IND vs AUS: ಅಯ್ಯರ್​ ಬ್ಯಾಟಿಂಗ್​ ಆವೇಶ ಕಂಡು ನಿಟ್ಟುಸಿರು ಬಿಟ್ಟ ಆಯ್ಕೆ ಸಮಿತಿ - Vistara News

ಕ್ರಿಕೆಟ್

IND vs AUS: ಅಯ್ಯರ್​ ಬ್ಯಾಟಿಂಗ್​ ಆವೇಶ ಕಂಡು ನಿಟ್ಟುಸಿರು ಬಿಟ್ಟ ಆಯ್ಕೆ ಸಮಿತಿ

ವಿಶ್ವಕಪ್​ಗೆ ಒಂದು ವಾರ ಇರುವಾಗ ಬಲಿಷ್ಠ ಆಸೀಸ್​ ವಿರುದ್ಧ(IND vs AUS) ಶತಕ ಬಾರಿಸಿ ಶ್ರೇಯಸ್​ ಅಯ್ಯರ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

VISTARANEWS.COM


on

Shreyas Iyer celebrates his century
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದೋರ್​: ಏಕದಿನ ವಿಶ್ವಕಪ್​(icc world cup 2023) ಆರಂಭಕ್ಕೂ ಮುನ್ನ ಆಯ್ಕೆ ಸಮಿತಿ ಮತ್ತು ಬಿಸಿಸಿಐ(BCCI) ಕೊಂಚ ನಿರಾಳವಾಗಿದೆ. ಇದಕ್ಕೆ ಕಾರಣ ಆಸೀಸ್​ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್(Shreyas Iyer)​ ತೋರಿದ ಪ್ರಚಂಡ ಬ್ಯಾಟಿಂಗ್​ ಪ್ರದರ್ಶನ. ಹೌದು, ಅಯ್ಯರ್​ ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಅವರು ಏಷ್ಯಾಕಪ್​ನ ಮೊದಲ ಪಂದ್ಯ ಆಡಿದ ಬಳಿಕ ಮತ್ತೆ ಬೆನ್ನು ನೋವಿನ ಗಾಯಕ್ಕೆ ಈಡಾಗಿ ಆ ಬಳಿಕ ಪಂದ್ಯದಿಂದ ಹೊರಗುಳಿದಿದ್ದರು. ಇದು ಬಿಸಿಸಿಐಗೆ ಚಿಂತೆಗೀಡು ಮಾಡಿತ್ತು. ಆದರೆ ಈಗ ಈ ಸಮಸ್ಯೆ ಬಗೆಹರಿದಿದೆ.

​ಆಸೀಸ್​ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಅಯ್ಯರ್​ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿ 6 ತಿಂಗಳ ಕಾಲ ಕ್ರಿಕೆಟ್​ ನಿಂದ ದೂರ ಉಳಿದಿದ್ದರು. ಇದಾದ ಬಳಿಕ ಅವರು ಐಪಿಎಲ್​ನಿಂದಲೂ ದೂರ ಉಳಿದಿದ್ದರು. ಶಸ್ತ್ರಚಿಕಿತ್ಸಗೆ ಒಳಗಾಗಿದ್ದ ಬಳಿಕ ಬೆಂಗಳೂರಿನ ರಾಷ್ಟ್ರೀಯ ಅಕಾಡೆಮಿಯಲ್ಲಿ ಪುನಶ್ಚೇತನದಲ್ಲಿ ಗುಣಮುಖರಾಗಿದ್ದರು. ಹೀಗಾಗಿ ಅವರನ್ನು ಏಷ್ಯಾ ಕಪ್​ ಜತೆಗೆ ವಿಶ್ವಕಪ್​ ತಂಡದಲ್ಲಿಯೂ ಅವಕಾಶ ನೀಡಲಾಗಿತ್ತು. 

ನಂಬಿಕೆ ಉಳಿಸಿಕೊಂಡ ಅಯ್ಯರ್​

ಏಷ್ಯಾಕಪ್​ನ ಪಾಕ್​ ವಿರುದ್ಧದ ಲೀಗ್​ ಪಂದ್ಯದಲ್ಲಿ ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆಯ್ಕೆ ಸಮಿತಿಗೆ ಅವರ ಆಯ್ಕೆ ದೊಡ್ಡ ಹಿನ್ನಡೆಯಾಗುವ ಲಕ್ಷಣ ಕಂಡುಬಂದಿತ್ತು. ಅಲ್ಲದೆ ಮಾಜಿ ಆಟಗಾರರು ಕೂಡ ಅಯ್ಯರ್​ ಅವರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಿದ ಕುರಿತು ಅಪಸ್ವರ ಎತ್ತಿದ್ದರು. ಆದರೆ ಅಯ್ಯರ್​ ತನ್ನ ಮೇಲೆ ಆಯ್ಕೆ ಸಮಿತಿ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ವಿಶ್ವಕಪ್​ಗೆ ಒಂದು ವಾರ ಇರುವಾಗ ಬಲಿಷ್ಠ ಆಸೀಸ್​ ವಿರುದ್ಧ(IND vs AUS) ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಬ್ಯಾಟಿಂಗ್​ ಫಾರ್ಮ್​ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಹೆಚ್ಚು ನೆರವಾಗಲಿದೆ. ಅಯ್ಯರ್​ ಮಾತ್ರವಲ್ಲದೆ ವಿಶ್ವಕಪ್​ನಲ್ಲಿ ಸ್ಥಾನ ಪಡೆದ ಎಲ್ಲ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರುವ ಮೂಲಕ ವಿಶ್ವಕಪ್​ ಗೆಲ್ಲುವ ಬರವಸೆ ಮೂಡಿಸಿದ್ದಾರೆ.

ಶ್ರೇಯಸ್​ ಅಯ್ಯರ್​ ಮತ್ತು ಗಿಲ್​ ಸೇರಿಕೊಂಡು ದ್ವಿತೀಯ ವಿಕೆಟ್​ಗೆ ಭರ್ತಿ 200 ರನ್​ಗಳ ಜತೆಯಾಟ ನಡೆಸಿದರು. ಅಯ್ಯರ್​ ಅವರು 90 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 105 ರನ್​ ಬಾರಿಸಿದರೆ, ಶುಭಮನ್​ ಗಿಲ್​ 97 ಎಸೆತದಿಂದ 104 ರನ್​ ಬಾರಿಸಿದರು. ಈ ವೇಳೆ 6 ಬೌಂಡಿ ಮತ್ತು 4 ಸಿಕ್ಸರ್​ ಸಿಡಿಯಿತು.

ಇದನ್ನೂ ಓದಿ IND vs AUS 2nd ODI: ಗಿಲ್​-ಅಯ್ಯರ್​​ ಬೊಂಬಾಟ್​ ಶತಕ; ಆಸೀಸ್​ ಗೆಲುವಿಗೆ ಬೃಹತ್​ ಗುರಿ

ಪ್ರತಿಭಾನ್ವಿತ ಆಟಗಾರ

ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್​ ಅಯ್ಯರ್​ ಭರವಸೆಯ ಪ್ರತಿಭಾನ್ವಿತ ಆಟಗಾರ. ಇದುವರೆಗೆ ಟೀಮ್ ಇಂಡಿಯಾ ಪರ 10 ಟೆಸ್ಟ್, 45 ಏಕದಿನ ಮತ್ತು 49 ಟಿ20 ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 50 ಓವರ್‌ಗಳ ಸ್ವರೂಪದಲ್ಲಿ, ಅವರು 46.13 ಸರಾಸರಿಯಲ್ಲಿ 1753 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಕೊಹ್ಲಿಯನ್ನು ಹಿಂದಿಕ್ಕಿ ಆರೆಂಜ್​ ಕ್ಯಾಪ್​ ಪಡೆದ ಗಾಯಕ್ವಾಡ್​; ಪರ್ಪಲ್​ ಕ್ಯಾಪ್​ ಹೋಲ್ಡರ್​ ಯಾರು?

IPL 2024: ಪರ್ಪಲ್​ ಕ್ಯಾಪ್​ಗಾಗಿ ಮೂರು ಬೌಲರ್​ಗಳ ಮಧ್ಯೆ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಜಸ್​ಪ್ರೀತ್​ ಬುಮ್ರಾ, ಮುಸ್ತಫಿಜುರ್​ ರೆಹಮಾನ್​, ಹರ್ಷಲ್​ ಪಟೇಲ್​ ತಲಾ 14 ವಿಕೆಟ್​ ಕಿತ್ತು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಪ್ರಸಕ್ತ ಸಾಗುತ್ತಿರುವ 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿಯ ಲೀಗ್​ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನು ಬೆರಳೆಣಿಕೆಯ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಎಲ್ಲ ತಂಡಗಳು ಪ್ಲೇ ಆಫ್​ ಪ್ರವೇಶಿಸಲು ಹರಸಾಹಸ ಪಡುತ್ತಿವೆ. ಜತೆಗೆ ಕೆಲವು ಆಟಗಾರರ ಮಧ್ಯೆ ಆರೆಂಜ್​ ಕ್ಯಾಚ್(Orange Cap)​ ಮತ್ತು ಪರ್ಪಲ್​ ಕ್ಯಾಪ್​ಗಾಗಿ(purple cap)​ ತೀವ್ರ ಪೈಪೋಟಿ ಏರ್ಪಟ್ಟಿದೆ.

ಈ ಆವೃತ್ತಿಯಲ್ಲಿ 48 ಪಂದ್ಯದ ಮುಕ್ತಾಯದ ವರೆಗೆ ರನ್​ಗಳಿಕೆಯಲ್ಲಿ ಅಗ್ರಸ್ಥಾನ ಪಡೆದು ಆರೆಂಜ್​ ಕ್ಯಾಪ್​ ಧರಿಸಿದ್ದ ವಿರಾಟ್​ ಕೊಹ್ಲಿ(500 ರನ್​​)ಯನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಋತುರಾಜ್​ ಗಾಯಕ್ವಾಡ್(509 ರನ್​)​ ಹಿಂದಿಕ್ಕಿದ್ದಾರೆ. ನಿನ್ನೆ(ಬುಧವಾರ) ನಡೆದ ಪಂಜಾಬ್​ ಕಿಂಗ್ಸ್​ ಎದುರಿನ ಪಂದ್ಯದಲ್ಲಿ 62 ರನ್​ ಬಾರಿಸುವ ಮೂಲಕ ಗಾಯಕ್ವಾಡ್(Ruturaj Gaikwad)​​ ಈ ಸಾಧನೆ ಮಾಡಿದರು. ಸದ್ಯ ಉಭಯ ಆಟಗಾರರ ಮಧ್ಯೆ ಆರೆಂಜ್​ ಕ್ಯಾಪ್​ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಟೂರ್ನಿಯ ಅಂತ್ಯದಲ್ಲಿ ಯಾರು ಅತ್ಯಧಿಕ ರನ್​ ಗಳಿಸಿರುತ್ತಾರೋ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಟಾಟಾ ಕಂಪೆನಿಯ ಎಲೆಕ್ಟ್ರಿಕ್​ ಕಾರ್​ ಸಿಗಲಿದೆ.

ಆರೆಂಜ್ ಕ್ಯಾಪ್​​ ರೇಸ್​ನಲ್ಲಿರುವ ಟಾಪ್​ 5 ಬ್ಯಾಟರ್​ಗಳು


ಋತುರಾಜ್​ ಗಾಯಕ್ವಾಡ್​-509 ರನ್​(10 ಇನಿಂಗ್ಸ್​)

ವಿರಾಟ್​ ಕೊಹ್ಕಿ-500 ರನ್​(10 ಇನಿಂಗ್ಸ್​)

ಸಾಯಿ ಸುದರ್ಶನ್​- 418 ರನ್​( 10 ಇನಿಂಗ್ಸ್​)

ಕೆ.ಎಲ್​ ರಾಹುಲ್​-406 ರನ್​( 10 ಇನಿಂಗ್ಸ್​)

ರಿಷಭ್​ ಪಂತ್​-398 ರನ್​(11 ಇನಿಂಗ್ಸ್​)

ಇದನ್ನೂ ಓದಿ Virat kohli : ಕಾಮೆಂಟ್ರಿ ಬಾಕ್ಸ್​​ನಲ್ಲಿ ಕುಳಿತು ವಿಮರ್ಶೆ ಮಾಡುವುದು ಸುಲಭ; ಕೊಹ್ಲಿ ತಿರುಗೇಟು ಕೊಟ್ಟಿದ್ದು ಯಾರಿಗೆ?

ಪರ್ಪಲ್​ ಕ್ಯಾಕ್​ಗೆ ಮೂರು ಮಂದಿಯ ಮಧ್ಯೆ ಫೈಟ್​


ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗೆ ನೀಡುವ ಪರ್ಪಲ್​ ಕ್ಯಾಪ್​ಗಾಗಿ ಮೂರು ಬೌಲರ್​ಗಳ ಮಧ್ಯೆ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಜಸ್​ಪ್ರೀತ್​ ಬುಮ್ರಾ, ಮುಸ್ತಫಿಜುರ್​ ರೆಹಮಾನ್​, ಹರ್ಷಲ್​ ಪಟೇಲ್​ ತಲಾ 14 ವಿಕೆಟ್​ ಕಿತ್ತು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ ಬೌಲಿಂಗ್​ ಇಕಾನಮಿ ಹೊಂದಿರುವ ಕಾರಣ ಸದ್ಯ ಈ ಕ್ಯಾಪ್​ ಬುಮ್ರಾ ಬಳಿ ಇದೆ. ಇನ್ನುಳಿದಂತೆ ಆರು ಮಂದಿ ಬೌಲರ್​ಗಳು ತಲಾ 13 ವಿಕೆಟ್​ ಕಿತ್ತಿದ್ದಾರೆ. ಇವರಿಗೂ ಕೂಡ ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ವಿಕೆಟ್​ ಕಿತ್ತರೆ ಪರ್ಪಲ್​ ಕ್ಯಾಪ್​ ಪಡೆಯುವ ಅವಕಾಶವಿದೆ.

ಪರ್ಪಲ್​ ಕ್ಯಾಪ್​​ ರೇಸ್​ನಲ್ಲಿರುವ ಟಾಪ್​ 5 ಬೌಲರ್​ಗಳು


ಜಸ್​ಪ್ರೀತ್​ ಬುಮ್ರಾ-14 ವಿಕೆಟ್​(10 ಪಂದ್ಯ)

ಮುಸ್ತಫಿಜುರ್​ ರೆಹಮಾನ್​-14 ವಿಕೆಟ್​(9 ಪಂದ್ಯ​)

ಹರ್ಷಲ್​ ಪಟೇಲ್​-14 ವಿಕೆಟ್​(10 ಪಂದ್ಯ​)

ಮತೀಶ ಪತಿರಾಣ-13 ವಿಕೆಟ್​(6 ಪಂದ್ಯ)

ಟಿ ನಟರಾಜನ್​-13 ವಿಕೆಟ್​(7 ಪಂದ್ಯ)

Continue Reading

ಕ್ರಿಕೆಟ್

T20 World Cup: ಟಿ20 ವಿಶ್ವಕಪ್​ ತಂಡ ಸೇರಲು ರಾಹುಲ್​ಗೆ ಇನ್ನೂ ಇದೆ ಅವಕಾಶ

T20 World Cup: ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

VISTARANEWS.COM


on

T20 World Cup
Koo

ದುಬೈ: ಟಿ20 ವಿಶ್ವಕಪ್​ಗೆ(T20 World Cup) ಈಗಾಗಲೇ ಭಾರತ 15 ಸದಸ್ಯರ ಮತ್ತು ಮೀಸಲು ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್(KL Rahul)​ ಅವರನ್ನು ಈ ತಂಡದಿಂದ ಕೈಬಿಡಲಾಗಿದೆ. ಆದರೆ, ರಾಹುಲ್​ಗೆ ಇನ್ನೂ ಕೂಡ ತಂಡ ಸೇರುವ ಅವಕಾಶವೊಂದಿದೆ. ಇದು ಹೇಗೆ ಎನ್ನುವ ಮಾಹಿತಿ ಇಂತಿದೆ.

ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ. ಅವಕಾಶ ಸಿಕ್ಕ ಆಟಗಾರರ ಪೈಕಿ ಯಾರಾದರು ಗಾಯಗೊಂಡು ಅಲಭ್ಯರಾದರೆ ಆಗ ರಾಹುಲ್​ಗೆ ಅವಕಾಶ ಸಿಗಬಹುದು. ಇನ್ನೊಂದು ಸಾಧ್ಯತೆ ಎಂದರೆ ತಂಡ ಬದಲಾವಣೆಯ ಅಂತಿಮ ದಿನವಾದ 25ರಂದು ಅಚ್ಚರಿ ಎಂಬಂತೆ ರಾಹುಲ್​ ಆಯ್ಕೆಯಾಗುವ ಸಾಧ್ಯತೆಯೂ ಇದೆ.

ಕೆಲ ತಂಡಗಳು ಗೇಮ್ ಸ್ಟ್ರಟಜಿ ಮಾಡಿಕೊಂಡು ಕೆಲ ಸ್ಟಾರ್​ ಆಟಗಾರರನ್ನು ಮೊದಲ ಪಟ್ಟಿಯಿಂದ ಕೈಬಿಟ್ಟು ಆ ಬಳಿಕ ಅಚ್ಚರಿ ಎಂಬಂತೆ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ಇದರ ಹಿಂದಿರುವ ಕಾರಣವೆಂದರೆ ಎದುರಾಳಿ ತಂಡಗಳ ಪೂರ್ವ ಯೋಜನೆಯನ್ನು ಬುಡಮೇಲು ಮಾಡುವುದು. ಕಳೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಅನುಭವಿ ಆಟಗಾರ ಮಾರ್ನಸ್​ ಲನುಶೇನ್​ ಅವರನ್ನು ಆಯ್ಕೆ ಮಾಡಿರಲಿಲ್ಲ. ಇನ್ನೇನು ತಂಡ ಬದಲಾವಣೆಗೆ ಅಂತಿಮ ದಿನ ಬಾಕಿ ಇರುವಾಗ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಹೀಗಾಗಿ ಭಾರತ ಕೂಡ ರಾಹುಲ್​ ಅವರನ್ನು ಈ ರೀತಿ ಆಯ್ಕೆ ಮಾಡುವ ಸಾಧ್ಯತೆಯೂ ಕಂಡು ಬಂದಿದೆ.

ಇದನ್ನೂ ಓದಿ T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

Continue Reading

ಕ್ರೀಡೆ

MS Dhoni: ರನ್​ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ

MS Dhoni: ಯಾವುದೇ ವಿವಾದಗಳಿಗೆ ಒಳಗಾಗದೆ ಶಾಂತ ಸ್ವಭಾವದಿಂದ ಆಡುವ ಧೋನಿ ಹಲವು ಬಾರಿ ಸಹ ಆಟಗಾರರ ಶತಕ ಮತ್ತು ಅರ್ಧಶತಕಕ್ಕೋಸ್ಕರ ರನ್​ ಗಳಿಸದೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಆದರೆ, ಪಂಬಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಸಲುವಾಗಿ ಸ್ವಾರ್ಥಿಯಾಗಿ ಕಂಡು ಬಂದರು.

VISTARANEWS.COM


on

MS Dhoni
Koo

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮಾಜಿ ನಾಯಕ​ ಮಹೇಂದ್ರ ಸಿಂಗ್ ಧೋನಿ(MS Dhoni) ಬುಧವಾರ ನಡೆದ ಪಂಜಾಬ್​ ಲಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ತೋರಿದ ವರ್ತನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದು ಮಾಡುತ್ತಿದೆ. ಹಲವು ನೆಟ್ಟಿಗರು ಧೋನಿ ಇಷ್ಟೊಂದು ಸ್ವಾರ್ಥಿಯಾಗಬಾರದೆಂದು ಟೀಕಿಸಿದ್ದಾರೆ.

ಯಾವುದೇ ವಿವಾದಗಳಿಗೆ ಒಳಗಾಗದೆ ಶಾಂತ ಸ್ವಭಾವದಿಂದ ಆಡುವ ಧೋನಿ ಹಲವು ಬಾರಿ ಸಹ ಆಟಗಾರರ ಶತಕ ಮತ್ತು ಅರ್ಧಶತಕಕ್ಕೋಸ್ಕರ ರನ್​ ಗಳಿಸದೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಧೋನಿಯ ಈ ನಡೆಯ ಬಗ್ಗೆ ಅನೇಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಆದರೆ, ಪಂಬಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಸಲುವಾಗಿ ಸ್ವಾರ್ಥಿಯಾಗಿ ಕಂಡು ಬಂದರು.

ಚೆನ್ನೈ ಬ್ಯಾಟಿಂಗ್​ ಇನಿಂಗ್ಸ್​ನ ಅಂತಿಮ ಓವರ್​ನಲ್ಲಿ ಅರ್ಷದೀಪ್​ ಎಸೆದ ಈ ಓವರ್​ನ ಮೂರನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಚೆಂಡು ಬೌಂಡರಿ ಲೈನ್​ ಬಳಿ ಹೋದರೂ ಕೂಡ ಧೋನಿ ರನ್​ ಓಡದೆ ಸ್ವಾರ್ಥ ತೋರಿದರು. ನಾನ್​ಸ್ಟ್ರೈಕ್​ನಲ್ಲಿದ್ದ ಡೇರಿಯಲ್​ ಮಿಚೆಲ್​ ಅವರು ರನ್​ಗಾಗಿ ಓಡಿ ಕ್ರೀಸ್​ ಬಳಿ ಬಂದರು. ಈ ವೇಳೆ ಧೋನಿ ಅವೇಶದಲ್ಲಿಯೇ ಮಿಚೆಲ್​ಗೆ ಹಿಂದೆ ಹೋಗುವಂತೆ ತಿಳಿಸಿದರು. ಸ್ಟ್ರೈಕ್​ ತನಕ ಓಡಿದ್ದ ಮಿಚೆಲ್​ ಮತ್ತೆ ನಾನ್​ಸ್ಟ್ರೈಕರ್​ ಬಳಿಗೆ ಓಡಿ ಬಂದರು. ಮುಂದಿನ ಎಸೆತವನ್ನು ಧೋನಿ ಬೀಟ್​ ಮಾಡಿದರು. 5ನೇ ಎಸೆತದಲ್ಲಿ ಸಿಕ್ಸರ್​ ಬಾರಿಸಿ ಅಂತಿಮ ಎಸೆತದಲ್ಲಿ ರನೌಟ್​ ಆದರು.

ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ಬ್ಯಾಟಿಂಗ್​ಗಾಗಿ ಆಸೆ ತೋರಿದ ಧೋನಿಯ ಈ ಸ್ವಾರ್ಥವನ್ನು ಅನೇಕ ನೆಟ್ಟಿಗರು ಟೀಕಿಸಿದ್ದಾರೆ. ಇದು ಮತ್ತೊಬ್ಬ ಆಟಗಾರನಿಗೆ ಮಾಡುವ ಅವಮಾನ ಎಂದು ಕಮೆಂಟ್​ ಮಾಡಿದ್ದಾರೆ. ಈ ಘಟನೆಯ ವಿಡಿಯೊ ಎಲ್ಲಡೆ ವೈರಲ್(viral video)​ ಆಗಿದೆ. ಧೋನಿ ಸ್ಟ್ರೈಕ್​ ಉಳಿಸಿಕಿಕೊಂಡರೂ ಕೂಡ ಅವರಿಂದ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. 11  ಎಸೆತಗಳಿಂದ 14 ರನ್ ಮಾತ್ರ ಗಳಿಸಿದರು.

ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವು ಸಾಧಿಸಿತು.

Continue Reading

ಕ್ರೀಡೆ

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

PBKS vs CSK: ಚೆನ್ನೈಗೆ ತವರಿನಲ್ಲೇ ಅತ್ಯಧಿಕ ಸೋಲುಣಿಸಿದ ದಾಖಲೆ ಮುಂಬೈ ಇಂಡಿಯನ್ಸ್​ ತಂಡದ ಪರವಾಗಿದೆ. ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಮುಂಬೈ ಇದುವರೆಗೆ 5 ಪಂದ್ಯಗಳನ್ನು ಜಯಿಸಿದೆ. ಪಂಜಾಬ್​ 4 ಬಾರಿ ಸೋಲುಣಿಸಿ ಕೆಕೆಆರ್​(3 ಬಾರಿ) ತಂಡದ ದಾಖಲೆಯನ್ನು ಹಿಂದಿಕ್ಕಿದೆ.

VISTARANEWS.COM


on

PBKS vs CSK
Koo

ಚೆನ್ನೈ: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​(PBKS vs CSK) ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಪಂಜಾಬ್​ ಕಿಂಗ್ಸ್​ ದಾಖಲೆಯೊಂದನ್ನು ನಿರ್ಮಿಸಿದೆ. ಚೆನ್ನೈಗೆ ತವರಿನಲ್ಲಿಯೇ ಅತ್ಯಧಿಕ ಸೋಲುಣಿಸಿದ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ವೇಳೆ ಕೆಕೆಆರ್​(3 ಬಾರಿ) ತಂಡದ ದಾಖಲೆಯನ್ನು ಹಿಂದಿಕ್ಕಿದೆ.

ಚೆನ್ನೈಗೆ ತವರಿನಲ್ಲೇ ಅತ್ಯಧಿಕ ಸೋಲುಣಿಸಿದ ದಾಖಲೆ ಮುಂಬೈ ಇಂಡಿಯನ್ಸ್​ ತಂಡದ ಪರವಾಗಿದೆ. ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಮುಂಬೈ ಇದುವರೆಗೆ 5 ಪಂದ್ಯಗಳನ್ನು ಜಯಿಸಿದೆ. ಪಂಜಾಬ್​ 4 ಬಾರಿ ಸೋಲುಣಿಸಿದೆ. ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು. ಇದು ಈ ಆವೃತ್ತಿಯಲ್ಲಿ ಚೆನ್ನೈಗೆ ತವರಿನಲ್ಲಿ ಎದುರಾದ 2ನೇ ಸೋಲಾಗಿದೆ. ಇದಕ್ಕೂ ಮುನ್ನ ಲಕ್ನೋ ವಿರುದ್ಧ ಸೋಲು ಕಂಡಿತ್ತು.

ಚೇಸಿಂಗ್​ ವೇಳೆ ಕಳೆದ ಪಂದ್ಯದ ಶತಕ ವೀರ ಜಾನಿ ಬೇರ್​ಸ್ಟೋ 46 ರನ್​ ಬಾರಿಸಿ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರತಾಪ ತೋರಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಅವರು ಪ್ರತಿ ಓವರ್​ನಲ್ಲಿಯೂ ಕನಿಷ್ಠ ಒಂದು ಬೌಂಡರಿ ಅಥವಾ ಸಿಕ್ಸರ್​ ಬಾರಿಸುತ್ತಲೇ ಮುನ್ನುಗಿದರು. ಇವರಿಗೆ 2ನೇ ಕ್ರಮಾಂಕದಲ್ಲಿ ಆಡಲಿಳಿದ ದಕ್ಷಿಣ ಆಫ್ರಿಕಾದ ಹಾರ್ಡ್​ ಹಿಟ್ಟರ್​ ರೀಲಿ ರೂಸೊ ಉತ್ತಮ ಸಾಥ್​ ನೀಡಿದರು. ಬೇರ್​ಸ್ಟೋ ವಿಕೆಟ್​ ಪತನದ ಬಳಿಕ ಇವರು ತಂಡವನ್ನು ಆಧರಿಸಿದರು. 23 ಎಸೆತ ಎದುರಿಸಿ 43(5 ಬೌಂಡರಿ, 2 ಸಿಕ್ಸರ್​) ರನ್​ ಬಾರಿಸಿದರು. ಅಂತಿಮವಾಗಿ ಶಶಾಂಕ್​ ಸಿಂಗ್​(25) ಮತ್ತು ಹಂಗಾಮಿ ನಾಯಕ ಸ್ಯಾಮ್​ ಕರನ್​(26) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಶಶಾಂಕ್ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್​ಗಳ ಗಡಿ ದಾಡಿದರು.

ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ತಂಡ ಉತ್ತಮ ಆರಂಭವೇನೊ ಪಡೆಯಿತು. ನಾಯಕ ಋತುರಾಜ್​ ಗಾಯಕ್ವಾಡ್​ ಮತ್ತು ಅನುಭವಿ ಹಾಗೂ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಸೇರಿಕೊಂಡು ಮೊದಲ ವಿಕೆಟ್​ಗೆ 64 ರನ್​ ಒಟ್ಟುಗೂಡಿಸಿದರು. ರಹಾನೆ 29 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ರಹಾನೆ ವಿಕೆಟ್​ ಪತನದ ಬಳಿಕ ದಿಢೀರ್​ ಕುಸಿತ ಕಂಡಿತು. ಸತತವಾಗಿ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಒಂದೆಡೆ ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಕೂಡ ಮತ್ತೊಂದು ತುದಿಯಲ್ಲಿ ಕ್ರೀಸ್​ ಕಚ್ಚಿ ನಿಂತ ಗಾಯಕ್ವಾಡ್​ ತಮ್ಮ ಶಕ್ತಿ ಮೀರಿದ ಬ್ಯಾಟಿಂಗ್​ ಪ್ರದರ್ಶನದ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮುಂದುವರಿಸಿದರು. ಒಂದು ಹಂತದಲ್ಲಿ ಸಮೀರ್ ರಿಜ್ವಿ ಅವರಿಂದ ಸಣ್ಣ ಮಟ್ಟದ ಜತೆಯಾಟದ ಬೆಂಬಲ ಸಿಕ್ಕರೂ ಕೂಡ ಇದು ಹೆಚ್ಚು ಹೊತ್ತು ಸಾಗಲಿಲ್ಲ. 21 ರನ್​ ಗಳಿಸಿದ್ದ ವೇಳೆ ರಿಜ್ವಿ ಕೂಡ ಔಟಾದರು. ಗಾಯಕ್ವಾಡ್​ 48 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್​ ಬಾರಿಸಿ 62 ರನ್​ ಗಳಿಸಿದರು.

Continue Reading
Advertisement
gold rate today
ಚಿನ್ನದ ದರ1 second ago

Gold Rate Today: ನಿನ್ನೆ ಇಳಿದ ಚಿನ್ನದ ಬೆಲೆ ಇಂದು ತೀವ್ರ ಏರಿಕೆ; ಬಂಗಾರದ ಮಾರುಕಟ್ಟೆಯಲ್ಲಿ ದರಗಳು ಹೀಗಿವೆ

Self Harming
ಕಲಬುರಗಿ3 mins ago

Self Harming : ಕಲಬುರಗಿಯಲ್ಲಿ ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Bhoomi Shetty African braids Look style
ಸಿನಿಮಾ18 mins ago

Bhoomi Shetty: ಆಫ್ರಿಕನ್‌ ಲುಕ್‌ನಲ್ಲಿ ನಮ್ಮ ʻಕಿನ್ನರಿʼ ನಟಿ! ಈ ಚೇಂಜ್‌ ಹೇಗನಿಸುತ್ತೆ ನಿಮಗೆ?

prajwal revanna case lookout notice
ಕ್ರೈಂ23 mins ago

Prajwal Revanna Case: ಏನಿದು ಲುಕ್ ಔಟ್ ನೋಟಿಸ್? ಜಾರಿ ಅಧಿಕಾರ ಯಾರಿಗೆ? ಇದಕ್ಕೂ ತಡೆ ತರಬಹುದಾ?

School Jobs Scam
Lok Sabha Election 202431 mins ago

School Jobs Scam: ಶಾಲಾ ನೇಮಕಾತಿ ಹಗರಣದ ಬಗ್ಗೆ ಟಿಎಂಸಿಗೆ ತಿಳಿದಿತ್ತು; ಹಿರಿಯ ನಾಯಕ ಕುನಾಲ್ ಘೋಷ್ ಆರೋಪ

elephant attack
ಬೆಂಗಳೂರು ಗ್ರಾಮಾಂತರ31 mins ago

Elephant attack : ಜಮೀನಿಗೆ ತೆರಳಿದ್ದ ರೈತನ ಅಟ್ಟಾಡಿಸಿ ಕೊಂದ ಒಂಟಿ ಸಲಗ

Delhi Lieutenant Governor
ದೇಶ41 mins ago

Delhi Lieutenant Governor: ದೆಹಲಿಯ DCW ಗುತ್ತಿಗೆ ನೌಕರರಿಗೆ ಬಿಗ್‌ ಶಾಕ್‌; 220ಕ್ಕೂ ಹೆಚ್ಚು ನೌಕರರು ವಜಾ

Prajwal Revanna Case Application seeking exemption from appearing before SIT rejected
ಕ್ರೈಂ46 mins ago

Prajwal Revanna Case: SIT ಮುಂದೆ ಹಾಜರಾಗಲು ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ? ತನಿಖೆಗೆ ಆತುರ ಏಕೆ?

IPL 2024
ಕ್ರೀಡೆ46 mins ago

IPL 2024: ಕೊಹ್ಲಿಯನ್ನು ಹಿಂದಿಕ್ಕಿ ಆರೆಂಜ್​ ಕ್ಯಾಪ್​ ಪಡೆದ ಗಾಯಕ್ವಾಡ್​; ಪರ್ಪಲ್​ ಕ್ಯಾಪ್​ ಹೋಲ್ಡರ್​ ಯಾರು?

Temperature Warning
ರಾಯಚೂರು48 mins ago

Temperature Warning : ಬೆಂಕಿ ಇಲ್ಲದೆ ರಣ ಬಿಸಿಲಲ್ಲೇ ಮೊಟ್ಟೆ ಬೇಯಿಸಿ ಆಮ್ಲೇಟ್ ತಿಂದ ರಾಯಚೂರು ಮಂದಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌