ಕ್ರಿಕೆಟ್
IPL 2023: ಆರೆಂಜ್ ಕ್ಯಾಪ್ ರೇಸ್ನಲ್ಲಿ ಡು ಪ್ಲೆಸಿಸ್ ಹಿಂದಿಕ್ಕಿ ಅಗ್ರಸ್ಥಾನ ಪಡೆದ ಗಿಲ್
ಶುಭಮನ್ ಗಿಲ್ ಅವರು ಮುಂಬೈ ವಿರುದ್ಧ ಶತಕ ಬಾರಿಸುವ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಮೂರನೇ ಶತಕವನ್ನು ದಾಖಲಿಸಿದರು.
ಅಹಮದಾಬಾದ್: ಮುಂಬೈ ಇಂಡಿಯನ್ಸ್ ವಿರುದ್ಧದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದ ಶುಭಮನ್ ಗಿಲ್ ಅವರು ಈ ಬಾರಿಯ ಐಪಿಎಲ್ನ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 730 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದ ಡು ಪ್ಲೆಸಿಸ್ ಇದೀಗ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಉಆಟಿಂಗ್ ನಡೆಸಿದ ಗುಜರಾತ್ ತಂಡ ಗಿಲ್ ಅವರ ಶತಕದ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿತು. ಈ ಪಂದ್ಯದಲ್ಲಿ 8 ರನ್ ಗಳಿಸಿದ ವೇಳೆ ಗಿಲ್ ಅವರು ಡು ಪ್ಲೆಸಿಸ್ ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ವಶಪಡಿಸಿಕೊಂಡರು. ಸದ್ಯ ಗಿಲ್ ಅವರು 851 ರನ್ ಬಾರಿಸಿದ್ದಾರೆ. ಆರ್ಸಿಬಿ ತಂಡ ಸೋಲು ಹೊರ ಬಿದ್ದ ಕಾರಣ ಡು ಪ್ಲೆಸಿಸ್ಗೆ ಇನ್ನು ಗಿಲ್ ದಾಖಲೆ ಮುರಿಯುವ ಅವಕಾಶವಿಲ್ಲ. ಸದ್ಯ ಈ ರೇಸ್ನಲ್ಲಿರುವ ಆಟಗಾರನೆಂದರೆ ಚೆನ್ನೈ ತಂಡದ ಡೆವೋನ್ ಕಾನ್ವೆ. 15 ಪಂದ್ಯ ಆಡಿರುವ ಅವರು 625 ರನ್ ಬಾರಿಸಿದ್ದಾರೆ. ಫೈನಲ್ ಪಂದ್ಯ ಬಾಕಿ ಇದ್ದರೂ ಅವರಿಗೆ ಈ ಮೊತ್ತವನ್ನು ಗಳಿಸಲು ಅಸಾಧ್ಯ. ಹೀಗಾಗಿ ಈ ಬಾರಿಯ ಆರೆಂಜ್ ಕ್ಯಾಪ್ ಗಿಲ್ ಅವರಿಗೆ ಸಿಗುವುದು 100 ಪ್ರತಿಶತವಾಗಿದೆ.
800 ರನ್ಗಳ ಗಡಿ ದಾಡಿದ ವೇಳೆ ಗಿಲ್ ಅವರು ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಒಂದೇ ಆವೃತ್ತಿಯ ಐಪಿಎಲ್ನಲ್ಲಿ 800 ರನ್ ಬಾರಿಸಿದ ನಾಲ್ಕನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ವಿರಾಟ್ ಕೊಹ್ಲಿ, ಜಾಸ್ ಬಟ್ಲರ್ ಮತ್ತು ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ ಮೊದಲಿಗರು.
ಇದನ್ನೂ ಓದಿ IPL 2023: ಗಿಲ್ ಶತಕದ ಕಮಾಲ್; ಮುಂಬೈಗೆ ಬೃಹತ್ ಮೊತ್ತದ ಗುರಿ
𝙂𝙄𝙇𝙇𝙞𝙖𝙣𝙩! 👏👏
— IndianPremierLeague (@IPL) May 26, 2023
Stand and applaud the Shubman Gill SHOW 🫡🫡#TATAIPL | #Qualifier2 | #GTvMI | @ShubmanGill pic.twitter.com/ADHi0e6Ur1
31 ರನ್ ಗಳಿಸಿದ್ದ ವೇಳೆ ಟಿಮ್ ಡೇವಿಡ್ ಅವರಿಂದ ಕ್ಯಾಚ್ ಕೈಚೆಲ್ಲಿ ಜೀವದಾನ ಪಡೆದ ಗಿಲ್ ಇದರ ಸಂಪೂರ್ಣ ಲಾಭವೆತ್ತಿ ಶತಕ ಸಿಡಿಸಿ ಸಂಭ್ರಮಿಸಿದರು. 60 ಎಸೆತ ಎದುರಿಸಿದ ಗಿಲ್ ಬರೊಬ್ಬರಿ 10 ಸಿಕ್ಸರ್ ಮತ್ತು 7 ಬೌಂಡರಿ ನೆರವಿನಿಂದ 129 ರನ್ ಗಳಿಸಿದರು. ಗಿಲ್ ಅವರು ಬಾರಿಸಿದ ಮೂರನೇ ಐಪಿಎಲ್ ಶತಕ ಇದಾಗಿದೆ. ಈ ಮೂರು ಶತಕಗಳು ಈ ಆವೃತ್ತಿಯಲ್ಲಿಯೇ ದಾಖಲಾಗಿದ್ದು ವಿಶೇಷ.
ಕ್ರಿಕೆಟ್
INDvsWI: ಭಾರತ-ವಿಂಡೀಸ್ ಕ್ರಿಕೆಟ್ ಸರಣಿಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಜುಲೈ-ಆಗಸ್ಟ್ ತಿಂಗಳಲ್ಲಿ ನಡೆಯುವ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಯ ತಾತ್ಕಾಲಿಕ ವೇಳಾಪಟ್ಟಿಯೊಂದು ಪ್ರಕಟಗೊಂಡಿದೆ.
ಪೋರ್ಟ್ ಆಫ್ ಸ್ಪೇನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ನಡೆಯುವ ಉಭಯ ತಂಡಗಳ ಸರಣಿಯ ತಾತ್ಕಾಲಿಕ ವೇಳಾಪಟ್ಟಿಯೊಂದು ಪ್ರಕಟಗೊಂಡಿದೆ. ಸದ್ಯ ಬಿಸಿಸಿಐಯಿಂದ ಒಪ್ಪಿಗೆ ಸಿಗುವುದೊಂದೆ ಬಾಕಿ ಉಳಿದಿದೆ. ಅನಂತರ ವೇಳಾಪಟ್ಟಿ ಅಧಿಕೃತಗೊಳ್ಳಲಿದೆ.
ಇತ್ತಂಡಗಳ ಕ್ರಿಕೆಟ್ ಸರಣಿಯಲ್ಲಿ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಾಗುವುದು. ಹೆಚ್ಚುರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದ ಫ್ಲೋರಿಡಾದಲ್ಲಿ ಆಡುವ ಸಾಧ್ಯತೆ ಇದೆ. ಆದರೆ ಇದು ಅಧಿಕೃತಗೊಂಡಿಲ್ಲ. ಪ್ರಸಕ್ತ ಸಾಗುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ವೇಳೆ ಬಿಸಿಸಿಐ ಮತ್ತು “ಕ್ರಿಕೆಟ್ ವೆಸ್ಟ್ ಇಂಡೀಸ್’ನ ವರಿಷ್ಠರು ಮಾತುಕತೆ ನಡೆಸಿ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಇದೇ ಕಾರಣಕ್ಕೆ ವಿಂಡೀಸ್ ಕ್ರಿಕೆಟ್ ಮಂಡಳಿಯ ಸದಸ್ಯರು ಲಂಡನ್ನ ಓವಲ್ಗೆ ಆಗಮಿಸಿದ್ದಾರೆ.
ಸದ್ಯದ ವೇಳಾಪಟ್ಟಿಯ ಪ್ರಕಾರ ಟೆಸ್ಟ್ ಪಂದ್ಯಗಳು ಡೊಮಿನಿಕಾ (ಜು. 12-16) ಮತ್ತು ಟ್ರಿನಿಡಾಡ್‌ನಲ್ಲಿ (ಜು. 20-24) ನಡೆಯಲಿವೆ. ಏಕದಿನ ಪಂದ್ಯಗಳು ಬಾರ್ಬಡಾಸ್ (ಜು. 27, 29) ಮತ್ತು ಟ್ರಿನಿಡಾಡ್ (ಆ. 1). ಟಿ20 ಪಂದ್ಯಗಳನ್ನು ಟ್ರಿನಿಡಾಡ್ (ಆ. 4) ಮತ್ತು ಗಯಾನಾದಲ್ಲಿ (ಆ. 6, ಆ. 8) ಆಡಲಾಗುವುದು ಎಂದು ಹೇಳಲಾಗಿದೆ. ಆದರೆ ಅಂತಿಮ ವೇಳಾಪಟ್ಟಿ ಬಿಡುಗಡೆಗೊಂಡ ಬಳಿಕ ಇದರಲ್ಲಿ ಸಣ್ಣ ಪುಟ್ಟ ಬದಲಾವಣೆ ಕಂಡುಬರುವ ಸಾಧ್ಯೆತೆ ಇದೆ.
ಇದನ್ನೂ ಓದಿ WTC Final 2023 : ಶಮಿ ಎಸೆತಕ್ಕೆ ಮರ್ನಸ್ ಲಾಬುಶೇನ್ ಬೌಲ್ಡ್ ಆದ ರೀತಿ ಹೀಗಿದೆ
ಏಷ್ಯಾ ಕಪ್ ಮತ್ತು ಏಕದಿನ ವಿಶ್ವ ಕಪ್ ದೃಷ್ಟಿಯಲ್ಲಿ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ. ಏಕೆಂದರೆ ತಂಡ ಸಂಯೋಜನೆಗೆ ಇದು ಉತ್ತಮ ಅವಕಾಶವಾಗಿದೆ.
ಕ್ರಿಕೆಟ್
WTC Final 2023 : ಶಮಿ ಎಸೆತಕ್ಕೆ ಮರ್ನಸ್ ಲಾಬುಶೇನ್ ಬೌಲ್ಡ್ ಆದ ರೀತಿ ಹೀಗಿದೆ
ಶಮಿಯ ಎಸೆತವನ್ನು ಗುರುತಿಸಲು ಸಾಧ್ಯವಾಗದೇ ಮರ್ನಸ್ ಲಾಬುಶೇನ್ ಕ್ಲೀನ್ ಬೌಲ್ಡ್ ಆದರು.
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ (WTC Final 2023) ಆಸ್ಟ್ರೇಲಿಯಾ ತಂಡದ ಪಾರಮ್ಯ ಮುಂದುವರಿದಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸೀಸ್ ಬಳಗ ಟಿ ವಿರಾಮದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿದೆ. ಭಾರತ ತಂಡ ಆರಂಭದಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿದರೂ ಬಳಿಕ ಜತೆಯಾದ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಸ್ಥಿರ ಪ್ರದರ್ಶನ ನೀಡಿದರು. ಆದರೆ, ಭಾರತ ತಂಡಕ್ಕೆ ಮೂರನೇ ವಿಕೆಟ್ ರೂಪದಲ್ಲಿ ದೊರಕಿದ ಮರ್ನಸ್ ಲಾಬುಶೇನ್ ವಿಕೆಟ್ ಹೆಚ್ಚು ಆಕರ್ಷಕವಾಗಿತ್ತು. ಶಮಿ ಎಸೆತಕ್ಕೆ ಅವರು ಬೌಲ್ಡ್ ಆದ ರೀತಿಯೂ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯಿತು.
ಡಬ್ಲ್ಯುಟಿಸಿ ಫೈನಲ್ ಪಂದ್ಯದ ಮೊದಲ ಸೆಷನ್ನಲ್ಲಿ ಶಮಿ ತುಂಬಾ ಕಡಿಮೆ ಬೌಲಿಂಗ್ ಮಾಡಿದ್ದಕ್ಕಾಗಿ ಕ್ರಿಕೆಟ್ ಅಭಿಮಾನಿಗಳಿಂದ ಹಾಗೂ ವೀಕ್ಷಕ ವಿವರಣೆಗಾರರಿಂದ ಟೀಕೆಗೆ ಒಳಗಾದರು. ಆದಾಗ್ಯೂ, ಭೋಜನ ವಿರಾಮದಿಂದ ಹಿಂದಿರುಗಿದ ಕೂಡಲೇ ಶಮಿ ಎಲ್ಲರಿಗೂ ಉತ್ತರ ಕೊಟ್ಟರು. ತಾವು ಭಾರತದ ಮೊದಲ ಆಯ್ಕೆಯ ವೇಗಿ ಎಂಬುದನ್ನು ಸಾಬೀತುಪಡಿಸಿದರು.
ಭೋಜನ ವಿರಾಮದ ನಂತರದ ಎರಡನೇ ಓವರ್ನಲ್ಲಿ ಮತ್ತು ತಮ್ಮ ಎರಡನೇ ಸ್ಪೆಲ್ನ ಮೊದಲ ಎಸೆತದಲ್ಲಿ ಮೊಹಮ್ಮದ್ ಶಮಿ ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಲಾಬುಶೇನ್ ಅವರನ್ನು ಬೌಲ್ಡ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು.
ಅದಕ್ಕಿಂತ ಮೊದಲು ದಿನದಾಟದ ಮೊದಲ ಅವಧಿಯ ಯಶಸ್ಸನ್ನು ಎರಡೂ ತಂಡಗಳು ಹಂಚಿಕೊಂಡವು, ಭಾರತವು ಆಸೀಸ್ ಆರಂಭಿಕರನ್ನು ಪೆವಿಲಿಯನ್ಗೆ ಕಳುಹಿಸಿದರೆ ಆಸ್ಟ್ರೇಲಿಯಾ 73 ರನ್ ಗಳಿಸುವ ಮೂಲಕ ಪ್ರತ್ಯುತ್ತರ ನೀಡಿತು. ಡೇವಿಡ್ ವಾರ್ನರ್ ಅದ್ಭುತ ಪ್ರದರ್ಶನ ನೀಡಿ ಎಂಟು ಬೌಂಡರಿಗಳನ್ನು ಗಳಿಸಿದರು. ಆದರೆ 7 ರನ್ಗಳಿಂದ ಅರ್ಧ ಶತಕ ವಂಚಿತರಾದರು.
ವಾರ್ನರ್ ವಿಕೆಟ್ ಪಡೆಯುವ ಹಿಂದಿನ ದೊಡ್ಡ ಕಾರಣ ಕೆ.ಎಸ್.ಭರತ್ ಅವರ ಉತ್ತಮ ಕೀಪಿಂಗ್. ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿ ತಂಡಕ್ಕೆ ಆಯ್ಕೆಯಾಗಿದ್ದ ಅವರು ಈ ಕ್ಯಾಚ್ ಮೂಲಕ ಆಯ್ಕೆಯನ್ನು ಸಮರ್ಧಿಸಿಕೊಂಡರು. ಭರತ್ ಇದಕ್ಕಿಂತ ಹಿಂದೆ ಎರಡು ಬಾರಿ ಇಂಗ್ಲೆಂಡ್ ಪಿಚ್‌ನಲ್ಲಿ ಆಡಿದ್ದಾರೆ. ಒಂದು ಅಭ್ಯಾಸ ಪಂದ್ಯ, ಮತ್ತೊಂದು ವೆಸ್ಟ್ ಇಂಡೀಸ್ ವಿರುದ್ಧದ ಭಾರತ ಎ ಪಂದ್ಯ.
ಕ್ರಿಕೆಟ್
WTC Final 2023 : ವಿಕೆಟ್ ಕೀಪರ್ ಕೆಎಸ್ ಭರತ್ ಹಿಡಿದ ರೋಮಾಂಚಕಾರಿ ಕ್ಯಾಚ್ ಹೀಗಿತ್ತು
ಇಶಾನ್ ಕಿಶನ್ ಅವರನ್ನು ಕೈಬಿಟ್ಟು ಫೈನಲ್ ಪಂದ್ಯದಲ್ಲಿ ವಿಕೆಟ್ಕೀಪಿಂಗ್ ಜವಾಬ್ದಾರಿಯನ್ನು ಕೆ. ಎಸ್ ಭರತ್ಗೆ ನೀಡಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
ಲಂಡನ್: ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲ ದಿನದ ಟಿ ವಿರಾಮದ ವೇಳೆಗೆ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ನಿಧಾನವಾಗಿ ಮೇಲುಗೈ ಸಾಧಿಸಿದೆ.
Shardul Thakur gets the breakthrough!
— BCCI (@BCCI) June 7, 2023
A sharp catch by KS Bharat as David Warner departs for 43 runs.
Live – https://t.co/0nYl21oYkY… #WTC23 pic.twitter.com/jIJDwxM6Zh
ಲಂಚ್ ಬ್ರೇಕ್ಗಿಂತ ಮೊದಲು ಆಸ್ಟ್ರೇಲಿಯಾ 73 ರನ್ ಗಳಿಸಿತ್ತು. ಈ ವೇಳೆ ಇಬ್ಬರೂ ಆರಂಭಿಕರನ್ನು ಆಸ್ಟ್ರೇಲಿಯಾ ತಂಡ ಕಳೆದುಕೊಂಡಿತು. ವಾರ್ನರ್ 8 ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮವಾಗಿ ಆಡಿದರು ಆದರೆ ಭೋಜನ ವಿರಾಮಕ್ಕೆ ಕೆಲವೇ ನಿಮಿಷಗಳ ಮೊದಲು ಶಾರ್ದೂಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿ 7 ರನ್ಗಳಿಂದ ಅರ್ಧ ಶತಕವನ್ನು ಕಳೆದುಕೊಂಡರು. ಈ ವಿಕೆಟ್ ಕಬಳಿಸಲು ವಿಕೆಟ್ಕೀಪರ್ ಕೆ. ಎಸ್ ಭರತ್ ನೆರವಾದರು. ಅವರು ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ವಾರ್ನರ್ ವಿಕೆಟ್ ಉರುಳಿಸಿದರು.
ಇದನ್ನೂ ಓದಿ : WTC Final 2023: ಭಾರತ, ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ
ಪಂದ್ಯಕ್ಕೆ ಪೂರ್ವದಲ್ಲಿ ಕೀಪಿಂಗ್ ಜವಾಬ್ದಾರಿ ಯಾರಿಗೆ ನೀಡಬೇಕು ಎಂಬ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿದ ಭರತ್ ಅವಕಾಶ ಗಿಟ್ಟಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಭರತ್ 5 ಪಂದ್ಯಗಳನ್ನು ಆಡಿದ್ದಾರೆ. ಅವರು ಖಾತೆಯಲ್ಲಿ 100ಕ್ಕೂ ಹೆಚ್ಚು ರನ್ಗಳಿವೆ. ಇದೀಗ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲೂ ಛಾಪು ಮೂಡಿಸಲಿದ್ದಾರೆ.
ಶಮಿಗೆ ಸಿಗದ ಅವಕಾಶ, ನೆಟ್ಟಿಗರ ಆಕ್ರೊಶ
ಆಸ್ಟ್ರೇಲಿಯಾ ವಿರುದ್ಧ ಆರಂಭಗೊಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆರ್. ಅಶ್ವಿನ್ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇದೇ ವಿಚಾರವಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ತಂಡ ಮಾಡಿದ ದೊಡ್ಡ ತಪ್ಪು ಇದಾಗಿದೆ ಎಂದು ಹೇಳಿದ್ದಾರೆ. ಆದರೆ ತಂಡದ ನಾಯಕ ರೋಹಿತ್ ಶರ್ಮ ಅವರು ಅಶ್ವಿನ್ ಅವರನ್ನು ಕೈಬಿಟ್ಟ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ವೇಳೆ ಪ್ರಕಟಗೊಂಡ ಭಾರತ ತಂಡದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿರುವ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟು ಅಚ್ಚರಿ ಮೂಡಿಸಿತು. ಇದೇ ವೇಳೆ ನೆಟ್ಟಿಗರು ಟೀಮ್ ಮ್ಯಾನೆಜ್ಮೆಂಟ್ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಅಶ್ವಿನ್ ಬದಲು ಮಧ್ಯಮ ವೇಗಿ ಹಾಗೂ ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್ ಅವರನ್ನು ಟೀಮ್ ಇಂಡಿಯಾ ಹೆಚ್ಚುವರಿ ವೇಗಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ಇದೇ ವಿಚಾರವಾಗಿ ಮಾತನಾಡಿದ ರೋಹಿತ್ ಅವರು “ಇಲ್ಲಿನ ಪರಿಸ್ಥಿತಿಗಳು ಬೌಲಿಂಗ್‌ಗೆ ಉತ್ತಮವಾಗಿದೆ. ಹೀಗಾಗಿ ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ಮೋಡ ಕವಿದ ವಾತಾವರಣವೂ ಇದೆ. ಈ ಪಿಚ್‌ನಲ್ಲಿ ಸ್ಪಿನ್ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ನಾವು 4 ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ನ ಆಯ್ಕೆ ಮಾಡಿಕೊಂಡಿದ್ದೇವೆ. ಜಡೇಜಾ ಅವರನ್ನು ಏಕೈಕ ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅಶ್ವಿನ್ ಅವರನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿದೆ. ಆದರೂ ತಂಡದ ಹಿತದೃಷ್ಟಿಯಿಂದ ಅವರನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು” ಎಂದರು.
ಕ್ರಿಕೆಟ್
WTC Final 2023: ಆಡುವ ಬಳಗದಿಂದ ಅಶ್ವಿನ್ ಕೈ ಬಿಡಲು ಕಾರಣ ಇದಂತೆ
ಅಶ್ವಿನ್ ಬದಲು ಮಧ್ಯಮ ವೇಗಿ ಹಾಗೂ ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್ಗೆ ಆಡುವ ಬಳಗದಲ್ಲಿ ಅವಕಾಶ ನೀಡಿದ್ದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.
ಲಂಡನ್: ಆಸ್ಟ್ರೇಲಿಯಾ ವಿರುದ್ಧ ಆರಂಭಗೊಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆರ್. ಅಶ್ವಿನ್ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇದೇ ವಿಚಾರವಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ತಂಡ ಮಾಡಿದ ದೊಡ್ಡ ತಪ್ಪು ಇದಾಗಿದೆ ಎಂದು ಹೇಳಿದ್ದಾರೆ. ಆದರೆ ತಂಡದ ನಾಯಕ ರೋಹಿತ್ ಶರ್ಮ ಅವರು ಅಶ್ವಿನ್ ಅವರನ್ನು ಕೈಬಿಟ್ಟ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ವೇಳೆ ಪ್ರಕಟಗೊಂಡ ಭಾರತ ತಂಡದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿರುವ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟು ಅಚ್ಚರಿ ಮೂಡಿಸಿತು. ಇದೇ ವೇಳೆ ನೆಟ್ಟಿಗರು ಟೀಮ್ ಮ್ಯಾನೆಜ್ಮೆಂಟ್ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಅಶ್ವಿನ್ ಬದಲು ಮಧ್ಯಮ ವೇಗಿ ಹಾಗೂ ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್ ಅವರನ್ನು ಟೀಮ್ ಇಂಡಿಯಾ ಹೆಚ್ಚುವರಿ ವೇಗಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ಇದೇ ವಿಚಾರವಾಗಿ ಮಾತನಾಡಿದ ರೋಹಿತ್ ಅವರು “ಇಲ್ಲಿನ ಪರಿಸ್ಥಿತಿಗಳು ಬೌಲಿಂಗ್‌ಗೆ ಉತ್ತಮವಾಗಿದೆ. ಹೀಗಾಗಿ ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ಮೋಡ ಕವಿದ ವಾತಾವರಣವೂ ಇದೆ. ಈ ಪಿಚ್‌ನಲ್ಲಿ ಸ್ಪಿನ್ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ನಾವು 4 ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ನ ಆಯ್ಕೆ ಮಾಡಿಕೊಂಡಿದ್ದೇವೆ. ಜಡೇಜಾ ಅವರನ್ನು ಏಕೈಕ ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅಶ್ವಿನ್ ಅವರನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿದೆ. ಆದರೂ ತಂಡದ ಹಿತದೃಷ್ಟಿಯಿಂದ ಅವರನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು” ಎಂದರು.
ಇದನ್ನೂ ಓದಿ WTC Final 2023: ಭಾರತ, ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ
If India loses, Rohit Sharma will be Blamed for not picking Ashwin.
— Xavier Uncle (@xavierunclelite) June 7, 2023
If India wins, Kohli will be Blamed for picking Ashwin in WTC Final 2021 & not winning any ICC Trophies.
ಸದ್ಯ ಬ್ಯಾಟಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾ ತಂಡ ಮೂರು ವಿಕೆಟ್ ಕಳೆದುಕೊಂಡು 85 ರನ್ ಗಳಿಸಿದೆ. ಉತ್ತಮ ರನ್ ಕಲೆ ಹಾಕುತ್ತಿದ್ದ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡುವ ಮೂಲಕ ಶಾರ್ದೂಲ್ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ21 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ23 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ23 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?
-
ಕರ್ನಾಟಕ7 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!