IPL 2023: ಅಗ್ರಸ್ಥಾನಿ ಗುಜರಾತ್​ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್​ - Vistara News

ಕ್ರಿಕೆಟ್

IPL 2023: ಅಗ್ರಸ್ಥಾನಿ ಗುಜರಾತ್​ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್​

ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್ ವಿರುದ್ಧ ಮಾಜಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ 27 ರನ್​ಗಳ ಗೆಲುವು ಸಾಧಿಸಿದೆ.

VISTARANEWS.COM


on

Mumbai Indians vs Gujarat Titans
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿ ಮೆರೆಯುತ್ತಿದ್ದ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ಗೆ ಮಾಜಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಸೋಲಿನ ರುಚಿ ತೋರಿಸಿದೆ. 27 ರನ್​ ಅಂತರದಿಂದ ಗೆದ್ದ ರೋಹಿತ್​ ಪಡೆ 14 ಅಂಕದೊಂದಿಗೆ ಮೂರನೇ ಸ್ಥಾನಕ್ಕೇರಿದೆ.

ಮುಂಬಯಿಯ ವಾಂಖೇಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್,​ ಸೂರ್ಯಕುಮಾರ್​ ಯಾದವ್​(103*) ಅವರ ಸೊಗಸಾದ ಶತಕ ಮತ್ತು ವಿಷ್ಣು ವಿನೋದ್​ ಅವರ ಬಿರುಸಿನ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಗಳಿಸಿತು. ಜವಾಬಿತ್ತ ಗುಜರಾತ್​ ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ ಕಳೆದುಕೊಂಡು 191 ರನ್​ ಗಳಿಸಿ ಸಣ್ಣ ಅಂತರದ ಸೋಲು ಕಂಡಿತು. ಮುಂಬೈ ಗೆಲುವಿನಿಂದ ಆರ್​ಸಿಬಿಯ ಪ್ಲೇ ಆಫ್​ ಹಾದಿ ಮತ್ತಷ್ಟು ಕಠಿಣಗೊಂಡಿದೆ.

ದೊಡ್ಡ ಮೊತ್ತವನ್ನು ಕಂಡು ಕಂಗಾಲಾದ ಗುಜರಾತ್​ ಆರಂಭದಿಂದಲೇ ವಿಕೆಟ್​ ಕೈಚೆಲ್ಲಿತು. ಕಳೆದ ಪಂದ್ಯದ ಹೀರೋಗಳೆಲ್ಲ ಈ ಪಂದ್ಯದಲ್ಲಿ ಪೆವಿಲಿಯನ್​ ಪರೇಡ್​ ನಡೆಸಿದರು. ವೃದ್ಧಿಮಾನ್​ ಸಾಹಾ(2), ಶುಭಮನ್​ ಗಿಲ್​(6), ನಾಯಕ ಹಾರ್ದಿಕ್​ ಪಾಂಡ್ಯ (4) ಹೀಗೆ ಸಿಂಗಲ್​ ಡಿಜಿಟ್​ಗೆ ಸೀಮಿತರಾದರು. ಡೇವಿಡ್ ಮಿಲ್ಲರ್​ ಮತ್ತು ವಿಜಯ್​ ಶಂಕರ್​ ಅವರು ಕೆಳ ಕ್ರಮಾಂಕದಲ್ಲಿ ಸಣ್ಣ ಮಟ್ಟದ ಹೋರಾಟ ನಡೆಸಿದರೂ ಅವರಿಂದ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಲು ಸಾಧ್ಯವಾಗಲಿಲ್ಲ. ಮಿಲ್ಲರ್​ 41 ಮತ್ತು ವಿಜಯ್​ ಶಂಕರ್​ 29 ರನ್​ ಬಾರಿಸಿದರು. ಮುಂಬೈ ಪರ ಆಕಾಶ್​ ಮಧ್ವಲ್ ಘಾತಕ ಬೌಲಿಂಗ್​ ದಾಳಿ ನಡೆಸಿ ಗುಜರಾತ್​ ಬ್ಯಾಟರ್​ಗಳ ಹುಟ್ಟಡಗಿಸಿದರು. ನಾಲ್ಕು ಓವರ್​ ಎಸೆದು ಮೂರು ವಿಕೆಟ್​ ಪಡೆದರು.

ಅರ್ಧಶತಕ ಬಾರಿಸಿದ ರಶೀದ್​ ಖಾನ್​

ಅಂತಿಮ ಹಂತದಲ್ಲಿ ರಶೀದ್​ ಖಾನ್​ ಅವರು ಬಿರುಸಿನ ಬ್ಯಾಟಿಂಗ್​ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಅನುಭವಿಸಿದ ಘೋರ ಬ್ಯಾಟಿಂಗ್​ ವೈಫಲ್ಯ. 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಶೀದ್​ ಖಾನ್​ ಅಂತಿಮವಾಗಿ 32 ಎಸೆತಗಳಿಂದ ಅಜೇಯ 79 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ ಬರೋಬ್ಬರಿ 10 ಸಿಕ್ಸರ್​ ಸಿಡಿಯಿತು. ಬೌಲಿಂಗ್​ನಲ್ಲಿಯೂ ಮಿಂಚಿದ ರಶೀದ್​ ಖಾನ್​ ನಾಲ್ಕು ವಿಕೆಟ್​ ಪಡೆದರು. ಒಟ್ಟಾರೆ ಅವರದ್ದು ಈ ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನವಾಗಿತ್ತು. ಅವರ ಈ ಬ್ಯಾಟಿಂಗ್​ ಸಾಹಸದಿಂದ ಗುಜರಾತ್ ತಂಡ​ ದೊಡ್ಡ ಅಂತರದಿಂದ ಸೋಲುವ ಅವಮಾನದಿಂದ ಪಾರಾಯಿತು.

ಇದನ್ನೂ ಓದಿ IPL 2023: ಐಪಿಎಲ್​ನಲ್ಲಿ ಚೊಚ್ಚಲ ಶತಕ ಬಾರಿಸಿದ ಸೂರ್ಯಕುಮಾರ್​ ಯಾದವ್​

ಮುಂಬೈ ಉತ್ತಮ ಆರಂಭ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಮುಂಬೈ ಇಂಡಿಯನ್ಸ್​ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್​ ಶರ್ಮ ಮತ್ತು ಇಶಾನ್​ ಕಿಶನ್​​ ಸೇರಿಕೊಂಡು ಓವರ್​ಗೆ 10 ಸರಾಸರಿಯಲ್ಲಿ ಬ್ಯಾಟ್​ ಬೀಸಿದರು. ಉಭಯ ಆಟಗಾರರ ಬ್ಯಾಟಿಂಗ್ ಆರ್ಭಟದ ಮುಂದೆ​ ಗುಜರಾತ್​ ವೇಗಿಗಳು ಹಿಡಿತ ತಪ್ಪಿದರು. ಹಲವು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್​ ನಡೆಸಿ ಟೀಕೆಗೆ ಗುರಿಯಾಗಿದ್ದ ರೋಹಿತ್​ ಶರ್ಮ ಅವರು ಈ ಪಂದ್ಯದಲ್ಲಿ 29 ರನ್​ ರನ್​ ಬಾರಿಸಿ ರಶೀದ್​ ಖಾನ್​ಗೆ ವಿಕೆಟ್​ ಒಪ್ಪಿಸಿದರು. ರೋಹಿತ್​ ಮತ್ತು ಇಶಾನ್​ ಮೊದಲ ವಿಕೆಟ್​ಗೆ 61 ರನ್​ ಒಟ್ಟುಗೂಡಿಸಿದರು.

ರೋಹಿತ್​ ವಿಕೆಟ್​ ಪತನದ ಬಳಿಕ 5 ರನ್​ ಅಂತರದಲ್ಲಿ ಇಶಾನ್​ ಕಿಶನ್​ ವಿಕೆಟ್​ ಕೂಡ ಬಿತ್ತು. ಈ ವಿಕೆಟ್​ ಕೂಡ ರಶೀದ್​ ಪಾಲಾಯಿತು. ಆದರೆ ರಶೀದ್​ ಅವರ ವಿಕೆಟ್​ ದಾಹ ಇಲ್ಲಿಗೆ ನಿಲ್ಲಲಿಲ್ಲ. ಮುಂದಿನ ಓವರ್​ನಲ್ಲಿ ನೆಹಾಲ್​ ವಧೇರಾ ಅವರ ವಿಕೆಟ್​ ಕೂಡ ಉಡಾಯಿಸಿದರು. ಇಶಾನ್​ 31 ರನ್ ​ಗಳಿಸಿದರೆ, ವಧೇರಾ 15 ರನ್​ ಬಾರಿಸಿದರು.

ಸಿಡಿದ ಸೂರ್ಯ-ವಿನೋದ್​

ಟಿ20 ಕ್ರಿಕೆಟ್​ನ ನಂ.1 ಖ್ಯಾತಿಯ ಆಟಗಾರ ಸೂರ್ಯಕುಮಾರ್​ ಯಾದವ್​ ಅವರು ಈ ಪಂದ್ಯದಲ್ಲಿಯೂ ಅಬ್ಬರದ ಬ್ಯಾಟಿಂಗ್​ ನಡೆಸುವ ಮೂಲಕ ನೆರೆದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಕೇರಳ ಮೂಲಕ ವಿಷ್ಣು ವಿನೋದ್​ ಕೂಡ ಉತ್ತಮ ಸಾಥ್​ ನೀಡಿದರು. ಅವರ ಬ್ಯಾಟಿಂಗ್​ ಕೂಡ ಬಿರುಸಿನಿಂದಲೇ ಕೂಡಿತ್ತು. ಉಭಯ ಆಟಗಾರರ ಬ್ಯಾಟಿಂಗ್​ ವೇಗದಿಂದ ಮುಂಬೈ ಮತ್ತೆ ಬ್ಯಾಟಿಂಗ್​ ಚೇತರಿಕೆ ಕಂಡಿತು.

ಇದನ್ನೂ ಓದಿ IPL 2023: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಪಂಜಾಬ್​ ಕಿಂಗ್ಸ್​

ನಟರಾಜ ಭಂಗಿಯ ಶೈಲಿಯಲ್ಲಿ ಬ್ಯಾಟ್​ ಬೀಸಿದ ಸೂರ್ಯಕುಮಾರ್​ ಮೈದಾನದ ಮೂಲೆ ಮೂಲೆಗೂ ಸಿಕ್ಸರ್​, ಬೌಂಡರಿ ಬಾರಿಸಿ 31 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ವಿಷ್ಣು ವಿನೋದ್​ ಅವರು 19 ಎಸೆಗಳಿಂದ 30 ರನ್​ ಬಾರಿಸಿದರು. ಈ ಸ್ಫೋಟಕ ಇನಿಂಗ್ಸ್​ ವೇಳೆ ತಲಾ 2 ಸಿಕ್ಸರ್​ ಮತ್ತು ಬೌಂಡರಿ ಸಿಡಿಯಿತು. ಅಂತಿಮ ಹಂತದ ವರೆಗೂ ಬ್ಯಾಟಿಂಗ್​ ಕಾಯ್ದುಕೊಂಡ ಸೂರ್ಯಕುಮಾರ್​ ಗುಜರಾತ್​ ಬೌಲರ್​ಗಳನ್ನು ಚೆಂಡಾಡಿ ಚೊಚ್ಚಲ ಐಪಿಎಲ್​ ಶತಕ ಬಾರಿಸಿ ಮಿಂಚಿದರು. 49 ಎಸೆತ ಎದುರಿಸಿದ ಅವರು ಬರೋಬ್ಬರಿ 11 ಬೌಂಡರಿ ಮತ್ತು 6 ಸಿಕ್ಸರ್​ ನರೆವಿನಿಂದ ಅಜೇಯ 103 ರನ್​ ಗಳಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Sunil Chhetri: ಮೈ ಬ್ರದರ್, ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಚೆಟ್ರಿಗೆ ಶುಭ ಹಾರೈಸಿದ ಗೆಳೆಯ ವಿರಾಟ್​ ಕೊಹ್ಲಿ

Sunil Chhetri: ವಿರಾಟ್ ಕೊಹ್ಲಿ ಹಾಗೂ ಸುನಿಲ್ ಚೆಟ್ರಿ ಉತ್ತಮ ಸ್ನೇಹಿತರು. ವಿರಾಟ್​ ಕೊಹ್ಲಿ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ತಮ್ಮ ಫಿಟ್​ನೆಸ್​ಗೆ ಸುನಿಲ್ ಚೆಟ್ರಿಯೇ ನಿಜವಾದ ಸ್ಫೂರ್ತಿ ಎಂದು ಹೇಳಿದ್ದರು.

VISTARANEWS.COM


on

sunil chhetri
Koo

ಬೆಂಗಳೂರು: ಭಾರತ ಕಂಡ ಶ್ರೇಷ್ಠ ಫುಟ್ಬಾಲ್(Indian football icon)​ ಆಟಗಾರ ಸುನೀಲ್​ ಚೆಟ್ರಿ(Sunil Chhetri) ಅವರು ತಮ್ಮ ಅಂತಾರಾಷ್ಟ್ರೀಯ ಫುಟ್ಬಾಲ್​ ವೃತ್ತಿ ಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ್ದಾರೆ. ಜೂನ್​ 6 ರಂದು ಕುವೈತ್​(Kuwait) ವಿರುದ್ಧದ ಫಿಫಾ ವಿಶ್ವಕಪ್ ಅರ್ಹತಾ(FIFA World Cup 2026 qualifier) ಪಂದ್ಯ ಅವರಿಗೆ ಕೊನೆಯ ಪಂದ್ಯವಾಗಿರಲಿದೆ. ಚೆಟ್ರಿ ತಮ್ಮ ನಿವೃತ್ತಿಯನ್ನು ಘೋಷಿಸುತ್ತಿದ್ದಂತೆ, ಅನೇಕ ಭಾರತೀಯ ದಿಗ್ಗಜ ಕ್ರೀಡಾಪಟುಗಳು ಚೆಟ್ರಿಗೆ ಹಾರೈಸಿದ್ದಾರೆ ಜತೆಗೆ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಚೆಟ್ರಿ ಅವರ ಆಪ್ತ ಗೆಳೆಯ ಟೀಮ್​ ಇಂಡಿಯಾದ ಕ್ರಿಕೆಟಿಗ ವಿರಾಟ್​ ಕೊಹ್ಲಿ(virat kohli) ನಿಮ್ಮ ಬಗ್ಗೆ ಹೆಮ್ಮೆಯಿದೆ, ಮೈ ಬದ್ರರ್ ಎಂದು ಕಮೆಂಟ್​ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಸುನಿಲ್ ಚೆಟ್ರಿ ಉತ್ತಮ ಸ್ನೇಹಿತರು. ಈ ಹಿಂದೆ ಹಲವು ಬಾರಿ ಜತೆಯಾಗಿ ಕಾಣಿಸಿಕೊಂಡಿದ್ದರು. ಚೆಟ್ರಿ ಇಂಡಿಯನ್​ ಸೂಪರ್​ ಲೀಗ್​ನಲ್ಲಿ ಬೆಂಗಳೂರು ತಂಡದ ಪರ ಆಡುತ್ತಿದ್ದು, ವಿರಾಟ್​ ಕೊಹ್ಲಿ ಆರ್​ಸಿಬಿ ಪರ ಆಡುತ್ತಿದ್ದಾರೆ. ಹಲವು ಬಾರಿ ಚೆಟ್ರಿ ಆರ್​ಸಿಬಿ ಕ್ಯಾಂಪ್​ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆರ್​ಸಿಬಿ ಕೂಡ ಚೆಟ್ರಿಗೆ ಶುಭ ಹಾರೈಸಿದೆ. ವಿರಾಟ್​ ಕೊಹ್ಲಿ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ತಮ್ಮ ಫಿಟ್​ನೆಸ್​ಗೆ ಸುನಿಲ್ ಚೆಟ್ರಿಯೇ ನಿಜವಾದ ಸ್ಫೂರ್ತಿ ಎಂದು ಹೇಳಿದ್ದರು.

ಸೈನಿಕನ ಮಗ

1984 ಆಗಸ್ಟ್ 3ರಂದು ಸಿಕಂದರಾಬಾದನಲ್ಲಿ ಹುಟ್ಟಿದ ಸುನೀಲ್ ತಂದೆ ಒಬ್ಬ ಸೈನಿಕ ಆಗಿದ್ದರು ಮತ್ತು ಭಾರತದ ಆರ್ಮಿ ಫುಟ್ಬಾಲ್ ಟೀಮ್‌ನಲ್ಲಿ ಆಡಿದ್ದರು. ಅದರಿಂದಾಗಿ ಫುಟ್ಬಾಲ್ ಆಸಕ್ತಿ ಹುಡುಗನಿಗೆ ರಕ್ತದಲ್ಲಿಯೇ ಬಂದಿತ್ತು ಎನ್ನಬಹುದು. ತನ್ನ 18ನೆಯ ವರ್ಷದಲ್ಲಿ ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಆಡಲು ಆರಂಭ ಮಾಡಿದ್ದ ಸುನೀಲ್ ಹೆಚ್ಚು ಕಡಿಮೆ ಭಾರತದ ಎಲ್ಲ ಕ್ಲಬ್ಬುಗಳ ಪರವಾಗಿ ಆಡಿದ್ದಾರೆ. ಮೋಹನ್ ಬಗಾನ್, ಜೆಸಿಟಿ, ಬಂಗಾಳ ತಂಡಗಳ ಆಟಗಾರನಾಗಿ ಮಿಂಚು ಹರಿಸಿದ್ದಾರೆ. 2015ರಿಂದ ಇಂದಿನವರೆಗೆ ಬೆಂಗಳೂರು ತಂಡದ ಪರವಾಗಿ ಆಡುತ್ತ ಬಂದಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರ ಎಂದರೆ ಅದು ಸುನೀಲ್ ಅನ್ನೋದು ನಿಜಕ್ಕೂ ಗ್ರೇಟ್.

ಒಬ್ಬ ಕ್ರೀಡಾಪಟುವಿಗೆ ದೊರೆಯುವ ಅತ್ಯುನ್ನತ ಪ್ರಶಸ್ತಿ ಖೇಲ್ ರತ್ನ ಪ್ರಶಸ್ತಿ, ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ, 2011ರ ಅರ್ಜುನ ಪ್ರಶಸ್ತಿ ಅವರಿಗೆ ಈಗಾಗಲೇ ದೊರೆತಿವೆ. ಭಾಗವಹಿಸಿದ ಎಲ್ಲ ಜಾಗತಿಕ ಕೂಟಗಳಲ್ಲಿ ಒಂದಲ್ಲ ಒಂದು ಪ್ರಶಸ್ತಿ ಗೆಲ್ಲದೇ ಸುನೀಲ್ ಹಿಂದೆ ಬಂದ ಒಂದು ಉದಾಹರಣೆ ಕೂಡ ದೊರೆಯುವುದಿಲ್ಲ. ಸುನೀಲ್ ಕಾರಣಕ್ಕೆ ಭಾರತದಲ್ಲಿ ಫುಟ್ಬಾಲ್ ಆಕರ್ಷಣೆ ಹೆಚ್ಚಿತು ಮತ್ತು ಹೆಚ್ಚು ಯುವಜನತೆ ಫುಟ್ಬಾಲ್ ಆಡಲು ಸುರು ಮಾಡಿದರು ಅನ್ನುವ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ! ಸದ್ಯಕ್ಕೆ ನಿವೃತ್ತಿ ಆಗುವ ಯಾವ ಸಾಧ್ಯತೆಯೂ ಇಲ್ಲ ಎಂದು ಹೇಳಿರುವ ಸುನೀಲ್ ಚೆಟ್ರಿ ಭಾರತೀಯ ಫುಟ್ಬಾಲ್ ಲೋಕದ ಲೆಜೆಂಡ್ ಆಟಗಾರ ಎಂದು ನೀವು ಖಂಡಿತವಾಗಿಯೂ ಒಪ್ಪುತ್ತೀರಿ. ಅಲ್ಲವೇ?

ಇದನ್ನೂ ಓದಿ IPL 2024 Points Table: ಪಂಜಾಬ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ

2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಪದಾರ್ಪಣೆ ಮಾಡಿದ ಸುನೀಲ್‌ ಚೆಟ್ರಿ 93 ಗೋಲು ದಾಖಲಿಸಿ ಅತ್ಯಧಿಕ ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್‌ ಮೆಸ್ಸಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಜೂನ್ 12, 2005 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ಹಿರಿಯ ರಾಷ್ಟ್ರೀಯ ತಂಡದ ಜರ್ಸಿಯನ್ನು ತೊಟ್ಟಿದ್ದರು. ಆ ಪಂದ್ಯ 1-1 ಡ್ರಾದಲ್ಲಿ ಅತ್ಯಂಕಡಿತ್ತು. ಭಾರತದ ಈ ಒಂದು ಗೋಲ್​ ಬಾರಿಸಿದ್ದು ಚೆಟ್ರಿ. ಅಂದಿನಿಂದ, ಅವರು ಇದುವರೆಗೂ ರಾಷ್ಟ್ರೀಯ ತಂಡದ ಪರ ಹಲವು ಸಾಧನೆ ಮಾಡಿದ್ದಾರೆ.

Continue Reading

ಕ್ರೀಡೆ

Sanju Samson: ಸತತ 4 ಸೋಲು; ಬೇಸರ ಹೊರಹಾಕಿದ ನಾಯಕ ಸಂಜು ಸ್ಯಾಮ್ಸನ್

Sanju Samson: ಕಳೆದ ನಾಲ್ಕು ಪಂದ್ಯಗಳಿಂದ ನಾವು ವೈಫಲ್ಯಗಳನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಸಂಘಟಿತ ಪ್ರದರ್ಶನ ತೋರದೇ ಇರುವುದು. ನಮ್ಮಲ್ಲಿ ಹಲವು ಮ್ಯಾಚ್​ ವಿನ್ನರ್​ಗಳಿದ್ದಾರೆ. ಆದರೆ ಯಾರೂ ಕೂಡ ಪಂದ್ಯ ಗೆಲ್ಲಿಸಿಕೊಡುವಂತಹ ಪ್ರದರ್ಶನ ನೀಡುತ್ತಿಲ್ಲ ಎಂದು ಸಂಜು ಸ್ಯಾಮ್ಸನ್ ಹೇಳಿದರು.

VISTARANEWS.COM


on

Sanju Samson
Koo

ಗುವಾಹಟಿ: ಪಂಜಾಬ್​ ಕಿಂಗ್ಸ್(​Punjab Kings) ವಿರುದ್ಧದ ಪಂದ್ಯದಲ್ಲಿ 5 ವಿಕೆಟ್​ಗಳ ಸೋಲು ಕಾಣುವ ಮೂಲಕ ರಾಜಸ್ಥಾನ್​ ರಾಯಲ್ಸ್​(Rajasthan Royals) ಸತತ 4ನೇ ಸೋಲಿಗೆ ತುತ್ತಾಯಿತು. ತಂಡದ ಈ ಕಳಪೆ ಪ್ರದರ್ಶನದ ಬಗ್ಗೆ ನಾಯಕ ಸಂಜು ಸ್ಯಾಮ್ಸನ್(sanju samson)​ ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದಾರೆ.

ಸೋಲಿನ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ಕಳೆದ ನಾಲ್ಕು ಪಂದ್ಯಗಳಿಂದ ನಾವು ವೈಫಲ್ಯಗಳನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಸಂಘಟಿತ ಪ್ರದರ್ಶನ ತೋರದೇ ಇರುವುದು. ನಮ್ಮಲ್ಲಿ ಹಲವು ಮ್ಯಾಚ್​ ವಿನ್ನರ್​ಗಳಿದ್ದಾರೆ. ಆದರೆ ಯಾರೂ ಕೂಡ ಪಂದ್ಯ ಗೆಲ್ಲಿಸಿಕೊಡುವಂತಹ ಪ್ರದರ್ಶನ ನೀಡುತ್ತಿಲ್ಲ ಎಂದು ಹೇಳಿದರು.

ಈ ಹಿಂದೆ ನಾವು 200 ಪ್ಲಸ್​ ರನ್​ಗಳನ್ನು ಸುಲಭವಾಗಿ ಕಲೆಹಾಕಿದ್ದೇವೆ ಮತ್ತು ಚೇಸಿಂಗ್​ ಕೂಡ ಮಾಡಿದ್ದೇವೆ. ಆದರೆ ಈಗ ಕನಿಷ್ಠ 150ರ ಗಡಿ ದಾಡಲೂ ಕೂಡ ಪರದಾಡುವ ಸ್ಥಿತಿಯಲ್ಲಿದ್ದೇವೆ. ಮುಂದಿನ ಪಂದ್ಯಗಳಲ್ಲಿ ಸಂಘಟಿತ ಪ್ರದರ್ಶನ ತೋರುವ ತುರ್ತು ಅಗತ್ಯವಿದೆ. ಪ್ಲೇ ಆಫ್​ಗೆ ಪ್ರವೇಶ ಪಡೆದಿದ್ದರೂ ಕೂಡ ಮುಂದಿನ ಪಂದ್ಯದಲ್ಲಿ ಗೆಲ್ಲಲೇ ಬೇಕು. ಈ ಮೂಲಕ ಹಿಂದಿನ ಫಾರ್ಮ್​ ಕಂಡುಕೊಳ್ಳಬೇಕಿದೆ ಎಂದು ಸಂಜು ಸಹ ಆಟಗಾರರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಬೌಲಿಂಗ್​ ವಿಭಾಗದಲ್ಲಿಯೂ ಸುಧಾರಣೆ ಕಂಡುಕೊಳ್ಳುವ ಅನಿವಾರ್ಯತೆಯೂ ಇದೆ ಎಂದು ಇದೇ ಸಂದರ್ಭದಲ್ಲಿ ಸಂಜು ಹೇಳಿದರು.

ಇದನ್ನೂ ಓದಿ IPL 2024 Points Table: ಪಂಜಾಬ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ

ರಾಜಸ್ಥಾನ್​ ತಂಡಕ್ಕೆ​ 2ನೇ ತವರಾದ ಗುವಾಹಟಿಯ ಬರ್ಸಾಪರಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 65ನೇ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ರಾಜಸ್ಥಾನ್​ ರಾಯಲ್ಸ್ ಬ್ಯಾಟಿಂಗ್​ ವೈಫಲ್ಯ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು ಕೇವಲ 144 ರನ್​ ಗಳಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್(Punjab Kings)​ ಕೂಡ ಒಂದು ಹಂತದಲ್ಲಿ ಆಘಾತ ಎದುರಿಸಿ ಬಳಿಕ ಚೇತರಿಕೆ ಹಾದಿ ಹಿಡಿದು 18.5 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 145 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ರಾಜಸ್ಥಾನ್​ ಪರ ಯಶಸ್ವಿ ಜೈಸ್ವಾಲ್​(4) ಜಾಸ್​ ಬಟ್ಲರ್​ ಅನುಪಸ್ಥಿತಿಯಲ್ಲಿ ಆಡಲಿಳಿದ ಕೊಹ್ಲರ್-ಕಾಡ್ಮೋರ್(18), ನಾಯಕ ಸಂಜು ಸ್ಯಾಮ್ಸನ್​(18), ಧೃವ್​ ಜುರೇಲ್​(0), ರೋಮನ್​ ಪೋವೆಲ್(4) ಬ್ಯಾಟಿಂಗ್​ ವೈಫಲ್ಯ ಕಂಡು ಪೆವಿಲಿಯನ್​ ಪರೇಡ್​ ನಡೆಸಿದರು. ರಿಯಾನ್​ ಪರಾಗ್​(48) ಮತ್ತು ಆರ್​.ಅಶ್ವಿನ್​(28) ಅವರ ಅಸಾಮಾನ್ಯ ಬ್ಯಾಟಿಂಗ್​ನಿಂದಾಗಿ ತಂಡ 100 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಯಶಸ್ಸು ಕಂಡಿತು.

Continue Reading

ಕ್ರೀಡೆ

GT vs SRH: ಇಂದು ಲ್ಯಾವೆಂಡರ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಗುಜರಾತ್​ ತಂಡ; ಇದರ ಉದ್ದೇಶವೇನು?

GT vs SRH:”ಲ್ಯಾವೆಂಡರ್ ಜರ್ಸಿಗಳನ್ನು ಧರಿಸುವುದರಿಂದ ಕ್ಯಾನ್ಸರ್ ಹೋರಾಟಗಾರರೊಂದಿಗೆ ನಮ್ಮನ್ನು ಒಂದುಗೂಡಿಸುತ್ತದೆ ಮತ್ತು ಅವರ ಧೈರ್ಯವನ್ನು ಗೌರವಿಸುತ್ತದೆ. ತಮ್ಮ ಈ ಅಭಿಯಾನದಿಂದ ಪ್ರತಿಯೊಬ್ಬರಲ್ಲಿ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತದೆ ಎಂದು ಭಾವಿಸುತ್ತೇವೆ” ಎಂದು ಗುಜರಾತ್​ ಫ್ರಾಂಚೈಸಿ ತಿಳಿಸಿದೆ.

VISTARANEWS.COM


on

GT vs SRH
Koo

ಹೈದರಾಬಾದ್​: ಇಂದು ನಡೆಯುವ ಸನ್​ರೈಸರ್ಸ್​ ಹೈದರಾಬಾದ್(GT vs SRH)​ ವಿರುದ್ಧದ ಪಂದ್ಯದಲ್ಲಿ ಶುಭಮನ್​ ಗಿಲ್​ ಸಾರಥ್ಯದ ಗುಜರಾತ್​ ಟೈಟಾನ್ಸ್(Gujarat Titans)​ ತಂಡ ಕ್ಯಾನ್ಸರ್ ಜಾಗೃತಿಗಾಗಿ ಲ್ಯಾವೆಂಡರ್ ಜೆರ್ಸಿ(gujarat titans lavender jersey) ಧರಿಸಿ ಕಣಕ್ಕಿಳಿಯಲಿದೆ. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿಯೇ ಗುಜರಾತ್​ ಈ ಜೆರ್ಸಿಯಲ್ಲಿ ಆಡಬೇಕಿತ್ತು. ಆದರೆ ಈ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಇದು ಸಾಧ್ಯವಾಗಿರಲಿಲ್ಲ. ಕಳೆದ ವರ್ಷವೂ ಕೂಡ ಗುಜರಾತ್​ ಈ ಜೆರ್ಸಿಯಲ್ಲಿ ಆಡಿತ್ತು. ಕ್ಯಾನ್ಸರ್ ರೋಗಿಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವುದು ಮತ್ತು ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

“ಲ್ಯಾವೆಂಡರ್ ಜರ್ಸಿಗಳನ್ನು ಧರಿಸುವುದರಿಂದ ಕ್ಯಾನ್ಸರ್ ಹೋರಾಟಗಾರರೊಂದಿಗೆ ನಮ್ಮನ್ನು ಒಂದುಗೂಡಿಸುತ್ತದೆ ಮತ್ತು ಅವರ ಧೈರ್ಯವನ್ನು ಗೌರವಿಸುತ್ತದೆ. ತಮ್ಮ ಈ ಅಭಿಯಾನದಿಂದ ಪ್ರತಿಯೊಬ್ಬರಲ್ಲಿ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತದೆ ಎಂದು ಭಾವಿಸುತ್ತೇವೆ” ಎಂದು ಗುಜರಾತ್​ ಫ್ರಾಂಚೈಸಿ ತಿಳಿಸಿದೆ.

2040ರ ವೇಳೆಗೆ ಭಾರತದಲ್ಲಿನ ಕ್ಯಾನ್ಸರ್‌ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ನೋಯ್ಡಾದ ರಾಷ್ಟ್ರೀಯ ಕ್ಯಾನ್ಸರ್‌ ತಡೆ ಮತ್ತು ಸಂಶೋಧನ ಸಂಸ್ಥೆಯ ಅಧ್ಯಯನದ ಪ್ರಕಾರ ಭಾರತದಲ್ಲಿ 2.25 ದಶಲಕ್ಷ ಮಂದಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು 2040ರ ವೇಳೆಗೆ ಇದು ದ್ವಿಗುಣಗೊಳ್ಳಲಿದೆ ಎಂದಿದೆ. ಪ್ರತೀ ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆೆ ಎಂದು ಕ್ಯಾನ್ಸರ್‌ ಇಂಡಿಯಾ.ಆರ್ಗ್‌ ವರದಿ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಶೇ. 30-50ರಷ್ಟು ಕ್ಯಾನ್ಸರ್‌ ರೋಗಗಳನ್ನು ತಡೆಯಬಹುದಾಗಿದೆ. ಇದ ಕ್ಕಾಗಿ ತಂಬಾಕು ಮತ್ತು ಯುವಿ ಕಿರಣಗಳಿಂದ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಒಂದು ಸಿಗರೇಟ್‌ನಲ್ಲಿ ಸುಮಾರು 7,000 ರಾಸಾಯನಿಕಗಳಿವೆ ಎನ್ನಲಾಗುತ್ತಿದ್ದು, ಅವುಗಳಲ್ಲಿ 50 ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದೂ ಅದು ಹೇಳಿದೆ.

ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಗುಜರಾತ್​ ತಂಡದ ಪ್ಲೇ ಆಫ್ ಗೇರುವ ಆಸೆ ಕಮರಿ ಹೋಗಿತ್ತು. ಟೂರ್ನಿಯಿಂದ ಹೊರಬಿದ್ದಿರುವ ಗಿಲ್​ ಪಡೆಗೆ ಇಂದಿನ ಪಂದ್ಯ ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು. ಮೊದಲೆರಡು ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಗುಜರಾತ್‌ ಟೈಟಾನ್ಸ್‌ ಈ ಬಾರಿ ತೀರಾ ನಿರಾಶಾದಾಯಕ ಪ್ರದರ್ಶನ ತೋರಿದೆ. ಮೊಹಮ್ಮದ್‌ ಶಮಿ ಗೈರು ಮತ್ತು ಪಾಂಡ್ಯ ಮುಂಬೈ ತಂಡಕ್ಕೆ ಹೋದದ್ದು ತಂಡಕ್ಕೆ ಭಾರೀ ಹೊಡೆತ ನೀಡಿತ್ತು.​

ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಸನ್​ರೈಸರ್ಸ್​ ಹೈದರಾಬಾದ್​ಗೆ ಇದು ಮಹತ್ವದ ಪಂದ್ಯ. ಸದ್ಯ 14 ಅಂಕ ಗಳಿಸಿ ಮೂರನೇ ಸ್ಥಾನಿಯಾಗಿದ್ದರೂ ಪ್ಲೇ ಆಫ್​ ಟಿಕೆಟ್​ ಇನ್ನೂ ಅಧಿಕೃತಗೊಂಡಿಲ್ಲ. ಇಂದು ಗೆದ್ದರೆ ಅಧಿಕೃತವಾಗಲಿದೆ. 25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ, ಟ್ರಾವಿಸ್​ ಹೆಡ್​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಈ ಜೋಡಿ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರಲಿದೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್​ ಕ್ಲಾಸೆನ್​, ಐಡೆನ್​ ಮಾರ್ಕ್ರಮ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

Continue Reading

ಕ್ರೀಡೆ

KMF Nandini Logo: ನಂದಿನಿ ಲೋಗೋ ಇರುವ ಜೆರ್ಸಿ ಅನಾವರಣಗೊಳಿಸಿದ ಸ್ಕಾಟ್ಲೆಂಡ್

KMF Nandini Logo: ಸ್ಕಾಟ್ಲೆಂಡ್ ತಂಡದ ಉಪನಾಯಕ ಮ್ಯಾಥ್ಯೂ ಕ್ರಾಸ್ ಮತ್ತು ಬಲಗೈ ಮಧ್ಯಮ ವೇಗಿ ಕ್ರಿಸ್ ಸೋಲ್ ನಂದಿನಿ ಲೋಗೋ ಇರುವ ಜೆರ್ಸಿಯನ್ನು ಅನಾವರಣಗೊಳಿಸಿದರು. ಈ ಬಗ್ಗೆ ಮಾಹಿತಿ ನೀಡಿರುವ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ನಮ್ಮ ಬ್ರಾಂಡ್​ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.

VISTARANEWS.COM


on

T20 World Cup 2024
Koo

ಬೆಂಗಳೂರು: ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯದಲ್ಲಿ ಜೂನ್ 1 ರಿಂದ ಆರಂಭವಾಗಲಿರುವ ಪುರುಷರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಕರ್ನಾಟಕ ಹಾಲು ಮಹಾ ಮಂಡಳಿ(KMF) ಈಗಾಗಲೇ 2 ತಂಡಗಳಾದ ಸ್ಕಾಟ್ಲೆಂಡ್(Scotland) ಮತ್ತು ಐರ್ಲೆಂಡ್(Ireland) ತಂಡಗಳ ಪ್ರಾಯೋಜಕತ್ವ ಪಡೆದಿದೆ. ಈ ಮೂಲಕ ಕೆಎಂಎಫ್‌ ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟು ನಂದಿನಿ(nandini milk) ಲೋಗೋವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಮುಂದಾಗಿದೆ. ಜತೆಗೆ ಅಮೂಲ್‌ಗೆ ತೀವ್ರ ಪೈಪೋಟಿ ನೀಡಲಿದೆ. ಇದೀಗ ನಂದಿನಿ ಲೋಗೋ(KMF Nandini Logo) ಇರುವ ಜೆರ್ಸಿಯನ್ನು ‘ಕ್ರಿಕೆಟ್ ಸ್ಕಾಟ್ಲೆಂಡ್’ ಅನಾವರಣಗೊಳಿಸಿದೆ.

ಸ್ಕಾಟ್ಲೆಂಡ್ ತಂಡದ ಉಪನಾಯಕ ಮ್ಯಾಥ್ಯೂ ಕ್ರಾಸ್ ಮತ್ತು ಬಲಗೈ ಮಧ್ಯಮ ವೇಗಿ ಕ್ರಿಸ್ ಸೋಲ್ ನಂದಿನಿ ಲೋಗೋ ಇರುವ ಜೆರ್ಸಿಯನ್ನು ಅನಾವರಣಗೊಳಿಸಿದರು. ಈ ಬಗ್ಗೆ ಮಾಹಿತಿ ನೀಡಿರುವ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ನಮ್ಮ ಬ್ರಾಂಡ್​ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.

ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎಡಗೈ ಮೇಲೆ ನಂದಿನಿ ಲೋಗೋ ಕಾಣಿಸಿಕೊಳ್ಳಲಿದೆ. ಐರ್ಲೆಂಡ್ ತಂಡ ಜೆರ್ಸಿ ಇನ್ನಷ್ಟೇ ಅನಾವರಣಗೊಳ್ಳಬೇಕಿದೆ. ಮಿನಿ ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.

ಇದನ್ನೂ ಓದಿ T20 World Cup 2024: ಭಾರತ ಕೇವಲ ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದೆ; ಕಾರಣ ಏನು?

ಮೋಹನ್‌ದಾಸ್‌ ಪೈ ವಿರೋಧ


ಉದ್ಯಮಿ ಮೋಹನ್‌ದಾಸ್‌ ಪೈ (Mohandas Pai) ಅವರು ಸ್ಕಾಟ್ಲೆಂಡ್, ಐರ್ಲೆಂಡ್‌ ತಂಡಗಳಿಗೆ KMF ಪ್ರಾಯೋಜಕತ್ವ ಪಡೆದ ಕಾರಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕೆಎಂಎಫ್‌ಗೆ ಕರ್ನಾಟಕ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು ಕಾಣುವುದಿಲ್ಲವೇ? ಇವುಗಳಿಗೇಕೆ ಪ್ರಾಯೋಜಕತ್ವ ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದರು.

ಕೆಎಂಎಫ್‌ನಿಂದ ವಿದೇಶಿ ಕ್ರಿಕೆಟ್ ತಂಡಗಳಿಗೆ ಪ್ರಾಯೊಜಕತ್ವ ಪಡೆದ ವಿಚಾರದ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋಹನ್‌ ದಾಸ್‌ ಪೈ, ಕರ್ನಾಟಕದ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು, ಬಡವರಿಗೆ ವಿದ್ಯಾರ್ಥಿ ವೇತನಗಳಿಗೆ ಏಕೆ ಕೆಎಂಎಫ್‌ ಪ್ರಾಯೋಜಕತ್ವವನ್ನು ನೀಡಬಾರದು? ಕೆಎಂಎಫ್ ಕನ್ನಡಿಗ ತೆರಿಗೆದಾರರ ಹಣ, ಸಬ್ಸಿಡಿ ಮತ್ತು ಬಜೆಟ್‌ನಿಂದ ಧನಸಹಾಯವನ್ನು ಪಡೆದುಕೊಳ್ಳುತ್ತದೆ. ಆದರೆ, ಯಾರಿಗೂ ಗೊತ್ತಿಲ್ಲದ ವಿದೇಶಿ ತಂಡಗಳಿಗೆ ಖರ್ಚು ಮಾಡಲು ಹೊರಟಿದೆ” ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಈ ಬಗ್ಗೆ ಟ್ಯಾಗ್‌ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದರು.

Continue Reading
Advertisement
HD DeveGowda Wont celebrate 92nd birthday
ರಾಜಕೀಯ42 seconds ago

HD Devegowda: 92ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದ ಎಚ್‌ಡಿ ದೇವೇಗೌಡ; ಮೊಮ್ಮಗನ ಕೇಸ್‌ನಿಂದ ಈ ತೀರ್ಮಾನ?

hd revanna case
ಕ್ರೈಂ4 mins ago

HD Revanna Case: ಎಚ್‌ಡಿ ರೇವಣ್ಣ ಮತ್ತೆ ಕೋರ್ಟ್‌ನಲ್ಲಿ; ಎಸ್‌ಐಟಿ ಅಧಿಕಾರಿಗಳು ರೇವಣ್ಣ ನಿವಾಸದಲ್ಲಿ!

Murder case
ದಾವಣಗೆರೆ15 mins ago

Murder Case : ಚಾಕುವಿನಿಂದ ಇರಿದು ಯುವಕನ ಕೊಲೆ; ಹಂತಕರಿಗಾಗಿ ಪೊಲೀಸರ ಹುಡುಕಾಟ

Amruthadhaare Serial bhoomika in birthday chaya singh
ಕಿರುತೆರೆ17 mins ago

Amruthadhaare Serial: ಇಂದು ಭೂಮಿಕಾಗೆ ಹುಟ್ಟು ಹಬ್ಬ: ರೀಲ್‌ ಗಂಡ ಎಸ್ಟೇಟ್​ ಬರೆದು ಕೊಟ್ರು! ರಿಯಲ್‌ ಗಂಡ ಕೊಟ್ಟ ಗಿಫ್ಟ್‌ ಏನು?

Theft in two houses in Kudligi taluk
ವಿಜಯನಗರ20 mins ago

Theft Case: ಕೂಡ್ಲಿಗಿಯ ಎರಡು ಮನೆಗಳಲ್ಲಿ ಕಳ್ಳತನ; ಬಂಗಾರ, ಬೆಳ್ಳಿ, ನಗದು ದೋಚಿದ ಕಳ್ಳರು

Prajwal Revanna Case Lawyer DevarajeGowda sent to police custody for another day
ಕ್ರೈಂ28 mins ago

Prajwal Revanna Case: ವಕೀಲ ದೇವರಾಜೇಗೌಡ ಮತ್ತೊಂದು ದಿನ ಪೊಲೀಸ್‌ ಕಸ್ಟಡಿಗೆ!

Lok Sabha Election 2024
Lok Sabha Election 202438 mins ago

Lok Sabha Election 2024: ನಾಲ್ಕು ಹಂತಗಳ ಮತದಾನ ಅಂತ್ಯ; ಕಾಂಗ್ರೆಸ್ ಆಂತರಿಕ ವರದಿಯಲ್ಲೇನಿದೆ?

isis link ummer abdul rehman mariyam
ಕ್ರೈಂ41 mins ago

ISIS link: ಐಸಿಸ್‌ ಲಿಂಕ್ ಕೇಸ್‌ನಲ್ಲಿ ಮಾಜಿ ಶಾಸಕ ಇದಿನಬ್ಬ ಮೊಮ್ಮಗನಿಗೆ ದಿಲ್ಲಿ ಹೈಕೋರ್ಟ್‌ ಜಾಮೀನು; ಕೋರ್ಟ್‌ ಕೊಟ್ಟ ಕಾರಣ ನೋಡಿ!

Murder case in davangere
ದಾವಣಗೆರೆ42 mins ago

Murder case : ಕೊಳೆತ ಶವದಲ್ಲಿದ್ದ ಕಿವಿಯೋಲೆಯಿಂದಲೇ ಸಿಕ್ಕಿಬಿದ್ದರು ಹಂತಕರು

Terrorists Killed
ದೇಶ49 mins ago

Terrorists Killed: ಸೇನೆಯ ಭರ್ಜರಿ ಬೇಟೆ; ಎಲೆಕ್ಷನ್‌ ಹಾಳುಗೆಡವಲು ಗಡಿ ನುಸುಳುತ್ತಿದ್ದ ನಾಲ್ವರು ಉಗ್ರರ ಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌