ಕ್ರಿಕೆಟ್
IND VS AUS: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿಗೆ ಹಲವು ದಾಖಲೆ ಬರೆಯುವ ಅವಕಾಶವಿದೆ.
ಮುಂಬಯಿ: ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಪ್ರತಿ ಸರಣಿಯಲ್ಲಿಯೂ ದಾಖಲೆ ಬರೆಯುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ(Virat Kohli) ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಹಲವು ದಾಖಲೆ ಬರೆಯುವ ಅವಕಾಶವಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ(ಮಾರ್ಚ್ 17) ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಹಲವು ದಿಗ್ಗಜ ಕ್ರಿಕೆಟಿಗರ ಸಾಧನೆಯನ್ನು ಸರಿಗಟ್ಟುವ ಮತ್ತು ಮುರಿಯುವ ಅವಕಾಶವಿದೆ.
ಸಚಿನ್ ದಾಖಲೆ ಮುರಿಯುತ್ತಾರ ವಿರಾಟ್?
ವಿರಾಟ್ ಕೊಹ್ಲಿ ಇದುವರೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ 8 ಶತಕಗಳನ್ನು ಬಾರಿಸಿದ್ದಾರೆ. ಒಂದು ವೇಳೆ ಕೊಹ್ಲಿ ಈ ಸರಣಿಯಲ್ಲಿ 2 ಶತಕ ಬಾರಿಸಿದರೆ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್(sachin tendulkar) ಹೆಸರಿನಲ್ಲಿದ್ದ ದಾಖಲೆ ಮುರಿಯಲಿದ್ದಾರೆ. ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ 9 ಶತಕಗಳನ್ನು ಗಳಿಸಿದ್ದಾರೆ. ಒಂದೊಮ್ಮೆ ವಿರಾಟ್ ಒಂದು ಶತಕ ಬಾರಿಸಿದರೆ ತೆಂಡೂಲ್ಕರ್ ದಾಖಲೆ ಸರಿಗಟ್ಟಲಿದ್ದಾರೆ.
ಪಾಂಟಿಂಗ್ ದಾಖಲೆ ಮೇಲೆ ಕಣ್ಣು
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್(ricky ponting) ಹೆಸರಿನಲ್ಲಿದೆ. ಈ ದಾಖಲೆಯನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿಗೆ 82 ರನ್ ಅಗತ್ಯವಿದೆ. ಕೊಹ್ಲಿ ಈ ಗಡಿ ದಾಟಿದರೆ ಪಾಂಟಿಂಗ್ ಅವರ 2,164 ರನ್‌ಗಳ ದಾಖಲೆಯನ್ನು ಮುರಿಯಲಿದ್ದಾರೆ. ಸದ್ಯ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 2,083 ರನ್ ಗಳಿಸಿದ್ದಾರೆ.
ಇದನ್ನೂ ಓದಿ IND VS AUS: ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಸರಣಿಯಲ್ಲಿ 191 ರನ್ ಗಳಿಸಿದರೆ ಮತ್ತೊಂದು ದಾಖಲೆ
ವಿರಾಟ್ ಸದ್ಯ 271 ಏಕದಿನ ಪಂದ್ಯಗಳಲ್ಲಿ 57.7 ಸರಾಸರಿಯಲ್ಲಿ 12,809 ರನ್ ಗಳಿಸಿದ್ದಾರೆ. ಕೊಹ್ಲಿ ಈ ಸರಣಿಯಲ್ಲಿ 191 ರನ್ ಗಳಿಸಿದರೆ 13,000 ರನ್ ಪೂರೈಸಲಿದ್ದಾರೆ. ಈ ಮೂಲಕ ಏಕದಿನದಲ್ಲಿ ಈ ಸಾಧನೆ ಮಾಡಿದ ಭಾರತದ ಎರಡನೇ ಮತ್ತು ವಿಶ್ವದ 5ನೇ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಕ್ರಿಕೆಟ್
Viral Video: ಬ್ರೇಕ್ ಪಡೆದ ಆಸೀಸ್ ಆಟಗಾರರ ಮುಂದೆ ಬ್ರೇಕ್ ಡ್ಯಾನ್ಸ್ ಮಾಡಿದ ವಿರಾಟ್ ಕೊಹ್ಲಿ
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ(India vs Australia, 3rd ODI) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ರೇಕ್ ಡ್ಯಾನ್ಸ್ ಮಾಡಿದ ವಿಡಿಯೊ ವೈರಲ್ ಆಗಿದೆ.
ರಾಜ್ಕೋಟ್: ಸದಾ ಮೈದಾನದಲ್ಲಿ ಒಂದಲ್ಲ ಒಂದು ವಿಶೇಷ ಅವತಾರದಲ್ಲಿ ಎಲ್ಲರ ಗಮನ ಸೆಳೆಯುವ ಟೀಮ್ ಇಂಡಿಯಾದ ಸ್ಟಾರ್, ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ(India vs Australia, 3rd ODI) ಪಂದ್ಯದಲ್ಲಿ ಬ್ರೇಕ್ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ. ಬ್ಯಾಟಿಂಗ್ ವೇಳೆ ಡ್ರಿಂಕ್ಸ್ ವಿರಾಮ ಪಡೆದ ಸ್ಟೀವನ್ ಸ್ಮಿತ್(Steven Smith) ಮತ್ತು ಮಾರ್ನಸ್ ಲಬುಶೇಬನ್(Marnus Labuschagne) ಎದುರು ಎರಡು ಸ್ಟೆಪ್ ಹಾಕಿ ಅವರನ್ನು ರಂಜಿಸಿದ ವಿಡಿಯೊ ವೈರಲ್(Viral Video) ಆಗಿದೆ.
ಏಷ್ಯಾಕಪ್ನಲ್ಲಿ ಲುಂಗಿ ಡ್ಯಾನ್ಸ್ ಮಾಡಿದ್ದ ಕೊಹ್ಲಿ
ಕೊಹ್ಲಿ ಕ್ರಿಕೆಟ್ನಲ್ಲಿ ಎಷ್ಟು ಖ್ಯಾತಿ ಪಡೆದಿದ್ದಾರೋ ಅಷ್ಟೇ ಖ್ಯಾತಿಯನ್ನು ಮೈದಾನದಲ್ಲಿ ಡ್ಯಾನ್ಸ್ ಮಾಡುವ ಮೂಲಕವೂ ಪಡೆದಿದ್ದಾರೆ. ಕೊಹ್ಲಿ ಹಲವು ಬಾರಿ ಫಿಲ್ಡಿಂಗ್ ನಡೆಸುವ ವೇಳೆ ಡ್ಯಾನ್ಸ್ ಮಾಡಿದ ವಿಡಿಯೊ ವೈರಲ್ ಆಗಿತ್ತು. ಕಳೆದ ಏಷ್ಯಾಕಪ್ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಲಿವುಡ್ನ ಸ್ಟಾರ್ ಹಿರಿಯ ನಟ ಶಾರೂಖ್ ಖಾನ್(Shah Rukh Khan) ಮತ್ತು ದೀಪಿಕಾ ಪಡುಕೋಣೆ ನಟನೆಯ ಚೆನ್ನೈ ಎಕ್ಸ್ ಪ್ರೆಸ್ ಸಿನೆಮಾದ ಪ್ರಸಿದ್ಧ ಲುಂಗಿ ಡ್ಯಾನ್ಸ್ ಹಾಡಿಗೆ ಹೆಜ್ಜೆ ಹಾಕಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿಯೂ ಅವರು ನೃತ್ಯ ಮಾಡಿ ಗಮನಸೆಳೆದಿದ್ದಾರೆ.
ವಿರಾಟ್ ಕೊಹ್ಲಿ ಅವರು ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲಬುಶೇಬನ್ ಇನಿಂಗ್ಸ್ ವಿರಾಮವನ್ನು ಪಡೆಯುತ್ತಿದ್ದರು. ಸ್ಮಿತ್ ಬಿಸಿಲಿನ ತಾಪವನ್ನು ತಡೆಯಲಾರೆದೆ ಐಸ್ ಕ್ಯೂಬ್ ಹೆಡ್ ಮಸಾಜ್ ಮಾಡುತ್ತಿದ್ದರು. ಲಬುಶೇನ್ ಪಕ್ಕದಲ್ಲಿ ನಿಂತು ನೀರು ಮತ್ತು ಜ್ಯೂಸ್ ಕುಡಿಯಲು ಸಿದ್ಧತೆ ನಡೆಸುತ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಕೊಹ್ಲಿ ನೃತ್ಯ ಮಾಡಿ ಸೊಂಟ ಬಳುಕಿಸಿ ಮನರಂಜನೆ ನೀಡಿದ್ದಾರೆ. ಈ ವಿಡಿಯೊ ಟ್ವಿಟರ್ನಲ್ಲಿ ವೈರಲ್ ಆಗಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 56 ರನ್ ಗಳಿಸಿದರೆ, ಸ್ಟೀವನ್ ಸ್ಮಿತ್(74) ಮತ್ತು ಮಾರ್ನಸ್ ಲಬುಶೇನ್(72) ಬಾರಿಸಿದರು.
When GOATs take a break 🕺🫶#IndiaCricketKaNayaGhar #TeamIndia #IDFCFirstBankODITrophy #ViratKohli pic.twitter.com/yQ8V0jvrj2
— JioCinema (@JioCinema) September 27, 2023
ಇದನ್ನೂ ಓದಿ IND vs AUS: ವೈಟ್ ವಾಶ್ ತಪ್ಪಿಸಿಕೊಂಡ ಆಸೀಸ್; ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಸೋಲು
ಪಂದ್ಯ ಸೋತ ಭಾರತ
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ(Saurashtra Cricket Association Stadium) ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಆರಂಭದಿಂದಲೇ ಭಾರತದ ಬೌಲರ್ಗಳ ಮೇಲೆರಗಿ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆದು ಆ ಬಳಿಕ ನಾಟಕೀಯ ಕುಸಿತ ಕಂಡು 49.4 ಓವರ್ಗಳಲ್ಲಿ 286 ರನ್ಗೆ ಸರ್ವಪತನ ಕಂಡು ಸೋಲನುಭವಿಸಿತು. ಆದರೆ ವಿಶ್ವಕಪ್ಗೂ ಮುನ್ನ 2-1 ಅಂತರದಿಂದ ಸರಣಿ ಗೆದ್ದದ್ದು ಭಾರತದ ಸಾಧನೆಯಾಗಿದೆ.
ಕ್ಲೀನ್ ಸ್ವೀಪ್ ಯೋಜನೆ ವಿಫಲ
ಈ ಸೋಲಿನೊಂದಿಗೆ ತವರಿನಲ್ಲಿ ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಮಾಡುವ ಭಾರತದ ಕನಸು ಮತ್ತೊಮ್ಮೆ ಭಗ್ನವಾಯಿತು. ಅಲ್ಲದೆ ಈ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡವೇ ಗೆದ್ದು ಬೀಗಿದ ದಾಖಲೆ ಅಜೇಯವಾಗಿ ಮುಂದುವರಿದಿದೆ. ಇದಕ್ಕೂ ಮುನ್ನ ಇಲ್ಲಿ ನಡೆದ ಮೂರೂ ಏಕದಿನ ಪಂದ್ಯಗಳಲ್ಲಿಯೂ ಮೊದಲು ಬ್ಯಾಟಿಂಗ್ ನಡೆಸಿದ್ದ ತಂಡವೇ ಗೆಲುವು ಸಾಧಿಸಿತ್ತು.
ಕ್ರಿಕೆಟ್
ಕೊಹ್ಲಿಗೆ ಹೆದರಿಯೇ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ 24 ವರ್ಷದ ನವೀನ್ ಉಲ್ ಹಕ್
ಅಫಘಾನಿಸ್ತಾನ ಕ್ರಿಕೆಟ್ ತಂಡದ ಯುವ ವೇಗಿ ನವೀನ್ ಉಲ್ ಹಕ್(Naveen-ul-Haq) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.(Naveen-ul-Haq retirement) ಏಕದಿನ ವಿಶ್ವಕಪ್ ಟೂರ್ನಿಯ(World Cup) ಬಳಿಕ ಅವರು ನಿವೃತ್ತಿಯಾಗಲಿದ್ದಾರೆ.
ಕಾಬುಲ್: 16ನೇ ಆವೃತ್ತಿಯ ಐಪಿಎಲ್ ವೇಳೆ ವಿರಾಟ್ ಕೊಹ್ಲಿ(Naveen-ul-Haq and virat kohli) ಜತೆ ಕಿರಿಕ್ ಮಾಡಿದ್ದ ಅಫಘಾನಿಸ್ತಾನ ಕ್ರಿಕೆಟ್ ತಂಡದ ಯುವ ವೇಗಿ ನವೀನ್ ಉಲ್ ಹಕ್(Naveen-ul-Haq) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.(Naveen-ul-Haq retirement) ಏಕದಿನ ವಿಶ್ವಕಪ್ ಟೂರ್ನಿಯ(World Cup) ಬಳಿಕ ಅವರು ನಿವೃತ್ತಿಯಾಗಲಿದ್ದಾರೆ.
24 ವರ್ಷದ ವೇಗಿ ನವೀನ್ ಉಲ್ ಹಕ್ ಅವರು ಟ್ವೀಟ್ ಮಾಡುವ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು. ಟಿ20 ಕ್ರಿಕೆಟ್ ಕಡೆ ಹೆಚ್ಚಿನ ಗಮನ ನೀಡುವ ಸಲುವಾಗಿ ಅವರು ಏಕದಿನ ಕ್ರಿಕೆಟ್ಗೆ ಗುಡ್ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ನವೀನ್ ಉಲ್ ಹಕ್ ನಿವೃತ್ತಿ ಘೋಷಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಕಿಂಗ್ ಕೊಹ್ಲಿಯ ಭಯದಿಂದಲೇ ನಿವೃತ್ತಿ ಪಡೆದಿರುವುದಾಗಿ ಟ್ರೋಲ್ ಮಾಡಿದ್ದಾರೆ.
ಎರಡು ವರ್ಷಗಳ ಬಳಿಕ ಅವಕಾಶ
ನವೀನ್ ಉಲ್ ಹಕ್ ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಎರಡು ವರ್ಷಗಳ ಬಳಿಕ ಅಫಘಾನಿಸ್ತಾನ ತಂಡದಲ್ಲಿ ಅವಕಾಶ ಪಡೆದರು. 2021ರಲ್ಲಿ ಕೊನೆಯ ಬಾರಿಗೆ ಅಫ್ಘಾನ್ ಪರ ಅವರು ಏಕದಿನ ಕ್ರಿಕೆಟ್ ಪಂದ್ಯ ಆಡಿದ್ದರು. ಈ ಬಾರಿಯ ಐಪಿಎಲ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಕಾರಣ ಅವರಿಗೆ ಮತ್ತೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಭಾರತದ ಪಿಚ್ನಲ್ಲಿ ಅವರು ಹಿಡಿತ ಸಾಧಿಸಿರುವುದೇ ತಂಡದಲ್ಲಿ ಸ್ಥಾನ ಪಡೆಯಲು ಪ್ರಮುಖ ಕಾರಣ. ಒಟ್ಟು 7 ಏಕದಿನ ಪಂದ್ಯ ಆಡಿರುವ ಅವರು 14 ವಿಕೆಟ್ ಮತ್ತು 21 ರನ್ ಗಳಿಸಿದ್ದಾರೆ 44ಕ್ಕೆ 4 ವಿಕೆಟ್ ಕೆಡವಿದ್ದು ಅವರ ಶ್ರೇಷ್ಠ ವೈಯಕ್ತಿ ಸಾಧನೆಯಾಗಿದೆ.
ಇದನ್ನೂ ಓದಿ IPL 2023: ಕೊಹ್ಲಿ ಬಳಿ ಕ್ಷಮೆ ಕೇಳಿದರೇ ನವೀನ್ ಉಲ್ ಹಕ್? ಟ್ವೀಟ್ನಲ್ಲಿ ಏನಿದೆ?
ಐಪಿಎಲ್ ವೇಳೆ ಕೊಹ್ಲಿ ಜತೆ ಕಿರಿಕ್
ಮೇ 1ರಂದು ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(virat kohli) ಮತ್ತು ನವೀನ್ ಉಲ್-ಹಕ್ ಮಧ್ಯೆ ಮೈದಾನದಲ್ಲಿಯೇ ಕಿರಿಕ್ ಆಗಿತ್ತು. ಬಳಿಕ ಪಂದ್ಯ ಮುಗಿದ ಬಳಿಕ ಗಂಭೀರ್ ಅವರು ಇದೇ ವಿಚಾರವಾಗಿ ಕೊಹ್ಲಿ ಜತೆ ವಾಗ್ವಾದ ನಡೆಸಿದ್ದರು. ಈ ಘಟನೆ ನಡೆದ ಬಳಿಕ ನವೀನ್ ಅವರು ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ಸೋತ ಬಳಿಕ ಮಾವಿನ ಹಣ್ಣಿನ ಫೋಟೊ ಹಾಕಿ ಪರೋಕ್ಷವಾಗಿ ಟ್ರೋಲ್ ಮಾಡಿದ್ದರು. ಇಲ್ಲಿಂದ ಆರಂಭಗೊಂಡ ಈ ಸಮರವನ್ನು ಮುಂದೆ ವಿರಾಟ್ ಅಭಿಮಾನಿಗಳು ಮುಂದುವರಿಸಿದ್ದರು.
ಏಷ್ಯಾಕಪ್ನಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಮುಖಾಮುಖಿ ಆಗುವುದನ್ನು ಕೊಹ್ಲಿ(naveen ul haq and virat kohli) ಅಭಿಮಾನಿಗಳು ಬಾರಿ ನಿರೀಕ್ಷೆ ಮಾಡಿದ್ದರು. ಆದರೆ ಅವರು ನವೀನ್ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿಯ ಅಭಿಮಾನಿಗಳು ಬೇಸರಗೊಂಡಿದ್ದರು. ನವೀನ್ಗೆ ಕೊಹ್ಲಿ ಸರಿಯಾಗಿ ದಂಡಿಸಬೇಕು, ಆ ಬಳಿಕ ಅವರನ್ನು ಟ್ರೋಲ್ ಮಾಡಬೇಕು ಎಂದು ಕೊಹ್ಲಿ ಅಭಿಮಾನಿಗಳು ಕಾದು ಕುಳಿತ್ತಿದ್ದರು. ಆದರೆ ಅವರು ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ವಿಶ್ವಕಪ್ನಲ್ಲಿ ಅವರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕೊಹ್ಲಿ ಅಭಿಮಾನಿಗಳು ಅಫಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಕಾದು ಕುಳಿತಿದ್ದಾರೆ.
ಕ್ರಿಕೆಟ್
IND vs AUS: ವೈಟ್ ವಾಶ್ ತಪ್ಪಿಸಿಕೊಂಡ ಆಸೀಸ್; ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಸೋಲು
ಪ್ರವಾಸಿ ಆಸ್ಟ್ರೇಲಿಯಾ(IND vs AUS) ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ(India vs Australia, 3rd ODI) ಭಾರತ 66 ರನ್‌ಗಳ ಸೋಲು ಕಂಡಿದೆ.
ರಾಜ್ಕೋಟ್: ಪ್ರವಾಸಿ ಆಸ್ಟ್ರೇಲಿಯಾ(IND vs AUS) ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ(India vs Australia, 3rd ODI) ಹಲವು ಪ್ರಯೋಗ ನಡೆಸಿ ಆಡಲಿಳಿದ ಭಾರತ ಸೋಲಿನ ಆಘಾತ ಎದುರಿಸಿದೆ. ಈ ಸೋಲಿನೊಂದಿಗೆ ತವರಿನಲ್ಲಿ ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಮಾಡುವ ಭಾರತದ ಕನಸು ಮತ್ತೊಮ್ಮೆ ಭಗ್ನವಾಯಿತು. ಅಲ್ಲದೆ ಈ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡವೇ ಗೆದ್ದು ಬೀಗಿದ ದಾಖಲೆ ಅಜೇಯವಾಗಿ ಮುಂದುವರಿದಿದೆ. ಇದಕ್ಕೂ ಮುನ್ನ ಇಲ್ಲಿ ನಡೆದ ಮೂರೂ ಏಕದಿನ ಪಂದ್ಯಗಳಲ್ಲಿಯೂ ಮೊದಲು ಬ್ಯಾಟಿಂಗ್ ನಡೆಸಿದ್ದ ತಂಡವೇ ಗೆಲುವು ಸಾಧಿಸಿತ್ತು.
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ(Saurashtra Cricket Association Stadium) ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಆರಂಭದಿಂದಲೇ ಭಾರತದ ಬೌಲರ್ಗಳ ಮೇಲೆರಗಿ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆದು ಆ ಬಳಿಕ ನಾಟಕೀಯ ಕುಸಿತ ಕಂಡು 49.4 ಓವರ್ಗಳಲ್ಲಿ 286 ರನ್ಗೆ ಸರ್ವಪತನ ಕಂಡು ಸೋಲನುಭವಿಸಿತು. ಆದರೆ ವಿಶ್ವಕಪ್ಗೂ ಮುನ್ನ 2-1 ಅಂತರದಿಂದ ಸರಣಿ ಗೆದ್ದದ್ದು ಭಾರತದ ಸಾಧನೆಯಾಗಿದೆ.
ರೋಹಿತ್-ಕೊಹ್ಲಿ ಉತ್ತಮ ಆಟ
ಶುಭಮನ್ ಗಿಲ್ ಅವರಿಗೆ ವಿಶ್ರಾಂತಿ ನೀಡಿದ ಕಾರಣ ಭಾರತ ಈ ಪಂದ್ಯದಲ್ಲಿ ಕೆಲ ಪ್ರಯೋಗ ನಡೆಸಿ ವಾಷಿಂಗ್ಟನ್ ಸುಂದರ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿತು. ಆದರೆ ಈ ಯೋಜನೆ ಫಲಪ್ರದವಾಗಲಿಲ್ಲ. ಅವರು 18 ರನ್ಗಳಿಸಿ ತಮ್ಮ ಮೇಲಿಟ್ಟ ಬರವಸೆಯನ್ನು ಹುಸಿಯಾಗಿಸಿದರು. ಆದರೆ ನಾಯಕ ರೋಹಿತ್ ಮತ್ತು ವಿರಾಟ್ ಕೊಹ್ಲಿ ಪ್ರಚಂಡ ಬ್ಯಾಟಿಂಗ್ ನಡೆಸಿ ಆಸೀಸ್ ಬೌಲರ್ಗಳ ಬೆವರಿಳಿಸುವಲ್ಲಿ ಯಶಸ್ಸು ಕಂಡರು.
ನಾಟಕೀಯ ಕುಸಿತ ಕಂಡ ಭಾರತ
ಆರಂಭದಿಂದಲೇ ಸಿಕ್ಸರ್ ಬೌಂಡರಿ ಬಾರಿಸಿದ ರೋಹಿತ್ ಶರ್ಮ ಅವರು ಸುಂದರ್ ಜತೆ ಮೊದಲ ವಿಕೆಟ್ಗೆ 74 ರನ್ ಒಟ್ಟುಗೂಡಿಸಿದರು. ಇದರಲ್ಲಿ ಬಹುಪಾಲು ಮೊತ್ತ ರೋಹಿತ್ ಅವರದ್ದೇ ಆಗಿತ್ತು. ಆ ಬಳಿಕ ವಿರಾಟ್ ಕೊಹ್ಲಿ ಜತೆ ಸೇರಿಕೊಂಡು ದ್ವಿತೀಯ ವಿಕೆಟ್ಗೆ 70 ರನ್ ರಾಶಿ ಹಾಕಿದರು. 6 ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿದ ರೋಹಿತ್ 81 ರನ್ ಗಳಿಸಿ ಮ್ಯಾಕ್ಸ್ವೆಲ್ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ವಿಕೆಟ್ ಬಿದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿಯ ವಿಕೆಟ್ ಕೂಡ ಬಿತ್ತು. ಉತ್ತಮ ಸ್ಥಿತಿಯಲ್ಲಿದ್ದ ಭಾರತ, ಉಭಯ ಆಟಗಾರರ ವಿಕೆಟ್ ಬಿದ್ದೊಡನೆ ನಾಟಕೀಯ ಕುಸಿತ ಕಂಡು ಸೋಲು ಕಂಡಿತು. ವಿರಾಟ್ 61 ಎಸೆತ ಎದುರಿಸಿ 56 ರನ್ ಗಳಿಸಿದರು. ಮೊದಲ ಮೂರು ವಿಕೆಟ್ ಕೂಡ ಮ್ಯಾಕ್ಸ್ವೆಲ್ ಪಾಲಾಯಿತು.
ಆಸರೆಯಾಗದ ರಾಹುಲ್-ಸೂರ್ಯ
ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಶ್ರೇಯಸ್ ಅಯ್ಯರ್, ಸ್ಫೋಟಕ ಅರ್ಧಶತಕ ಬಾರಿಸಿದ್ದ ಸೂರ್ಯಕುಮಾರ್ ಯಾದವ್ ಮತ್ತು ಕೆ.ಎಲ್ ರಾಹುಲ್ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ವಿಫಲವಾದದ್ದು ಭಾರತದ ಹಿನ್ನಡೆಗೆ ಪ್ರಮುಖ ಕಾರಣ. ಅಯ್ಯರ್ 48 ರನ್ ಗಳಿಸಿದರೆ, ರಾಹುಲ್ 26 ರನ್ಗೆ ಆಟ ಮುಗಿಸಿದರು. ಸೂರ್ಯಕುಮಾರ್ ಯಾದವ್ ಒಂದು ಬೌಂಡಿಗೆ ಸೀಮಿತವಾಗಿ 7 ಎಸೆತಗಳಿಂದ 8ರನ್ ಬಾರಿಸಿದರು. ಆಸೀಸ್ ಪರ ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಕಂಡ ಗ್ಲೆನ್ ಮ್ಯಾಕ್ಸ್ವೆಲ್ ಬೌಲಿಂಗ್ನಲ್ಲಿ ಜಾದು ಮಾಡಿ ವಿಕೆಟ್ ಕಿತ್ತು ಮಿಂಚಿದರು. ಅಂತಿಮ ಹಂತದಲ್ಲಿ ಜಡೇಜಾ 35 ರನ್ ಬಾರಿಸಿದರು.
ಇದನ್ನೂ ಓದಿ Asian Games 2023: ಕೇವಲ ಒಂದು ಅಂಕದ ಅಂತರದಲ್ಲಿ ವಿಷ್ಣುಗೆ ಕೈತಪ್ಪಿದ ಬೆಳ್ಳಿ ಪದಕ
ಆಸೀಸ್ ಪರ ಅಗ್ರ ಕ್ರಮಾಂಕದ ನಾಲ್ವರಿಂದ ಅಧರ್ಶತಕ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಪರ ಅಗ್ರ ಕ್ರಮಾಂಕದ ನಾಲ್ಕು ಮಂದಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಆರಂಭಿಕ ಆಟಗಾರ ಡೇವಿಡ್ ವಾರ್ನರ್(56), ಮಿಚೆಲ್ ಮಾರ್ಷ್(96), ಸ್ಟೀವನ್ ಸ್ಮಿತ್(74) ಮತ್ತು ಮಾರ್ನಸ್ ಲಬುಶೇನ್(72) ಅರ್ಧಶತಕ ಬಾರಿಸಿದ ಆಟಗಾರರು.
ದುಬಾರಿಯಾದ ಬುಮ್ರಾ
ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ತೋರಿ ಸೋಲು ಕಂಡಿದ್ದ ಆಸೀಸ್ ಅಂತಿಮ ಪಂದ್ಯದಲ್ಲಿ ಮೈ ಚಳಿ ಬಿಟ್ಟು ಆಡಿತು. ಆರಂಭಕಾರ ಮಿಚೆಲ್ ಮಾರ್ಷ್ ಈ ಪಂದ್ಯದಲ್ಲಿ ಸಂಪೂರ್ಣ ಜೋಶ್ನಿಂದಲೇ ಬ್ಯಾಟಿಂಗ್ ನಡೆಸಿದರು. ತಮ್ಮ ಜತೆಗಾರ ಡೇವಿಡ್ ವಾರ್ನರ್ ಜತೆ ಸೇರಿಕೊಂಡು ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಅವರನ್ನು ಬೆಂಡೆತ್ತಿದ್ದರು. ಬುಮ್ರಾ ಅವರ ಪ್ರತಿ ಓವರ್ಗೆ 10ರ ಸರಾಸರಿಯಲ್ಲಿ ರನ್ ಗಳಿಸಿದರು. ಬುಮ್ರಾ 5 ಓವರ್ ಪೂರ್ತಿಗೊಳಿಸುವ ವೇಳೆ 51 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅರ್ಧಶತಕ ಬಾರಿಸಿ ಮಿಂಚಿದರು. ಇವರ ಅಬ್ಬರದ ಬ್ಯಾಟಿಂಗ್ಗೆ ಕನ್ನಡಿಗ ಪ್ರಸಿದ್ಧ್ ಕೃಷ್ಟ ಕೊನೆಗೂ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು. ವಾರ್ನರ್ ಅವರ ವಿಕೆಟ್ ಕಿತ್ತು ಭಾರತಕ್ಕೆ ಅರ್ಲಿ ಬ್ರೇಕ್ ಒದಗಿಸಿದರು. 34 ಎಸೆತಗಳಲ್ಲಿ 56 ರನ್ಗಳಿಸಿದ ವಾರ್ನರ್ ಕೆ.ಎಲ್ ರಾಹುಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಅವರ ಈ ಅರ್ಧಶತಕದ ಇನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ದಾಖಲಾಯಿತು. ಮಾರ್ಷ್ ಮತ್ತು ವಾರ್ನರ್ ಸೇರಿಕೊಂಡು ಮೊದಲ ವಿಕೆಟ್ಗೆ 78 ರನ್ ರಾಶಿ ಹಾಕಿದರು.
ದ್ವಿತೀಯ ವಿಕೆಟ್ಗೆ ಶತಕದ ಜತೆಯಾಟ
ವಾರ್ನರ್ ವಿಕೆಟ್ ಬಿದ್ದರೂ ಆಸೀಸ್ ರನ್ ಗಳಿಕೆಯ ವೇಗ ಮಾತ್ರ ಕಡಿಮೆಯಾಗಲಿಲ್ಲ. ದ್ವಿತೀಯ ವಿಕೆಟ್ಗೆ ಆಡಲಿಳಿದ ಸ್ಟೀವನ್ ಸ್ಮಿತ್ ಕೂಡ ಮಾರ್ಷ್ ಜತೆ ಸೇರಿಕೊಂಡು ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಇವರ ಬ್ಯಾಟಿಂಗ್ ವೇಗಕ್ಕೆ 27 ಓವರ್ಗೆ ಆಸೀಸ್ 200 ರನ್‌ಗಳ ಗಡಿ ದಾಟಿತು. ಈ ವೇಳೆ ಆಸೀಸ್ 400 ರನ್ ಬಾರಿಸುವ ನಿರೀಕ್ಷೆಯೊಂದನ್ನು ಮಾಡಲಾಯಿತು. ಆದರೆ ಕುಲ್ದೀಪ್ ಡೇಂಜರಸ್ ಬ್ಯಾಟರ್ ಮಿಚೆಲ್ ಮಾರ್ಷ್ ಅವರ ವಿಕೆಟ್ ಕಿತ್ತರು. ಇದರ ಬೆನ್ನಿಗೆ ಸ್ಟೀವನ್ ಸ್ಮಿತ್ ವಿಕೆಟ್ ಕೂಡ ಬಿತ್ತು. ಇಲ್ಲಿಂದ ಭಾರತೀಯ ಬೌಲರ್ಗಳು ಹಿಡಿತ ಸಾಧಿಸಿದರು.
4 ರನ್ ಅಂತರದಲ್ಲಿ ಶತಕ ವಂಚಿತರಾದ ಮಾರ್ಷ್
ಮಿಚೆಲ್ ಮಾರ್ಷ್ 84 ಎಸೆತಗಳಿಂದ 13 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 96 ರನ್ ಬಾರಿಸಿ ಕೇವಲ 4 ರನ್ ಅಂತರದಿಂದ ಶತಕ ವಂಚಿತರಾದರು. ಭಾರತ ಪರ 9 ಇನಿಂಗ್ಸ್ನಲ್ಲಿ ಮಾರ್ಷ್ 458 ರನ್ ಪೂರ್ತಿಗೊಳಿಸಿದರು. ಮಾರ್ಷ್ ವಿಕೆಟ್ ಬಿದ್ದು 27 ರನ್ ಒಟ್ಟುಗೂಡುವಷ್ಟರಲ್ಲಿ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಸ್ಟೀವನ್ ಸ್ಮಿತ್ ಕೂಡ ಔಟಾದರು. ದ್ವಿತೀಯ ವಿಕೆಟ್ಗೆ ಈ ಜೋಡಿ ಬರೋಬ್ಬರಿ 137 ರನ್ ಜತೆಯಾಟ ನಡೆಸಿತು. ಸ್ಮಿತ್ ವಿಕೆಟ್ ಸಿರಾಜ್ ಪಾಲಾಯಿತು. ಸ್ಮಿತ್ 8 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ 74 ರನ್ ಗಳಿಸಿದರು.
ಮತ್ತೆ ಬ್ಯಾಟಿಂಗ್ ಮಿಂಚು ಹರಿಸಿದ ಲಬುಶೇನ್
ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ ಮಾರ್ನಸ್ ಲಬುಶೇನ್ ಈ ಪಂದ್ಯದಲ್ಲಿಯೂ ಅಧರ್ಶತಕ ಬಾರಿಸಿ ಮಿಂಚಿದರು. ಸ್ಮಿತ್ ಮತ್ತು ಮಾರ್ಷ್ ವಿಕೆಟ್ ಬಿದ್ದ ಬಳಿಕ ನಾಟಕೀಯ ಕುಸಿತ ಕಂಡ ಆಸೀಸ್ಗೆ ಆಸರೆಯಾಗಿ ನಿಂತು ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಗಾಯಗೊಂಡು ಚಿಕಿತ್ಸೆ ಪಡೆದಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಈ ಪಂದ್ಯದಲ್ಲಿ ಆಡಲಿಳಿದರು. ಆದರೆ ಅವರ ಪ್ರದರ್ಶನ ಮಾತ್ರ ನಿರೀಕ್ಷಿತ ಮಟ್ಟದಿಂದ ಕೂಡಿರಲಿಲ್ಲ. 5 ರನ್ಗೆ ಸೀಮಿತರಾದರು. ಆ ಬಳಿಕ ಬಂದ ಕ್ಯಾಮರೂನ್ ಗ್ರೀನ್(9), ಅಲೆಕ್ಸ್ ಕ್ಯಾರಿ(11) ಕೂಡ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸುವಲ್ಲಿ ವಿಫಲರಾದರು. ಉಭಯ ಆಟಗಾರರು ಸಿಂಗಲ್ ಡಿಜಿಟ್ಗೆ ಔಟಾದರು.
ಲಬುಶೇನ್ 58 ಎಸೆತ ಎದುರಿಸಿ 72 ರನ್ ಬಾರಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಆರಂಭದಲ್ಲಿ ಸರಿಯಾಗಿ ದಂಡಿಸಿಕೊಂಡ ಬುಮ್ರಾ ಅಂತಿಮ ಹಂತದಲ್ಲಿ ಹಿಡಿತ ಸಾಧಿಸಿ 3 ವಿಕೆಟ್ ಕಿತ್ತರು. ಆದರೂ 81 ರನ್ ಬಿಟ್ಟುಕೊಟ್ಟರು. ಕುಲ್ದೀಪ್ ಯಾದವ್ ಮಾತ್ರ ಕಡಿಮೆ ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.
ಕ್ರಿಕೆಟ್
Cauvery water dispute: ಕಾವೇರಿ ವಿವಾದದ ಬಗ್ಗೆ ಧೋನಿ ಐಪಿಎಲ್ ವೇಳೆ ಹೇಳಿದ್ದೇನು?
2018ರಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಕಾವೇರಿ ವಿಚಾರದಲ್ಲಿ ನೀಡಿದ ಹೇಳಿಯೊಂದು ಈಗ ವೈರಲ್ ಆಗುತ್ತಿದೆ.
ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ಕಾವೇರಿ(Cauvery water dispute) ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮಗಳನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala samrakshana samiti) ಮಂಗಳವಾರ ಪ್ರತಿಭಟನೆ ಮಾಡಿತ್ತು. ಸೆ. 29ರಂದು ಸಂಪೂರ್ಣ ಕರ್ನಾಟಕ ಬಂದ್ ಮಾಡಲಾಗುವುದು ಎಂದು ಈಗಾಗಲೇ ಹಲವು ಸಂಘಟನೆಗಳು ಘೋಷಣೆ ಮಾಡಿದೆ. ಈ ಮಧ್ಯೆ 2018ರಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಕಾವೇರಿ ವಿಚಾರದಲ್ಲಿ ನೀಡಿದ ಹೇಳಿಯೊಂದು ಈಗ ವೈರಲ್(viral news) ಆಗುತ್ತಿದೆ.
ಧೋನಿ ಏನು ಹೇಳಿದ್ದರು?
2018ರ ಐಪಿಎಲ್ನಲ್ಲಿ ಕಾವೇರಿ ಹೋರಾಟದಲ್ಲಿ ತಮಿಳುನಾಡಿಗೆ ಬೆಂಬಲ ಸೂಚಿಸಿ ಚೆನ್ನೈ ಸೂಪರ್ಕಿಂಗ್ಸ್ ತಂಡದ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡುವಂತೆ ನಾಯಕ ಧೋನಿಗೆ ಒತ್ತಾಯಿಸಲಾಗಿತ್ತು. ಆದರೆ ಧೋನಿ ಉಭಯ ರಾಜ್ಯಗಳ ಜಲವಿವಾದದ ವಿಚಾರವಾಗಿ ‘ನಾನು ಇಲ್ಲಿ ಆಟ ಆಡುವುದಕ್ಕೆ ಬಂದವನು. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಕರ್ನಾಟಕ ಸೇರಿ ಯಾವುದೇ ರಾಜ್ಯದ ವಿರೋಧಿಯಾಗುವುದಿಲ್ಲ” ಎಂದು ಹೇಳುವ ಮೂಲಕ ಪ್ರಬುದ್ಧತೆ ತೋರಿದ್ದರು. ಧೋನಿ ಅವರ ಅಂದಿನ ಈ ಹೇಳಿಕೆ ಈಗ ವೈರಲ್ ಆಗುತ್ತಿದೆ.
ಮಂಗಳವಾರ ಕೆಲ ಕಿಡಿಗೇಡಿಗಳು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಅವರ ನಕಲಿ ಟ್ವಿಟ್ ಖಾತೆ ತೆರದು ಕರ್ನಾಟಕಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಒಂದನ್ನು ಮಾಡುವ ಮೂಲಕ ಅವರ ಹೆಸರನ್ನು ದುರುಪಯೋಗ ಪಡಿಸಿದ್ದರು.
ಟ್ವೀಟ್ನಲ್ಲಿ ಏನಿದೆ?
ರಾಹುಲ್ ಅವರ ಹೆಸರಿನ ನಕಲಿ ಖಾತೆ ಟ್ವಿಟರ್ನಲ್ಲಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ, ರಾಹುಲ್ ಅವರ ಶತಕದ ಫೋಟೊವೊಂದನ್ನು ಹಂಚಿಕೊಂಡು “ಕಾವೇರಿ ಎಂದೂ ನಮ್ಮದು. ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು. ಇದು ನಮ್ಮ ದುರಂತ. ಕಾವೇರಿ ಇಡೀ ಕರ್ನಾಟಕದ ಆಸ್ತಿ” ಎಂದು ಬರೆದಿದ್ದಾರೆ. ಈ ಮೂಲಕ ಅವರ ಹೆಸರನ್ನು ದುರುಯೋಗಪಡಿಸಿಕೊಂಡಿದ್ದರು.
ಇದನ್ನೂ ಓದಿ Cauvery water dispute : ಕರ್ನಾಟಕ ಬಂದ್‌ಗೆ ಬಿಜೆಪಿ-ಜೆಡಿಎಸ್ ಜಂಟಿ ಬೆಂಬಲ; ಕಾವೇರಲಿದೆಯೇ ಹೋರಾಟ?
ಸೆ. 29ರ ಕರ್ನಾಟಕ ಬಂದ್‌ಗೆ ವಾಟಾಳ್ ಟೀಮ್ ರೆಡಿ
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ ಬೆಂಗಳೂರು ಬಂದ್ (Bangalore Bandh) ಯಶಸ್ಸಿನ ಬೆನ್ನಿಗೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿದ ಸೆಪ್ಟೆಂಬರ್ 29ರ ಕರ್ನಾಟಕ ಬಂದ್‌ಗೆ (Karnataka Bandh) ಭರದ ಸಿದ್ಧತೆಗಳು ನಡೆಯುತ್ತಿದೆ. ಸಂಘಟಕರು ನಾನಾ ಸಂಘಟನೆಗಳ ಬೆಂಬಲವನ್ನು ಕೋರುತ್ತಿದ್ದಾರೆ. ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಆದರೆ, ಕೆಲವು ಸಂಘಟನೆಗಳು ಒಂದೇ ವಾರದಲ್ಲಿ ನಡೆಯುತ್ತಿರುವ ಎರಡನೇ ಬಂದ್ ಬೆಂಬಲ ನೀಡಲು ಹಿಂದೇಟು ಹಾಕುತ್ತಿವೆ. ಈ ನಡುವೆ ಒಂದು ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇನಾದರೂ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದರೆ ಈಗಲೇ ಬಂದ್ ಕರೆಯನ್ನು ಹಿಂದೆ ಪಡೆಯಲು ಸಿದ್ಧ ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಪಕ್ಷಗಳ ಬೆಂಬಲ
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಬಂದ್‌ಗೆ ಸಾಥ್ ನೀಡುವುದಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಘೋಷಣೆ ಮಾಡಿವೆ. ಕಾವೇರಿ ವಿಚಾರಕ್ಕಾಗಿ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಬುಧವಾರ ಜಂಟಿ ಪ್ರತಿಭಟನೆ ನಡೆಸಿದ ಪಕ್ಷಗಳು ಕರ್ನಾಟಕ ಬಂದ್‌ಗೆ ಬೆಂಬಲ ಘೋಷಿಸಿದವು. ವಾಟಾಳ್ ನಾಗರಾಜ್ ಅವರು ಬುಧವಾರ ಫಿಲಂ ಚೇಂಬರ್ ಜೊತೆ ಸಭೆ ನಡೆಸಿದರು. ಚಿತ್ರರಂಗ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಚೇಂಬರ್ ಪ್ರಕಟಿಸಿತು.
-
ಪ್ರಮುಖ ಸುದ್ದಿ22 hours ago
Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!
-
ಪ್ರಮುಖ ಸುದ್ದಿ13 hours ago
German Shepherd: ಸೀಕ್ರೆಟ್ ಸರ್ವಿಸ್ ಏಜೆಂಟ್ನಿಗೆ ಕಚ್ಚಿದ ಅಮೆರಿಕ ಅಧ್ಯಕ್ಷ ಬೈಡನ್ ಅವರ ‘ಕಮಾಂಡರ್’!
-
ವಿದೇಶ14 hours ago
Most expensive wedding: ಜಗತ್ತಿನ ದುಬಾರಿ ವಿವಾಹ ಯಾವುದು ಗೊತ್ತೆ? ಖರ್ಚಾಗಿದ್ದು ಇಷ್ಟು ಕೋಟಿ ರೂ.
-
ಸುವಚನ2 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕ್ರೈಂ18 hours ago
ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!
-
ಕರ್ನಾಟಕ14 hours ago
Car Accident: ಮರಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವು
-
ದೇಶ15 hours ago
Venus Mission: ಇಸ್ರೋಗೆ ‘ಶುಕ್ರ’ದೆಸೆ; ಚಂದ್ರ, ಸೂರ್ಯನ ಬಳಿಕ ಶುಕ್ರನತ್ತ ಚಿತ್ತ; ಉಡಾವಣೆ ಯಾವಾಗ?
-
ಕರ್ನಾಟಕ9 hours ago
PSI Recruitment Scam: ಕೊನೆಗೂ ಅಮೃತ್ ಪಾಲ್ ಸೆಂಟ್ರಲ್ ಜೈಲಿನಿಂದ ಬಿಡುಗಡೆ