Manika Batra: ಪ್ಯಾರಿಸ್​ನಲ್ಲಿ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮಣಿಕಾ ಬಾತ್ರಾ - Vistara News

ಕ್ರೀಡೆ

Manika Batra: ಪ್ಯಾರಿಸ್​ನಲ್ಲಿ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮಣಿಕಾ ಬಾತ್ರಾ

Manika Batra: ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಮಣಿಕಾ ಬಾತ್ರಾ ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಸುತ್ತಿನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದರು.

VISTARANEWS.COM


on

Manika Batra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತದ ಖ್ಯಾತ ಟೇಬಲ್‌ ಟೆನಿಸ್‌(Indian table tennis player) ಆಟಗಾರ್ತಿ ಮಣಿಕಾ ಬಾತ್ರಾ(Manika Batra) ಪ್ಯಾರಿಸ್​ ಒಲಿಂಪಿಕ್ಸ್(Paris Olympics 2024)​ನಲ್ಲಿ ಪದಕ ಗೆಲ್ಲುವುದೇ ನನ್ನ ಪ್ರಮುಖ ಗುರಿ ಎಂದಿದ್ದಾರೆ. ಜತೆಗೆ ಕಳೆದ ಟೋಕಿಯೋದಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡಲಾರೆ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಮಣಿಕಾ ಬಾತ್ರಾ, “ಕಳೆದ ಒಲಿಂಪಿಕ್ಸ್‌ ವೇಳೆ ಕೆಲವು ತಪ್ಪುಗಳಾದವು. ಈಗ ನನ್ನ ಮನಸ್ಥಿತಿ ಬದಲಾಗಿದೆ. ಹೆಚ್ಚು ಆತ್ಮವಿಶ್ವಾಸದಿಂದ ಇದ್ದೇನೆ. ಈ ಬಾರಿ ಎಚ್ಚರಿಕೆಯಿಂದ ಮತ್ತು ಎಲ್ಲ ಪೂರ್ವ ಸಿದ್ಧತೆಯೊಂದಿಗೆ ಆಡುವ ಮೂಲಕ ಪದಕವೊಂದನ್ನು ಗೆಲ್ಲುವುದು ನನ್ನ ಪ್ರಮುಖ ಗುರಿ” ಎಂದು ಹೇಳಿದ್ದಾರೆ. ಈ ಬಾರಿ ಒಟ್ಟು ಟೇಬಲ್‌ ಟೆನಿಸ್​ನಲ್ಲಿ 8 ಮಂದಿ ಆಟಗಾರರು ಕಣಕ್ಕಿಳಿಯಲಿದ್ದಾರೆ.

ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಮಣಿಕಾ ಬಾತ್ರಾ ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಸುತ್ತಿನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಮಣಿಕಾ ಎಲ್ಲರ ಗಮನ ಸೆಳೆದಿದ್ದರು. ಏಷ್ಯಾ ಕಪ್‌ ಟೇಬಲ್ ಟೆನಿಸ್(Asian Cup Table Tennis) ಟೂರ್ನಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಯೂ ಇವರದ್ದಾಗಿದೆ. ಕಂಚಿನ ಪದಕ ಜಯಿಸಿದ್ದರು.

ಈ ಬಾರಿಯ ಒಲಿಂಪಿಕ್ಸ್​ನಲ್ಲಿ 117 ಕ್ರೀಡಾಪಟುಗಳು ಪದಕ ನಿರೀಕ್ಷೆಯೊಂದಿಗೆ ಸ್ಪರ್ಧಿಸಲಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ 119 ಮಂದಿ ಕ್ರೀಡಾಪಟುಗಳು ಪ್ರತಿನಿಧಿಸಿದ್ದರು.

ಅಥ್ಲೆಟಿಕ್ಸ್​ನಲ್ಲಿ 29 ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. 18 ಪುರುಷರು ಹಾಗೂ 11 ಮಹಿಳೆಯರು ಸೇರಿದ್ದಾರೆ. ಆರಂಭದಲ್ಲಿ ಅಥ್ಲೀಟ್​ಗಳ ಸಂಖ್ಯೆ​ 30 ಇತ್ತು. ಆದರೆ ವನಿತಾ ಶಾಟ್‌ಪುಟರ್‌ ಅಭಾ ಖತುವಾ ಗೈರಿನಿಂದ 29ಕ್ಕೆ ಇಳಿಯಿತು. ಆದರೆ ಅವರನ್ನು ಕೈಬಿಟ್ಟ ಬಗ್ಗೆ ಯಾವುದೇ ಕಾರಣ ಅಥವಾ ವಿವರಣೆ ನೀಡಲಾಗಿಲ್ಲ.  29 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.

ಇದನ್ನೂ ಓದಿ PR Sreejesh: ಪ್ಯಾರಿಸ್​ ಒಲಿಂಪಿಕ್ಸ್ ಕೊನೆಯ ಟೂರ್ನಿ ಎಂದು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ ಪಿಆರ್ ಶ್ರೀಜೇಶ್

ಶೂಟಿಂಗ್​ನಲ್ಲಿ ಒಟ್ಟು 21 ಮಂದಿ ಸ್ಥಾನ ಪಡೆದಿದ್ದಾರೆ. 10 ಮಂದಿ ಪುರುಷರು ಹಾಗೂ 11 ಮಂದಿ ಮಹಿಳಾ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ಹಾಕಿ ತಂಡದಲ್ಲಿ 19 ಆಟಗಾರರಿದ್ದಾರೆ. ಟೇಬಲ್‌ ಟೆನಿಸ್​ನಲ್ಲಿ 8 ಮಂದಿ ಆಟಗಾರರು, ಬ್ಯಾಡ್ಮಿಂಟನ್​ನಲ್ಲಿ 7 ಮಂದಿ ಕಣಕ್ಕಿಳಿಯಲಿದ್ದಾರೆ. ಅವಳಿ ಒಲಿಂಪಿಕ್‌ ಪದಕ ಗೆದ್ದ ಪಿ.ವಿ. ಸಿಂಧು ಮೇಲೆ ಹ್ಯಾಟ್ರಿಕ್​ ಪದಕವೊಂದನ್ನು ನಿರೀಕ್ಷೆ ಮಾಡಲಾಗಿದೆ. ಉಳಿದಂತೆ ಕುಸ್ತಿ, ಆರ್ಚರಿ ಮತ್ತು ಬಾಕ್ಸಿಂಗ್‌ನಲ್ಲಿ ತಲಾ 6 ಮಂದಿ ಸ್ಪರ್ಧಿಸಲಿದ್ದಾರೆ.

ಗಾಲ್ಫ್​ನಲ್ಲಿ 4, ಟೆನಿಸ್‌ನಲ್ಲಿ 3, ಈಜು ಮತ್ತು ಹಾಯಿದೋಣಿಯಲ್ಲಿ ತಲಾ ಇಬ್ಬರು ಕಣಕ್ಕಿಳಿಯಲಿದ್ದಾರೆ. ಈಕ್ವೇಸ್ಟ್ರಿಯನ್‌(ಕುದುರೆ ಸವಾರಿ), ಜೂಡೋ, ರೋಯಿಂಗ್‌ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಒಬ್ಬರಷ್ಟೇ ಸ್ಪರ್ಧಿಸಲಿದ್ದಾರೆ. ಪಿ.ವಿ.ಸಿಂಧು(PV Sindhu) ಮತ್ತು ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್(Sharath Kamal) ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು?

Mohammed Shami: ಶಮಿ ಅವರು ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ.

VISTARANEWS.COM


on

Mohammed Shami
Koo

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರು ಕೌಟುಂಬಿಕ ಕಲಹ, ವೈಯಕ್ತಿಕ ಕಾರಣ ಹಾಗೂ ಖಿನ್ನತೆಯಿಂದ ಮೂರು ಸಲ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂಬ ವಿಚಾರವನ್ನು ಸ್ವತಃ ತವಾಗಿಯೇ ಹೇಳಿಕೊಂಡಿದ್ದರು. ಆದರೆ, ಇದೀಗ ಶಮಿ 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ ವಿಚಾರವನ್ನು ಅವರ ಗೆಳೆಯ ಬಹಿರಂಗಪಡಿಸಿದ್ದಾರೆ. ಈ ವಿಚಾರ ಕೇಳಿ ಶಮಿ ಅಭಿಮಾನಿಗಳು ಒಂದು ಕ್ಷಣ ಆತಂಕಗೊಂಡಿದ್ದಾರೆ.

ಶಮಿ ಅವರ ಸ್ನೇಹಿತ ಉಮೇಶ್ ಕುಮಾರ್ ಅವರು ಶುಭಂಕರ್ ಮಿಶ್ರಾ ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವ ವೇಳೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. “ಎರಡು ವರ್ಷಗಳ ಹಿಂದಿನ ಸಂಗತಿ ಇದಾಗಿದ್ದು, ಬೆಳಿಗ್ಗೆ ಸುಮಾರು 4 ಗಂಟೆ ಇರಬಹುದು. ನಾನು ನೀರು ಕುಡಿಯಲು ಎದ್ದು ಅಡುಗೆ ಮನೆಯ ಕಡೆಗೆ ಹೋಗುತ್ತಿದ್ದೆ, ಈ ವೇಳೆ ಶಮಿ ಬಾಲ್ಕನಿಯಲ್ಲಿ ನಿಂತಿದ್ದರು. ಚಿಂತೆಯಲ್ಲಿ ಇದ್ದ ಹಾಗೆ ಕಾಣಿಸುತ್ತಿತ್ತು. ನಾವು 19ನೇ ಮಹಡಿಯಲ್ಲಿ ವಾಸಿಸುತ್ತಿದ್ದೆವು. ನೀರು ಕುಡಿಯಲು ಹೋಗುತ್ತಿದ್ದ ನಾನು ನೇರವಾಗಿ ಶಮಿ ಬಳಿ ಓಡಿ ಬಂದೆ. ನಾನು ಬರುವುದು ಕೊಂಚ ತಡವಾಗಿದ್ದರೂ ಕೂಡ ಶಮಿ ಇಂದು ಜೀವಂತವಾಗಿರುತ್ತಿರಲಿಲ್ಲ. ಅವರು ಅಂದು ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ದೇವರ ದಯೆಯಿಂದ ಆ ದಿನ ರಾತ್ರಿ ದೊಡ್ಡ ಅನಾಹುತವೊಂದು ತಪ್ಪಿತು” ಎಂದು ಹೇಳುವ ಮೂಲಕ ಶಮಿ ಆತ್ಮಹತ್ಯೆಗೆ ಮುಂದಾಗಿದ್ದ ಶಾಕಿಂಗ್​ ವಿಚಾರವನ್ನು ಅವರ ಸ್ನೇಹಿತ ತೆರೆದಿಟ್ಟರು.

“ಶಮಿಯನ್ನು ಅಂದು ನಾನು ಆತ್ಮಹತ್ಯೆಗೆ ಯತ್ನಿಸಿದ್ದ ಬಗ್ಗೆ ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರಿಸಿದ್ದ ಶಮಿ, ಪಾಕಿಸ್ತಾನದ ಜತೆ ಮ್ಯಾಚ್‌ ಫಿಕ್ಸಿಂಗ್ ಆರೋಪ ಕೇಳಿ ಬಂದಿರುವುದು ಸಹಿಸಿಕೊಳ್ಳು ಸಾಧ್ಯವಾಗದೆ ನಾನು ಈ ರಿತಿ ಮಾಡಲು ಮುಂದಾದೆ ಎಂದು ಹೇಳಿದ್ದಾಗಿ ಅವರ ಗೆಳೆಯ ಹೇಳಿದ್ದಾರೆ. ವಿಚ್ಛೇದಿತ ಪತ್ನಿ ಹಸಿನ್ ಜಹಾನ್‌ ಅವರು ಶಮಿ ವಿರುದ್ಧ ಮ್ಯಾಚ್‌ ಫಿಕ್ಸಿಂಗ್ ಆರೋಪ ಮಾಡಿದ್ದರು. ಈಗಲೂ ಕೂಡ ಶಮಿ ಅವರ ವೈವಾಹಿಕ ಬದುಕು ಆಗಾಗ ಅನಪೇಕ್ಷಿತ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ.

ಇದನ್ನೂ ಓದಿ Mohammed Shami : ರೋಹಿತ್​ ಶರ್ಮಾಗೆ ನನ್ನ ಬೌಲಿಂಗ್​ ಎಂದರೆ ಭಯ; ಮೊಹಮ್ಮದ್ ಶಮಿ

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ತಂಡದ ನಾಯಕ ರೋಹಿತ್​ ಶರ್ಮ ಜತೆಗಿನ ಇನ್‌ಸ್ಟಾಗ್ರಾಮ್‌ ಚಾಟ್​ನಲ್ಲಿ ಶಮಿ ತಾನು ಖಿನ್ನತೆಗೆ ಒಳಗಾಗಿ ಮೂರು ಸಲ ಸಾಯಲು ಮುಂದಾಗಿದ್ದೆ ಎಂದು ಹೇಳಿಕೊಂಡಿದ್ದರು.

ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಶಮಿ  ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

Continue Reading

ಕ್ರೀಡೆ

Paris Olympics: ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿದ್ದಾರೆ ಭಾರತದ 24 ಸೈನಿಕರು

Paris Olympics: ಭಾರತೀಯ ಸೇನೆಯ 24 ಮಂದಿ ಕೂಡೆ ಸ್ಪರ್ಧಿಸುತ್ತಿರುವುದು ವಿಶೇಷ. ಇದರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಬಾಕ್ಸರ್​ಗಳಾದ ಜಾಸ್ಮಿನ್​ ಲಂಬೋರಿಯಾ ಮತ್ತು ಕುಸ್ತಿ ಪಟು ರಿತಿಕಾ ಹೂಡಾ ಈ ಮಹಿಳಾ ಸೇನಾನಿಗಳು.

VISTARANEWS.COM


on

Paris Olympics
Koo

ಬೆಂಗಳೂರು: ಒಲಿಂಪಿಕ್ಸ್‌ನಂಥ(Paris Olympics) ಜಾಗತಿಕ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದೇ ಭಾರತೀಯ ಕ್ರೀಡಾಪಟುಗಳ ಮುಖ್ಯ ಗುರಿ. ಈ ಬಾರಿ 117 ಕ್ರೀಡಾಪಟುಗಳು ಪದಕ ಕನಸನ್ನು ಹೊತ್ತು ಪ್ಯಾರಿಸ್​ಗೆ ತೆರಳಲಿದ್ದಾರೆ. ಒಲಿಂಪಿಕ್ಸ್ಗೆ ತೆರಳುವ ಕ್ರೀಡಾಪಟುಗಳಿಗೆ ಹಿಂದೆಂದಿಗಿಂತ್ತಲೂ ದೊರೆಯದ ಬೆಂಬಲ ಈ ಬಾರಿ ಸಿಕ್ಕಿದೆ.

117 ಕ್ರೀಡಾಪಟುಗಳ ಪೈಕಿ 72 ಮಂದಿಗೆ ಇದು ಚೊಚ್ಚಲ ಒಲಿಂಪಿಕ್ಸ್​ ಕೂಟವಾಗಿದೆ. ಭಾರತೀಯ ಸೇನೆಯ 24 ಮಂದಿ ಕೂಡೆ ಸ್ಪರ್ಧಿಸುತ್ತಿರುವುದು ವಿಶೇಷ. ಇದರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಬಾಕ್ಸರ್​ಗಳಾದ ಜಾಸ್ಮಿನ್​ ಲಂಬೋರಿಯಾ ಮತ್ತು ಕುಸ್ತಿ ಪಟು ರಿತಿಕಾ ಹೂಡಾ ಈ ಮಹಿಳಾ ಸೇನಾನಿಗಳು. ಅಥ್ಲೆಟಿಕ್ಸ್​ನಲ್ಲಿ ಗರಿಷ್ಠ 13 ಮಂದಿ ಸೈನಿಕರಿದ್ದಾರೆ. ಟೋಕಿಯೊ ಒಲಿಂಪಿಕ್ಸ್​ ಜಾವೆಲಿನ್​ ಎಸೆತದಲ್ಲಿ ಚಿನ್ನ ಗೆದ್ದ ನೀರಜ್​ ಚೋಪ್ರಾ, ಓಟಗಾರ ಅವಿನಾಶ್​ ಸಾಬ್ಲೆ ಇದರಲ್ಲಿ ಪ್ರಮುಖರು. ಬಾಕ್ಸರ್​ ಅಮಿತ್​ ಪಂಗಲ್​, ಆರ್ಚರ್​ ತರುಣ್​ದೀಪ್ ರೈ, ಟೆನಿಸ್​ ಆಟಗಾರ ಶ್ರೀರಾಮ್​ ಬಾಲಾಜಿ ಕೂಡ ಸೈನಿಕರಾಗಿದ್ದಾರೆ.

ನಾಳೆಯಿಂದ ಭಾರತದ ಸ್ಪರ್ಧೆ ಆರಂಭ

ಭಾರತ (India’s Schedule At Paris Olympics) ನಾಳೆಯಿಂದ ಒಲಿಂಪಿಕ್ಸ್​ ಸ್ಪರ್ಧೆ ಆರಂಭಿಸಲಿದೆ(India’s July 25 Schedule At Paris Olympics). ನಾಳೆ(ಗುರುವಾರ) ನಡೆಯುವ ಆರ್ಚರಿ(Archery) ಸ್ಪರ್ಧೆಯ ಮಹಿಳೆಯರ ವೈಯಕ್ತಿಕ ಶ್ರೇಯಾಂಕ ಸುತ್ತು ವಿಭಾಗದಲ್ಲಿ ಭಾರತ ದೀಪಿಕಾ ಕುಮಾರಿ(Deepika Kumari), ಅಂಕಿತಾ ಭಕತ್(Ankita Bhakat), ಭಜನ್ ಕೌರ್(Bhajan Kaur)​ ಕಣಕ್ಕಿಳಿಯಲಿದ್ದಾರೆ. ಪುರುಷರ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಬಿ. ಧೀರಾಜ್(B. Dhiraj), ತರುಣದೀಪ್ ರೈ(Tarundeep Rai), ಪ್ರವೀಣ್ ಜಾಧವ್(Pravin Jadhav) ಸ್ಪರ್ಧಿಸಲಿದ್ದಾರೆ. ಈ ಪಂದ್ಯ ಸಂಜೆ 5: 45ಕ್ಕೆ ನಡೆಯಲಿದೆ. ಮಹಿಳೆಯ ಪಂದ್ಯ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಇದನ್ನೂ ಓದಿ Paris Olympics: ಕ್ರೀಡಾಪಟುಗಳು ರತಿ ಕ್ರೀಡೆ ನಡೆಸಿದರೆ ಮಂಚ ಮುರಿದೇ ಹೋಗುತ್ತೆ! ಏನಿದು ‘ಆ್ಯಂಟಿ ಸೆಕ್ಸ್​ ಬೆಡ್?

ಕರ್ನಾಟಕದಿಂದ 9 ಮಂದಿ ಸ್ಪರ್ಧೆ


ಒಲಿಂಪಿಕ್ಸ್​ನಲ್ಲಿ ಈ ಬಾರಿ ರಾಜ್ಯದ ಪರವಾಗಿ ಒಟ್ಟು 9 ಮಂದಿ ಕ್ರೀಡಾಳುಗಳು ದೇಶವನ್ನು ಪ್ರತಿನಿಧಿಸಲಿದ್ದಾರೆ. ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್​ನಲ್ಲಿ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್​ನಲ್ಲಿ ಅದಿತಿ ಅಶೋಕ್, ಮಹಿಳಾ ಫ್ರೀಸ್ಟೈಲ್ ಈಜು ಸ್ಫರ್ಧೆಯಲ್ಲಿ ಧಿನಿಧಿ ದೇಸಿಂಗೂ , ಮಿಕ್ಸೆಡ್ ರಿಲೇ ಓಟದಲ್ಲಿ ಎಂ.ಆರ್.ಪೂವಮ್ಮ, ಟೇಬಲ್ ಟೆನ್ನಿಸ್​ನಲ್ಲಿ ಅರ್ಚನಾ ಕಾಮತ್, ಪುರುಷರ ಈಜು ಸ್ಫರ್ಧೆಯಲ್ಲಿ ಶ್ರೀಹರಿ ನಟರಾಜ್, ಪುರುಷರ ಟೆನ್ನಿಸ್ ಡಬಲ್ಸ್​ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್​ನಲ್ಲಿ ನಿಶಾಂತ್ ದೇವ್, ಮಿಕ್ಸೆಡ್ ರಿಲೇ ಓಟದಲ್ಲಿ ಮಿಜೋ ಚಾಕೋ ಕಣಕ್ಕಿಳಿಯಲಿದ್ದಾರೆ. ಎಲ್ಲ 9 ಮಂದಿಯೂ ಪದಕ ಗೆಲ್ಲಲಿ ಎನ್ನುವುದು ಕನ್ನಡಿಗರ ಆಶಯ ಮತ್ತು ಹಾರೈಕೆ.

Continue Reading

ಕ್ರೀಡೆ

Paris Olympics: ಕ್ರೀಡಾಪಟುಗಳು ರತಿ ಕ್ರೀಡೆ ನಡೆಸಿದರೆ ಮಂಚ ಮುರಿದೇ ಹೋಗುತ್ತೆ! ಏನಿದು ‘ಆ್ಯಂಟಿ ಸೆಕ್ಸ್​ ಬೆಡ್?

Paris Olympics: ಆ್ಯಂಟಿ ಸೆಕ್ಸ್​ ಬೆಡ್ ಎಂದರೆ ಒಬ್ಬ ವ್ಯಕ್ತಿ ಮಾತ್ರ ಮಲಗಬಹುದಾದ ಹಾಸಿಗೆ ಇದಾಗಿದೆ. ಇದನ್ನು ಮರುಬಳಕೆಯ ಕಾರ್ಡ್‌ಬೋರ್ಡ್‌ನಿಂದ ತಯಾರಿಸಲಾಗಿದೆ. ಈ ಬೆಡ್​ ಒಬ್ಬರ ತೂಕವನ್ನು ಹೊರುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ ಎನ್ನಲಾಗಿದೆ. ಕೆಲವು ನೆಟ್ಟಿಗರು ಈ ಬೆಡ್​ನಲ್ಲಿ ಆರಾಮವಾಗಿ ಲೈಂಗಿಕೆ ಕ್ರಿಯೆ ನಡೆಸಬಹುದು ಎಂದು ಹಾಸ್ಯಾಸ್ಪದವಾಗಿ ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು, ಇವರೆಂಥ ಮೂರ್ಖರು? ಸೆಕ್ಸ್‌ ಮಾಡಲು ಮಂಚ ಯಾಕೆ? ವಾತ್ಸಾಯನನ ಕಾಮಸೂತ್ರದಲ್ಲಿ ಎಷ್ಟೊಂದು ಭಂಗಿಗಳಿವೆ? ಕ್ರೀಡಾ ಪಟುಗಳೇನು ಮಂಚ ಇಲ್ಲದೆಯೂ ಸೆಕ್ಸ್‌ ಮಾಡಲು ಬರದಷ್ಟು ದಡ್ಡರೇ ಎಂದು ಪ್ರಶ್ನಿಸಿದ್ದಾರೆ!

VISTARANEWS.COM


on

Paris Olympics
Koo

ಪ್ಯಾರಿಸ್​: ಪ್ರಣಯ ನಗರ ಎಂದೇ ಹೆಸರಾದ ಪ್ಯಾರಿಸ್​ನಲ್ಲಿ (Paris Olympics) ನಡೆಯುವ 33ನೇ ಆವೃತ್ತಿಯ ಒಲಿಂಪಿಕ್ಸ್​ ಕ್ರೀಡಾಕೂಟ ಇನ್ನೆರಡು ದಿನದಲ್ಲಿ ಆರಂಭಗೊಳ್ಳಲಿದೆ. ಕ್ರೀಡಾಕೂಟಕ್ಕಿಂತ ಹೆಚ್ಚು ಸುದ್ದಿಯಾಗುತ್ತಿರುವುದು ಮತ್ತು ಕುತೂಹಲ ಮೂಡಿಸಿದ್ದು ಕ್ರೀಡಾಗ್ರಾಮದಲ್ಲಿ ಅಳವಡಿಸಿರುವ ‘ಆ್ಯಂಟಿ ಸೆಕ್ಸ್​ ಬೆಡ್​'(“anti-sex” beds). ಈ ಬೆಡ್​ ಅಳವಡಿಸಲು ಕಾರಣವೇನು? ಎನ್ನುವ ಮಾಹಿತಿ ಇಂತಿದೆ.

ಸಾಮಾನ್ಯವಾಗಿ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾಗಿಯಾಗುವ ಸಾಕಷ್ಟು ಕ್ರೀಡಾಪಟುಗಳು ಲೈಂಗಿಕೆ ಕ್ರಿಯೆ ನಡೆಸುತ್ತಾರೆ. ಇದೇ ಕಾರಣಕ್ಕೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ತಾವು ತಂಗುವ ಕ್ರೀಡಾಗ್ರಾಮಕ್ಕೆ ಎಂಟ್ರಿ ಕೊಡುವ ಮುನ್ನವೇ ಕಾಂಡೋಮ್​ಗಳನ್ನು ನೀಡಲಾಗುತ್ತದೆ. ಈ ಬಾರಿ ಒಲಿಂಪಿಕ್ಸ್​ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ 3 ಲಕ್ಷ ಕಾಂಡೋಮ್​ಗಳನ್ನು ಪೂರೈಕೆ ಮಾಡಲಾಗಿದೆ. ಆದರೆ ಎಷ್ಟೇ ಪ್ರಮಾಣದ ಕಾಂಡೋಮ್​ಗಳನ್ನು ನೀಡಿದರೂ ಕೂಡ ಈ ಬಾರಿ ಅಥ್ಲೀಟ್​ಗಳಿಗೆ ಸೆಕ್ಸ್​ ಮಾಡಲು ಸಾಧ್ಯವಿಲ್ಲ! ಕ್ರೀಡಾಪಟುಗಳು ಲೈಂಗಿಕಾಸಕ್ತಿ ತೊರೆದು ಕೇವಲ ಕ್ರೀಡಾ ಸ್ಪರ್ಧೆಗಳತ್ತ ಗಮನ ಹರಿಸಲಿ ಎಂಬ ಕಾರಣಕ್ಕೆ ಎಲ್ಲ ಕ್ರೀಡಾಳುಗಳಿಗೆ ‘ಆ್ಯಂಟಿ ಸೆಕ್ಸ್​ ಬೆಡ್’ ನೀಡಲಾಗಿದೆ.

ಆ್ಯಂಟಿ ಸೆಕ್ಸ್​ ಬೆಡ್​ನ ವಿಶೇಷತೆ ಏನು?

ಆ್ಯಂಟಿ ಸೆಕ್ಸ್​ ಬೆಡ್ ಎಂದರೆ ಒಬ್ಬ ವ್ಯಕ್ತಿ ಮಾತ್ರ ಮಲಗಬಹುದಾದ ಹಾಸಿಗೆ ಇದಾಗಿದೆ. ಇದನ್ನು ಮರುಬಳಕೆಯ ಕಾರ್ಡ್‌ಬೋರ್ಡ್‌ನಿಂದ ತಯಾರಿಸಲಾಗಿದೆ. ಈ ಬೆಡ್​ ಒಬ್ಬರ ತೂಕವನ್ನು ಹೊರುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ ಎನ್ನಲಾಗಿದೆ. ಬೇರೊಬ್ಬರು ಸೇರಿದಂತೆ ಅಥವಾ ಯಾವುದೇ ಹಠಾತ್ ಚಲನೆಗಳುಂಟಾದರೆ ಈ ಬೆಡ್ ಮುರಿದೇ ಹೋಗುತ್ತದೆ! ಹಾಗಾಗಿ ಈ ಬಾರಿಯ ಒಲಿಂಪಿಕ್‌ನಲ್ಲಿ ಕ್ರೀಡಾಳುಗಳಿಗೆ ಪ್ರಣಯಿಸಲು ಕಷ್ಟವಾಗಲಿದೆ.


ಟೋಕಿಯೊ ಒಲಿಂಪಿಕ್ಸ್​ನಲ್ಲಿ ಜಾರಿ


‘ಆ್ಯಂಟಿ ಸೆಕ್ಸ್​ ಬೆಡ್’ ಪರಿಕಲ್ಪನೆ ಮೊದಲ ಬಾರಿಗೆ ಜಾರಿಗೆ ಬಂದದ್ದು ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ. ಕೊರೊನಾ ಹಾವಳಿ ಇದ್ದ ಕಾರಣದಿಂದಾಗಿ ​ಲೈಂಗಿಕ ಕ್ರಿಯೆ ಮತ್ತು ದೈಹಿಕ ಅಂತರವನ್ನು ಅನುಸರಿಸುವ ನಿಟ್ಟಿನಲ್ಲಿ ಈ ಬೆಡ್​ ಅನ್ನು ತಯಾರಿಸಲಾಗಿತ್ತು. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿಯೂ ಇದನ್ನು ಮುಂದುವರಿಸಲಾಗಿದೆ. ಈ ಹಾಸಿಗೆಯನ್ನು ಏರ್‌ವೇವ್ ಸಂಸ್ಥೆ ತಯಾರಿಸಿದ್ದು, ಇದು ಗರಿಷ್ಠ 200 ಕಿಲೊ ತೂಕವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.

ಇದನ್ನೂ ಓದಿ Paris Olympics: ಒಲಿಂಪಿಕ್ಸ್​ ನೋಡಲು ಬಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಸಿಸಿಟಿವಿಯಲ್ಲಿ ಭಯಾನಕ ವಿಡಿಯೊ ಸೆರೆ

ಕ್ರೀಡಾಪಟುಗಳಿಂದ ವಿರೋಧ


ಕಾರ್ಡ್‌ಬೋರ್ಡ್​ನಿಂದ ತಯಾರಿಸಲಾದ ಈ ಬೆಡ್​ ಬಗ್ಗೆ ಟೋಕಿಯೊ ಒಲಿಂಪಿಕ್ಸ್​ ವೇಳೆಯೇ ಹಲವು ಕ್ರೀಡಾಳುಗಳು ಅಸಮಾಧಾನ ಹೊರಹಾಕಿದ್ದರು. ಈ ಬೆಡ್​ ಉತ್ತಮ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಅನುಕೂಲಕರ ವಾಗಿಲ್ಲವೆಂದು ಸಂಘಟಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಪ್ಯಾರಿಸ್​ನಲ್ಲಿಯೂ ಈ ನಿಯಮವನ್ನು ಜಾರಿಗೆ ತಂದಿರುವ ಬಗ್ಗೆ ಅಥ್ಲೀಟ್​ಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮರ್ಥ್ಯ ಪರೀಕ್ಷೆ ನಡೆಸಿದರೂ ಮುರಿಯದ ಬೆಡ್​!


ಬೆಡ್‌ಗಳ ಬಗ್ಗೆ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಲವು ತಮಾಷೆಯ ಕಾಮೆಂಟ್‌ಗಳೂ ಕೂಡ ಹರಿದುಬರುತ್ತಿವೆ. ಈ ಮಧ್ಯೆ ಆಸ್ಟ್ರೇಲಿಯಾದ ಟೆನಿಸ್ ತಾರೆಯರಾದ ಡೇರಿಯ ಸಾವಿಲ್ಲೆ ಮತ್ತು ಎಲೆನ್ ಪೆರೆಜ್‌ ಜತೆಯಾಗಿ ‘ಆ್ಯಂಟಿ ಸೆಕ್ಸ್‌ ಬೆಡ್‌’ಗಳ ಕ್ವಾಲಿಟಿ ಟೆಸ್ಟ್ ಮಾಡಿದ ವಿಡಿಯೊ ಕೂಡ ವೈರಲ್​ ಆಗಿದೆ. ಈ ಬೆಡ್‌ನ ಮೇಲೆ ಈ ಜೋಡಿ ವಾಲಿ ಪ್ರಾಕ್ಟೀಸ್, ಸ್ಕ್ವಾಟ್‌ ಜಂಪ್ಸ್‌, ಸ್ಟೆಪ್‌-ಅಪ್ಸ್ ಸೇರಿದಂತೆ ಹಲವು ಅಭ್ಯಾಸಗಳನ್ನು ನಡೆಸಿದ್ದಾರೆ. ಹಾಸಿಗೆಯನ್ನು ತಯಾರಿಸಿ ಏರ್‌ವೇವ್ ಸಂಸ್ಥೆ ಹೇಳಿದ ಪ್ರಕಾರ ಹಠಾತ್ ಚಲನೆಗಳುಂಟಾದರೆ ಬೆಡ್​ ಮುರಿಯಬೇಕಿತ್ತು. ಆದರೆ, ಎಷ್ಟೇ ಮೇಲಿನಿಂದ ಜಿಗಿದರೂ ಕೂಡ ಈ ಬೆಡ್​ ಮುರಿಯಲಿಲ್ಲ. ಹೀಗಾಗಿ ಕೆಲವು ನೆಟ್ಟಿಗರು ಈ ಬೆಡ್​ನಲ್ಲಿ ಆರಾಮವಾಗಿ ಲೈಂಗಿಕೆ ಕ್ರಿಯೆ ನಡೆಸಬಹುದು ಎಂದು ಹಾಸ್ಯಾಸ್ಪದವಾಗಿ ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು, ಇವರೆಂಥ ಮೂರ್ಖರು? ಸೆಕ್ಸ್‌ ಮಾಡಲು ಮಂಚ ಯಾಕೆ? ವಾತ್ಸಾಯನನ ಕಾಮಸೂತ್ರದಲ್ಲಿ ಎಷ್ಟೊಂದು ಭಂಗಿಗಳಿವೆ? ಕ್ರೀಡಾ ಪಟುಗಳೇನು ಮಂಚ ಇಲ್ಲದೆಯೂ ಸೆಕ್ಸ್‌ ಮಾಡಲು ಬರದಷ್ಟು ದಡ್ಡರೇ ಎಂದು ಪ್ರಶ್ನಿಸಿದ್ದಾರೆ!

Continue Reading

ಕ್ರೀಡೆ

Paris Olympics: ಒಲಿಂಪಿಕ್ಸ್​ ನೋಡಲು ಬಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಸಿಸಿಟಿವಿಯಲ್ಲಿ ಭಯಾನಕ ವಿಡಿಯೊ ಸೆರೆ

Paris Olympics: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ನೋಡಲು ಬಂದಿದ್ದ ಆಸ್ಟ್ರೇಲಿಯಾ ಮೂಲದ ಮಹಿಳೆಯ ಮೇಲೆ ಐವರು ಬರ್ಬರವಾಗಿ ಗ್ಯಾಂಗ್‌ ರೇಪ್ ಮಾಡಿರುವ ಆತಂಕಕಾರಿ ಘಟನೆ ತಡವಾಗಿ ನಡೆದಿದೆ. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

VISTARANEWS.COM


on

Paris Olympics
Koo

ಪ್ಯಾರಿಸ್​: ಜಗತ್ತಿನ ಅತ್ಯಂತ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್‌(Paris Olympics) ಟೂರ್ನಿಯ ಆತಿಥ್ಯ ವಹಿಸಿಕೊಂಡ ‘ಬೆಳಕಿನ ನಗರಿ’ ಪ್ಯಾರಿಸ್‌ ಈ ಕ್ರೀಡಾ ಮಹಾಮೇಳಕ್ಕೆ ಸಿದ್ಧವಾಗಿ ನಿಂತಿದೆ. ಇನ್ನೆರಡು ದಿನಗಳು ಕಳೆದರೆ ಇಲ್ಲಿ ಒಲಿಂಪಿಕ್ಸ್ ಜ್ಯೋತಿಯು ಪ್ರಜ್ವಲಿಸಲಿದೆ. ಆದರೆ, ಈ ಮಹಾ ಕ್ರೀಡಾಕೂಟ ಆರಂಭಕ್ಕೂ ಮುನ್ನವೇ ಪ್ಯಾರಿಸ್​ನಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವುದು ಕ್ರೀಡಾಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ನೋಡಲು ಬಂದಿದ್ದ ಆಸ್ಟ್ರೇಲಿಯಾ ಮೂಲದ ಮಹಿಳೆಯ ಮೇಲೆ ಐವರು ಬರ್ಬರವಾಗಿ ಗ್ಯಾಂಗ್‌ ರೇಪ್ ಮಾಡಿರುವ ಆತಂಕಕಾರಿ ಘಟನೆ ತಡವಾಗಿ ನಡೆದಿದೆ. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 25 ವರ್ಷದ ಆಸ್ಟ್ರೇಲಿಯಾ ಮಹಿಳೆಯ ಮೇಲೆ ಗ್ಯಾಂಗ್‌ ರೇಪ್ ಮಾಡಲಾಗಿದೆ.

ಜುಲೈ 19ರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೌಲಿನ್ ರೋಗ್ ಕ್ಯಾಬರ್ಟ್‌ನ ಪಬ್​ ಒಂದರಲ್ಲಿ ಮದ್ಯ ಸೇವಿಸಿ, ಹೊರ ಬರುವ ಸಂದರ್ಭದಲ್ಲಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ನಡೆಸಿದ್ದಾಗಿ ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.

ವೈರಲ್​ ಆಗುತ್ತಿರುವ ವಿಡಿಯೊದಲ್ಲಿ ಆಕೆ ಹರಿದ ಬಟ್ಟೆಯಲ್ಲೇ ಸಹಾಯಕ್ಕಾಗಿ ಹತ್ತಿರದಲ್ಲೇ ಇದ್ದ ಕಬಾಬ್ ಶಾಪ್‌ಗೆ ಓಡಿ ಬಂದು ಬಂದು ರಕ್ಷಣೆ ಪಡೆದಿದ್ದಾಳೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ವಿಡಿಯೊ ಕಂಡ ಅನೇಕರು ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್​ನಲ್ಲಿ ಮಹಿಳೆಯರಿಗೆ ಸರಿಯಾದ ಸುರಕ್ಷತೆ ಮತ್ತು ರಕ್ಷಣ ಇಲ್ಲ ಎಂದು ಆರೋಪಿಸಿದ್ದಾರೆ. ಸಿಸಿಟಿವಿ ವಿಡಿಯೋದಲ್ಲಿ ಆ ಮಹಿಳೆಯು ಓಡೋಡಿ ಬರುವುದು, ಭಯಭೀತರಾಗಿರುವುದು, ಸಹಾಯಕ್ಕಾಗಿ ಅಲ್ಲಿರುವ ಸಿಬ್ಬಂದಿಗಳಲ್ಲಿ ಮನವಿ ಮಾಡಿಕೊಳ್ಳುವ ದೃಶ್ಯಾವಳಿಗಳು ಸೆರೆಯಾಗಿವೆ. ಈಗಾಗಲೇ ಪ್ಯಾರಿಸ್ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದರೂ ಕೂಡ ಈ ಘಟನೆ ನಡೆದಿರುವು ನಿಜಕ್ಕೂ ಆಘಾತಕಾರಿ ಸಂಗತಿ.

ಇದನ್ನೂ ಓದಿ Paris Olympics: ಒಲಿಂಪಿಕ್ಸ್​ ಶೂಟಿಂಗ್; ಪದಕ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ಶಾಸಕಿ

ಬೆದರಿಕೆ ಹಾಕಿದ ಹಮಾಸ್ ಉಗ್ರರು


ಈಗಾಗಲೇ ಈ ಕ್ರೀಡಾಕೂಟಕ್ಕೆ ಉಗ್ರರ ದಾಳಿಯ ಭೀತಿ ಎದುರಾಗಿದ್ದ ಕಾರಣ ಪ್ಯಾರಿಸ್​ನಲ್ಲಿ ಹಿಂದೆಂದೂ ಕಾಣದ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಭದ್ರತೆಗಾಗಿ ಫ್ರಾನ್ಸ್​ನೊಂದಿಗೆ ಭಾರತದ ಯೋಧರು ಕೂಡ ಕೈಜೋಡಿಸಿದ್ದಾರೆ. ಇದೀಗ ಹಮಾಸ್(Hamas) ಭಯೋತ್ಪಾದಕರಿಂದ(hamas terrorist) ಭೀಕರ ದಾಳಿಯ ಬೆದರಿಕೆ ಬಂದಿದೆ.

ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಮುಸುಕುಧಾರಿ ಒಲಿಂಪಿಕ್ಸ್​ ವೇಳೆ ಫ್ರಾನ್ಸ್​ ಅಧ್ಯಕ್ಷರನ್ನು ಹತ್ಯೆ ಮಾಡುವುದಾಗಿ ಮತ್ತು ಫ್ರಾನ್ಸ್​ನಲ್ಲಿ ರಕ್ತದೋಕುಳಿ ಹರಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ.

ಈ ವಿಡಿಯೊ ವೈರಲ್​ ಆಗುತ್ತಿದ್ದಂತೆ ಫ್ರಾನ್ಸ್​ನಲ್ಲಿ ಮತ್ತಷ್ಟು ಭದ್ರತೆ ಕೈಗೊಳ್ಳಲಾಗಿದೆ. ಪ್ಯಾರಿಸ್​ನ ಕ್ರೀಡಾ ಗ್ರಾಮದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಸಂಘಟಕರು ನಿರ್ಧರಿಸಿದ್ದಾರೆ. ಪ್ಯಾರಿಸ್ ಪೊಲೀಸ್ ಮುಖ್ಯಸ್ಥ ಲಾರೆಂಟ್ ನುನೆಜ್ ಅವರು ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟಕ್ಕೆ ಸಂಬಂಧಿಸಿ ಮಾತನಾಡಿದ್ದು, ನಾವು ಉಗ್ರರ ಬೆದರಿಕೆಯ ಬಗ್ಗೆ ಕಳವಳ ಹೊಂದಿದ್ದೇವೆ. ವಿಶೇಷವಾಗಿ ಇಸ್ಲಾಮಿಕ್ ಉಗ್ರವಾದಿಗಳು, ಪ್ಯಾಲೆಸ್ಟೀನಿಯನ್ ಪರ ಚಳವಳಿಯಿಂದ ಕಡಿಮೆ-ತೀವ್ರತೆಯ ಬೆದರಿಕೆಯ ಬಗ್ಗೆಯೂ ನಾವು ವಿಶೇಷ ಕಾಳಜಿ ವಹಿಸುತ್ತೇವೆ. ಕ್ರೀಡಾಪಟುಗಳು ಆತಂಕಪಡಬೇಕಿಲ್ಲ ಎಂದು ಹೇಳಿದ್ದಾರೆ.

Continue Reading
Advertisement
King Chopper
ದೇಶ17 mins ago

Sea King Chopper: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಮಾನವೀಯತೆಗೆ ಮೆಚ್ಚುಗೆ

ahoratri dharani until the guilts are punished says Opposition party Leader R Ashok
ಕರ್ನಾಟಕ18 mins ago

R Ashok: ಹಗರಣಕೋರರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ; ಆರ್. ಅಶೋಕ್‌ ಘೋಷಣೆ

Traffic Restrictions
ಬೆಂಗಳೂರು31 mins ago

Traffic Restrictions: ವೈಟ್ ಟಾಪಿಂಗ್ ಕಾಮಗಾರಿ; ನಾಳೆಯಿಂದ ರಾಜಾಜಿನಗರದ ಈ ಮಾರ್ಗದಲ್ಲಿ ಸಂಚಾರ ನಿಷೇಧ

Mohammed Shami
ಕ್ರೀಡೆ33 mins ago

Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು?

KP Poorchandra Tejaswi samagra kruthi Jagattu 14 samputagalu Lokarpane On July 29 in Bengaluru
ಬೆಂಗಳೂರು34 mins ago

Book Release: ಜು.29ರಂದು ಬೆಂಗಳೂರಿನಲ್ಲಿ 14 ಸಂಪುಟಗಳ ಪೂರ್ಣಚಂದ್ರ ತೇಜಸ್ವಿ ಕೃತಿ ಲೋಕಾರ್ಪಣೆ

Asteria Aerospace has introduced a SkyDeck platform that helps in various fields including agriculture
ದೇಶ37 mins ago

SkyDeck: ಕೃಷಿ ಮತ್ತಿತರ ಕ್ಷೇತ್ರಗಳಿಗೆ ನೆರವಾಗುವ ʼಸ್ಕೈಡೆಕ್ʼ ಪ್ಲಾಟ್‌ಫಾರ್ಮ್! ಏನಿದು?

Health Tips Kannada
ಆರೋಗ್ಯ1 hour ago

Health Tips Kannada: ನಿಂತ ಮಳೆ ನೀರಿನಿಂದ ಈ 7 ರೋಗಗಳು ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?

Dog attack
ದೇಶ1 hour ago

Dog Attack: ವಕೀಲನ ಮೇಲೆ ಶ್ವಾನ ದಾಳಿ; ಖಾಸಗಿ ಅಂಗಕ್ಕೆ ಕಚ್ಚಿದ ಪಿಟ್‌ ಬುಲ್‌

Paris Olympics
ಕ್ರೀಡೆ1 hour ago

Paris Olympics: ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿದ್ದಾರೆ ಭಾರತದ 24 ಸೈನಿಕರು

Supreme Court
ದೇಶ2 hours ago

Supreme Court: ರೈತರು, ಸರ್ಕಾರದ ಮಧ್ಯೆ ‘ತಟಸ್ಥ ಅಂಪೈರ್’‌ ಬೇಕು; ಸುಪ್ರೀಂ ಕೋರ್ಟ್‌ ಮಹತ್ವದ ಸಲಹೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ15 hours ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ1 day ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ1 day ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ1 day ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌