IND vs AUS: ಸರಣಿ ವಶಪಡಿಸಿಕೊಂಡ ಭಾರತ; ದ್ವಿತೀಯ ಪಂದ್ಯದಲ್ಲಿ 99 ರನ್​ ಗೆಲುವು - Vistara News

ಕ್ರಿಕೆಟ್

IND vs AUS: ಸರಣಿ ವಶಪಡಿಸಿಕೊಂಡ ಭಾರತ; ದ್ವಿತೀಯ ಪಂದ್ಯದಲ್ಲಿ 99 ರನ್​ ಗೆಲುವು

ಆಸ್ಟ್ರೇಲಿಯಾ(IND vs AUS) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಭಾರತ ತಂಡ (India vs Australia, 2nd ODI) 99 ರನ್​ಗಳ ಗೆಲುವು ಸಾಧಿಸಿದೆ.

VISTARANEWS.COM


on

India won by 99 runs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದೋರ್​: ಅನುಭವಿ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಬಲಿಷ್ಠ ಆಸ್ಟ್ರೇಲಿಯಾ(IND vs AUS) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಭಾರತ ತಂಡ (India vs Australia, 2nd ODI) 99 ರನ್​ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ಜತೆಗೆ ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಸದ್ಯ ಟೀಮ್‌ ಇಂಡಿಯಾದ ಒಂದು ಹಂತದ ಸಮಸ್ಯೆ ಪರಿಹಾರ ಕಂಡಿದೆ ಎನ್ನಲಡ್ಡಿಯಿಲ್ಲ. ಸರಣಿಯ ಅಂತಿಮ ಪಂದ್ಯ ಬುಧವಾರ ರಾಜ್‌ಕೋಟ್‌ನಲ್ಲಿ ನಡೆಯಲಿದೆ.

ಇಂದೋರ್​ನ ಹೋಲ್ಕರ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ ಶ್ರೇಯಸ್​ ಅಯ್ಯರ್(105)​ ಮತ್ತು ಶುಭಮನ್​ ಗಿಲ್(104)​ ಅವರ ಆಕರ್ಷಕ ಶತಕ, ಆ ಬಳಿಕ ನಾಯಕ ಕೆ.ಎಲ್​ ರಾಹುಲ್(52) ಹಾಗೂ ಸೂರ್ಯಕುಮಾರ್​ ಯಾದವ್​(72*)​ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 399 ರನ್​ ಪೇರಿಸಿ ಸವಾಲೊಡ್ಡಿತು. ಆಸೀಸ್​ ಬೃಹತ್​ ಮೊತ್ತವನ್ನು ಬೆನ್ನಟ್ಟುವ​​ ವೇಳೆ ಪಂದ್ಯಕ್ಕೆ ಮಳೆಯಿಂದ ಹಲವು ಬಾರಿ ಅಡಚಣೆಯಾಗಿತು. ಹೀಗಾಗಿ ಡಕ್ವರ್ತ್-ಲೂಯಿಸ್ ನಿಯಮವನ್ನು ಜಾರಿಗೆ ತರಲಾಯಿತು. ಅದರಂತೆ ಈ ನಿಯಮದನ್ವಯ ಆಸೀಸ್​ ತಂಡಕ್ಕೆ 33 ಓವರ್​ಗಳಲ್ಲಿ 317 ರನ್​ಗಳ ಗುರಿ ನೀಡಲಾಯಿತು. ಆದರೆ ಆಸೀಸ್​ 28.2 ಓವರ್​ಗಳಲ್ಲಿ 217 ರನ್​ಗಳಿಗೆ ಸರ್ವ ಪತನ ಕಂಡು ಹೀನಾಯ ಸೋಲು ಅನುಭವಿಸಿತು.

ಅವಳಿ ಆಘಾತವಿಕ್ಕಿದ ಪ್ರಸಿದ್ಧ್​ ಕೃಷ್ಣ

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಆಡಲಿಳಿದ ಕನ್ನಡಿಗ ಪ್ರಸಿದ್ಧ್​ ಕೃಷ್ಣ ತಮ್ಮ ಮೊದಲ ಓವರ್​ನಲ್ಲಿಯೇ ಅವಳಿ ಆಘಾತವಿಕ್ಕಿದರು. ಮ್ಯಾಥ್ಯೂ ಶಾರ್ಟ್​(9) ಮತ್ತು ಹಂಗಾಮಿ ನಾಯಕ ಸ್ಟೀವನ್​ ಸ್ಮಿತ್​ ಅವರನ್ನು ಶೂನ್ಯಕ್ಕೆ ಔಟ್​ ಮಾಡಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಆಸೀಸ್​ 9 ರನ್​ಗೆ 2 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.

ವಾರ್ನರ್​-ಅಬಾಟ್​ ಆಸರೆ

ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದವರೆಂದರೆ ಡೇವಿಡ್​ ವಾರ್ನರ್​ ಮತ್ತು ಸೀನ್ ಅಬಾಟ್. ಉಭಯ ಆಟಗಾರರು ಅರ್ಧಶತಕ ಬಾರಿಸದೇ ಹೋಗಿದ್ದರೆ ತಂಡ 150 ರನ್​ಗಳ ಗಡಿ ಕೂಡ ದಾಟುವುದು ಅಸಾಧ್ಯವಾಗುತ್ತಿತ್ತು. ವಾರ್ನರ್​ 53 ರನ್​ ಬಾರಿಸಿ ಅಶ್ವಿನ್​ ಅವರಿಗೆ ವಿಕೆಟ್​ ಒಪ್ಪಿಸಿದರು. ಅಂಪೈರ್​ ಧರ್ಮಸೇನಾ ನೀಡಿದ ತಪ್ಪು ತೀರ್ಮಾನದಿಂದ ವಾರ್ನರ್​ ವಿಕೆಟ್​ ಕಳೆದುಕೊಂಡರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ಸೀನ್ ಅಬಾಟ್ 36 ಎಸೆತದಲ್ಲಿ 5 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ 54 ರನ್​ ಬಾರಿಸಿದರು. ಈ ವಿಕೆಟ್​ ಜಡೇಜಾ​ ಪಾಲಾಯಿತು.

ಮತ್ತೆ ಕಳಪೆ ಫೀಲ್ಡಿಂಗ್​

ಪಂದ್ಯ ಗೆದ್ದರೂ ಭಾರತ ತಂಡದ ಕಳಪೆ ಫೀಲ್ಡಿಂಗ್​ ಈ ಪಂದ್ಯದಲ್ಲಿಯೂ ಕಂಡು ಬಂದಿತು. ಶಾರ್ದೂಲ್​ ಠಾಕೂರ್​, ಗಾಯಕ್ವಾಡ್​ ಹಲವು ಕ್ಯಾಚ್​ ಜತೆಗೆ ಮಿಸ್​ ಫೀಲ್ಡಿಂಗ್​ ಮೂಲಕ ಬೌಂಡರಿ ಬಿಟ್ಟುಕೊಟ್ಟರು. ಮೊದಲ ಪಂದ್ಯದಲ್ಲಿಯೂ ಇದೇ ರೀತಿಯ ಕಳಪೆ ಕ್ಷೇತ್ರ ರಕ್ಷಣೆ ತೋರಿದ್ದರು. ವಿಶ್ವಕಪ್​ ಟೂರ್ನಿಗೂ ಮುನ್ನ ಈ ಸಮಸ್ಯೆಯನ್ನು ಬಗೆಹರಿಸದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಭಾರತ ಪರ ಬೌಲಿಂಗ್​ನಲ್ಲಿ ಆರ್​.ಅಶ್ವಿನ್​ ಮತ್ತು ರವೀಂದ್ರ ಜಡೇಜಾ ತಲಾ ಮೂರು ವಿಕೆಟ್​ ಕೆಡವಿದರು. ಪ್ರಸಿದ್ಧ್​ ಕೃಷ್ಣ 2 ಮತ್ತು ಮೊದಲ ಪಂದ್ಯದಲ್ಲಿ 5 ವಿಕೆಟ್​ ಕಿತ್ತ ಮೊಹಮ್ಮದ್​ ಶಮಿ ಒಂದು ವಿಕೆಟ್​ ಪಡೆದರು.

ಆಸೀಸ್​ ಬೌಲರ್​ಗಳ ಬೆವರಿಳಿಸಿದ ಅಯ್ಯರ್​-ಗಿಲ್​

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಭಾರತಕ್ಕೆ ಶ್ರೇಯಸ್​ ಅಯ್ಯರ್​ ಮತ್ತು ಶುಭಮನ್​ ಗಿಲ್​ ಉತ್ತಮ ಆರಂಭ ಒದಗಿಸಿದರು. ದ್ವಿತೀಯ ವಿಕೆಟ್​ಗೆ ಜತೆಯಾದ ಶ್ರೇಯಸ್​ ಅಯ್ಯರ್​ ಮತ್ತು ಶುಭಮನ್​ ಗಿಲ್​ ಸೇರಿಕೊಂಡು ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಆಸೀಸ್​ ಬೌಲರ್​ಗಳ ಬೆವರಿಳಿಸಿದರು.

ಗಿಲ್​ ಅವರಿಗಿಂತ ಕೊಂಚ ಮಟ್ಟಿನ ಬಿರುಸಿನ ಆಟವಾಡಿದ ಶ್ರೇಯಸ್​ ಅಯ್ಯರ್​ ಶತಕ ಬಾರಿಸಿ ಸಂಭ್ರಮಿಸಿದರು. ಇದು ಅವರ ಮೂರನೇ ಏಕದಿನ ಶತಕವಾಗಿದೆ. ಬೆನ್ನು ನೋವಿನಿಂದ ಚೇತರಿಕೆ ಕಂಡ ಬಳಿಕ ತೋರಿದ ಶ್ರೇಷ್ಠ ಪ್ರದರ್ಶನ ಇದಾಗಿದೆ. ಅವರ ಈ ಪ್ರಚಂಡ ಬ್ಯಾಟಿಂಗ್​ ಕಂಡು ಆಯ್ಕೆ ಸಮಿತಿ ನಿಟ್ಟುಸಿರು ಬಿಟ್ಟಿದೆ. ಏಕೆಂದರೆ ವಿಶ್ವಕಪ್​ಗೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಅಯ್ಯರ್​ ಅವರ ಗಾಯ ಮತ್ತು ಫಾರ್ಮ್​ ಬಗ್ಗೆ ಆಯ್ಕೆ ಸಮಿತಿ ಇದುವರೆಗೂ ಚಿಂತಿಸುತ್ತಿತ್ತು. ಈ ಪ್ರದರ್ಶನ ಕಂಡ ಬಳಿಕ ಸದ್ಯ ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಅಯ್ಯರ್​ ಮೇಲೆ ಆತ್ಮವಿಶ್ವಾಸವೊಂದು ಮೂಡಿದೆ.

ಇದನ್ನೂ ಓದಿ IND vs AUS: ಇಂಗಾಲ ಹೊರಸೂಸುವಿಕೆ ತಗ್ಗಿಸಲು ಹೋಳ್ಕರ್ ಸ್ಟೇಡಿಯಂಗೆ ಸೋಲಾರ್ ಪ್ಯಾನೆಲ್ ಅಳವಡಿಕೆ

ಶತಕದ ಮೂಲಕ ದಾಖಲೆ ಬರೆದ ಗಿಲ್​

ಅಯ್ಯರ್​ ಅವರು ಶತಕ ಪೂರ್ತಿಗೊಳಿಸಿದ್ದೇ ತಡ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್​ ನಡೆಸುತ್ತಿದ್ದ ಗಿಲ್​ ಕೂಡ ಶತಕ ಬಾರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 6ನೇ ಶತಕವನ್ನು ಪೂರೈಸಿದರು. ಅಲ್ಲದೆ ಕ್ಯಾಲೆಂಡರ್​ ವರ್ಷವೊಂದರಲ್ಲಿ 5ಕ್ಕಿಂತ ಅಧಿಕ ಶತಕ ಬಾರಿಸಿದ ಸಚಿನ್​ ತೆಂಡೂಲ್ಕರ್, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಅವರನ್ನೊಳಗೊಂಡ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡರು. ಇದೇ ವೇಳೆ ಅತಿ ಕಡಿಮೆ ಇನಿಂಗ್ಸ್​ನಲ್ಲಿ ಭಾರತ ಪರ 6 ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಧವನ್​ ಅವರ ಹೆಸರಿನಲ್ಲಿತ್ತು. ಧವನ್​ 46 ಇನಿಂಗ್ಸ್​ನಲ್ಲಿ ಈ ದಾಖಲೆ ಬರೆದಿದ್ದರು. ಆದರೆ ಗಿಲ್​ ಕೇವಲ 35 ಇನಿಂಗ್ಸ್​ನಲ್ಲಿ ಈ ದಾಖಲೆ ಮೀರಿನಿಂತರು.

ಭರ್ಜರಿ ಜತೆಯಾಟ

ಶ್ರೇಯಸ್​ ಅಯ್ಯರ್​ ಮತ್ತು ಗಿಲ್​ ಸೇರಿಕೊಂಡು ದ್ವಿತೀಯ ವಿಕೆಟ್​ಗೆ ಭರ್ತಿ 200 ರನ್​ಗಳ ಜತೆಯಾಟ ನಡೆಸಿದರು. ಅಯ್ಯರ್​ ಅವರು 90 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 105 ರನ್​ ಬಾರಿಸಿದರೆ, ಶುಭಮನ್​ ಗಿಲ್​ 97 ಎಸೆತದಿಂದ 104 ರನ್​ ಬಾರಿಸಿದರು. ಈ ವೇಳೆ 6 ಬೌಂಡಿ ಮತ್ತು 4 ಸಿಕ್ಸರ್​ ಸಿಡಿಯಿತು.

ಸಿಡಿದ ರಾಹುಲ್​-ಸೂರ್ಯ

ಅಯ್ಯರ್​ ಮತ್ತು ಗಿಲ್​ ಅವರ ವಿಕೆಟ್​ ಪತನದ ಬಳಿಕ ಜತೆಯಾದ ನಾಯಕ ಕೆ.ಎಲ್​ ರಾಹುಲ್​ ಮತ್ತು ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಕೂಡ ಆಸೀಸ್​ ಬೌಲರ್​ಗಳ ಮೇಲೆರಗಿ ಸಿಕ್ಸರ್​ ಮತ್ತು ಬೌಂಡರಿ ಸುರಿಮಳೆ ಸುರಿದರು. ಕ್ಯಾಮರೂನ್​ ಗ್ರೀನ್​ ಅವರ ಓವರ್​ ಒಂದರಲ್ಲಿ ಸೂರ್ಯಕುಮಾರ್​ ಸತತ 4 ಸಿಕ್ಸರ್​ ಚಚ್ಚಿ ಮಿಂಚಿದರು. ರಾಹುಲ್​ ಅವರು ಸಿಕ್ಸರ್​ ಮೂಲಕವೇ ಖಾತೆ ತೆರೆದರು. ಮೊದಲ ಪಂದ್ಯದಂತೇ ಈ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿ ನಾಯಕನ ಆಟವಾಡಿದರು. ತಲಾ ಮೂರು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 52 ರನ್​ ಗಳಿಸಿ ಗ್ರೀನ್​ಗೆ ವಿಕೆಟ್​ ಒಪ್ಪಿಸಿದರು. ರಾಹುಲ್​ ಮತ್ತು ಸೂರ್ಯ ಸೇರಿಕೊಂಡು 5ನೇ ವಿಕೆಟ್​ಗೆ 53 ರನ್​ ರಾಶಿ ಹಾಕಿದರು. ಇಶಾನ್​ ಕಿಶನ್​ ಕೂಡ ಬಿರುಸಿನ ಬ್ಯಾಟಿಂಗ್​ ನಡೆಸಿ 18 ಎಸೆತದಲ್ಲಿ 31 ರನ್​ ಪೇರಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.

ಸೂರ್ಯಕುಮಾರ್​ ಅವರು ಕೊನೆಯ ತನಕ ನಿಂತು ಉತ್ತಮ ಆಡವಾಡಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅವರು ಅಂತಿವಾಗಿ ತಲಾ 6 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ ಅಜೇಯ 72 ರನ್​ ಗಳಿಸಿದರು. ಜಡೇಜಾ 13 ರನ್​ ಬಾರಿಸಿ ಅಜೇಯರಾಗಿ ಉಳಿದರು. ಒಟ್ಟಾರೆ ಭಾರತ ತಂಡ ಈ ಪಂದ್ಯದಲ್ಲಿ 18 ಸಿಕ್ಸರ್​ ಬಾರಿಸಿತು. ಈ ಹಿಂದೆ 2013ರಲ್ಲಿ ಬೆಂಗಳೂರಿನಲ್ಲಿ ನಡಿದಿದ್ದ ಏಕದಿನ ಪಂದ್ಯದಲ್ಲಿ ಭಾರತ 19 ಸಿಕ್ಸರ್​ ಬಾರಿಸಿದ ಸಾಧನೆ ಮಾಡಿತ್ತು. ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದ ಋತುರಾಜ್​ ಗಾಯಕ್ವಾಡ್​ ಆರಂಭದಲ್ಲಿ ಸತತ 2 ಬೌಂಡರಿ ಬಾರಿಸಿದರೂ ಇದೇ ಜೋಶ್​ ಮುಂದುವರಿಸುವಲ್ಲಿ ಎಡವಿದರು. 8 ರನ್​ ಗಳಿಸಿದ್ದ ವೇಳೆ ಜೋಶ್​ ಹ್ಯಾಜಲ್​ವುಡ್​ಗೆ ವಿಕೆಟ್​ ನೀಡಿ ನಿರಾಸೆ ಮೂಡಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

KKR vs SRH Qualifier 1: ಕೆಕೆಆರ್​-ಹೈದರಾಬಾದ್​ ಮುಖಾಮುಖಿ ದಾಖಲೆ, ಪಿಚ್​ ರಿಪೋರ್ಟ್​ ಹೇಗಿದೆ?

KKR vs SRH Qualifier 1: ಇತ್ತಂಡಗಳ ನಡುವಿನ ಪಂದ್ಯದಲ್ಲಿ ಯಾರೇ ಸೋತರೂ ಕೂಡ ಅವರಿಗೆ ಮತ್ತೊಂದು ಕ್ವಾಲಿಫೈಯರ್​ ಪಂದ್ಯವನ್ನಾಡುವ ಅವಕಾಶವಿದೆ. ಎಲಿಮಿನೇಟರ್​ ಪಂದ್ಯದ ವಿಜೇತರನ್ನು ಎದುರಿಸಲಿದೆ. ಹೀಗಾಗಿ ಸೋತರೂ ಮತ್ತೊಂದು ಪಂದ್ಯ ಆಡಿ ಅಲ್ಲಿ ಗೆದ್ದರೆ ಫೈನಲ್​ ಪ್ರವೇಶಿಸಬಹುದು.

VISTARANEWS.COM


on

KKR vs SRH Qualifier 1
Koo

ಅಹಮದಾಬಾದ್​: ಈ ಬಾರಿಯ ಐಪಿಎಲ್​ನ(IPL 2024) ಬಲಿಷ್ಠ ತಂಡಗಳಾದ ಕೆಕೆಆರ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ನಡುವಣ ಮೊದಲ ಕ್ವಾಲಿಫೈಯರ್(KKR vs SRH Qualifier 1) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ನಡೆಯುವ ಇತ್ತಂಡಗಳ ಈ ಕಾದಾಟಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂ(Narendra Modi Stadium) ಅಣಿಯಾಗಿದೆ. ಯಾರೇ ಗೆದ್ದರೂ ನೇರವಾಗಿ ಫೈನಲ್​ಗೆ ಎಂಟ್ರಿಕೊಡಲಿದ್ದಾರೆ. ಈ ತಂಡ ಯಾವುದು ಎಂಬುದು ನಾಳಿನ ಪಂದ್ಯದ ಕೌತುಕ.

ಬಲಾಬಲ ​


ಉಭಯ ತಂಡಗಳ ಐಪಿಎಲ್​ ಇತಿಹಾಸ ನೋಡುವಾಗ ಕೆಕೆಆರ್​ ಬಲಿಷ್ಠವಾಗಿದೆ. ಇದುವರೆಗೆ 26 ಪಂದ್ಯಗಳನ್ನು ಆಡಿ 17 ಪಂದ್ಯಗಳಲ್ಲಿ ಕೆಕೆಆರ್​ ಗೆಲುವು ಸಾಧಿಸಿದೆ. ಹೈದರಾಬಾದ್​ ಕೇವಲ 9 ಪಂದ್ಯ ಮಾತ್ರ ಗೆದ್ದಿದೆ. ಈ ಆವೃತ್ತಿಯಲ್ಲಿಯೂ ಆಡಿದ ಪಂದ್ಯದಲ್ಲೂ ಹೈದರಾಬಾದ್​ ಸೋಲು ಕಂಡಿತ್ತು. ಉಭಯ ತಂಡಗಳ ನಡುವೆ ಒಂದು ಸೂಪರ್​ ಓವರ್​ ಪಂದ್ಯ ಕೂಡ ನಡೆದಿತ್ತು. 2020ರಲ್ಲಿ ಅಬುಧಾಬಿಯಲ್ಲಿ ನಡೆದಿದ್ದ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಕೆಕೆಆರ್​ ಜಯಿಸಿತ್ತು. ಈ ಲೆಕ್ಕಾಚಾರವನ್ನು ನೋಡುವಾಗ ನಾಳಿನ ಪಂದ್ಯದಲ್ಲಿಯೂ ಕೆಕೆಆರ್​ ಗೆಲುವಿನ ಫೇವರಿಟ್​ ಆಗಿದೆ.

ಸೋತರೆ ಮತ್ತೊಂದು ಅವಕಾಶ


ಇತ್ತಂಡಗಳ ನಡುವಿನ ಪಂದ್ಯದಲ್ಲಿ ಯಾರೇ ಸೋತರೂ ಕೂಡ ಅವರಿಗೆ ಮತ್ತೊಂದು ಕ್ವಾಲಿಫೈಯರ್​ ಪಂದ್ಯವನ್ನಾಡುವ ಅವಕಾಶವಿದೆ. ಎಲಿಮಿನೇಟರ್​ ಪಂದ್ಯದ ವಿಜೇತರನ್ನು ಎದುರಿಸಲಿದೆ. ಹೀಗಾಗಿ ಸೋತರೂ ಮತ್ತೊಂದು ಪಂದ್ಯ ಆಡಿ ಅಲ್ಲಿ ಗೆದ್ದರೆ ಫೈನಲ್​ ಪ್ರವೇಶಿಸಬಹುದು. ನಾಳಿನ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ ಟಿಕೆಟ್​ ಪಡೆಯಲಿದೆ.

ಇದನ್ನೂ ಓದಿ IPL 2024: ಪ್ಲೇ ಆಫ್ ಪಂದ್ಯಗಳಿಗೆ ಮೀಸಲು ದಿನ ಇದೆಯೇ? ಮಳೆ ಬಂದರೆ ಫಲಿತಾಂಶ ನಿರ್ಧಾರ ಹೇಗೆ?

ಮಳೆ ಭೀತಿ


ಅಹಮದಾಬಾದ್​ನಲ್ಲಿ ಮಳೆಯಿಂದ ಒಂದು ಲೀಗ್​ ಪಂದ್ಯ ರದ್ದಾಗಿತ್ತು. ಇದು ಕೆಕೆಆರ್​ ಮತ್ತು ಗುಜರಾತ್​ ನಡುವಣ ಪಂದ್ಯವಾಗಿತ್ತು. ಮಳೆಯಿಂದ ಟಾಸ್​ ಕೂಡ ಆಗದೆ ರದ್ದಾಗಿತ್ತು. ಇದೀಗ ನಾಳೆ ನಡೆಯುವ ಕ್ವಾಲಿಫೈಯರ್​ ಪಂದ್ಯಕ್ಕೂ ಮಳೆಯ ಭೀತಿ ಇದೆ. ಒಂದೊಮ್ಮೆ ಮಳೆ ಬಂದರೂ ಕೂಡ ಚಿಂತಿಸುವ ಅಗತ್ಯವಿಲ್ಲ. ಮೀಸಲು ದಿನ ಇದೆ.

ಪಿಚ್​ ರಿಪೋರ್ಟ್​


ವಿಶ್ವದ ಅತಿ ದೊಡ್ಡ ಕ್ರೀಡಾಂಗಣ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನೇರ ಬೌಂಡರಿಗಳಿಗೆ ಸರಾಸರಿ 75 ಮೀಟರ್ ಮತ್ತು ಚದರ ಗಡಿಗಳಿಗೆ 60 ಮೀಟರ್ ಉದ್ದವನ್ನು ಹೊಂದಿದೆ. ಇಲ್ಲಿ ಇದುವರೆಗೆ 33 ಐಪಿಎಲ್​ ಪಂದ್ಯಗಳು ನಡೆದಿದ್ದು 15 ಬಾರಿ ಮೊದಲು ಬ್ಯಾಟಿಂಗ್​ ಮಾಡಿದ ತಂಡ, 18 ಬಾರಿ ಚೇಸಿಂಗ್​ ನಡೆಸಿದ ತಂಡಗಳು ಗೆದ್ದಿವೆ. ಇಲ್ಲಿ ದಾಖಲಾದ ಗರಿಷ್ಠ ಒತ್ತ 233 ರನ್​. ಮುಂಬೈ ಮತ್ತು ಗುಜರಾತ್ ನಡುವಣ ಪಂದ್ಯದಲ್ಲಿ ಈ ಮೊತ್ತ ದಾಖಲಾಗಿತ್ತು.

ಸಂಭಾವ್ಯ ತಂಡಗಳು


ಸನ್​ರೈಸರ್ಸ್​ ಹೈದರಾಬಾದ್​: ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್​ ಕೀಪರ್​), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಸನ್ವಿರ್ ಸಿಂಗ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ವಿಜಯಕಾಂತ್ ವ್ಯಾಸಕಾಂತ್, ಟಿ. ನಟರಾಜನ್.

ಕೆಕೆಆರ್​: ರಹಮಾನುಲ್ಲಾ ಗುರ್ಬಾಜ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ನಿತೀಶ್ ರಾಣಾ, ಆಂಡ್ರೆ ರಸೆಲ್, ರಮಣ್​ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

Continue Reading

ಕ್ರಿಕೆಟ್

MS Dhoni Retirement: ಧೋನಿ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಚೆನ್ನೈ ಫ್ರಾಂಚೈಸಿ

MS Dhoni Retirement: ಸಿಎಸ್‌ಕೆ ಅಧಿಕಾರಿಯೊಬ್ಬರು ಧೋನಿ ನಿವೃತ್ತಿ ಬಗ್ಗೆ ಮಾತನಾಡಿದ್ದು, “ಧೋನಿ ಅವರು ಸಿಎಸ್‌ಕೆ ಜತೆ ಯಾರೊಂದಿಗೂ ತಮ್ಮ ನಿವೃತ್ತಿ ಬಗ್ಗೆ ಇದುವರೆಗೂ ಮಾತನಾಡಿಲ್ಲ. ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವು ಧೋನಿಯ ನಿವೃತ್ತಿಯ ವಿಚಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ

VISTARANEWS.COM


on

MS Dhoni Retirement
Koo

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್​(Chennai Super Kings) ಕಳೆದ ಪಂದ್ಯದಲ್ಲಿ ಆರ್​ಸಿಬಿ(RCB) ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಮಹೇಂದ್ರ ಸಿಂಗ್​ ಧೋನಿ(MS Dhoni Retirement) ಅವರ ನಿವೃತ್ತಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೀಗ ಧೋನಿ ನೃತ್ತಿ ವಿಚಾರವಾಗಿ ಸಿಎಸ್​ಕೆ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಮಹತ್ವದ ಹೇಳಿಕೆ ನೀಡಿದ್ದಾರೆ.

ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಾಗಿತ್ತು. ಇದೀಗ ಚೆನ್ನೈ ಸೋತು ಟೂರ್ನಿಯಿಂದ ಹೊರಬಿದ್ದರೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಇದೀಗ ಸಿಎಸ್‌ಕೆ ಅಧಿಕಾರಿಯೊಬ್ಬರು ಧೋನಿ ನಿವೃತ್ತಿ ಬಗ್ಗೆ ಮಾತನಾಡಿದ್ದು, “ಧೋನಿ ಅವರು ಸಿಎಸ್‌ಕೆ ಜತೆ ಯಾರೊಂದಿಗೂ ತಮ್ಮ ನಿವೃತ್ತಿ ಬಗ್ಗೆ ಇದುವರೆಗೂ ಮಾತನಾಡಿಲ್ಲ. ಕೆಲವು ಸಕ್ರಿಯ ಕ್ರಿಕೆಟಿಗರಿಂದ ಹೆಚ್ಚು ಟೀಕೆಗೆ ಒಳಗಾಗಿರುವ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವು ಧೋನಿಯ ನಿವೃತ್ತಿಯ ವಿಚಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ನಿಯಮವು ಮುಂದುವರಿದರೆ, ತಂಡದೊಂದಿಗೆ ನಿರ್ದಿಷ್ಟ ಕೆಲಸವನ್ನು ಪೂರೈಸಲು ಇದು ಅವರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ. ನಿಯಮವನ್ನು ರದ್ದುಗೊಳಿಸಿದರೆ, ಧೋನಿ ಆಡುವುದು ಕಷ್ಟ” ಎಂದು ಹೇಳಿದ್ದಾರೆ.

ಅಧಿಕಾರಿಯ ಈ ಮಾತನ್ನು ಕೇಳುವಾಗ ಧೋನಿ ಇಂಪ್ಯಾಕ್ಟ್​ ನಿಯಮ ಜಾರಿಯಲ್ಲಿದ್ದರೆ ಮುಂದಿನ ಆವೃತ್ತಿಯಲ್ಲಿಯೂ ಆಡುವುದು ಬಹುತೇಖ ಖಚಿತ ಎನ್ನುವುದು ತಿಳಿದುಬಂದಿದೆ. ಒಂದೊಮ್ಮೆ ಈ ನಿಯಮ ಇಲ್ಲವಾದರೆ ಧೋನಿ ಮುಂದಿನ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನವೇ ನಿವೃತ್ತಿ ಹೇಳುವುದು ಬಹುತೇಖ ಖಚಿತ ಎನ್ನಲಡ್ಡಿಯಿಲ್ಲ. ಚೆನ್ನೈ ತಂಡ ಆರ್​ಸಿಬಿ ವಿರುದ್ಧ ಸೋಲು ಕಂಡಾಗ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಅವರು ಧೋನಿ ಮುಂದಿನ ಆವೃತ್ತಿಯಲ್ಲಿಯೂ ಆಡಲಿದ್ದಾರೆ ಎಂದು ಬಲವಾದ ಹೇಳಿಕೆ ನೀಡಿದ್ದರು.

ಇದನ್ನೂ ಓದಿ MS Dhoni : ಆರ್​​ಸಿಬಿ ವಿರುದ್ಧ ಬೌಲಿಂಗ್ ಮಾಡಲು ಅಭ್ಯಾಸ ನಡೆಸಿದ ಎಂ ಎಸ್​ ಧೋನಿ

ಕಳೆದ ಕೆಲವು ವರ್ಷಗಳಿಂದ ಸಿಎಸ್‌ಕೆಗಾಗಿ ಧೋನಿ ಆಡುತ್ತಿದ್ದಾರೆ. ಅವರ ಈ ಪ್ರದರ್ಶನವನ್ನು ಪರಿಗಣಿಸಿ, ಚೆನ್ನೈಯಲ್ಲಿ ಧೋನಿಯ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ. ಧೋನಿ ಚೆನ್ನೈನ ದೇವರು ಎಂದ ರಾಯುಡು, ಮುಂಬರುವ ವರ್ಷದಲ್ಲಿ ಚೆನ್ನೈನಲ್ಲಿ ಎಂಎಸ್ ಧೋನಿಯ ಮಂದಿರ ನಿರ್ಮಾಣವಾಗುವುದು ಖಚಿತ ಎಂದು ಹೇಳಿದ್ದಾರೆ.

Continue Reading

ಕ್ರೀಡೆ

IPL 2024: ಪ್ಲೇ ಆಫ್ ಪಂದ್ಯಗಳಿಗೆ ಮೀಸಲು ದಿನ ಇದೆಯೇ? ಮಳೆ ಬಂದರೆ ಫಲಿತಾಂಶ ನಿರ್ಧಾರ ಹೇಗೆ?

IPL 2024: ಒಂದು ವೇಳೆ ಮೀಸಲು ದಿನದಂದೂ ಕೂಡ ಮಳೆ ಅಡ್ಡಿ ಪಡಿಸಿದರೆ ಸೂಪರ್ ಓವರ್​ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವು ಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಯಾರು ಮುಂದಿರುತ್ತಾರೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ.

VISTARANEWS.COM


on

IPL 2024
Koo

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಲೀಗ್​ ಹಂತದ ಪಂದ್ಯಗಳು ಮುಕ್ತಾಯಕಂಡಿದ್ದು ಇನ್ನು ಕ್ವಾಲಿಫೈಯರ್​ ಮತ್ತು ಎಲಿಮಿನೇಟರ್​ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಮೊದಲ ಕ್ವಾಲಿಫೈಯರ್​ ಪಂದ್ಯ ನಾಳೆ(ಮಂಗಳವಾರ) ಅಹಮದಾಬಾದ್​ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕೆಕೆಆರ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಮುಖಾಮುಖಿಯಾಗಲಿವೆ. ಆದರೆ, ಪ್ಲೇ ಆಫ್​ ಪಂದ್ಯಗಳಿಗೂ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಈಗಾಗಲೇ ಲೀಗ್​ ಅಹಮದಾಬಾದ್​ ಸೇರಿ ಕೆಲವು ಕಡೆ ನಿಗದಿಯಾಗಿದ್ದ ಲೀಗ್​ ಪಂದ್ಯಗಳು ಮಳೆಯಿಂದ ರದ್ದಾದ ನಿದರ್ಶನವೂ ನಮ್ಮ ಕಣ್ಣ ಮುಂದಿದೆ. ಇದೀಗ ಪ್ಲೇ ಆಫ್​ ಪಂದ್ಯಗಳಿಗೆ(ipl playoffs rain rules) ಮಳೆ ನಿಯಮ ಹೇಗಿದೆ ಎಂಬ ಮಾಹಿತಿ ಇಂತಿದೆ.

ಮಳೆ ಬಂದರೆ?


ಐಪಿಎಲ್​ ಆಡಳಿತ ಮಂಡಳಿ ಮತ್ತು ಬಿಸಿಸಿಐ ಟೂರ್ನಿ ಆರಂಭಕ್ಕೂ ಮುನ್ನವೇ ಲೀಗ್​ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಅದರಂತೆ ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನಿಗದಿಪಡಿಸಿತ್ತು. ಆದರೆ, ನಾಕೌಟ್ ಹಂತಕ್ಕೆ ಮೀಸಲು ದಿನವನ್ನು (Reserve day) ಇರಿಸಿದೆ. ಪೂರ್ಣ ಪಂದ್ಯ ನಡೆಸಲು ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗಿದೆ. ಈ ಸಮಯದಲ್ಲಿಯೂ ಪಂದ್ಯ ನಡೆಯದೇ ಹೋದರೆ ಆಗ ಡಕ್​ವರ್ತ್​ ನಿಯದ ಅನುಸಾರ ಓವರ್​ ಕಡಿತಗೊಳಿಸಿ ಪಂದ್ಯ ನಡೆಸುವ ನಿರ್ಣಾಯಕ್ಕೆ ಬರಲಾಗುತ್ತದೆ. ಈ ವೇಳೆಯೂ ಪಂದ್ಯ ನಡೆಯದೇ ಇದ್ದರೆ ಪಂದ್ಯವನ್ನು ಮೀಸಲ ದಿನಕ್ಕೆ ಮುಂದೂಡಲಾಗುತ್ತದೆ. ಒಂದೊಮ್ಮೆ ಮೀಸಲು ದಿನದ ಮೊದಲಿನ ದಿನ ಪಂದ್ಯ ಅರ್ಧಕ್ಕೆ ನಿಂತಿದ್ದರೆ, ಅಲ್ಲಿಂದಲೇ ಮರುದಿನ ಪಂದ್ಯ ಆರಂಭಿಸಲಾಗುತ್ತದೆ.

ಇದನ್ನೂ ಓದಿ IPL 2024 Eliminator: ಎಲಿಮಿನೇಟರ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಆಘಾತ; ಇಬ್ಬರು ಸ್ಟಾರ್​ ಆಟಗಾರರು ಅಲಭ್ಯ!

ಮೀಸಲು ದಿನಕ್ಕೂ ಮಳೆ ಬಂದರೆ?

ಮೀಸಲು ದಿನವೂ ಮಳೆ ಬಂದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎನ್ನುವ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಿಗೆ ಕಾಡುವುದು ಸಹಜ. ಇದಕ್ಕೂ ಬಿಸಿಸಿಐ ಉತ್ತರ ನೀಡಿದೆ. ಒಂದು ವೇಳೆ ಮೀಸಲು ದಿನದಂದೂ ಕೂಡ ಮಳೆ ಅಡ್ಡಿ ಪಡಿಸಿದರೆ ಸೂಪರ್ ಓವರ್​ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವು ಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಯಾರು ಮುಂದಿರುತ್ತಾರೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ. ಈ ನಿಯಮ ಫೈನಲ್​ ಪಂದ್ಯಕ್ಕೂ ಅನ್ವಯವಾಗುತ್ತದೆ. ಒಂದೊಮ್ಮೆ ಮಳೆಯಿಂದ ಎಲ್ಲ ಪಂದ್ಯಗಳು ರದ್ದಾದದರೆ ಆಗ ಅಗ್ರಸ್ಥಾನಿ ಕೆಕೆಆರ್​ ಈ ಬಾರಿಯ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ. ಏಕೆಂದರೆ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.​

Continue Reading

ಕ್ರೀಡೆ

IPL 2024 Eliminator: ಎಲಿಮಿನೇಟರ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಆಘಾತ; ಇಬ್ಬರು ಸ್ಟಾರ್​ ಆಟಗಾರರು ಅಲಭ್ಯ!

IPL 2024 Eliminator: ಬುಧವಾರ ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್​ ರಾಯಲ್ಸ್(Rajasthan Royals)​ ವಿರುದ್ಧ ಆಡಲಿದೆ. ಈ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ.

VISTARANEWS.COM


on

IPL 2024 Eliminato
Koo

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡದ ಎಲಿಮಿನೇಟರ್(IPL 2024 Eliminator)​ ಎದುರಾಳಿ ಯಾರೆಂದು ಫಿಕ್ಸ್​ ಆಗಿದೆ. ಇದರ ಬೆನ್ನಲ್ಲೇ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ಟಿ20 ವಿಶ್ವಕಪ್​ ಟೂರ್ನಿಯ ಅಭ್ಯಾಸ ನಡೆಸುವ ಸಲುವಾಗಿ ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​ಗಳಾದ ಕ್ಯಾಮರೂನ್​ ಗ್ರೀನ್​ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ತಂಡ ತೊರೆಯಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಇಂಗ್ಲೆಂಡ್​ನ ಆಟಗಾರರು ಐಪಿಎಲ್​ ಪಂದ್ಯವಾವಳಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಮರಳಿದ್ದಾರೆ. ಇದೀಗ ಆಸ್ಟ್ರೇಲಿಯಾ ಸರದಿ ಎನ್ನಲಾಗಿದೆ. ಕೇವಲ ಆರ್​ಸಿಬಿ ಮಾತ್ರವಲ್ಲದೆ ಇತರ ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾ ಆಟಗಾರರು ಕೂಡ ಐಪಿಎಲ್​ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಒಂದೊಮ್ಮೆ ಆಸೀಸ್​ ಆಟಗಾರರು ಐಪಿಎಲ್​ನಿಂದ ಹೊರಹೋದರೆ ಸನ್​ರೈಸರ್ಸ್​ ಮತ್ತು ಆರ್​ಸಿಬಿ ತಂಡಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ಈ 2 ತಂಡಗಳಲ್ಲಿಯೇ ತಲಾ 2 ಆಸೀಸ್​ ಆಟಗಾರರಿದ್ದಾರೆ.

ಟಿ20 ವಿಶ್ವಕಪ್​ ಟೂರ್ನಿಯ ಅಭ್ಯಾಸ ಪಂದ್ಯಗಳು ಮೇ 27ರಿಂದ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ನಮೀಬಿಯಾ ವಿರುದ್ಧ ಮೇ 29ಕ್ಕೆ ಆಡಲಿದೆ. ಮೂಲಗಳ ಪ್ರಕಾರ ಆಸ್ಟ್ರೇಲಿಯಾ ತಂಡ ಮೇ 21ರಂದು ಕೆರಿಬಿಯನ್​ ದ್ವೀಪಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಹೇಳಲಾಗಿದೆ.

ಆರ್​ಸಿಬಿಗೆ ರಾಜಸ್ಥಾನ್​ ಎದುರಾಳಿ


ಇಂದು ರಾತ್ರಿ ನಡೆಯಬೇಕಿದ್ದ ಐಪಿಎಲ್​ನ ಅಂತಿಮ ಲೀಗ್​ ಪಂದ್ಯವಾದ ರಾಜಸ್ಥಾನ್​ ರಾಯಲ್ಸ್​(RR vs KKR) ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ನಡುವಣ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ರಾಜಸ್ಥಾನ್​ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಹೀಗಾಗಿ ಬುಧವಾರ ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್​ ರಾಯಲ್ಸ್(Rajasthan Royals)​ ವಿರುದ್ಧ ಆಡಲಿದೆ. ಈ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಸತತವಾಗಿ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್​ ಆಫ್​ಗೆ ಲಗ್ಗೆಯಿಟ್ಟ ಆರ್​ಸಿಬಿಗೆ ಎಲಿಮಿನೇಟರ್​ ಪಂದ್ಯದಲ್ಲೂ ಲಕ್​ ಹೈ ಹಿಡಿಯುವುದೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ IPL 2024 : ಐಪಿಎಲ್‌ ಬೆಟ್ಟಿಂಗ್‌ಗಾಗಿ ಮೈ ತುಂಬಾ ಸಾಲ; ನೇಣಿಗೆ ಶರಣಾದ ಯುವಕ

ಕೆಕೆಆರ್​ ಮಣಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಕ್ವಾಲಿಫೈಯರ್​ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್​ಗೆ(Rajasthan Royals)​ ಮಳೆ ತಣ್ಣೀರೆರಚಿತು. ಸನ್​ರೈಸರ್ಸ್​ ಹೈದರಾಬಾದ್​ 2ನೇ ತಂಡವಾಗಿ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಿತು. ರಾಜಸ್ಥಾನ್​ ಮತ್ತು ಹೈದರಾಬಾದ್ ಸಮಾನ 17 ಅಂಕ ಹೊಂದಿದರೂ ರನ್​ ರೇಟ್​ನಲ್ಲಿ ಮುಂದಿದ್ದ ಕಾರಣ ಈ ಲಾಭ ಕಮಿನ್ಸ್​ ಪಡೆಗೆ ಲಭಿಸಿತು. ಮಂಗಳವಾರ(ಮೇ 21) ನಡೆಯುವ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಹೈದರಾಬಾದ್​ ಕಣಕ್ಕಿಳಿಯಲಿದೆ. ಈ ಪಂದ್ಯ ಅಹಮದಾಬಾದ್​ನಲ್ಲಿ ನಡೆಯಲಿದೆ.

Continue Reading
Advertisement
Lok Sabha Election 2024 Shah Rukh Khan booth in Mumbai
ಬಾಲಿವುಡ್2 mins ago

Lok Sabha Election 2024: ಕುಟುಂಬದ ಜತೆ ಬಂದು ಮತ ಚಲಾಯಿಸಿದ ಶಾರುಖ್‌ ಖಾನ್‌

Trichy Tour
ಪ್ರವಾಸ7 mins ago

Trichy Tour: ದಾಂಪತ್ಯದ ಲವಲವಿಕೆಯನ್ನು ಮತ್ತೆ ಜೀವಂತಗೊಳಿಸಲು ತಿರುಚಿರಾಪಳ್ಳಿಗೆ ಹೋಗಿ ಬನ್ನಿ!

Money Guide
ಮನಿ-ಗೈಡ್11 mins ago

Money Guide: ಮನೆಯಲಿ ಇದ್ದರೆ ಚಿನ್ನ ಈ ನಿಯಮ ಅರಿತಿರುವುದು ಚೆನ್ನ: ಗೋಲ್ಡ್‌ ಟ್ಯಾಕ್ಸ್‌ ಏನು ಹೇಳುತ್ತದೆ?

Yamuna Bridge
ವೈರಲ್ ನ್ಯೂಸ್16 mins ago

Yamuna Bridge: ಯಮುನಾ ಸೇತುವೆಯ ಅದ್ಭುತ ಚಿತ್ರ ಹಂಚಿಕೊಂಡ ಭಾರತೀಯ ರೈಲ್ವೆ: ವಾವ್‌ ತಾಜ್‌ ಎಂದ ನೆಟ್ಟಿಗರು; ನೀವೂ ನೋಡಿ

KKR vs SRH Qualifier 1
ಕ್ರೀಡೆ31 mins ago

KKR vs SRH Qualifier 1: ಕೆಕೆಆರ್​-ಹೈದರಾಬಾದ್​ ಮುಖಾಮುಖಿ ದಾಖಲೆ, ಪಿಚ್​ ರಿಪೋರ್ಟ್​ ಹೇಗಿದೆ?

Road Accident
ಪ್ರಮುಖ ಸುದ್ದಿ35 mins ago

Road Accident: ಪಿಕ್‌ಅಪ್‌ ವಾಹನ ಕಂದಕಕ್ಕೆ ಬಿದ್ದು 18 ಕಾರ್ಮಿಕರ ದುರ್ಮರಣ; ಕೆಲಸಕ್ಕೆ ಹೊರಟವರು ಮಸಣಕ್ಕೆ!

theft case
ತುಮಕೂರು56 mins ago

Theft Case : ಕಳ್ಳತನವೂ ಈಗ ಪ್ರೊಫೆಷನಲ್‌; ಕದಿಯೋಕೆ ತಿಂಗಳ ಸ್ಯಾಲರಿ ಕೊಡುತ್ತಿದ್ದ ಪ್ರಳಯಾಂತಕ!

Physical Abuse & Murder
ದೇಶ58 mins ago

Physical Abuse & Murder: ಬಾಲಕಿ ಮೇಲೆ ಅತ್ಯಾಚಾರ, ಸಜೀವ ದಹನ ಕೇಸ್‌; ಹಂತಕರಿಗೆ ಮರಣದಂಡನೆ

Crime News
ದೇಶ60 mins ago

ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಶ್ರೀಮಂತನ ಮಗನಿಗೆ 15 ಗಂಟೆಯೊಳಗೆ ಜಾಮೀನು! ಪ್ರಬಂಧ ಬರೆಯುವ ಶಿಕ್ಷೆ!

ISIS Terrorists
ದೇಶ1 hour ago

ISIS Terrorists: ಐಪಿಎಲ್‌ ಪಂದ್ಯಕ್ಕೂ ಮೊದಲೇ ಗುಜರಾತ್‌ನಲ್ಲಿ ನಾಲ್ವರು ಐಸಿಸ್‌ ಉಗ್ರರ ಬಂಧನ; ಇವರ ಸಂಚೇನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌