IPL 2024: ಜೋಶ್​ನಿಂದ ಬ್ಯಾಟಿಂಗ್​ ನಡೆಸಿ ಕ್ರಿಸ್​ ಗೇಲ್​ ದಾಖಲೆ ಮುರಿದ ಜಾಸ್​ ಬಟ್ಲರ್​ - Vistara News

ಕ್ರೀಡೆ

IPL 2024: ಜೋಶ್​ನಿಂದ ಬ್ಯಾಟಿಂಗ್​ ನಡೆಸಿ ಕ್ರಿಸ್​ ಗೇಲ್​ ದಾಖಲೆ ಮುರಿದ ಜಾಸ್​ ಬಟ್ಲರ್​

IPL 2024: ಬಟ್ಲರ್ ಶತಕ ಬಾರಿಸುವ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. ಈ ಮೂಲಕ ಕ್ರಿಸ್​ ಗೇಲ್​ ದಾಖಲೆಯನ್ನು ಹಿಂದಿಕ್ಕಿದರು. ಗೇಲ್​ 6 ಶತಕ ಬಾರಿಸಿದ್ದರು. ಇದೀಗ ಬಟ್ಲರ್​ 7 ಶತಕ ಬಾರಿಸಿದ್ದಾರೆ. 8 ಶತಕ ಬಾರಿಸಿರುವ ವಿರಾಟ್​ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

VISTARANEWS.COM


on

IPL 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕತ್ತಾ: ಕೆಕೆಆರ್(Kolkata Knight Riders)​ ವಿರುದ್ಧದ ಪಂದ್ಯದಲ್ಲಿ ಫುಲ್​ ಜೋಶ್​ನಿಂದ ಬ್ಯಾಟಿಂಗ್​ ನಡೆಸಿ ಅಜೇಯ ಶತಕ ಬಾರಿಸಿದ ಜಾಸ್‌ ಬಟ್ಲರ್‌(Jos Buttler) ಅವರು ಐಪಿಎಲ್​ನಲ್ಲಿ(IPL 2024) ಕ್ರಿಸ್ ಗೇಲ್(Chris Gayle)​ ಅವರ ಶತಕದ ದಾಖಲೆಯನ್ನು ಮುರಿದಿದ್ದಾರೆ. ​ಬಟ್ಲರ್​ ಅವರ ಬೊಂಬಾಟ್​ ಬ್ಯಾಟಿಂಗ್​ನಿಂದ ರಾಜಸ್ಥಾನ್‌ ರಾಯಲ್ಸ್‌(Rajasthan Royals) ತಂಡವು ಮಂಗಳವಾರದ ಐಪಿಎಲ್‌ ಪಂದ್ಯದಲ್ಲಿ ಎರಡು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

ಬಟ್ಲರ್ ಶತಕ ಬಾರಿಸುವ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. ಈ ಮೂಲಕ ಕ್ರಿಸ್​ ಗೇಲ್​ ದಾಖಲೆಯನ್ನು ಹಿಂದಿಕ್ಕಿದರು. ಗೇಲ್​ 6 ಶತಕ ಬಾರಿಸಿದ್ದರು. ಇದೀಗ ಬಟ್ಲರ್​ 7 ಶತಕ ಬಾರಿಸಿದ್ದಾರೆ. 8 ಶತಕ ಬಾರಿಸಿರುವ ವಿರಾಟ್​ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್​ಗಳು


ವಿರಾಟ್​ ಕೊಹ್ಲಿ-8 ಶತಕ

ಜಾಸ್​ ಬಟ್ಲರ್​-7 ಶತಕ

ಕ್ರಿಸ್​ ಗೇಲ್​-6 ಶತಕ

ಕೆಎಲ್​ ರಾಹುಲ್​-4 ಶತಕ

ಡೇವಿಡ್​ ವಾರ್ನರ್​-4 ಶತಕ

ಶೇನ್​ ವಾಟ್ಸನ್​-4 ಶತಕ

ಕೆಕೆಆರ್​ ವಿರುದ್ಧ ಬಿರುಸಿನ ಬ್ಯಾಟಿಂಗ್​ ನಡೆಸಿದ ಬಟ್ಲರ್​ 60 ಎಸೆತಗಳಿಂದ 9 ಬೌಂಡರಿ ಮತ್ತು 6 ಸೊಗಸಾದ ಸಿಕ್ಸರ್​ ನೆರವಿನಿಂದ ಅಜೇಯ 107 ರನ್​ ಬಾರಿಸಿದರು. ಇದು ಬಟ್ಲರ್​ ಅವರ ಆವೃತ್ತಿಯ 2ನೇ ಶತಕ. ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಅಜೇಯ ಶತಕ ಬಾರಿಸಿದ್ದರು.

ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 223 ರನ್ ಬಾರಿಸಿತು ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನಿಂಗ್ಸ್​ನ ಕೊನೇ ಎಸೆತಕ್ಕೆ 8 ವಿಕೆಟ್ ನಷ್ಟ ಮಾಡಿಕೊಂಡು 224 ರನ್​ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ಪ್ರೇಕ್ಷಕರ ಮುಂದೆ ಕೆಕೆಆರ್ ತಂಡಕ್ಕೆ ಸೋಲುಣಿಸಿತು.

ಇದನ್ನೂ ಓದಿ IPL 2024 : ಚೆನ್ನೈ ತಂಡ ಸೇರ್ತಾರಾ ಚೇತೇಶ್ವರ ಪೂಜಾರಾ? ಅವರ ಟ್ವೀಟ್​ನ ಅರ್ಥವೇನು?

ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಲುಹೊರಟ ರಾಜಸ್ಥಾನ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಯಶಸ್ವಿ ಜೈಸ್ವಾಲ್ ಮತ್ತೆ ವೈಫಲ್ಯ ಎದುರಿಸಿ 19 ರನ್​ಗೆ ಔಟಾದರು. ಸಂಜು ಸ್ಯಾಮ್ಸನ್​ 12 ರನ್​ಗಳಿಗೆ ಸೀಮಿತಗೊಂಡರು. ಆದರೆ, ಬಟ್ಲರ್ ತಳವೂರಿ ಆಡಲು ಆರಂಭಿಸಿದರು. ಇವರಿಗೆ ಸ್ವಲ್ಪ ಹೊತ್ತು ರಿಯಾನ್ ಪರಾಗ್​ (14 ಎಸೆತಕ್ಕೆ 34 ರನ್​) ಸಾಥ್​ ಕೊಟ್ಟರು. ಆದರೆ ಆ ಬಳಿಕದಿಂದ ಸತತವಾಗಿ ವಿಕೆಟ್​ಗಳು ಉರುಳಿದವು. ಜುರೆಲ್​ 2 ರನ್​ಗೆ ಔಟಾದರೆ ಅಶ್ವಿನ್ 8 ರನ್​​ಗೆ ವಿಕೆಟ್ ಒಪ್ಪಿಸಿದರು. ಶಿಮ್ರೋನ್ ಹೆಟ್ಮಾಯರ್ ಶೂನ್ಯಕ್ಕೆ ಔಟಾದರು. ಬಳಿಕ ಬಂದ ರೊವ್ಮನ್ ಪೊವೆಲ್ 13 ಎಸೆತಕ್ಕೆ 26 ರನ್​ ಬಾರಿಸಿ ಗೆಲುವಿನ ಹಾದಿ ತೋರಿದರು. ಅಂತಿಮವಾಗಿ ಬುದ್ಧಿವಂತಿಕೆಯಿಂದ ಬ್ಯಾಟ್ ಮಾಡಿದ ಬಟ್ಲರ್ ಅಜೇಯವಾಗಿ ಉಳಿದು ತಂಡವನ್ನು ಗೆಲ್ಲಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

KKR vs DC: ಡೆಲ್ಲಿಗೆ ನೀರು ಕುಡಿಸಿದ ಸಾಲ್ಟ್​; ಪಂತ್​ ಪಡೆಯ ಪ್ಲೇ ಆಫ್ ಹಾದಿ ದುರ್ಗಮ

KKR vs DC: ಚೇಸಿಂಗ್​ ವೇಳೆ ಫಿಲ್​ ಸಾಲ್ಟ್​ 17 ರನ್​ ಗಳಿಸಿದ್ದ ವೇಳೆ ಖಲೀಲ್​ ಅಹ್ಮದ್​ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಲಿಜಾಡ್ ವಿಲಿಯಮ್ಸ್ ಅವರಿಂದ ಕ್ಯಾಚ್​ ಕೈಚೆಲ್ಲಿ ಜೀವದಾನ ಪಡೆದರು. ಇದರ ಸಂಪೂರ್ಣ ಲಾಭವೆತ್ತಿದ ಸಾಲ್ಟ್​ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ವಿಲಿಯಮ್ಸ್ ಕಳಪೆ ಫೀಲ್ಡಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಸರಿಯಾಗಿ ದಂಡಿಸಿಕೊಂಡರು.

VISTARANEWS.COM


on

KKR vs DC
Koo

ಕೋಲ್ಕತ್ತಾ: ಫಿಲ್​ ಸಾಲ್ಟ್​(68) ಅವರ ಅರ್ಧಶತಕ ಮತ್ತು ವರುಣ್​ ಚಕ್ರವರ್ತಿಯ( 16 ರನ್​ಗೆ 3 ವಿಕೆಟ್) ಸ್ಪಿನ್​ ಮೋಡಿಗೆ ಬೆದರಿದ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್(KKR vs DC)​ ವಿರುದ್ಧ 7 ವಿಕೆಟ್​ ಅಂತರದ ಸೋಲಿಗೆ ತುತ್ತಾಗಿದೆ. ಸೋಲಿನಿಂದ ಪಂತ್​ ಪಡೆಯ ಪ್ಲೇ ಆಫ್​ ಪಯಣ ಕೂಡ ದುರ್ಗಮಗೊಂಡಿದೆ. ಇನ್ನುಳಿದ 3 ಪಂದ್ಯಗಳನ್ನು ಕೂಡ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಡೆಲ್ಲಿ ಪ್ಲೇ ಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.

ಐತಿಹಾಸಿಕ ಕ್ರಿಕೆಟ್​ ಸ್ಟೇಡಿಯಂ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ​ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders) 16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 157 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದು ಕೆಕೆಆರ್​ಗೆ 9ನೇ ಪಂದ್ಯದಲ್ಲಿ ಒಲಿದ 6ನೇ ಗೆಲುವಾಗಿದೆ. ಸದ್ಯ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ.

ಜೀವದಾನ ಪಡೆದು ಅರ್ಧಶತಕ ಬಾರಿಸಿದ ಸಾಲ್ಟ್​


ಚೇಸಿಂಗ್​ ವೇಳೆ ಫಿಲ್​ ಸಾಲ್ಟ್​ 17 ರನ್​ ಗಳಿಸಿದ್ದ ವೇಳೆ ಖಲೀಲ್​ ಅಹ್ಮದ್​ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಲಿಜಾಡ್ ವಿಲಿಯಮ್ಸ್ ಅವರಿಂದ ಕ್ಯಾಚ್​ ಕೈಚೆಲ್ಲಿ ಜೀವದಾನ ಪಡೆದರು. ಇದರ ಸಂಪೂರ್ಣ ಲಾಭವೆತ್ತಿದ ಸಾಲ್ಟ್​ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ವಿಲಿಯಮ್ಸ್ ಕಳಪೆ ಫೀಲ್ಡಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಸರಿಯಾಗಿ ದಂಡಿಸಿಕೊಂಡರು. ಮೂರು ಓವರ್​ಗೆ 38 ರನ್​ ಹೊಡೆಸಿಕೊಂಡರು.

ಬಿರುಸಿನ ಬ್ಯಾಟಿಂಗ್​ ಮೂಲಕ ರನ್​ ಕಲೆಹಾಕುವ ಸುನೀಲ್​ ನರೈನ್​ ಈ ಪಂದ್ಯದಲ್ಲಿ ವಿಫಲರಾದರು. 10 ಎಸೆತಗಳಿಂದ 15 ರನ್​ಗೆ ಸೀಮಿತರಾಗಿ ಅಕ್ಷರ್​ ಪಟೇಲ್​ಗೆ ವಿಕೆಟ್​ ಒಪ್ಪಿಸಿದರು. ಬ್ಯಾಟಿಂಗ್​ ಭಡ್ತಿ ಪಡೆದು ಬಂದ ರಿಂಕು ಸಿಂಗ್​ 11 ಎಸೆತಗಳಿಂದ 11 ರನ್​ ಗಳಿಸಿ ನಿರಾಸೆ ಮೂಡಿಸಿದರು. ಈ ವಿಕೆಟ್​ ಪತನಗೊಂಡು 4 ರನ್​ ಆಗುವಷ್ಟರಲ್ಲಿ ಫಿಲ್​ ಸಾಲ್ಟ್​​ ವಿಕೆಟ್​ ಕೂಡ ಬಿತ್ತು. ಸಾಲ್ಟ್​ 33 ಎಸೆತಗಳಿಂದ 68 ರನ್​ ಚಚ್ಚಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 5 ಸೊಗಸಾದ ಸಿಕ್ಸರ್​ ಮತ್ತು 7 ಬೌಂಡರಿ ಸಿಡಿಯಿತು.

ಅಂತಿಮವಾಗಿ ನಾಯಕ ಶ್ರೇಯಸ್​ ಅಯ್ಯರ್(33*)​ ಮತ್ತು ವೆಂಕಟೇಶ್​ ಅಯ್ಯರ್​(26*) ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಜೋಡಿ ನಾಲ್ಕನೇ ವಿಕೆಟ್​ಗೆ ಮುರಿಯದ 57 ರನ್​ಗಳ ಜತೆಯಾಟ ಕೂಡ ನಡೆಸಿತು. ಇದೇ ವೇಳೆ ಶ್ರೇಯಸ್ ಅಯ್ಯರ್​ ಐಪಿಎಲ್​ನಲ್ಲಿ 3 ಸಾವಿರ ರನ್​ ಪೂರ್ತಿಗೊಳಿಸಿದ ಮೈಲಿಗಲ್ಲು ನೆಟ್ಟರು. ಡೆಲ್ಲಿ ಪರ ಅಕ್ಷರ್​ ಪಟೇಲ್​ 2 ವಿಕೆಟ್​ ಪಡೆದರು.

ಇದನ್ನೂ ಓದಿ LSG vs MI: ಲಕ್ನೋ ಸವಾಲಿಗೆ ಮುಂಬೈ ಸಜ್ಜು; ಸೋತರೆ ಪಾಂಡ್ಯ ಪಡೆಯ ಪ್ಲೇ ಆಫ್​ ಹಾದಿ ಕಠಿಣ

ಮಾನ ಉಳಿಸಿದ ಕುಲ್​ದೀಪ್​


ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ತಂಡ ನಾಟಕೀಯ ಕುಸಿತ ಕಂಡು ಇನ್ನೇನು 100ರ ಒಳಗಡೆ ಗಂಟು-ಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ 9ನೇ ಕ್ರಮಾಂಕದಲ್ಲಿ ಆಡಲಿಳಿದ ಕುಲ್​ದೀಪ್​ ಯಾದವ್​ ಕೆಕೆಆರ್​ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಅಜೇಯ 35 ರನ್​ ಬಾರಿಸಿದರು. ತಂಡದ ಒರ ಇವರದ್ದೇ ಗರಿಷ್ಠ ಮೊತ್ತದ ಗಳಿಕೆ. ಕುಲ್​ದೀಪ್​ ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಿಂದ ಡೆಲ್ಲಿ 150ರ ಗಡಿ ದಾಟಿ ಮಾನ ಉಳಿಸಿಕೊಂಡಿತು.

ಪೃಥ್ವಿ ಶಾ ಎಂದಿನಂತೆ ಒಂದೆಡರು ಬೌಂಡರಿಗೆ ಸೀಮಿತರಾಗಿ 13 ರನ್​ಗೆ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲೇ ಅಪಾಯಕಾರಿ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್(12), ಶಾಯ್​ ಹೋಪ್​(6), ಅಭಿಷೇಕ್​ ಪೋರೆಲ್​(18), ಅಕ್ಷರ್​ ಪಟೇಲ್​(15) ಮತ್ತು ಟ್ರಿಸ್ಟಾನ್ ಸ್ಟಬ್ಸ್(4) ರನ್​ ಗಳಿಸಿ ಪೆವಿಲಿಯನ್​ ಪರೇಡ್ ನಡೆಸಿದರು. ನಾಯಕ ಪಂತ್​ 2 ಬೌಂಡರಿ ಮತ್ತು 1 ಸಿಕ್ಸರ್​ ಸಿಡಿಸಿ 27 ರನ್​ ಬಾರಿಸಿದರು.

ಕೆಕೆಆರ್​ ಪರ ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ಸ್ಪಿನ್​ ಜಾದು ಮೂಲಕ ಕೇವಲ 16 ರನ್​ಗೆ 3 ವಿಕೆಟ್​ ಕಿತ್ತು ಡೆಲ್ಲಿಗೆ ಆಘಾತವಿಕ್ಕಿದರು. ಉಳಿದಂತೆ ಹರ್ಷಿತ್​ ರಾಣಾ ಮತ್ತು ವೈಭವ್ ಅರೋರಾ ತಲಾ 2 ವಿಕೆಟ್​ ಉರುಳಿಸಿದರು. ಸುನೀಲ್​ ನರೈನ್​ ಮತ್ತು ಸ್ಟಾರ್ಕ್​ ತಲಾ 1 ವಿಕೆಟ್​ ಪಡೆದರು.

Continue Reading

ಕ್ರೀಡೆ

Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ಸ್ಥಳ ನಿಗದಿಪಡಿಸಿದ ಪಾಕಿಸ್ತಾನ

Champions Trophy 2025: ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯನ್ನು ಆಯ್ಕೆ ಮಾಡಿಕೊಂಡಿದೆ.

VISTARANEWS.COM


on

Champions Trophy 2025
Koo

ಕರಾಚಿ: ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ(Champions Trophy 2025) ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(PCB) ಸ್ಥಳ ನಿಗದಿಪಡಿಸಿದೆ. ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯನ್ನು ಆಯ್ಕೆ ಮಾಡಿಕೊಂಡಿದೆ. ಜತೆಗೆ ಭಾರತದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ‘ಹೈಬ್ರಿಡ್ ಮಾದರಿ’ಯ ಊಹಾಪೋಹದ ಹೊರತಾಗಿಯೂ ಪಂದ್ಯಾವಳಿ ಸಂಪೂರ್ಣವಾಗಿ ಪಾಕ್​ನಲ್ಲಿಯೇ ನಡೆಯಲಿದೆ ಎಂಬ ವಿಶ್ವಾಸ ಕೂಡ ವ್ಯಕ್ತಪಡಿಸಿದೆ. 2017 ರಲ್ಲಿ ಇಂಗ್ಲೆಂಡ್‌ನಲ್ಲಿ ಕೊನೆಯ ಬಾರಿಗೆ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆ ಇದೆ.

“ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ನಾವು ಪಾಕಿಸ್ತಾನದಲ್ಲಿ ಪಂದ್ಯಗಳ ವೇಳಾಪಟ್ಟಿಯನ್ನು ಐಸಿಸಿಗೆ ಕಳುಹಿಸಿದ್ದೇವೆ” ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸೋಮವಾರ ಲಾಹೋರ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಐಸಿಸಿಯ ಭದ್ರತಾ ತಂಡವು ಪಾಕಿಸ್ತಾನಕ್ಕೆ ಬಂದು ನಮ್ಮ ಜತೆ ಸಭೆ ನಡೆಸಿದೆ. ಈ ಸಭೆ ಉತ್ತಮವಾಗಿತ್ತು.ಅವರಿಗೆ ಇಲ್ಲಿನ ವ್ಯವಸ್ಥೆಗಳನ್ನು ನೋಡಿ ತೃಪ್ತಿಯಾಗಿದೆ. ನಾವು ಪಾಕಿಸ್ತಾನದಲ್ಲಿ ಉತ್ತಮ ಪಂದ್ಯಾವಳಿಯನ್ನು ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ನಖ್ವಿ ಇದೇ ವೇಳೆ ಮಾಹಿತಿ ನೀಡಿದರು.

ಕಳೆದ ವರ್ಷ ಏಷ್ಯಾಕಪ್‌ನಲ್ಲಿ ‘ಹೈಬ್ರಿಡ್ ಮಾಡೆಲ್’ ಹೋಸ್ಟಿಂಗ್ ಅನ್ನು ಬಳಸಲಾಗಿತ್ತು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಪಂದ್ಯಾವಳಿಯ ಅಧಿಕೃತ ಆತಿಥೇಯ ಪಾಕಿಸ್ತಾನವಾಗಿದ್ದರೂ ಸಹ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳನ್ನು ನಡೆಸಿತ್ತು. ಆದರೆ ಈ ಬಾರಿ ಇದು ಸಾಧ್ಯವಿಲ್ಲ ಎಂದು ನಖ್ವಿ ಹೇಳಿದ್ದಾರೆ.

ಇದನ್ನೂ ಓದಿ Champions Trophy 2025 : ಪಾಕಿಸ್ತಾನಕ್ಕೆ ನಾವು ಹೋಗುವುದಿಲ್ಲ; ಭಾರತದ ಸ್ಪಷ್ಟ ನುಡಿ

ಪಾಕಿಸ್ತಾನ ಕ್ರಿಕೆಟ್​ ಸ್ಟೇಡಿಯಂ ಕೆಲ ಸುಧಾರಣೆ ಕಾಣಬೇಕಿದೆ. ಕರಾಚಿಯ ಸ್ಟೇಡಿಯಂ ಕೆಟ್ಟ ಸ್ಥಿತಿಯಲ್ಲಿದೆ. ಆದ್ದರಿಂದ ಮೇ 7 ರಿಂದ ಇದರ ನವೀಕರಣ ಕೆಲಸ ಆರಂಭಗೊಳ್ಳಲಿದೆ. ವಿನ್ಯಾಸಕ್ಕೆ ಸಹಾಯ ಮಾಡುವ ಅಂತಾರಾಷ್ಟ್ರೀಯ ಕಂಪನಿಗಳಿಂದ ಬಿಡ್‌ಗಳನ್ನು ಅಂತಿಮಗೊಳಿಸುತ್ತೇವೆ ಎಂದರು.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮುರಿದುಹೋಗಿವೆ. ಪರಸ್ಪರ ಪಂದ್ಯಗಳನ್ನು ಆಡುತ್ತಿಲ್ಲ. ಈ ನಿರ್ಧಾರ ಎರಡೂ ಸರ್ಕಾರಗಳ ಅಡಿಯಲ್ಲಿ ನಡೆಯಿತು. ಆದಾಗ್ಯೂ, ಪಾಕಿಸ್ತಾನವು ಕಳೆದ ಏಕದಿನ ವಿಶ್ವಕಪ್ ಸೇರಿದಂತೆ ಅನೇಕ ಐಸಿಸಿ ಪಂದ್ಯಾವಳಿಗಳಿಗಾಗಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಿತ್ತು.

ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್​, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​ ಮತ್ತು ಬಾಂಗ್ಲಾದೇಶ ಟೂರ್ನಿಗೆ ಅರ್ಹತೆ ಪಡೆದ ತಂಡಗಳಾಗಿವೆ.

Continue Reading

ಕ್ರೀಡೆ

Thomas Cup 2024: ಕ್ವಾರ್ಟರ್‌ ಫೈನಲ್​ಗೆ ಲಗ್ಗೆಯಿಟ್ಟ ಹಾಲಿ ಚಾಂಪಿಯನ್​ ಭಾರತ

Thomas Cup 2024: ಸೋಮವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 5-0 ಅಂತರದಿಂದ ಹಿಮ್ಮೆಟ್ಟಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಥಾಮಸ್‌ ಕಪ್‌(Thomas Cup 2024) ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ಎಂಟರ ಘಟ್ಟಕ್ಕೆ ಮುನ್ನಡೆದಿದೆ.

VISTARANEWS.COM


on

Thomas Cup 2024
Koo

ಚೆಂಗ್ಡು (ಚೀನಾ): ಇಲ್ಲಿ ನಡೆಯುತ್ತಿರುವ ಥಾಮಸ್‌ ಕಪ್‌(Thomas Cup 2024) ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ(Indian men’s Badminton team) ತಂಡದ ಗೆಲುವಿನ ನಾಗಲೋಟ ಮುಂದುವರಿದಿದೆ. ಸೋಮವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 5-0 ಅಂತರದಿಂದ ಹಿಮ್ಮೆಟ್ಟಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಎಂಟರ ಘಟ್ಟಕ್ಕೆ ಮುನ್ನಡೆದಿದೆ. ಬುಧವಾರ ನಡೆಯುವ ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ 14 ಬಾರಿಯ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ ಕಣಕ್ಕಿಳಿಯಲಿದೆ.

ಎಚ್‌.ಎಸ್‌.ಪ್ರಣಯ್ 21-15, 21-15ರಲ್ಲಿ ನೇರ ಗೇಮ್‌ಗಳಿಂದ ಹ್ಯಾರಿ ಹುವಾಂಗ್ ಅವರನ್ನು ಸೋಲಿಸಿ ಭಾರತಕ್ಕೆ (1-0) ಆರಂಭಿಕ ಮುನ್ನಡೆ ಒದಗಿಸಿದರು. ಆ ಬಳಿಕ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಡಬಲ್ಸ್‌ ವಿಭಾಗದಲ್ಲಿ ಬೆನ್‌ ಲೇನ್ ಮತ್ತು ಸೀನ್‌ ವೆಂಡಿ ಅವರನ್ನು ಮೂರು ಗೇಮ್​ಗಳ ಹೋರಾಟದಲ್ಲಿ ಮಣಿಸಿ 2-0 ಮುನ್ನಡೆ ತಂದರು. ಗೆಲುವಿನ ಅಂತರ 21-17, 19-21, 21-15.

ಮೂರನೇ ಪಂದ್ಯದಲ್ಲಿ ಅನುಭವಿ ಕಿದಂಬಿ ಶ್ರೀಕಾಂತ್‌ 21-16, 21-11 ರಿಂದ ನದೀಮ್ ದಲ್ವಿ ಅವರನ್ನು ಸೋಲಿಸಿ ತಂಡಕ್ಕೆ 3-0 ಗೆಲುವಿನ ಮುನ್ನಡೆ ಒದಗಿಸಿದರು. ಭಾರತದ ಎರಡನೇ ಡಬಲ್ಸ್‌ ತಂಡವಾದ ಎಂ.ಆರ್‌.ಅರ್ಜುನ್‌- ಧ್ರುವ್ ಕಪಿಲಾ ಜೋಡಿ 21-7, 21-19 ರಿಂದ ರೋರಿ ಎಸ್ಟನ್‌- ಅಲೆಕ್ಸ್‌ ಗ್ರೀನ್ ಜೋಡಿಯನ್ನು ಸೋಲಿಸಿತು. ಸಂಪೂರ್ಣವಾಗಿ ಪಂದ್ಯದಲ್ಲಿ ಹಿಡಿತ ಸಾಧಿಸಿದ ಭಾತರ ಅಂತಿಮ ಸಿಂಗಲ್ಸ್‌ ವಿಭಾಗದ ಸ್ಪರ್ಧೆಯಲ್ಲಿಯೂ ಗೆಲುವಿನಿ ನಗೆ ಬೀರಿತು. 24 ವರ್ಷದ ಕಿರಣ್ ಜಾರ್ಜ್ 21-18, 21-12ರಲ್ಲಿ ನೇರ ಗೇಮ್‌ಗಳಿಂದ ಚೋಳನ್ ಕಾಯನ್ ಅವರನ್ನು ಸೋಲಿಸಿದರು.‌ ಮೊದಲ ಪಂದ್ಯದಲ್ಲಿ ಭಾರತ 4-1 ಅಂತರದಿಂದ ಥಾಯ್ಲೆಂಡ್ ತಂಡವನ್ನು ಸೋಲಿಸಿತ್ತು.

ಇದನ್ನೂ ಓದಿ Fighter Movie: ಪಿ.ವಿ.ಸಿಂಧು ಗಮನ ಸೆಳೆದ ‘ಫೈಟರ್‌’; ಚಿತ್ರದ ಬಗ್ಗೆ ಬ್ಯಾಡ್ಮಿಂಟನ್‌ ತಾರೆ ಹೇಳಿದ್ದೇನು?

ಮಹಿಳಾ ತಂಡ ಕೂಡ ಕ್ವಾರ್ಟರ್​ ಫೈನಲ್​ಗೆ


ಭಾರತದ ಮಹಿಳಾ ತಂಡ ಕೂಡ ಉಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದೆ. ಭಾನುವಾರ ನಡೆದಿದ್ದ ‘ಎ’ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತವು ಸಿಂಗಾಪುರ ತಂಡವನ್ನು 4-1 ಗೋಲುಗಳಿಂದ ಮಣಿಸಿ ಈ ಸಾಧನೆ ಮಾಡಿತ್ತು. ಆರಂಭಿಕ ಪಂದ್ಯದಲ್ಲಿ ಅಶ್ಮಿತಾ ಚಾಲಿಹಾ ಅವರ ಸೋಲಿನಿಂದ ಚೇತರಿಸಿಕೊಂಡ ಭಾರತ, ಉಳಿದ ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿತ್ತು.

Continue Reading

ಕ್ರೀಡೆ

IPL 2024: ರಿಂಕು ಸಿಂಗ್​ಗೆ ಬೌಲಿಂಗ್​ ಮಾಡಿದ ಶಾರುಖ್‌ ಪುತ್ರ ಅಬ್ರಾಮ್; ವಿಡಿಯೊ ವೈರಲ್​

IPL 2024: ಶಾರುಖ್‌ ಖಾನ್‌ ಮತ್ತು ಅವರ ಪುತ್ರ ಅಬ್ರಾಮ್(AbRam ) ರಿಂಕು ಸಿಂಗ್​ ಜತೆ ಕ್ರಿಕೆಟ್​ ಆಡಿದ ವಿಡಿಯೊ ವೈರಲ್​ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಇಂದು ಕೆಕೆಆರ್​ ತಂಡ ಈಡನ್​ ಗಾರ್ಡನ್ಸ್​ನಲ್ಲಿ ಪಂದ್ಯವನ್ನಾಡುತ್ತಿದೆ. ಈ ಪಂದ್ಯಕ್ಕೂ ಮುನ್ನ ಕೆಕೆಆರ್​ ಆಟಗಾರರು ಅಭ್ಯಾಸ ನಡೆಸಿದ ವೇಳೆ ಶಾರುಖ್‌ ಪುತ್ರ ಅಬ್ರಾಮ್ ರಿಂಕು ಸಿಂಗ್​ ಅವರಿಗೆ ಬೌಲಿಂಗ್​ ನಡೆಸಿದ್ದಾರೆ.

VISTARANEWS.COM


on

IPL 2024
Koo

ಕೋಲ್ಕತ್ತಾ: ಬಾಲಿವುಡ್‌ ನಟ, ಕೆಕೆಆರ್​ ತಂಡದ ಸಹ ಮಾಲಿಕ ಶಾರುಖ್‌ ಖಾನ್‌(Shah Rukh Khan) ಅವರು ತನ್ನ ತಂಡದ ಪ್ರತಿ ಪಂದ್ಯದ ವೇಳೆಯೂ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಾರೆ. ತಂಡ ಸೋತರೂ ಗೆದ್ದರೂ ಆಟಗಾರರಿಗೆ ಸದಾ ಸ್ಫೂರ್ತಿ ತುಂಬುವ ಕೆಲ ಮಾಡುತ್ತಲೇ ಇರುತ್ತಾರೆ. ಈಗಾಗಲೇ ಇದರ ಹಲವು ವಿಡಿಯೊಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಇದೀಗ ತಮ್ಮ ಕಿರಿಯ ಪುತ್ರ ಅಬ್ರಾಮ್(Shah Rukh Khan’s Son AbRam) ಮತ್ತು ಕೆಕೆಆರ್​ ಆಟಗಾರರ ಜತೆ ಕ್ರಿಕೆಟ್​ ಆಡಿ ಗಮನಸೆಳೆದಿದ್ದಾರೆ. ಶಾರುಖ್‌ ಖಾನ್‌ ಮತ್ತು ಅವರ ಪುತ್ರ ಅಬ್ರಾಮ್(AbRam ) ರಿಂಕು ಸಿಂಗ್​ ಜತೆ ಕ್ರಿಕೆಟ್​ ಆಡಿದ ವಿಡಿಯೊ ವೈರಲ್​ ಆಗಿದೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಇಂದು ಕೆಕೆಆರ್​ ತಂಡ ಈಡನ್​ ಗಾರ್ಡನ್ಸ್​ನಲ್ಲಿ ಪಂದ್ಯವನ್ನಾಡುತ್ತಿದೆ. ಈ ಪಂದ್ಯಕ್ಕೂ ಮುನ್ನ ಕೆಕೆಆರ್​ ಆಟಗಾರರು ಅಭ್ಯಾಸ ನಡೆಸಿದ ವೇಳೆ ಶಾರುಖ್‌ ಪುತ್ರ ಅಬ್ರಾಮ್ ರಿಂಕು ಸಿಂಗ್​ ಅವರಿಗೆ ಬೌಲಿಂಗ್​ ನಡೆಸಿದ್ದಾರೆ. ಇದಾದ ಬಳಿಕ ತಂದೆಯ ಜತೆ ಕ್ಯಾಚ್​ ಹಿಡಿಯುವ ಅಭ್ಯಾಸ ನಡೆಸಿದ್ದಾರೆ. ಶಾರೂಕ್​ ಕೂಡ ಕೆಕೆಆರ್​ ಜೆರ್ಸಿಯಲ್ಲಿ ಕೆಲ ಕಾಲ ಟೆನಿಸ್​ ಬಾಲ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಇದೆಲ್ಲದರ ವಿಡಿಯೊವನ್ನು ಶಾರುಖ್‌ ಮತ್ತು ಕೆಕೆಆರ್ ಅಭಿಮಾನಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್​ ಮಾಡಿದ್ದಾರೆ.​

ಏಪ್ರಿಲ್​ 16ರಂದು ರಾಜಸ್ಥಾನ್​ ರಾಯಲ್ಸ್(RR)​ ವಿರುದ್ಧ ಆಡಲಿಳಿದಿದ್ದ ಕೆಕೆಆರ್(KKR)​ ತಂಡ ಜಾಸ್​ ಬಟ್ಲರ್​ ಅವರ ಅಜೇಯ ಶತಕದ(IPL 2024) ಆಟದಿಂದ ಸೋಲು ಕಂಡಿತ್ತು. ತವರಿನಲ್ಲೇ ಸೋಲು ಕಂಡ ಬೇಸರದಲ್ಲಿ ತಂಡದ ಸಹ ಮಾಲೀಕ, ಬಾಲಿವುಡ್​ ನಟ ಶಾರೂಖ್ ಖಾನ್‌(Shah Rukh Khan) ಅವರು ಕಣ್ಣೀರು ಸುರಿಸಿದ್ದರು. ಈ ವಿಡಿಯೊ ವೈರಲ್​ ಆಗಿತ್ತು.

ಇದನ್ನೂ ಓದಿ IPL 2024: ಆರ್​ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ; ಸದ್ಯದ​ ಲೆಕ್ಕಾಚಾರ ಹೇಗಿದೆ?

ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಶಾರೂಖ್ ಖಾನ್‌ ತನ್ನ ತಂಡ ಸೋಲು ಕಂಡಾಗ ಭಾವುಕರಾದರು. ಆದರೂ ಕೂಡ ಪಂದ್ಯ ಮುಗಿದ ಬಳಿಕ ಮೈದಾನಕ್ಕೆ ಹತಾಶರಾಗಿ ಕುಳಿತಿದ್ದ ತನ್ನ ತಂಡದ ಆಟಗಾರರನ್ನು ಸಮಾಧಾನ ಪಡೆಸಿದರು. ಅಲ್ಲದೆ ಡ್ರೆಸ್ಸಿಂಗ್​ ರೂಮ್​ಗೂ ತೆರಳಿ ಆಟಗಾರರಿಗೆ ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡುವಂತೆ ಧೈರ್ಯ ತುಂಬಿದರು. ಜತೆಗೆ ಗೆಲುವು ಸಾಧಿಸಿದ ಎದುರಾಳಿ ತಂಡದ ಆಟಗಾರರನ್ನು ಕೂಡ ತಬ್ಬಿಕೊಂಡು ಅಭಿನಂದಿಸಿದ್ದರು.

ಸದ್ಯ ಕೆಕೆಆರ್​ ತಂಡ 8 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ. ಇಂದು ನಡೆಯುತ್ತಿರುವ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ 12 ಅಂಕದೊಂದಿಗೆ ಪ್ಲೇ ಆಫ್​ ಹಾದಿ ಮತ್ತಷ್ಟು ಸುಗಮಗೊಳಿಸಲಿದೆ.

Continue Reading
Advertisement
CET exam 2024
ಪ್ರಮುಖ ಸುದ್ದಿ16 mins ago

CET Exam: ಸಿಇಟಿ ಕೀ ಉತ್ತರಗಳು ಪ್ರಕಟ, ಪಠ್ಯೇತರ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

Covishield Vaccine
ಪ್ರಮುಖ ಸುದ್ದಿ38 mins ago

Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

ದೇಶ50 mins ago

Viral Video: ಆರಾಮಾಗಿ ಆಟವಾಡ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ಡೆಡ್ಲಿ ಅಟ್ಯಾಕ್‌!

Ayushman Bharat Diwas
ಆರೋಗ್ಯ1 hour ago

Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

Onion Benefits
ಆರೋಗ್ಯ1 hour ago

Onion Benefits: ಬೇಸಿಗೆಯಲ್ಲಿ ಆಗಾಗ ಹಸಿ ಈರುಳ್ಳಿ ತಿನ್ನಲೇಬೇಕು ಯಾಕೆ ಗೊತ್ತೆ?

rajamarga column srikant bolla
ಅಂಕಣ1 hour ago

ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

Karnataka weather
ಕರ್ನಾಟಕ2 hours ago

Karnataka Weather: ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ; ಮೇ 3ರವರೆಗೆ ಹೆಚ್ಚಿರಲಿದೆ ಶಾಖದ ಅಲೆಗಳ ತೀವ್ರತೆ!

Vistara Editorial
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಸ್ತ್ರೀಯರ ಘನತೆಗೆ ಹಾನಿ ಎಸಗಿದವರಿಗೆ ಕಠಿಣ ಶಿಕ್ಷೆಯಾಗಲಿ

Labour Day 2024
ದೇಶ2 hours ago

Labour Day 2024: ಕಾರ್ಮಿಕರು ಕೇಂದ್ರ ಸರ್ಕಾರದ ಇ-ಶ್ರಮ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Paneer test
ಆರೋಗ್ಯ2 hours ago

Paneer Test: ನಾವು ತಿನ್ನುವ ಪನೀರ್‌ ಶುದ್ಧವಾದದ್ದೋ, ಕಲಬೆರಕೆಯದ್ದೋ ಪರೀಕ್ಷೆ ಮಾಡೋದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ3 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202419 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202421 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌