ಕ್ರೀಡೆ
French Open 2023: ಇಂದಿನಿಂದ ಫ್ರೆಂಚ್ ಓಪನ್; ನಡಾಲ್ ದಾಖಲೆ ಮುರಿಯುವ ವಿಶ್ವಾಸದಲ್ಲಿ ಜೋಕೊ
ಫ್ರೆಂಚ್ ಓಪನ್ ಟೆನಿಸ್ ಟೂರ್ನಿ(French open 2023) ಇಂದಿನಿಂದ(ಭಾನುವಾರ) ಆರಂಭವಾಗಲಿದೆ. ಆದರೆ ರಫೆಲ್ ನಡಾಲ್ ಅವರ ಅನುಪಸ್ಥಿತಿಯಿಂದ ಟೂರ್ನಿ ಕೊಂಚ ಸಪ್ಪೆಯಾಗುವ ಸಾಧ್ಯತೆ ಇದೆ.
ಪ್ಯಾರಿಸ್: ವರ್ಷದ ದ್ವಿತೀಯ ಗ್ರ್ಯಾನ್ ಸ್ಲಾಮ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ(French open 2023) ಇಂದಿನಿಂದ(ಭಾನುವಾರ) ಆರಂಭವಾಗಲಿದೆ. ಆದರೆ ಈ ಬಾರಿ ಟೂರ್ನಿ ಕೊಂಚ ಸಪ್ಪೆಯಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಆವೇ ಅಂಗಣದ ರಾಜ ಸ್ಪೇನ್‌ನ ರಫೆಲ್ ನಡಾಲ್ ಅವರ ಅನುಪಸ್ಥಿತಿ. ಆದರೆ ಈ ಟೂರ್ನಿಯಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಕ್ ಅವರಿಗೆ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ.
ನಡಾಲ್ ಅವರು ಗಾಯದಿಂದಾಗಿ ಈ ಬಾರಿ ಟೂರ್ನಿ ಆಡುತ್ತಿಲ್ಲ. ಇದರ ಜತೆಗೆ ದಿಗ್ಗಜ ಫೆಡರರ್ ಕಳೆದ ವರ್ಷ ನಿವೃತ್ತಿಯಾಗಿದ್ದಾರೆ. ಹೀಗಾಗಿ ನಡಾಲ್ ಅವರ 22 ಗ್ರ್ಯಾನ್ ಸ್ಲಾಮ್ಗಳ ದಾಖಲೆ ಮುರಿಯಲು ಜೋಕೊಗೆ ಇಲ್ಲಿ ಉತ್ತಮ ಅವಕಾಶವಿದೆ. ನಡಾಲ್ ಮತ್ತು ಜೋಕೊ ಸದ್ಯ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಪಡೆದು ಜಂಟಿ ದಾಖಲೆ ಹೊಂದಿದ್ದಾರೆ.
ಟೂರ್ನಿಯಲ್ಲಿರುವ ಉಳಿದ ಸ್ಟಾರ್ ಟೆನಿಸಿಗರೆಂದರೆ, ಅಗ್ರ ಶ್ರೇಯಾಂಕಿತ, ಹಾಲಿ ಯುಎಸ್ ಓಪನ್ ಚಾಂಪಿಯನ್ ಸ್ಪೇನ್‌ನ ಕಾರ್ಲೊಸ್ ಅಲ್ಕರಾಜ್, 2ನೇ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್, ಕಳೆದ ಆವೃತ್ತಿ ರನ್ನರ್-ಅಪ್ ಕ್ಯಾಸ್ಪೆರ್ ರುಡ್, ಆ್ಯಂಡ್ರೆ ರುಬ್ಲೆವ್, ಹೋಲ್ಗರ್ ರ್ಯುನ್, ಸ್ಟೆಫಾನೊಸ್ ಸಿಸಿಪಾಸ್. ಮಹಿಳೆಯರಲ್ಲಿ ಸ್ವಿಯಾಟೆಕ್ ಜೊತೆಗೆ ಹಾಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಅರೈನಾ ಸಬಲೆಂಕಾ, ಹಾಲಿ ವಿಂಬಲ್ಡನ್ ಚಾಂಪಿಯನ್ ಎಲೆನಾ ರಬೈಕೆನಾ ಸೇರಿದಂತೆ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಇದನ್ನೂ ಓದಿ ITF Women’s Open: ಮಹಿಳಾ ಐಟಿಎಫ್ ಟೆನಿಸ್: ಫೈನಲ್‌ನಲ್ಲಿ ಮುಗ್ಗರಿಸಿದ ಅಂಕಿತಾ ರೈನಾ
ಬಹುಮಾನ ಮೊತ್ತವೆಷ್ಟು
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಬಹುಮಾನ ಮೊತ್ತವನ್ನು ಸಂಘಟಕರು ಈ ಬಾರಿ ಹೆಚ್ಚಿಸಿದ್ದಾರೆ. ಅದರಂತೆ ಈ ಬಾರಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ವಿಜೇತರಯ ತಲಾ 20.60 ಕೋಟಿ ರೂ. ಪಡೆಯಲಿದ್ದಾರೆ. ಟೂರ್ನಿಯು ಒಟ್ಟು 444 ಕೋಟಿ ರೂ. ಬಹುಮಾನ ಮೊತ್ತ ಒಳಗೊಂಡಿರಲಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಬಹುಮಾನ ಮೊತ್ತವನ್ನು ಶೇ 12.3 ಹೆಚ್ಚಳವಾಗಿದೆ. 2022ರ ಟೂರ್ನಿಯ ಸಿಂಗಲ್ಸ್ ವಿಭಾಗದ ಚಾಂಪಿಯನ್ನರು 19.69 ಕೋಟಿ ರೂ ನಗದು ಬಹುಮಾನ ಪಡೆದುಕೊಂಡಿದ್ದರು. ಸಿಂಗಲ್ಸ್ ವಿಭಾಗದ ಒಟ್ಟು ಬಹುಮಾನ ಮೊತ್ತವನ್ನು ಕಳೆದ ಬಾರಿಗಿಂತ ಶೇ 9.1 ಹೆಚ್ಚಿಸಲಾಗಿದೆ. ಮೊದಲ ಮೂರು ಸುತ್ತುಗಳಲ್ಲಿ ಸೋಲು ಅನುಭವಿಸುವ ಆಟಗಾರರು ಪಡೆಯುವ ಮೊತ್ತ ಈ ವರ್ಷ ಶೇ 11 ರಿಂದ 13 ಏರಿಕೆಯಾಗಿದೆ. ಕಳೆದ ವರ್ಷದ ಟೂರ್ನಿಯಲ್ಲಿ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸೋತಿದ್ದ ಆಟಗಾರರು 55 ಲಕ್ಷ ನಗದು ಬಹುಮಾನ ಗಳಿಸಿದ್ದರು.
ಕ್ರಿಕೆಟ್
ICC World Cup 2023 : ಕ್ರಿಕೆಟ್ ದೇವರು ಸಚಿನ್ಗೆ ಕ್ರಿಕೆಟ್ ವಿಶ್ವಕಪ್ನ ವಿಶೇಷ ಗೌರವ
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 5 ರಂದು ನಡೆಯಲಿರುವ ಉದ್ಘಾಟನಾ ಪಂದ್ಯಕ್ಕೂ ಮೊದಲು ಸಚಿನ್ ಅವರು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಟ್ರೋಫಿಯೊಂದಿಗೆ (ICC World Cup 2023) ಆಗಮಿಸಲಿದ್ದಾರೆ.
ಬೆಂಗಳೂರು: ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು 2023 ರ ಏಕದಿನ ಕ್ರಿಕೆಟ್ ವಿಶ್ವಕಪ್ನ (ICC World Cup 2023) ಜಾಗತಿಕ ರಾಯಭಾರಿಯಾಗಿ ಹೆಸರಿಸಲಾಗಿದೆ. ಭಾರತ ಆತಿಥ್ಯ ವಹಿಸಲಿರುವ ವಿಶ್ವಕಪ್ ಗೆ ಸಚಿನ್ ಅವರನ್ನು ಜಾಗತಿಕ ರಾಯಭಾರಿಯಾಗಿ ಹೆಸರಿಸಿರುವುದು ಸೂಕ್ತ ಗೌರವವಾಗಿದೆ. 12 ವರ್ಷಗಳ ಹಿಂದೆ 2011ರಲ್ಲಿ ತವರಿನಲ್ಲಿ ನಡೆದ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಕೊನೆಯ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದ್ದರು.
ಸಚಿತ್ ತೆಂಡೂಲ್ಕರ್ ಅವರು ತಮ್ಮ ವೃತ್ತಿಜೀವನದಲ್ಲಿ ಆರು 50 ಓವರ್ಗಳ ಕ್ರಿಕೆಟ್ ವಿಶ್ವ ಕಪ್ನಲ್ಲಿ ಕಾಣಿಸಿಕೊಂಡು ಅಪೇಕ್ಷಣೀಯ ದಾಖಲೆಯನ್ನು ಹೊಂಡಿದ್ದಾರೆ. ಹೀಗಾಗಿ ಅವರನ್ನು ಅಂಬಾಸಿಡರ್ ಆಗಿ ಅಯ್ಕೆ ಮಾಡಲಾಗಿದೆ. ಮಾಸ್ಟರ್ ಬ್ಲಾಸ್ಟರ್, ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯಕ್ಕೆ ಮೊದಲು ಪುರುಷರ ಕ್ರಿಕೆಟ್ ವಿಶ್ವಕಪ್ ಟ್ರೋಫಿಯೊಂದಿಗೆ ನಡೆಯಲಿದ್ದಾರೆ.
1987 ರಲ್ಲಿ ಬಾಲ್ ಬಾಯ್ ಆಗಿ ಕ್ರಿಕೆಟ್ ಪ್ರೀತಿ ಬೆಳೆಸಿದ ದಿನದಿಂದಹಿಡಿದು ಆರು ಆವೃತ್ತಿಗಳಲ್ಲಿ ದೇಶವನ್ನು ಪ್ರತಿನಿಧಿಸುವವರೆಗೆ, ವಿಶ್ವಕಪ್ ಕ್ರಿಕೆಟ್ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದ್ದವು. 2011 ರಲ್ಲಿ ವಿಶ್ವಕಪ್ ಗೆದ್ದಿದ್ದು ನನ್ನ ಕ್ರಿಕೆಟ್ ಪ್ರಯಾಣದ ಹೆಮ್ಮೆಯ ಕ್ಷಣವಾಗಿದೆ ಎಂದು ಬ್ರಾಂಡ್ ಅಂಬಾಸಿಡರ್ ಆದ ಬಳಿಕ ಸಚಿನ್ ತೆಂಡೂಲ್ಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಅನೇಕ ತಂಡಗಳು ಮತ್ತು ಆಟಗಾರರು ಕಠಿಣ ಸ್ಪರ್ಧೆಗೆ ಸಜ್ಜಾಗಿದ್ದದಾರೆ. ಈ ಅದ್ಭುತ ಪಂದ್ಯಾವಳಿಯನ್ನು ಉತ್ಸುಕತೆಯಿಂದ ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ.
ವಿಶ್ವಕಪ್ನಂಥ ಪ್ರಮುಖ ಟೂರ್ನಿಗಳು ಯುವ ಮನಸ್ಸುಗಳಲ್ಲಿ ಕನಸುಗಳನ್ನು ಮೂಡಿಸುತ್ತವೆ/ ಈ ಆವೃತ್ತಿಯು ಯುವ ಮನಸ್ಸುಗಳಿಗೆ ಕ್ರೀಡೆಗಳನ್ನು ತೊಡಗಿಸಿಕೊಳ್ಳಲು ಮತ್ತು ತಮ್ಮ ದೇಶಗಳನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸಲು ಸ್ಫೂರ್ತಿ ನೀಡಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ರಾಯಭಾರಿಗಳ ಪಟ್ಟಿಯಲ್ಲಿ ಇನ್ಯಾರಿದ್ದಾರೆ
ವೆಸ್ಟ್ ಇಂಡೀಸ್ನ ವಿವಿಯನ್ ರಿಚರ್ಡ್ಸ್, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್, ಆಸ್ಟ್ರೇಲಿಯಾದ ಆರೋನ್ ಫಿಂಚ್, ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್, ನ್ಯೂಜಿಲೆಂಡ್ನ ರಾಸ್ ಟೇಲರ್, ಭಾರತದ ಸುರೇಶ್ ರೈನಾ, ಮಿಥಾಲಿ ರಾಜ್ ಮತ್ತು ಪಾಕಿಸ್ತಾನದ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಐಸಿಸಿ ರಾಯಭಾರಿಗಳ ಪಟ್ಟಿಯಲ್ಲಿದ್ದಾರೆ. ಇವರೆಲ್ಲರೂ ದೇಶಾದ್ಯಂತ ಆಯ್ದ ಪಂದ್ಯಗಳಿಗೆ ಹಾಜರಾಗಲಿದ್ದಾರೆ, ಇದು ಬಹುನಿರೀಕ್ಷಿತ ವಿಶ್ವಕಪ್ನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲಿದೆ.
ಇದನ್ನೂ ಓದಿ : ICC World Cup 2023 : ಭಾರತ- ನೆದರ್ಲ್ಯಾಂಡ್ಸ್ ಅಭ್ಯಾಸ ಪಂದ್ಯವೂ ರದ್ದು
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಅಕ್ಟೋಬರ್ 5ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಪ್ರಾರಂಭವಾಗಲಿದೆ. ಒಟ್ಟು 48 ಪಂದ್ಯಗಳು 10 ಸ್ಥಳಗಳಲ್ಲಿ ನಡೆಯಲಿದೆ. ನವೆಂಬರ್ 19 ರಂದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಕ್ರೀಡೆ
Asian Games : ಪಾಕಿಸ್ತಾನದ ಸ್ಪರ್ಧಿ ನದೀಮ್ ಔಟ್; ನೀರಜ್ಗೆ ಪದಕ ಬಹುತೇಕ ಖಾತರಿ
ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಅರ್ಷದ್ ನದೀಮ್ ಏಷ್ಯನ್ ಗೇಮ್ಸ್ ನಿಂದ (Asian Games) ಹೊರಗುಳಿಯಲು ನಿರ್ಧರಿಸಿದ್ದಾರೆ. ನೀರಜ್ ಚೋಪ್ರಾ ಈಗ ಚಿನ್ನದ ಪದಕದ ಫೇವರಿಟ್ ಆಗಿದ್ದಾರೆ.
ಹ್ಯಾಂಗ್ಜೌ: ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಏಷ್ಯನ್ ಗೇಮ್ಸ್ (Asian Games) 2023 ರಿಂದ ಹಿಂದೆ ಸರಿದಿದ್ದಾರೆ. 26 ವರ್ಷದ ಅಥ್ಲೀಟ್ ಮೊಣಕಾಲು ಗಾಯದಿಂದ ಬಳಲುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಕಾಂಟಿನೆಂಟಲ್ ಈವೆಂಟ್ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಪಂದ್ಯಾವಳಿಯಲ್ಲಿ ಅವರು ಭಾರತದ ನೀರಜ್ ಚೋಪ್ರಾ ಅವರ ಅತಿದೊಡ್ಡ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅವರ ನಿರ್ಗಮನದಿಂದಾಗಿ ಏಷ್ಯನ್ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋನಲ್ಲಿ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಇರುವುದಿಲ್ಲ. ನೀರಜ್ ಚೋಪ್ರಾ ಮತ್ತು ಅರ್ಷದ್ ಕಳೆದ ಕೆಲವು ವರ್ಷಗಳಿಂದ ಜಾವೆಲಿನ್ ಥ್ರೋನಲ್ಲಿ ತೀವ್ರ ಪೈಪೋಟಿಯನ್ನು ಒಡ್ಡುತ್ತಿದ್ದಾರೆ. ಈ ಕಾರಣದಿಂದ ಭಾರತಕ್ಕೆ ಚಿನ್ನದ ಪದಕ ಬಹುತೇಕ ಖಚಿತಗೊಂಡಿದೆ.
ವರದಿಗಳ ಪ್ರಕಾರ, ಅರ್ಷದ್ ನದೀಮ್ ಏಷ್ಯಾಡ್ಗಾಗಿ ತರಬೇತಿ ಪಡೆಯುತ್ತಿದ್ದರು ಹಾಗೂ ಈವೆಂಟ್ನಲ್ಲಿ ಭಾಗವಹಿಸಲು ಸಜ್ಜಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಗಾಯಗೊಂಡ ಅವರನ್ನು ಎಂಆರ್ಐ ಸ್ಕ್ಯಾನ್ಗೆ ಒಳಪಡಿಸಿದಾಗ ಗಾಯವನ್ನು ಬಹಿರಂಗಪಡಿಸಿದೆ. ಹೀಗಾಗಿ ಅವರು ಪಂದ್ಯಾವಳಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಪಾಕಿಸ್ತಾನದ ಚೆಫ್ ಡಿ ಮಿಷನ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಹ್ಯಾಂಗ್ಝೌನಲ್ಲಿ ನಡೆದ ಮೊದಲ ತರಬೇತಿಯ ನಂತರ ಅರ್ಷದ್ ಅವರ ಬಲ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ನಂತರ ಕ್ರೀಡಾಪಟುವನ್ನು ಎಂಆರ್ಐ ಸ್ಕ್ಯಾನ್ಗೆ ಕರೆದೊಯ್ಯಲಾಯಿತು, ನಂತರ ಏಷ್ಯಾಡ್ನಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ತಿಳಿಸಲಾಗಿದೆ.
ಇತ್ತೀಚೆಗೆ ಅರ್ಷದ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅವರು ಅಲ್ಲಿ 87.82 ಮೀಟರ್ ಎಸೆದಿದ್ದರು. ಈ ಕೂಟದಲ್ಲಿ 88.17 ಮೀಟರ್ ಎಸೆತದೊಂದಿಗೆ ತಮ್ಮ ಮೊದಲ ವಿಶ್ವ ಚಾಂಪಿಯನ್ಷಿಪ್ ಚಿನ್ನದ ಪದಕವನ್ನು ನೀರಜ್ ಚೋಪ್ರಾ ಗೆದಿದ್ದರು.
19th Asian Games Hangzhou 🙏🇮🇳 pic.twitter.com/TQAEun1mGj
— Neeraj Chopra (@Neeraj_chopra1) September 29, 2023
ವಿಶ್ವ ಚಾಂಪಿಯನ್ಷಿಪ್ನಲ್ಇ ಇಬ್ಬರೂ ಕ್ರೀಡಾಪಟುಗಳ ಪ್ರದರ್ಶನವು ಏಷ್ಯಾಡ್ನಲ್ಲಿ ದೊಡ್ಡ ಪೈಪೋಟಿ ಎದುರಾಗುವ ನಿರೀಕ್ಷೆಗಳನ್ನು ಹುಟ್ಟಿಸಿತ್ತು. ನೀರಜ್ಗೆ ಹೋಲಿಸಿದರೆ ಅರ್ಷದ್ ಉತ್ತಮ ವೈಯಕ್ತಿಕ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಳೆದ ವರ್ಷ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 90.18 ಮೀಟರ್ ಎಸೆಯುವ ಮೂಲಕ ನೀರಜ್ ಚೋಪ್ರಾ ಅನುಪಸ್ಥಿತಿಯಲ್ಲಿ ತಮ್ಮ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದರು.
ಏಷ್ಯನ್ ಗೇಮ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಈ ಋತುವಿನಲ್ಲಿ ನೀರಜ್ ಚೋಪ್ರಾ 88.77 ಮೀಟರ್ ಎಸೆದು ಋತುವಿನ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅರ್ಷದ್ 87.82 ಮೀ ದೂರ ಎಸೆದು ಅವರ ಹತ್ತಿರದ ಪ್ರತಿಸ್ಪರ್ಧಿಯಾಗಿದ್ದಾರೆ. ಅರ್ಷದ್ ಅನುಪಸ್ಥಿತಿಯು ಈಗ ನೀರಜ್ ಅವರನ್ನು ಚಿನ್ನದ ಪದಕಕ್ಕೆ ಅತ್ಯಂತ ನೆಚ್ಚಿನ ಸ್ಪರ್ಧಿಯನ್ನಾಗಿ ಮಾಡಿದೆ. ನೀರಜ್ ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿದ್ದಾರೆ. ಅವರು ಜಕಾರ್ತಾದಲ್ಲಿ ಚಿನ್ನ ಗೆದಿದ್ದರು. ಅರ್ಷದ್ ಅಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಕ್ರೀಡೆ
Asian Games : ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಅನ್ನುರಾಣಿ
ಅನ್ನು ರಾಣಿಯ ಚಿನ್ನದ ಪದಕದೊಂದಿಗೆ ಭಾರತದ ಒಟ್ಟಾರೆ ಚಿನ್ನದ ಪದಕದ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.ಬೆಳ್ಳಿ, ಕಂಚು ಸೇರಿ 69 ಪದಕಗಳೊಂದಿಗೆ (Asian Games ) ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.
ಹ್ಯಾಂಗ್ಜೌ: ಭಾರತದ ಜಾವೆಲಿನ್ ಎಸೆತಗಾರ್ತಿ ಅನ್ನುರಾಣಿ ಏಷ್ಯನ್ ಗೇಮ್ಸ್ನಲ್ಲಿ (Asian Games) ಹೊಸ ದಾಖಲೆ ಬರೆದ್ದಾರೆ. ಅವರು ಖಂಡಾಂತರ ಕ್ರೀಡಾಕೂಟದ ಮಹಿಳೆಯರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಮೊಟ್ಟ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಮಂಗಳವಾರ ಸಂಜೆ ನಡೆಸ ಸ್ಪರ್ಧೆಯಲ್ಲಿ ಅತ್ಯುತ್ತಮ 62.92 ಮೀಟರ್ ದೂರಕ್ಕೆ ಜಾವೆಲಿನ್ ಎಸೆತ ಅನ್ನು ರಾಣಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಅಂದ ಹಾಗೆ ಅನ್ನು ರಾಣಿ 2014ರಲ್ಲಿ ನಡೆದಿದ್ದ ಏಷ್ಯನ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು ಇದೀಗ ಅವರು ಪ್ರದರ್ಶನದಲ್ಲಿ ಸುಧಾರಣೆ ಮಾಡಿಕೊಂಡು ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದರು.
ಅನ್ನು ರಾಣಿ ಅವರ ಚಿನ್ನದ ಪದಕದ ಸಾಧನೆಯೊಂದಿಗೆ ಭಾರತದ ಬಂಗಾರದ ಗಳಿಕೆ 15ಕ್ಕೆ ಏರಿಕೆಯಾಗಿದೆ. 26 ಬೆಳ್ಳಿ ಹಾಗೂ 28 ಕಂಚಿನ ಪದಕದ ಸಾಧನೆಯೊಂದಿಗೆ ಒಟ್ಟಾರೆ 69 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿಸಿದೆ.
ಮಂಗಳವಾರ ಸಂಜೆ ಪಾರುಲ್ ಚೌಧರಿ, ಮಹಿಳೆಯರ 5000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಓಟದ ಅಂತಿಮ ಕ್ಷಣದಲ್ಲಿ ವೇಗ ಹೆಚ್ಚಿಸಿದ ಅವರು ಅವರು 15:14.75 ಸೆಕೆಂಡುಗಳಲ್ಲಿ ಗುರಿ ತಲುಪಿ ಜಪಾನ್ ನ ರಿರಿಕಾ ಹಿರೊನಾಕಾ ಅವರನ್ನು ಹಿಂದಿಕ್ಕಿದರು.
ಮಹಿಳೆಯರ 400 ಮೀಟರ್ ಓಟದ ಫೈನಲ್‌ನಲ್ಲಿ ವಿಥ್ಯಾ ರಾಮರಾಜ್ ಕಂಚಿನ ಪದಕ ಗೆದ್ದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಅವರ ಅದ್ಭುತ ಶತಕ (100), ರಿಂಕು ಸಿಂಗ್ ಅವರ ಅದ್ಭುತ ಶತಕ (37*) ಮತ್ತು ಬೌಲರ್ಗಳ ಅಬ್ಬರದಿಂದಾಗಿ ಭಾರತ ಕ್ರಿಕೆಟ್ ತಂಡವು ತಂಡವು ನೇಪಾಳ ವಿರುದ್ಧ 23 ರನ್ಗಳ ವಿಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ಭಾರತ ಪುರುಷರ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ.
ಭಾರತ ಪುರುಷರ ಕಬಡ್ಡಿ ತಂಡವು ಪಂದ್ಯಾವಳಿಯಲ್ಲಿ 55-18 ಅಂಕಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದರೆ, ಮಹಿಳಾ ಹಾಕಿ ತಂಡವು ಹಾಂಗ್ ಕಾಂಗ್ ವಿರುದ್ಧ 13-0 ಅಂತರದಿಂದ ಗೆಲುವು ಸಾಧಿಸಿತು. ಅರ್ಚರಿಯಲ್ಲಿ ಭಾರತೀಯರು ಪ್ರಾಬಲ್ಯ ಮೆರೆದಿದ್ದು, ಪುರುಷರ ವಿಭಾಗದಲ್ಲಿ ಓಜಾಸ್ ಪ್ರವೀಣ್ ಡಿಯೋಟಾಲೆ ಮತ್ತು ಅಭಿಷೇಕ್ ಶರ್ಮಾ ಅಖಿಲ ಭಾರತ ಫೈನಲ್ ತಲುಪಿದರೆ, ಜ್ಯೋತಿ ಸುರೇಖಾ ವೆನ್ನಮ್ ಕೂಡ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ಇದನ್ನೂ ಓದಿ : Asian Games : ಭಾರತಕ್ಕೆ ಮತ್ತೊಂದು ಚಿನ್ನದ ಪದಕ, 5000 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದ ಪಾರುಲ್
ಬ್ಯಾಡ್ಮಿಂಟರ್ನಲ್ಲಿ ಭಾರತದ ಎಚ್.ಎಸ್.ಪ್ರಣಯ್, ಪಿ.ವಿ.ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ 16ನೇ ಸುತ್ತಿಗೆ ತಲುಪಿದ್ದಾರೆ. ಮಹಿಳೆಯರ 800 ಮೀಟರ್ ಓಟದಲ್ಲಿ ಕುಮಾರಿ ಚಂದಾ ಮತ್ತು ಹರ್ಮಿಲನ್ ಬೈನ್ಸ್ ಅಂತಿಮ ಸ್ಥಾನಗಳನ್ನು ಗಳಿಸಿದರೆ. ಭಾರತವು 4×400 ಮೀಟರ್ ತಂಡ ಪುರುಷರ ಸ್ಪರ್ಧೆಯಲ್ಲಿ ಫೈನಲ್ಗೆ ಅರ್ಹತೆ ಪಡೆಯಿತು.
ಪುರುಷರ ಡೆಕಾಥ್ಲಾನ್ನಲ್ಲಿ ಅಗ್ರ ಸ್ಥಾನವನ್ನು ಗಳಿಸುವ ಗುರಿಯನ್ನು ತೇಜಸ್ವಿನ್ ಶಂಕರ್ ಹೊಂದಿದ್ದಾರೆ. 2014ರ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದಿದ್ದ ಮಹಿಳಾ ಜಾವೆಲಿನ್ ಸ್ಪರ್ಧಿ ಅನ್ನು ರಾಣಿ ಇನ್ನೊಂದು ಪದಕದ ಮೇಲೆ ಗುರಿಯಿಟ್ಟಿದ್ದಾರೆ.
ಕ್ರೀಡೆ
Asian Games : ಭಾರತಕ್ಕೆ ಮತ್ತೊಂದು ಚಿನ್ನದ ಪದಕ, 5000 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದ ಪಾರುಲ್
ಪಾರುಲ್ ಅವರ ಚಿನ್ದದ ಪದಕದೊಂದಿಗೆ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಹ್ಯಾಂಗ್ಜೌ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ (Asian Games) ಸೋಮವಾರ ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಪಾರುಲ್ ಚೌಧರಿ, ಮಂಗಳವಾರ ನಡೆದ ಮಹಿಳೆಯರ 5000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಓಟದ ಅಂತಿಮ ಕ್ಷಣದಲ್ಲಿ ವೇಗ ಹೆಚ್ಚಿಸಿದ ಅವರು ಅವರು 15:14.75 ಸೆಕೆಂಡುಗಳಲ್ಲಿ ಗುರಿ ತಲುಪಿ ಜಪಾನ್ ನ ರಿರಿಕಾ ಹಿರೊನಾಕಾ ಅವರನ್ನು ಹಿಂದಿಕ್ಕಿದರು. ಈ ಮೂಲಕ ಭಾರತದ ಒಟ್ಟು ಚಿನ್ನದ ಪದಕಗಳ ಸಂಕೆಯ 14ಕ್ಕೆ ಏರಿಕೆಯಾಗಿದೆ ಹಾಗೂ ಒಟ್ಟಾರೆಯಾಗಿ 65 ಪದಕಗಳನ್ನು ಗೆದ್ದುಕೊಂಡಿದೆ.
Powerhouse Parul grabs a #GloriousGold🥇in Women's 5000m 🥳
— SAI Media (@Media_SAI) October 3, 2023
Second time around, she proves that charm and determination pay off, securing her remarkable second medal at #AsianGames2022.
Clocking 15:14.75, Parul's performance is absolutely 🔥!
Heartiest congratulations champ!… pic.twitter.com/NRfxSBJXwH
ಮಹಿಳೆಯರ 400 ಮೀಟರ್ ಓಟದ ಫೈನಲ್‌ನಲ್ಲಿ ವಿಥ್ಯಾ ರಾಮರಾಜ್ ಕಂಚಿನ ಪದಕ ಗೆದ್ದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಅವರ ಅದ್ಭುತ ಶತಕ (100), ರಿಂಕು ಸಿಂಗ್ ಅವರ ಅದ್ಭುತ ಶತಕ (37*) ಮತ್ತು ಬೌಲರ್ಗಳ ಅಬ್ಬರದಿಂದಾಗಿ ಭಾರತ ಕ್ರಿಕೆಟ್ ತಂಡವು ತಂಡವು ನೇಪಾಳ ವಿರುದ್ಧ 23 ರನ್ಗಳ ವಿಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ಭಾರತ ಪುರುಷರ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ.
ಭಾರತ ಪುರುಷರ ಕಬಡ್ಡಿ ತಂಡವು ಪಂದ್ಯಾವಳಿಯಲ್ಲಿ 55-18 ಅಂಕಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದರೆ, ಮಹಿಳಾ ಹಾಕಿ ತಂಡವು ಹಾಂಗ್ ಕಾಂಗ್ ವಿರುದ್ಧ 13-0 ಅಂತರದಿಂದ ಗೆಲುವು ಸಾಧಿಸಿತು. ಅರ್ಚರಿಯಲ್ಲಿ ಭಾರತೀಯರು ಪ್ರಾಬಲ್ಯ ಮೆರೆದಿದ್ದು, ಪುರುಷರ ವಿಭಾಗದಲ್ಲಿ ಓಜಾಸ್ ಪ್ರವೀಣ್ ಡಿಯೋಟಾಲೆ ಮತ್ತು ಅಭಿಷೇಕ್ ಶರ್ಮಾ ಅಖಿಲ ಭಾರತ ಫೈನಲ್ ತಲುಪಿದರೆ, ಜ್ಯೋತಿ ಸುರೇಖಾ ವೆನ್ನಮ್ ಕೂಡ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ಬ್ಯಾಡ್ಮಿಂಟರ್ನಲ್ಲಿ ಭಾರತದ ಎಚ್.ಎಸ್.ಪ್ರಣಯ್, ಪಿ.ವಿ.ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ 16ನೇ ಸುತ್ತಿಗೆ ತಲುಪಿದ್ದಾರೆ. ಮಹಿಳೆಯರ 800 ಮೀಟರ್ ಓಟದಲ್ಲಿ ಕುಮಾರಿ ಚಂದಾ ಮತ್ತು ಹರ್ಮಿಲನ್ ಬೈನ್ಸ್ ಅಂತಿಮ ಸ್ಥಾನಗಳನ್ನು ಗಳಿಸಿದರೆ. ಭಾರತವು 4×400 ಮೀಟರ್ ತಂಡ ಪುರುಷರ ಸ್ಪರ್ಧೆಯಲ್ಲಿ ಫೈನಲ್ಗೆ ಅರ್ಹತೆ ಪಡೆಯಿತು.
ಪುರುಷರ ಡೆಕಾಥ್ಲಾನ್ನಲ್ಲಿ ಅಗ್ರ ಸ್ಥಾನವನ್ನು ಗಳಿಸುವ ಗುರಿಯನ್ನು ತೇಜಸ್ವಿನ್ ಶಂಕರ್ ಹೊಂದಿದ್ದಾರೆ. 2014ರ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದಿದ್ದ ಮಹಿಳಾ ಜಾವೆಲಿನ್ ಸ್ಪರ್ಧಿ ಅನ್ನು ರಾಣಿ ಇನ್ನೊಂದು ಪದಕದ ಮೇಲೆ ಗುರಿಯಿಟ್ಟಿದ್ದಾರೆ.
ಭಾರತದ ಪದಕಗಳ ಪಟ್ಟಿ-
- ಚಿನ್ನ: 14
- ಬೆಳ್ಳಿ: 24
- ಕಂಚು: 26
10ನೇ ದಿನದಲ್ಲಿ ಭಾರತದ ಫಲಿತಾಂಶಗಳು
ಮಹಿಳೆಯರ 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಪದಕ ಗೆದ್ದಿದ್ದಾರೆ.
ಮಹಿಳೆಯರ 400 ಮೀಟರ್ ಹರ್ಡಲ್ಸ್ನಲ್ಲಿ ವಿಥ್ಯಾ ರಾಮ್ರಾಜ್ ಕಂಚಿನ ಪದಕ ಗೆದ್ದಿದ್ದಾರೆ.
ಮಹಿಳೆಯರ 54 ಕೆಜಿ ಬಾಕ್ಸಿಂಗ್ನಲ್ಲಿ ಪ್ರೀತಿ ಪವಾರ್ ಕಂಚಿನ ಪದಕ ಗೆದ್ದಿದ್ದಾರೆ.
ಪುರುಷರ ಕ್ಯಾನೋ ಡಬಲ್ 1000 ಮೀಟರ್ನಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.
ಪುರುಷರ ಕ್ರಿಕೆಟ್: ನೇಪಾಳವನ್ನು 23 ರನ್ ಗಳಿಂದ ಮಣಿಸಿದ ಭಾರತ ಸೆಮಿಫೈನಲ್ ಗೆ
ಕಬಡ್ಡಿ: ಭಾರತ ಪುರುಷರ ತಂಡ ಬಾಂಗ್ಲಾದೇಶ ವಿರುದ್ಧ 55-18, ಮಹಿಳಾ ತಂಡ ದಕ್ಷಿಣ ಕೊರಿಯಾ ವಿರುದ್ಧ 56-23 ಅಂತರದಲ್ಲಿ ಜಯ ಸಾಧಿಸಿತು.
ಇದನ್ನೂ ಓದಿ : Asian Games 2023: ಸೆಮಿಯಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟ ಪ್ರೀತಿ ಪವಾರ್
ಮಹಿಳಾ ಹಾಕಿ: ಹಾಂಕಾಂಗ್ ವಿರುದ್ಧ ಭಾರತಕ್ಕೆ 13-0 ಅಂತರದ ಗೆಲುವು
ಆರ್ಚರಿ (ಕಾಂಪೌಂಡ್): ಓಜಾಸ್ ಪ್ರವೀಣ್ ಡಿಯೋಟಾಲೆ ಮತ್ತು ಅಭಿಷೇಕ್ ಅಖಿಲ ಭಾರತ ಅಂತಿಮ ವೈಯಕ್ತಿಕ ಪುರುಷರ ಸ್ಪರ್ಧೆಯನ್ನು (ಅಕ್ಟೋಬರ್ 7 ರಂದು ಫೈನಲ್) ಸ್ಥಾಪಿಸಿದರು; ಮಹಿಳಾ ಫೈನಲ್‌ನಲ್ಲಿ ಜ್ಯೋತಿ ಸುರೇಖಾ ವೆನ್ನಮ್, ಕಂಚಿನ ಪದಕಕ್ಕಾಗಿ ಅದಿತಿ ಸೆಣಸಲಿದ್ದಾರೆ (ಇಬ್ಬರೂ ಅಕ್ಟೋಬರ್ 7 ರಂದು)
ಆರ್ಚರಿ (ರಿಕರ್ವ್): ಅತನು ದಾಸ್ ಮತ್ತು ಧೀರಜ್ ಬೊಮ್ಮದೇವರ ಕ್ವಾರ್ಟರ್ ಫೈನಲ್‌ನಲ್ಲಿ ನಿರ್ಗಮನ.
ಬ್ಯಾಡ್ಮಿಂಟನ್: ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್, ಕಿಡಂಬಿ ಶ್ರೀಕಾಂತ್ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ನಲ್ಲಿ 16ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಮಹಿಳೆಯರ 800 ಮೀಟರ್ ಓಟ: ಫೈನಲ್ಗೆ ಅರ್ಹತೆ ಪಡೆದ ಕುಮಾರಿ ಚಂದಾ ಮತ್ತು ಹರ್ಮಿಲನ್ ಬೈನ್ಸ್
ಪುರುಷರ 4*400 ಮೀಟರ್: ಫೈನಲ್ಸ್ ಅರ್ಹತೆ ಪಡೆದ ಭಾರತ
ಸ್ಕ್ವಾಷ್: ಪುರುಷರ ಸಿಂಗಲ್ಸ್ನಲ್ಲಿ ಸೌರವ್ ಘೋಷಾಲ್, ಮಿಶ್ರ ಡಬಲ್ಸ್ನಲ್ಲಿ ಅಭಯ್-ಅನಾಹತ್ ಮತ್ತು ದೀಪಿಕಾ-ಹರಿಂದರ್ಪಾಲ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
-
ದೇಶ20 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ15 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಟಾಪ್ 10 ನ್ಯೂಸ್22 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ24 hours ago
Plane Crash: ಜಿಂಬಾಬ್ವೆಯಲ್ಲಿ ವಿಮಾನ ಪತನ, ಭಾರತದ ಉದ್ಯಮಿ ಹಾಗೂ ಅವರ ಪುತ್ರ ದುರ್ಮರಣ
-
ದೇಶ21 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್23 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ11 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕಿರುತೆರೆ6 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?