IPL 2023: ಪಂಜಾಬ್​ಗೆ ಬೃಹತ್​ ಮೊತ್ತದ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್​ - Vistara News

ಕ್ರಿಕೆಟ್

IPL 2023: ಪಂಜಾಬ್​ಗೆ ಬೃಹತ್​ ಮೊತ್ತದ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್​

ಪಂಜಾಬ್​ ಕಿಂಗ್ಸ್​ ವಿರುದ್ಧ ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ 213 ರನ್​ ಗಳಿಸಿ ಸವಾಲೊಡ್ಡಿದೆ.

VISTARANEWS.COM


on

Rilee Rossouw
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಧರ್ಮಶಾಲಾ: ದಶಕದ ಬಳಿಕ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಭರ್ಜರಿ ಬ್ಯಾಟಿಂಗ್​ ನಡೆಸಿ ಬೃಹತ್​ ಮೊತ್ತ ಕಲೆಹಾಕಿದೆ. ಆತಿಥೇಯ ಪಂಜಾಬ್​ ಗೆಲುವಿಗೆ 214 ರನ್​ ಬಾರಿಸಬೇಕಿದೆ.

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಜೋಶ್​ನಿಂದಲೇ ಬ್ಯಾಟ್​ ಬೀಸಿ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ನಷ್ಟಕ್ಕೆ 213 ರನ್​ ಗಳಿಸಿದೆ. ಡೆಲ್ಲಿ ಪರ ರಿಲೀ ರೊಸೊ(82* ), ಪೃಥ್ವಿ ಶಾ(54) ಡೇವಿಡ್​ ವಾರ್ನರ್​(46) ರನ್ ​ಗಳಿಸಿ ಮಿಂಚಿದರು.

ಇನಿಂಗ್ಸ್​ ಆರಂಭಿಸಿದ ಡೆಲ್ಲಿ ಆರಂಭಿಕ ಎರಡು ಓವರ್​ನಲ್ಲಿ ರಕ್ಷಣಾತ್ಮಕ ಆಟವಾಡಿತು. 2 ಓವರ್​ಗೆ ಕೇವಲ 6 ರನ್​ ಮಾತ್ರ ಒಟ್ಟುಗೂಡಿತು. ಈ ರನ್​ ಗಮನಿಸುವಾಗ ಡೆಲ್ಲಿ ಈ ಪಂದ್ಯದಲ್ಲಿಯೂ ಅಲ್ಪ ಮೊತ್ತ ದಾಖಲಿಸಲಿದೆ ಎಂದು ಊಹಿಸಲಾಯಿತು. ಆದರೆ ಮುಂದಿನ ಓವರ್​ನಿಂದ ಜಿದ್ದಿಗೆ ಬಿದ್ದವರಂತೆ ಬಿರುಸಿನ ಬ್ಯಾಟಿಂಗ್​ ನಡೆಸಿದ ವಾರ್ನರ್​ ಮತ್ತು ಪೃಥ್ವಿ ಶಾ ಪಂಜಾಬ್​ ಬೌಲರ್​ಗಳಿಗೆ ಸತತ ಸಿಕ್ಸರ್​ ಮತ್ತು ಬೌಂಡರಿ ರುಚಿ ತೋರಿಸಲಾರಂಭಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟದಿಂದ ರನ್​ ವೇಗ ಹಠಾತ್​ 10ರ ಸರಾಸರಿಯಲ್ಲಿ ಸಾಗಿ 7 ಓವರ್​ಗೆ 70 ರನ್​ಗಳ ಗಡಿ ದಾಟಿತು.

ಬಿರುಸಿನ ಬ್ಯಾಟಿಂಗ್​ ನೆಡೆಸುತ್ತಿದ್ದ ವಾರ್ನರ್​ ಅವರು 41 ರನ್​ ಗಳಿಸಿದ್ದ ವೇಳೆ ರಾಹುಲ್​ ಚಹರ್​ ಅವರಿಂದ ಜೀವದಾನ ಪಡೆದರು. ಆದರೆ ಈ ಅವಕಾಶವನ್ನು ಅವರು ಹೆಚ್ಚು ಕಾಲ ಬಳಸಿಕೊಳ್ಳುವಲ್ಲಿ ವಿಫಲರಾದರು. ಮುಂದಿನ 5 ರನ್​ ಅಂತರದಲ್ಲಿ ಅವರು ವಿಕೆಟ್​ ಕೈ ಚೆಲ್ಲಿದರು. ಅಸಾಧ್ಯವಾದ ಕ್ಯಾಚ್​ ಒಂದನ್ನು ಚಿರತೆ ವೇಗದಲ್ಲಿ ಓಡಿ ಕ್ಯಾಚ್​ ಹಿಡಿಯುವ ಮೂಲಕ ಶಿಖರ್​ ಧವನ್​ ಅವರು ವಾರ್ನರ್​ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ವಾರ್ನರ್​ ಮತ್ತು ಪೃಥ್ವಿ ಶಾ ಮೊದಲ ವಿಕೆಟ್​ಗೆ 94 ರನ್​ ರಾಶಿ ಹಾಕಿದರು. ವಾರ್ನರ್​ ಗಳಿಕೆ 46 ರನ್​

ಅರ್ಧಶತಕ ಬಾರಿಸಿದ ಪೃಥ್ವಿ ಶಾ

ಆರಂಭಿಕ ಪಂದ್ಯಗಳಲ್ಲಿ ಸತತ ಸೊನ್ನೆ ಸುತ್ತಿ ಬಳಿಕ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದರೂ ಬ್ಯಾಟಿಂಗ್​ ವೈಫಲ್ಯ ಕಂಡು ಬಾರಿ ಟೀಕೆಗೆ ಗುರಿಯಾಗಿದ್ದ ಪೃಥ್ವಿ ಶಾ, ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ತಮ್ಮ ಹಳೇಯ ಬ್ಯಾಟಿಂಗ್​ ಶೈಲಿಯಲ್ಲೇ ಬ್ಯಾಟ್​ ಬೀಸಿದ ಅವರು 7 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 54 ರನ್​ ಗಳಿಸಿದರು. ಇದರ ಮಧ್ಯೆ ಅವರು ಎರಡು ಬಾರಿ ಕೈ ಬೆರಳಿನ ಗಾಯಕ್ಕೂ ತುತ್ತಾದರು. ಇದು ಪೃಥ್ವಿ ಶಾ ಅವರು ಈ ಆವೃತ್ತಿಯ ಐಪಿಎಲ್​ನಲ್ಲಿ ಬಾರಿಸಿದ ಮೊದಲ ಅರ್ಧಶತಕ ಮತ್ತು ಗರಿಷ್ಠ ಮೊತ್ತವಾಗಿದೆ. ವಾರ್ನರ್​ ಜತೆ ಉತ್ತಮ ಇನಿಂಗ್ಸ್​ ಕಟ್ಟಿದ ಅವರು ಆ ಬಳಿಕ ದ್ವಿತೀಯ ವಿಕೆಟ್​ಗೆ ರೂಸೊ ಜತೆ ಸೇರಿ 54 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು.

ವಾರ್ನರ್​ ವಿಕೆಟ್​ ಪತನದ ಬಳಿಕ ಬ್ಯಾಟ್​ ಹಿಡಿದು ಬಂದ ದಕ್ಷಿಣ ಆಫ್ರಿಕಾದ ದೈತ್ಯ ಬ್ಯಾಟರ್​ ರಿಲೀ ರೂಸೊ ಅವರು ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಯುವರಾಜ್​ ಸಿಂಗ್​ ಶೈಲಿಯಲ್ಲಿ ಬ್ಯಾಟಿಂಗ್​ ನಡೆಸಿ ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. 26 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಡೆಲ್ಲಿ ಆಟಗಾರರ ಆಟವನ್ನು ಗಮನಿಸುತ್ತಿದ್ದ ಕೋಚ್​ ರಿಕಿ ಪಾಂಟಿಂಗ್​ ಮತ್ತು ತಂಡದ ನಿರ್ದೇಶಕ ಸೌರವ್​ ಗಂಗೂಲಿ ಅವರು ಈ ಪ್ರದರ್ಶನವನ್ನು ಆರಂಭದಲ್ಲೇ ತೋರಿಸುತ್ತಿದ್ದರೆ ನಾವು ಕೂಡ ಪ್ಲೇ ಆಫ್​ ರೇಸ್​ನಲ್ಲಿರಬಹುದಿತ್ತು ಎನ್ನುವ ಅರ್ಥದಲ್ಲಿ ಸಂಭಾಷಣೆ ನಡೆಸುತ್ತಿರುವುದು ಕಂಡು ಬಂತು.

ಇದನ್ನೂ ಓದಿ IPL 2023: ಕೇಶವಿನ್ಯಾಸದಲ್ಲಿ ಅರಳಿದ ಆರ್​ಸಿಬಿ, ವಿರಾಟ್​ ಕೊಹ್ಲಿ ಚಿತ್ರ

ಒಟ್ಟು 37 ಎಸೆತ ಎದುರಿಸಿದ ರೂಸೊ ಅವರು ತಲಾ 6 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ ಅಜೇಯ 82 ರನ್​ ಗಳಿಸಿದರು. ಅಂತಿಮ ಹಂತದಲ್ಲಿ ಫಿಲಿಪ್​ ಸಾಲ್ಟ್​ ಕೂಡ ಅಬ್ಬರ ಬ್ಯಾಟಿಂಗ್​ ನಡೆಸಿ 14 ಎಸೆತಗಳ ಮುಂದೆ ಅಜೇಯ 26 ರನ್​ ಬಾರಿಸಿದರು. ಪಂಜಾಬ್​ ಪರ ಸ್ಯಾಮ್​ ಕರನ್​ 2 ವಿಕೆಟ್​ ಕೆಡವಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rajal Arora: ಟೀಮ್​ ಇಂಡಿಯಾ ಜತೆಗಿರುವ ಏಕೈಕ ಮಹಿಳಾ ಸಿಬ್ಬಂದಿ ಯಾರು? ಇವರ ಕೆಲಸವೇನು?

Rajal Arora: ಕೆಎಲ್ ರಾಹುಲ್ ಅವರ ಪತ್ನಿ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರೊಂದಿಗೆ ರಾಜಲ್​ ಅರೋರಾ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇವರಿಬ್ಬರೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಾರೆ. ಇಶಾಂತ್ ಶರ್ಮಾ ಪತ್ನಿ ಜತೆಗೂ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.

VISTARANEWS.COM


on

Rajal Arora
Koo

ನ್ಯೂಯಾರ್ಕ್​: ಟೀಮ್​ ಇಂಡಿಯಾ ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್(T20 World Cup)​ ಟೂರ್ನಿಯಲ್ಲಿ ಹ್ಯಾಟ್ರಿಕ್​ ಗೆಲುವು ಸಾಧಿಸಿ ಈಗಾಗಲೇ ಸೂಪರ್​-8 ಹಂತಕ್ಕೇರಿದೆ. ಆದರೆ, ಟೀಮ್​ ಇಂಡಿಯಾ(Team India) ಕೋಚಿಂಗ್​ ಸಿಬ್ಬಂದಿಗಳ ಜತೆ ಮಹಿಳಾ ಅಧಿಕಾರಿಯೊಬ್ಬರು ಕೂಡ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿ. ಈಕೆ ಯಾರು? ಇವರಿಗೆ ಟೀಮ್​ ಇಂಡಿಯಾದಲ್ಲಿ ಏನು ಕೆಲಸ? ಎನ್ನುವ ವಿಚಾರ ತಿಳಿದುಕೊಳ್ಳಲು ತಿಳಿದುಕೊಳ್ಳವ ತವಕದಲ್ಲಿದ್ದಾರೆ.


ಹೌದು, ಇವರ ಹೆಸರು ರಾಜಲ್​ ಅರೋರಾ. ಈಕೆ ಭಾರತೀಯ ಕ್ರಿಕೆಟ್ ತಂಡದ ಸಾಮಾಜಿಕ ಮಾಧ್ಯಮ ತಂಡದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಣೆಯ ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಅಂಡ್ ಕಮ್ಯುನಿಕೇಷನ್ಸ್‌ನಿಂದ ಪದವಿಯನ್ನು ಪೂರ್ಣಗೊಳಿಸಿ. ಕಂಟೆಂಟ್ ರೈಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅರೋರಾ, 2015ರಲ್ಲಿ ಬಿಸಿಸಿಐಗೆ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರಾಗಿ ಸೇರಿಕೊಂಡರು. ಅಂದಿನಿಂದ ಇಂದಿನವರೆಗೆ ಭಾರತ ತಂಡ ಎಲ್ಲೇ ಸರಣಿ ಆಡಲು ಪ್ರವಾಸ ಕೈಗೊಂಡಾಗ ತಂಡದ ಜತೆ ಪ್ರಮಾಣಿಸುತ್ತಾರೆ. ಆಟಗಾರರು ಅಭ್ಯಾಸ ನಡೆಸುವ ಸುದ್ದಿಗೋಷ್ಠಿ ಸೇರಿದಂತೆ ಹಲವು ಕಾರ್ಯಕ್ರಮದ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.


ಭಾರತ ತಂಡದ ಸೋಷಿಯಲ್ ಮೀಡಿಯಾ ಮಾತ್ರವಲ್ಲದೆ ಬಿಸಿಸಿಐನ ಆಂತರಿಕ ದೂರು ಸಮಿತಿಯ ಮುಖ್ಯಸ್ಥರಾಗಿಯೂ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಆಟಗಾರರ ದುರ್ವರ್ತನೆಯ ವಿರುದ್ಧದ ದೂರುಗಳನ್ನು ಅವರು ಮೇಲ್ವಿಚಾರಣೆ ಮಾಡುತ್ತಾರೆ.


ಅರೋರಾ ಅವರು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಿಂದ ಭಾರತೀಯ ತಂಡದ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದಾರೆ. ಪ್ರತಿ ಸರಣಿಗೂ ಮುನ್ನ ಆಟಗಾರರು ಮತ್ತು ಮಾಧ್ಯಮಗಳೊಂದಿಗೆ ಸಂವಾದ ನಡೆಸಲು ಸೂಕ್ತ ವ್ಯವಸ್ಥೆ ಮಾಡುವಲ್ಲಿ ಅರೋರಾ ಪ್ರಮುಖ ಪಾತ್ರ ವಹಿಸುತ್ತಾರೆ. ತಂಡದ ಸದಸ್ಯರಿಗೆ ಅಗತ್ಯವಿರುವಂತೆ ಸಹಾಯ ಮಾಡುವಲ್ಲಿ ಸಹಾಯಕ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಾರೆ. ಐಪಿಎಲ್​ನಲ್ಲಿಯೂ ಇವರು ಬಿಸಿಸಿಐ ಪರ ಕಾರ್ಯನಿರ್ವಹಿಸುತ್ತಾರೆ.

ಇದನ್ನೂ ಓದಿ IND vs USA: ಕೊಹ್ಲಿಯ ವಿಕೆಟ್​ ಪತನ ಕಂಡು ದಂಗಾದ ರೋಹಿತ್​ ಶರ್ಮ; ವಿಡಿಯೊ ವೈರಲ್​


ಕೆಎಲ್ ರಾಹುಲ್ ಅವರ ಪತ್ನಿ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರೊಂದಿಗೆ ರಾಜಲ್​ ಅರೋರಾ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇವರಿಬ್ಬರೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಾರೆ. ಇಶಾಂತ್ ಶರ್ಮಾ ಪತ್ನಿ ಜತೆಗೂ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.


ಸೂಪರ್​-8ಗೆ ಲಗ್ಗೆಯಿಟ್ಟ ಭಾರತ


ಅಮೆರಿಕ(IND vs USA) ವಿರುದ್ಧ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸುವ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಪ್ರವೇಶ ಪಡೆದಿದೆ. ಇಲ್ಲಿನ ನಾಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಅಮೆರಿಕ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 110 ರನ್​ ಬಾರಿಸಿತು. ಜವಾಬಿತ್ತ ಭಾರತ ಈ ಸಣ್ಣ ಮೊತ್ತವನ್ನು 18.2 ಓವರ್​ ಎದುರಿಸಿ 3 ವಿಕೆಟ್​ ಕಳೆದುಕೊಂಡು 111 ರನ್​ ಬಾರಿಸಿ ಗೆಲುವಿನ ದಡ ಸೇರಿತು.

Continue Reading

ಕ್ರೀಡೆ

IND vs USA: ಕೊಹ್ಲಿಯ ವಿಕೆಟ್​ ಪತನ ಕಂಡು ದಂಗಾದ ರೋಹಿತ್​ ಶರ್ಮ; ವಿಡಿಯೊ ವೈರಲ್​

IND vs USA: 2012ರಿಂದ ಟಿ20 ವಿಶ್ವಕಪ್​ ಆಡಲು ಆರಂಭಿಸಿದ ವಿರಾಟ್​ ಒಮ್ಮೆಯೂ ಗೋಲ್ಡನ್​ ಡಕ್​ ಸಂಕಟಕ್ಕೆ ಸಿಲುಕಿರಲಿಲ್ಲ. ಕನಿಷ್ಠ ಒಂದು ರನ್​ ಆದರೂ ಗಳಿಸಿದ್ದರು.

VISTARANEWS.COM


on

IND vs USA
Koo

ನ್ಯೂಯಾರ್ಕ್​: ಅಮೆರಿಕ(IND vs USA) ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಶೂನ್ಯಕ್ಕೆ ವಿಕೆಟ್​ ಕಳೆದುಕೊಂಡಿದ್ದನ್ನು ನೋಡಿ ನಾನ್​ ಸ್ಟ್ರೈಕ್​ನಲ್ಲಿ ನಾಯಕ ರೋಹಿತ್​ ಶರ್ಮ(Rohit Sharma) ಒಂದು ಕ್ಷಣ ದಂಗಾದರು. ಈ ವಿಡಿಯೊ ವೈರಲ್​ ಆಗಿದೆ. ಭಾರತೀಯ ಮೂಲದ, ಅಂಡರ್​-19 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಪರ ಆಡಿದ್ದ ಎಡಗೈ ವೇಗಿ ಸೌರಭ್ ನೇತ್ರವಲ್ಕರ್ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಕೊಹ್ಲಿ ವಿಕೆಟ್​ ಪತನಗೊಂಡಿತು. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ನೇತ್ರವಲ್ಕರ್ ತಾವೆಸೆದ ಮೊದಲ ಎಸೆತದಲ್ಲೇ ಮೊಹಮ್ಮದ್​ ರಿಜ್ವಾನ್​ ವಿಕೆಟ್​ ಕಿತ್ತಿದ್ದರು. 2 ವಿಕೆಟ್​ ಪತನದ ವಿಡಿಯೊವನ್ನು ಕೊಲಾಜ್​ ಮಾಡಿ ಐಸಿಸಿ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ.

ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಗೋಲ್ಡನ್​ ಡಕ್(Virat Kohli Golden Duck)​ ಆಗುವ ಮೂಲಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಗೋಲ್ಡನ್​ ಡಕ್​ ಆಗ ಅವಮಾನಕ್ಕೆ ಸಿಲುಕಿದರು. 2012ರಿಂದ ಟಿ20 ವಿಶ್ವಕಪ್​ ಆಡಲು ಆರಂಭಿಸಿದ ವಿರಾಟ್​ ಒಮ್ಮೆಯೂ ಗೋಲ್ಡನ್​ ಡಕ್​ ಸಂಕಟಕ್ಕೆ ಸಿಲುಕಿರಲಿಲ್ಲ. ಕನಿಷ್ಠ ಒಂದು ರನ್​ ಆದರೂ ಗಳಿಸಿದ್ದರು. ಕೊಹ್ಲಿ ಒಟ್ಟು 28 ಟಿ20 ವಿಶ್ವಕಪ್​ ಇನಿಂಗ್ಸ್​ ಆಡಿ 1146 ರನ್​ ಬಾರಿಸಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಐಪಿಎಲ್​ ಟೂರ್ನಿಯಲ್ಲಿ 700ಕ್ಕೂ ಅಧಿಕ ರನ್​ ಗಳಿಸಿ ಟೂರ್ನಿಯಲ್ಲೇ ಗರಿಷ್ಠ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದ ಕೊಹ್ಲಿಯ ಮೇಲೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿಯೂ ಭಾರೀ ನಿರೀಕ್ಷೆ ಇಡಲಾಗಿತ್ತು. ಆದರೆ ಕೊಹ್ಲಿ ಕಳಪೆ ಬ್ಯಾಟಿಂಗ್​ ಮೂಲಕ ಈ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. 1, 4,0 ಇದು ಕೊಹ್ಲಿಯ ಈ ಬಾರಿಯ ಸ್ಕೋರ್​ ಆಗಿದೆ.

ಇದನ್ನೂ ಓದಿ IND vs USA: ಬೆಸ್ಟ್​ ಫೀಲ್ಡಿಂಗ್​ಗೆ 2ನೇ ಚಿನ್ನದ ಪದಕ ಗೆದ್ದ ಮೊಹಮ್ಮದ್ ಸಿರಾಜ್

ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್​ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವುದು ಎನ್ನುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್​ನಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ.

ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದು ಕೂಡ ಅವರ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವಿರಬಹುದು. ಕೆಲ ವರ್ಷಗಳಿಂದ ಐಪಿಎಲ್​ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಿದ್ದರೂ ಕೂಡ ಐಸಿಸಿ ಟೂರ್ನಿಯಲ್ಲಿ ಇದುವರೆಗೂ ಆಡಿರಲಿಲ್ಲ. ಶೈನಿಂಗ್​ ಬಾಲ್​ನಲ್ಲಿ ಅವರಿಗೆ ಆಡಿದ ಅನುಭವ ಕೂಡ ಅಷ್ಟಾಗಿ ಇಲ್ಲ. ಏನಿದ್ದರೂ ಮಧ್ಯಮ ಕ್ರಮಾಂಕದಲ್ಲಿಯೇ ಅವರು ಹೆಚ್ಚು ಸಕ್ಸನ್​ ಕಂಡಿರುವುದು. ಹೀಗಾಗಿ ಮುಂದಿನ ಪಂದ್ಯದಲ್ಲಿ ಅವರನ್ನು ಎಂದಿನಂತೆ ದ್ವಿತೀಯ ಕ್ರಮಾಂಕದಲ್ಲಿಯೇ ಆಡಿಸುವುದು ಸೂಕ್ತ ಎನ್ನುವಂತಿದೆ.

Continue Reading

ಕ್ರೀಡೆ

IND vs USA: ಬೆಸ್ಟ್​ ಫೀಲ್ಡಿಂಗ್​ಗೆ 2ನೇ ಚಿನ್ನದ ಪದಕ ಗೆದ್ದ ಮೊಹಮ್ಮದ್ ಸಿರಾಜ್

IND vs USA: ಯುವರಾಜ್​ ಸಿಂಗ್​(Yuvraj Singh) ಅವರು ವಿಶೇಷ ಅತಿಥಿಯಾಗಿ ಡ್ರೆಸ್ಸಿಂಗ್ ರೂಮ್​ಗೆ ಬಂದು ಸಿರಾಜ್​ಗೆ ಅತ್ಯುತ್ತಮ ಫೀಲ್ಡರ್ ಚಿನ್ನದ ಪದಕ ನೀಡಿ ಗೌರವಿಸಿದರು.

VISTARANEWS.COM


on

IND vs USA
Koo

ನ್ಯೂಯಾರ್ಕ್​: ಅಮೆರಿಕ(IND vs USA) ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡರ್​ ಪ್ರಶಸ್ತಿಯನ್ನು ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್(Mohammed Siraj)​ ಪಡೆದುಕೊಂಡಿದ್ದಾರೆ. ಸಿರಾಜ್​ಗೆ ಒಲಿದ 2ನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಈ​ ಪ್ರಶಸ್ತಿ ಗೆದ್ದಿದ್ದರು. ನಿನ್ನೆಯ ಪಂದ್ಯದಲ್ಲಿ ಸಿರಾಜ್​ ಅವರು 2 ಕ್ಯಾಚ್​ ಮತ್ತು ಒಂದು ರನೌಟ್​ ಮಾಡಿ ಗಮನಸೆಳೆದಿದ್ದರು. ಯುವರಾಜ್​ ಸಿಂಗ್​(Yuvraj Singh) ಅವರು ವಿಶೇಷ ಅತಿಥಿಯಾಗಿ ಡ್ರೆಸ್ಸಿಂಗ್ ರೂಮ್​ಗೆ ಬಂದು ಈ ಪ್ರಶಸ್ತಿ ಪ್ರದಾನ ಮಾಡಿದರು.

ಎನ್​ ಆರ್​ ಕುಮಾರ್​ ಅವರ ಕ್ಯಾಚೊಂದನ್ನು ಸಿರಾಜ್​ ಬೌಂಡರಿ ಲೈನ್​ನಲ್ಲಿ ಅತ್ಯದ್ಭುತ ರೀತಿಯಲ್ಲಿ ಹಾರಿ ಹಿಡಿದರು. ಕಳೆದ ವರ್ಷ ನಡೆದಿದ್ದ ಏಕದಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಮ್ಯಾನೆಜ್​ಮೆಂಟ್​ ಆಟಗಾರರಲ್ಲಿ ಹೆಚ್ಚಿನ ಸ್ಫೂರ್ತಿ ತುಂಬವ ನಿಟ್ಟಿನಲ್ಲಿ, ಪಂದ್ಯವೊಂದರಲ್ಲಿ ಉತ್ತಮ ಫೀಲ್ಡಿಂಗ್(Best Fielder Award) ನಡೆಸಿದರೆ ಆತನನ್ನು ಗುರುತಿಸಿ ಚಿನ್ನದ ಪದಕ ನೀಡುವ ಕಾರ್ಯವನ್ನು ಜಾರಿಗೆ ತಂದಿತ್ತು. ಈ ಪ್ರಕ್ರಿಯೆ ಟಿ20 ವಿಶ್ವಕಪ್​ನಲ್ಲಿಯೂ ಮುಂದುವರಿದೆ.

ಸೂಪರ್​-8ಗೆ ಲಗ್ಗೆಯಿಟ್ಟ ಭಾರತ


ಅಮೆರಿಕ(IND vs USA) ವಿರುದ್ಧ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸುವ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಪ್ರವೇಶ ಪಡೆದಿದೆ. ಇಲ್ಲಿನ ನಾಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಅಮೆರಿಕ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 110 ರನ್​ ಬಾರಿಸಿತು. ಜವಾಬಿತ್ತ ಭಾರತ ಈ ಸಣ್ಣ ಮೊತ್ತವನ್ನು 18.2 ಓವರ್​ ಎದುರಿಸಿ 3 ವಿಕೆಟ್​ ಕಳೆದುಕೊಂಡು 111 ರನ್​ ಬಾರಿಸಿ ಗೆಲುವಿನ ದಡ ಸೇರಿತು.

ಇದನ್ನೂ ಓದಿ IND vs USA: ಭಾರತಕ್ಕೆ 5​ ಪೆನಾಲ್ಟಿ ರನ್ ಲಭಿಸಿದ್ದು ಹೇಗೆ?

ಎಡಗೈ ವೇಗಿ ಅರ್ಶ​ದೀಪ್​ ಸಿಂಗ್​ ಈ ಪಂದ್ಯದಲ್ಲಿ 4 ಓವರ್​ ಎಸೆದು ಕೇವಲ 9 ರನ್​ಗೆ 4 ವಿಕೆಟ್​ ಕಿತ್ತು ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಜತೆಗೆ ಟಿ20 ವಿಶ್ವಕಪ್​ನಲ್ಲಿ ಭಾರತ ಪರ ಶ್ರೇಷ್ಠ ಬೌಲಿಂಗ್​ ನಡೆಸಿದ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಅಶ್ವಿನ್​ ಹೆಸರಿನಲ್ಲಿತ್ತು. ಅಶ್ವಿನ್​ ಅವರು 2014ರ ಟೂರ್ನಿಯಲ್ಲಿ 11ರನ್​ಗೆ 4 ವಿಕೆಟ್​ ಕೆಡವಿದ್ದರು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸಲು ವಿಫಲವಾಗಿದ್ದ ಸೂರ್ಯಕುಮಾರ್​ ಮತ್ತು ದುಬೆ ಈ ಪಂದ್ಯದಲ್ಲಿ ಉತ್ತಮ ಜತೆಯಾಟ ನಡೆಸುವ ಮೂಲಕ ಗಮನಸೆಳೆದರು. ಗೆಲುವಿಗೆ 20 ರನ್​ ಬೇಕಿದ್ದಾಗ ಸೂರ್ಯಕುಮಾರ್​ ತಮ್ಮ ಎಂದಿನ ಶೈಲಿಯಾದ ಸ್ಫೋಟಕ ಬ್ಯಾಟಿಂಗ್​ಗೆ ಒಗ್ಗಿಕೊಂಡರು. ಸತತ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ನೆರದಿದ್ದ ಪ್ರೇಕ್ಷರಕರಿಗೆ ಕೊನೆಯ ಕ್ಷಣದಲ್ಲಿ ಮನರಂಜನೆ ನೀಡಿದರು. ಜತೆಗೆ ಅರ್ಧಶತಕ ಬಾರಿಸಿ ಮಿಂಚಿದರು. ದುಬೆ ಮತ್ತು ಸೂರ್ಯ ಜೋಡಿ 4 ವಿಕೆಟ್​ಗೆ ಅಜೇಯ 72 ರನ್​ ಒಟ್ಟುಗೂಡಿಸಿತು. ಸೂರ್ಯಕುಮಾರ್​ 49 ಎಸೆತ ಎದುರಿಸಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ಭರ್ತಿ 50 ರನ್​ ಗಳಿಸಿದರೆ, ದುಬೆ 35 ಎಸೆತಗಳಿಂದ 31 ರನ್​ ಬಾರಿಸಿದರು.

Continue Reading

ಕ್ರೀಡೆ

Shardul Thakur: ಶಾರ್ದೂಲ್‌ ಠಾಕೂರ್‌ಗೆ ಪಾದದ ಶಸ್ತ್ರಚಿಕಿತ್ಸೆ; ಮೂರು ತಿಂಗಳು ಕ್ರಿಕೆಟ್​ನಿಂದ ದೂರ 

Shardul Thakur: 2019ರಲ್ಲೂ ಶಾರ್ದೂಲ್​ ತಮ್ಮ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪಾದದ ನೋವು ಕಾಣಿಸಿಕೊಂಡಿತ್ತು. ಕಳೆದ ತಿಂಗಳು ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡಿದ್ದ ಅವರು 9 ಪಂದ್ಯಗಳಲ್ಲಿ ಕೇವಲ ಐದು ವಿಕೆಟ್‌ಗಳನ್ನಷ್ಟೇ ಪಡೆದಿದ್ದರು.

VISTARANEWS.COM


on

Shardul Thakur
Koo

ಲಂಡನ್‌: ಲಾರ್ಡ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಭಾರತ ತಂಡದ ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್(Shardul Thakur) ಅವರ ಪಾದದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ(Shardul Thakur foot surgery) ನಡೆದಿದ್ದು, ಕನಿಷ್ಠ ಮೂರು ತಿಂಗಳುಗಳ ಕಾಲ ಅವರು ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ.

32 ವರ್ಷ ವರ್ಷದ ಶಾರ್ದೂಲ್‌ ಬುಧವಾರ ಲಂಡನ್​ನಲ್ಲಿ ತಮ್ಮ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾದ ಫೋಟೊವನ್ನು ಶಾರ್ದೂಲ್​ ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದು ಶೀಘ್ರದಲ್ಲೇ ಗುಣಮುಖರಾಗಿ ಮತ್ತೆ ನಿಮ್ಮ ಮುಂದೆ ಆಡಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಕೇಂದ್ರಿಯ ಗುತ್ತಿಗೆಯಲ್ಲಿ ಅವರು ‘ಸಿ’ ಗ್ರೇಡ್‌ ವ್ಯಾಪ್ತಿಯಲ್ಲಿರುವ ಕಾರಣ ಅವರ ಚಿಕಿತ್ಸೆಯ ವೆಚ್ಚವನ್ನು ಬಿಸಿಸಿಐ ಭರಿಸಲಿದೆ.

2019ರಲ್ಲೂ ಶಾರ್ದೂಲ್​ ತಮ್ಮ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪಾದದ ನೋವು ಕಾಣಿಸಿಕೊಂಡಿತ್ತು. ಕಳೆದ ತಿಂಗಳು ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡಿದ್ದ ಅವರು 9 ಪಂದ್ಯಗಳಲ್ಲಿ ಕೇವಲ ಐದು ವಿಕೆಟ್‌ಗಳನ್ನಷ್ಟೇ ಪಡೆದಿದ್ದರು. ಶಾರ್ದೂಲ್​ ಭಾರತ ಪರ 11 ಟೆಸ್ಟ್​, 47 ಏಕದಿನ ಮತ್ತು 25 ಟಿ20 ಪಂದ್ಯಗಳನ್ನಾಡಿ ಒಟ್ಟು 129 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಅವರು ಒಟ್ಟು 729 ರನ್​ ಬಾರಿಸಿದ್ದಾರೆ. ಇದರಲ್ಲಿ 5 ಅರ್ಧಶತಕ ಒಳಗೊಂಡಿದೆ.


ಟೀಮ್​ ಇಂಡಿಯಾದ ಪ್ರಧಾನ ವೇಗಿ ಮೊಹಮ್ಮದ್​ ಶಮಿ ಕೂಡ ಕೆಲ ತಿಂಗಳ ಹಿಂದೆ ಲಂಡನ್​ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಈಗ ವಿಶ್ರಾಂತಿಯಲ್ಲಿದ್ದಾರೆ. ಚೇತರಿಕೆಯ ಹಾದಿಯಲ್ಲಿರುವ ಶಮಿ  ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ IND vs USA: ಭಾರತಕ್ಕೆ 5​ ಪೆನಾಲ್ಟಿ ರನ್ ಲಭಿಸಿದ್ದು ಹೇಗೆ?

ಗಾಯದಿಂದಾಗಿ ಶಮಿ ಅವರು ಈ ಬಾರಿಯ ಐಪಿಎಲ್​ ಸೇರಿ ಟಿ20 ವಿಶ್ವಕಪ್​ ಆಡುವ ಅವಕಾಶ ಕಳೆದುಕೊಂಡರು. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

Continue Reading
Advertisement
Narendra Modi
ದೇಶ17 mins ago

Narendra Modi: ಕಾಶ್ಮೀರಲ್ಲಿ ಉಗ್ರರ ದಾಳಿ ಬೆನ್ನಲ್ಲೇ ದೋವಲ್‌ ಜತೆ ಮೋದಿ ಸಭೆ; ಉಗ್ರರ ನಿರ್ನಾಮಕ್ಕೆ ಸೂಚನೆ!

Duniya Vijay divorce filed was dismissed
ಸ್ಯಾಂಡಲ್ ವುಡ್25 mins ago

Duniya Vijay: ವಿಚ್ಛೇದನ ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ

Drowned in water
ಮಂಡ್ಯ31 mins ago

Drowned in water : ಈಜಲು ಕಾವೇರಿ ನದಿಗಿಳಿದ ಬಾಲಕರಿಬ್ಬರು ಜಲ ಸಮಾಧಿ

Agniveer Scheme
ದೇಶ40 mins ago

Agniveer Scheme: ʼಅಗ್ನಿವೀರ್‌ʼ ಯೋಜನೆಯಲ್ಲಿನ ಈ ಎಲ್ಲ ಬದಲಾವಣೆಗೆ ಭಾರತೀಯ ಸೇನೆ ಸಲಹೆ

Rajal Arora
ಕ್ರೀಡೆ41 mins ago

Rajal Arora: ಟೀಮ್​ ಇಂಡಿಯಾ ಜತೆಗಿರುವ ಏಕೈಕ ಮಹಿಳಾ ಸಿಬ್ಬಂದಿ ಯಾರು? ಇವರ ಕೆಲಸವೇನು?

Jagannath Temple
EXPLAINER50 mins ago

Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!

Yuva Movie Premier On star Suvarna
ಕಿರುತೆರೆ52 mins ago

Yuva Movie: ಬರ್ತಿದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ ʻಯುವ; ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶ!

Actor Darshan aryvardhan Guruji told RR nagar vasthu
ಸ್ಯಾಂಡಲ್ ವುಡ್1 hour ago

Actor Darshan: ಆರ್ ಆರ್​​ ನಗರ ವಾಸ್ತು ಸರಿಯಿಲ್ಲ, ಕೇಸುಗಳು ಬೀಳ್ತವೆ ಎಂದಿದ್ದರು ಆರ್ಯವರ್ಧನ್​ ಗುರೂಜಿ; ದರ್ಶನ್ ವಿಷಯದಲ್ಲಿ ಸತ್ಯವಾಯ್ತೇ?

Actor Darshan Arrested
ಪ್ರಮುಖ ಸುದ್ದಿ2 hours ago

Actor Darshan Arrested : ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ಬೂಟು ಕಾಲಿನಿಂದ ಒದ್ದಿದ್ದ ದರ್ಶನ್​!

Road Accident
ಕ್ರೈಂ2 hours ago

Road Accident : ಪ್ರತ್ಯೇಕ 5 ಕಡೆಗಳಲ್ಲಿ ಆ್ಯಕ್ಸಿಡೆಂಟ್‌; ಕಾರು ಡಿಕ್ಕಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಸವಾರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌