ESP vs CRO: ಯುರೋ ಕಪ್​ನಲ್ಲಿ ಇಂದು 2 ಪಂದ್ಯ; ಸ್ಪೇನ್‌ಗೆ ಸವಾಲೊಡ್ಡೀತೇ ಕ್ರೊವೇಷಿಯಾ? - Vistara News

ಕ್ರೀಡೆ

ESP vs CRO: ಯುರೋ ಕಪ್​ನಲ್ಲಿ ಇಂದು 2 ಪಂದ್ಯ; ಸ್ಪೇನ್‌ಗೆ ಸವಾಲೊಡ್ಡೀತೇ ಕ್ರೊವೇಷಿಯಾ?

ESP vs CRO: ಅತ್ತ ಕ್ರೊವೇಷಿಯಾ ಕೂಡ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ. ಖ್ಯಾತ ರಿಯಲ್ ಮ್ಯಾಡ್ರಿಡ್ ತಂಡದ ಮಿಡ್‌ಫೀಲ್ಡರ್‌ ಮಾಡ್ರಿಕ್, ಮಾಟಿಯೊ ಕೊವಾಸಿಕ್ ಮತ್ತು ಮಾರ್ಸೆಲೊ ಬ್ರಾಝೊವಿಕ್ ಅವರನ್ನೊಳಗೊಂಡ ತಂಡದ ಸವಾಲು ಎದುರಿಸುವುದು ಅಷ್ಟು ಸುಲಭದ ಮಾತಲ್ಲ

VISTARANEWS.COM


on

ESP vs CRO
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬರ್ಲಿನ್‌: ಇಂದು ನಡೆಯುವ ಯುರೋ ಕಪ್(Euro 2024)​ ಲೀಗ್​ನಲ್ಲಿ​ 2 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಹಂಗೆರಿ ಮತ್ತು ಸ್ವಿಜರ್ಲೆಂಡ್‌(Hungary vs Switzerland) ತಂಡಗಳು ಮುಖಾಮುಖಿಯಾದರೆ, ದ್ವಿತೀಯ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಸ್ಪೇನ್‌(ESP vs CRO) ಮತ್ತು ಕ್ರೊವೇಷಿಯಾ ಸೆಣಸಾಟ(euro cup) ನಡೆಸಲಿವೆ. ಈ ಪಂದ್ಯ ಜಿದ್ದಾಜಿದ್ದಿನಿಂದ ಸಾಗುವ ನಿರೀಕ್ಷೆ ಮಾಡಬಹುದು.

ಪೆದ್ರಿ ಗೊನ್ಸಾಲೆಝ್ ಅವರು ಲಯಕ್ಕೆ ಮರಳಿರುವುದು ಸ್ಪೇನ್‌ ತಂಡಕ್ಕೆ ಆನೆ ಬಲ ಬಂದಂತಾಗಿದೆ. 38 ವರ್ಷ ವಯಸ್ಸಿನ ಮಿಡ್‌ಫೀಲ್ಡರ್‌ ಪೆದ್ರಿ ಅವರ ಆಟವು ಸ್ಪೇನ್ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. 2020ರಲ್ಲಿ ಸ್ಪೇನ್ ತಂಡವು ಈ ಕೂಟದಲ್ಲಿ ಸೆಮಿಫೈನಲ್ ತಲುಪುವಲ್ಲಿ ಪೆದ್ರಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮಂಡಿ ಸ್ನಾಯುರಜ್ಜು ಗಾಯದಿಂದ ಹಿನ್ನಡೆ ಅನುಭವಿಸಿದ್ದರು. ಸದ್ಯ ಉತ್ತಮ ಲಯದಲ್ಲಿರುವ ಅವರು ಇಂದಿನ ಪಂದ್ಯದಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ತೋರುವ ಆತ್ಮವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ Euro 2024 : ಸ್ಕಾಟ್ಲೆಂಡ್​ ವಿರುದ್ಧ ಜರ್ಮನಿಗೆ 5-1 ಗೋಲ್​ಗಳ ಭರ್ಜರಿ ವಿಜಯ

ಅತ್ತ ಕ್ರೊವೇಷಿಯಾ ಕೂಡ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ. ಖ್ಯಾತ ರಿಯಲ್ ಮ್ಯಾಡ್ರಿಡ್ ತಂಡದ ಮಿಡ್‌ಫೀಲ್ಡರ್‌ ಮಾಡ್ರಿಕ್, ಮಾಟಿಯೊ ಕೊವಾಸಿಕ್ ಮತ್ತು ಮಾರ್ಸೆಲೊ ಬ್ರಾಝೊವಿಕ್ ಅವರನ್ನೊಳಗೊಂಡ ತಂಡದ ಸವಾಲು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಮಿಡ್‌ಫೀಲ್ಡ್ ಆಗಿರುವ ಇವರೆಲ್ಲ ಚಿರತೆ ವೇಗದಲ್ಲಿ ಓಡಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಚಾಕಚಕ್ಯತೆ ಹೊಂದಿದ್ದಾರೆ. ಯುರೋ 2020ರ ಕೂಟದ 16ರ ಘಟ್ಟದ ಪಂದ್ಯದಲ್ಲಿ ಸ್ಪೇನ್‌ ಹೆಚ್ಚುವರಿ ಅವಧಿಯ ಆಟದಲ್ಲಿ ಕ್ರೊವೇಷಿಯಾ ಮೇಲೆ ಜಯಗಳಿಸಿತ್ತು. ಇದೀಗ ಅಂದಿನ ಸೋಲಿಗೆ ಈ ಬಾರಿ ಸೇಡು ತೀರಿಸುವ ತವಕದಲ್ಲಿದೆ.

ಸ್ಕಾಟ್ಲೆಂಡ್​ ವಿರುದ್ಧ ಜರ್ಮನಿಗೆ ಭರ್ಜರಿ ಗೆಲುವು


ಯೂರೊ ಕಪ್​ ಫುಟ್ಬಾಲ್​​ 2024ನೇ (Euro 2024) ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಜರ್ಮನಿಯ ವಿರುದ್ಧ 5-1 ಗೋಲ್​ಗಳ ಭರ್ಜರಿ ಗೆಲುವು ದಾಖಲಿಸಿತು. ಜರ್ಮನಿ ಪರ ಅಮೋಘ ಗೆಲುವಿನಲ್ಲಿ ಜಮಾಲ್ ಮುಸಿಯಾಲಾ, ನಿಕ್ಲಾಸ್ ಫುಲ್ಕ್ರುಗ್ ಮತ್ತು ಟೋನಿ ಕ್ರೂಸ್ ದೊಡ್ಡ ಪಾತ್ರ ವಹಿಸಿದರು. ಪಂದ್ಯದ 10ನೇ ನಿಮಿಷದಲ್ಲಿ ಫ್ಲೋರಿಯನ್ ವಿರ್ಟ್ಜ್ ಜರ್ಮನಿ ಪರ ಗೋಲ್ ಬಾರಿಸಿದ್ದರೆ, ಮೊದಲಾರ್ಧ ಮುಗಿಯುವುದರೊಳಗೆ ಜಮಾಲ್ ಮುಸಿಯಾಲಾ, ಕೈ ಹ್ಯಾವರ್ಟ್ಜ್ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು.

ಅಲಿಯನ್ಸ್ ಅರೆನಾದಲ್ಲಿ ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಮೊದಲಾರ್ಧದಲ್ಲಿ ರೆಡ್ ಕಾರ್ಡ್ ಪಡೆದುಕೊಂಡಿತು. ಹೀಗಾಗಿ ಬಲಿಷ್ಠ ಎದುರಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಬದಲಿ ಆಟಗಾರರಾದ ನಿಕ್ಲಾಸ್ ಫುಲ್ಕ್ರುಗ್ ಮತ್ತು ಎಮ್ರೆ ಕ್ಯಾನ್ ಅವರ 2 ಗೋಲುಗಳನ್ನು ಗಳಿಸಿದ ಕಾರಣ 1-5 ಗೋಲುಗಳ ಅಂತರದಲ್ಲಿ ಸೋಲು ಕಂಡಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Viral Video: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ಪಾಕ್​ ವೇಗಿ; ತಡೆದು ನಿಲ್ಲಿಸಿದ ಪತ್ನಿ

Viral Video: ಅಭಿಮಾನಿಯ ಮಾತಿನಿಂದ ಸಿಟ್ಟುಗೊಂಡ ರೌಫ್​ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಅವರ ಪತ್ನಿ ಮತ್ತು ಮ್ಯಾನೇಜರ್​ಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Viral Video
Koo

ಫ್ಲೋರಿಡಾ: ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್(Haris Rauf) ಅವರು ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲು ಮುಂದಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video)​ ಆಗಿದೆ. ಹಲ್ಲೆಗೆ ಮುಂದಾದ ಹ್ಯಾರಿಸ್ ರೌಫ್(Angry Haris Rauf) ಅವರನ್ನು ಅವರ ಪತ್ನಿ ತಡೆದು ನಿಲ್ಲಿಸಿದ್ದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

ಈಗಾಗಲೇ ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನ ತಂಡದ ಆಟಗಾರರು ಫ್ಲೋರಿಡಾದಲ್ಲಿ ಕೆಲ ದಿನಗಳ ಕಾಲ ಎಂಜಾಯ್​ ಮಾಡಲಿದ್ದಾರೆ. ಹ್ಯಾರಿಸ್ ರೌಫ್ ಕೂಡ ತಮ್ಮ ಪತ್ನಿ ಜತೆ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ ತಾವು ತಂಗಿದ್ದ ಹೋಟೆಲ್​ಗೆ ಹೋಗುತ್ತಿದ್ದಾಗ ಅಭಿಮಾನಿಯೊಬ್ಬ ನಿಮ್ಮ ಜತೆಗೊಂದು ಫೋಟೊ ಬೇಕಿತ್ತು ಎಂದು ಕೇಳಿದ್ದಾನೆ. ಈ ವೇಳೆ ರೌಫ್​, ನೀನು ಭಾರತೀಯನಾಗಿರಬೇಕು ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಭಿಮಾನಿ ನಾನು ಕೂಡ ಪಾಕಿಸ್ತಾನ ಮೂಲದವನೇ ಎಂದು ಹೇಳಿ ಬಳಿಕ ಏನೋ ಹೇಳಿದ್ದಾನೆ.

ಅಭಿಮಾನಿಯ ಮಾತಿನಿಂದ ಸಿಟ್ಟುಗೊಂಡ ರೌಫ್​ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಪತ್ನಿ ರೌಫ್​ ಅವರನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಪಟ್ಟರೂ ಕೂಡ ರೌಫ್​ ತಪ್ಪಿಸಿಕೊಂಡು ಹಲ್ಲೆಗೆ ಮುಂದಾದರು. ತಕ್ಷಣ ರೌಫ್​ ಅವರ ಮ್ಯಾನೇಜರ್​ ಹಾಗು ಕೆಲ ಸಿಬ್ಬಂದಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಪತ್ನಿ ಕೂಡ ಅವರ ಕೈಗಳನ್ನು ಹಿಡಿದು ಹಲ್ಲೆ ಮಾಡದಂತೆ ಮನವಿ ಮಾಡುತ್ತಲೇ ಅವರನ್ನು ಸಮಾಧಾನ ಪಡೆಸಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ರೌಫ್​ ಅವರ ಈ ದರ್ಪವನ್ನು ಅನೇಕ ನೆಟ್ಟಿಗರು ಮತ್ತು ಪಾಕ್​ ಅಭಿಮಾನಿಗಳು ಖಂಡಿಸಿದ್ದಾರೆ. ಇದೇ ದರ್ಪವನ್ನು ಟಿ20 ವಿಶ್ವಕಪ್​ ಪಂದ್ಯದಲ್ಲಿ ತೋರಿಸುತ್ತಿದ್ದರೆ ನಿಮಗೆ ಈ ಗತಿ ಬರುತ್ತಿರಲಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ T20 World Cup 2024: ಸೂಪರ್​-8 ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ; ಅಭ್ಯಾಸದ ವೇಳೆ ಸ್ಟಾರ್​ ಆಟಗಾರನಿಗೆ ಗಾಯ

ಪಾಕ್​ ಆಟಗಾರರ ವೇತನ ಕಡಿತ!


ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ(T20 World Cup 2024) ಕಳಪೆ ಪ್ರದರ್ಶನ ತೋರಿದ ಕಾರಣ ಆಟಗಾರರ ವಾರ್ಷಿಕ ಸಂಭಾವನೆಯಲ್ಲಿ ಕಡಿತ ಮಾಡಲು ಪಾಕ್​ ಕ್ರಿಕೆಟ್​ ಮಂಡಳಿ(PCB) ನಿರ್ಧರಿಸಿದೆ. ಪಾಕ್​ ಮಾಧ್ಯಮ ವರದಿಗಳ ಪ್ರಕಾರ ಮಾಜಿ ಆಟಗಾರರು ಹಾಗೂ ಪಿಸಿಬಿ ಸದಸ್ಯರು ಆಟಗಾರರ ಸಂಬಳ ಕಡಿತಗೊಳಿಸಲು ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಮೊಹ್ಸಿನ್​ ನಖ್ವಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಪಾಕ್​ ಕ್ರಿಕೆಟ್​ ಮಂಡಳಿ ಕೂಡ ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿದ್ದು ಉನ್ನತ ಮಟ್ಟದ ಸಭೆ ನಡೆಸಿ ಆಟಗಾರರ ಕೇಂದ್ರೀಯ ಗುತ್ತಿಗೆಯನ್ನು ಮರು ಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಾಕ್​ ತಂಡದ ವಿರುದ್ಧ ದೇಶದ್ರೋಹದ ಕೇಸ್‌


ನಿರಾಸದಾಯಕ ಪ್ರದರ್ಶನ ತೋರಿರುವ ಪಾಕಿಸ್ತಾನ ತಂಡದ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶದ್ರೋಹ ಕೇಸ್‌ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂನ್​ 21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್‌ ತಂಡದ ಕಳಪೆ ಪ್ರದರ್ಶನದಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅರ್ಜಿದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಗಿ ವರದಿಯಾಗಿದೆ.

Continue Reading

ಕ್ರೀಡೆ

SA vs USA: ನಾಳೆ ಮೊದಲ ಸೂಪರ್​-8 ಪಂದ್ಯ; ಅಮೆರಿಕ ಸವಾಲಿಗೆ ಹರಿಣ ಪಡೆ ಸಿದ್ಧ

SA vs USA: ಅಮೆರಿಕ ಪರ ಕನ್ನಡಿಗ ನಾಸ್ತುಷ್‌ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್​ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ಮೊನಾಂಕ್ ಪಟೇಲ್, ವಿಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಆರನ್ ಜೋನ್ಸ್ ಕೂಡ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ.

VISTARANEWS.COM


on

SA vs USA
Koo

ಆಂಟಿಗುವಾ: ಹಾಲಿ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಲೀಗ್​ ಹಂತದ ಪಂದ್ಯಗಳು ಮುಕ್ತಾಯ ಕಂಡಿದ್ದು ಇನ್ನು ಸೂಪರ್​-8 ಪಂದ್ಯಗಳು(T20 World Cup Super 8 Group) ಆರಂಭಗೊಳ್ಳಲಿದೆ. ನಾಳೆ(ಬುಧವಾರ) ನಡೆಯುವ ಮೊದಲ ಸೂಪರ್​-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(south africa) ಮತ್ತು ಆತಿಥೇಯ ಅಮೆರಿಕ(United States) ಅದೃಷ್ಠ(SA vs USA) ಪರೀಕ್ಷೆಗೆ ಇಳಿಯಲಿದೆ. ಇದು ಇತ್ತಂಡಗಳ ನಡುವಣ ಮೊದಲ ಕ್ರಿಕೆಟ್​ ಮುಖಾಮುಖಿಯೂ ಹೌದು.

ಹರಿಣ ಪಡೆ ಬಲಿಷ್ಠ ಆದರೆ…

ಲೀಗ್​ ಹಂತದಲ್ಲಿ ದಕ್ಷಿಣ ಆಫ್ರಿಕಾ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯ ಎನಿಸಿಕೊಂಡಿದ್ದರೂ ಕೂಡ ಅಮೆರಿಕವನ್ನು ಕಡೆಗಣಿಸುವಂತಿಲ್ಲ. ಬಲಿಷ್ಠ ಪಾಕಿಸ್ತಾನಕ್ಕೆ ನೀರು ಕುಡಿಸಿದ್ದು ಮತ್ತು ಭಾರತಕ್ಕೆ ತೀವ್ರ ಪೈಪೋಟಿ ನೀಡಿದ್ದನ್ನು ಮರೆಯುವಂತಿಲ್ಲ. ಅಮೆರಿಕ ಕ್ರಿಕೆಟ್​ ಲೋಕಕ್ಕೆ ಹೊಸ ತಂಡವಾಗಿದ್ದರೂ ಕೂಡ ಆಟಗಾರರು ಮಾತ್ರ ಹೊಸಬರಲ್ಲ. ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​ ತಂಡದ ಪರ ಆಡಿ ಈಗ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಆಟಗಾರರಿಗೆ ಕ್ರಿಕೆಟ್​ ಹೊಸತಲ್ಲ. ಎಲ್ಲರು ಉತ್ಕೃಷ್ಟ ಮಟ್ಟದ ಆಟವನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ.

ದಕ್ಷಿಣ ಆಫ್ರಿಕಾ ಆಡಿದ ಎಲ್ಲ ಲೀಗ್​ ಪಂದ್ಯಗಳಲ್ಲಿಯೂ ಪ್ರಯಾಸದ ಗೆಲುವು ಸಾಧಿಸಿತ್ತು. ಒಮ್ಮೆಯೂ 120 ಗಡಿ ದಾಟಿರಲಿಲ್ಲ. ಹಾಗಂತ ದಕ್ಷಿಣ ಆಫ್ರಿಕಾಗೆ ದೊಡ್ಡ ಮೊತ್ತ ಬಾರಿಸುವ ಸಾಮರ್ಥ ಇಲ್ಲವೆಂದಲ್ಲ. ಅದು ಆಡಿದ ಪಿಚ್ ನ್ಯೂಯರ್ಕ್​ನ ಅಪಾಯಕಾರಿ ನಾಸೌ ಕೌಂಟಿ ಸ್ಟೇಡಿಯಂನ ಪಿಚ್​ನಲ್ಲಿ. ಇಲ್ಲಿ ಹರಣಿ ಪಡೆ ಮಾತ್ರವಲ್ಲ ಆಡಿದ ಎಲ್ಲ ತಂಡಗಳು ಕೂಡ 120ಕ್ಕಿಂತ ಅಧಿಕ ಮೊತ್ತವನ್ನು ಬಾರಿಸಿಲ್ಲ. ಪಾಕ್​ ವಿರುದ್ಧ ಭಾರತ 119 ರನ್​ ಬಾರಿಸಿದ್ದೇ ಗರಿಷ್ಠ ಮೊತ್ತ. ಇದೀಗ ಸೂಪರ್​-8 ಪಂದ್ಯಗಳನ್ನು ವಿಂಡೀಸ್​ನಲ್ಲಿ ಆಡುತ್ತಿರುವ ಕಾರಣ ಮಾರ್ಕ್ರಮ್​ ಪಡೆ ದೊಡ್ಡ ಮೊತ್ತವನ್ನು ಪೇರಿಸುವ ಸಾಧ್ಯತೆ ಇದೆ.

ಲೀಗ್​ ಹಂತದ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಕ್ವಿಂಟನ್​ ಡಿ ಕಾಕ್​, ನಾಯಕ ಐಡೆನ್​ ಮಾರ್ಕ್ರಮ್,​ ರೀಜಾ ಹೆಂಡ್ರಿಕ್ಸ್ ಸೂಪರ್​-8 ಪಂದ್ಯದಲ್ಲಾದರೂ ನಿರೀಕ್ಷಿತ ಬ್ಯಾಟಿಂಗ್​ ನಡೆಸುವ ಅನಿವಾರ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಡೇವಿಡ್​ ಮಿಲ್ಲರ್​ ಮತ್ತು ಹೆನ್ರಿಚ್​ ಕ್ಲಾಸೆನ್​ ಸಿಡಿದು ನಿಂತು ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ರಬಾಡ, ಜಾನ್ಸೆನ್​, ಮಹಾರಾಜ್​, ನೋರ್ಜೆ ಅವರನ್ನೊಳಗೊಂಡ ಬೌಲಿಂಗ್​ ವಿಭಾಗ ಘಾತಕವಾಗಿದೆ.

ಇದನ್ನೂ ಓದಿ T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

ಅಮೆರಿಕ ಪರ ಕನ್ನಡಿಗ ನಾಸ್ತುಷ್‌ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್​ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ಮೊನಾಂಕ್ ಪಟೇಲ್, ವಿಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಆರನ್ ಜೋನ್ಸ್ ಕೂಡ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ವಿಂಡೀಸ್​ ಪಿಚ್​ನಲ್ಲಿ ಆಡಿದ ಅನುಭವ ಅಷ್ಟಾಗಿ ಇರದ ಕಾರಣ ನಾಳಿನ ಪಂದ್ಯದಲ್ಲಿ ಹೇಗೆ ಪ್ರದರ್ಶನ ತೋರಬಹುದು ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.

ಸಂಭಾವ್ಯ ತಂಡ


ಅಮೆರಿಕ: ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್‌ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೀ), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಆನ್ರಿಚ್ ನೋರ್ಜೆ, ಒಟ್ನೀಲ್ ಬಾರ್ಟ್‌ಮನ್.

Continue Reading

ಕ್ರೀಡೆ

Igor Stimac sacked: ಭಾರತದ ಫುಟ್ಬಾಲ್​ ಕೋಚ್​ ಹುದ್ದೆಯಿಂದ ಸ್ಟಿಮಾಕ್‌ ಕಿಕ್​ ಔಟ್​; ಕಾರಣವೇನು?​

Igor Stimac sacked: ಸ್ಟಿಮಾಕ್‌ರ 5 ವರ್ಷದ ಮಾರ್ಗದರ್ಶನದಲ್ಲಿ ಭಾರತ ಎರಡು ಸ್ಯಾಫ್‌ ಚಾಂಪಿಯನ್‌ಶಿಪ್‌, ಒಂದು ಇಂಟರ್‌ ಕಾಂಟಿನೆಂಟಲ್‌ ಕಪ್‌ ಹಾಗೂ ಒಂದು ತ್ರಿಕೋನ ಸರಣಿಯನ್ನು ಜಯಿಸಿದೆ. ಜತೆಗೆ 5 ವರ್ಷಗಳ ಬಳಿಕ ಫಿಫಾ ಶ್ರೇಯಾಂಕದಲ್ಲಿ ಭಾರತ 100ರ ಒಳಗಡೆ ಸ್ಥಾನ ಪಡೆಯುವಂತಾಗಿತ್ತು.

VISTARANEWS.COM


on

Igor Stimac sacked
Koo

ನವದೆಹಲಿ: ಭಾರತ ಫುಟ್​ಬಾಲ್​ ತಂಡದ ಮುಖ್ಯ ಕೋಚ್​ ಐಗರ್‌ ಸ್ಟಿಮಾಕ್‌(Igor Stimac sacked) ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಲಾಗಿದೆ. 2026ರ ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿ ಅರ್ಹತೆ ಪಡೆಯುವಲ್ಲಿ ವಿಫಲವಾದ ನಿಟ್ಟಿನಲ್ಲಿ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌ (ಎಐಎಫ್‌ಎಫ್) ಈ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಎಐಎಫ್‌ಎಫ್ ಮಾಧ್ಯಮ ಪ್ರಕಟಣೆ ನೀಡಿದ್ದು, ತಕ್ಷಣದಿಂದಲೇ ಸ್ಟಿಮಾಕ್‌ರ ಸೇವೆ ರದ್ದುಗೊಳಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

2019ರಲ್ಲಿ ಪ್ರಧಾನ ಕೋಚ್‌ ಆಗಿ ನೇಮಕಗೊಂಡಿದ್ದ ಸ್ಟಿಮಾಕ್‌ ಅವರ ಕೋಚಿಂಗ್​ ಅವಧಿ ಕಳೆದ ವರ್ಷವೇ ಮುಕ್ತಾಯಗೊಂಡಿತ್ತು. ಆದರೆ, ಎಐಎಫ್‌ಎಫ್(All India Football Federation) ಅವರ ಗುತ್ತಿಗೆ ಅವಧಿಯನ್ನು ಒಂದು ವರ್ಷ ಸಮಯಕ್ಕೆ ವಿಸ್ತರಿಸಿತ್ತು. ಸ್ಟಿಮಾಕ್‌ರ 5 ವರ್ಷದ ಮಾರ್ಗದರ್ಶನದಲ್ಲಿ ಭಾರತ ಎರಡು ಸ್ಯಾಫ್‌ ಚಾಂಪಿಯನ್‌ಶಿಪ್‌, ಒಂದು ಇಂಟರ್‌ ಕಾಂಟಿನೆಂಟಲ್‌ ಕಪ್‌ ಹಾಗೂ ಒಂದು ತ್ರಿಕೋನ ಸರಣಿಯನ್ನು ಜಯಿಸಿದೆ. ಜತೆಗೆ 5 ವರ್ಷಗಳ ಬಳಿಕ ಫಿಫಾ ಶ್ರೇಯಾಂಕದಲ್ಲಿ ಭಾರತ 100ರ ಒಳಗಡೆ ಸ್ಥಾನ ಪಡೆಯುವಂತಾಗಿತ್ತು. 2 ವಾರ ಹಿಂದೆ ನಡೆದಿದ್ದ ಕತಾರ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಸೋತು, ವಿಶ್ವಕಪ್‌ ಅರ್ಹತಾ ಟೂರ್ನಿಯ 3ನೇ ಸುತ್ತಿಗೆ ಪ್ರವೇಶಿಸಲು ವಿಫಲವಾಗಿತ್ತು. ಹೀಗಾಗಿ ಸ್ಟಿಮಾಕ್‌ ತಲೆದಂಡವಾಗಿದೆ. ನೂತನ ಕೋಚ್​ಗಾಗಿ ಎಐಎಫ್‌ಎಫ್ ಹುಟುಕಾಟ ಆರಂಭಿಸಿದೆ. ಶೀಘ್ರದಲ್ಲೇ ನೂತನ ಕೋಚ್​ ಆಯ್ಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ Sunil Chhetri : ಕಣ್ಣೀರು ಹಾಕುತ್ತಲೇ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿ ವಿದಾಯ ಹೇಳಿದ ಸುನಿಲ್​ ಛೆಟ್ರಿ

ಕತಾರ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಭಾರತ 2-1 ಗೋಲುಗಳಿಂದ ಸೋಲನುಭವಿಸಿದ್ದು, ಇದರ ಪರಿಣಾಮವಾಗಿ ರಾಷ್ಟ್ರೀಯ ತಂಡವು ಕುವೈತ್ ಮತ್ತು ಅಫ್ಘಾನಿಸ್ತಾನವನ್ನ ಒಳಗೊಂಡ ಗುಂಪಿನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಕತಾರ್​ ವಿರುದ್ಧದ ಪಂದ್ಯ ಸುನೀಲ್​ ಛೆಟ್ರಿಗೆ ವಿದಾಯದ ಪಂದ್ಯವಾಗಿತ್ತು.

ಗಂಭೀರ ಗಾಯಗೊಂಡ ಎಂಬಾಪೆ


ಡಸೆಲ್ಡಾರ್ಫ್ ಅರೆನಾದಲ್ಲಿ ಮಂಗಳವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ 1-0 ಗೋಲುಗಳಿಂದ ಆಸ್ಟ್ರಿಯಾ ವಿರುದ್ಧ ಗೆದ್ದು ಯುರೋ ಕಪ್​ ಫುಟ್ಬಾಲ್(Euro 2024)​ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ. ಆದರೆ, ಇದೇ ಪಂದ್ಯದಲ್ಲಿ ಫ್ರಾನ್ಸ್(Austria vs France)​ ತಂಡದ ಸ್ಟಾರ್​ ಆಟಗಾರ ಹಾಗೂ ನಾಯಕ ಕಿಲಿಯನ್‌ ಎಂಬಾಪೆ(Kylian Mbappe) ಅವರು ಮೂಗಿನ ಗಂಭೀರ ಗಾಯಕ್ಕೆ(Mbappe suffers nose injury) ತುತ್ತಾಗಿದ್ದು ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

ಪಂದ್ಯದ 86ನೇ ನಿಮಿಷದಲ್ಲಿ ಎದುರಾಳಿ ತಂಡದ ಕೆವಿನ್ ಡಾನ್ಸೊ ಅವರ ಕಾಲು ಮೂಗಿಗೆ ಬಡಿದ ಪರಿಣಾಮ ಎಂಬಪೆ ಗಾಯಗೊಂಡರು. ಈ ವೇಳೆ ಅವರ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ತಕ್ಷಣ ವೈದ್ಯರು ಅವರನ್ನು ಮೈದಾನದಿಂದ ಹೊರಗಡೆ ತಂದು ಚಿಕಿತ್ಸೆ ನೀಡಿದ್ದಾರೆ. ಸದ್ಯ ಅವರಿಗೆ ಯಾವುದೇ ದೊಡ್ಡ ಪ್ರಮಾಣದ ಗಾಯ ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಆಸ್ಟ್ರೀಯಾ ವಿರುದ್ಧದ ಪಂದ್ಯದಲ್ಲಿ ಎಂಬಾಪೆಗೆ 2 ಗೋಲು ಬಾರಿಸುವ ಅವಕಾಶವಿದ್ದರೂ ಕೂಡ ಇದರಲ್ಲಿ ಅವರು ಯಶಸ್ಸು ಕಾಣಲಿಲ್ಲ.

Continue Reading

ಕ್ರೀಡೆ

Austria vs France: ಗಂಭೀರ ಗಾಯಗೊಂಡ ಎಂಬಾಪೆ; ಮುಂದಿನ ಪಂದ್ಯಕ್ಕೆ ಅನುಮಾನ

Austria vs France: ಪಂದ್ಯದ 86ನೇ ನಿಮಿಷದಲ್ಲಿ ಎದುರಾಳಿ ತಂಡದ ಕೆವಿನ್ ಡಾನ್ಸೊ ಅವರ ಕಾಲು ಮೂಗಿಗೆ ಬಡಿದ ಪರಿಣಾಮ ಎಂಬಪೆ ಗಾಯಗೊಂಡರು. ಈ ವೇಳೆ ಅವರ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ.

VISTARANEWS.COM


on

Austria vs France
Koo

ಮ್ಯೂನಿಚ್: ಡಸೆಲ್ಡಾರ್ಫ್ ಅರೆನಾದಲ್ಲಿ ಮಂಗಳವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ 1-0 ಗೋಲುಗಳಿಂದ ಆಸ್ಟ್ರಿಯಾ ವಿರುದ್ಧ ಗೆದ್ದು ಯುರೋ ಕಪ್​ ಫುಟ್ಬಾಲ್(Euro 2024)​ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ. ಆದರೆ, ಇದೇ ಪಂದ್ಯದಲ್ಲಿ ಫ್ರಾನ್ಸ್(Austria vs France)​ ತಂಡದ ಸ್ಟಾರ್​ ಆಟಗಾರ ಹಾಗೂ ನಾಯಕ ಕಿಲಿಯನ್‌ ಎಂಬಾಪೆ(Kylian Mbappe) ಅವರು ಮೂಗಿನ ಗಂಭೀರ ಗಾಯಕ್ಕೆ(Mbappe suffers nose injury) ತುತ್ತಾಗಿದ್ದು ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

ಪಂದ್ಯದ 86ನೇ ನಿಮಿಷದಲ್ಲಿ ಎದುರಾಳಿ ತಂಡದ ಕೆವಿನ್ ಡಾನ್ಸೊ ಅವರ ಕಾಲು ಮೂಗಿಗೆ ಬಡಿದ ಪರಿಣಾಮ ಎಂಬಪೆ ಗಾಯಗೊಂಡರು. ಈ ವೇಳೆ ಅವರ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ತಕ್ಷಣ ವೈದ್ಯರು ಅವರನ್ನು ಮೈದಾನದಿಂದ ಹೊರಗಡೆ ತಂದು ಚಿಕಿತ್ಸೆ ನೀಡಿದ್ದಾರೆ. ಸದ್ಯ ಅವರಿಗೆ ಯಾವುದೇ ದೊಡ್ಡ ಪ್ರಮಾಣದ ಗಾಯ ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಆಸ್ಟ್ರೀಯಾ ವಿರುದ್ಧದ ಪಂದ್ಯದಲ್ಲಿ ಎಂಬಾಪೆಗೆ 2 ಗೋಲು ಬಾರಿಸುವ ಅವಕಾಶವಿದ್ದರೂ ಕೂಡ ಇದರಲ್ಲಿ ಅವರು ಯಶಸ್ಸು ಕಾಣಲಿಲ್ಲ.

ಫ್ರಾಂಕ್​ಫರ್ಟ್​: ಸೋಮವಾರ ರಾತ್ರಿ ನಡೆದ ಯುರೋ ಕಪ್​ ಫಟ್​​ಬಾಲ್​ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶವೊಂದು ದಾಖಲಾಯಿತು. ಬೆಲ್ಜಿಯಂ ತಂಡದ ಸ್ಟಾರ್​ ಆಟಗಾರ ರೊಮೆಲೂ ಲುಕಾಕೊ 2 ಗೋಲು ಬಾರಿಸಿದರೂ ಕೂಡ ಇದು ಅಮಾನ್ಯಗೊಂಡು ಸ್ಲೋವಾಕಿಯಾ ವಿರುದ್ಧ 1-0 ಅಂತರದ ಸೋಲು ಕಂಡಿತು. ಈ ಸೋಲಿನಿಂದ ಬೆಲ್ಜಿಯಂನ ಸತತ 15 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್​ ಬಿದ್ದಿದೆ.

ಇದನ್ನೂ ಓದಿ Euro 2024: ಕ್ರೊವೇಷಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್

ಪಂದ್ಯ ಆರಂಭಗೊಂಡ 7ನೇ ನಿಮಿಷದಲ್ಲಿ ಸ್ಲೋವಾಕಿಯಾ ಆಟಗಾರ ಇವಾನ್​ ಸ್ಕ್ರಾನ್ಜ್​ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಲುಕಾಕು 55 ಹಾಗೂ 86ನೇ ನಿಮಿಷಲ್ಲಿ 2 ಗೋಲು ಬಾರಿಸಿದರು. ಆದರೆ ವಿಎಆರ್​ ಪರಿಶೀಲನೆಯಲ್ಲಿ 2 ಗೋಲುಗಳು ಅಮಾನ್ಯಗೊಂಡವು. ರೆಫರಿ ಆಫ್ ಸೈಡ್ ಎಂದು ಘೋಷಿಸುವ ಮೂಲಕ ಈ ಗೋಲುಗಳನ್ನು ನಿರಾಕರಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ರೊಮೇನಿಯಾ ತಂಡ ಉಕ್ರೇನ್​ ವಿರುದ್ಧ 3-0 ಅಂತರದ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಯುರೋ ಕಪ್​ನಲ್ಲಿ ರೊಮೇನಿಯಾ ದಾಖಲಿಸಿದ 2ನೇ ಗೆಲುವು ಇದಾಗಿದೆ. ಪಂದ್ಯದ 29ನೇ ನಿಮಿಷದಲ್ಲಿ ನಾಯಕ ನಿಕೋಲೇ ಸ್ಟಾನ್ಸಿಯು ಗೋಲು ಬಾರಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ರಜ್ವಾನ್​ ಮರಿನ್​(53) ಹಾಗೂ ಡೆನಿಸ್​ ಮಿಹೈ ಡ್ರಾಗಸ್​(57) ಗೋಲು ಬಾರಿಸಿ ಮಿಂಚಿದರು. ಎದುರಾಳಿ ಉಕ್ರೇನ್​ಗೆ ಕನಿಷ್ಠ ಒಂದು ಗೋಲು ಕೂಡ ಬಾರಿಸಲು ಸಾಧ್ಯವಾಗಲಿಲ್ಲ. 24 ವರ್ಷಗಳ ಹಿಂದೆ ಇಂಗ್ಲೆಂಡ್​ ವಿರುದ್ಧ 3-2 ಅಂತರದ ಗೆಲುವು ಸಾಧಿಸಿದ ಬಳಿಕ ಯುರೊ ಕಪ್​ನಲ್ಲಿ ರೊಮೇನಿಯಾಗೆ ಒಲಿದ ಮೊದಲ ಗೆಲುವು ಇದಾಗಿದೆ. ಒಟ್ಟಾರೆ 2 ಗೆಲುವು.

Continue Reading
Advertisement
Electric Shock
ವಿಜಯಪುರ10 mins ago

Electric shock : ಮೀನು ಹಿಡಿಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಬಾಲಕರಿಬ್ಬರು ಮೃತ್ಯು; ಕುಟುಂಬಸ್ಥರ ಆಕ್ರಂದನ

Woman having headache. stressed, Migraine, World Brain Tumor day
ಆರೋಗ್ಯ16 mins ago

Migraine Problem: ಮೈಗ್ರೇನ್‌ ಉಪಶಮನಕ್ಕೆ ರೋಸ್‌ಮೆರಿ ಸುಗಂಧ ತೈಲ ಮದ್ದು!

Indian Women
ವಿದೇಶ30 mins ago

ಭಾರತದಿಂದ ಅಮೆರಿಕಕ್ಕೆ ತೆರಳಿ, 29 ವರ್ಷದ ಯುವತಿಯನ್ನು ಕೊಂದ ಪಂಜಾಬ್‌ ವ್ಯಕ್ತಿ; ಇಷ್ಟೇಕೆ ಸೇಡು?

Pavithra Gowda
ಪ್ರಮುಖ ಸುದ್ದಿ32 mins ago

Pavithra Gowda: ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಅಸ್ವಸ್ಥ; ಆಸ್ಪತ್ರೆಗೆ ಶಿಫ್ಟ್‌

International Yoga Day 2024
ಫ್ಯಾಷನ್47 mins ago

International Yoga Day 2024: ಯುವತಿಯರ ಯೋಗಾಭ್ಯಾಸಕ್ಕೆ ಸಾಥ್‌ ನೀಡುವ 3 ಶೈಲಿಯ ಫ್ಯಾಷನ್‌ವೇರ್ಸ್

wild animals Attack
ಕೊಡಗು52 mins ago

Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

Viral Video
ಕ್ರಿಕೆಟ್1 hour ago

Viral Video: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ಪಾಕ್​ ವೇಗಿ; ತಡೆದು ನಿಲ್ಲಿಸಿದ ಪತ್ನಿ

Kempegowda Jayanti
ಕರ್ನಾಟಕ1 hour ago

Kempegowda Jayanti: ಬೆಂಗಳೂರಲ್ಲಿ ಜೂನ್ 27ಕ್ಕೆ ಕೆಂಪೇಗೌಡ ಜಯಂತಿ: ಡಿಸಿಎಂ ಡಿ.ಕೆ.ಶಿವಕುಮಾರ್‌

Train Accident
ದೇಶ1 hour ago

Train Accident: ಸಿಬ್ಬಂದಿ ನಿರ್ಲಕ್ಷ್ಯ, ಸಿಗ್ನಲ್‌ ದೋಷ; ಬಂಗಾಳ ರೈಲು ಅಪಘಾತಕ್ಕೇನು ಕಾರಣ?

Mumbai News
ದೇಶ2 hours ago

‘ಯಾಕ್‌ ಹೀಗ್‌ ಮೋಸ ಮಾಡ್ದೆ’ ಎನ್ನುತ್ತಲೇ ಪ್ರೇಯಸಿಯನ್ನು ನಡು ರಸ್ತೆಯಲ್ಲಿ ಬಡಿದು ಕೊಂದ ಪ್ರೇಮಿ; Video ಇದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌