IND vs SA: ಪಂದ್ಯ ಗೆದ್ದು ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆ ಬರೆದ ಟೀಮ್​ ಇಂಡಿಯಾ - Vistara News

ಕ್ರಿಕೆಟ್

IND vs SA: ಪಂದ್ಯ ಗೆದ್ದು ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆ ಬರೆದ ಟೀಮ್​ ಇಂಡಿಯಾ

ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡದ ಅತ್ಯಂತ ದೊಡ್ಡ ಅಂತರದ ಗೆಲುವು 168 ರನ್​. ಇದೇ ವರ್ಷ ಅಹಮದಾಬಾದ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಈ ಗೆಲುವು ದಾಖಲಾಗಿತ್ತು.

VISTARANEWS.COM


on

Kuldeep Yadav celebrates dismissing Lizaad Williams
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೊಹಾನ್ಸ್​ಬರ್ಗ್​: ಗುರುವಾರ ರಾತ್ರಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ದಕ್ಷಿಣ ಆಫ್ರಿಕಾ(IND vs SA) ವಿರುದ್ಧ ಭರ್ಜರಿ 106 ರನ್​ಗಳ ಅಂತರದ ಗೆಲುವು ಸಾಧಿಸಿತು. ಈ ಮೂಲಕ ಸರಣಿಯನ್ನು 1-1 ಸಮಬಲ ಮಾಡಿಕೊಂಡಿತು. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಭಾರತ ಈ ಗೆಲುವಿನ ಮೂಲಕ ದಾಖಲೆಯೊಂದನ್ನು ಕೂಡ ನಿರ್ಮಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಇದುವರೆಗಿನ ಟಿ20 ಕ್ರಿಕೆಟ್​​ ಇತಿಹಾಸದಲ್ಲಿ ಸಾಧಿಸಿದ ದೊಡ್ಡ ಅಂತರದ ಗೆಲವು ಇದಾಗಿದೆ. ಆದರೆ ದಾಖಲೆ ಆಸ್ಟ್ರೇಲಿಯಾದ ಹೆಸರಿನಲ್ಲಿದೆ. ಆಸೀಸ್​ ತಂಡ ಕ್ರಮವಾಗಿ 111 ಮತ್ತು 107 ರನ್​ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ.

ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡದ ಅತ್ಯಂತ ದೊಡ್ಡ ಅಂತರದ ಗೆಲುವು 168 ರನ್​. ಇದೇ ವರ್ಷ ಅಹಮದಾಬಾದ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಈ ಗೆಲುವು ದಾಖಲಾಗಿತ್ತು.

ಇದನ್ನೂ ಓದಿ Ind vs SA : ಮೂರನೇ ಪಂದ್ಯದಲ್ಲಿ ಭಾರತಕ್ಕೆ 106 ರನ್​ ಜಯ, ಸರಣಿ ಸಮಬಲ

ಇಲ್ಲಿನ ದಿ ವಾಂಡರರ್ಸ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 201 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 13.5 ಓವರ್​ಗಳಲ್ಲಿ 95 ರನ್​ಗಳಿಗೆ ಆಲ್​ಔಟ್​ ಆಯಿತು. ಭಾರತದ ಬೌಲರ್​ಗಳ ಮುಂದೆ ತಣ್ಣಗಾದ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್​ಗಳು ಸತತವಾಗಿ ವಿಕೆಟ್​ ಒಪ್ಪಿಸಿದರು. ನಾಯಕ ಏಡೆನ್​ ಮಾರ್ಕ್ರಮ್​​ 14 ಎಸೆತಕ್ಕೆ 25 ರನ್ ಬಾರಿಸಿದರೆ, ಡೇವಿಡ್​ ಮಿಲ್ಲರ್ 25 ಎಸೆತಕ್ಕೆ 35 ರನ್​ ಬಾರಿಸಿದ್ದು ಹರಿಣಗಳ ಪಡೆಯ ಪಾಲಿಗೆ ಗರಿಷ್ಠ ರನ್ ಎನಿಸಿಕೊಂಡಿತು. ಡೆನ್ವೊನ್​ ಪೆರೆರಾ 12 ರನ್​ ಬಾರಿಸಿದರೆ ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ಸೀಮಿತಗೊಂಡರು.

ಶತಕ ಬಾರಿಸಿದ ಸೂರ್ಯಕುಮಾರ್ ಯಾದವ್​ (100) ಹಾಗೂ 17 ರನ್​ಗಳಿಗೆ 5 ವಿಕೆಟ್​ ಉರುಳಿಸಿದ ಕುಲ್ದೀಪ್​ ಯಾದವ್ ಮೂರನೇ ಪಂದ್ಯ ಗೆಲುವಿನ ರೂವಾರಿಗಳೆನಿಸಿಕೊಂಡರು. ಬರ್ತ್​ಡೇ ಬಾಯ್​ ಕುಲ್ದೀಪ್​ ಯಾದವ್ ಮಾರಕ ದಾಳಿ ಸಂಘಟಿಸಿ ದಕ್ಷಿಣ ಆಫ್ರಿಕಾದ ಬ್ಯಾಟರ್​ಗಳು ನಿರುತ್ತರರಾಗುವಂತೆ ನೋಡಿಕೊಂಡರು. 2.5 ಓವರ್​ಗಳಲ್ಲಿ 17 ರನ್​ ನೀಡಿದ ಅವರು 5 ವಿಕೆಟ್ ಸಾಧನೆ ಮಾಡಿದರು.

ಶತಕ ಬಾರಿಸಿ ಮಿಂಚಿದ ಸೂರ್ಯ

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಮೊದಲ ಎರಡು ವಿಕೆಟ್​ಗಳನ್ನು 29 ರನ್​ಗಳಿಗೆ ಕಳೆದುಕೊಂಡಿತು. ಆದರೆ ಆ ಬಳಿಕ ಜತೆಯಾದ ಸೂರ್ಯಕುಮಾರ್ ಯಾದವ್​ ಹಾಗೂ ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ 132 ರನ್​ಗಳ ಜತೆಯಾಟ ನೀಡುವ ಮೂಲಕ ಕುಸಿದ ಭಾರತಕ್ಕೆ ನೆರವಾದರು. ಇಬ್ಬರೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಜೈಸ್ವಾಲ್ 60 ರನ್​ಗಳಿಗೆ ಔಟಾದರು. ಆ ಬಳಿಕವೂ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ ಸೂರ್ಯಕುಮಾರ್ ಶತಕ ಬಾರಿಸಿದರು. ಇದು ಅವರ ಪಾಲಿನ 4ನೇಋ ಟಿ20 ಶತಕವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024: ಇನ್ನೆರಡು ದಿನದಲ್ಲಿ ಮಿನಿ ವಿಶ್ವಕಪ್​ ಸಮರಕ್ಕೆ ರೋಹಿತ್​, ಕೊಹ್ಲಿ ಸೇರಿ ಮೊದಲ ಬ್ಯಾಚ್​ ನ್ಯೂಯಾರ್ಕ್​ಗೆ ಪ್ರಯಾಣ

T20 World Cup 2024: ಭಾರತೀಯ ಆಟಗಾರರು ವ್ಯಾಪಕ ಪ್ರಯಾಣ ಮತ್ತು ಐಪಿಎಲ್​ನಿಂದ ದಣಿದಿರುವ ಕಾರಣ ಕೇವಲ ಒಂದು ಅಭ್ಯಾಸ ಪಂದ್ಯಕ್ಕೆ ಮೊರೆ ಹೋಗಿದ್ದಾರೆ. ಜೂನ್​ 1 ರಂದು ಬಾಂಗ್ಲಾದೇಶ ವಿರುದ್ಧ ಭಾರತ ಈ ಪಂದ್ಯವನ್ನು ಆಡಲಿದೆ.

VISTARANEWS.COM


on

T20 World Cup 2024
Koo

ಮುಂಬಯಿ: ಐಸಿಸಿ ಪುರುಷರ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿವೆ. ಮೇ 27ರಿಂದ ಅಭ್ಯಾಸ ಪಂದ್ಯಗಳು ಆರಂಭಗೊಳ್ಳಲಿದೆ. ಲೀಗ್​ ಹಂತದ ಪಂದ್ಯಗಳಿಗೆ ಜೂನ್​ 1ರಿಂದ ಚಾಲನೆ ಸಿಗಲಿದೆ. ಈ ಮಹತ್ವದ ಟೂರ್ನಿಯನ್ನಾಡಲು ಟೀಮ್​ ಇಂಡಿಯಾದ(team india) ಮೊದಲ ಬ್ಯಾಚ್​ ಮೇ 25ರಂದು ನ್ಯೂಯಾರ್ಕ್(New York)​ಗೆ ಪ್ರಯಾಣಿಸಲಿದೆ. ಈ ಬ್ಯಾಚ್​ನಲ್ಲಿ ನಾಯಕ ರೋಹಿತ್​ ಶರ್ಮ(Rohit Sharma), ವಿರಾಟ್​ ಕೊಹ್ಲಿ(Virat Kohli), ಉಪನಾಯಕ ಹಾರ್ದಿಕ್​ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್, ಮೊಹಮ್ಮದ್​ ಸಿರಾಜ್​​ ಸೇರಿ ಐಪಿಎಲ್​ ಪ್ಲೇ ಆಫ್​ನಿಂದ ಹೊರಬಿದ್ದ ತಂಡದ ಆಟಗಾರರು ಪ್ರಯಾಣಿಸಲಿದ್ದಾರೆ. ಉಳಿದ ಆಟಗಾರರು ಮೇ 26 ಐಪಿಎಲ್​ ಫೈನಲ್​ ಬಳಿಕ ವಿಮಾನ ಏರಲಿದ್ದಾರೆ. ಒಟ್ಟು 2 ಬ್ಯಾಚ್​ಗಳಾಗಿ ಭಾರತೀಯ ಆಟಗಾರರು ಪ್ರಯಾಣಿಸಲಿದ್ದಾರೆ.

ಒಂದೇ ಅಭ್ಯಾಸ ಪಂದ್ಯ


ಭಾರತ ಕೇವಲ ಒಂದೇ ಅಭ್ಯಾಸ ಪಂದ್ಯವನ್ನು ಆಡಲಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಭಾರತ ತಂಡದ ಆಟಗಾರರು ಮೇ 21ರಂದು ನ್ಯೂಯಾರ್ಕ್​ಗೆ ತೆರಳಬೇಕಿತ್ತು. ಆದರೆ ಐಪಿಎಲ್​ ಟೂರ್ನಿಯಿಂದಾಗಿ ಇದು ಸಾಧ್ಯವಾಗಲಿಲ್ಲ. ಭಾರತೀಯ ಆಟಗಾರರು ವ್ಯಾಪಕ ಪ್ರಯಾಣ ಮತ್ತು ಐಪಿಎಲ್​ನಿಂದ ದಣಿದಿರುವ ಕಾರಣ ಕೇವಲ ಒಂದು ಅಭ್ಯಾಸ ಪಂದ್ಯಕ್ಕೆ ಮೊರೆ ಹೋಗಿದ್ದಾರೆ. ಜೂನ್​ 1 ರಂದು ಬಾಂಗ್ಲಾದೇಶ ವಿರುದ್ಧ ಭಾರತ ಈ ಪಂದ್ಯವನ್ನು ಆಡಲಿದೆ.

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ T20 World Cup 2024: ಆಸ್ಟ್ರೇಲಿಯಾ ತಂಡ ಸೇರಿದ ಸ್ಫೋಟಕ ಬ್ಯಾಟರ್​ ಫ್ರೇಸರ್-ಮೆಕ್‌ಗುರ್ಕ್​

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading

ಕ್ರೀಡೆ

India Head Coach: ರಿಕಿ ಪಾಂಟಿಂಗ್ ಟೀಮ್​ ಇಂಡಿಯಾದ ಮುಂದಿನ ಕೋಚ್​!

India Head Coach: ಮೂಲಗಳ ಪ್ರಕಾರ ರಿಕಿ ಪಾಂಟಿಂಗ್​ ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಪಾಂಟಿಂಗ್​ ಅವರು ವಿರಾಟ್​ ಕೊಹ್ಲಿಯನ್ನು ಗುಣಗಾನ ಮಾಡಿದ್ದಾರೆ.

VISTARANEWS.COM


on

India Head Coach
Koo

ಮುಂಬಯಿ: ಟೀಮ್​ ಇಂಡಿಯಾದ(India Head Coach) ಮುಂದಿನ ಕೋಚ್​(team india coach) ಯಾರಾಗಲಿದ್ದಾರೆ ಎಂಬ ಕತೂಹಲದ ಮಧ್ಯೆ ಹಲವು ಮಾಜಿ ಆಟಗಾರ ಹೆಸರುಗಳು ಕೇಳಿ ಬರುತ್ತಿವೆ. ಇದೀಗ ಈ ಪಟ್ಟಿಗೆ ವಿಶ್ವ ಕಂಡ ಶ್ರೇಷ್ಠ ಆಟಗಾರ, ಸತತವಾಗಿ 2 ಏಕದಿನ ವಿಶ್ವಕಪ್​ ಗೆದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್(Ricky Ponting)​ ಕೋಚ್​ ಆಗಲಿದ್ದಾರೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ರಿಕಿ ಪಾಂಟಿಂಗ್​ ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಪಾಂಟಿಂಗ್​ ಅವರು ವಿರಾಟ್​ ಕೊಹ್ಲಿಯನ್ನು ಗುಣಗಾನ ಮಾಡಿದ್ದಾರೆ. ಈ ಟ್ವೀಟ್​ ಅನ್ನು ಐಸಿಸಿ ಕೂಡ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಇದನೆಲ್ಲ ನೋಡುವಾಗ ಪಾಂಟಿಂಗ್​ ಭಾರತ ತಂಡದ ಕೋಚ್​ ಆಗುವುದು ಬಹುತೇಕ ಖಚಿತ ಎನ್ನುವಂತಿದೆ.

ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಕೋಚ್​, ಪ್ರಸ್ತುತ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕೋಚ್​ ಆಗಿರುವ ಜಸ್ಟಿನ್ ಲ್ಯಾಂಗರ್(Justin Langer) ಕೂಡ ಭಾರತ ತಂಡದ ಕೋಚಿಂಗ್​ ಬಗ್ಗೆ ಆಸಕ್ತರಾಗಿದ್ದಾರೆ. ಐಪಿಎಲ್​ ವೇಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ಭಾರತ ತಂಡ ಕೋಚಿಂಗ್​ ಮಾಡುವುದು ಅಸಾಮಾನ್ಯ ಪಾತ್ರವಾಗಿದೆ. ನನಗೂ ಕೋಚಿಂಗ್​ ಮಾಡಲು ಕುತೂಹಲವಿದೆ. ಇಲ್ಲಿ ಅಪಾರ ಸಂಖ್ಯೆಯ ಕ್ರಿಕೆಟ್ ಪ್ರತಿಭೆಗಳಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ India Head Coach: ಭಾರತ ತಂಡದ ಕೋಚ್​ ಆಗಲು ಫ್ಲೆಮಿಂಗ್​ಗೆ ಮನವೊಲಿಸುವಂತೆ ಧೋನಿಗೆ ಮನವಿ ಮಾಡಿದ ಬಿಸಿಸಿಐ!

ಬಿಸಿಸಿಐ ಕೂಡ ವಿದೇಶಿ ಕೋಚ್​ ಆಯ್ಕೆಯ ಬಗ್ಗೆ ಆಲೋಚನೆ ನಡೆಸುತ್ತಿದೆ ಎನ್ನುವ ಮಾತುಗಳು ಈ ಹಿಂದೆಯೇ ಕೇಳಿ ಬಂದಿತ್ತು. 2011ರಲ್ಲಿ ಗ್ಯಾರಿ ಕಸ್ಟನ್ ಮಾರ್ಗದರ್ಶನದಲ್ಲಿ ಭಾರತ 2ನೇ ಬಾರಿಗೆ ವಿಶ್ವಕಪ್​ ಗೆದ್ದಿತ್ತು. ಬಳಿಕ 2013ರಲ್ಲಿ ಡಂಕನ್​ ಪ್ಲೆಚರ್​ ಮಾರ್ಗದರ್ಶನದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ರವಿಶಾಸ್ತ್ರಿ ಮತ್ತು ರಾಹುಲ್​ ದ್ರಾವಿಡ್​ ಮಾರ್ಗದರ್ಶನಲ್ಲಿ 2 ಏಕದಿನ ವಿಶ್ವಕಪ್​ ಆಡಿದರೂ ಭಾರತ ಕಪ್​ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ವಿದೇಶಿ ಕೋಚ್​ ಆಯ್ಕೆಯೇ ಉತ್ತಮ ಎಂದು ಬಿಸಿಸಿಐ ಯೋಚಿಸಿದೆ ಎನ್ನಲಾಗಿದೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

Continue Reading

ಕ್ರೀಡೆ

RCB: ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲಿಗೆ ವಿಜಯ್​ ಮಲ್ಯ ಕಾರಣವಂತೆ!

RCB: ನೆಟ್ಟಿಗರು ಮಲ್ಯ ಶುಭ ಹಾರೈಕೆಯಿಂದಲೇ ಆರ್​ಸಿಬಿ ಸೋಲು ಕಂಡಿದೆ ಎಂದು ಹೇಳಲಾರಂಭಿಸಿದ್ದಾರೆ. ಮಲ್ಯ ಹಾರೈಕೆಗೂ ಮುನ್ನ ಆರ್​​ಸಿಬಿ ಉತ್ತಮವಾಗಿ ಆಡುತ್ತಿತ್ತು. ಮಲ್ಯ ಹಾರೈಕೆಯಿಂದ ಆರ್​ಸಿಬಿ ಆಟಗಾರರಿಗೆ ಹಳೆಯ ಪಾರ್ಟಿಗಳು ನೆನೆಪಿಗೆ ಬಂದಿರಬೇಕು ಇದೇ ಗುಂಗಿನಲ್ಲಿ ಪಂದ್ಯ ಸೋತುರು ಎಂದು ಕಾಲೆಳೆದಿದ್ದಾರೆ.

VISTARANEWS.COM


on

RCB
Koo

ಬೆಂಗಳೂರು: ಬುಧವಾರ ರಾತ್ರಿ ನಡೆದ ಐಪಿಎಲ್​ನ(IPL 2024) ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ತಂಡ ರಾಜಸ್ಥಾನ್​(Rajasthan Royals) ವಿರುದ್ಧ 4 ವಿಕೆಟ್​ ಅಂತರದ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲಿಗೆ ತಂಡದ ಮಾಜಿ ಮಾಲಿಕ ವಿಜಯ್​ ಮಲ್ಯ(Vijay Mallya) ಎಂದು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಹೌದು, ಆರ್​ಸಿಬಿ ತಂಡ ಆರಂಭಿಕ ಹಂತದಲ್ಲಿ ಸತತವಾಗಿ ಸೋಲಿಗೆ ಸಿಲುಕಿ ಇನ್ನೇನು ಟೂರ್ನಿಯಿಂದ ಹೊರಬೀಳುತ್ತದೆ ಎನ್ನುವಷ್ಟರಲ್ಲಿ ಪುಟಿದೆದ್ದು ಸತತವಾಗಿ 6 ಪಂದ್ಯ ಗೆದ್ದು ಅಚ್ಚರಿ ಎಂಬಂತೆ ಪ್ಲೇ ಆಫ್​ ಪ್ರವೇಶಿಸಿತ್ತು. ಇದೇ ಖುಷಿಯಲ್ಲಿ ವಿಜಯ್​ ಮಲ್ಯ ತಂಡಕ್ಕೆ ಶುಭ ಹಾರೈಸಿದ್ದರು.

“ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ತಂಡಕ್ಕೆ ಹೃದಯ ಪೂರಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸತತ ಸೋಲುಗಳಿಂದ ಗೆಲುವಿನ ಟ್ರ್ಯಾಕ್​ಗೆ ಮರಳಿರುವುದು ಅದ್ಭುತ. ಟ್ರೋಫಿ ಗೆಲ್ಲುವ ಕಡೆಗೆ ಆರ್​ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕು” ಎಂದು ಮುಂದಿನ ಪಂದ್ಯಗಳಿಗೂ ಶುಭ ಹಾರೈಸಿದ್ದರು.

ಎಲಿಮಿನೇಟರ್​ ಪಂದ್ಯ ಆರಂಭಕ್ಕೂ ಕೂಡ ಮಲ್ಯ ಟ್ವೀಟ್​ ಮೂಲಕ ಶುಭ ಹಾರೈಸಿ, ‘ನಾನು ಆರ್‌ಸಿಬಿ ಫ್ರಾಂಚೈಸಿಗಾಗಿ ಬಿಡ್ ಮಾಡಿದಾಗ, ವಿರಾಟ್‌ ಕೊಹ್ಲಿಗೆ ಬಿಡ್ ಮಾಡಿದಾಗ, ನಾನು ಇದಕ್ಕಿಂತ ಉತ್ತಮ ಆಯ್ಕೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನನ್ನ ಆಂತರಾತ್ಮ ಹೇಳಿತ್ತು. ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ನನ್ನ ಮನಸ್ಸು ಹೇಳುತ್ತಿದೆ. ತಂಡಕ್ಕೆ ಶುಭವಾಗಲಿ’ ಎಂದು ಹಾರೈಸಿದ್ದರು.

ಇದನ್ನೂ ಓದಿ Virat Kohli: ಅಂದು ವಿಶ್ವಕಪ್​ನಲ್ಲಿ, ಇಂದು ಐಪಿಎಲ್​ನಲ್ಲಿ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಮೈದಾನ ತೊರೆದ ಕೊಹ್ಲಿ

ಇದೀಗ ನೆಟ್ಟಿಗರು ಮಲ್ಯ ಶುಭ ಹಾರೈಕೆಯಿಂದಲೇ ಆರ್​ಸಿಬಿ ಸೋಲು ಕಂಡಿದೆ ಎಂದು ಹೇಳಲಾರಂಭಿಸಿದ್ದಾರೆ. ಮಲ್ಯ ಹಾರೈಕೆಗೂ ಮುನ್ನ ಆರ್​​ಸಿಬಿ ಉತ್ತಮವಾಗಿ ಆಡುತ್ತಿತ್ತು. ಮಲ್ಯ ಹಾರೈಕೆಯಿಂದ ಆರ್​ಸಿಬಿ ಆಟಗಾರರಿಗೆ ಹಳೆಯ ಪಾರ್ಟಿಗಳು ನೆನೆಪಿಗೆ ಬಂದಿರಬೇಕು ಇದೇ ಗುಂಗಿನಲ್ಲಿ ಪಂದ್ಯ ಸೋತುರು ಎಂದು ಕಾಲೆಳೆದಿದ್ದಾರೆ. ಮಲ್ಯ ಅವರು ಆರ್​ಸಿಬಿಯ ಮಾಲಿಕರಾಗಿದ್ದಾಗ ಪಂದ್ಯ ಗೆದ್ದ ಬಳಿಕ ಆಟಗಾರರಿಗೆ ಫುಲ್​ ಪಾರ್ಟಿ ನೀಡುತ್ತಿದ್ದರು. ಶುಭ ಹಾರೈಸದೇ ಇದ್ದಿದ್ದರೆ ಆಟಗಾರರಿಗೆ ಹಳೆಯ ನೆನಪು ಮತ್ತೆ ಮರುಕಳಿಸುತ್ತಿರಲ್ಲಿ. ಜತೆಗೆ ಪಂದ್ಯವನ್ನೂ ಕೂಡ ಗೆಲ್ಲುತ್ತಿದ್ದರು ಎಂದು ಕಮೆಂಟ್​ ಮಾಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಟಗಾರ ತುಷಾರ್‌ ದೇಶ್‌ಪಾಂಡೆ ಕೂಡ ಆರ್‌ಸಿಬಿಯನ್ನು ಟ್ರೋಲ್​ ಮಾಡಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ನ ಫ್ಯಾನ್ಸ್ ಪೇಜ್‌ವೊಂದು ಬೆಂಗಳೂರು ದಂಡು ರೈಲ್ವೇ ನಿಲ್ದಾಣದ (Bangalore cant) ಫೋಟೋವನ್ನು ಹಂಚಿಕೊಂಡಿದೆ. ಈ ಮೂಲಕ ಬೆಂಗಳೂರು ತಂಡದಿಂದ ಕಪ್‌ ಗೆಲ್ಲಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಈ ಮೀಮ್ಸ್ ಅನ್ನು ಸಿಎಸ್‌ಕೆ ಫ್ಯಾನ್ ಪೇಜ್‌ ಹಂಚಿಕೊಂಡಿದೆ. ಈ ಮೀಮ್ಸ್‌ ಅನ್ನು ತುಷಾರ್‌ ದೇಶ್‌ಪಾಂಡೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.

Continue Reading

ಕ್ರೀಡೆ

Virat Kohli: ಅಂದು ವಿಶ್ವಕಪ್​ನಲ್ಲಿ, ಇಂದು ಐಪಿಎಲ್​ನಲ್ಲಿ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಮೈದಾನ ತೊರೆದ ಕೊಹ್ಲಿ

Virat Kohli: ವಿಶ್ವಕಪ್​ ಸರಣಿಯಲ್ಲೂ ಕೊಹ್ಲಿ ಟೂರ್ನಿಯ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಈ ಬಾರಿ ಐಪಿಎಲ್​ನಲ್ಲಿಯೂ ಕೊಹ್ಲಿ ಅತ್ಯಧಿಕ ರನ್​ ಬಾರಿಸಿದ ಆಟಗಾರನಾಗಿದ್ದಾರೆ. ಆದರೆ ಕಪ್​ ಗೆಲ್ಲಲು ಮಾತ್ರ ಅವರಿಂದ ಸಾಧ್ಯವಾಗಿಲ್ಲ

VISTARANEWS.COM


on

Virat Kohli
Koo

ಅಹಮದಾಬಾದ್​: ಆರ್​ಸಿಬಿಯ(RCB) ಹೊಸ ಅಧ್ಯಾಯ ಎಲಿಮಿನೇಟರ್​ ಪಂದ್ಯಕ್ಕೆ ಮುಕ್ತಾಯ ಕಂಡಿದೆ. ಬುಧವಾರ ನಡೆದ ರಾಜಸ್ಥಾನ್(Rajasthan Royals)​ ವಿರುದ್ಧದ ಎಲಿಮಿನೇಟರ್​ ಪಂದ್ಯದಲ್ಲಿ 4 ವಿಕೆಟ್​ ಸೋಲು ಕಾಣವ ಮೂಲಕ ಟೂರ್ನಿಯಿಂದ ಹೊರಬಿದ್ದಿತು. ಜತೆಗೆ ಅಭಿಮಾನಿಗಳ ಈ ಸಲ ಕಪ್​ ನಮ್ದೇ ಎನ್ನುವ ಕನಸು ಮತ್ತೆ ಕನಸಾಗಿಯೇ ಉಳಿಯಿತು. ಪಂದ್ಯದ ಸೋಲಿನ ಬಳಿಕ ವಿರಾಟ್​ ಕೊಹ್ಲಿ(Virat Kohli) ಭಾವುಕರಾಗಿ ಕಂಡು ಬಂದರು. ಈ ಫೋಟೊ ವೈರಲ್​ ಆಗಿದೆ.

ಕಳೆದ ವರ್ಷ ಭಾರತದಲ್ಲೇ, ಅದು ಕೂಡ ಅಹಮದಾಬಾದ್​ನಲ್ಲೇ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಾಣುವ ಮೂಲಕ ಟ್ರೋಫಿ ಗೆಲ್ಲಲು ವಿಫಲವಾಗಿತ್ತು. ಪಂದ್ಯ ಸೋಲುನ ಬಳಿಕ ವಿರಾಟ್​ ಕೊಹ್ಲಿ ಭಾವುಕರಾಗಿ ತಮ್ಮ ಕ್ಯಾಪ್​ನಿಂದ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಡಗೌಟ್​ ಕಡೆಗೆ ಹೆಜ್ಜೆ ಹಾಕಿದ್ದರು. ಐಪಿಎಲ್​ನಲ್ಲಿಯೂ ಕೊಹ್ಲಿ ಇದೇ ಮೈದಾನದಲ್ಲಿ ಮತ್ತೆ ಸೋಲು ಕಂಡಿದ್ದಾರೆ. ರಾಜಸ್ಥಾನ್​ ವಿರುದ್ಧ ಸೋತ ಹತಾಶೆಯಲ್ಲಿ ಕೊಹ್ಲಿ ಮತ್ತೆ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಹೆಜ್ಜೆ ಹಾಕಿದರು. ಈ ಫೋಟೊ ಕಂಡು ಕೊಹ್ಲಿಯ ಅಭಿಮಾನಿಗಳು ಭಾವುಕರಾಗಿದ್ದಾರೆ.

ವಿಶ್ವಕಪ್​ ಸರಣಿಯಲ್ಲೂ ಕೊಹ್ಲಿ ಟೂರ್ನಿಯ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಈ ಬಾರಿ ಐಪಿಎಲ್​ನಲ್ಲಿಯೂ ಕೊಹ್ಲಿ ಅತ್ಯಧಿಕ ರನ್​ ಬಾರಿಸಿದ ಆಟಗಾರನಾಗಿದ್ದಾರೆ. ಆದರೆ ಕಪ್​ ಗೆಲ್ಲಲು ಮಾತ್ರ ಅವರಿಂದ ಸಾಧ್ಯವಾಗಿಲ್ಲ. ಕೊಹ್ಲಿ ನಿರ್ಣಾಯ ಪಂದ್ಯಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಕಾಣುವುದು ನಿಶ್ಚಿತ. ಇದಕ್ಕೆ ಹಲವು ನಿದರ್ಶನ ಕೂಡ ಇದೆ. ಲೀಗ್​ ಹಂತದಲ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸಿದ್ದರೂ ಕೂಡ ನಿರ್ಣಾಯ ಪಂದ್ಯದಲ್ಲಿ ಅವರು ಯಾವತ್ತೂ ಕೂಡ ವಿಫಲರಾಗುತ್ತಾರೆ. ಈ ಬಾರಿ ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್​ ನಡೆಸಿದ್ದ ಕೊಹ್ಲಿ, ಎಲಿಮಿನೇಟರ್​ ಪಂದ್ಯದಲ್ಲಿ 33 ರನ್​ಗೆ ವಿಕೆಟ್ ಕಳೆದುಕೊಂಡರು.

ಇದನ್ನೂ ಓದಿ IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ 8 ವಿಕೆಟಿಗೆ 172 ರನ್‌ ಗಳಿಸಿತು. ರಾಜಸ್ಥಾನ್‌ 19 ಓವರ್‌ಗಳಲ್ಲಿ 6 ವಿಕೆಟಿಗೆ 174 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಚೇಸಿಂಗ್​ ವೇಳೆ ರಾಜಸ್ಥಾನ್‌ ಬಿರುಸಿನ ಆಡವಾಡಿತು. ಜೈಸ್ವಾಲ್‌ (45)-ಕ್ಯಾಡ್‌ಮೋರ್‌ (20) ಮೊದಲ ವಿಕೆಟ್​ಗೆ 46 ರನ್‌ ಜತೆಯಾಟ ನಿಭಾಯಿಸಿದರು. ಆ ಬಳಿಕ ಜೈಸ್ವಾಲ್‌-ಸ್ಯಾಮ್ಸನ್‌ ಜತೆಗೂಡಿ 35 ರನ್‌ ಕಲೆಹಾಕಿದರು. 112ಕ್ಕೆ 4 ವಿಕೆಟ್‌ ಬಿದ್ದಾಗ ಪಂದ್ಯ ಕುತೂಹಲ ಘಟ್ಟ ತಲುಪಿತು. ಆದರೆ ಪರಾಗ್‌-ಹೆಟ್‌ಮೈರ್‌ ಸಿಡಿದು ನಿಂತು 45 ರನ್‌ ಜತೆಯಾಟ ನಿಭಾಯಿಸಿ ಆರ್‌ಸಿಬಿಗೆ ಸೋಲುಣಿಸಿದರು. ಮೂರು ಓವರ್​ ತನಕ ಉತ್ತಮ ಲಯದಲ್ಲಿದ್ದ ಕ್ಯಾಮರೂನ್​ ಗ್ರೀನ್​ ನಾಲ್ಕನೇ ಓವರ್​ನಲ್ಲಿ ದುಬಾರಿಯಾದರು. ಹೆಟ್‌ಮೈರ್‌ ಈ ಓವರ್​ನಲ್ಲಿ ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಬಿಸಿ ಮುಟ್ಟಿಸಿದರು.

Continue Reading
Advertisement
gold rate today kiara
ಚಿನ್ನದ ದರ15 mins ago

Gold Rate Today: ಚಿನ್ನ ಕೊಳ್ಳಲು ಇಂದೇ ಸುದಿನ, ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ!

hotel oterra bomb hoax
ಕ್ರೈಂ33 mins ago

bomb Hoax: ಶಾಲೆ, ದೇವಸ್ಥಾನದ ಬಳಿಕ ರಾಜಧಾನಿಯ ಪ್ರತಿಷ್ಠಿತ ಹೋಟೆಲ್‌ಗೂ ಬಾಂಬ್‌ ಬೆದರಿಕೆ

T20 World Cup 2024
ಕ್ರೀಡೆ34 mins ago

T20 World Cup 2024: ಇನ್ನೆರಡು ದಿನದಲ್ಲಿ ಮಿನಿ ವಿಶ್ವಕಪ್​ ಸಮರಕ್ಕೆ ರೋಹಿತ್​, ಕೊಹ್ಲಿ ಸೇರಿ ಮೊದಲ ಬ್ಯಾಚ್​ ನ್ಯೂಯಾರ್ಕ್​ಗೆ ಪ್ರಯಾಣ

physical abuse & murder
ಕ್ರೈಂ48 mins ago

Physical Abuse & Murder: ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ; ದೃಶ್ಯಂ ಸಿನಿಮಾ ರೀತಿಯಲ್ಲಿ ಎಸ್ಕೇಪ್‌ಗೆ ಯತ್ನ

cylinder blast in Tumkur
ತುಮಕೂರು52 mins ago

Cylinder Blast: ಗ್ಯಾಸ್‌ ಸಿಲಿಂಡರ್ ಸ್ಫೋಟ; 7 ದಿನ ನರಳಾಡಿ ಪ್ರಾಣಬಿಟ್ಟ ಇಬ್ಬರು ಗಾಯಾಳುಗಳು

Kalki 2898 AD
ಸಿನಿಮಾ1 hour ago

Kalki 2898 AD: ʼಕಲ್ಕಿʼ ಚಿತ್ರದ ನಾಯಕ ಭೈರವನ ಆಪ್ತ ಗೆಳೆಯ ಬುಜ್ಜಿ ಯಾರು? ಈ ವಿಡಿಯೊ ನೋಡಿ

Prajwal Revanna case Siddaramaiah writes to PM narendra Modi
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದತಿಗಾಗಿ ಪಿಎಂಗೆ ಸಿದ್ದರಾಮಯ್ಯ ಇನ್ನೊಂದು ಪತ್ರ; ಚುರುಕಾದ ವಿದೇಶಾಂಗ ಇಲಾಖೆ

Physical Abuse
ಕ್ರೈಂ2 hours ago

Physical Abuse: ಹಿಂದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಮುಸ್ಲಿಂ ಯುವಕರಿಗೆ ಜೀವಾವಧಿ ಶಿಕ್ಷೆ

India Head Coach
ಕ್ರೀಡೆ2 hours ago

India Head Coach: ರಿಕಿ ಪಾಂಟಿಂಗ್ ಟೀಮ್​ ಇಂಡಿಯಾದ ಮುಂದಿನ ಕೋಚ್​!

Viral Video
ವೈರಲ್ ನ್ಯೂಸ್2 hours ago

Viral Video: ಸುಡುವ ಮರಳಿನಲ್ಲಿ ಹಪ್ಪಳ ಸುಟ್ಟ ಬಿಎಸ್‌ಎಫ್‌ ಯೋಧ; ಎಲ್ಲೆಡೆ ಇದೇ ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ7 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌