ind vs aus : ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ - Vistara News

ಕ್ರಿಕೆಟ್

ind vs aus : ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ

ಕೆ. ಎಲ್​ ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ (Ind vs Aus) ವಿರುದ್ಧ ಮೊದಲ ಪಂದ್ಯದಲ್ಲಿ ಆಡುತ್ತಿದೆ.

VISTARANEWS.COM


on

Ind vs Aus
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೊಹಾಲಿ: ಮೊಹಾಲಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್​ಗಳ ಸುಲಭ ಗೆಲುವು ಸಾಧಿಸಿದೆ. ಭಾರತ ತಂಡದ ಪರ ಬೌಲಿಂಗ್​ನಲ್ಲಿ 51 ರನ್​ಗಳಿಗೆ 5 ವಿಕೆಟ್​ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್​ಮನ್​ ಗಿಲ್​ (74) ಹಾಗೂ ಋತುರಾಜ್​ ಗಾಯಕ್ವಾಡ್​ (71), ಸೂರ್ಯಕುಮಾರ್​ ಯಾದವ್​ (50), ಮತ್ತು ಕೆ. ಎಲ್​ ರಾಹುಲ್​ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು. ಈ ವಿಜಯದ ಮೂಲಕ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು.

ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿರುವ ಭಾರತ ಮತ್ತು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾಗೆ ಈ ಸರಣಿ ಡ್ರೆಸ್​ ರಿಹರ್ಸಲ್​ ಇದ್ದಂತೆ. ಮೂರು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಗೆ ನಾಯಕ ರೋಹಿತ್‌ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕನ್ನಡಿಗ ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ಮತ್ತೊಮ್ಮೆ ತಂಡದ ನಾಯಕತ್ವ ಪಡೆದಂತಾಗಿದೆ.

ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ, ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಹಾಗೂ ಚೈನಾಮನ್​ ಸ್ಪಿನ್ನರ್ ಕುಲದೀಪ್ ಯಾದವ್ ಅವರೂ ಈ ಪಂದ್ಯಕ್ಕೆ ಇಲ್ಲ.

ಶ್ರೇಯಸ್‌ ಅಯ್ಯರ್ ಅವರು ತಮ್ಮ ಫಿಟ್‌ನೆಸ್ ಸಾಬೀತುಪಡಿಸಬೇಕಿದೆ. ಸೂರ್ಯಕುಮಾರ್‌ ಯಾದವ್ ಅವರಿಗೂ ಲಯಕ್ಕೆ ಮರಳುವ ಸವಾಲು ಇದೆ. ಇವರಿಬ್ಬರಿಗೂ ವಿಶ್ವಕಪ್ ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಲು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲೇಬೇಕಾದ ಒತ್ತಡದಲ್ಲಿದ್ದಾರೆ.

ಇತ್ತಂಡಗಳ ಪ್ಲೇಯಿಂಗ್ ಇಲೆವೆನ್​

ಭಾರತ: ಕೆ.ಎಲ್. ರಾಹುಲ್ (ನಾಯಕ-ವಿಕೆಟ್‌ಕೀಪರ್), ಶುಭಮನ್ ಗಿಲ್, ಋತುರಾಜ್ ಗಾಯಕವಾಡ, ಶ್ರೇಯಸ್ ಅಯ್ಯ‌, ರವೀಂದ್ರ ಜಡೇಜ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಆರ್. ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್ ಶಮಿ,

ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಷೇನ್, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಸೊಯಿನಿಸ್, ಮ್ಯಾಟ್ ಶಾರ್ಟ್, ಸೀನ್ ಅಬಾಟ್, ಅಡಂ ಜಂಪಾ, ಜೋಶ್ ಇಂಗ್ಲಿಷ್ (ವಿಕೆಟ್‌ಕೀಪರ್)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

WTC Ranking : ಭಾರತ ತಂಡವೀಗ ನಂಬರ್​ 1

WTC Ranking : ಭಾರತ ತಂಡ ಧರ್ಮಶಾಲಾದಲ್ಲಿ ನಡೆಯುವ ಟೆಸ್ಟ್​ನಲ್ಲಿ ಗೆದ್ದರೆ ಆಗಲೂ ನಂಬರ್ ಒನ್​ ಸ್ಥಾನ ಮುಂದುವರಿಯಲಿದೆ.

VISTARANEWS.COM


on

Team India
Koo

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸಿದ ಬಳಿಕ ಭಾರತ (Team India) ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ರ್ಯಾಂಕಿಂಗ್​​ನಲ್ಲಿ (WTC Ranking) ಅಗ್ರಸ್ಥಾನಕ್ಕೇರಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆಸೀಸ್ 172 ರನ್​ಗಳ ಅಂತರದ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊದಲ ಟೆಸ್ಟ್​ಗೆ ಮುಂಚಿತವಾಗಿ, ನ್ಯೂಜಿಲೆಂಡ್ ನಾಲ್ಕು ಪಂದ್ಯಗಳಿಂದ 36 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು, ಶೇಕಡಾ 75 ಅಂಕಗಳನ್ನು ಹೊಂದಿತ್ತು. ಆದಾಗ್ಯೂ, ಆಸ್ಟ್ರೇಲಿಯಾ ವಿರುದ್ಧ 172 ರನ್​ಗಳ ಗಣನೀಯ ಸೋಲಿನ ನಂತರ ಡಬ್ಲ್ಯುಟಿಸಿಯ ಅಂಕಪಟ್ಟಿಯಲ್ಲಿ ನಾಟಕೀಯವಾಗಿ ಬದಲಾವಣೆ ಉಂಟಾಗಿದೆ. ಈ ಸೋಲಿನಿಂದಾಗಿ ತಮ್ಮ ಮೊದಲ ಸ್ಥಾನವನ್ನು ಕಳೆದುಕೊಂಡರು. , ಶೇಕಡಾ 60 ರಷ್ಟು ಕಡಿಮೆ ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಇಳಿದರು.

ಮತ್ತೊಂದೆಡೆ, ಈ ಹಿಂದೆ ಎಂಟು ಪಂದ್ಯಗಳಿಂದ 62 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದ ಭಾರತ, ಪಾಯಿಂಟ್​​ಗಳ ಶೇಕಡಾವಾರು ಪ್ರಮಾಣವನ್ನು 64.58 ಕ್ಕೆ ಹೆಚ್ಚಿಸಿದೆ.

ವೆಲ್ಲಿಂಗ್ಟನ್ ನಲ್ಲಿ ಆಸ್ಟ್ರೇಲಿಯಾದ ಗೆಲುವು ಆ ತಂಡದ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿತು. ನಾಲ್ಕನೇ ಇನ್ನಿಂಗ್ಸ್​​ನಲ್ಲಿ ಆರು ವಿಕೆಟ್ ಪಡೆದ ನಾಥನ್ ಲಿಯಾನ್ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾದ ಅಂಕಗಳು 66 ರಿಂದ 78 ಕ್ಕೆ ಏರಿದೆ, ಅವರ ಅಂಕಗಳ ಶೇಕಡಾವಾರು 55 ರಿಂದ 59.09 ಕ್ಕೆ ಸುಧಾರಿಸಿದೆ. 2023ರ ಚಾಂಪಿಯನ್ ಆಗಿ ಆಸ್ಟ್ರೇಲಿಯಾ ಈಗ ರ್ಯಾಂಕಿಂಗ್​​ನಲ್ಲಿ ಮತ್ತಷ್ಟು ಮೇಲಕ್ಕೇರುವ ಸಾಧ್ಯತೆಯ ಮೇಲೆ ಕಣ್ಣಿಟ್ಟಿದೆ.

ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೆ ಏರುವುದು ಹೇಗೆ?

ಪ್ಯಾಟ್ ಕಮಿನ್ಸ್​ ನೇತೃತ್ವದ ತಂಡಕ್ಕೆ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆಯಲು ಅವಕಾಶವಿದೆ ಮತ್ತು ಧರ್ಮಶಾಲಾದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಮೇಲೆ ನಿರ್ಧರಿತವಾಗುತ್ತದೆ. ಇಂಗ್ಲೆಂಡ್ ತಂಡವು ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಆಸೀಸ್ ಈಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಹೋಗುವ ಅವಕಾಶವನ್ನು ಹೊಂದಿರುತ್ತದೆ.

ಇದನ್ನೂ ಓದಿ : Sangeeta Phogat : ಯಜ್ವೇಂದ್ರ ಚಹಲ್​ ಎತ್ತಿ ಹೆಗಲ ಮೇಲೆ ಕೂರಿಸಿದ ಸಂಗೀತಾ ಫೋಗಟ್​​, ಇಲ್ಲಿದೆ ವಿಡಿಯೊ

ಇದೇ ವೇಳೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಮಾರ್ಚ್ 8 ರಂದು ಪ್ರಾರಂಭವಾಗಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಅಂತಿಮ ಪಂದ್ಯ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ. ಆತಿಥೇಯರು ಈಗಾಗಲೇ ರಾಂಚಿಯಲ್ಲಿ ಗೆಲುವಿನೊಂದಿಗೆ ಸರಣಿಯನ್ನು ಮುಡಿಗೇರಿಸಿಕೊಂಡಿದ್ದಾರೆ

Continue Reading

ಕ್ರಿಕೆಟ್

WPL Points Table: ಹೀನಾಯ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಕುಸಿತ ಕಂಡ ಆರ್​ಸಿಬಿ

ನಾಲ್ಕನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್​​(Mumbai Indians) ತಂಡ ಆರ್​ಸಿಬಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ(WPL Points Table) ಅಗ್ರಸ್ಥಾನಕ್ಕೇರಿದೆ.

VISTARANEWS.COM


on

Sophie Devine and Smriti Mandhana warm up ahead of their fourth game
Koo

ಬೆಂಗಳೂರು: ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​​(Mumbai Indians) ಎದುರಿದ ಪಂದ್ಯದಲ್ಲಿ ಹೀನಾಯ 7 ವಿಕೆಟ್​ಗಳ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ತಂಡ ಅಂಕಪಟ್ಟಿಯಲ್ಲಿ(WPL Points Table) ಭಾರೀ ಕುಸಿತ ಕಂಡಿದೆ. ನಾಲ್ಕನೇ ಸ್ಥಾನದಲ್ಲಿದ್ದ ಮುಂಬೈ ಈ ಗೆಲುವಿನಿಂದ 6 ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೇರಿದೆ. ಆರ್​ಸಿಬಿ ನಾಲ್ಕನೇ ಸ್ಥಾನಕ್ಕೆ ಜಾರಿದೆ.

ಈ ಪಂದ್ಯದಕ್ಕೂ ಮುನ್ನ ಮೆಗ್​ ಲ್ಯಾನಿಂಗ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಅಗ್ರಸ್ಥಾನದಲ್ಲಿತ್ತು. ಆರ್​ಸಿಬಿ 4 ಅಂಕದೊಂದಿಗೆ ದ್ವಿತೀಯ ಸ್ಥಾನಿಯಾಗಿತ್ತು. ಆದರೆ ಮುಂಬೈ ತಂಡದ ಗೆಲುವಿನಿಂದಾಗಿ ಇದೀಗ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ನೂತನ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 2ನೇ ಸ್ಥಾನಕ್ಕೆ ಜಾರಿದರೆ, ಆರ್​ಸಿಬಿ 2 ಸ್ಥಾನ ಕುಸಿತ ಕಂಡು ನಾಲ್ಕನೇ ಸ್ಥಾನದಲ್ಕಿ ಕಾಣಿಸಿಕೊಂಡಿದೆ. ಯುಪಿ ತಂಡ ಈ ಹಿಂದೆ ಇದ್ದ ಮೂರನೇ ಸ್ಥಾನದಲ್ಲಿಯೇ ಮುಂದುವರಿದಿದೆ.

ಇದನ್ನೂ ಓದಿ WPL 2024: ಸತತ 2ನೇ ಸೋಲಿಗೆ ತುತ್ತಾದ ಆರ್​ಸಿಬಿ; ಮುಂಬೈಗೆ 7 ವಿಕೆಟ್​ ಗೆಲುವು

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಮುಂಬೈ ಇಂಡಿಯನ್ಸ್​4316 (+0.402)
ಡೆಲ್ಲಿ ಕ್ಯಾಪಿಟಲ್ಸ್​3214 (+1.271)
ಯುಪಿ ವಾರಿಯರ್ಸ್​​3214 (+0.211)
ಆರ್​ಸಿಬಿ​​4224 (-0.015)
ಗುಜರಾತ್​ ಜೈಂಟ್ಸ್​3030 (-1.995)


ಸತತ 2ನೇ ಸೋಲು ಕಂಡ ಆರ್​ಸಿಬಿ


ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ನಡೆದ ಡಬ್ಲ್ಯುಪಿಎಲ್​ 2ನೇ ಆವೃತ್ತಿಯ 9ನೇ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ಆರ್​ಸಿಬಿಯನ್ನು ​ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ನಿಗದಿತ 20 ಓವರ್​ ಬ್ಯಾಟಿಂಗ್​ ಮಾಡಿದ ಆರ್​ಸಿಬಿ 6 ವಿಕೆಟ್​ಗೆ 131 ರನ್​ ಮಾತ್ರ ಕಲೆ ಹಾಕಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಮುಂಬೈ 15.1 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಆರ್​ಸಿಬಿಗೆ ತವರಿನಲ್ಲಿ ಎದುರಾದ ಸತತ 2ನೇ ಸೋಲು ಇದಾಗಿದೆ. ಇದಕ್ಕೂ ಮುನ್ನ ಡೆಲ್ಲಿ ವಿರುದ್ಧ ಸೋಲು ಕಂಡಿತ್ತು.

Continue Reading

ಕ್ರೀಡೆ

WPL 2024: ಸತತ 2ನೇ ಸೋಲಿಗೆ ತುತ್ತಾದ ಆರ್​ಸಿಬಿ; ಮುಂಬೈಗೆ 7 ವಿಕೆಟ್​ ಗೆಲುವು

VISTARANEWS.COM


on

Nat Sciver-Brunt celebrates the dismissal of S Meghana
Koo

ಬೆಂಗಳೂರು: ಯುಪಿ ವಾರಿಯರ್ಸ್​ ಎದುರಿನ ಕಳೆದ ಪಂದ್ಯದಲ್ಲಿ(WPL 2024) ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್​(Mumbai Indian)​ ತಂಡ ಮತ್ತೆ ಗೆಲುವಿನ ಹಳೆ ಏರಿದೆ. ಆರ್​ಸಿಬಿ(Royal Challengers Bangalore) ವಿರುದ್ಧದ ಶನಿವಾರದ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿ 7 ವಿಕೆಟ್​ಗಳ ಜಯ ಸಾಧಿಸಿದೆ. ಜತೆಗೆ ಅಂಕಪಟ್ಟಿಯಲ್ಲಿಯೂ ಮೇಲೇರಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ಆರ್​ಸಿಬಿಯನ್ನು ​ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ನಿಗದಿತ 20 ಓವರ್​ ಬ್ಯಾಟಿಂಗ್​ ಮಾಡಿದ ಆರ್​ಸಿಬಿ 6 ವಿಕೆಟ್​ಗೆ 131 ರನ್​ ಮಾತ್ರ ಕಲೆ ಹಾಕಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಮುಂಬೈ 15.1 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಆರ್​ಸಿಬಿಗೆ ತವರಿನಲ್ಲಿ ಎದುರಾದ ಸತತ 2ನೇ ಸೋಲು ಇದಾಗಿದೆ. ಇದಕ್ಕೂ ಮುನ್ನ ಡೆಲ್ಲಿ ವಿರುದ್ಧ ಸೋಲು ಕಂಡಿತ್ತು.

ಸಣ್ಣ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭಿಕರಾದ ಯಾಸ್ತಿಕಾ ಭಾಟಿಯಾ(31) ಮತ್ತು ಹೀಲಿ ಮ್ಯಾಥ್ಯೂಸ್​(26) ಬಿರುಸಿನ ಬ್ಯಾಟಿಂಗ್​ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆ ಬಳಿಕ ಬಂದ ಹಂಗಾಮಿ ನಾಯಕಿ ನ್ಯಾಟ್‌ ಸ್ಕಿವರ್‌ ಬ್ರಂಟ್‌ ಬೌಲಿಂಗ್​ ಜತೆಗೆ ಬ್ಯಾಟಿಂಗ್​ನಲ್ಲಿಯೂ ಜವಾಬ್ದಾರಿಯುತ ಆಟವಾಡಿ 4 ಬೌಂಡರಿ ನೆರವಿನಿಂದ 27 ರನ್​ ಬಾರಿಸಿದರು. ಬೌಲಿಂಗ್​ನಲ್ಲಿ 2 ವಿಕೆಟ್ ಕೂಡ ಕಿತ್ತರು. ಮುಂಬೈ ಪರ ಬ್ಯಾಟಿಂಗ್​ನಲ್ಲಿ ಹೆಚ್ಚು ಗಮನ ಸೆಳೆದವರೆಂದರೆ ಅಮೆಲಿಯಾ ಕೆರ್. 24 ಎಸೆತ ಎದುರಿಸಿದ ಕೆರ್​ 7 ಬೌಂಡರಿಯೊಂದಿಗೆ ಅಜೇಯ 40 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಆರ್​ಸಿಬಿಯ ಪ್ರಮುಖ ಬೌಲರ್​ ರೇಣುಕಾ ಸಿಂಗ್​ ಠಾಕೂರ್​ ಅವರು ಈ ಪಂದ್ಯದಲ್ಲಿ ವಿಕೆಟ್​ ಲೆಸ್​ ಆಗುವ ಜತೆಗೆ ದುಬಾರಿಯಾಗಿಯೂ ಕಂಡುಬಂದರು. 2 ಓವರ್​ನಿಂದ ಬರೋಬ್ಬರಿ 25 ರನ್​ ಬಿಟ್ಟುಕೊಟ್ಟರು. ಕನ್ನಡತಿ ಶ್ರೇಯಾಂಕ ಪಾಟೀಲ್ 2 ಓವರ್​ಗೆ 15 ರನ್​ ನೀಡಿ 1 ವಿಕೆಟ್​ ಉರುಳಿಸಿದರು.

ಪೆವಿಲಿಯನ್​ ಪರೇಡ್​ ನಡೆಸಿದ ಆರ್​ಸಿಬಿ ಆಟಗಾರ್ತಿಯರು


ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ತಂಡದ ಪರ ಅಗ್ರ ಕ್ರಮಾಂಕದ ನಾಲ್ಕು ಬ್ಯಾಟರ್​ಗಳು ಈ ಪಂದ್ಯದಲ್ಲಿ ಪೆವಿಲಿಯನ್​ ಪರೇಡ್​ ನಡೆಸಿದರು. ನಾಯಕಿ ಸ್ಮೃತಿ ಮಂಧಾನ(9), ಸೋಫಿ ಡಿವೈನ್​(9), ಸಬ್ಬಿನೇನಿ ಮೇಘನಾ(11) ಮತ್ತು ರಿಚಾ ಘೋಷ್​(7) ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಕಂಡರು. ಇನ್ನೇನು ತಂಡ 100 ರನ್​ ಗಳಿಸುವುದು ಕಷ್ಟ ಎನ್ನುವಾಗ ಮಧ್ಯಮ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿದ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್​ ಪೆರ್ರಿ ಅಜೇಯ 44 ರನ್​ ಬಾರಿಸಿ ತಂಡಕ್ಕೆ ನೆರವಾದರು. ಅವರ ಈ ಬ್ಯಾಟಿಂಗ್​ ಹೋರಾಟದ ಫಲವಾಗಿ ತಂಡ 100ರ ಗಡಿ ದಾಟಿತು. ಮುಂಬೈ ಪರ ಪೂಜಾ ವಸ್ತ್ರಾಕರ್​ 2 ವಿಕೆಟ್​ ಕಿತ್ತರು.

Continue Reading

ಕ್ರೀಡೆ

IND vs ENG 5th Test: ಕೊಹ್ಲಿ ಟೆಸ್ಟ್​ ಆಡದಿರುವುದು ನಾಚಿಕೆಗೇಡಿನ ಸಂಗತಿ; ಆ್ಯಂಡರ್ಸನ್

ವಯಸ್ಸು 41 ದಾಡಿದರೂ ಕೂಡ ಯುವ ಆಟಗಾರರನ್ನು ನಾಚಿಸುವಂತ ಫಿಟ್​ನೆಸ್​ ಮತ್ತು ಬೌಲಿಂಗ್​ ಕೌಶಲ್ಯ ಹೊಂದಿರುವ ಇಂಗ್ಲೆಂಡ್​ ತಂಡದ ಪ್ರಧಾನ ವೇಗಿ ಜೇಮ್ಸ್​ ಆ್ಯಂಡರ್ಸನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್ ಪೂರ್ತಿಗೊಳಿಸಲು ಇನ್ನು ಕೇವಲ 2 ವಿಕೆಟ್​ಗಳ ಅಗತ್ಯವಿದೆ.

VISTARANEWS.COM


on

virat kohli and james anderson
Koo

ಧರ್ಮಶಾಲಾ: ಟೆಸ್ಟ್​ನಲ್ಲಿ 700 ವಿಕೆಟ್​ಗಳ ಸನಿಹದಲ್ಲಿರುವ ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್(James Anderson)​ ಅವರು ವಿರಾಟ್​ ಕೊಹ್ಲಿ(Virat Kohli) ಟೆಸ್ಟ್​ ಸರಣಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್​ ನಡುವಣ ಅಂತಿಮ ಟೆಸ್ಟ್​ ಪಂದ್ಯ(IND vs ENG 5th Test) ಮಾರ್ಚ್​ 7ರಿಂದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಸಂದರ್ಶವೊಂದರಲ್ಲಿ ಆ್ಯಂಡರ್ಸನ್ ಈ ಮಾತನ್ನು ಹೇಳಿದ್ದಾರೆ.

ಆಂಡರ್ಸನ್ ಅವರು ವಿರಾಟ್​ ಕೊಹ್ಲಿಯನ್ನು 37 ಪಂದ್ಯಗಳಿಂದ ಒಟ್ಟು 10 ಬಾರಿ ಔಟ್​ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 25 ಪಂದ್ಯಗಳಲ್ಲಿ 7 ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ. ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಆರಂಭಿಕ 2 ಟೆಸ್ಟ್​ನಿಂದ ಹಿಂದೆ ಸರಿದಿದ್ದರು. ಮೂರನೇ ಪಂದ್ಯದಲ್ಲಿ ಅವರು ತಂಡ ಸೇರಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಮೂರನೇ ಪಂದ್ಯ ಆರಂಭಕ್ಕೂ ಮುನ್ನವೇ ಕೊಹ್ಲಿ ಸರಣಿಯ ಎಲ್ಲ ಪಂದ್ಯಗಳಿಂದ ಹಿಂದೆ ಸರಿದಿರುವ ನಿರ್ಧಾರ ಪ್ರಕಟಿಸಿದ್ದರು.

ಜಿಯೊ ಸಂದರ್ಶನದಲ್ಲಿ ಮಾತನಾಡಿದ ಆ್ಯಂಡರ್ಸನ್​, ‘ಕಳೆದ ಹಲವು ವರ್ಷಗಳಲ್ಲಿ ತನಗೆ ಕಠಿಣ ಸ್ಪರ್ಧೆಯಾಗಿದ್ದ ವಿರಾಟ್‌ ಕೊಹ್ಲಿಯ ಸವಾಲನ್ನು ಈ ಬಾರಿ ಎದುರಿಸಲು ಸಾಧ್ಯವಾಗಿಲ್ಲ. ಗುಣಮಟ್ಟದ ಬ್ಯಾಟ್ಸ್‌ಮನ್‌ಗಳ ಎದುರು ಸವಾಲು ಮೆಟ್ಟಿ ನಿಲ್ಲಬೇಕೆಂಬುವುದೇ ನನ್ನ ಪ್ರಮುಖ ಗುರಿ. ಸವಾಲಿನ ಆಟಗಾರನಾದ ಕೊಹ್ಲಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಹೇಳಿದರು.

ವಯಸ್ಸು 41 ದಾಡಿದರೂ ಕೂಡ ಯುವ ಆಟಗಾರರನ್ನು ನಾಚಿಸುವಂತ ಫಿಟ್​ನೆಸ್​ ಮತ್ತು ಬೌಲಿಂಗ್​ ಕೌಶಲ್ಯ ಹೊಂದಿರುವ ಇಂಗ್ಲೆಂಡ್​ ತಂಡದ ಪ್ರಧಾನ ವೇಗಿ ಜೇಮ್ಸ್​ ಆ್ಯಂಡರ್ಸನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್ ಪೂರ್ತಿಗೊಳಿಸಲು ಇನ್ನು ಕೇವಲ 2 ವಿಕೆಟ್​ಗಳ ಅಗತ್ಯವಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್​ನಲ್ಲಿ(India vs England 5th Test) ಅವರು ಈ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ. ಭಾರತ ಪ್ರವಾಸದ ವೇಳೆಯೇ ಆ್ಯಂಡರ್ಸನ್ ಅವರು 700 ವಿಕೆಟ್​ ಸಾಧನೆ ಭಾರತದ ನೆಲದಲ್ಲೇ ಮಾಡುತ್ತೇನೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಕಾಲ ಸನ್ನಿಹಿತವಾದಂತಿದೆ.

ಇದನ್ನೂ ಓದಿ James Anderson: ಟೆಸ್ಟ್​ನಲ್ಲಿ 700 ವಿಕೆಟ್ ಹೊಸ್ತಿಲಲ್ಲಿರುವ ಆ್ಯಂಡರ್ಸನ್​ ಯಶಸ್ಸಿಗೆ ಜಹೀರ್‌ ಖಾನ್​ ಕೂಡ ಕಾರಣವಂತೆ!

ಭಾರತ ವಿರುದ್ಧದ ಅಂತಿಮ ಟೆಸ್ಟ್​ನಲ್ಲಿ ಆ್ಯಂಡರ್ಸನ್​ ಅವರು 2 ವಿಕೆಟ್​ ಕಿತ್ತರೆ 700 ವಿಕೆಟ್‌ ಕ್ಲಬ್‌ಗೆ ಸೇರ್ಪಡೆಗೊಳ್ಳಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಹಾಗೂ ಮೊದಲ ವೇಗಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ, ದಿವಂಗತ ಶೇನ್ ವಾರ್ನ್ 700 ಟೆಸ್ಟ್​ ವಿಕೆಟ್​ ಕಿತ್ತ ಉಳಿದಿಬ್ಬರು ಆಟಗಾರರು.

2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜೇಮ್ಸ್​ ಆ್ಯಂಡರ್ಸನ್​ ಅವರು ಇಂಗ್ಲೆಂಡ್​ ಕಂಡ ಶ್ರೇಷ್ಠ ಬೌಲರ್​ಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 2003ರಲ್ಲಿ ಅವರು ಟೆಸ್ಟ್​ ಕ್ರಿಕೆಟ್​ಗೆ ಅಡಿ ಇರಿಸಿದ್ದರು. ಇದುವರೆಗೆ ಇಂಗ್ಲೆಂಡ್​ ಪರ ಅವರು 186 ಟೆಸ್ಟ್​ ಪಂದ್ಯ ಆಡಿ 698* ವಿಕೆಟ್​ ಕಿತ್ತಿದ್ದಾರೆ. 32 ಬಾರಿ 5 ವಿಕೆಟ್​ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಮೂರು ಸಲ 10 ವಿಕೆಟ್​ ಪಡೆದಿದ್ದಾರೆ.

Continue Reading
Advertisement
Elephant Attack New
ಕೊಡಗು3 mins ago

Elephant Attack : ನಿಶಾನಿ ಬೆಟ್ಟದಲ್ಲಿ ಆನೆ ದಾಳಿಗೆ ವೃದ್ಧ ಬಲಿ; ಟ್ರೆಕಿಂಗ್‌ಗೆ ಹೋದವರಿಗೆ ಕಂಡಿತು ಶವ

Yuva Rajkumar And Shiva Rajkumar Dance Together obbane shiva song
ಸ್ಯಾಂಡಲ್ ವುಡ್6 mins ago

Yuva Movie: ಡ್ಯಾನ್ಸ್ ಮೂವ್ಸ್‌ನಲ್ಲಿ ಕಿಚ್ಚು ಹಚ್ಚಿದ ದೊಡ್ಮನೆ ಕುಡಿಗಳು: ಯಾರು ಬೆಸ್ಟ್?

Team India
ಕ್ರೀಡೆ18 mins ago

WTC Ranking : ಭಾರತ ತಂಡವೀಗ ನಂಬರ್​ 1

BY Vijayendra
ಬೆಂಗಳೂರು51 mins ago

BY Vijayendra : ಬಿಜೆಪಿ ಸಂಕಲ್ಪ ಪತ್ರಕ್ಕಾಗಿ ರಾಜ್ಯದಲ್ಲಿ3 ಲಕ್ಷ ಜನರ ಅಭಿಪ್ರಾಯ ಸಂಗ್ರಹ; ಬಿ.ವೈ ವಿಜಯೇಂದ್ರ

Encounter In Kanker
ದೇಶ57 mins ago

Encounter In Kanker: ಛತ್ತೀಸ್‌ಗಢದಲ್ಲಿ ಮಾವೋವಾದಿಗಳೊಂದಿಗೆ ಎನ್‌ಕೌಂಟರ್‌; ಕಾನ್ಸ್‌ಟೇಬಲ್‌ ಹುತಾತ್ಮ

Job layoff
ಪ್ರಮುಖ ಸುದ್ದಿ60 mins ago

Viral Video : ಕೆಲಸ ಹೋದ ಬೇಜಾರಲ್ಲಿ ಯುವತಿ ಮಾಡಿದ ಕ್ರಿಯೇಟಿವ್​ ವಿಡಿಯೊಗೆ ಬಂತು ಸಿಕ್ಕಾಪಟ್ಟೆ ಆಫರ್​ಗಳು!

Tamannaah to star next in Odela 2
ಟಾಲಿವುಡ್1 hour ago

Vasishta Simha: ಮಿಲ್ಕಿ ಬ್ಯೂಟಿ ಜತೆ ಮೆರವಣಿಗೆ ಹೊರಟ ಕನ್ನಡದ ಸಿಂಹ!

Varalaxmi Sarathkumar gets engaged Nicholai Sachdev
South Cinema1 hour ago

Varalaxmi Sarathkumar:‌ 14 ವರ್ಷದ ಪ್ರೀತಿಗೆ 38ನೇ ವಯಸ್ಸಿನಲ್ಲಿ ನಿಶ್ಚಿತಾರ್ಥದ ಮುದ್ರೆ ಹಾಕಿದ ಮಾಣಿಕ್ಯ ನಟಿ!

Parliament Election chikkaballapura
ರಾಜಕೀಯ1 hour ago

Parliament Election : ಚಿಕ್ಕಬಳ್ಳಾಪುರದಿಂದ ಶರತ್‌ ಬಚ್ಚೇಗೌಡರ ಪತ್ನಿ ಪ್ರತಿಭಾ ಕಣಕ್ಕೆ?; ಕುಟುಂಬ ಹೇಳಿದ್ದೇನು?

The bike collided with a tipper lorry Rider death
ತುಮಕೂರು2 hours ago

Road Accident : ಬೈಕ್‌ನಲ್ಲಿ ತ್ರಿಬಲ್‌ ರೈಡಿಂಗ್‌ ಎಡವಟ್ಟು; ಹಾರಿಹೋಯ್ತು ಸವಾರ ಪ್ರಾಣ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ9 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು21 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು1 day ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌