ICC Meeting : ತೃತಿಯ ಲಿಂಗಿಗಳಿಗೆ ಮಹಿಳಾ ಕ್ರಿಕೆಟ್​ ತಂಡದಲ್ಲಿ ಇಲ್ಲ ಚಾನ್ಸ್​ - Vistara News

ಕ್ರಿಕೆಟ್

ICC Meeting : ತೃತಿಯ ಲಿಂಗಿಗಳಿಗೆ ಮಹಿಳಾ ಕ್ರಿಕೆಟ್​ ತಂಡದಲ್ಲಿ ಇಲ್ಲ ಚಾನ್ಸ್​

ಆಟಗಾರರ ಸುರಕ್ಷತೆ ಹಾಗೂ ಕೌಶಲಗಳ ಏರುಪೇರನ್ನು ತಪ್ಪಿಸುವ ಉದ್ದೇಶದಿಂದ ಐಸಿಸಿ (ICC Meeting) ಸಭೆಯಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ.

VISTARANEWS.COM


on

womens cricket
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕ್ರೀಡೆಯ ಸಮಗ್ರತೆ ಮತ್ತು ಆಟಗಾರರ ಸುರಕ್ಷತೆಯನ್ನು ಹೆಚ್ಚಿಸುವ ಬದ್ಧತೆಯನ್ನು ಉಲ್ಲೇಖಿಸಿದ ಅಂತಾರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತೃತೀಯ ಲಿಂಗಿ ಮಹಿಳೆಯರನ್ನು ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್​​ನಲ್ಲಿ ಸ್ಪರ್ಧಿಸದಂತೆ ನಿಷೇಧಿಸಿದೆ. ನ್ಯಾಯಸಮ್ಮತತೆ ಮತ್ತು ಒಳಗೊಳ್ಳುವಿಕೆಗೆ ಒತ್ತು ನೀಡುವ ಈ ನಿರ್ಧಾರವು ಮಹಿಳಾ ಕ್ರಿಕೆಟ್​​ನ ಸಾರವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಆಟದ ಸಮಗ್ರತೆ, ಸುರಕ್ಷತೆ ಮತ್ತು ಒಳಗೊಳ್ಳುವಿಕೆಯನ್ನು ಕೇಂದ್ರೀಕರಿಸಿದ ಈ ನಿಯಮಗಳು ಎರಡು ವರ್ಷಗಳಲ್ಲಿ ಮೌಲ್ಯಮಾಪನಕ್ಕೆ ಒಳಗಾಗುತ್ತವೆ ಎಂಬುದಾಗಿ ಹೇಳಲಾಗಿದೆ. ಐಸಿಸಿ ಸಭೆಯಲ್ಲಿ (ICC Meeting) ನಿರ್ಧಾರವನ್ನು ಪ್ರಕಟಿಸಲಾಗಿದೆ.

ಜನನದ ಸಮಯದಲ್ಲಿ ಪುರುಷನಾಗಿದ್ದು., ಪುರುಷನಾಗಿಯೇ ಪ್ರೌಢಾವಸ್ಥೆಗೆ ಒಳಗಾದ ವ್ಯಕ್ತಿಯ ಆ ಬಳಿಕ ಲಿಂಗ ಬದಲಾವಣೆ ಕಾರ್ಯವಿಧಾನಗಳಿಗೆ ಒಳಗಾಗಿದ್ದರೆ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​​ ತಂಡಕ್ಕೆ ಅರ್ಹತೆ ಪಡೆಯುವುದಿಲ್ಲ ಎಂಬುದನ್ನು ಐಸಿಸಿ ದೃಢೀಕರಿಸಿದೆ. ಒಂಬತ್ತು ತಿಂಗಳ ಸಮಾಲೋಚನೆಯ ನಂತರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಸೇರಿದಂತೆ ಐಸಿಸಿ ಮಂಡಳಿಯು ಈ ಲಿಂಗ ಅರ್ಹತಾ ನಿಯಮಗಳನ್ನು ಅಂತಿಮಗೊಳಿಸಿತು. ಈ ನಿರ್ಧಾರವು ಮಹಿಳಾ ಕ್ರಿಕೆಟ್ ರಂಗದಲ್ಲಿ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸ್ಪರ್ಧೆಯ ಮನೋಭಾವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಇದನ್ನೂ ಓದಿ : Team India : ಜನವರಿಯಲ್ಲಿ ನಡೆಯಲಿದೆ ಅಫಘಾನಿಸ್ತಾನ ವಿರುದ್ಧ ಕ್ರಿಕೆಟ್​ ಸರಣಿ

ಲಿಂಗ ಅರ್ಹತಾ ನಿಯಮಗಳಲ್ಲಿನ ಬದಲಾವಣೆಗಳು ವ್ಯಾಪಕವಾದ ಸಮಾಲೋಚನೆ ಪ್ರಕ್ರಿಯೆಯ ಪರಿಣಾಮವಾಗಿದೆ. ಇದು ವಿಜ್ಞಾನದಲ್ಲಿ ಸ್ಥಾಪಿತವಾಗಿದೆ ಮತ್ತು ವಿಮರ್ಶೆಯ ಸಮಯದಲ್ಲಿ ಅಭಿವೃದ್ಧಿಪಡಿಸಿದ ಪ್ರಮುಖ ತತ್ವಗಳೊಂದಿಗೆ ಹೊಂದಿಕೆಯಾಗಿದೆ. ಕ್ರೀಡೆಯಾಗಿ ಪರಸ್ಪರ ಒಳಗೊಳ್ಳುವಿಕೆ ಮುಖ್ಯವಾಗಿದೆ. ಆದರೆ ಅಂತಾರಾಷ್ಟರೀಯ ಮಹಿಳಾ ಕ್ರಿಕೆ್ಟ್​ನ ಸಮಗ್ರತೆ ಮತ್ತು ಆಟಗಾರರ ಸುರಕ್ಷತೆಯನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿತ್ತು ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡೈಸ್ ಹೇಳಿದ್ದಾರೆ.

ದೇಶೀಯ ಸರ್ಕೀಟ್​ಗೆ ಅನ್ವಯವಾಗುವುದಿಲ್ಲ

ಈ ನಿಬಂಧನೆಗಳು ಮಹಿಳಾ ಕ್ರಿಕೆಟ್​​ನಲ್ಲಿ ಅಂತಾರಾಷ್ಟ್ರೀಯ ಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿವೆ. ದೇಶೀಯ ಲಿಂಗ ಅರ್ಹತೆಯನ್ನು ನಿರ್ಧರಿಸುವಲ್ಲಿ ಪ್ರತಿ ರಾಷ್ಟ್ರೀಯ ಕ್ರಿಕೆಟ್ ಆಡಳಿತ ಮಂಡಳಿಗೆ ಅಧಿಕಾರ ನೀಡಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ತೃತೀಯ ಲಿಂಗಿ ಮಹಿಳೆಯರನ್ನು ಅವರ ಸ್ವಯಂ-ಗುರುತಿಸಲ್ಪಟ್ಟ ಲಿಂಗದ ಆಧಾರದ ಮೇಲೆ ಸ್ವೀಕರಿಸಲು ಸಲಹೆ ನೀಡುತ್ತಿದೆ. ಅವರ ವೈಯಕ್ತಿಕ ಮಾನ್ಯತೆಗೆ ಒತ್ತು ನೀಡುತ್ತದೆ.

“ಅಸಮಾನತೆಯ ನೀತಿ” ಆಟಗಾರರ ನಡುವಿನ ಕೌಶಲಗಳಲ್ಲಿ ವ್ಯತ್ಯಾಸಗಳಿಂದ ಉಂಟಾಗುವ ಸುರಕ್ಷತಾ ಕಾಳಜಿಗಳನ್ನು ಪರಿಹರಿಸುತ್ತದೆ. ಪುರುಷ ಪ್ರೌಢಾವಸ್ಥೆಯನ್ನು ಅನುಭವಿಸಿ ಬಳಿ ಮಹಿಳಾ ವಿಶ್ವ ಶ್ರೇಯಾಂಕದ ಸ್ಪರ್ಧೆಗಳಲ್ಲಿ ಸ್ಪರ್ಧಿಸುವುದನ್ನು ನ್ಯಾಯಸಮ್ಮತವಲ್ಲ. ಕ್ರೀಡೆಯೊಳಗೆ ನ್ಯಾಯಸಮ್ಮತತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದೆ.

ಕ್ರಿಕೆಟ್​ನಲ್ಲಿ ಜಾರಿಗೆ ಬಂತು ಹೊಸ ನಿಯಮ, ತಪ್ಪಿದರೆ ಐದು ರನ್​ ದಂಡ

ಪುರುಷರ ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಬೌಲಿಂಗ್ ತಂಡಗಳಿಗೆ ಬೌಲರ್ ಇನ್ನಿಂಗ್ಸ್​ನಲ್ಲಿ ಮೂರನೇ ಬಾರಿಗೆ ಮುಂದಿನ ಓವರ್ ಎಸೆಯುವ ನಡುವಿನ ಸಮಯ 60 ಸೆಕೆಂಡುಗಳ ಮಿತಿ (Stop Clock) ಮೀರಿದರೆ ಐದು ರನ್ ದಂಡ ವಿಧಿಸಲಾಗುವುದು ಎಂದು ಕ್ರೀಡಾ ಆಡಳಿತ ಮಂಡಳಿ ಐಸಿಸಿ ಮಂಗಳವಾರ ತಿಳಿಸಿದೆ. ಇದನ್ನು ಆರಂಭದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಬಳಸಲಾಗುವುದು. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಡಿಸೆಂಬರ್ 2023ರಿಂದ ಏಪ್ರಿಲ್ 2024 ರವರೆಗೆ ಪುರುಷರ ಏಕದಿನ ಮತ್ತು ಟಿ 20 ಐ ಕ್ರಿಕೆಟ್​ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಸ್ಟಾಪ್ ಗಡಿಯಾರವನ್ನು ಪರಿಚಯಿಸಲು ಸಿಇಸಿ ಒಪ್ಪಿಕೊಂಡಿದೆ. ಓವರ್ ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ನಿಯಂತ್ರಿಸಲು ಗಡಿಯಾರವನ್ನು ಬಳಸಲಾಗುತ್ತದೆ. “ಹಿಂದಿನ ಓವರ್ ಮುಗಿದ 60 ಸೆಕೆಂಡುಗಳಲ್ಲಿ ಬೌಲಿಂಗ್ ತಂಡವು ಮುಂದಿನ ಓವರ್ ಎಸೆಯಲು ಸಿದ್ಧರಿಲ್ಲದಿದ್ದರೆ, ಇನ್ನಿಂಗ್ಸ್​ನಲ್ಲಿ ಇದೇ ಮಾದರಿಯಲ್ಲಿ ಮೂರನೇ ಬಾರಿಗೆ ವಿಳಂಬ ಮಾಡಿದರೆ 5 ರನ್ ದಂಡ ವಿಧಿಸಲಾಗುವುದು” ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಪಿಚ್ ನಿಷೇಧ ನಿಯಮವೂ ಬದಲಾವಣೆ

ಡಿಮೆರಿಟ್​ ಅಂಕಗಳನ್ನು ಪಡೆದ ಅಂತಾರಾಷ್ಟ್ರೀಯ ಕ್ರಿಕೆಟ್​ ಪಿಚ್ ಅನ್ನು ನಿಷೇಧಿಸುವ ಪ್ರಕ್ರಿಯೆಯಲ್ಲಿ ಐಸಿಸಿ ಬದಲಾವಣೆ ಮಾಡಿದೆ. “ಪಿಚ್ ಮತ್ತು ಔಟ್​​ಫೀಲ್ಡ್​ ಮೇಲ್ವಿಚಾರಣಾ ನಿಯಮಗಳಲ್ಲಿನ ಬದಲಾವಣೆಗಳನ್ನು ಸಹ ಅನುಮೋದಿಸಲಾಯಿತು, ಇದರಲ್ಲಿ ಪಿಚ್ ಅನ್ನು ಮೌಲ್ಯಮಾಪನ ಮಾಡುವ ಮಾನದಂಡಗಳನ್ನು ಸರಳೀಕರಿಸುವುದು ಮತ್ತು ಐದು ವರ್ಷಗಳ ಅವಧಿಯಲ್ಲಿ ಒಂದು ಸ್ಥಳವು ಐದರ ಬದಲು ಆರು ಡಿಮೆರಿಟ್ ಅಂಕಗಳನ್ನು ಪಡೆದರೆ ಮಾತ್ರ ನಿಷೇಧಕ್ಕೆ ಒಳಪಡುತ್ತವೆ.” ಎಂದು ಐಸಿಸಿ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಲಕ್ನೊ ವಿರುದ್ಧ ರಾಜಸ್ಥಾನ್​ಗೆ 7 ವಿಕೆಟ್​ ಭರ್ಜರಿ ಜಯ, ಪ್ಲೇಆಫ್​ ಹೊಸ್ತಿಲಲ್ಲಿ ಸಂಜು ಬಳಗ

VISTARANEWS.COM


on

IPL 2024
Koo

ಲಖನೌ: ಸಂಜು ಸ್ಯಾಮ್ಸನ್ ಬಾರಿಸಿದ ಅಜೇಯ 71 ರನ್​ (ಅರ್ಧ ಶತಕ) ಹಾಗೂ ಧ್ರುವ್ ಜುರೆಲ್​ ಬಾರಿಸಿದ ಅಜೇಯ 52 ರನ್​ (ಅರ್ಧ ಶತಕ) ನೆರವಿನಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ನ 44ನೇ ಪಂದ್ಯದಲ್ಲಿ (IPL 2024) ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ 7 ವಿಕೆಟ್​ ಭರ್ಜರಿ ವಿಜಯ ದಾಖಲಿಸಿದೆ. ಈ ಮೂಲಕ ರಾಜಸ್ಥಾನ್ ತಂಡ ಹಾಲಿ ಆವೃತ್ತಿಯಲ್ಲಿ 8ನೇ ವಿಜಯವನ್ನು ತನ್ನದಾಗಿಸಿಕೊಂಡಿದೆ. ಒಟ್ಟು 16 ಅಂಕಗಳನ್ನು ಪಡೆದಿರುವ ರಾಜಸ್ಥಾನ್ ಬಳಗ ಬಹುತೇಕ ಪ್ಲೇ ಆಫ್ ಹಂತಕ್ಕೇರಿದೆ. ಆದರೆ, ಅದಿನ್ನೂ ಅಧಿಕೃತಗೊಂಡಿಲ್ಲ. ಅತ್ತ ಲಕ್ನೊ ತಂಡ ಸತತ ಎರಡು ಗೆಲುವಿನ ಬಳಿಕ ಸೋಲಿಗೆ ಸಿಲುಕಿದೆ. ಇದು ಆ ತಂಡಕ್ಕೆ ಒಟ್ಟು 9 ಪಂದ್ಯಗಳಲ್ಲಿ 4ನೇ ಸೋಲು. ಆದಾಗ್ಯೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.

ಇಲ್ಲಿನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯಿತು. ಟಾಸ್ ಗೆದ್ದ ರಾಜಸ್ಥಾನ್ ಆಯ್ಕೆ ಮಾಡಿಕೊಂಡರೆ ಮೊದಲು ಬ್ಯಾಟ್​ ಮಾಡಿದ ಲಕ್ನೊ ಬಳಗ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 196 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ಗೆ 199 ರನ್ ಬಾರಿಸಿ ಭರ್ಜರಿಗೆ ಗೆಲವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: KL Rahul : ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಕೆಎಲ್ ರಾಹುಲ್; ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

ಸಂಜು ಉತ್ತಮ ಬ್ಯಾಟಿಂಗ್​

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ರಾಜಸ್ಥಾನ್ ತಂಡ ರನ್ ಗಳಿಸುತ್ತಲೇ ಸಾಗಿತು. ಯಶಸ್ವಿ ಜೈಸ್ವಾಲ್​ 24 ರನ್ ಬಾರಿಸಿದರೆ ಜೋಸ್​ ಬಟ್ಲರ್​​ 34 ರನ್​ಗಳ ಕೊಡುಗೆ ಕೊಟ್ಟರು. ಆ ಬಳಿಕ ಬಂದ ಸಂಜು ಸ್ಯಾಮ್ಸನ್ ವಿಕೆಟ್​ ಉರುಳದಂತೆ ನೋಡಿಕೊಂಡ ಜತೆಗೆ 33 ಎಸೆತಗಳಲ್ಲಿ 71 ರನ್ ಬಾರಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್​ 14 ರನ್​ಗೆ ಸೀಮಿತಗೊಂಡರು. ಆದರೆ ಐದನೇ ಕ್ರಮಾಂಕದಲ್ಲಿ ಆಡಿದ ಧ್ರುವ್ ಜುರೆಲ್​ ಅಮೋಘ ಇನಿಂಗ್ಸ್ ಆಡಿದರು. ಅವರು 34 ಎಸೆತಕ್ಕೆ 52 ರನ್​ ಕೊಡುಗೆ ಕೊಟ್ಟರು. ಇದು ಹಾಲಿ ಅವೃತ್ತಿಯಲ್ಲಿ ಅವರ ಮೊದಲ ಅರ್ಧ ಶತಕವಾಗಿದೆ.

ಕಳಪೆ ಆರಂಭ

ಹಿಂದಿನ ಗೆಲುವಿನ ಉತ್ಸಾಹದೊಂದಿಗೆ ಬ್ಯಾಟಿಂಗ್ ಆರಂಭಿಸಿದ ಲಕ್ನೊ ತಂಡಕ್ಕೆ ಕ್ವಿಂಟನ್ ಡಿ ಕಾಕ್​ 8 ರನ್​ಗೆ ಔಟಾಗುವ ಮೂಲಕ ಹಿನ್ನಡೆ ಉಂಟಾಯಿತು. ಕೆ. ಎಲ್ ರಾಹುಲ್ 76 ರನ್​ ಬಾರಿಸುವ ಮೂಲಕ ತಂಡವನ್ನು ಕಾಪಾಡಿದರು. ಆದರೆ, ಹಿಂದಿನ ಪಂದ್ಯದ ಹೀರೊ ಮಾರ್ಕಸ್​ ಸ್ಟೊಯ್ನಿಸ್​ ಶೂನ್ಯಕ್ಕೆ ಔಟಾಗಿ ಹಿನ್ನಡೆ ಉಂಟು ಮಾಡಿದರು. ದೀಪಕ್ ಹೂಡ 50 ರನ್​ ಬಾರಿಸಿದರು. ಕೊನೆಯ ಬ್ಯಾಟರ್​ಗಳ ಸಣ್ಣ ಪುಟ್ಟ ರನ್​ಗಳ ಕೊಡುಗೆಗಳೊಂದಿಗೆ ಸ್ಪರ್ಧಾತ್ಮ ಮೊತ್ತ ಪೇರಿಸಿತು.

Continue Reading

ಕ್ರಿಕೆಟ್

KL Rahul : ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಕೆಎಲ್ ರಾಹುಲ್; ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

KL Rahul: ರಾಹುಲ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಋತುವಿನಲ್ಲಿ ಎಲ್ಎಸ್​​ಜಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಏಕೆಂದರೆ ಅವರು ತಮ್ಮ ಫ್ರಾಂಚೈಸಿಗಾಗಿ ಅತಿ ಹೆಚ್ಚು ರನ್ ಗಳಿಸಿದವರು. ಕರ್ನಾಟಕದ ಬ್ಯಾಟರ್​ ಎಂಟು ಪಂದ್ಯಗಳಲ್ಲಿ 39.62 ಸರಾಸರಿಯಲ್ಲಿ 317* ರನ್ ಗಳಿಸಿದ್ದಾರೆ.

VISTARANEWS.COM


on

KL Rahul
Koo

ಲಕ್ನೋ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಶನಿವಾರ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ ಸ್ಥಿರ ಪ್ರದರ್ಶನ ಮುಂದವರಿಸಿದ್ದಾರೆ. ಅವರು ಆವೇಶ್​ ಖಾನ್ ಎಸೆತಕ್ಕೆ ಟ್ರೆಂಟ್ ಬೌಲ್ಟ್​ ಹಿಡಿದ ಕ್ಯಾಚ್​ಗೆ ಬಲಿಯಾಗುವ ಮೊದಲು ಪಂದ್ಯಾವಳಿಯಲ್ಲಿ ಆರಂಭಿಕನಾಗಿ 4000 ರನ್​ಗಳ ದಾಖಲೆ ಪೂರೈಸಿದ್ದಾರೆ. ಅವರು ಪಂದ್ಯದಲ್ಲಿ 76 ರನ್ ಗಳಿಸಿದ್ದಾರೆ.

ಲಕ್ನೊ ತಂಡ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಮತ್ತು ಅಗ್ರ ಕ್ರಮಾಂಕದ ಬ್ಯಾಟರ್​ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಬೇಗನೆ ಕಳೆದುಕೊಂಡರೂ ಎಲ್ಎಸ್ಜಿ ಪಂದ್ಯದಲ್ಲಿ ತನ್ನ ಹಿಡಿತವನ್ನು ಉಳಿಸಿಕೊಂಡಿತು. ರಾಹುಲ್​ 31 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಈ ವೇಳೆ ಅವರು ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಐದನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಯನ್ನು ಸಾಧಿಸಲು ಅವರು 94 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡರು.

ಶಿಖರ್ ಧವನ್ (6362), ಡೇವಿಡ್ ವಾರ್ನರ್ (5909), ಕ್ರಿಸ್ ಗೇಲ್ (4480) ಮತ್ತು ವಿರಾಟ್ ಕೊಹ್ಲಿ (4041) ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕಾಕತಾಳೀಯವೆಂಬಂತೆ ರಾಹುಲ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಋತುವಿನಲ್ಲಿ ಎಲ್ಎಸ್​​ಜಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಏಕೆಂದರೆ ಅವರು ತಮ್ಮ ಫ್ರಾಂಚೈಸಿಗಾಗಿ ಅತಿ ಹೆಚ್ಚು ರನ್ ಗಳಿಸಿದವರು. ಕರ್ನಾಟಕದ ಬ್ಯಾಟರ್​ ಎಂಟು ಪಂದ್ಯಗಳಲ್ಲಿ 39.62 ಸರಾಸರಿಯಲ್ಲಿ 317* ರನ್ ಗಳಿಸಿದ್ದಾರೆ. ಪ್ರಸಕ್ತ ಋತುವಿನಲ್ಲಿ ಅವರು 137.82 ರ ಯೋಗ್ಯ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಒಟ್ಟಾರೆಯಾಗಿ, ರಾಹುಲ್ 127 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ, 46.57 ಸರಾಸರಿಯಲ್ಲಿ 4517* ರನ್ ಗಳಿಸಿದ್ದಾರೆ. ಲಾಭದಾಯಕ ಪಂದ್ಯಾವಳಿಯಲ್ಲಿ ಅವರು ನಾಲ್ಕು ಶತಕಗಳು ಮತ್ತು 36 ಅರ್ಧಶತಕಗಳನ್ನು ಹೊಂದಿದ್ದಾರೆ.

ಅಭ್ಯಾಸದ ಮಧ್ಯೆ ಮೊಬೈಲ್​ನಲ್ಲೇ ಡೆಲ್ಲಿ ವರ್ಸಸ್​​ ಮುಂಬೈ ಮ್ಯಾಚ್ ನೋಡಿದ ಕೊಹ್ಲಿ

ಅಹಮದಾಬಾದ್: ಐಪಿಎಲ್ 2024ರ (IPL 2024) 43 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲಿಸಿದೆ. ಈ ಪಂದ್ಯ ಸಿಕ್ಕಾಪಟ್ಟೆ ಕುತೂಹಲಕಾರಿಯಾಗಿತ್ತು. ಅಂತೆಯೇ ಅರ್​ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ((Virat Kohli) ) ಏಪ್ರಿಲ್ 27ರಂದು ತಂಡದ ಹೋಟೆಲ್​ನಲ್ಲಿ ಇರುವಾಗಲೇ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಗುಜರಾತ್ ಜೈಂಟ್ಸ್ ವಿರುದ್ಧದ ಆರ್​ಸಿಬಿ ಪಂದ್ಯದ ಹಿನ್ನೆಲೆಯಲ್ಲಿ ಕೊಹ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅದರ ನಡುವೆಯೂ ಅವರು ಮೊಬೈಲ್​ನಲ್ಲಿ ಮ್ಯಾಚ್ ನೋಡಿ ಖುಷಿ ಪಟ್ಟಿದ್ದಾರೆ. ಆರ್​ಸಿಬಿಯ ತರಬೇತಿ ಅವಧಿಗೆ ಮುಂಚಿತವಾಗಿ ಕ್ರಿಕೆಟಿಗ ಊಟ ಮಾಡುತ್ತಿದ್ದಾಗಲೂ ಆಟವನ್ನು ವೀಕ್ಷಿಸುತ್ತಿದ್ದರು. ಹೋಟೆಲ್​​ನಲ್ಲಿ ಹಾದು ಹೋಗಿರುವ ವ್ಯಕ್ತಿಯೊಬ್ಬರು ಅದನ್ನು ರೆಕಾರ್ಡ್ ಮಾಡಿದ್ದಾರೆ. ಏಪ್ರಿಲ್ 25 ರಂದು ಹೈದರಾಬಾದ್​ನಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ (ಎಸ್​ಆರ್​​ಎಚ್​​) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸಿದ್ದರು.

ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ

ಬೆಂಗಳೂರು: ಮುಂಬರುವ ಐಪಿಎಲ್ 2024 ರಲ್ಲಿ (IPL 2024) ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಇತರ ಆಟಗಾರರು ಅಹಮದಾಬಾದ್​ಗೆ ಆಗಮಿಸಿದ್ದಾರೆ. ಬಹುನಿರೀಕ್ಷಿತ ಮುಖಾಮುಖಿಗೆ ಒಂದು ದಿನ ಮೊದಲು ಬಂದ ಆರ್​ಸಿಬಿ ಪಡೆಗಳಿಗೆ ತಂಡದ ಹೋಟೆಟ್​ನಲ್ಲಿ ಭವ್ಯ ಸ್ವಾಗತ ದೊರೆಯಿತು.

Continue Reading

ಪ್ರಮುಖ ಸುದ್ದಿ

Virat Kohli : ಅಭ್ಯಾಸದ ಮಧ್ಯೆ ಮೊಬೈಲ್​ನಲ್ಲೇ ಡೆಲ್ಲಿ ವರ್ಸಸ್​​ ಮುಂಬೈ ಮ್ಯಾಚ್ ನೋಡಿದ ಕೊಹ್ಲಿ

Virat kohli: ಗುಜರಾತ್ ಜೈಂಟ್ಸ್ ವಿರುದ್ಧದ ಆರ್​ಸಿಬಿ ಪಂದ್ಯದ ಹಿನ್ನೆಲೆಯಲ್ಲಿ ಕೊಹ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅದರ ನಡುವೆಯೂ ಅವರು ಮೊಬೈಲ್​ನಲ್ಲಿ ಮ್ಯಾಚ್ ನೋಡಿ ಖುಷಿ ಪಟ್ಟಿದ್ದಾರೆ. ಆರ್​ಸಿಬಿಯ ತರಬೇತಿ ಅವಧಿಗೆ ಮುಂಚಿತವಾಗಿ ಕ್ರಿಕೆಟಿಗ ಊಟ ಮಾಡುತ್ತಿದ್ದಾಗಲೂ ಆಟವನ್ನು ವೀಕ್ಷಿಸುತ್ತಿದ್ದರು. ಹೋಟೆಲ್​​ನಲ್ಲಿ ಹಾದು ಹೋಗಿರುವ ವ್ಯಕ್ತಿಯೊಬ್ಬರು ಅದನ್ನು ರೆಕಾರ್ಡ್ ಮಾಡಿದ್ದಾರೆ.

VISTARANEWS.COM


on

virat kohli
Koo

ಅಹಮದಾಬಾದ್: ಐಪಿಎಲ್ 2024ರ (IPL 2024) 43 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲಿಸಿದೆ. ಈ ಪಂದ್ಯ ಸಿಕ್ಕಾಪಟ್ಟೆ ಕುತೂಹಲಕಾರಿಯಾಗಿತ್ತು. ಅಂತೆಯೇ ಅರ್​ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ((Virat Kohli) ) ಏಪ್ರಿಲ್ 27ರಂದು ತಂಡದ ಹೋಟೆಲ್​ನಲ್ಲಿ ಇರುವಾಗಲೇ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಗುಜರಾತ್ ಜೈಂಟ್ಸ್ ವಿರುದ್ಧದ ಆರ್​ಸಿಬಿ ಪಂದ್ಯದ ಹಿನ್ನೆಲೆಯಲ್ಲಿ ಕೊಹ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅದರ ನಡುವೆಯೂ ಅವರು ಮೊಬೈಲ್​ನಲ್ಲಿ ಮ್ಯಾಚ್ ನೋಡಿ ಖುಷಿ ಪಟ್ಟಿದ್ದಾರೆ. ಆರ್​ಸಿಬಿಯ ತರಬೇತಿ ಅವಧಿಗೆ ಮುಂಚಿತವಾಗಿ ಕ್ರಿಕೆಟಿಗ ಊಟ ಮಾಡುತ್ತಿದ್ದಾಗಲೂ ಆಟವನ್ನು ವೀಕ್ಷಿಸುತ್ತಿದ್ದರು. ಹೋಟೆಲ್​​ನಲ್ಲಿ ಹಾದು ಹೋಗಿರುವ ವ್ಯಕ್ತಿಯೊಬ್ಬರು ಅದನ್ನು ರೆಕಾರ್ಡ್ ಮಾಡಿದ್ದಾರೆ. ಏಪ್ರಿಲ್ 25 ರಂದು ಹೈದರಾಬಾದ್​ನಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ (ಎಸ್​ಆರ್​​ಎಚ್​​) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸಿದ್ದರು.

ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ

ಬೆಂಗಳೂರು: ಮುಂಬರುವ ಐಪಿಎಲ್ 2024 ರಲ್ಲಿ (IPL 2024) ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಇತರ ಆಟಗಾರರು ಅಹಮದಾಬಾದ್​ಗೆ ಆಗಮಿಸಿದ್ದಾರೆ. ಬಹುನಿರೀಕ್ಷಿತ ಮುಖಾಮುಖಿಗೆ ಒಂದು ದಿನ ಮೊದಲು ಬಂದ ಆರ್​ಸಿಬಿ ಪಡೆಗಳಿಗೆ ತಂಡದ ಹೋಟೆಟ್​ನಲ್ಲಿ ಭವ್ಯ ಸ್ವಾಗತ ದೊರೆಯಿತು.


ಹೋಟೆಲ್​ನಲ್ಲಿ ಸಿಕ್ಕಿರುತ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದವರಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಅದರ ತುಣುಕುಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: IPL 2024 : ದೊಡ್ಡ ಮೊತ್ತದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿಗೆ 10 ರನ್ ಜಯ

ವಿರಾಟ್ ಕೊಹ್ಲಿ ಏಪ್ರಿಲ್ 28 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದೊಂದಿಗೆ ಆರ್​ಸಿಬಿ ಫ್ರಾಂಚೈಸಿಗಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಸ್ಪರ್ಧೆಗೆ ಒಂದು ದಿನ ಮುಂಚಿತವಾಗಿ ಅವರು ಮತ್ತು ಅವರ ಉಳಿದ ಆಟಗಾರರ ಜತೆ ಹೋಟೆಲ್​ಗೆ ಆಗಮಿಸಿದರು. ಈ ಮೂಲಕ ಅವರು ಅಹಮದಾಬಾದ್​ನಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಿಕೊಂಡರು.

ಐಪಿಎಲ್ 2024 ರ ಸ್ಟಾರ್ ಆಕರ್ಷಣೆಗಳಲ್ಲಿ ಒಬ್ಬರಾದ ಕೊಹ್ಲಿ ಏಪ್ರಿಲ್ 27 ರಂದು ತಂಡದ ಹೋಟೆಲ್​ಗೆ ಹೋಗುವ ವೇಳೆ ಭವ್ಯ ಸ್ವಾಗತ ಪಡೆದರು.

ಆರೆಂಜ್ ಕ್ಯಾಪ್ ವೀರ ಕೊಹ್ಲಿ

ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ 2024 ರ ಋತುವಿನಲ್ಲಿ ‘ಆರೆಂಜ್ ಕ್ಯಾಪ್’ ಹೊಂದಿದ್ದಾರೆ. ಕ್ರಿಕೆಟಿಗ ಈಗಾಗಲೇ ಕೇವಲ ಒಂಬತ್ತು ಇನಿಂಂಗ್ಸ್​​​ಗಳಲ್ಲಿ 61 ಕ್ಕೂ ಹೆಚ್ಚು ಸರಾಸರಿಯಲ್ಲಿ 430 ರನ್ ಗಳಿಸಿದ್ದಾರೆ/ ಎರಡನೇ ಸ್ಥಾನದಲ್ಲಿರುವ ಸುನಿಲ್ ನರೈನ್ ಅವರನ್ನು 73 ರನ್​ಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ.
ಕೊಹ್ಲಿ ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ ಎಸ್ಆರ್​​ಎಚ್​ ತಂಡದ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಈ ಗೆಲುವು ಒಂದು ತಿಂಗಳಲ್ಲಿ ಆರ್​ಸಿಬಿಯ ಮೊದಲ ಗೆಲುವು ಮತ್ತು ಋತುವಿನ ಒಟ್ಟಾರೆ ಎರಡನೇ ಗೆಲುವು.

ಒಂಬತ್ತು ಲೀಗ್ ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳನ್ನು ಗಳಿಸಿರುವ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ಗುಂಪು ಐಪಿಎಲ್ 2024 ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಏಣಿಯನ್ನು ಏರುವ ಪ್ರಯತ್ನದಲ್ಲಿ ಅವರು ಪಂದ್ಯಾವಳಿಯ ಈ ಹಂತದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಬೇಕಾಗಿದೆ.

Continue Reading

ಕ್ರೀಡೆ

IPL 2024 : ದೊಡ್ಡ ಮೊತ್ತದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿಗೆ 10 ರನ್ ಜಯ

IPL 2024: ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಬಳಗ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ಗೆ 257 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ ನಷ್ಟಕ್ಕೆ 247 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

IPL 2024
Koo

ನವ ದೆಹಲಿ: ಮತ್ತೊಂದು ದೊಡ್ಡ ಮೊತ್ತದ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬಯಿ ಇಂಡಿಯನ್ಸ್ ವಿರುದ್ಧ. 10 ರನ್​ಗಳ ವಿಜಯ ದೊರಕಿದೆ. ಎರಡೂ ತಂಡಗಳು ಗೆಲುವಿಗಾಗಿ ಕೊನೇ ಕ್ಷಣದ ತನಕ ಹೋರಾಡಿದ್ದು ಹಲವು ಸೋಲಿನ ಬಳಿಕ ಪುಟಿದೆದ್ದಿರುವ ಡೆಲ್ಲಿ ತಂಡ ಪಾಂಡ್ಯ ಬಳಗಕ್ಕೆ ಗೆಲುವು ನಿಕರಾಕರಿಸಿದೆ. ಈ ಮೂಲಕ ಮುಂಬೈ ತಂಡದ ಸೋಲಿನ ಬವಣೆ ಮುಂದುವರಿದಿದ್ದು ಹಾಲಿ ಆವೃತ್ತಿಯಲ್ಲಿ 9ನೇ ಪರಾಜಯಕ್ಕೆ ಒಳಗಾಗಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ಗೆಲುವನ್ನು ತನ್ನದಾಗಿಸಿಕೊಂಡು ಒಟ್ಟು 10 ಅಂಕಗಳನ್ನು ಪಡೆದುಕೊಂಡಿದ್ದು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಇದೇ ವೇಳೆ ಮುಂಬಯಿ ಇಂಡಿಯನ್ಸ್​ ಬಳಗ ಕೇವಲ 6 ಅಂಕಗಳೊಂದಿಗೆ 9ನೇ ಸ್ಥಾನವನ್ನು ಪಡೆದುಕೊಂಡಿತು.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಬಳಗ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ಗೆ 257 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ ನಷ್ಟಕ್ಕೆ 247 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಮುಂಬಯಿ ಭರ್ಜರಿ ಹೋರಾಟ

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಮುಂಬೈ ತಂಡಕ್ಕೆ ಅದಕ್ಕೆ ಪೂರಕವಾಗಿರುವ ಆರಂಭ ದೊರಕಲಿಲ್ಲ. ರೋಹಿತ್ ಶರ್ಮಾ 8 ರನ್​ಗೆ ಔಟಾದರೆ ಇಶಾನ್ ಕಿಶನ್​ 20 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. 45 ರನ್​ಗೆ 2 ವಿಕೆಟ್​ ನಷ್ಟ ಮಾಡಿಕೊಂಡ ಮುಂಬೈಗೆ ಆತಂಕ ಎದುರಾಯಿತು. ಈ ವೇಳೆ ಆಡಲು ಬಂದ ಸೂರ್ಯಕುಮಾರ್ ಯಾದವ್​ 13 ಎಸೆತಕ್ಕೆ 26 ರನ್ ಬಾರಿಸಿ ಮಿಂಚುವ ಸೂಚನೆ ಕೊಟ್ಟರು. ಆದರೆ ಸೂರ್ಯನ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಆದರೆ, ಮತ್ತೊಂದು ಬದಿಯಲ್ಲಿ ತಿಲಕ್ ವರ್ಮಾ ಗಟ್ಟಿಯಾಗಿ ನಿಂತು ಡೆಲ್ಲಿ ಬೌಲರ್​ಗಳನ್ನು ದಂಡಿಸಿದರು. ಅದೇ ರೀತಿ ಹಾಲಿ ಆವೃತ್ತಿಯಲ್ಲಿ ಮೊದಲ ಬ್ಯಾರಿಗೆ ಬ್ಯಾಟಿಂಗ್​ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ 24 ಎಸೆತಕ್ಕೆ 46 ರನ್ ಬಾರಿಸಿದರು.

ನಂತರ ಬಂದ ನೇಹಲ್ ವದೇರಾ 4 ರನ್​ಗೆ ಔಟಾದಾಗ ಮತ್ತೆ ಮುಂಬೈಗೆ ಭಯ ಶುರುವಾಯಿತು. ಆದೆರ, ಟಿಮ್ ಡೇವಿಡ್ 17 ಎಸೆತಕ್ಕೆ 37 ರನ್ ಬಾರಿಸ ಗೆಲುವಿನ ಸನಿಹಕ್ಕೆ ಬರಲು ನೆರವಾದರು. ಡೆಲ್ಲಿ ಪರ ರಸಿಕ್​ ಸಲಾಂ ಹಾಗೂ ಮುಖೇಶ್ ಕುಮಾರ್​ ತಲಾ 3 ವಿಕೆಟ್​ ಉರುಳಿಸಿ ತಂಡ ಗೆಲುವಿಗೆ ನೆರವಾದರು.

ಇದನ್ನೂ ಓದಿ: IPL 2024 : ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ; ವಿಡಿಯೊ ಇದೆ

ಮೆಗ್​ಕುರ್ಕ್​ ಭರ್ಜರಿ ಬ್ಯಾಟಿಂಗ್​

ಗೆಲುವಿನೊಂದಿಗೆ ಚೈತನ್ಯ ಪಡೆದುಕೊಂಡಿದ್ದ ಡೆಲ್ಲಿ ತಂಡ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಜೇಕ್​ ಫೇಸರ್​ ಮೆಕ್​ಗುರ್ಕ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 27 ಎಸೆತಕ್ಕೆ 84 ರನ್ ಬಾರಿಸಿ ಮಿಂಚಿದರು. ಅವರು ಅಭಿಷೇಕ್ ಪೊರೆಲ್​ (36 ರನ್​) ಜತೆಗೂಡಿ 114 ರನ್ ಬಾರಿಸಿ ಮಿಂಚಿದರು. ಶಾಯ್​ ಹೋಪ್​ 17 ಎಸೆತಕ್ಕೆ 41 ರನ್ ಬಾರಿಸಿ ಮಿಂಚಿದ್ದಾರೆ. ರಿಷಭ್ ಪಂತ್​ 29 ರನ್ ಬಾರಿಸಿ ಮಿಂಚಿದರೆ ಟ್ರಿಸ್ಟಾನ್ 25 ಎಸೆತಕ್ಕೆ 48 ರನ್ ಬಾರಿಸಿದರು.

Continue Reading
Advertisement
ವೈರಲ್ ನ್ಯೂಸ್8 mins ago

Viral Video: ಹೆಂಡತಿನ ಚೆನ್ನಾಗಿ ಥಳಿಸಿ ಫ್ಲೈ ಓವರ್‌ನಿಂದ ತಳ್ಳೋಕೆ ಯತ್ನಿಸಿದ ಪಾಪಿ ಗಂಡ; ಆಮೇಲೆ ಆಗಿದ್ದೇನು?

Lok sabaha election
ದೇಶ18 mins ago

Lok Sabha Election: ಮತದಾನ ಪ್ರಮಾಣ ಕುಸಿತ; ಬಿಜೆಪಿಗೆ ಆತಂಕ!

PM Narendra Modi Live in Sirsi campaign meeting here
Lok Sabha Election 202421 mins ago

PM Narendra Modi Live : ಪ್ರಧಾನಿ ಮೋದಿಯ ಶಿರಸಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Samantha Ruth Prabhu shocking secrets
ಟಾಲಿವುಡ್24 mins ago

Samantha Ruth Prabhu: ಸಮಂತಾಗೆ ಜನುಮ ದಿನದ ಸಂಭ್ರಮ! ಈ ನಟಿಯ ಸೀಕ್ರೆಟ್‌ ಸಂಗತಿಗಳಿವು!

PM Narendra Modi Cm Siddaramaiah many questions to PM Modi Challenge for answer
Lok Sabha Election 202448 mins ago

PM Narendra Modi: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಕೇಳಿದ 10 ಪ್ರಶ್ನೆ; ಉತ್ತರಕ್ಕಾಗಿ ಸವಾಲು!

Priyanka Gandhi Rahul Gandhi
ದೇಶ1 hour ago

Lok Sabha Election 2024: ಅಮೇಥಿ, ರಾಯ್‌ಬರೇಲಿಗೆ ರಾಹುಲ್‌, ಪ್ರಿಯಾಂಕಾ ಫಿಕ್ಸ್‌? ಖರ್ಗೆ ನಿರ್ಧಾರ ಫೈನಲ್‌

Ranbir Kapoor stunned as photographer abuses in front of him
ಬಾಲಿವುಡ್1 hour ago

Ranbir Kapoor: ರಣಬೀರ್​ ಕಪೂರ್‌ಗೆ​ ಅಶ್ಲೀಲವಾಗಿ ಬೈಯ್ದ್ರಾ ಫೋಟೋಗ್ರಾಫರ್‌? ವಿಡಿಯೊದಲ್ಲಿ ಏನಿದೆ?

pralhad Joshi
ಪ್ರಮುಖ ಸುದ್ದಿ1 hour ago

Pralhad Joshi : ಬರ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್​ನಿಂದ ನಾಟಕ; ಪ್ರಲ್ಹಾದ್ ಜೋಶಿ ಲೇವಡಿ

If Congress comes to power all your assets will belong to Government says PM Narendra Modi
Lok Sabha Election 20241 hour ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

If Congress comes to power all your assets will belong to Government says PM Narendra Modi
Lok Sabha Election 20241 hour ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ5 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ9 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202421 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

ಟ್ರೆಂಡಿಂಗ್‌