IPL 2023: ಪ್ರಭ್​ಸಿಮ್ರಾನ್​ ಸಿಂಗ್ ಚೊಚ್ಚಲ ಶತಕ; ಸ್ಪರ್ಧಾತ್ಮಕ ಮೊತ್ತ ಬಾರಿಸಿದ ಪಂಜಾಬ್​ - Vistara News

ಕ್ರಿಕೆಟ್

IPL 2023: ಪ್ರಭ್​ಸಿಮ್ರಾನ್​ ಸಿಂಗ್ ಚೊಚ್ಚಲ ಶತಕ; ಸ್ಪರ್ಧಾತ್ಮಕ ಮೊತ್ತ ಬಾರಿಸಿದ ಪಂಜಾಬ್​

ಪಂಜಾಬ್​ ತಂಡದ ಯುವ ಬ್ಯಾಟರ್​ ಪ್ರಭ್​ಸಿಮ್ರಾನ್​ ಸಿಂಗ್ ಅವರು ಐಪಿಎಲ್​ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದಾರೆ.

VISTARANEWS.COM


on

Delhi Capitals vs Punjab Kings
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸಂಕಷ್ಟದ ಸಮಯದಲ್ಲಿ ಯುವ ಆಟಗಾರ ಪ್ರಭ್​ಸಿಮ್ರಾನ್​ ಸಿಂಗ್(103) ಅವರು ಬಾರಿಸಿದ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಪಂಜಾಬ್​ ಕಿಂಗ್ಸ್​ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಡೆಲ್ಲಿ ಪರ ಇಶಾಂತ್​ ಶರ್ಮ 2 ವಿಕೆಟ್​ ಕಿತ್ತು ಮಿಂಚಿದರು. ಡೆಲ್ಲಿ ತಂಡ ಗೆಲುವಿಗೆ 168 ರನ್​ ಬಾರಿಸಬೇಕಿದೆ.

ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಪಂಜಾಬ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 167 ರನ್​ ಗಳಿಸಿ ಸವಾಲೊಡ್ಡಿದೆ.

ಮಹತ್ವದ ಪಂದ್ಯದಲ್ಲಿ ಇನಿಂಗ್ಸ್​ ಆರಂಭಿಸಿದ ಪಂಜಾಬ್​ ತನ್ನ ಖ್ಯಾತಿಗೆ ತಕ್ಕಂತೆ ಆಟವಾಡುವಲ್ಲಿ ವಿಫಲವಾಯಿತು. ಬ್ಯಾಟಿಂಗ್​ ಮರೆತವರಂತೆ ಕ್ರೀಸ್​ಗಿಳಿದ ನಾಯಕ ಶಿಖರ್​ ಧವನ್​(7), ಜಿತೇಶ್​ ಶರ್ಮ(5) ಮತ್ತು ಲಿಯಾಮ್​ ಲಿವಿಂಗ್​ಸ್ಟೋನ್​(4) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ ಪರೇಡ್​ ನಡೆಸಿದರು.

ನಂಬುಗೆಯ ಬ್ಯಾಟರ್​ಗಳೆಲ್ಲ ಕೈ ಕೊಟ್ಟಾಗ ಟೊಂಕ ಕಟ್ಟಿ ನಿಂತ ಆರಂಭಿಕ ಆಟಗಾರ ಪ್ರಭ್​ಸಿಮ್ರಾನ್​ ಸಿಂಗ್ ಅವರು ಏಕಾಂಗಿಯಾಗಿ ಹೋರಾಟ ನಡೆಸಿದರು. ಡೆಲ್ಲಿ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಅವರು ಶತಕ ಬಾರಿಸಿ ಸಂಭ್ರಮಿಸಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಆದರೆ ಇವರಿಗೆ ಯಾವ ಆಟಗಾರನು ಉತ್ತಮ ಸಾಥ್​ ನೀಡಲೇ ಇಲ್ಲ. ಆಲ್​ರೌಂಡರ್​ ಸ್ಯಾಮ್​ ಕರನ್​ ಅವರು ಇನ್ನೇನು ತಂಡಕ್ಕೆ ಆಸರೆಯಾಗುತ್ತಾರೆ ಎನ್ನುವಷ್ಟರಲ್ಲಿ ಪ್ರವೀಣ್​ ದುಬೆ ಅವರು ಈ ವಿಕೆಟ್​ ಕಿತ್ತರು. ಕರನ್​ 20 ರನ್​ ಗಳಿಸಿದರು. ಬಳಿಕ ಬಂದ ಹರ್​ಪ್ರೀತ್​ ಬ್ರಾರ್ 5 ಎಸೆತ ಎದುರಿಸಿ ಕೇವಲ 2 ರನ್​ ಗಳಿಸಿದರು.

ಚೊಚ್ಚಲ ಶತಕ ಬಾರಿಸಿದ ಪ್ರಭ್​ಸಿಮ್ರಾನ್​

ಏಕಾಂಗಿಯಾಗಿ ಹೋರಾಟ ನಡೆಸಿದ ಪ್ರಭ್​ಸಿಮ್ರಾನ್​ ಸಿಂಗ್ ಅವರು ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸುವ ಮೂಲಕ ಐಪಿಎಲ್​ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಈ ಮೂಲಕ ಐಪಿಎಲ್​ ಕ್ರಿಕೆಟ್​ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿದ 6ನೇ ಬ್ಯಾಟರ್​ ಎನಿಸಿಕೊಂಡರು. ಮನೀಷ್​ ಪಾಂಡೆ ಅವರು 19 ವರ್ಷದಲ್ಲಿ ಆರ್​ಸಿಬಿ ಪರ ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಡೆಲ್ಲಿ ಬೌಲರ್​ಗಳಿಗೆ ಸಿಕ್ಸರ್​ ಮತ್ತು ಬೌಂಡರಿ ರುಚಿ ತೋರಿಸಿದ ಅವರು 65 ಎಸೆತಗಳಿಂದ 103 ರನ್​ ಬಾರಿಸಿ ಔಟಾದರು. ಅವರು ಒಟ್ಟು 6 ಸಿಕ್ಸರ್​ ಮತ್ತು 10 ಬೌಂಡರಿ ಬಾರಿಸಿದರು. ಒಂದೊಮ್ಮೆ ಇವರು ಆಡದೇ ಹೋಗುತ್ತಿದ್ದರೆ ತಂಡ 50 ರನ್​ ದಾಟುವುದು ಕೂಡ ಕಷ್ಟಸಾಧ್ಯ ಎನ್ನುವಂತಿತ್ತು. ತಂಡ ದಾಖಲಿಸಿದ ಬಹುಪಾಲು ಮೊತ್ತ ಇವರದ್ದೇ ಆಗಿತ್ತು.

ಇದನ್ನೂ ಓದಿ IPL 2023: ಹೈದರಾಬಾದ್​ ಕದನ ಗೆದ್ದ ಲಕ್ನೋ; ಪ್ಲೇ ಆಫ್​ ಆಸೆ ಜೀವಂತ

ದಾಖಲೆ ಬರೆದ ಇಶಾಂತ್​ ಶರ್ಮ

ಹಿರೀಯ ವೇಗಿ ಇಶಾಂತ್​ ಶರ್ಮ ಅವರು ಈ ಪಂದ್ಯದಲ್ಲಿ ವಿಶೇಷ ದಾಖಲೆಯೊಂದನ್ನು ಬರೆದರು. ಪಂಜಾಬ್​ ತಂಡದ ನಾಯಕ ಶಿಖರ್​ ಧವನ್​ ಅವರ ವಿಕೆಟ್​ ಕಿತ್ತು ಐಪಿಎಲ್​ ವೃತ್ತಿಜೀವನದಲ್ಲಿ ನೂರು ವಿಕೆಟ್​​ ಕಿತ್ತ ಸಾಧನೆ ಮಾಡಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

Narendra Modi : ಕ್ರಿಕೆಟ್ ವಿಶ್ವಕಪ್​ನಲ್ಲಿ ಸಹೋದರ ಮೊಹಮ್ಮದ್ ಶಮಿ ಮಾಡಿದ ಅದ್ಭುತ ಸಾಧನೆಯನ್ನು ಇಡೀ ಜಗತ್ತು ನೋಡಿದೆ. ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಅವರಿಗೆ ಕೇಂದ್ರ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿದೆ. “ಯೋಗಿ ಜಿ ಅವರ ಸರ್ಕಾರ ಎರಡು ಹೆಜ್ಜೆ ಮುಂದೆ ಹೋಗಿದೆ. ಯೋಗಿ ಜಿ ಅವರು ಇಲ್ಲಿನ ಯುವಕರಿಗಾಗಿ ಶಮಿ ಹೆಸರಿನಲ್ಲಿ ಕ್ರೀಡಾಂಗಣವನ್ನು ಸಹ ನಿರ್ಮಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

VISTARANEWS.COM


on

Narendra Modi
Koo

ಅಮ್ರೋಹಾ(ಉತ್ತರ ಪ್ರದೇಶ): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi ) ಮತ್ತೊಂದು ಬಾರಿ ಶ್ಲಾಘಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಕ್ರಿಕೆಟ್ ವಿಶ್ವಕಪ್​ನಲ್ಲಿ ಸಹೋದರ ಮೊಹಮ್ಮದ್ ಶಮಿ ಮಾಡಿದ ಅದ್ಭುತ ಸಾಧನೆಯನ್ನು ಇಡೀ ಜಗತ್ತು ನೋಡಿದೆ. ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಅವರಿಗೆ ಕೇಂದ್ರ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿದೆ. “ಯೋಗಿ ಜಿ ಅವರ ಸರ್ಕಾರ ಎರಡು ಹೆಜ್ಜೆ ಮುಂದೆ ಹೋಗಿದೆ. ಯೋಗಿ ಜಿ ಅವರು ಇಲ್ಲಿನ ಯುವಕರಿಗಾಗಿ ಶಮಿ ಹೆಸರಿನಲ್ಲಿ ಕ್ರೀಡಾಂಗಣವನ್ನು ಸಹ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ನಾನು ಅಮ್ರೋಹಾದ ಜನರನ್ನು ತುಂಬಾ ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಮುಂಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್​ನಲ್ಲಿ ಶಮಿ ಏಳು ವಿಕೆಟ್​ಗಳನ್ನು ಪಡೆದಿದ್ದರು. ಎಡ ಪಾದದ ಗಾಯದಿಂದಾಗಿ ಅವರು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಗುಳಿದಿದ್ದಾರೆ.

ಅಮ್ರೋಹಾದ ‘ಧೋಲಕ್’ (ಸಂಗೀತ ವಾದ್ಯ) ಅನ್ನೂ ಪ್ರಧಾನಿ ಇದೇ ವೇಳೆ ಶ್ಲಾಘಿಸಿದರು. ಗಂಗಾ ಮಾತೆಯ ದಡದಲ್ಲಿರುವ ಈ ಭೂಮಿ ಭಗವಾನ್ ಶ್ರೀ ಕೃಷ್ಣನ ಹೆಜ್ಜೆಗುರುತುಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದು ರಾಜಾ ಗಜ ಸಿಂಗ್ ಮತ್ತು ಠಾಕೂರ್ ಜೈರಾಮ್ ಸಿಂಗ್ ಅವರಂತಹ ಸಾಹಸಿಗರು ಹುಟ್ಟಿದ ಜನರ ಭೂಮಿ. ನನಗೆ ಧೋಲಕ್ ನೀಡಿದ್ದೀರಿ. ಇದು ಅಮ್ರೋಹಾದ ಮತ್ತೊಂದು ಹೆಗ್ಗುರುತು. ಇಲ್ಲಿನ ಧೋಲಕ್ ನ ಬಡಿತವು ಎಲ್ಲೆಡೆ ಪ್ರತಿಧ್ವನಿಸುತ್ತದೆ. ನಮ್ಮ ಯೋಗಿ ಜಿ ಅವರ ಪ್ರಯತ್ನದಿಂದಾಗಿ, ಬಿಜೆಪಿ ಸರ್ಕಾರವು ಅಮ್ರೋಹಾದ ಧೋಲಕ್​ಗೆ ಜಿಐ (ಜಿಯಾಗ್ರಾಫಿಕಲ್ ಇಂಡಿಕೇಟೆಡ್​ ಒರಿಜಿನ್​) ಟ್ಯಾಗ್ ನೀಡಿದೆ. ಇಡೀ ಜಗತ್ತಿನಲ್ಲಿ ಅದಕ್ಕೆ ಒಂದು ಗುರುತನ್ನು ಕೊಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಯುಪಿಯಲ್ಲಿ ಮತದಾನ ನಡೆಯಲಿದ್ದು, ಅಮ್ರೋಹಾ, ಮೀರತ್, ಬಾಗ್ಪತ್, ಗಾಜಿಯಾಬಾದ್, ಗೌತಮಬುದ್ಧ ನಗರ, ಬುಲಂದ್ಶಹರ್ (ಎಸ್ಸಿ), ಅಲಿಗಢ ಮತ್ತು ಮಥುರಾ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಅಮ್ರೋಹಾದಲ್ಲಿ ಬಿಜೆಪಿಯ ಕನ್ವರ್ ಸಿಂಗ್ ತನ್ವರ್ ಮತ್ತು ಕಾಂಗ್ರೆಸ್ ನ ಡ್ಯಾನಿಶ್ ಅಲಿ ನಡುವೆ ಪ್ರಮುಖ ಸ್ಪರ್ಧೆ ಇದೆ. ಬಿಎಸ್ಪಿಯ ಮುಜಾಹಿದ್ ಹುಸೇನ್ ಕೂಡ ಚುನಾವಣಾ ಕಣದಲ್ಲಿದ್ದಾರೆ. ಅಮ್ರೋಹಾದಿಂದ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

Continue Reading

ಕ್ರೀಡೆ

IPL 2024 : ಚೆನ್ನೈ ವಿರುದ್ಧ ಲಕ್ನೊ ತಂಡಕ್ಕೆ8 ವಿಕೆಟ್ ಭರ್ಜರಿ ಗೆಲುವು

ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

VISTARANEWS.COM


on

IPL 2024
Koo

ಲಖನೌ: ಕೆ. ಎಲ್​. ರಾಹುಲ್​ (82 ರನ್​, 53 ಎಸೆತ, 9 ಫೋರ್, 3 ಸಿಕ್ಸರ್​) ಹಾಗೂ ಕ್ವಿಂಟನ್ ಡಿ ಕಾಕ್​ (54 ರನ್​, 43 ಎಸೆತ, 5 ಫೋರ್​, 1 ಸಿಕ್ಸರ್​) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್​ನ 2024ನೇ (IPL 2024) ಆವೃತ್ತಿಯ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಸತತ ಎರಡು ಸೋಲುಗಳ ಬಳಿಕ ಗೆಲವಿನ ಟ್ರ್ಯಾಕ್​ಗೆ ಮರಳಿದೆ. ಲಕ್ನೊ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ. ಅತ್ತ ಚೆನ್ನೈ ತಂಡ ಆಡಿರುವ ಏಳರಲ್ಲಿ ಮೂರನೇ ಸೋಲಿಗೆ ಒಳಗಾಯಿತು.

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡದ ಪರ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಹಾಗೂ ಕೆ. ಎಲ್​ ರಾಹುಲ್ ಉತ್ತಮವಾಗಿ ಆಡಿದರು. ಈ ಜೋಡಿ ಮೊದಲ ವಿಕೆಟ್​ಗೆ 134 ರನ್ ಬಾರಿಸಿತು. ಅಷ್ಟರಲ್ಲಿ ಅವರಿಬ್ಬರೂ ಅರ್ಧ ಶತಕಗಳನ್ನು ದಾಖಲಿಸಿದ್ದರು. ನಿಧಾನಗತಿಯ ಪಿಚ್​ನಲ್ಲಿ ಲಕ್ನೊ ಆಟಗಾರರು ಇನಿಂಗ್ಸ್​ ಕಟ್ಟಿದರು. ಸ್ಟ್ರೈಕ್​ ರೇಟ್ ಕಡಿಮೆ ಇದ್ದ ಹೊರತಾಗಿಯೂ ಗೆಲುವಿನಗೆ ಪೂರಕವಾದ ರನ್​ಗಳನ್ನು ಬಾರಿಸಿದರು. ಕ್ವಿಂಟನ್​ ಚೆನ್ನೈ ಬೌಲರ್​ ಮುಸ್ತಾಫಿಜುರ್ ಎಸೆತಕ್ಕೆ ಔಟಾದರೆ, ರಾಹುಲ್ ಪತಿರಾಣಾಗೆ ವಿಕೆಟ್​ ಒಪ್ಪಿಸಿದರು. ನಿಕೋಲಸ್ ಪೂರನ್ 23 ರನ್ ಸೇರಿಸಿದರು.

ಬ್ಯಾಟಿಂಗ್ ವೈಫಲ್ಯ

ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಚೆನ್ನೈ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಅಜಿಂಕ್ಯ ರಹಾನೆ 36 ರನ್ ಬಾರಿಸಿದ ಹೊರತಾಗಿಯೂ ರಚಿನ್ ರವಿಂದ್ರ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಋತುರಾಜ್​ 17 ರನ್​ಗೆ ಸೀಮಿತಗೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ರವಿಂದ್ರ ಜಡೇಜಾ ನಿಧಾನವಾಗಿ ಇನಿಂಗ್ಸ್ ಕಟ್ಟಿದರು. ಅವರು 40 ಎಸೆತ ಬಳಸಿಕೊಂಡು 57 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಚೆನ್ನೈತಂಡದ ಆಪತ್ಬಾಂಧವ ಶಿವಂ ದುಬೆ 3 ರನ್​ಗೆ ಸೀಮಿತಗೊಂಡರೆ ರಿಜ್ವಿ ಕೇವಲ 1 ರನ್​ಗೆ ಔಟಾದರು. 90 ರನ್​ಗೆ 5 ವಿಕೆಟ್​ ಕಳೆದುಕೊಂಡ ಚೆನ್ನೈಗೆ ಕೊನೆಯಲ್ಲಿ ಮೊಯಿನ್ ಅಲಿ 30 ರನ್​ ಹಾಗೂ ಮಹೇಂದ್ರ ಸಿಂಗ್ ಧೋನಿ 28 ರನ್ ಬಾರಿಸಿದರು.

ಇದನ್ನೂ ಓದಿ: IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

ಲಕ್ನೊ ತಂಡದ ಪರ ಕೃಣಾಲ್​ ಪಾಂಡ್ಯ 2 ವಿಕೆಟ್ ಉರುಳಿಸಿದರೆ ಮೊಹ್ಸಿನ್ ಖಾನ್, ಯಶ್ ಠಾಕೂರ್​, ರವಿ ಬಿಷ್ಣೋಯಿ ಹಾಗೂ ಮಾರ್ಕ್ ಸ್ಟೊಯ್ನಿಸ್​ ತಲಾ ಒಂದು ವಿಕೆಟ್ ಉರುಳಿಸಿದರು.

Continue Reading

ಪ್ರಮುಖ ಸುದ್ದಿ

IPL 2024 : ಇಂಪ್ಯಾಕ್ಟ್​ ಪ್ಲೇಯರ್ ನಿಯಮಕ್ಕೆ ಆಕ್ಷೇಪ ಎತ್ತಿದ ರಿಕಿ ಪಾಂಟಿಂಗ್​

IPL 2024: ಸ್ಪೆಷಲಿಸ್ಟ್ ಬ್ಯಾಟರ್​ ಅನ್ನು 8 ನೇ ಕ್ರಮಾಂಕದವರೆಗೆ ಆಡಿಸಬಹುದು. ಆದರೆ ತರಬೇತುದಾರ ಮತ್ತು ಆಟಗಾರರಿಗೆ ಇಂಪ್ಯಾಕ್ಟ್​​ ಪ್ಲೇಯರ್​ ಬಹುಶಃ ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ಈ ವಿಧಾನವನ್ನು ಜನರನ್ನು ರಂಜಿಸಲು ಮಾಡಲಾಗುತ್ತಿದೆ ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ”ಎಂದು ಪಾಂಟಿಂಗ್ ವಿವರಿಸಿದರು.

VISTARANEWS.COM


on

IPL 2024
Koo

ನವದೆಹಲಿ: ಐಪಿಎಲ್​ 2024ರಲ್ಲಿ (IPL 2024) ಜಾರಿಯಾಗಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಆಲ್ರೌಂಡರ್​ಗಳ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಶುಕ್ರವಾರ ಹೇಳಿದ್ದಾರೆ. ಅಲ್ಲದೆ ಇದರ ಪರಿಣಾಮ ಅಭಿಮಾನಿಗಳೇ ಅರಿತುಕೊಳ್ಳಬಹುದು ಎಂದು ಹೇಳಿದ್ದಾರೆ.

ಪಾಂಟಿಂಗ್ ಆರಂಭದಿಂದಲೂ ಇಂಪ್ಯಾಕ್ಟ್ ಪ್ಲೇಯರ್​ ವ್ಯವಸ್ಥೆಯ ಪ್ರತಿಪಾದಕರಾಗಿರಲಿಲ್ಲ. ಇತ್ತೀಚಿನ ಯೂಟ್ಯೂಬ್ ಪಾಡ್​ಕಾಸ್ಟ್​​ನಲ್ಲಿ ರೋಹಿತ್ ಶರ್ಮಾ ಅವರು “ನಿಯಮದ ಅಭಿಮಾನಿಯಲ್ಲ” ಎಂದು ಹೇಳಿದ್ದರು. ಅಲ್ಲಿ.ದ ನಂತರ ಈ ಚರ್ಚೆಯು ವೇಗ ಪಡೆದುಕೊಂಡಿದೆ. ಏಕೆಂದರೆ ಇದು ಭಾರತೀಯ ಆಲ್​ರೌಂಡರ್​ಗಳ ಅಭಿವೃದ್ಧಿಗೆ ಧಕ್ಕೆ ತರುತ್ತದೆ ಎಂದು ಪಾಟಿಂಗ್ ಹೇಳಿದ್ದಾರೆ. . “ನೋಡಿ, ರೋಹಿತ್ ಶರ್ಮಾ ಅವರಿಂದ ಕೆಲವು ನಿಜವಾಗಿಯೂ ಆಸಕ್ತಿದಾಯಕ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ಇಂಪ್ಯಾಕ್ಟ್ ಪ್ಲೇಯರ್ ಆಲ್ರೌಂಡರ್​ಗಳನ್ನು ಆಟದಿಂದ ಸ್ವಲ್ಪ ಹೊರಗಿಡುತ್ತಿದೆ” ಎಂದು ಪಾಂಟಿಂಗ್ ಹೇಳಿದ್ದಾರೆ.

ಸ್ಪೆಷಲಿಸ್ಟ್ ಬ್ಯಾಟರ್​ ಅನ್ನು 8 ನೇ ಕ್ರಮಾಂಕದವರೆಗೆ ಆಡಿಸಬಹುದು. ಆದರೆ ತರಬೇತುದಾರ ಮತ್ತು ಆಟಗಾರರಿಗೆ ಇಂಪ್ಯಾಕ್ಟ್​​ ಪ್ಲೇಯರ್​ ಬಹುಶಃ ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ಈ ವಿಧಾನವನ್ನು ಜನರನ್ನು ರಂಜಿಸಲು ಮಾಡಲಾಗುತ್ತಿದೆ ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ”ಎಂದು ಪಾಂಟಿಂಗ್ ವಿವರಿಸಿದರು.

ಟಿ20 ಆಟವು ಮನರಂಜನಾ ಪ್ಯಾಕೇಜ್ ಆಗಿದೆ. ಪ್ರಭಾವಶಾಲಿ ಆಟಗಾರನ ಬಗ್ಗೆ ಪ್ರೇಕ್ಷಕರು ಏನು ಯೋಚಿಸುತ್ತಾರೆ ಎಂದು ಕೇಳುವುದು ಉತ್ತಮ. ಏಕೆಂದರೆ ತಂಡಗಳು ಬಹಳಷ್ಟು ಪಂದ್ಯಗಳಲ್ಲಿ 220 ರಿಂದ 250 ರವರೆಗೆ ಗಳಿಸುತ್ತಿವೆ ಎಂಬ ಅಂಶವನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಆದರೆ ಆಟಗಾರರ ಬೆಳವಣಿಗೆಗೆ ಅಡ್ಡಿಯಾಗಲಿದೆ ಎಂದು ಹೇಳಿದರು. ಪ್ರೇಕ್ಷಕರು ಅದನ್ನು ಹೆಚ್ಚು ಇಷ್ಟಪಡದಿದ್ದರೆ. ಹಳೆಯ ಮಾದರಿಗೆ ಹಿಂದಿರುಗಬೇಕ ಎಂದು ಹೇಳಿದ್ದಾರೆ.

ವಾರ್ನರ್ ಶೇ.85ರಿಂದ 90ರಷ್ಟು ಫಿಟ್

ಬೆರಳಿನ ಗಾಯದಿಂದಾಗಿ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಡೇವಿಡ್ ವಾರ್ನರ್, ನೆಟ್ಸ್​​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಥ್ರೋಡೌನ್​ಗಳನ್ಉ ಎದುರಿಸುವಾಗ ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಪಾಂಟಿಂಗ್ ಅವರು ಸುಮಾರು 85 ರಿಂದ 90% ಫಿಟ್ ಆಗಿದ್ದಾರೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

“ಡೇವಿಡ್ ಆಟದ ದಿನದಂದು ಫಿಟ್ನೆಸ್ ಪರೀಕ್ಷೆಯನ್ನು ಮಾಡಿದ್ದಾರೆ. ಒಂದೆರಡು ದಿನಗಳ ಹಿಂದೆ ಅವನಿಗೆ ಬಹುಶಃ 85 ಅಥವಾ 90% ಆಗಿದ್ದಾರೆ. ಇನ್ನೂ ಹೆಚ್ಚಿನ ಸುಧಾರಣೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಪಾಂಟಿಂಗ್ ಹೇಳಿದ್ದಾರೆ.

Continue Reading

ಕ್ರೀಡೆ

IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

IPL 2024: ಕೊನೆಯ ಓವರ್ ಎಸೆಯುವ ಮೊದಲು, ಮಧ್ವಾಲ್ ತಮ್ಮ ಮೊದಲ ಮೂರು ಓವರ್​ಗಳಲ್ಲಿ 44 ರನ್​ ಬಿಟ್ಟುಕೊಟ್ಟಿದ್ದರು. ವಿಕೆಟ್ ಪಡೆದಿರಲಿಲ್ಲ. ರೊಮಾರಿಯೊ ಶೆಫರ್ಡ್​ಗೆ ಚೆಂಡನ್ನು ನೀಡುವ ಆಯ್ಕೆಯನ್ನು ಹಾರ್ದಿಕ್ ಹೊಂದಿದ್ದರು. ಆದರೆ, ರೋಹಿತ್​​ ಮಧ್ವಾಲ್ ಅವರನ್ನು ಆಯ್ಕೆ ಮಾಡಿದರು. ಬರೋಡಾ ಆಲ್​ರೌಂಡರ್​ ಬೌಲಿಂಗ್​ಗೆ ಮೊದಲು ರೋಹಿತ್ ಜತೆ ಸುದೀರ್ಘ ಚರ್ಚೆ ನಡೆಸಿದ್ದರು.

VISTARANEWS.COM


on

IPL 2024
Koo

ಬೆಂಗಳೂರು: ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ರೋಮಾಂಚಕ ಐಪಿಎಲ್​ 2024ರ (IPL 2024) ಪಂದ್ಯದ ಕೊನೆಯ ಓವರ್​​ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮ ತಂಡಕ್ಕೆ ಫೀಲ್ಡ್​ ಸೆಟ್ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಹಾಲಿ ನಾಯಕ ಪಾಂಡ್ಯ ಇದ್ದ ಹೊರತಾಗಿಯೂ ಅವರು ಬೌಲರ್​ ಜತೆ ಸೇರಿಕೊಂಡು ಫೀಲ್ಡ್​ ಸೆಟ್ ಮಾಡುವ ವಿಡಿಯೊ ವೈರಲ್ ಆಗಿದೆ ಯುವ ಬೌಲರ್ ಕೂಡ ಪಾಂಡ್ಯನ ಮಾತುಗಳಿಗೆ ಕಿಮ್ಮತ್ತು ಕೊಡದೇ ಕೇವಲ ರೋಹಿತ್​ ಮಾತುಗಳನ್ನು ಮಾತ್ರ ಕೇಳಿಸಿಕೊಳ್ಳುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.

ಪಂದ್ಯವನ್ನು ಮುಂಬಯಿ ತಂಡ ಬಹುತೇಕ ಕಳೆದುಕೊಳ್ಳುವ ಹಂತದಲ್ಲಿ ಇತ್ತು. ಆದರೆ, ಕೊನೇ ಹಂತದಲ್ಲಿ ಗೆಲುವು ಲಭಿಸಿತು. ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 193 ರನ್​ಗಳ ಗುರಿ ಬೆನ್ನತ್ತಿದ ಕಿಂಗ್ಸ್ ಎರಡನೇ ಓವರ್​​ನಲ್ಲಿ 4 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿತ್ತು. ಆದರೆ ಅಶುತೋಷ್ ಶರ್ಮಾ 28 ಎಸೆತಗಳಲ್ಲಿ 61 ರನ್ ಗಳಿಸಿ ಗೆಲುವು ಸಾಧಿಸುವ ಭರವಸೆ ಮೂಡಿಸಿದರು. ಕೊನೆಯ ಓವರ್​ನಲ್ಲಿ ಆತಿಥೇಯರಿಗೆ ಗೆಲ್ಲಲು 12 ರನ್​ಗಳ ಅವಶ್ಯಕತೆಯಿತ್ತು. ಆದರೆ ಕೇವಲ ಒಂದು ವಿಕೆಟ್ ಮಾತ್ರ ಉಳಿದಿತ್ತು. ಮುಂಬೈ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಜವಾಬ್ದಾರಿಯನ್ನು ಬೌಲರ್​​ ಆಕಾಶ್ ಮಧ್ವಾಲ್ ಅವರಿಗೆ ನೀಡಲಾಯಿತು.

ಕೊನೆಯ ಓವರ್ ಎಸೆಯುವ ಮೊದಲು, ಮಧ್ವಾಲ್ ತಮ್ಮ ಮೊದಲ ಮೂರು ಓವರ್​ಗಳಲ್ಲಿ 44 ರನ್​ ಬಿಟ್ಟುಕೊಟ್ಟಿದ್ದರು. ವಿಕೆಟ್ ಪಡೆದಿರಲಿಲ್ಲ. ರೊಮಾರಿಯೊ ಶೆಫರ್ಡ್​ಗೆ ಚೆಂಡನ್ನು ನೀಡುವ ಆಯ್ಕೆಯನ್ನು ಹಾರ್ದಿಕ್ ಹೊಂದಿದ್ದರು. ಆದರೆ, ರೋಹಿತ್​​ ಮಧ್ವಾಲ್ ಅವರನ್ನು ಆಯ್ಕೆ ಮಾಡಿದರು. ಬರೋಡಾ ಆಲ್​ರೌಂಡರ್​ ಬೌಲಿಂಗ್​ಗೆ ಮೊದಲು ರೋಹಿತ್ ಜತೆ ಸುದೀರ್ಘ ಚರ್ಚೆ ನಡೆಸಿದ್ದರು. ಆದರೆ, ನಾಯಕ ಪಾಂಡ್ಯನ ಬಳಿ ಒಂದೇ ಒಂದು ಮಾತು ಆಡಿರಲಿಲ್ಲ. ಮಾಜಿ ನಾಯಕ ಹಾಗೂ ಬೌಲರ್ ಫೀಲ್ಡ್​ ಸೆಟ್ ಮಾಡುವಾಗ ಪಾಂಡ್ಯ ಪೆಚ್ಚು ಮೋರೆ ಹಾಕಿ ನೋಡುತ್ತಿದ್ದರು.

ಇದನ್ನೂ ಓದಿ: Royal Challenges Bangalore : ಬೆಂಗಳೂರಿನ ಮೂರು ಕೆರೆಗಳನ್ನೂ ಅಭಿವೃದ್ಧಿ ಮಾಡಿದ ಆರ್​ಸಿಬಿ

ರೋಹಿತ್ ಶರ್ಮಾ ಅವರ ನಾಯಕತ್ವದ ಕೌಶಲ್ಯಗಳ ಬಗ್ಗೆ ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಆಕಾಶ್ ಮಧ್ವಾಲ್, ಮೈದಾನದ ಫೀಲ್ಡ್​ ಸೆಟಿಂಗ್​ನಲ್ಲಿ ಅವರ ನೆರವು ಕೇಳಿದ್ದಾರೆ. ಕೊನೆಯಲ್ಲಿ, ಹಾರ್ದಿಕ್ ರೋಹಿತ್​ ಹೇಳಿದ್ದನ್ನೇ ಒಪ್ಪಿಕೊಂಡರು.

ಪಂಜಾಬ್ ವಿರುದ್ಧ ಮುಂಬೈಗೆ ಗೆಲುವು

ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್ ಮುಗಿಸಲು ಮುಂಬೈ ಇಂಡಿಯನ್ಸ್​​ 20 ನೇ ಓವರ್​ನಲ್ಲಿ ಕೇವಲ ಒಂದು ವಿಕೆಟ್​​ ಅಗತ್ಯವಿತ್ತು. ಕಗಿಸೊ ರಬಾಡ ಎರಡು ರನ್​ ಗಳಿಸುವ ಯೋಜನೆಯಲ್ಲಿ ಓಡಿದರು. ಅವರು ರನ್​ಔಟ್ ಆದರು. ಈ ಪಂದ್ಯವನ್ನು ಹಾರ್ದಿಕ್ ಬಳಗ 9 ರನ್ ಗಳಿಂದ ಗೆದ್ದುಕೊಂಡಿತು. 4 ಓವರ್​ಗಳಲ್ಲಿ 21 ರನ್​ಗೆ 3 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮತ್ತೊಂದು ಗಮನಾರ್ಹ ಪ್ರದರ್ಶನದಲ್ಲಿ, ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೊಟ್ಜೆ ಕೂಡ ಬುಮ್ರಾಗೆ ಉತ್ತಮ ಬೆಂಬಲ ನೀಡಿ 3 ವಿಕೆಟ್ ಪಡೆದರು. ಐಪಿಎಲ್ 2024 ರ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ಇನ್ನು ರಾಜಸ್ಥಾನ್ ರಾಯಲ್ಸ್ (ಆರ್​ಆರ್​ ವಿರುದ್ಧ ಆಡಲಿದೆ.

Continue Reading
Advertisement
ಕರ್ನಾಟಕ3 hours ago

Water Crisis: ಬೆಂಗಳೂರಿನ 110 ಹಳ್ಳಿಗಳಿಗೆ ಗುಡ್ ನ್ಯೂಸ್ ಕೊಟ್ಟ ಜಲಮಂಡಳಿ; ಶೀಘ್ರದಲ್ಲೇ ಹೆಸರಘಟ್ಟ ಕೆರೆಯಿಂದ ನೀರು!

Neha Hiremttt
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ನೇಹಾ ಹಿರೇಮಠಗೆ ನ್ಯಾಯ ಸಿಗಲಿ, ಆರೋಪಿಗೆ ಗಲ್ಲು ಶಿಕ್ಷೆಯಾಗಲಿ

Narendra Modi
ದೇಶ4 hours ago

Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

IPL 2024
ಕ್ರೀಡೆ4 hours ago

IPL 2024 : ಚೆನ್ನೈ ವಿರುದ್ಧ ಲಕ್ನೊ ತಂಡಕ್ಕೆ8 ವಿಕೆಟ್ ಭರ್ಜರಿ ಗೆಲುವು

Operation Hasta
ಕರ್ನಾಟಕ4 hours ago

Operation Hasta: ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್‌ ಸೇರ್ಪಡೆ

Ballari Lok Sabha constituency Congress candidate e Tukaram Election campaign
ಬಳ್ಳಾರಿ4 hours ago

Lok Sabha Election 2024: ಬಡವರ ಬಾಳು ಬಂಗಾರ ಮಾಡಿದ್ದು ಕಾಂಗ್ರೆಸ್‌: ಈ. ತುಕಾರಾಂ

Lok Sabha Election 2024
Lok Sabha Election 20244 hours ago

Lok Sabha Election 2024: 1 ವೋಟಿಗಾಗಿ ದಟ್ಟ ಕಾಡಿನಲ್ಲಿ 18 ಕಿ.ಮೀ. ನಡೆದ ಚುನಾವಣಾ ಸಿಬ್ಬಂದಿ

Narendra Modi
ಪ್ರಮುಖ ಸುದ್ದಿ5 hours ago

Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

Lok sabha Election
ರಾಜಕೀಯ5 hours ago

lok Sabha Election : ಮೊದಲ ಹಂತದಲ್ಲಿ ಶೇ.60.3ರಷ್ಟು ಮತದಾನ

Actor Darshan
ಕರ್ನಾಟಕ5 hours ago

Actor Darshan: ನಟ ದರ್ಶನ್‌ ಇದ್ದ ಪ್ರಚಾರ ವಾಹನಕ್ಕೆ ವಿದ್ಯುತ್‌ ಸ್ಪರ್ಶ; ತಪ್ಪಿದ ಭಾರೀ ಅನಾಹುತ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ12 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ23 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌