IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ - Vistara News

ಐಪಿಎಲ್ 2023

IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

ಈ ಬಾರಿಯ ಐಪಿಎಲ್​ ಮಿನಿ ಹರಾಜಿಗೆ 1,166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ ಎಂದು ವರದಿಗಳು ಸೂಚಿಸಿವೆ.

VISTARANEWS.COM


on

IPL 2024 Auction
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024)ರ ಆಟಗಾರರ ಮಿನಿ ಹರಾಜು(IPL Auction 2024) ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ ಎಂದು ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕೃತ ಮಾಹಿತಿ ನೀಡಿದೆ. ಅಂದ ಹಾಗೆ ವಿದೇಶದಲ್ಲಿ ಐಪಿಎಲ್​ ಹರಾಜು ನಡೆಯುತ್ತಿರುವುದು ಇದೇ ಮೊದಲು. ಆದರೆ, ಮೂರು ಬಾರಿ ವಿದೇಶಿ ನೆಲದಲ್ಲಿ ಟೂರ್ನಿ ನಡೆದಿದೆ. ಇದೀಗ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

1166 ಆಟಗಾರರು ಹೆಸರು ನೋಂದಣಿ

ಈ ಬಾರಿಯ ಐಪಿಎಲ್​ ಮಿನಿ ಹರಾಜಿಗೆ 1,166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ ಎಂದು ವರದಿಗಳು ಸೂಚಿಸಿವೆ. ಈ ಪಟ್ಟಿಯಲ್ಲಿ 212 ಅಂತಾರಾಷ್ಟ್ರೀಯ ಪಂದ್ಯವಾಡಿದವರು , 909 ಅಂತಾರಾಷ್ಟ್ರೀಯ ಕ್ರಿಕೆಟ್ ಆಡದವರು ಮತ್ತು 45 ಅಸೋಸಿಯೇಟ್ ಆಟಗಾರರು ಇದ್ದಾರೆ. ಈ ಪೈಕಿ ವಿದೇಶಿ ಆಟಗಾರರ ಸಂಖ್ಯೆ 336 ಎಂದು ತಿಳಿದುಬಂದಿದೆ.

ಫ್ರಾಂಚೈಸಿಗಳಿಗೆ ಸೂಚನೆ

ಹರಾಜು ರಿಜಿಸ್ಟರ್​ನಲ್ಲಿ ಪಟ್ಟಿ ಮಾಡದ ಹೆಚ್ಚುವರಿ ಆಟಗಾರರ ವಿನಂತಿಗಳೊಂದಿಗೆ ಪ್ರತಿಕ್ರಿಯಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫ್ರಾಂಚೈಸಿಗಳನ್ನು ವಿನಂತಿಸಿದೆ. ವಿನಂತಿಸಿದ ಆಟಗಾರರು ಅರ್ಹರಾಗಿದ್ದರೆ ಮತ್ತು ಆಸಕ್ತಿ ಹೊಂದಿದ್ದರೆ ಸ್ವಯಂಚಾಲಿತವಾಗಿ ಹರಾಜಿನಲ್ಲಿ ಸೇರಿಕೊಳ್ಳಲಿದ್ದಾರೆ. ಹರಾಜಿನಲ್ಲಿ ಸೇರಿಸಲು ಬಯಸುವ ಆಟಗಾರರ ಪಟ್ಟಿಯೊಂದಿಗೆ ಪ್ರತಿಕ್ರಿಯಿಸಲು ಫ್ರಾಂಚೈಸಿಗಳಿಗೆ ಸೂಚನೆ ನೀಡಲಾಗಿದೆ. ಕೇವಲ 77 ಸ್ಲಾಟ್​ಗಳನ್ನು ಮಾತ್ರ ಭರ್ತಿ ಮಾಡಬೇಕಾಗಿದೆ, ಅದರಲ್ಲಿ ಗರಿಷ್ಠ 30 ವಿದೇಶಿ ಆಟಗಾರರು ಇರಬಹುದು. ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ.

ಮುಂಬೈ ಇಂಡಿಯನ್ಸ್

ಐಪಿಲ್​ನ ಅತ್ಯಂತ ಯಶಸ್ವಿ ತಂಡವೆನಿಸಿದ ಮುಂಬೈ ಇಂಡಿಯನ್ಸ್​ ತಂಡವು ಈ ಬಾರಿಯ ಹರಾಜಿನಲ್ಲಿ 8 ಆಟಗಾರರನ್ನು ಖರೀದಿ ಮಾಡುವ ಅವಕಾಶ ಹೊಂದಿದೆ. ನಾಲ್ವರು ವಿದೇಶಿ ಹಾಗೂ ನಾಲ್ವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಟ್ರೆಡಿಂಗ್​ ನಿಯಮದ ಮೂಲಕ ಗುಜರಾತ್​ ತಂಡದಿಂದ ಹಾರ್ದಿಕ್​ ಪಾಂಡ್ಯ ಅವರನ್ನು ಈಗಾಗಲೇ ಖರೀದಿ ಮಾಡಿ ಬಲಿಷ್ಠ ತಂಡ ರೂಪಿಸಿಕೊಂಡಿದೆ. ಸದ್ಯ ಫ್ರಾಂಚೈಸಿ ಬಳಿ 15.25 ಕೋಟಿ ರೂ. ಹಣವಿದೆ.

ಗುಜರಾತ್ ಟೈಟಾನ್ಸ್

ಒಂದು ಬಾರಿ ಚಾಂಪಿಯನ್​ ಮತ್ತು ಕಳೆದ ಬಾರಿ ರನ್ನರ್​ ಅಪ್​ ಗುಜರಾತ್​ ಟೈಟಾನ್ಸ್​ ತಂಡಕ್ಕೆ ಮಿನಿ ಹರಾಜಿನಲ್ಲಿ ಒಟ್ಟು 8 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ 6 ಭಾರತೀಯ ಹಾಗೂ ಎಡರು ವಿದೇಶಿ ಆಟಗಾರ ಆಯ್ಕೆ ಮಾತ್ರ ಸಾಧ್ಯವಾಗಲಿದೆ. 38.15 ಕೋಟಿ ರೂ. ಉಳಿಕೆ ಹಣವಿದೆ.

ಚೆನ್ನೈ ಸೂಪರ್ ಕಿಂಗ್ಸ್

ಮಹೇಂದ್ರ ಸಿಂಗ್​ ಧೋನಿ ಸಾರಥ್ಯದ ಚನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಈ ಬಾರಿ 6 ಆಟಗಾರರನ್ನು ಖರೀದಿಸಬಹುದು. ಇವರಲ್ಲಿ 3 ವಿದೇಶಿ ಆಟಗಾರರನ್ನು ಹಾಗೂ ಮೂವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಸದ್ಯ ತಂಡದ ಬಳಿ 31.40 ಕೋಟಿ. ರೂ ಹಣವಿದೆ.

ಸನ್‌ರೈಸರ್ಸ್ ಹೈದರಾಬಾದ್

ಒಂದು ಬಾರಿಯ ಚಾಂಪಿಯನ್​ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ 6 ಆಟಗಾರರನ್ನು ಖರೀದಿ ಮಾಡಬಹುದಾಗಿದೆ. ತಲಾ ಮೂರು ಭಾರತೀಯ ಮತ್ತು ವಿದೇಶಿ ಆಟಗಾರರನ್ನು ಬಿಡ್​ ಮಾಡಬಹುದು. ತಂಡದ ಬಳಿ 34 ಕೋಟಿ ರೂ. ಹಣವಿದೆ.

ಇದನ್ನೂ ಓದಿ IPL 2024: ಶಮಿಗೆ ಬಿಗ್ ಆಫರ್​ ನೀಡಿದ ಐಪಿಎಲ್​ ಫ್ರಾಂಚೈಸಿ; ಶಮಿ ನಿರ್ಧಾರವೇನು?

ಪಂಜಾಬ್ ಕಿಂಗ್ಸ್

ಹೆಸರು ಬದಲಿಸಿದರು ಅದೃಷ್ಟ ಬದಲಾಗದ ಪಂಜಾಬ್ ಕಿಂಗ್ಸ್​ ತಂಡಕ್ಕೆ 8 ಆಟಗಾರರನ್ನು ಖರೀದಿ ಮಾಡುವ ಅವಕಾಶವಿದೆ. ಇಬ್ಬರು ವಿದೇಶಿ ಆಟಗಾರರು ಹಾಗೂ 6 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಫ್ರಾಂಚೈಸಿ ಬಳಿ 29.10 ಕೋಟಿ. ರೂ.ಹಣವಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸ್ಟಾರ್​ ಆಟಗಾರರ ಪಡೆಯನ್ನ ಹೊಂದಿದ್ದರು ಇದುವರೆಗೂ ಕಪ್​ ಗೆಲ್ಲದ ಐಪಿಎಲ್​ನ ನತದೃಷ್ಟ ತಂಡಗಳಲ್ಲಿ ಒಂದಾಗಿರುವ ಆರ್​ಸಿಬಿ ತಂಡಕ್ಕೆ ಈ ಬಾರಿ ಒಟ್ಟು 6 ಆಟಗಾರರನ್ನು ಖರೀದಿಸಬಹುದು. ತಲಾ ಮೂರು ಭಾರತೀಯ ಮತ್ತು ವಿದೇಶಿ ಆಟಗಾರರನ್ನು ಖರೀದಿಸಬಹುದು. ಆರ್​ಸಿಬಿ ಬಳಿ ಕೇವಲ 14.50 ಕೋಟಿ ರೂ. ಮಾತ್ರ ಉಳಿಕೆ ಹಣವಿದೆ. ಈ ಮೊತ್ತದಲ್ಲಿ ಸ್ಟಾರ್​ ಆಟಗಾರರನ್ನು ಖರೀದಿಸುವುದು ಕಷ್ಟ ಸಾಧ್ಯ. 

ರಾಜಸ್ಥಾನ್ ರಾಯಲ್ಸ್

ಚೊಚ್ಚಲ ಆವೃತ್ತಿಯ ಚಾಂಪಿಯನ್​ ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ ಈ ಬಾರಿ​ 8 ಸ್ಲಾಟ್​ಗಳಲ್ಲಿ ಮೂವರು ವಿದೇಶಿ ಹಾಗೂ 5 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಈಗಾಗಲ ಟ್ರೆಡಿಂಗ್​ ಮೂಲಕ ಲಕ್ನೋ ತಂಡ ಅವೇಶ್​ ಖಾನ್​ ಅವರನ್ನು ಖರೀದಿಸಿ ದೇವದತ್ತ ಪಡಿಕ್ಕಲ್​ ಲಕ್ನೋಗೆ ಬಿಟ್ಟುಕೊಟ್ಟಿದೆ. ಸದ್ಯ ಫ್ರಾಂಚೈಸಿ ಬಳಿ 14.50 ಕೋಟಿ ರೂ. ಮೊತ್ತ ಬಾಕಿ ಇದೆ.

ಲಕ್ನೋ ಸೂಪರ್ ಜೈಂಟ್ಸ್

ಕನ್ನಡಿಗ ಕೆ.ಎಲ್ ರಾಹುಲ್​ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಈ ಬಾರಿಯ ಹರಾಜಿನಲ್ಲಿ ಒಟ್ಟು 6 ಆಟಗಾರರನ್ನು ಖರೀದಿ ಮಾಡಬಹುದು. ಆದರೆ ನಾಲ್ವರು ಭಾರತೀಯ ಆಟಗಾರರನ್ನು ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬೇಕು. ತಂಡದ ಬಳಿ ಕೇವಲ 13.15 ಕೋಟಿ. ರೂ ಮಾತ್ರ ಬಾಕಿ ಉಳಿದಿದ್ದು ಸ್ಟಾರ್​ ಆಟಗಾರರನ್ನು ಖರೀದಿ ಮಾಡಲು ಕಷ್ಟವಾಗಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್

2 ಬಾರಿಯ ಚಾಂಪಿಯನ್​ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೆ ಗರಿಷ್ಠ 12 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ 8 ಭಾರತೀಯ ಹಾಗೂ 4 ವಿದೇಶಿ ಆಟಗಾರರಿಗೆ ಅವಕಾಶ ನೀಡಬಹುದು. ಸದ್ಯ ಫ್ರಾಂಚೈಸಿ ಬಳಿ 32.70 ಕೋಟಿ ರೂ. ಉಳಿಕೆ ಹಣವಿದೆ. ಹೀಗಾಗಿ ಸ್ಟಾರ್​ ಆಟಗಾರರನ್ನು ತನ್ನ ತಂಡಕ್ಕೆ ಸೆಳೆಯಬಹುದು.

ಡೆಲ್ಲಿ ಕ್ಯಾಪಿಟಲ್ಸ್

ಯುವ ಆಟಗಾರರನ್ನೇ ನೆಚ್ಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಈ ಬಾರಿ 9 ಆಟಗಾರರನ್ನು ಖರೀದಿ ಮಾಡಬಹುದು. ಇದರಲ್ಲಿ 4 ವಿದೇಶಿ ಆಟಗಾರರಿಗೆ, ಐವರು ಭಾರತೀಯ ಅವಕಾಶ ನೀಡಬಹುದು. ಕಳೆದ ವರ್ಷ ಡಿಸೆಂಬರ್​ನಲ್ಲಿ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ರಿಷಭ್​ ಪಂತ್​ 16ನೇ ಆವೃತ್ತಿಯ ಐಪಿಎಲ್​ನಿಂದ ದೂರ ಉಳಿದಿದ್ದರು. ಈ ಬಾರಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಐಪಿಎಲ್ 2023

IPL 2024 Auction: ಹರಾಜಿನಲ್ಲಿ ಕಾಣಿಸಿಕೊಂಡ ಹಿರಿಯ-ಕಿರಿಯ ಆಟಗಾರ ಯಾರು?

ಅಚ್ಚರಿ ಎಂದರೆ ಈ ಬಾರಿಯ ಐಪಿಎಲ್​ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡ ಹಿರಿಯ ಮತ್ತು ಕಿರಿಯ ಆಟಗಾರರು ಅಫಘಾನಿಸ್ತಾನ ತಂಡದವರೇ ಆಗಿದ್ದಾರೆ.

VISTARANEWS.COM


on

Allah Ghazanfar
Koo

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024 Auction)​ ಟೂರ್ನಿಯ ಆಗಾರರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಈಗಾಗಲೇ ಆಟಗಾರರ ಪಟ್ಟಿಯನ್ನು ಕೂಡ ಮಂಡಳಿ ಅಂತಿಮಗೊಳಿಸಿ ಪ್ರಕಟಿಸಿದೆ. ಇದೀಗ ಹರಾಜಿನಲ್ಲಿ ಇರುವ ಅತಿ ಕಿರಿಯ ಮತ್ತು ಹಿರಿಯ ಆಟಗಾರ ಯಾರೆಂದು ಅಭಿಮಾನಿಗಳಿಗೆ ಕೂತೂಹಲ ಕೆರಳಿದೆ. ಇದಕ್ಕೆ ಉತ್ತರ ಇಲ್ಲಿದೆ.

ಇದೇ ಮೊದಲ ಬಾರಿಗೆ ವಿದೇಶದಲ್ಲಿ ನಡೆಯುವ ಆಟಗಾರರ ಮಿನಿ ಹರಾಜಿನಲ್ಲಿ ಒಟ್ಟು 333 ಮಂದಿ ಆಟಗಾರರು ಹರಾಜಿನ ಭಾಗವಾಗಲಿದ್ದಾರೆ. ಇದರಲ್ಲಿ 214 ಭಾರತೀಯರು ಮತ್ತು 119 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಸೋಸಿಯೇಟ್ ದೇಶಗಳ ಇಬ್ಬರು ಆಟಗಾರರು ಅವಕಾಶ ಪಡೆದಿದ್ದಾರೆ.

ಒಟ್ಟು 333 ಆಟಗಾರರ ಪೈಕಿ ಕೇವಲ 23 ಆಟಗಾರರಿಗೆ ಮಾತ್ರ ಎರಡು ಕೋಟಿ ರೂ. ಮೂಲಬೆಲೆ ನಿಗದಿ ಮಾಡಲಾಗಿದೆ. ಆದರೆ ಇದರಲ್ಲಿ ಕೇವಲ ಮೂರು ಮಂದಿ ಮಾತ್ರ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಆರ್​ಸಿಬಿಯಿಂದ ಬಿಡುಗಡೆಯಾದ ಹರ್ಷಲ್ ಪಟೇಲ್, ಕೆಕೆಆರ್​ನಿಂದ ಬಿಡುಗಡೆಯಾದ ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್. ಕಳೆದ ಬಾರಿ ಹರಾಜಾಗದ ಆಸೀಸ್​ನ ಸ್ಟೀವನ್​ ಸ್ಮಿತ್ ಅವರು ಈ ಬಾರಿ 2 ಕೋಟಿ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಘಜನ್ಫರ್ ಕಿರಿಯ ಆಟಗಾರ

ಅಫಘಾನಿಸ್ತಾನದ 16 ವರ್ಷದ ಸ್ಪಿನ್ನರ್​ ಅಲ್ಲಾ ಮೊಹಮ್ಮದ್ ಘಜನ್ಫರ್ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಆಟಗಾರ. 15 ಜುಲೈ 2007 ರಂದು ಜನಿಸಿದ ಘಜನ್ಫರ್ ಇದುವರೆಗಿನ ತಮ್ಮ ಕ್ರಿಕೆಟ್​ ವೃತ್ತಿಜೀವನದಲ್ಲಿ ಕೇವಲ 4 ಲಿಸ್ಟ್ ‘ಎ’ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾನೆ. ಕಿರಿಯ ವಯಸ್ಸಿನಲ್ಲಿಯೇ ಅವರು ಮಿಸ್ ಐನಾಕ್ ನೈಟ್ಸ್ ಮತ್ತು ಟೀಮ್ ಅಬುಧಾಬಿಗಾಗಿ ಆಡಿದ ಕೀರ್ತಿ ಹೊಂದಿದ್ದಾರೆ. ಅಫ್ಘಾನಿಸ್ತಾನದ ಪರ ಜೂನಿಯರ್​ ಏಕದಿನ ಟೂರ್ನಿಯಲ್ಲೂ ಆಡಿದ್ದಾನೆ. ಇದೇ ವರ್ಷ ನಡೆದಿದ್ದ ವಜೀರ್ ಮೊಹಮ್ಮದ್ ಅಕ್ಬರ್ ಖಾನ್ ಪ್ರಾಂತೀಯ ಗ್ರೇಡ್ 1 ಏಕದಿನ ಪಂದ್ಯಾವಳಿಯಲ್ಲಿ ಕಾಬೂಲ್ ಪ್ರಾಂತ್ಯದ ಪರವಾಗಿ ಕಣಕ್ಕಿಳಿದಿದ್ದ. ಲಿಸ್ಟ್​ ಎ ಟೂರ್ನಿಯಲ್ಲಿ ಒಟ್ಟು 4 ಮತ್ತು ಟಿ20 ಕ್ರಿಕೆಟ್​ನಲ್ಲಿ 5 ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾನೆ.

ಇದನ್ನೂ ಓದಿ IPL 2024: ಕನಿಷ್ಠ 15 ಕೋಟಿ ರೂ. ಮೊತ್ತಕ್ಕೆ ಸೇಲ್ ಆಗಬಲ್ಲ 5 ಪ್ರಮುಖ ಆಟಗಾರರು ಇವರು…

ನಬಿ ಅತ್ಯಂತ ಹಿರಿಯ ಆಟಗಾರ

ಅಚ್ಚರಿ ಎಂದರೆ ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಂಡ ಹಿರಿಯ ಮತ್ತು ಕಿರಿಯ ಆಟಗಾರರು ಅಫಘಾನಿಸ್ತಾನ ತಂಡದವರೇ ಆಗಿದ್ದಾರೆ. ಹಿರಿಯ ಆಟಗಾರನೆಂದರೆ ಮೊಹಮ್ಮದ್​ ನಬಿ. ಅವರಿಗೆ 38 ವರ್ಷ. ಅನುಭವಿ ಆಲ್​ರೌಂಡರ್​ ಆಗಿರುವ ನಬಿಗೆ ಈ ಬಾರಿಯ ಹರಾಜಿನಲ್ಲಿ 1.5 ಕೋಟಿ ಮೂಲಬೆಲೆ ನಿಗದಿ ಮಾಡಲಾಗಿದೆ. ಕೆಕೆಆರ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಪರ ಆಡಿದ ಅನುಭವ ಹೊಂದಿದ್ದಾರೆ. ಒಟ್ಟಾರೆಯಾಗಿ ಅವರು ಇದುವರೆಗೆ 17 ಐಪಿಎಲ್​ ಪಂದ್ಯ ಆಡಿ 180 ರನ್​ ಮತ್ತು 13 ವಿಕೆಟ್ ಕಡೆವಿದ್ದಾರೆ. ಇದರಲ್ಲಿ 11 ರನ್​ಗೆ 4 ವಿಕೆಟ್​ ಉರುಳಿಸಿದ್ದು ಅವರ ವೈಯಕ್ತಿಕ ಸಾಧನೆಯಾಗಿದೆ.

Continue Reading

ಐಪಿಎಲ್ 2023

IPL 2024: ಆರ್​ಸಿಬಿ ಮಾಜಿ ಕೋಚ್​ ಈಗ ಪಂಜಾಬ್​ ತಂಡಕ್ಕೆ ಕ್ರಿಕೆಟ್ ಅಭಿವೃದ್ಧಿಯ ಮುಖ್ಯಸ್ಥ

ಟೀಮ್​ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್(Sanjay Bangar) ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕ್ರಿಕೆಟ್ ಅಭಿವೃದ್ಧಿಯ ಮುಖ್ಯಸ್ಥರಾನ್ನಾಗಿ(Head of Cricket Development) ನೇಮಕ ಮಾಡಿದೆ.

VISTARANEWS.COM


on

Sanjay Bangar
Koo

ಮೊಹಾಲಿ: ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮುಂದಿನ ಆವೃತ್ತಿ ಐಪಿಎಲ್(IPL 2024) ಸೀಸನ್​ಗಾಗಿ ಟೀಮ್​ ಇಂಡಿಯಾದ ಮಾಜಿ ಆಟಗಾರ ಹಾಗೂ ಆರ್​ಸಿಬಿ(RCB) ತಂಡದ ಕೋಚ್​ ಆಗಿದ್ದ ಸಂಜಯ್ ಬಂಗಾರ್(Sanjay Bangar) ಅವರನ್ನು ಕ್ರಿಕೆಟ್ ಅಭಿವೃದ್ಧಿಯ ಮುಖ್ಯಸ್ಥರಾನ್ನಾಗಿ(Head of Cricket Development) ನೇಮಕ ಮಾಡಿದೆ. ಈ ವಿಚಾರವನ್ನು ಪಂಜಾಬ್​ ಕಿಂಗ್ಸ್​(Punjab Kings) ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಾದ ಎಕ್ಸ್​ನಲ್ಲಿ ಪ್ರಕಟಿಸಿದೆ.

ಮತ್ತೆ ಪಂಜಾಬ್​ ಫ್ರಾಂಚೈಸಿಗೆ

ಸಂಜಯ್​ ಬಂಗಾರ್ ಅವರು ತಮ್ಮ ಐಪಿಎಲ್​ ಜರ್ನಿಯನ್ನು ಆರಂಭಿಸಿದ್ದು ಪಂಜಾಬ್​ ಫ್ರಾಂಚೈಸಿಯ ಮೂಲಕವೇ. ಹೌದು, 2014ರಲ್ಲಿ ಅವರು ಪಂಜಾಬ್‌ ತಂಡಕ್ಕೆ ಸಹಾಯಕ ತರಬೇತುದಾರರಾಗಿ ನೇಮಕಗೊಳ್ಳುವ ಮೂಲಕ ಐಪಿಎಲ್​ ಕೋಚಿಂಗ್​ ಆರಂಭಿಸಿದ್ದರು. ಇದೇ ಋತುವಿನಲ್ಲಿ ಪಂಜಾಬ್​ ತಂಡ ಫೈನಲ್​ ಕೂಡ ಪ್ರವೇಶಿಸಿತ್ತು. ಆದರೆ ಫೈನಲ್​ನಲ್ಲಿ ಪಂಜಾಬ್​ ಕೆಕೆಆರ್​ ವಿರುದ್ಧ ಸೋಲು ಕಂಡಿತ್ತು. ಬಿಸಿಸಿಐ ಸ್ವಹಿತಾಸಕ್ತಿ ಸಂಘರ್ಷದ ಕಾರಣದಿಂದ ಅವರು ಕೆಳಗಿಳಿಯುವವರೆಗೂ ಅವರು ಮೂರು ವರ್ಷಗಳ ಕಾಲ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿದಿದ್ದರು.

ಆಗಸ್ಟ್ 2014 ರಲ್ಲಿ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ನಿರಾಶಾದಾಯಕ ಪ್ರದರ್ಶನ ತೋರಿದ ಕಾರಣ ತಂಡದ ಕೋಚಿಂಗ್​ ಸ್ಟಾಫ್​ಗಳನ್ನು ಬದಲಾಯಿಸಲಾಯಿತು. ಪಂಜಾಬ್​ ಕೋಚ್​ ಆಗಿದ್ದ ಬಂಗಾರ್ ಅವರನ್ನು ಭಾರತೀಯ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಯಿತು. ಜೂನ್ 2016 ರಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಅವರು ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದದ್ದರು. ಅನಿಲ್ ಕುಂಬ್ಳೆ ಮತ್ತು ರವಿಶಾಸ್ತ್ರಿ ಅವರ ಮುಖ್ಯ ಕೋಚಿಂಗ್​ ಅಡಿಯಲ್ಲಿ ಬಂಗಾರ್​ ಅವರು ಟೀಮ್​ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಇದನ್ನೂ ಓದಿ IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

ಆರ್​ಸಿಬಿಗೆ ಕೋಚ್​ ಆಗಿದ್ದ ಬಂಗಾರ್

ಭಾರತ ಕ್ರಿಕೆಟ್​ ತಂಡದ ಬ್ಯಾಟಿಂಗ್​ ಕೋಚ್​ ಹುದ್ದೆಯಿಂದ ಕೆಳಗಿಳಿದ ಬಳಿಕ ಬಂಗಾರ್​ ಫೆಬ್ರವರಿ 2021 ರಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಲಹೆಗಾರರಾಗಿ ಸೇರಿಕೊಂಡರು. 2022 ಐಪಿಎಲ್​ ಋತುವಿನಲ್ಲಿ ಆರ್​ಸಿಬಿಯ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಅವರ ಮಾರ್ಗದರ್ಶನದಲ್ಲಿ, ಆರ್​ಸಿಬಿ 2021 ಮತ್ತು 2022 ರಲ್ಲಿ ಪ್ಲೇ ಆಫ್ ತಲುಪಿತ್ತು. 2023ರಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಿ ಬಂದಿರಲಿಲ್ಲ. ಹೀಗಾಗಿ ಅವರನ್ನು ಕೋಚ್​ ಹುದ್ದೆಯಿಂದ ಕೈಬಿಡಲಾಗಿತ್ತು. ಇದೀಗ ತಮ್ಮ ಕೋಚಿಂಗ್​ ವೃತ್ತಿ ಬದುಕು ಆರಂಭಿಸಿದ ಪಂಜಾಬ್​ ತಂಡಕ್ಕೆ ಮತ್ತೆ ಸೇರಿಕೊಂಡಿದ್ದಾರೆ.

ಪಂಜಾಬ್ ಕಿಂಗ್ಸ್

ಹೆಸರು ಬದಲಿಸಿದರು ಅದೃಷ್ಟ ಬದಲಾಗದ ಪಂಜಾಬ್ ಕಿಂಗ್ಸ್​ ತಂಡಕ್ಕೆ ಡಿ.19ರಂದು ನಡೆಯುವ ಆಟಗಾರರ ಹರಾಜಿನಲ್ಲಿ 8 ಆಟಗಾರರನ್ನು ಖರೀದಿ ಮಾಡುವ ಅವಕಾಶವಿದೆ. ಇಬ್ಬರು ವಿದೇಶಿ ಆಟಗಾರರು ಹಾಗೂ 6 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಫ್ರಾಂಚೈಸಿ ಬಳಿ 29.10 ಕೋಟಿ. ರೂ.ಹಣವಿದೆ.

Continue Reading

ಐಪಿಎಲ್ 2023

MS Dhoni: ಧೋನಿಯ ಮೊಣಕಾಲಿನ ಎಕ್ಸ್-ರೇ ಕಂಡು ಅಭಿಮಾನಿಗಳಿಗೆ ಹೆಚ್ಚಿದ ಆತಂಕ!

ಎಲ್ಲ ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ಮೊಣಕಾಲಿನ ಎಕ್ಸ್‌-ರೇ(Ms dhoni’s knee X-Ray) ಒಂದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

VISTARANEWS.COM


on

ms dhoni injury
Koo

ಬೆಂಗಳೂರು: ಬಹುನಿರೀಕ್ಷಿತ 17ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಇದೇ ಡಿಸೆಂಬರ್​ 19 ರಂದು ದುಬೈನಲ್ಲಿ ನಡೆಯಲಿದೆ. ಎಲ್ಲ ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ಮೊಣಕಾಲಿನ ಎಕ್ಸ್‌-ರೇ(Ms dhoni’s knee X-Ray) ಒಂದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಧೋನಿ ಅವರ ಎಕ್ಸ್‌-ರೇ ಫೋಟೊ ಕಂಡ ಅವರ ಅಭಿಮಾನಿಗಳಿಗೆ ಚಿಂತೆಯೊಂದು ಮೂಡಿದ್ದು, ಧೋನಿ 2024ರ ಐಪಿಎಲ್​ ಆಡಲಿದ್ದಾರಾ ಎನ್ನುವ ಆತಂಕ ಕಾಡಲಾರಂಭಿಸಿದೆ. ವೈರಲ್​ ಆಗಿರುವ ಫೋಟೊದಲ್ಲಿ “ಇದು ಧೋನಿಯ ಮೊಣಕಾಲಿನ ಎಕ್ಸ್-ರೇ. ಮುರಿದು ಹೋಗಿರುವ ಈ ಮೂಳೆ ಸರಿಹೋಗಲು ಮತ್ತು ಅವರು ಚೇತರಿಸಿಕೊಳ್ಳಲು ಕನಿಷ್ಠ 9-10 ತಿಂಗಳುಗಳು ಬೇಕಾಗಬಹುದು” ಎಂದು ಬರೆಯಲಾಗಿದೆ.

ಅಸಲಿಗೆ ಇದು ಧೋನಿ ಅವರ ಮೊಣಕಾಲಿನ ಎಕ್ಸ್-ರೇ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಅಲ್ಲದೆ ಧೋನಿ ಅವರು ಈ ಫೋಟೊವನ್ನು ಕೂಡ ಹಂಚಿಕೊಂಡಿಲ್ಲ. ಐಪಿಎಲ್ ಹರಾಜು ಹತ್ತಿರ ಬರುತ್ತಿದ್ದು ಜತೆಗೆ 17ನೇ ಆವೃತ್ತಿಯ ಐಪಿಎಲ್​ ಧೋನಿ ಪಾಲಿಗೆ ಕೊನೆಯ ಐಪಿಎಲ್​ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಧೋನಿ ಅಭಿಮಾನಿಗಳಲ್ಲಿ ಹೆಚ್ಚಿನ ಆತಂಕ ಮತ್ತು ಕುತೂಹಲ ಕೆರಳಿಸುವ ನಿಟ್ಟಿನಲ್ಲಿ ಕೆಲ ನೆಟ್ಟಿಗರು ಈ ರೀತಿ ಸುಳ್ಳು ಎಕ್ಸ್-ರೇ ಫೋಟೊ ಹಂಚಿಕೊಂಡು ಇದು ಧೋನಿಯ ಮೊಣಕಾಲಿನ ಎಕ್ಸ್-ರೇ ಎಂದು ಎಲ್ಲಡೆ ಶೇರ್​ ಮಾಡುತ್ತಿದ್ದಾರೆ.

ಇದನ್ನೂ ಓದಿ IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

ಈ ಬಾರಿ ನಿವೃತ್ತಿ ಖಚಿತ

ಮಹೇಂದ್ರ ಸಿಂಗ್​ ಧೋನಿ ಅವರು ಇದೇ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್​ ಬಳಿಕ ವಿದಾಯ ಹೇಳುತ್ತಾರೆ ಎನ್ನಲಾಗಿತ್ತು. ಅದರಲ್ಲೂ ಚೆನ್ನೈ ಸೂಪರ್​ ಕಿಂಗ್ಸ್​ ಫೈನಲ್​ ತಲುಪಿದಾಗ ಅಭಿಮಾನಿಗಳಲ್ಲಿ ಧೋನಿ ಖಚಿತವಾಗಿ ತಮ್ಮ ನಿವೃತ್ತಿ ನಿರ್ಧಾರ ಘೋಷಿಸುತ್ತಾರೆ ಎಂದು ಬೇಸರಗೊಂಡಿದ್ದರು. ಆದರೆ ಧೋನಿ ಅವರು ಕಪ್​ ಗೆದ್ದ ಬಳಿಕ ಅಭಿಮಾನಿಗಳ ಒತ್ತಾಯದ ಮೇರೆಗೆ ನಾನು ಮುಂದಿನ ಬಾರಿಯ ಐಪಿಎಲ್​ನಲ್ಲಿ ಆಡುತ್ತೇನೆ ಎಂದು ಹೇಳಿದ್ದರು. ಆದರೆ ಈ ಬಾರಿಯ ಐಪಿಎಲ್​ ಬಳಿಕ ಅವರು ನಿವೃತ್ತಿ ಹೇಳುವುದು ಖಚಿತವಾಗಿದೆ.

ಪ್ರಮುಖ ಆಟಗಾರರ ಉಳಿಕೆ

ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 19 ಆಟಗಾರರನ್ನು ಬಿಡುಗಡೆ ಮಾಡದ ಹಾಗೆಯೇ ಉಳಿಸಿಕೊಂಡಿದೆ. ಹಿಂದಿನ ಋತುವಿನಲ್ಲಿ ಐದನೇ ಐಪಿಎಲ್ ಟ್ರೋಫಿಯನ್ನು ಗೆದ್ದ ತಂಡದಲ್ಲಿದ್ದ ಎಂಟು ಆಟಗಾರರನ್ನು ಕೈಬಿಟ್ಟಿದೆ. ಐಪಿಎಲ್ 2024 ರ ಹರಾಜಿಗೆ ಸಜ್ಜಾಗುತ್ತಿರುವಾಗ, ಚೆನ್ನೈ ಮೂಲದ ಫ್ರಾಂಚೈಸಿ ತಮ್ಮ ತಂಡವನ್ನು ಪೂರ್ಣಗೊಳಿಸಲು 31.4 ಕೋಟಿ ರೂಪಾಯಿ ಉಳಿಸಿಕೊಂಡಿದೆ. ಪ್ರಮುಖವಾಗಿ ತಂಡವು ತನ್ನ ಬೌಲಿಂಗ್ ಘಟಕವನ್ನು ಬಲಪಡಿಸಬೇಕಾಗಿದೆ.

Continue Reading

ಐಪಿಎಲ್ 2023

ಸ್ಟಾರ್​​ ಆಟಗಾರನ ಖರೀದಿಗೆ ಸ್ಕೆಚ್​ ಹಾಕಿದ ಸಖತ್ ಕ್ಯೂಟ್ ಓನರ್ ಕಾವ್ಯ ಮಾರನ್

ನ್ಯೂಜಿಲ್ಯಾಂಡ್​ ತಂಡದ ಯುವ ಆಟಗಾರ ರಚಿನ್​ ರವೀಂದ್ರ(Rachin Ravindra) ಅವರನ್ನು ಖರೀದಿ ಮಾಡಲು ಸನ್ ರೈಸರ್ಸ್ ಹೈದರಾಬಾದ್(SunRisers Hyderabad) ತಂಡ ಮುಂದಾಗಿದೆ ಎಂದು ಇರ್ಫಾನ್​ ಪಠಾಣ್​ ಹೇಳಿದ್ದಾರೆ.

VISTARANEWS.COM


on

kavya maran
Koo

ಹೈದರಾಬಾದ್​: ಇಂಡಿಯನ್ ಪ್ರೀಮಿಯರ್ ಲೀಗ್ 2024 ಮಿನಿ-ಆಕ್ಷನ್ ಡಿ.19ರಂದು ದುಬೈನಲ್ಲಿ ನಡೆಯಲಿದೆ. ಎಲ್ಲ ಫ್ರಾಂಚೈಸಿಗಳು ಸ್ಟಾರ್​ ಆಟಗಾರರ ಪಟ್ಟಿಯನ್ನು ಸಿದ್ಧ ಪಡಿಸಿದ್ದು ಅವರ ಖರೀದಿಗಾಗಿ ಕಾದು ಕುಳಿತಿದೆ. ಇತ್ತೀಚೆಗೆ ಮುಕ್ತಾಯ ಕಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿ ಗಮನಸೆಳೆದ ನ್ಯೂಜಿಲ್ಯಾಂಡ್​ ತಂಡದ ಯುವ ಆಟಗಾರ ರಚಿನ್​ ರವೀಂದ್ರ(Rachin Ravindra) ಅವರನ್ನು ಖರೀದಿ ಮಾಡಲು ಸನ್ ರೈಸರ್ಸ್ ಹೈದರಾಬಾದ್(SunRisers Hyderabad) ತಂಡ ಮುಂದಾಗಿದೆ ಎಂದು ಇರ್ಫಾನ್​ ಪಠಾಣ್​ ಹೇಳಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ ಜತೆಗಿನ ಸಂವಾದದಲ್ಲಿ ಮಾತನಾಡಿದ ಇರ್ಫಾನ್​, ಈ ಬಾರಿ ಮಿನಿ ಹರಾಜಿನಲ್ಲಿ ರಚಿನ್​ ರವೀಂದ್ರ ಅವರನ್ನು ಎಷ್ಟೇ ಮೊತ್ತ ನೀಡಿಯಾದರೂ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿ ಮಾಡಲಿದೆ. ಇದಕ್ಕೆ ಬೇಕಾದ ಎಲ್ಲ ತಯಾರಿಯನ್ನು ತಂಡದ ಮಾಲಕಿ ಕಾವ್ಯಾ ಮಾರನ್ ಯೋಜನೆ ರೂಪಿಸಿದ್ದಾರೆ ಎಂದು ಹೇಳಿದ್ದಾರೆ.

ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರು ಸನ್​ ರೈಸರ್ಸ್​ ಹೈದರಾಬಾದ್​ ತಂಡದ ಮಾಲಕಿಯಾದಿನಿಂದ ಪ್ರತಿ ಐಪಿಎಲ್​ ಸೀಸನ್​ನಲ್ಲೂ ಅವರು ಟ್ರೆಂಡಿಂಗ್​ನಲ್ಲಿರುತ್ತಾರೆ. ಎಲ್ಲರ ಗಮನ ಸೆಳೆದು ಸುದ್ದಿಯಾಗುತ್ತಾರೆ. ಐಪಿಎಲ್ ಹರಾಜಿನಲ್ಲಿಯೂ ಹಾಜರಿದ್ದು ಗಮನಸೆಳೆಯುತ್ತಾರೆ.

ಕಾವ್ಯ ಚೆನ್ನೈ ಮೂಲದ ಮಾಧ್ಯಮ ಮತ್ತು ಟಿವಿ ಸಮೂಹ ಸನ್ ಟಿವಿ ನೆಟ್‌ವರ್ಕ್‌ನ ಮಾಲಕ ಕಲಾನಿತಿ ಮಾರನ್ ಅವರ ಪುತ್ರಿ. ಹರಾಜಿನಲ್ಲಿ ಅವರು ವಿಶೇಷವಾಗಿ ಭಾಗಿಯಾಗುವ ಮೂಲಕ ಸ್ಟಾರ್​ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಕೊಳ್ಳುವ ತನಕ ತಮ್ಮ ಹಠ ಬಿಟ್ಟುಕೊಡದೆ ಬಿಡ್ಡಿಂಗ್​ ಮಾಡಬಲ್ಲರು. ಕಳೆದ ಬಾರಿ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿ ರೂ. ನೀಡಿ ಖರೀದಿ ಮಾಡುವ ಮೂಲಕ ಭಾರಿ ಸುದ್ದಿಯಾಗಿದ್ದರು. ಇದೀಗ ಈ ಬಾರಿ ರಚಿನ್​ ರವೀಂದ್ರ ಮೇಲೆ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

31ರ ಹರೆಯದ ಕಾವ್ಯಾ ಯಾವಾಗಲೂ ಐಪಿಎಲ್ ಹರಾಜಿನಲ್ಲಿ ತನ್ನ ಉಪಸ್ಥಿತಿ ತೋರುತ್ತಾರೆ. ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಕಾವ್ಯಾ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವೀಧರರಾಗಿದ್ದಾರೆ.

ಒಂದು ಬಾರಿಯ ಚಾಂಪಿಯನ್​ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ 6 ಆಟಗಾರರನ್ನು ಖರೀದಿ ಮಾಡಬಹುದಾಗಿದೆ. ತಲಾ ಮೂರು ಭಾರತೀಯ ಮತ್ತು ವಿದೇಶಿ ಆಟಗಾರರನ್ನು ಬಿಡ್​ ಮಾಡಬಹುದು. ತಂಡದ ಬಳಿ 34 ಕೋಟಿ ರೂ. ಹಣವಿದೆ. ಹೀಗಾಗಿ ರಚಿನ್​ ಅವರನ್ನು ಖರೀದಿ ಮಾಡಬಹುದು.

ಕರ್ನಾಟಕ ಮೂಲಕ ನ್ಯೂಜಿಲ್ಯಾಂಡ್​ ಆಟಗಾರ ರಚಿನ್​ ರವೀಂದ್ರ ಅವರು ಈ ಬಾರಿಯ ವಿಶ್ವಕಪ್​ನಲ್ಲಿ ಅಮೋಘ ಬ್ಯಾಟಿಂಗ್​ ನಡೆಸಿ ಮಿಂಚಿದ್ದರು. ಚೊಚ್ಚಲ ಬಾರಿ ವಿಶ್ವಕಪ್​ನಲ್ಲಿ ಆಡಲಿಳಿದ ಅವರು 3 ಶತಕ ಬಾರಿಸಿ ಗಮನಸೆಳೆದರು. ಅಲ್ಲದೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಸೇರಿ ಅನೇಕರ ದಾಖಲೆಗಳನ್ನು ಮುರಿದಿದ್ದರು. ಒಟ್ಟಾರೆ ಅವರು 10 ಪಂದ್ಯಗಳನ್ನು ಆಡಿ 578 ರನ್​ ಬಾರಿಸಿದ್ದರು.

ಆರ್​ಸಿಬಿ ಬಗ್ಗೆ ಒಲವು

ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕೂಡ ರಚಿನ್​ ಅವರನ್ನು ಖರಿದೀಸುವ ರೇಸ್​ನಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ವಿಶ್ವಕಪ್​ ಆಡುವ ವೇಳೆ ಸ್ವತಃ ರಚಿನ್​ ಅವರು ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವ ಆಸೆ ಇದೆ ಎಂದು ಹೇಳಿದ್ದರು. ರಚಿನ್​ ಅವರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದು ಡಿ.10ಕ್ಕೆ ನಿರ್ಧಾರವಾಗಲಿದೆ.

Continue Reading
Advertisement
Nitasha Kaul
ದೇಶ7 mins ago

Nitasha Kaul: ಕರ್ನಾಟಕ ಸರ್ಕಾರ ಕರೆಸಿದ ಲಂಡನ್‌ ಲೇಖಕಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದಲೇ ಗೇಟ್‌ಪಾಸ್; ʼನಗರ- ನಕ್ಸಲ್‌ʼ ಎಂದ ಬಿಜೆಪಿ

Namma Metro Farmer dismiss
ಬೆಂಗಳೂರು15 mins ago

Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಅಪಮಾನ ಮಾಡಿದ ಮೆಟ್ರೋ ಸಿಬ್ಬಂದಿ ವಜಾ

Rajya Sabha Elections Yogendra appointed as KRPP agent Reddy supports to Congress
ರಾಜಕೀಯ20 mins ago

Rajya Sabha Election: ಕೆಆರ್‌ಪಿಪಿ ಏಜೆಂಟ್‌ ಆಗಿ ಡಿಕೆಶಿ ಆಪ್ತ ಯೋಗೇಂದ್ರ ನೇಮಕ; ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ರೆಡ್ಡಿ ಬೆಂಬಲ

Actor Darshan rally police deny permission
ಸ್ಯಾಂಡಲ್ ವುಡ್32 mins ago

Actor Darshan: ನಟ ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದು!

Drinking water supply to be disrupted in Bengaluru tomorrow
ಬೆಂಗಳೂರು39 mins ago

Water supply : ಬೆಂಗಳೂರಲ್ಲಿ ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Pune Police 60 Hours Operation; Drugs worth more than Rs 1300 crore seized
ಪ್ರಮುಖ ಸುದ್ದಿ51 mins ago

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

gold wear bride
ಚಿನ್ನದ ದರ52 mins ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಬಂಗಾರದ ಧಾರಣೆ ಗಮನಿಸಿ, ಖರೀದಿಸಿ

Elderly woman murdered in Bengaluru accused did not give any reason
ಕ್ರೈಂ60 mins ago

Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

Pralhad Joshi Jaishankar Nirmala Seetaraman
ಹುಬ್ಬಳ್ಳಿ1 hour ago

Pralhad Joshi : ಜೈಶಂಕರ್, ನಿರ್ಮಲಾ ಸ್ಪರ್ಧೆ ಖಚಿತ ಎಂದ ಪ್ರಹ್ಲಾದ್‌ ಜೋಶಿ; ಯಾವ ಕ್ಷೇತ್ರ?

india poverty
ದೇಶ1 hour ago

India Poverty: ದೇಶದಲ್ಲಿ ಬಡವರ ಸಂಖ್ಯೆ 5%ಕ್ಕಿಂತ ಇಳಿಕೆ; ಆಹಾರಕ್ಕಿಂತ ಓಡಾಟ, ಮನರಂಜನೆಗೇ ಹೆಚ್ಚು ಖರ್ಚು!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 26 2024
ಭವಿಷ್ಯ8 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು4 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

ಟ್ರೆಂಡಿಂಗ್‌