Delhi team won the toss against UP and chose fielding WPL 2023 : ಯುಪಿ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ತಂಡದಿಂದ ಫೀಲ್ಡಿಂಗ್ ಆಯ್ಕೆ Vistara News
Connect with us

ಕ್ರಿಕೆಟ್

WPL 2023 : ಯುಪಿ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ತಂಡದಿಂದ ಫೀಲ್ಡಿಂಗ್ ಆಯ್ಕೆ

ಡೆಲ್ಲಿ ಹಾಗೂ ಯುಪಿ ವಾರಿಯರ್ಸ್​ ತಂಡ ಮಹಿಳೆಯರ ಪ್ರೀಮಿಯರ್​ ಲೀಗ್​ನ ಪ್ಲೇ ಆಫ್​ ಹಂತಕ್ಕೆ ತಲುಪಿದೆ.

VISTARANEWS.COM


on

Delhi team won the toss against UP and chose fielding
Koo

ಮುಂಬಯಿ: ಮಹಿಳೆಯರ ಪ್ರೀಮಿಯರ್​ ಲೀಗ್​ 20ನೇ ಪಂದ್ಯದಲ್ಲಿ ಯುಪಿ ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಸೋಮವಾರ ನಡೆದ ಹಣಾಹಣಿಯಲ್ಲಿ ಮುಂಬಯಿ ವಿರುದ್ಧ ಭರ್ಜರಿ 9 ವಿಕೆಟ್ ವಿಜಯ ಸಾಧಿಸಿತ್ತು. ಆ ಪಂದ್ಯದಲ್ಲೂ ಡೆಲ್ಲಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಮತ್ತೆ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಡೆಲ್ಲಿ ನಾಯಕಿ ಮೆಗ್​ ಲ್ಯಾನಿಂಗ್​.

ಬ್ರಬೊರ್ನ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಈ ಪಂದ್ಯ ಆಯೋಜನೆಗೊಂಡಿದೆ. ಡೆಲ್ಲಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆಧರೆ, ಆದರೆ, ಯುಪಿ ವಾರಿಯರ್ಸ್​ ತಂಡದ ಗ್ರೇಸ್​ ಹ್ಯಾರಿಸ್​, ರಾಜೇಶ್ವರಿ ಗಾಯಕ್ವಾಡ್​, ದೇವಿಕಾ ವೈದ್ಯ ಆಡುತ್ತಿಲ್ಲ. ಎಸ್​ ಯಶಶ್ರೀ, ಶ್ವೇತಾ ಸೆಹ್ರಾವತ್​, ಶಬ್ನಿಮ್​ ಇಸ್ಮಾಯಿಲ್ ತಂಡಕ್ಕೆ ಸೇರಿಕೊಂಡಿದ್ದಾರೆ.

ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್​ಸಿಬಿ

ದಿನದ ಮೊದಲ ಪಂದ್ಯದಲ್ಲಿ ಆರ್​ಸಿಬಿ ತಂಡ ಸೋಲು ಕಂಡಿತು. ಮುಂಬೈ ಇಂಡಿಯನ್ಸ್​ ವಿರುದ್ಧದ ಅಂತಿಮ ಲೀಗ್​ ಪಂದ್ಯದಲ್ಲಿ 4 ವಿಕೆಟ್​ಗಳ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್​ ಈ ಗೆಲುವಿನೊಂದಿಗೆ ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಮುಂಬಯಿಯ ಡಿ.ವೈ. ಪಾಟೀಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಡಬಲ್ ಹೆಡರ್​​ ಮುಖಾಮುಖಿಯ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ರಿಚಾ ಘೋಷ್​ ಮತ್ತು ಎಲ್ಲಿಸ್​ ಪೆರ್ರಿ ಅವರ ಸಣ್ಣ ಹೋರಾಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 125 ರನ್​ ಬಾರಿಸಿತು. ಮುಂಬೈ ಇಂಡಿಯನ್ಸ್​ 16.3 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 129 ರನ್​ ಬಾರಿಸಿ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ಆರಂಭಿಕ ಆಘಾತ ಕಂಡಿತು. ಗುಜರಾತ್​ ಜೈಂಟ್ಸ್​ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್​ ನಡೆಸಿ ನಡುಕ ಹುಟ್ಟಿಸಿದ್ದ ನ್ಯೂಜಿಲ್ಯಾಂಡ್​ನ ಸ್ಟಾರ್​ ಆಲ್​ ರೌಂಡರ್​ ಸೋಫಿ ಡಿವೈನ್​ ಅವರು ಈ ಪಂದ್ಯದಲ್ಲಿ ರನೌಟ್​ ಸಂಕಟಕ್ಕೆ ಸಿಲುಕಿದರು. ಇಲ್ಲದ ರನ್ ಕದಿಯಲೆತ್ನಿಸಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು.

ನಾಯಕಿ ಸ್ಮೃತಿ ಮಂಧಾನ ಅವರ ಆಟ ಈ ಪಂದ್ಯದಲ್ಲಿಯೂ ಮಂದ ಗತಿಯಿಂದ ಕೂಡಿತ್ತು. 25 ಎಸೆತ ಎದುರಿಸಿ 24 ರನ್​ ಗಳಿಸಿದರು. ಇದರೊಂದಿಗೆ ಈ ಬಾರಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಮಂಧಾನ ಸಂಪೂರ್ಣ ವೈಫಲ್ಯ ಕಂಡಂತಾಯಿತು. ಈ ಮೂಲಕ ಮುಂದಿನ ಬಾರಿಯ ಆವೃತ್ತಿಯಲ್ಲಿ ಅವರು ಆರ್​ಸಿಬಿ ತಂಡದಲ್ಲಿಯೇ ಉಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಕ್ರಿಕೆಟ್

WTC Final : ಭಾರತದ ಗೆಲುವಿಗೆ ಇನ್ನೂ ಬೇಕು 280 ರನ್​, ಕೌತುಕದಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​

ಭಾರತ ತಂಡದ ಬಳಿ ಏಳು ವಿಕೆಟ್​ಗಳು ಉಳಿದಿದ್ದು, ಕೊನೇ ದಿನದ 90 ಓವರ್​​ಗಳಲ್ಲಿ ವಿಕೆಟ್​ ಉಳಿಸಿಕೊಂಡು ಗೆಲುವು ಸಾಧಿಸಬೇಕಾಗಿದೆ.

VISTARANEWS.COM


on

Viat kohli WTC Final 2023
Koo

ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ನ ಫೈನಲ್​ ಪಂದ್ಯ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಎರಡನೇ ಇನಿಂಗ್ಸ್​ನಲ್ಲಿ ಬ್ಯಾಟ್​ ಮಾಡುತ್ತಿರುವ ಭಾರತ ತಂಡ 3 ವಿಕೆಟ್​ ಕಳೆದಕೊಂಡು 164 ರನ್​ ಬಾರಿಸಿದೆ. ಸ್ಪೆಷಲಿಸ್ಟ್​ ಬ್ಯಾಟರ್​​ಗಳಾದ ವಿರಾಟ್​ ಕೊಹ್ಲಿ (44) ಹಾಗೂ ಅಜಿಂಕ್ಯ ರಹಾನೆ (20 ರನ್​) ಕ್ರೀಸ್​ನಲ್ಲಿ ಉಳಿದುಕೊಂಡಿದ್ದಾರೆ. ಭಾರತ ತಂಡದ ಗೆಲುವಿಗೆ 280 ರನ್​ ಬೇಕಾಗಿದ್ದು ಕೊನೇ ದಿನ 90 ಓವರ್​​ಗಳು ಬಾಕಿ ಉಳಿದಿವೆ. ಅತ್ತ ಆಸ್ಟ್ರೇಲಿಯಾ ತಂಡವು ಭಾರತದ ಇನ್ನುಳಿದ ಏಳು ವಿಕೆಟ್​​ಗಳನ್ನು ಉರುಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಂಡಿದೆ.

ಇಲ್ಲಿನ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 8 ವಿಕೆಟ್​ ನಷ್ಟಕ್ಕೆ 270 ರನ್​ ಬಾರಿಸಿ ಡಿಕ್ಲೇರ್​ ಮಾಡಿಕೊಂಡಿತು. 444 ರನ್​​ಗಳ ಗುರಿಯೊಂದಿಗೆ ಬ್ಯಾಟ್​ ಮಾಡಿದ ಭಾರತ ತಂಡ ಮೊದಲ ವಿಕೆಟ್​ಗೆ 41 ರನ್ ಬಾರಿಸಿತು. ರೋಹಿತ್​ ಶರ್ಮಾ (43) ಹಾಗೂ ಶುಭಮನ್​ ಗಿಲ್​ (18) ಭರವಸೆ ಮೂಡಿಸಿದರು. ಆದರೆ, ಮೂರನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿನ ಬಳಿಕ ಶುಭ್​ಮನ್​ ಗಿಲ್​ ನಿರಾಸೆಯಿಂದ ಪೆವಿಲಿಯನ್​ಗೆ ಮರಳಬೇಕಾಯಿತು. ಬೋಲ್ಯಾಂಡ್ ಅವರ ಎಸೆತಕ್ಕೆ ಗ್ರೀನ್​ಗೆ ಕ್ಯಾಚ್ ನೀಡಿದ ಅವರು ಬೇಸರದಿಂದ ಹೊರಕ್ಕೆ ನಡೆದರು.

ನಂತರ ರೋಹಿತ್ ಮತ್ತು ಚೇತೇಶ್ವರ್​ ಪೂಜಾರ (27) 77 ಎಸೆತಗಳಲ್ಲಿ 51 ರನ್ ಗಳಿಸಿದರು. ನಂತರ ಇಬ್ಬರೂ ಬ್ಯಾಟ್ಸಮನ್​ಗಳು ಕೆಲವೇ ನಿಮಿಷಗಳಲ್ಲಿ ಔಟಾಗಿದ್ದಿಂದ ಭಾರತದ ಪ್ರಗತಿಗೆ ಅಡ್ಡಿಯಾಯಿತು. ರೋಹಿತ್​ ಸ್ವೀಪ್​ ಮಾಡಲು ಹೋಗಿ ನೇಥನ್​ ಲಯಾನ್​ ಎಸೆತಕ್ಕೆ ಎಲ್​ಬಿಡಬ್ಲ್ಯು ಆಡದರೆ, ಕಮಿನ್ಸ್ ಎಸೆತಕ್ಕೆ ಅನಗತ್ಯ ರನ್​ ಬಾರಿಸಲು ಮುಂದಾದ ಪೂಜಾರ ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಾಲ್ಕನೇ ವಿಕೆಟ್​ಗೆ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಆಗಿರುವ ಉಂಟಾದ ಹಾನಿಯನ್ನು ಸರಿಪಡಿಸಿದ್ದಾರೆ. ಜೊತೆಯಾಟವು 50 ರನ್​ಗಳ ಗಡಿ ದಾಟಿದೆ. ಇದೀಗ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಗೆಲ್ಲಲು ಭಾರತವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ಮಾಡಿದ ದಾಖಲೆಯನ್ನು ಮುರಿಯಬೇಕಾಗಿದೆ.

ಇದನ್ನೂ ಓದಿ: WTC Final 2023 : ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ

ಅಲೆಕ್ಸ್ ಕ್ಯೇರಿ ಅರ್ಧ ಶತಕ

ಮೂರನೇ ದಿನದಾಟದ ಅಂತ್ಯಕ್ಕೆ 123 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ನಾಲ್ಕನೇ ದಿನದ ಮೊದಲ ಸೆಶನ್​ನಲ್ಲಿ ವಿಕೆಟ್​ಗಳನ್ನು ಕಳೆದುಕೊಂಡಿತು. ಮರ್ನಸ್​ ಲಾಬುಶೇನ್​ ಆರಂಭದಲ್ಲಿಯೇ ವಿಕೆಟ್​ ಒಪ್ಪಿಸಿದರು. ಆದರೆ ಏಳನೆ ವಿಕೆಟ್​ಗೆ ಅಲೆಕ್ಸ್​ ಕ್ಯೇರಿ (ಅಜೇಯ 66) ಹಾಗೂ ಮಿಚೆಲ್ ಸ್ಟಾರ್ಕ್​ (41) 93 ರನ್ ಜತೆಯಾಟ ನೀಡುವ ಮೂಲಕ ಭಾರತ ತಂಡಕ್ಕೆ ದೊಡ್ಡ ಗುರಿಯನ್ನು ಒಡ್ಡಲು ನೆರವಾದರು. ಅದಕ್ಕಿಂತ ಮೊದಲು ಸ್ಮಿತ್ (34) ಹಾಗೂ ಟ್ರಾವಿಡ್​ ಹೆಡ್​ (18) ಆಸ್ಟ್ರೇಲಿಯಾ ತಂಡಕ್ಕೆ ಸಣ್ಣ ಕೊಡುಗೆ ಕೊಟ್ಟರು.

Continue Reading

ಕ್ರಿಕೆಟ್

WTC FInal : ಚೀಟರ್​, ಚೀಟರ್​… ಗಿಲ್​ಗೆ ಔಟ್​ ನೀಡಿದ ಅಂಪೈರ್​ ವಿರುದ್ಧ ಅಭಿಮಾನಿಗಳ ಕಿಡಿ

ಶುಭ್​ಮನ್​ ಗಿಲ್​ಗೆ ಔಟ್​ ನೀಡಿರುವ ಮೂರನೇ ಅಂಪೈರ್​ ನಿರ್ಧಾರ ಸರಿಯಿಲ್ಲ ಎಂದು ರೋಹಿತ್​ ಶರ್ಮಾ ಸ್ಥಳದಲ್ಲೇ ಅಸಮಾಧಾನ ವ್ಯಕ್ತಪಡಿಸಿದರು

VISTARANEWS.COM


on

Shubhman GIll Wicket
Koo

ಲಂಡನ್​: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಪಂದ್ಯ ಅಂತಿಮ ಘಟಕ್ಕೆ ತಲುಪಿದೆ. ಪಂದ್ಯ ಬಹುತೇಕ ಪ್ಯಾಟ್​ ಕಮಿನ್ಸ್​ ನೇತೃತ್ವದ ಆಸ್ಟ್ರೇಲಿಯಾ ತಂಡದ ಬಿಗಿ ಹಿಡಿತದಲ್ಲಿದೆ. ಆದಾಗ್ಯೂ ಪಂದ್ಯದ ಫಲಿತಾಂಶದ ಬಗ್ಗೆ ಕುತೂಹಲ ಮೂಡಿದೆ. ಇವೆಲ್ಲದರ ನಡುವೆ ಭಾರತ ತಂಡದ ಎರಡನೇ ಇನಿಂಗ್ಸ್​ ಬ್ಯಾಟಿಂಗ್ ವೇಳೆ ಥರ್ಡ್​ ಅಂಪೈರ್​ ನೀಡಿದ ತೀರ್ಪೊಂದು ವಿವಾದಕ್ಕೆ ಕಾರಣವಾಗಿದೆ. ಭಾರತೀಯ ಕ್ರಿಕೆಟ್​ ಅಭಿಮಾನಿಗಳಂತೂ ಇದು ಮೋಸದಾಟ ಎಂಬುದಾಗಿ ದೂರಿದ್ದಾರೆ.

444 ರನ್​ಗಳ ಗುರಿ ಬೆನ್ನಟ್ಟಿದ್ದ ಟೀಮ್ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಉತ್ತಮವಾಗಿ ಆರಂಭಿಸಿತು. ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಇಬ್ಬರೂ ಉತ್ತಮ ಆರಂಭ ತಂದುಕೊಟ್ಟರು. ಆದಾಗ್ಯೂ ಸ್ಕಾಟ್ ಬೋಲ್ಯಾಂಡ್ ಮತ್ತೊಮ್ಮೆ ಯಶ್ಸಸ್ಸು ಸಾಧಿಸುವ ಮೂಲಕ ಶುಭ್​ಮನ್ ಗಿಲ್​ ಅವರನ್ನು ಔಟ್​ ಮಾಡಿದರು.19 ಎಸೆತಕ್ಕೆ 18 ರನ್​ ಬಾರಿಸಿದ್ದ ಅವರು ಕ್ಯಾಮೆರಾನ್​ ಗ್ರೀನ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ಇನಿಂಗ್ಸ್​ನ ಎಂಟನೇ ಓವರ್​ನ ಮೊದಲ ಎಸೆತದಲ್ಲಿ ಚೆಂಡನ್ನು ನೇರವಾಗಿ ಕ್ಯಾಮರೂನ್ ಗ್ರೀನ್ ಅವರ ಕೈಗೆ ಸೇರಿತು. ಆದರೆ ಡೈವ್​ ಮಾಡಿ ಅವರು ಹಿಡಿದ ಕ್ಯಾಚ್ ಅನುಮಾನಾಸ್ಪಾದವಾಗಿತ್ತು. ಹೀಗಾಗಿ ಫೀಲ್ಡ್​ ಅಂಪೈರ್​ಗಳು ಟಿವಿ ಅಂಪೈರ್​ಗಳಿಗೆ ನಿರ್ಧಾರ ಪ್ರಕಟಿಸುವಂತೆ ಕೋರಿದರು. ಮೊದಲೆರಡು ಕೋನಗಳಲ್ಲಿ ಪರೀಕ್ಷಿಸಿದಾಗ ಚೆಂಡು ನೆಲಕ್ಕೆ ತಗುಲಿದಂತೆ ಕಂಡಿತು. ಹೀಗಾಗಿ ಭಾರತೀಯ ಪ್ರೇಮಿಗಳು ಸಂಭ್ರಮ ಪಟ್ಟರು. ಆದರೆ, ಇನ್ನೊಂದು ಕೋನದಲ್ಲಿ ನೋಡುವಾಗ ಚೆಂಡಿನ ಕೆಳಗೆ ಬೆರಳಿದ್ದಂತೆ ಕಂಡಿತು. ಆದರೆ, ಮೂರನೇ ಅಂಪೈರ್​ ಔಟ್​ ತೀರ್ಪು ನೀಡಿದರು.

ಮೂರನೇ ಅಂಪೈರ್ ತೀರ್ಮಾನಕ್ಕೆ ನಾಯಕ ರೋಹಿತ್​ ಶರ್ಮಾ ಅವರು ಸ್ಥಳದಲ್ಲೇ ಅಸಮಾಧಾನ ವ್ಯಕ್ತಪಡಿಸಿದರು. ಇದು ಮುಂದುವರಿದರು ಸಾಮಾಜಿಕ ಜಾಲ ತಾಣಗಳಲ್ಲಿ ಇದರ ಕುರಿತು ಭರ್ಜರಿ ಚರ್ಚೆಗಳು ಆರಂಭಗೊಂಡವು. ಭಾರತೀಯ ಪ್ರೇಮಿಗಳಂತೂ ಇದು ಮೋಸದಾಟ ಎಂಬುದಾಗಿ ಜರೆದರು. ಅಂಪೈರ್​ಗಳು ಆಸ್ಟ್ರೇಲಿಯಾ ಪರವಾಗಿ ಅನವಶ್ಯಕ ತೀರ್ಪು ನೀಡಿದ್ದಾರೆ ಎಂಬುದಾಗಿ ಅವರು ಆರೋಪಿಸಿದರು.

ಇದನ್ನೂ ಓದಿ : WTC Final 2023 : ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ

ಇಬ್ಬರೂ ಆರಂಭಿಕ ಆಟಗಾರರು ಇನ್ನಿಂಗ್ಸ್​​ಗೆ ಸಕಾರಾತ್ಮಕ ಆರಂಭ ನೀಡಿದ್ದರಿಂದ ಈ ಔಟ್ ಭಾರತಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿತು ದಿ ಓವಲ್​ನಲ್ಲಿ ಎದುರಾದ 444 ರನ್​ಗಳ ಚೇಸಿಂಗ್​​ನಲ್ಲಿ ರೋಹಿತ್ ಅಜೇಯ 22 ರನ್ ಗಳಿಸಿದರು .

ಕುತೂಹಲಕಾರಿ ಸಂಗತಿಯೆಂದರೆ, ಬೋಲ್ಯಾಂಡ್ ಮೊದಲ ಇನ್ನಿಂಗ್ಸ್​ನಲ್ಲಿ ಗಿಲ್ ಅವರನ್ನು ಔಟ್ ಮಾಡಿದ್ದರು. ಆಫ್-ಸ್ಟಂಪ್​​ನ ಹೊರಗೆ ಎಸೆದ ಚೆಂಡನ್ನು ಮುಟ್ಟಲು ಹೋಗಿ ಗಿಲ್​ ವಿಕೆಟ್​ ಒಪ್ಪಿಸಬೇಕಾಯಿತು.

Continue Reading

ಕ್ರಿಕೆಟ್

WTC Final 2023 : ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ

ರೋಹಿತ್​ ಶರ್ಮಾ ಟೆಸ್ಟ್​ ಮಾದರಿಯಲ್ಲಿ 70 ಸಿಕ್ಸರ್ ಬಾರಿಸುವ ಮೂಲಕ ಗರಿಷ್ಠ ಸಿಕ್ಸರ್ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

VISTARANEWS.COM


on

Rohit Sharma
Koo

ಲಂಡನ್​: ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ ಪಂದ್ಯದಲ್ಲಿ (WTC Final 2023) ಆಸ್ಟ್ರೇಲಿಯಾ ತಂಡ ಮುನ್ನಡೆ ಪಡೆದುಕೊಂಡಿದೆ. ಎರಡನೇ ಇನಿಂಗ್ಸ್​​ನಲ್ಲಿ 270 ರನ್ ಬಾರಿಸಿ ಡಿಕ್ಲೇರ್​ ಮಾಡಿಕೊಂಡಿರುವ ಪ್ಯಾಟ್​ ಕಮಿನ್ಸ್​ ಬಳಗ 443 ರನ್​ಗಳ ಮುನ್ನಡೆ ಪಡೆದುಕೊಂಡಿದೆ. 444 ರನ್​ಗಳ ಗೆಲುವಿನ ಗುರಿಯೊಂದಿಗೆ ಬ್ಯಾಟ್​ ಮಾಡಲು ಆರಂಭಿಸಿರುವ ಭಾರತ ತಂಡ 41 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್​ ಕಳೆದುಕೊಂಡು ನಿರಾಸೆಗೆ ಒಳಗಾಗಿದೆ. ಏತನ್ಮಧ್ಯೆ, ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಭಾರತದ ಲೆಜೆಂಡ್ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಸಾಧನೆ ಮಾಡಿದ್ದಾರೆ.

ರೋಹಿತ್​ ಶರ್ಮಾ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 69 ಬಾರಿಸಿದ್ದ ಸಚಿನ್​ ತೆಂಡೂಲ್ಕರ್ ಅವರನ್ನು ರೋಹಿತ್​ ಹಿಂದಿಕ್ಕಿದ್ದಾರೆ. ಎಂಎಸ್ ಧೋನಿ (78) ಮತ್ತು ವೀರೇಂದ್ರ ಸೆಹ್ವಾಗ್ (90) ರೋಹಿತ್ ಅವರಿಗಿಂತ ಮುಂದಿನೆರಡು ಸ್ಥಾನಗಳನ್ನು ಪಡೆದುಕೊಂಡಿದ್ದರೆ.

ಡಬ್ಲ್ಯುಟಿಸಿ 2023 ರ ಫೈನಲ್​​ನಲ ನಾಲ್ಕನೇ ಇನಿಂಗ್ಸ್​​ನಲ್ಲಿ ಮಿಚೆಲ್ ಸ್ಟಾರ್ಕ್ ವಿರುದ್ಧ ರೋಹಿತ್ ತಮ್ಮ 70ನೇ ಟೆಸ್ಟ್ ಸಿಕ್ಸರ್​ ಬಾರಿಸಿದರು. ಟೆಸ್ಟ್ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ ಅವರ ದಾಖಲೆಯ ಬಗ್ಗೆ ಹೇಳುವುದಾದರೆ ಬಲಗೈ ಬ್ಯಾಟರ್​ 50 ಪಂದ್ಯಗಳಲ್ಲಿ 3416 ರನ್ ಗಳಿಸಿದ್ದಾರೆ. 45.55ರ ಉತ್ತಮ ಸರಾಸರಿಯನ್ನು ಹೊಂದಿದ್ದಾರೆ. 70 ಸಿಕ್ಸರ್​​ಗಳನ್ನು ಬಾರಿಸಿರುವುದರ ಹೊರತಾಗಿ, ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 366 ಬೌಂಡರಿಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ : IPL 2023 : ಡಕ್​ಔಟ್​ ಆಗುವ ಮೂಲಕ ಅನಗತ್ಯ ದಾಖಲೆ ಸೃಷ್ಟಿಸಿಕೊಂಡ ರೋಹಿತ್ ಶರ್ಮಾ

444 ರನ್​ಗಳ ಗುರಿ ಬೆನ್ನತ್ತಿದ ಭಾರತ ತಂಡ ಈಗಾಗಲೇ ತನ್ನ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅವರನ್ನು ಕಳೆದುಕೊಂಡಿದೆ. ಸ್ಕಾಟ್ ಬೋಲ್ಯಾಂಡ್ ಅವರ ವಿಕೆಟ್ ಪಡೆದಿದ್ದಾರೆ. ಭಾರತ ತಂಡದ ಮುಂದೆ ಇನ್ನೂ ದೊಡ್ಡ ಸವಾಲಿದೆ. ಈ ಪಂದ್ಯವನ್ನು ಉಳಿಸಲು ಅಥವಾ ಗೆಲ್ಲಲು ಭಾರತೀಯ ಬ್ಯಾಟರ್​ಗಳು ತಮ್ಮ ಶಕ್ತಿ ಮತ್ತು ಯುಕ್ತಿ ಎರಡನ್ನೂ ಬಳಸಿಕೊಳ್ಳಬೇಕಾಗಿದೆ.

Continue Reading

ಕ್ರಿಕೆಟ್

WTC Final 2023 : ಸರಣಿ ಗೆದ್ದರೆ ಒಳ ಉಡುಪಿನಲ್ಲಿ ಬರೆಸಿಕೊಳ್ಳುವ ಆಸೀಸ್ ಬ್ಯಾಟರ್​! ಇದೆಂಥಾ ಸಂಭ್ರಮ?

ಇಂಗ್ಲೆಂಡ್​ ತಂಡವನ್ನು ಕ್ಲೀನ್​ ಸ್ವೀಪ್​ ಮಾಡಿರುವ ಸ್ಕೋರ್​ ಬೋರ್ಡ್​ ಮರ್ನಸ್​ ಲಾಬುಶೇನ್​ ಅವರ ಅಂಡರ್​ಪ್ಯಾಂಟ್​ನಲ್ಲಿ ಕಾಣಿಸಿಕೊಂಡಿತು.

VISTARANEWS.COM


on

Marnus Labuschagne
Koo

ಲಂಡನ್​: ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಮರ್ನಸ್ ಲಾಬುಶೇನ್ ವಿಶ್ವದ ಅತ್ಯುತ್ತಮ ಟೆಸ್ಟ್​ ಕ್ರಿಕೆಟ್​ ಬ್ಯಾಟರ್​. ಟೆಸ್ಟ್ ಕ್ರಿಕೆಟ್ ಬಗ್ಗೆ ಅವರ ಗೀಳು ಪ್ರತಿ ಬಾರಿಯ ಚರ್ಚೆಯ ವಿಷಯ ಎನಿಸಿಕೊಂಡಿದೆ. ಆದರೆ ಭಾರತದ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್​ ವೇಳೆ ಅವರ ಒಳ ಉಡುಪು ಚರ್ಚೆಯ ವಿಷಯವಾಗಿ ಮಾರ್ಪಟ್ಟಿತು. ನೇರ ಪ್ರಸಾರದ ಕ್ಯಾಮೆರಾಮ್ಯಾನ್​​ಗಳ ಕಣ್ಣಿಗೆ ಬಿದ್ದ ಅವರ ಒಳ ಉಡುಪು ಚರ್ಚೆಯ ವಿಷಯ ಎನಿಸಿಕೊಂಡಿತು.

ಪ್ರಸ್ತುತ ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್​​ಮನ್​ ಆಗಿರುವ ಮರ್ನಸ್ ಲಾಬುಶೇನ್, ಫೈನಲ್ ಪಂದ್ಯದ 3ನೇ ದಿನದಂದು ತಮ್ಮ ಬ್ಯಾಟಿಂಗ್ ವೇಳೆ ಭಾರತೀಯ ಬೌಲರ್​ಗಳ ಬೆವರಿಳಿಸಿದ್ದರು. ಅದರಲ್ಲೂ ಭಾರತದ ವೇಗಿ ಮೊಹಮ್ಮದ್ ಸಿರಾಜ್​ ಹಾಗೂ ಮರ್ನಸ್​ ನಡುವೆ ಜಿದ್ದಾಜಿದ್ದಿಯೇ ನಡೆದಿತ್ತು. ಏತನ್ಮಧ್ಯೆ ಅವರು ಒಳಉಡುಪು ಎಲ್ಲರ ಗಮನ ಸೆಳೆಯಿತು.

2021-22ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 4-0 ಅಂತರದ ಕ್ಲೀನ್​ ಸ್ವೀಪ್​ ಸಾಧನೆ ಮಾಡಿತ್ತು. ತಂಡದ ಈ ಸಾಧನೆಯನ್ನು ತಮ್ಮ ಒಳಚಡ್ಡಿಯಲ್ಲಿ ಬರೆಸಿಕೊಂಡಿದ್ದಾರೆ ಲಾಬು ಶೇನ್​. ಪಂದ್ಯದ ನಡುವೆ ಅನಿವಾರ್ಯವಾಗಿ ಅವರಿಗೆ ಪ್ಯಾಂಟ್​ ಜಾರಿಸುವ ಅನಿವಾರ್ಯತೆ ಎದುರಾಯಿತು. ಈ ವೇಳೆ ಅದರಲ್ಲಿ ಇಂಗ್ಲೆಂಡ್​ ವಿರುದ್ಧದ 4-0 ಅಂತರದ ಗೆಲುವಿನ ಸಂಭ್ರಮವನ್ನು ಬರೆಯಲಾಗಿತ್ತು.

ಇದನ್ನೂ ಓದಿ :WTC Final 2023 : ಕೆಂಗಣ್ಣನಿಂದ ಕೆಕ್ಕರಿಸಿ ನೋಡಿ ಗೆಲ್ಲುವೆ; ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಟೀಮ್​ ಇಂಡಿಯಾ ವೇಗಿ​!

ದಕ್ಷಿಣ ಆಫ್ರಿಕಾ ಮೂಲದ ಈ ಕ್ರಿಕೆಟಿಗ 2021-22ರ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​. ಅವರೀಗ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಹಾಲಿ ಆವೃತ್ತಿಯ ಆಶಸ್ ಸರಣಿಯಲ್ಲಿ ಮೇಲೆ ಕಣ್ಣಿಟ್ಟಿದ್ದಾರೆ. ಈ ವೇಳೆ ಅವರು ಒಳಉಡುವಿನ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಲಿದೆ.

ಚೊಚ್ಚಲ ಪ್ರಶಸ್ತಿಯ ಹಾದಿಯಲ್ಲಿ ಆಸ್ಟ್ರೇಲಿಯಾ

ಇದಕ್ಕೂ ಮುನ್ನ ಲಾಬುಶೇನ್ ಅವರು ಡ್ರೆಸ್ಸಿಂಗ್ ರೂಮ್​ನಲ್ಲ ನಿದ್ದೆ ಮಾಡುತ್ತಿದ್ದ ವಿಡಯೊ ಕೂಡ ಬಹಿರಂಗಗೊಂಡಿತ್ತು. ಡೇವಿಡ್ ವಾರ್ನರ್ ಅವರನ್ನು ನಿದ್ದೆಯಿಂದ ಎಬ್ಬಿಸಿದ್ದ ಚಿತ್ರಣವೂ ಸುದ್ದಿಯಾಗಿತ್ತು. ಆದರೆ ನಿದ್ದೆಯಿಂದ ಎದ್ದ ಅವರು ಭರ್ಜರಿಯಾಗಿ ಬ್ಯಾಟ್​ ಮಾಡಿ 41 ರನ್​ ಬಾರಿಸಿದ್ದರು.

28 ವರ್ಷದ ಆಟಗಾರ ನಾಲ್ಕನೇ ದಿನದಂದು ಹೆಚ್ಚು ಪರಿಣಾಮ ಬೀರಲಿಲ್ಲ. ಏಕೆಂದರೆ ಅವರು ನಾಲ್ಕನೇ ದಿನ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ಆದಾಗ್ಯೂ ಆಸ್ಟ್ರೇಲಿಯಾ ತಂಡ ಮುನ್ನಡೆ ಹಾದಿಯಲ್ಲಿದೆ. ಪಂದ್ಯ ಗೆಲ್ಲುವ ಅವಕಾಶಗಳನ್ನು ಸೃಷ್ಟಿಸಿಕೊಂಡಿದೆ.

Continue Reading
Advertisement
Chief Minister Siddaramaiah
ಕರ್ನಾಟಕ4 mins ago

ಇಂದು ಮಧ್ಯಾಹ್ನದಿಂದಲೇ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ; ’ಶಕ್ತಿ’ ಟಿಕೆಟ್​​ ಹಂಚಲಿರುವ ಸಿಎಂ ಸಿದ್ದರಾಮಯ್ಯ

curd myths
ಆರೋಗ್ಯ33 mins ago

Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Horoscope Today
ಪ್ರಮುಖ ಸುದ್ದಿ2 hours ago

Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!

Hindu janajagruti samiti pressmeet
ಕರ್ನಾಟಕ7 hours ago

ಜೂ.16 ರಿಂದ 22ರವರೆಗೆ ಗೋವಾದಲ್ಲಿ ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವʼ

Man Dies Of Heart Attack In Noida
ಕ್ರೀಡೆ7 hours ago

Heart Attack: ಬ್ಯಾಡ್ಮಿಂಟನ್‌ ಆಡುತ್ತಿದ್ದವನ ಬಾಳಲ್ಲಿ ಆಟವಾಡಿದ ವಿಧಿ; ಹೃದಯಾಘಾತದಿಂದ ವ್ಯಕ್ತಿ ಸಾವು

Digital Payment
ಪ್ರಮುಖ ಸುದ್ದಿ8 hours ago

ವಿಸ್ತಾರ ಸಂಪಾದಕೀಯ: ಡಿಜಿಟಲ್ ಪಾವತಿಯಲ್ಲಿ ಭಾರತ ನಂ.1, ಭಾರತೀಯರ ಪ್ರೌಢಿಮೆಗೆ ಇದು ಸಾಕ್ಷಿ

aamir khan to act in rajamouli movie
ಸಿನಿಮಾ8 hours ago

Aamir Khan : ದಕ್ಷಿಣ ಭಾರತ ಸಿನಿಮಾದಲ್ಲಿ ವಿಲನ್‌ ಆಗ್ತಾರಂತೆ ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಆಮೀರ್ ಖಾನ್‌!

Minister Pralhad Joshi
ಕರ್ನಾಟಕ8 hours ago

ಹುಬ್ಬಳ್ಳಿ ಏರ್‌ಪೋರ್ಟ್‌ ವಿಸ್ತರಣೆಗೆ 273 ಕೋಟಿ ರೂ.; ಕೇಂದ್ರಕ್ಕೆ ಪ್ರಲ್ಹಾದ್‌ ಜೋಶಿ ಧನ್ಯವಾದ

Viat kohli WTC Final 2023
ಕ್ರಿಕೆಟ್8 hours ago

WTC Final : ಭಾರತದ ಗೆಲುವಿಗೆ ಇನ್ನೂ ಬೇಕು 280 ರನ್​, ಕೌತುಕದಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ1 day ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Autodrivers oppose free bus service
ಕರ್ನಾಟಕ14 hours ago

Free Bus Service: ನನ್ ಒಂದೇ ಓಟಲ್ಲ ಸ್ವಾಮಿ, ನಮ್ ಫ್ಯಾಮಿಲಿದೆಲ್ಲ ಇದೆ ಹುಷಾರ್: ಸಿದ್ದರಾಮಯ್ಯಗೆ ಆಟೋ ಡ್ರೈವರ್‌ ವಾರ್ನಿಂಗ್‌

accident in kerala
ವೈರಲ್ ನ್ಯೂಸ್18 hours ago

Viral Video: ಬಸ್ಸು ಮತ್ತು ಲಾರಿ ಮಧ್ಯೆ ಸ್ಕೂಟರ್‌ ಅಪ್ಪಚ್ಚಿ, ಸವಾರರ ಕಣ್ ಮುಂದೆ ಯಮ ರಪ್ ಅಂತ ಪಾಸ್ ಆದ!

Cancellation of tenders for 108 ambulances and Dinesh Gundu rao
ಆರೋಗ್ಯ2 days ago

Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

Meghalaya Villagers Chase Bangladesh soldiers
ದೇಶ2 days ago

Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು

snake mate in chamarajnagar 2
ಕರ್ನಾಟಕ2 days ago

Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

Rain in mangalore
ಉಡುಪಿ2 days ago

Rain News: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌; ಮಂಗಳೂರಲ್ಲಿ ಚಿಟಪಟ ಮಳೆ

Rain in koppal
ಉಡುಪಿ2 days ago

Weather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ

youths rescued in Kaveri river
ಕರ್ನಾಟಕ3 days ago

Video Viral: ತಲಕಾಡಿನ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ!

Elephant attack in muttunga wildlife sanctuary
ಕರ್ನಾಟಕ3 days ago

Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್‌ ಹಿಡಿದು ಓಡೋಡಿ ಬಂದ!

abhishek ambareesh wedding Reception
ಕರ್ನಾಟಕ3 days ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

ಟ್ರೆಂಡಿಂಗ್‌

error: Content is protected !!