IPL 2023: ಚೆನ್ನೈ ವಿರುದ್ಧ ರಾಜಸ್ಥಾನ್​ಗೆ ಸೂಪರ್​ ಗೆಲುವು - Vistara News

ಕ್ರಿಕೆಟ್

IPL 2023: ಚೆನ್ನೈ ವಿರುದ್ಧ ರಾಜಸ್ಥಾನ್​ಗೆ ಸೂಪರ್​ ಗೆಲುವು

ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಜಸ್ಥಾನ್​ ರಾಯಲ್ಸ್​ ತಂಡ ಮೂರು ರನ್​ ಅಂತರದ ಗೆಲುವು ಸಾಧಿಸಿ ಮೆರೆದಾಡಿದೆ

VISTARANEWS.COM


on

Chennai Super Kings vs Rajasthan Royals, 17th Match
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಅತ್ಯಂತ ರೋಚಕವಾಗಿ ನಡೆದ ರಾಜಸ್ಥಾನ್​ ರಾಯಲ್ಸ್ ಮತ್ತು​ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಐಪಿಎಲ್​ನ 17ನೇ ಪಂದ್ಯದಲ್ಲಿ ಅಂತಿಮವಾಗಿ ರಾಜಸ್ಥಾನ್​ ರಾಯಲ್ಸ್​ ಕೈ ಮೇಲಾಗಿದೆ. ಅಂತಿಮ ಎಸೆತದಲ್ಲಿ 5 ರನ್​ ಬಾರಿಸುವ ಸವಾಲಿನಲ್ಲಿ ಧೋನಿ ಎಡವಿದ ಕಾರಣ ರಾಜಸ್ಥಾನ್​ ತಂಡ 3 ರನ್​ಗಳ ರೋಚಕ ಗೆಲುವು ದಾಖಲಿಸಿತು.​

ಚೆನ್ನೈಯ ಚೆಪಾಕ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ರಾಜಸ್ಥಾನ್​ ನಿಗದಿತ 20 ಓವರ್​ಗಲ್ಲಿ 7 ವಿಕೆಟ್​ ನಷ್ಟಕ್ಕೆ 175 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ತನ್ನ ಪಾಲಿನ ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 172 ರನ್​ ಬಾರಿಸಿ ಕೇವಲ ಮೂರು ರನ್​ ಅಂತರದಿಂದ ಸೋಲು ಕಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಚೆನ್ನೈಗೆ ಸಂದೀಪ್​ ಶರ್ಮ ಅವರು ಋತುರಾಜ್​ ಗಾಯಕ್ವಾಡ್ ವಿಕೆಟ್​ ಕಿತ್ತು ಆಘಾತ ನೀಡಿದರು. ಆದರೆ ಮುಂಬೈ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದ ಅಜಿಂಕ್ಯ ರಹಾನೆ ಮತ್ತು ಡೆವೊನ್​ ಕಾನ್ವೆ ಸೇರಿಕೊಂಡು ಉತ್ತಮ ಜತೆಯಾಟ ನಡೆಸಿ ತಂಡವನ್ನು ಪಾರು ಮಾಡಿದರು. ರಹಾನೆ 19 ಎಸೆತಗಳಲ್ಲಿ 3ಒ ರನ್​ ಬಾರಿಸಿ ಅಶ್ವಿನ್​ಗೆ ವಿಕೆಟ್​ ಒಪ್ಪಿಸಿದರು. ರಹಾನೆ ಮತ್ತು ಕಾನ್ವೆ ದ್ವಿತೀಯ ವಿಕೆಟ್​ಗೆ 68 ರನ್​ ಜತೆಯಾಟ ನಡೆಸಿದರು.

​ರಹಾನೆ ವಿಕೆಟ್ ಪತನದ ಬಳಿಕ ಕೇವಲ 25 ರನ್​ ಅಂತರದಲ್ಲಿ ಮೂರು ವಿಕೆಟ್​ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಶಿವಂ ದುಬೆ (8), ಮೊಯಿನ್​ ಅಲಿ(10), ಅಂಬಾಟಿ ರಾಯುಡು(1) ರನ್​ ಗಳಿಸಿ ಪೆವಿಲಿಯನ್​ ಪರೇಡ್​ ನಡೆಸಿದರು. ಮತ್ತೊಂದು ತುದಿಯಲ್ಲಿ ಬೇರುರಿ ನಿಂತಿದ್ದ ಕಾನ್ವೆ 37 ಎಸೆತದಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾಗುವ ಭರವಸೆ ಮೂಡಿಸಿದರು. ಆದರೆ ಅರ್ಧಶತಕ ಪೂರ್ತಿಗೊಂಡ ಮರು ಎಸೆತದಲ್ಲಿಯೇ ಕ್ಯಾಚ್​ ನೀಡಿ ವಿಕೆಟ್​ ಕೈ ಚೆಲ್ಲಿದರು. ಅವರ ಗಳಿಕೆ 50 ರನ್​. ಇದರಲ್ಲಿ ಆರು ಬೌಂಡರಿ ಒಳಗೊಂಡಿತು.

ನಾಟಕೀಯ ಕುಸಿತ ಕಂಡ ಚೆನ್ನೈಗೆ ನಾಯಕ ಧೋನಿ ಮತ್ತು ಜಡೇಜಾ ಕಡೇಯ ಮೂರು ಓವರ್​ಗಳಲ್ಲಿ ಹೋರಾಟ ನಡೆಸಿ ತಂಡಕ್ಕೆ ಗೆಲುವು ತಂದು ಕೊಡುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿದ ಧೋನಿ ಮತ್ತು ಜಡೇಜಾ ರಾಜಸ್ಥಾನ್​ ಬೌಲರ್​ಗಳಿಗೆ ಬೆಂಡೆತ್ತಿದರು. ಅಂತಿಮ 12 ಎಸೆತಗಳಲ್ಲಿ 40 ರನ್​ ಬಾರಿಸುವ ಸಾವಲನ್ನು ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಚೆನ್ನೈ ಮೀರಿ ನಿಲ್ಲುವ ಎಲ್ಲ ಸಾಧ್ಯತೆ ಇತ್ತು. ಸಂದೀಪ್​ ಶರ್ಮ ಎಸೆದ ಕೊನೆಯ ಓವರ್​ನಲ್ಲಿ ಧೋನಿ ಸತತ ಸಿಕ್ಸರ್​ ಬಾರಿಸಿದಾಗ ಚೆನ್ನೈ ಪಾಳಯದಲ್ಲಿ ಗೆಲುವಿನ ವಿಶ್ವಾಸ ಮೂಡಿತು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಅವಶ್ಯಕತೆ ಇತ್ತು. ಈ ವೇಳೆ ಧೋನಿ ಸ್ಟ್ರೈಕ್​ನಲ್ಲಿದ್ದರು. ಧೋನಿ ತಮ್ಮ ಎಂದಿನ ಶೈಲಿಯಂತೆ ಈ ಪಂದ್ಯವನ್ನು ಸಿಕ್ಸರ್​ ಮೂಲಕ ಫಿನಿಶ್ ಮಾಡುತ್ತಾರೆ ಎಂದು ಎಲ್ಲರು ತುದಿಗಾಲಲ್ಲಿ ನಿಂತಿದ್ದರು. ಆದರೆ ಸಂದೀಪ್ ಶರ್ಮ​ ಸ್ಲೋ ಯಾರ್ಕರ್​ ಎಸೆದು ರಾಜಸ್ಥಾನಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಧೋನಿ ಸಿಕ್ಸರ್​ ಬಾರಿಸುವಲ್ಲಿ ವಿಫಲರಾದರು.​ ಜಡೇಜಾ 25 ರನ್​ ಬಾರಿಸಿದರೆ ಧೋನಿ 32 ರನ್​ ಬಾರಿಸಿ ಅಜೇಯರಾಗಿ ಉಳಿದರು. ರಾಜಸ್ಥಾನ್​ ಪರ ಅಶ್ವಿನ್​ ಮತ್ತು ಚಹಲ್​ ತಲಾ 2 ವಿಕೆಟ್​ ಕಿತ್ತರು.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್​ ​ಪರ ಕಳೆದ ಎರಡು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿದ್ದ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಈ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಬಡಬಡನೆ 2 ಬೌಂಡರಿ ಬಾರಿಸಿದರೂ ಈ ಬಿರುಸನ್ನು ಕಾಯ್ದುಕೊಳ್ಳಲು ಅವರಿಂದಾಗಲಿಲ್ಲ. ಕೇವಲ 10 ರನ್​ಗಳಿಸಿ ತುಷರ್​ ದೇಶ್​ಪಾಂಡೆಗೆ ವಿಕೆಟ್​ ಒಪ್ಪಿಸಿದರು. ಇದರೊಂದಿಗೆ ರಾಜಸ್ಥಾನ್​ ಆರಂಭಿಕ ಆಘಾತ ಕಂಡಿತು. ಆದರೆ ಬಳಿಕ ಆಡಲು ಬಂದ ದೇವದತ್ತ ಪಡಿಕ್ಕಲ್​ ಅವರು ತೀಕ್ಷಣ ಅವರ ಎಸೆತದಲ್ಲಿ ಒಂದು ಜೀವಾದಾನ ಪಡೆದರು. ಸ್ಲಿಪ್​​ನಲ್ಲಿದ್ದ ಮೊಯಿನ್​ ಅಲಿ ಅವರು ಈ ಸುಲಭದ ಕ್ಯಾಚ್​ ಕೈಚೆಲ್ಲಿದರು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿದ ಪಡಿಕ್ಕಲ್​ ಬಿರುಸಿನ ಬ್ಯಾಟಿಂಗ್​ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇವರಿಗೆ ಬಟ್ಲರ್​ ಕೂಡ ಉತ್ತಮ ಸಾಥ್​ ನೀಡಿದರು.

ಸತತ ಬೌಂಡರಿ ಬಾರಿಸಿ ಉತ್ತಮ ರನ್​ ಕಲೆಹಾಕುತ್ತಿದ್ದ ಪಡಿಕ್ಕಲ್​ ಅವರು ರವೀಂದ್ರ ಜಡೇಜಾ ಅವರ ಓವರ್​ನಲ್ಲಿ ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಎಡವಿ, ಡೆವೋನ್​ ಕಾನ್ವೆಗೆ ಕ್ಯಾಚ್​ ನೀಡಿದರು. 26 ಎಸೆತ ಎದುರಿಸಿದ ಅವರು 38 ರನ್​ ಗಳಿಸಿದರು. ಇದರಲ್ಲಿ 5 ಬೌಂಡರಿ ದಾಖಲಾಯಿತು. ಬಟ್ಲರ್​ ಮತ್ತು ಪಡಿಕ್ಕಲ್ ಜೋಡಿ​ ದ್ವಿತೀಯ ವಿಕೆಟ್​ಗೆ 77 ರನ್​ಗಳ ಅಮೂಲ್ಯ ಜತೆಯಾಟ ನಡೆಸಿತು.

ರಾಜಸ್ಥಾನ್​ ಪರ ಕೆಟ್ಟ ದಾಖಲೆ ಬರೆದ ಸಂಜು

ನಾಯಕ ಸಂಜು ಸ್ಯಾಮ್ಸನ್​ ಈ ಪಂದ್ಯದಲ್ಲಿಯೂ ಶೂನ್ಯ ಸುತ್ತಿದರು. ಇದರೊಂದಿಗೆ ರಾಜಸ್ಥಾನ್​ ಪರ ಅತ್ಯಧಿಕ ಸೊನ್ನೆ ಸುತ್ತಿದ ಆಟಗಾರ ಎಂಬ ಕೆಟ್ಟ ದಾಖಲೆ ಬರೆದರು. ಸಂಜು ರಾಜಸ್ಥಾನ್​ ಪರ 8 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಶೇನ್​ ವಾರ್ನ್​​ 7 ಬಾರಿ ಆರ್​ಆರ್​ ಪರ ಡಕ್​ ಔಟ್​ ಆಗಿದ್ದರು. ಇವರನ್ನು ಹಿಂದಿಕ್ಕಿ ಸಂಜು ಇದೀಗ ಮೊದಲ ಸ್ಥಾನ ಪಡೆದಿದ್ದಾರೆ. ಸ್ಟುವರ್ಟ್​ ಬಿನ್ನಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅವರು 7 ಬಾರಿ ಶೂನ್ಯ ಸಂಪಾದನೆ ಮಾಡಿದ್ದಾರೆ.

ಇದನ್ನೂ ಓದಿ IPL 2023: ನಾಯಕನಾಗಿ ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ಡೇವಿಡ್​ ವಾರ್ನರ್​

ಅರ್ಧಶತಕ ಬಾರಿಸಿದ ಜಾಸ್​ ಬಟ್ಲರ್​

ಆರಂಭಿಕ ಆಟಗಾರ ಜಾಸ್​ ಬಟ್ಲರ್​ ಅವರ ಬ್ಯಾಟಿಂಗ್​ ಪ್ರತಾಪ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಆರಂಭದಿಂದಲೇ ಚೆನ್ನೈ ಬೌಲರ್​ಗಳಿಗೆ ಕಾಡಿದ ಅವರು 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜತೆಗೆ ಐಪಿಎಲ್​ನಲ್ಲಿ ಮೂರು ಸಾವಿರ ರನ್​ ಪೂರ್ತಿಗೊಳಿಸಿದ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದರು. ಇನ್ನೊಂದು ಬದಿಯಲ್ಲಿ ಆರ್​ ಅಶ್ವಿನ್​ ಕೂಡ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೂ ಕೂಡ ಮೊಯಿನ್​ ಅಲಿ ಕ್ಯಾಚ್​ ಬಿಟ್ಟು ಜಿವದಾನ ನೀಡಿದರು. ಇದರ ಪರಿಣಾಮ ಅಶ್ವಿನ್​ 22 ಎಸೆತಗಳಿಂದ 30 ರನ್​ ಚಚ್ಚಿದರು. ಇದರಲ್ಲಿ 2 ಸಿಕ್ಸರ್​ ಒಳಗೊಂಡಿತು. ಇದು ಅವರಿಗೆ ತವರಿನ ಪಂದ್ಯವಾಗಿತ್ತು. ಅಶ್ವಿನ್​ ವಿಕೆಟ್​ ಪತನದ ಬೆನ್ನಲ್ಲೇ ಜಾಸ್​ ಬಟ್ಲರ್​ ಕೂಡ ಆಟ ಮುಗಿಸಿದರು. ಎರಡು ಕ್ಯಾಚ್​ ಕೈಚೆಲ್ಲಿದ ಮೊಯಿನ್​ ಅಲಿ ಬಟ್ಲರ್​ ಅವರನ್ನು ಕ್ಲೀನ್​ ಬೌಲ್ಡ್​ ಮಾಡಿದರು. ಬಟ್ಲರ್​ 36 ಎಸೆತ ಎದುರಿಸಿ 52 ರನ್​ ಬಾರಿಸಿದರು. ಈ ಇನಿಂಗ್ಸ್​ ವೇಳೆ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್​ ಸಿಡಿಯಲ್ಪಟ್ಟಿತು.

ಅಂತಿಮ ಹಂತದಲ್ಲಿ ಸಿಡಿದು ನಿಂತ ವಿಂಡೀಸ್​ನ ಎಡಗೈ ಆಟಗಾರ ಶಿಮ್ರಾನ್​ ಹೆಟ್​ಮೈರ್ ಅಜೇಯ 30 ರನ್​ ಬಾರಿಸಿದರು.​ ಇವರ ಈ ಬಿರುಸಿನ ಬ್ಯಾಟಿಂಗ್​ ನರೆವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಚೆನ್ನೈ ಪರ ಬೌಲಿಂಗ್​ನಲ್ಲಿ ರವೀಂದ್ರ ಜಡೇಜಾ ನಾಲ್ಕು ಓವರ್​ ಎಸೆದು 21 ರನ್​ ವೆಚ್ಚದಲ್ಲಿ 2 ವಿಕೆಟ್​ ಕಿತ್ತರು. ಉಳಿದಂತೆ ಆಕಾಶ್​ ಸಿಂಗ್​ ಮತ್ತು ತುಷಾರ್​ ದೇಶ್​ಪಾಂಡೆ ತಲಾ 2 ವಿಕೆಟ್​ ಪಡೆದರು.

ಧೋನಿಗೆ ಸನ್ಮಾನ

ಮಹೇಂದ್ರ ಸಿಂಗ್​ ಧೋನಿಗೆ ಇದು ಚೆನ್ನೈ ಪರ ನಾಯಕನಾಗಿ 200ನೇ ಐತಿಹಾಸಿಕ ಪಂದ್ಯವಾಗಿದೆ. ಈ ಮೂಲಕ ತಂಡವೊಂದರ ಪರ ಅತ್ಯಧಿಕ ನಾಯಕತ್ವ ವಹಿಸಿದ ಏಕೈಕ ನಾಯಕ ಎಂಬ ಹಿರಿಮೆಗೆ ಧೋನಿ ಪಾತ್ರರಾದರು. ಸ್ಮರಣೀಯ ಪಂದ್ಯವನ್ನಾಡಲು ಮೈದಾನಕ್ಕೆ ಇಳಿದ ಧೋನಿಗೆ ತಂಡದ ಮಾಲಿಕ ಎನ್​. ಶ್ರೀನಿವಾಸನ್​ ಅವರು ಸ್ಮರಣಿಕೆ ನೀಡಿ ಗೌರವಿಸಿದರು.

ಸಂಕ್ಷಿಪ್ತ ಸ್ಕೋರ್​: ರಾಜಸ್ಥಾನ್​ ರಾಯಲ್ಸ್​​ 20 ಓವರ್​ಗಳಲ್ಲಿ 7 ವಿಕೆಟ್​ಗೆ 175 (ಜಾಸ್​ ಬಟ್ಲರ್​ 52, ದೆವದತ್ತ ಪಡಿಕ್ಕಲ್​ 38, ಆರ್​. ಅಶ್ವಿನ್​ 30, ಶಿಮ್ರಾನ್​ ಹೆಟ್​ಮೈರ್​ ಅಜೇಯ 30, ರವೀಂದ್ರ ಜಡೇಜಾ 21ಕ್ಕೆ 2, ತುಷಾರ್​ ದೇಶ್​ಪಾಂಡೆ 37ಕ್ಕೆ 2, ಆಕಾಶ್​ ಸಿಂಗ್​ 40ಕ್ಕೆ 2)
ಚೆನ್ನೈ ಸೂಪರ್​ ಕಿಂಗ್ಸ್​: 20 ಓವರ್​ಗಳಲ್ಲಿ 6 ವಿಕೆಟ್​ಗೆ 172 (ಡೆವೋನ್​ ಕಾನ್ವೆ 50, ರವೀಂದ್ರ ಜಡೇಜಾ ಅಜೇಯ 25, ಎಂ.ಎಸ್​. ಧೋನಿ ಅಜೇಯ 32, ಅಜಿಂಕ್ಯ ರಹಾನೆ 31, ಯಜುವೇಂದ್ರ ಚಹಲ್​ 27ಕ್ಕೆ 2, ಆರ್​. ಅಶ್ವಿನ್​ 25ಕ್ಕೆ 2)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

T20 World Cup: ಟಿ20 ವಿಶ್ವಕಪ್​ ತಂಡ ಸೇರಲು ರಾಹುಲ್​ಗೆ ಇನ್ನೂ ಇದೆ ಅವಕಾಶ

T20 World Cup: ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

VISTARANEWS.COM


on

T20 World Cup
Koo

ದುಬೈ: ಟಿ20 ವಿಶ್ವಕಪ್​ಗೆ(T20 World Cup) ಈಗಾಗಲೇ ಭಾರತ 15 ಸದಸ್ಯರ ಮತ್ತು ಮೀಸಲು ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್(KL Rahul)​ ಅವರನ್ನು ಈ ತಂಡದಿಂದ ಕೈಬಿಡಲಾಗಿದೆ. ಆದರೆ, ರಾಹುಲ್​ಗೆ ಇನ್ನೂ ಕೂಡ ತಂಡ ಸೇರುವ ಅವಕಾಶವೊಂದಿದೆ. ಇದು ಹೇಗೆ ಎನ್ನುವ ಮಾಹಿತಿ ಇಂತಿದೆ.

ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ. ಅವಕಾಶ ಸಿಕ್ಕ ಆಟಗಾರರ ಪೈಕಿ ಯಾರಾದರು ಗಾಯಗೊಂಡು ಅಲಭ್ಯರಾದರೆ ಆಗ ರಾಹುಲ್​ಗೆ ಅವಕಾಶ ಸಿಗಬಹುದು. ಇನ್ನೊಂದು ಸಾಧ್ಯತೆ ಎಂದರೆ ತಂಡ ಬದಲಾವಣೆಯ ಅಂತಿಮ ದಿನವಾದ 25ರಂದು ಅಚ್ಚರಿ ಎಂಬಂತೆ ರಾಹುಲ್​ ಆಯ್ಕೆಯಾಗುವ ಸಾಧ್ಯತೆಯೂ ಇದೆ.

ಕೆಲ ತಂಡಗಳು ಗೇಮ್ ಸ್ಟ್ರಟಜಿ ಮಾಡಿಕೊಂಡು ಕೆಲ ಸ್ಟಾರ್​ ಆಟಗಾರರನ್ನು ಮೊದಲ ಪಟ್ಟಿಯಿಂದ ಕೈಬಿಟ್ಟು ಆ ಬಳಿಕ ಅಚ್ಚರಿ ಎಂಬಂತೆ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ಇದರ ಹಿಂದಿರುವ ಕಾರಣವೆಂದರೆ ಎದುರಾಳಿ ತಂಡಗಳ ಪೂರ್ವ ಯೋಜನೆಯನ್ನು ಬುಡಮೇಲು ಮಾಡುವುದು. ಕಳೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಅನುಭವಿ ಆಟಗಾರ ಮಾರ್ನಸ್​ ಲನುಶೇನ್​ ಅವರನ್ನು ಆಯ್ಕೆ ಮಾಡಿರಲಿಲ್ಲ. ಇನ್ನೇನು ತಂಡ ಬದಲಾವಣೆಗೆ ಅಂತಿಮ ದಿನ ಬಾಕಿ ಇರುವಾಗ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಹೀಗಾಗಿ ಭಾರತ ಕೂಡ ರಾಹುಲ್​ ಅವರನ್ನು ಈ ರೀತಿ ಆಯ್ಕೆ ಮಾಡುವ ಸಾಧ್ಯತೆಯೂ ಕಂಡು ಬಂದಿದೆ.

ಇದನ್ನೂ ಓದಿ T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

Continue Reading

ಕ್ರೀಡೆ

MS Dhoni: ರನ್​ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ

MS Dhoni: ಯಾವುದೇ ವಿವಾದಗಳಿಗೆ ಒಳಗಾಗದೆ ಶಾಂತ ಸ್ವಭಾವದಿಂದ ಆಡುವ ಧೋನಿ ಹಲವು ಬಾರಿ ಸಹ ಆಟಗಾರರ ಶತಕ ಮತ್ತು ಅರ್ಧಶತಕಕ್ಕೋಸ್ಕರ ರನ್​ ಗಳಿಸದೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಆದರೆ, ಪಂಬಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಸಲುವಾಗಿ ಸ್ವಾರ್ಥಿಯಾಗಿ ಕಂಡು ಬಂದರು.

VISTARANEWS.COM


on

MS Dhoni
Koo

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮಾಜಿ ನಾಯಕ​ ಮಹೇಂದ್ರ ಸಿಂಗ್ ಧೋನಿ(MS Dhoni) ಬುಧವಾರ ನಡೆದ ಪಂಜಾಬ್​ ಲಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ತೋರಿದ ವರ್ತನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದು ಮಾಡುತ್ತಿದೆ. ಹಲವು ನೆಟ್ಟಿಗರು ಧೋನಿ ಇಷ್ಟೊಂದು ಸ್ವಾರ್ಥಿಯಾಗಬಾರದೆಂದು ಟೀಕಿಸಿದ್ದಾರೆ.

ಯಾವುದೇ ವಿವಾದಗಳಿಗೆ ಒಳಗಾಗದೆ ಶಾಂತ ಸ್ವಭಾವದಿಂದ ಆಡುವ ಧೋನಿ ಹಲವು ಬಾರಿ ಸಹ ಆಟಗಾರರ ಶತಕ ಮತ್ತು ಅರ್ಧಶತಕಕ್ಕೋಸ್ಕರ ರನ್​ ಗಳಿಸದೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಧೋನಿಯ ಈ ನಡೆಯ ಬಗ್ಗೆ ಅನೇಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಆದರೆ, ಪಂಬಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಸಲುವಾಗಿ ಸ್ವಾರ್ಥಿಯಾಗಿ ಕಂಡು ಬಂದರು.

ಚೆನ್ನೈ ಬ್ಯಾಟಿಂಗ್​ ಇನಿಂಗ್ಸ್​ನ ಅಂತಿಮ ಓವರ್​ನಲ್ಲಿ ಅರ್ಷದೀಪ್​ ಎಸೆದ ಈ ಓವರ್​ನ ಮೂರನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಚೆಂಡು ಬೌಂಡರಿ ಲೈನ್​ ಬಳಿ ಹೋದರೂ ಕೂಡ ಧೋನಿ ರನ್​ ಓಡದೆ ಸ್ವಾರ್ಥ ತೋರಿದರು. ನಾನ್​ಸ್ಟ್ರೈಕ್​ನಲ್ಲಿದ್ದ ಡೇರಿಯಲ್​ ಮಿಚೆಲ್​ ಅವರು ರನ್​ಗಾಗಿ ಓಡಿ ಕ್ರೀಸ್​ ಬಳಿ ಬಂದರು. ಈ ವೇಳೆ ಧೋನಿ ಅವೇಶದಲ್ಲಿಯೇ ಮಿಚೆಲ್​ಗೆ ಹಿಂದೆ ಹೋಗುವಂತೆ ತಿಳಿಸಿದರು. ಸ್ಟ್ರೈಕ್​ ತನಕ ಓಡಿದ್ದ ಮಿಚೆಲ್​ ಮತ್ತೆ ನಾನ್​ಸ್ಟ್ರೈಕರ್​ ಬಳಿಗೆ ಓಡಿ ಬಂದರು. ಮುಂದಿನ ಎಸೆತವನ್ನು ಧೋನಿ ಬೀಟ್​ ಮಾಡಿದರು. 5ನೇ ಎಸೆತದಲ್ಲಿ ಸಿಕ್ಸರ್​ ಬಾರಿಸಿ ಅಂತಿಮ ಎಸೆತದಲ್ಲಿ ರನೌಟ್​ ಆದರು.

ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ಬ್ಯಾಟಿಂಗ್​ಗಾಗಿ ಆಸೆ ತೋರಿದ ಧೋನಿಯ ಈ ಸ್ವಾರ್ಥವನ್ನು ಅನೇಕ ನೆಟ್ಟಿಗರು ಟೀಕಿಸಿದ್ದಾರೆ. ಇದು ಮತ್ತೊಬ್ಬ ಆಟಗಾರನಿಗೆ ಮಾಡುವ ಅವಮಾನ ಎಂದು ಕಮೆಂಟ್​ ಮಾಡಿದ್ದಾರೆ. ಈ ಘಟನೆಯ ವಿಡಿಯೊ ಎಲ್ಲಡೆ ವೈರಲ್(viral video)​ ಆಗಿದೆ. ಧೋನಿ ಸ್ಟ್ರೈಕ್​ ಉಳಿಸಿಕಿಕೊಂಡರೂ ಕೂಡ ಅವರಿಂದ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. 11  ಎಸೆತಗಳಿಂದ 14 ರನ್ ಮಾತ್ರ ಗಳಿಸಿದರು.

ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವು ಸಾಧಿಸಿತು.

Continue Reading

ಕ್ರೀಡೆ

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

PBKS vs CSK: ಚೆನ್ನೈಗೆ ತವರಿನಲ್ಲೇ ಅತ್ಯಧಿಕ ಸೋಲುಣಿಸಿದ ದಾಖಲೆ ಮುಂಬೈ ಇಂಡಿಯನ್ಸ್​ ತಂಡದ ಪರವಾಗಿದೆ. ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಮುಂಬೈ ಇದುವರೆಗೆ 5 ಪಂದ್ಯಗಳನ್ನು ಜಯಿಸಿದೆ. ಪಂಜಾಬ್​ 4 ಬಾರಿ ಸೋಲುಣಿಸಿ ಕೆಕೆಆರ್​(3 ಬಾರಿ) ತಂಡದ ದಾಖಲೆಯನ್ನು ಹಿಂದಿಕ್ಕಿದೆ.

VISTARANEWS.COM


on

PBKS vs CSK
Koo

ಚೆನ್ನೈ: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​(PBKS vs CSK) ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಪಂಜಾಬ್​ ಕಿಂಗ್ಸ್​ ದಾಖಲೆಯೊಂದನ್ನು ನಿರ್ಮಿಸಿದೆ. ಚೆನ್ನೈಗೆ ತವರಿನಲ್ಲಿಯೇ ಅತ್ಯಧಿಕ ಸೋಲುಣಿಸಿದ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ವೇಳೆ ಕೆಕೆಆರ್​(3 ಬಾರಿ) ತಂಡದ ದಾಖಲೆಯನ್ನು ಹಿಂದಿಕ್ಕಿದೆ.

ಚೆನ್ನೈಗೆ ತವರಿನಲ್ಲೇ ಅತ್ಯಧಿಕ ಸೋಲುಣಿಸಿದ ದಾಖಲೆ ಮುಂಬೈ ಇಂಡಿಯನ್ಸ್​ ತಂಡದ ಪರವಾಗಿದೆ. ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಮುಂಬೈ ಇದುವರೆಗೆ 5 ಪಂದ್ಯಗಳನ್ನು ಜಯಿಸಿದೆ. ಪಂಜಾಬ್​ 4 ಬಾರಿ ಸೋಲುಣಿಸಿದೆ. ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು. ಇದು ಈ ಆವೃತ್ತಿಯಲ್ಲಿ ಚೆನ್ನೈಗೆ ತವರಿನಲ್ಲಿ ಎದುರಾದ 2ನೇ ಸೋಲಾಗಿದೆ. ಇದಕ್ಕೂ ಮುನ್ನ ಲಕ್ನೋ ವಿರುದ್ಧ ಸೋಲು ಕಂಡಿತ್ತು.

ಚೇಸಿಂಗ್​ ವೇಳೆ ಕಳೆದ ಪಂದ್ಯದ ಶತಕ ವೀರ ಜಾನಿ ಬೇರ್​ಸ್ಟೋ 46 ರನ್​ ಬಾರಿಸಿ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರತಾಪ ತೋರಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಅವರು ಪ್ರತಿ ಓವರ್​ನಲ್ಲಿಯೂ ಕನಿಷ್ಠ ಒಂದು ಬೌಂಡರಿ ಅಥವಾ ಸಿಕ್ಸರ್​ ಬಾರಿಸುತ್ತಲೇ ಮುನ್ನುಗಿದರು. ಇವರಿಗೆ 2ನೇ ಕ್ರಮಾಂಕದಲ್ಲಿ ಆಡಲಿಳಿದ ದಕ್ಷಿಣ ಆಫ್ರಿಕಾದ ಹಾರ್ಡ್​ ಹಿಟ್ಟರ್​ ರೀಲಿ ರೂಸೊ ಉತ್ತಮ ಸಾಥ್​ ನೀಡಿದರು. ಬೇರ್​ಸ್ಟೋ ವಿಕೆಟ್​ ಪತನದ ಬಳಿಕ ಇವರು ತಂಡವನ್ನು ಆಧರಿಸಿದರು. 23 ಎಸೆತ ಎದುರಿಸಿ 43(5 ಬೌಂಡರಿ, 2 ಸಿಕ್ಸರ್​) ರನ್​ ಬಾರಿಸಿದರು. ಅಂತಿಮವಾಗಿ ಶಶಾಂಕ್​ ಸಿಂಗ್​(25) ಮತ್ತು ಹಂಗಾಮಿ ನಾಯಕ ಸ್ಯಾಮ್​ ಕರನ್​(26) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಶಶಾಂಕ್ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್​ಗಳ ಗಡಿ ದಾಡಿದರು.

ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ತಂಡ ಉತ್ತಮ ಆರಂಭವೇನೊ ಪಡೆಯಿತು. ನಾಯಕ ಋತುರಾಜ್​ ಗಾಯಕ್ವಾಡ್​ ಮತ್ತು ಅನುಭವಿ ಹಾಗೂ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಸೇರಿಕೊಂಡು ಮೊದಲ ವಿಕೆಟ್​ಗೆ 64 ರನ್​ ಒಟ್ಟುಗೂಡಿಸಿದರು. ರಹಾನೆ 29 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ರಹಾನೆ ವಿಕೆಟ್​ ಪತನದ ಬಳಿಕ ದಿಢೀರ್​ ಕುಸಿತ ಕಂಡಿತು. ಸತತವಾಗಿ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಒಂದೆಡೆ ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಕೂಡ ಮತ್ತೊಂದು ತುದಿಯಲ್ಲಿ ಕ್ರೀಸ್​ ಕಚ್ಚಿ ನಿಂತ ಗಾಯಕ್ವಾಡ್​ ತಮ್ಮ ಶಕ್ತಿ ಮೀರಿದ ಬ್ಯಾಟಿಂಗ್​ ಪ್ರದರ್ಶನದ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮುಂದುವರಿಸಿದರು. ಒಂದು ಹಂತದಲ್ಲಿ ಸಮೀರ್ ರಿಜ್ವಿ ಅವರಿಂದ ಸಣ್ಣ ಮಟ್ಟದ ಜತೆಯಾಟದ ಬೆಂಬಲ ಸಿಕ್ಕರೂ ಕೂಡ ಇದು ಹೆಚ್ಚು ಹೊತ್ತು ಸಾಗಲಿಲ್ಲ. 21 ರನ್​ ಗಳಿಸಿದ್ದ ವೇಳೆ ರಿಜ್ವಿ ಕೂಡ ಔಟಾದರು. ಗಾಯಕ್ವಾಡ್​ 48 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್​ ಬಾರಿಸಿ 62 ರನ್​ ಗಳಿಸಿದರು.

Continue Reading

ಕ್ರೀಡೆ

IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

IPL 2024 Points Table: ಇಂದು ನಡೆಯುವ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ್​ ರಾಯಲ್ಸ್​ ಮುಖಾಮುಖಿಯಾಗಲಿವೆ. ರಾಜಸ್ಥಾನ್ ಗೆದ್ದರೆ ಮೊದಲ ತಂಡವಾಗಿ ಪ್ಲೇ ಆಫ್​ಗೆ ಪ್ರವೇಶಿಸಲಿದೆ. ಸನ್​ರೈಸರ್ಸ್​ ಗೆದ್ದರೆ ಚೆನ್ನೈ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ.

VISTARANEWS.COM


on

IPL 2024 Points Table
Koo

ಚೆನ್ನೈ: ಬುಧವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಪಂಜಾಬ್​ ಕಿಂಗ್ಸ್​ ವಿರುದ್ಧ 7 ವಿಕೆಟ್​ ಅಂತರದ ಹೀನಾಯ ಸೋಲು ಕಂಡಿತು. ಗೆಲುವು ಸಾಧಿಸಿದ ಪಂಜಾಬ್​ ಅಂಕಪಟ್ಟಿಯಲ್ಲಿ(IPL 2024 Points Table) ಗುಜರಾತ್​ ಟೈಟಾನ್ಸ್​ ತಂಡವನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೇರಿತು. ಜತೆಗೆ ಪ್ಲೇ ಆಫ್​ ಆಸೆಯನ್ನು ಇನ್ನೂ ಜೀವಂತವಿರಿಸಿತು. ಚೆನ್ನೈ ಸೋಲು ಕಂಡರೂ ಕೂಡ ಈ ಹಿಂದಿನಂತೆ 4ನೇ ಸ್ಥಾನದಲ್ಲೇ ಮುಂದುವರಿಯಿತು.

ಇಂದು ನಡೆಯುವ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ್​ ರಾಯಲ್ಸ್​ ಮುಖಾಮುಖಿಯಾಗಲಿವೆ. ರಾಜಸ್ಥಾನ್ ಗೆದ್ದರೆ ಮೊದಲ ತಂಡವಾಗಿ ಪ್ಲೇ ಆಫ್​ಗೆ ಪ್ರವೇಶಿಸಲಿದೆ. ಸನ್​ರೈಸರ್ಸ್​ ಗೆದ್ದರೆ ಚೆನ್ನೈ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​96312 (+1.096)
ಲಕ್ನೋ​​106412 (+0.094)
ಚೆನ್ನೈ​105510 (+0.627)
ಹೈದರಾಬಾದ್​95410 (+0.075)
ಡೆಲ್ಲಿ115610 (-0.442)
ಪಂಜಾಬ್​10488 (-0.062)
ಗುಜರಾತ್​10468 (-1.113)
ಮುಂಬೈ10376 (-0.272)
ಆರ್​ಸಿಬಿ10376 (-0.415)

ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು.

ಇದನ್ನೂ ಓದಿ IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

​ಚೇಸಿಂಗ್​ ವೇಳೆ ಕಳೆದ ಪಂದ್ಯದ ಶತಕ ವೀರ ಜಾನಿ ಬೇರ್​ಸ್ಟೋ 46 ರನ್​ ಬಾರಿಸಿ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರತಾಪ ತೋರಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಅವರು ಪ್ರತಿ ಓವರ್​ನಲ್ಲಿಯೂ ಕನಿಷ್ಠ ಒಂದು ಬೌಂಡರಿ ಅಥವಾ ಸಿಕ್ಸರ್​ ಬಾರಿಸುತ್ತಲೇ ಮುನ್ನುಗಿದರು. ಇವರಿಗೆ 2ನೇ ಕ್ರಮಾಂಕದಲ್ಲಿ ಆಡಲಿಳಿದ ದಕ್ಷಿಣ ಆಫ್ರಿಕಾದ ಹಾರ್ಡ್​ ಹಿಟ್ಟರ್​ ರೀಲಿ ರೂಸೊ ಉತ್ತಮ ಸಾಥ್​ ನೀಡಿದರು. ಬೇರ್​ಸ್ಟೋ ವಿಕೆಟ್​ ಪತನದ ಬಳಿಕ ಇವರು ತಂಡವನ್ನು ಆಧರಿಸಿದರು. 23 ಎಸೆತ ಎದುರಿಸಿ 43(5 ಬೌಂಡರಿ, 2 ಸಿಕ್ಸರ್​) ರನ್​ ಬಾರಿಸಿದರು. ಅಂತಿಮವಾಗಿ ಶಶಾಂಕ್​ ಸಿಂಗ್​(25) ಮತ್ತು ಹಂಗಾಮಿ ನಾಯಕ ಸ್ಯಾಮ್​ ಕರನ್​(26) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಶಶಾಂಕ್ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್​ಗಳ ಗಡಿ ದಾಡಿದರು.

Continue Reading
Advertisement
Temperature Warning
ರಾಯಚೂರು34 seconds ago

Temperature Warning : ಬೆಂಕಿ ಇಲ್ಲದೆ ರಣ ಬಿಸಿಲಲ್ಲೇ ಮೊಟ್ಟೆ ಬೇಯಿಸಿ ಆಮ್ಲೇಟ್ ತಿಂದ ರಾಯಚೂರು ಮಂದಿ

Swara Bhasker reveals big difference between Kangana Ranaut and herself
ಬಾಲಿವುಡ್1 min ago

Swara Bhasker: ಕಂಗನಾ- ಸ್ವರಾ ಭಾಸ್ಕರ್ ನಡುವಿನ ದೊಡ್ಡ ವ್ಯತ್ಯಾಸವೇನು? ನಟಿಯ ಬಾಯಲ್ಲೇ ಕೇಳಿ!

Yakshagana Artist No more
ದಕ್ಷಿಣ ಕನ್ನಡ20 mins ago

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

prajwal revanna case look out notice
ಪ್ರಮುಖ ಸುದ್ದಿ27 mins ago

Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

Star Suvarna Kannada Janaki Samsara
ಕಿರುತೆರೆ39 mins ago

Star Suvarna Kannada: ಪ್ರೀತಿಯ ಸ್ವಾದವನ್ನು ಹೊತ್ತು ಬರುತ್ತಿದೆ ಈ ಹೊಸ ಕಥೆ! ʻಜಾನಕಿ ಸಂಸಾರʼ ಯಾವಾಗ?

T20 World Cup
ಕ್ರಿಕೆಟ್46 mins ago

T20 World Cup: ಟಿ20 ವಿಶ್ವಕಪ್​ ತಂಡ ಸೇರಲು ರಾಹುಲ್​ಗೆ ಇನ್ನೂ ಇದೆ ಅವಕಾಶ

Health Tips
ಆರೋಗ್ಯ50 mins ago

Health Tips: ಕಿಡ್ನಿಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡನ್ನು ಹೀಗೆ ಬಳಸಿ…

Gangster Goldy Brar
ವಿದೇಶ57 mins ago

Gangster Goldy Brar:”ಶೂಟೌಟ್‌ನಲ್ಲಿ ಸತ್ತಿದ್ದು ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಅಲ್ಲ”…ವದಂತಿಗೆ ತೆರೆ

prajawal revanna case driver karthik phone
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ವಿಡಿಯೋ ಡ್ರೈವರ್‌ ಮೊಬೈಲ್‌ಗೆ ಲೀಕ್‌ ಆಗಿದ್ದು ಹೀಗೆ!

Ilaiyaraaja Issues Legal Notice to Rajinikanth Coolie
ಕಾಲಿವುಡ್1 hour ago

Ilaiyaraaja Issues Legal Notice: ರಜನಿಕಾಂತ್‌ ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌