IPL 2023: ಐಪಿಎಲ್​ ಟೂರ್ನಿಗೆ ಅಭ್ಯಾಸ ಆರಂಭಿಸಿದ ಶಿಖರ್​ ಧವನ್​ ಬಳಗ - Vistara News

ಕ್ರಿಕೆಟ್

IPL 2023: ಐಪಿಎಲ್​ ಟೂರ್ನಿಗೆ ಅಭ್ಯಾಸ ಆರಂಭಿಸಿದ ಶಿಖರ್​ ಧವನ್​ ಬಳಗ

2023ರ ಐಪಿಎಲ್ ಟೂರ್ನಿಗೆ ಟೀಮ್​ ಇಂಡಿಯಾದ ಎಡಗೈ ಬ್ಯಾಟರ್​ ಶಿಖರ್​ ಧವನ್​ ಅವರು ಮೊಹಾಲಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ.​

VISTARANEWS.COM


on

IPL 2023: Shikhar Dhawan's team started practice for IPL tournament
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೊಹಾಲಿ: 16ನೇ ಆವೃತ್ತಿಯ ಐಪಿಎಲ್(IPL 2023)​ ಟೂರ್ನಿಗಾಗಿ ಈಗಾಗಲೇ ಎಲ್ಲ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. ಟೂರ್ನಿಯ ವೇಳಾಪಟ್ಟಿಯೂ ಪ್ರಕಟಗೊಂಡಿದ್ದು, ಮಾರ್ಚ್ 31 ರಿಂದ ಆರಂಭವಾಗಿ ಮೇ 21 ರ ವರೆಗೆ ಲೀಗ್ ಪಂದ್ಯಗಳು ನಡೆಯಲಿದೆ. ಟೂರ್ನಿ ಆರಂಭಕ್ಕೆ ಒಂದು ತಿಂಗಳು ಬಾಕಿ ಇರುವಾಗಲೇ ಪಂಜಾಬ್​ ಕಿಂಗ್ಸ್(punjab kings)​ ತಂಡ ಅಭ್ಯಾಸ ಆರಂಭಿಸಿದೆ.

ಪಂಜಾಬ್​ ಕಿಂಗ್ಸ್​ ತಂಡದ ಆಟಗಾರರೊಂದಿಗೆ ಮೊಹಾಲಿಯಲ್ಲಿ ಭರ್ಜರಿ ತಾಲೀಮು ನಡೆಸುತ್ತಿರುವ ಫೋಟೊಗಳನ್ನು ಶಿಖರ್​ ಧವನ್(shikhar dhawan)​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕನಾಗಿದ್ದ ಮಯಾಂಕ್​ ಅಗರ್ವಾಲ್‌ ಅವರನ್ನು ತಂಡದಿಂದ ಕೈಬಿಟ್ಟ ಬಳಿಕ ಶಿಖರ್‌ ಧವನ್‌ ಅವರನ್ನು ತಂಡಕ್ಕೆ ನಾಯಕನಾಗಿ ಆಗಿ ನೇಮಕ ಮಾಡಲಾಗಿದೆ. ತರಬೇತಿ ಶಿಬಿರದಲ್ಲಿ ಧವನ್‌ ಜತೆ ತಂಡದ ಸ್ಥಳೀಯ ಆಟಗಾರರು ಸಹ ಭಾಗವಹಿಸಿದ್ದರು. ಈ ಬಾರಿಯ ಐಪಿಎಲ್‌ಗೆ ಪಂಜಾಬ್‌ ಕಿಂಗ್ಸ್‌ನಲ್ಲಿ ಹಲವು ಯುವ ಆಟಗಾರರು ಸ್ಥಾನ ಪಡೆದಿದ್ದು, ಕರ್ನಾಟಕದ ವಿದ್ವತ್‌ ಕಾವೇರಪ್ಪ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ IPL 2023: ಹಾಲಿ ಚಾಂಪಿಯನ್​ ಗುಜರಾತ್​ ತಂಡಕ್ಕೆ ಹಿನ್ನಡೆ; ಸ್ಟಾರ್​ ಆಟಗಾರ ಟೂರ್ನಿಯಿಂದ ಔಟ್​

ಸದ್ಯ ಟೀಮ್​ ಇಂಡಿಯಾದ ಮೂರು ಮಾದರಿಯ ಕ್ರಿಕೆಟ್​ನಲ್ಲಿಯೂ ಅವಕಾಶ ವಂಚಿತನಾಗಿರುವ ಶಿಖರ್​ ಧವನ್​ ಐಪಿಎಲ್​ನಲ್ಲಿ ಮಿಂಚುವ ಮೂಲಕ ಮತ್ತೆ ಭಾರತ ತಂಡಕ್ಕೆ ಕಮ್‌ ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rohit Sharma: ನಿಜಕ್ಕೂ ನಿರಾಸೆಗೊಂಡಿದ್ದೇನೆ ಎಂದ ರೋಹಿತ್​; ಕಾರಣವೇನು?

Rohit Sharma: ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತ್ತು.

VISTARANEWS.COM


on

Rohit Sharma
Koo

ಕೊಲಂಬೊ: ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ(Sri Lanka vs India 1st ODI) ಪಂದ್ಯದಲ್ಲಿ ಗೆಲ್ಲುವ ಅವಕಾಶವಿದ್ದರೂ ಕೂಡ ಇದನ್ನು ಸದುಪಯೋಗಪಡಿಸುವಲ್ಲಿ ಸಹ ಆಟಗಾರರು ಎಡವಿದ ಬಗ್ಗೆ ನಾಯಕ ರೋಹಿತ್​ ಶರ್ಮ(Rohit Sharma) ಬೇಸರ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಈ ಪಂದ್ಯದ ಬಳಿಕ ನಿರಾಸೆಗೊಂಡಿದ್ದೇನೆ ಎಂದು ಹೇಳಿದ್ದಾರೆ. ಪಂದ್ಯ ಟೈನಲ್ಲಿ ಅಂತ್ಯ ಕಂಡಿತ್ತು.

ಪಂದ್ಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್, 230 ರನ್​ಗಳನ್ನು ಸುಲಭವಾಗಿ ಚೇಸಿಂಗ್ ಮಾಡಬಹುದಾಗಿತ್ತು. ಆದರೆ ಕೊನೆಯಲ್ಲಿ ನಮ್ಮ ಆಟ ನಿರಾಶಾದಾಯಕವಾಗಿತ್ತು. 14 ಎಸೆತಗಳಲ್ಲಿ ಗೆಲುವಿಗೆ ಕೇವಲ 1 ರನ್​ ಬೇಕಿದ್ದರೂ ಕೂಡ ಇದನ್ನು ಗಳಿಸಲು ಸಾಧ್ಯವಾಗದೇ ಇರುವುದು ನೋವಿನ ಸಂಗತಿ. ಈ ಪಂದ್ಯ ನಮ್ಮ ಪಾಲಿಗೆ ನಿರಾಸೆ ತಂದಿದೆ. ಎಂದು ಹೇಳುವ ಮೂಲಕ ರೋಹಿತ್​ ಸಹ ಆಟಗಾರರ ಕಳಪೆ ಮತ್ತು ನಿರ್ಲಕ್ಷ್ಯದ ಬ್ಯಾಟಿಂಗ್​ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 47.5 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟಾಯಿತು. ಗೆಲುವಿಗೆ ಒಂದು ರನ್​ ಬೇಕಿದ್ದಾಗ ಶಿವಂ ದುಬೆ ಮತ್ತು ಅರ್ಶ್​ದೀಪ್​ ಸಿಂಗ್​ ಸತತವಾಗಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದು ವಿಕೆಟ್​ ಕೈಚೆಲ್ಲಿದರು. ಸೋಲುವ ಭೀತಿಯಲ್ಲಿದ್ದ ಲಂಕಾ ಅಸಾಮಾನ್ಯ ಪ್ರದರ್ಶನ ತೋರಿ ಪಂದ್ಯವನ್ನು ಟೈ ಗೊಳಿಸುವ ಮೂಲಕ ನಿಟ್ಟುಸಿರುಬಿಟ್ಟಿತು.

ಇದನ್ನೂ ಓದಿ Rohit Sharma: ಲಂಕಾ ವಿರುದ್ಧ ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್​ ಶರ್ಮ

ಭಾರತ ಪರ ಚೇಸಿಂಗ್​ನಲ್ಲಿ ನಾಯಕ ರೋಹಿತ್​ ಶರ್ಮ 47 ಎಸೆತಗಳಿಂದ 58 ರನ್​ ಬಾರಿಸಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಯಿತು. ಉಳಿದಂತೆ ಕೆ.ಎಲ್​ ರಾಹುಲ್​ 31, ಅಕ್ಷರ್​ ಪಟೇಲ್​ 33 ರನ್​ ಬಾರಿಸಿದರು.

ಮಾರ್ಗನ್​ ದಾಖಲೆ ಮುರಿದ ರೋಹಿತ್​


47 ಎಸೆತಗಳಿಂದ 58 ರನ್​ ಬಾರಿಸಿದ ರೋಹಿತ್​ ತಮ್ಮ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್​ ಬಾರಿಸಿದರು. ಈ ಮೂರು ಸಿಕ್ಸರ್​​ ಬಾರಿಸಿದ ವೇಳೆ ರೋಹಿತ್​ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್‌ ಮಾರ್ಗನ್​(233 ಸಿಕ್ಸರ್​) ಹೆಸರಿನಲ್ಲಿತ್ತು. ಇದೀಗ ರೋಹಿತ್(234 ಸಿಕ್ಸರ್​)​ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. 211 ಸಿಕ್ಸರ್​ ಬಾರಿಸಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.

ನಾಯಕನಾಗಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು


ರೋಹಿತ್​ ಶರ್ಮ-234 ಸಿಕ್ಸರ್​

ಇಯಾನ್​ ಮಾರ್ಗನ್​-233 ಸಿಕ್ಸರ್

ಮಹೇಂದ್ರ ಸಿಂಗ್​ ಧೋನಿ-211 ಸಿಕ್ಸರ್​

ರಿಕಿ ಪಾಂಟಿಂಗ್​-171 ಸಿಕ್ಸರ್​

ಬ್ರೆಂಡನ್​ ಮೆಕಲಮ್​-170 ಸಿಕ್ಸರ್​ 

Continue Reading

ಕ್ರೀಡೆ

IPL 2025: ಇನ್ನು ಮುಂದೆ ಹೀಗೆ ಮಾಡಿದರೆ ವಿದೇಶಿ ಆಟಗಾರರಿಗೆ ಐಪಿಎಲ್​ನಿಂದ 2 ವರ್ಷ ನಿಷೇಧ?

IPL 2025: ಗಾಯದ ಸಮಸ್ಯೆ ಅಥವಾ ಗಂಭೀರವಾದ ಕೆಲ ವೈಯಕ್ತಿಕ ಕಾರಣಗಳು ಇದ್ದ ವೇಳೆ ಈ ನಿಷೇಧ ಶಿಕ್ಷೆ ಅನ್ವಯ ಮಾಡಬಾರದು ಎಂದು ಫ್ರಾಂಚೈಸಿಗಳು ಒಪ್ಪಿಕೊಂಡಿದೆ. ಆದರೆ, ಕುಂಟು ನೆಪವೊಡ್ಡಿ ಟೂರ್ನಿಯಿಂದ ಕೊನೆ ಗಳಿಗೆಯಲ್ಲಿ ಹಿಂದೆ ಸರಿಯುವ ಆಟಗಾರರಿಗೆ ಈ ಶಿಕ್ಷೆ ವಿಧಿಸಬೇಕು ಎನ್ನುವುದು ಫ್ರಾಂಚೈಸಿಗಳ ವಾದ.

VISTARANEWS.COM


on

IPL 2025
Koo

ಮುಂಬಯಿ: ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಕ್ರಿಕೆಟ್​​ ಟೂರ್ನಿಯಾಗಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​)ನಲ್ಲಿ ಪಾಲ್ಗೊಳ್ಳುವ ವಿದೇಶಿ ಆಟಗಾರರಿಗೆ ಬಿಸಿಸಿಐ ಮತ್ತು ಐಪಿಎಲ್(IPL 2025)​ ಆಡಳಿತ ಮಂಡಳಿ ಕಠಿಣ ನಿಯವೊಂದನ್ನು ಜಾರಿಗೆ ತರಲು ಮುಂದಾಗಿದೆ.

18ನೇ ಆವೃತ್ತಿಯ ಮೆಗಾ ಹರಾಜಿನ ಕುರಿತು ನಡೆದ ಸಭೆಯಲ್ಲಿ ಕೆಲವು ಫ್ರಾಂಚೇಸಿಗಳು(IPL franchises) ಬಿಸಿಸಿಐಗೆ(BCCI) ವಿಶೇಷ ಬೇಡಿಕೆಗಳನ್ನು ಮುಂದಿರಿಸಿತ್ತು. ಇದೇ ವೇಳೆ ಹರಾಜಿನಲ್ಲಿ ಖರೀದಿಸಿದ ವಿದೇಶಿ ಆಟಗಾರ ಅನಗತ್ಯ ಕಾರಣ ನೀಡಿ ತಂಡದ ಪರ ಆಡದೇ ಅರ್ಧದಲ್ಲೇ ಕೈಕೊಟ್ಟರೆ ಇಂತಹ ವಿದೇಶೀ ಆಟಗಾರರಿಗೆ 2 ವರ್ಷ ನಿಷೇಧ ವಿಧಿಸುವಂತೆ ಬಿಸಿಸಿಐಗೆ ಒತ್ತಡ ಹೇರಿವೆ ಎಂದು ವರದಿಯಾಗಿದೆ. ಬಿಸಿಸಿಐ ಕೂಡ ಇದಕ್ಕೆ ಸಮ್ಮತಿ ಸೂಚಿಸಿದೆ ಎಂದು ತಿಳಿದುಬಂದಿದೆ. ಸದ್ಯ ಈ ನಿಯಮ ಅಧಿಕೃತವಾಗಿ ಇನ್ನೂ ಜಾರಿಗೆ ಬಂದಿಲ್ಲ.

ಹರಾಜಿನಲ್ಲಿ ಖರೀದಿಸಿದ ನಂತರ ವಿದೇಶಿ ಆಟಗಾರರು ವೈಯಕ್ತಿಕ ಕಾರಣವೊಡ್ಡಿ ಕೊನೆಯ ಗಳಿಗೆಯಲ್ಲಿ ಟೂರ್ನಿಯಿಂದ ಹಿಂದೆ ಸರಿದ ಹಲವು ನಿದರ್ಶನಗಳಿಗೆ. ದೊಡ್ಡ ಮೊತ್ತ ಪಡೆದ ಆಟಗಾರರೇ ಹೆಚ್ಚಾಗಿ ಈ ರೀತಿ ಕೈಕೊಡುವುದರಿಂದ ಖರೀದಿ ಮಾಡಿದ ತಂಡಕ್ಕೆ ಇದು ಭಾರೀ ಹಿನ್ನಡೆ ಉಂಟು ಮಾಡುತ್ತದೆ. ಈ ಆಟಗಾರಿಗೆ ವ್ಯಯಿಸಿದ ಹಣದಲ್ಲಿ ಕನಿಷ್ಠ 3 ಆಟಗಾರರನ್ನು ಖರೀದಿಸುವ ಅವಕಾಶ ತಂಡಕ್ಕೆ ಲಭಿಸುತ್ತದೆ. ವಿದೇಶಿ ಆಟಗಾರರ ನಿಷೇಧ ಕುರಿತ ವಾದಕ್ಕೆ ಎಲ್ಲಾ 10 ತಂಡಗಳು ಸಹಮತ ವ್ಯಕ್ತಪಡಿಸಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ IPL 2025: ಇಂದು ಐಪಿಎಲ್ ಮೆಗಾ ಹರಾಜು ಕುರಿತು ಸಭೆ; ಫ್ರಾಂಚೈಸಿಗಳಿಂದ ಹಲವು ಬೇಡಿಕೆ!

ಗಾಯದ ಸಮಸ್ಯೆ ಅಥವಾ ಗಂಭೀರವಾದ ಕೆಲ ವೈಯಕ್ತಿಕ ಕಾರಣಗಳು ಇದ್ದ ವೇಳೆ ಈ ನಿಷೇಧ ಶಿಕ್ಷೆ ಅನ್ವಯ ಮಾಡಬಾರದು ಎಂದು ಫ್ರಾಂಚೈಸಿಗಳು ಒಪ್ಪಿಕೊಂಡಿದೆ. ಆದರೆ, ಕುಂಟು ನೆಪವೊಡ್ಡಿ ಟೂರ್ನಿಯಿಂದ ಕೊನೆ ಗಳಿಗೆಯಲ್ಲಿ ಹಿಂದೆ ಸರಿಯುವ ಆಟಗಾರರಿಗೆ ಈ ಶಿಕ್ಷೆ ವಿಧಿಸಬೇಕು ಎನ್ನುವುದು ಫ್ರಾಂಚೈಸಿಗಳ ವಾದ.

ಸಭೆಯಲ್ಲಿ ಸನ್​ರೈಸರ್ಸ್​ ಹೈದರಾಬಾದ್​, ಚೆನ್ನೈ ಸೂಪರ್​ ಕಿಂಗ್ಸ್​, ಹಾಲಿ ಚಾಂಪಿಯನ್​ ಕೆಕೆಆರ್ ಫ್ರಾಂಚೈಸಿ ಮಾಲಿಕರು​ ಕನಿಷ್ಠ 7 ಆಟಗಾರರನ್ನಾದರೂ ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ನೀಡಬೇಕೆಂದು ಬೇಡಿಕೆ ಇರಿಸಿವೆ ಎಂದು ವರದಿಯಾಗಿದೆ. ಇದು ಮಾತ್ರವಲ್ಲದೆ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ RTM(ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ) ಕಾರ್ಡ್ ಬಳಸುವ ಬಗ್ಗೆಯೂ ಫ್ರಾಂಚೈಸಿ ಡಿಮ್ಯಾಂಡ್ ಮಾಡಲಿದೆ. 2018ರ ಮೆಗಾ ಹರಾಜಿನಲ್ಲಿ RTMಗೆ ಅವಕಾಶವಿತ್ತು. ಆದರೆ 2022ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಇದನ್ನು ಕೈಬಿಡಲಾಗಿತ್ತು, ಇದೀಗ ಮತ್ತೆ ಈ ನಿಯವನ್ನು ಜಾರಿಗೆ ತರಲು ಫ್ರಾಂಚೈಸಿಗಳು ಒಳವು ತೋರಿದೆ ಎನ್ನಲಾಗಿದೆ.

5 ವರ್ಷಗಳಿಗೊಮ್ಮೆ ಮೆಗಾ ಹರಾಜು?

ಐಪಿಎಲ್ ಮೆಗಾ ಹರಾಜನ್ನು ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವಂತೆಯೂ ಕೆಲವು ಫ್ರಾಂಚೈಸಿಗಳು ಮನವಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಒಂದೊಮ್ಮೆ ಈ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದರೆ. ಮುಂದಿನ ಮೆಗಾ ಹರಾಜು 2029ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ. ಈ ತಿಂಗಳಾಂತ್ಯದಲ್ಲಿ ಐಪಿಎಲ್ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿ ಮೆಗಾ ಹರಾಜಿನ ಅಂತಿಮ ರೂಪುರೇಷೆಗಳ ಬಗ್ಗೆ ಚರ್ಚಿಸಲಿದೆ ಎಂದು ವರದಿಯಾಗಿದೆ

Continue Reading

ಕ್ರೀಡೆ

IND vs SL: ಭಾರತ-ಲಂಕಾ ಏಕದಿನ ಪಂದ್ಯ ಟೈ ಆದರೂ ಸೂಪರ್​ ಓವರ್​ ಏಕೆ ಆಡಿಸಲಿಲ್ಲ?; ಇಲ್ಲಿದೆ ಉತ್ತರ

IND vs SL: ದ್ವಿಪಕ್ಷೀಯ ಏಕದಿನ ಪಂದ್ಯದಲ್ಲಿ ಸೂಪರ್​ ಓವರ್ ಆಡಿಸದಿದ್ದರೂ, ಐಸಿಸಿ ಟೂರ್ನಿಗಳು, ಏಷ್ಯಾ ಕಪ್, ತ್ರಿಕೋನ ಸರಣಿಯಂತಹ ಏಕದಿನ ಮಾದರಿ ಪಂದ್ಯಗಳಲ್ಲಿ ಟೈ ಆದರೆ ಸೂಪರ್​ ಓವರ್​ ನಡೆಸಲಾಗುತ್ತದೆ.

VISTARANEWS.COM


on

IND vs SL
Koo

ಕೊಲಂಬೊ: ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ(IND vs SL) ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಟೈನಲ್ಲಿ ಅಂತ್ಯ ಕಂಡಿತ್ತು. ಪಂದ್ಯ ಟೈಗೊಂಡರೂ ಕೂಡ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಏಕೆ ಆಡಿಸಲಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಅಭಿಮಾನಿಗಳಿಗೆ ಕಾಡಿದೆ. ಇದಕ್ಕೆ ಉತ್ತರ ಇಲ್ಲಿದೆ.

ಲಂಕಾ ಮತ್ತು ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯ ಟೈ ಗೊಂಡಾಗ ಸೂಪರ್​ ಓವರ್​ ಆಡಿಸಲಾಗಿತ್ತು ಆದರೆ, ಏಕದಿನ ಪಂದ್ಯ ಟೈ ಆದಾಗ ಏಕೆ ಸೂಪರ್​ ಓಪರ್​ ಆಡಿಸಲಿಲ್ಲ ಎಂದು ಅನೇಕ ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಸೂಪರ್​ ಓವರ್ ಆಡಿಸದೇ ಇರಲು ಕೂಡ ಒಂದು ಕಾರಣವಿದೆ.

ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ನಿಯಮಗಳ ಪ್ರಕಾರ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಏಕದಿನ ಸರಣಿಯ ಪಂದ್ಯ ಟೈ ಆದರೆ ಇದನ್ನು ಟೈ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಯಾವುದೇ ಸೂಪರ್ ಓವರ್​ ಆಡಿಸಲಾಗುವುದಿಲ್ಲ. ಆದರೆ, ಈ ನಿಯಮ ಟಿ20 ಕ್ರಿಕೆಟ್​ಗೆ ಅನ್ವಯವಾಗುವುದಿಲ್ಲ. ಇಲ್ಲಿ ಸೂಪರ್​ ಓವರ್​ ಆಡಿಸಲಾಗುತ್ತದೆ. ಸೂಪರ್​ ಓವರ್​ ಕೂಡ ಟೈಗೊಂಡರೆ ಮತ್ತೊಂದು ಸೂಪರ್​ ಓವರ್​ ಆಡಿಸಲಾಗುತ್ತದೆ. ಫಲಿತಾಂಶ ಬರುವ ತನಕವೂ ಸೂಪರ್ ಓವರ್​ ಆಡಿಸಲಾಗುತ್ತದೆ.​ ನಿನ್ನೆಯ ಪಂದ್ಯ ದ್ವಿಪಕ್ಷೀಯ ಸರಣಿಯ ಭಾಗವಾಗಿತ್ತು, ಆದ್ದರಿಂದ ಯಾವುದೇ ಸೂಪರ್ ಓವರ್ ಆಡಿಸಲಿಲ್ಲ. ಇನ್ನುಳಿದ ಎರಡು ಏಕದಿನ ಪಂದ್ಯಗಳಲ್ಲಿ ಗೆದ್ದವರು ಸರಣಿಯ ವಿಜೇತರಾಗಲಿದ್ದಾರೆ. ಒಂದೊಂದು ಪಂದ್ಯ ಗೆದ್ದರೆ ಸರಣಿ ಸಮಬಲವಾಗಲಿದೆ.

ಇದನ್ನೂ ಓದಿ IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

ಐಸಿಸಿ ಟೂರ್ನಿಯಲ್ಲಿ ಸಾಧ್ಯ

ದ್ವಿಪಕ್ಷೀಯ ಏಕದಿನ ಪಂದ್ಯದಲ್ಲಿ ಸೂಪರ್​ ಓವರ್ ಆಡಿಸದಿದ್ದರೂ, ಐಸಿಸಿ ಟೂರ್ನಿಗಳು, ಏಷ್ಯಾ ಕಪ್, ತ್ರಿಕೋನ ಸರಣಿಯಂತಹ ಏಕದಿನ ಮಾದರಿ ಪಂದ್ಯಗಳಲ್ಲಿ ಟೈ ಆದರೆ ಸೂಪರ್​ ಓವರ್​ ನಡೆಸಲಾಗುತ್ತದೆ.

ರೋಚಕ ಪಂದ್ಯ

ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 47.5 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟಾಯಿತು. ಗೆಲುವಿಗೆ ಒಂದು ರನ್​ ಬೇಕಿದ್ದಾಗ ಶಿವಂ ದುಬೆ ಮತ್ತು ಅರ್ಶ್​ದೀಪ್​ ಸಿಂಗ್​ ಸತತವಾಗಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದು ವಿಕೆಟ್​ ಕೈಚೆಲ್ಲಿದರು. ಸೋಲುವ ಭೀತಿಯಲ್ಲಿದ್ದ ಲಂಕಾ ಅಸಾಮಾನ್ಯ ಪ್ರದರ್ಶನ ತೋರಿ ಪಂದ್ಯವನ್ನು ಟೈ ಗೊಳಿಸುವ ಮೂಲಕ ನಿಟ್ಟುಸಿರುಬಿಟ್ಟಿತು.

ಭಾರತ ಪರ ಚೇಸಿಂಗ್​ನಲ್ಲಿ ನಾಯಕ ರೋಹಿತ್​ ಶರ್ಮ 47 ಎಸೆತಗಳಿಂದ 58 ರನ್​ ಬಾರಿಸಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಯಿತು. ಉಳಿದಂತೆ ಕೆ.ಎಲ್​ ರಾಹುಲ್​ 31, ಅಕ್ಷರ್​ ಪಟೇಲ್​ 33 ರನ್​ ಬಾರಿಸಿದರು.

Continue Reading

ಕ್ರೀಡೆ

Rohit Sharma: ಲಂಕಾ ವಿರುದ್ಧ ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್​ ಶರ್ಮ

Rohit Sharma: ರೋಹಿತ್​ ತಮ್ಮ ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೂರು ಸಿಕ್ಸರ್​​ ಬಾರಿಸುವ ಮೂಲಕ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡರು.

VISTARANEWS.COM


on

Rohit Sharma
Koo

ಕೊಲಂಬೊ: ಶ್ರೀಲಂಕಾ(Sri Lanka vs India 1st ODI) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿ ಅರ್ಧಶತಕ ಬಾರಿಸಿದ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರ ದಾಖಲೆಯ ಪಟ್ಟಿ ಹೀಗಿದೆ.

ಸಿಕ್ಸರ್​ ದಾಖಲೆ

47 ಎಸೆತಗಳಿಂದ 58 ರನ್​ ಬಾರಿಸಿದ ರೋಹಿತ್​ ತಮ್ಮ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್​ ಬಾರಿಸಿದರು. ಈ ಮೂರು ಸಿಕ್ಸರ್​​ ಬಾರಿಸಿದ ವೇಳೆ ರೋಹಿತ್​ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್‌ ಮಾರ್ಗನ್​(233 ಸಿಕ್ಸರ್​) ಹೆಸರಿನಲ್ಲಿತ್ತು. ಇದೀಗ ರೋಹಿತ್(234 ಸಿಕ್ಸರ್​)​ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. 211 ಸಿಕ್ಸರ್​ ಬಾರಿಸಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.

ನಾಯಕನಾಗಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು


ರೋಹಿತ್​ ಶರ್ಮ-234 ಸಿಕ್ಸರ್​

ಇಯಾನ್​ ಮಾರ್ಗನ್​-233 ಸಿಕ್ಸರ್

ಮಹೇಂದ್ರ ಸಿಂಗ್​ ಧೋನಿ-211 ಸಿಕ್ಸರ್​

ರಿಕಿ ಪಾಂಟಿಂಗ್​-171 ಸಿಕ್ಸರ್​

ಬ್ರೆಂಡನ್​ ಮೆಕಲಮ್​-170 ಸಿಕ್ಸರ್​ 

ಆರಂಭಿಕನಾಗಿ 15 ಸಾವಿರ ರನ್​

ರೋಹಿತ್​ ಶರ್ಮ 58 ರನ್​ ಬಾರಿಸುಮ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆರಂಭಿಕನಾಗಿ ಅತೀ ವೇಗವಾಗಿ 15 ಸಾವಿರ ರನ್ ಕಲೆಹಾಕಿದ ವಿಶ್ವದ 2ನೇ, ಒಟ್ಟಾರೆಯಾಗಿ 10ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಡೇವಿಡ್ ವಾರ್ನರ್ 15 ಸಾವಿರ ರನ್ ಪೂರೈಸಲು 361 ಇನಿಂಗ್ಸ್​ಗಳನ್ನು ತೆಗೆದುಕೊಂಡಿದ್ದರು. ಈ ಮೂಲಕ ಅತೀ ವೇಗವಾಗಿ 15000 ರನ್ ಕಲೆಹಾಕಿದ ವಿಶ್ವದ 2ನೇ ಆರಂಭಿಕ ಆಟಗಾರ ಎನಿಸಿಕೊಂಡಿದ್ದರು. ಇದೀಗ ರೋಹಿತ್​ ಕೇವಲ 352 ಇನಿಂಗ್ಸ್​ಗಳ ಮೂಲಕ 15 ಸಾವಿರ ರನ್ ಕಲೆಹಾಕಿ ವಾರ್ನರ್​ ದಾಖಲೆ ಹಿಂದಿಕ್ಕಿದ್ದಾರೆ. ದಾಖಲೆ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿದೆ. ಸಚಿನ್​ ಆರಂಭಿಕನಾಗಿ 331 ಇನಿಂಗ್ಸ್​ಗಳ ಮೂಲಕ ಈ ದಾಖಲೆ ನಿರ್ಮಿಸಿದ್ದರು.

ಇದನ್ನೂ ಓದಿ Rohit Sharma : ಟಿ20 ನಿವೃತ್ತಿಯಲ್ಲ, ಅದು ವಿಶ್ರಾಂತಿ; ಕೌತುಕ ಮೂಡಿಸಿದ ರೋಹಿತ್ ಶರ್ಮಾ ಹೇಳಿಕೆ

ಪಂದ್ಯ ಟೈ


ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 47.5 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟಾಯಿತು. ಗೆಲುವಿಗೆ ಒಂದು ರನ್​ ಬೇಕಿದ್ದಾಗ ಶಿವಂ ದುಬೆ ಮತ್ತು ಅರ್ಶ್​ದೀಪ್​ ಸಿಂಗ್​ ಸತತವಾಗಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದು ವಿಕೆಟ್​ ಕೈಚೆಲ್ಲಿದರು. ಸೋಲುವ ಭೀತಿಯಲ್ಲಿದ್ದ ಲಂಕಾ ಅಸಾಮಾನ್ಯ ಪ್ರದರ್ಶನ ತೋರಿ ಪಂದ್ಯವನ್ನು ಟೈ ಗೊಳಿಸುವ ಮೂಲಕ ನಿಟ್ಟುಸಿರುಬಿಟ್ಟಿತು.

Continue Reading
Advertisement
ಮಾಲಿವುಡ್6 mins ago

Mohanlal Visits Landslide: ಸೇನಾ ಸಮವಸ್ತ್ರ ಧರಿಸಿ ವಯನಾಡಿಗೆ ಬಂದ ಮೋಹನ್​ಲಾಲ್!

M R Mamata
ಶ್ರದ್ಧಾಂಜಲಿ7 mins ago

M R Mamata: ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ.ಆರ್ ಮಮತಾ ನಿಧನ

wayanad landslide cm siddaramaiah pinarayi vijayan
ಕರ್ನಾಟಕ23 mins ago

Wayanad landslide: ವಯನಾಡ್‌ ಭೂಕುಸಿತ ಸಂತ್ರಸ್ತರಿಗೆ 100 ಮನೆ ನಿರ್ಮಾಣ: ಕೇರಳ ಸಿಎಂಗೆ ಸಿದ್ದರಾಮಯ್ಯ ಭರವಸೆ

Paris Olympics
ಪ್ರಮುಖ ಸುದ್ದಿ23 mins ago

Paris Olympics: ಹ್ಯಾಟ್ರಿಕ್​ ಪದಕ ತಪ್ಪಿಸಿಕೊಂಡ ಮನು ಭಾಕರ್​; 4ನೇ ಸ್ಥಾನಕ್ಕೆ ತೃಪ್ತಿ

Self Harming
ಚಿಕ್ಕೋಡಿ40 mins ago

Self Harming : ಉಕ್ಕಿ ಹರಿಯುವ ಕೃಷ್ಣಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಶರಣು

BJP-JDS Padayatra
ಕರ್ನಾಟಕ41 mins ago

BJP-JDS Padayatra: ಮೈಸೂರು ಚಲೋ ಪಾದಯಾತ್ರೆ ಆರಂಭ; ದಲಿತರು, ರೈತರಿಗೆ ನ್ಯಾಯ ಕೊಡಿಸಲು ಹೋರಾಟ ಎಂದ ವಿಜಯೇಂದ್ರ

Narco-Terrorism
ದೇಶ43 mins ago

Narco-Terrorism: ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುತ್ತಿದ್ದ ಆರು ಸರ್ಕಾರಿ ಅಧಿಕಾರಿಗಳ ಅಮಾನತು

Ismail Haniyeh
ವಿದೇಶ1 hour ago

Ismail Haniyh Killing: ಹನಿಯೆಹ್‌ ಹತ್ಯೆ ಹಿಂದೆ ಇಸ್ರೇಲ್‌ನ ಮಾಸ್ಟರ್‌ ಪ್ಲ್ಯಾನ್‌? ಮೊಸಾದ್‌ನ ಸೀಕ್ರೆಟ್‌ ಏಜೆಂಟ್‌ಗಳಿಂದ ಬಾಂಬ್‌ ಸ್ಫೋಟ?

karnataka rain
ಮಳೆ1 hour ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

hd kumaraswamy muda
ಪ್ರಮುಖ ಸುದ್ದಿ1 hour ago

HD Kumaraswamy: ಇನ್ನೂ ಹತ್ತು ತಿಂಗಳು ಸರ್ಕಾರ ನಡೆಸಿ ನೋಡೋಣ: ಕಾಂಗ್ರೆಸ್‌ಗೆ ಎಚ್‌ಡಿಕೆ ಸವಾಲ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ1 hour ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌