IPL 2025: ರಾಜಸ್ಥಾನ್​ ರಾಯಲ್ಸ್​ಗೆ ರಾಹುಲ್​ ದ್ರಾವಿಡ್​ ನೂತನ ಕೋಚ್​? - Vistara News

ಕ್ರೀಡೆ

IPL 2025: ರಾಜಸ್ಥಾನ್​ ರಾಯಲ್ಸ್​ಗೆ ರಾಹುಲ್​ ದ್ರಾವಿಡ್​ ನೂತನ ಕೋಚ್​?

IPL 2025: ಮೂಲಗಳ ಪ್ರಕಾರ ದ್ರಾವಿಡ್​ ಜತೆ ಈಗಾಗಲೇ ಫ್ರಾಂಚೈಸಿ ಮಾತುಕತೆ ನಡೆಸಿದ್ದು ದ್ರಾವಿಡ್​ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟಗೊಂಡಿಲ್ಲ.

VISTARANEWS.COM


on

IPL 2025
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ಕೋಚ್​ ರಾಹುಲ್​ ದ್ರಾವಿಡ್(Rahul Dravid) ಅವರು​ ಮುಂದಿನ ಐಪಿಎಲ್(IPL 2025)ನಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡದ​ ಕೋಚಿಂಗ್​ ನಡೆಸುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ. ಸದ್ಯ ರಾಜಸ್ಥಾನ್ ತಂಡದ ಹಾಲಿ ಕೋಚ್​ ಆಗಿರುವ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಇಂಗ್ಲೆಂಡ್​ ಸೀಮಿತ ತಂಡದ ಕೋಚ್​ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅವರ ಸ್ಥಾನಕ್ಕೆ ದ್ರಾವಿಡ್​ ಅವರನ್ನು ನೇಮಕ ಮಾಡಲು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ದ್ರಾವಿಡ್​ ಜತೆ ಈಗಾಗಲೇ ಫ್ರಾಂಚೈಸಿ ಮಾತುಕತೆ ನಡೆಸಿದ್ದು ದ್ರಾವಿಡ್​ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟಗೊಂಡಿಲ್ಲ. ಈ ಹಿಂದೆ ದ್ರಾವಿಡ್​ ರಾಜಸ್ಥಾನ್ ರಾಯಲ್ಸ್​(Rajasthan Royals) ತಂಡದ ಪರವೇ 2 ಆವೃತ್ತಿಯಲ್ಲಿ ಕೋಚಿಂಗ್​ ನಡೆಸಿದ್ದರು. ಅಂಡರ್ 19 ತಂಡದ ಕೋಚ್ ಆದ ಕಾರಣ ಐಪಿಎಲ್​ ಕೋಚಿಂಗ್​ನಿಂದ ದೂರ ಉಳಿದಿದ್ದರು.

ರಾಜಸ್ಥಾನ್ ರಾಯಲ್ಸ್ ಪರ ನಾಯಕರಾಗಿ ದ್ರಾವಿಡ್ ಒಮ್ಮೆ ತಂಡವನ್ನು ಪ್ಲೇ ಆಪ್​ಗೆ ಕೊಂಡೊಯ್ದಿದ್ದರು. ಚಾಂಪಿಯನ್ಸ್ ಲೀಗ್​ನಲ್ಲಿ ತಂಡ ಫೈನಲ್​ಗೇರಿತ್ತು. ರಾಜಸ್ಥಾನ್ ತಂಡದ ಪರ 40 ಪಂದ್ಯಗಳಲ್ಲಿ ನಾಯಕರಾಗಿದ್ದ ದ್ರಾವಿಡ್ 23 ಗೆಲುವು ಕಂಡಿದ್ದಾರೆ. ಇದೀಗ ಎಲ್ಲ ಬಿಸಿಸಿಐ ಹುದ್ದೆಗಳಿಂದ ನಿವೃತ್ತಿ ಹೊಂದಿರುವ ದ್ರಾವಿಡ್​ ಮತ್ತೆ ಐಪಿಎಲ್​ ಕೋಚಿಂಗ್​ ಕಡೆ ಗಮನಹರಿಸಿದ್ದಾರೆ ಎನ್ನಲಾಗಿದೆ.

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್‌ ದ್ರಾವಿಡ್‌ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಎನ್ನುವುದು ಅವರಿಗೆ ಕನಸಾಗಿತ್ತು. ಈ ಕೊರಗು ಕೂಡ ಅವರಲ್ಲಿತ್ತು. ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್‌ ಅನ್ನು ತರಬೇತುದಾರನಾಗಿ ಗಳಿಸಿಕೊಂಡಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ.

ಇದನ್ನೂ ಓದಿ IPL 2025: ಮುಂಬೈ ತಂಡದಿಂದ ಪಾಂಡ್ಯಗೆ ಗೇಟ್​ಪಾಸ್​; ಸೂರ್ಯಕುಮಾರ್​ಗೆ ನಾಯಕತ್ವ?

ಪ್ರಧಾನ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರಿಗೆ “ಭಾರತ ರತ್ನ” ಪ್ರಶಸ್ತಿಯಿಂದ ಗೌರವಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುನೀಲ್ ಗವಾಸ್ಕರ್ ಒತ್ತಾಯಿಸಿದ್ದಾರೆ. “ಭಾರತ ಸರಕಾರವು ದ್ರಾವಿಡ್​ಗೆ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಿದರೆ ಅದು ಅವರಿಗೆ ಸಲ್ಲುವ ಸೂಕ್ತ ಗೌರವವಾಗುತ್ತದೆ. ಈ ಗೌರವಕ್ಕೆ ಅವರು ಸಂಪೂರ್ಣವಾಗಿ ಅರ್ಹರಾಗಿದ್ದಾರೆ ಎಂದು ಬರೆದುಕೊಂಡಿದ್ದರು.

ದ್ರಾವಿಡ್​ ಆಟಗಾರರಾಗಿ ಮತ್ತು ತಂಡದ ನಾಯಕರಾಗಿ ವಿದೇಶಗಳಲ್ಲಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್​ನಲ್ಲಿ ಗೆಲ್ಲುವುದು ಅಸಾಧ್ಯ ಎಂಬ ಕಾಲದಲ್ಲಿ ಅವರು ಭಾರತಕ್ಕೆ ಸರಣಿ ಗೆಲುವನ್ನು ತಂದಿದ್ದಾರೆ. ಇಂಗ್ಲೆಂಡ್​ನಲ್ಲಿ ಟೆಸ್ಟ್ ಸರಣಿಗಳನ್ನು ಗೆದ್ದಿರುವ ಕೇವಲ ಮೂರು ಭಾರತೀಯ ನಾಯಕರ ಪೈಕಿ ಅವರು ಕೂಡ ಒಬ್ಬರಾಗಿದ್ದಾರೆ. ಈ ಹಿಂದೆ, ಅವರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಅತ್ಯುತ್ತಮ ಕ್ರಿಕೆಟ್ ಪ್ರತಿಭೆಗಳನ್ನು ಹೊರತಂದಿದ್ದಾರೆ. ಬಳಿಕ ಭಾರತೀಯ ಹಿರಿಯರ ಕ್ರಿಕೆಟ್ ತಂಡದ ಕೋಚ್ ಆಗಿ ಉತ್ತಮ ನಿರ್ವಹಣೆ ನೀಡಿದ್ದಾರೆ ಎಂದು ಗವಾಸ್ಕರ್​ ಹೇಳಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics Medal Table: ಪಾಕಿಸ್ತಾನ 1 ಪದಕ ಗೆದ್ದರೂ ಪದಕ ಪಟ್ಟಿಯಲ್ಲಿ ಮೇಲೆ, ಭಾರತ 6 ಪದಕ ಗೆದ್ದರೂ ಕೆಳಗೆ ಏಕೆ?

Paris Olympics Medal Table: ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಆಯ್ಕೆ ಮಾಡಿಕೊಂಡ ರ‍್ಯಾಂಕಿಂಗ್ ವಿಧಾನದ ಪ್ರಕಾರ ಒಲಿಂಪಿಕ್ ಕೂಟದಲ್ಲಿ ಆಯಾ ದೇಶ ಗೆದ್ದ ಚಿನ್ನದ ಪದಕದ ಆಧಾರದಲ್ಲಿ ರ‍್ಯಾಂಕಿಂಗ್ ನೀಡಲಾಗುತ್ತದೆ.

VISTARANEWS.COM


on

Paris Olympics
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಟ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ನಾಳೆ(ಭಾನುವಾರ) ಸಮಾರೋಪ ಸಮಾರಂಭ ನಡೆಯಲಿದ್ದು ಟೂರ್ನಿಗೆ ಅಧಿಕೃತವಾಗಿ ತೆರೆ ಬೀಳಲಿದೆ. ಸದ್ಯ ಪದಕ ಪಟ್ಟಿಯಲ್ಲಿ(Paris Olympics Medal Table) ಅಮೆರಿಕ ಅಗ್ರಸ್ಥಾನ ಪಡೆದಿದೆ. ಚೀನಾ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಿಯಾಗಿ ಕಾಣಿಸಿಕೊಂಡಿದೆ. ಭಾರತ 6 ಪದಕ ಗೆದ್ದು 69ನೇ ಸ್ಥಾನಿಯಾಗಿದೆ. ಪಾಕಿಸ್ತಾನ ಏಕೈಕ ಪದಕ ಗೆದ್ದರೂ ಭಾರತಕ್ಕಿಂತ 8 ಸ್ಥಾನ ಪ್ರಗತಿ ಸಾಧಿಸಿ 58ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಒಂದು ಪದಕ ಗೆದ್ದರೂ ಪಾಕಿಸ್ತಾನ ಭಾರತಕ್ಕಿಂತ ಮೇಲೆ ಹೇಗೆ ಸ್ಥಾನ ಪಡೆಯಿತು ಎನ್ನುವುದು ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಉತ್ತರ ಇಲ್ಲಿದೆ.

ಶುಕ್ರವಾರ ರಾತ್ರಿಯ ವರೆಗೂ ಪದಕದ ಖಾತೆಯನ್ನೇ ತೆರೆಯದೇ ಇದ್ದ ಪಾಕಿಸ್ತಾನಕ್ಕೆ ಪುರುಷರ ಜಾವೆಲಿನ್​ ಎಸೆತದಲ್ಲಿ ಬರೋಬ್ಬರಿ 92.97 ಮೀಟರ್ ದೂರ ಜಾವೆಲಿನ್ ಎಸೆದು ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಬೀಗಿದ್ದರು. ಈ ಮೂಲಕ ಪಾಕ್​ಗೆ ಪದಕದ ಖಾತೆ ತೆರೆದಿದ್ದರು. ಜತೆಗೆ 40 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಚಿನ್ನದ ಪದವೊಂದನ್ನು ಗೆದ್ದ ಸಾಧನೆ ಮಾಡಿದ್ದರು. ಭಾರತ 6 ಪದಕ ಗೆದ್ದರೂ ಕೂಡ ಪದಕ ಪಟ್ಟಿಯಲ್ಲಿ ಪಾಕ್​ಗಿಂತ ಕೆಳಗಿರಲು ಕಾರಣ ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯಲ್ಲಿರುವ ನಿಯಮ.

ನಿಯಮ ಏನು ಹೇಳುತ್ತೆ?


ಹೌದು, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಆಯ್ಕೆ ಮಾಡಿಕೊಂಡ ರ‍್ಯಾಂಕಿಂಗ್ ವಿಧಾನದ ಪ್ರಕಾರ ಒಲಿಂಪಿಕ್ ಕೂಟದಲ್ಲಿ ಆಯಾ ದೇಶ ಗೆದ್ದ ಚಿನ್ನದ ಪದಕದ ಆಧಾರದಲ್ಲಿ ರ‍್ಯಾಂಕಿಂಗ್ ನೀಡಲಾಗುತ್ತದೆ. ಉದಾಹರಣೆಗೆ ಒಂದು ದೇಶ 10 ಬೆಳ್ಳಿ ಅಥವಾ ಕಂಚಿನ ಪದಕ ಪಡೆದರೂ, ಏಕೈಕ ಚಿನ್ನದ ಪದಕ ಪಡೆದ ರಾಷ್ಟ್ರಕ್ಕಿಂತ ಕೆಳಗಿರುತ್ತದೆ. ಎರಡು ದೇಶಗಳು ಸಮಾನ ಸಂಖ್ಯೆಯ ಚಿನ್ನದ ಪದಕ ಗೆದ್ದಲ್ಲಿ, ಬೆಳ್ಳಿ ಹಾಗೂ ಕಂಚಿನ ಪದಕಗಳು ಗಣನೆಗೆ ಬರುತ್ತವೆ. ಒಟ್ಟಾರೆ ಚಿನ್ನದ ಪದಕ ಗೆದ್ದ ಆಧಾರದಲ್ಲಿ ಅಂಕಟ್ಟಿಯಲ್ಲಿ ಸ್ಥಾನ ನಿರ್ಧಾರವಾಗುತ್ತದೆ. ಹೀಗಾಗಿ ಭಾರತ ಪಾಕಿಸ್ತಾನಕ್ಕಿಂತ ಕೆಳಗಿನ ಸ್ಥಾನ ಪಡೆದಿದೆ.

ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರ ಒಲಿಂಪಿಕ್ ಅನರ್ಹತೆ ಮತ್ತು ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಜಂಟಿ ಬೆಳ್ಳಿ ಪದಕಕ್ಕಾಗಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್)ಗೆ ಸಲ್ಲಿಸಿದ ಮನವಿಯ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್​​ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಪದಕಗಳನ್ನು ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಬಾಕ್​ ಹೇಳಿದ್ದಾರೆ. ಆದಾಗ್ಯೂ, ಚಿನ್ನದ ಪದಕದ ಪಂದ್ಯಕ್ಕೆ ಮುಂಚಿತವಾಗಿ ಅನರ್ಹಗೊಂಡ ಭಾರತೀಯ ಕುಸ್ತಿಪಟುವಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇನೆ ಎಂಬುದಾಗಿ ನುಡಿದಿದ್ದಾರೆ.

ಪ್ಯಾರಿಸ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಥಾಮಸ್, ಸಿಎಎಸ್ ನಿರ್ಧಾರಕ್ಕೆ ಐಒಸಿ ಬದ್ಧವಾಗಿರುತ್ತದೆ ಎಂದು ಹೇಳಿದರು. ಎರಡು ಬೆಳ್ಳಿ ಪದಕಗಳನ್ನು ನೀಡುವುದು ತಪ್ಪು ಎಂದರು.

Continue Reading

ಕ್ರೀಡೆ

Indian Men’s Hockey Team: ತವರಿಗೆ ಮರಳಿದ ಕಂಚು ವಿಜೇತ ಭಾರತ ಹಾಕಿ ತಂಡ; ದಿಲ್ಲಿಯಲ್ಲಿ ಭರ್ಜರಿ ಸ್ವಾಗತ

Indian Men’s Hockey Team: ಶನಿವಾರ ಬೆಳಗ್ಗೆ ನವದೆಹಲಿಗೆ ಬಂದ ಹಾಕಿ ತಂಡ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಕ್ರೀಡಾಭಿಮಾನಿಗಳು ಆಟಗಾರರಿಗೆ ಹಾರ, ಸಿಹಿ ತಿನಿಸಿ ಅದ್ಧೂರಿ ಸ್ವಾಗತ ಕೋರಿ ಸಂಭ್ರಮಿಸಿದರು.

VISTARANEWS.COM


on

Indian Men’s Hockey Team
Koo

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದ ಭಾರತ ಪುರುಷರ ಹಾಕಿ(Indian Men’s Hockey Team) ತಂಡ, ಪ್ಯಾರಿಸ್‌ನಲ್ಲಿ(paris olympics) ಮತ್ತೊಂದು ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಸತತ 2ನೇ ಕಂಚು ಗೆದ್ದ ಸಾಧನೆ ಮಾಡಿತ್ತು. ಗುರುವಾರ ನಡೆದಿದ್ದ ಕಂಚಿನ ಪದಕ ಸ್ಪರ್ಧೆಯಲ್ಲಿ ಸ್ಪೇನ್ ವಿರುದ್ಧ 2-1 ಗೋಲುಗಳಿಂದ ಗೆದ್ದು ಕಂಚು ತನ್ನದಾಗಿಸಿಕೊಂಡಿತು. ಇದೀಗ ಹಾಕಿ ತಂಡ ತವರಿಗೆ ಬಂದಿಳಿದಿದೆ.

ಶನಿವಾರ ಬೆಳಗ್ಗೆ ನವದೆಹಲಿಗೆ ಬಂದ ಹಾಕಿ ತಂಡ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಕ್ರೀಡಾಭಿಮಾನಿಗಳು ಆಟಗಾರರಿಗೆ ಹಾರ, ಸಿಹಿ ತಿನಿಸಿ ಅದ್ಧೂರಿ ಸ್ವಾಗತ ಕೋರಿ ಸಂಭ್ರಮಿಸಿದರು. ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ಹಾಕಿ ತಂಡ 52 ವರ್ಷಗಳ ಬಳಿಕ ಸತತ 2 ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿತ್ತು. ಭಾರತ ಈ ಮೊದಲು 1968ರ ಮೆಕ್ಸಿಕೋ ಹಾಗೂ 1972ರ ಮ್ಯೂನಿಚ್‌ ಒಲಿಂಪಿಕ್ಸ್‌ಗಳಲ್ಲಿ ಸತತವಾಗಿ 2 ಕಂಚು ಗೆದ್ದಿತ್ತು. 2021ರ ಟೋಕಿಯೋ ಹಾಗೂ ಈ ಬಾರಿ ಭಾರತ ಸತತವಾಗಿ ಕಂಚು ಗೆದ್ದಿದೆ.

ಹಾಕಿಗೆ ವಿದಾಯ ಹೇಳಿರುವ ಗೋಲ್​ ಕೀಪರ್​ ಪಿ.ಆರ್ ಶ್ರೀಜೇಶ್(PR Sreejesh)​ ಮಾತ್ರ ಪ್ಯಾರಿಸ್​ನಲ್ಲಿಯೇ ಉಳಿದಿದ್ದಾರೆ. ಸಮಾರೋಪ ಸಮಾರಂಭ(Paris Olympics 2024 Closing Ceremony)ದಲ್ಲಿ ಭಾರದ ಧ್ವಜಧಾರಿಯಾಗಿ( India’s Co-Flag Bearer) ಆಯ್ಕೆಯಾದ ಕಾರಣ ಅವರು ಈ ಸಮಾರಂಭ ಮುಗಿಸಿ ತವರಿಗೆ ಮರಳಲಿದ್ದಾರೆ. ಭಾನುವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದೆ.

ಇದನ್ನೂ ಓದಿ Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತಕ್ಕೆ ಯಾವ್ಯಾವ ಸ್ಪರ್ಧೆಗಳಿವೆ? ಇಲ್ಲಿದೆ ಎಲ್ಲ ವಿವರ

ಪ್ಯಾರಿಸ್ ಒಲಿಂಪಿಕ್ಸ್​ (Paris Olympics 2024) ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಶನಿವಾರ 10ನೇ ದಿನ ಸ್ಪರ್ಧೆಗಳು ನಡೆಯಲಿವೆ. ಆ ದಿನ ಭಾರತಕ್ಕೆ ಹೆಚ್ಚಿನ ಸ್ಪರ್ಧೆಗಳು ಇಲ್ಲ. ಗಾಲ್ಫ್​ ಹಾಗೂ ಫ್ರೀಸ್ಟೈಲ್​ ಕುಸ್ತಿ ಬಿಟ್ಟರೆ ಬೇರೆ ಯಾವುದೇ ಸ್ಪರ್ಧೆಯಲ್ಲಿ ಭಾರತೀಯರು ಇಲ್ಲ.

ಶುಕ್ರವಾರ ಪುರುಷರ ಕುಸ್ತಿಯ 57 ಕೆ.ಜಿ ವಿಭಾಗದಲ್ಲಿ ಅಮನ್ ಗೆದ್ದ ಕಂಚಿನ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೆ ಏರಿದೆ. ಅದರಲ್ಲಿ 5 ಕಂಚಿನ ಪದಕವಾದರೆ ಒಂದು ಬೆಳ್ಳಿಯ ಪದಕವಾಗಿದೆ. ಬೆಳ್ಳಿಯನ್ನು ನೀರಜ್​ ಗೆದ್ದಿದ್ದರೆ, ಶೂಟರ್​​ ಮನು ಭಾಕರ್ ಎರಡು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಅದರಲ್ಲೊಂದು ಮಿಶ್ರ ತಂಡದಲ್ಲಿ ಸರಬ್​ಜೋತ್ ಸಿಂಗ್​ ಜತೆಗೆ. ಪುರುಷರ ಶೂಟಿಂಗ್​ನಲ್ಲಿ ಸ್ವಪ್ನಿಲ್ ಕುಸಾಳೆ ಮತ್ತೊಂದು ಪದಕ ಗೆದ್ದಿದ್ದರು. ಮತ್ತೊಂದು ಕಂಚಿನ ಪದಕ ಹಾಕಿ ತಂಡದ ಮೂಲಕ ದೊರಕಿದೆ. ಇದೀಗ ಅಮನ್​ ಒಂದು ಪದಕ ಗೆದ್ದಿದ್ದಾರೆ.

ಆಗಸ್ಟ್​​ 10ರಂದು ಭಾರತದ ಸ್ಪರ್ಧೆಗಳು ಈ ರೀತಿ ಇವೆ

ಗಾಲ್ಫ್ 12:30ಕ್ಕೆ: ಮಹಿಳಾ ರೌಂಡ್ 4 (ಪದಕದ ಸ್ಪರ್ಧೆ)

ಕುಸ್ತಿ 03:00: ಮಹಿಳಾ ಫ್ರೀಸ್ಟೈಲ್ 76 ಕೆಜಿ 1/8 ಫೈನಲ್. ರೀತಿಕಾ ಹೂಡಾ

Continue Reading

ಕ್ರೀಡೆ

IPL 2025: ಫ್ರಾಂಚೈಸಿಗಳ ಒತ್ತಾಯಕ್ಕೆ ಮಣಿದು ಇಷ್ಟು ಆಟಗಾರರ ರಿಟೇನ್​ಗೆ ಅವಕಾಶ ನೀಡಲಿದೆ ಬಿಸಿಸಿಐ

IPL 2025: 2022ರಲ್ಲಿ 4 ಆಟಗಾರರ ರಿಟೇನ್​ ಅವಕಾಶ ನೀಡಿತ್ತು. ಈ ಬಾರಿ ಫ್ರಾಂಚೈಸಿಗಳು 8 ಆಟಗಾರರನ್ನು ರೀಟೆನ್​ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿತ್ತು. ಇದೀಗ ಬಿಸಿಸಿಐ 6 ಆಟಗಾರರ ರಿಟೇನ್​ಗೆ ಅವಕಾಶ ಕಲ್ಪಿಸಿದೆ ಎನ್ನಲಾಗಿದೆ.

VISTARANEWS.COM


on

IPL 2025
Koo

ಮುಂಬಯಿ: ಫ್ರಾಂಚೈಸಿಗಳ ಒತ್ತಾಯಕ್ಕೆ ಮಣಿದು ಕೊನೆಗೂ ಬಿಸಿಸಿಐ(BCCI) ಮುಂದಿನ ಐಪಿಎಲ್(IPL 2025)​ ಮೆಗಾ(mega auction) ಹರಾಚಿನಲ್ಲಿ ಪ್ರತಿ ತಂಡಕ್ಕೆ ಗರಿಷ್ಠ 4ರ ಬದಲಾಗಿ 6 ಆಟಗಾರರನ್ನು ರಿಟೇನ್​ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ ಎಂದು ವರದಿಯಾಗಿದೆ. ಬಿಸಿಸಿಐ ಈ ಮುನ್ನ ಗರಿಷ್ಠ 4 ಆಟಗಾರರ ರಿಟೇನ್​ಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿತ್ತು. ಅಲ್ಲದೆ 2022ರಲ್ಲಿಯೂ 4 ಆಟಗಾರರ ರಿಟೇನ್​ ಅವಕಾಶ ನೀಡಿತ್ತು. ಈ ಬಾರಿ ಫ್ರಾಂಚೈಸಿಗಳು 8 ಆಟಗಾರರನ್ನು ರೀಟೆನ್​ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿತ್ತು. ಇದೀಗ ಬಿಸಿಸಿಐ 6 ಆಟಗಾರರ ರಿಟೇನ್​ಗೆ ಅವಕಾಶ ಕಲ್ಪಿಸಿದೆ ಎನ್ನಲಾಗಿದೆ.

ಇತ್ತೀಚೆಗೆ ಮುಂಬಯಿಯಲ್ಲಿ ನಡೆದಿದ್ದ ಮೆಗಾ ಹರಾಜು ಕುರಿತ ಸಭೆಯಲ್ಲಿ ಕೆಕೆಆರ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಮಾಲಿಕರು ಮೆಗಾ ಹರಾಜು ಪ್ರಕ್ರಿಯೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಕೆಲ ಫ್ರಾಂಚೈಸಿಗಳು ಹರಾಜಿನಲ್ಲಿ ಖರೀದಿಸಿದ ವಿದೇಶಿ ಆಟಗಾರ ಅನಗತ್ಯ ಕಾರಣ ನೀಡಿ ತಂಡದ ಪರ ಆಡದೇ ಅರ್ಧದಲ್ಲೇ ಕೈಕೊಟ್ಟರೆ ಇಂತಹ ವಿದೇಶೀ ಆಟಗಾರರಿಗೆ 2 ವರ್ಷ ನಿಷೇಧ ವಿಧಿಸುವಂತೆ ಬಿಸಿಸಿಐಗೆ ಒತ್ತಡ ಹೇರಿವೆ ಎಂದು ವರದಿಯಾಗಿದೆ. ಬಿಸಿಸಿಐ ಕೂಡ ಇದಕ್ಕೆ ಸಮ್ಮತಿ ಸೂಚಿಸಿದೆ ಎಂದು ತಿಳಿದುಬಂದಿದೆ. ಈ ಬಾರಿ ರೈಟ್​ ಟು ಮ್ಯಾಚ್​(ಆರ್​ಟಿಎಂ) ಕಾರ್ಡ್​ ಪದ್ಧತಿಯನ್ನೂ ಮತ್ತೆ ತರಲಾಗುವುದು ಎಂದು ವರದಿಯಾಗಿದೆ.

ಇದನ್ನೂ ಓದಿ IPL 2025: ರಾಜಸ್ಥಾನ್​ ರಾಯಲ್ಸ್​ಗೆ ರಾಹುಲ್​ ದ್ರಾವಿಡ್​ ನೂತನ ಕೋಚ್​?

ಏನಿದು ಆರ್​ಟಿಎಂ ಕಾರ್ಡ್​?


ಆರ್​ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ. ಐಪಿಎಲ್​ನಲ್ಲಿ ಇದುವರೆಗೆ ವಿರಾಟ್​ ಕೊಹ್ಲಿ (ಆರ್​ಸಿಬಿ), ಜಸ್​ಪ್ರೀತ್​ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.

ಐಪಿಎಲ್ ಮೆಗಾ ಹರಾಜನ್ನು ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವಂತೆಯೂ ಕೆಲವು ಫ್ರಾಂಚೈಸಿಗಳು ಮನವಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಒಂದೊಮ್ಮೆ ಈ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದರೆ. ಮುಂದಿನ ಮೆಗಾ ಹರಾಜು 2029ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ. ಈ ತಿಂಗಳಾಂತ್ಯದಲ್ಲಿ ಐಪಿಎಲ್ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿ ಮೆಗಾ ಹರಾಜಿನ ಅಂತಿಮ ರೂಪುರೇಷೆಗಳ ಬಗ್ಗೆ ಚರ್ಚಿಸಲಿದೆ ಎಂದು ವರದಿಯಾಗಿದೆ

Continue Reading

ಕ್ರೀಡೆ

Aman Sehrawat: 10 ಗಂಟೆ ಅವಧಿಯಲ್ಲಿ 4.6 ಕೆಜಿ ತೂಕ ಇಳಿಸಿ ಕಂಚು ಗೆದ್ದ ಅಮನ್​ ಸೆಹ್ರಾವತ್; ಹೇಗಿತ್ತು ಅವರ ಪರಿಶ್ರಮ?

Aman Sehrawat: ಅಮನ್​ ಅವರು ಸೆಮಿಫೈನಲ್​ ಪಂದ್ಯದಲ್ಲಿ ಸೋತ ಬಳಿಕ 61 ಕೆಜಿ ತೂಕ ಹೊಂದಿದ್ದರಂತೆ. ಈ ವೇಳೆ ಅವರ ಕೋಚ್​ಗಳ ನೆರವಿನಿಂದ ಸತತ 10 ಗಂಟೆಗಳ ಕಾಲ ಕಸರತ್ತು ನಡೆಸಿ ಬರೋಬ್ಬರಿ 4.6 ಕೆಜಿ ತೂಕ ಇಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

VISTARANEWS.COM


on

Aman Sehrawa
Koo

ಪ್ಯಾರಿಸ್​: ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಮಹಿಳಾ ಕುಸ್ತಿಪಟು ವಿನೇಶ್‌ ಪೋಗಟ್‌(vinesh phogat) ಫೈನಲ್​ ಪಂದ್ಯದಿಂದ ಅನರ್ಹಗೊಂಡು ಪದಕ ವಂಚಿತರಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಇದರ ಬೆನ್ನಲ್ಲೇ ಶುಕ್ರವಾರ ನಡೆದಿದ್ದ 57 ಕೆಜಿ ವಿಭಾಗದ ಪುರುಷರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಅಮನ್​ ಸೆಹ್ರಾವತ್(Aman Sehrawat)​ ಕೂಡ ಅನರ್ಹಗೊಳ್ಳುವ ಭೀತಿಗೆ ಎದುರಾಗಿದ್ದರಂತೆ. ಹೌದು, ಪಂದ್ಯಕ್ಕೂ ಮುನ್ನ ಅಮನ್​ ಕೇವಲ 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿ ಕಂಚಿನ ಪದಕ ಗೆದ್ದ ರೋಚಕ ಸಂಗತಿಯೊಂದನ್ನು ಅವರ ಕೋಚ್​ ಬಹಿರಂಗಪಡಿಸಿದ್ದಾರೆ.

ಹೌದು, ಅಮನ್​ ಅವರು ಸೆಮಿಫೈನಲ್​ ಪಂದ್ಯದಲ್ಲಿ ಸೋತ ಬಳಿಕ 61 ಕೆಜಿ ತೂಕ ಹೊಂದಿದ್ದರಂತೆ. ಈ ವೇಳೆ ಅವರ ಕೋಚ್​ಗಳ ನೆರವಿನಿಂದ ಸತತ 10 ಗಂಟೆಗಳ ಕಾಲ ಕಸರತ್ತು ನಡೆಸಿ ಬರೋಬ್ಬರಿ 4.6 ಕೆಜಿ ತೂಕ ಇಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಹೇಗಿತ್ತು ಅಮನ್​ ಕಸರತ್ತು?


ಕೋಚ್​ ವೀರೇಂದ್ರ ದಹಿಯಾ(virender dahiya coach) ನೀಡಿದ ಮಾಹಿತಿ ಪ್ರಕಾರ, ಅಮನ್​ ಗುರುವಾರ ಸಂಜೆ, ಅಂದರೆ ಸೆಮಿಫೈನಲ್​ ಮುಕ್ತಾಯದ ಬಳಿಕ 61.5 ಕೆಜಿ ತೂಕವನ್ನು ಹೊಂದಿದ್ದರು. ನಿಗದಿತ ಮಿತಿಗಿಂತ ನಿಖರವಾಗಿ 4.5 ಕಿಲೋಗ್ರಾಂಗಳಷ್ಟು ಹೆಚ್ಚು ತೂಕ ಹೊಂದಿದ್ದರು. ಈಗಾಗಲೇ ಕುಸ್ತಿಯಲ್ಲಿ ಒಂದು ಪದಕ ಕಳೆದುಕೊಂಡು ಆಘಾತದಲ್ಲಿದ್ದ ಕಾರಣ ಯಾವುದೇ ಕಾರಣಕ್ಕೂ ನಾವು ಮತ್ತೊಂದು ಪದಕ ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಆರು ಸದಸ್ಯರ ಕುಸ್ತಿ ತಂಡದ ಹಿರಿಯ ಭಾರತೀಯ ತರಬೇತುದಾರರಾದ ಜಗಮಂದರ್ ಸಿಂಗ್ ಜತೆಗೂಡಿ ಅಮನ್​ಗೆ ವ್ಯಾಯಾಮ ಆರಂಭಿಸಲಾಯಿತು.

ತಮ್ಮ ಬಳಿ ಕೇವಲ 10 ಗಂಟೆ ಮಾತ್ರ ಉಳಿದಿತ್ತು. ಆರಂಭದಲ್ಲಿ ಅಮನ್​ಗೆ 1 ಗಂಟೆ ಟ್ರೆಡ್‌ಮಿಲ್‌ನಲ್ಲಿ ನಾನ್‌ಸ್ಟಾಪ್‌ ಓಟ ಅಭ್ಯಾಸ ಮಾಡಿಸಲಾಯಿತು. ಇದಾದ ಬಳಿಕ 5 ನಿಮಿಷ ವಿರಾಮ ನೀಡಿ ಬಳಿಕ ಸತತ ಒಂದೂವರೆ ಗಂಟೆ ಮ್ಯಾಚ್‌ ಸೆಷನ್‌ ಅಭ್ಯಾಸ ಮಾಡಿಸಿ 30 ನಿಮಿಷಗಳ ಕಾಲ ವಿರಾಮ ನೀಡಲಾಯಿತು. ಬಳಿಕ ಬಿಸಿ ನೀರಿನ ಸ್ನಾನ ಮಾಡಿಸಲಾಯಿತು. ಎಲ್ಲ ವ್ಯಾಯಮ ಮುಗಿದ ಬಳಿಕ ಅವರು 3.6 ಕಿಲೋಗಳನ್ನು ಕಳೆದುಕೊಂಡರು.

ಇದನ್ನೂ ಓದಿ Aman Sehrawat: ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಅಮನ್​ ಇಂದು ದೇಶಕ್ಕಾಗಿ ಕಂಚು ಗೆದ್ದ ಸಾಧಕ

ಅಂತಿಮವಾಗಿ ಮಸಾಜ್ ಮಾಡಿ, ನಂತರ ಲಘು ಜಾಗಿಂಗ್ ಮತ್ತು 15 ನಿಮಿಷಗಳ ರನ್ನಿಂಗ್ ಸೆಷನ್ ಮಾಡಲಾಯಿತು. ಇದಾದ ಬಳಿಕ ಬೆಳಗಿನ ಜಾವ 4:30 ರ ಹೊತ್ತಿಗೆ, ಅವರ ತೂಕವು 56.9 ಕಿಲೋಗಳಿಗೆ ಕಡಿಮೆಯಾಯಿತು, ಅನುಮತಿಸುವ ಮಿತಿಗಿಂತ 100 ಗ್ರಾಂ ಕಡಿಮೆಯೇ ಆಗಿತ್ತು. ಬಳಿಕ ನಾವು ನಿಟ್ಟುಸಿರುವ ಬಿಟ್ಟೆವು ಎಂದು ಕೋಚ್​ ವೀರೇಂದ್ರ ದಹಿಯಾ ಹೇಳಿದ್ದಾರೆ.

ಕೇವಲ ನೀರು ಸೇವನೆ


ಅಮನ್‌ಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡಲಿಲ್ಲ. ಜೇನುತುಪ್ಪ ಬೆರಸಿದ ಉಗುರುಬೆಚ್ಚಗಿನ ನೀರು ಹಾಗೂ ಸ್ವಲ್ಪ ಕಾಫಿ ಕುಡಿಯಲು ಮಾತ್ರ ಅವಕಾಶ ನೀಡಲಾಗಿತ್ತು. ಅಲ್ಲದೇ ಕಂಚಿನ ಪದಕದ ಪಂದ್ಯ ಮುಗಿಯುವವರೆಗೂ ಅಮನ್‌ ನಿದ್ರೆಗೆ ಜಾರಲೇ ಇಲ್ಲ ಎಂದು ಕೋಚ್‌ಗಳು ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ.

Continue Reading
Advertisement
love jihad mohammad ishphaq vismaya
ಕರ್ನಾಟಕ6 mins ago

Love Jihad: ಕೇರಳದ ಯುವಕನನ್ನು ಮದುವೆಯಾದ ಮಂಗಳೂರಿನ ಹಿಂದೂ ಯುವತಿ; ಹಿಂದೂ ಸಂಘಟನೆಗಳ ಹೋರಾಟ ನಿಷ್ಫಲ

Heart attack
ಉಡುಪಿ12 mins ago

Heart Attack : ಮಲಗಿದ್ದಲೇ ಹೃದಯ ಸ್ತಬ್ಧ! ನಾಲ್ಕೈದು ದಿನದ ಬಳಿಕ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

Paris Olympics
ಪ್ರಮುಖ ಸುದ್ದಿ24 mins ago

Paris Olympics Medal Table: ಪಾಕಿಸ್ತಾನ 1 ಪದಕ ಗೆದ್ದರೂ ಪದಕ ಪಟ್ಟಿಯಲ್ಲಿ ಮೇಲೆ, ಭಾರತ 6 ಪದಕ ಗೆದ್ದರೂ ಕೆಳಗೆ ಏಕೆ?

John Abraham slams actors for endorsing paan masala
ಬಾಲಿವುಡ್33 mins ago

John Abraham : ನಾನು ಸಾವನ್ನು ಮಾರಲ್ಲ ಎಂದು ಶಾರುಖ್ ಖಾನ್, ಅಜಯ್ ದೇವಗನ್‌ಗೆ ಪರೋಕ್ಷವಾಗಿ ತಿರುಗೇಟು ಕೊಟ್ಟ ಜಾನ್ ಅಬ್ರಹಾಂ!

ಚಿನ್ನದ ದರ41 mins ago

Gold Rate Today: ಮತ್ತೆ ಏರಿಕೆಯಾದ ಚಿನ್ನದ ಬೆಲೆ; ಇಂದಿನ ದರ ಚೆಕ್‌ ಮಾಡಿ

Viral Video
Latest50 mins ago

Viral Video: ವೇಗವಾಗಿ ಬಂದು ಅಪ್ಪಳಿಸಿದ ಸ್ಕಾರ್ಪಿಯೋ; ಒಂದೇ ಕುಟುಂಬದ ಮೂವರು ಪಾರಾಗಿದ್ದೇ ಅಚ್ಚರಿ!

anganawadi worker
ಕೊಪ್ಪಳ56 mins ago

Anganawadi workers: ಮಕ್ಕಳ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನೇ ಎಗರಿಸುತ್ತಿದ್ದ ಅಂಗನವಾಡಿ ಶಿಕ್ಷಕಿ, ಸಹಾಯಕಿ ವಜಾ!

Hindenburg
ವಾಣಿಜ್ಯ1 hour ago

Hindenburg: ಶೀಘ್ರದಲ್ಲೇ ಭಾರತದಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಯಾಗಲಿದೆ; ಹೊಸದೊಂದು ಬಾಂಬ್‌ ಸಿಡಿಸಿದ ಹಿಂಡನ್‌ಬರ್ಗ್‌

Indian Men’s Hockey Team
ಕ್ರೀಡೆ1 hour ago

Indian Men’s Hockey Team: ತವರಿಗೆ ಮರಳಿದ ಕಂಚು ವಿಜೇತ ಭಾರತ ಹಾಕಿ ತಂಡ; ದಿಲ್ಲಿಯಲ್ಲಿ ಭರ್ಜರಿ ಸ್ವಾಗತ

Road Accident
ರಾಯಚೂರು1 hour ago

Road Accident : ಜವರಾಯನಂತೆ ಬಂದ ಟಾಟಾಏಸ್‌ ಚಾಲಕ; ಪಾದಯಾತ್ರೆ ಹೊರಟಿದ್ದ ತಾಯಿ ದುರ್ಮರಣ, ಮಗಳು ಗಂಭೀರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌