Lionel Messi: ಹರಾಜಿಗೆ ಸಿದ್ಧವಾದ ಫಿಫಾ ವಿಶ್ವಕಪ್​ನಲ್ಲಿ ಮೆಸ್ಸಿ ಧರಿಸಿದ್ದ 6 ಜೆರ್ಸಿ - Vistara News

ಕ್ರಿಕೆಟ್

Lionel Messi: ಹರಾಜಿಗೆ ಸಿದ್ಧವಾದ ಫಿಫಾ ವಿಶ್ವಕಪ್​ನಲ್ಲಿ ಮೆಸ್ಸಿ ಧರಿಸಿದ್ದ 6 ಜೆರ್ಸಿ

ಲಿಯೋನೆಲ್ ಮೆಸ್ಸಿ(Lionel Messi) ಅವರು 2022ರ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಧರಿಸಿದ್ದ ಆರು ಜರ್ಸಿಗಳ(Lionel Messi jersey) ಸೆಟ್‌ ಡಿಸೆಂಬರ್‌ನಲ್ಲಿ ಹರಾಜು ನಡೆಯಲಿದೆ.

VISTARANEWS.COM


on

Lionel Messi 6 jerseys
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್: ಖ್ಯಾತ ಫುಟ್‌ಬಾಲ್‌ ಆಟಗಾರ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ(Lionel Messi) ಅವರು 2022ರ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಧರಿಸಿದ್ದ ಆರು ಜರ್ಸಿಗಳ(Lionel Messi jersey) ಸೆಟ್‌ ಡಿಸೆಂಬರ್‌ನಲ್ಲಿ ಹರಾಜು ನಡೆಯಲಿದೆ ಎಂದು ಹರಾಜು ಸಂಸ್ಥೆ ಸೊದೆಬಿ ಪ್ರಕಟಿಸಿದೆ. ಹರಾಜಿನಲ್ಲಿ ಜೆರ್ಸಿಗಳ ಮೌಲ್ಯ ಸುಮಾರು 83.36 ಕೋಟಿ ರೂ. ಅಂದಾಜು ಮಾಡಲಾಗಿದೆ.

ಲಿಯೋನೆಲ್​ ಮೆಸ್ಸಿ ಅವರು ಈ ಶರ್ಟ್‌ಗಳನ್ನು ವಿಶ್ವಕಪ್‌ನ ಗುಂಪು ಪಂದ್ಯಗಳ ವೇಳೆ (ಸೌದಿ ಅರೇಬಿಯಾ, ಮೆಕ್ಸಿಕೊ) ಮತ್ತು ನಾಕೌಟ್‌ ಪಂದ್ಯಗಳ ವೇಳೆ ಧರಿಸಿದ್ದರು. ಕತಾರ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಆರ್ಜೆಂಟೀನಾ ತಂಡ ಚಾಂಪಿಯನ್‌ ಕೂಡ ಆಗಿತ್ತು. ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಮೆಸ್ಸಿ ಪಡೆ ಸೋತಾಗ ಎಲ್ಲರು ಅರ್ಜೆಂಟೀನಾ ತಂಡವನ್ನು ಗೇಲಿ ಮಾಡಿದ್ದರು. ಆದರೆ ಆ ಬಳಿಕದ ಎಲ್ಲ ಪಂದ್ಯಗಳಲ್ಲಿಯೂ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿತು.

ಮೆಸ್ಸಿ ಅವರು ಧರಿಸಿದ ಜೆರ್ಸಿಗಳ ಹರಾಜು ನವೆಂಬರ್ 30ರಿಂದ ಡಿಸೆಂಬರ್‌ 14ರವರೆಗೆ ನಡೆಯಲಿದೆ. ಮೆಸ್ಸಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ಜೆರ್ಸಿಯನ್ನು ಪಡೆಯಲು ಈಗಾಗಲೇ ಪೈಪೋಟಿಗೆ ಬಿದ್ದಿದ್ದಾರೆ ಎಂದು ಹರಾಜು ತಿಳಿಸಿದೆ.

ಇದನ್ನೂ ಓದಿ ಫಿಫಾ ಅರ್ಹತಾ ಸುತ್ತಿನ ಪಂದ್ಯ; ಉರುಗ್ವೆ ವಿರುದ್ಧ ಆಘಾತಕಾರಿ ಸೋಲು ಕಂಡ ಮೆಸ್ಸಿ ಪಡೆ

ಕಳೆದ ತಿಂಗಳು ಲಿಯೋನೆಲ್​ ಮೆಸ್ಸಿ(Lionel Messi) ಅವರು ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿ(Ballon d’Or 2023) ಗೆದ್ದಿದ್ದರು. ಇದು ಮೆಸ್ಸಿ ಗೆದ್ದ ದಾಖಲೆಯ 8ನೇ ಪ್ರಶಸ್ತಿಯಾಗಿದೆ. ಮೆಸ್ಸಿ ಅವರು ಈ ಹಿಂದೆ 2009, 2010, 2011, 2012, 2015, 2019 ಮತ್ತು 2021 ರಲ್ಲಿ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿದ್ದರು.  ಫಿಫಾ ವಿಶ್ವಕಪ್​ ಟೂರ್ನಿಯಲ್ಲಿ ಮೆಸ್ಸಿ  7 ಸೊಗಸಾದ ಗೋಲುಗಳನ್ನು ಬಾರಿಸಿದ್ದರು. ಇತ್ತೀಚೆಗಷ್ಟೇ ಫ್ರಾನ್ಸ್‌ನ ಪ್ಯಾರಿಸ್‌ ಸೈಂಟ್ ಜರ್ಮೈನ್‌ (PSG) ಫುಟ್​ಬಾಲ್​ ಕ್ಲಬ್​ನಿಂದ ಹೊರ ಬಂದಿರುವ ಮೆಸ್ಸಿ, ಅಮೆರಿಕದ ಮಿಯಾಮಿ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

ಭಾರತದಲ್ಲಿ ಸೌಹಾರ್ದ ಪಂದ್ಯ ಆಡಲಿದ್ದಾರೆ ಮೆಸ್ಸಿ…

ಅರ್ಜೆಂಟೀನಾ ತಂಡವು(Argentina football Team) ಕೇರಳಕ್ಕೆ ಬರಲಿದ್ದು ಭಾರತ ತಂಡದ ಜತೆ ಸೌಹಾರ್ದ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ ಎಂದು ಕೇರಳ(Kerala) ಸರ್ಕಾರ ಇತ್ತೀಚೆಗೆ ಮಾಹಿತಿ ನೀಡಿತ್ತು. ಹೀಗಾಗಿ ಮೆಸ್ಸಿ ಕೂಡ ಭಾರತಕ್ಕೆ ಬರಲಿದ್ದಾರೆ. ಭಾರತದಲ್ಲಿ ಸ್ನೇಹಾರ್ಥ ಪಂದ್ಯವನ್ನಾಡುಲು ಅರ್ಜೆಂಟೀನಾ ತಂಡ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(All India Football Federation)ಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಪಂದ್ಯ ಆಯೋಜನೆಗೆ ಭಾರಿ ಹಣದ ಅವಶ್ಯಕತೆ ಇರುವುದರಿಂದಾಗಿ ಈ ಮನವಿಯನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ತಿರಸ್ಕರಿಸಿತ್ತು. ಇದೇ ವೇಳೆ ಕೇರಳ ಸರ್ಕಾರ ತಮ್ಮ ರಾಜ್ಯದಲ್ಲಿ ಪಂದ್ಯವನ್ನು ಆಡಿಸಲು ಮುಂದೆ ಬಂದಿತ್ತು. ಅಲ್ಲದೆ ಅರ್ಜೆಂಟೀನಾ ತಂಡವು ಭಾರತದಲ್ಲಿ ಪಂದ್ಯ ಆಡುವ ಆತಿಥ್ಯವನ್ನು ವಹಿಸಿಕೊಂಡಿತು. ಈ ವಿಚಾರವನ್ನು ಅಧಿಕೃತವಾಗಿಯೂ ಪಿಣರಾಯಿ ಸರ್ಕಾರ ಪ್ರಕಟಿಸಿತ್ತು.

ಇದೇ ವಿಚಾರವಾಗಿ ಮಾತನಾಡಿದ್ದ ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್(V. Abdurahiman), ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಭಾರತಕ್ಕೆ ಬರುವುದು ಬಹುತೇಕ ಖಚಿತವಾಗಿ ಈಗಾಗಲೇ ಎಲ್ಲ ಮಾತುಕತೆಗಳು ಮುಕ್ತಾಯಗೊಂಡಿದೆ. ಪಂದ್ಯಕ್ಕೆ ಖರ್ಚಾಗುವ ಎಲ್ಲ ಹಣವನ್ನು ಕೇರಳ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಹೇಳಿದ್ದರು. ಆದರೆ, ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎನ್ನುವುದು ಇನಷ್ಟೇ ತಿಳಿದು ಬರಬೇಕಿದೆ.

ಕೇರಳದಲ್ಲಿ ಫುಟ್ಬಾಲ್​ ಕ್ರೇಜ್​ ಕ್ರಿಕೆಟ್​ಗಿಂತ ಹೆಚ್ಚು. ಅದರಲ್ಲೂ ಮೆಸ್ಸಿ ಅವರಿಗಂತೂ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ಕಳೆದ ಕತಾರ್​ ಫಿಫಾ ವಿಶ್ವ ಕಪ್​ ವೇಳೆ ಸಾಗರದ ಆಳದಲ್ಲಿ ಮೆಸ್ಸಿಯ ಕಟೌಟ್ ನಿಲ್ಲಿಸಿದ್ದು ಭಾರಿ ಸುದ್ದಿಯಾಗಿತ್ತು. ಅರ್ಜೆಂಟೀನಾ ತಂಡಕ್ಕೆ ಬೆಂಬಲ ಸೂಚಿಸಿದ್ದಕ್ಕಾಗಿ ಸ್ವತಃ ಮೆಸ್ಸಿ ಅವರೇ ಟ್ವೀಟ್​ ಮೂಲಕ ಕೇರಳದ ಜನತೆಗೆ ಧನ್ಯವಾದ ತಿಳಿಸಿದ್ದರು. ಇದೀಗ ನೆಚ್ಚಿನ ಆಟಗಾರ ತಮ್ಮ ತವರಿಗೆ ಬರುತ್ತಿದ್ದಾರೆ ಎನ್ನುವ ವಿಷಯ ತಿಳಿದಿರುವ ಕೇರಳದ ಜನತೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rinku Singh: ಟಿ20 ವಿಶ್ವಕಪ್​ಗೆ ರಿಂಕು ಆಯ್ಕೆಯಾಗಬಹುದೆಂದು ಪಟಾಕಿ, ಸಿಹಿ ತಂದಿಟ್ಟಿದ್ದ ತಂದೆಗೆ ನಿರಾಸೆ

Rinku Singh: ರಿಂಕು ಸಿಂಗ್​ ಭಾರತ ಪರ 15 ಟಿ20 ಪಂದ್ಯಗಳನ್ನು ಆಡಿ 11 ಇನಿಂಗ್ಸ್​ನಿಂದ 356 ರನ್​ ಬಾರಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಕೂಡ ಒಳಗೊಂಡಿದೆ. 31 ಬೌಂಡರಿ ಮತ್ತು 20 ಸಿಕ್ಸರ್​ ಬಾರಿಸಿದ್ದಾರೆ.

VISTARANEWS.COM


on

Rinku Singh
Koo

ಉತ್ತರ ಪ್ರದೇಶ: ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ(T20 world cup 2024) ಮಂಗಳವಾರ ಭಾರತ ತಂಡ ಪ್ರಕಟಗೊಂಡಿತ್ತು. ಆದರೆ ಈ ತಂಡದಲ್ಲಿ ರಿಂಕು ಸಿಂಗ್​ಗೆ(Rinku Singh) ಅವಕಾಶ ಸಿಗಲಿಲ್ಲ. ಎಲ್ಲರು ಕೂಡ ರಿಂಕುಗೆ ಸ್ಥಾನ ಸಿಗಬಹುದೆಂದು ನಿರೀಕ್ಷೆ ಮಾಡಿದ್ದರು. ಎಲ್ಲರಿಗಿಂತ ಹೆಚ್ಚಿನ ನಿರೀಕ್ಷೆ ಇರಿಸಿದ್ದು ರಿಂಕು ಅವರ ತಂದೆ. ತನ್ನ ಮಗನಿಗೆ ವಿಶ್ವಕಪ್​ ಆಡುವ ಅವಕಾಶ ಸಿಗಬಹುದೆಂದು ಖಾನ್ಚಂದ್ರ ಸಿಂಗ್ ಮುಂಚಿತವಾಗಿಯೇ ಪಟಾಕಿ ಮತ್ತು ಸಿಹಿ ತಿನಿಸುಗಳನ್ನು ತಂದಿಟ್ಟಿದ್ದರು. ಆದರೆ ಮಗನಿಗೆ ಅವಕಾಶ ಸಿಗದೇ ಇದ್ದದ್ದು ಬೇಸರ ತಂದಿದೆ ಎಂದು ಖಾನ್ಚಂದ್ರ ಸಿಂಗ್ ಹೇಳಿದ್ದಾರೆ.

ತೀರಾ ಬಡತನದಲ್ಲಿ ಬೆಳೆದು ಬಂದ ರಿಂಕು ಸಿಂಗ್ ಕಳೆದ ವರ್ಷದ ಐಪಿಎಲ್ ಮೂಲಕ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಡುವ ರಿಂಕು ಸಿಂಗ್ ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ​ ಅಸಾಮಾನ್ಯ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದರು. ಭಾರತ ಪರೂ ಆಡಿದ ಎಲ್ಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಕೂಡ ಈ ಹಿಂದೆ ರಿಂಕು ಅತ್ಯತ್ತುಮ ಪ್ರತಿಭೆ ಟಿ20ಯಲ್ಲಿ ಸ್ಥಾನ ಸಿಗಬಹುದು ಎಂದು ಹೇಳಿದ್ದರು. ಇದೇ ಕಾರಣದಿಂದ ಅವರ ತಂದೆ ಖಾನ್ಚಂದ್ರ ಸಿಂಗ್​ಗೆ ಮಗ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಬಲವಾಗಿ ನಂಬಿದ್ದರು. ಹೀಗಾಗಿ ಅವರು ಮನೆಗೆ ಮೊದಲೇ ಸಿಹಿ ತಿನಿಸು, ಪಟಾಕಿ ತಂದಿಟ್ಟಿದ್ದರು. ಆದರೆ ತಂಡ ಪ್ರಕಟಗೊಂಡಾಗ ಮಾತ್ರ ಇವರ ಹೆಸರು ಕಾಣಿಸಲಿಲ್ಲ.​ ಇದರಿಂದ ರಿಂಕು ಮನೆಯವರೆಲ್ಲ ಬೇಸರಗೊಂಡರು.

ಇದನ್ನೂ ಓದಿ IPL 2024: ಕೊಹ್ಲಿಯನ್ನು ಹಿಂದಿಕ್ಕಿ ಆರೆಂಜ್​ ಕ್ಯಾಪ್​ ಪಡೆದ ಗಾಯಕ್ವಾಡ್​; ಪರ್ಪಲ್​ ಕ್ಯಾಪ್​ ಹೋಲ್ಡರ್​ ಯಾರು?

“ಮಗ ಆಯ್ಕೆಯಾದ ಸುದ್ದಿ ಹೊರಬೀಳುತ್ತಲೇ ಪಟಾಕಿ ಹಚ್ಚಿ, ಸಿಹಿ ತಿನಿಸು ಹಂಚಿ ಸಂಭ್ರಮಿಸಲು ತಯಾರಿ ಮಾಡಿಕೊಂಡಿದ್ದೆ. ಆದರೆ 15 ಸದಸ್ಯರ ಪಟ್ಟಿಯಲ್ಲಿ ಮಗನ ಹೆಸರೇ ಇರಲಿಲ್ಲ. ಇದರಿಂದ ತೀರಾ ಬೇಸರವಾಗಿದೆ” ಎಂದು ಹೇಳುವ ಮೂಲಕ ಖಾನ್ಚಂದ್ರ ಸಿಂಗ್ ಭಾವುಕರಾದರು. ರಿಂಕು ಸಿಂಗ್​ ಭಾರತ ಪರ 15 ಟಿ20 ಪಂದ್ಯಗಳನ್ನು ಆಡಿ 11 ಇನಿಂಗ್ಸ್​ನಿಂದ 356 ರನ್​ ಬಾರಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಕೂಡ ಒಳಗೊಂಡಿದೆ. 31 ಬೌಂಡರಿ ಮತ್ತು 20 ಸಿಕ್ಸರ್​ ಬಾರಿಸಿದ್ದಾರೆ. ರಿಂಕು ಸದ್ಯ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಒಂದೊಮ್ಮೆ 15 ಮಂದಿ ಆಟಗಾರರ ಪೈಕಿ ಯಾರಾದರು ಗಾಯಗೊಂಡರೆ ರಿಂಕುಗೆ ಪ್ರಧಾನ ತಂಡಕ್ಕೆ ಅವಕಾಶ ಸಿಗಬಹುದು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

Continue Reading

ಕ್ರೀಡೆ

IPL 2024: ಕೊಹ್ಲಿಯನ್ನು ಹಿಂದಿಕ್ಕಿ ಆರೆಂಜ್​ ಕ್ಯಾಪ್​ ಪಡೆದ ಗಾಯಕ್ವಾಡ್​; ಪರ್ಪಲ್​ ಕ್ಯಾಪ್​ ಹೋಲ್ಡರ್​ ಯಾರು?

IPL 2024: ಪರ್ಪಲ್​ ಕ್ಯಾಪ್​ಗಾಗಿ ಮೂರು ಬೌಲರ್​ಗಳ ಮಧ್ಯೆ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಜಸ್​ಪ್ರೀತ್​ ಬುಮ್ರಾ, ಮುಸ್ತಫಿಜುರ್​ ರೆಹಮಾನ್​, ಹರ್ಷಲ್​ ಪಟೇಲ್​ ತಲಾ 14 ವಿಕೆಟ್​ ಕಿತ್ತು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಪ್ರಸಕ್ತ ಸಾಗುತ್ತಿರುವ 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿಯ ಲೀಗ್​ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನು ಬೆರಳೆಣಿಕೆಯ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಎಲ್ಲ ತಂಡಗಳು ಪ್ಲೇ ಆಫ್​ ಪ್ರವೇಶಿಸಲು ಹರಸಾಹಸ ಪಡುತ್ತಿವೆ. ಜತೆಗೆ ಕೆಲವು ಆಟಗಾರರ ಮಧ್ಯೆ ಆರೆಂಜ್​ ಕ್ಯಾಚ್(Orange Cap)​ ಮತ್ತು ಪರ್ಪಲ್​ ಕ್ಯಾಪ್​ಗಾಗಿ(purple cap)​ ತೀವ್ರ ಪೈಪೋಟಿ ಏರ್ಪಟ್ಟಿದೆ.

ಈ ಆವೃತ್ತಿಯಲ್ಲಿ 48 ಪಂದ್ಯದ ಮುಕ್ತಾಯದ ವರೆಗೆ ರನ್​ಗಳಿಕೆಯಲ್ಲಿ ಅಗ್ರಸ್ಥಾನ ಪಡೆದು ಆರೆಂಜ್​ ಕ್ಯಾಪ್​ ಧರಿಸಿದ್ದ ವಿರಾಟ್​ ಕೊಹ್ಲಿ(500 ರನ್​​)ಯನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಋತುರಾಜ್​ ಗಾಯಕ್ವಾಡ್(509 ರನ್​)​ ಹಿಂದಿಕ್ಕಿದ್ದಾರೆ. ನಿನ್ನೆ(ಬುಧವಾರ) ನಡೆದ ಪಂಜಾಬ್​ ಕಿಂಗ್ಸ್​ ಎದುರಿನ ಪಂದ್ಯದಲ್ಲಿ 62 ರನ್​ ಬಾರಿಸುವ ಮೂಲಕ ಗಾಯಕ್ವಾಡ್(Ruturaj Gaikwad)​​ ಈ ಸಾಧನೆ ಮಾಡಿದರು. ಸದ್ಯ ಉಭಯ ಆಟಗಾರರ ಮಧ್ಯೆ ಆರೆಂಜ್​ ಕ್ಯಾಪ್​ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಟೂರ್ನಿಯ ಅಂತ್ಯದಲ್ಲಿ ಯಾರು ಅತ್ಯಧಿಕ ರನ್​ ಗಳಿಸಿರುತ್ತಾರೋ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಟಾಟಾ ಕಂಪೆನಿಯ ಎಲೆಕ್ಟ್ರಿಕ್​ ಕಾರ್​ ಸಿಗಲಿದೆ.

ಆರೆಂಜ್ ಕ್ಯಾಪ್​​ ರೇಸ್​ನಲ್ಲಿರುವ ಟಾಪ್​ 5 ಬ್ಯಾಟರ್​ಗಳು


ಋತುರಾಜ್​ ಗಾಯಕ್ವಾಡ್​-509 ರನ್​(10 ಇನಿಂಗ್ಸ್​)

ವಿರಾಟ್​ ಕೊಹ್ಕಿ-500 ರನ್​(10 ಇನಿಂಗ್ಸ್​)

ಸಾಯಿ ಸುದರ್ಶನ್​- 418 ರನ್​( 10 ಇನಿಂಗ್ಸ್​)

ಕೆ.ಎಲ್​ ರಾಹುಲ್​-406 ರನ್​( 10 ಇನಿಂಗ್ಸ್​)

ರಿಷಭ್​ ಪಂತ್​-398 ರನ್​(11 ಇನಿಂಗ್ಸ್​)

ಇದನ್ನೂ ಓದಿ Virat kohli : ಕಾಮೆಂಟ್ರಿ ಬಾಕ್ಸ್​​ನಲ್ಲಿ ಕುಳಿತು ವಿಮರ್ಶೆ ಮಾಡುವುದು ಸುಲಭ; ಕೊಹ್ಲಿ ತಿರುಗೇಟು ಕೊಟ್ಟಿದ್ದು ಯಾರಿಗೆ?

ಪರ್ಪಲ್​ ಕ್ಯಾಕ್​ಗೆ ಮೂರು ಮಂದಿಯ ಮಧ್ಯೆ ಫೈಟ್​


ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗೆ ನೀಡುವ ಪರ್ಪಲ್​ ಕ್ಯಾಪ್​ಗಾಗಿ ಮೂರು ಬೌಲರ್​ಗಳ ಮಧ್ಯೆ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಜಸ್​ಪ್ರೀತ್​ ಬುಮ್ರಾ, ಮುಸ್ತಫಿಜುರ್​ ರೆಹಮಾನ್​, ಹರ್ಷಲ್​ ಪಟೇಲ್​ ತಲಾ 14 ವಿಕೆಟ್​ ಕಿತ್ತು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ ಬೌಲಿಂಗ್​ ಇಕಾನಮಿ ಹೊಂದಿರುವ ಕಾರಣ ಸದ್ಯ ಈ ಕ್ಯಾಪ್​ ಬುಮ್ರಾ ಬಳಿ ಇದೆ. ಇನ್ನುಳಿದಂತೆ ಆರು ಮಂದಿ ಬೌಲರ್​ಗಳು ತಲಾ 13 ವಿಕೆಟ್​ ಕಿತ್ತಿದ್ದಾರೆ. ಇವರಿಗೂ ಕೂಡ ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ವಿಕೆಟ್​ ಕಿತ್ತರೆ ಪರ್ಪಲ್​ ಕ್ಯಾಪ್​ ಪಡೆಯುವ ಅವಕಾಶವಿದೆ.

ಪರ್ಪಲ್​ ಕ್ಯಾಪ್​​ ರೇಸ್​ನಲ್ಲಿರುವ ಟಾಪ್​ 5 ಬೌಲರ್​ಗಳು


ಜಸ್​ಪ್ರೀತ್​ ಬುಮ್ರಾ-14 ವಿಕೆಟ್​(10 ಪಂದ್ಯ)

ಮುಸ್ತಫಿಜುರ್​ ರೆಹಮಾನ್​-14 ವಿಕೆಟ್​(9 ಪಂದ್ಯ​)

ಹರ್ಷಲ್​ ಪಟೇಲ್​-14 ವಿಕೆಟ್​(10 ಪಂದ್ಯ​)

ಮತೀಶ ಪತಿರಾಣ-13 ವಿಕೆಟ್​(6 ಪಂದ್ಯ)

ಟಿ ನಟರಾಜನ್​-13 ವಿಕೆಟ್​(7 ಪಂದ್ಯ)

Continue Reading

ಕ್ರಿಕೆಟ್

T20 World Cup: ಟಿ20 ವಿಶ್ವಕಪ್​ ತಂಡ ಸೇರಲು ರಾಹುಲ್​ಗೆ ಇನ್ನೂ ಇದೆ ಅವಕಾಶ

T20 World Cup: ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

VISTARANEWS.COM


on

T20 World Cup
Koo

ದುಬೈ: ಟಿ20 ವಿಶ್ವಕಪ್​ಗೆ(T20 World Cup) ಈಗಾಗಲೇ ಭಾರತ 15 ಸದಸ್ಯರ ಮತ್ತು ಮೀಸಲು ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್(KL Rahul)​ ಅವರನ್ನು ಈ ತಂಡದಿಂದ ಕೈಬಿಡಲಾಗಿದೆ. ಆದರೆ, ರಾಹುಲ್​ಗೆ ಇನ್ನೂ ಕೂಡ ತಂಡ ಸೇರುವ ಅವಕಾಶವೊಂದಿದೆ. ಇದು ಹೇಗೆ ಎನ್ನುವ ಮಾಹಿತಿ ಇಂತಿದೆ.

ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ. ಅವಕಾಶ ಸಿಕ್ಕ ಆಟಗಾರರ ಪೈಕಿ ಯಾರಾದರು ಗಾಯಗೊಂಡು ಅಲಭ್ಯರಾದರೆ ಆಗ ರಾಹುಲ್​ಗೆ ಅವಕಾಶ ಸಿಗಬಹುದು. ಇನ್ನೊಂದು ಸಾಧ್ಯತೆ ಎಂದರೆ ತಂಡ ಬದಲಾವಣೆಯ ಅಂತಿಮ ದಿನವಾದ 25ರಂದು ಅಚ್ಚರಿ ಎಂಬಂತೆ ರಾಹುಲ್​ ಆಯ್ಕೆಯಾಗುವ ಸಾಧ್ಯತೆಯೂ ಇದೆ.

ಕೆಲ ತಂಡಗಳು ಗೇಮ್ ಸ್ಟ್ರಟಜಿ ಮಾಡಿಕೊಂಡು ಕೆಲ ಸ್ಟಾರ್​ ಆಟಗಾರರನ್ನು ಮೊದಲ ಪಟ್ಟಿಯಿಂದ ಕೈಬಿಟ್ಟು ಆ ಬಳಿಕ ಅಚ್ಚರಿ ಎಂಬಂತೆ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ಇದರ ಹಿಂದಿರುವ ಕಾರಣವೆಂದರೆ ಎದುರಾಳಿ ತಂಡಗಳ ಪೂರ್ವ ಯೋಜನೆಯನ್ನು ಬುಡಮೇಲು ಮಾಡುವುದು. ಕಳೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಅನುಭವಿ ಆಟಗಾರ ಮಾರ್ನಸ್​ ಲನುಶೇನ್​ ಅವರನ್ನು ಆಯ್ಕೆ ಮಾಡಿರಲಿಲ್ಲ. ಇನ್ನೇನು ತಂಡ ಬದಲಾವಣೆಗೆ ಅಂತಿಮ ದಿನ ಬಾಕಿ ಇರುವಾಗ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಹೀಗಾಗಿ ಭಾರತ ಕೂಡ ರಾಹುಲ್​ ಅವರನ್ನು ಈ ರೀತಿ ಆಯ್ಕೆ ಮಾಡುವ ಸಾಧ್ಯತೆಯೂ ಕಂಡು ಬಂದಿದೆ.

ಇದನ್ನೂ ಓದಿ T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

Continue Reading

ಕ್ರೀಡೆ

MS Dhoni: ರನ್​ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ

MS Dhoni: ಯಾವುದೇ ವಿವಾದಗಳಿಗೆ ಒಳಗಾಗದೆ ಶಾಂತ ಸ್ವಭಾವದಿಂದ ಆಡುವ ಧೋನಿ ಹಲವು ಬಾರಿ ಸಹ ಆಟಗಾರರ ಶತಕ ಮತ್ತು ಅರ್ಧಶತಕಕ್ಕೋಸ್ಕರ ರನ್​ ಗಳಿಸದೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಆದರೆ, ಪಂಬಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಸಲುವಾಗಿ ಸ್ವಾರ್ಥಿಯಾಗಿ ಕಂಡು ಬಂದರು.

VISTARANEWS.COM


on

MS Dhoni
Koo

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮಾಜಿ ನಾಯಕ​ ಮಹೇಂದ್ರ ಸಿಂಗ್ ಧೋನಿ(MS Dhoni) ಬುಧವಾರ ನಡೆದ ಪಂಜಾಬ್​ ಲಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ತೋರಿದ ವರ್ತನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದು ಮಾಡುತ್ತಿದೆ. ಹಲವು ನೆಟ್ಟಿಗರು ಧೋನಿ ಇಷ್ಟೊಂದು ಸ್ವಾರ್ಥಿಯಾಗಬಾರದೆಂದು ಟೀಕಿಸಿದ್ದಾರೆ.

ಯಾವುದೇ ವಿವಾದಗಳಿಗೆ ಒಳಗಾಗದೆ ಶಾಂತ ಸ್ವಭಾವದಿಂದ ಆಡುವ ಧೋನಿ ಹಲವು ಬಾರಿ ಸಹ ಆಟಗಾರರ ಶತಕ ಮತ್ತು ಅರ್ಧಶತಕಕ್ಕೋಸ್ಕರ ರನ್​ ಗಳಿಸದೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಧೋನಿಯ ಈ ನಡೆಯ ಬಗ್ಗೆ ಅನೇಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಆದರೆ, ಪಂಬಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಸಲುವಾಗಿ ಸ್ವಾರ್ಥಿಯಾಗಿ ಕಂಡು ಬಂದರು.

ಚೆನ್ನೈ ಬ್ಯಾಟಿಂಗ್​ ಇನಿಂಗ್ಸ್​ನ ಅಂತಿಮ ಓವರ್​ನಲ್ಲಿ ಅರ್ಷದೀಪ್​ ಎಸೆದ ಈ ಓವರ್​ನ ಮೂರನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಚೆಂಡು ಬೌಂಡರಿ ಲೈನ್​ ಬಳಿ ಹೋದರೂ ಕೂಡ ಧೋನಿ ರನ್​ ಓಡದೆ ಸ್ವಾರ್ಥ ತೋರಿದರು. ನಾನ್​ಸ್ಟ್ರೈಕ್​ನಲ್ಲಿದ್ದ ಡೇರಿಯಲ್​ ಮಿಚೆಲ್​ ಅವರು ರನ್​ಗಾಗಿ ಓಡಿ ಕ್ರೀಸ್​ ಬಳಿ ಬಂದರು. ಈ ವೇಳೆ ಧೋನಿ ಅವೇಶದಲ್ಲಿಯೇ ಮಿಚೆಲ್​ಗೆ ಹಿಂದೆ ಹೋಗುವಂತೆ ತಿಳಿಸಿದರು. ಸ್ಟ್ರೈಕ್​ ತನಕ ಓಡಿದ್ದ ಮಿಚೆಲ್​ ಮತ್ತೆ ನಾನ್​ಸ್ಟ್ರೈಕರ್​ ಬಳಿಗೆ ಓಡಿ ಬಂದರು. ಮುಂದಿನ ಎಸೆತವನ್ನು ಧೋನಿ ಬೀಟ್​ ಮಾಡಿದರು. 5ನೇ ಎಸೆತದಲ್ಲಿ ಸಿಕ್ಸರ್​ ಬಾರಿಸಿ ಅಂತಿಮ ಎಸೆತದಲ್ಲಿ ರನೌಟ್​ ಆದರು.

ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ಬ್ಯಾಟಿಂಗ್​ಗಾಗಿ ಆಸೆ ತೋರಿದ ಧೋನಿಯ ಈ ಸ್ವಾರ್ಥವನ್ನು ಅನೇಕ ನೆಟ್ಟಿಗರು ಟೀಕಿಸಿದ್ದಾರೆ. ಇದು ಮತ್ತೊಬ್ಬ ಆಟಗಾರನಿಗೆ ಮಾಡುವ ಅವಮಾನ ಎಂದು ಕಮೆಂಟ್​ ಮಾಡಿದ್ದಾರೆ. ಈ ಘಟನೆಯ ವಿಡಿಯೊ ಎಲ್ಲಡೆ ವೈರಲ್(viral video)​ ಆಗಿದೆ. ಧೋನಿ ಸ್ಟ್ರೈಕ್​ ಉಳಿಸಿಕಿಕೊಂಡರೂ ಕೂಡ ಅವರಿಂದ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. 11  ಎಸೆತಗಳಿಂದ 14 ರನ್ ಮಾತ್ರ ಗಳಿಸಿದರು.

ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್​ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್​ ಬ್ಯಾಟರ್​ಗಳು 17.5 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವು ಸಾಧಿಸಿತು.

Continue Reading
Advertisement
Vote Jihad
ದೇಶ10 mins ago

Vote Jihad: ವೋಟ್‌ ಜಿಹಾದ್‌ಗೆ ಕರೆ ನೀಡಿದ್ದು ಇಂಡಿಯಾ ಒಕ್ಕೂಟದ ಮನಸ್ಥಿತಿಗೆ ಕನ್ನಡಿ ಎಂದ ಮೋದಿ

Prajwal Revanna Case PM Modi defends MP accused of rape says Rahul Gandhi
Lok Sabha Election 202415 mins ago

Prajwal Revanna Case: ಮಹಾನ್‌ ರೇಪಿಸ್ಟ್‌ಗೆ ಮೋದಿಯಿಂದ ರಕ್ಷಣೆ; ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ರಾಹುಲ್‌ ಗಾಂಧಿ ಗುಡುಗು

Rinku Singh
ಕ್ರೀಡೆ24 mins ago

Rinku Singh: ಟಿ20 ವಿಶ್ವಕಪ್​ಗೆ ರಿಂಕು ಆಯ್ಕೆಯಾಗಬಹುದೆಂದು ಪಟಾಕಿ, ಸಿಹಿ ತಂದಿಟ್ಟಿದ್ದ ತಂದೆಗೆ ನಿರಾಸೆ

Crime News
ಕ್ರೈಂ24 mins ago

Crime News : 6 ವರ್ಷದ ಬಾಲಕಿಯ ಅಪಹರಿಸಲು ಯತ್ನಿಸಿದ ದುಷ್ಟ; ಹಿಟ್‌ ಆ್ಯಂಡ್‌ ರನ್‌ ಮಾಡಿ ಚಾಲಕರಿಬ್ಬರು ಎಸ್ಕೇಪ್‌

Samsung
ತಂತ್ರಜ್ಞಾನ43 mins ago

ಸ್ಯಾಮ್‌ಸಂಗ್‌ನ ‘ಫ್ಯಾಬ್ ಗ್ರಾಬ್ ಫೆಸ್ಟ್’: ಸ್ಮಾರ್ಟ್‌ಫೋನ್‌, ಟಿವಿ, ಲ್ಯಾಪ್‌ಟಾಪ್‌, ಡಿಜಿಟಲ್ ಉಪಕರಣಗಳ ಮೇಲೆ ಅದ್ಭುತ ಆಫರ್

students self harming
ಕ್ರೈಂ1 hour ago

Students Self harming: 20 ವರ್ಷಗಳಲ್ಲಿ ಐಐಟಿಯ 115 ವಿದ್ಯಾರ್ಥಿಗಳು ಆತ್ಮಹತ್ಯೆ

Prajwal Revanna Case HD DeveGowda and HD Kumaraswamy slams HD Revanna
ಕ್ರೈಂ2 hours ago

Prajwal Revanna Case: ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Pawan Kalyan Hari Hara Veera Mallu Part 1 teaser Out
ಟಾಲಿವುಡ್2 hours ago

Pawan Kalyan: ʻಹರಿ ಹರ ವೀರ ಮಲ್ಲುʼವಾಗಿ ಅಬ್ಬರಿಸಿದ ಪವನ್ ಕಲ್ಯಾಣ್; ಟೀಸರ್‌ ಔಟ್‌!

supreme court
ದೇಶ2 hours ago

Supreme Court: CBI ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ; ಸುಪ್ರೀಂಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ

Viral News
ವೈರಲ್ ನ್ಯೂಸ್2 hours ago

Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌