ICC World Cup 2023: ಟೀವಿ ವೀಕ್ಷಣೆಯಲ್ಲಿ ದಾಖಲೆ ಬರೆದ ವಿಶ್ವಕಪ್​ ಫೈನಲ್​ ಪಂದ್ಯ - Vistara News

ಕ್ರಿಕೆಟ್

ICC World Cup 2023: ಟೀವಿ ವೀಕ್ಷಣೆಯಲ್ಲಿ ದಾಖಲೆ ಬರೆದ ವಿಶ್ವಕಪ್​ ಫೈನಲ್​ ಪಂದ್ಯ

ಭಾರತ ಮತ್ತು ಆಸ್ಟ್ರೇಲಿಯಾ(India vs Australia, Final) ನಡುವಣ ಫೈನಲ್​ ಪಂದ್ಯವನ್ನು ಟೀವಿಯಲ್ಲಿ ಒಟ್ಟು 30 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್‌ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

VISTARANEWS.COM


on

India vs Australia Final
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ(ICC Cricket World Cup 2023) ಭಾರತ ಮತ್ತು ಆಸ್ಟ್ರೇಲಿಯಾ(India vs Australia, Final) ನಡುವಣ ಫೈನಲ್​ ಪಂದ್ಯವನ್ನು ಟೀವಿಯಲ್ಲಿ ಒಟ್ಟು 30 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್‌ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ನವೆಂಬರ್​ 19ರಂದು ವಿಶ್ವಕಪ್​ ಫೈನಲ್​ ಪಂದ್ಯ ನಡೆದಿತ್ತು. ಇದು ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದ ಇತಿಹಾಸದಲ್ಲೇ ದಾಖಲಾದ ಗರಿಷ್ಠ ವೀಕ್ಷಕರ ದಾಖಲೆಯಾಗಿದೆ.

ಒಟ್ಟಾರೆಯಾಗಿ ಈ ಟೂರ್ನಿಯನ್ನು ಅಂದರೆ ಅಕ್ಟೋಬರ್​ 5ರಿಂದ ನವೆಂಬರ್​ 19 ತನಕ ಟೀವಿಯಲ್ಲಿ ಸುಮಾರು 52 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್‌ ತಿಳಿಸಿದೆ.

ಡಿಜಿಟಲ್​ ಮಾಧ್ಯಮದಲ್ಲೂ ದಾಖಲೆ

ಫೈನಲ್ ಪಂದ್ಯವನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಏಕಕಾಲಕ್ಕೆ 5.9 ಕೋಟಿ ಮಂದಿ ವೀಕ್ಷಿಸಿದ್ದರು. ಡಿಜಿಟಲ್‌ ವೀಕ್ಷಣೆಯಲ್ಲಿ ಇದು ಕೂಡ ಹೊಸ ದಾಖಲೆ ಎನಿಸಿದೆ. ಅಹಮದಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಅಂತರದಿಂದ ಸೋಲು ಕಂಡು ವಿಶ್ವಕಪ್​ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು.

ಸ್ಟೇಡಿಯಂ ವೀಕ್ಷಣೆಯಲ್ಲಿಯೂ ದಾಖಲೆ

12.5 ಲಕ್ಷ (1.25 ಮಿಲಿಯನ್‌) ಪ್ರೇಕ್ಷಕರು ಸ್ಟೇಡಿಯಂನಲ್ಲಿ ನೇರವಾಗಿ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮಂಗಳವಾರ ಹೇಳಿದೆ. ಇದು ವಿಶ್ವಕಪ್​ ಇತಿಹಾಸದಲ್ಲೇ ದಾಖಲೆಯ ವೀಕ್ಷಣೆ ಎಂಬ ಹಿರಿಮೆ ಪಡೆದಿದೆ. ಈ ಹಿಂದೆ 2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ಜಂಟಿ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯನ್ನು ಒಟ್ಟು 10.16 ಲಕ್ಷ (1.016 ಮಿಲಿಯನ್‌) ಮಂದಿ ವೀಕ್ಷಿಸಿದ್ದರು. ಭಾನುವಾರ ಅಹಮದಾಬಾದ್​ನ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಫೈನಲ್ ಪಂದ್ಯವನ್ನು 1.3 ಲಕ್ಷ ಮಂದಿ ನೇರವಾಗಿ ವೀಕ್ಷಿಸಿದ್ದಾರೆ. ಇದು ಮಾತ್ರವಲ್ಲದೆ ದೇಶದ ವಿವಿಧ ನಗರಗಳ ಪಿವಿಆರ್​ ಐನಾಕ್ಸ್​ನ 150 ಸಿನಿಮಾ ಮಂದಿರಗಳಲ್ಲಿ 70 ಸಾವಿರಕ್ಕೂ ಅಧಿಕ ಮಂದಿ ಪಂದ್ಯವನ್ನು ವೀಕ್ಷಿಸಿದ್ದಾರೆ.

ಇದನ್ನೂ ಓದಿ IND vs AUS: ಭಾರತ ತಂಡ ಗೆದ್ದದ್ದು ರಿಂಕು ಬಾರಿಸಿದ ಸಿಕ್ಸರ್​ನಿಂದಲ್ಲ; ಮತ್ತೆ ಹೇಗೆ?

ಭಾರತಕ್ಕೆ ಸೋಲಿನ ಆಘಾತ

ಫೈನಲ್​ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್​ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024: ಈ ಮೊಬೈಲ್‌ ಆ್ಯಪ್​ನಲ್ಲಿ ಉಚಿತವಾಗಿ ಪ್ರಸಾರಗೊಳ್ಳಲಿದೆ ಟಿ20 ವಿಶ್ವಕಪ್​

2023ರ ಏಕದಿನ ವಿಶ್ವಕಪ್​ ಟೂರ್ನಿಯಂತೆಯೇ ಈ ಬಾರಿಯ ಟಿ20 ವಿಶ್ವಕಪ್​ನ ಎಲ್ಲ​ ಪಂದ್ಯಗಳನ್ನು ಮೊಬೈಲ್​ನಲ್ಲಿ ಉಚಿತವಾಗಿ ಪ್ರಸಾರ ಮಾಡುವುದಾಗಿ ಡಿಸ್ನಿ ಹಾಟ್​ಸ್ಟಾರ್ ಘೋಷಿಸಿದೆ

VISTARANEWS.COM


on

Koo

ಮುಂಬಯಿ: ಅಮೆರಿಕಾ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್(T20 World Cup 2024) ಟೂರ್ನಿ ಜೂನ್​ನಲ್ಲಿ ನಡೆಯಲಿದೆ. ಈಗಾಗಲೇ ಟೂರ್ನಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ.  ಪಂದ್ಯಾವಳಿ ಜೂನ್ 2 ರಿಂದ ಆರಂಭಗೊಂಡು ಜೂನ್​ 29ರ ತನಕ ನಡೆಯಲಿದೆ. ಒಟ್ಟು 55 ಪಂದ್ಯಗಳು ಇರಲಿದೆ. ಟೂರ್ನಿ ಆರಂಭಕ್ಕೆ ಇನ್ನು ಸರಿ ಸುಮಾರು 3 ತಿಂಗಳು ಬಾಕಿ ಇರುವಾಗಲೇ ಡಿಸ್ನಿ ಹಾಟ್​ಸ್ಟಾರ್(Hotstar) ಕ್ರಿಕೆಟ್​ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ.

2023ರ ಏಕದಿನ ವಿಶ್ವಕಪ್​ ಟೂರ್ನಿಯಂತೆಯೇ ಈ ಬಾರಿಯ ಟಿ20 ವಿಶ್ವಕಪ್​ನ ಎಲ್ಲ​ ಪಂದ್ಯಗಳನ್ನು ಮೊಬೈಲ್​ನಲ್ಲಿ ಉಚಿತವಾಗಿ ಪ್ರಸಾರ ಮಾಡುವುದಾಗಿ ಡಿಸ್ನಿ ಹಾಟ್​ಸ್ಟಾರ್(disney+ hotstar) ಘೋಷಿಸಿದೆ. ಆದರೆ ಈ ಸೌಲಭ್ಯ ಕೇವಲ ಮೊಬೈಲ್ ಬಳಕೆದಾರರಿಗೆ ಮಾತ್ರ ಸಿಗಲಿದೆ.

ಇದನ್ನೂ ಓದು WPL 2024: ಗೆಲುವಿನೊಂದಿಗೆ ತವರಿನ ಅಭಿಯಾನ ಮುಗಿಸಿದ ಆರ್​ಸಿಬಿ; ಯುಪಿ ವಿರುದ್ಧ 23 ರನ್​ ಜಯ

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಆದರೆ, ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

ತಲಾ 2 ಅಭ್ಯಾಸ ಪಂದ್ಯ


ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

Continue Reading

ಕ್ರೀಡೆ

WPL 2024: ಗೆಲುವಿನೊಂದಿಗೆ ತವರಿನ ಅಭಿಯಾನ ಮುಗಿಸಿದ ಆರ್​ಸಿಬಿ; ಯುಪಿ ವಿರುದ್ಧ 23 ರನ್​ ಜಯ

ರಾಯಲ್​ ಚಾಲೆಂಜರ್ಸ್​ ತಂಡ(Royal Challengers Bangalore) ಯುಪಿ ವಾರಿಯರ್ಸ್(UP Warriorz) ಎದುರು 23 ರನ್​ಗಳ ಗೆಲುವು ಸಾಧಿಸಿದೆ.

VISTARANEWS.COM


on

RCB celebrate after DRS ruled the Chamari Athapaththu lbw in their
Koo

ಬೆಂಗಳೂರು: ಸ್ಮೃತಿ ಮಂಧಾನ(80) ಮತ್ತು ಎಲ್ಲಿಸ್​ ಪೆರ್ರಿ(58) ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ರಾಯಲ್​ ಚಾಲೆಂಜರ್ಸ್​ ತಂಡ(Royal Challengers Bangalore) ಯುಪಿ ವಾರಿಯರ್ಸ್(UP Warriorz) ಎದುರು 23 ರನ್​ಗಳ ಗೆಲುವು ಸಾಧಿಸಿದೆ. ಇದು ಆರ್​ಸಿಬಿಗೆ ತವರಿನ ಕೊನೆಯ ಪಂದ್ಯವಾಗಿತ್ತು. ನಾಳೆಯಿಂದ ಡೆಲ್ಲಿಯಲ್ಲಿ ಪಂದ್ಯವಾಳಿಗಳು ನಡೆಯಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಸಂಪೂರ್ಣ ಜೋಶ್​ನಿಂದ ಬ್ಯಾಟಿಂಗ್​ ನಡೆಸುವ ಮೂಲಕ ಕೇವಲ 3 ವಿಕೆಟ್​ ನಷ್ಟಕ್ಕೆ 198 ರನ್​ ಬಾರಿಸಿತು. ಬೃಹತ್​ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್​ ಒಂದು ಹಂತದವರೆಗೆ ದಿಟ್ಟ ಹೋರಾಟ ನಡೆಸಿ ಆ ಬಳಿಕ ಕುಸಿತ ಕಂಡು ನಿಗದಿತ 20 ಓವರ್​ಗೆ 8 ವಿಕೆಟ್​ ಕಳೆದುಕೊಂಡು 175 ರನ್​ ಗಳಿಸಲಷ್ಟೇ ಶಕ್ತವಾಯಿತು.

ಅಪಾಯಕಾರಿ ಬ್ಯಾಟರ್​ ಗ್ರೇಸ್ ಹ್ಯಾರಿಸ್(5)​ ಮತ್ತು ​ಚಾಮರಿ ಅಟಪಟ್ಟು(8) ಅವರ ವಿಕೆಟ್​ ಬೇಗನೆ ಬಿದ್ದದ್ದು ಯುಪಿ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ರೇಣುಕ ಸಿಂಗ್​ ಓವರ್​ನಲ್ಲಿ ಸತತ 2 ಬೌಂಡರಿ ಮತ್ತು ಸಿಕ್ಸರ್​ ಬಾರಿಸಿದ ಕಿರಣ್ ನವಗಿರೆ(18) ಕೂಡ ತಮ್ಮ ಆಕ್ರಮಣಕಾರಿ ಆಟವನ್ನು ಹೆಚ್ಚು ಹೊತ್ತು ಸಾಗಿಸುವಲ್ಲಿ ವಿಫಲರಾದರು. ನಾಯಕಿ ಅಲಿಸ್ಸಾ ಹೀಲಿ (55), ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ದೀಪ್ತಿ ಶರ್ಮ(33) ಮತ್ತು ಪೂನಂ ಖೇಮ್ನಾರ್(31) ರನ್​ ಬಾರಿಸಿದರು.

ಇದನ್ನೂ ಓದಿ IPL 2024: ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಂಪೂರ್ಣ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್​ ಆಟಗಾರ

ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿಗೆ ನಾಯಕಿ ಸ್ಮೃತಿ ಮಂಧಾನ ಮತ್ತು ಸಬ್ಬಿನೇನಿ ಮೇಘನಾ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ ಶೈಲಿಯಿಂದ ಉತ್ತಮ ಆರಂಭ ಒದಗಿಸಿದರು. ಉಭಯ ಆಟಗಾರ್ತಿರು ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್​ ನಡೆಸಿದ ಪರಿಣಾಮ ಪವರ್​ ಪ್ಲೇಯಲ್ಲಿ 57 ರನ್​ ಒಟ್ಟುಗೂಡಿತು. ಈ ಆವೃತ್ತಿಯಲ್ಲಿ ಆರ್​ಸಿಬಿ ಪವರ್​ ಪ್ಲೇಯಲ್ಲಿ ಗಳಿಸಿದ ಅತ್ಯುತ್ತಮ ಗರಿಷ್ಠ ಮೊತ್ತ ಕೂಡ ಇದಾಗಿದೆ. ಜತೆಗೆ ಆರ್​ಸಿಬಿಯ ಓಪನಿಂಗ್​ ಆಟಗಾರ್ತಿಯ ಬದಲಾವಣೆಯ ಪ್ರಯೋಗ ಕೂಡ ಯಶಸ್ಸು ಕಂಡಿತು. ಈ ಹಿಂದೆ ನ್ಯೂಜಿಲ್ಯಾಂಡ್​ನ ಸೋಫಿ ಡಿವೈನ್​ ಅವರು ಇನಿಂಗ್ಸ್​ ಆರಂಭಿಸುತ್ತಿದ್ದರು. ಆದರೆ ಅವರನ್ನು ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಆಡಿಸಿ ಮೇಘನಾಗೆ ಆರಂಭಿಕರಾಗಿ ಭಡ್ತಿ ನೀಡಲಾಯಿತು. ಇದರಲ್ಲಿ ತಂಡ ಮತ್ತು ಮೇಘನಾ ಯಶಸ್ಸು ಕಂಡರು. 28 ರನ್​ಗಳಿಸಿ ಅಂಜಲಿ ಸರ್ವಾಣಿಗೆ ವಿಕೆಟ್​ ಒಪಿಸಿದರು.

ಮೇಘನಾ ವಿಕೆಟ್​ ಬಿದ್ದರೂ ಕೂಡ ಆರ್​ಸಿಬಿ ರನ್​ ವೇಗ ಮಾತ್ರ ಕುಂಠಿತವಾಗಲಿಲ್ಲ. ದ್ವಿತೀಯ ವಿಕೆಟ್​ಗೆ ಆಡಲಿಳಿದ ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್ ಎಲ್ಲಿಸ್​ ಪೆರ್ರಿ​ ತಾವೆದುರಿಸಿದ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು. ಕ್ರೀಸ್​ನ ಮತ್ತೊಂದು ತುದಿಯಲ್ಲಿದ್ದ ನಾಯಕಿ ಸ್ಮೃತಿ ಮಂಧಾನ ಆಟ ಅತ್ಯಂತ ಆಕ್ರಮಣಕಾರಿಯಾಗಿತ್ತು. ಓವರ್​ಗೆ ಕನಿಷ್ಠ 2 ಬೌಂಡರಿಯಾದರೂ ಅವರು ಬಾರಿಸುತ್ತಲೇ ಸಾಗಿದರು.

ಬೊಂಬಾಟ್​ ಅರ್ಧಶತಕದ ಬಾರಿಸಿದ ಸ್ಮೃತಿ-ಪೆರ್ರಿ


ಸ್ಮೃತಿ ಮತ್ತು ಪೆರ್ರಿ ಸೇರಿಕೊಂಡು ಯುಪಿ ಬೌಲರ್​ಗಳನ್ನು ಸರಿಯಾಗಿ ದಂಡಿಸುವ ಮೂಲಕ ನೆರೆದಿದ್ದ 26 ಸಾವಿರಕ್ಕೂ ಅಧಿಕ ಕ್ರಿಕೆಟ್​ ಪ್ರೇಕ್ಷಕರಿಗೆ ಸಂಪೂರ್ಣ ರಸದೌತಣ ಒದಗಿಸಿದರು. 16 ಓವರ್​ ತನಕ ಬ್ಯಾಟಿಂಗ್​ ನಡೆಸಿದ ಸ್ಮೃತಿ ಮಂಧಾನ ಬರೋಬ್ಬರಿ 10 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 80 ರನ್​ಗಳಿಸಿ ವಿಕೆಟ್​ ಕೈಚೆಲ್ಲಿದರು. ಕೇವಲ 20 ರನ್​ ಕೊರತೆಯಿಂದ ಶತಕ ವಂಚಿತರಾದರು. ಒಟ್ಟು 37 ಎಸೆತ ಎದುರಿಸಿದ ಪೆರ್ರಿ ಸೊಗಸಾದ 4 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ 58 ರನ್​ ಚಚ್ಚಿದರು. ಈ ಜೋಡಿ ದ್ವಿತೀಯ ವಿಕೆಟ್​ಗೆ 95 ರನ್​ ಒಟ್ಟುಗೂಡಿಸಿದರು.

ಪೆರ್ರಿ ಸಿಕ್ಸರ್​ ಏಟಿಗೆ ಕಾರಿನ ಕಿಟಕಿ ಗಾಜು ಪುಡಿಪುಡಿ


ಇದೇ ಪಂದ್ಯದಲ್ಲಿ ದೀಪ್ತಿ ಶರ್ಮ ಅವರು ಎಸೆದ 19ನೇ ಓವರ್​ನ 5ನೇ ಎಸೆತದಲ್ಲಿ ಎಲ್ಲಿಸ್‌ ಪೆರ್ರಿ ಬಾರಿಸಿದ ಸಿಕ್ಸರ್​ನಿಂದಾಗಿ ಕಾರಿನ ಕಿಟಕಿ ಗಾಜು ಪುಡಿಪುಡಿಯಾಯಿತು. ಟೂರ್ನಿಯಲ್ಲಿ ಸೂಪರ್ ಸ್ಟ್ರೈಕರ್ ಪಡೆದ ಆಟಗಾರ್ತಿಯರಿಗೆ ನೀಡಲಾಗುವ ಪ್ರದರ್ಶನ ಕಾರು ಇದಾಗಿತ್ತು. 16 ಆವೃತ್ತಿಯ ಪುರುಷರ ಐಪಿಎಲ್​ ಟೂರ್ನಿಯಲ್ಲಿಯೂ ಇದುವರೆಗೆ ಯಾರು ಕೂಡ ಸಿಕ್ಸರ್​ನಿಂದ ಕಾರಿನ ಗಾಜು ಹೊಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಎಲ್ಲಿಸ್​ ಪೆರ್ರಿ ಈ ಸಾಧನೆ ಮಾಡಿದ್ದಾರೆ.

ಯುಪಿ ಪರ ಶ್ರೀಲಂಕಾದ ಅನುಭವಿ ಆಟಗಾರ್ತಿ ಚಾಮರಿ ಅಟಪಟ್ಟು ಮತ್ತು ಕನ್ನಡತಿ ರಾಜೇಶ್ವರಿ ಗಾಯಕ್ವಾಡ್​ ಓವರ್​ಗೆ 10ರಂತೆ ರನ್​ ಬಿಟ್ಟುಕೊಟ್ಟು ಅತ್ಯಂತ ದುಬಾರಿಯಾದರು. ಒಟ್ಟು ಮೂರು ಓವರ್​ ಎಸೆದ ಅಟಪಟ್ಟು 32 ರನ್​ ಬಿಟ್ಟುಕೊಟ್ಟರೆ, ರಾಜೇಶ್ವರಿ 43 ರನ್​ ನೀಡಿದರು. ಜತೆಗೆ ಉಭಯ ಆಟಗಾರ್ತಿಯರು ಕೂಡ ವಿಕೆಟ್​ ಲೆಸ್​ ಎನಿಸಿಕೊಂಡರು. ಸೋಫಿ ಎಕ್ಲೆಸ್ಟೋನ್ ಮಾತ್ರ ತಂಡದ ಪರ ನಿರೀಕ್ಷಿತ ಪ್ರದರ್ಶನ ತೋರಿದರು. 22 ರನ್​ ನೀಡಿ ಒಂದು ವಿಕೆಟ್​ ಪಡೆದರು.

Continue Reading

ಕ್ರೀಡೆ

MS Dhoni: ಐಪಿಎಲ್​ ಆರಂಭಕ್ಕೆ 2 ವಾರ ಇರುವಾಗಲೇ ಸಂಚಲನಕಾರಿ ಪೋಸ್ಟ್ ಮಾಡಿದ ಧೋನಿ

ಧೋನಿ ತಮ್ಮ ಫೇಸ್​ಬುಕ್​ನಲ್ಲಿ ‘ಹೊಸ ಸೀಸನ್‌ಗಾಗಿ ಕಾತುರದಿಂದ ಕಾಯುತ್ತಿದ್ದೇನೆ. ಈ ಆವೃತ್ತಿಯಲ್ಲಿ ನಾನು ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ.

VISTARANEWS.COM


on

MS Dhoni
Koo

ಬೆಂಗಳೂರು: ಸ್ಟಾರ್​ ಆಟಗಾರನಾಗಿದ್ದು, ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರೂ ಕೂಡ ಮಹೇಂದ್ರ ಸಿಂಗ್​ ಧೋನಿ(MS Dhoni) ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಅಷ್ಟಾಗಿ ಆ್ಯಕ್ಟಿವ್​ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದರೂ ಧೋನಿ ಮಾತ್ರ ಇತರ ಆಟಗಾರರಂತೆ ಪೋಸ್ಟ್​ಗಳನ್ನು ಮಾಡುವುದು ಬಹಳ ಅಪರೂಪ. ಇದೀಗ ಅವರು 17ನೇ ಆವೃತ್ತಿಯ ಐಪಿಎಲ್(IPL 2024)​ ಆರಂಭಕ್ಕೆ ಇನ್ನು ಕೇವಲ 2 ವಾರ ಬಾಕಿ ಇರುವಾಗ ಫೇಸ್​ಬುಕ್​ನಲ್ಲಿ ಮಾಡಿದ ಪೋಸ್ಟ್​ ಭಾರೀ ಸಂಚಲನ ಮೂಡಿಸಿದೆ.

ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ ಸೂಪರ್​ ಕಿಂಗ್ಸ್(CSK)​ ತಂಡದ ನಾಯಕನಾಗಿರುವ ಧೋನಿ ಅವರು ಈ ಬಾರಿಯ ಐಪಿಎಲ್​ ಬಳಿಕ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷವೇ ಅವರು ಐಪಿಎಲ್​ಗೆ ವಿದಾಯ ಹೇಳಲು ಸಜ್ಜಾಗಿದ್ದರು. ಆದರೆ, ಅಭಿಮಾನಿಗಳ ಒತ್ತಾಸೆಯ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಇದೀಗ ಟೂರ್ನಿ ಆರಂಭಕ್ಕೂ ಮುನ್ನ ಧೋನಿ ತಮ್ಮ ಫೇಸ್​ಬುಕ್​ನಲ್ಲಿ ‘ಹೊಸ ಸೀಸನ್‌ಗಾಗಿ ಕಾತುರದಿಂದ ಕಾಯುತ್ತಿದ್ದೇನೆ. ಈ ಆವೃತ್ತಿಯಲ್ಲಿ ನಾನು ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಧೋನಿಯ ಈ ಪೋಸ್ಟ್​ ಕಂಡು ಅವರ ಅಭಿಮಾನಿಗಳು ಕೊಂಚ ಆತಂಕಗೊಂಡಿದ್ದಾರೆ. ಈ ಬಾರಿ ಧೋನಿ ನಿವೃತ್ತಿಯಾಗುವುದು ಖಚಿತ ಎನ್ನುವುದು ತಿಳಿದುಬಂದಿದೆ. ಕಳೆದ ಬಾರಿ ಧೋನಿ ಸಾರಥ್ಯದಲ್ಲೇ ಚೆನ್ನೈ 5ನೇ ಬಾರಿ ಟ್ರೋಫಿ ಗೆದ್ದಿತ್ತು.

ಧೋನಿ ಅವರು ಮುಂದಿನ ಆವೃತ್ತಿಯಲ್ಲಿ ಅಂದರೆ 18ನೇ ಆವೃತ್ತಿಯಲ್ಲಿ ಚೆನ್ನೈ ತಂಡದ ಕೋಚ್​ ಅಥವಾ ಮೆಂಟರ್​ ಆಗಿ ಕಾರ್ಯನಿರ್ವಹಿಸಲು ಯೋಜನೆಯೊಂದನ್ನು ಹಾಕಿಕೊಂಡಂತಿದೆ. ಇಲ್ಲವಾದಲ್ಲಿ ಅವರು ಈ ರೀತಿಯ ಪೋಸ್ಟ್​ ಮಾಡುತ್ತಿರಲಿಲ್ಲ. ಒಟ್ಟಾರೆಯಾಗಿ ಅವರ ವಿದಾಯಕ್ಕೆ ವೇದಿಕೊಂದು ಸಿದ್ದವಾಗಿದೆ.

ಇದನ್ನೂ ಓದಿ IPL 2024: ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಂಪೂರ್ಣ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್​ ಆಟಗಾರ

ಅಭ್ಯಾಸ ಆರಂಭಿಸಿದ ಚೆನ್ನೈ ತಂಡ


ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ ತಂಡ ಈಗಾಗಲೇ 17ನೇ ಆವೃತ್ತಿಗಾಗಿ ಅಭ್ಯಾಸ ಆರಂಭಿಸಿದೆ. ಶನಿವಾರ ತಂಡದ ಹಲವು ಆಟಗಾರರು ಚೆನ್ನೈಯಲ್ಲಿ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದರು. ಧೋನಿ ಅವರು ಇನ್ನೆರಡು ದಿನದಲ್ಲಿ ಈ ಅಭ್ಯಾಸ ಕ್ಯಾಂಪ್​ ಸೇರಲಿದ್ದಾರೆ. ಈ ಬಾರಿಯ ಆವೃತ್ತಿಗಾಗಿ ಆಟಗಾರರ ಮಿನಿ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದ್ದರೂ ಕಪ್​ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಬಾರಿ ಬಲಿಷ್ಠವಾಗಿ ಗೋಚರಿಸಿದ ಚೆನ್ನೈ ತಂಡ ಮತ್ತೆ ಕಪ್​ ಗೆಲ್ಲುವುದು ಖಚಿತ ಎಂದು ಟೂರ್ನಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಮಾರ್ಚ್​ 22ರಿಂದ ಆರಂಭಗೊಳ್ಳಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಚೆನ್ನೈ ತಂಡ ತನ್ನ ಬದ್ಧ ಎದುರಾಳಿ ಆರ್​ಸಿಬಿ ವಿರುದ್ಧ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

Continue Reading

ಕ್ರೀಡೆ

Ellyse Perry: ಆರ್​ಸಿಬಿ ಬ್ಯಾಟರ್​ ಎಲ್ಲಿಸ್‌ ಪೆರ್ರಿ ಸಿಕ್ಸರ್​ ಏಟಿಗೆ ಕಾರಿನ ಕಿಟಕಿ ಗಾಜು ಪುಡಿಪುಡಿ

ಎಲ್ಲಿಸ್‌ ಪೆರ್ರಿ(Ellyse Perry) ಅವರು ಬಾರಿಸಿದ ಬಲಿಷ್ಠ ಸಿಕ್ಸರ್ ರಭಸಕ್ಕೆ ​ಕಾರಿನ ಕಿಟಕಿ ಗಾಜು ಪುಡಿಪುಡಿಯಾಗಿದೆ. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Ellyse Perry
Koo

ಬೆಂಗಳೂರು: ಯುಪಿ ವಾರಿಯರ್ಸ್​ ವಿರುದ್ಧ ಸಾಗುತ್ತಿರುವ ಡಬ್ಬ್ಯುಪಿಎಲ್​ ಟೂರ್ನಿಯ 11ನೇ ಪಂದ್ಯದಲ್ಲಿ ಆರ್​ಸಿಯ ಬ್ಯಾಟರ್​, ಆಸ್ಟ್ರೇಲಿಯಾದ ಎಲ್ಲಿಸ್‌ ಪೆರ್ರಿ(Ellyse Perry) ಅವರು ಬಾರಿಸಿದ ಬಲಿಷ್ಠ ಸಿಕ್ಸರ್ ರಭಸಕ್ಕೆ ​ಕಾರಿನ ಕಿಟಕಿ ಗಾಜು ಪುಡಿಪುಡಿಯಾಗಿದೆ. ಈ ವಿಡಿಯೊ ವೈರಲ್​ ಆಗಿದೆ.

ಟೂರ್ನಿಯಲ್ಲಿ ಸೂಪರ್ ಸ್ಟ್ರೈಕರ್ ಪಡೆದ ಆಟಗಾರ್ತಿಗೆ ಕಾರನ್ನು ಪ್ರಶಸ್ತಿಯಾಗಿ ನೀಡಲಾಗುತ್ತದೆ. ಈ ಬಾರಿ ಟಾಟಾ ಪಂಚ್​ ಕಾರನ್ನು ಪ್ರಶಸ್ತಿಯಾಗಿ ನೀಡಲಾಗುವುದು. ಹೀಗಾಗಿ ಈ ಕಂಪೆನಿಯ ಕಾರೊಂದನ್ನು ಪ್ರದರ್ಶನವಾಗಿ ಪ್ರತಿ ಪಂದ್ಯದಲ್ಲಿಯೂ ಇರಿಸಲಾಗುತ್ತದೆ. ಎಲ್ಲಿಸ್‌ ಪೆರ್ರಿ ಬಾರಿಸಿದ ಸಿಕ್ಸರ್​ ನೇರವಾಗಿ ಕಾರಿನ ಕಿಟಕಿ ಗಾಜಿಗೆ ಬಿದ್ದಿದೆ. ಚೆಂಡು ಬಿದ್ದ ರಭಸಕ್ಕೆ ಗಾಜು ಪುಡಿಪುಡಿಯಾಗಿದೆ. 16 ಆವೃತ್ತಿಯ ಪುರುಷರ ಐಪಿಎಲ್​ ಟೂರ್ನಿಯಲ್ಲಿಯೂ ಇದುವರೆಗೆ ಯಾರು ಕೂಡ ಸಿಕ್ಸರ್​ನಿಂದ ಕಾರಿನ ಗಾಜು ಹೊಡೆಯಲು ಸಾಧ್ಯವಾಗಿರಲಿಲ್ಲ. ಈ ಸಾಧನೆಯನ್ನು ಮಹಿಳಾ ಕ್ರಿಕೆಟರ್​ ಮಾಡಿದ್ದು ನಿಜ್ಜಕ್ಕೂ ಮೆಚ್ಚಲೇ ಬೇಕು.

ದೀಪ್ತಿ ಶರ್ಮ ಅವರು ಎಸೆದ 19ನೇ ಓವರ್​ನ 5ನೇ ಎಸೆತದಲ್ಲಿ ಎಲ್ಲಿಸ್‌ ಪೆರ್ರಿ ಈ ಸಿಕ್ಸರ್​ ಬಾರಿಸಿದರು. ಎಲ್ಲಿಸ್‌ ಪೆರ್ರಿ ಅವರ ಭಯಾನಕ ಸಿಕ್ಸರ್​ನ ಫೋಟೊ ಮತ್ತು ವಿಡಿಯೊ ವೈರಲ್​ ಆಗಿದೆ. ಅಲ್ಲದೆ ‘ಪಂಚ್​ಗೆ ಸೂಪರ್​ ಪಂಚ್​ ನೀಡಿದ ಎಲ್ಲಿಸ್‌ ಪೆರ್ರಿ’ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಕಾರಿನ ಹೆಸರು ಪಂಚ್​ ಆಗಿರುವುದರಿಂದ ಈ ಕಮೆಂಟ್​ ಮಾಡಿದ್ದಾರೆ.

ದ್ವಿತೀಯ ಕ್ರಮಾಂಕದಲ್ಲಿ ಆಡಲಿಳಿದ ಎಲ್ಲಿಸ್‌ ಪೆರ್ರಿ ತಾವೆದುರಿಸಿದ ಮೊದಲ ಎಸತವನ್ನೇ ಬೌಂಡರಿಗೆ ಅಟ್ಟಿ ಆರಂಭಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಒಟ್ಟು 37 ಎಸೆತ ಎದುರಿಸಿದ ಅವರು ಸೊಗಸಾದ 4 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ 58 ರನ್​ ಚಚ್ಚಿದರು. ಇವರ ಜತೆಗಾರ್ತಿ ಸ್ಮೃತಿ ಮಂಧಾನ ಕೂಡ ಬಿರುಸಿನ ಬ್ಯಾಟಿಂಗ್​ ನಡೆಸಿ ಬರೋಬ್ಬರಿ 10 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 80 ರನ್​ಗಳಿಸಿ ವಿಕೆಟ್​ ಕೈಚೆಲ್ಲಿದರು. ಕೇವಲ 20 ರನ್​ ಕೊರತೆಯಿಂದ ಶತಕ ವಂಚಿತರಾದರು. ಉಭಯ ಆಟಗಾರ್ತಿಯರು ಸೇರಿಕೊಂಡು ನೆರದಿದ್ದ 26 ಸಾವಿರಕ್ಕೂ ಅಧಿಕ ಕ್ರಿಕೆಟ್​ ಪ್ರೇಕ್ಷಕರಿಗೆ ಸಂಪೂರ್ಣ ರಸದೌತಣ ಒದಗಿಸಿದರು. ಇವರ ಬ್ಯಾಟಿಂಗ್​ ಅಬ್ಬರದಿಂದ ಆರ್​ಸಿಬಿ 20 ಓವರ್​ಗಳಲ್ಲಿ 3 ವಿಕೆಟ್​ಗೆ 198 ರನ್​ ಬಾರಿಸಿದೆ.

Continue Reading
Advertisement
JP Nadda BJP
ಚಿಕ್ಕೋಡಿ9 mins ago

JP Nadda : ಪಾಕ್‌ ಬೆಂಬಲಿಗರನ್ನು ಭಾರತ ಮಾತೆ ಕ್ಷಮಿಸಲ್ಲ; ಕಾಂಗ್ರೆಸ್‌ಗೆ ನಡ್ಡಾ ಎಚ್ಚರಿಕೆ

ಕ್ರೀಡೆ17 mins ago

T20 World Cup 2024: ಈ ಮೊಬೈಲ್‌ ಆ್ಯಪ್​ನಲ್ಲಿ ಉಚಿತವಾಗಿ ಪ್ರಸಾರಗೊಳ್ಳಲಿದೆ ಟಿ20 ವಿಶ್ವಕಪ್​

Bomb Threat Bangalore
ಬೆಂಗಳೂರು29 mins ago

Bomb threat : ಸಿಎಂ, ಡಿಸಿಎಂ, ಸಚಿವರಿಗೇ ಬಾಂಬ್‌ ಬೆದರಿಕೆ;‌ ಬಸ್‌, ದೇವಾಲಯದಲ್ಲೂ ಸ್ಫೋಟ?

Death threat to Modi and Yogi Adityanath and Man arrested for threatening
ಕ್ರೈಂ50 mins ago

Death Threat to Modi: ತಲ್ವಾರ್‌ ಹಿಡಿದು ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿಗೆ ಜೀವ ಬೆದರಿಕೆ ಒಡ್ಡಿದ್ದ ನಾಸಿರ್‌ ಸೆರೆ

Karimani Malika Ninalla Song viral in Namma metro
ಬೆಂಗಳೂರು55 mins ago

Namma Metro: ನಮ್ಮ ಮೆಟ್ರೋ ಬೋಗಿಗೆ ಎಂಟ್ರಿ ಕೊಟ್ಟ ಕರಿಮಣಿ ಮಾಲೀಕ!

Gold Rate
ಚಿನ್ನದ ದರ1 hour ago

Gold Rate Today: ಚಿನ್ನದ ಬೆಲೆಯಲ್ಲಿ ಏರಿಕೆ; ಇಷ್ಟಿದೆ ಇಂದಿನ ದರ

A Raja Controversy
ರಾಜಕೀಯ1 hour ago

A Raja controversy : ಭಾರತ ಒಂದು ದೇಶವೇ ಅಲ್ಲ, ರಾಮ ದೇವರೇ ಅಲ್ಲ ಎಂದ ಡಿಎಂಕೆ ಸಂಸದ ಎ. ರಾಜಾ

ED case Money laundering case quashed Supreme Court gives big relief to DK Shivakumar
ರಾಜಕೀಯ1 hour ago

ED Case: ಅಕ್ರಮ ಹಣ ವರ್ಗಾವಣೆ ಕೇಸ್ ರದ್ದು ಮಾಡಿದ ಸುಪ್ರೀಂ ಕೋರ್ಟ್‌; ಡಿ.ಕೆ. ಶಿವಕುಮಾರ್​​ಗೆ ಬಿಗ್ ರಿಲೀಫ್

Man deaed in train collision in Mysuru
ಮೈಸೂರು2 hours ago

Mysuru News : ಪತ್ನಿ ಜತೆಗೆ ವಿಡಿಯೊ ಕಾಲ್‌; ಮಾತಲ್ಲಿ ಮೈಮರೆತಾಗ ಬಡಿಯಿತು ರೈಲು

GN saibaba
ದೇಶ2 hours ago

Maoist Links Case: ಮಾವೋವಾದಿಗಳೊಂದಿಗೆ ನಂಟು ಪ್ರಕರಣ; ಸಾಯಿಬಾಬಾ, ಇತರ ಐವರನ್ನು ದೋಷಮುಕ್ತಗೊಳಿಸಿದ ಕೋರ್ಟ್‌

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ22 hours ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌