India House: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 'ಇಂಡಿಯಾ ಹೌಸ್‌' ನಿರ್ಮಿಸಿದ ರಿಲಯನ್ಸ್‌ ಸಂಸ್ಥೆ; ಏನಿದರ ವಿಶೇಷತೆ? - Vistara News

ಕ್ರೀಡೆ

India House: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ‘ಇಂಡಿಯಾ ಹೌಸ್‌’ ನಿರ್ಮಿಸಿದ ರಿಲಯನ್ಸ್‌ ಸಂಸ್ಥೆ; ಏನಿದರ ವಿಶೇಷತೆ?

India House: ಮಹತ್ವದ ಕ್ರೀಡಾಕೂಡವಾದ ಪ್ಯಾರಿಸ್ ಒಲಿಂಪಿಕ್ಸ್‌(Paris Olympics) ಜುಲೈ 26ರಿಂದ ಆರಂಭಗಳ್ಳಲಿದೆ. ಈ ಬಾರಿ ಟೂರ್ನಿಯಲ್ಲಿ ಸ್ಪರ್ಧಿಸಲಿರುವ ಭಾರತೀಯ ಕ್ರೀಡಾಪಟುಗಳಿಗೆ ​ಭಾರತೀಯ ಶೈಲಿಯ ಊಟ ಸಿಗಲಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಗೇಮ್ಸ್‌ ವಿಲೇಜ್‌ನಲ್ಲಿ ರೋಟಿ, ದಾಲ್‌, ಆಲೂ ಗೋಬಿ, ಚಿಕನ್‌ ಇತ್ಯಾದಿ ಭಾರತೀಯ ಖಾದ್ಯಗಳು ಸಿಗಲಿದೆ.

VISTARANEWS.COM


on

India House
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ತಾವರಣವನ್ನು ಕಲ್ಪಿಸಲು ಇದರ ಉದ್ದೇಶದಿಂದ ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್​”(India House)​ ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿದೆ. ಭಾರತೀಯ ಕ್ರೀಡಾಪಟುಗಳು ಇದರಲ್ಲೇ ಉಳಿದುಕೊಳ್ಳಲಿದ್ದಾರೆ.

ಇಂಡಿಯಾ ಹೌಸ್​ಗೆ ಎಲ್ಲ ದೇಶಗಳ ಪತ್ರಕರ್ತರಿಗೆ ಮುಕ್ತ ಪ್ರವೇಶವಿದೆ ಎಂದು ನೀತಾ ಅಂಬಾನಿ(Nita Ambani) ಹೇಳಿದ್ದಾರೆ. ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಸಿ.) ಸದಸ್ಯೆಯಾಗಿದ್ದಾರೆ. ಅಮೆರಿಕಾದ ಲಾಸ್ ಏಂಜಲಿಸ್​ನಲ್ಲಿ 2028ರಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಸೇರ್ಪಡೆಗೊಳ್ಳುವಲ್ಲಿ ನೀತಾ ಅಂಬಾನಿ ಅವರ ಪಾತ್ರವೂ ಪ್ರಮುಖವಾಗಿತ್ತು. ಕಳೆದ ವರ್ಷ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನ(International Olympic Committee Session) ಮುಂಬೈಯಲ್ಲಿ ನಡೆದ ವೇಳೆಯೂ ನೀತಾ ಅಂಬಾನಿ ಈ ಸಭೆಯ ವಕಾಲತ್ತು ವಹಿಸಿದ್ದರು.

ಆ್ಯತ್ಲೀಟ್‌ಗಳಿಗೆ ಸಿಗಲಿದೆ ಮನೆ ಊಟ

ಮಹತ್ವದ ಕ್ರೀಡಾಕೂಡವಾದ ಪ್ಯಾರಿಸ್ ಒಲಿಂಪಿಕ್ಸ್‌(Paris Olympics) ಜುಲೈ 26ರಿಂದ ಆರಂಭಗಳ್ಳಲಿದೆ. ಈ ಬಾರಿ ಟೂರ್ನಿಯಲ್ಲಿ ಸ್ಪರ್ಧಿಸಲಿರುವ ಭಾರತೀಯ ಕ್ರೀಡಾಪಟುಗಳಿಗೆ ​ಭಾರತೀಯ ಶೈಲಿಯ ಊಟ ಸಿಗಲಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಗೇಮ್ಸ್‌ ವಿಲೇಜ್‌ನಲ್ಲಿ ರೋಟಿ, ದಾಲ್‌, ಆಲೂ ಗೋಬಿ, ಚಿಕನ್‌ ಇತ್ಯಾದಿ ಭಾರತೀಯ ಖಾದ್ಯಗಳು ಸಿಗಲಿದೆ.

ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಹಾಕಿ ಇಂಡಿಯಾ

ಪ್ರತಿ ಬಾರಿಯೂ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾರತೀಯ ಆ್ಯತ್ಲೀಟ್‌ಗಳಿಗೆ ದೊಡ್ಡ ಸಮಸ್ಯೆ ಎದುರಾಗುತ್ತಿದ್ದು ಆಹಾರ. ಟೋಕಿಯೊ ಒಲಿಂಪಿಕ್ಸ್​ನಲ್ಲಿಯೂ ಭಾರತೀಯ ಆ್ಯತ್ಲೀಟ್‌ಗಳು ಸರಿಯಾದ ಪೌಷ್ಟಿಕಾಂಶ ಆಹಾರ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ವಿದೇಶಿ ಆ್ಯತ್ಲೀಟ್‌ಗಳಿಗೆ ಈ ಸಮಸ್ಯೆ ಎದುರಾಗುವುದಿಲ್ಲ. ಏಕೆಂದರೆ ಅವರು ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಅಷ್ಟಾಗಿ ಸೇವಿಸುವುದಿಲ್ಲ. ಈ ಬಾರಿ ಭಾರತೀಯ ಆ್ಯತ್ಲೀಟ್‌ಗಳ ಆಹಾರದ ದೊಡ್ಡ ಸಮಸ್ಯೆ ಬಗೆಹರಿದಂತಿದೆ. ದಕ್ಷಿಣ ಏಷ್ಯಾದ ಖಾದ್ಯಗಳನ್ನು ಸೇರಿಸಲು ಸಂಘಟಕರಿಗೆ ಭಾರತೀಯ ಒಲಿಂಪಿಕ್‌ ಸಂಸ್ಥೆ ಮನವಿ ಮಾಡಿದೆ. ಈ ಮನವಿಯನ್ನು ಸಂಘಟಕರು ಒಪ್ಪಿಕೊಂಡಿರುವುದಾಗಿ ಒಲಿಂಪಿಕ್ಸ್‌ನ ಭಾರತ ತಂಡ ಉಪ ಮುಖ್ಯಾಧಿಕಾರಿಯಾಗಿರುವ ಶಿವ ಕೇಶವನ್‌ ಕೆಲವು ತಿಂಗಳ ಹಿಂದೆ ತಿಳಿಸಿದ್ದರು.

ಗೇಮ್ಸ್‌ ವಿಲೇಜ್‌ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾ ವಿಜ್ಞಾನ ಕೇಂದ್ರವನ್ನೂ ಐಒಎ ಸ್ಥಾಪಿಸುತ್ತಿದೆ. ಇಲ್ಲಿ ಅಥ್ಲೀಟ್‌ಗಳಿಗೆ ಅಗತ್ಯವಿರುವ ವೈದ್ಯಕೀಯ ನೆರವು, ಔಷಧ ಒದಗಿಸಲು ಭಾರತದಿಂದಲೇ ವೈದ್ಯಕೀಯ ಉಪಕರಣಗಳನ್ನು ಕೂಡ ಐಒಎ ಪ್ಯಾರಿಸ್‌ಗೆ ಕೊಂಡೊಯ್ಯುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು.

ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

T20 World Cup 2024: ದರ್ಶನ್‌ ಜೈಲಿಗೆ ಹೋದಾಗೆಲ್ಲ ವಿಶ್ವಕಪ್‌ ಗೆದ್ದ ಭಾರತ; ಹೀಗ್ಯಾಕೆ ಅಂದ್ರು ನೆಟ್ಟಿಗರು?

T20 World Cup 2024: ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿತ್ತು‌. ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ಕೋರಮಂಗಲ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಮತ್ತು ತ್ರಿವರ್ಣ ಧ್ವಜ ಹಾರಿಸಿ, ಹಾಡುಗಳಿಗೆ ಕುಣಿದು ಸಂಭ್ರಮ ಆಚರಿಸಿ ಭಾರತ ತಂಡಕ್ಕೆ ಅಭಿನಂದನೆ‌ ಸಲ್ಲಿಸಿದರು.

VISTARANEWS.COM


on

T20 World Cup 2024 Netizen Thanking Darshan For India World Cup Win
Koo

ಬೆಂಗಳೂರು: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್​ 2024 (T20 World Cup 2024) ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇದರ ಬೆನ್ನಲ್ಲೇ  ಭಾರತ ವಿಶ್ವಕಪ್ ಗೆಲ್ಲಲು ಕಾರಣ ದರ್ಶನ್‌ ಎಂದು ಟ್ರೋಲ್‌ ಆಗುತ್ತಿದೆ. ಮಾತ್ರವಲ್ಲ ನೆಟ್ಟಿಗರು ದರ್ಶನ್‌ಗೆ ಧನ್ಯವಾದ ಎಂದು ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಭಾರತ ಕಳೆದ ಬಾರಿ ವಿಶ್ವಕಪ್ ಗೆದ್ದಿದ್ದು 2011 ರಲ್ಲಿ ಆ ವರ್ಷವೂ ಸಹ ದರ್ಶನ್ ಜೈಲು ಸೇರಿದ್ದರು. ಅದಾದ 13 ವರ್ಷಗಳ ಬಳಿಕ 2024 ರಲ್ಲಿ ದರ್ಶನ್​ ಮತ್ತೆ ಜೈಲಿಗೆ ಹೋಗಿದ್ದಾರೆ. ಈ ಬಾರಿ ಭಾರತ ಮತ್ತೆ ವಿಶ್ವಕಪ್ ಗೆದ್ದಿದೆ. ಹಾಗಾಗಿ ದರ್ಶನ್ ಜೈಲು ಸೇರಿದ್ದಕ್ಕೆ ಭಾರತ ವಿಶ್ವಕಪ್ ಗೆದ್ದಿದ್ದು ಎಂಬುದು ಕೆಲವರ ಮಾತುಗಳು. ಭಾರತ ವಿಶ್ವಕಪ್ ಗೆದ್ದ ಕೆಲವು ತಿಂಗಳು ಬಳಿಕ ದರ್ಶನ್ ಜೈಲಿಗೆ ಹೋಗಿದ್ದರೆ ಹೊರತು ವಿಶ್ವಕಪ್ ಗೆಲ್ಲುವ ಮೊದಲಲ್ಲ. 2011 ರ ಏಪ್ರಿಲ್ 2 ರಂದು ಭಾರತ ವಿಶ್ವಕಪ್ ಗೆದ್ದಿತ್ತು, ಅದಾದ ಕೆಲವು ತಿಂಗಳ ಬಳಿಕ ಅಂದರೆ ಸೆಪ್ಟೆಂಬರ್ 9 ರಂದು ನಟ ದರ್ಶನ್ ಜೈಲು ಸೇರಿದ್ದರು.

ಹೇಗಿತ್ತು ಸೆಲೆಬ್ರೇಷನ್‌?

ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿತ್ತು‌. ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ಕೋರಮಂಗಲ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಮತ್ತು ತ್ರಿವರ್ಣ ಧ್ವಜ ಹಾರಿಸಿ, ಹಾಡುಗಳಿಗೆ ಕುಣಿದು ಸಂಭ್ರಮ ಆಚರಿಸಿ ಭಾರತ ತಂಡಕ್ಕೆ ಅಭಿನಂದನೆ‌ ಸಲ್ಲಿಸಿದರು.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ ಮುಡಿಗೇರಿಸಿಕೊಂಡ ಭಾರತ; ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ ಹೀಗಿತ್ತು

ಭಾರತ ತಂಡ ಎರಡನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಸಮಾದೇವಿ ಗಲ್ಲಿಯಲ್ಲಿ ಕ್ರಿಕೆಟ್ ಪ್ರೇಮಿಗಳು ಭಾರತ ಧ್ವಜ, ಭಗವಾಧ್ವಜ ಪ್ರದರ್ಶಿಸಿ ಖುಷಿಪಟ್ಟರು. ಜತೆಗೆ ಡಿಜೆಗೆ ಸಖತ್‌ ಸ್ಟೆಪ್ ಹಾಕಿ ಕ್ರೀಡಾ ಪ್ರೇಮಿಗಳು ಸಂಭ್ರಮಿಸಿದರು. ಕನ್ನಡ, ಹಿಂದಿ ಹಾಡುಗಳ ನಡುವೆ ಯುವ ಜನತೆಯ ಡ್ಯಾನ್ಸ್‌ ಗಮನ ಸೆಳೆಯಿತು.

ಟಾಸ್ ಗೆದ್ದ ನಂತರ ಭಾರತವು ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಧಾನವಾಗಿ ರನ್ ಪೇರಿಸಿ ದಕ್ಷಿಣ ಆಫ್ರಿಕಾಕ್ಕೆ 177 ರನ್​ಗಳ ಸವಾಲಿನ ಗುರಿ ನಿಗದಿಪಡಿಸಿತು. ಅಂತೆಯೇ ಅಂತಿಮ ಓವರ್​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಶಸ್ತಿ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು. ಈ ನಿರ್ಣಾಯಕ ಓವರ್​ಗೆ ಎಸೆಯಲು ರೋಹಿತ್ ಶರ್ಮಾ ಪಾಂಡ್ಯಗೆ ಚೆಂಡನ್ನು ನೀಡಿದರು. ಪಾಂಡ್ಯ ಕೇವಲ ಏಳು ರನ್​ಗಳನ್ನು ಬಿಟ್ಟುಕೊಟ್ಟು ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ ಅವರ ಎರಡು ಪ್ರಮುಖ ವಿಕೆಟ್​​ಗಳನ್ನು ಪಡೆದು ಭಾರತದ ಗೆಲುವನ್ನು ಖಚಿತಪಡಿಸಿದರು.

Continue Reading

ಕ್ರೀಡೆ

Rohit Sharma: ಗೆಲುವಿನ ಸವಿ ನೆನಪಿಗಾಗಿ ಪಿಚ್​ನ ಮಣ್ಣು ತಿಂದ ರೋಹಿತ್​; ವಿಡಿಯೊ ವೈರಲ್​

Rohit Sharma: ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು.

VISTARANEWS.COM


on

Rohit Sharma
Koo

ಬಾರ್ಬಡೋಸ್​: ಅತ್ಯಂತ ರೋಚಕವಾಗಿ ನಡೆದ ಟಿ20 ವಿಶ್ವಕಪ್​ ಫೈನಲ್(T20 World Cup 2024) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(South Africa vs India) ತಂಡವನ್ನು 7 ರನ್​ಗಳಿಂದ ಮಣಿಸಿದ ಭಾರತ 2ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿತು. ಜತೆಗೆ 13 ವರ್ಷಗಳ ಕಪ್​ ಬರಗಾಲ ಕೂಡ ನೀಗಿತು. ಈ ಗೆಲುವಿನ ಸವಿ ನೆನಪಿಗಾಗಿ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರು ಪಿಚ್​ನ ಒಂದು ಚಿಟಿಕೆ ಮಣ್ಣು ಬಾಯಿಗೆ ಹಾಕಿದ್ದಾರೆ. ಈ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ.

ಫುಟ್ಬಾಲ್​, ಟೆನಿಸ್​ ಸೇರಿ ಹೊರಾಂಗಣ ಕ್ರೀಡೆಯಲ್ಲಿಯಲ್ಲಿ ಚಾಂಪಿಯನ್​ ಆದ ತಂಡದ ಕೆಲ ಆಟಗಾರರು ಮೈದಾನದ ಒಂದೆಡರು ಹುಲ್ಲನ್ನು ಕಿತ್ತು ತಿನ್ನುವ ಮೂಲಕ ಗೆಲುವುವನ್ನು ಮತ್ತು ಈ ಮೈದಾನದ ಋಣವನ್ನು ತೀರಿಸಿಕೊಳ್ಳುತ್ತಾರೆ. ಇದೇ ರೀತಿ ರೋಹಿತ್​ ಕೂಡ ಕಪ್​ ಗೆದ್ದ ಬಳಿಕ ಪಿಚ್​ನಿಂದ ಒಂದು ಚಿಟಿಕೆ ಮಣ್ಣನ್ನು ಬಾಯಿಗೆ ಹಾಕಿದ್ದಾರೆ.

ವಿದಾಯ ಹೇಳಿದ ರೋಹಿತ್​


ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ

ರೋಚಕ ಪಂದ್ಯ ಗೆದ್ದ ಭಾರತ


ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಎರಡನೇ ಎಸೆತವನ್ನು ರಬಾಡಾ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಹಾರ್ದಿಕ್ ಒಂದು ವೈಡ್ ಎಸೆದರು. ರಬಾಡಾ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಮಾತ್ರ ಬಂತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತು.

Continue Reading

ಕ್ರಿಕೆಟ್

T20 World Cup 2024: ಟಿ20 ವಿಶ್ವಕಪ್​ ಮುಡಿಗೇರಿಸಿಕೊಂಡ ಭಾರತ; ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ ಹೀಗಿತ್ತು

T20 World Cup 2024: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್​ 2024 ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ರಾಜ್ಯದ ವಿವಿಧ ಭಾಗಳಲ್ಲಿ ನಡೆಸಿದ ಸಂಭ್ರಮಾಚರಣೆಯ ಝಳಕ್‌ ಇಲ್ಲಿದೆ.

VISTARANEWS.COM


on

T20 World Cup 2024
Koo

ಬೆಂಗಳೂರು: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್​ 2024 (T20 World Cup 2024) ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕ್ರಿಕೆಟ್‌ ಅಭಿಮಾನಿಗಳು ಟೀಮ್‌ ಇಂಡಿಯಾ ಗೆಲುವುವನ್ನು ಕೊಂಡಾಡಿದರು.

ಬೆಂಗಳೂರು: ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿತ್ತು‌. ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ಕೋರಮಂಗಲ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಮತ್ತು ತ್ರಿವರ್ಣ ಧ್ವಜ ಹಾರಿಸಿ, ಹಾಡುಗಳಿಗೆ ಕುಣಿದು ಸಂಭ್ರಮ ಆಚರಿಸಿ ಭಾರತ ತಂಡಕ್ಕೆ ಅಭಿನಂದನೆ‌ ಸಲ್ಲಿಸಿದರು.

ಬೆಳಗಾವಿ: ಭಾರತ ತಂಡ ಎರಡನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಸಮಾದೇವಿ ಗಲ್ಲಿಯಲ್ಲಿ ಕ್ರಿಕೆಟ್ ಪ್ರೇಮಿಗಳು ಭಾರತ ಧ್ವಜ, ಭಗವಾಧ್ವಜ ಪ್ರದರ್ಶಿಸಿ ಖುಷಿಪಟ್ಟರು. ಜತೆಗೆ ಡಿಜೆಗೆ ಸಖತ್‌ ಸ್ಟೆಪ್ ಹಾಕಿ ಕ್ರೀಡಾ ಪ್ರೇಮಿಗಳು ಸಂಭ್ರಮಿಸಿದರು. ಕನ್ನಡ, ಹಿಂದಿ ಹಾಡುಗಳ ನಡುವೆ ಯುವ ಜನತೆಯ ಡ್ಯಾನ್ಸ್‌ ಗಮನ ಸೆಳೆಯಿತು.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಭಾರತದ ಗೆಲುವನ್ನು ಕ್ರಿಕೆಟ್ ಪ್ರೇಮಿಗಳು ಸಂಭ್ರಮಿಸಿದರು. ಭಟ್ಕಳದ ಸಂಶುದ್ದೀನ್ ವೃತ್ತದಲ್ಲಿ ತಡರಾತ್ರಿ ಸಂಭ್ರಮಾಚರಣೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಹೆದ್ದಾರಿಯಲ್ಲಿ ಜಮಾಯಿಸಿದ ಕ್ರಿಕೆಟ್ ಪ್ರೇಮಿಗಳು ಸಂಚರಿಸುತ್ತಿದ್ದ ವಾಹನಗಳ ಎದುರು ಕುಣಿದು ಕುಪ್ಪಳಿಸಿದರು. ಭಾರತದ ಬಾವುಟ ಹಿಡಿದ ಯುವಕರು, ಮಕ್ಕಳು, ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟಿತು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡ ಪ್ರಸಂಗವೂ ನಡೆಯಿತು. ಕ್ರಿಕೆಟ್ ಪ್ರೇಮಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಕೊನೆಗೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಿಕೆಟ್ ಪ್ರೇಮಿಗಳನ್ನು ಪೊಲೀಸರು ಚದುರಿಸಿದರು.

ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿಯೂ ಸಂಭ್ರಮ ಮನೆ ಮಾಡಿತು. ಹೊಸಪೇಟೆ ನಗರದ ಡಾ. ಪುನೀತ್‌ ರಾಜ್‌ಕುಮಾರ್ ಸರ್ಕಲ್‌ನಲ್ಲಿ ಅಭಿಮಾನಿಗಳು ʼಇಂಡಿಯಾ ಇಂಡಿಯಾʼ ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು.

ಧಾರವಾಡ: ಧಾರವಾಡದ ಶ್ರೀನಗರ ವೃತ್ತದಲ್ಲಿ ಗುಂಪುಗೂಡಿದ ಯುವಕರ ತಂಡ ಭಾರತ ಗೆದ್ದ ತಕ್ಷಣವೇ ಟೀಮ್‌ ಇಂಡಿಯಾಕ್ಕೆ ಜಯಘೋಷ ಮೊಳಗಿಸಿತು. ʼಭಾರತ ಮಾತಾ ಕೀ ಜೈʼ ಎಂದು ಘೋಷಣೆಯೂ ಕೇಳಿ ಬಂತು.

ಮೈಸೂರು: ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡುವ ಮೂಲಕ ಭಾರತದ ಗೆಲುವನ್ನು ಇನ್ನಷ್ಟು ಸಿಹಿಯಾಗಿಸಿದರು. ಭಾರತ ದ್ವಜವನ್ನು ಹಿಡಿದು ದ್ವಿಚಕ್ರ ವಾಹನದ ಮೂಲಕ ಮುಖ್ಯ ರಸ್ತೆಗಳಲ್ಲಿ ಸಾಗಿ ʼಜಿತಾಗಾ ಭೈ ಜಿತೇಗಾ ಭಾರತ್ ಟೀಂ ಜೀತೇಗಾʼ ಎಂಬ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ವಿಕ್ರಂ ಅಯ್ಯಂಗಾರ್, ಕಿರಣ್, ಸುದೀಂದ್ರ, ಬೆಲ್ಲ ರಾಜಣ್ಣ ಮಂಜುನಾಥ್, ಸಚಿನ್ ನಾಯಕ್ ಮತ್ತಿತರರು ಪಾಲ್ಗೊಂಡಿದ್ದರು.

ಶಿವಮೊಗ್ಗ: ಶಿವಮೊಗ್ಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು. ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಭಾರತದ ಧ್ವಜ ಹಿಡಿದು ಕ್ರೀಡಾಭಿಮಾನಿಗಳು ಸಂಭ್ರಮಿಸಿದರು. ಹೀಗೆ ರಾಜುದ ವಿವಿಧ ಕಡೆ ಅಭಿಮಾನಿಗಳು ಸಂಭ್ರಮಾಚರಿಸಿದರು.

ಕಲಬುರಗಿ: ಕಲಬುರಗಿಯಲ್ಲಿ ಯುವಕರು ಸಂಭ್ರಮಾಚರಿಸಿದರು. ಕಲಬುರಗಿಯ ಸರ್ದಾರ್ ವಲ್ಲಾಭಾಯಿ ಪಟೇಲ್ ವೃತ್ತದಲ್ಲಿ ರಾತ್ರೋರಾತ್ರಿ ರಸ್ತೆಗಿಳಿದು ಕಾರು– ಬೈಕ್‌ಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸುತ್ತುತ್ತ ‘ಇಂಡಿಯಾ–ಇಂಡಿಯಾ’, ‘ಕೊಹ್ಲಿ–ಕೊಹ್ಲಿ’ ಎಂದು ಘೋಷಣೆ ಕೂಗಿದರು. ನೂರಾರು ಕ್ರಿಕೆಟ್‌ ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ತ್ರಿವರ್ಣ ಧ್ವಜ ಹಿಡಿದು ಜೈಕಾರ ಹಾಕಿದರು.

ಇದನ್ನೂ ಓದಿ: T20 World Cup 2024 : ಒಂದೇ ಒಂದು ಸೋಲು ಕಾಣದೆ ವಿಶ್ವ ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ ತಂಡ

Continue Reading

ಪ್ರಮುಖ ಸುದ್ದಿ

T20 World Cup 2024 : ಗೆಲುವಿನ ಸಂಭ್ರಮದಲ್ಲಿ ಪಾಂಡ್ಯ ಕೆನ್ನೆಗೆ ಮುತ್ತಿಟ್ಟ ನಾಯಕ ರೋಹಿತ್; ಇಲ್ಲಿದೆ ವಿಡಿಯೊ

T20 World Cup 2024: ಅಂತಿಮ ಓವರ್​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಶಸ್ತಿ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು. ಈ ನಿರ್ಣಾಯಕ ಓವರ್​ಗೆ ಎಸೆಯಲು ರೋಹಿತ್ ಶರ್ಮಾ ಪಾಂಡ್ಯಗೆ ಚೆಂಡನ್ನು ನೀಡಿದರು. ಪಾಂಡ್ಯ ಕೇವಲ ಏಳು ರನ್​ಗಳನ್ನು ಬಿಟ್ಟುಕೊಟ್ಟು ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ ಅವರ ಎರಡು ಪ್ರಮುಖ ವಿಕೆಟ್​​ಗಳನ್ನು ಪಡೆದು ಭಾರತದ ಗೆಲುವನ್ನು ಖಚಿತಪಡಿಸಿದರು.

VISTARANEWS.COM


on

T20 World Cup 2024
Koo

ಬೆಂಗಳೂರು: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಜೂನ್ 29 ರಂದು ನಡೆದ ಟಿ20 ವಿಶ್ವ ಕಪ್​ 2024 (T20 World Cup 2024) ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಯಿತು. ಈ ಮೂಲಕ 17 ವರ್ಷಗಳ ಬಳಿಕ ಟಿ20 ವಿಶ್ವ ಕಪ್​ ಟ್ರೋಫಿ ಗೆದ್ದುಕೊಂಡಿತು. ಅಂತೆಯೇ 13 ವರ್ಷದ ನಂತದ ಐಸಿಸಿ ವಿಶ್ವ ಕಪ್​ಗೆ ಪಾತ್ರವಾಯಿತು. ಇಂಥ ಅಪರೂಪದ ಖುಷಿಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಆಲ್​ರೌಂಡರ್​​ ಹಾರ್ದಿಕ್ ಪಾಂಡ್ಯ ವಿಭಿನ್ನವಾಗಿ ಭಾಗಿಯಾದರು. ಅವರ ನಡುವಿನ ಭಾವನಾತ್ಮಕ ಕ್ಷಣವು ಎಲ್ಲರ ಗಮನ ಸೆಳೆಯಿತು. ಪಂದ್ಯದ ನಂತರ ಮಾತನಾಡುವಾಗ ಭಾರತೀಯ ನಾಯಕ ರೋಹಿತ್​ ಖುಷಿ ತಡೆಯಲಾರದೇ ಪಾಂಡ್ಯ ಕೆನ್ನೆಗೆ ಮುತ್ತಿಟ್ಟರು.

ಟಾಸ್ ಗೆದ್ದ ನಂತರ ಭಾರತವು ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಧಾನವಾಗಿ ರನ್ ಪೇರಿಸಿ ದಕ್ಷಿಣ ಆಫ್ರಿಕಾಕ್ಕೆ 177 ರನ್​ಗಳ ಸವಾಲಿನ ಗುರಿ ನಿಗದಿಪಡಿಸಿತು. ಅಂತೆಯೇ ಅಂತಿಮ ಓವರ್​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಶಸ್ತಿ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು. ಈ ನಿರ್ಣಾಯಕ ಓವರ್​ಗೆ ಎಸೆಯಲು ರೋಹಿತ್ ಶರ್ಮಾ ಪಾಂಡ್ಯಗೆ ಚೆಂಡನ್ನು ನೀಡಿದರು. ಪಾಂಡ್ಯ ಕೇವಲ ಏಳು ರನ್​ಗಳನ್ನು ಬಿಟ್ಟುಕೊಟ್ಟು ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ ಅವರ ಎರಡು ಪ್ರಮುಖ ವಿಕೆಟ್​​ಗಳನ್ನು ಪಡೆದು ಭಾರತದ ಗೆಲುವನ್ನು ಖಚಿತಪಡಿಸಿದರು.

ಖುಷಿ ತಡೆಯಲಾರೆ ಅತ್ತ ಪಾಂಡ್ಯ

ಗೆಲುವಿನ ಇದರ ಅರ್ಥ ಬಹಳಷ್ಟಿದೆ. ಇದು ತುಂಬಾ ಭಾವನಾತ್ಮಕವಾಗಿದೆ. ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಆದರೆ ಏನೂ ಕ್ಲಿಕ್ ಆಗುತ್ತಿಲಿಲ್ಲ. ಇದು ನಮಗೆ ಹೆಚ್ಚು ವಿಶೇಷವಾಗಿದೆ ಎಂದು ನಾನು ಭಾವಿಸುತ್ತೇನೆ. ಕಳೆದ ಆರು ತಿಂಗಳುಗಳಲ್ಲಿ ನಾನು ಒಂದು ಮಾತನ್ನೂ ಮಾತನಾಡದಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ. ನಾವು ಕಷ್ಟಪಟ್ಟು ಕೆಲಸ ಮಾಡುತ್ತಲೇ ಇದ್ದರೆ ಬೆಳಗಲು ಸಾಧ್ಯವಾಗುವ ಸಮಯವಿರುತ್ತದೆ ಎಂದು ನಾನು ನಂಬುತ್ತೇನೆ. ಅದು ಎಲ್ಲವನ್ನೂ ಖುಷಿಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಗೆಲ್ಲುವುದು ನನ್ನ ಕನಸಾಗಿತ್ತು ಮತ್ತು ವಿಶೇಷವಾಗಿ ಈ ರೀತಿಯ ಅವಕಾಶವನ್ನು ಪಡೆಯುವುದು”ಎಂದು ಹಾರ್ದಿಕ್ ಪಂದ್ಯದ ನಂತರ ಹೇಳಿದರು.

ನಾನು ಎಸೆಯುವ ಪ್ರತಿ ಚೆಂಡಿಗೂ ಶ್ರಮ ವಹಿಸುತ್ತೇನೆ


ಹಾರ್ದಿಕ್ ಪಾಂಡ್ಯ ಒತ್ತಡದ ಕ್ಷಣದಲ್ಲಿ ಶಾಂತವಾಗಿರುವ ತಮ್ಮ ಗುಟ್ಟನ್ನು ತೆರೆದಿಟ್ಟರು. ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್​ದೀಪ್​ ಸಿಂಗ್ ಆ ಕಠಿಣ ಎಸೆದು ಭಾರತವನ್ನು ಗೆಲುವಿನ ಕಡೆಗೆ ಮರಳಿ ಕರೆತಂದರು ಎಂದು ಅವರು ಶ್ಲಾಘಿಸಿದರು.

“ನಾವು ಗೆಲ್ಲಬಹುದು ಎಂದು ನಾವು ಯಾವಾಗಲೂ ನಂಬಿದ್ದೆವು. ಶಾಂತವಾಗಿರಲು ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಮಾತ್ರ ಯೋಚಿಸಿದ್ದೆವು. ಒತ್ತಡವು ಅವರ ಮೇಲೆ ಬರಲಿ. ಕೊನೆಯ ನಾಲ್ಕು-ಐದು ಓವರ್​ಗಳನ್ನು ಎಸೆದ ಶ್ರೇಯಸ್ಸು ವೇಗದ ಬೌಲರ್​ಗಳಿಗೆ ಸಲ್ಲುತ್ತದೆ. ಅದು ಎಲ್ಲವನ್ನೂ ಬದಲಾಯಿಸಿತು, “ಎಂದು ಪಾಂಡ್ಯ ಹೇಳಿದರು.

ಇದನ್ನೂ ಓದಿ: Virat Kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿರಾಟ್​​ ಕೊಹ್ಲಿ

ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಗ್ಗೆಯೂ ಆಲ್ರೌಂಡರ್ ಪಾಂಡ್ಯ ಮಾತನಾಡಿದ್ದಾರೆ. ಮುಖ್ಯ ತರಬೇತುದಾರರಿಗೆ ಇದು ಅತ್ಯಂತ ಸೂಕ್ತವಾದ ವಿದಾಯ ಎಂದು ಹೇಳುವ ಮೂಲಕ ಶ್ಲಾಘಿಸಿದರು.

ನಾವೆಲ್ಲರೂ ದ್ರಾವಿಡ್ ಕುರಿತು ತುಂಬಾ ಸಂತೋಷವಾಗಿದ್ದೇನೆ. ಅವರೊಂದಿಗೆ ಕೆಲಸ ಮಾಡುವುದನ್ನು ನಿಜವಾಗಿಯೂ ಆನಂದಿಸಿದೆ. ಈ ರೀತಿಯ ವಿದಾಯವನ್ನು ನೀಡಲು, ಅವರ ಕೋಚಿಂಗ್ ವೃತ್ತಿಜೀವನವು ಹೀಗೆ ಕೊನೆಗೊಳ್ಳುವುದು ಸಂತೋಷ. ನಾವು ಉತ್ತಮ ಸಂಬಂಧವನ್ನು ಹೊಂದಿದ್ದೇವೆ, ಸ್ನೇಹಿತರಾಗಿದ್ದೇವೆ ಎಂದು ಪಾಂಡ್ಯ ಹೇಳಿದ್ದಾರೆ.

ನಾನು ಶಾಂತವಾಗಿರದಿದ್ದರೆ ಪರಿಸ್ಥಿತಿ ನನಗೆ ಪೂರಕವಾಗಿರುವುದಿಲ್ಲ ಎಂದು ನನಗೆ ತಿಳಿದಿತ್ತು ಆದ್ದರಿಂದ, ನಾನು ನನ್ನ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಮತ್ತು ನಾನು ಬೌಲಿಂಗ್ ಮಾಡುವ ಪ್ರತಿ ಚೆಂಡಿಗೆ ನನ್ನ ನೂರು ಪ್ರತಿಶತವನ್ನು ನೀಡಲು ಮುಂದಾದೆ. ನಾನು ಈ ಹಿಂದೆ ಈ ಪರಿಸ್ಥಿತಿಯನ್ನು ಎದುರಿಸಿದ್ದೆ. ನಾವು ಗೆಲ್ಲದೇ ಇರಬಹುದು. ಆದರೆ ನಾನು ಯಾವಾಗಲೂ ಒತ್ತಡವನ್ನು ಆನಂದಿಸುತ್ತೇನೆ ಎಂದು ಅವರು ಹೇಳಿದರು.

Continue Reading
Advertisement
T20 World Cup 2024 Netizen Thanking Darshan For India World Cup Win
ಸ್ಯಾಂಡಲ್ ವುಡ್5 mins ago

T20 World Cup 2024: ದರ್ಶನ್‌ ಜೈಲಿಗೆ ಹೋದಾಗೆಲ್ಲ ವಿಶ್ವಕಪ್‌ ಗೆದ್ದ ಭಾರತ; ಹೀಗ್ಯಾಕೆ ಅಂದ್ರು ನೆಟ್ಟಿಗರು?

Rohit Sharma
ಕ್ರೀಡೆ7 mins ago

Rohit Sharma: ಗೆಲುವಿನ ಸವಿ ನೆನಪಿಗಾಗಿ ಪಿಚ್​ನ ಮಣ್ಣು ತಿಂದ ರೋಹಿತ್​; ವಿಡಿಯೊ ವೈರಲ್​

swim benefits
ಆರೋಗ್ಯ43 mins ago

Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

T20 World Cup 2024
ಕ್ರಿಕೆಟ್44 mins ago

T20 World Cup 2024: ಟಿ20 ವಿಶ್ವಕಪ್​ ಮುಡಿಗೇರಿಸಿಕೊಂಡ ಭಾರತ; ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ ಹೀಗಿತ್ತು

tamanna bhatia gold
ಸಿನಿಮಾ1 hour ago

Actress Tamanna Bhatia: ಬೆಂಗಳೂರಿನ ಶಾಲೆಯಲ್ಲಿ ನಟಿ ತಮನ್ನಾ ಭಾಟಿಯಾ ಬಗ್ಗೆ ಪಾಠ; ಪೋಷಕರ ಆಕ್ಷೇಪ

Viral Video
Latest1 hour ago

Viral Video: ಮನೆಯ ಹೊರಗೆ ತಾಯಿಯ ಜೊತೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!

Parenting Tips
ಶಿಕ್ಷಣ1 hour ago

Parenting Tips: ಕಾಲೇಜಿಗೆ ಹೊರಡಲು ಸಿದ್ಧವಾಗಿರುವ ಮಕ್ಕಳಿಗೆ ಪೋಷಕರು ತಿಳಿಸಲೇಬೇಕಾದ ಸಂಗತಿಗಳಿವು!

ದಶಮುಖ back to school
ಅಂಕಣ1 hour ago

ದಶಮುಖ ಅಂಕಣ: ಮಳೆಯ ನಡುವೆ ಮರಳಿ ಶಾಲೆಗೆ!

T20 World Cup 2024
ಪ್ರಮುಖ ಸುದ್ದಿ2 hours ago

T20 World Cup 2024 : ಗೆಲುವಿನ ಸಂಭ್ರಮದಲ್ಲಿ ಪಾಂಡ್ಯ ಕೆನ್ನೆಗೆ ಮುತ್ತಿಟ್ಟ ನಾಯಕ ರೋಹಿತ್; ಇಲ್ಲಿದೆ ವಿಡಿಯೊ

Railway Rules
Latest2 hours ago

Railway Rules: ರೈಲು ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾದ ನಿಯಮಗಳು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ16 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ22 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌