Viral Video: ಗೆದ್ದದ್ದು ಆಫ್ಘನ್​, ಕುಣಿದು ಕುಪ್ಪಳಿಸಿದ್ದು ಇರ್ಫಾನ್​ ಪಠಾಣ್​ - Vistara News

ಕ್ರಿಕೆಟ್

Viral Video: ಗೆದ್ದದ್ದು ಆಫ್ಘನ್​, ಕುಣಿದು ಕುಪ್ಪಳಿಸಿದ್ದು ಇರ್ಫಾನ್​ ಪಠಾಣ್​

ಪಾಕಿಸ್ತಾನ ಸೋತ ಖುಷಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್ ಅವರು ಆಫ್ಘನ್​ ಆಟಗಾರ ಜತೆ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

VISTARANEWS.COM


on

One of the Best moments in this WC
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಸೋಮವಾರ ನಡೆದ ವಿಶ್ವಕಪ್​ನ 22ನೇ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡ ದುರ್ಬಲ ಅಫಘಾನಿಸ್ತಾನ ತಂಡದ ವಿರುದ್ಧ 8 ವಿಕೆಟ್​ಗಳಿಂದ ಹೀನಾಯವಾಗಿ ಸೋತು ಅವಮಾನಕ್ಕೆ ಈಡಾಗಿದೆ. ಪಾಕಿಸ್ತಾನದ ಸೋಲನ್ನು ಕೇವಲ ಆಫ್ಘನ್​ ಮಾತ್ರವಲ್ಲ ಭಾರತೀಯರು ಸಂಭ್ರಮಿಸಿದ್ದಾರೆ. ಹೌದು, ಪಾಕಿಸ್ತಾನ ಸೋತ ಖುಷಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್ ಅವರು ಆಫ್ಘನ್​ ಆಟಗಾರ ಜತೆ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗುತ್ತಿದೆ.

​ಅಫ್ಘಾನಿಸ್ತಾನ ತಂಡದ ಆಟಗಾರರು ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ಮಾಡಲು ಮೈದಾನಕ್ಕೆ ಬರುತ್ತಿದ್ದ ವೇಳೆ ನೇರವಾಗಿ ಆಟಗಾರರ ಬಳಿ ಬಂದ ಇರ್ಫಾನ್​ ಪಠಾಣ್​ ಅವರು ಕುಣಿಯಲು ಆರಂಭಿಸಿದರು. ಅಲ್ಲದೆ ಆಫ್ಘನ್​ ಆಟಗಾರರು ಕುಣಿಯುವಂತೆ ಪ್ರೋತ್ಸಾಹಿಸಿದರು. ಈ ವೇಳೆ ರಶೀದ್​ ಖಾನ್​ ಅವರು ಇರ್ಫಾನ್ ಜತೆ ಹೆಜ್ಜೆ ಹಾಕಿದರು. ಬಳಿಕ ಇಬ್ಬರು ತಬ್ಬಿಕೊಂಡು ಧನ್ಯವಾದ ತಿಳಿಸಿದರು. ಇಷ್ಟಕ್ಕೇ ಸುಮ್ಮನಾಗದ ಇರ್ಫಾನ್‌ ಪಠಾಣ್‌ ತಮ್ಮ ಸಾಮಾಜಿಕ ಜಾಲತಾಣದವಾದ ಟ್ವಿಟರ್​ ಎಕ್ಸ್​ನಲ್ಲಿ “ಬಾಬರ್ ನಾಯಕತ್ವವು ವಿಶ್ವಕಪ್​ನಲ್ಲಿ ಅದ್ಭುತ ಎಂಬಂತಿಲ್ಲ. ಅವರಲ್ಲಿ ಯಾವುದೇ ನಾಯತ್ವದ ಗುಣ ತೋರುತಿಲ್ಲ” ಗೆಲುವು ಕಂಡ ಆಫ್ಘನ್​ ಆಟಗಾರರಿಗೆ ಅಭಿನಂದನೆಗಳು ಎಂದಿದ್ದಾರೆ. ಇರ್ಫಾನ್‌ ಪಠಾಣ್‌ ಅವರು ಸ್ಟಾರ್ ಸ್ಪೋರ್ಟ್ಸ್​ನಲ್ಲಿ ಕ್ರಿಕೆಟ್​ ಸಂದರ್ಶನ ಮತ್ತು ಕಾಮೆಂಟ್ರಿಯನ್ನು ಮಾಡುತ್ತಿದ್ದಾರೆ.

ಇರ್ಫಾನ್​ ಪಠಾಣ್​ ಡ್ಯಾನ್ಸ್​ನ ವಿಡಿಯೊ

ಚೆನ್ನೈನ ಚೆಪಾಕ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟ್​ ಮಾಡಲು ಮುಂದಾಯಿತು. ಅಂತೆಯೇ ಆಫ್ಘನ್​ ಬೌಲರ್​ಗಳೆದುರು ವೈಫಲ್ಯ ಕಂಡು ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗೆ 282 ರನ್​ ಬಾರಿಸಿತು. ಪ್ರತಿಯಾಗಿ ಆಡಿದ ಅಪಘಾನಿಸ್ತಾನ ತಂಡ ಇನ್ನೂ ಆರು ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್​ ನಷ್ಟಕ್ಕೆ 286 ರನ್ ಬಾರಿಸಿ ಎಂಟು ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ಏಕ ದಿನ ಕ್ರಿಕೆಟ್​ ಮಾದರಿಯಲ್ಲಿ ಪಾಕ್ ವಿರುದ್ಧ ಅಫಘಾನಿಸ್ತಾನ ತಂಡ ದಾಖಲಿಸಿದ ಮೊದಲ ವಿಜಯವಾಗಿದೆ.

ಇದನ್ನೂ ಓದಿ Team India : ಇನ್ನೆರಡು ದಿನ ಧರ್ಮಶಾಲಾದಲ್ಲಿ ಉಳಿಯುವುದಾಗಿ ಹೇಳಿದ ಟೀಮ್ ಇಂಡಿಯಾ

ಅದ್ಭುತ ಪ್ರದರ್ಶನ

ಸ್ಪರ್ಧಾತ್ಮಕ ಗುರಿಯನ್ನು ಪಡೆದಿದ್ದ ಅಫಘಾನಿಸ್ತಾನ ತಂಡದ ಬ್ಯಾಟರ್​ಗಳು ತಮ್ಮ ಅದ್ಭುತ ಬ್ಯಾಟಿಂಗ್ ಕೌಶಲವನ್ನು ಪ್ರದರ್ಶಿಸಿದರು. ಉತೃಷ್ಟ ತಂಡಗಳು ನೀಡುವ ಪ್ರದರ್ಶನದಂತಿತ್ತು ಆಫ್ಘನ್ ಆಟಗಾರರ ಆಟ. ಆರಂಭಿಕ ಜೋಡಿಯಾಗಿರುವ ರಹ್ಮನುಲ್ಲಾ ಗುರ್ಬಜ್​ (65) ಹಾಗೂ ಇಬ್ರಾಹಿಂ ಜದ್ರಾನ್​ (87) ಮೊದಲ ವಿಕೆಟ್​ಗೆ 130 ರನ್ ಬಾರಿಸಿ ಮಿಂಚಿದರು. ನಂತರದ ವಿಕೆಟ್​ಗೆ ಇನ್ನೂ 60 ರನ್ ಸೇರ್ಪಡೆಗೊಂಡಿತು. ಮೂರನೇ ವಿಕೆಟ್​ಗೆ 96 ರನ್​ಗಳು ಸೇರ್ಪಡೆಗೊಂಡವು. ಮೂರನೇ ಕ್ರಮಾಂಕದಲ್ಲಿ ಆಡಿದ ರಹ್ಮತ್ ಶಾ (77) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ನಾಯಕ ಹಶ್ಮತುಲ್ಲಾ ಶಾಹಿದಿ 48 ರನ್ ಬಾರಿಸಿದರು. ಅಂದಹಾಗೆ ಮೊದಲ ಮೂವರು ಬ್ಯಾಟರ್​​ಗಳು ಅರ್ಧ ಶತಕ ಬಾರಿಸಿ ಮಿಂಚಿದರೆ, ಹಶ್ಮತುಲ್ಲಾ 2 ರನ್​ಗಳ ಕೊರತೆಯಿಂದ ಅರ್ಧ ಶತಕದ ಅವಕಾಶ ತಪ್ಪಿಸಿಕೊಂಡರು. ಇದು ಏಕ ದಿನ ಮಾದರಿಯಲ್ಲಿ ಅಫಘಾನಿಸ್ತಾನ ತಂಡದ ಅಮೋಘ ಪ್ರದರ್ಶನ ಎನಿಸಿಕೊಳ್ಳಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

India T20I schedule: 2026ರ ಟಿ20 ವಿಶ್ವಕಪ್​ಗೂ ಮುನ್ನ ಭಾರತ ಆಡಲಿದೆ 34 ಟಿ20 ಪಂದ್ಯ

India T20I schedule: ಮುಂದಿನ ಟಿ20 ವಿಶ್ವಕಪ್​ಗೂ ಮುನ್ನ ಮುಂದಿನ 2 ವರ್ಷಗಳ ಭಾರತದ ಟಿ20 ಸರಣಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. 2026ರಲ್ಲಿ ನಡೆಯುವ ಟಿ20 ವಿಶ್ವಕಪ್​ ಟೂರ್ನಿ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

VISTARANEWS.COM


on

India T20I schedule
Koo

ಮುಂಬಯಿ: 2026ರಲ್ಲಿ ನಡೆಯುವ ಟಿ20 ವಿಶ್ವಕಪ್(t20 world cup 2026)​ ಟೂರ್ನಿಗೂ ಮುನ್ನ ಹಾಲಿ ಚಾಂಪಿಯನ್​ ಭಾರತ ತಂಡ(Team India) ಬರೋಬ್ಬರಿ 34 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು(team india upcoming t20 series) ಆಡಲಿದೆ. ಇದರಲ್ಲಿ ಒಟ್ಟು 8 ಸರಣಿಗಳು(India T20I schedule) ಸೇರಿವೆ. ತಲಾ ನಾಲ್ಕು ಸರಣಿಗಳು ವಿದೇಶದಲ್ಲಿ ಮತ್ತು ತವರಿನಲ್ಲಿ ಆಡಲಿದೆ.

ಕಳೆದ ಶನಿವಾರ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್​ ಅಂತರದಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಫೈನಲ್​ ನಡೆದು ಒಂದು ವಾರ ಆಗುವ ಮುನ್ನವೇ ಮುಂದಿನ ಟಿ20 ವಿಶ್ವಕಪ್​ಗೂ ಮುನ್ನ ಮುಂದಿನ 2 ವರ್ಷಗಳ ಭಾರತದ ಟಿ20 ಸರಣಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. 2026ರಲ್ಲಿ ನಡೆಯುವ ಟಿ20 ವಿಶ್ವಕಪ್​ ಟೂರ್ನಿ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ಜುಲೈ 6ರಿಂದ ಆರಂಭಗೊಳ್ಳಲಿರುವ ಜಿಂಬಾಬ್ವೆ ವಿರುದ್ಧದ ಸರಣಿಯ ಮೂಲಕ ಭಾರತದ ನೂತನ ಟಿ20 ಋತು ಪ್ರಾರಂಭಗೊಳ್ಳಲಿದೆ. ಇದು 5 ಪಂದ್ಯಗಳ ಸರಣಿಯಾಗಿದ್ದು, ಈ ತಂಡ ಯುವ ಆಟಗಾರರನ್ನೇ ನೆಚ್ಚಿಕೊಂಡಿದೆ. ರೋಹಿತ್​, ಜಡೇಜಾ ಮತ್ತು ವಿರಾಟ್​ ಕೊಹ್ಲಿ ಟಿ20ಗೆ ವಿದಾಯ ಹೇಳಿರುವ ಕಾರಣ ಈ ಸ್ಥಾನಕ್ಕೆ ಯುವ ಆಟಗಾರರನ್ನು ಸಿದ್ಧಪಡಿಸುವ ಜವಾಬ್ದಾರಿ ನೂತನ ಕೋಚ್​ ಆಗಲಿರುವವರ ಹೆಗಲೇರಲಿದೆ.

ಇದನ್ನೂ ಓದಿ Team India stuck in Barbados: ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ

2025ರಲ್ಲಿ ಭಾರತ 4 ಸರಣಿಗಳನ್ನು ಆಡಲಿದೆ. ಪ್ರವಾಸಿ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯದಲ್ಲಿ ಕ್ರಮವಾಗಿ 3 ಮತ್ತು 5 ಪಂದ್ಯಗಳ ಸರಣಿ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ತವರಲ್ಲಿ 5 ಪಂದ್ಯಗಳ ಸರಣಿಯನ್ನಾಡಲಿದೆ. 2026ರಲ್ಲಿ ಕಿವೀಸ್​ ವಿರುದ್ಧ ತವರಿನಲ್ಲಿ 5 ಪಂದ್ಯಗಳ ಸರಣಿ ಆಡಲಿದೆ. ಈ ಸರಣಿ ಬಳಿಕ ಟಿ20 ವಿಶ್ವಕಪ್​ ಟೂರ್ನಿಯನ್ನು ಆಡಲಿದೆ.

2024-25ನೇ ಸಾಲಿನ ತವರಿನ ಕ್ರಿಕೆಟ್​ ಸರಣಿಯ ವೇಳಾಪಟ್ಟಿಯ ಮಾಹಿತಿ ಇಂತಿದೆ.

ಬಾಂಗ್ಲಾ ಸರಣಿಯ ವೇಳಾಪಟ್ಟಿ

ಸೆಪ್ಟೆಂಬರ್​-19 ಮೊದಲ ಟೆಸ್ಟ್​ ಪಂದ್ಯ. ತಾಣ: ಚೆನ್ನೈ

ಸೆಪ್ಟೆಂಬರ್​​-27 ದ್ವಿತೀಯ ಟೆಸ್ಟ್​. ತಾಣ; ಕಾನ್ಪುರಅಕ್ಟೋಬರ್​-6 ಮೊದಲ ಟಿ20. ತಾಣ: ಧರ್ಮಶಾಲಾ

ಅಕ್ಟೋಬರ್​-9 ದ್ವಿತೀಯ ಟಿ20. ತಾಣ: ದೆಹಲಿಅಕ್ಟೋಬರ್​-12 ಮೂರನೇ ಟಿ20. ತಾಣ: ಹೈದರಾಬಾದ್​

ನ್ಯೂಜಿಲ್ಯಾಂಡ್​ ಸರಣಿಯ ವೇಳಾಪಟ್ಟಿ


ಅಕ್ಟೋಬರ್​-16 ಮೊದಲ ಟಿ20. ತಾಣ: ಬೆಂಗಳೂರು

ಅಕ್ಟೋಬರ್-24 ದ್ವಿತೀಯ ಟಿ20. ತಾಣ: ಪುಣೆ

ನವೆಂಬರ್​-1 ಮೂರನೇ ಟಿ20. ತಾಣ: ಮುಂಬಯಿ

ಇಂಗ್ಲೆಂಡ್​ ವಿರುದ್ಧದ ಸರಣಿಯ ವೇಳಾಪಟ್ಟಿ


ಜನವರಿ-22 ಮೊದಲ ಟಿ20. ತಾಣ:ಚೆನ್ನೈ

ಜನವರಿ-25 ದ್ವಿತೀಯ ಟಿ20. ತಾಣ: ಕೋಲ್ಕತ್ತಾ

ಜನವರಿ-28 ಮೂರನೇ ಟಿ20. ತಾಣ: ರಾಜ್​ಕೋಟ್​

ಜನವರಿ-31 ನಾಲ್ಕನೇ ಟಿ20. ತಾಣ:ಪುಣೆ

ಫೆಬ್ರವರಿ-2 ಐದನೇ ಟಿ20. ತಾಣ: ಮುಂಬಯಿ

ಫೆಬ್ರವರಿ-6 ಮೊದಲ ಏಕದಿನ. ತಾಣ:ನಾಗ್ಪುರ

ಫೆಬ್ರವರಿ-9 ದ್ವಿತೀಯ ಏಕದಿನ. ತಾಣ: ಕಟಕ್​

ಫೆಬ್ರವರಿ-12 ಮೂರನೇ ಏಕದಿನ. ತಾಣ: ಅಹಮದಾಬಾದ್​

Continue Reading

ಪ್ರಮುಖ ಸುದ್ದಿ

David Miller : ಸೋಲಿನ ಬೇಸರದಲ್ಲಿ ವಿದಾಯ ಹೇಳಿದರೇ ಮಿಲ್ಲರ್​​; ದಕ್ಷಿಣ ಆಫ್ರಿಕಾ ಆಟಗಾರನ ಪ್ರತಿಕ್ರಿಯೆ ಏನು?

David Miller : ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಭರವಸೆ ಭಗ್ನಗೊಂಡಿತ್ತು. ದಕ್ಷಿಣ ಆಫ್ರಿಕಾ ಫೈನಲ್​​ನಲ್ಲಿ ಭಾರತದ ವಿರುದ್ಧ 7 ರನ್​ಗಳ ಸೋಲು ಅನುಭವಿಸಿತ್ತು. ಪಂದ್ಯದ ಅಂತಿಮ ಕ್ಷಣಗಳಲ್ಲಿ ದಕ್ಷಿಣ ಆಫ್ರಿಕಾ ಕೈಚೆಲ್ಲಿತ್ತು. ಅದರಲ್ಲೂ ಡೇವಿಡ್ ಮಿಲ್ಲರ್​​ ಕೊನೇ ಓವರ್​​ನ ಮೊದಲ ಎಸೆತಕ್ಕೆ ಔಟಾಗಿದ್ದರು. ಇದು ಅವರಿಗೆ ಬೇಸರ ಮೂಡಿಸಿತ್ತು.

VISTARANEWS.COM


on

David Miller :
Koo

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರ ಫೈನಲ್​​ನಲ್ಲಿ ಆಘಾತಕಾರಿ ಸೋಲಿನ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಡೇವಿಡ್ ಮಿಲ್ಲರ್ ಟಿ 20ಯಿಂದ ನಿವೃತ್ತರಾಗುವ ವದಂತಿಗಳು ಬಂದಿದ್ದವು. ಅದಕ್ಕವರು ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಭರವಸೆ ಭಗ್ನಗೊಂಡಿತ್ತು. ದಕ್ಷಿಣ ಆಫ್ರಿಕಾ ಫೈನಲ್​​ನಲ್ಲಿ ಭಾರತದ ವಿರುದ್ಧ 7 ರನ್​ಗಳ ಸೋಲು ಅನುಭವಿಸಿತ್ತು. ಪಂದ್ಯದ ಅಂತಿಮ ಕ್ಷಣಗಳಲ್ಲಿ ದಕ್ಷಿಣ ಆಫ್ರಿಕಾ ಕೈಚೆಲ್ಲಿತ್ತು. ಅದರಲ್ಲೂ ಡೇವಿಡ್ ಮಿಲ್ಲರ್​​ ಕೊನೇ ಓವರ್​​ನ ಮೊದಲ ಎಸೆತಕ್ಕೆ ಔಟಾಗಿದ್ದರು. ಇದು ಅವರಿಗೆ ಬೇಸರ ಮೂಡಿಸಿತ್ತು.

15ನೇ ಓವರ್​ನಲ್ಲಿ ಅಕ್ಷರ್ ಪಟೇಲ್ ಓವರ್​ಗೆ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಬಾರಿಸುವ ಮೂಲಕ ಹೆನ್ರಿಚ್​ ಕ್ಲಾಸೆನ್​ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವಿನ ಅವಕಾಶ ತಂದುಕೊಟ್ಟಿದ್ದರು. 16ನೇ ಓವರ್ ಮುಗಿದಾಗ ದಕ್ಷಿಣ ಆಫ್ರಿಕಾಕ್ಕೆ ಅಂತಿಮ ನಾಲ್ಕು ಓವರ್​ಗಳಲ್ಲಿ ಕೇವಲ 26 ರನ್​ಗಳನ್ನು ಬಾರಿಸಬೇಕಿತ್ತು.

ಇದನ್ನೂ ಓದಿ: IPL 2025 : ಐಪಿಎಲ್​ ತಂಡಗಳಲ್ಲಿ ಉಳಿಸಿಕೊಳ್ಳುವ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ

ಕ್ಲಾಸೆನ್ 17 ನೇ ಓವರ್​ನ ಮೊದಲ ಎಸೆತದಲ್ಲೇ ಔಟಾದರು. ಈ ವೇಳೆ ತಂಡವನ್ನು ಗುರಿ ಮುಟ್ಟಿಸುವ ಕೆಲಸ ಡೇವಿಡ್ ಮಿಲ್ಲರ್ ಅವರ ಹೆಗಲ ಮೇಲಿತ್ತು. ಅಂತಿಮವಾಗಿ ಅಂತಿಮ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಎದುರಿಸಿದ ಅನುಭವಿ ಬ್ಯಾಟರ್​​ 16 ರನ್​​ಗಳಿಗೆ ಔಟಾದರು. 20ನೇ ಓವರ್​ನ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಪಾಂಡ್ಯ ಅವರ ಲೋ ಫುಲ್ ಟಾಸ್ ಅನ್ನು ನೇರವಾಗಿ ಹೊಡೆದರು. ಸೂರ್ಯಕುಮಾರ್ ಯಾದವ್ ರೋಚಕ ಕ್ಯಾಚ್ ಅನ್ನು ಹಿಡಿದು ಮಿಲ್ಲರ್ ಅವರನ್ನು ಹಿಂದಕ್ಕೆ ಕಳುಹಿಸಿದರು. ಭಾರತವು ಪಂದ್ಯವನ್ನು 7 ರನ್​ಗಳಿಂದ ಗೆದ್ದಿತು. ಒಂದು ಹಂತದಲ್ಲಿ ಗೆಲುವು ದಕ್ಷಿಣ ಆಫ್ರಿಕಾಗೆ ಎಂದು ತೋರುತ್ತಿತ್ತು. ಅಂತಿಮವಾಗಿ ಭಾರತದ ಪರವಾಯಿತು.

ನಿವೃತ್ತಿ ವದಂತಿಗಳ ಬಗ್ಗೆ ಡೇವಿಡ್ ಮಿಲ್ಲರ್ ಹೇಳಿಕೆಯೇನು?

ದಕ್ಷಿಣ ಆಫ್ರಿಕಾ ಸೋಲಿನ ಬಳಿಕ ಡೇವಿಡ್ ಮಿಲ್ಲರ್ ಟಿ20 ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎಂಬ ವದಂತಿಗಳು ಹರಿದಾಡಿದವು. 35 ವರ್ಷದ ಆಟಗಾರ ಕ್ರಿಕೆಟ್​​ನ ಕಿರು ಸ್ವರೂಪದಿಂದ ನಿವೃತ್ತರಾಗಿದ್ದಾರೆ ಎಂದು ವದಂತಿಗಳು ತಿಳಿಸಿವೆ. ಆದಾಗ್ಯೂ, ಡೇವಿಡ್ ಮಿಲ್ಲರ್ ಮಂಗಳವಾರ (ಜುಲೈ 2) ಆ ವದಂತಿಗಳನ್ನು ತಳ್ಳಿಹಾಕಿದರು ಮತ್ತು ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಟಿ 20 ಪಂದ್ಯಗಳನ್ನು ಆಡಲು ಲಭ್ಯವಿರುವುದಾಗಿ ಹೇಳಿದರು.

ಕೆಲವು ವರದಿಗಳ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ. ನಾನು ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿಲ್ಲ. ನಾನು ದಕ್ಷಿಣ ಆಫ್ರಿಕಾ ಪರ ಆಡಲು ಲಭ್ಯವಿದ್ದೇನೆ. ಅತ್ಯುತ್ತಮ ಫಲಿತಾಂಶ ಇನ್ನೂ ಬರಬೇಕಿದೆ ಎಂದು ಡೇವಿಡ್ ಮಿಲ್ಲರ್ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

IPL 2025 : ಐಪಿಎಲ್​ ತಂಡಗಳಲ್ಲಿ ಉಳಿಸಿಕೊಳ್ಳುವ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ

IPL 2025: ಎರಡಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಅವರಿಗೆ ಅವಕಾಶವಿರಲಿಲ್ಲ. ಕಳೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎಂಬ ಎರಡು ಹೊಸ ತಂಡಗಳನ್ನು ಸೇರಿಸಿದ್ದರಿಂದ ಬಿಸಿಸಿಐ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು ಕಡಿಮೆ ಮಾಡಿತ್ತು.

VISTARANEWS.COM


on

IPL 2025
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಫ್ರಾಂಚೈಸಿಗಳು ಮುಂದಿನ ಮೂರು ಋತುಗಳಿಗೆ ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಸಂಖ್ಯೆ ಹೆಚ್ಚಿಸುವಂತೆ ಬಿಸಿಸಿಐಗೆ ವಿನಂತಿಸಿವೆ ಎಂದು ವರದಿಯಾಗಿದೆ. ಮುಂಬರುವ ಐಪಿಎಲ್​ಗೆ ಮೆಗಾ ಹರಾಜು ನಡೆಯುತ್ತೆ. ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. 2022ರ ಮೆಗಾ ಹರಾಜಿನಲ್ಲಿ ಎಂಟು ಫ್ರಾಂಚೈಸಿಗಳಿಗೆ ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಕ್ಯಾಪ್ಡ್ ಅಥವಾ ಅನ್​ಕ್ಯಾಪ್ಡ್​​ ಸೇರಿದಂತೆ ಗರಿಷ್ಠ ಮೂವರು ಭಾರತೀಯ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶ ನೀಡಲಾಗಿತ್ತು.

ಎರಡಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಅವರಿಗೆ ಅವಕಾಶವಿರಲಿಲ್ಲ. ಕಳೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎಂಬ ಎರಡು ಹೊಸ ತಂಡಗಳನ್ನು ಸೇರಿಸಿದ್ದರಿಂದ ಬಿಸಿಸಿಐ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ಹಿಂದಿನ ಮೆಗಾ ಹರಾಜಿನಲ್ಲಿ, ಆಟಗಾರರ ಉಳಿಸಿಕೊಳ್ಳುವಿಕೆ ಹರಾಜಿನ ಸಮಯದಲ್ಲಿ ರೈಟ್ ಟು ಮ್ಯಾಚ್ (ಆರ್​ಟಿಎಂ) ಕಾರ್ಡ್​​ಗಳ ಬಳಕೆಯ ಮೂಲಕ ಐದು ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿತ್ತು.

ಬಿಸಿಸಿಐ ಆಟಗಾರರ ಹರಾಜು ಪ್ರಕ್ರಿಯೆ ಆರಂಭ

ಮುಂಬರುವ ಐಪಿಎಲ್ 2025 ಮೆಗಾ ಹರಾಜಿಗೆ, ಬಿಸಿಸಿಐ ಉಳಿಸಿಕೊಳ್ಳುವ ನಿಯಮವನ್ನು ಇನ್ನೂ ಪ್ರಕಟಿಸಿಲ್ಲ. ಆದಾಗ್ಯೂ, ಮಂಡಳಿಯು ಈಗಾಗಲೇ ಉಳಿಸಿಕೊಳ್ಳುವ ಆಟಗಾರರ ನೀತಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಕ್ರಿಕ್​ಬಜ್​ ವರದಿ ಮಾಡಿದೆ. ಈ ತಿಂಗಳ ಕೊನೆಯಲ್ಲಿ ಫ್ರಾಂಚೈಸಿ ಮಾಲೀಕರ ಸಭೆಯಲ್ಲಿ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬಿಸಿಸಿಐ ಹಂಗಾಮಿ ಸಿಇಒ ಮತ್ತು ಐಪಿಎಲ್ ಉಸ್ತುವಾರಿ ಹೇಮಂಗ್ ಅಮಿನ್ ಈಗಾಗಲೇ ಫ್ರಾಂಚೈಸಿಗಳ ಸಿಇಒಗಳೊಂದಿಗೆ ಸಮಾಲೋಚನೆ ನಡೆಸಿ ಉಳಿಸಿಕೊಳ್ಳುವ ನೀತಿಯ ಬಗ್ಗೆ ಅವರ ಅಭಿಪ್ರಾಯಗಳನ್ನು ಪಡೆದಿದ್ದಾರೆ.

ಹೆಚ್ಚಿನ ಫ್ರಾಂಚೈಸಿಗಳು ಐದರಿಂದ ಏಳು ಆಟಗಾರರನ್ನು ಉಳಿಸಿಕೊಳ್ಳಲು ವಿನಂತಿ ಮಾಡಿದ್ದರೆ. ಫ್ರಾಂಚೈಸಿಗಳಲ್ಲಿ ಒಂದು ಎಂಟು ಆಟಗಾರರನ್ನು ಉಳಿಸಿಕೊಳ್ಳಲು ಸೂಚಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಅದೇ ಸಮಯದಲ್ಲಿ, ಕೆಲವು ಫ್ರಾಂಚೈಸಿಗಳು ಉಳಿಸಿಕೊಳ್ಳುವ ನಿಯಮ ಇರಬಾರದು ಎಂದು ಹೇಳಿದೆ ಎನ್ನಲಾಗಿದೆ. ಮತ್ತೊಂದು ಫ್ರಾಂಚೈಸಿ ಆರ್​ಟಿಎಂ ಮಾತ್ರ ಹೊಂದಲು ವಿನಂತಿಸಿದೆ ಮತ್ತು ಯಾವುದೇ ಅವಕಾಶವಿಲ್ಲ.

ಇದನ್ನೂ ಓದಿ: Rahul Dravid : ಕ್ರಿಕೆಟ್ ಬುದ್ಧ ನಕ್ಕು ನಲಿದಾಡಿದಾಗ, ಅರಿವಿಲ್ಲದೇ ಕೆನ್ನೆಗೆ ಜಾರಿತ್ತು ಭಾವಾತಿಶಯದ ಅಶ್ರುಧಾರೆ – ಸಲಾಂ ಜಾಮಿ ಭಾಯ್!

ಈ ವರ್ಷದ ಮೇ ತಿಂಗಳಲ್ಲಿ, ಹಿರಿಯ ವೀಕ್ಷಕವಿವರಣೆಗಾರ ಹರ್ಷ ಭೋಗ್ಲೆ ಅವರು ಕೆಕೆಆರ್ ಸಿಇಒ ವೆಂಕಿ ಮೈಸೂರು ಅವರು ಎಂಟು ಆರ್ಟಿಎಂ ಕಾರ್ಡ್ಗಳನ್ನು ಉಳಿಸಿಕೊಳ್ಳಲು ಬಯಸಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಅಂತಹ ಕ್ರಮವು ಆಟಗಾರರಿಗೆ ಹರಾಜಿನಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ಫ್ರಾಂಚೈಸಿಗಳು ಸಹ ಅವರನ್ನು ಮರಳಿ ಖರೀದಿಸಲು ಸಾಧ್ಯವಾಗುತ್ತದೆ.

ಫ್ರಾಂಚೈಸಿಗಳೊಂದಿಗೆ ಮಾತನಾಡಿದ ನಂತರ, ಬಿಸಿಸಿಐ ಈಗ ಪ್ರಕ್ರಿಯೆಯನ್ನು ಅಂತಿಮಗೊಳಿಸುತ್ತಿದೆ ಮತ್ತು ಮಾಲೀಕರ ಸಭೆಯಲ್ಲಿ ತನ್ನ ಅಂತಿಮ ನಿರ್ಧಾರವನ್ನು ಬಹಿರಂಗಪಡಿಸಲಿದೆ. ಏತನ್ಮಧ್ಯೆ, ಭಾರತದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವಾರು ಪ್ರಮುಖ ಆಟಗಾರರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಬಿಸಿಸಿಐ ಸದ್ಯಕ್ಕೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.

Continue Reading

ಕ್ರೀಡೆ

Rahul Dravid: ನಾನು ನಿರುದ್ಯೋಗಿ, ಎಲ್ಲಾದರೂ ಕೆಲಸ ಇದ್ದರೆ ಹೇಳಿ ಎಂದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

Rahul Dravid: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದ ರಾಹುಲ್ ದ್ರಾವಿಡ್ ಅವರಿಗೆ ಸಂದರ್ಶಕರೊಬ್ಬರು ಮುಂದಿನ ನಡೆಯ ಬಗ್ಗೆ ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್​, ಈ ಗೆಲುವಿನಿಂದ ನಾನು ಶೀಘ್ರದಲ್ಲೇ ಹೊರಬರುತ್ತೇನೆ. ಏಕೆಂದರೆ ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ. ಹೊಸ ಕೆಲಸ ಇದ್ದರೆ ಹೇಳಿ ಎಂದು ದ್ರಾವಿಡ್ ಹಾಸ್ಯ ಚಟಾಕಿ ಹಾರಿಸಿದರು.

VISTARANEWS.COM


on

Rahul Dravid
Koo

ಬಾರ್ಬಡೋಸ್​: ಟಿ20 ವಿಶ್ವಕಪ್​ ಟೂರ್ನಿಯ ಮುಕ್ತಾಯದೊಂದಿಗೆ ರಾಹುಲ್​ ದ್ರಾವಿಡ್​(Rahul Dravid) ಅವರ ಕೋಚಿಂಗ್​ ಕೂಡ ಮುಕ್ತಾಯಗೊಂಡಿದೆ. ಮುಂದಿನ ನಡೆ ಏನೆಂದು ಕೇಳಿದ ಪ್ರಶ್ನೆಗೆ ಹಾಸ್ಯಾಸ್ಪದವಾಗಿ(Rahul Dravid jokes) ಉತ್ತರಿಸಿದ ದ್ರಾವಿಡ್​, ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ(Rahul Dravid jokes unemployed from next week) ಎಲ್ಲಾದರೂ ಕೆಲಸ ಇದ್ದರೆ ಹೇಳಿ ಎಂದರು. ಈ ವಿಡಿಯೊ ವೈರಲ್​ ಆಗಿದೆ.

2021ರಲ್ಲಿ ಟಿ20 ವಿಶ್ವಕಪ್‌ ಬಳಿಕ, ಕೋಚ್‌ ಆಗಿದ್ದ ರವಿಶಾಸ್ತ್ರಿ ನಿರ್ಗಮನದಿಂದ ತೆರವಾದ ಸ್ಥಾನವನ್ನು ದ್ರಾವಿಡ್‌ ವಹಿಸಿದ್ದರು. ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕಳೆದ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಅಂತ್ಯಗೊಂಡಿತ್ತು. ಆ ಬಳಿಕ, ದ್ರಾವಿಡ್​ಗೆ ಕೋಚ್​ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಕೂಡ ಇರಲಿಲ್ಲ. ಆದರೂ ಕೂಡ ದ್ರಾವಿಡ್​ ಮತ್ತು ಇತರ ತರಬೇತಿ ಸಿಬ್ಬಂದಿಯನ್ನು ಟಿ20 ವಿಶ್ವಕಪ್​ ತನಕ ಮುಂದುವರಿಸಲಾಗಿತ್ತು. ತಮ್ಮ ಕೊನೆಯ ಮಾರ್ಗದರ್ಶದಲ್ಲಿ ಭಾರತ ಟಿ20 ವಿಶ್ವಕಪ್​ ಗೆದ್ದಿರುವುದು ಅವರಿಗೂ ಸಂತಸ ತಂದಿದೆ.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದ ರಾಹುಲ್ ದ್ರಾವಿಡ್ ಅವರಿಗೆ ಸಂದರ್ಶಕರೊಬ್ಬರು ಮುಂದಿನ ನಡೆಯ ಬಗ್ಗೆ ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್​, ಈ ಗೆಲುವಿನಿಂದ ನಾನು ಶೀಘ್ರದಲ್ಲೇ ಹೊರಬರುತ್ತೇನೆ. ಏಕೆಂದರೆ ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ. ಹೊಸ ಕೆಲಸ ಇದ್ದರೆ ಹೇಳಿ ಎಂದು ದ್ರಾವಿಡ್ ಹಾಸ್ಯ ಚಟಾಕಿ ಹಾರಿಸಿದ್ದಾರೆ” ಈ ವಿಡಿಯೊ ವೈರಲ್​ ಆಗಿದೆ. ಕಳೆದ ವರ್ಷವೇ ದ್ರಾವಿಡ್​ ಅವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಮತ್ತೊಮ್ಮೆ ಕೋಚ್​ ಹುದ್ದೆಯಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂದು ಹೇಳಿದ್ದರು. ದ್ರಾವಿಡ್​ ಅವರ ಇಬ್ಬರು ಮಕ್ಕಳು ಕೂಡ ಕ್ರಿಕೆಟರ್​ ಆಗಿರುವ ಕಾರಣ ಇವರ ಕ್ರಿಕೆಟ್​ ಭವಿಷ್ಯ ರೂಪಿಸುವಲ್ಲಿ ದ್ರಾವಿಡ್​ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬಹುದು.

ಇದನ್ನೂ ಓದಿ Team India stuck in Barbados: ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ

ನಾಯಕನಾಗಿ ಗೆಲ್ಲಲಾಗದ ವಿಶ್ವಕಪ್(T20 World Cup 2024)​ ಟ್ರೋಫಿಯನ್ನು ರಾಹುಲ್​ ದ್ರಾವಿಡ್‌(Rahul Dravid) ಕೊನೆಗೂ ಭಾರತ ತಂಡದ ತರಬೇತುದಾರಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ.

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್‌ ದ್ರಾವಿಡ್‌ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಎನ್ನುವುದು ಅವರಿಗೆ ಕನಸಾಗಿತ್ತು. ಈ ಕೊರಗು ಕೂಡ ಅವರಲ್ಲಿತ್ತು. ಇದೀಗ ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್‌ ಅನ್ನು ತರಬೇತುದಾರನಾಗಿ ಗಳಿಸಿಕೊಂಡಿದ್ದಾರೆ.

2007ರಲ್ಲಿ ವೆಸ್ಟ್​ ಇಂಡೀಸ್​ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ರಾಹುಲ್​ ದ್ರಾವಿಡ್​ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಲೀಗ್​ ಹಂತದಿಂದಲೇ ನಿರ್ಗಮಿಸಿತ್ತು. ದುರ್ಬಲ ಬಾಂಗ್ಲಾದೇಶ ವಿರುದ್ದವೂ ಕೂಡ ಗೆಲುವು ಸಾಧಿಸಲು ಸಾಧ್ಯವಾಗ ಅವಮಾನಕ್ಕೆ ಸಿಲುಕಿತ್ತು. ಅಂದು ಅವಮಾನ ಎದುರಿಸಿದ ವಿಂಡೀಸ್​ ನೆಲದಲ್ಲೇ ಇದೀಗ ದ್ರಾವಿಡ್​ ತರಬೇತುದಾರನಾಗಿ ಕಪ್​ ಗೆದ್ದು ಸಂಭ್ರಮಿಸಿ ತಮ್ಮ ಎಲ್ಲ ಹಿಂದಿನ ನೋವನ್ನು ಮರೆತರು.

Continue Reading
Advertisement
Safe Drive Tips
ಆಟೋಮೊಬೈಲ್2 mins ago

Safe Drive Tips: ಮಳೆಯಲ್ಲಿ ಬೈಕ್ ಓಡಿಸುವಾಗ ಈ ಸಂಗತಿಗಳು ಗಮನದಲ್ಲಿರಲಿ

India T20I schedule
ಕ್ರೀಡೆ10 mins ago

India T20I schedule: 2026ರ ಟಿ20 ವಿಶ್ವಕಪ್​ಗೂ ಮುನ್ನ ಭಾರತ ಆಡಲಿದೆ 34 ಟಿ20 ಪಂದ್ಯ

high beam lights
ಕರ್ನಾಟಕ13 mins ago

High Beam Lights‌: ರಾತ್ರಿ ಹೈ ಬೀಮ್‌ ಲೈಟ್‌ ಹಾಕಿಕೊಂಡು ವಾಹನ ಚಲಾಯಿಸುತ್ತೀರಾ? ಕೇಸು ಬೀಳುತ್ತೆ ಎಚ್ಚರ!

Cheetah Safari
ಪರಿಸರ32 mins ago

Cheetah Safari: ಬನ್ನೇರುಘಟ್ಟದಲ್ಲಿ ʻಚಿರತೆ ಸಫಾರಿʼ ಶುರು; ಚಿರತೆಗಳನ್ನು ಕಾಡೊಳಗೇ ನೋಡಿ ಆನಂದಿಸಿ!

Viral News
Latest32 mins ago

Viral News: ನೀವೂ ಕೂಡ ನಿಮ್ಮ ಹೆಂಡತಿಯನ್ನು ಇವರಂತೆ ಪ್ರೀತಿಸಬಲ್ಲಿರಾ? ಈ ಫೋಟೊ, ವಿಡಿಯೊ ನೋಡಿ ಹೇಳಿ!

Hathras Stampede
ಪ್ರಮುಖ ಸುದ್ದಿ47 mins ago

Hathras Stampede: ಹತ್ರಾಸ್‌ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ; ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ

krishna river drowned death
ಕ್ರೈಂ1 hour ago

Drowned: ಪೊಲೀಸರಿಂದ ತಪ್ಪಿಸಿಕೊಳ್ಳಹೋಗಿ ನೀರುಪಾಲು; ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 1 ಸಾವು, ಇಬ್ಬರ ರಕ್ಷಣೆ, ಇನ್ನೂ ಐವರು ನಾಪತ್ತೆ

IPS transfer
ಪ್ರಮುಖ ಸುದ್ದಿ2 hours ago

IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

karnataka weather Forecast
ಮಳೆ2 hours ago

Karnataka Weather : ಬೆಂಗಳೂರಲ್ಲಿ ಮರೆಯಾಗುವ ಸೂರ್ಯ; ಕರಾವಳಿ, ಮಲೆನಾಡಿನಲ್ಲಿ ವರುಣಾರ್ಭಟ

Dharamshala Tour
ಪ್ರವಾಸ2 hours ago

Dharamshala Tour: ಪರಿಪೂರ್ಣ ಪ್ರವಾಸದ ಅನುಭವ ಕೊಡುವ ಧರ್ಮಶಾಲಾ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ13 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌