ICC World Cup 2023: ಸೆಮಿ ಪಂದ್ಯಗಳ ಅಂಪೈರ್​ ಪಟ್ಟಿ, ಮಳೆ ನಿಯಮ ಹೀಗಿದೆ - Vistara News

ಕ್ರಿಕೆಟ್

ICC World Cup 2023: ಸೆಮಿ ಪಂದ್ಯಗಳ ಅಂಪೈರ್​ ಪಟ್ಟಿ, ಮಳೆ ನಿಯಮ ಹೀಗಿದೆ

ಸೆಮಿಫೈನಲ್​ಗೆ ಮಳೆ ಬಂದು ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ ಮೀಸಲು ದಿನಕ್ಕೆ ಪಂದ್ಯ ಮುಂದುವರಿಯಲಿದೆ.

VISTARANEWS.COM


on

semifinals umpire
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ವಿಶ್ವಕಪ್​ ಟೂರ್ನಿಯ(ICC World Cup 2023) ಸೆಮಿಫೈನಲ್​ ಪಂದ್ಯಗಳು ಬುಧವಾರದಿಂದ ಆರಂಭಗೊಳ್ಳಲಿದೆ. ನಾಳೆ ನಡೆಯುವ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ನ್ಯೂಜಿಲ್ಯಾಂಡ್(IND vs NZ)​ ಮುಖಾಮುಖಿಯಾಗಲಿದೆ. ಗುರುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ(AUS vs SA) ಸೆಣಸಾಡಲಿವೆ. ಈ ಪಂದ್ಯಗಳ ಅಂಪೈರ್​ಗಳು(semi-finals umpires) ಮತ್ತು ಮಳೆ ನಿಯಮದ ಸಂಪೂರ್ಣ ಮಾಹಿತಿ ಇಂತಿದೆ.

ಸೆಮಿಫೈನಲ್‌ ಪಂದ್ಯಗಳ ಅಂಪೈರ್​ಗಳ ಪಟ್ಟಿ

ಭಾರತ- ನ್ಯೂಜಿಲ್ಯಾಂಡ್‌

ಫೀಲ್ಟ್​ ಅಂಪಾಯರ್: ರಿಚರ್ಡ್‌ ಇಲ್ಲಿಂಗ್‌ವರ್ತ್‌, ರಾಡ್‌ ಟ್ಯುಕರ್‌

ಥರ್ಡ್‌ ಅಂಪಾಯರ್‌: ಜೋಯೆಲ್‌ ವಿಲ್ಸನ್‌

ಫೋರ್ತ್‌ ಅಂಪಾಯರ್‌: ಅಡ್ರಿಯನ್‌ ಹೋಲ್ಡ್‌ಸ್ಟಾಕ್‌

ಮ್ಯಾಚ್‌ ರೆಫ್ರಿ: ಆ್ಯಂಡಿ ಪೈಕ್ರಾಫ್ಟ್

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ

ಫೀಲ್ಡ್​ ಅಂಪಾಯರ್: ರಿಚರ್ಡ್‌ ಕೆಟಲ್‌ಬರೋ, ನಿತಿನ್‌ ಮೆನನ್‌

ಥರ್ಡ್‌ ಅಂಪಾಯರ್‌ ;ಕ್ರಿಸ್‌ ಗಫಾನಿ

ಫೋರ್ತ್‌ ಅಂಪಾಯರ್‌: ಮೈಕಲ್‌ ಗಾಫ್

ಮ್ಯಾಚ್‌ ರೆಫ್ರಿ:ಜಾವಗಲ್‌ ಶ್ರೀನಾಥ್‌

ಮಳೆ ಬಂದರೆ ಏನು ಗತಿ?

ವಿಶ್ವಕಪ್​ ಲೀಗ್​ ಹಂತದ ಯಾವುದೇ ಪಂದ್ಯಕ್ಕೂ ಮೀಸಲು ದಿನ ಇರಲಿಲ್ಲ. ಲೀಗ್ ಹಂತದ ಪಂದ್ಯಗಳು ಮಳೆಯಿಂದ ರದ್ದುಗೊಂಡರೆ ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಕೆಲವು ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸಿದ್ದರೂ, ಯಾವುದೇ ಪಂದ್ಯ ಕೂಡ ರದ್ದುಗೊಂಡಿರಲಿಲ್ಲ. ಇದೀಗ ಸೆಮಿಫೈನಲ್​ಗೆ ಮಳೆ ಬಂದು ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ ಏನು ಗತಿ, ಫಲಿತಾಂಶ ನಿರ್ಧಾರ ಹೇಗೆ ಹೀಗೆ ಹಲವು ಪಶ್ನೆಗಳು ಕ್ರಿಕೆಟ್​ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಆದರೆ ಚಿಂತಿಸುವ ಅಗತ್ಯವಿಲ್ಲ. ಐಸಿಸಿ ಮಂಗಳವಾರ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು, ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರುತ್ತದೆ ಎಂದಿದೆ.

ಇದನ್ನೂ ಓದಿ Ind vs Nz : ಹಳೆ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ಭಾರತ?

ಮೀಸಲು ದಿನವೂ ಮಳೆ ಬಂದರೆ ಫಲಿತಾಂಶ ಹೇಗೆ?

ಒಂದೊಮ್ಮೆ ಸೆಮಿಫೈನಲ್ ಪಂದ್ಯಗಳು ಮಳೆಯಿಂದ ಅಡಚಣೆಯಾಗಿ ಮೀಸಲು ದಿನವೂ ನಡೆಯದಿದ್ದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪಶ್ನೆ ಎಲ್ಲ ಕ್ರಿಕೆಟ್​ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ಉತ್ತರ ಇಲ್ಲಿದೆ. ಮೀಸಲು ದಿನವೂ ಪಂದ್ಯ ಸಂಪೂರ್ಣವಾಗಿ ನಡೆಯದಿದ್ದರೆ ಆಗ ಲೀಗ್​ ಹಂತದಲ್ಲಿ ಹೆಚ್ಚು ಅಂಕ ಮತ್ತು ರನ್​ ರೇಟ್ ಹೊಂದಿರುವ ತಂಡ ಫೈನಲ್​ ಪ್ರವೇಶಿಸಲಿದೆ. ಉದಾಹರಣೆ ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡದ ಸೆಮಿ ಫೈನಲ್​ ರದ್ದುಗೊಂಡರೆ ಇದರ ಲಾಭ ಭಾರತಕ್ಕೆ ಲಭಿಸಲಿದೆ. ಏಕೆಂದರೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ. ಹೀಗಾಗಿ ಭಾರತ ಫೈನಲ್​ ಪ್ರವೇಶ ಪಡೆಯುತ್ತದೆ.

ಇದನ್ನೂ ಓದಿ IND vs NZ: ಮುಂದಿದೆ ಟೇಬಲ್​ ಟಾಪ್​ ಕಂಟಕ; ಪಾರಾದೀತೇ ಭಾರತ?

ಸಮಾನ ಅಂಕ ಹೊಂದಿದ್ದರೆ?

ಒಂದೊಮ್ಮೆ ಸೆಮಿಫೈನಲ್​ ಮುಖಾಮುಖಿಯಾಗುವ ತಂಡದ ಅಂಕಗಳು ಸಮಾನವಾಗಿದ್ದರೆ, ಆಗ ರನ್​ರೇಟ್​ನಲ್ಲಿ ಮುಂದಿರುವ ತಂಡಕ್ಕೆ ಇದರ ಲಾಭ ಸಿಗಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ 14 ಅಂಕ ಹೊಂದಿದೆ. ಆದರೆ ರನ್​ ರೇಟ್​ನಲ್ಲಿ ದಕ್ಷಿಣ ಆಫ್ರಿಕಾ ಮುಂದಿದೆ. ಹೀಗಾಗಿ ಈ ಪಂದ್ಯ ಮಳೆಯಿಂದ ರದ್ದುಗೊಂಡರೆ ದಕ್ಷಿಣ ಆಫ್ರಿಕಾ ನೇರವಾಗಿ ಫೈನಲ್​ ಪ್ರವೇಸಿಸಲಿದೆ.

ಬೌಂಡರಿ ಕೌಂಟ್​ ಇಲ್ಲ

ಕಳೆದ ಬಾರಿಯ ವಿಶ್ವಕಪ್​ ಫೈನಲ್​ನಲ್ಲಿ ಸೂಪರ್​ ಓವರ್​ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಈ ಬಾರಿ ಬೌಂಡರಿ ನಿಯಮವನ್ನು ತೆಗೆದು ಹಾಕಲಾಗಿದೆ. ಈ ಬಾರಿ ಸೆಮಿ ಆಗಲಿ ಫೈನಲ್​ ಆಗಲಿ ಟೈ ಗೊಂಡರೆ ಫಲಿತಾಂಶ ಬರುವ ತನಕ ಸೂಪರ್​ ಓವರ್​ ಆಡಿಸಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

WPL 2024: ಶ್ರೇಯಾಂಕಾ ಪಾಟೀಲ್ ಅದ್ಭುತ ಫೀಲ್ಡಿಂಗ್​ ಕಂಡು ದಂಗಾದ ಆರ್​ಸಿಬಿ ಅಭಿಮಾನಿಗಳು

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ(RCB) ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್(Shreyanka Patil)​ ಮಾಡಿದ ಅದ್ಭತು ಫೀಲ್ಡಿಂಗ್​ನ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

VISTARANEWS.COM


on

Shreyanka Patil
Koo

ಬೆಂಗಳೂರು: ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಮಾರ್ಚ್ 2 ರ ಶನಿವಾರದಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯುಪಿಎಲ್(WPL 2024)​ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ 7 ವಿಕೆಟ್​ಗಳ ಸೋಲಿಗೆ ತುತ್ತಾಯಿತು. ಆದರೆ ಈ ಪಂದ್ಯದಲ್ಲಿ ಆರ್​ಸಿಬಿ(RCB) ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್(Shreyanka Patil)​ ಮಾಡಿದ ಅದ್ಭತು ಫೀಲ್ಡಿಂಗ್​ನ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸೋಫಿ ಡಿವೈನ್​ ಅವರು ಎಸೆದ 2ನೇ ಓವರ್​ನ ಅಂತಿಮ ಎಸೆತದಲ್ಲಿ ಮುಂಬೈ ತಂಡದ ಬ್ಯಾಟರ್​ ಹೀಲಿ ಮ್ಯಾಥ್ಯೂಸ್​ ಚೆಂಡನ್ನು ಸಿಕ್ಸರ್​ ಕಡೆ ಬಾರಿಸಿದರು. ಇದೇ ವೇಳೆ ಲಾಂಗ್​ ಆನ್​ ನಲ್ಲಿ ಫೀಲ್ಡಿಂಗ್​ ನಡೆಸುತ್ತಿದ್ದ ಶ್ರೇಯಾಂಕ ಪಾಟೀಲ್ ಎತ್ತರಕ್ಕೆ ಜಿಗಿದು​ ಸಿಕ್ಸರ್​ಗೆ ಹೋಗುತ್ತಿದ್ದ ಚೆಂಡನ್ನು ತಡೆಯುವಲ್ಲಿ ಯಶಸ್ಸಿಯಾದರು.

ಡೈವಿಂಗ್​ ಮೂಲಕ ಕ್ಯಾಚ್​ ಹಿಡಿದ ಶ್ರೇಯಾಂಕಾ ನಿಯಂತ್ರಣ ಕಳೆದುಕೊಂಡ ಕಾರಣ ಚೆಂಡನ್ನು ಮೈದಾನದ ಒಳಗೆ ಎಸೆದು ತಾವು ಬೌಂಡರಿ ಲೈನ್​ನಿಂದ ಆಚೆ ಬಿದ್ದರು. ಕ್ಯಾಚ್​ ಹಿಡಿಯುವಲ್ಲಿ ವಿಫಲರಾದರೂ ಕೂಡ ಸಿಕ್ಸರ್​ ತಡೆದು ಗಮನಸೆಳೆದರು. ಅವರ ಈ ಸೂಪರ್​ ಮ್ಯಾನ್​ ರೀತಿಯ ಫೀಲ್ಡಿಂಗ್​ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಜತೆಗೆ ಈ ಫೀಲ್ಡಿಂಗ್​ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. 21 ವರ್ಷದ ಶ್ರೇಯಾಂಕಾ ಭಾರತ ಪರ 2 ಏಕದಿನ ಪಂದ್ಯಗಳನ್ನಾಡಿ 4 ವಿಕೆಟ್​ ಪಡೆದಿದ್ದಾರೆ. ಟಿ20ಯಲ್ಲಿ 8 ವಿಕೆಟ್​ ಕಿತ್ತಿದ್ದಾರೆ.

ಇದನ್ನೂ ಓದಿ WPL 2024: ಸತತ 2ನೇ ಸೋಲಿಗೆ ತುತ್ತಾದ ಆರ್​ಸಿಬಿ; ಮುಂಬೈಗೆ 7 ವಿಕೆಟ್​ ಗೆಲುವು

ಈ ಹಿಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಆರ್​ಸಿಬಿ ಆಟಗಾರ್ತಿ ಜಾರ್ಜಿಯಾ ವೇರ್ಹ್ಯಾಮ್ ಇದೇ ರೀತಿ ಬೌಂಡರಿ ಲೈನ್​ನಲ್ಲಿ ಜಿಗಿದು ಸಿಕ್ಸರ್​ ಒಂದನ್ನು ತಡೆದಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು. ಜಾರ್ಜಿಯಾ ಅವರ ಫೀಲ್ಡಿಂಗ್​ ಕಂಡು ಲೇಡಿ ಎಬಿಡಿ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದರು.

ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಯೊಬ್ಬರು ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್(Shreyanka Patil) ಅವರಿಗೆ ಮದುವೆ ಪ್ರಸ್ತಾಪವನ್ನಿಟ್ಟಿ ಘಟನೆ ನಡೆದಿತ್ತು. ಅಭಿಮಾನಿಯ ಮದುವೆ ಪ್ರಪೋಸಲ್(Shreyanka Patil gets marriage proposal) ಕಂಡು ಆರ್​ಸಿಬಿ ತಂಡದ ಸಹ ಆಟಗಾರ್ತಿಯರು ಜೋರಾಗಿ ನಕ್ಕಿದ್ದಾರೆ. ಈ ವಿಡಿಯೊ ಮತ್ತು ಫೋಟೊ ವೈರಲ್​ ಆಗಿತ್ತು.

ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಯೊಬ್ಬ ‘ಶ್ರೇಯಾಂಕಾ ಪಾಟೀಲ್ ಅವರೇ ನೀವು ನನ್ನನ್ನು ಮದುವೆಯಾಗುತ್ತೀರಾ’ ಎಂದು ಬರೆದಿರುವ ಪೋಸ್ಟರ್ ಪ್ರದರ್ಶಿಸಿದ್ದಾರೆ. ಇದು ಪಂದ್ಯದ ದೊಡ್ಡ ಪದರೆಯಲ್ಲಿ ಕಂಡು ಬಂದಿದೆ. ಈತ ಉತ್ತರ ಕರ್ನಾಟಕದ ಅಭಿಮಾನಿಯೊಗಿದ್ದಾನೆ. ಉತ್ತರ ಕರ್ನಾಟಕ ಎಂದು ಕನ್ನಡದಲ್ಲಿಯೇ ಬರೆದಿದ್ದಾನೆ. ಶ್ರೇಯಾಂಕಾ ಪಾಟೀಲ್ ಕೂಡ ಉತ್ತರ ಕರ್ನಾಟಕ ಮೂಲದವರಾಗಿದ್ದಾರೆ.

Continue Reading

ಕ್ರೀಡೆ

Nathan Lyon: ಬ್ಯಾಟಿಂಗ್​ನಲ್ಲಿ ವಿಶ್ವ ದಾಖಲೆ ಬರೆದ ಬೌಲರ್​ ನಥಾನ್​ ಲಿಯೋನ್

ನ್ಯೂಜಿಲ್ಯಾಂಡ್​ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ದ್ವಿತೀಯ ಇನಿಂಗ್ಸ್​ನಲ್ಲಿ 41 ರನ್​ ಬಾರಿಸುವ ಮೂಲಕ ನಥಾನ್​ ಲಿಯೋನ್(Nathan Lyon)​ ಅವರು ಒಂದೇ ಒಂದು ಅರ್ಧಶತಕವನ್ನು ಗಳಿಸದೆ 1,500 ಟೆಸ್ಟ್ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

VISTARANEWS.COM


on

Nathan Lyon
Koo

ವೆಲ್ಲಿಂಗ್ಟನ್​: ಆಸ್ಟ್ರೇಲಿಯಾದ ಸ್ಪಿನ್ನರ್​ ನಥಾನ್​ ಲಿಯೋನ್(Nathan Lyon)​ ಅವರು ಬ್ಯಾಟಿಂಗ್​ನಲ್ಲಿ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ನ್ಯೂಜಿಲ್ಯಾಂಡ್​ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ದ್ವಿತೀಯ ಇನಿಂಗ್ಸ್​ನಲ್ಲಿ 41 ರನ್​ ಬಾರಿಸುವ ಮೂಲಕ ಒಂದೇ ಒಂದು ಅರ್ಧಶತಕವನ್ನು ಗಳಿಸದೆ 1,500 ಟೆಸ್ಟ್ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆಸ್ಟ್ರೇಲಿಯಾದ ದ್ವಿತೀಯ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಸ್ಟೀವನ್​ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್​ ಔಟಾದ ನಂತರ ನೈಟ್​ ವಾಚ್​ಮ್ಯಾನ್​ ಆಗಿ ಕ್ರೀಸ್​ಗಿಳಿದ ಲಿಯೋನ್​ 46 ಎಸೆತಗಳಲ್ಲಿ ಆರು ಬೌಂಡರಿಗಳೊಂದಿಗೆ 41 ರನ್ ಮಾಡಿದರು. ಸದ್ಯ ಲಿಯೋನ್​ 128 ಟೆಸ್ಟ್‌ಗಳು ಮತ್ತು 162 ಇನ್ನಿಂಗ್ಸ್‌ಗಳಲ್ಲಿ, 12.72 ರ ಸರಾಸರಿಯಲ್ಲಿ 1,501 ರನ್ ಗಳಿಸಿದ್ದಾರೆ. ಅವರ ವೈಯಕ್ತಿಕ ಉತ್ತಮ ಸ್ಕೋರ್ 47. ಈ ಪಂದ್ಯವನ್ನು ಆಸ್ಟ್ರೇಲಿಯಾ 172 ರನ್​ಗಳ ಅಂತರದಿಂದ ಗೆದ್ದು ಬೀಗಿತು.

ಇದನ್ನೂ ಓದಿ Nathan Lyon: ವಿಂಡೀಸ್​ ದಿಗ್ಗಜ ವಾಲ್ಶ್ ದಾಖಲೆ ಮುರಿದ ನಥಾನ್​ ಲಿಯೋನ್

ಬೌಲಿಂಗ್​ನಲ್ಲಿಯೂ ಪರಾಕ್ರಮ ತೋರಿದ ನಥಾನ್​ ಲಿಯೋನ್ 2 ಇನಿಂಗ್ಸ್​ ಸೇರಿ 10 ವಿಕೆಟ್​ ಉಡಾಯಿಸಿದರು. ಗಾಯದ ಸಮಸ್ಯೆಯಿಂದಾಗಿ ಕೆಲವು ವರ್ಷ ಕ್ರಿಕೆಟ್​ನಿಂದ ದೂರ ಉಳಿದಿದ್ದ ಅವರು ಇದೀಗ ಕಮ್​ಬ್ಯಾಕ್ ಮಾಡಿದ ಪಂದ್ಯದಲ್ಲಿ ವಿಕೆಟ್​ಗಳ ದಾಹ ತೀರಿಸುವಂತಿದೆ. ಮೊದಲ ಇನಿಂಗ್ಸ್​ನಲ್ಲಿ 4 ವಿಕೆಟ್​ ಕಿತ್ತ ವೇಳೆ ಸ್ಟ್​ ಇಂಡೀಸ್​ ದಿಗ್ಗಜ ಬೌಲರ್​ ಕೊರ್ಟ್ನಿ ವಾಲ್ಶ್(Courtney Walsh) ಅವರ ಟೆಸ್ಟ್ ವಿಕೆಟ್ ದಾಖಲೆನ್ನು ಮುರಿದು ಅತ್ಯಧಿಕ ಟೆಸ್ಟ್​ ವಿಕೆಟ್ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದ್ದರು. ಇದೀಗ ದ್ವಿತೀಯ ಇನಿಂಗ್ಸ್​ನಲ್ಲಿ ಮತ್ತೆ 6 ವಿಕೆಟ್​ ಪಡೆಯುವ ಮೂಲಕ ವಿಕೆಟ್​ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಟೆಸ್ಟ್​ನಲ್ಲಿ ಅವರು ಸದ್ಯ 527* ವಿಕೆಟ್​ ಕಲೆಹಾಕಿದ್ದಾರೆ. ಇನ್ನು 36 ವಿಕೆಟ್​ ಕಿತ್ತರೆ ತನ್ನದೇ ದೇಶದ ಗ್ಲೆನ್ ಮೆಕ್‌ಗ್ರಾತ್ ಅವರ ಟೆಸ್ಟ್​ ವಿಕೆಟ್​ಗಳ ದಾಖಲೆ ಮುರಿದು ಅತಿ ಹೆಚ್ಚು ಟೆಸ್ಟ್​ ವಿಕೆಟ್​ ಕಿತ್ತ ಸಾಧಕರ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಲಿದ್ದಾರೆ.

​​ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿ

ಆಟಗಾರದೇಶವಿಕೆಟ್​
ಮುತ್ತಯ್ಯ ಮುರಳೀಧರನ್ಶ್ರೀಲಂಕಾ800
ಶೇನ್ ವಾರ್ನ್ ಆಸ್ಟ್ರೇಲಿಯಾ708
ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್​696*
ಅನಿಲ್ ಕುಂಬ್ಳೆಭಾರತ619
ಸ್ಟುವರ್ಟ್ ಬ್ರಾಡ್ಇಂಗ್ಲೆಂಡ್​604
ಗ್ಲೆನ್ ಮೆಕ್‌ಗ್ರಾತ್ಆಸ್ಟ್ರೇಲಿಯಾ563
ನಥಾನ್​ ಲಿಯೊನ್​ಆಸ್ಟ್ರೇಲಿಯಾ527*
ಕರ್ಟ್ನಿ ವಾಲ್ಷ್ ವೆಸ್ಟ್​ ಇಂಡೀಸ್​519
ರವಿಚಂದ್ರನ್ ಅಶ್ವಿನ್ಭಾರತ501*
ಡೇಲ್ ಸ್ಟೈನ್ದಕ್ಷಿಣ ಆಫ್ರಿಕಾ439

Continue Reading

ಪ್ರಮುಖ ಸುದ್ದಿ

Accident News : 3.6 ಕೋಟಿ ರೂ. ಪಡೆದ ಬುಡಕಟ್ಟು ಸಮುದಾಯದ ಐಪಿಎಲ್ ಆಟಗಾರನಿಗೆ ಬೈಕ್ ಅವಘಡದಲ್ಲಿ ಗಾಯ

Accident News : ರಾಬಿಜ್​ ಮಿಂಜ್​ ಅವರನ್ನು ಗುಜರಾತ್​ ಟೈಟಲ್ಸ್​ ಮುಂದಿನ ಆವೃತ್ತಿಯ ಐಪಿಎಲ್​ಗಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

VISTARANEWS.COM


on

Robin Minz
Koo

ನವದೆಹಲಿ: ಐಪಿಎಲ್ 2024 ರ ಹರಾಜಿನಲ್ಲಿ ಸುದ್ದಿಯಾಗಿದ್ದ ಜಾರ್ಖಂಡ್​​ನ ಭರವಸೆಯ ಬುಡಕಟ್ಟು ಸಮುದಾಯದ ಕ್ರಿಕೆಟಿಗ ರಾಬಿನ್ ಮಿನ್ಜ್ ಅಪಘಾತಕ್ಕೊಳಗಾಗಿದ್ದಾರೆ (Accident News) ಎಂದು ಅವರ ತಂದೆ ಭಾನುವಾರ ತಿಳಿಸಿದ್ದಾರೆ. ಐಪಿಎಲ್​​ನ ಮಾಜಿ ಚಾಂಪಿಯನ್ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ 21 ವರ್ಷದ ಮಿನ್ಜ್​ ಅವರನ್ನು 3.60 ಕೋಟಿ ರೂ.ಗೆ ಖರೀದಿಸಿದೆ. ವರದಿಯ ಪ್ರಕಾರ, ದೊಡ್ಡ ಹಿಟ್ಟಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಮಿನ್ಜ್​, ಕವಾಸಕಿ ಸೂಪರ್ ಬೈಕ್ ಸವಾರಿ ಮಾಡುತ್ತಿದ್ದಾಗ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡಿದ್ದಾರೆ. ತಂದೆ ಫ್ರಾನ್ಸಿಸ್ ಮಿನ್ಜ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ರಾಬಿನ್ ಹೋಗುತತಿದ್ದ ಬೈಕ್ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದಾಗ ನಿಯಂತ್ರಣ ಕಳೆದುಕೊಂಡಿದ್ದಾರೆ. ಗಂಭೀರ ಗಾಯವಾಗಿಲ್ಲ. ಫ್ರಾನ್ಸಿಸ್ ಹೇಳಿದ್ದಾರೆ.

ವರದಿಯ ಪ್ರಕಾರ, ಅಪಘಾತದಿಂದಾಗಿ ಬೈಕಿನ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿದೆ. ಎಡಗೈ ಬ್ಯಾಟ್ಸ್ಮನ್ ಬಲ ಮೊಣಕಾಲಿಗೆ ಗಾಯಗಳಾಗಿವೆ. ದೊಡ್ಡ ಹಿಟ್ಟಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಮಿನ್ಜ್ ಎಡಗೈ ಬ್ಯಾಟರ್​ ಮತ್ತು ಎಂಎಸ್ ಧೋನಿಯ ನಿಷ್ಠಾವಂತ ಅಭಿಮಾನಿ. ಅವರ ಕ್ರಿಕೆಟ್ ಪ್ರಯಾಣವನ್ನು ಅನುಭವಿ ತರಬೇತುದಾರ ಚಂಚಲ್ ಭಟ್ಟಾಚಾರ್ಯ ರೂಪಿಸಿದ್ದಾರೆ. ಅವರೇ ಭಾರತದ ಮಾಜಿ ನಾಯಕ ಧೋನಿಗೆ ಕೋಚಿಂಗ್​ ನೀಡಿದವರು.

ಮೂಲತಃ ಜಾರ್ಖಂಡ್​ನ ಗುಮ್ಲಾ ಜಿಲ್ಲೆಯವರಾದ ಮಿನ್ಜ್, ಯುನೈಟೆಡ್ ಕಿಂಗ್​ಡಮ್​ನಲ್ಲಿ ತರಬೇತಿಪಡೆದುಕೊಂಡಿದ್ದಾರೆ. ಪ್ರಸ್ತುತ ಜಾರ್ಖಂಡ್ ರಾಜಧಾನಿ ರಾಂಚಿಯ ನಾಮ್ಕುಮ್ ಪ್ರದೇಶದಲ್ಲಿ ವಾಸಿಸುತ್ತಿರುವ ಮಿಂಜ್, ರಣಜಿ ಟ್ರೋಫಿಯಲ್ಲಿ ಇನ್ನೂ ರಾಜ್ಯವನ್ನು ಪ್ರತಿನಿಧಿಸದಿದ್ದರೂ, ಜಾರ್ಖಂಡ್​ನ ಅಂಡರ್ 19 ಮತ್ತು ಅಂಡರ್ 25 ತಂಡಗಳ ಭಾಗವಾಗಿದ್ದಾರೆ.

ಇದನ್ನೂ ಓದಿ : WTC Ranking : ಭಾರತ ತಂಡವೀಗ ನಂಬರ್​ 1

ಅವರ ತಂದೆ ನಿವೃತ್ತ ಸೇನಾ ಸಿಬ್ಬಂದಿಯಾಗಿದ್ದು, ಈಗ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮಿನ್ಜ್​ಗೆ ಇಬ್ಬರು ಸಹೋದರಿಯರು ಇದ್ದಾರೆ.

ಮುಂಬೈ ಇಂಡಿಯನ್ಸ್ , ಲಕ್ನೋ ಸೂಪರ್ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಸೇರಿದಂತೆ ವಿವಿಧ ಫ್ರಾಂಚೈಸಿಗಳೊಂದಿಗೆ ಮಿಂಚ್​ ಟ್ರಯಲ್ಸ್​ಗೆ ಒಳಗಾಗಿದ್ದರು. ಐಪಿಎಲ್ 2023 ಹರಾಜಿನಲ್ಲಿ ಮಾರಾಟವಾಗದಿದ್ದರೂ, ಮಿನ್ಜ್ ಹಾಲಿ ಆವೃತ್ತಿಯಲ್ಲಿ ಗಮನಾರ್ಹ ವೇತನವನ್ನು ಪಡೆದರು.

Continue Reading

ಕ್ರೀಡೆ

WTC Ranking : ಭಾರತ ತಂಡವೀಗ ನಂಬರ್​ 1

WTC Ranking : ಭಾರತ ತಂಡ ಧರ್ಮಶಾಲಾದಲ್ಲಿ ನಡೆಯುವ ಟೆಸ್ಟ್​ನಲ್ಲಿ ಗೆದ್ದರೆ ಆಗಲೂ ನಂಬರ್ ಒನ್​ ಸ್ಥಾನ ಮುಂದುವರಿಯಲಿದೆ.

VISTARANEWS.COM


on

Team India
Koo

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸಿದ ಬಳಿಕ ಭಾರತ (Team India) ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ರ್ಯಾಂಕಿಂಗ್​​ನಲ್ಲಿ (WTC Ranking) ಅಗ್ರಸ್ಥಾನಕ್ಕೇರಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆಸೀಸ್ 172 ರನ್​ಗಳ ಅಂತರದ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊದಲ ಟೆಸ್ಟ್​ಗೆ ಮುಂಚಿತವಾಗಿ, ನ್ಯೂಜಿಲೆಂಡ್ ನಾಲ್ಕು ಪಂದ್ಯಗಳಿಂದ 36 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು, ಶೇಕಡಾ 75 ಅಂಕಗಳನ್ನು ಹೊಂದಿತ್ತು. ಆದಾಗ್ಯೂ, ಆಸ್ಟ್ರೇಲಿಯಾ ವಿರುದ್ಧ 172 ರನ್​ಗಳ ಗಣನೀಯ ಸೋಲಿನ ನಂತರ ಡಬ್ಲ್ಯುಟಿಸಿಯ ಅಂಕಪಟ್ಟಿಯಲ್ಲಿ ನಾಟಕೀಯವಾಗಿ ಬದಲಾವಣೆ ಉಂಟಾಗಿದೆ. ಈ ಸೋಲಿನಿಂದಾಗಿ ತಮ್ಮ ಮೊದಲ ಸ್ಥಾನವನ್ನು ಕಳೆದುಕೊಂಡರು. , ಶೇಕಡಾ 60 ರಷ್ಟು ಕಡಿಮೆ ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಇಳಿದರು.

ಮತ್ತೊಂದೆಡೆ, ಈ ಹಿಂದೆ ಎಂಟು ಪಂದ್ಯಗಳಿಂದ 62 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದ ಭಾರತ, ಪಾಯಿಂಟ್​​ಗಳ ಶೇಕಡಾವಾರು ಪ್ರಮಾಣವನ್ನು 64.58 ಕ್ಕೆ ಹೆಚ್ಚಿಸಿದೆ.

ವೆಲ್ಲಿಂಗ್ಟನ್ ನಲ್ಲಿ ಆಸ್ಟ್ರೇಲಿಯಾದ ಗೆಲುವು ಆ ತಂಡದ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿತು. ನಾಲ್ಕನೇ ಇನ್ನಿಂಗ್ಸ್​​ನಲ್ಲಿ ಆರು ವಿಕೆಟ್ ಪಡೆದ ನಾಥನ್ ಲಿಯಾನ್ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾದ ಅಂಕಗಳು 66 ರಿಂದ 78 ಕ್ಕೆ ಏರಿದೆ, ಅವರ ಅಂಕಗಳ ಶೇಕಡಾವಾರು 55 ರಿಂದ 59.09 ಕ್ಕೆ ಸುಧಾರಿಸಿದೆ. 2023ರ ಚಾಂಪಿಯನ್ ಆಗಿ ಆಸ್ಟ್ರೇಲಿಯಾ ಈಗ ರ್ಯಾಂಕಿಂಗ್​​ನಲ್ಲಿ ಮತ್ತಷ್ಟು ಮೇಲಕ್ಕೇರುವ ಸಾಧ್ಯತೆಯ ಮೇಲೆ ಕಣ್ಣಿಟ್ಟಿದೆ.

ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೆ ಏರುವುದು ಹೇಗೆ?

ಪ್ಯಾಟ್ ಕಮಿನ್ಸ್​ ನೇತೃತ್ವದ ತಂಡಕ್ಕೆ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆಯಲು ಅವಕಾಶವಿದೆ ಮತ್ತು ಧರ್ಮಶಾಲಾದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಮೇಲೆ ನಿರ್ಧರಿತವಾಗುತ್ತದೆ. ಇಂಗ್ಲೆಂಡ್ ತಂಡವು ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಆಸೀಸ್ ಈಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಹೋಗುವ ಅವಕಾಶವನ್ನು ಹೊಂದಿರುತ್ತದೆ.

ಇದನ್ನೂ ಓದಿ : Sangeeta Phogat : ಯಜ್ವೇಂದ್ರ ಚಹಲ್​ ಎತ್ತಿ ಹೆಗಲ ಮೇಲೆ ಕೂರಿಸಿದ ಸಂಗೀತಾ ಫೋಗಟ್​​, ಇಲ್ಲಿದೆ ವಿಡಿಯೊ

ಇದೇ ವೇಳೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಮಾರ್ಚ್ 8 ರಂದು ಪ್ರಾರಂಭವಾಗಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಅಂತಿಮ ಪಂದ್ಯ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ. ಆತಿಥೇಯರು ಈಗಾಗಲೇ ರಾಂಚಿಯಲ್ಲಿ ಗೆಲುವಿನೊಂದಿಗೆ ಸರಣಿಯನ್ನು ಮುಡಿಗೇರಿಸಿಕೊಂಡಿದ್ದಾರೆ

Continue Reading
Advertisement
Shreyanka Patil
ಕ್ರೀಡೆ45 seconds ago

WPL 2024: ಶ್ರೇಯಾಂಕಾ ಪಾಟೀಲ್ ಅದ್ಭುತ ಫೀಲ್ಡಿಂಗ್​ ಕಂಡು ದಂಗಾದ ಆರ್​ಸಿಬಿ ಅಭಿಮಾನಿಗಳು

Viral video us
ವೈರಲ್ ನ್ಯೂಸ್7 mins ago

Viral Video: ಥೂ ಅಸಹ್ಯ! ಹಣಕ್ಕಾಗಿ ವಿದ್ಯಾರ್ಥಿಗಳಿಂದ ದಾನಿಗಳ ಕಾಲು ನೆಕ್ಕಿಸಿದ ಶಾಲಾ ನಿರ್ವಾಹಕರು

Harsh Vardhan
ಪ್ರಮುಖ ಸುದ್ದಿ8 mins ago

Harsh Vardhan: ಬಿಜೆಪಿ ಟಿಕೆಟ್‌ ನಿರಾಕರಣೆ; ರಾಜಕೀಯವನ್ನೇ ತೊರೆದ ಹರ್ಷವರ್ಧನ್!

Shehbaz Shariff
ಪ್ರಮುಖ ಸುದ್ದಿ25 mins ago

Pakistan Prime Minster : ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ

Nathan Lyon
ಕ್ರೀಡೆ35 mins ago

Nathan Lyon: ಬ್ಯಾಟಿಂಗ್​ನಲ್ಲಿ ವಿಶ್ವ ದಾಖಲೆ ಬರೆದ ಬೌಲರ್​ ನಥಾನ್​ ಲಿಯೋನ್

Murder Case Son kills Mother
ಕ್ರೈಂ36 mins ago

Murder Case: ಹಣಕ್ಕಾಗಿ ತಾಯಿಯನ್ನೇ ಪೀಡಿಸುತ್ತಿದ್ದ ಧೂರ್ತ; ಕೊನೆಗೆ ಅಮ್ಮನ ಕೊಂದು ತಾನೂ ಸತ್ತ

Murder Case _ Shootout
ಉಡುಪಿ47 mins ago

Murder Case : ಒಂಟಿ ಮನೆಯಲ್ಲಿ ಫೈರಿಂಗ್‌ ಸೌಂಡ್‌, ನಿಗೂಢವಾಗಿ ಕೊಲೆ ಮಾಡಿ ಹೋದವರು ಯಾರು?

Pawan Singh
ಪ್ರಮುಖ ಸುದ್ದಿ54 mins ago

BJP candidate list : ಬಿಜೆಪಿ ಟಿಕೆಟ್ ತಿರಸ್ಕರಿಸಿದ ಭೋಜಪುರಿ ಗಾಯಕ ಪವನ್ ಸಿಂಗ್​

Mother attack to child
ಬೆಂಗಳೂರು1 hour ago

Bengaluru News : ಛೇ.. ಇವಳೆಂಥಾ ತಾಯಿ? ಬುದ್ಧಿ ಕಲಿಸಲು 3 ವರ್ಷದ ಮಗುವನ್ನು ಕೂಡಿಹಾಕಿದ್ದಳಂತೆ!

Robin Minz
ಪ್ರಮುಖ ಸುದ್ದಿ1 hour ago

Accident News : 3.6 ಕೋಟಿ ರೂ. ಪಡೆದ ಬುಡಕಟ್ಟು ಸಮುದಾಯದ ಐಪಿಎಲ್ ಆಟಗಾರನಿಗೆ ಬೈಕ್ ಅವಘಡದಲ್ಲಿ ಗಾಯ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ11 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು22 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು1 day ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌