IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರಮುಖ ಬೇಡಿಕೆ ಮುಂದಿಟ್ಟ ಫ್ರಾಂಚೈಸಿಗಳು - Vistara News

ಕ್ರೀಡೆ

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರಮುಖ ಬೇಡಿಕೆ ಮುಂದಿಟ್ಟ ಫ್ರಾಂಚೈಸಿಗಳು

IPL 2025: ಪ್ರತಿ ತಂಡ 3-4 ಆಟಗಾರರನ್ನು ಮಾತ್ರ ರಿಟೇನ್​ ಮಾಡಿಕೊಳ್ಳಲು ಮಾತ್ರ ಅವಕಾಶ ಲಭಿಸಲಿದೆ ಎಂದು ಹೇಳಲಾಗಿತ್ತು. ಇದೀಗ ಎಲ್ಲ ಫ್ರಾಂಚೈಸಿಗಳು 8 ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಅನುಮತಿ ನೀಡುವಂತೆ ಬಿಸಿಸಿಐ ಮತ್ತು ಐಪಿಎಲ್​ ಆಡಳಿತ ಮಂಡಳಿಗೆ ಬೇಡಿಕೆ ಇರಿಸಿದೆ ಎನ್ನಲಾಗಿದೆ.

VISTARANEWS.COM


on

IPL 2025
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಮುಂದಿನ ವರ್ಷದ ಐಪಿಎಲ್(IPL 2025)​ 18ನೇ ಆವೃತ್ತಿಗೆ ಮುನ್ನ ಆಟಗಾರರ ಮೆಗಾ ಹರಾಜು(IPL 2025 Mega Auction) ಪ್ರಕ್ರಿಯೆ ನಡೆಯಲಿದೆ ಎಂದು ಈಗಾಗಲೇ ಐಪಿಎಲ್​ ಮುಖ್ಯಸ್ಥ ಅರುಣ್​ ಧುಮಾಲ್(Arun Dhumal) ಖಚಿತಪಡಿಸಿದ್ದಾರೆ. ಹಲವು ಸ್ಟಾರ್​ ಆಟಗಾರರು ಕೂಡ ಈ ಬಾರಿ ಹರಾಜಿಗೆ ತಮ್ಮನ್ನು ಬಿಟ್ಟುಕೊಡಬೇಕೆಂದು ಮೂಲ ತಂಡಗಳಿಗೆ ಮನವಿಯನ್ನೂ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಫ್ರಾಂಚೈಸಿಗಳು ಬಿಸಿಸಿಐ(BCCI)ಗೆ ಕೆಲ ವಿಶೇಷ ಬೇಡಿಕೆಗಳನ್ನು ಇರಿಸಿದೆ ಎಂದು ವರದಿಯಾಗಿದೆ.

ಪ್ರತಿ ತಂಡ 3-4 ಆಟಗಾರರನ್ನು ಮಾತ್ರ ರಿಟೇನ್​ ಮಾಡಿಕೊಳ್ಳಲು ಮಾತ್ರ ಅವಕಾಶ ಲಭಿಸಲಿದೆ ಎಂದು ಹೇಳಲಾಗಿತ್ತು. ಇದೀಗ ಎಲ್ಲ ಫ್ರಾಂಚೈಸಿಗಳು 8 ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಅನುಮತಿ ನೀಡುವಂತೆ ಬಿಸಿಸಿಐ ಮತ್ತು ಐಪಿಎಲ್​ ಆಡಳಿತ ಮಂಡಳಿಗೆ ಬೇಡಿಕೆ ಇರಿಸಿದೆ ಎನ್ನಲಾಗಿದೆ.

ಇದು ಮಾತ್ರವಲ್ಲದೆ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ RTM(ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ) ಕಾರ್ಡ್ ಬಳಸುವ ಬಗ್ಗೆಯೂ ಫ್ರಾಂಚೈಸಿ ಡಿಮ್ಯಾಂಡ್ ಮಾಡಲಿದೆ. 2018ರ ಮೆಗಾ ಹರಾಜಿನಲ್ಲಿ RTMಗೆ ಅವಕಾಶವಿತ್ತು. ಆದರೆ 2022ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಇದನ್ನು ಕೈಬಿಡಲಾಗಿತ್ತು, ಇದೀಗ ಮತ್ತೆ ಈ ನಿಯವನ್ನು ಜಾರಿಗೆ ತರಲು ಫ್ರಾಂಚೈಸಿಗಳು ಒಳವು ತೋರಿದೆ ಎನ್ನಲಾಗಿದೆ.

ಏನಿದು ಆರ್​ಟಿಎಂ ಕಾರ್ಡ್​?


ಆರ್​ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ. ಐಪಿಎಲ್​ನಲ್ಲಿ ಇದುವರೆಗೆ ವಿರಾಟ್​ ಕೊಹ್ಲಿ (ಆರ್​ಸಿಬಿ), ಜಸ್​ಪ್ರೀತ್​ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.

5 ವರ್ಷಗಳಿಗೊಮ್ಮೆ ಮೆಗಾ ಹರಾಜು?

ಐಪಿಎಲ್ ಮೆಗಾ ಹರಾಜನ್ನು ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವಂತೆಯೂ ಕೆಲವು ಫ್ರಾಂಚೈಸಿಗಳು ಮನವಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಒಂದೊಮ್ಮೆ ಈ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದರೆ. ಮುಂದಿನ ಮೆಗಾ ಹರಾಜು 2029ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ. ಈ ತಿಂಗಳಾಂತ್ಯದಲ್ಲಿ ಐಪಿಎಲ್ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿ ಮೆಗಾ ಹರಾಜಿನ ಅಂತಿಮ ರೂಪುರೇಷೆಗಳ ಬಗ್ಗೆ ಚರ್ಚಿಸಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ IPL 2025: ಆರ್​ಸಿಬಿ ಸೇರಲಿದ್ದಾರೆ ಹಿಟ್​ಮ್ಯಾನ್​ ರೋಹಿತ್​ ಶರ್ಮ!

ಏನಿದು ಆರ್​ಟಿಎಂ ಕಾರ್ಡ್​?


ಆರ್​ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ. ಐಪಿಎಲ್​ನಲ್ಲಿ ಇದುವರೆಗೆ ವಿರಾಟ್​ ಕೊಹ್ಲಿ (ಆರ್​ಸಿಬಿ), ಜಸ್​ಪ್ರೀತ್​ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.

ಇಂಪ್ಯಾಕ್ಟ್​ ನಿಯಮ ಕೈಬಿಡುವ ಸಾಧ್ಯತೆ!


ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ಹಲವು ಅನುಭವಿ ಆಟಗಾರರಿಂದ ಇಂಪ್ಯಾಕ್ಟ್​ ನಿಯಮದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಬಿಸಿಸಿಐ ಕೂಡ ಮುಂದಿನ ಬಾರಿ ಈ ನಿಯಮದ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿತ್ತು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಇಂಪ್ಯಾಕ್ಟ್​ ನಿಯಮ ಕೈ ಬಿಟ್ಟರೂ ಅಚ್ಚರಿಯಿಲ್ಲ. ಧೋನಿ ಅವರು ಇಂಪ್ಯಾಕ್ಟ್​ ನಿಯಮ ಇಲ್ಲವಾದರೆ ಮುಂದಿನ ಆವೃತ್ತಿ ಆಡುವುದು ಅನುಮಾನ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಹೇಳಿದ್ದರು. ಒಂದೊಮ್ಮೆ ಈ ನಿಯಮ ಕೈಬಿಟ್ಟರೆ ಆಗ ಧೋನಿ ಆಡುತ್ತಾರಾ ಎನ್ನುವ ಪ್ರಶ್ನೆಯೊಂದು ಮೂಡುವುದು ಸಹಜ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Maharaja Trophy: ಮೈಸೂರು ವಾರಿಯರ್ಸ್ ತಂಡ ಸೇರಿದ ದ್ರಾವಿಡ್ ಪುತ್ರ ಸಮಿತ್

Maharaja Trophy: ಆಲ್ ರೌಂಡರ್ ಚೇತನ್ ಎಲ್‌ಆರ್ ಹರಾಜಿನಲ್ಲಿ ಭಾರೀ ಮೊತ್ತ ಪಡೆದರು. ಬೆಂಗಳೂರು ಬ್ಲಾಸ್ಟರ್ಸ್‌ ತಂಡವು ಅವರನ್ನು 8.60 ಲಕ್ಷ ರೂ.ಗೆ ಖರೀದಿ ಮಾಡಿತು

VISTARANEWS.COM


on

Maharaja Trophy
Koo

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ(Maharaja Trophy) ಟಿ20 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ನಡೆಯಿತು. ಅಚ್ಚರಿ ಎಂದರೆ, ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರ ಪುತ್ರ18 ವರ್ಷದ ಸಮಿತ್ ದ್ರಾವಿಡ್(Samit Dravid) ಹರಾಜಿನಲ್ಲಿ 50 ಸಾವಿರ ಮೊತ್ತಕ್ಕೆ ಮೈಸೂರು ವಾರಿಯರ್ಸ್(Mysuru Warriors) ತಂಡದ ಪಾಲಾಗಿದ್ದಾರೆ. ಇದೇ ಮೊದಲ ಬಾರಿಗೆ ಟೂರ್ನಿಯ ಹರಾಜಿನಲ್ಲಿ ಅವರು ಕಾಣಿಸಿಕೊಂಡಿದ್ದರು. ಚೊಚ್ಚಲ ಪ್ರಯತ್ನದಲ್ಲೇ ಯಶಸ್ಸು ಕೂಡ ಕಂಡಿದ್ದಾರೆ. ಪಂದ್ಯಾವಳಿ ಆಗಸ್ಟ್​ 15- ಸೆಪ್ಟೆಂಬರ್​ 1 ರವರೆಗೆ ನಡೆಯಲಿದೆ.

ಆಲ್ ರೌಂಡರ್ ಚೇತನ್ ಎಲ್‌ಆರ್ ಹರಾಜಿನಲ್ಲಿ ಭಾರೀ ಮೊತ್ತ ಪಡೆದರು. ಬೆಂಗಳೂರು ಬ್ಲಾಸ್ಟರ್ಸ್‌ ತಂಡವು ಅವರನ್ನು 8.60 ಲಕ್ಷ ರೂ.ಗೆ ಖರೀದಿ ಮಾಡಿತು. ಇದಾದ ಬಳಿಕ ಅತಿ ಹೆಚ್ಚು ಹಣ ಪಡೆದ ಆಟಗಾರನೆಂದರೆ ಅನುಭವಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್. ಅವರನ್ನು ಮಂಗಳೂರು ಡ್ರ್ಯಾಗನ್ಸ್ ತಂಡವು 7.60 ಲಕ್ಷ ರೂ. ನೀಡಿ ಖರೀದಿ ಮಾಡಿತು.

ಇದನ್ನೂ ಓದಿ Paris Olympics 2024: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಭಾರತ ಪುರುಷರ ಆರ್ಚರಿ ತಂಡ; 4ನೇ ಸ್ಥಾನ ಪಡೆದ ಧೀರಜ್​ ಬೊಮ್ಮದೇವರ

ಬೆಂಗಳೂರು ಬ್ಲಾಸ್ಟರ್, ಗುಲ್ಬರ್ಗಾ ಮಿಸ್ಟಿಕ್ಸ್‌, ಹುಬ್ಬಳ್ಳಿ ಟೈಗರ್ಸ್‌, ಮಂಗಳೂರು ಡ್ರ್ಯಾಗನ್ಸ್‌, ಮೈಸೂರು ವಾರಿಯರ್, ಶಿವಮೊಗ್ಗ ಲಯನ್ಸ್‌ ಮಹಾರಾಜ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾಗಿವೆ.

ಅತಿ ಹೆಚ್ಚು ಹಣ ಪಡೆದ ಆಟಗಾರರ ಪಟ್ಟಿ


ಚೇತನ್ ಎಲ್ ಆರ್ (ಬೆಂಗಳೂರು ಬ್ಲಾಸ್ಟರ್ಸ್) – 8.60 ಲಕ್ಷ ರೂ

ಶ್ರೇಯಸ್ ಗೋಪಾಲ್ (ಮಂಗಳೂರು ಡ್ರಾಗನ್ಸ್) – 7.60 ಲಕ್ಷ ರೂ

ಕೆ ಗೌತಮ್ (ಮೈಸೂರು ವಾರಿಯರ್ಸ್) – 7.40 ಲಕ್ಷ ರೂ

ಲವ್ನಿತ್ ಸಿಸೋಡಿಯಾ (ಗುಲ್ಬರ್ಗಾ ಮಿಸ್ಟಿಕ್ಸ್) – 7.20 ಲಕ್ಷ ರೂ

ಪ್ರವೀಣ್ ದುಬೆ (ಗುಲ್ಬರ್ಗಾ ಮಿಸ್ಟಿಕ್ಸ್) – 6.80 ಲಕ್ಷ ರೂ

ಮೊಹಮ್ಮದ್ ತಾಹಾ (ಹುಬ್ಬಳ್ಳಿ ಟೈಗರ್ಸ್) – 6.60 ಲಕ್ಷ ರೂ

ವಿದ್ಯಾಧರ್ ಪಾಟೀಲ್ (ಮೈಸೂರು ವಾರಿಯರ್ಸ್) – 6.40 ಲಕ್ಷ ರೂ

ಅನೀಶ್ವರ್ ಗೌತಮ್ (ಹುಬ್ಬಳ್ಳಿ ಟೈಗರ್ಸ್) – 6.20 ಲಕ್ಷ ರೂ

ಹಾರ್ದಿಕ್ ರಾಜ್ (ಹುಬ್ಬಳ್ಳಿ ಟೈಗರ್ಸ್) – 5.80 ಲಕ್ಷ ರೂ

ಜಗದೀಶ ಸುಚಿತ್ (ಮೈಸೂರು ವಾರಿಯರ್ಸ್) – 4.80 ಲಕ್ಷ ರೂ

ಕ್ರಾಂತಿ ಕುಮಾರ್ ಎಂ (ಬೆಂಗಳೂರು ಬ್ಲಾಸ್ಟರ್ಸ್) – 4.40 ಲಕ್ಷ ರೂ

ಕೆ.ಸಿ.ಕಾರಿಯಪ್ಪ (ಹುಬ್ಬಳ್ಳಿ ಟೈಗರ್ಸ್)- 4.20 ಲಕ್ಷ ರೂ

ವೆಂಕಟೇಶ್ ಎಂ (ಮೈಸೂರು ವಾರಿಯರ್ಸ್) – 3.40 ಲಕ್ಷ ರೂ

ಅನಿರುದ್ಧ ಜೋಶಿ (ಬೆಂಗಳೂರು ಬ್ಲಾಸ್ಟರ್ಸ್) – 3 ಲಕ್ಷ ರೂ

ಎಂಜಿ ನವೀನ್ (ಬೆಂಗಳೂರು ಬ್ಲಾಸ್ಟರ್ಸ್) – 2.30 ಲಕ್ಷ ರೂ

ಧೀರಜ್ ಗೌಡ (ಮಂಗಳೂರು ಡ್ರಾಗನ್ಸ್) – 1 ಲಕ್ಷ ರೂ

ಪ್ರದೀಪ್ ಟಿ (ಶಿವಮೊಗ್ಗ ಲಯನ್ಸ್) – 1 ಲಕ್ಷ ರೂ

ಪ್ರತೀಕ್ ಜೈನ್ (ಬೆಂಗಳೂರು ಬ್ಲಾಸ್ಟರ್ಸ್) – 1 ಲಕ್ಷ ರೂ

ದರ್ಶನ್ ಎಂಬಿ (ಮಂಗಳೂರು ಡ್ರಾಗನ್ಸ್) – 1 ಲಕ್ಷ ರೂ

ಶರತ್ ಬಿಆರ್ (ಗುಲ್ಬರ್ಗಾ ಮಿಸ್ಟಿಕ್ಸ್) – 1 ಲಕ್ಷ ರೂ

ಪ್ರಸಿದ್ಧ್​ ಕೃಷ್ಣ (ಮೈಸೂರು ವಾರಿಯರ್ಸ್) – 1 ಲಕ್ಷ ರೂ

Continue Reading

ಕ್ರೀಡೆ

Paris Olympics 2024: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಭಾರತ ಪುರುಷರ ಆರ್ಚರಿ ತಂಡ; 4ನೇ ಸ್ಥಾನ ಪಡೆದ ಧೀರಜ್​ ಬೊಮ್ಮದೇವರ

Paris Olympics 2024:ಪುರುಷರ ಆರ್ಚರಿ ಶ್ರೇಯಾಂಕ ಸುತ್ತಿನಲ್ಲಿ ಭಾರತವು 2013 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸುವ ಮೂಲಕ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿದೆ

VISTARANEWS.COM


on

Paris Olympics 2024
Koo

ಪ್ಯಾರಿಸ್​: ಶಾಂಘೈನಲ್ಲಿ ಐತಿಹಾಸಿಕ ವಿಶ್ವಕಪ್​ ಜಯಿಸಿದ ತರುಣ್​ ದೀಪ್​ ರೈ(Tarundeep Rai), ಪ್ರವೀಣ್​ ಜಾಧವ್​(Pravin Jadhav) ಹಾಗೂ ಯುವ ಬಿಗ್ಲಾರ ಧೀರಜ್​ ಬೊಮ್ಮದೇವರ(Dhiraj Bommadevara) ಅವರನ್ನೊಳಗೊಂಡ ಭಾರತದ ಪುರುಷರ ಆರ್ಚರಿ ತಂಡ ಪ್ಯಾರಿಸ್​ ಒಲಿಂಪಿಕ್ಸ್(Paris Olympics 2024)​ನಲ್ಲಿಯೂ ಪದಕ ಗೆಲ್ಲುವ ಬರವಸೆ ಮೂಡಿಸಿದೆ. ಗುರುವಾರ ನಡೆದ ಪುರುಷರ ಆರ್ಚರಿ ಶ್ರೇಯಾಂಕ ಸುತ್ತಿನಲ್ಲಿ 2013 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸುವ ಮೂಲಕ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿದೆ. ಇದಕ್ಕೂ ಮುನ್ನ ನಡೆದ ಮಹಿಳಾ ವಿಭಾಗದದಲ್ಲಿ ಭಾರತ 4ನೇ ಸ್ಥಾನ ಗಳಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿತ್ತು.

ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಹಲವು ಏರಿಳಿತ ಕಂಡ ಭಾರತೀಯ ಬಿಲ್ಗಾರರು ಕೊನೆಗೂ ಉತ್ತಮ ಸ್ಥಾನದೊಂದಿಗೆ ಮಿಂಚಿದರು. ಧೀರಜ್​ ಬೊಮ್ಮದೇವರ 681 ಅಂಕದೊಂದಿಗೆ 4ನೇ ಸ್ಥಾನ ಪಡೆದರೆ, ತರುಣ್​ ದೀಪ್​ ರೈ(674 ಅಂಕ) 14ನೇ ಮತ್ತು ಪ್ರವೀಣ್​ ಜಾಧವ್ 39ನೇ (658 ಅಂಕ) ಸ್ಥಾನ ಪಡೆದರು.

ವೈಯಕ್ತಿಕ ಶ್ರೇಯಾಂಕ ವಿಭಾಗದ ಮೊದಲ ಸೆಟ್​ನಲ್ಲಿ ಧೀರಜ್​ ಬೊಮ್ಮದೇವರ 57( (10, 10, 10, 10, 10, 9, 8) ಅಂಕದೊಂದಿಗೆ 11ನೇ ಸ್ಥಾನ ಗಳಿಸಿದರೆ, ಅನುಭವಿ ಪ್ರವೀಣ್​ ಜಾಧವ್ 55(X, 10, 10, 9, 9, 8) ಹಾಗೂ ತರುಣ್​ ದೀಪ್​ ರೈ 55(10, 10, 10, 9, 9, 8) ಅಂಕದೊಂದಿಗೆ ಕ್ರಮವಾಗಿ 30 ಮತ್ತು 33ನೇ ಸ್ಥಾನ ಪಡೆದರು. 2ನೇ ಸುತ್ತಿನಲ್ಲಿ ತರುಣ್​ ದೀಪ್​ ರೈ ಉತ್ತಮ ಗುರಿ ಇಡುವ ಮೂಲಕ 16ನೇ ಸ್ಥಾನಕ್ಕೇರಿದರು. ಆದರೆ ಮೊದಲ ಸುತ್ತಿನಲ್ಲಿ ಮುಂದಿದ್ದ ಧೀರಜ್​ ಬೊಮ್ಮದೇವರ ಆ ಬಳಿಕ ಕುಸಿತ ಕಾಣಲಾರಂಭಿಸಿದರು. ವೈಯಕ್ತಿಕ ವಿಭಾಗದಲ್ಲಿ 5 ಸುತ್ತು ಪೂರ್ಣಗೊಂಡ ವೇಳೆ ಭಾರತ ತಂಡ 832 ಅಂಕದೊಂದಿಗೆ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು.

6ನೇ ಸೆಟ್​​ನಲ್ಲಿ ತರುಣ್​ ದೀಪ್​ ರೈ 56 ಅಂಕದೊಂದಿಗೆ 14ನೇ ಸ್ಥಾನಕ್ಕೇರಿದರು. ಅತ್ತ ಧೀರಜ್ ಮತ್ತು ಪ್ರವೀಣ್ ಕೂಡ ತಮ್ಮ ಸ್ಥಾನಗಳಲ್ಲಿ ಏರಿಕೆ ಕಂಡರು. ಆದರೆ, ತಂಡ ವಿಭಾಗದಲ್ಲಿ 1000 ಅಂಕದೊಂದಿಗೆ ಒಂದು ಸ್ಥಾನ ಕುಸಿತ ಕಂಡು 6ಕ್ಕೆ ಇಳಿಯಿತು. ಕೊರಿಯಾ ಅಗ್ರಸ್ಥಾನ, ಫ್ರಾನ್ಸ್ ಮತ್ತು ಇಟಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆಯಿತು. ಚೀನಾ 5ನೇ ಸ್ಥಾನ ಸಂಪಾದಿಸಿತು.

ಇದನ್ನೂ ಓದಿ Paris Olympics 2024: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಭಾರತ ಪುರುಷರ ಆರ್ಚರಿ ತಂಡ; 4ನೇ ಸ್ಥಾನ ಪಡೆದ ಧೀರಜ್​ ಬೊಮ್ಮದೇವರ

ಮೊದಲ ಸೆಟ್​ನಲ್ಲಿ 11ನೇ ಸ್ಥಾನಗಳಿಸಿ ಆ ಬಳಿಕದ ಸುತ್ತಿನಲ್ಲಿ ಕುಸಿತ ಕಂಡಿದ್ದ ಯುವ ಬಿಗ್ಲಾರ ಧೀರಜ್​ ಬೊಮ್ಮದೇವರ ಫಿನಿಕ್ಸ್​ನಂತೆ ಎದ್ದು ಬಂದು 7ನೇ ಸುತ್ತಿನಲ್ಲಿ 58 (X, X, 10, 10, 9, 9) ಅಂಕದೊಂದಿಗೆ 10ನೇ ಸ್ಥಾನಕ್ಕೆ ಜಿಗಿದರು. ಹಿಂದಿನ ಸೆಟ್​ನಲ್ಲಿ 24ನೇ ಸ್ಥಾನಿಯಾಗಿದ್ದರು. ತರುಣ್​ ದೀಪ್​ ರೈ ಈ ಸುತ್ತಿನಲ್ಲಿ ಒಂದು ಸ್ಥಾನ ಕುಸಿದ ಕಂಡರೂ ಕೂಡ ತಕ್ಷಣ ಎಚ್ಚೆತ್ತುಕೊಂಡು 8ನೇ ಸುತ್ತಿನಲ್ಲಿ 15ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಏರಿಕೆ ಕಂಡರು. ಉಭಯ ಬಿಲ್ಗಾರರ ಈ ಶ್ರೇಷ್ಠ ಸಾಧನೆಯಿಂದ ಭಾರತ, ತಂಡ ವಿಭಾಗದಲ್ಲಿ ಮೂರನೇ ಸ್ಥಾನಕ್ಕೇರಿತು. 9ನೇ ಸೆಟ್​ನಲ್ಲಿ 5 ಬಿಲ್ಲುಗಳನ್ನು 10 ಅಂಕಕ್ಕೆ ಗುರಿ ಇಟ್ಟ ಧೀರಜ್ 8ನೇ ಸ್ಥಾನ ಪೆಡೆದುಕೊಂಡರು. ಇದೇ ವೇಳೆ ಭಾರತ ತಂಡ 1511 ಅಂಕದೊಂದಿಗೆ 2ನೇ ಸ್ಥಾನಕ್ಕೆ ಜಿಗಿಯಿತು. ಆದರೆ ಅಂತಿಮ ಸುತ್ತಿನಲ್ಲಿ ಒಂದು ಸ್ಥಾನ ಕುಸಿತ ಕಂಡು 3ನೇ ಸ್ಥಾನ ಪಡೆದು ಕ್ವಾರ್ಟರ್​ ಫೈನಲ್​ ಪ್ರವೇಶಿಸಿತು. ದಕ್ಷಿಣ ಕೊರಿಯಾ 2049 ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ಆತಿಥೇಯ ಫ್ರಾನ್ಸ್​ 2025 ಅಂಕ ಗಳಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಚೀನಾ 1998 ಅಂಕದೊಂದಿಗೆ ನಾಲ್ಕನೇ ಸ್ಥಾನ ಪಡೆಯಿತು.  

Continue Reading

ಕ್ರೀಡೆ

Paris Olympics 2024: 2ನೇ ಸುತ್ತಿನಲ್ಲಿ ಜೊಕೊ-ನಡಾಲ್ ಮುಖಾಮುಖಿ ಸಾಧ್ಯತೆ

Paris Olympics 2024:ಜೊಕೊವಿಚ್‌ ಅವರು ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಎದುರು ಕಣಕ್ಕಿಳಿದರೆ, ನಡಾಲ್‌ ಹಂಗೇರಿಯ ಮಾರ್ಟನ್‌ ಫುಕ್ಸೊವಿಕ್ಸ್‌ ಸವಾಲು ಎದುರಿಸಲಿದ್ದಾರೆ. ಈ ಪಂದ್ಯ ಜುಲೈ 27ರಂದು ನಡೆಯಲಿದೆ.

VISTARANEWS.COM


on

Koo

ಪ್ಯಾರಿಸ್‌: ಪ್ಯಾರಿಸ್​ ಒಲಿಂಪಿಕ್ಸ್​(Paris 2024 Olympics) ಟೆನಿಸ್‌ ಸ್ಪರ್ಧೆಯ ಡ್ರಾ ಪ್ರಕಟಗೊಂಡಿದೆ. ವಿಶ್ವದ ಶ್ರೇಷ್ಠ ಟೆನಿಸ್​ ಆಟಗಾರರಾದ ಸರ್ಬಿಯಾದ ನೊವಾಕ್‌ ಜೊಕೊವಿಚ್(Novak Djokovic) ಹಾಗೂ ಸ್ಪೇನ್​ನ ರಫೇಲ್‌ ನಡಾಲ್‌(rafael nadal) ಅವರು ಎರಡನೇ ಸುತ್ತಿನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಹೀಗಾಗಿ ಅಭಿಮಾನಿಗಳಲ್ಲಿ ಟೂರ್ನಿ ಆರಂಭಕ್ಕೂ ಮುನ್ನವೇ ಭಾರೀ ಕುತೂಹಲ ಕೆರಳಿಸುವಂತೆ ಮಾಡಿದೆ.

ಜೊಕೊವಿಚ್‌ ಅವರು ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಎದುರು ಕಣಕ್ಕಿಳಿದರೆ, ನಡಾಲ್‌ ಹಂಗೇರಿಯ ಮಾರ್ಟನ್‌ ಫುಕ್ಸೊವಿಕ್ಸ್‌ ಸವಾಲು ಎದುರಿಸಲಿದ್ದಾರೆ. ಈ ಪಂದ್ಯ ಜುಲೈ 27ರಂದು ನಡೆಯಲಿದೆ. ಸ್ನಾಯು ಸೆಳೆತದಿಂದ ಬರೋಬ್ಬರಿ ಒಂದು ವರ್ಷದಿಂದ ಬಳಲುತ್ತಿರುವ ನಡಾಲ್​ಗೆ ದೇಹ ಯಾವ ರೀತಿ​ ಸ್ಪಂದಿಸಲಿದೆ ಎನ್ನುವುದು ಕೂಡ ಮುಖ್ಯವಾಗಿದೆ. ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಕೆ ಕಾಣದಿದ್ದರೂ ಕೂಡ ತಮ್ಮ ದೇಶಕ್ಕಾಗಿ ಒಲಿಂಪಿಕ್ಸ್​ ಆಡುವುದಾಗಿ ಹೇಳಿದ್ದರು.

ಕಳೆದ ವಾರ ಮುಕ್ತಾಯ ಕಂಡಿದ್ದ ವಿಂಬಲ್ಡನ್‌ ಟೂರ್ನಿಯಲ್ಲಿ ಜೋಕೊವಿಕ್​ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌(carlos alcaraz) ಅವರು ಹ್ಯಾಡಿ ಹಬೀಬ್‌ ಎದುರು ಮೊದಲ ಸುತ್ತಿನಲ್ಲಿ ಆಡಲಿದ್ದಾರೆ. ಡಬಲ್ಸ್​ನಲ್ಲಿ ಕಾರ್ಲೋಸ್ ಅಲ್ಕರಾಜ್ ಅವರು ದಿಗ್ಗಜ ನಡಾಲ್‌ ಜತೆಗೂಡಿ ಆಡಲಿದ್ದಾರೆ.

2008ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ನಡಾಲ್‌ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿ‌ದ್ದರು. 2016ರ ರಿಯೊ ಡಿ ಜನೈರೊ ಒಲಿಂಪಿಕ್‌ನಲ್ಲಿ ಮಾರ್ಕ್‌ ಲೊಪೇಜ್‌ ಅವರೊಂದಿಗೆ ಡಬಲ್ಸ್‌ನಲ್ಲೂ ‘ಬಂಗಾರ’ ಗೆದ್ದಿದ್ದರು. ಈ ಬಾರಿಯೂ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ Paris Olympics: ಈ ಬಾರಿ ಪದಕದ ನಿರೀಕ್ಷೆ ಮೂಡಿಸಿದ ಭಾರತೀಯ ಅಥ್ಲೀಟ್‌ಗಳು ಇವರು…

ಕೊಕೊ ಗಾಫ್ ಅಮೆರಿಕದ ಧ್ವಜಧಾರಿ

ಯುವ ಮಹಿಳಾ ಟೆನಿಸ್ ಆಟಗಾರ್ತಿ ಕೊಕೊ ಗಾಫ್(Coco Gauff) ಅವರು ಪ್ಯಾರಿಸ್​ ಒಲಿಂಪಿಕ್ಸ್‌ನ(Paris Olympics) ಉದ್ಘಾಟನಾ ಸಮಾರಂಭದಲ್ಲಿ(Paris Olympics Opening Ceremony) ಅಮರಿಕದ ಮಹಿಳಾ ಧ್ವಜಧಾರಿಯಾಗಲಿದ್ದಾರೆ(US Flag Bearer). ಶುಕ್ರವಾರ(ಜುಲೈ 26) ನಡೆಯುವ ಉದ್ಘಾಟನ ಸಮಾರಂಭದಲ್ಲಿ ಯುಎಸ್ ಧ್ವಜವನ್ನು ಹೊತ್ತೊಯ್ಯಲಿದ್ದಾರೆ. ಈ ಗೌರವವನ್ನು ಪಡೆದ ಅತ್ಯಂತ ಕಿರಿಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜತೆಗೆ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭದಲ್ಲಿ ಅಮೆರಿಕದ ಧ್ವಜಧಾರಿಯಾಗಿ ಸೇವೆ ಸಲ್ಲಿಸಿದ ಮೊದಲ ಟೆನಿಸ್ ಆಟಗಾರ್ತಿ ಎಂದೆನಿಸಿಕೊಳ್ಳಲಿದ್ದಾರೆ. 

ಪ್ಯಾರಿಸ್‌ ಆತಿಥ್ಯದಲ್ಲಿ ನಡೆಯುತ್ತಿರುವ 3ನೇ ಒಲಿಂಪಿಕ್ಸ್‌ ಕೀಡಾಕೂಟ ಇದಾಗಿದೆ. ಮೊದಲ ಒಲಿಂಪಿಕ್ಸ್‌ ನಡೆದದ್ದು 1900ರಲ್ಲಿ. ಇದಾದ ಬಳಿಕ 1924ರಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ನಡೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್​ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Continue Reading

ಕ್ರೀಡೆ

Paris Olympics: ಈ ಬಾರಿ ಪದಕದ ನಿರೀಕ್ಷೆ ಮೂಡಿಸಿದ ಭಾರತೀಯ ಅಥ್ಲೀಟ್‌ಗಳು ಇವರು…

Paris Olympics: ಟೋಕಿಯೋ ಒಲಿಂಪಿಕ್ಸ್​ ಟೂರ್ನಿಯಲ್ಲಿ ಕಂಚು ಗೆದ್ದಿದ್ದ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌ ಈ ಬಾರಿಯೂ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 75 ಕೆ.ಜಿ. ವಿಭಾಗದಲ್ಲಿ ಅವರು ಕಣಕ್ಕಿಳಿಯುತ್ತಿದ್ದಾರೆ.

VISTARANEWS.COM


on

Koo

ಪ್ಯಾರಿಸ್​: ಕಳೆದ ಟೋಕಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ(Paris Olympics) ಭಾರತ 7 ಪದಕಗಳನ್ನು ಗೆದ್ದ ಸಾಧನೆ ಮಾಡಿತ್ತು. ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಬಂಗಾರ ಗೆದ್ದರೆ, ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ, ಬಾಕ್ಸಿಂಗ್​ನಲ್ಲಿ ಲವ್ಲೀನಾ ಬೊರ್ಗೊಹೇನ್‌ ಕಂಚು, ಕುಸ್ತಿಯಲ್ಲಿ ರವಿಕುಮಾರ್‌ ದಹಿಯಾ ಬೆಳ್ಳಿ, ಬಜರಂಗ್‌ ಪೂನಿಯ ಕಂಚು, ಪುರುಷರ ಹಾಕಿಯಲ್ಲಿ ಕಂಚು, ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು ಕಂಚು ಗೆದಿದ್ದರು. ಈ ಬಾರಿ ಪ್ಯಾರಿಸ್​ನಲ್ಲಿ ಪದಕ ಗೆಲ್ಲಬಹುದಾದ ಅಥ್ಲೀಟ್‌ಗಳ ವಿವರ ಇಲ್ಲಿದೆ.

ನೀರಜ್‌ ಚೋಪ್ರಾ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅಥ್ಲೆಟಿಕ್ಸ್​ನಲ್ಲಿ ಭಾರತಕ್ಕೆ ಐತಿಹಾಸಿಕ ಪದಕ ತಂದುಕೊಟ್ಟ ನೀರಜ್​ ಚೋಪ್ರಾ ಮೇಲೆ ಈ ಬಾರಿಯೂ ಪದಕ ನಿರೀಕ್ಷೆ ಮಾಡಲಾಗಿದೆ. ಕಳೆದ ವರ್ಷ ನಡೆದಿದ್ದ ವಿಶ್ವ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿಯೂ ಚಿನ್ನ ಗೆದ್ದಿದ್ದ ನೀರಜ್​ ಪ್ಯಾರಿಸ್​ನಲ್ಲಿಯೂ ಚಿನ್ನ ಗೆಲ್ಲುವ ವಿಶ್ವಾಸ ಭಾರತೀರದ್ದು.

ಅವಿನಾಶ್‌ ಸಾಬ್ಲೆ


ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಸ್ಟೀಪಲ್‌ ಚೇಸ್‌ ಓಟಗಾರ ಅವಿನಾಶ್‌ ಸಾಬ್ಲೆ ಅವರು ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಹೊಸ ಪದಕ ಬರವಸೆಯ ಅಥ್ಲೀಟ್​ ಆಗಿ ಗುರುತಿಸಿಕೊಂಡಿದ್ದಾರೆ. ಸೈನಿಕನಾಗಿರುವ ಅವರು 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಪಿ.ವಿ.ಸಿಂಧು


ಕಳೆದೊಂದು ವರ್ಷಗಳಿಂದ ಆಡಿದ ಎಲ್ಲ ಟೂರ್ನಿಯಲ್ಲಿಯೂ ಮುಗ್ಗರಿಸಿ ಫಾರ್ಮ್​ ಕಳೆದುಕೊಂಡಿರುವ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ ಸಿಂಧು ಮೇಲೆ ಈ ಬಾರಿಯೂ ಪದಕ ನಿರೀಕ್ಷೆ ಮಾಡಲಾಗಿದೆ. ಒಲಿಂಪಿಕ್ಸ್ ಟೂರ್ನಿಯಲ್ಲಿ ಸಿಂಧು ಅವರದ್ದೂ ಡಿಫರೆಂಟ್​ ಗೇಮ್​. ಹೀಗಾಗಿ ಪದಕ ನಿರೀಕ್ಷೆ ಇಡಲಾಗಿದೆ. ​2016, 2021ರ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿದ್ದರು.

ಸಾತ್ವಿಕ್‌ ರಾಂಕಿರೆಡ್ಡಿ- ಚಿರಾಗ್‌ ಶೆಟ್ಟಿ


ಈಗಾಗಲೇ ಹಲವು ಟೂರ್ನಿಯಲ್ಲಿ ಭಾರತಕ್ಕೆ ಬ್ಯಾಡ್ಮಿಂಟನ್​ನಲ್ಲಿ ಐತಿಹಾಸಿಕ ಪದಕ ಗೆದ್ದು ಕೊಟ್ಟಿರುವ ಸ್ಟಾರ್​ ಬ್ಯಾಡ್ಮಿಂಡನ್​ ಜೋಡಿ ಸಾತ್ವಿಕ್‌ ರಾಂಕಿರೆಡ್ಡಿ- ಚಿರಾಗ್‌ ಶೆಟ್ಟಿ ಕೂಡ ಪದಕ ಗೆಲ್ಲಬಹುದೆಂದು ನಿರೀಕ್ಷೆ ಮಾಡಲಾಗಿದೆ. ಕಳೆದ ಏಷ್ಯನ್‌ ಗೇಮ್ಸ್‌ನಲ್ಲಿ ಈ ಜೋಡಿ ಚಿನ್ನ ಗೆದ್ದ ಸಾಧನೆ ಮಾಡಿತ್ತು.

ಮನು ಬಾಕರ್‌


10 ಮೀ. ಏರ್‌ ಪಿಸ್ತೂಲ್‌ನಲ್ಲಿ ಗಮನಾರ್ಹ ಸಾಧನೆ ತೋರುತ್ತಿರುವ ಮಹಿಳಾ ಶೂಟರ್​ ಮನು ಬಾಕರ್​ ಕೂಡ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ Paris Olympics 2024: ಆರ್ಚರಿಯಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಭಾರತ ಮಹಿಳಾ ತಂಡ

ಲವ್ಲಿನಾ ಬೊರ್ಗೊಹೇನ್‌


ಟೋಕಿಯೋ ಒಲಿಂಪಿಕ್ಸ್​ ಟೂರ್ನಿಯಲ್ಲಿ ಕಂಚು ಗೆದ್ದಿದ್ದ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌ ಈ ಬಾರಿಯೂ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 75 ಕೆ.ಜಿ. ವಿಭಾಗದಲ್ಲಿ ಅವರು ಕಣಕ್ಕಿಳಿಯುತ್ತಿದ್ದಾರೆ.

ಅದಿತಿ ಅಶೋಕ್‌


ಕರ್ನಾಟಕದ ಗಾಲ್ಫರ್​ ಅದಿತಿ ಅಶೋಕ್​ ಕೂಡ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಕಳೆದ ಟೋಕಿಯೋದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು. ಭಾರತಕ್ಕೆ ಚೊಚ್ಚಲ ವಿಶ್ವಕಪ್​ ಗೆದ್ದ ನಾಯಕ ಕಪಿಲ್​ ದೇವ್​ ಕೂಡ ಅದಿತಿ ಈ ಬಾರಿ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಭಾರತ ಪುರುಷರ ಹಾಕಿ ತಂಡ


ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್​ನಲ್ಲಿ 41 ವರ್ಷಗಳ ಬಳಿಕ ಪದಕ ಗೆದ್ದ ಸಾಧನೆ ತೋರಿದ್ದ ಭಾರತೀಯ ಪುರುಷರ ಹಾಕಿ ತಂಡ ಈ ಬಾರಿಯೂ ಪದಕ ಗೆಲ್ಲುವು ವಿಶ್ವಾಸದಲ್ಲಿದೆ. ಹಿರಿಯ ಮತ್ತು ಕಿರಿಯ ಆಟಗಾರನ್ನು ಒಳಗೊಂಡಿರುವ ತಂಡ ಸಾಕಷ್ಟು ಸಮತೋಲಿತವಾಗಿದೆ.

ಮೀರಾಬಾಯಿ ಚಾನು


ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ಖಾತೆ ತೆರೆದಿದ್ದ ವೇಟ್​ ಲಿಫ್ಟರ್​ ಮೀರಾಬಾಯಿ ಚಾನು ಈ ಬಾರಿಯೂ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಕಳೆದೊಂದು ವರ್ಷದಿಂದ ಅವರು ಗಾಯದ ಸಮಸ್ಯೆಯಿಂದ ಬಳಲಿದ್ದರೂ ಕೂಡ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.

ನಿಖತ್‌ ಜರೀನ್‌


2 ಬಾರಿ ವಿಶ್ವ ಚಾಂಪಿಯನ್‌ ಯುವ ಬಾಕ್ಸರ್​ ನಿಖತ್‌ ಜರೀನ್‌ ಮೇಲೆ ಪದಕ ಗೆಲ್ಲುವ ಭಾರೀ ನಿರೀಕ್ಷೆ ಇರಿಸಲಾಗಿದೆ.

Continue Reading
Advertisement
Rihanna
ವಿದೇಶ3 mins ago

Rihanna: ಮಿನಿ ಸ್ಕರ್ಟ್‌ ತೊಟ್ಟು, ಬ್ರಾ, ಅಂಡರ್‌ವೇರ್‌ ತೋರಿಸುತ್ತ ಓಡಾಡಿದ ಪಾಪ್‌ ಗಾಯಕಿ ರಿಹಾನಾ; Video ಇಲ್ಲಿದೆ

Maharaja Trophy
ಕ್ರೀಡೆ4 mins ago

Maharaja Trophy: ಮೈಸೂರು ವಾರಿಯರ್ಸ್ ತಂಡ ಸೇರಿದ ದ್ರಾವಿಡ್ ಪುತ್ರ ಸಮಿತ್

Monsoon Fashion
ಫ್ಯಾಷನ್17 mins ago

Monsoon Fashion: ಮಾನ್ಸೂನ್‌ ಸೀಸನ್‌ಗೆ ಇಶಾನಿ ಶೆಟ್ಟಿಯ ಫ್ಯಾಷನ್‌ ಟಿಪ್ಸ್‌ ಹೀಗಿದೆ!

Paris Olympics 2024
ಕ್ರೀಡೆ26 mins ago

Paris Olympics 2024: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಭಾರತ ಪುರುಷರ ಆರ್ಚರಿ ತಂಡ; 4ನೇ ಸ್ಥಾನ ಪಡೆದ ಧೀರಜ್​ ಬೊಮ್ಮದೇವರ

Viral Video
Latest32 mins ago

Viral Video: ಜಾರಿ ಬಿದ್ದ ವಧುವನ್ನು ಎತ್ತದ ವರ; ಸಹೋದರನಿಂದ ಮದುವೆ ಮಂಟಪದಲ್ಲೇ ಬಿತ್ತು ಗೂಸಾ!

Lokayukta
ರಾಜಕೀಯ35 mins ago

Lokayukta: ಲೋಕಾಯುಕ್ತ ಎಡಿಜಿಪಿಯಾಗಿ ಮನೀಶ್‌ ಕರ್ಬೀಕರ್‌, ಅಗ್ನಿಶಾಮಕ ದಳ ಡಿಜಿಪಿಯಾಗಿ ಪ್ರಶಾಂತ್ ಕುಮಾರ್ ಥಾಕೂರ್‌ ನೇಮಕ

Arecanut Price
ಪರಿಸರ43 mins ago

ವಿಸ್ತಾರ ಗ್ರಾಮ ದನಿ: ಅಡಿಕೆ ಬೆಳೆಗಾರರೂ ‘ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ʼ ಸಲ್ಲಿಸಬೇಕಾ? ಸಲ್ಲಿಸದಿದ್ದರೆ ಏನಾಗುತ್ತದೆ?

BJP
ದೇಶ43 mins ago

BJP: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಗೂ ಮೊದಲು ಕಾರ್ಯಕಾರಿ ಅಧ್ಯಕ್ಷರ ನೇಮಕ; ಶೀಘ್ರದಲ್ಲೇ ಆದೇಶ?

Tax Saving Tips
ಮನಿ-ಗೈಡ್51 mins ago

Tax Saving Tips: 10 ಲಕ್ಷ ರೂ. ಆದಾಯ ಇದ್ದರೂ ತೆರಿಗೆಯಿಂದ ಪಾರಾಗಲು ಸಾಧ್ಯ! ಇಲ್ಲಿದೆ ಸರಳ ಲೆಕ್ಕಾಚಾರ!

Murder Case
Latest1 hour ago

Murder Case: ʼಸಾಫ್ಟ್ ಟಚ್ʼ ಸ್ಪಾಗೆ ಹೋಗಿದ್ದ ಕ್ರಿಮಿನಲ್‌ನನ್ನು ಪ್ರೇಯಸಿ ಎದುರೇ ತುಂಡು ತುಂಡಾಗಿ ಕತ್ತರಿಸಿದರು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್7 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ8 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ9 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ2 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ2 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ2 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ5 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌