Ind vs wi : ಕರಿ ಚಿರತೆಗಳಂತೆ ಡೊಮಿನಿಕಾಗೆ ತೆರಳಿದ ಭಾರತ ಕ್ರಿಕೆಟ್ ತಂಡದ ಆಟಗಾರರು! - Vistara News

ಕ್ರಿಕೆಟ್

Ind vs wi : ಕರಿ ಚಿರತೆಗಳಂತೆ ಡೊಮಿನಿಕಾಗೆ ತೆರಳಿದ ಭಾರತ ಕ್ರಿಕೆಟ್ ತಂಡದ ಆಟಗಾರರು!

ವಿಂಡೀಸ್ ವಿರುದ್ಧ ಸರಣಿಗೆ ಮೊದಲು (Ind vs wi) ಬಾರ್ಬಡೋಸ್​ನಲ್ಲಿ ತರಬೇತಿ ಶಿಬಿರ ಆಯೋಜಿಸುವ ಮೂಲಕ ಆಟಗಾರರ ಸದೃಢತೆ ಹಾಗೂ ಕೌಶಲ ವೃದ್ಧಿಗೆ ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​ ಮುಂದಾಗಿದೆ.

VISTARANEWS.COM


on

Team India
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪೋರ್ಟ್​ ಆಫ್​ ಸ್ಪೇನ್​: ವೆಸ್ಟ್ ಇಂಡೀಸ್​ ತಂಡದ ವಿರುದ್ದದ ಕ್ರಿಕೆಟ್​ ಸರಣಿಯಲ್ಲಿ ಪಾಲ್ಗೊಳ್ಳಲು ಹೋಗಿರುವ ಭಾರತ ತಂಡಕ್ಕೆ ಬಾರ್ಬಡೋಸ್​ನಲ್ಲಿ 5 ದಿನಗಳ ಶಿಬಿರ ನಡೆಸಲಾಗಿದೆ. ಇದೀಗ ಜುಲೈ 12ರಿಂದ ವಿಂಡ್ಸರ್ ಪಾರ್ಕ್​ನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್​ ಪಂದ್ಯಕ್ಕೆ ಮೊದಲು ಅಂತಿಮ ಸಿದ್ಧತೆಗಳನ್ನು ನಡೆಸಲಿದೆ. ಅದಕ್ಕಾಗಿ ಟೀಮ್​ ಇಂಡಿಯಾ ಡೊಮಿನಿಕಾಕ್ಕೆ ತೆರಳಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಸೇರಿದಂತೆ ಆಟಗಾರರು ಒಟ್ಟಾಗಿ ಪ್ರಯಾಣ ನಡೆಸಿದ್ದಾರೆ. ಏತನ್ಮಧ್ಯೆ ಪ್ರಯಾಣದ ನಡುವೆ ಆಟಗಾರರು ಧರಿಸಿದ್ದ ಜೆರ್ಸಿ ಅಭಿಮಾನಿಗಳ ಗಮನ ಸೆಳೆದಿದೆ. ಕಪ್ಪು ಬಣ್ಣದ ಅವರ ಟಿ ಶರ್ಟ್​​ ಬಗ್ಗೆ ಮೆಚ್ಚುಗೆಗಳು ವ್ಯಕ್ತಗೊಂಡಿವೆ.

ಭಾರತ ತಂಡದ ಜೆರ್ಸಿ ಪ್ರಾಯೋಜಕ ಕಂಪನಿ ಇತ್ತೀಚೆಗೆ ಬದಲಾಗಿದೆ. ಹಿಂದೆ ನೈಕಿ ಕಂಪನಿಯು ಭಾರತಕ್ಕೆ ಜೆರ್ಸಿಯನ್ನು ನೀಡುತ್ತಿತ್ತು. ಈಗ ಅಡಿಡಾಸ್ ಸಂಸ್ಥೇ ನೀಡುತ್ತಿದೆ. ನೈಕಿ ಸಂಸ್ಥೆ ನೀಲಿ ಬಣ್ಣದ ಜೆರ್ಸಿಯನ್ನೇ ಭಾರತ ತಂಡದ ಆಟಗಾರರಿಗೆ ನೀಡುತ್ತಿತ್ತು. ಆದರೆ, ಅಡಿಡಾಸ್ ಕಪ್ಪು ಬಣ್ಣದ ಜೆರ್ಸಿ ಕೊಟ್ಟಿದ್ದಾರೆ. ಅದನ್ನು ಹಾಕಿಕೊಂಡು ಆಟಗಾರರು ಮಿರಮಿರ ಮಿಂಚಿದ್ದಾರೆ.

ಬಾರ್ಬಡೋಸ್ ಶಿಬಿರದ ಪ್ರಾಥಮಿಕ ಗುರಿಯೇ ತಂಡದ ದೌರ್ಬಲ್ಯಗಳನ್ನು ಸರಿಪಡಿಸುವುದು. ಜತೆಗೆ ಯುವ ಆಟಗಾರರನ್ನು ಮೌಲ್ಯಮಾಪನ ಮಾಡುವುದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರಿಗೆ ಅಭ್ಯಾಸಕ್ಕೆ ಅವಕಾಶ ಮಾಡಿಕೊಡುವುದಾಗಿದೆ.

ಯಶಸ್ವಿ ಜೈಸ್ವಾಲ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳುವುದು ತಂಡ ರೂಪ ಬದಲಾಗುವ ಸೂಚನೆಯಾಗಿದೆ. ಅವರು ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡಿದ್ದು, 76 ಎಸೆತಗಳಲ್ಲಿ 54 ರನ್ ಗಳಿಸಿದ್ದಾರೆ. ಈಗ ಆರಂಭಿಕ ಸ್ಥಾನವನ್ನು ಅಲಂಕರಿಸಲು ಸಜ್ಜಾಗಿದ್ದಾರೆ.

ಅಭ್ಯಾಸ ಪಂದ್ಯ ಮತ್ತು ನೆಟ್ ಸೆಷನ್​ಗಳಲ್ಲಿ ಜೈಸ್ವಾಲ್ ಅವರು ತೋರಿದ ಪ್ರದರ್ಶನದಿಂದಾಗಿ ಕೋಚ್​ ರಾಹುಲ್ ದ್ರಾವಿಡ್ ಪ್ರಭಾವಿತರಾಗಿದ್ದಾರೆ ಅಭ್ಯಾಸದ ವೇಳೆ ದ್ರಾವಿಡ್ ಜೈಸ್ವಾಲ್ ಅವರನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಜಯದೇವ್ ಉನಾದ್ಕಟ್ ಅವರ ಬೌಲಿಂಗ್ ಎದುರಿಸುವ ವೇಳೆ ವಿಶೇಷ ತರಬೇತಿ ನೀಡುತ್ತಿದ್ದರು. ಆರಾಮವಾಗಿ ಆಡುವಂತೆ ಪ್ರೇರೇಪಿಸಿದ್ದರು.

ಇದನ್ನೂ ಓದಿ : Afghanistan Cricket : ವಿಷ ಹಾಕಿ ಅಫಘಾನಿಸ್ತಾನ ಕ್ರಿಕೆಟಿಗನ ಕೊಲೆ ಯತ್ನ!

ಜೈಸ್ವಾಲ್ ಆರಂಭದಲ್ಲಿ ಇಂತಹ ಸ್ವಿಂಗ್ ಎಸೆತಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಏಕೆಂದರೆ ವಿಂಡೀಸ್​ನಲ್ಲಿ ಟೆಸ್ಟ್​ಗೆ ಬಳಸುವ ಡ್ಯೂಕ್ಸ್ ಚೆಂಡು ಹೆಚ್ಚು ತಿರುವು ಪಡೆಯುತ್ತಿರುತ್ತವೆ. ವಿಂಡ್ಸರ್ ಪಾರ್ಕ್ನಲ್ಲಿನ ಮೈದಾನವು ಬಹುಶಃ ಒಣಗಿರುವ ಸಾಧ್ಯತೆಗಳಿವೆ. ಹೀಗಾಗಿ ಹೆಚ್ಚಾಗಿ ಸ್ವಿಂಗ್ ಮಾಡುವ ಅವಕಾಶ ಬೌಲರ್​ಗಳಿಗೆ ನೀಡುತ್ತದೆ. ಹೀಗಾಗಿ ಭಾರತ ತಂಡದ ಬ್ಯಾಟರ್​ಗಳು ಹೆಚ್ಚು ಜತನದಿಂದ ಆಡುವ ಸಾಧ್ಯತೆಗಳಿವೆ.

ಚೇತೇಶ್ವರ್ ಪೂಜಾರ ಅವರ 3ನೇ ಕ್ರಮಾಂಕದ ಸ್ಥಾನವನ್ನು ತುಂಬಲು ಶುಬ್ಮನ್ ಗಿಲ್ ಸಜ್ಜಾಗಿದ್ದು, ಕನಿಷ್ಠ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಹೊಸ ಆರಂಭಿಕ ಆಟಗಾರನನ್ನು ಹೊಂದಲಿದೆ. ಜೈಸ್ವಾಲ್ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.

ಭಾರತ-ವಿಂಡೀಸ್ ಟೆಸ್ಟ್ ಸರಣಿ ವೇಳಾಪಟ್ಟಿ

ಜುಲೈ 12-16: ಮೊದಲ ಟೆಸ್ಟ್ ಪಂದ್ಯ, ವಿಂಡ್ಸರ್ ಪಾರ್ಕ್, ಡೊಮಿನಿಕಾ

ಜುಲೈ 20-24: ಎರಡನೇ ಟೆಸ್ಟ್ ಪಂದ್ಯ, ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IND vs PAK : ಭಾರತದ ಎದುರು ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ; ಕಡಿಮೆ ಸ್ಕೋರ್ ಇದ್ದಾಗಲೂ 6 ರನ್ ಸೋಲು

IND vs PAK : ಮೊದಲು ಬ್ಯಾಟ್ ಮಾಡಿದ ಭಾರತ ತಂಡ 18.3 ಓವರ್​ಗಳಲ್ಲಿ 119 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಾಕಿಸ್ತಾನ ತಂಡ ಭಾರತದ ಭರ್ಜರಿ ಬೌಲಿಂಗ್​ಗೆ ಹೆದರಿ.. ತನ್ನ ಪಾಲಿನ 20 ಓವರ್​ಗಳಲ್ಲಿ 7 ವಿಕೆಟ್​ಗೆ 113 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

ind vs pak
Koo

ಬೆಂಗಳೂರು: ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವ ಕಪ್​ ಲೀಗ್​ ಪಂದ್ಯದಲ್ಲಿ ಭಾರತ ತಂಡ (IND vs PAK) ಜಯ ಸಾಧಿಸಿದೆ. ಈ ಮೂಲಕ ಭಾರತ ತಂಡ ಹಾಲಿ ವಿಶ್ವ ಕಪ್​ನಲ್ಲಿ ಎರಡನೇ ವಿಜಯ ದಾಖಲಿದೆ. ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್​ ವಿರುದ್ಧ ಗೆಲುವು ದಾಖಲಿಸಿತ್ತು. ಇದೀಗ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಪಾಕ್​ ತಂಡವನ್ನು ಮಣಿಸಿದೆ. ಪ್ರಶಸ್ತಿ ಕಡೆಗೆ ಮುನ್ನುಗ್ಗುವ ಯೋಚನೆಯಲ್ಲಿರುವ ಭಾರತ ತಂಡಕ್ಕೆ ಈ ವಿಜಯದಿಂದ ಭಾರೀ ವಿಶ್ವಾಸ ದೊರಕಿದೆ. ಇದು ಭಾರತ ತಂಡಕ್ಕೆ ಟಿ20 ವಿಶ್ವ ಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ದೊರೆಯುತ್ತಿರುವ 8ನೇ ವಿಜಯ. ಒಂದೇ ಬಾರಿ ಪಾಕಿಸ್ತಾನ ಗೆಲುವು ದಾಖಲಿಸಿದೆ. ಅಲ್ಲದೆ 2023ರಲ್ಲಿ ಭಾರತದಲ್ಲಿ ನಡೆದಿದ್ದ ಏಕ ದಿನ ವಿಶ್ವ ಕಪ್​ನಲ್ಲಿಯೂ ಭಾರತ ತಂಡ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು.

ಇಲ್ಲಿನ ನಸ್ಸೌ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 18.3 ಓವರ್​ಗಳಲ್ಲಿ 119 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಾಕಿಸ್ತಾನ ತಂಡ ಭಾರತದ ಭರ್ಜರಿ ಬೌಲಿಂಗ್​ಗೆ ಹೆದರಿ.. ತನ್ನ ಪಾಲಿನ 20 ಓವರ್​ಗಳಲ್ಲಿ 7 ವಿಕೆಟ್​ಗೆ 113 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಬೌಲಿಂಗ್​ಗೆ ನೆರವಾಗುತ್ತಿದ್ದ ಪಿಚ್​ನಲ್ಲಿ ಭಾರತೀಯ ಬೌಲರ್​ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು. ಬ್ಯಾಟರ್​ಗಳು ಪೇರಿಸಿದ್ದ 113 ರನ್​ಗಳ ಮೊತ್ತವನ್ನು ಕಾಪಾಡಿದರು.

2007ರ ಟಿ20 ವಿಶ್ವಕಪ್​ನ ನಂತರದಿಂದದ 8ನೇ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವಕಪ್ ಈ ಹಿಂದಿನ 7 ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದ್ದರೆ ಪಾಕಿಸ್ತಾನ ಒಂದು ಬಾರಿ ಗೆದ್ದಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ 2ರಲ್ಲಿ ಬಾರಿ ಭಾರತ ಗೆದ್ದಿದೆ. 2021ರಲ್ಲಿ ಭಾರತದ ವಿರುದ್ಧ ಪಾಕ್ ವಿಜಯ ಕಂಡುಕೊಂಡಿತ್ತು
2007ರ ಟಿ20 ವಿಶ್ವಕಪ್​ನ ನಂತರದಿಮದ 8ನೇ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವಕಪ್ ಈ ಹಿಂದಿನ 7 ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದ್ದರೆ ಪಾಕಿಸ್ತಾನ ಒಂದು ಬಾರಿ ಗೆದ್ದಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ 2ರಲ್ಲಿ ಬಾರಿ ಭಾರತ ಗೆದ್ದಿದೆ. 2021ರಲ್ಲಿ ಭಾರತದ ವಿರುದ್ಧ ಪಾಕ್ ವಿಜಯ ಕಂಡುಕೊಂಡಿತ್ತು.

ಹಿಂದಿನ ಬಾರಿ ಕೊಹ್ಲಿ ಗೆಲ್ಲಿಸಿದ್ದರು

ಕಳೆದ ವರ್ಷ ನಡೆದ ಟಿ20 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ, ಪಾಕ್ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಪವರ್​​​ಪ್ಲೇನಲ್ಲಿ 32ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ರೋಚಕ ಗೆಲುವು ತಂದಿದ್ದರು. ಕೊಹ್ಲಿ 52 ಎಸೆತಗಳಲ್ಲಿ ಅಜೇಯ 82 ರನ್ ಚಚ್ಚಿ ಅವಿಸ್ಮರಣೀಯ ಇನಿಂಗ್ಸ್ ಆಡಿದ್ದರು.

ವಿಶ್ವ ಕಪ್​ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಐರ್ಲೆಂಡ್ ಎದುರಿನ ತನ್ನ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಅಮೋಘ ಜಯ ಸಾಧಿಸಿದೆ. ಇದೀಗ ಪಾಕಿಸ್ತಾನ ವಿರುದ್ಧಗೂ ಗೆಲುವು ಸಾಧಿಸಿ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: IND vs PAK : ವಿರಾಟ್​ ಕೊಹ್ಲಿಯಿಂದ ಆಟೋಗ್ರಾಫ್ ಪಡೆದುಕೊಂಡ ಕ್ರಿಸ್​ ಗೇಲ್​! ಇಲ್ಲಿದೆ ವಿಡಿಯೊ

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ ಅರ್ಧ ಗಂಟೆ ತಡವಾಗಿ ಆರಂಭವಾಗಿದೆ. ಸ್ಥಳೀಯ ಸಮಯ ಬೆಳಗ್ಗೆ 10 ಗಂಟೆಗೆ ಹಾಗೂ ಭಾರತದ ಸಮಯ ಸಂಜೆ 7.30ಕ್ಕೆ ನಡೆಯಬೇಕಾಗಿದ್ದ ಟಾಸ್​ ಮಳೆಯಿಂದಾಗಿ ತಡವಾಯಿತು. ಪಂದ್ಯ ಆರಂಭಗೊಂಡು ಒಂದು ಓವರ್​ ಆದ ಬಳಿಕ ಮತ್ತೆ ಮಳೆ ಸುರಿಯಿತು. ಕೊನೆಗೂ ಪಂದ್ಯ ನಡೆದು ಭಾರತಕ್ಕೆ ಜಯ ಸಿಕ್ಕಿತು.

Continue Reading

ಪ್ರಮುಖ ಸುದ್ದಿ

IND vs PAK : ವಿರಾಟ್​ ಕೊಹ್ಲಿಯಿಂದ ಆಟೋಗ್ರಾಫ್ ಪಡೆದುಕೊಂಡ ಕ್ರಿಸ್​ ಗೇಲ್​! ಇಲ್ಲಿದೆ ವಿಡಿಯೊ

IND vs PAK: ಮಳೆಯಿಂದಾಗಿ ಪಂದ್ಯದ ಟಾಸ್ ವಿಳಂಬವಾಯಿತು. ಮತ್ತು ಎರಡೂ ತಂಡಗಳ ಆಟಗಾರರು ಪಂದ್ಯಕ್ಕೆ ತಯಾರಿ ನಡೆಸಲು ಮೈದಾನದಲ್ಲಿ ಜಮಾಯಿಸಿದ್ದರು. ಈ ವೇಳೆ ವೆಸ್ಟ್ ಇಂಡೀಸ್​​​ನ ಮಾಜಿ ಕ್ರಿಸ್ ಗೇಲ್ ವಿಶೇಷ ಪೋಷಾಕಿನಲ್ಲಿ ಕಾಣಿಸಿಕೊಂಡರು. ಯೂನಿವರ್ಸ್ ಬಾಸ್ ದೊಡ್ಡ ಪಂದ್ಯಕ್ಕಾಗಿ ಕಸ್ಟಮೈಸ್ ಮಾಡಿದ ಸೂಟ್ ನೊಂದಿಗೆ ಎಲ್ಲರ ಗಮನ ಸೆಳೆದರು.

VISTARANEWS.COM


on

IND vs PAK:
Koo

ಬೆಂಗಳೂರು: ಐಸಿಸಿ ಟಿ 20 ವಿಶ್ವಕಪ್ 2024 ರ 19 ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (IND vs PAK) ಪರಸ್ಪರ ಮುಖಾಮುಖಿಯಾಗಿವೆ. ನ್ಯೂಯಾರ್ಕ್​​ನ ನಸ್ಸಾವು ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿದೆ. ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನ್ಯೂಯಾರ್ಕ್​ನ ಪರಿಸ್ಥಿತಿಗಳು ಇಲ್ಲಿಯವರೆಗೆ ವೇಗಿಗಳಿಗೆ ಸೂಕ್ತವಾಗಿವೆ ಮತ್ತು ಪಾಕಿಸ್ತಾನವು ಅದನ್ನು ಹೆಚ್ಚು ಬಳಸಿಕೊಳ್ಳಲು ನೋಡಿದೆ. ಆಡಲಾದ ಎಲ್ಲಾ ಪಂದ್ಯಗಳು ಕಡಿಮೆ ಸ್ಕೋರಿಂಗ್ ಪಂದ್ಯಗಳಾಗಿವೆ.

ಮಳೆಯಿಂದಾಗಿ ಪಂದ್ಯದ ಟಾಸ್ ವಿಳಂಬವಾಯಿತು. ಮತ್ತು ಎರಡೂ ತಂಡಗಳ ಆಟಗಾರರು ಪಂದ್ಯಕ್ಕೆ ತಯಾರಿ ನಡೆಸಲು ಮೈದಾನದಲ್ಲಿ ಜಮಾಯಿಸಿದ್ದರು. ಈ ವೇಳೆ ವೆಸ್ಟ್ ಇಂಡೀಸ್​​​ನ ಮಾಜಿ ಕ್ರಿಸ್ ಗೇಲ್ ವಿಶೇಷ ಪೋಷಾಕಿನಲ್ಲಿ ಕಾಣಿಸಿಕೊಂಡರು. ಯೂನಿವರ್ಸ್ ಬಾಸ್ ದೊಡ್ಡ ಪಂದ್ಯಕ್ಕಾಗಿ ಕಸ್ಟಮೈಸ್ ಮಾಡಿದ ಸೂಟ್ ನೊಂದಿಗೆ ಎಲ್ಲರ ಗಮನ ಸೆಳೆದರು.

ಅವರ ಸೂಟಿನ ಒಂದು ಭಾಗವು ಭಾರತೀಯ ಧ್ವಜದ ಬಣ್ಣಗಳನ್ನು ಹೊಂದಿದ್ದರೆ, ಇನ್ನೊಂದು ಬದಿಯಲ್ಲಿ ಪಾಕಿಸ್ತಾನ ಧ್ವಜದ ಹಸಿರು ಬಣ್ಣವಿತ್ತು. ಅವರು ತಮ್ಮ ಸೂಟ್​​ನಲ್ಲಿ ಕೆಲವು ಸ್ಟಾರ್ ಆಟಗಾರರ ಹಸ್ತಾಕ್ಷರಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂತು. ವಿರಾಟ್ ಕೊಹ್ಲಿ, ಬಾಬರ್ ಅಜಮ್ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರು ತಮ್ಮ ಸೂಟ್​ ಮೇಳೆ ಸಹಿ ಹಾಕಿದರು.

ನಿರ್ಣಾಯಕ ಗೆಲುವಿನ ಮೇಲೆ ಕಣ್ಣಿಟ್ಟ ಉಭಯ ತಂಡಗಳು

ಈ ಆಟವು ಎರಡೂ ತಂಡಗಳಿಗೆ ನಿರ್ಣಾಯಕ ಗೆಲುವು ಮತ್ತು ಪಂದ್ಯಾವಳಿಯಲ್ಲಿ ತಮ್ಮ ಪ್ರಗತಿಯನ್ನು ಚೆನ್ನಾಗಿ ನಿರ್ಧರಿಸಬಹುದು. ಪಾಕಿಸ್ತಾನವು ಯುಎಸ್ಎ ವಿರುದ್ಧದ ಸೋಲಿನೊಂದಿಗೆ ತನ್ನ ಅಭಿಯಾನ ಪ್ರಾರಂಭಿಸಿದೆ. ಹೆಚ್ಚಿನ ಹಿನ್ನಡೆ ಸಹಿಸಲು ಸಾಧ್ಯವಿಲ್ಲ. ಇಂದು ಭಾರತ ವಿರುದ್ಧದ ಸೋಲು ಟಿ 20 ವಿಶ್ವಕಪ್​ನಲ್ಲಿ ಗ್ರೂಪ್ ಹಂತದಲ್ಲಿ ತನ್ನ ಅಭಿಯಾನವನ್ನು ಕೊನೆಗೊಳಿಸುವ ಸಾಮರ್ಥ್ಯವೂ ಇದೆ.

ಇದನ್ನೂ ಓದಿ: IND vs PAK : ಮರೆಗುಳಿ ರೋಹಿತ್​; ಜೇಬಿನಲ್ಲಿ​ ಕಾಯಿನ್​ ಇಟ್ಟು ಹುಡುಕಾಡಿದ ಭಾರತ ತಂಡದ ನಾಯಕ

ಐರ್ಲೆಂಡ್ ವಿರುದ್ಧ ಭಾರತ 8 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿದೆ. ಭಾರತವು ಅದೇ ಸ್ಥಳದಲ್ಲಿ ಪಂದ್ಯವನ್ನು ಗೆದ್ದಿದೆ ಮತ್ತು ಪರಿಸ್ಥಿತಿಗಳ ಲಾಭ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಪಾಕಿಸ್ತಾನ ವಿರುದ್ಧದ ಗೆಲುವು ಭಾರತವನ್ನು ಸೂಪರ್ 8 ಹಂತದಲ್ಲಿ ಸ್ಥಾನ ಪಡೆಯಲು ಉತ್ತಮ ಸ್ಥಾನದಲ್ಲಿರಿಸುತ್ತದೆ. ಆದರೆ ಸೋಲು ಅವರಿಗೆ ವಿಷಯಗಳನ್ನು ತುಂಬಾ ಕಷ್ಟ ಎನಿಸಿಕೊಳ್ಳಲಿದೆ.

Continue Reading

ಪ್ರಮುಖ ಸುದ್ದಿ

IND vs PAK : ಮರೆಗುಳಿ ರೋಹಿತ್​; ಜೇಬಿನಲ್ಲಿ​ ಕಾಯಿನ್​ ಇಟ್ಟು ಹುಡುಕಾಡಿದ ಭಾರತ ತಂಡದ ನಾಯಕ

IND vs PAK : ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಆಟಕ್ಕೆ ಇಳಿಯವು ಮೊದಲು ಟಾಸ್​ ವೇಳೆ ಉಲ್ಲಾಸಕರ ಘಟನೆ ನಡೆಯಿತು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ತಮ್ಮ ಮರೆಗುಳಿತನ ತೋರಿಸಿದ್ದರಿಂದ ಈ ಪ್ರಸಂಗ ಹಾಸ್ಯಮಯವಾಯಿತು. ರವಿಶಾಸ್ತ್ರಿ ಅವರು ಭಾರತದ ಸ್ಟಾರ್ ಆಟಗಾರನಿಗೆ ನಾಣ್ಯ ಚಿಮ್ಮಿಸಲು ಕೇಳಿದ ನಂತರ ಅವರು ಹುಡುಕಾಡಿದರು. ಬಳಿಕ ಜೇಬಿನಲ್ಲಿದೆ ಎಂದು ಅರಿತುಕೊಂಡು ನಗಾಡಿದರು.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಐಸಿಸಿ ಟಿ 20 ವಿಶ್ವಕಪ್ 2024 ರ 19 ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ಪರಸ್ಪರ ಮುಖಾಮುಖಿಯಾಗಿದೆ. ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಬರ್ ಅಝಾಮ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನ್ಯೂಯಾರ್ಕ್ನಲ್ಲಿನ ಪರಿಸ್ಥಿತಿಗಳು ಇಲ್ಲಿಯವರೆಗೆ ವೇಗದ ಬೌಲರ್​ಗಳಿಗೆ ಸೂಕ್ತವಾಗಿವೆ. ಪಾಕಿಸ್ತಾನದ ಅಸಾಧಾರಣ ವೇಗಿಗಳು ಅದನ್ನು ಹೆಚ್ಚು ಬಳಸಿಕೊಳ್ಳಲು ನೋಡಲಿದ್ದಾರೆ. ಪಾಕಿಸ್ತಾನವು ಕೆಲವೇ ಎಸೆತಗಳಲ್ಲಿ ಆಟದ ಗತಿಯನ್ನು ಬದಲಾಯಿಸಬಲ್ಲ ಹಲವಾರು ವೇಗಿಗಳನ್ನು ಹೊಂದಿರುವುದರಿಂದ ಮತ್ತು ಭಾರತವು ಪ್ರಬಲ ಬ್ಯಾಟಿಂಗ್ ಲೈನ್ಅಪ್ ಅನ್ನು ಹೊಂದಿರುವುದರಿಂದ, ಭಾರತ ಮತ್ತು ಪಾಕಿಸ್ತಾನ ಪಂದ್ಯವು ಉತ್ತಮ ಸ್ಪರ್ಧೆಯಾಗುವ ಎಲ್ಲ ಲಕ್ಷಣಗಳಿವೆ.

ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಆಟಕ್ಕೆ ಇಳಿಯವು ಮೊದಲು ಟಾಸ್​ ವೇಳೆ ಉಲ್ಲಾಸಕರ ಘಟನೆ ನಡೆಯಿತು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ತಮ್ಮ ಮರೆಗುಳಿತನ ತೋರಿಸಿದ್ದರಿಂದ ಈ ಪ್ರಸಂಗ ಹಾಸ್ಯಮಯವಾಯಿತು. ರವಿಶಾಸ್ತ್ರಿ ಅವರು ಭಾರತದ ಸ್ಟಾರ್ ಆಟಗಾರನಿಗೆ ನಾಣ್ಯ ಚಿಮ್ಮಿಸಲು ಕೇಳಿದ ನಂತರ ಅವರು ಹುಡುಕಾಡಿದರು. ಬಳಿಕ ಜೇಬಿನಲ್ಲಿದೆ ಎಂದು ಅರಿತುಕೊಂಡು ನಗಾಡಿದರು.

ಟಾಸ್ ವೇಳೆ ಮಾತನಾಡಿದ ರೋಹಿತ್, “ನಾನು ಮೊದಲು ಬೌಲಿಂಗ್ ಮಾಡಲು ಬಯಸಿದ್ದೆ. ಆದರೆ ಬ್ಯಾಟಿಂಗ್​ ಮಾಡಲಿದ್ದೇವೆ. ಉತ್ತಮ ಸ್ಕೋರ್ ಏನು ಎಂಬ ಕಲ್ಪನೆಯೊಂದಿಗೆ ಆಡಲಿದ್ದೇವೆ. ಹಿಂದಿನ ಪಂದ್ಯದ ಮೂಲಕ ಇಲ್ಲಿನ ಪರಿಸ್ಥಿತಿಗಳನ್ನು ನಿರ್ಣಯಿಸಲು ನಮಗೆ ಸಹಾಯ ಮಾಡಿವೆ ಎಂದು ಹೇಳಿದರು.

“ಉತ್ತಮ ಸ್ಕೋರ್ ಗಳಿಸಲು ಬ್ಯಾಟಿಂಗ್ ಘಟಕವಾಗಿ ನಾವು ಏನು ಮಾಡಬೇಕು ಎಂಬುದರ ಬಗ್ಗೆ ನಾವು ನಿರ್ಣಯಿಸಿದ್ದೇವೆ. ನಂತರ ನಾವು ನಮ್ಮ ಮೊತ್ತವನ್ನು ರಕ್ಷಿಸಲು ಗರಿಷ್ಠ ಬೌಲಿಂಗ್ ಘಟಕವನ್ನು ಹೊಂದಿದ್ದೇವೆ. ವಿಶ್ವಕಪ್​​ನಲ್ಲಿ ಪ್ರತಿಯೊಂದು ಪಂದ್ಯವೂ ಮುಖ್ಯವಾಗಿದೆ. ಇಲ್ಲಿ ಏನು ಬೇಕಾದರೂ ಆಗಬಹುದು. ನಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.

ಭಾರತ ಈಗಾಗಲೇ ಅದೇ ಸ್ಥಳದಲ್ಲಿ ಪಂದ್ಯವನ್ನು ಗೆದ್ದಿದೆ ಮತ್ತು ಆ ಅನುಭವವನ್ನು ಲಾಭ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಮತ್ತೊಂದೆಡೆ, ಪಾಕಿಸ್ತಾನವು ಯುಎಸ್ಎ ವಿರುದ್ಧದ ಸೋಲಿನೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿತ್ತು. ಇಂದು ರಾತ್ರಿ ಗೆಲುವಿಗಾಗಿ ಹತಾಶವಾಗಿದೆ.

ಉಭಯ ಪ್ಲೇಯಿಂಗ್ ಇಲೆವೆನ್​

ಭಾರತ ತಂಡ: ರೋಹಿತ್ ಶರ್ಮಾ (ಸಿ), ವಿರಾಟ್ ಕೊಹ್ಲಿ (ಸಿ), ರಿಷಭ್ ಪಂತ್ (ವಿಕೆ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷ್ದೀಪ್ ಸಿಂಗ್.

ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್ (ವಿಕೆ), ಬಾಬರ್ ಅಜಮ್ (ಸಿ), ಉಸ್ಮಾನ್ ಖಾನ್, ಫಖರ್ ಜಮಾನ್, ಶದಾಬ್ ಖಾನ್, ಇಫ್ತಿಖರ್ ಅಹ್ಮದ್, ಇಮಾದ್ ವಾಸಿಮ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರವೂಫ್, ನಸೀಮ್ ಶಾ, ಮೊಹಮ್ಮದ್ ಅಮೀರ್.

Continue Reading

ಪ್ರಮುಖ ಸುದ್ದಿ

IND VS PAK : ಭಾರತ- ಪಾಕಿಸ್ತಾನ ಪಂದ್ಯ ಅರ್ಧ ಗಂಟೆ ತಡ; ಟಾಸ್ ಗೆದ್ದ ಪಾಕ್​ನಿಂದ ಫೀಲ್ಡಿಂಗ್ ಆಯ್ಕೆ

IND VS PAK : ನ್ಯೂಯಾರ್ಕ್​ನಲ್ಲಿ ಸಂಜೆಯ ವೇಳೆಗೆ ಮಳೆ ಶುರುವಾಗಿತ್ತು. ಹೀಗಾಗಿ ಟಾಸ್ ನಡೆಸಲು ಆಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಮಳೆ ನಿಂತಿದ್ದು ಅಂಪೈರ್​ಗಳು ಅರ್ಧ ಗಂಟೆ ತಡವಾಗಿ ಟಾಸ್​ ನಡೆಸಿದರು. ಪಾಕ್​ ನಾಯಕ ಬಾಬರ್​ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು .

VISTARANEWS.COM


on

Ind vs pak
Koo

ನ್ಯೂಯಾರ್ಕ್​: ಟಿ 20 ವಿಶ್ವಕಪ್​ ಪಂದ್ಯಕ್ಕಾಗಿ ನಿರ್ಮಿಸಲಾಗಿರುವ ನಸ್ಸೌ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ ಅರ್ಧ ಗಂಟೆ ತಡವಾಗಿ ಆರಂಭವಾಗಿದೆ. ಸ್ಥಳೀಯ ಸಮಯ ಬೆಳಗ್ಗೆ 10 ಗಂಟೆಗೆ ಹಾಗೂ ಭಾರತದ ಸಮಯ ಸಂಜೆ 7.30ಕ್ಕೆ ನಡೆಯಬೇಕಾಗಿದ್ದ ಟಾಸ್​ ಮಳೆಯಿಂದಾಗಿ ತಡವಾಯಿತು. 8 ಗಂಟೆಗೆ ಟಾಸ್​ ನಡೆದು ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 8.30ಕ್ಕೆ ಪಂದ್ಯ ಆರಂಭವಾಗಲಿದೆ.

ನ್ಯೂಯಾರ್ಕ್​ನಲ್ಲಿ ಸಂಜೆಯ ವೇಳೆಗೆ ಮಳೆ ಶುರುವಾಗಿತ್ತು. ಹೀಗಾಗಿ ಟಾಸ್ ನಡೆಸಲು ಆಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಮಳೆ ನಿಂತಿದ್ದು ಅಂಪೈರ್​ಗಳು ಅರ್ಧ ಗಂಟೆ ತಡವಾಗಿ ಟಾಸ್​ ನಡೆಸಿದರು. ಪಾಕ್​ ನಾಯಕ ಬಾಬರ್​ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು .

ವಿಶ್ವ ಕಪ್​ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಐರ್ಲೆಂಡ್ ಎದುರಿನ ತನ್ನ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಅಮೋಘ ಜಯ ಸಾಧಿಸಿದೆ. ಆದರೆ, ಪಾಕಿಸ್ತಾನ ತಂಡವು ತನ್ನ ಆರಂಭಿಕ ಪಂದ್ಯದಲ್ಲೇ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಶರಣಾಗಿತ್ತು. ಹೀಗಾಗಿ ಪಾಕಿಸ್ತಾನ ಹೆಚ್ಚು ಒತ್ತಡದಲ್ಲಿದೆ.

2007ರ ಟಿ20 ವಿಶ್ವಕಪ್​ನ ನಂತರದಿಮದ 8ನೇ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವಕಪ್ ಈ ಹಿಂದಿನ 7 ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದ್ದರೆ ಪಾಕಿಸ್ತಾನ ಒಂದು ಬಾರಿ ಗೆದ್ದಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ 2ರಲ್ಲಿ ಬಾರಿ ಭಾರತ ಗೆದ್ದಿದೆ. 2021ರಲ್ಲಿ ಭಾರತದ ವಿರುದ್ಧ ಪಾಕ್ ವಿಜಯ ಕಂಡುಕೊಂಡಿತ್ತು.

ಇದನ್ನೂ ಓದಿ: IND vs PAK : ಭಾರತ ತಂಡವನ್ನು ಪಾಕಿಸ್ತಾನಕ್ಕೆ ಹೋಗಲು ಸಮ್ಮಿಶ್ರ ಸರ್ಕಾರವೂ ಬಿಡುವುದಿಲ್ಲ

ಕಳೆದ ವರ್ಷ ನಡೆದ ಟಿ20 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ, ಪಾಕ್ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಪವರ್​​​ಪ್ಲೇನಲ್ಲಿ 32ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ರೋಚಕ ಗೆಲುವು ತಂದಿದ್ದರು. ಕೊಹ್ಲಿ 52 ಎಸೆತಗಳಲ್ಲಿ ಅಜೇಯ 82 ರನ್ ಚಚ್ಚಿ ಅವಿಸ್ಮರಣೀಯ ಇನಿಂಗ್ಸ್ ಆಡಿದ್ದರು.

ಇತ್ತಂಡಗಳ ಪ್ಲೇಯಿಂಗ್ ಇಲೆವೆನ್​

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಪಾಕಿಸ್ತಾನ : ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಉಸ್ಮಾನ್ ಖಾನ್, ಫಖರ್ ಜಮಾನ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಅಮೀರ್.

Continue Reading
Advertisement
ind vs pak
ಪ್ರಮುಖ ಸುದ್ದಿ54 mins ago

IND vs PAK : ಭಾರತದ ಎದುರು ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ; ಕಡಿಮೆ ಸ್ಕೋರ್ ಇದ್ದಾಗಲೂ 6 ರನ್ ಸೋಲು

Stabbing in Mangalore:
ಪ್ರಮುಖ ಸುದ್ದಿ2 hours ago

Stabbing in Mangalore : ವಿಜಯೋತ್ಸವ ಮುಗಿಸಿ ಮನೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚಾಕು ಇರಿತ

Modi 3.0 Cabinet
ದೇಶ2 hours ago

Modi 3.0 Cabinet: ಮೋದಿ ನೂತನ ಸಂಪುಟದಿಂದ ಸ್ಮೃತಿ ಇರಾನಿ ಸೇರಿ ಯಾರಿಗೆಲ್ಲ ಕೊಕ್?‌ ಇಲ್ಲಿದೆ ಮಾಹಿತಿ

IND vs PAK:
ಪ್ರಮುಖ ಸುದ್ದಿ3 hours ago

IND vs PAK : ವಿರಾಟ್​ ಕೊಹ್ಲಿಯಿಂದ ಆಟೋಗ್ರಾಫ್ ಪಡೆದುಕೊಂಡ ಕ್ರಿಸ್​ ಗೇಲ್​! ಇಲ್ಲಿದೆ ವಿಡಿಯೊ

Veeraloka
Latest3 hours ago

Veeraloka Books : ಹೊಸ ಲೇಖಕರಿಗೆ ವೀರಲೋಕ ಪ್ರಕಾಶನ ಹೆದ್ದಾರಿಯನ್ನೇ ಸೃಷ್ಟಿಸಿದೆ: ಜಯಂತ್‌ ಕಾಯ್ಕಿಣಿ ಶ್ಲಾಘನೆ

IND vs PAK
ಪ್ರಮುಖ ಸುದ್ದಿ4 hours ago

IND vs PAK : ಮರೆಗುಳಿ ರೋಹಿತ್​; ಜೇಬಿನಲ್ಲಿ​ ಕಾಯಿನ್​ ಇಟ್ಟು ಹುಡುಕಾಡಿದ ಭಾರತ ತಂಡದ ನಾಯಕ

Modi 3.0 Cabinet
ದೇಶ4 hours ago

Modi 3.0 Cabinet: ನಡ್ಡಾ To ಎಚ್‌ಡಿಕೆ ;‌ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು

Modi 3.0 Cabinet
ದೇಶ4 hours ago

Modi 3.0 Cabinet: 30 ಕ್ಯಾಬಿನೆಟ್‌ ದರ್ಜೆ, 5 ಸ್ವತಂತ್ರ, 36 ಸಂಸದರಿಗೆ ರಾಜ್ಯ ಖಾತೆ; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್

V Somanna profile
ಪ್ರಮುಖ ಸುದ್ದಿ5 hours ago

V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

Terror Attack
ಕ್ರೈಂ5 hours ago

Terror Attack: ಕಾಶ್ಮೀರದಲ್ಲಿ ಹಿಂದೂ ಯಾತ್ರಿಗಳಿದ್ದ ಬಸ್‌ ಮೇಲೆ ಉಗ್ರರ ದಾಳಿ; 10 ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌