KKR vs SRH: ನಾಳೆ ಮೊದಲ ಕ್ವಾಲಿಫೈಯರ್‌ ಪಂದ್ಯ; ಗೆದ್ದವರಿಗೆ ನೇರ ಫೈನಲ್‌ ಸೋತವರಿಗೆ ಇನ್ನೊಂದು ಅವಕಾಶ - Vistara News

ಕ್ರೀಡೆ

KKR vs SRH: ನಾಳೆ ಮೊದಲ ಕ್ವಾಲಿಫೈಯರ್‌ ಪಂದ್ಯ; ಗೆದ್ದವರಿಗೆ ನೇರ ಫೈನಲ್‌ ಸೋತವರಿಗೆ ಇನ್ನೊಂದು ಅವಕಾಶ

KKR vs SRH: 25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ ಮತ್ತು ಟ್ರಾವಿಸ್​ ಹೆಡ್​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಈ ಜೋಡಿ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರುವುದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಈ ಜೋಡಿ ಲೀಗ್​ನಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿ 5 ಓವರ್​ನಲ್ಲಿಯೇ 100ರ ಗಡಿ ದಾಟಿದ ದಾಖಲೆಯನ್ನು ಕೂಡ ಹೊಂದಿದ್ದಾರೆ

VISTARANEWS.COM


on

KKR vs SRH
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: 17ನೇ ಆವೃತ್ತಿಯ ಐಪಿಎಲ್‌(IPL 2024) ಪಂದ್ಯಾವಳಿ ತನ್ನ ಲೀಗ್‌ ವ್ಯವಹಾರವನ್ನು ಮುಗಿಸಿದೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್​ ಕಿಂಗ್ಸ್​ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದದ್ದು, ಪಾತಾಳದಲ್ಲಿದ್ದ ಆರ್​ಸಿಬಿ ಸತತವಾಗಿ 6 ಪಂದ್ಯಗಳನ್ನು ಗೆದ್ದು ಫೀನಿಕ್ಸ್‌ನಂತೆ ಎದ್ದು ನಿಂತು 4ನೇ ಸ್ಥಾನ ಅಲಂಕರಿಸಿದ್ದೆಲ್ಲ ಲೀಗ್‌ ಹಂತದ ಅಚ್ಚರಿ. ಇನ್ನು ಕ್ವಾಲಿಫೈಯರ್​ ಮತ್ತು ಎಲಿಮಿನೇಟರ್​ ಪಂದ್ಯದ ಕೌತುಕ.

ನಾಳೆ(ಮಂಗಳವಾರ) ನಡೆಯುವ ಮೊದಲ ಕ್ವಾಲಿಫೈಯರ್‌(KKR vs SRH Qualifier 1) ಪಂದ್ಯದಲ್ಲಿ ಈ ಬಾರಿಯ ಕೂಟದ ಅತ್ಯಂತ ಬಲಿಷ್ಠ ತಂಡಗಳಾದ ಕೋಲ್ಕತ್ತಾ ನೈಟ್​ ರೈಡರ್ಸ್(KKR vs SRH)​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಕಣಕ್ಕಿಳಿಯಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಇತ್ತಂಡಗಳ ಈ ಪಂದ್ಯ ಜಿದ್ದಾಜಿದ್ದಿ ಹೋರಾಟವೊಂದಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆ ಇದೆ. ಇದರ ಮಧ್ಯೆ ಮಳೆಯ ಭೀತಿ ಕೂಡ ಎದುರಾಗಿದೆ.

ಇತ್ತಂಡಗಳಲ್ಲಿ ಕೆಕೆಆರ್​ ಲೀಗ್‌ ಹಂತದ ಅಗ್ರಸ್ಥಾನಿ ಎಂಬ ಹೆಗ್ಗಳಿಕೆ ಇದೆ. ಅಷ್ಟೇ ಅಲ್ಲ, ಲೀಗ್‌ ಹಂತದಲ್ಲಿ ಎದುರಾದ ಒಂದು ಪಂದ್ಯಗಳಲ್ಲಿ ಹೈದರಾಬಾದ್​ಗೆ 4 ರನ್​ ಅಂತರದ ಸೋಲುಣಿಸಿದ ಹಿರಿಮೆಯನ್ನೂ ಹೊಂದಿದೆ. ಜತೆಗೆ ಉಭಯ ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ಕೆಕೆಆರ್​ 17 ಪಂದ್ಯ ಗೆದ್ದಿದೆ. ಹೈದರಾಬಾದ್​ ಗೆದ್ದಿರುವುದು ಕೇವಲ 9 ಪಂದ್ಯ ಮಾತ್ರ. ಈ ಲೆಕ್ಕಾಚಾರದಲ್ಲಿ ಕೆಕೆಆರ್​ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ.

ಹೆಡ್​-ಅಭಿಷೇಕ್​ ಬಲ


25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ ಮತ್ತು ಟ್ರಾವಿಸ್​ ಹೆಡ್​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಈ ಜೋಡಿ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರುವುದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಈ ಜೋಡಿ ಲೀಗ್​ನಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿ 5 ಓವರ್​ನಲ್ಲಿಯೇ 100ರ ಗಡಿ ದಾಟಿದ ದಾಖಲೆಯನ್ನು ಕೂಡ ಹೊಂದಿದ್ದಾರೆ. ಅಭಿಷೇಕ್​ ಶರ್ಮ ಈ ಬಾರಿಯ ಕೂಟದಲ್ಲಿ 41 ಸಿಕ್ಸರ್​ ಬಾರಿಸಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್​ ಕ್ಲಾಸೆನ್​, ಐಡೆನ್​ ಮಾರ್ಕ್ರಮ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

ಇದನ್ನೂ ಓದಿ KKR vs SRH Qualifier 1: ಕೆಕೆಆರ್​-ಹೈದರಾಬಾದ್​ ಮುಖಾಮುಖಿ ದಾಖಲೆ, ಪಿಚ್​ ರಿಪೋರ್ಟ್​ ಹೇಗಿದೆ?

ಕೆಕೆಆರ್​ ಕೂಡ ಸಮರ್ಥ ತಂಡ


ಗೌತಮ್​ ಗಂಭಿರ್​ ಅವರ ಮಾರ್ಗದರ್ಶನ ಮತ್ತು ಆಟಗಾರರ ಸಂಘಟಿತ ಪ್ರದರ್ಶನ ಕೆಕೆಆರ್​ ಪಾಲಿನ ಬಲ. ಅದರಲ್ಲೂ ಆಲ್​ರೌಂಡರ್​ ಸುನೀಲ್​ ನರೈನ್​ ಅವರಂತು ಈ ಬಾರಿ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ತಂಡಕ್ಕೆ ಹಿನ್ನಡೆಯಾಗಿರುವುದೆಂದರೆ ಇಂಗ್ಲೆಂಡ್​ನ ಫಿಲ್​ ಸಾಲ್ಟ್ ಪಾಕ್​ ವಿರುದ್ಧದ ಟಿ20 ಸರಣಿಯ ಭಾಗವಾಗಿ ತವರಿಗೆ ಮರಳಿದ್ದು. ಹೀಗಾಗಿ ಅವರ ತಂಡ ಇವರ ಸೇವೆ ಕಳೆದುಕೊಂಡಿದೆ. ಇವರ ಸ್ಥಾನದಲ್ಲಿ ಅಫಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಈ ಪಂದ್ಯದಲ್ಲಿ ಆಡಲಿದ್ದಾರೆ. ಮೊದಲ ಪಂದ್ಯವನ್ನಾಡುತ್ತಿರುವ ಕಾರಣ ಅವರ ಫಾರ್ಮ್​ ಹೇಗಿರಲಿದೆ ಎನ್ನುವುದು ಕೂಡ ಇಲ್ಲಿ ಮುಖ್ಯವಾಗಿದೆ.

ಆ್ಯಂಡ್ರೆ ರೆಸಲ್​ ಈ ಬಾರಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ. ಯುವ ಆಟಗಾರ ಆಂಗ್ಕ್ರಿಶ್ ರಘುವಂಶಿ, ಗಾಯದಿಂದ ಚೇತರಿಕೆ ಕಂಡು ಕಮ್​ಬ್ಯಾಕ್​ ಮಾಡಿರುವ ನಿತೇಶ್​ ರಾಣಾ, ವೆಂಕಟೇಶ್​ ಅಯ್ಯರ್​ ಮತ್ತು ನಾಯಕ ಶ್ರೇಯಸ್​ ಅಯ್ಯರ್​ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ನೆರವು ನೀಡಲಿದ್ದಾರೆ. ರಿಂಕು ಸಿಂಗ್​ ಕಳೆದ ಆವೃತ್ತಿಯಲ್ಲಿ ತೋರಿದ ಪ್ರದರ್ಶನ ಇದುವರೆಗೂ ತೋರಿಲ್ಲ. ಹೀಗಾಗಿ ಈ ಮಹತ್ವದ ಪಂದ್ಯದಲ್ಲಿ ಅವರು ಅಬ್ಬರಿಸುವ ಅನಿವಾರ್ಯತೆ ಇದೆ. 24 ಕೋಟಿ ವೀರ ಮಿಚೆಲ್​ ಸ್ಟಾರ್ಕ್​ ಈ ಪಂದ್ಯದಲ್ಲಾದರೂ ತಾವು ಪಡೆದ ಈ ಮೊತ್ತಕ್ಕೆ ನ್ಯಾಯ ಒದಗಿಸಲೇ ಬೇಕು. ದುಬಾರಿ ಮೊತ್ತ ಪಡೆದರೂ ಕೂಡ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Ravindra Jadeja : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆಲ್​ರೌಂಡರ್​ ರವೀಂದ್ರ ಜಡೇಜಾ ವಿದಾಯ

Ravindra Jadeja : ರವೀಂದ್ರ ಜಡೇಜಾ ಅವರ ಅಂತಾರಾಷ್ಟ್ರೀಯ ಟಿ20ಗೆ ವಿದಾಯ ಹೇಳುವುದರೊಂದಿಗೆ ಟಿ20 ವಿಶ್ವ ಕಪ್​ ಗೆಲುವಿನ ಬಳಿಕ ಭಾರತ ತಂಡದಿಂದ ಟಿ20 ವಿಶ್ವ ಕಪ್​ಗೆ ವಿದಾಯ ಹೇಳಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

VISTARANEWS.COM


on

Ravindra jadeja
Koo

ಬೆಂಗಳೂರು: ಭಾರತದ ತಂಡ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ (Ravindra Jadeja ) ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್​ ಮೂಲಕ ಟಿ 20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. “ಕೃತಜ್ಞತೆ ತುಂಬಿದ ಹೃದಯದಿಂದ ನಾನು ಟಿ 20 ಅಂತರರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತಿದ್ದೇನೆ. ಹೆಮ್ಮೆಯಿಂದ ಓಡುವ ದೃಢವಾದ ಕುದುರೆಯಂತೆ ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದುದ್ದನ್ನು ನೀಡಿದ್ದೇನೆ. ಕ್ರಿಕೆಟ್​​ನ ಇತರ ಸ್ವರೂಪಗಳಲ್ಲಿ ಆಟ ಮುಂದುವರಿಸುತ್ತೇನೆ. ಟಿ 20 ವಿಶ್ವಕಪ್ ಗೆಲ್ಲುವುದು ನನ್ನ ಕನಸು ನನಸಾಗಿತ್ತು. ಅದು ನನಸಾಗಿದೆ. ನನ್ನ ಟಿ 20 ಅಂತರರಾಷ್ಟ್ರೀಯ ವೃತ್ತಿಜೀವನದ ಉತ್ತುಂಗವಾಗಿದೆ. ನೆನಪುಗಳು, ಅಚಲ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.

ಸ್ಪಿನ್-ಬೌಲಿಂಗ್ ಆಲ್ರೌಂಡರ್ ಎಂಎಸ್ ಧೋನಿ ನಾಯಕತ್ವದಲ್ಲಿ ತಂಡಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಅವರು ಹೆಚ್ಚು ಪ್ರಭಾವಶಾಲಿ ಪ್ರದರ್ಶನ ನೀಡಿರಲಿಲ್ಲ. 2009ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅವರು 74 ಪಂದ್ಯಗಳನ್ನು ಆಡಿದ್ದು, 515 ರನ್ ಹಾಗೂ 54 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: Suryakumar Yadav : ವಿಶ್ವ ಕಪ್​ ಟ್ರೋಫಿಯನ್ನು ಬೆಡ್​ ಮಧ್ಯದಲ್ಲಿಟ್ಟು ನಿದ್ದೆ ಮಾಡಿದ ಸೂರ್ಯಕುಮಾರ್ ದಂಪತಿ!

2024ರ ಟಿ20 ವಿಶ್ವಕಪ್ ಗೆದ್ದ ಮರುದಿನವೇ ಆಲ್​ರೌಂಡ್​​ ರವೀಂದ್ರ ಜಡೇಜಾ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಂಡದಲ್ಲಿ ವಿದಾಯ ಹೇಳಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಅದಕ್ಕಿಂತ ಮೊದಲು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿದಾಯ ಹೇಳಿದ್ದರು. ಬಾರ್ಬಡೋಸ್​ನ ಕೆನ್ಸಿಂಗ್ಟನ್​ ಓವಲ್​​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ 20 ವಿಶ್ವಕಪ್ ಟ್ರೋಫಿಯನ್ನು ಭಾರತ 7 ರನ್​ಗಳಿಂದ ಗೆದ್ದುಕೊಂಡಿತು. ಐಸಿಸಿ ಪ್ರಶಸ್ತಿ ಗೆಲುವಿನ ನಂತರ ಭಾರತ ಸಂಭ್ರಮದಲ್ಲಿರುವಾಗ ಜಡೇಜಾ ಅವರು ವಿರಾಟ್ ಕೊಹ್ಲಿ ಮತ್ತು ಅವರ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂಬಾಲಿಸಿದರು.

ವಿಶ್ವ ಕಪ್​ನಲ್ಲಿ ಜಡೇಜಾ ಉತ್ತಮ ಫಾರ್ಮ್​​ನಲ್ಲಿ ಇರಲಿಲ್ಲ. ಆದರೆ ಕಳೆದ ದಶಕದಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ಅವರು ಪ್ರಾಬಲ್ಯ ಸಾಧಿಸಿದ್ದರು. ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತೀಯ ತಂಡದ ಆಸ್ತಿಯಾಗಿದ್ದರು. ಸಾರ್ವಕಾಲಿಕ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರೆಂದು ಕರೆಯಲ್ಪಡುವ ಜಡೇಜಾ ಸುಮಾರು 36 ನೇ ವಯಸ್ಸಿನಲ್ಲಿ ಟಿ 20 ಐ ಕ್ರಿಕೆಟ್​ನಿಂದ ವಿದಾಯ ಹೇಳಿದ್ದಾರೆ. ಅವರು ಐಪಿಎಲ್​ನಲ್ಲಿ ಮುಂದುವರಿಯಲಿದ್ದಾರೆ.

2022 ರಲ್ಲಿ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್​ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವು ಬಂದಿದ್ದವು. ಅಲ್ಲಿ ಅವರು 29 ಎಸೆತಗಳಲ್ಲಿ 46 ರನ್ ಗಳಿಸಿದ್ದರು. ಆ ಪಂದ್ಯವನ್ನು ಭಾರತ 49 ರನ್​ಗಳಿಂದ ಗೆದ್ದಿತ್ತು. ದುಬೈನಲ್ಲಿ ನಡೆದ 2021 ರ ಟಿ 20 ವಿಶ್ವಕಪ್​​ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಅವರು ಬೌಲಿಂಗ್​ನಲ್ಲಿ 15 ನೀಡಿ 3 ವಿಕೆಟ್ ಉರುಳಿಸಿದ್ದರು.

ಜಡೇಜಾ ಅವರ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅವರ ಫೀಲ್ಡಿಂಗ್. ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಅವರಂತಹ ಆಟಗಾರರನ್ನು ನಾವು ಹೊಂದಿದ್ದ ಸಮಯದಲ್ಲಿ ಸೌರಾಷ್ಟ್ರದ ಆಟಗಾರ ತಮ್ಮ ವೃತ್ತಿಜೀವನದುದ್ದಕ್ಕೂ ಅನೇಕ ಸಂದರ್ಭಗಳಲ್ಲಿ ಉತ್ತಮ ಫೀಲ್ಡಿಂಗ್ ಮಾಡಿದ್ದಾರೆ. ಅವರು ಎದುರಾಳಿ ತಂಡಕ್ಕೆ 20 ರನ್​ಗಳನ್ನು ಫೀಲ್ಡಿಂಗ್​ನಲ್ಲಿ ಬಿಟ್ಟುಕೊಡುತ್ತಿರಲಿಲ್ಲ.

ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ನಿಯೋಜಿತ ಆಲ್​ರೌಂಡರ್​ಗಳಾಗಿ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಜಡೇಜಾ ಈಗ ಏಕದಿನ ಮತ್ತು ಟೆಸ್ಟ್ ಸ್ವರೂಪಗಳತ್ತ ಗಮನ ಹರಿಸಿದ್ದಾರೆ.

Continue Reading

ಕ್ರೀಡೆ

IND vs SA Final: 40 ಸಾವಿರ ಅಡಿ ಎತ್ತರದಲ್ಲಿಯೂ ಮೊಳಗಿದ ವಿಶ್ವಕಪ್​ ಗೆಲುವಿನ ಸಂಭ್ರಮ; ವಿಡಿಯೊ ವೈರಲ್​

IND vs SA Final: ಭಾರತ ಪಂದ್ಯ ಗೆಲ್ಲುತ್ತಿದ್ದಂತೆ ವಿಮಾನದಲ್ಲಿದ್ದ ಭಾರತೀಯರು ಸಂಭ್ರಮಿಸಿದ್ದಾರೆ. ವಿಮಾನದಲ್ಲಿಯೂ ಕೂಡ ಭಾರತದ ಗೆಲುವಿನ ಸುದ್ದಿಯನ್ನು ಘೋಷಿಸಿದರು. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

IND vs SA Final
Koo

ಲಂಡನ್​: ಭಾರತ ತಂಡ 17 ವರ್ಷಗಳ ಬಳಿಕ ಟಿ20 ವಿಶ್ವಕಪ್(​T20 World Cup 2024) ಗೆಲ್ಲುವ ಮೂಲಕ ಭಾರತೀಯ(IND vs SA Final) ಕ್ರಿಕೆಟ್​ ಅಭಿಮಾನಿಗಳು 13 ವರ್ಷಗಳಿಂದ ಕಾಯುತ್ತಿದ್ದ ಐಸಿಸಿ ಟ್ರೋಫಿಯೊಂದರ ಕನಸು ನನಸಾಯಿತು. ಈ ಗೆಲುವಿನ ಸಂಭ್ರಮವನ್ನು ದೇಶ-ವಿದೇಶದಲ್ಲಿರುವ ಭಾರತೀಯರು ಸಂಭ್ರಮಿಸಿದ್ದಾರೆ. ಇದೀಗ ಸಮುದ್ರ ಮಟ್ಟದಿಂದ 40ಸಾವಿರ ಅಡಿ ಎತ್ತರದಲ್ಲಿಯೂ ಈ ಗೆಲುವಿನ ಸಂಭ್ರಮಾಚರಣೆ ನಡೆದಿದೆ.

ಹೌದು, ಲಂಡನ್‌ಗೆ ಹೋಗುವ ವಿಮಾನದಲ್ಲಿ ಪ್ರಯಾಣಿಕರು ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಣ ಫೈನಲ್​ ಪಂದ್ಯವನ್ನು ತಮ್ಮ ಲ್ಯಾಪ್​ಟಾಪ್​ಗಳಲ್ಲಿ ವೀಕ್ಷಿಸಿದ್ದಾರೆ. ಭಾರತ ಪಂದ್ಯ ಗೆಲ್ಲುತ್ತಿದ್ದಂತೆ ವಿಮಾನದಲ್ಲಿದ್ದ ಭಾರತೀಯರು ಸಂಭ್ರಮಿಸಿದ್ದಾರೆ. ವಿಮಾನದಲ್ಲಿಯೂ ಕೂಡ ಭಾರತದ ಗೆಲುವಿನ ಸುದ್ದಿಯನ್ನು ಘೋಷಿಸಿದರು. ಈ ವಿಡಿಯೊ ವೈರಲ್​ ಆಗಿದೆ.

ವಿಮಾನದಲ್ಲಿ ಪ್ರಯಾಣಿಸಿದ ಹರ್ದೀಪ್ ಸಿಂಗ್ ಎನ್ನುವವರು ಪಂದ್ಯವನ್ನು ವೀಕ್ಷಿಸಲು ತಡೆರಹಿತ ವೈ-ಫೈ ಸೇವೆಯನ್ನು ಒದಗಿಸಿದ ಏರ್‌ಲೈನ್‌ಗೆ ಧನ್ಯವಾದ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಮೊಳಗಿದ ವಿಜಯೋತ್ಸವ


17ನೇ ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup final)​ ಗೆದ್ದ ಭಾರತ ತಂಡದ ಈ ಅಭೂತಪೂರ್ವ ಗೆಲುವನ್ನು ಅಭಿಮಾನಿಗಳು ದೇಶಾದ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ತಡರಾತ್ರಿಯೇ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಅಭಿಮಾನಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ಗೆಲುವನ್ನು ಸಂಭ್ರಮಿಸಿದ್ದಾರೆ. ಇದರ ಫೋಟೊ ಮತ್ತು ವೈರಲ್​ ಆಗಿದೆ.

ಜಮ್ಮು ಕಾಶ್ಮೀರದ ಕಚಿ ಚೌನಿ ಸೇರಿದಂತೆ ವಿವಿಧ ಭಾಗಗಳಲ್ಲಿ ಚಳಿಯನ್ನು ಕೂಡ ಲೆಕ್ಕಿಸದೆ ಮಧ್ಯರಾತ್ರಿಯೇ ಅಭಿಮಾನಿಗಳು ಮನೆಯಿಂದ ಹೊರ ಬಂದು ಭಾರತದ ಗೆಲುವನ್ನು ಸಂಭ್ರಮಿಸಿದ್ದಾರೆ. ಬೃಹತ್ ತ್ರಿವರ್ಣ ಧ್ವಜ ಹಿಡಿದು ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದ್ದಾರೆ.

ಇದನ್ನೂ ಓದಿ Jay Shah Promise: ಜಯ್​​ ಶಾ ಭವಿಷ್ಯ ನುಡಿದಂತೆ ಟಿ20 ವಿಶ್ವಕಪ್​ ಗೆದ್ದ ಭಾರತ; ವಿಡಿಯೊ ವೈರಲ್​

ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್‌ ಓವಲ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ ಅಂತರದಿಂದ ಗೆದ್ದು 17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್​ ಎತ್ತಿ ಹಿಡಿಯಿತು.

ದ್ರಾವಿಡ್​ಗೆ ಸ್ಮರಣೀಯ ಬೀಳ್ಕೊಡುಗೆ


ನಾಯಕನಾಗಿ ಗೆಲ್ಲಲಾಗದ ವಿಶ್ವಕಪ್(T20 World Cup 2024)​ ಟ್ರೋಫಿಯನ್ನು ರಾಹುಲ್​ ದ್ರಾವಿಡ್‌(Rahul Dravid) ಕೊನೆಗೂ ಭಾರತ ತಂಡದ ತರಬೇತುದಾರಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ. 2007ರಲ್ಲಿ ವೆಸ್ಟ್​ ಇಂಡೀಸ್​ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ರಾಹುಲ್​ ದ್ರಾವಿಡ್​ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಲೀಗ್​ ಹಂತದಿಂದಲೇ ನಿರ್ಗಮಿಸಿತ್ತು. ದುರ್ಬಲ ಬಾಂಗ್ಲಾದೇಶ ವಿರುದ್ದವೂ ಕೂಡ ಗೆಲುವು ಸಾಧಿಸಲು ಸಾಧ್ಯವಾಗ ಅವಮಾನಕ್ಕೆ ಸಿಲುಕಿತ್ತು. ಅಂದು ಅವಮಾನ ಎದುರಿಸಿದ ವಿಂಡೀಸ್​ ನೆಲದಲ್ಲೇ ಇದೀಗ ದ್ರಾವಿಡ್​ ತರಬೇತುದಾರನಾಗಿ ಕಪ್​ ಗೆದ್ದು ಸಂಭ್ರಮಿಸಿದ್ದಾರೆ.

Continue Reading

ಕ್ರಿಕೆಟ್

T20 World Cup 2024 : ಚಾಂಪಿಯನ್ ಭಾರತಕ್ಕೆ ಪಾಕಿಸ್ತಾನ ಆಟಗಾರರು ಶುಭ ಕೋರಿದ್ದು ಹೀಗೆ…

T20 World Cup 2024 : 2016ರಲ್ಲಿ ಭಾರತವು ಸೆಮಿಫೈನಲ್​​ನಲ್ಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಸೋತಿತ್ತು. 2021 ರಲ್ಲಿ ಮುಂದಿನ ಗುಂಪು ಹಂತದ ನಿರ್ಗಮನ ಕಂಡಿತು. 2022 ರಲ್ಲಿ, ಟಿ 20 ವಿಶ್ವಕಪ್​​ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಸೆಮಿಫೈನಲ್​ನಲ್ಲಿ ಟ್ರೋಫಿ ವಿಜೇತ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಆ ಸೋಲು ನಿಜವಾಗಿಯೂ ಭಾರತೀಯ ತಂಡಕ್ಕೆ ರಿಯಾಲಿಟಿ ಚೆಕ್ ಆಗಿತ್ತು.

VISTARANEWS.COM


on

T20 World Cup 2024
Koo

ನವದೆಹಲಿ: ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup 2024) ಅದ್ಭುತ ಗೆಲುವು ಸಾಧಿಸಿದ ಭಾರತ ತಂಡವನ್ನು ಪಾಕಿಸ್ತಾನದ ಮಾಜಿ ಮತ್ತು ಪ್ರಸ್ತುತ ಆಟಗಾರರು ಅಭಿನಂದಿಸಿದ್ದಾರೆ. ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​​ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ 2024 ರ ಫೈನಲ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಏಡೆನ್ ಮಾರ್ಕ್ರಮ್ ನೇತೃತ್ವದ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್​ಗಳ ವಿಜಯ ಸಾಧಿಸಿದೆ. 2014ರ ಆವೃತ್ತಿಯ ಫೈನಲ್​ನಲ್ಲಿ ಸೋತ ಬಳಿಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದೆ.

2016ರಲ್ಲಿ ಭಾರತವು ಸೆಮಿಫೈನಲ್​​ನಲ್ಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಸೋತಿತ್ತು. 2021 ರಲ್ಲಿ ಮುಂದಿನ ಗುಂಪು ಹಂತದ ನಿರ್ಗಮನ ಕಂಡಿತು. 2022 ರಲ್ಲಿ, ಟಿ 20 ವಿಶ್ವಕಪ್​​ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಸೆಮಿಫೈನಲ್​ನಲ್ಲಿ ಟ್ರೋಫಿ ವಿಜೇತ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಆ ಸೋಲು ನಿಜವಾಗಿಯೂ ಭಾರತೀಯ ತಂಡಕ್ಕೆ ರಿಯಾಲಿಟಿ ಚೆಕ್ ಆಗಿತ್ತು. ಇದು ಟಿ20 ಐ ಆಟದಲ್ಲಿ ತೀವ್ರ ಬದಲಾವಣೆಗೆ ಕಾರಣವಾಯಿತು. ತಂಡದ ರಚನೆಯ ದೃಷ್ಟಿಯಿಂದ ಅಲ್ಲ ಆದರೆ ಮನಸ್ಥಿತಿಯ ದೃಷ್ಟಿಯಿಂದ. ಈ ಟಿ 20 ವಿಶ್ವಕಪ್​ನ್ಲಿ ಆಡಲು ರೋಹಿತ್ ಶರ್ಮಾ ಮತ್ತು ಬಳಗ ಬಂದಾಗ, ಅವರ ಉದ್ದೇಶ ಸ್ಪಷ್ಟವಾಗಿತ್ತು. ಅವರು ಆಕ್ರಮಣಕಾರಿಯಾಗಿ ಆಡಿದ್ದರು.

ರೋಹಿತ್ ಶರ್ಮಾ ಮುಂಚೂಣಿಯಿಂದ ತಂಡವನ್ನು ಮುನ್ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಬದಲು ವಿರಾಟ್ ಕೊಹ್ಲಿ ಆರಂಭಿಕರಾದರು. ರಿಷಭ್ ಪಂತ್ ಅವರನ್ನು 3 ನೇ ಕ್ರಮಾಂಕಕ್ಕೆ ಇಳಿಸಲಾಯಿತು. ಆ ಎಲ್ಲಾ ನಡೆಗಳು ಕೆಲಸ ಮಾಡಿದವು.

ಆದರೆ ರೋಹಿತ್ ಶರ್ಮಾಗೆ ಮುಖ್ಯ ಟ್ರಂಪ್ ಕಾರ್ಡ್ ಅವರ ದೀರ್ಘಕಾಲದ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರ ಜಸ್ಪ್ರೀತ್ ಬಮ್ರಾ. ಫೈನಲ್​ನಲ್ಲಿ ಕೊಹ್ಲಿ ಮತ್ತು ಬುಮ್ರಾ ವಿಭಿನ್ನವಾಗಿ ಆಡಿದರು. ಕೊಹ್ಲಿ ಬ್ಯಾಟ್​​ನಿಂದ ಮಿಂಚಿದರೆ, ಬುಮ್ರಾ ತಮ್ಮ ಬೌಲಿಂಗ್​ನಿಂದ ಸಂಪೂರ್ಣವಾಗಿ ಬದಲಾಯಿಸಿದರು. ಆ ಇಬ್ಬರು ಆಟಗಾರರು ಪ್ರದರ್ಶನ ನೀಡದಿದ್ದರೆ, ಭಾರತವು 17 ವರ್ಷಗಳ ನಂತರ ವಿಶ್ವ ಟಿ 20 ಚಾಂಪಿಯನ್ ಕಿರೀಟವನ್ನು ಪಡೆಯುತ್ತಿರಲಿಲ್ಲ. ಮೆನ್ ಇನ್ ಬ್ಲೂನ ಅದ್ಭುತ ವಿಜಯಕ್ಕೆ ಪಾಕಿಸ್ತಾನದ ಕ್ರಿಕೆಟಿಗರನೇಕರು ಪ್ರತಿಕ್ರಿಯೆ ನೀಡಿದ್ದಾರೆ.

ಶಹೀನ್ ಶಾ ಅಫ್ರಿದಿ ಭಾರತ ತಂಡಕ್ಕೆ ಹಾಗೂ ವಿದಾಯ ಹೇಳಿದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅರ್ಹ ತಂಡವು ಟಿ 20 ವಿಶ್ವಕಪ್ ಗೆದ್ದಿತು. ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಈ ಅಪ್ರತಿಮ ಗೆಲುವಿನಲ್ಲಿ ಭಾಗಿಯಾಗಿರುವ ಎಲ್ಲರಿಗೂ ಅಭಿನಂದನೆಗಳು. ಅವರು ಯಾವಾಗಲೂ ಸ್ಥಿರವಾಗಿದ್ದರು ಮತ್ತು ಬಾಗಿಲು ತಟ್ಟುತ್ತಲೇ ಇದ್ದರು, ಈ ಗೆಲುವು ಸಂಪೂರ್ಣ ಸಮರ್ಪಣೆಯ ಫಲಿತಾಂಶವಾಗಿದೆ ಎಂದು ಅಹಮದ್​ ಶೆಹಜಾದ್ ಹೇಳಿದ್ದಾರೆ.

ಕಷ್ಟದ ಸಂದರ್ಭವನ್ನು ಎದುರಿಸಿಕೊಂಡು ಟ್ರೋಫಿ ಗೆದ್ದ ಭಾರತ ತಂಡಕ್ಕೆ ಶುಭಾಶಯಗಳು ಎಂದು ವಕಾರ್ ಯೂನಿಸ್ ಬರೆದುಕೊಂಡಿದ್ದಾರೆ.

ಸ್ಮರಣೀಯ ಗೆಲುವಿಗಾಗಿ ಭಾರತಕ್ಕೆ ಅಭಿನಂದನೆಗಳು. ರೋಹಿತ್​ ಅದಕ್ಕೆ ಸಂಪೂರ್ಣವಾಗಿ ಅರ್ಹರು, ಅವರು ಅಸಾಧಾರಣ ನಾಯಕರಾಗಿದ್ದಾರೆ. ಎಂದಿನಂತೆ ದೊಡ್ಡ ಮ್ಯಾಚ್ ಪ್ಲೇಯರ್ ಮತ್ತು ಬುಮ್ರಾ ನಿಸ್ಸಂದೇಹವಾಗಿ ವಿಶ್ವದ ಅತ್ಯುತ್ತಮ ಬೌಲರ್. ಕಠಿಣ ಅದೃಷ್ಟ. ಪಂದ್ಯಾವಳಿಯಲ್ಲಿ ಅದ್ಭುತವಾಗಿ ಆಡಿದ ತಂಡದ ಉತ್ತಮ ಹೋರಾಟ ಎಂದು ಹೇಳಿದ್ದಾರೆ.

ವೇಗದ ಬೌಲರ್​ ಶೋಯೆಬ್ ಅಖ್ತರ್ ಅವರು ಶುಭಾಶಯ ಕೋರಿದ್ದು ಅದರ ವಿಡಿಯೊ ಇಲ್ಲಿದೆ.

Continue Reading

ಕ್ರೀಡೆ

Team India: ವಿಶ್ವಕಪ್​ ಗೆದ್ದು ಟೀಮ್​ ಇಂಡಿಯಾ ನಿರ್ಮಿಸಿದ ದಾಖಲೆಗಳ ಪಟ್ಟಿ ಹೀಗಿದೆ

Team India: ರೋಹಿತ್​ ಕಪ್​ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆದ್ದ 4ನೇ ಭಾರತೀಯ ನಾಯಕ ಎನಿಸಿಕೊಂಡರು. ಕಪಿಲ್ ದೇವ್​, ಸೌರವ್​ ಗಂಗೂಲಿ, ಧೋನಿ ಉಳಿದ ನಾಯಕರು.

VISTARANEWS.COM


on

Koo

ಬಾರ್ಬಡೋಸ್​: ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಟಿ20 ವಿಶ್ವಕಪ್​ ಫೈನಲ್(​T20 World Cup 2024) ಪಂದ್ಯದಲ್ಲಿ ಭಾರತ ತಂಡ(Team India) ದಕ್ಷಿಣ ಆಫ್ರಿಕಾ(South Africa vs India) ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ 13 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರವೊಂದನ್ನು ನೀಗಿಸಿತು. ಈ ಪಂದ್ಯದಲ್ಲಿ ಭಾರತ ಮತ್ತು ತಂಡದ ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಪಟ್ಟಿ ಇಂತಿದೆ.

ದಾಖಲೆಗಳ ಪಟ್ಟಿ ಹೀಗಿದೆ

1. ನೀಗಿದ ಪ್ರಶಸ್ತಿ ಬರ: ಕಪ್​ ಗೆಲ್ಲುವ ಮೂಲಕ 11 ವರ್ಷಗಳ ಐಸಿಸಿ ಟ್ರೋಫಿ, 13 ವರ್ಷಗಳ ಐಸಿಸಿ ವಿಶ್ವಕಪ್​ ಬರ ನೀಗಿತು.


2. ದ್ವಿತೀಯ ಟಿ20 ವಿಶ್ವಕಪ್​: ಭಾರತ ತಂಡ 2ನೇ ಎರಡನೇ ಬಾರಿ ಮತ್ತು 17 ವರ್ಷಗಳ ಬಳಿಕ ಟಿ20 ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿತು.

3. ಮೂರನೇ ತಂಡ: ಭಾರತ 2 ಟಿ20 ವಿಶ್ವಕಪ್​ ಗೆದ್ದ ಮೂರನೇ ತಂಡ ಎನಿಸಿಕೊಂಡಿತು. ಇದಕ್ಕೂ ಮುನ್ನ ವೆಸ್ಟ್​ ಇಂಡೀಸ್​ ಮತ್ತು ಇಂಗ್ಲೆಂಡ್​ ಈ ಸಾಧನೆ ಮಾಡಿತ್ತು.


4. ರೋಹಿತ್​ ಸಾಧನೆ: ರೋಹಿತ್​ ಶರ್ಮ ಅವರು ಭಾರತ ಪರ 2 ಟಿ0 ವಿಶ್ವಕಪ್​ ಗೆದ್ದ ಮೊದಲ ಆಟಗಾರ. ನಾಯಕನಾಗಿ ಮತ್ತು ಆಟಗಾರನಾಗಿ. ಜತೆಗೆ ಧೋನಿ ನಂತರ ಟಿ20 ವಿಶ್ವಕಪ್​ ಗೆದ್ದ 2ನೇ ನಾಯಕ ಎನಿಸಿಕೊಂಡರು.

5. ದ್ರಾವಿಡ್​ಗೆ ಗೆಲುವಿನ ವಿದಾಯ: ರಾಹುಲ್​ ದ್ರಾವಿಡ್​ ಕೋಚ್​ ಆಗಿ ಜೂನಿಯರ್​ ಮತ್ತು ಸೀನಿಯರ್​ ವಿಭಾಗದಲ್ಲಿ ಐಸಿಸಿ ಟ್ರೋಫಿ ಗೆದ್ದ ಸಾಧನೆ ಮಾಡಿದರು.


6. ಕೊಹ್ಲಿಗೆ ಮೊದಲ ಕಪ್​: ವಿರಾಟ್​ ಕೊಹ್ಲಿ ಅವರು ಮೊದಲ ಟಿ20 ವಿಶ್ವಕಪ್​ ಗೆದ್ದರು. ಈ ಮೂಲಕ ಏಕದಿನ ಮತ್ತು ಟಿ20 ವಿಶ್ವಕಪ್​ ಗೆದ್ದ ಸಾಧನೆ ಮಾಡಿದರು.

7. ನಾಲ್ಕನೇ ಐಸಿಸಿ ವಿಶ್ವಕಪ್: ಭಾರತ ಈ ಕಪ್​ ಗೆಲ್ಲುವ ಮೂಲಕ 4 ಐಸಿಸಿ ವಿಶ್ವಕಪ್​ ಗೆದ್ದ ಸಾಧನೆ ಮಾಡಿತು. (2 ಏಕದಿನ, 2 ಟಿ20).

8. 4ನೇ ನಾಯಕ: ರೋಹಿತ್​ ಕಪ್​ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆದ್ದ 4ನೇ ಭಾರತೀಯ ನಾಯಕ ಎನಿಸಿಕೊಂಡರು. ಕಪಿಲ್ ದೇವ್​, ಸೌರವ್​ ಗಂಗೂಲಿ, ಧೋನಿ ಉಳಿದ ನಾಯಕರು.

9. ಐದು ಫೈನಲ್​ ಸೋಲಿನ ಬಳಿಕದ ಗೆಲುವು: ಸತತ 5 ಐಸಿಸಿ ಟೂರ್ನಿಗಳ ಫೈನಲ್​ ಸೋಲಿನ ಬಳಿಕ ಸಾಧಿಸಿದ ಗೆಲುವು ಇದಾಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತು.

Continue Reading
Advertisement
Bangalore–Mysore Expressway
ಕರ್ನಾಟಕ33 seconds ago

Bangalore–Mysore Expressway: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಾಳೆಯಿಂದ ಸ್ಮಾರ್ಟ್‌ ಟ್ರಾಫಿಕ್‌ ಸಿಸ್ಟಂ

karnataka Weather Forecast
ಮಳೆ47 seconds ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Rain Effect
ಕೊಡಗು11 mins ago

Rain Effect : ಭಾರಿ ಮಳೆ ಎಫೆಕ್ಟ್‌; ಈ ಹೆದ್ದಾರಿ ಮಾರ್ಗದಲ್ಲಿ ನಾಳೆಯಿಂದ 1 ತಿಂಗಳು ವಾಹನ ಸಂಚಾರಕ್ಕೆ ನಿರ್ಬಂಧ!

Breakfast Tip
ಆರೋಗ್ಯ27 mins ago

Breakfast Tips: ಬೆಳಗಿನ ಉಪಾಹಾರಕ್ಕೆ ಈ 5 ಬಗೆಯ ಆಹಾರಗಳನ್ನು ಸೇವಿಸಬೇಡಿ!

Ravindra jadeja
ಪ್ರಮುಖ ಸುದ್ದಿ41 mins ago

Ravindra Jadeja : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆಲ್​ರೌಂಡರ್​ ರವೀಂದ್ರ ಜಡೇಜಾ ವಿದಾಯ

IND vs SA Final
ಕ್ರೀಡೆ56 mins ago

IND vs SA Final: 40 ಸಾವಿರ ಅಡಿ ಎತ್ತರದಲ್ಲಿಯೂ ಮೊಳಗಿದ ವಿಶ್ವಕಪ್​ ಗೆಲುವಿನ ಸಂಭ್ರಮ; ವಿಡಿಯೊ ವೈರಲ್​

Kids Fashion: Bunny Ears Head Bands for Kids' Cute Look!
ಫ್ಯಾಷನ್57 mins ago

Kids Fashion: ಮಕ್ಕಳ ಕ್ಯೂಟ್‌ ಲುಕ್‌ಗೆ ಸಾಥ್‌ ನೀಡುವ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್!

T20 World Cup 2024
ಕ್ರಿಕೆಟ್1 hour ago

T20 World Cup 2024 : ಚಾಂಪಿಯನ್ ಭಾರತಕ್ಕೆ ಪಾಕಿಸ್ತಾನ ಆಟಗಾರರು ಶುಭ ಕೋರಿದ್ದು ಹೀಗೆ…

Samarjit Lankesh gowri movie kannada release date announce
ಸ್ಯಾಂಡಲ್ ವುಡ್1 hour ago

Samarjit Lankesh: ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಅಭಿನಯದ `ಗೌರಿ’ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

kidnap Case
ಬೆಂಗಳೂರು1 hour ago

Kidnap case : ಕೋಟಿ ಆಸೆಗೆ ಸಿನಿಮಾ ಸ್ಟೈಲ್‌ನಲ್ಲಿ ಸ್ಟಾಕ್‌ ಮಾರ್ಕೆಟ್‌ ವಂಚಕನ ಕಿಡ್ನ್ಯಾಪ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ48 seconds ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು5 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ1 day ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌