Manu Bhaker Dance: 'ಕಾಲಾ ಚಷ್ಮಾ' ಹಾಡಿಗೆ ವಿದ್ಯಾರ್ಥಿಗಳ ಜತೆ ಹೆಜ್ಜೆ ಹಾಕಿದ ಒಲಿಂಪಿಯನ್​ ಮನು ಭಾಕರ್​ - Vistara News

ಕ್ರೀಡೆ

Manu Bhaker Dance: ‘ಕಾಲಾ ಚಷ್ಮಾ’ ಹಾಡಿಗೆ ವಿದ್ಯಾರ್ಥಿಗಳ ಜತೆ ಹೆಜ್ಜೆ ಹಾಕಿದ ಒಲಿಂಪಿಯನ್​ ಮನು ಭಾಕರ್​

Manu Bhaker Dance: ತಮಿಳುನಾಡಿನ ವೇಲಮ್ಮಾಳ್ ನೆಕ್ಸಸ್ ಗ್ರೂಪ್​ನ ಶಾಲೆಯಲ್ಲಿ ನಡೆದ ಕ್ರೀಡಾ ಸ್ಕಾಲರ್‌ಷಿಪ್‌ ವಿತರಣಾ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಮನು ಭಾಕರ್ ಕಾಲಾ ಚಷ್ಮಾ(‘Kala Chashma’ Song) ಹಿಂದಿ ಹಾಡೊಂದಕ್ಕೆ ನೃತ್ಯ ಮಾಡಿದ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Manu Bhaker Dance
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಪ್ಯಾರಿಸ್​ ಒಲಿಂಪಿಕ್ಸ್ ಶೂಟಿಂಗ್​ನಲ್ಲಿ ಅವಳಿ ಪದಕ ಗೆದ್ದ ಮನು ಭಾಕರ್​ ಅವರು ತಮ್ಮ ನೆಚ್ಚಿನ ಭರತನಾಟ್ಯ(Manu Bhaker Bharatnatyam) ಕಲಿಕೆಗಾಗಿ ತಮಿಳುನಾಡಿನಲ್ಲಿದ್ದಾರೆ. ಇಲ್ಲಿನ ಸ್ಥಳೀಯ ಶಾಲಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಮನು ಭಾಕರ್(Manu Bhaker Dance)​ ವಿದ್ಯಾರ್ಥಿಗಳ ಜತೆಗೆ ವೇದಿಕೆಯಲ್ಲಿ ನೃತ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್(viral video)​ ಆಗಿದೆ.

ತಮಿಳುನಾಡಿನ ವೇಲಮ್ಮಾಳ್ ನೆಕ್ಸಸ್ ಗ್ರೂಪ್​ನ ಶಾಲೆಯಲ್ಲಿ ನಡೆದ ಕ್ರೀಡಾ ಸ್ಕಾಲರ್‌ಷಿಪ್‌ ವಿತರಣಾ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಮನು ಭಾಕರ್​ ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಕುರಿತಾದ ಸಂವಾದ ನಡೆಸಿದರು. ಬಳಿಕ ವಿದ್ಯಾರ್ಥಿಗಳ ಜತೆಗೆ ಕತ್ರಿನಾ ಕೈಫ್ ಹೆಜ್ಜೆ ಹಾಕಿದ್ದ ಕಾಲಾ ಚಷ್ಮಾ(‘Kala Chashma’ Song) ಹಿಂದಿ ಹಾಡೊಂದಕ್ಕೆ ನೃತ್ಯ ಮಾಡಿದರು.

ತಮಿಳುನಾಡಿನ ಶಿಕ್ಷಕರೊಬ್ಬರ ಸಹಾಯದಿಂದ ಆನ್​ಲೈನ್​ನಲ್ಲಿಯೇ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದ 22 ವರ್ಷದ ಮನು ಭಾಕರ್​ ಇದೀಗ ಶೂಟಿಂಗ್​ನಿಂದ ಮೂರು ತಿಂಗಳ ವಿಶ್ರಾಂತಿ ಪಡೆದು ನೇರವಾಗಿ ತರಗತಿಗೆ ಹಾಜರಾಗಿ ನೃತ್ಯ ಕಲಿಯಲಿದ್ದಾರೆ. ಜತೆಗೆ ವಯೋಲಿನ್​ ಕಲಿಕೆ ಕೂಡ ಮಾಡಲಿದ್ದಾರೆ. ಇದಾದ ಬಳಿಕ ಕುದುರೆ ಸವಾರಿ ಮಾರ್ಷಿಯಲ್​ ಆರ್ಟ್ಸ್​ ಮತ್ತು ಸ್ಕೇಟಿಂಗ್ ಅಭ್ಯಾಸ ಕೂಡ ಮಾಡಲಿದ್ದೇನೆ ಎಂದು ಮನು ಅವರು ಹೇಳಿದ್ದರು.​

ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಭಾಕರ್​ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್​ ಶೂಟಿಂಗ್​ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು.

ಇದನ್ನೂ ಓದಿ Manu Bhaker: 3 ತಿಂಗಳ ರಜೆಯಲ್ಲಿ ಭರತನಾಟ್ಯ, ಕುದುರೆ ಸವಾರಿ, ಸ್ಕೇಟಿಂಗ್ ಕಲಿಯಲಿದ್ದಾರೆ ಮನು ಭಾಕರ್

ಭಾಕರ್(Manu Bhaker)​ ಅವರ ಜಾಹೀರಾತು ಮೌಲ್ಯದಲ್ಲಿ ಇದೀಗ ಭಾರೀ ಏರಿಕೆ ಕಂಡಿದೆ. ಮನು ಅವರ ಬ್ರ್ಯಾಂಡ್​ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್​ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್​ ಕೇರ್​, ನ್ಯೂಟ್ರೀಷಿಯನ್​ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ 40 ಕಂಪನಿಗಳು(40 brands chasing Manu Bhaker) ಮನು ಅವರನ್ನು ಸಂಪರ್ಕಿಸಿದ್ದವು ಎಂದು ವರದಿಯಾಗಿತ್ತು.

ಭಾರತ ತಂಡದ ಸ್ಟಾರ್​ ಕ್ರಿಕೆಟಿಗರು ಜಾಹೀರಾತು ಒಪ್ಪಂದಗಳಿಗೆ ವಾರ್ಷಿಕ 3 ರಿಂದ 6 ಕೋಟಿ ರೂ. ಪಡೆಯುತ್ತಾರೆ. ಬ್ಯಾಡ್ಮಿಂಟನ್​ ಆಟಗಾರ್ತಿ ಪಿ,ವಿ ಸಿಂಧು 2022ರಲ್ಲಿ 2.21 ಕೋಟಿ ರೂ. ಮೊತ್ತದ ಒಪ್ಪಂದ ಪಡೆದಿದ್ದೇ ಭಾರತದಲ್ಲಿ ಕ್ರಿಕೆಟಿಗರ ಹೊರತಾಗಿ ಇತರ ಕ್ರೀಡಾಪಟುಗಳು ಪಡೆದ ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಒಲಿಂಪಿಕ್ಸ್​ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಸದ್ಯ ಮನು ಪಾಮ್ಯಾಕ್ಸ್​ ಆಕ್ಟಿವ್​ವೇರ್​ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

T20 World Cup: ಟಿ20 ವಿಶ್ವಕಪ್​ನ 3 ಪಿಚ್​ಗಳಿಗೆ ಕಳಪೆ ರೇಟಿಂಗ್​ ಕೊಟ್ಟ ಐಸಿಸಿ

T20 World Cup: ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿನ ಪಿಚ್​ ಬಗ್ಗೆ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ, ಕೋಚ್​ ಆಗಿದ್ದ ರಾಹುಲ್​ ದ್ರಾವಿಡ್​ ಅವರು ಅಂದೇ ಅಸಾಮಾಧಾನ ವ್ಯಕ್ತಪಡಿಸಿದ್ದರು.

VISTARANEWS.COM


on

T20 World Cup
Koo

ದುಬೈ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಪುರುಷರ ಟಿ20 ವಿಶ್ವಕಪ್​ ಟೂರ್ನಿ(T20 World Cup) ಮುಕ್ತಾಯ ಕಂಡು 2 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪಿಚ್ ರೇಟಿಂಗ್‌ಗಳನ್ನು ಬಿಡುಗಡೆ ಮಾಡಿದೆ. ಎಲ್ಲಾ 52 ಪೂರ್ಣಗೊಂಡ ಪಂದ್ಯಗಳನ್ನು ಒಳಗೊಂಡಿರುವ ವರದಿಯಲ್ಲಿ ಮೂರು ಪಂದ್ಯಗಳ ಪಿಚ್​ಗಳನ್ನು ಅತೃಪ್ತಿಕರ ಎಂದು ಪರಿಗಣಿಸಿದೆ.

ಎಂಟು ಗುಂಪು-ಹಂತದ ಪಂದ್ಯಗಳನ್ನು ಆಯೋಜಿಸಿದ್ದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಪಿಚ್​ ಅನ್ನು ಅತ್ಯಂತ ಕೆಟ್ಟ ಪಿಚ್​ ಎಂದು ಪರಿಗಣಿಸಲಾಗಿದೆ. ಇಲ್ಲಿ ನಡೆದಿದ್ದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ, ಭಾರತ ಮತ್ತು ಐರ್ಲೆಂಡ್ ಪಂದ್ಯಗಳ ಪಿಚ್‌ಗಳನ್ನು ‘ಅತೃಪ್ತಿಕರವಾಗಿಲ್ಲ’ ಎಂದು ಐಸಿಸಿ ರೇಟಿಂಗ್​ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ 77 ರನ್‌ಗಳಿಗೆ ಆಲೌಟ್ ಆಗಿದ್ದರೆ, ಭಾರತದ ವಿರುದ್ಧ ಐರ್ಲೆಂಡ್ ಕೇವಲ 96 ರನ್ ಗಳಿಸಿತು. ಈ ಸ್ಟೇಡಿಯಂನ ಪಿಚ್​ನಲ್ಲಿ ಗರಿಷ್ಠ ರನ್​ ದಾಖಲಾದದ್ದು 137 ರನ್​. ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಈ ಮೊತ್ತ ದಾಖಲಾಗಿತ್ತು. ವೆಸ್ಟ್​ ಇಂಡೀಸ್​ನ ಟ್ರಿನಿಡಾಡ್ ಪಿಚ್​ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ನಡುವಣ ಸೆಮಿಫೈನಲ್​ ಪಂದ್ಯವನ್ನು ಕೂಡ ಅತೃಪ್ತಿಕರ ಎಂದು ಪರಿಗಣಿಸಿದೆ.

ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿನ ಪಿಚ್​ ಬಗ್ಗೆ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ, ಕೋಚ್​ ಆಗಿದ್ದ ರಾಹುಲ್​ ದ್ರಾವಿಡ್​ ಅವರು ಅಂದೇ ಅಸಾಮಾಧಾನ ವ್ಯಕ್ತಪಡಿಸಿದ್ದರು. ಇದು ಕ್ರಿಕೆಟ್​ ಆಡಲು ಸೂಕ್ತವಾಗಿಲ್ಲ ಎಂದು ಹೇಳಿದ್ದರು. ಈ ಮೈದಾನಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾಗಿದ್ದ ಡ್ರಾಪ್-ಇನ್ ಪಿಚ್‌ಗಳನ್ನು ಅಳವಡಿಸಲಾಗಿತ್ತು. ಒಟ್ಟಾರೆಯಾಗಿ, ಐಸಿಸಿ 31 ಪಿಚ್‌ಗಳನ್ನು ‘ತೃಪ್ತಿದಾಯಕ’ ಮತ್ತು 18 ಪಿಚ್​ಗಳನ್ನು ‘ತುಂಬಾ ಒಳ್ಳೆಯದು’ ಎಂಬ ರೇಟಿಂಗ್​ ನೀಡಿದೆ.

ಇದನ್ನೂ ಓದಿ ICC Women’s T20 World Cup: ಯುಎಇಗೆ ಸ್ಥಳಾಂತರಗೊಂಡ ಮಹಿಳಾ ಟಿ20 ವಿಶ್ವಕಪ್

ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್​ 29ರಂದು ನಡೆದಿದ್ದ ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತ್ತು.

ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​ ಅವರು ಬೌಂಡರಿ ಲೈನ್​ನಲ್ಲಿ ಹಿಡಿದ ಡೇವಿಡ್ ಮಿಲ್ಲರ್​ ಅವರ ಕ್ಯಾಚ್​ ಭಾರೀ ಚರ್ಚೆಗೆ ಕಾರಣವಾಗಿತ್ತು.​ ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಮಿಲ್ಲರ್​ ಔಟ್​ ಆಗುತ್ತಿದ್ದಂತೆ ಭಾರತದ ಗೆಲುವು ಕೂಡ ಖಚಿತಗೊಂಡಿತ್ತು. ಆದರೆ, ಈ ಕ್ಯಾಚ್​ ಹಿಡಿಯುವ ವೇಳೆ ಸೂರ್ಯಕುಮಾರ್​ ಅವರ ಕಾಲುಗಳು ಬೌಂಡರಿ ಲೈನ್​ನ ಕೆಳ ಭಾಗದ ಪಟ್ಟಿಗೆ ತಾಗಿದೆ ಎಂದು ಆರೋಪ ಮಾಡಿದ್ದರು. ಬಳಿಕ ಐಸಿಸಿ ಹಲವು ಆಯಾಮಗಳ ವಿಡಿಯೊ ಹಂಚಿಕೊಳ್ಳುವ ಮೂಲಕ ಸೂರ್ಯ ಹಿಡಿದ ಕ್ಯಾಚ್​ನಲ್ಲಿ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು.

Continue Reading

ಕ್ರಿಕೆಟ್

ICC Women’s T20 World Cup: ಯುಎಇಗೆ ಸ್ಥಳಾಂತರಗೊಂಡ ಮಹಿಳಾ ಟಿ20 ವಿಶ್ವಕಪ್

ICC Women’s T20 World Cup:ಪಂದ್ಯಾವಳಿಯು ಯುಎಇಯ ಎರಡು ಸ್ಥಳಗಳಾದ ದುಬೈ ಮತ್ತು ಶಾರ್ಜಾದಲ್ಲಿ – ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ.

VISTARANEWS.COM


on

ICC Women’s T20 World Cup
Koo

ದುಬಾೖ: ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯ ದಂಗೆಯಿಂದಾಗಿ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯ(ICC Women’s T20 World Cup) ಆತಿಥ್ಯ ತೂಗುಯ್ನಾಲೆಯಲ್ಲಿ ಸಿಲುಕಿತ್ತು. ಇದೇ ಕಾರಣದಿಂದ ಐಸಿಸಿ, ಟೂರ್ನಿ ನಡೆಸಲು ಪರ್ಯಾಯ ತಾಣವೊಂದರ ಹುಡುಕಾಟದಲ್ಲಿತ್ತು. ಇದೀಗ ಅಂತಿಮವಾಗಿ ಯುಎಇ(UAE )ಯನ್ನು ಆಯ್ಕೆ ಮಾಡಲಾಗಿದೆ. ಈ ವಿಚಾರವನ್ನು ಐಸಿಸಿ ಮಂಗಳವಾರ ಅಧಿಕೃತ ಪ್ರಕಟನೆ ಮೂಲಕ ತಿಳಿಸಿದೆ.

ಪಂದ್ಯಾವಳಿಯು ಯುಎಇಯ ಎರಡು ಸ್ಥಳಗಳಾದ ದುಬೈ ಮತ್ತು ಶಾರ್ಜಾದಲ್ಲಿ ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ. “ಬಾಂಗ್ಲಾದೇಶ ಮಹಿಳಾ ಟಿ20 ವಿಶ್ವಕಪ್ ಆಯೋಜಿಸದಿರುವುದು ನಾಚಿಕೆಗೇಡಿನ ಸಂಗತಿ” ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜತೆಗೆ ಆತಿಥ್ಯ ವಹಿಸಿದ್ದಕ್ಕಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಧನ್ಯವಾದ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಸೇನಾ ಮುಖ್ಯಸ್ಥ ಜನರಲ್‌ ವಕಾರ್‌ ಜಮಾನ್‌ ಅವರಿಗೆ ಪತ್ರ ಬರೆದು, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ನಡೆಸಿಕೊಡಲು ಸಹಾಯ ಮಾಡಬೇಕು ಎಂದು ಕೋರಿತ್ತು. ಆದರೆ ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸುವಂತೆ ಕಾಣುತ್ತಿಲ್ಲ ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಟೂರ್ನಿಯನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿತ್ತು. ಹೀಗಾಗಿ ಐಸಿಸಿ ಯುಎಇಗೆ ಆತಿಥ್ಯ ನೀಡಿದೆ.

ಇದನ್ನೂ ಓದಿ Scott Boland: ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭಕ್ಕೂ ಮುನ್ನವೇ ಕೊಹ್ಲಿಗೆ ಎಚ್ಚರಿಕೆ ನೀಡಿದ ಆಸೀಸ್​ ವೇಗಿ

ಮಹಿಳಾ ಟಿ20 ವಿಶ್ವಕಪ್‌ ಆಯೋಜನೆಗೆ ಐಸಿಸಿ ನಮ್ಮನ್ನು ಸಂಪರ್ಕಿಸಿದರೆ ನಾನು ಇದನ್ನು ನಿರಾಕರಿಸುತ್ತೇನೆ ಎಂದು ಕೆಲ ದಿನಗಳ ಹಿಂದೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಹೇಳಿಕೆ ನೀಡಿದ್ದರು. ಮುಂದಿನ ವರ್ಷ ನಾವು ಮಹಿಳಾ ಏಕದಿನ ವಿಶ್ವಕಪ್‌ ಆಯೋಜನೆ ಮಾಡುತ್ತಿದ್ದೇವೆ. ಎರಡು ವಿಶ್ವಕಪ್‌ ಕೂಟಗಳನ್ನೂ ಭಾರತ ನಡೆಸುತ್ತಿದೆ ಎಂಬ ಅಭಿಪ್ರಾಯ ಮೂಡಲು ಬಿಡುವುದಿಲ್ಲ ಎಂದು ಹೇಳಿದ್ದರು.

ಶೇಕ್‌ ಹಸೀನಾ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ ಬಳಿಕ ನಡೆದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮನೆಗಳು, ವ್ಯವಹಾರಗಳು ಮತ್ತು ದೇವಾಲಯಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದಲ್ಲಿ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಕನಿಷ್ಠ 45 ಜನರು ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಹೀಗಾಗಿ ಇವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ ಎನ್ನಲಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

Continue Reading

ಕ್ರೀಡೆ

Scott Boland: ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭಕ್ಕೂ ಮುನ್ನವೇ ಕೊಹ್ಲಿಗೆ ಎಚ್ಚರಿಕೆ ನೀಡಿದ ಆಸೀಸ್​ ವೇಗಿ

Scott Boland: ಕಳೆದ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ವಿಕೆಟ್‌ಯನ್ನು ಪಡೆಯುವಲ್ಲಿ ಬೋಲ್ಯಾಂಡ್ ಯಶಸ್ವಿಯಾಗಿದ್ದರು. ಇದೇ ಆತ್ಮವಿಶ್ವಾಸದಲ್ಲಿ ಬಾರ್ಡರ್​-ಗವಾಸ್ಕರ್(Border-Gavaskar Trophy)​ ಟೆಸ್ಟ್​ ಸರಣಿಯಲ್ಲಿಯೂ ಕೊಹ್ಲಿ ವಿಕೆಟ್​ ಕೀಳುವೆ ಎಂದು ಹೇಳಿದ್ದಾರೆ.

VISTARANEWS.COM


on

Scott Boland
Koo

ಸಿಡ್ನಿ: ಇದೇ ವರ್ಷಾಂತ್ಯದಲ್ಲಿ ಭಾರತ ತಂಡ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್(Border-Gavaskar Trophy)​ ಟೆಸ್ಟ್​ ಸರಣಿಯನ್ನಾಡಲು ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಆಸೀಸ್​ ವೇಗಿ ಸ್ಕಾಟ್​ ಬೋಲ್ಯಾಂಡ್(Scott Boland) ಭಾರತದ ಆತ್ಮವಿಶ್ವಾಸವನ್ನು ಕುಗ್ಗಿಸಲು ಮೈಂಡ್ ಗೇಮ್ ಆರಂಭಿಸಿದ್ದಾರೆ. ಮತ್ತೊಮ್ಮೆ ವಿರಾಟ್​ ಕೊಹ್ಲಿಯನ್ನು(Virat Kohli) ಔಟ್ ಮಾಡುವ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.

“ನಾವು ಉತ್ತಮ ದರ್ಜೆಯ ಬೌಲಿಂಗ್ ದಾಳಿಯನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಈ ಬಾರಿ ಭಾರತಕ್ಕೆ ಆಸೀಸ್​ ನಲದಲ್ಲಿ ಸರಣಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಕೊಹ್ಲಿಯ ವಿಕೆಟ್​ ಪಡೆಯಲು ನಾನು ಕಾತರಗೊಂಡಿದ್ದೇನೆ” ಎಂದು ಬೊಲ್ಯಾಂಡ್​ ಹೇಳಿದ್ದಾರೆ. ಕಳೆದ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ವಿಕೆಟ್‌ಯನ್ನು ಪಡೆಯುವಲ್ಲಿ ಬೋಲ್ಯಾಂಡ್ ಯಶಸ್ವಿಯಾಗಿದ್ದರು. ಇದೇ ಆತ್ಮವಿಶ್ವಾಸದಲ್ಲಿ ಅವರು ಈ ಮಾತನ್ನು ಹೇಳಿದಂತಿದೆ.

ಕೊಹ್ಲಿ 2011 ರಿಂದ 2023ರ ತನಕ ಆಡಿದ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಪಂದ್ಯಗಳಲ್ಲಿ ಪಟ್ಟು 1,979 ರನ್​ ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ 7ನೇ ಸ್ಥಾನಿಯಾಗಿದ್ದಾರೆ. ಚೇತೇಶ್ವರ್​ ಪೂಜಾರ 2,033 ರನ್​ ಬಾರಿಸಿ 6ನೇ ಸ್ಥಾನಿಯಾಗಿದ್ದಾರೆ. 3,262 ರನ್​ ಬಾರಿಸಿರುವ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​ ಅಗ್ರಸ್ಥಾನ ಪಡೆದಿದ್ದಾರೆ. ಕಳೆದ 2 ಬಾರಿಯ ಪ್ರವಾಸದ ವೇಳೆಯೂ ಆಸೀಸ್ ನೆಲದಲ್ಲಿ​ ಭಾರತ ಸತತ ಸರಣಿ ಗೆದ್ದ ಸಾಧನೆ ಮಾಡಿತ್ತು.

ಇದನ್ನೂ ಓದಿ Virat Kohli : ಕೊಹ್ಲಿ ಕಿಂಗ್ ಅಲ್ಲ; ಭಾರತದ ಸೂಪರ್​​ ಸ್ಟಾರ್​ ಬ್ಯಾಟರ್​​ ಬಗ್ಗೆ ಕಳಪೆ ಕಾಮೆಂಟ್ ಮಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

ಭಾರತವು ಇತ್ತೀಚಿನ ಕೆಲ ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್‌ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಲೇ ಬಂದಿದೆ. ಕಳೆದ 4 ಸರಣಿಗಳಲ್ಲಿ ಭಾರತವೇ ಗೆದ್ದು ಬಂದಿದೆ. 2016-17ರಲ್ಲಿ 2-1 (ತವರಿನ ಸರಣಿ), 2018-19ರಲ್ಲಿ 2-1 (ಆಸ್ಟ್ರೇಲಿಯದಲ್ಲಿ), 2020- 21ರಲ್ಲಿ 2-1 (ಆಸ್ಟ್ರೇಲಿಯದಲ್ಲಿ) ಹಾಗೂ 2022-23ರಲ್ಲಿ 2-1 (ತವರಿನ ಸರಣಿ) ಅಂತರದಿಂದ ಭಾರತ ಜಯ ಸಾಧಿಸಿತ್ತು. ಆದಾಗ್ಯೂ, 2023ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ತಂಡವು ಭಾರತವನ್ನು ಸೋಲಿಸಿತ್ತು.

ಭಾರತ 1991-92ರ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯದಲ್ಲಿ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಭಾರತ ತಂಡವು ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ಕ್ಯಾನ್‌ಬೆರಾದ ಮನುಕಾ ಓವಲ್‌ ನಲ್ಲಿ ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧ ಹಗಲು-ರಾತ್ರಿ ಅಭ್ಯಾಸ ಪಂದ್ಯವನ್ನು ಆಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮ ವೆಬ್‌ಸೈಟ್‌ ನಲ್ಲಿ ತಿಳಿಸಿದೆ. 1991-92ರಲ್ಲಿ ನಡೆದಿದ್ದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ 4-0 ಅಂತರದ ಗೆಲುವು ಸಾಧಿಸಿತ್ತು.

5 ಪಂದ್ಯಗಳ ಈ ಟೆಸ್ಟ್​ ಸರಣಿ ನವೆಂಬರ್ 22ರಿಂದ ಜನವರಿ(2025) 7ರವರೆಗೆ ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಈ ಪಂದ್ಯಗಳು ನಡೆಯಲಿದೆ. ಅಡಿಲೇಡ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಆಗಿದೆ. ಪುರುಷರ ಕ್ರಿಕೆಟ್ ತಂಡದ ಜತೆಗೆ ಇದೇ ಸಮಯದಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ಕೂಡ ನಡೆಯಲಿದೆ. ಡಿಸೆಂಬರ್‌ 6ರಿಂದ ಅಡಿಲೇಡ್​ನಲ್ಲಿ ನಡೆಯಲಿರುವ ಎರಡನೇ ಪಂದ್ಯ ಪಿಂಕ್‌ ಬಾಲ್​ ಟೆಸ್ಟ್‌ ಪಂದ್ಯವಾಗಿರಲಿದೆ. ಇದಕ್ಕೆ ಅಭ್ಯಾಸ ನಡೆಸುವ ನಿಟ್ಟಿನಲ್ಲಿ ಈ ಎರಡು ದಿನದ ಪಂದ್ಯ ಆಯೋಜನೆ ಮಾಡಲಾಗಿದೆ.

Continue Reading

ಕ್ರೀಡೆ

Rishabh Pant: ‘ಕಬಾಲಿ ಡಾ’, ‘ನೆರಪ್ಪು ಡಾ’; ತಲೈವಾ ರಜನಿಕಾಂತ್​ಗೆ ಸಡ್ಡು ಹೊಡೆದ ರಿಷಭ್​ ಪಂತ್​

Rishabh Pant: ರಿಷಭ್​ ಪಂತ್​ ಅವರು ರಜನಿಕಾಂತ್ ಶೈಲಿಯಲ್ಲೇ ಫೋಟೊ ಶೂಟ್​ ಮಾಡಿಸಿದನ್ನು ನೋಡುವಾಗ ಪಂತ್​ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡುವುದು ಬಹುತೇಕ ಖಚಿತ ಎನ್ನುವ ಸುಳಿವು ಬಿಟ್ಟುಕೊಟ್ಟಂತಿದೆ

VISTARANEWS.COM


on

Rishabh Pant
Koo

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ರಿಷಭ್​ ಪಂತ್​(Rishabh Pant)​ ಅವರು ‘ತಲೈವಾ’ ಖ್ಯಾತಿಯ ಸ್ಟಾರ್​ ನಟ, ರಜನಿಕಾಂತ್(Star Actor Rajinikanth) ಅವರ ಶೈಲಿಯಲ್ಲೇ ಫೋಟೊ ಶೂಟ್​ ಮಾಡಿಸಿಕೊಂಡಿದ್ದಾರೆ. 2016ರಲ್ಲಿ ತೆರೆ ಕಂಡ ಕಬಾಲಿ ಸಿನಿಮಾದಲ್ಲಿ ರಜನಿಕಾಂತ್ ಅವರು ಸೋಫಾದ ರೀತಿಯ ಕುರ್ಚಿಯೊಂದರಲ್ಲಿ ಕುಳಿತ ಶೈಲಿಯಲ್ಲೇ ಪಂತ್​ ಕೂಡ ಕುಳಿತು ಫೋಟೊ(Thalaiva Look Rishabh Pant) ತೆಗೆಸಿಕೊಂಡಿದ್ದಾರೆ. ಈ ಫೋಟೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿರುವ ಪಂತ್​ ‘ತಲೈವಾ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೊ ವೈರಲ್​ ಆಗುತ್ತಿದೆ.

ರಿಷಭ್​ ಪಂತ್​ ಅವರು ರಜನಿಕಾಂತ್ ಶೈಲಿಯಲ್ಲೇ ಫೋಟೊ ಶೂಟ್​ ಮಾಡಿಸಿದನ್ನು ನೋಡುವಾಗ ಪಂತ್​ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡುವುದು ಬಹುತೇಕ ಖಚಿತ ಎನ್ನುವ ಸುಳಿವು ಬಿಟ್ಟುಕೊಟ್ಟಂತಿದೆ. ಕೆಲವು ದಿನಗಳ ಹಿಂದೆಯೇ ಪಂತ್​ ಡೆಲ್ಲಿ ತಂಡದ ಪರ ರಿಟೈನ್ ಆಸಕ್ತಿ ಹೊಂದಿಲ್ಲ ಅವರು ಚೆನ್ನೈ ತಂಡ ಸೇರಲಿದ್ದಾರೆ ಎನ್ನಲಾಗಿತ್ತು. ಇದೀಗ ತಲೈವಾ ಎಂದು ರಜನಿಕಾಂತ್ ಶೈಲಿಯಲ್ಲೇ ಫೋಟೊ ತೆಗೆಸಿಕೊಂಡಿರುವುದನ್ನು ನೋಡುವಾಗ ಈ ವರದಿ ಸತ್ಯವಾದಂತೆ ತೋರುತ್ತಿದೆ. ಧೋನಿ ಕೂಡ 2016ರಲ್ಲಿ ರಜನಿಕಾಂತ್ ಶೈಲಿಯಲ್ಲೇ ಫೋಟೊ ಶೂಟ್​ ಮಾಡಿಸಿದ್ದರು.

ಮಹೇಂದ್ರ ಸಿಂಗ್​ ಧೋನಿ ಮುಂದಿನ ವರ್ಷ ಐಪಿಎಲ್​ ಆಡುವುದು ಖಚಿತತೆ ಇಲ್ಲ. ಇಂಪ್ಯಾಕ್ಟ್​ ನಿಯಮ ಇದ್ದರೆ ಆಡುವುದಾಗಿ ಫ್ರಾಂಚೈಸಿ ಮೂಲಗಳು ಈಗಾಗಲೇ ಮಾಹಿತಿ ನೀಡಿದೆ. ಈ ಬಾರಿಯೇ ಧೋನಿ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು. ಧೋನಿ ಸ್ಥಾನಕ್ಕೆ ಪಂತ್​ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯೊಂದು ಕಂಡುಬಂದಿದೆ.

ಮಹೇಂದ್ರ ಸಿಂಗ್​ ಧೋನಿ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ, ರಿಷಭ್​ ಪಂತ್​ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಣ್ಣನ ಸ್ಥಾನದಲ್ಲಿ ನಿಂತು ಧೋನಿ ಅವರು ಪಂತ್​ಗೆ ಸಲಹೆ ನೀಡುತ್ತಾರೆ. ಪಂತ್​ ಕೂಡ ಧೋನಿ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಧೋನಿಯೇ ಪಂತ್​ ಅವರನ್ನು ಸಿಎಸ್​ಕೆ ತಂಡಕ್ಕೆ ಆಹ್ವಾನಿಸಬಹುದು. ಪಂತ್​ ಚೆನ್ನೈ ಸೇರಿದರೆ ಕೀಪಿಂಗ್​ ನಡೆಸಬಹುದು. ಧೋನಿ ಇಂಪ್ಯಾಕ್ಟ್​ ಆಟಗಾರನಾಗಿ ಬ್ಯಾಟಿಂಗ್​ ಮಾತ್ರ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ Rishabh Pant: ಕೀಪಿಂಗ್​ ಬಿಟ್ಟು ಬೌಲಿಂಗ್​ ನಡೆಸಿದ ರಿಷಭ್​ ಪಂತ್​; ವಿಡಿಯೊ ವೈರಲ್​

ಬೌಲಿಂಗ್​ ನಡೆಸಿದ್ದ ಪಂತ್​


ಕೆಲ ದಿನಗಳ ಹಿಂದಷ್ಟೇ ರಿಷಭ್​ ಪಂತ್​ ದೆಹಲಿ ಪ್ರೀಮಿಯರ್ ಲೀಗ್ 2024 ರ(Delhi Premier League T20 2024) ಉದ್ಘಾಟನಾ ಆವೃತ್ತಿಯ ಪಂದ್ಯದಲ್ಲಿ ಬೌಲಿಂಗ್(rishabh pant bowling)​ ನಡೆಸುವ ಮೂಲಕ ಗಮನಸೆಳೆದಿದ್ದರು. ಪಂತ್ ಪಂದ್ಯದ ಅಂತಿಮ ಓವರ್​ನಲ್ಲಿ ಎದುರಾಳಿ ಸೌತ್​ ಡೆಲ್ಲಿ ತಂಡಕ್ಕೆ 6 ಎಸೆತಗಳಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಸ್ಪಿನ್​ ಬೌಲಿಂಗ್​ ನಡೆಸಿದ್ದರು. ಬೌಲಿಂಗ್​ ನಡೆಸಿದ್ದ ವಿಡಿಯೊ ವೈರಲ್ ಆಗಿತ್ತು.

Continue Reading
Advertisement
T20 World Cup
ಕ್ರಿಕೆಟ್3 mins ago

T20 World Cup: ಟಿ20 ವಿಶ್ವಕಪ್​ನ 3 ಪಿಚ್​ಗಳಿಗೆ ಕಳಪೆ ರೇಟಿಂಗ್​ ಕೊಟ್ಟ ಐಸಿಸಿ

Toyota Kirloskar Motor
ರಾಮನಗರ22 mins ago

Toyota Kirloskar Motor: ರಾಮನಗರ ಜಿಲ್ಲೆಯಲ್ಲಿ 3 ಹೊಸ ನೀರು ಶುದ್ಧೀಕರಣ ಘಟಕ ಸ್ಥಾಪಿಸಿದ ಟಿಕೆಎಂ

World Senior Citizens Day
ಬೆಂಗಳೂರು23 mins ago

World Senior Citizens Day: ವಿಶ್ವ ಹಿರಿಯ ನಾಗರಿಕರ ದಿನದ ಪ್ರಯುಕ್ತ ವೈದ್ಯರಿಂದ ಉಚಿತ ಸಮಾಲೋಚನೆ

KHIR City Project
ಬೆಂಗಳೂರು25 mins ago

KHIR City Project: ಬೆಂಗಳೂರಿನಲ್ಲಿ ನಾಲೆಜ್‌-ಹೆಲ್ತ್‌ ಸಿಟಿ ಮೊದಲ ಹಂತದ ಯೋಜನೆಗೆ ಸದ್ಯದಲ್ಲೇ ಚಾಲನೆ: ಎಂ.ಬಿ. ಪಾಟೀಲ

D Devaraja Arasu birth Anniversary
ಬೆಂಗಳೂರು30 mins ago

D Devaraja Arasu birth Anniversary: ಹಿಂದುಳಿದವರನ್ನು ತುಳಿಯಲು ಈಗಲೂ ನಿರಂತರ ಹುನ್ನಾರ; ಸಿದ್ದರಾಮಯ್ಯ ಆರೋಪ

ICC Women’s T20 World Cup
ಕ್ರಿಕೆಟ್1 hour ago

ICC Women’s T20 World Cup: ಯುಎಇಗೆ ಸ್ಥಳಾಂತರಗೊಂಡ ಮಹಿಳಾ ಟಿ20 ವಿಶ್ವಕಪ್

Kailash Vijayvargiya
ಪ್ರಮುಖ ಸುದ್ದಿ1 hour ago

Kailash Vijayvargiya: 30 ವರ್ಷದಲ್ಲಿ ದೇಶದೊಳಗೆ ಅಂತರ್ಯುದ್ಧ, ಹಿಂದೂಗಳು ಬದುಕುವುದೇ ಕಷ್ಟ: ಕೈಲಾಶ್‌ ವಿಜಯ್‌ವರ್ಗೀಯ

Murder Case
ಕರ್ನಾಟಕ1 hour ago

Murder Case: ಬೆಳ್ತಂಗಡಿ ಬಳಿ ಮನೆಯ ಅಂಗಳದಲ್ಲೇ ನಿವೃತ್ತ ಶಿಕ್ಷಕನ ಭೀಕರ ಕೊಲೆ

Scott Boland
ಕ್ರೀಡೆ2 hours ago

Scott Boland: ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭಕ್ಕೂ ಮುನ್ನವೇ ಕೊಹ್ಲಿಗೆ ಎಚ್ಚರಿಕೆ ನೀಡಿದ ಆಸೀಸ್​ ವೇಗಿ

ವೈರಲ್ ನ್ಯೂಸ್2 hours ago

Road Rage Incident: ಒಳಗೆ ಮಗು ಇದೆ ಅಂದ್ರೂ ಬಿಡದ ಕಿಡಿಗೇಡಿ; ಕಾರಿನ ಗ್ಲಾಸ್‌ ಒಡೆದು ದಾಂಧಲೆ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌