WPL 2023 : ಗ್ರೇಸ್​ ಹ್ಯಾರಿಸ್ ಅಬ್ಬರ; ಯುಪಿ ತಂಡಕ್ಕೆ ಗುಜರಾತ್​ ವಿರುದ್ಧ 3 ವಿಕೆಟ್​ ವೀರೋಚಿತ ಜಯ - Vistara News

ಕ್ರಿಕೆಟ್

WPL 2023 : ಗ್ರೇಸ್​ ಹ್ಯಾರಿಸ್ ಅಬ್ಬರ; ಯುಪಿ ತಂಡಕ್ಕೆ ಗುಜರಾತ್​ ವಿರುದ್ಧ 3 ವಿಕೆಟ್​ ವೀರೋಚಿತ ಜಯ

ಎಂಟನೇ ವಿಕೆಟ್​ಗೆ 70 ರನ್​ ಬಾರಿಸಿದ ಯುಪಿ ವಾರಿಯರ್ಸ್​ ಬಳಗ ಡಬ್ಲ್ಯುಪಿಎಲ್​ನ (WPL 2023) ಸ್ಮರಣೀಯ ಪಂದ್ಯವಾಡಿತು.

VISTARANEWS.COM


on

Grace Harris who won the match for butter chicken!
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಗ್ರೇಸ್ ಹ್ಯಾರಿಸ್​ (59 ರನ್​, 26 ಎಸೆತ, 7 ಫೋರ್​, 3 ಸಿಕ್ಸರ್​) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಯುಪಿ ವಾರಿಯರ್ಸ್​ ತಂಡ ಮಹಿಳೆಯರ ಪ್ರೀಮಿಯರ್​ ಲೀಗ್​ನ (WPL 2023) ಭಾನುವಾರದ (ಮಾರ್ಚ್ 5) ಎರಡನೇ ಪಂದ್ಯದಲ್ಲಿ ಗುಜರಾತ್​ ಜಯಂಟ್ಸ್​ ವಿರುದ್ಧ 3 ವಿಕೆಟ್​ಗಳ ವೀರೋಚಿತ ವಿಜಯ ಸಾಧಿಸಿತು. ಕೊನೇ ಒಂದು ಎಸೆತ ಬಾಕಿ ಇರುವಾಗ ಯುಪಿ ತಂಡ ಸಿಕ್ಸರ್​ನೊಂದಿಗೆ ಗೆಲುವು ಸಾಧಿಸಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಯುಪಿ ತಂಡದ ಗೆಲುವಿಗೆ ಕೊನೇ ಓವರ್​ನಲ್ಲಿ 19 ರನ್​ ಬೇಕಾಗಿತ್ತು. ಆದರೆ, ಐದು ಎಸೆತಗಳಲ್ಲಿ 24 ರನ್​ ಬಾರಿಸಿ ಸಂಭ್ರಮಿಸಿತು. ಇದರೊಂದಿಗೆ ಗುಜರಾತ್​ ತಂಡ ಸತತ ಎರಡು ಸೋಲಿಗೆ ಒಳಗಾಯಿತು. ಮೊದಲ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್​ ವಿರುದ್ಧ ಹೀನಾಯ ಸೋಲಿಗೆ ಒಳಗಾಗಿತ್ತು.

ಇಲ್ಲಿನ ಡಿವೈ ಪಾಟೀಲ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಗುಜರಾತ್​ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 169 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್​ ಬಳಗ 19. 5 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್​ ಬಾರಿಸಿ ವಿಜಯೋತ್ಸವ ಆಚರಿಸಿತು. ಯುಪಿ ತಂಡ ಎಂಟನೇ ವಿಕೆಟ್​ಗೆ 70 ರನ್​ ಕಲೆ ಹಾಕಿ ಅಧಿಕಾರಯುತ ಗೆಲುವು ತನ್ನದಾಗಿಸಿಕೊಂಡಿತು. ಗ್ರೇಸ್ ಹ್ಯಾರಿಸ್​ಗೆ ಸೋಫಿ ಎಕ್ಲೆಸ್ಟೋನ್​ ಉತ್ತಮ ಸಾಥ್​ ಕೊಟ್ಟರು. ಅವರು 12 ಎಸೆತಗಳಲ್ಲಿ 1 ಫೋರ್​ ಹಾಗೂ 1 ಸಿಕ್ಸರ್ ನೆರವಿನಿಂದ 22 ರನ್​ ಬಾರಿಸಿದರು. ಅದಕ್ಕಿಂತ ಮೊದಲು ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಿದ್ದ ಕಿರಣ್​ ನವ್​ಗಿರೆ (53) ಅರ್ಧ ಶತಕ ಬಾರಿಸಿ ಗೆಲುವಿನಲ್ಲಿ ಪಾತ್ರ ವಹಿಸಿದರು.

ಹ್ಯಾರಿಸ್ ಅಬ್ಬರ

15, 4 ಓವರ್​ಗಳಲ್ಲಿ 105 ಗಳಿಸಿ ಏಳು ವಿಕೆಟ್​ ಕಳೆದುಕೊಂಡಿದ್ದ ಯುಪಿ ತಂಡದ ಸೋಲು ನಿಶ್ಚಯ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಗ್ರೇಸ್​ ಹಾಗೂ ಪರಿಸ್ಥಿತಿ ಬದಲಾಯಿಸಿದರು. ಈ ಜೋಡಿ 25 ಎಸೆತಗಳಲ್ಲಿ 70 ರನ್​ ಬಾರಿಸಿದರೂ. ಅದರಲ್ಲೂ ಗ್ರೇಸ್​ ಹ್ಯಾರಿಸ್​ 25 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದರು.

ಅದಕ್ಕಿಂತ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ಗುಜರಾತ್ ತಂಡ ಉತ್ತಮ ಮೊತ್ತ ಪೇರಿಸಿತು. ಸರಾಗವಾಗಿ ರನ್​ ಕಲೆ ಹಾಕುತ್ತಾ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತು. ಆರಂಭಿಕರಾಗಿ ಆಡಲು ಇಳಿದ ಸಬ್ಬಿನೇನಿ ಮೇಘನಾ (24) ಹಾಗೂ ಸೋಫಿ ಡಂಕ್ಲಿ (13) ಸ್ವಲ್ಪ ಹೊತ್ತು ಕ್ರೀಸ್​​ಗೆ ಅಂಟಿ ನಿಂತರು. ಈ ಜೋಡಿ ಮೊದಲ ವಿಕೆಟ್​ಗೆ 34 ರನ್​ ಗಳಿಸಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಬಂದ ಹರ್ಲಿನ್ ಡಿಯೋಲ್​ ಏಳು ಫೋರ್​ಗಳ ಸಮೇತ 46 ರನ್​ ಬಾರಿಸಿ ತಂಡಕ್ಕೆ ಆಧಾರವಾದರು.

ಇದನ್ನೂ ಓದಿ : WPL 2023 : ಯುಪಿ ವಾರಿಯರ್ಸ್​ ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದ ಗುಜರಾತ್​ ತಂಡದಿಂದ ಬ್ಯಾಟಿಂಗ್ ಆಯ್ಕೆ

ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ಅನ್ನಾಬೆಲ್​ ಸದರ್ಲೆಂಡ್​ (8) ಹಾಗೂ ಶುಷ್ಮಾ ವರ್ಮಾ (9) ಬೇಗನೆ ವಿಕೆಟ್​ ಒಪ್ಪಿಸಿದರು. ಆದರೆ, ಆ ಬಳಿಕ ಆಡಲು ಇಳಿದ ಆಶ್ಲೇ ಗಾರ್ಡ್ನರ್​ (25) ಹಾಗೂ ಡಿ ಹೇಮಲತಾ (21) ಉತ್ತಮ ಸ್ಕೋರ್ ದಾಖಲಿಸಲು ನೆರವಾದರು.

ಯುಪಿ ವಾರಿಯರ್ಸ್​ ತಂಡದ ಪರ ದೀಪ್ತಿ ಶರ್ಮಾ (27 ರನ್​ಗಳಿಗೆ 2 ವಿಕೆಟ್​) ಹಾಗೂ ಸೋಫಿ ಎಕ್ಲೆಸ್ಟೋನ್​ (25 ರನ್​ಗಳಿಗೆ 2 ವಿಕೆಟ್​) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup : ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 60 ರನ್​ ಭರ್ಜರಿ ವಿಜಯ ಸಾಧಿಸಿದ ಭಾರತ

T20 World Cup : ಇಲ್ಲಿನ ನಸ್ಸಾವು ಕೌಂಟಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ಗೆ 182 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಬಾಂಗ್ಲಾದೇಶ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ಗೆ 120 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

T 20 world cup
Koo

ನ್ಯೂಯಾರ್ಕ್​​: ಟಿ20 ವಿಶ್ವ ಕಪ್​ ಅಭಿಯಾನದ (T20 World Cup) ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿದೆ. ತನ್ನ ನೆರೆಯ ದೇಶ ಬಾಂಗ್ಲಾ ವಿರುದ್ಧದ ಹಣಾಹಣಿಯಲ್ಲಿ 60 ರನ್​ಗಳ ಭರ್ಜರಿ ವಿಜಯ ತನ್ನದಾಗಿಸಿಕೊಂಡಿದೆ. ವಿಕೆಟ್​ ಕೀಪರ್​ ಬ್ಯಾಟರ್ ರಿಷಭ್​ ಪಂತ್(53 ರನ್​, 32 ಎಸೆತ)​ ಹಾಗೂ ಹಾರ್ದಿಕ್ ಪಾಂಡ್ಯ (23 ಎಸೆತಕ್ಕೆ 43 ರನ್​) ಭಾರತ ಪರ ಬ್ಯಾಟಿಂಗ್​ನಲ್ಲಿ ಮಿಂಚಿದರೆ ಬೌಲಿಂಗ್​ನಲ್ಲಿ ಅರ್ಶ್​ದೀಪ್​ ಸಿಂಗ್​ (2 ವಿಕೆಟ್) ಪಡೆದರು. ಈ ಗೆಲುವಿನೊಂದಿಗೆ ಭಾರತ ತಂಡ ತನ್ನ ವಿಶ್ವಾಸ ಪ್ರದರ್ಶಿಸಿತು.

ಇಲ್ಲಿನ ನಸ್ಸಾವು ಕೌಂಟಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ಗೆ 182 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಬಾಂಗ್ಲಾದೇಶ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ಗೆ 120 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಭಾರತ ಪರ ಇನಿಂಗ್ಸ್ ಆರಂಭಿಸಲು ಅವಕಾಶ ಪಡೆದ ಸಂಜು ಸ್ಯಾಮ್ಸನ್​ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡರು. ಅವರು 1 ರನ್​ಗೆ ಔಟಾದರು. ರೋಹಿತ್ ಶರ್ಮಾ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಇರದೇ 23 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. 59 ರನ್​ಗಳಿಗೆ 2 ವಿಕೆಟ್​ ನಷ್ಟ ಮಾಡಿಕೊಂಡ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ಬಳಿಕ ರಿಷಭ್​ ಪಂತ್​ ಹಾಗೂ ಸೂರ್ಯಕುಮಾರ್ ಯಾದವ್​ ಇನಿಂಗ್ಸ್​ ಕಟ್ಟಿದರು. ಪಂತ್ 32 ಎಸೆತಗಳಿಗೆ 4 ಸಿಕ್ಸರ್​ ಹಾಗೂ ಅಷ್ಟೇ ಸಂಖ್ಯೆಯ ಫೋರ್​ನೊಂದಿಗೆ 53 ರನ್ ಬಾರಿಸಿದರೆ ಸೂರ್ಯಕುಮಾರ್ ಯಾದವ್​​ 18 ಎಸೆತಕ್ಕೆ 4 ಫೋರ್​ ಸಮೇತ 31 ರನ್ ಕೊಡುಗೆ ಕೊಟ್ಟರು. ಹೀಗಾಗಿ ಭಾರತದ ರನ್​ 3 ವಿಕೆಟ್​ 103 ತಲುಪಿತು.

ಇದನ್ನೂ ಓದಿ: Dinesh Karthik: ಜನ್ಮದಿನದಂದೇ ಕ್ರಿಕೆಟ್‌ ಬದುಕಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ; ಕೊಡುಗೆ ನೆನೆದ ಆರ್‌ಸಿಬಿ ಫ್ಯಾನ್ಸ್

ಶಿವಂ ದುಬೆ 14 ಎಸೆತಕ್ಕೆ 13 ರನ್ ಬಾರಿಸಿ ಔಟಾದರೆ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 24 ಎಸೆತಕ್ಕೆ 2 ಫೋರ್ ಹಾಗೂ 4 ಸಿಕ್ಸರ್ ಸಮೇತ 4 ರನ್ ಬಾರಿಸಿದರು. ಜಡೇಜ ಕೊಡುಗೆ 4 ರನ್​.

ಬಾಂಗ್ಲಾ ಬ್ಯಾಟಿಂಗ್ ವೈಫಲ್ಯ

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಬಾಂಗ್ಲಾ ದೇಶದ ಆರಂಭಿಕರು ಲಗುಬಗನೆ ವಿಕೆಟ್​ ಕಳೆದುಕೊಂಡರು. ತಂಜಿದ್​ ಹಸನ್​ 17 ರನ್ ಬಾರಿಸಿದರೆ ಸೌಮ್ಯ ಸರ್ಕಾರ್​ ಶೂನ್ಯಕ್ಕೆ ಔಟಾದರು. ಲಿಟನ್​ ದಾಸ್ 7 ರನ್ ಬಾರಿಸಿದರೆ ನಜ್ಮುಲ್ ಹೊಸೈನ್ ಕೂಡ ಸೊನ್ನೆ ಸುತ್ತಿದರು. 39 ರನ್​ಗೆ 4 ವಿಕೆಟ್ ಕಳೆದುಕೊಂಡು ಬಾಂಗ್ಲಾ ಗೆಲುವಿನ ಆಸೆ ಕೈಬಿಟ್ಟಿತು. ಬಳಿಕ ಶಕಿಬ್ ಅಲ್ ಹಸನ್​ 28 ರನ್ ಹಾಗೂ ಮಹಮ್ಮದುಲ್ಲಾ 40 ರನ್ ಬಾರಿಸುವ ಮೂಲಕ ತಂಡದ ಮರ್ಯಾದೆ ಕಾಪಾಡಿದರು. ಭಾರತ ಪರ ಬೌಲಿಂಗ್​ನಲ್ಲಿ ಅರ್ಶ್​ದೀಪ್ ಸಿಂಗ್​ ಮತ್ತು ಶಿವಂ ದುಬೆ ತಲಾ ಎರಡು ವಿಕೆಟ್ ಕಬಳಿಸಿದರು.

Continue Reading

ಪ್ರಮುಖ ಸುದ್ದಿ

Dinesh Karthik: ಜನ್ಮದಿನದಂದೇ ಕ್ರಿಕೆಟ್‌ ಬದುಕಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ; ಕೊಡುಗೆ ನೆನೆದ ಆರ್‌ಸಿಬಿ ಫ್ಯಾನ್ಸ್

Dinesh Karthik: ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಡಿಕೆ ಆಗಿದ್ದ, ಐಪಿಎಲ್‌ನಲ್ಲಿ ಬೆಸ್ಟ್‌ ಫಿನೀಶರ್‌ ಎಂಬ ಖ್ಯಾತಿ ಗಳಿಸಿದ್ದ, ಭಾರತ ಕ್ರಿಕೆಟ್‌ ತಂಡಕ್ಕೂ ಅಮೂಲ್ಯ ಕೊಡುಗೆ ನೀಡಿದ ದಿನೇಶ್‌ ಕಾರ್ತಿಕ್‌ ಅವರು ಶನಿವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ ಹಾಗೂ ವಿಡಿಯೊ ಹಂಚಿಕೊಂಡಿದ್ದಾರೆ.

VISTARANEWS.COM


on

Dinesh Karthik
Koo

ಚೆನ್ನೈ: ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಹಿನ್ನಡೆಗಳನ್ನು ಅನುಭವಿಸಿದರೂ, ಅವುಗಳನ್ನು ಮೆಟ್ಟಿ ನಿಂತು, ಕೊನೆಗೊಂದು ಗೆಲುವಿನ ನಗೆ ಬೀರುತ್ತಿದ್ದ, ವೃತ್ತಿಜೀವನದಲ್ಲಂತೂ ಫೀನಿಕ್ಸ್‌ನಂತೆ ಎದ್ದು ಬಂದಿದ್ದ, ಫಿನೀಶರ್‌ ಎಂದೇ ಖ್ಯಾತಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ದಿನೇಶ್‌ ಕಾರ್ತಿಕ್‌ (Dinesh Karthik) ಎಲ್ಲ ಮಾದರಿಯ ಕ್ರಿಕೆಟ್‌ಗೆ ಶನಿವಾರ (ಜೂನ್‌ 1) ವಿದಾಯ ಹೇಳಿದ್ದಾರೆ. ಜನ್ಮದಿನದಂದೇ (Birthday) ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ ಹಾಗೂ ವಿಡಿಯೊ ಮೂಲಕ ಆರ್‌ಸಿಬಿ (RCB) ಅಭಿಮಾನಿಗಳ ಪಾಲಿನ ನೆಚ್ಚಿನ ಡಿಕೆ ನಿವೃತ್ತಿ ಘೋಷಿಸಿದ್ದಾರೆ.

“ಕೆಲವು ದಿನಗಳಿಂದ ನಾನು ಯೋಚಿಸುತ್ತಿದ್ದ ಕುರಿತು ಈಗ ಅಂತಿಮ ತೀರ್ಮಾನ ತೆಗೆದುಕೊಂಡಿದ್ದೇನೆ. ನಾನು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು, ಮುಂಬರುವ ಸವಾಲುಗಳನ್ನು ಎದುರಿಸಲು ನಾನು ಮುಂದಡಿ ಇಡುತ್ತಿದ್ದೇನೆ. ನನ್ನ ವೃತ್ತಿ ಜೀವನ ಪಯಣಕ್ಕೆ ಸಹಕಾರ ನೀಡಿದ ನನ್ನೆಲ್ಲ ತರಬೇತುದಾರರು, ನಾಯಕರು, ಆಯ್ಕೆದಾರರು, ತಂಡದ ಸದಸ್ಯರು, ಸಿಬ್ಬಂದಿಗೆ ಧನ್ಯವಾದಗಳು. ನಾನು ನನ್ನ ದೇಶವನ್ನು ಪ್ರತಿನಿಧಿಸಿದ್ದಕ್ಕೆ ಅದೃಷ್ಟವಂತ ಎಂದೇ ಭಾವಿಸುತ್ತೇನೆ” ಎಂಬುದಾಗಿ ಅವರು ಭಾವುಕ ಪೋಸ್ಟ್‌ ಮಾಡಿದ್ದಾರೆ.

19ನೇ ವಯಸ್ಸಿನಲ್ಲೇ ಪದಾರ್ಪಣೆ

19ನೇ ವಯಸ್ಸಿನಲ್ಲಿ ಅಂದರೆ 2004ರಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದರು. 94 ಏಕದಿನ ಪಂದ್ಯಗಳನ್ನಾಡಿದ ಅವರು 9 ಅರ್ಧಶತಕಗಳೊಂದಿಗೆ 1,792 ರನ್‌ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 42 ಇನ್ನಿಂಗ್ಸ್‌ ಆಡಿ ಅವರು ಒಂದು ಶತಕದೊಂದಿಗೆ 1,025 ರನ್‌ ಗಳಿಸಿದ್ದಾರೆ. ಇನ್ನು 60 ಟಿ-20 ಪಂದ್ಯಗಳನ್ನು ಆಡಿ 686 ರನ್‌ ಗಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲೂ ಅವರು ಛಾಪು ಮೂಡಿಸಿದ್ದಾರೆ. ಸೈಯದ್‌ ಮುಷ್ತಾಕ್‌ ಅಲಿ, ರಣಜಿಯಲ್ಲೂ ಅವರು ಆಡಿದ್ದಾರೆ. ಅವರ ನಾಯಕತ್ವದಲ್ಲಿಯೇ ತಮಿಳುನಾಡು ತಂಡವು ಎರಡು ಬಾರಿ ಮುಷ್ತಾಕ್‌ ಅಲಿ ಟ್ರೋಫಿ ಗೆದ್ದಿದೆ.

ಐಪಿಎಲ್‌ನಲ್ಲಿ ಮೈಲುಗಲ್ಲು

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲೂ ದಿನೇಶ್‌ ಕಾರ್ತಿಕ್‌ ಮೈಲುಗಲ್ಲು ನೆಟ್ಟಿದ್ದಾರೆ. ಐಪಿಎಲ್‌ನಲ್ಲಿ 257 ಪಂದ್ಯಗಳನ್ನು ಆಡಿದ ದಿನೇಶ್‌ ಕಾರ್ತಿಕ್‌ 4,842 ರನ್‌ ಬಾರಿಸಿದ್ದಾರೆ. ಕೋಲ್ಕೊತಾ ನೈಟ್‌ ರೈಡರ್ಸ್‌, ಮುಂಬೈ ಇಂಡಿಯನ್ಸ್‌, ಡೆಲ್ಲಿ ಡೇರ್‌ ಡೆವಿಲ್ಸ್‌ ಪಂಜಾಬ್‌ ಕಿಂಗ್ಸ್‌ ಹಾಗೂ ಆರ್‌ಸಿಬಿ ಪರವಾಗಿ ಅವರು ಆಡಿದ್ದರು. ಅದರಲ್ಲೂ, ಆರ್‌ಸಿಬಿಯಲ್ಲಿ ಡಿ.ಕೆ. ಬೆಸ್ಟ್‌ ಫಿನೀಶರ್‌ ಎನಿಸಿದ್ದರು. ಆರ್‌ಸಿಬಿ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಈ ಕುರಿತು ಹಲವು ಬಾರಿ ದಿನೇಶ್‌ ಕಾರ್ತಿಕ್‌ ಹೇಳಿದ್ದಾರೆ.

ದಿನೇಶ್‌ ಕಾರ್ತಿಕ್‌ ಅವರ ವೃತ್ತಿ ಬದುಕು ಇನ್ನೇನು ಮುಗಿಯಿತು ಎಂಬಷ್ಟರಲ್ಲಿಯೇ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಅವರು 2022ರ ಟಿ-20 ವಿಶ್ವಕಪ್‌ಗೂ ಆಯ್ಕೆಯಾಗಿದ್ದರು. ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲೂ ಡಿ.ಕೆ ಉತ್ತಮ ಆಟ ಆಡಿದ್ದರು. ಆರ್‌ಸಿಬಿ ಪರ 15 ಮ್ಯಾಚ್‌ಗಳಲ್ಲಿ ಅವರು 326 ರನ್‌ ಬಾರಿಸಿದ್ದರು. ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್‌ ಬಾರಿಸಿ ಗೆಲುವು ತಂದುಕೊಟ್ಟಿದ್ದು ಮರೆಯಲಾಗದ ಇನ್ನಿಂಗ್ಸ್‌ ಆಗಿದೆ. ಅಷ್ಟೇ ಅಲ್ಲ, ಮೊದಲ ಪತ್ನಿ ಮಾಡಿದ ಮೋಸ, ಬಳಿಕ ವಿಚ್ಛೇದನ, ಅದರಿಂದಾದ ಮಾನಸಿಕ ಖಿನ್ನತೆಯಿಂದ ಎದ್ದುಬಂದ ದಿನೇಶ್‌ ಕಾರ್ತಿಕ್‌, ದೀಪಿಕಾ ಪಳ್ಳಿಕಲ್‌ ಅವರನ್ನು ಮದುವೆಯಾಗಿ, ಈಗ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಆ ಮೂಲಕ ಅವರು ವೈಯಕ್ತಿಕ ಜೀವನದಲ್ಲೂ ದೊಡ್ಡ ಹೋರಾಟಗಾರ ಎಂಬುದನ್ನು ಪ್ರೂವ್‌ ಮಾಡಿದ್ದಾರೆ. ಅಲ್‌ ದಿ ಬೆಸ್ಟ್‌ ಡಿ.ಕೆ.

ಇದನ್ನೂ ಓದಿ: Dinesh Karthik: ಪ್ಯಾರಿಸ್​ನಲ್ಲಿ ನೀರಜ್​ಗೆ ತೀವ್ರ ಪೈಪೋಟಿ ನೀಡಲು ಮುಂದಾದರೇ ದಿನೇಶ್​ ಕಾರ್ತಿಕ್​?; ಜಾವೆಲಿನ್​ ಅಭ್ಯಾಸದ ವಿಡಿಯೊ ವೈರಲ್​

Continue Reading

ಕ್ರೀಡೆ

IPL 2025 Mega Auction: ಕೇವಲ ಇಷ್ಟು ಆಟಗಾರರ ರಿಟೇನ್​ಗೆ ಮಾತ್ರ ಅವಕಾಶ!

IPL 2025 Mega Auction: ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ಹಲವು ಅನುಭವಿ ಆಟಗಾರರಿಂದ ಇಂಪ್ಯಾಕ್ಟ್​ ನಿಯಮದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಬಿಸಿಸಿಐ ಕೂಡ ಮುಂದಿನ ಬಾರಿ ಈ ನಿಯಮದ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿತ್ತು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಇಂಪ್ಯಾಕ್ಟ್​ ನಿಯಮ ಕೈ ಬಿಟ್ಟರೂ ಅಚ್ಚರಿಯಿಲ್ಲ

VISTARANEWS.COM


on

IPL 2025 Mega Auction
Koo

ನವದೆಹಲಿ: ಮುಂದಿನ ವರ್ಷ ನಡೆಯುವ 18ನೇ ಆವೃತ್ತಿಯ ಐಪಿಎಲ್​ ಟೂರ್ನಿಗೆ(IPL 2025 Mega Auction) ಇದೇ ವರ್ಷಾಂತ್ಯದಲ್ಲಿ ಆಟಗಾರರ ಮಿನಿ ಹರಾಜು ನಡೆಯಲಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಎಲ್ಲ 10 ತಂಡಗಳಿಗೆ ಗರಿಷ್ಠ 3 ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಲಿದೆ ಎಂದು ವರದಿಯಾಗಿದೆ. ಜತೆಗೆ ಹರಾಜಿನಲ್ಲಿ ಒಂದು ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.

ಈ ಆವೃತ್ತಿಯ ಐಪಿಎಲ್(IPL)​ ಟೂರ್ನಿ ನಡೆಯುತ್ತಿದ್ದ ವೇಳೆ ಐಪಿಎಲ್​ ಮುಖ್ಯಸ್ಥ ಅರುಣ್​ ಧುಮಾಲ್​ 3 ರಿಂದ 4 ಆಟಗಾರರನ್ನು ಮಾತ್ರ ರಿಟೇನ್​ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದರು. ಆದರೆ ಕೆಲ ಫ್ರಾಂಚೈಸಿಗಳು 6-8 ಆಟಗಾರರನ್ನೂ ರಿಟೇನ್​ ಮಾಡಿಕೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿತ್ತು. ಇನ್ನು ಕೆಲ ಫ್ರಾಂಚೈಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಹೆಚ್ಚಿನ ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದರೆ ಇದು ನಿರುಪಯುಕ್ತ ಎನಿಸಲಿದೆ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದರು. ಸದ್ಯ ಮಾಹಿತಿ ಪ್ರಕಾರ ಬಿಸಿಸಿಐ ಗರಿಷ್ಠ 3 ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಮತ್ತು ಒಂದು ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಸುವ ಅವಕಾಶ ಮಾತ್ರ ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಏನಿದು ಆರ್​ಟಿಎಂ ಕಾರ್ಡ್​?


ಆರ್​ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ. ಐಪಿಎಲ್​ನಲ್ಲಿ ಇದುವರೆಗೆ ವಿರಾಟ್​ ಕೊಹ್ಲಿ (ಆರ್​ಸಿಬಿ), ಜಸ್​ಪ್ರೀತ್​ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.

ಇಂಪ್ಯಾಕ್ಟ್​ ನಿಯಮ ಕೈಬಿಡುವ ಸಾಧ್ಯತೆ!


ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ಹಲವು ಅನುಭವಿ ಆಟಗಾರರಿಂದ ಇಂಪ್ಯಾಕ್ಟ್​ ನಿಯಮದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಬಿಸಿಸಿಐ ಕೂಡ ಮುಂದಿನ ಬಾರಿ ಈ ನಿಯಮದ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿತ್ತು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಇಂಪ್ಯಾಕ್ಟ್​ ನಿಯಮ ಕೈ ಬಿಟ್ಟರೂ ಅಚ್ಚರಿಯಿಲ್ಲ. ಧೋನಿ ಅವರು ಇಂಪ್ಯಾಕ್ಟ್​ ನಿಯಮ ಇಲ್ಲವಾದರೆ ಮುಂದಿನ ಆವೃತ್ತಿ ಆಡುವುದು ಅನುಮಾನ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಹೇಳಿದ್ದರು. ಒಂದೊಮ್ಮೆ ಈ ನಿಯಮ ಕೈಬಿಟ್ಟರೆ ಆಗ ಧೋನಿ ಆಡುತ್ತಾರಾ ಎನ್ನುವ ಪ್ರಶ್ನೆಯೊಂದು ಮೂಡುವುದು ಸಹಜ.

Continue Reading

ಪ್ರಮುಖ ಸುದ್ದಿ

Rohit Sharma : ಹಿರಿಯರಿರುವ ತಂಡಕ್ಕಿಂತ ಕಿರಿಯರ ತಂಡವೇ ಬೆಸ್ಟ್​ ಎಂದ ರೋಹಿತ್ ಶರ್ಮಾ; ಯಾಕೆ ಗೊತ್ತಾ?

Rohit Sharma :ಒಲಿ ಪೋಪ್ ಅವರನ್ನು ಔಟ್​ ಮಾಡುವಾಗ ಅವರ ಚಲನೆಯನ್ನು ಮೊದಲು ಗಮನಿಸಿದ್ದು ಯಾರು ಎಂಬ ಪ್ರಶ್ನೆ ಎದ್ದಿತ್ತು. ಪೋಪ್ ಅವರನ್ನು ಔಟ್ ಮಾಡುವ ಮೊದಲು ವಿಕೆಟ್​ ಹಿಂದಿನಿಂದ ಬಂದ ಧ್ವನಿ ಜುರೆಲ್ ಅವರದ್ದು ಎಂದು ಹೇಳಲಾಗಿತ್ತು. ಆದರೆ, ಸರ್ಫರಾಜ್ ಇದಕ್ಕೆ ವ್ಯತಿರಿಕ್ತವಾಗಿ, ಲೆಗ್ ಸ್ಲಿಪ್​ನಲ್ಲಿ ನಿಂತಿದ್ದ ನಾನೇ ಎಚ್ಚರಿಸಿದ್ದೆ ಎಂದು ಹೇಳಿದ್ದರು.

VISTARANEWS.COM


on

Rohit Sharma
Koo

ಬೆಂಗಳೂರು: ಮೂರು ತಿಂಗಳ ಹಿಂದೆ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 4-1 ಮುನ್ನಡೆ ಸಾಧಿಸಿತ್ತು. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಶಮಿ ಅವರಂತಹ ಹಿರಿಯ ಆಟಗಾರರು ವಿವಿಧ ಕಾರಣಗಳಿಂದಾಗಿ ಅಲಭ್ಯರಾಗಿದ್ದರಿಂದ ಸರಣಿಯಲ್ಲಿ ಸಾಕಷ್ಟು ಯುವ ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಸರಣಿಯ ಸಮಯದಲ್ಲಿ ವಿಕೆಟ್ ಕೀಪಿಂಗ್ ಕರ್ತವ್ಯಗಳಿಗಾಗಿ ಧ್ರುವ್ ಜುರೆಲ್ ಅವರನ್ನು ಕ್ರಮವಾಗಿ ಮೂರು, ನಾಲ್ಕನೇ ಮತ್ತು ಐದನೇ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ, ರೋಹಿತ್ ಶರ್ಮಾ (Rohit Sharma) ನೇತೃತ್ವದ ಬಳಗ ಸರಣಿಯನ್ನು ಸುಲಭವಾಗಿ ವಶಕ್ಕೆ ತೆಗೆದುಕೊಂಡಿತ್ತು.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರ ನಡುವೆ ನಡೆದ ಸ್ಟಂಪಿಂಗ್​ ವಿಚಾರದ ನಡುವಿನ ಚರ್ಚೆ ವ್ಯಾಪಕ ಗಮನ ಸೆಳೆದಿತ್ತು. ಕುಲ್ದೀಪ್ ಯಾದವ್ ಬೌಲಿಂಗ್​ನಲ್ಲಿ ಒಲಿ ಪೋಪ್ ಅವರನ್ನು ಔಟ್​ ಮಾಡುವಾಗ ಅವರ ಚಲನೆಯನ್ನು ಮೊದಲು ಗಮನಿಸಿದ್ದು ಯಾರು ಎಂಬ ಪ್ರಶ್ನೆ ಎದ್ದಿತ್ತು. ಪೋಪ್ ಅವರನ್ನು ಔಟ್ ಮಾಡುವ ಮೊದಲು ವಿಕೆಟ್​ ಹಿಂದಿನಿಂದ ಬಂದ ಧ್ವನಿ ಜುರೆಲ್ ಅವರದ್ದು ಎಂದು ಹೇಳಲಾಗಿತ್ತು. ಆದರೆ, ಸರ್ಫರಾಜ್ ಇದಕ್ಕೆ ವ್ಯತಿರಿಕ್ತವಾಗಿ, ಲೆಗ್ ಸ್ಲಿಪ್​ನಲ್ಲಿ ನಿಂತಿದ್ದ ನಾನೇ ಎಚ್ಚರಿಸಿದ್ದೆ ಎಂದು ಹೇಳಿದ್ದರು.

ಈ ಎಲ್ಲಾ ಗದ್ದಲಗಳ ನಡುವೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಕೆಟ್ ಪಡೆದ ಆಟಗಾರ ಯಾರು ಬಹಿರಂಗಪಡಿಸಿದ್ದಾರೆ. ಚೆಂಡನ್ನು ಎಸೆಯುವ ಮೊಲದೇ ಔಟ್ ಆಗಿದ್ದನ್ನು ನಿರೀಕ್ಷಿಸಿದ್ದಕ್ಕಾಗಿ ಅವರು ಸರ್ಫರಾಜ್ ಅವರನ್ನು ಶ್ಲಾಘಿಸಿದ್ದರು. ಹೀಗಾಗಿ ವಿಕೆಟ್ ಕೀಪರ್ ಜುರೆಲ್ ಅವರನ್ನು ರೆಡಿಯಾಗಿ ಇರುವಂಥೆ ಎಚ್ಚರಿಸಿದರು. ಈ ಎಲ್ಲ ಸಂದರ್ಭಗಳನ್ನು ಉಲ್ಲೇಖಿಸಿದ ರೋಹಿತ್ ಶರ್ಮಾ. ಭಾರತೀಯ ತಂಡದ ಯುವ ಬ್ಯಾಚ್​ನೊಂದಿಗೆ ಆಡುವುದನ್ನು ಇಷ್ಟಪಡುತ್ತೇನೆ ಎಂದು ಅವರು ಹೇಳಿದ್ದರು. ವಿಶೇಷವೆಂದರೆ ಆ ರೆಡ್-ಬಾಲ್ ಸರಣಿಯಲ್ಲಿ ಆಶ್ಚರ್ಯಕರ ಸಂಖ್ಯೆಯ ಐದು ಆಟಗಾರರು ಭಾರತಕ್ಕಾಗಿ ಪಾದಾರ್ಪಣೆ ಮಾಡಿದ್ದರು.

ಇದನ್ನೂ ಓದಿ: Cristiano Ronaldo: ಕಿಂಗ್ಸ್ ಕಪ್ ಫೈನಲ್​ನಲ್ಲಿ ಸೋಲು; ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ಟಿಯಾನೊ ರೊನಾಲ್ಡೊ

ಅಂದಹಾಗೆ, ಆ ಸ್ಟಂಪಿಂಗ್ ಅದ್ಭುತವಾಗಿತ್ತು. ಅದನ್ನು ನಿರೀಕ್ಷಿಸಿದವರ ಸರ್ಫರಾಜ್ ಖಾನ್. ನಾನು ಅವನನ್ನು ಸ್ವಲ್ಪ ಮುಂದೆ ನಿಲ್ಲಿಸಿದ್ದೆ, ಸರ್ಫರಾಜ್​ ಆಗ ಹೇಳಿದ್ದರು ‘ಈಗ, ಅವರು ಕ್ರೀಸ್ ನಿಂದ ಹೊರಹೋಗುತ್ತಾರೆ. ಸ್ಟಂಪಿಂಗ್ ಗೆ ಸಿದ್ಧರಾಗಿರಿ ಎಂದು ಹೇಳಿದ್ದರು. ಈ ರೀತಿಯ ಎಲ್ಲ ಭಾವನೆಗಳೊಂದಿಗೆ ಹುಡುಗರೊಂದಿಗೆ ಆಡುವುದನ್ನು ನಾನು ಸಂಪೂರ್ಣವಾಗಿ ಆನಂದಿಸಿದೆ. ಭವಿಷ್ಯದಲ್ಲಿ ನಾವು ಖುಷಿಯಿಂದ ಆಡುತ್ತೇವೆ ಎಂದು ಆಶಿಸುತ್ತೇವೆ, “ಎಂದು ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಹೇಳಿದ್ದಾರೆ.

ಐಪಿಎಲ್​ನಲ್ಲಿ ಒಂದಾದ ರೋಹಿತ್ ಶರ್ಮಾ

ಐಪಿಎಲ್​​ನ 17 ನೇ ಋತುವಿಗೆ ಮುಂಚಿತವಾಗಿ ಭಾರತದ ನಾಯಕ ಮುಂಬೈ ಇಂಡಿಯನ್ಸ್ (ಎಂಐ) ಗಾಗಿ ತಮ್ಮ ಕರ್ತವ್ಯಗಳನ್ನು ವಹಿಸಿಕೊಂಡಿದ್ದಾರೆ. ಆದರೆ ನಾಯಕನಾಗಿ ಅಲ್ಲ. ಅವರ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಯಶಸ್ವಿ ಫ್ರಾಂಚೈಸಿಯ ನಾಯಕರನ್ನಾಗಿ ನೇಮಿಸಲಾಯಿತು. ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ (ಜಿಟಿ) ಮುಂಬೈ ಇಂಡಿಯನ್ಸ್ 15 ಕೋಟಿ ರೂ.ಗೆ ಖರೀದಿಸಿದ ನಂತರ ಈ ಬದಲಾವಣೆ ಮಾಡಲಾಗಿದೆ. ಭಾರತೀಯ ಆಲ್ರೌಂಡರ್ ಗುಜರಾತ್ ತಂಡಕ್ಕೆ 2022 ರಲ್ಲಿ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. 2023 ರಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾದರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ವಿರುದ್ಧ ಸೋತಿದ್ದರು.

ಆದಾಗ್ಯೂ, ರೋಹಿತ್ ಶರ್ಮಾ ಮುಂಬೈ ತಂಡವನ್ನು ಐದು ಚಾಂಪಿಯನ್ಶಿಪ್ ಪ್ರಶಸ್ತಿಗಳಿಗೆ ಮುನ್ನಡೆಸಿದ ಅಪೇಕ್ಷಣೀಯ ದಾಖಲೆಯನ್ನು ಹೊಂದಿದ್ದಾರೆ, ನಾಯಕನಾಗಿ ಅಷ್ಟೇ ಸಂಖ್ಯೆಯ ಪ್ರಶಸ್ತಿಗಳನ್ನು ಹೊಂದಿರುವ ಎಂಎಸ್ ಧೋನಿ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ನಂತರ, ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಜೂನ್ನಿಂದ ಪ್ರಾರಂಭವಾಗಲಿರುವ ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಏಸ್ ಬ್ಯಾಟ್ಸ್ಮನ್ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ.

Continue Reading
Advertisement
Stray dogs attack in Shira 4 children one woman injured
ಪ್ರಮುಖ ಸುದ್ದಿ13 mins ago

Stray Dogs Attack: ಶಿರಾದಲ್ಲಿ ಬೀದಿ ನಾಯಿಗಳ ದಾಳಿ: 4 ಮಕ್ಕಳು, ಒಬ್ಬ ಮಹಿಳೆಗೆ ಗಂಭೀರ ಗಾಯ

Somnath Bharti
ದೇಶ23 mins ago

Somnath Bharti: ಮೋದಿ 3ನೇ ಸಲ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವೆ ಎಂದ ಆಪ್‌ ನಾಯಕ!

T 20 world cup
ಕ್ರೀಡೆ30 mins ago

T20 World Cup : ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 60 ರನ್​ ಭರ್ಜರಿ ವಿಜಯ ಸಾಧಿಸಿದ ಭಾರತ

Exit Poll
ಪ್ರಮುಖ ಸುದ್ದಿ1 hour ago

Exit Poll 2024 : ಆ್ಯಕ್ಸಿಸ್​ ಮೈ ಇಂಡಿಯಾ ಪ್ರಕಾರ ಎನ್​ಡಿಎಗೆ 401 ಸೀಟು

Poll Of Polls
ದೇಶ1 hour ago

Poll Of Polls: ಎನ್‌ಡಿಎಗೆ 350+ ಸೀಟು, ದಕ್ಷಿಣದಲ್ಲೂ ಬಿಜೆಪಿಗೆ ಸ್ವೀಟು, ಇಂಡಿಯಾ ‌ಕೂಟಕ್ಕೆ ಹಿನ್ನಡೆಯ ಏಟು!

Exit Poll 2024
ಪ್ರಮುಖ ಸುದ್ದಿ2 hours ago

Exit Poll 2024 : ಟಿಎಂಸಿಯ ಭದ್ರಕೋಟೆಗೆ ಕಮಲ ಪಕ್ಷದ ಲಗ್ಗೆ; ಮಮತಾ ಬ್ಯಾನರ್ಜಿಗೆ ಮುಖಭಂಗ?

Bangalore rain
ಪ್ರಮುಖ ಸುದ್ದಿ3 hours ago

Bangalore Rain: ರಾಜಧಾನಿಯಲ್ಲಿ ಮಳೆ ಆರ್ಭಟ; ಬೆಂಗಳೂರು-ಹೊಸೂರು ಹೆದ್ದಾರಿ ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Dinesh Karthik
ಪ್ರಮುಖ ಸುದ್ದಿ3 hours ago

Dinesh Karthik: ಜನ್ಮದಿನದಂದೇ ಕ್ರಿಕೆಟ್‌ ಬದುಕಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ; ಕೊಡುಗೆ ನೆನೆದ ಆರ್‌ಸಿಬಿ ಫ್ಯಾನ್ಸ್

Exit Poll
ಪ್ರಮುಖ ಸುದ್ದಿ3 hours ago

Exit Poll 2024 : ಭರ್ಜರಿ ಗೆಲುವಿನ ಮುನ್ಸೂಚನೆ ಸಿಕ್ಕಿದ ತಕ್ಷಣ ಮತದಾರರಿಗೆ ಧನ್ಯವಾದ ತಿಳಿಸಿದ ಮೋದಿ

Exit Poll 2024
ದೇಶ4 hours ago

Exit Poll 2024 : ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ; ಡಿಕೆಶಿ, ಎಂಬಿ ಪಾಟೀಲ್ ಸ್ಪಷ್ಟ ನುಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು8 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌