IND VS SL | ರಾಜ್​ಕೋಟ್​ನಲ್ಲಿ ಟೀಮ್​ ಇಂಡಿಯಾ ಸರಣಿ ಗೆಲುವಿನ ದರ್ಬಾರ್​! - Vistara News

ಕ್ರಿಕೆಟ್

IND VS SL | ರಾಜ್​ಕೋಟ್​ನಲ್ಲಿ ಟೀಮ್​ ಇಂಡಿಯಾ ಸರಣಿ ಗೆಲುವಿನ ದರ್ಬಾರ್​!

ಶ್ರೀಲಂಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ(IND VS SL) ಭರ್ಜರಿ 91 ರನ್​ ಅಂತರದ ಗೆಲುವು ಸಾಧಿಸಿದೆ.

VISTARANEWS.COM


on

IND VS SL
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜ್​ಕೋಟ್​: ಪ್ರವಾಸಿ ಶ್ರೀಲಂಕಾ(IND VS SL) ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ 91 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಸರಣಿ ವಶಪಡಿಸಿಕೊಂಡಿದೆ. ವರ್ಷಾರಂಭದಲ್ಲಿ ನಡೆದ ಮೊದಲ ಸರಣಿಯಲ್ಲೇ ಯಶಸ್ಸು ಸಾಧಿಸುವ ಮೂಲಕ ಟೀಮ್​ ಇಂಡಿಯಾ ಭರ್ಜರಿ ಶುಭಾರಂಭ ಮಾಡಿದೆ.

ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 228 ರನ್ ಗಳಿಸಿತು. ಬೃಹತ್​ ಮೊತ್ತದ ಗುರಿ ಬೆನ್ನಟ್ಟಿದ ಶ್ರೀಲಂಕಾ16.4 ಓವರ್​ಗಳಲ್ಲಿ 137 ರನ್​ ಗಳಿಸಿ ಸರ್ವಪತನ ಕಂಡಿತು.

ಬೃಹತ್​ ಮೊತ್ತವನ್ನು ಕಂಡು ದಂಗಾದ ಶ್ರೀಲಂಕಾ ಆರಂಭದಲ್ಲೇ ವಿಕೆಟ್​ ಕೈಚೆಲ್ಲಿ ಸಂಕಷ್ಟಕ್ಕೆ ಸಿಲುಕಿತು. ತಂಡದ ಮೊತ್ತ ನೂರು ಆಗುವಷ್ಟರಲ್ಲೇ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಅಂತಿಮವಾಗಿ 16.4 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಸೋಲು ಕಂಡಿತು. ಲಂಕಾ ಪರ ನಾಯಕ ದಸುನ್​ ಶನಕ ಮತ್ತು ಕುಸಲ್​ ಮೆಂಡಿಸ್ ತಲಾ 23 ರನ್​ ಗಳಿಸಿದರು. ಇವರನ್ನು ಹೊರತುಪಡಿಸಿ ಉಳಿದ ಯಾವ ಆಟಗಾರರು ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಲಿಲ್ಲ. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಭಾರತ ಪರ ಸೂರ್ಯಕುಮಾರ್​(ಅಜೇಯ 112 ), ಶುಭಮನ್ ಗಿಲ್​(46) ಬ್ಯಾಟಿಂಗ್​ ಪ್ರದರ್ಶನ ತೋರಿದರು. ಬೌಲಿಂಗ್​ ನಲ್ಲಿ ಭಾರತ ಪರ ಕಳೆದ ಪಂದ್ಯದಲ್ಲಿ 5 ನೋಬಾಲ್​ ಎಸೆದು ದುಬಾರಿಯಾಗಿದ್ದ ಅರ್ಶ್​ದೀಪ್​ ಸಿಂಗ್​ 2.4 ಓವರ್​ ಎಸೆದು 20ನೀಡಿ ಪ್ರಮುಖ ಮೂರು ವಿಕೆಟ್​ ಕಿತ್ತರು. ಉಳಿದಂತೆ ಉಮ್ರಾನ್​ ಮಲಿಕ್​, ಯಜುವೇಂದ್ರ ಚಹಲ್​ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್​ ಉರುಳಿಸಿದರು.

ಸೂರ್ಯ ಸ್ಫೋಟಕ ಬ್ಯಾಟಿಂಗ್​

ಭಾರತ ಪರ ಹೊಡಿಬಡಿ ಆಟಗಾರ ಸೂರ್ಯಕುಮಾರ್​ ಯಾದವ್​ ಆರಂಭದಿಂದಲೇ ಲಂಕಾ ಬೌಲರ್​ಗಳ ಮೇಲೆರಗಿ ಸಿಕ್ಸರ್​, ಬೌಂಡರಿಗಳ ಸುರಿಮಳೆಗೈದರು. ನಟರಾಜ ಭಂಗಿಯಲ್ಲಿ ಬ್ಯಾಟ್​ ಬೀಸಿದ ಅವರು ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿ ನೆರೆದಿದ್ದ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು. ಇದೇ ವೇಳೆ ಟಿ20 ಕ್ರಿಕೆಟ್​ನಲ್ಲಿ ಮೂರನೇ ಶತಕ ಬಾರಿಸಿ ಮಿಂಚಿದರು. ಒಟ್ಟು 51 ಎಸೆತ ಎದುರಿಸಿದ ಅವರು 9ಸಿಕ್ಸರ್​ ಮತ್ತು7ಬೌಂಡರಿ ಬಾರಿಸಿ ಅಜೇಯ 112 ರನ್​ ಗಳಿಸಿದರು. ಅಂತಿಮ 7ನೇ ಕ್ರಮಾಂಕದಲ್ಲಿ ಆಡಲಿಳಿದ ಅಕ್ಷರ್​ ಪಟೇಲ್​ ಬಿರುಸಿನ ಬ್ಯಾಟಿಂಗ್​ ನಡೆಸಿ ಕೇವಲ 9 ಎಸೆತಗಳಿಂದ ಅಜೇಯ21​ ರನ್​ ಚಚ್ಚಿದರು. ಉಳಿದಂತೆ ಶುಭಮನ್​ ಗಿಲ್​ 46 ರನ್​ ಬಾರಿಸಿ ಮಿಂಚಿದರು.

ಕಳೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ಪರ ಪದಾರ್ಪಣ ಪಂದ್ಯವನ್ನಾಡಿದ ರಾಹುಲ್​ ತ್ರಿಪಾಠಿ ಈ ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ ಒಂದು ಜೀವದಾನ ಪಡೆದರು. ಈ ಲಾಭವನ್ನು ಉಪಯುತ್ತವಾಗಿ ಬಳಿಸಿಕೊಂಡ ಅವರು ಲಂಕಾ ಬೌಲರ್​ಗಳನ್ನು ಕಾಡಲಾರಂಭಿಸಿದರು. ಒಂದು ಹಂತದಲ್ಲಿ ಸಿಕ್ಸರ್​, ಬೌಂಡರಿಗಳ ಸುರಿಮಳೆಗೈದು ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ 35 ರನ್​ ಗಳಿಸಿದ ವೇಳೆ ಚಮಿಕ ಕರುಣರತ್ನೆ ಎಸೆತದಲ್ಲಿ ಕ್ಯಾಚ್​ ನೀಡಿ ಔಟಾದರು. ಅವರ ಸ್ಫೋಟಕ ಇನಿಂಗ್ಸ್​ ವೇಳೆ 5 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು.

ಇಶಾನ್​ ಕಿಶನ್, ಪಾಂಡ್ಯ​ ವೈಫಲ್ಯ
ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿ ಮಿಂಚಿದ್ದ ಇಶಾನ್​ ಕಿಶನ್​ ಲಂಕಾ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಆಡಿದ ಮೂರು ಪಂದ್ಯಗಳಲ್ಲಿಯೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಅಂತಿಮ ಪಂದ್ಯದಲ್ಲಿ 1 ರನ್​ ಗಳಿಸಲಷ್ಟೇ ಶಕ್ತರಾದರು. ಉಳಿದಂತೆ ನಾಯಕ ಹಾರ್ದಿಕ್​ ಪಾಂಡ್ಯ ಕೂಟ ಈ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಫಾರ್ಮ್​ ಮುಂದುವರಿಸಿದರು.​

ಸಂಕ್ಷಿಪ್ತ ಸ್ಕೋರ್​

ಭಾರತ: 20 ಓವರ್​ಗಳಲ್ಲಿ 5 ವಿಕೆಟ್​ಗೆ 228: ಸೂರ್ಯಕುಮಾರ್​(ಅಜೇಯ 112) , ರಾಹುಲ್​ ತ್ರಿಪಾಠಿ(35), ಶುಭಮನ್​ ಗಿಲ್​(46).

ಶ್ರೀಲಂಕಾ: 16.4 ಓವರ್​ಗಳಲ್ಲಿ 137ಕ್ಕೆ ಆಲೌಟ್​(ದಸುನ್​ ಶನಕ 23, ಕುಸಲ್​ ಮೆಂಡಿಸ್​ 23, ಅರ್ಶ್​ದೀಪ್​ ಸಿಂಗ್​ 20ಕ್ಕೆ 3). ಪಂದ್ಯಶ್ರೇಷ್ಠ: ಸೂರ್ಯಕುಮಾರ್​ ಯಾದವ್​. ಸರಣಿಶ್ರೇಷ್ಠ: ಅಕ್ಷರ್​ ಪಟೇಲ್​

ಇದನ್ನೂ ಓದಿ | IND VS SL | ಜಿಮ್​ನಲ್ಲಿ ವರ್ಕೌಟ್​ ಜತೆಗೆ ನೃತ್ಯ ಮಾಡಿದ ರೋಹಿತ್​ ಶರ್ಮಾ; ವಿಡಿಯೊ ವೈರಲ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Traffic Restrictions: ಐಪಿಎಲ್‌ ಕ್ರಿಕೆಟ್‌; ಈ ರೋಡ್‌ನಲ್ಲಿ ಅಪ್ಪಿತಪ್ಪಿಯೂ ಪಾರ್ಕಿಂಗ್ ಮಾಡಬೇಡಿ

IPL 2024 : ಬೆಂಗಳೂರಿನಲ್ಲಿ ನಡೆಯುತ್ತಿರುವ ಆರ್‌ಸಿಬಿ vs ಜಿಟಿ ಐಪಿಎಲ್‌ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಾಗಿ ಮಧ್ಯಾಹ್ನ ಮೂರು ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧ (Traffic Restrictions) ಹೇರಲಾಗಿದೆ.

VISTARANEWS.COM


on

By

IPL 2024
Koo

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮ್ಯಾಚ್ (IPL 2024) ಇರುವ ಕಾರಣ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ (Traffic Restrictions) ನಿರ್ಬಂಧವಿದೆ. ಶನಿವಾರದಂದು ಬೆಂಗಳೂರಿನಲ್ಲಿ ಆರ್‌ಸಿಬಿ vs ಜಿಟಿ ಪಂದ್ಯಾವಳಿ ನಡೆಯಲಿದೆ. ಹೀಗಾಗಿ ಕ್ರೀಡಾಂಗಣದ ಸುತ್ತಲಿನ ಕೆಲವು ರಸ್ತೆಗಳಲ್ಲಿ ಸಂಚಾರಿ ವ್ಯವಸ್ಥೆಗಳ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 03:00 ಗಂಟೆಯಿಂದ ರಾತ್ರಿ 11:00 ಗಂಟೆಯವರೆಗೆ ಈ ನಿಯಮಗಳು ಅನ್ವಯವಾಗಲಿದೆ.

ವಾಹನಗಳ ನಿಲುಗಡೆ ನಿಷೇಧವಿರುವ ರಸ್ತೆಗಳ ವಿವರ ಹೀಗಿದೆ

ಕ್ಲೀನ್ಸ್ ರಸ್ತೆ, ಎಂ.ಜಿ ರಸ್ತೆ, ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆ ಹಾಗೂ ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್‌ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ. ಲ್ಯಾವೆಲ್ಲೆ ರಸ್ತೆಯೊಂದಿಗೆ ವಿಠಲ್ ಮಲ್ಯ ರಸ್ತೆ, ಕಿಂಗ್ಸ್ ರಸ್ತೆ ಮತ್ತು ನೃಪತುಂಗ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುವಂತಿಲ್ಲ.

ಬೇರೆ ಎಲ್ಲಿ ಪಾರ್ಕಿಂಗ್‌ ಮಾಡಬಹುದು?

ಸಾರ್ವಜನಿಕರು ತಮ್ಮ ವಾಹನಗಳ ನಿಲುಗಡೆ ಮಾಡಲು ಸ್ಥಳಗಳನ್ನು ನಿಯೋಜನೆ ಮಾಡಲಾಗಿದೆ. ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನ, ಯು.ಬಿ ಸಿಟಿ ಪಾರ್ಕಿಂಗ್‌, ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಮೊದಲನೆ ಮಹಡಿ ಮತ್ತು ಹಿಲ್ಸ್ ಕೆ.ಜಿ.ಐ.ಡಿ ಬಿಲ್ಡಿಂಗ್, ಕಿಂಗ್ಸ್ ರಸ್ತೆ, (ಕಬ್ಬನ್ ಪಾರ್ಕ್ ಒಳಭಾಗ)ದಲ್ಲಿ ಪಾರ್ಕಿಂಗ್‌ ಮಾಡಬಹುದಾಗಿದೆ.

ಇದನ್ನೂ ಓದಿ: IPL 2024: ಬರೋಬ್ಬರಿ 12 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಗೆಲುವು ಸಾಧಿಸಿದ ಕೆಕೆಆರ್​

ಕೆಎಸ್‌ಸಿಎಗೆ ಮತ್ತೆ ಸಂಕಷ್ಟ; ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!

ಬೆಂಗಳೂರು: ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದ ವೇಳೆಯೂ(bangalore water crisis) ಚಿನ್ನಸ್ವಾಮಿ(m chinnaswamy) ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ​ ಪಂದ್ಯಾವಳಿಗಳನ್ನು ನಡೆಸಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. 3 ವಾರಗಳ ಹಿಂದೆ ನೀರಿನ ಬಳಕೆ ಕುರಿತು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ವರದಿ ಕೇಳಿತ್ತು. ಇದೀಗ ಪಂದ್ಯಗಳಿಗೆ ಬಳಸಿರುವ ನೀರಿನ ಮೂಲ ಹಾಗೂ ಕ್ರೀಡಾಂಗಣದಲ್ಲಿರುವ 400 ಅಡಿ ಆಳದ ನಾಲ್ಕು ಕೊಳವೆ ಬಾವಿಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಜನರು ನೀರಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಹೆಚ್ಚು ನೀರು ಬಳಸುವ ಐಪಿಎಲ್‌ ಪಂದ್ಯಗಳನ್ನು ನಡೆಸುವುದು ಸೂಕ್ತವಲ್ಲ, ಹೀಗಾಗಿ ಬೆಂಗಳೂರಿನನಲ್ಲಿ ನಡೆಯುವ ಪಂದ್ಯಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಸಾರ್ವಜನಿಕ ವಲಯದಿಂದ ಸರ್ಕಾರಕ್ಕೆ ಮನವಿ ಬಂದಿತ್ತು. ಈ ವೇಳೆ ಕೆಎಸ್​ಸಿಎ ಆಡಳಿತ ಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ದ ನೀರು ಬಳಕೆ ಮಾಡುಲಾಗುತ್ತದೆ ಎಂದು ಹೇಳಿ ಪಂದ್ಯವಾವಳಿಯನ್ನು ನಡೆಸಿತ್ತು.

ಈ ವೇಳೆ ಸ್ಪಷ್ಟನೆ ನೀಡಿದ್ದ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭೇಂದು ಘೋಷ್, ನೀರಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರವು ಹೊರಡಿಸಿರುವ ನೀರು ಬಳಕೆ ಮಾರ್ಗಸೂಚಿಯನ್ನು ನಾವು ಪಾಲಿಸುತ್ತೇವೆ. ಪಿಚ್ ಮತ್ತು ಹೊರಾಂಗಣಕ್ಕಾಗಿ ನಾವು ಯೋಗ್ಯವಾದ ನೀರನ್ನು ಬಳಸುವುದಿಲ್ಲ. ನೀರಿನ ಮೌಲ್ಯ ಏನೆಂಬುವುದು ನಮಗೆ ತಿಳಿದಿದೆ. ಎಸ್‌ಟಿಪಿ ಘಟಕದ ನೀರನ್ನು ನಾವು ಬಳಸುತ್ತಿದ್ದೇವೆ. ಕ್ರೀಡಾಂಗಣದಲ್ಲಿ ಕೆಲವು ಕಾರ್ಯಗಳಿಗಾಗಿ ಬಳಸಲು ಕೂಡ ಇದೇ ಸಂಸ್ಕರಿತ ನೀರು ಬಳಕೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಪಂದ್ಯಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಿರುವುದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ಗಂಭೀರವಾಗಿ ಪರಿಗಣಿಸಿದ್ದು, ನೀರಿನ ಬಳಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಆದೇಶಿಸಿ ಮೇ 2ಕ್ಕೆ ಎರಡನೇ ಹಂತದ ವಿಚಾರಣೆಯನ್ನು ನಿಗದಿಪಡಿಸಿತ್ತು.

ಇದೀಗ ವಿಚಾರಣೆ ನಡೆದಿದ್ದು, ಎನ್‌ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್‌ವೆಲ್‌, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್​ 13ಕ್ಕೆ ನಿಗದಿಪಡಿಸಿದೆ. ಮುಂದಿನ ವಿಚಾರಣೆಗೆ ಇನ್ನೂ ಮೂರು ತಿಂಗಳು ಬಾಕಿ ಇದ್ದು ಈ ವೇಳೆಗಾಗಲೇ ಐಪಿಎಲ್​ ಪಂದ್ಯ ಕೂಡ ಮುಕ್ತಾಯ ಕಂಡಿರುತ್ತದೆ. ಹೀಗಾಗಿ ಈ ಬಾರಿಯ ಆರ್​ಸಿಬಿ ಪಂದ್ಯಗಳಿಗೆ ಯಾವುದೇ ಅಡ್ಡಿ ಉಂಟಾಗದು. ಚಿನ್ನಸ್ವಾಮಿಯಲ್ಲಿ ಇನ್ನು ಕೇವಲ 2 ಪಂದ್ಯ ಮಾತ್ರ ಬಾಕಿ ಉಳಿದಿದೆ. ಇದರಲ್ಲಿ ಒಂದು ಪಂದ್ಯ ಇಂದು(ಶನಿವಾರ) ನಡೆಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೀಡೆ

IPL 2024: ಕೆಎಸ್‌ಸಿಎಗೆ ಮತ್ತೆ ಸಂಕಷ್ಟ; ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!

IPL 2024: ಎನ್‌ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್‌ವೆಲ್‌, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್​ 13ಕ್ಕೆ ನಿಗದಿಪಡಿಸಿದೆ.

VISTARANEWS.COM


on

IPL 2024
Koo

ಬೆಂಗಳೂರು: ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದ ವೇಳೆಯೂ(bangalore water crisis) ಚಿನ್ನಸ್ವಾಮಿ(m chinnaswamy) ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ​ ಪಂದ್ಯಾವಳಿಗಳನ್ನು ನಡೆಸಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. 3 ವಾರಗಳ ಹಿಂದೆ ನೀರಿನ ಬಳಕೆ ಕುರಿತು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ವರದಿ ಕೇಳಿತ್ತು. ಇದೀಗ ಪಂದ್ಯಗಳಿಗೆ ಬಳಸಿರುವ ನೀರಿನ ಮೂಲ ಹಾಗೂ ಕ್ರೀಡಾಂಗಣದಲ್ಲಿರುವ 400 ಅಡಿ ಆಳದ ನಾಲ್ಕು ಕೊಳವೆ ಬಾವಿಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಜನರು ನೀರಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಹೆಚ್ಚು ನೀರು ಬಳಸುವ ಐಪಿಎಲ್‌ ಪಂದ್ಯಗಳನ್ನು ನಡೆಸುವುದು ಸೂಕ್ತವಲ್ಲ, ಹೀಗಾಗಿ ಬೆಂಗಳೂರಿನನಲ್ಲಿ ನಡೆಯುವ ಪಂದ್ಯಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಸಾರ್ವಜನಿಕ ವಲಯದಿಂದ ಸರ್ಕಾರಕ್ಕೆ ಮನವಿ ಬಂದಿತ್ತು. ಈ ವೇಳೆ ಕೆಎಸ್​ಸಿಎ ಆಡಳಿತ ಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ದ ನೀರು ಬಳಕೆ ಮಾಡುಲಾಗುತ್ತದೆ ಎಂದು ಹೇಳಿ ಪಂದ್ಯವಾವಳಿಯನ್ನು ನಡೆಸಿತ್ತು.

ಇದನ್ನೂ ಓದಿ IPL 2024: ಬರೋಬ್ಬರಿ 12 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಗೆಲುವು ಸಾಧಿಸಿದ ಕೆಕೆಆರ್​

ಈ ವೇಳೆ ಸ್ಪಷ್ಟನೆ ನೀಡಿದ್ದ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭೇಂದು ಘೋಷ್, ನೀರಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರವು ಹೊರಡಿಸಿರುವ ನೀರು ಬಳಕೆ ಮಾರ್ಗಸೂಚಿಯನ್ನು ನಾವು ಪಾಲಿಸುತ್ತೇವೆ. ಪಿಚ್ ಮತ್ತು ಹೊರಾಂಗಣಕ್ಕಾಗಿ ನಾವು ಯೋಗ್ಯವಾದ ನೀರನ್ನು ಬಳಸುವುದಿಲ್ಲ. ನೀರಿನ ಮೌಲ್ಯ ಏನೆಂಬುವುದು ನಮಗೆ ತಿಳಿದಿದೆ. ಎಸ್‌ಟಿಪಿ ಘಟಕದ ನೀರನ್ನು ನಾವು ಬಳಸುತ್ತಿದ್ದೇವೆ. ಕ್ರೀಡಾಂಗಣದಲ್ಲಿ ಕೆಲವು ಕಾರ್ಯಗಳಿಗಾಗಿ ಬಳಸಲು ಕೂಡ ಇದೇ ಸಂಸ್ಕರಿತ ನೀರು ಬಳಕೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಪಂದ್ಯಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಿರುವುದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ಗಂಭೀರವಾಗಿ ಪರಿಗಣಿಸಿದ್ದು, ನೀರಿನ ಬಳಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಆದೇಶಿಸಿ ಮೇ 2ಕ್ಕೆ ಎರಡನೇ ಹಂತದ ವಿಚಾರಣೆಯನ್ನು ನಿಗದಿಪಡಿಸಿತ್ತು.

ಇದೀಗ ವಿಚಾರಣೆ ನಡೆದಿದ್ದು, ಎನ್‌ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್‌ವೆಲ್‌, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್​ 13ಕ್ಕೆ ನಿಗದಿಪಡಿಸಿದೆ. ಮುಂದಿನ ವಿಚಾರಣೆಗೆ ಇನ್ನೂ ಮೂರು ತಿಂಗಳು ಬಾಕಿ ಇದ್ದು ಈ ವೇಳೆಗಾಗಲೇ ಐಪಿಎಲ್​ ಪಂದ್ಯ ಕೂಡ ಮುಕ್ತಾಯ ಕಂಡಿರುತ್ತದೆ. ಹೀಗಾಗಿ ಈ ಬಾರಿಯ ಆರ್​ಸಿಬಿ ಪಂದ್ಯಗಳಿಗೆ ಯಾವುದೇ ಅಡ್ಡಿ ಉಂಟಾಗದು. ಚಿನ್ನಸ್ವಾಮಿಯಲ್ಲಿ ಇನ್ನು ಕೇವಲ 2 ಪಂದ್ಯ ಮಾತ್ರ ಬಾಕಿ ಉಳಿದಿದೆ. ಇದರಲ್ಲಿ ಒಂದು ಒಂದ್ಯ ಇಂದು(ಶನಿವಾರ) ನಡೆಯಲಿದೆ.

Continue Reading

ಕ್ರೀಡೆ

Josh Baker: 6 ವಿಕೆಟ್‌ ಪಡೆದು ಸ್ನೇಹಿತನ ಮನೆಯಲ್ಲಿ ಶವವಾಗಿ ಪತ್ತೆಯಾದ ಇಂಗ್ಲೆಂಡ್ ಕ್ರಿಕೆಟಿಗ

Josh Baker: ಬುಧವಾರ ಪಂದ್ಯವನ್ನಾಡಿದ ಬಳಿಕ ಬೇಕರ್‌ ಯಾವುದೇ ಸಂಪರ್ಕಕ್ಕೆ ಸಿಗಲಿಲ್ಲ. ಫೋನ್‌ ಮಾಡಿದರೂ ಕೂಡ ರಿಸೀವ್‌ ಮಾಡಿರಲಿಲ್ಲ. ಬಳಿಕ ಅವರು ತಮ್ಮ ಸ್ನೇಹಿತನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

Josh Baker
Koo

ಲಂಡನ್‌: ಬುಧವಾರವಷ್ಟೇ ವೊರ್ಸೆಸ್ಟರ್‌ಶೈರ್‌ ಪರವಾಗಿ 66 ರನ್ನಿಗೆ 6 ವಿಕೆಟ್‌ ಕಿತ್ತು ಅಸಾಮಾನ್ಯ ಬೌಲಿಂಗ್​ ಪ್ರದರ್ಶನ ತೋರಿದ್ದ ಇಂಗ್ಲೆಂಡ್​ ಉದಯೋನ್ಮುಖ ಆಟಗಾರ, 20 ವರ್ಷದ ಜೋಶ್‌ ಬೇಕರ್‌(Josh Baker) ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಬುಧವಾರ ಪಂದ್ಯವನ್ನಾಡಿದ ಬಳಿಕ ಬೇಕರ್‌ ಯಾವುದೇ ಸಂಪರ್ಕಕ್ಕೆ ಸಿಗಲಿಲ್ಲ. ಫೋನ್‌ ಮಾಡಿದರೂ ಕೂಡ ರಿಸೀವ್‌ ಮಾಡಿರಲಿಲ್ಲ. ಬಳಿಕ ಅವರು ತಮ್ಮ ಸ್ನೇಹಿತನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇವರ ಸಾವಿಗೆ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿ, ಐಸಿಸಿ ಸೇರಿ ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಕಂಬನಿ ಮಿಡಿದ್ದಾರೆ.

ಬೇಕರ್ 2021 ರಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದರು. ಎಲ್ಲಾ ಸ್ವರೂಪದ ಕ್ರಿಕೆಟ್​ ಸೇರಿ 47 ಪಂದ್ಯಗಳನ್ನು ಆಡಿ 70 ವಿಕೆಟ್​ಗಳನ್ನು ಪಡೆದಿದ್ದಾರೆ. ಅಂಡರ್​-19 ವಯೋಮಿತಿಯಲ್ಲಿ ಇಂಗ್ಲೆಂಡ್​ ತಂಡವನ್ನು ಪ್ರತಿನಿಧಿಸಿದ್ದರು. ಸ್ಪಿನ್​ ಬೌಲರ್​ ಆಗಿದ್ದ ಜೋಶ್‌ ಬೇಕರ್‌ ಭವಿಷ್ಯದ ಇಂಗ್ಲೆಂಡ್​ ತಂಡದ ಆಟಗಾರನೆಂದೆ ಗುರುತಿಸಿಕೊಂಡಿದ್ದರು. ಆದರೆ ಈಗ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ IPL 2024: ಬರೋಬ್ಬರಿ 12 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಗೆಲುವು ಸಾಧಿಸಿದ ಕೆಕೆಆರ್​

‘ಜೋಶ್ ಅವರ ನಿಧನದ ಸುದ್ದಿ ನಮ್ಮೆಲ್ಲರನ್ನು ಕಂಗಾಲಾಗಿಸಿದೆ. ಜೋಶ್ ತಂಡದ ಸಹ ಆಟಗಾರನಿಗಿಂತ ಹೆಚ್ಚು. ಅವರು ನಮ್ಮ ಕ್ರಿಕೆಟ್ ಕುಟುಂಬದ ಅವಿಭಾಜ್ಯ ಅಂಗವಾಗಿದ್ದರು. ನಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗಳು ಜೋಶ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಲ್ಲುತ್ತದೆ ”ಎಂದು ಗೈಲ್ಸ್ ಹೇಳಿದರು.

ಕ್ರಿಕೆಟ್​ ಸಾಧನೆ


ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 22 ಪಂದ್ಯ ಆಡಿರುವ ಜೋಶ್ 43 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿ 411 ರನ್​ ಗಳಿಸಿದ್ದಾರೆ. 84ಕ್ಕೆ 5 ವಿಕೆಟ್​ ಉತ್ತಮ ವೈಯಕ್ತಿಕ ಸಾಧನೆಯಾಗಿದೆ. ಲಿಸ್ಟ್​ ಎ ಕ್ರಿಕೆಟ್​ನಲ್ಲಿ 17 ಪಂದ್ಯಗಳಿಂದ 24 ವಿಕೆಟ್​, ಟಿ20 ಕ್ರಿಕೆಟ್​ನಲ್ಲಿ 8 ಪಂದ್ಯ ಆಡಿ 3 ವಿಕೆಟ್​ ಪಡೆದಿದ್ದಾರೆ.

Continue Reading

ಕ್ರೀಡೆ

IPL 2024: ಬರೋಬ್ಬರಿ 12 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಗೆಲುವು ಸಾಧಿಸಿದ ಕೆಕೆಆರ್​

IPL 2024: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಮುಂಬೈ ತಂಡಕ್ಕೆ ಚೇಸಿಂಗ್​ ವೇಳೆ ಎದುರಾದ 5ನೇ ಸೋಲು ಇದಾಗಿದೆ. 6 ಪಂದ್ಯಗಳಲ್ಲಿ ಮುಂಬೈ ಚೇಸಿಂಗ್​ ನಡೆಸಿತ್ತು. ಗೆಲುವು ಸಾಧಿಸಿದ್ದು ಒಂದು ಬಾರಿ ಮಾತ್ರ. ಇದು ಆರ್​ಸಿಬಿ ವಿರುದ್ಧ. ಸದ್ಯ ಮುಂಬೈ ತಂಡದ ಪ್ಲೇ ಆಫ್​ ರೇಸ್​ ಬಹುತೇಕ ಅಂತ್ಯ ಕಂಡಿದೆ

VISTARANEWS.COM


on

IPL 2024
Koo

ಮುಂಬಯಿ: ಮುಂಬೈ ಇಂಡಿಯನ್ಸ್(Mumbai Indians)​ ವಿರುದ್ಧ ಕೆಕೆಆರ್​ ನಿನ್ನೆ(ಶುಕ್ರವಾರ) ನಡೆದ ಪಂದ್ಯದಲ್ಲಿ ಗೆಲುವು 24 ರನ್​ಗಳ ಗೆಲುವು ಸಾಧಿಸಿತು. ಇದು ಕೆಕೆಆರ್​ಗೆ(Kolkata Knight Riders) ಬರೋಬ್ಬರಿ 12 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಒಲಿದ ಗೆಲುವಾಗಿದೆ. ಕೆಕೆಆರ್​ ಇಲ್ಲಿ ಕೊನೆಯ ಬಾರಿಗೆ ಗೆದ್ದದ್ದು 2012ರಲ್ಲಿ. ಆ ಪಂದ್ಯದಲ್ಲಿ ಸುನೀಲ್​ ನಾರಾಯಣ್​ 3.1 ಓವರ್​ ಬೌಲಿಂಗ್​ ನಡೆಸಿ ಕೇವಲ 15 ರನ್​ಗೆ 4 ವಿಕೆಟ್​ ಕಿತ್ತು ಗೆಲುವಿನ ಹೀರೊ ಎನಿಸಿಕೊಂಡಿದ್ದರು. ಕೆಕೆಆರ್​ ಈ ಪಂದ್ಯವನ್ನು 32 ರನ್​ ಅಂತರದಿಂದ ಗೆದ್ದಿತ್ತು. ಕೆಕೆಆರ್​ ವಾಂಖೆಡೆಯಲ್ಲಿ ಇದುವರೆಗೆ 11 ಪಂದ್ಯ ಆಡಿ 2 ಗೆಲುವು ಸಾಧಿಸಿದೆ.

ಈ ಬಾರಿಯ ಐಪಿಎಲ್​ನಲ್ಲಿ(IPL 2024) ಮುಂಬೈ ತಂಡಕ್ಕೆ ಚೇಸಿಂಗ್​ ವೇಳೆ ಎದುರಾದ 5ನೇ ಸೋಲು ಇದಾಗಿದೆ. 6 ಪಂದ್ಯಗಳಲ್ಲಿ ಮುಂಬೈ ಚೇಸಿಂಗ್​ ನಡೆಸಿತ್ತು. ಗೆಲುವು ಸಾಧಿಸಿದ್ದು ಒಂದು ಬಾರಿ ಮಾತ್ರ. ಇದು ಆರ್​ಸಿಬಿ ವಿರುದ್ಧ. ಸದ್ಯ ಮುಂಬೈ ತಂಡದ ಪ್ಲೇ ಆಫ್​ ರೇಸ್​ ಬಹುತೇಕ ಅಂತ್ಯ ಕಂಡಿದೆ. 9ನೇ ಸ್ಥಾನದಲ್ಲಿರುವ ಮುಂಬೈಗೆ ಇನ್ನು ಮೂರು ಪಂದ್ಯ ಬಾಕಿ ಇದೆ. ಈ ಪಂದ್ಯ ಗೆದ್ದರೂ ಕೂಡ 12 ಅಂಕ ಆಗಲಿದೆ. ಪ್ಲೇ ಆಫ್​ಗೆ ಈ ಅಂಕ ಸಾಲದು. ಹೀಗಾಗಿ ತಂಡ ಟೂರ್ನಿಯಿಂದ ಹೊರಬಿದ್ದಿದೆ ಎಂದರೂ ತಪ್ಪಾಗಲಾರದು.

ವಾಖೆಂಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ 19.5 ಓವರ್​ಗಳಲ್ಲಿ 169 ರನ್​ಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ 18.5 ಓವರ್​​ 145 ರನ್​ಗಳಿಗೆ ಶರಣಾಗಿ ಸೋಲೊಪ್ಪಿಕೊಂಡಿತು. ಕೆಕೆಅರ್​ ಪರ ಬ್ಯಾಟಿಂಗ್​ನಲ್ಲಿ ವೆಂಕಟೇಶ್​ ಅಯ್ಯರ್​ (70) ಅರ್ಧ ಶತಕ ಬಾರಿಸಿ ಮಿಂಚಿದರೆ ಬೌಲಿಂಗ್​ನಲ್ಲಿ ಮಿಚೆಲ್ ಸ್ಟಾರ್ಕ್​ 4 ವಿಕೆಟ್ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ IPL 2024 POINTS TABLE: ಕೆಕೆಆರ್​ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

ಬ್ಯಾಟಿಂಗ್​ ಪೂರಕವಾಗಿದ್ದ ಟ್ರ್ಯಾಕ್​ನಲ್ಲಿ ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಕೆಕೆಆರ್​ 57 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ಈ ವೇಳೆ ವೆಂಕಟೇಶ್ ಅಯ್ಯರ್ ಹಾಗೂ ಹಾಲಿ ಆವೃತ್ತಿಯಲ್ಲಿ ಮೊದಲ ಅವಕಾಶ ಪಡೆದ ಮನೀಶ್ ಪಾಂಡೆ 42 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರಿಬ್ಬರ ನೆರವಿನಿಂದ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ಕೆಕೆಆರ್​ಗೆ ಸಾಧ್ಯವಾಯಿತು. ಅಂಗ್​ಕ್ರಿಶ್​ ರಘುವಂಶಿ 13 ರನ್ ಬಾರಿಸಿ ಕೆಕೆಆರ್​ ಪರ ಎರಡಂಕಿ ಮೊತ್ತ ದಾಟಿದ ಎರಡನೇ ಆಟಗಾರ ಎನಿಸಿಕೊಂಡರು. ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

Continue Reading
Advertisement
Viral Video
ವೈರಲ್ ನ್ಯೂಸ್1 min ago

Viral Video:ʼವಡಾಪಾವ್‌ ಗರ್ಲ್‌ʼನ ಬೀದಿ ರಂಪಾಟ; ಸೋಶಿಯಲ್ ಮೀಡಿಯಾ ಸ್ಟಾರ್‌ನ ವಿಡಿಯೋ ಫುಲ್‌ ವೈರಲ್‌

IPL 2024
ಬೆಂಗಳೂರು18 mins ago

Traffic Restrictions: ಐಪಿಎಲ್‌ ಕ್ರಿಕೆಟ್‌; ಈ ರೋಡ್‌ನಲ್ಲಿ ಅಪ್ಪಿತಪ್ಪಿಯೂ ಪಾರ್ಕಿಂಗ್ ಮಾಡಬೇಡಿ

Rahul Gandhi
Lok Sabha Election 202419 mins ago

Rahul Gandhi: ರಾಹುಲ್‌ ಗಾಂಧಿಗೆ ಸ್ವಂತ ಕಾರು, ಮನೆ ಇಲ್ಲ; ಇಲ್ಲಿದೆ ಕಾಂಗ್ರೆಸ್‌ ಮುಖಂಡ ಘೋಷಿಸಿದ ಆಸ್ತಿ ವಿವರ

IPL 2024
ಕ್ರೀಡೆ41 mins ago

IPL 2024: ಕೆಎಸ್‌ಸಿಎಗೆ ಮತ್ತೆ ಸಂಕಷ್ಟ; ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!

Amith Shah
ದೇಶ51 mins ago

Amit Shah: ಕಾಂಗ್ರೆಸ್ ಹಿಂದುಳಿದ, ಪರಿಶಿಷ್ಟರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಿದೆ; ನಾವು ತೆಗೆದುಹಾಕುತ್ತೇವೆ: ಅಮಿತ್ ಶಾ

Bribery Case in Bengaluru news
ಬೆಂಗಳೂರು53 mins ago

Bribery Case : ಕಾಸಿನ ಜತೆಗೆ ಎಣ್ಣೆ ಕೊಟ್ರಷ್ಟೇ ಫೈಲ್‌ ಮೂಮ್ಮೆಂಟ್‌ ; ಇದು ಕುಡುಕ ಪಂಚಾಯಿತಿ ಪಿಡಿಓ ಲಂಚಾವತಾರ

HD Deve gowda prajwal revanna case
ಬೆಂಗಳೂರು57 mins ago

Prajwal Revanna Case: ಮೊಮ್ಮಗನ ದೆಸೆಯಿಂದ ದೇವೇಗೌಡರ ಆರೋಗ್ಯ ಏರುಪೇರು, ಕುಟುಂಬದಿಂದ ತೀವ್ರ ನಿಗಾ

MP High Court
ದೇಶ1 hour ago

MP High Court: ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ; ಮಹತ್ವದ ತೀರ್ಪು ಪ್ರಕಟಿಸಿದ ಕೋರ್ಟ್‌

Aishwarya Rajinikanth new house priceless reaction Rajinikanth
ಕಾಲಿವುಡ್1 hour ago

Aishwarya Rajinikanth: ಮಗಳ ಹೊಸ ಮನೆ ಕಂಡು ಹುಬ್ಬೇರಿಸಿದ ರಜನಿಕಾಂತ್!

Josh Baker
ಕ್ರೀಡೆ1 hour ago

Josh Baker: 6 ವಿಕೆಟ್‌ ಪಡೆದು ಸ್ನೇಹಿತನ ಮನೆಯಲ್ಲಿ ಶವವಾಗಿ ಪತ್ತೆಯಾದ ಇಂಗ್ಲೆಂಡ್ ಕ್ರಿಕೆಟಿಗ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ21 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌