Fifa World Cup | ಬ್ರೆಜಿಲ್ ತಂಡದ ನಾಯಕ ನೇಮರ್‌ಗೆ ಗಾಯ; ಮುಂದಿನ ಪಂದ್ಯಕ್ಕೆ ಅನುಮಾನ! - Vistara News

ಕ್ರೀಡೆ

Fifa World Cup | ಬ್ರೆಜಿಲ್ ತಂಡದ ನಾಯಕ ನೇಮರ್‌ಗೆ ಗಾಯ; ಮುಂದಿನ ಪಂದ್ಯಕ್ಕೆ ಅನುಮಾನ!

ಸರ್ಬಿಯಾ ವಿರುದ್ಧದ ಶುಕ್ರವಾರದ ಫಿಫಾ ವಿಶ್ವ ಕಪ್‌ ಟೂರ್ನಿಯ ಪಂದ್ಯದಲ್ಲಿ ಬ್ರೆಜಿಲ್‌ ತಂಡದ ಆಟಗಾರ ನೇಮರ್‌ ಗಾಯಗೊಂಡಿದ್ದು ಮುಂದಿನ ಪಂದ್ಯಕ್ಕೆ ಅನುಮಾನ ಎನ್ನಲಾಗಿದೆ.

VISTARANEWS.COM


on

fifa world cup
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೋಹಾ: ಸರ್ಬಿಯಾ ವಿರುದ್ಧ ಶುಕ್ರವಾರ ನಡೆದ ಫಿಫಾ ವಿಶ್ವ ಕಪ್‌ ಪಂದ್ಯದ ವೇಳೆ ಬ್ರೆಜಿಲ್ ತಂಡದ ನಾಯಕ ನೇಮರ್ ಪಾದದ ಉಳುಕಿಗೆ ಒಳಗಾಗಿದ್ದು ಮುಂದಿನ 48 ಗಂಟೆಗಳಲ್ಲಿ ವೈದ್ಯಕೀಯ ಪರೀಕ್ಷೆಯನ್ನು ಎದುರಿಸಲಿದ್ದಾರೆ ಎಂದು ತಂಡದ ವೈದ್ಯರು ತಿಳಿಸಿದ್ದಾರೆ.

“ನೇಮರ್‌ ಅವರನ್ನು ತಪಾಸಣೆ ನಡೆಸಲು ನಾವು 24 ರಿಂದ 48 ಗಂಟೆಗಳವರೆಗೆ ಕಾಯಬೇಕಾಗಿದೆ. ನಾವು ಯಾವುದೇ ಎಂಐಆರ್‌ ಸ್ಕ್ಯಾನ್ (MIR) ನಿಗದಿಪಡಿಸಿಲ್ಲ.‌ ನೇಮರ್ ಚೇತರಿಕೆಯ ಬಗ್ಗೆ ನಾವು ಯಾವುದೇ ಅವಸರದ ಹೇಳಿಕೆ ನೀಡಲು ಸಾಧ್ಯವಿಲ್ಲ” ಎಂದು ತಂಡದ ವೈದ್ಯ ರೋಡ್ರಿಗೊ ಲಾಸ್ಮಾರ್ ಹೇಳಿದ್ದಾರೆ.

ಪಂದ್ಯದ ಬಳಿಕ ನೇಮರ್ ಹೆಚ್ಚು ಕುಂಟುತ್ತಿರುವಂತೆ ಕಂಡುಬಂದಿದ್ದು, ಅವರ ಬಲ ಪಾದದಲ್ಲಿ ಊತ ಕಾಣಿಸಿಕೊಂಡಿದೆ. ಇದೀಗ ವೈದ್ಯರ ಹೇಳಿಕೆ ಗಮನಿಸುವಾಗ ತಂಡದ ನಾಯಕ ನೇಮರ್‌ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನುವಂತಿದೆ.

ಶುಕ್ರವಾರ ನಡೆದ ಸರ್ಬಿಯಾ ವಿರುದ್ಧದ ಈ ಪಂದ್ಯದಲ್ಲಿ ಬ್ರೆಜಿಲ್‌ ೨-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.

ಇದನ್ನೂ ಓದಿ | Fifa World Cup | ರಿಚರ್ಲಿಸನ್ ಸೂಪರ್​ ಮ್ಯಾನ್​ ಶೈಲಿಯ ಗೋಲಿಗೆ ಬೆದರಿದ ಸರ್ಬಿಯಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

RCB vs KKR: ಕೆಕೆಆರ್​ ಸವಾಲು ಸುಲಭದ್ದಲ್ಲ; ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ದಾಖಲೆ ಹೇಗಿದೆ?

RCB vs KKR: ಆರ್​ಸಿಬಿ ಮತ್ತು ಕೆಕೆಆರ್​ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಒಟ್ಟು 11 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ ಗೆದ್ದದ್ದು ಕೇವಲ 4 ಪಂದ್ಯಗಳು ಮಾತ್ರ. ಕೆಕೆಆರ್​ 7 ಪಂದ್ಯಗಳನ್ನು ಗೆದ್ದಿದೆ.

VISTARANEWS.COM


on

RCB
Koo

ಬೆಂಗಳೂರು: ಶುಕ್ರವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಕೆಕೆಆರ್​ ಮತ್ತು ಆರ್​ಸಿಬಿ(RCB vs KKR) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ವಿರಾಟ್​ ಕೊಹ್ಲಿ vs ಗೌತಮ್​ ಗಂಭೀರ್​ ಎಂದೇ ನಿರ್ಧರಿಸಲಾಗಿದೆ. ಇದಕ್ಕೆ ಕಾರಣ ಉಭಯ ಆಟಗಾರರ ನಡುವಣ ಹಾವು ಮುಂಗುಸಿಯಂತಹ ಕಚ್ಚಾಟ. ಹೀಗಾಗಿ ಈ ಪಂದ್ಯವನ್ನು ಹೈವೋಲ್ಟೇಜ್​ ಪಂದ್ಯ ಎಂದು ನಿರೀಕ್ಷಿಸಲಾಗಿದೆ. ಆದರೆ, ತವರಿನಲ್ಲಿ ಕೆಕೆಆರ್(RCB vs kkr chinnaswamy stadium records)​ ವಿರುದ್ಧ ಆರ್​ಸಿಬಿ ದಾಖಲೆ ಅಷ್ಟು ಉತ್ತಮವಾಗಿಲ್ಲ.

ಚಿನ್ನಸ್ವಾಮಿ ಮುಖಾಮುಖಿ ದಾಖಲೆ


ಆರ್​ಸಿಬಿ ಮತ್ತು ಕೆಕೆಆರ್​ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಒಟ್ಟು 11 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ ಗೆದ್ದದ್ದು ಕೇವಲ 4 ಪಂದ್ಯಗಳು ಮಾತ್ರ. ಕೆಕೆಆರ್​ 7 ಪಂದ್ಯಗಳನ್ನು ಗೆದ್ದಿದೆ. ಕಳೆದ 2016 ರಿಂದ ಚಿನ್ನಸ್ವಾಮಿಯಲ್ಲಿ ನಡೆದ 5 ಪಂದ್ಯಗಳಲ್ಲಿಯೂ ಕೆಕೆಆರ್​ ತಂಡವೇ ಗೆದ್ದು ಬೀಗಿದೆ. ಒಟ್ಟಾರೆಯಾಗಿ ಆರ್​ಸಿಬಿ ಈ ಸ್ಟೇಡಿಯಂನಲ್ಲಿ 94 ಪಂದ್ಯಗಳನ್ನು ಆಡಿ 45 ಗೆಲುವು ಮತ್ತು 44 ಸೋಲು ಕಂಡಿದೆ. ಕೆಕೆಆರ್​ ತಂಡ ಇಲ್ಲಿ 17 ಪಂದ್ಯಗಳನ್ನಾಡಿ 11ರಲ್ಲಿ ಜಯ ಸಾಧಿಸಿದೆ. ಆರ್​ಸಿಬಿಗೆ ಹೋಲಿಸಿದರೆ ಕೆಕೆಆರ್​ ತಂಡವೇ ಈ ಮೈದಾನದಲ್ಲಿ ಉತ್ತಮ ದಾಖಲೆ ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿಯೂ ಕೆಕೆಆರ್​ ತಂಡವೇ ಗೆಲ್ಲುವ ಫೇವರಿಟ್ ಆಗಿ ಗೋಚರಿಸಿದೆ.


ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲಿ ಎರಡು ಬಾರಿ ಜಗಳವಾಡಿದ್ದಾರೆ. ಎರಡೂ ಸಂದರ್ಭಗಳು ಐಪಿಎಲ್​ನಲ್ಲಾಗಿದ್ದವು. 2013 ರಲ್ಲಿ ಆಟಗಾರರಾಗಿ ಮತ್ತು ನಂತರ ಒಂದು ದಶಕದ ನಂತರ 2023 ರಲ್ಲಿ, ಆಯಾ ತಂಡಗಳ ಆಟಗಾರ ಮತ್ತು ತರಬೇತುದಾರರಾಗಿ ಅವರಿಬ್ಬರ ನಡುವೆ ವಾಗ್ವಾದ ನಡೆದಿತ್ತು. ಇದರ ಮುಂದುವರಿದ ಭಾಗ ಇಂದು ನಡೆಯುವ ಪಂದ್ಯದಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಕೊಹ್ಲಿ ಶಾಂತ ರೀತಿಯಿಂದ ವರ್ತಿಸಿದರೂ ಕೂಡ ಅವರ ಅಭಿಮಾನಿಗಳು ಗಂಭೀರ್​ ಅವರನ್ನು ಕೆಣಕುವುದಲ್ಲಿ ಅನುಮಾನವೇ ಬೇಡ. ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಸಂಭಾವ್ಯ ತಂಡಗಳು


ಆರ್​ಸಿಬಿ: ಫಾಫ್​ ಡು ಪ್ಲೆಸಿಸ್‌ (ನಾಯಕ), ವಿರಾಟ್​ ಕೊಹ್ಲಿ, ರಜತ್​ ಪಾಟಿದಾರ್‌, ಗ್ಲೆನ್​ ಮ್ಯಾಕ್ಸ್‌ವೆಲ್‌, ಕ್ಯಾಮರೂನ್​ ಗ್ರೀನ್‌, ದಿನೇಶ್​ ಕಾರ್ತಿಕ್‌, ಅನೂಜ್​ ರಾವತ್‌, ಮಯಾಂಕ್​ ಡಾಗರ್‌, ಅಲ್ಜಾರಿ ಜೋಸೆಫ್/ ರೀಸ್​ ಟಾಪ್ಲೆ, ಮೊಹಮ್ಮದ್​ ಸಿರಾಜ್‌, ಯಶ್​ ದಯಾಳ್‌.

ಕೆಕೆಆರ್​: ಫಿಲ್​ ಸಾಲ್ಟ್, ಸುನೀಲ್​ ನರೈನ್​, ವೆಂಕಟೇಶ್​ ಅಯ್ಯರ್‌, ಶ್ರೇಯಸ್‌ ಅಯ್ಯರ್​ (ನಾಯಕ), ನಿತೀಶ್‌ ರಾಣಾ , ರಮಣ್‌ದೀಪ್‌ ಸಿಂಗ್​, ರಿಂಕು ಸಿಂಗ್​, ಆ್ಯಂಡ್ರೆ ರಸೆಲ್‌, ಮಿಚೆಲ್​ ಸ್ಟಾರ್ಕ್‌, ಹರ್ಷಿತ್‌ ರಾಣಾ, ಮಿಥುನ್​ ಚಕ್ರವರ್ತಿ.

Continue Reading

ಕ್ರೀಡೆ

Sania Mirza: ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಸಾನಿಯಾ ಮಿರ್ಜಾ?; ಈ ಪಕ್ಷದಿಂದ ಆಫರ್​

Sania Mirza: ಸಾನಿಯಾ ಮಿರ್ಜಾ ಅವರನ್ನು ತೆಲಂಗಾಣದ ಪ್ರಮುಖ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದು ವರದಿಯಾಗಿದೆ.

VISTARANEWS.COM


on

Sania Mirza
Koo

ಹೈದರಾಬಾದ್​: ಕೆಲ ತಿಂಗಳ ಹಿಂದಷ್ಟೇ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್‌ ಅವರಿಂದ ವಿಚ್ಛೇದನ ಪಡೆದಿದ್ದ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಅವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ(lok sabha elections 2024) ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಹೌದು, ಸಾನಿಯಾ ಮಿರ್ಜಾ ಅವರನ್ನು ತೆಲಂಗಾಣದ ಪ್ರಮುಖ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್​ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ತೆಲಂಗಾಣದಲ್ಲಿ ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ ವಿರುದ್ಧ ಸಾನಿಯಾ ಮಿರ್ಜಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಚನೆ ಹಾಕಿಕೊಂಡಿದ್ದು ಈಗಾಗಲೇ ಪಕ್ಷ ಸೇರುವಂತೆ ಆಹ್ವಾನ ಕೂಡ ನೀಡಲಾಗಿದೆ ಎಂದು ವರದಿಯಾಗಿದೆ. ಆದರೆ ಸಾನಿಯಾ ಅವರು ಇದುವರೆಗೂ ಈ ವಿಚಾರದಲ್ಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಮೂಲಗಳ ಪ್ರಕಾರ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ಧೀನ್‌ ಅವರು ಸಾನಿಯಾ ಮಿರ್ಜಾ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಅಜರುದ್ದೀನ್ ಅವರು ಮಿರ್ಜಾ ಕುಟುಂಬದೊಂದಿಗೆ ನಿಕಟ ಕೌಟುಂಬಿಕ ಸಂಬಂಧವನ್ನು ಹೊಂದಿದ್ದಾರೆ. 2019ರಲ್ಲಿ ಸಾನಿಯಾ ಸಹೋದರಿ ಅನಮ್ ಮಿರ್ಜಾ ಅವರನ್ನು ಅಜರುದ್ಧೀನ್‌ ಮಗ ಮೊಹಮ್ಮದ್ ಅಸಾದುದ್ದೀನ್‌ ವಿವಾಹವಾಗಿದ್ದರು. ಹೀಗಾಗಿ ಸಾನಿಯಾ ಅವರನ್ನು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಳಿಸಲು ಅಜರುದ್ಧೀನ್‌ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಸಾನಿಯಾ ಮಿರ್ಜಾ ಕೂಡ ಈ ಆಫರ್​ಗೆ ಒಪ್ಪಿಕೊಂಡಿದ್ದು ತಮ್ಮ ನಿರ್ಧಾರವನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ Sania Mirza: ಪಾಕಿಸ್ತಾನಿ ಸಿಂಗರ್​ ಜತೆ ಕಾಣಿಸಿಕೊಂಡ ಸಾನಿಯಾ ಮಿರ್ಜಾ; ಫೋಟೊ ವೈರಲ್

ಶೋಯೆಬ್‌ ಮಲಿಕ್‌ ಸನಾ ಜಾವೇದ್ ಅವರನ್ನು ವಿವಾಹವಾಗುವ ಮೂಲಕ ಸಾನಿಯಾ ಮಿರ್ಜಾ(Sania Mirza) ಜತೆಗಿನ 13 ವರ್ಷದ ದಾಂಪತ್ಯವು ಕೊನೆಗೊಂಡಿತ್ತು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹದ ಸುದ್ದಿಗಳು ಹರಿದಾಡುತ್ತಿತ್ತು. ಕೆಲವರು ವಿಚ್ಚೇದನ ನೀಡದೆ ಶೋಯೆಬ್‌ ವಿವಾಹವಾಗಿದ್ದಾರೆ ಎಂದರೆ, ಇನ್ನು ಕೆಲವರು ಕಳೆದ ವರ್ಷವೇ ಈ ಜೋಡಿ ವಿಚ್ಚೇದನ ಪಡೆದಿತ್ತು ಎಂದು ಚರ್ಚಿಸುತ್ತಿದ್ದರು. ಈ ಎಲ್ಲ ವಿದ್ಯಮಾನಗಳನ್ನು ಕಂಡು ಸಾನಿಯಾ ಮಿರ್ಜಾ ಅವರ ಕುಟುಂಬವೇ ಅಧಿಕೃತ ಪ್ರಕಟನೆಯ ಮೂಲಕ ಸ್ಪಷ್ಟನೆ ನೀಡಿತ್ತು. ಶೋಯೆಬ್‌ – ಸಾನಿಯಾ ವಿಚ್ಛೇದನ ಪಡೆದು ಕೆಲವು ತಿಂಗಳುಗಳಾಗಿವೆ ಎಂದು ಕುಟುಂಬ ಮೂಲಗಳು ತಿಳಿಸಿತ್ತು.

ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲಿಕ್‌ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್‌ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್‌ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್‌ ಎಂಬ ಪುತ್ರನಿದ್ದಾನೆ. ಮಲಿಕ್​ಗೆ ವಿಚ್ಚೇದನ ನೀಡಿದ ಬಳಿಕ ಸಾನಿಯಾ ಅವರು ದುಬೈನಲ್ಲಿ ನೆಲೆಸಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್​ಲ್ಲಿ ಆಡುವ ಮೂಲಕ ಸಾನಿಯಾ ಟೆನಿಸ್​ಗೆ ವಿದಾಯ ಹೇಳಿದ್ದರು. ರೋಹನ್ ಬೋಪಣ್ಣ ಜತೆ ಮಿಶ್ರ ಡಬಲ್ಸ್​ ಆಡಿದ್ದ ಅವರು ಈ ಟೂರ್ನಿಯಲ್ಲಿ ರನ್ನರ್​ ಅಪ್ ಆಗಿದ್ದರು.

Continue Reading

ಕ್ರೀಡೆ

IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

IPL 2024: ಐಪಿಎಲ್​ ಟೂರ್ನಿ ಒಂದು ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ, ಅದೆಷ್ಟೋ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಲು ಉತ್ತಮ ವೇದಿಕೆಯಾಗಿದೆ. ಈ ಟೂರ್ನಿಯಿಂದ ಅನೇಕ ಪ್ರತಿಭಾನ್ವಿತ ಆಟಗಾರರು ಬೆಳಕಿಗೆ ಬಂದಿದ್ದಾರೆ. ಆದರೂ ಕೂಡ ಕೆಲವೊಮ್ಮೆ ನನಗೆ ಐಪಿಎಲ್‌ ಕ್ರಿಕೆಟ್‌ ಹೌದಾ ಎಂದು ಅನುಮಾನ ಮೂಡುತ್ತದೆ ಎಂದು ಅಶ್ವಿನ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

VISTARANEWS.COM


on

R Ashwin
Koo

ಜೈಪುರ: ವಿಶ್ವದ ಕ್ಯಾಶ್‌ ರಿಚ್‌ ಕ್ರಿಕೆಟ್‌ ಲೀಗ್‌ ಆಗಿರುವ ಐಪಿಎಲ್(IPL 2024)​ ಬಗ್ಗೆ ಟೀಮ್​ ಇಂಡಿಯಾದ ಹಿರಿಯ ಹಾಗೂ ಅನುಭವಿ ಆಟಗಾರ ಆರ್​.ಅಶ್ವಿನ್(R Ashwin)​ ಅವರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಐಪಿಎಲ್‌ ನಿಜಕ್ಕೂ ಕ್ರಿಕೆಟ್ಟಾ? ಎಂದು ಪ್ರಶ್ನೆ ಮಾಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ಪಂದ್ಯಕ್ಕೂ ಮುನ್ನ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ರಾಜಸ್ಥಾನ್​ ರಾಯಲ್ಸ್​ ತಂಡದ ಆಟಗಾರನಾಗಿರುವ ಅಶ್ವಿನ್, ‘ಐಪಿಎಲ್​ ಟೂರ್ನಿ ಒಂದು ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ, ಅದೆಷ್ಟೋ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಲು ಉತ್ತಮ ವೇದಿಕೆಯಾಗಿದೆ. ಈ ಟೂರ್ನಿಯಿಂದ ಅನೇಕ ಪ್ರತಿಭಾನ್ವಿತ ಆಟಗಾರರು ಬೆಳಕಿಗೆ ಬಂದಿದ್ದಾರೆ. ಆದರೂ ಕೂಡ ಕೆಲವೊಮ್ಮೆ ನನಗೆ ಐಪಿಎಲ್‌ ಕ್ರಿಕೆಟ್‌ ಹೌದಾ ಎಂದು ಅನುಮಾನ ಮೂಡುತ್ತದೆ” ಎಂದು ಹೇಳಿದರು.

“ಯುವಕನಾಗಿ ಐಪಿಎಲ್​ ಟೂರ್ನಿಗೆ ಕಾಲಿಟ್ಟ ವೇಳೆ ಹಿರಿಯ ಆಟಗಾರರಿಂದ ಕಲಿಯಲು ಬಯಸುತ್ತಿದ್ದೆ. ಈಗ ನಾವು ಜಾಹೀರಾತು ಶೂಟಿಂಗ್‌ಗಾಗಿ ಅಭ್ಯಾಸ ಮಾಡುತ್ತ ನಮ್ಮ ಸಮಯವನ್ನು ಕಳೆದುಬಿಡುತ್ತೇವೆ. ಹೀಗಾಗಿ ಐಪಿಎಲ್‌ ಕ್ರಿಕೆಟ್‌ ಹೌದಾ ಎಂದು ಅಚ್ಚರಿಯಾಗುತ್ತದೆ” ಎಂದು ಆರ್‌.ಅಶ್ವಿ‌ನ್‌ ಹೇಳಿದ್ದಾರೆ. ಇತ್ತೀಚೆಗೆ ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅಶ್ವಿನ್​ ಅಮೋಘ ಬೌಲಿಂಗ್​ ಪ್ರದರ್ಶನದೊಂದಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಪೂರ್ತಿಗೊಳಿಸಿದ ಸಾಧನೆ ಮಾಡಿದ್ದರು.

ಇದನ್ನೂ ಓದಿ Rishabh Pant: ಕಮ್​ಬ್ಯಾಕ್​ ಪಂದ್ಯದಲ್ಲೇ ದಾಖಲೆ ಬರೆದ ರಿಷಭ್​ ಪಂತ್​

2009ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ ಅಶ್ವಿನ್​ ಇದುವರೆಗೆ 199 ಪಂದ್ಯಗಳಲ್ಲಿ ಆಡಿದ್ದಾರೆ. 172 ವಿಕೆಟ್​ ಮತ್ತು 743 ರನ್​ ಬಾರಿಸಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ಪರ ಆರಂಭವಾದ ಇವರ ಐಪಿಎಲ್​ ಜರ್ನಿ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​, ಪಂಜಾಬ್​ ಕಿಂಗ್ಸ್​ ತಂಡವನ್ನು ಪ್ರತಿನಿಧಿಸಿದ್ದರು. ಪ್ರಸ್ತುತ ರಾಜಸ್ಥಾನ್​ ಪರ ಆಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಿನ್ನೆ(ಗುರುವಾರ) ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿ ಗಮನಸೆಳೆದಿದ್ದರು. ಕೇವಲ 19 ಎಸೆತಗಳಿಂದ 3 ಸಿಕ್ಸರ್​ ಸಿಡಿಸಿ 29 ರನ್​ ಬಾರಿಸಿದ್ದರು. ಆದರೆ, ಬೌಲಿಂಗ್​ನಲ್ಲಿ ಯಶಸ್ಸು ಕಾಣಲಿಲ್ಲ. ಓವರ್​ಗೆ 10ರ ಸರಾಸರಿಯಲ್ಲಿ ರನ್​ ಬಿಟ್ಟು ಕೊಟ್ಟು ವಿಕೆಟ್​ ಲೆಸ್​ ಎನಿಸಿಕೊಂಡರು.

ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ


ಪ್ರಸಕ್ತ ಸಾಗುತ್ತಿರುವ ಐಪಿಎಲ್​ (IPL 2024) ಟೂರ್ನಿಯಲ್ಲಿ 9 ಪಂದ್ಯಗಳು ಮುಕ್ತಾಯಕಂಡಿದೆ. ಅಚ್ಚರಿ ಎಂದರೆ ಈ 9 ಪಂದ್ಯಗಳಲ್ಲಿಯೂ ತವರಿನ ತಂಡವೇ ಗೆಲುವು ಸಾಧಿಸಿದ್ದು. ಗುರುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​(Rajasthan Royals) ಸತತ 2 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಮತ್ತೆ ಹಿಡಿತ ಸಾಧಿಸಿದೆ. ಡೆಲ್ಲಿ(Delhi Capitals) ಸತತ 2 ಸೋಲು ಕಂಡರೂ ಕೂಡ 8ನೇ ಸ್ಥಾನದಲ್ಲಿದೆ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
​ ಚೆನ್ನೈ ಸೂಪರ್​ ಕಿಂಗ್ಸ್​2204 (+1.979)
ರಾಜಸ್ಥಾನ್​ ರಾಯಲ್ಸ್2204 (+0.800)
ಸನ್​ರೈಸರ್ಸ್​ ಹೈದರಾಬಾದ್​2112 (+0.675)
ಕೋಲ್ಕೊತಾ ನೈಟ್‌ ರೈಡರ್ಸ್1102(+200)
ಪಂಜಾಬ್‌ ಕಿಂಗ್ಸ್2112‌ (+0.025)
ಆರ್‌ಸಿಬಿ2112 (-0.180)
ಗುಜರಾತ್‌ ಟೈಟಾನ್ಸ್2112 (-1.425)
ಡೆಲ್ಲಿ ಕ್ಯಾಪಿಟಲ್ಸ್2020 (–0.528)
ಮುಂಬೈ ಇಂಡಿಯನ್ಸ್2020 (-1000)
ಲಕ್ನೋ ಸೂಪರ್​ ಜೈಂಟ್ಸ್​1010 (-1.000)
Continue Reading

ಕ್ರೀಡೆ

Hanuma Vihari: ಹನುಮ ವಿಹಾರಿಗೆ ಶೋಕಾಸ್‌ ನೋಟಿಸ್‌ ನೀಡಿದ ಎಸಿಎ

ನಾಯಕತ್ವ ಬದಲಾವಣೆ ವಿಚಾರವಾಗಿ ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಶನ್(Andhra Cricket Association) ವಿರುದ್ಧ ಗಂಭೀರ ಆರೋಪ ಮಾಡಿದ್ದ ಹನುಮ ವಿಹಾರಿ(Hanuma Vihari)ಗೆ ಎಸಿಎ ಶೋಕಾಸ್‌ ನೋಟಿಸ್‌(ACA show-cause notice) ಜಾರಿ ಮಾಡಿದೆ.

VISTARANEWS.COM


on

hanuma vihari
Koo

ಆಂಧ್ರ ಪ್ರದೇಶ: ಟೀಮ್​ ಇಂಡಿಯಾದ ಆಟಗಾರ ಹನುಮ ವಿಹಾರಿ(Hanuma Vihari) ಅವರು ಇತ್ತೀಗೆಗೆ ಮುಕ್ತಾಯ ಕಂಡ ರಣಜಿ ಟ್ರೋಫಿ ಟೂರ್ನಿಯ ವೇಳೆ ನಾಯಕತ್ವ ಬದಲಾವಣೆ ವಿಚಾರವಾಗಿ ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಶನ್(Andhra Cricket Association) ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಎಸಿಎ ಶೋಕಾಸ್‌ ನೋಟಿಸ್‌(ACA show-cause notice) ಜಾರಿ ಮಾಡಿದೆ.

ಹನುಮ ವಿಹಾರಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿ, ಬಂಗಾಳ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ತಂಡದ ನಾಯಕನಾಗಿದ್ದೆ. ಆಟದ ಸಮಯದಲ್ಲಿ ನಾನು 17 ನೇ ಆಟಗಾರನ ಮೇಲೆ ಕೂಗಾಡಿದ್ದೆ. ಅವನು ತನ್ನ ತಂದೆಗೆ (ರಾಜಕಾರಣಿಯಾಗಿದ್ದ) ದೂರು ನೀಡಿದ್ದ, ಪ್ರತಿಯಾಗಿ ಅವರ ತಂದೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಸೋಸಿಯೇಷನ್​ಗೆ ಕೇಳಿದರು. ಬಂಗಾಳ ವಿರುದ್ದದ ಪಂದ್ಯದಲ್ಲಿ ನಾವು ಗೆದ್ದರೂ, ನನ್ನ ಯಾವುದೇ ತಪ್ಪು ಇಲ್ಲದ ಹೊರತಾಗಿಯೂ ರಾಜೀನಾಮೆ ಕೊಡಲು ನನ್ನಲ್ಲಿ ಅಸೋಸಿಯೇಶನ್​ ಕೇಳಿಕೊಂಡಿತು. ನಾನು ವೈಯಕ್ತಿಕವಾಗಿ ಆ ಆಟಗಾರನಿಗೆ ಏನೂ ಹೇಳಿರಲಿಲ್ಲ. ಆದರೆ ಕಳೆದ ಏಳು ವರ್ಷಗಳಲ್ಲಿ ಐದು ಬಾರಿ ತಂಡವನ್ನು ನಾಕೌಟ್​ಗೆ ತಲುಪಿಸಿದ, ತಂಡಕ್ಕೆ ಎಲ್ಲವನ್ನೂ ಕೊಟ್ಟ ಆಟಗಾರನಿಗಿಂತ ಆ ಆಟಗಾರನೇ ಮಂಡಳಿಗೆ ಪ್ರಿಯವಾದ. ನಾನು ಮುಜುಗರ ಅನುಭವಿಸಿದೆ. ಇನ್ನೆಂದೂ ನಾನು ಆಂಧ್ರಪ್ರದೇಶದ ಪರ ಆಡಲಾರೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ವಿಹಾರಿ ವಿರುದ್ಧ ಎಸಿಎ ನೋಟಿಸ್‌ ಜಾರಿ ಮಾಡಿದೆ.

ಇದನ್ನೂ ಓದಿ Hanuma Vihari: ಎಸಿಎ ಆರೋಪಕ್ಕೆ ತಿರುಗೇಟು ನೀಡಿದ ಹನುಮ ವಿಹಾರಿ

ವಿಹಾರಿ ಮಾಡಿದ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಎಸಿಎ, ವಿಹಾರಿ ನಾಯಕತ್ವದ ನಿರ್ಗಮನವು ವೃತ್ತಿಪರ ಪರಿಗಣನೆಯ ಪರಿಣಾಮವಾಗಿದೆಯೇ ಹೊರತು ರಾಜಕೀಯ ಹಸ್ತಕ್ಷೇಪವಲ್ಲ, ವಿಹಾರಿ ಆಟಗಾರರನ್ನು ಬೆದರಿಸಿ ಸಹಿ ಮಾಡಿಸಿದ್ದಾರೆ ಎಂದು ಆಂಧ್ರ ಕ್ರಿಕೆಟ್ ಸಂಸ್ಥೆ ಆರೋಪ ಮಾಡಿತ್ತು. 

ಬೇರೆ ತಂಡದ ಪರ ಆಡುವೆ..


ನೋಟಿಸ್‌ ಜಾರಿ ಮಾಡಿದ ಹಿನ್ನೆಲೆ ವಿಹಾರಿ ಅವರು ತಾನು ಬೇರೆ ತಂಡದ ಪರ ಆಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಹಾರಿ, ‘ನಾನು ಎಸಿಎಯಿಂದ ನಿರಾಕ್ಷೇಪಣ ಪ್ರಮಾಣಪತ್ರವನ್ನು ಕೋರಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಎಂದಿರುವುದಾಗಿ ವರದಿ ಹೇಳಿದೆ. ಈ ಬಾರಿಯ ರಣಜಿ ಆವೃತ್ತಿಯಲ್ಲಿ ಪ.ಬಂಗಾಳ ವಿರುದ್ಧದ ಆರಂಭಿಕ ಪಂದ್ಯದಲ್ಲಿ 30 ವರ್ಷದ ವಿಹಾರಿ, ಆಂಧ್ರಪ್ರದೇಶ ತಂಡದ ನಾಯಕತ್ವ ವಹಿಸಿದ್ದರು. ಅವರನ್ನು ಇದ್ದಕ್ಕಿದ್ದಂತೆ ನಾಯಕತ್ವದಿಂದ ಕೆಳಕ್ಕಿಳಿಸಿ, ರಿಕ್ಕಿ ಭುಯಿಗೆ ಜವಾಬ್ದಾರಿ ನೀಡಲಾಗಿತ್ತು. ಈ ಬಗ್ಗೆ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದ ವಿಹಾರಿ, ಎಸಿಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

Continue Reading
Advertisement
Aadujeevitham box office
ಮಾಲಿವುಡ್11 mins ago

Aadujeevitham Box Office: ಮೊದಲ ದಿನವೇ ಒಳ್ಳೆಯ ಗಳಿಕೆ ಕಂಡ ‘ʻಆಡು ಜೀವಿತಂ’!

gold rate today
ಚಿನ್ನದ ದರ21 mins ago

Gold Rate Today: ಆಕಾಶಕ್ಕೇ ಏರಿದ ಚಿನ್ನದ ಬೆಲೆ! ಇಂದಿನ ಧಾರಣೆ ಹೀಗಿದೆ ನೋಡಿ

attempt to murder case
ಬೆಂಗಳೂರು31 mins ago

Attempt To Murder : ಹಣದಾಸೆಗೆ ವೃದ್ಧ ಚಿಕ್ಕಮ್ಮನ ಕೊಲ್ಲಲು ಮುಂದಾದ ಮಗಳು ಮತ್ತು ಅಳಿಯ

Alia Bhatt hosts Hope Gala
ಬಾಲಿವುಡ್34 mins ago

Alia Bhatt: ಲಂಡನ್‌ನಲ್ಲಿ `ಹೋಪ್ ಗಾಲಾ’ ಹೋಸ್ಟ್‌ ಮಾಡಿದ ಆಲಿಯಾ; ಏನಿದರ ಉದ್ದೇಶ?

RCB
ಕ್ರೀಡೆ38 mins ago

RCB vs KKR: ಕೆಕೆಆರ್​ ಸವಾಲು ಸುಲಭದ್ದಲ್ಲ; ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ದಾಖಲೆ ಹೇಗಿದೆ?

Thalaivar 171 Rajinikanth first look
ಕಾಲಿವುಡ್40 mins ago

Thalaivar 171: ರಜನಿಕಾಂತ್‌ 171ನೇ ಸಿನಿಮಾ ಪೋಸ್ಟರ್‌ ಔಟ್‌; ʻರೋಲೆಕ್ಸ್‌ʼ ಸೂರ್ಯ ಎಂಟ್ರಿ ಆಗ್ತಾರಾ?

Narendra Modi And Bill Gates
ದೇಶ49 mins ago

Narendra Modi: ಮೋದಿ ಜತೆ ಚಾಟ್; ಭಾರತದ ಡಿಜಿಟಲ್ ಕ್ರಾಂತಿಗೆ ಬಿಲ್ ಗೇಟ್ಸ್ ಶ್ಲಾಘನೆ

Lok Sabha Election 2024 JDS finalised candidates for 3 constituency
ಪ್ರಮುಖ ಸುದ್ದಿ50 mins ago

HD Deve Gowda: ನಾಲ್ಕು ಕ್ಷೇತ್ರ ಗೆಲ್ಲಲು ಪಣ ತೊಟ್ಟಿರುವ ದೇವೇಗೌಡರು; ಮಾಸ್ಟರ್‌ ಪ್ಲಾನ್‌ ಏನು?

Sania Mirza
ಕ್ರೀಡೆ1 hour ago

Sania Mirza: ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಸಾನಿಯಾ ಮಿರ್ಜಾ?; ಈ ಪಕ್ಷದಿಂದ ಆಫರ್​

Savadatti Yallamma
ಕರ್ನಾಟಕ1 hour ago

ಬರದ ಮಧ್ಯೆಯೂ ಭರ್ಜರಿ ಕಾಣಿಕೆ; ಸವದತ್ತಿ ಯಲ್ಲಮ್ಮ ದೇಗುಲದಲ್ಲಿ 11 ಕೋಟಿ ರೂ. ಸಂಗ್ರಹ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202422 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202424 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌