Manu Bhaker : ಮನು ಭಾಕರ್​ಗೆ ಕ್ರೀಡಾ ಇಲಾಖೆಯಿಂದ ವಿಶೇಷ ಸನ್ಮಾನ; 30 ಲಕ್ಷ ರೂಪಾಯಿ ವಿತರಣೆ - Vistara News

ಕ್ರೀಡೆ

Manu Bhaker : ಮನು ಭಾಕರ್​ಗೆ ಕ್ರೀಡಾ ಇಲಾಖೆಯಿಂದ ವಿಶೇಷ ಸನ್ಮಾನ; 30 ಲಕ್ಷ ರೂಪಾಯಿ ವಿತರಣೆ

Manu Bhaker : ಒಲಿಂಪಿಕ್ಸ್​ನಲ್ಲಿನ ಗಮನಾರ್ಹ ಸಾಧನೆಗಾಗಿ ಭಾಕರ್ ಅವರನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಕೊಂಡಾಡಿದರು. ಅವರಿಗೆ ಐತಿಹಾಸಿಕ ಸಾಧನೆಗಾಗಿ ಅವರನ್ನು ಅಭಿನಂದಿಸಿದರು. ಅವರ ಯಶಸ್ಸು ನಮ್ಮ ದೇಶದ ಯುವಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ಮಾಂಡವಿಯಾ ಹೇಳಿದ್ದಾರೆ. 22ರ ಹರೆಯದ ಆಟಗಾರ್ತಿಗೆ 30 ಲಕ್ಷ ರೂಪಾಯಿ ನಗದು ಬಹುಮಾನವನ್ನೂ ನೀಡಲಾಗಿದೆ.

VISTARANEWS.COM


on

Manu Bhaker
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತದ ಸ್ಟಾರ್ ಶೂಟರ್ ಮನು ಭಾಕರ್ (Manu Bhaker) ಅವರನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ.ಮನ್ಸುಖ್ ಮಾಂಡವಿಯಾ ಗುರುವಾರ ಸನ್ಮಾನಿಸಿದರು. ವಿಶೇಷವೆಂದರೆ, ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದ ನಂತರ ಭಾಕರ್ ಆಗಸ್ಟ್ 7 ರಂದು ಭಾರತಕ್ಕೆ ಮರಳಿದ್ದಾರೆ. ಇದರ ಪರಿಣಾಮವಾಗಿ ಅವರು ಸ್ವಾತಂತ್ರ್ಯದ ನಂತರ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮತ್ತು ಒಟ್ಟಾರೆ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.

ಒಲಿಂಪಿಕ್ಸ್​ನಲ್ಲಿನ ಗಮನಾರ್ಹ ಸಾಧನೆಗಾಗಿ ಭಾಕರ್ ಅವರನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಕೊಂಡಾಡಿದರು. ಅವರಿಗೆ ಐತಿಹಾಸಿಕ ಸಾಧನೆಗಾಗಿ ಅವರನ್ನು ಅಭಿನಂದಿಸಿದರು. ಅವರ ಯಶಸ್ಸು ನಮ್ಮ ದೇಶದ ಯುವಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ಮಾಂಡವಿಯಾ ಹೇಳಿದ್ದಾರೆ. 22ರ ಹರೆಯದ ಆಟಗಾರ್ತಿಗೆ 30 ಲಕ್ಷ ರೂಪಾಯಿ ನಗದು ಬಹುಮಾನವನ್ನೂ ನೀಡಲಾಗಿದೆ.

ಇಂದು ನಾನು ದೇಶದ ಮಗಳನ್ನು ಭೇಟಿಯಾದೆ. ಎರಡು ಕಂಚಿನ ಪದಕಗಳನ್ನು ಗೆದ್ದ ನಂತರ ಮನೆಗೆ ಮರಳಿದ್ದಾರೆ. ಈ ಐತಿಹಾಸಿಕ ವಿಜಯಕ್ಕಾಗಿ ಅವಳನ್ನು ಅಭಿನಂದಿಸಿದೆ ಮತ್ತು ಹಾರೈಸಿದೆ. ಮನು ಭಾಕರ್ ಅವರ ಈ ಯಶಸ್ಸು ಭಾರತೀಯ ಕ್ರೀಡಾ ಜಗತ್ತಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಇಡೀ ದೇಶ ಅವಳ ಬಗ್ಗೆ ಹೆಮ್ಮೆ ಪಡುತ್ತದೆ” ಎಂದು ಮಾಂಡವಿಯಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

“ಗೌರವಾನ್ವಿತ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರನ್ನು ಇಂದು ಭೇಟಿಯಾದೆ. ಅವರ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ವೈಯಕ್ತಿಕವಾಗಿ ಧನ್ಯವಾದ ಹೇಳುವುದು ಒಂದು ಗೌರವ. ಅವರ ನಿರಂತರ ಪ್ರಯತ್ನಗಳಿಂದ, ರಾಷ್ಟ್ರದ ಕ್ರೀಡಾಪಟುಗಳು ಇನ್ನೂ ಹೆಚ್ಚಿನ ಎತ್ತರವನ್ನು ತಲುಪಬಹುದು ಎಂದು ಮನು ಭಾಕರ್ ಹೇಳಿದ್ದಾರೆ.

ಮನು ಭಾಕರ್ ಅವರ ಪ್ಯಾರಿಸ್ ಒಲಿಂಪಿಕ್ಸ್ ಪ್ರದರ್ಶನ

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಬೆಳಿಗ್ಗೆ 10 ಗಂಟೆಗೆ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾಕರ್ ಭಾರತದ ಖಾತೆ ತೆರೆದರು. ಒಲಿಂಪಿಕ್ಸ್​ನಲ್ಲಿ ಶೂಟಿಂಗ್​ ಪದಕಕ್ಕಾಗಿ ಭಾರತದ 12 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು. ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಎರಡನೇ ಕಂಚಿನ ಪದಕ ಗೆಲ್ಲುವ ಮೂಲಕ 22 ವರ್ಷದ ಅವರು ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟರು.

ಇದನ್ನೂ ಓದಿ: Paris Olympics 2024 : ರೇಸಿಂಗ್​ ಟ್ರ್ಯಾಕ್​ ಬಳಿಯೇ ಯುವಕನೊಬ್ಬನಿಗೆ ಪ್ರಪೋಸ್ ಮಾಡಿದ ಫ್ರಾನ್ಸ್​ನ ಮಹಿಳಾ ಅಥ್ಲೀಟ್​, ವಿಡಿಯೊ ಇದೆ

ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲಲು ವಿಫಲವಾದ ಕಾರಣ ಅವರು ಹ್ಯಾಟ್ರಿಕ್ ಪದಕದ ಸಾಧನೆ ಮಾಡಲು ವಿಫಲರಾದರು. ಒಲಿಂಪಿಕ್ಸ್​ಗೆ ಪದಾರ್ಪಣೆ ಮಾಡಿದ ನಂತರ, ಭಾಕರ್ ವೈಯಕ್ತಿಕ ಸ್ಪರ್ಧೆಯಲ್ಲಿ ಎರಡು ಪದಕಗಳನ್ನು ಗೆದ್ದ ನಾಲ್ಕನೇ ಭಾರತೀಯ ಮತ್ತು ದೇಶದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics 2024 : ಭಾರತ ಹಾಕಿ ತಂಡಕ್ಕೆ ಕಂಚಿನ ಪದಕ, ಸ್ಪೇನ್ ವಿರುದ್ಧ 2-1 ಗೋಲ್​ಗಳ ಗೆಲುವು

Paris Olympics 2024 :

VISTARANEWS.COM


on

Koo

ಬೆಂಗಳೂರು : ಪ್ಯಾರಿಸ್​ ಒಲಿಂಪಿಕ್ಸ್​ನ (Paris Olympics 2024) ಭಾರತದ ಪದಕಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ಹರ್ಮನ್​ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಹಾಕಿಯಲ್ಲಿ ಕಂಚಿನ ಪದಕ ಗೆದ್ದಿದೆ. ಈ ಮೂಲಕ ಒಲಿಂಪಿಕ್ಸ್​ನ ಕಂಚಿನ ಪದಕ ಉಳಿಸಿಕೊಂಡಿದೆ. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ 41 ವರ್ಷಗಳ ಬಳಿಕ ಅಮೋಘ ಸಾಧನೆ ಮಾಡಿತ್ತು. ಅದೇ ಸಾಧನೆಯನ್ನು ಮತ್ತೆ ಪುನರಾವರ್ತನೆ ಮಾಡಿದೆ ಭಾರತ ತಂಡ. ಪದಕಗಳ ಕೊರತೆ ಎದುರಿಸುತ್ತಿರುವ ಭಾರತ ಅಥ್ಲೀಟ್​ಗಳ ನಿಯೋಗಕ್ಕೆ ಹಾಗೂ ಕ್ರೀಡಾಭಿಮಾನಿಗಳಿಗೆ ಇದು ಅತ್ಯಂತ ಸಂಭ್ರಮದ ಸುದ್ದಿ.

ಒಲಿಂಪಿಕ್ ಹಾಕಿ ಇತಿಹಾಸದಲ್ಲಿ ಭಾರತವು ಅತ್ಯಂತ ಯಶಸ್ವಿ ತಂಡ. ಪುರುಷರ ತಂಡವು ಎಂಟು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದಿದೆ. ಕೊನೆಯ ಚಿನ್ನದ ಪದಕ 1980ರಲ್ಲಿ ಬಂದಿತು. ನಂತರ ತಂಡವು 41 ವರ್ಷಗಳ ಪದಕ ಬರವನ್ನು ಎದುರಿಸಿತು. ಟೋಕಿಯೊದಲ್ಲಿ ನಡೆದ 2020 ರ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು.

ಪಂದ್ಯದ ಮೊದಲ ಕ್ವಾರ್ಟರ್​​ನಲ್ಲಿ ಎರಡೂ ತಂಡಗಳು ಗೋಲ್​ ರಹಿತ ಆಟವನ್ನು ಆಡಿತು. ಆದರೆ, 2ನೇ ಕ್ವಾರ್ಟರ್ನಲ್ಲಿ ಸ್ಪೇನ್ ತಂಡದ ನಾಯಕ ಮಾರ್ಕ್ ಮಿರಾಲೆಸ್ 11ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದರೊಂದಿಗೆ ಸ್ಪೇನ್​ ಮುನ್ನಡೆಯನ್ನು ಪಡೆದುಕೊಂಡಿತು. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಭಾರತ ತಂಡದ ನಾಯಕ ಗೋಲ್ ಬಾರಿಸುವ ಮೂಲಕ ಗೋಲ್​ಗಳ ಸಮಬಲಗೊಳ್ಳುವಂತೆ ಮಾಡಿದರು. ಮೂರನೇ ಕ್ವಾರ್ಟರ್​ನಲ್ಲಿ ಮತ್ತೊಂದು ಗೋಲ್ ಬಾರಿಸಿ ಅವರು ಮುನ್ನಡೆ ತಂದುಕೊಟ್ಟರು. ಅದೇ ಮುನ್ನಡೆಯನ್ನು ಕೊನೇ ತನಕ ಉಳಿಸಿಕೊಂಡು ಗೆಲುವು ಸಾಧಿಸಿತು.

ಗೋಲ್ ಕೀಪರ್ ಶ್ರೀಜೇಶ್​ಗೆ ಉತ್ತಮ ವಿದಾಯ

ಒಲಿಂಪಿಕ್ಸ್ ಉದ್ದಕ್ಕೂ ಭಾರತಕ್ಕೆ ಗೆಲುವಿನಲ್ಲಿ ನೆರವಾಗಿದ್ದು ಗೋಲ್ ಕೀಪರ್​ ಶ್ರೀಜೇಶ್​. ಹೀಗಾಗಿ ಈ ಪದಕದೊಂದಿಗೆ ಅವರಿಗೆ ಉತ್ತಮ ವಿದಾಯ ದೊರಕಿದೆ. ಒಲಿಂಪಿಕ್ಸ್​ ಆರಂಭಕ್ಕೆ ಮುನ್ನವೇ ಅವರು ಇದು ನನಗೆ ಕೊನೇ ಅಂತಾರಾಷ್ಟ್ರೀಯ ಟೂರ್ನಿ ಎಂದು ಹೇಳಿದ್ದರು. ಹೀಗಾಗಿ ಅವರು ಇಲ್ಲಿಗೆ ತಮ್ಮ ವೃತ್ತಿ ಕ್ರೀಡೆಯನ್ನು ಮುಗಿಸಲಿದ್ದಾರೆ. ಹೀಗಾಗಿ ತಂಡದ ಆಟಗಾರರು ಅವರಿಗೆ ಉತ್ತಮ ವಿದಾಯ ಎಂದು ಹೇಳಿದ್ದಾರೆ.

ಭಾರತದ ಹಾಕಿ ತಂಡದ ಸಾಧನೆ ಈ ರೀತಿ ಇದೆ

  • ಒಲಿಂಪಿಕ್ ನಲ್ಲಿ ಹಾಕಿ ಪದಕಗಳ ಪಟ್ಟಿ
    ಚಿನ್ನದ ಪದಕ , ಆಮ್​ಸ್ಟರ್​ಡ್ಯಾಮ್​ 1928
  • ಚಿನ್ನದ ಪದಕ, ಲಾಸ್ ಏಂಜಲೀಸ್ 1932
  • ಚಿನ್ನದ ಪದಕ, ಬರ್ಲಿನ್ 1936
  • ಚಿನ್ನದ ಪದಕ, ಲಂಡನ್ 1948
  • ಚಿನ್ನದ ಪದಕ, ಹೆಲ್ಸಿಂಕಿ 1952
  • ಚಿನ್ನದ ಪದಕ ಮೆಲ್ಬೋರ್ನ್ 1956
  • ಬೆಳ್ಳಿ ಪದಕ ರೋಮ್ 1960
  • ಚಿನ್ನದದ ಪದಕ, ಟೋಕಿಯೊ 1964
  • ಕಂಚಿನ ಪದಕ, ಮೆಕ್ಸಿಕೊ ನಗರ 1968
  • ಕಂಚಿನ ಪದಕ, ಮ್ಯೂನಿಚ್ 1972
  • ಚಿನ್ನದ ಪದಕ, ಮಾಸ್ಕೋ 1980
  • ಕಂಚಿನ ಪದಕ, ಟೋಕಿಯೊ 2021
Continue Reading

ಪ್ರಮುಖ ಸುದ್ದಿ

Paris Olympics 2024 : ಅಥ್ಲೀಟ್​ಗಳಿಗೆ ಒಲಿಂಪಿಕ್ಸ್​ ಮಸ್ಕಾಟ್​ ಚಿತ್ರ ಇರುವ ಕಾಂಡೋಮ್ ಹಂಚಿದ ಆಯೋಜಕರು!

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ಕ್ರೀಡಾ ಗ್ರಾಮದಲ್ಲಿ ಕಾಂಡೋಮ್​ಗಳನ್ನು ಅತ್ಯಾಕರ್ಷಕ ಬಣ್ಣದ ಪ್ಯಾಕೆಟ್​ಗಳಲ್ಲಿ ನೀಡಿಎ. ಅದರಲ್ಲಿ ಒಲಿಂಪಿಕ್ಸ್​ನ ಕೆಂಪು ಲಾಂಛನವಾದ ಫ್ರೈಜ್ ಚಿತ್ರವೂ ಇದೆ. ಅದೇ ರೀತಿ ಅತ್ಯಾಕರ್ಷಕ ಶೀರ್ಷಿಕೆಗಳೊಂದಿಗೆ ವರ್ಣರಂಜಿತ ಪ್ಯಾಕೆಟ್​​ಗಳಲ್ಲಿ ನೀಡಲಾಗಿದೆ. ರೋಮಾಂಚಕ ವಿನ್ಯಾಸದ ಜೊತೆಗೆ, ಪ್ಯಾಕೆಟ್ ಗಳು ಕ್ರೀಡಾಪಟುಗಳಿಗೆ ಎಚ್ಚರಿಕೆಯಿಂದ ಇರುವಂಥ ಸಲಹೆಯನ್ನೂ ನೀಡಿದೆ.

VISTARANEWS.COM


on

Manu Bhaker
Koo

ಬೆಂಗಳೂರು: ಕೋವಿಡ್ -19 ಮುನ್ನೆಚ್ಚರಿಕೆಗಳಿಂದಾಗಿ 2020 ರ ಟೋಕಿಯೊ ಕ್ರೀಡಾಕೂಟದ ಸಮಯದಲ್ಲಿ ಜಾರಿಯಲ್ಲಿದ್ದ ಲೈಂಗಿಕ ಸಂಬಂಧಗಳ ಮೇಲಿನ ನಿಷೇಧವನ್ನು 2024 ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ತೆಗೆದುಹಾಕಲಾಗಿತ್ತು . ಹೀಗಾಗಿ ಹಿಂದಿನ ಒಲಿಂಪಿಕ್ಸ್​ಗಿಂತ ಭಿನ್ನವಾಗಿ ನಡೆಯುತ್ತಿರುವ ಕ್ರೀಡಾಕೂಟಗಳು ಕ್ರೀಡಾಪಟುಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿವೆ. 1988ರ ಸಿಯೋಲ್ ಒಲಿಂಪಿಕ್ಸ್​​ ಬಳಿಕ ಒಲಿಂಪಿಕ್ಸ್​ನಲ್ಲಿ ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟುವ ಮತ್ತು ಜಾಗೃತಿ ಮೂಡಿಸುವ ಸಂಪ್ರದಾಯ ಈಗಲೂ ಮುಂದುವರಿದಿದೆ. ಅಂತೆಯೇ ಎಚ್ಐವಿ ಮತ್ತು ಏಡ್ಸ್ ಜಾಗೃತಿಯನ್ನು ಉತ್ತೇಜಿಸಲು ಪ್ರತಿಬಾರಿಯೂ ಅಥ್ಲೀಟ್​ಗಳಿಗೆ ಕಾಂಡೋಮ್​ಗಳನ್ನು ನೀಡಲಾಗುತ್ತದೆ. ಅಂತೆಯೇ ಈ ಬಾರಿಯೂ ಕಾಂಡೋಮ್​ಗಳನ್ನು ವಿತರಣೆ ಮಾಡಲಾಗಿದೆ. ಆದರೆ ವಿಶೇಷ ಪ್ಯಾಕೆಟ್​ನಲ್ಲಿ ನೀಡಲಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ಕ್ರೀಡಾ ಗ್ರಾಮದಲ್ಲಿ ಕಾಂಡೋಮ್​ಗಳನ್ನು ಅತ್ಯಾಕರ್ಷಕ ಬಣ್ಣದ ಪ್ಯಾಕೆಟ್​ಗಳಲ್ಲಿ ನೀಡಿಎ. ಅದರಲ್ಲಿ ಒಲಿಂಪಿಕ್ಸ್​ನ ಕೆಂಪು ಲಾಂಛನವಾದ ಫ್ರೈಜ್ ಚಿತ್ರವೂ ಇದೆ. ಅದೇ ರೀತಿ ಅತ್ಯಾಕರ್ಷಕ ಶೀರ್ಷಿಕೆಗಳೊಂದಿಗೆ ವರ್ಣರಂಜಿತ ಪ್ಯಾಕೆಟ್​​ಗಳಲ್ಲಿ ನೀಡಲಾಗಿದೆ. ರೋಮಾಂಚಕ ವಿನ್ಯಾಸದ ಜೊತೆಗೆ, ಪ್ಯಾಕೆಟ್ ಗಳು ಕ್ರೀಡಾಪಟುಗಳಿಗೆ ಎಚ್ಚರಿಕೆಯಿಂದ ಇರುವಂಥ ಸಲಹೆಯನ್ನೂ ನೀಡಿದೆ.

ಒಲಿಂಪಿಕ್ಸ್ ವೆಬ್​ಸೈಟ್​ ಪ್ರಕಾರ, 2024 ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ 14,250 ಕ್ರೀಡಾಪಟುಗಳಿಗೆ ಸುಮಾರು 3 ಲಕ್ಷ ಕಾಂಡೋಮ್​ಗಳನ್ನು ವಿತರಿಸಲಾಗಿದೆ. ಇದರಲ್ಲಿ 2 ಲಕ್ಷ ಪುರುಷ ಕಾಂಡೋಮ್​ಗಳು 20,000 ಮಹಿಳಾ ಕಾಂಡೋಮ್​ಗಳಾಗಿದೆ. ಮತ್ತು 10,000 ಓರಲ್ ಡ್ಯಾಮ್​ಗಳೂ ಸೇರಿವೆ. ಮುದ್ದಾದ ಲಾಂಛನ ಫ್ರೈಜ್ ಅನ್ನು ಒಳಗೊಂಡಿರುವ ಕಾಂಡೋಮ್​ಗಳ ಮೇಲೆ ಆಕರ್ಷಕ ಘೋಷಣೆಗಳನ್ನು ಹೊಂದಿದ್ದು ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುತ್ತವೆ.

ಇದನ್ನೂ ಓದಿ: Manu Bhaker : ಮನು ಭಾಕರ್​ಗೆ ಕ್ರೀಡಾ ಇಲಾಖೆಯಿಂದ ವಿಶೇಷ ಸನ್ಮಾನ; 30 ಲಕ್ಷ ರೂಪಾಯಿ ವಿತರಣೆ

“ಇದನ್ನು ಹಾಕಿಕೊಳ್ಳುವುದಕ್ಕೆ ಚಿನ್ನದ ಪದಕ ವಿಜೇತರಾಗುವ ಅಗತ್ಯವಿಲ್ಲ”, “ನ್ಯಾಯಯುತವಾದ ಮತ್ತು ಸುರಕ್ಷಿತ ಆಟವಾಡಿ”, ‘ಮೊದಲು ಸಮ್ಮತಿ ಪಡೆಯಿರಿ ನಂತರ ಗೆಲುವು ಸಾಧಿಸಿ”; ”ಸಮ್ಮತಿಗೆ ಯೆಸ್ ಹೇಳಿ, ಎಸ್​​ಟಿಡಿಗಳಿಗೆ ಅಲ್ಲ.” ಮತ್ತೊಂದು ಪ್ಯಾಕೆಟ್ ಮೇಲೆ “ಗೆಲುವಿಗಿಂತ ಬಿಟ್ಟು ಬೇರೇನನ್ನೂ ಹಂಚಿಕೊಳ್ಳಬೇಡಿ. ಎಸ್​​ಟಿಡಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ” ಹಾಗೂ “ಪ್ರೀತಿಯ ಮೈದಾನದಲ್ಲಿ, ನ್ಯಾಯಯುತವಾಗಿ ಆಟವಾಡಿ. ಒಪ್ಪಿಗೆ ಪಡೆಯಿರಿ,” ಎಂದು ಬರೆಯಲಾಗಿದೆ.

ಶಾಂಪೆನ್​ಗೆ ಇಲ್ಲ ಚಾನ್ಸ್​

ಒಲಿಂಪಿಕ್ ಕ್ರೀಡಾಕೂಟಕ್ಜೆ ಕಾಂಡೋಮ್​ಗಳು ಮರಳಿದ್ದರೂ, ಕ್ರೀಡಾಪಟುಗಳಿಗೆ ಶಾಂಪೇನ್ ಇನ್ನೂ ಮೆನುವಿನಿಂದ ಹೊರಗುಳಿದಿದೆ. ಕ್ರೀಡಾ ಗ್ರಾಮದ ನಿರ್ದೇಶಕ ಲಾರೆಂಟ್ ಮಿಚೌಡ್, “ಕ್ರೀಡಾಪಟುಗಳು ತುಂಬಾ ಉತ್ಸಾಹ ಮತ್ತು ಆರಾಮದಾಯಕವಾಗಿರುವ ಕೆಲವು ಸ್ಥಳಗಳನ್ನು ರಚಿಸಲು ನಾವು ಬಯಸಿದ್ದೇವೆ. ಕ್ರೀಡಾ ಗ್ರಾಮದಲ್ಲಿ ಶಾಂಪೇನ್ ಗೆ ಅನುಮತಿ ಇಲ್ಲ. ಆದರೆ ಅವರು ಬಯಸುವ ಎಲ್ಲಾ ಶಾಂಪೇನ್ ಅನ್ನು ಪ್ಯಾರಿಸ್ ನಲ್ಲಿಯೂ ಸೇವಿಸಬಹುದು. ನಾವು ವಿಶ್ವ ಆಹಾರ ಮೇಳದಲ್ಲಿ 350 ಮೀಟರ್ ಗಿಂತ ಹೆಚ್ಚು ಬಫೆ ವ್ಯವಸ್ಥೆ ಹೊಂದಿದ್ದೇವೆ.. ಕ್ರೀಡಾಪಟುಗಳು ಇಲ್ಲಿ ಕೆಲವು ಫ್ರೆಂಚ್ ಖಾದ್ಯಗಳನ್ನು ತಯಾರಿಸಲು ಇಷ್ಟಪಟ್ಟಿದ್ದಾರೆ ಎಂದು ಹೇಳಿದ್ದಾರೆ.

2024 ರ ಪ್ಯಾರಿಸ್ ಕ್ರೀಡಾಕೂಟಕ್ಕಾಗಿ ಒಲಿಂಪಿಕ್ ಗ್ರಾಮವು ಅತ್ಯಂತ ದುಬಾರಿ ಯೋಜನೆಯಾಗಿದೆ ಎಂದು ವರದಿಯಾಗಿದೆ. 1,83,12 ಕೋಟಿ ರೂಪಾಯಿಯಲ್ಲಿ ನಿರ್ಮಿಸಲಾಗಿದೆ.

Continue Reading

ಪ್ರಮುಖ ಸುದ್ದಿ

Paris Olympics 2024 : ರೇಸಿಂಗ್​ ಟ್ರ್ಯಾಕ್​ ಬಳಿಯೇ ಯುವಕನೊಬ್ಬನಿಗೆ ಪ್ರಪೋಸ್ ಮಾಡಿದ ಫ್ರಾನ್ಸ್​ನ ಮಹಿಳಾ ಅಥ್ಲೀಟ್​, ವಿಡಿಯೊ ಇದೆ

Paris Olympics 2024 : ಪ್ಯಾರಿಸ್ ಹೇಳಿ ಕೇಳಿ ಪ್ರಣಯದ ನಗರ. ಟ್ರ್ಯಾಕ್​ನಲ್ಲೇ ಪ್ರೀತಿಯ ಹುಡುಗನಿಗೆ ಪ್ರಪೋಸ್ ಮಾಡಿರುವುದು ವಿಶೇಷ ಎನಿಸಿತು. ಪ್ಯಾರಿಸ್​​ನಲ್ಲಿ ಕೇವಲ ಸ್ಪರ್ಧಾತ್ಮಕ ಮನೋಭಾವ ಮಾತ್ರವಲ್ಲ, ಪ್ರೀತಿಯೂ ಹೆಚ್ಚಿದೆ. ರೇಸ್ ಮುಗಿದ ನಂತರ ಸ್ಟ್ಯಾಂಡ್ ಗಳ ಕಡೆಗೆ ನಡೆದು ಫಿನೋಟ್ ಹೋಗುತ್ತಿದ್ದ ವೀಡಿಯೊ ಶೀಘ್ರದಲ್ಲೇ ವೈರಲ್ ಆಯಿತು. ಗೆಳೆಯನಿಗೆ ಪ್ರಪೋಸ್ ಮಾಡಲು ಒಂದು ಮೊಣಕಾಲಿನ ಮೇಲೆ ಮಂಡಿಯೂರಿ ಕುಳಿತಾಗ ಸುತ್ತಲೂ ಇದ್ದವರು ಚಪ್ಪಾಳೆ ತಟ್ಟಿದರು.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024 (Paris Olympics 2024) ಹಲವಾರು ವಿವಾದಗಳು ಘಟಿಸಿದೆ. ಇದೇ ವೇಳೆ ಕೆಲವು ಹೃದಯಸ್ಪರ್ಶಿ ಘಟನೆಗಳೂ ನಡೆದಿವೆ. ಅಂತೆಯೇ ಫ್ರೆಂಚ್ ಅಥ್ಲೀಟ್ ಆಲಿಸ್ ಫಿನಾಟ್ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯ ಫೈನಲ್ ನಲ್ಲಿ ಭಾಗವಹಿಸಿದ್ದರು. ಅವರು ಓಟದಲ್ಲಿ ಯಾವುದೇ ಪದಕವನ್ನು ಗೆದ್ದಿಲ್ಲ. ಆದರೆ ಅವರು ಈವೆಂಟ್​​ನಲ್ಲಿ ಯುರೋಪಿಯನ್ ದಾಖಲೆ ಮುರಿಯುವಲ್ಲಿ ಯಶಸ್ವಿಯಾದರು. ತನ್ನ ದಾಖಲೆ ಮುರಿಯುವ ಪ್ರದರ್ಶನದ ನಂತರ ಟ್ರ್ಯಾಕ್​ ಬದಿಯಲ್ಲೇ ತನ್ನ ಬಾಯ್​ ಫ್ರೆಂಡ್​ಗೆ ಪ್ರಪೋಸ್ ಮಾಡಿದರು. ಈ ವಿಡಿಯೊ ಸೋಶಿಯಲ್ಲ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಪ್ಯಾರಿಸ್ ಹೇಳಿ ಕೇಳಿ ಪ್ರಣಯದ ನಗರ. ಹೀಗಾಗಿ ಅಥ್ಲೀಟ್​ ಟ್ರ್ಯಾಕ್​ನಲ್ಲೇ ಪ್ರೀತಿಯ ಹುಡುಗನಿಗೆ ಪ್ರಪೋಸ್ ಮಾಡಿರುವುದು ವಿಶೇಷ ಎನಿಸಿತು. ಪ್ಯಾರಿಸ್​​ನಲ್ಲಿ ಕೇವಲ ಸ್ಪರ್ಧಾತ್ಮಕ ಮನೋಭಾವ ಮಾತ್ರವಲ್ಲ, ಪ್ರೀತಿಯೂ ಹೆಚ್ಚಿದೆ. ರೇಸ್ ಮುಗಿದ ನಂತರ ಸ್ಟ್ಯಾಂಡ್ ಗಳ ಕಡೆಗೆ ನಡೆದು ಫಿನಾಟ್​​ ಹೋಗುತ್ತಿದ್ದ ವೀಡಿಯೊ ಶೀಘ್ರದಲ್ಲೇ ವೈರಲ್ ಆಯಿತು. ಗೆಳೆಯನಿಗೆ ಪ್ರಪೋಸ್ ಮಾಡಲು ಒಂದು ಮೊಣಕಾಲಿನ ಮೇಲೆ ಮಂಡಿಯೂರಿ ಕುಳಿತಾಗ ಸುತ್ತಲೂ ಇದ್ದವರು ಚಪ್ಪಾಳೆ ತಟ್ಟಿದರು. ಅವರಿಗೆ ರಿಂಗ್ ಕೊಟ್ಟು ಮದುವೆಯಾಗುವಂತೆ ಕೋರಿದರು.

ಇದನ್ನೂ ಓದಿ: Neeraj Chopra : ನೀರಜ್​ ಚೋಪ್ರಾನನ್ನ ಅರ್ಷದ್​ ನದೀಮ್ ಸೋಲಿಸಿ ಬಂಗಾರ ಗೆಲ್ತಾರೆ; ಪಾಕ್​ನ ಕ್ರಿಕೆಟಿಗರ ಶುಭಾಶಯ

ಫಿನೋಟ್ ಮತ್ತು ಸ್ಪೇನ್ ನ ಟ್ರಯಥ್ಲೆಟ್ ಆಗಿರುವ ಬ್ರೂನೋ ಮಾರ್ಟಿನೆಜ್ ಒಂಬತ್ತು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ. “ಒಂಬತ್ತು ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ಓಡಿದೆ. ಒಂಬತ್ತು ನನ್ನ ಅದೃಷ್ಟದ ಸಂಖ್ಯೆ ಮತ್ತು ನಾವು ಒಂಬತ್ತು ವರ್ಷಗಳಿಂದ ಒಟ್ಟಿಗೆ ಇದ್ದೇವೆ. ನಾನು ಪ್ರಪೋಸ್ ಮಾಡುತ್ತೇನೆ ಎಂದು ನನಗೆ ನಾನೇ ಹೇಳಿಕೊಂಡೆ ಎಂದು ಫಿನೋಟ್ ನಂತರ ಸುದ್ದಿಗಾರರಿಗೆ ತಿಳಿಸಿದರು.

“ನನ್ನ ಬಾಯ್​ಫ್ರೆಂಡ್​​ ಇನ್ನೂ ಇನ್ನೂ ಪ್ರಪೋಸ್ ಮಾಡದ ಕಾರಣ, ಬಹುಶಃ ಅದು ನನಗೆ ಬಿಟ್ಟದ್ದು ಎಂದು ನಾನು ಭಾವಿಸಿದೆ.” ಎಂದು ಫಿನೋಟ್ ಹೇಳಿದ್ದಾರೆ.

ಬ್ಯಾಡ್ಮಿಂಟನ್​​ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ನಂತರ ಚೀನಾದ ಬ್ಯಾಡ್ಮಿಂಟನ್ ತಂಡದ ಲಿ ಯುಚೆನ್ ಅವರು ಮದುವೆ ಪ್ರಸ್ತಾಪ ಮಾಡಿದ್ದರು. ಅವರ ಸಹ ಆಟಗಾರ್ತಿ ಹುವಾಂಗ್ ಯಾ ಕಿಯಾಂಗ್​ ತಕ್ಷಣವೇ ಆಯಿತು ಎಂದು ಒಪ್ಪಿಕೊಂಡಿದ್ದರು. ಹೀಗಾಗಿ ಕ್ರೀಡಾಕೂಟದ ಸಮಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಏಕೈಕ ಕ್ರೀಡಾಪಟು ಫಿನೋಟ್ ಅಲ್ಲ ಎಂದು ಹೇಳಬಹುದು.

Continue Reading

ಕ್ರೀಡೆ

Aman Sehrawat: ಕುಸ್ತಿಯಲ್ಲಿ ಪದಕ ಭರವಸೆ ಮೂಡಿಸಿದ ಅಮನ್ ಸೆಹ್ರಾವತ್; ಸೆಮಿಗೆ ಲಗ್ಗೆ

Aman Sehrawat: ಎದುರಾಳಿಗೆ ಒಂದೇ ಒಂದು ಅಂಕ ಬಿಟ್ಟು ಕೊಡದೆ ಸೆಮಿಫೈನಲ್​ ಪ್ರವೇಶಿಸಿರುವ ಅಮನ್ ಸೆಹ್ರಾವತ್ ಭಾರತಕ್ಕೆ ಅನಿರೀಕ್ಷಿತ ಪದಕೊಂದನ್ನು ಗೆಲ್ಲುವ ತವಕದಲ್ಲಿದ್ದಾರೆ

VISTARANEWS.COM


on

Aman Sehrawat
Koo

ಪ್ಯಾರಿಸ್​: ವಿನೇಶ್ ಫೋಗಟ್​ ಅವರು ಅನರ್ಹಗೊಂಡು ಪದಕವೊಂದನ್ನು ಕಳೆದುಕೊಂಡ ಆಘಾತದಲ್ಲಿರುವಾಗಲೇ ಭಾರತಕ್ಕೆ ಪ್ಯಾರಿಸ್​ ಪಲಿಂಪಿಕ್ಸ್​(Paris Olympics) ಕುಸ್ತಿಯಲ್ಲಿ ಪದಕವೊಂದು ದೊರೆಯುವ ಆಸೆ ಚಿಗುರೊಡೆದಿದೆ. ಯಾರು ನಿರೀಕ್ಷೆಯೂ ಮಾಡದ ಪುರುಷರ ಕುಸ್ತಿ ಸ್ಪರ್ಧೆಯ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ 21 ವರ್ಷದ ಭಾರತದ ಅಮನ್ ಸೆಹ್ರಾವತ್(Aman Sehrawat) ಸೆಮಿ ಫೈನಲ್‌ಗೆ ಪ್ರವೇಶಿಸಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇಂದು ರಾತ್ರಿ 9.45ಕ್ಕೆ ನಡೆಯುವ ಸೆಮಿಫೈನಲ್​ ಪಂದ್ಯದಲ್ಲಿ ಅಮನ್​ ಜಪಾನ್​ ರೇ ಹಿಗುಚಿ ಸವಾಲು ಎದುರಿಸಲಿದ್ದಾರೆ.

ಎದುರಾಳಿಗೆ ಒಂದೇ ಒಂದು ಅಂಕ ಬಿಟ್ಟು ಕೊಡದೆ ಸೆಮಿಫೈನಲ್​ ಪ್ರವೇಶಿಸಿರುವ ಅಮನ್ ಸೆಹ್ರಾವತ್ ಭಾರತಕ್ಕೆ ಅನಿರೀಕ್ಷಿತ ಪದಕೊಂದನ್ನು ಗೆಲ್ಲುವ ತವಕದಲ್ಲಿದ್ದಾರೆ. ಸೆಮಿ ಒಂದು ಗೆದ್ದರೆ ಕನಿಷ್ಠ ಬೆನ್ಳ್ಳಿನು ಖಚಿತಪಡಿಸಿಕೊಳ್ಳಲಿದ್ದಾರೆ. ಅವರ ಆಟವನ್ನು ನೋಡುವಾಗ ಚಿನ್ನಕ್ಕೆ ಕೊರಳೊಡ್ಡುವ ಸಾಧ್ಯತೆ ಕಂಡು ಬಂದಿದೆ.

ಗುರುವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಮನ್​ ಅಲ್ಬೆನಿಯಾದ ಝೆಲಿಮ್ಖಾನ್ ಅಬಕರೋವ್ ವಿರುದ್ಧ 12-0 ಅಂತರದ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದರು. ಇದಕ್ಕೂ ಮುನ್ನ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನಾರ್ತ್ ಮ್ಯಾಸೆಡೋನಿಯಾದ ವ್ಲಾಡಿಮಿರ್ ಎಗೊರೊವ್ ವಿರುದ್ಧ 10-0 ಅಂತರದ ಮಣಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿದ್ದರು. ಅಮನ್​ ಅವರಿಗೆ ಇದು ಚೊಚ್ಚಲ ಒಲಿಂಪಿಕ್ಸ್​ ಟೂರ್ನಿಯಾಗಿದೆ. ಮೊದಲ ಪ್ರಯತ್ನದಲ್ಲೇ ಅವರು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ನಡೆದಿದ್ದ ಏಷ್ಯನ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಅಮನ್​ ಅವರದ್ದಾಗಿದೆ.

ಇದನ್ನೂ ಓದಿ Paris Olympics: ಭರ್ಜರಿ ಗೆಲುವಿನೊಂದಿಗೆ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಅಮನ್ ಸೆಹ್ರಾವತ್

ನೀರಜ್​ ಮೇಲೆ ಚಿನ್ನ ನಿರೀಕ್ಷೆ

ಚಿನ್ನದ ಪದಕ ಭರವಸೆಯಾಗಿ ಉಳಿದಿರುವ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ಇಂದು ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಟ್ರ್ಯಾಕ್​ ಆ್ಯಂಡ್​ ಫೀಲ್ಡ್​ನಲ್ಲಿ ಐತಿಹಾಸಿಕ ಪದಕ ಗೆದ್ದ ನೀರಜ್​ ಈ ಬಾರಿಯೂ ಚಿನ್ನಕ್ಕೆ ಗುರಿ ಇರಿಸಲಿ ಎನ್ನುವುದು ದೇಶವಾಸಿಗಳ ಹಾರೈಕೆ. ಫೈನಲ್​ ಪಂದ್ಯ ರಾತ್ರಿ 11:55ಕ್ಕೆ ಅರಂಭವಾಗಲಿದೆ.

ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀ. ದೂರ ಜಾವೆಲಿನ್​ ಎಸೆದು ನೇರವಾಗಿ ಫೈನಲ್​ ಪ್ರವೇಶಿಸಿದ್ದರು. ನೀರಜ್​ ಅವರೇ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು. ಹೀಗಾಗಿ ಫೈನಲ್​ನಲ್ಲಿಯೂ ಅವರ ಮೇಲೆ ನಿರೀಕ್ಷೆ ಇರಿಸಲಾಗಿದೆ. ಜರ್ಮನಿಯ ಜೂಲಿಯನ್ ವೆಬ್ಬರ್, ಪಾಕಿಸ್ತಾನದ ಅರ್ಷದ್ ನದೀಮ್, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.

Continue Reading
Advertisement
Waqf Act
ದೇಶ21 mins ago

Waqf Act: ಪುರಸಭೆ ಕಚೇರಿಯನ್ನೇ ನುಂಗಿದ ವಕ್ಫ್‌ ಮಂಡಳಿ; ಆಸ್ತಿ ಕಬಳಿಕೆ ಬಣ್ಣ ಬಯಲು ಮಾಡಿದ ಕೇಂದ್ರ ಸಚಿವ!

ಪ್ರಮುಖ ಸುದ್ದಿ35 mins ago

Paris Olympics 2024 : ಭಾರತ ಹಾಕಿ ತಂಡಕ್ಕೆ ಕಂಚಿನ ಪದಕ, ಸ್ಪೇನ್ ವಿರುದ್ಧ 2-1 ಗೋಲ್​ಗಳ ಗೆಲುವು

Viral Video
Latest58 mins ago

Viral Video: ಮೃಗಾಲಯಕ್ಕೆ ನುಗ್ಗಿ ಪ್ರಾಣಿಗಳನ್ನೂ ಹಿಂಸಿಸಿದ ಬಾಂಗ್ಲಾದ ದುಷ್ಟ ಪ್ರತಿಭಟನಾಕಾರರು!

CM Siddaramaiah
ಕರ್ನಾಟಕ1 hour ago

CM Siddaramaiah: ಮೋದಿ ಸರ್ಕಾರದ ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಸಿದ್ದರಾಮಯ್ಯ ವಿರೋಧ

KPSC Exam
ನೋಟಿಸ್ ಬೋರ್ಡ್1 hour ago

KPSC Exam: ಆ.25ರಂದು 384 ಗೆಜೆಟೆಡ್‌ ಹುದ್ದೆಗಳ ನೇಮಕಾತಿಗಾಗಿ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

Baby Death
Latest1 hour ago

Baby Death: ಪ್ರಣಯಕ್ಕೆ ಡಿಸ್ಟರ್ಬ್‌ ಆಯಿತೆಂದು ಕೋಪಗೊಂಡ ಪ್ರಿಯತಮ ಮಹಿಳೆಯ ಮಗುವನ್ನು ನೆಲಕ್ಕೆ ಬಡಿದು ಕೊಂದ!

Wayanad Landslide
ದೇಶ1 hour ago

Wayanad Landslide: ವಯನಾಡಿನಲ್ಲಿ ಸೈನಿಕರ ಕಾರ್ಯಾಚರಣೆ ಮುಕ್ತಾಯ; ಸೆಲ್ಯೂಟ್‌ ಹೊಡೆದು ಬೀಳ್ಕೊಟ್ಟ ಜನ, Video ಇದೆ

Manu Bhaker
ಪ್ರಮುಖ ಸುದ್ದಿ1 hour ago

Paris Olympics 2024 : ಅಥ್ಲೀಟ್​ಗಳಿಗೆ ಒಲಿಂಪಿಕ್ಸ್​ ಮಸ್ಕಾಟ್​ ಚಿತ್ರ ಇರುವ ಕಾಂಡೋಮ್ ಹಂಚಿದ ಆಯೋಜಕರು!

Viral Video
Latest2 hours ago

Viral Video: ಒಂಟೆಯ ಮುಂದಿನ ಕಾಲು ಕಟ್ಟಿ ಚೂರಿಯಿಂದ ಇರಿದ; ಒಂಟೆ ಜಾಡಿಸಿ ಒದ್ದ ಹೊಡೆತಕ್ಕೆ ಸತ್ತೇ ಹೋದ!

Bengaluru Power Cut
ಕರ್ನಾಟಕ2 hours ago

Bengaluru Power Cut: ಆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌