IND vs SL 3rd ODI: ಇಂದು ಅಂತಿಮ ಏಕದಿನ ಪಂದ್ಯ; ಭಾರತ ಆಡುವ ಬಳಗದಲ್ಲಿ ಮೂರು ಬದಲಾವಣೆ ಖಚಿತ - Vistara News

ಕ್ರೀಡೆ

IND vs SL 3rd ODI: ಇಂದು ಅಂತಿಮ ಏಕದಿನ ಪಂದ್ಯ; ಭಾರತ ಆಡುವ ಬಳಗದಲ್ಲಿ ಮೂರು ಬದಲಾವಣೆ ಖಚಿತ

IND vs SL 3rd ODI: ಮೂಲಗಳ ಪ್ರಕಾರ ಕೆ.ಎಲ್​ ರಾಹುಲ್​, ಶಿವಂ ದುಬೆ ಮತ್ತು ಮೊಹಮ್ಮದ್​ ಸಿರಾಜ್​ ಅವರನ್ನು ಈ ಪಂದ್ಯದಿಂದ ಕೈ ಬಿಟ್ಟು ಇವರ ಸ್ಥಾನಕ್ಕೆ ರಿಷಭ್​ ಪಂತ್​, ಹರ್ಷಿತ್​ ರಾಣಾ ಮತ್ತು ರಿಯಾನ್​ ಪರಾಗ್​ ಅವರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿದುಬಂದಿದೆ

VISTARANEWS.COM


on

IND vs SL 3rd ODI
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಲಂಬೊ: ಪ್ರವಾಸಿ ಭಾರತ ಮತ್ತು ಆತಿಥೇಯ ಶ್ರೀಲಂಕಾ(IND vs SL 3rd ODI) ವಿರುದ್ಧದ ಅಂತಿಮ ಏಕದಿನ ಪಂದ್ಯ ಇಂದು ಆರ್​.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿ ಸೋಲಿನ ಭೀತಿಯಲ್ಲಿರುವ ಭಾರತಕ್ಕೆ ಈ ಅಪಮಾನದಿಂದ ಪಾರಾಗಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಹೀಗಾಗಿ ಈ ಪಂದ್ಯವನ್ನು ಹೈವೋಲ್ಟೇಜ್ ಪಂದ್ಯ ಎಂದು ನಿರೀಕ್ಷಿಸಲಾಗಿದೆ. ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಕನಿಷ್ಠ ಮೂರು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಕೆ.ಎಲ್​ ರಾಹುಲ್​, ಶಿವಂ ದುಬೆ ಮತ್ತು ಮೊಹಮ್ಮದ್​ ಸಿರಾಜ್​ ಅವರನ್ನು ಈ ಪಂದ್ಯದಿಂದ ಕೈ ಬಿಟ್ಟು ಇವರ ಸ್ಥಾನಕ್ಕೆ ರಿಷಭ್​ ಪಂತ್​, ಹರ್ಷಿತ್​ ರಾಣಾ ಮತ್ತು ರಿಯಾನ್​ ಪರಾಗ್​ ಅವರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿದುಬಂದಿದೆ. ರಾಹುಲ್​ ಕಳೆದ ದ್ವಿತೀಯ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದರು. ಮೊದಲ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಇದೀಗ ಸರಣಿ ಸೋಲಿನ ಭೀತಿಯಲ್ಲಿರುವ ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ಎದುರಾಳಿ ಬೌಲರ್​ಗಳ ಲೆಕ್ಕಾಚಾರವನ್ನು ಬುಡಮೇಲು ಮಾಡುವಂತಹ ಪಂತ್​ ಅವರನ್ನು ಕಣಕ್ಕಿಳಿಸಲು ತಂಡ ಬಯಸಿದೆ ಎನ್ನಲಾಗಿದೆ.

ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನ ಪಿಚ್​ ಸಿನ್ನರ್​ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ಶಿವಂ ದುಬೆ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ಅವರ ಬದಲಿಗೆ ಸ್ಪಿನ್​ ಆಲ್​ರೌಂಡರ್​ ಆಗಿರುವ ರಿಯಾನ್ ಪರಾಗ್ ಸ್ಥಾನ ಪಡೆಯಬಹುದು. ಟಿ20 ಸರಣಿಯಲ್ಲಿ ಬ್ಯಾಟಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಪರಾಗ್​ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಇವರಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ.

ಇದನ್ನೂ ಓದಿ IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

ಪಿಚ್ ರಿಪೋರ್ಟ್

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇದುವರೆಗೆ 150 ಏಕದಿನ ಪಂದ್ಯಗಳು ನಡೆದಿವೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಹೆಚ್ಚು ಬಾರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 80 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ಮಾಡಿದ ತಂಡ ಕೇವಲ 59 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಮೊದಲ ಪಂದ್ಯದಲ್ಲಿ ಸ್ಪಿನ್ನರ್​ಗಳು ಪ್ರಭಾವ ಬೀರಿದ್ದರು. ಹೀಗಾಗಿ ಎರಡನೇ ಏಕದಿನ ಪಂದ್ಯದಲ್ಲಿಯೂ ಸ್ಪಿನ್​ ಬೌಲರ್​ಗಳು ಪ್ರಾಬಲ್ಯ ತೋರುವ ನಿರೀಕ್ಷೆ ಇದೆ. ಪಂದ್ಯ ಸಾಗಿದಂತೆ ಈ ಪಿಚ್​ ಅತ್ಯಂತ ತಿರುವ ಪಡೆದುಕೊಳ್ಳಲಿದೆ. ಬ್ಯಾಟಿಂಗ್​ ನಡೆಸುವುದೇ ಒಂದು ಸವಾಲಾಗಿರಲಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ಆಯ್ದುಕೊಳ್ಳಬಹುದು.

ಸಂಭಾವ್ಯ ತಂಡಗಳು

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್​ ಪಂತ್​ (ವಿಕೀ), ರಿಯಾನ್​ ಪರಾಗ್​, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೀ), ಸದೀರ ಸಮರವಿಕ್ರಮ, ಚರಿತ್ ಅಸಲಂಕ (ನಾಯಕ), ಕಾಮಿಂದು ಮೆಂಡಿಸ್, ಜನಿತ್ ಲಿಯಾನಗೆ, ದುನಿತ್ ವೆಲ್ಲಲಾಗೆ, ಅಕಿಲ ದನಂಜಯ, ಅಸಿತ ಫೆರ್ನಾಂಡೋ, ಜೆಫ್ರಿ ವಂಡರ್ಸೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Vinesh Phogat: ಪ್ಯಾರಿಸ್​ನಲ್ಲಿ ಮೊದಲ ಚಿನ್ನ ಗೆಲ್ಲಲಿ ವಿನೇಶ್​ ಫೋಗಟ್; ಇಂದು ಫೈನಲ್​

Vinesh Phogat: ಒಲಿಂಪಿಕ್ಸ್​ನಲ್ಲಿ ಫೈನಲ್​ಗೇರಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿನೇಶ್​, ಪ್ಯಾರಿಸ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಇರಾದೆಯೊಂದಿಗೆ ಇಂದು ಕಣಕ್ಕಿಳಿಯಲಿದ್ದಾರೆ

VISTARANEWS.COM


on

Vinesh Phogat
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(paris olympics) ಫೈನಲ್​ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿರುವ ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್​ ಫೋಗಟ್(Vinesh Phogat)​ ಅವರು ಇಂದು(ಬುಧವಾರ) ರಾತ್ರಿ ನಡೆಯುವ ಫೈನಲ್​ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಅಖಾಡಕ್ಕೆ ಇಳಿಯಲಿದ್ದಾರೆ. ಫೈನಲ್​ನಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಸವಾಲು ಎದುರಿಸಲಿದ್ದಾರೆ. ಪಂದ್ಯ ರಾತ್ರಿ 11. 23ಕ್ಕೆ ನಡೆಯಲಿದೆ.

ಮಂಗಳವಾರ ನಡೆದಿದ್ದ ಪ್ರೀ ಕ್ವಾರ್ಟರ್​, ಕ್ವಾರ್ಟರ್​ ಫೈನಲ್​ ಮತ್ತು ಸೆಮಿಫೈನಲ್​ ಪಂದ್ಯದಲ್ಲಿ ವಿನೇಶ್ ಅವರು ತನಗಿಂತ ಮೇಲಿನ ಶ್ರೇಯಾಂಕದ, ಅದರಲ್ಲೂ ಪ್ರೀ ಕ್ವಾರ್ಟರ್​ನಲ್ಲಿ 4 ಬಾರಿಯ ವಿಶ್ವ ಚಾಂಪಿಯನ್​ ಹಾಗೂ ಸೋಲನ್ನೇ ಕಾಣದ ಕುಸ್ತಿಪಟುವಿಗೆ ಸೋಲುಣಿಸಿದ್ದು ನಿಜಕ್ಕೂ ಸಣ್ಣ ಸಾಧನೆಯಲ್ಲ. 8 ಗಂಟೆಯ ಅಂತರದಲ್ಲಿ ಮೂರು ಗೆಲುವು ಸಾಧಿಸಿ ಅವರು ಫೈನಲ್​ ಪ್ರವೇಶಿಸಿದ್ದರು. ಇಡೀ ದಿನದಲ್ಲಿ ಆಡಿದ ಮೂರು ಬೌಟ್‌ಗಳಲ್ಲಿಯೂ ವಿನೇಶ್​ ಪಾರಮ್ಯ ಮೆರೆದಿದ್ದು ವಿಶೇಷ.

ಒಲಿಂಪಿಕ್ಸ್​ನಲ್ಲಿ ಫೈನಲ್​ಗೇರಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿನೇಶ್​, ಪ್ಯಾರಿಸ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಇರಾದೆಯೊಂದಿಗೆ ಇಂದು ಕಣಕ್ಕಿಳಿಯಲಿದ್ದಾರೆ. ಸದ್ಯ ಮೂರು ಕಂಚಿನ ಪದಕ ಗೆದ್ದಿರುವ ಭಾರತ, ನಾಲ್ಕನೆ ಪದಕದ ಕಾತರದಲ್ಲಿದೆ. ಹರಿಯಾಣದ 29 ವರ್ಷದ ವಿನೇಶ್​ ಮಂಗಳವಾರ ರಾತ್ರಿ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಕ್ಯೂಬಾದ ಯಸ್ನಿಲಿಸ್​ ಗುಜ್ಮನ್​ ಲೋಪೆಜ್​ ವಿರುದ್ಧ 5-0 ಅಂಕಗಳಿಂದ ಸುಲಭ ಗೆಲುವು ದಾಖಲಿಸಿ ಫೈನಲ್​ಗೆ ಮುನ್ನಡೆದಿದ್ದರು.

ಮಹಿಳಾ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಒಲಿಯುವ 2ನೇ ಪದಕ ಇದಾಗಿದೆ. ಇದಕ್ಕೂ ಮುನ್ನ ರಿಯೊ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್ ಅವರು ಕಂಚು ಗೆದ್ದಿದ್ದರು. ಇದೀಗ ವಿನೇಶ್​ ಐತಿಹಾಸಿಕ ಪದಕ ಗೆಲ್ಲಲು ಸಜ್ಜಾಗಿದ್ದಾರೆ. ವಿನೇಶ್​ಗೆ ಇದು ಮೂರನೇ ಒಲಿಂಪಿಕ್ಸ್​ ಕೂಟವಾಗಿದೆ. 2016ರ ರಿಯೊ ಒಲಿಂಪಿಕ್ಸ್​ನಲ್ಲಿ ಮಂಡಿನೋವಿನಿಂದ ಸಮಸ್ಯೆಯಾಗಿತ್ತು. 2021ರ ಟೋಕಿಯೊದಲ್ಲಿ ಅನಿರೀಕ್ಷಿತ ಸೋಲು ಕಂಡು ಹೊರಬಿದ್ದರು. ಇದೀಗ ಮೂರನೇ ಪ್ರಯತ್ನದಲ್ಲಿ ಚೊಚ್ಚಲ ಪದಕ ಗೆಲ್ಲುವ ತವಕದಲ್ಲಿದ್ದಾರೆ.

ಭಾರತದ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು​ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕುಸ್ತಿಪಟುಗಳೊಂದಿಗೆ ಪ್ರತಿಭಟನೆ ನಡೆಸಿ ನಡು ರಸ್ತೆಯಲ್ಲೇ ಪೊಲೀಸರಿಂದ ಲಾಠಿ ಏಟು ತಿಂದು ಬಂಧನಕ್ಕೆ ಒಳಗಾಗಿದ್ದ ವಿನೇಶ್​ಗೆ ಅಂದು ಯಾರು ಕೂಡ ಬೆಂಬಲ ಸೂಚಿಸಿರಲಿಲ್ಲ. ಇಂದು ಇದೇ ಹೆಣ್ಣು ಮಗಳು ದೇಶಕ್ಕಾಗಿ ಪದಕ ಗೆದ್ದು ಎಲ್ಲ ಆಡಳಿತ ವ್ಯವಸ್ಥೆಯನ್ನು ತನ್ನ ಸಾಧನೆ ಮುಂದೆ ತಲೆ ತಗ್ಗಿಸುವಂತೆ ಮಾಡಿದ್ದಾಳೆ.

ಇದನ್ನೂ ಓದಿ Paris Olympics: ಐತಿಹಾಸಿಕ ಪದಕ ಗೆಲ್ಲಲಿ ಮೀರಾಬಾಯಿ; ಇಂದು ಬಲಾಢ್ಯರ ಜತೆ ಸ್ಪರ್ಧೆ

ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿನೇಶ್​ ಅವರು ಮೂರು ಬಾರಿಯ ಕಾಮನ್​ವೆಲ್ತ್​ ಚಿನ್ನದ ಪದಕ ವಿಜೇತೆ ಉಕ್ರೇನ್​ನ ಒಕ್ಸಾನಾ ಲಿವಾಚ್ ವಿರುದ್ಧ 7-5 ಅಂತರದ ರೋಚಕ ಗೆಲುವು ಸಾಧಿಸಿ ಸೆಮಿ ಫೈನಲ್​ ಪ್ರವೇಶಿಸಿದರು. ಇದಕ್ಕೂ ಮುನ್ನ ನಡೆದಿದ್ದ ಅತ್ಯಂತ ರೋಚಕ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿನೇಶ್ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ, ನಾಲ್ಕು ಬಾರಿಯ ವಿಶ್ವ ಚಾಂಪಿಯನ್​, ಸೋಲನ್ನೇ ಕಾಣದ ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಈ ಮೂಲಕ ಸುಸಾಕಿ ಅವರಿಗೆ ಮೊದಲ ಸೋಲಿನ ರುಚಿ ತೋರಿಸಿದರು.

ಸಸಾಕಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕಂಡ ಮೊದಲ ಆಘಾತಕಾರಿ ಸೋಲು ಇದಾಗಿದೆ. ಈ ಪಂದ್ಯಕ್ಕೂ ಮುನ್ನ 82 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಸುಸಾಕಿ ಎಲ್ಲ ಪಂದ್ಯವನ್ನು ಗೆದ್ದು ಬೀಗಿದ್ದರು. ಇದೀಗ ಇವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್​ ಹಾಕುವಲ್ಲಿ ಭಾರತೀಯ ಕುಸ್ತಿಪಟು ಯಶಸ್ಸು ಕಂಡಿದ್ದಾರೆ. ಈ ಗೆಲುವು ಸಾಧಿಸಿದಾಗಲೇ ವಿನೇಶ್​ ಈ ಬಾರಿ ಪದಕ ಗೆಲ್ಲುವುದು ಖಚಿತ ಎಂದು ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷೆಯಂತೆ ಅವರು ಫೈನಲ್​ ಪ್ರವೇಶಿಸಿ ಪದಕವೊಂದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

Continue Reading

ಕ್ರೀಡೆ

Paris Olympics: ಐತಿಹಾಸಿಕ ಪದಕ ಗೆಲ್ಲಲಿ ಮೀರಾಬಾಯಿ; ಇಂದು ಬಲಾಢ್ಯರ ಜತೆ ಸ್ಪರ್ಧೆ

Paris Olympics: ಚಾನು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಭಾರತದ ಏಕೈಕ ವೇಟ್ಲಿಫ್ಟರ್ ಆಗಿದ್ದಾರೆ. ಒಟ್ಟಾರೆಯಾಗಿ ಇದು ಅವರಿಗೆ ಮೂರನೇ ಒಲಿಂಪಿಕ್ಸ್ ಟೂರ್ನಿಯಾಗಿದೆ. ಕಳೆದ ಬಾರಿ ಟೋಕಿಯೊದಲ್ಲಿ ಭಾರತದ ಪದಕ ಖಾತೆಯನ್ನು ತೆರೆದದ್ದು ಚಾನು. ಈ ಬಾರಿ ಚಿನ್ನದ ಪದಕದೊಂದಿಗೆ ಮಿನುಗಲಿ ಎನ್ನುವುದು ಎಲ್ಲ ಭಾರತೀಯರ ಹಾರೈಕೆಯಾಗಿದೆ.

VISTARANEWS.COM


on

Paris Olympics
Koo

ಪ್ಯಾರಿಸ್​: ಕಳೆದ ಟೋಕಿಯೊ ಒಲಿಂಪಿಕ್ಸ್‌ ವೇಟ್‌ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದಿದ್ದ ಮೀರಾಬಾಯಿ ಚಾನು(mirabai chanu) ಇಂದು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics) ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಗಾಯದಿಂದಾಗಿ 6 ತಿಂಗಳ ಕಾಲ ಸ್ಪರ್ಧೆಯಿಂದ ದೂರ ಉಳಿದಿದ್ದ ಕಾರಣ ಅವರ ಫಿಟ್​ನೆಸ್​ ಹೇಗಿರಲಿದೆ ಎನ್ನುವ ಆತಂಕ ಕೂಡ ಉಂಟು ಮಾಡಿದೆ. ಹಾಲಿ ಒಲಿಂಪಿಕ್​ ಚಾಂಪಿಯನ್​ ಚೀನಾದ ಹೌ ಝಿಹುಯಿ ಅವರಿಂದ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಪಂದ್ಯ ರಾತ್ರಿ 11 ಗಂಟೆಗೆ ನಡೆಯಲಿದೆ.

ಇಂದು ರಾತ್ರಿ ನಡೆಯುವ ಮಹಿಳಾ 49 ಕೆಜಿ ವಿಭಾಗದಲ್ಲಿ ಚಾನು ಸ್ಪರ್ಧೆ ಮಾಡಲಿದ್ದಾರೆ. ಪದಕ ಗೆದ್ದರೆ ಒಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ದಾಖಲೆ ನಿರ್ಮಿಸಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಒಟ್ಟು 202 ಕೆಜಿ ಭಾರವನ್ನೆತ್ತಿ (87 ಕೆಜಿ, 115 ಕೆಜಿ) ಬೆಳ್ಳಿ ಪದಕ ಗೆದ್ದಿದ್ದರು. ಗಾಯದಿಂದಾಗಿ ಕಳೆದ ಏಷ್ಯಡ್​ನಲ್ಲಿ ಕಣಕ್ಕಿಳಿದಿರಲಿಲ್ಲ. ಚಾನು ಸ್ನ್ಯಾಚ್‌ನಲ್ಲಿ 88 ಕೆಜಿ ದಾಖಲೆ ಹೊಂದಿದ್ದಾರೆ. ಹಾಗೆಯೇ ಜೆರ್ಕ್‌ನಲ್ಲಿ 119 ಕೆಜಿ ಎತ್ತಿರುವುದು ವೈಯಕ್ತಿಕ ದಾಖಲೆಯಾಗಿದೆ.

ಇದನ್ನೂ ಓದಿ Paris Olympics: ಇಂದು ಒಲಿಂಪಿಕ್ಸ್​ನಲ್ಲಿ ಭಾರತದ ಕ್ರೀಡಾ ಸ್ಪರ್ಧೆಗಳ ವೇಳಾಪಟ್ಟಿ ಹೀಗಿದೆ

ಗೆಲ್ಲುವ ವಿಶ್ವಾಸ ಇದೆ

ಮೀರಾಬಾಯಿ ಚಾನು ಕಳೆದ ಒಂದು ತಿಂಗಳಿಂದ ಪ್ಯಾರಿಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅಭ್ಯಾಸದ ವೇಳೆ ಅವರು ಸಂಪೂರ್ಣ ಫಿಟ್​ ಆಗಿ ಕಂಡು ಬಂದಿದ್ದಾರೆ. ಅವರು ಈ ಬಾರಿಯೂ ಭಾರತಕ್ಕೆ ಪದಕ ಗೆಲ್ಲುವ ವಿಶ್ವಾಸ ನನಗಿದೆ ಎಂದು ಕೋಚ್‌ ವಿಜಯ್‌ ಶರ್ಮ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಫಿಸಿಕಲ್‌ ಥೆರಪಿಸ್ಟ್‌ ಹಾಗೂ ಕಂಡೀಶನಿಂಗ್‌ ಕೋಚ್‌ ಆಗಿರುವ ಅಮೆರಿಕದ ಡಾ| ಏರಾನ್‌ ಹಾರ್ಶಿಗ್‌ ಕೂಡ ಚಾನು ಉತ್ತಮ ಲಯದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಚಾನು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಭಾರತದ ಏಕೈಕ ವೇಟ್ಲಿಫ್ಟರ್ ಆಗಿದ್ದಾರೆ. ಒಟ್ಟಾರೆಯಾಗಿ ಇದು ಅವರಿಗೆ ಮೂರನೇ ಒಲಿಂಪಿಕ್ಸ್ ಟೂರ್ನಿಯಾಗಿದೆ. ಕಳೆದ ಬಾರಿ ಟೋಕಿಯೊದಲ್ಲಿ ಭಾರತದ ಪದಕ ಖಾತೆಯನ್ನು ತೆರೆದದ್ದು ಚಾನು. ಈ ಬಾರಿ ಚಿನ್ನದ ಪದಕದೊಂದಿಗೆ ಮಿನುಗಲಿ ಎನ್ನುವುದು ಎಲ್ಲ ಭಾರತೀಯರ ಹಾರೈಕೆಯಾಗಿದೆ.

ಮೀರಾಬಾಯಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌ ಧೃಡಪಡಿಸಿಕೊಳ್ಳಲು ಐಡಬ್ಲ್ಯುಎಫ್ ವಿಶ್ವಕಪ್‌ನಲ್ಲಿ ಕಡ್ಡಾಯವಾಗಿ ಸ್ಪರ್ಧಿಸಬೇಕಾಗಿತ್ತು. ಹೀಗಾಗಿ ಅವರು ಈ ಕೂಟದಲ್ಲಿ ಕಣಕ್ಕಿಳಿದರು. ಒಟ್ಟು 184 ಕೆಜಿ (81ಕೆಜಿ+103ಕೆಜಿ)ತೂಕ ಎತ್ತಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ನಡೆದಿದ್ದ ಏಷ್ಯನ್‌ ಗೇಮ್ಸ್‌ ವೇಳೆ ತೊಡೆಯ ಸ್ನಾಯುಬೇನೆಗೆ ತುತ್ತಾಗಿದ್ದ ಚಾನು ಆ ಬಳಿಕ ಯಾವುದೇ ಪ್ರಮುಖ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ.

Continue Reading

ಕ್ರೀಡೆ

Vinesh Phogat: ಚಾಂಪಿಯನ್ಸ್‌ ಫೀಲ್ಡಿನಲ್ಲೇ ಉತ್ತರ ಕೊಡುತ್ತಾರೆ; ಒಲಿಂಪಿಕ್ಸ್‌ ಫೈನಲ್‌ ಪ್ರವೇಶಿಸಿದ ವಿನೇಶ್ ಫೋಗಟ್‌ಗೆ ರಾಹುಲ್‌ ಗಾಂಧಿ ವಿಷ್‌

Vinesh Phogat: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಅಭಿನಂದನೆಗಳ ಪ್ರವಾಹವೇ ಹರಿದು ಬರುತ್ತಿದೆ. ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅಭಿನಂದನೆ ಸಲ್ಲಿಸಿ, ಚಾಂಪಿಯನ್ಸ್‌ ಯಾವತ್ತೂ ಟೀಕೆಗಳಿಗೆ ಸಾಧನೆ ಮೂಲಕವೇ ಉತ್ತರ ಕೊಡುತ್ತಾರೆ ಎಂದಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ತಿವಿದಿದ್ದಾರೆ.

VISTARANEWS.COM


on

Vinesh Phogat
Koo

ಪ್ಯಾರಿಸ್‌: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ​ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics) 50 ಕೆಜಿ ಕುಸ್ತಿ ಪಂದ್ಯದಲ್ಲಿ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದಿದ್ದಾರೆ. ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಅವರು ಯುಸ್ನಿಲಿಸ್ ಗುಜ್ಮಾನ್ (Yusneylys Guzman) ಅವರನ್ನು 5-0 ಅಂತರದಿಂದ ಮಣಿಸಿ  ಒಲಿಂಪಿಕ್ಸ್‌ ಇತಿಹಾಸದಲ್ಲಿ ಫೈನಲ್‌ ಪ್ರವೇಶಿಸಿ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಈ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gndhi) ಅಭಿನಂದನೆ ಸಲ್ಲಿಸಿ, ಚಾಂಪಿಯನ್ಸ್‌ ಯಾವತ್ತೂ ಟೀಕೆಗಳಿಗೆ ಸಾಧನೆ ಮೂಲಕವೇ ಉತ್ತರ ಕೊಡುತ್ತಾರೆ ಎಂದಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ತಿವಿದಿದ್ದಾರೆ.

ವಿನೇಶ್ ಫೋಗಟ್ ಈ ಹಿಂದೆ ಭಾರತದ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು​ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕುಸ್ತಿಪಟುಗಳೊಂದಿಗೆ ಪ್ರತಿಭಟನೆ ನಡೆಸಿ ನಡು ರಸ್ತೆಯಲ್ಲೇ ಪೊಲೀಸರಿಂದ ಲಾಠಿ ಏಟು ತಿಂದು ಬಂಧನಕ್ಕೆ ಒಳಗಾಗಿದ್ದರು. ಪ್ರತಿಭಟನೆಗೆ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಸಹಕರಿಸದೇ ಇದ್ದಾಗ ಪ್ರಧಾನಿ ಮೋದಿಗೆ ಪತ್ರ ಬರೆದು ತಮಗೆ ಲಭಿಸಿದ್ದ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದ (Kartavya Path) ಪಾದಚಾರಿ ಮಾರ್ಗದಲ್ಲಿ ತೊರೆದಿದ್ದರು.

ರಾಹುಲ್‌ ಗಾಂಧಿ ಹೇಳಿದ್ದೇನು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರನ್ನು ಅಭಿನಂದಿಸಿದ ರಾಹುಲ್‌ ಗಾಂಧಿ, “ವಿನೇಶ್ ಒಂದೇ ದಿನದಲ್ಲಿ ವಿಶ್ವದ ಮೂವರು ಅಗ್ರ ಕುಸ್ತಿಪಟುಗಳನ್ನು ಸೋಲಿಸಿದ ನಂತರ ಇಡೀ ದೇಶವೇ ಭಾವುಕವಾಗಿದೆ. ವಿನೇಶ್ ಮತ್ತು ಅವರ ತಂಡದ ಸದಸ್ಯರ ಹೋರಾಟವನ್ನು ನಿರಾಕರಿಸಿದ ಮತ್ತು ಅವರ ಉದ್ದೇಶಗಳು ಮತ್ತು ಸಾಮರ್ಥ್ಯಗಳನ್ನು ಪ್ರಶ್ನಿಸಿದ ಎಲ್ಲರಿಗೂ ಉತ್ತರ ಸಿಕ್ಕಿದೆ. ಭಾರತ ರಕ್ತದ ಕಣ್ಣೀರು ಸುರಿಸುವಂತೆ ಮಾಡಿದ ಇಡೀ ಆಡಳಿತ ವ್ಯವಸ್ಥೆಯು ತನ್ನ ಧೈರ್ಯಶಾಲಿ ಮಗಳ ಮುಂದೆ ಈಗ ಕುಸಿದಿದೆ. ಚಾಂಪಿಯನ್‌ಗಳು ಯಾವತ್ತೂ ಮೈದಾನದಿಂದ ತಮ್ಮ ಉತ್ತರವನ್ನು ನೀಡುತ್ತಾರೆ. ವಿನೇಶ್‌ಗೆ ಶುಭ ಹಾರೈಕೆಗಳು. ಪ್ಯಾರಿಸ್‌ನಲ್ಲಿನ ನಿಮ್ಮ ಯಶಸ್ಸಿನ ಪ್ರತಿಧ್ವನಿಯು ದೆಹಲಿಯವರೆಗೆ ಸ್ಪಷ್ಟವಾಗಿ ಕೇಳಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಅಭಿನಂದನೆಗಳ ಪ್ರವಾಹ

2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅಭಿನವ್‌ ಬಿಂದ್ರಾ ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ. ವಿನೇಶ್ ಫೋಗಟ್ ಖಂಡಿತವಾಗಿಯೂ ಚಿನ್ನದ ಪದಕ ಗೆಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ವಿಶೇಶ್‌ ಅವರ ಸಹೋದರಿ ಗೀತಾ ಫೋಗಟ್‌ ಕೂಡ ಅಭಿನಂದನೆ ಸಲ್ಲಿಸಿ ತಮ್ಮ ತಂದೆಯ ಕನಸು ನನಸಾಗಿದೆ ಎಂದಿದ್ದಾರೆ. ಜತೆಗೆ ದೇಶದ ವಿವಿಧ ಕ್ಷೇತ್ರಗಳ ಗಣ್ಯರೂ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Paris Olympics: ಫೈನಲ್​ ಪ್ರವೇಶಿಸಿ ಐತಿಹಾಸಿಕ ಪದಕ ಖಾತ್ರಿಪಡಿಸಿದ ಕುಸ್ತಿಪಟು ವಿನೇಶ್ ಫೋಗಟ್

ಮಂಗಳವಾರ ನಡೆದಿದ್ದ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿನೇಶ್ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಬಳಿಕ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮೂರು ಬಾರಿಯ ಕಾಮನ್​ವೆಲ್ತ್​ ಚಿನ್ನದ ಪದಕ ವಿಜೇತೆ ಉಕ್ರೇನ್​ನ ಒಕ್ಸಾನಾ ಲಿವಾಚ್ ವಿರುದ್ಧ 7-5 ಅಂತರದ ರೋಚಕ ಗೆಲುವು ಸಾಧಿಸಿ ಸೆಮಿ ಫೈನಲ್​ ಪ್ರವೇಶಿಸಿದರು. ಇದೀಗ ಫೈನಲ್‌ಗೆ ತಲುಪಿ ಭಾರತದ ಚಿನ್ನದ ಪದಕದ ಕನಸು ಜೀವಂತವಾಗಿಸಿದ್ದಾರೆ.

Continue Reading

ಕ್ರೀಡೆ

Paris Olympics: ಇಂದು ಒಲಿಂಪಿಕ್ಸ್​ನಲ್ಲಿ ಭಾರತದ ಕ್ರೀಡಾ ಸ್ಪರ್ಧೆಗಳ ವೇಳಾಪಟ್ಟಿ ಹೀಗಿದೆ

Paris Olympics: ಗಾಯದಿಂದಾಗಿ 6 ತಿಂಗಳ ಕಾಲ ಸ್ಪರ್ಧೆಯಿಂದ ದೂರ ಉಳಿದಿದ್ದ ಟೋಕಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ವೇಟ್‌ ಲಿಫ್ಟರ್‌ ಮೀರಾಬಾಯಿ ಚಾನು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

VISTARANEWS.COM


on

Paris Olympics
Koo

ಪ್ಯಾರಿಸ್​: ಮಂಗಳವಾರ ನಡೆದಿದ್ದ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics) ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ​ಫೈನಲ್​ ಪ್ರವೇಶಿಸುವ ಮೂಲಕ ದೇಶಕ್ಕೆ ಐತಿಹಾಸಿಕ ಪದಕವೊಂದನ್ನು ಖಾತ್ರಿಪಡಿಸಿದ್ದಾರೆ. ಆದರೆ, ಬಹಳ ನಿರೀಕ್ಷೆ ಇರಿಸಿದ್ದ ಭಾರತ ಪುರುಷರ ಹಾಕಿ ತಂಡ ಸೆಮಿಫೈನಲ್​ನಲ್ಲಿ ಸೋಲು ಕಾಣುವ ಮೂಲಕ ನಿರಾಶೆ ಮೂಡಿಸಿತ್ತು. ಇದೀಗ ಬುಧವಾರ ನಡೆಯುವ ಸ್ಪರ್ಧೆಗಳ ವಿವರ ಹೀಗಿದೆ.

ಅಥ್ಲೆಟಿಕ್ಸ್​( ಪದಕ ಸ್ಪರ್ಧೆ)

ಮ್ಯಾರಥಾನ್ ರೇಸ್ ವಾಕ್ ರಿಲೇ ಮಿಶ್ರ ತಂಡ: ಪನ್ವರ್ ಸೂರಜ್ / ಪ್ರಿಯಾಂಕಾ. (ಆರಂಭ: ಬೆಳಗ್ಗೆ 11 ಗಂಟೆ)

ಗಾಲ್ಫ್​


ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 1

ಅದಿತಿ ಅಶೋಕ್

ದಿಶಾ ದಾಗರ್ (ಆರಂಭ: ಮಧ್ಯಾಹ್ನ 12.30)

ಟೇಬಲ್​ ಟೆನಿಸ್​


ಮಹಿಳಾ ತಂಡ ಕ್ವಾರ್ಟರ್‌ಫೈನಲ್: ಭಾರತ-ಜರ್ಮನಿ. (ಆರಂಭ: ಮಧ್ಯಾಹ್ನ 1.30)

ಅಥ್ಲೆಟಿಕ್ಸ್


ಪುರುಷರ ಹೈ ಜಂಪ್ ಅರ್ಹತಾ ಸುತ್ತು: ಸರ್ವೇಶ್ ಅನಿಲ್ ಕುಶಾರೆ. (ಆರಂಭ: ಮಧ್ಯಾಹ್ನ 1.35)

ಅಥ್ಲೆಟಿಕ್ಸ್

ಮಹಿಳೆಯರ 100 ಮೀ ಹರ್ಡಲ್ಸ್ ಸುತ್ತು 1: ಜ್ಯೋತಿ ಯರಾಜಿ. (ಆರಂಭ: ಮಧ್ಯಾಹ್ನ 1.45)

ಕುಸ್ತಿ

ಮಹಿಳೆಯರ ಫ್ರೀಸ್ಟೈಲ್ 53kg (ಆರಂಭ: ಮಧ್ಯಾಹ್ನ 2.30)

ಅಥ್ಲೆಟಿಕ್ಸ್


ಪುರುಷರ ಟ್ರಿಪಲ್ ಜಂಪ್ ಅರ್ಹತೆ
: ಅಬ್ದುಲ್ಲ ನರಂಗೋಳಿಂತೇವಿ, ಪ್ರವೀಣ್ ಚಿತ್ರವೇಲ್ (ಆರಂಭ: ರಾತ್ರಿ 10.45)

ವೇಟ್‌ ಲಿಫ್ಟಿಂಗ್‌

ಮಹಿಳೆಯರ 49 ಕೆಜಿ ವಿಭಾಗ: ಮೀರಾಬಾಯಿ ಚಾನು (ಆರಂಭ: ರಾತ್ರಿ 11)

ಮಂಗಳವಾರ ರಾತ್ರಿ ನಡೆದಿದ್ದ ಮಹಿಳೆಯರ 50 ಕೆಜಿ ಕುಸ್ತಿ ಸೆಮಿಫೈನಲ್​ ಪಂದ್ಯದಲ್ಲಿ ವಿನೇಶ್​ ಫೋಗಟ್​ ಕ್ಯೂಬಾದ ಯುಸ್ನಿಲಿಸ್ ಗುಜ್ಮಾನ್(Yusneylys Guzman) ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್​ ಪ್ರವೇಶಿಸಿದ್ದರು. ಈ ಮೂಲಕ ವಿನೇಶ್ ಫೋಗಟ್ ಒಲಿಂಪಿಕ್ ಇತಿಹಾಸದಲ್ಲಿ ಫೈನಲ್‌ ಪ್ರವೇಶಿಸಿ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಫೈನಲ್​ನಲ್ಲಿ ಚಿನ್ನ ಅಥವಾ ಬೆಳ್ಳಿ ಗೆದ್ದರೂ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಲಿದ್ದಾರೆ. 50 ಕೆಜಿ ವಿಭಾಗದಲ್ಲಿ ವಿನೇಶ್ ಒಲಿಂಪಿಕ್ಸ್​ ಆಡುತ್ತಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್​ನಲ್ಲಿ 48 ಕೆಜಿ, ಟೋಕಿಯೊದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಇದು ವಿನೇಶ್​ ಅವರ ಮೂರನೇ ಒಲಿಂಪಿಕ್ಸ್​ ಟೂರ್ನಿಯಾಗಿದೆ.

Continue Reading
Advertisement
Pooja Gandhi P reciting the Mrityunjaya mantra Kannadigas
ಸ್ಯಾಂಡಲ್ ವುಡ್4 mins ago

Pooja Gandhi: ಮೃತ್ಯುಂಜಯ ಮಂತ್ರ ಪಠಣೆ ಮಾಡ್ತಾರಂತೆ ಪೂಜಾ ಗಾಂಧಿ; ನಟಿಯ ಕನ್ನಡಾಭಿಮಾನಕ್ಕೆ ಕನ್ನಡಿಗರು ಫಿದಾ!

Gautam Adani
ವಾಣಿಜ್ಯ14 mins ago

Gautam Adani: ಅಧಿಕಾರ ತೊರೆದು ನಿವೃತ್ತರಾಗಲಿದ್ದಾರಾ ಗೌತಮ್ ಅದಾನಿ? ಈ ಬಗ್ಗೆ ಅವರು ಹೇಳಿದ್ದೇನು?

Vinesh Phogat
ಕ್ರೀಡೆ42 mins ago

Vinesh Phogat: ಪ್ಯಾರಿಸ್​ನಲ್ಲಿ ಮೊದಲ ಚಿನ್ನ ಗೆಲ್ಲಲಿ ವಿನೇಶ್​ ಫೋಗಟ್; ಇಂದು ಫೈನಲ್​

Divya Seth Sushma Seth granddaughter Mihika Shah dies Divya Seth shares the news
ಸಿನಿಮಾ52 mins ago

Divya Seth: ಸುಷ್ಮಾ ಸೇಠ್ ಮೊಮ್ಮಗಳು, ʻಜಬ್ ವಿ ಮೆಟ್ ʼಚಿತ್ರದ ಖ್ಯಾತ ನಟಿಯ ಪುತ್ರಿ ನಿಧನ

Parliament Session
ರಾಜಕೀಯ1 hour ago

Parliament Session: ಇಂದು ಸಂಸತ್‌ನಲ್ಲಿ ಮಂಡನೆಯಾಗುತ್ತಾ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ?; ಅಧಿವೇಶನದ Live ಇಲ್ಲಿ ನೋಡಿ

karnataka congress office
ರಾಜಕೀಯ1 hour ago

Karnataka Congress Office: ಬೆಂಗಳೂರು, ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಹೊಸ ಕಚೇರಿ ಕಟ್ಟಡ; ನಿರ್ಮಾಣಕ್ಕೆ ಸಮಿತಿಗಳ ರಚನೆ

Paris Olympics
ಕ್ರೀಡೆ1 hour ago

Paris Olympics: ಐತಿಹಾಸಿಕ ಪದಕ ಗೆಲ್ಲಲಿ ಮೀರಾಬಾಯಿ; ಇಂದು ಬಲಾಢ್ಯರ ಜತೆ ಸ್ಪರ್ಧೆ

Asif Merchant
ವಿದೇಶ2 hours ago

Asif Merchant: ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ಸಂಚು ರೂಪಿಸಿದ್ದ ಪಾಕಿಸ್ತಾನಿ ಪ್ರಜೆ ಅರೆಸ್ಟ್‌

Bangladesh Unrest
ವಿದೇಶ2 hours ago

Bangladesh Unrest: ಭಾರತದಲ್ಲೂ ಬಾಂಗ್ಲಾ ಮಾದರಿ ಗಲಭೆಗೆ ಸಂಚು; ಪಾಕ್‌ ಮಾಜಿ ಕ್ರಿಕೆಟಿಗನ ಸ್ಫೋಟಕ ಮಾಹಿತಿ

Rishab Shetty meets Chiyaan Vikram after 24 years
South Cinema2 hours ago

Rishab Shetty: ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿ ನಾನು; ಚಿಯಾನ್ ವಿಕ್ರಮ್ ಭೇಟಿ ಬಳಿಕ ರಿಷಬ್ ಶೆಟ್ಟಿ ರಿಯಾಕ್ಷನ್‌!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು17 hours ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ18 hours ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌