನ್ನು ಯಾವಾಗ ಪಡೆಯುತ್ತಾರೆ ಎಂಬುದನ್ನು ನೋಡಬೇಕಾಗಿದೆ.

Continue Reading
Advertisement
Poonam Pandey bold photo with shadow and light
ಬಾಲಿವುಡ್15 mins ago

Poonam Pandey: ಕತ್ತಲೆಯಲ್ಲಿ ಬೆತ್ತಲೆಯಾಗಿ ಮೈಮಾಟ ಪ್ರದರ್ಶಿಸಿ, ಫ್ಯಾನ್ಸ್‌ಗೆ ಕಚಗುಳಿ ಇಟ್ಟ ಪೂನಂ ಪಾಂಡೆ!

Bus Accident
ಪ್ರಮುಖ ಸುದ್ದಿ19 mins ago

Bus Accident : ಶಾಲಾ ಬಸ್​ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ

Student death Nursing college student commits suicide in Bengaluru
ಬೆಂಗಳೂರು23 mins ago

Student Death : ಬೆಂಗಳೂರಿನಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

Pakistan
ವಿದೇಶ35 mins ago

Pakistan: ಛೇ..ಇವನೆಂಥಾ ಪಾಪಿ ತಂದೆ! ಚಿಕಿತ್ಸೆಗೆ ಹಣ ಇಲ್ಲವೆಂದು 15 ದಿನದ ಹಸುಳೆಯ ಜೀವಂತ ಸಮಾಧಿ

Kalki 2898 AD box office collection weekend 2
ಟಾಲಿವುಡ್36 mins ago

Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಮಾಡಿದ ʻಕಲ್ಕಿ 2898 ಎಡಿʼಸಿನಿಮಾ!

Viral Video
Latest37 mins ago

Viral Video: ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ; ನಾಚಿಕೆಯಾಗಬೇಕು ಅಮೆರಿಕಕ್ಕೆ!

murder case hosakote
ಕ್ರೈಂ37 mins ago

Murder Case: ‌ಹಳೇ ವೈಷಮ್ಯದಿಂದ ಗ್ರಾಮ ಪಂಚಾಯಿತಿ ಸದಸ್ಯನ ಕೊಚ್ಚಿ ಕೊಲೆ

Viral Video
ಪ್ರಮುಖ ಸುದ್ದಿ42 mins ago

Viral Video : ಮೆಟ್ರೊದಲ್ಲಿ ಪರ್ಸ್ ಕದಿಯಲು ಮುಂದಾದ ಕಳ್ಳನಿಗೆ ಬಿತ್ತು ಗೂಸಾ! ವಿಡಿಯೊ ನೋಡಿ

Team India
ಪ್ರಮುಖ ಸುದ್ದಿ45 mins ago

Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ

ರಾಹುಲ್‌ ಗಾಂಧಿ rahul gandhi ippb account 2 pm narendra modi
ಪ್ರಮುಖ ಸುದ್ದಿ1 hour ago

PM Narendra Modi: ಟಕಾಟಕ್‌ ಆಯ್ತು, ಈಗ ಮೋದಿ 3 ಸಾವಿರಕ್ಕಾಗಿ ಪೋಸ್ಟ್‌ ಆಫೀಸ್‌ ಮುಂದೆ ಮಹಿಳೆಯರ ಕ್ಯೂ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ15 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ18 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ19 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌