'ಮಂಕಿ'ಯಾದ ಮಿಯಾಂದಾದ್‌​, ಬೆಂಕಿಯಾದ ವೆಂಕಿ; ಇದು ಇಂಡೋ-ಪಾಕ್​ ಕದನ ಕತೆ - Vistara News

ಕ್ರಿಕೆಟ್

‘ಮಂಕಿ’ಯಾದ ಮಿಯಾಂದಾದ್‌​, ಬೆಂಕಿಯಾದ ವೆಂಕಿ; ಇದು ಇಂಡೋ-ಪಾಕ್​ ಕದನ ಕತೆ

1996ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೆಣಕಿದ ಸೊಹೈಲ್‌ಗೆ ವೆಂಕಟೇಶ್​ ಪ್ರಸಾದ್‌ ಪೆವಿಲಿಯನ್‌ ದಾರಿ ತೋರಿಸಿದ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

VISTARANEWS.COM


on

javed-miandad-and-kiran-more
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತ-ಪಾಕಿಸ್ತಾನ(IND vs PAK) ನಡುವಿನ ಕ್ರಿಕೆಟ್‌ ಪಂದ್ಯವೆಂದರೆ ಅಭಿಮಾನಿಗಳ ಜೋಶ್‌ ತಾರಕಕ್ಕೇರುತ್ತದೆ. ಅಂಗಳದಲ್ಲಿ ಆಟಗಾರರ ರೋಷಾವೇಶ ಕೂಡ ಬೇರೆಯೇ ಸ್ವರೂಪ ಪಡೆದುಕೊಂಡಿರುತ್ತದೆ. ಆಗಾಗ ಕಿರಿಕ್‌ ನಡೆಯುತ್ತಲೇ ಇರುತ್ತದೆ! 1992ರ ಸಿಡ್ನಿ ಪಂದ್ಯದಲ್ಲಿ ಜಾವೇದ್‌ ಮಿಯಾಂದಾದ್‌ ಕೀಪರ್‌ ಕಿರಣ್‌ ಮೋರೆ ಅವರನ್ನು ಅಣಕಿಸಲು ಮಂಗನಂತೆ ಕುಣಿದದ್ದು, ಮತ್ತು 1996ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೆಣಕಿದ ಸೊಹೈಲ್‌ಗೆ ವೆಂಕಟೇಶ್​ ಪ್ರಸಾದ್‌ ಪೆವಿಲಿಯನ್‌ ದಾರಿ ತೋರಿಸಿದ್ದು ಇದಕ್ಕೊಂದು ಉತ್ತಮ ಉದಾಹರಣೆ.

ಮಂಗನಂತೆ ಕುಣಿದ ಮಿಯಾಂದಾದ್‌

ಅದು 1992ರ ವಿಶ್ವಕಪ್​ ಕೂಡದ ಸಿಡ್ನಿಯಲ್ಲಿ ನಡೆದ ಲೀಗ್‌ ಪಂದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ಮೊದಲ ವಿಶ್ವಕಪ್​ ಮುಖಾಮುಖಿ ಇದಾಗಿತ್ತು. ಇದಕ್ಕೂ ಮುನ್ನ ನಡೆದ ಮೂರು ವಿಶ್ವಕಪ್​ ಪಂದ್ಯಗಳಲ್ಲಿ ಇತ್ತಂಡಗಳು ಒಮ್ಮೇಯೂ ಮುಮುಖಿಯಾಗಿರಲಿಲ್ಲ.

ಇದನ್ನೂ ಓದಿ ವಿಶ್ವಕಪ್​ನಲ್ಲಿ ಇಂಡೋ-ಪಾಕ್​ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ!; ಬಗೆದಷ್ಟೂ ರೋಚಕ

ಈ ಪಂದ್ಯದಲ್ಲಿ ಭಾರತದ ಕೀಪರ್‌ ಕಿರಣ್‌ ಮೋರೆ ಅವರು ವಿಪರೀತ ಅಪೀಲು ಮಾಡುತ್ತಿದ್ದರು. ಇದನ್ನು ಸಹಿಸಲಾಗದೇ ಕ್ರೀಸ್‌ನಲ್ಲಿದ್ದ ಮಿಯಾಂದಾದ್‌ ಅಂಪೈರ್​ಗೆ ದೂರು ಸಲ್ಲಿಸಿ ಬ್ಯಾಟಿಂಗಿಗೆ ಸಜ್ಜಾಗಿದ್ದರು. 25ನೇ ಓವರ್​ ಎಸೆಯಲು ಬಂದ ಸಚಿನ್‌ ತೆಂಡೂಲ್ಕರ್​ ಅವರ ಎಸೆತವೊಂದನ್ನು ಮಿಯಾಂದಾದ್‌ ಕವರ್‌ ವಿಭಾಗದತ್ತ ಬಾರಿಸಿದರು. ರನ್​ಗಾಗಿ ಓಡಿದರೂ ಚೆಂಡು ಕ್ಷೇತ್ರರಕ್ಷಕನ ಕೈ ಸೇರಿದ್ದರಿಂದ ಮತ್ತೆ ಕ್ರೀಸ್​ನತ್ತ ಮರಳಿದರು. ಆಗ ಚೆಂಡನ್ನು ಪಡೆದ ಮೋರೆ ಮತ್ತೆ ಸ್ಟಂಪ್ಸ್‌ ಎಗರಿಸಿ ರನೌಟ್‌ಗೆ ಅಪೀಲು ಮಾಡಿದರು.

ಇದನ್ನೂ ಓದಿ IND vs PAK: ಇಂಡೋ-ಪಾಕ್​ ಪಂದ್ಯದ 10 ಸೆಕೆಂಡ್​ ಜಾಹೀರಾತಿನ ಮೌಲ್ಯ ಕೇಳಿದರೆ ಅಚ್ಚರಿ ಖಚಿತ

ಪಂದ್ಯ ಗೆದ್ದ ಭಾರತ

ರನೌಟ್‌ ಅಲ್ಲದಿದ್ದರೂ ಅಪೀಲು ಮಾಡಿದ್ದು ಮಿಯಾಂದಾದ್​ಗೆ ಪಿತ್ತ ನೆತ್ತಿಗೇರುವಂತೆ ಮಾಡಿತು. ಬ್ಯಾಟನ್ನು ಎರಡೂ ಕೈಗಳಿಂದ ಅಡ್ಡವಾಗಿ ಹಿಡಿದ ಮಿಯಾಂದಾದ್‌ ಮೋರೆಯತ್ತ ತಿರುಗಿ ಮಂಗನಂತೆ ಮೂರು ಸಲ ಕುಪ್ಪಳಿಸಿದರು. ಈ ಮೂಲಕ ಮೋರೆಯನ್ನು ಅಣಕಿದರು. ಮೈದಾನದಲ್ಲಿದ್ದ ಎಲ್ಲರಿಗೂ ಮಿಯಾಂದಾದ್‌ ಅವರ ಈ ಮಂಗನಾಟ ವಿಚಿತ್ರವಾಗಿ ಮತ್ತು ತಮಾಷೆಯಾಗಿ ಕಂಡಿತು. ಈಗಲೂ ಕೂಡ ಭಾರತ-ಪಾಪ್​ ಪಂದ್ಯ ಎಂದರೆ ಈ ಘಟನೆ ಮತ್ತೊಮ್ಮೆ ಕಣ್ಣಮುಂದೆ ಬರುತ್ತದೆ. ಪಾಕ್​ ವಿರುದ್ಧದ ಈ ಪಂದ್ಯವನ್ನು ಭಾರತ 43 ರನ್ನುಗಳಿಂದ ಗೆದ್ದು ಬೀಗಿತ್ತು.


ಸೊಹೈಲ್​ ಕಿರಿಕ್​; ತಿರುಗೇಟು ನೀಡಿದ ವೆಂಕಿ

ಇನ್ನೊಂದು ನಿದರ್ಶನ ಸಂಭವಿಸಿದ್ದು 1996ರ ಬೆಂಗಳೂರು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ. ಭಾರತ ನೀಡಿದ 288 ರನ್‌ ಚೇಸಿಂಗ್‌ ವೇಳೆ ಪಾಕ್​ ತಂಡದ ಸಯೀದ್‌ ಅನ್ವರ್‌-ಅಮೀರ್‌ ಸೊಹೈಲ್‌ ದಿಟ್ಟ ಆರಂಭ ಒದಗಿಸುತ್ತಿದ್ದರು. 48 ರನ್‌ ಆದಾಗ ಅನ್ವರ್‌ ವಿಕೆಟ್‌ ಬಿತ್ತು. ವೆಂಕಟೇಶ್​ ಪ್ರಸಾದ್‌ ಎಸೆತವೊಂದನ್ನು ಮಿಡ್‌-ಆಫ್‌ ಬೌಂಡರಿಗೆ ರವಾನಿಸುವ ಮೂಲಕ ನಾಯಕ ಸೊಹೈಲ್‌ ಅರ್ಧ ಶತಕ ಪೂರೈಸಿದರು.

ಇದನ್ನೂ ಓದಿ IND vs PAK: ಭಾರತ-ಪಾಕ್​ ಪಂದ್ಯ ನಡೆಯುವುದು ಅನುಮಾನ

ಅಷ್ಟಕ್ಕೇ ಸುಮ್ಮನಾಗದ ಸೊಹೈಲ್‌ ಮುಂದಿನ ಎಸೆತನ್ನೂ ಇದೇ ಮಾರ್ಗವಾಗಿ ಬೌಂಡರಿಗೆ ಅಟ್ಟುತ್ತೇನೆ ಎಂದು ವೆಂಕಿಯನ್ನು ಸನ್ನೆಯ ಮೂಲಕ ಕೆಣಕಿದರು. ಪ್ರಸಾದ್‌ ಇದನ್ನೇ ಸವಾಲಾಗಿ ಸ್ವೀಕರಿಸಿದರು. ಆಫ್‌-ಸ್ಟಂಪ್‌ ಮೇಲಿಂದ ಬಂದ ಮುಂದಿನ ಎಸೆತಕ್ಕೆ ಸೊಹೈಲ್‌ ಕ್ಲೀನ್​ ಬೌಲ್ಡ್​ ಆದರು. ಸೊಹೈಲ್‌ ಶೈಲಿಯಲ್ಲೇ ವೆಂಕಿ ಪೆವಿಲಿಯನ್‌ ತೋರಿಸುತ್ತ ಸೆಂಡ್‌-ಆಫ್‌’ ಮಾಡಿದರು. ಜತೆಗೆ ಮಾತಿನ ಮೂಲಕವೂ ತಿವಿದರು.


ಮನೆ ಮುಂದೆ ರಾಶಿ ರಾಶಿ ಉಡುಗೊರೆ

ಅಂದು ರಾತ್ರಿಯಿಡೀ ಪ್ರಸಾದ್‌ ಮನೆ ಮುಂದೆ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಮರುದಿನ ಮನೆಯಲ್ಲಿ ರಾಶಿ ರಾಶಿ ಉಡುಗೊರೆ ಬಂದು ಬಿದ್ದಿತ್ತು. ಸೊಹೈಲ್‌ ವಿಕೆಟ್‌ಗಾಗಿ ಅಭಿಮಾನಿ ಈ ಗಿಫ್ಟ್​ ನೀಡಿದ್ದರು. ಪ್ರಸಾದ್‌ ಅವರು ಈ ಪಂದ್ಯದಲ್ಲಿ 45ಕ್ಕೆ 3 ವಿಕೆಟ್‌ ಕಿತ್ತು ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು ಯಾರು?

T20 World Cup 2024: ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಆಟಗಾರ ಶಾಹೀದ್ ಅಫ್ರಿದಿಗೆ(Shahid Afridi) ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳ ಯಾದಿಯಲ್ಲಿ ದ್ವಿತೀಯ ಸ್ಥಾನ. 2007 ರಿಂದ 2016ರ ತನಕ ಒಟ್ಟು 34 ಪಂದ್ಯಗಳನ್ನಾಡಿರುವ ಅಫ್ರಿದಿ 39 ವಿಕೆಟ್​ ಉರುಳಿಸಿದ್ದಾರೆ.

VISTARANEWS.COM


on

T20 World Cup 2024
Koo

ಬೆಂಗಳೂರು: 9ನೇ ಆವೃತ್ತಿಯ ಐಸಿಸಿ ಪುರುಷರ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನು ಬೆರಳೆಣಿಕೆ ದಿನಗಳ ಮಾತ್ರ ಬಾಕಿ ಉಳಿದಿವೆ. ಜೂನ್​ 1ರಿಂದ ಆರಂಭವಾಗಿ 29ರ ತನಕ ಪಂದ್ಯಾವಳಿಗಳು ಸಾಗಲಿದೆ. ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಾಡ ಮುಖಾಮುಖಿಯಾಗಲಿವೆ. ಇದುವರೆಗಿನ 8 ಆವೃತ್ತಿಯ ಮಿನಿ ವಿಶ್ವಕಪ್​ ಸಮರದಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳು ಯಾರೆಂಬ ಕುತೂಹಲಕಾರಿ ಮಾಹಿತಿ ಇಂತಿದೆ.

ಶಕೀಬ್ ಅಲ್ ಹಸನ್


ಬಾಂಗ್ಲಾದೇಶ ಕ್ರಿಕೆಟ್ ತಂಡದ ಹಿರಿಯ ಆಲ್​ರೌಂಡರ್​ ಶಕೀಬ್ ಅಲ್ ಹಸನ್(Shakib Al Hasan) ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದಾರೆ. ಜತೆಗೆ ಉದ್ಘಾಟನ ಆವೃತ್ತಿಯಿಂದ ಇದುವರೆಗಿನ ಎಲ್ಲ ಆವೃತ್ತಿಯಲ್ಲಿಯೂ ಆಡಿದ ಆಟಗಾರನೂ ಆಗಿದ್ದಾರೆ. ಒಟ್ಟು 36 ಪಂದ್ಯಗಳನ್ನಾಡಿ 47 ವಿಕೆಟ್​ ಕೆಡವಿದ್ದಾರೆ. ಈ ಬಾರಿ ಮೂರು ವಿಕೆಟ್​ ಕಿತ್ತರೆ 50 ವಿಕೆಟ್​ ಕಿತ್ತ ಸಾಧನೆ ಮಾಡಲಿದ್ದಾರೆ. 9 ರನ್​ಗೆ 4 ವಿಕೆಟ್​ ಕಿತ್ತದ್ದು ಅವರ ವೈಯಕ್ತಿಕ ಸಾಧನೆಯಾಗಿದೆ.


ಶಾಹೀದ್ ಅಫ್ರಿದಿ


ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಆಟಗಾರ ಶಾಹೀದ್ ಅಫ್ರಿದಿಗೆ(Shahid Afridi) ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳ ಯಾದಿಯಲ್ಲಿ ದ್ವಿತೀಯ ಸ್ಥಾನ. 2007 ರಿಂದ 2016ರ ತನಕ ಒಟ್ಟು 34 ಪಂದ್ಯಗಳನ್ನಾಡಿರುವ ಅಫ್ರಿದಿ 39 ವಿಕೆಟ್​ ಉರುಳಿಸಿದ್ದಾರೆ. 11 ರನ್​ಗೆ 4 ವಿಕೆಟ್​ ಪಡೆದದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.


ಲಸಿತ್ ಮಾಲಿಂಗ


ಶ್ರೀಲಂಕಾ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ(Lasith Malinga) 2007 ರಿಂದ 2014ರ ತನಕ ಒಟ್ಟು 31 ಟಿ20 ವಿಶ್ವಕಪ್​ ಪಂದ್ಯಗಳನ್ನಾಡಿ 38 ವಿಕೆಟ್​ ಪಡೆದಿದ್ದಾರೆ. 31 ರನ್​ಗೆ 5 ವಿಕೆಟ್​ ಉರುಳಿಸಿದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಮೂರನೇ ಅಟಗಾರ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು


ಸಯೀದ್ ಅಜ್ಮಲ್


ಪಾಕಿಸ್ತಾನ ತಂಡದ ಮಾಜಿ ಸ್ಪಿನ್​​ ಬೌಲರ್​ ಸಯೀದ್ ಅಜ್ಮಲ್(Saeed Ajmal) ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2009 ರಿಂದ 2014ರ ತನಕ 23 ಪಂದ್ಯಗಳನ್ನು ಆಡಿದ ಅವರು 36 ವಿಕೆಟ್​ ಕಡೆವಿದ್ದಾರೆ.


ಅಜಂತಾ ಮೆಂಡೀಸ್​


ಶ್ರೀಲಂಕಾ ತಂಡದ ಮಾಜಿ ಸ್ಪಿನ್ನರ್‌ ಅಜಂತಾ ಮೆಂಡೀಸ್‌(Ajantha Mendis) 2009 ರಿಂದ 2014 ತನಕ ಒಟ್ಟು 21 ಪಂದ್ಯಗಳನ್ನಾಡಿ 35 ವಿಕೆಟ್​ ಕಿತ್ತಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಟಿ20 ಆಡುತ್ತಿರುವ ನ್ಯೂಜಿಲ್ಯಾಂಡ್​ ತಂಡದ ಹಿರಿಯ ವೇಗಿ ಟಿಮ್​ ಸೌಥಿ 7 ವಿಕೆಟ್​ ಕಿತ್ತರೆ ಮೆಂಡೀಸ್​ ದಾಖಲೆ ಪತನಗೊಳ್ಳಲಿದೆ. ಸದ್ಯ ಸೌಥಿ 29* ವಿಕೆಟ್​ ಕಿತ್ತಿದ್ದಾರೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು

Continue Reading

ಕ್ರೀಡೆ

T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

T20 World Cup 2024: ವಿರಾಟ್​ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್​ ತಮ್ಮ ವೈಯಕ್ತಿಕ ಕಾರಣಗಳಿಂದ ತಂಡ ಸೇರುವುದು ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

VISTARANEWS.COM


on

T20 World Cup 2024
Koo

ಮುಂಬಯಿ: ಟಿ20 ವಿಶ್ವಕಪ್(T20 World Cup 2024)​ ಆಡಲು ಭಾರತ ತಂಡದ 2ನೇ ಬ್ಯಾಚ್​ ಕೂಡ ನ್ಯೂಯಾರ್ಕ್​ಗೆ ಪ್ರಯಾಣ ಬೆಳೆಸಿದೆ. ಸೋಮವಾರ ತಡರಾತ್ರಿ ಯಜುವೇಂದ್ರ ಚಹಲ್(Yuzvendra Chahal)​, ಅವೇಶ್​ ಖಾನ್(Avesh Khan)​ ಮತ್ತು ಯಶಸ್ವಿ ಜೈಸ್ವಾಲ್(Yashasvi Jaiswal)​ ಮೂವರು ಮುಂಬೈಯಿಂದ ಪ್ರಯಾಣಿಸಿದರು. ಮೂರನೇ ಬ್ಯಾಚ್​ ಇಂದು ಪ್ರಯಾಣಿಸಲಿದೆ. ಈಗಾಗಲೇ ಮೊದಲ ಬ್ಯಾಚ್​ನಲ್ಲಿ ಪ್ರಯಾಣಿಸಿದ ತಂಡದ ನಾಯಕ ರೋಹಿತ್​ ಶರ್ಮ, ಕೋಚ್​ ರಾಹುಲ್​ ದ್ರಾವಿಡ್​, ರಿಷಭ್​ ಪಂತ್​, ಕುಲ್​ದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ ಸೇರಿ ಬಹುತೇಕ ಆಟಗಾರರು ನ್ಯೂಯಾರ್ಕ್​ಗೆ ತಲುಪಿದ್ದಾರೆ. ಆಟಗಾರರು ತಲುಪಿದ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ವಿಡಿಯೊ ಹಂಚಕೊಳ್ಳುವ ಮೂಲಕ ತಿಳಿಸಿದೆ.

ವಿರಾಟ್​ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್​ ತಮ್ಮ ವೈಯಕ್ತಿಕ ಕಾರಣಗಳಿಂದ ತಂಡ ಸೇರುವುದು ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್​ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.

ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಐಪಿಎಲ್​ ಪ್ರದರ್ಶನ ನೋಡಿ ಟಿ20ಯಲ್ಲಿ ಅವಕಾಶ ನೀಡಲಾಗಿದೆ. ಚಹಲ್​ ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ. ಇದುವರೆಗೂ ಟೆಸ್ಟ್​ ಕ್ರಿಕೆಟ್​ ಆಡಿಲ್ಲ.


2ನೇ ಬ್ಯಾಚ್​ನಲ್ಲಿ ಪ್ರಯಾಣಿಸಿದ ಯಜುವೇಂದ್ರ ಚಹಲ್​, ಅವೇಶ್​ ಖಾನ್​ ಮತ್ತು ಯಶಸ್ವಿ ಜೈಸ್ವಾಲ್ ರಾಜಸ್ಥಾನ್​ ರಾಯಲ್ಸ್​ ತಂಡದ ಆಟಗಾರರಾಗಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ


Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು

T20 World Cup 2024: ರೋಹಿತ್ ಶರ್ಮ ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ. ಇದುವರೆಗೆ 35 ಸಿಕ್ಸರ್​ ಬಾರಿಸಿದ್ದಾರೆ

VISTARANEWS.COM


on

T20 World Cup 2024
Koo

ಬೆಂಗಳೂರು: 2007ರಲ್ಲಿ ಆರಂಭಗೊಂಡ ಟಿ20 ವಿಶ್ವ ಕಪ್ (T20 World Cup 2024) ​ನಿಂದ 2022ರ ವಿಶ್ವ ಕಪ್​ವರೆಗೆ ನಡೆದ ಟಿ20 ವಿಶ್ವ ಕಪ್​ನಲ್ಲಿ ಭಾರತ ಕ್ರಿಕೆಟ್​ ತಂಡದ ಆಟಗಾರರು ಎಷ್ಟು ಸಿಕ್ಸರ್​ ಸಾಧನೆ ಮಾಡಿದ್ದಾರೆ ಎನ್ನುವ ಸ್ವಾರಸ್ಯಕರ ಸಂಗತಿ ಇಂತಿದೆ.

ರೋಹಿತ್​ ಶರ್ಮ


ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಉದ್ಘಾಟನ ಆವೃತ್ತಿಯ ವಿಶ್ವಕಪ್​ನಿಂದ ಆಡಿ ಇದುವರೆಗೆ 35 ಸಿಕ್ಸರ್​ ಬಾರಿಸಿದ್ದಾರೆ. ಇದೀಗ 2024 ರ ವಿಶ್ವ ಕಪ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್​ ತಮ್ಮ ಸಿಕ್ಸರ್​ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದ್ದಾರೆ. 2007-2022ರ ವಿಶ್ವಕಪ್​ ಆವೃತ್ತಿಯಲ್ಲಿ ರೋಹಿತ್​ ಒಟ್ಟು 39 ಪಂದ್ಯಗಳನ್ನು ಆಡಿದ್ದಾರೆ.


ಯುವರಾಜ್ ಸಿಂಗ್


ಭಾರತ ಕ್ರಿಕೆಟ್​ ಕಂಡ ಅತ್ಯಂತ ಶ್ರೇಷ್ಠ ಆಲ್​ರೌಂಡರ್, ಮಾಜಿ ಆಟಗಾರ, 2007 ವಿಶ್ವಕಪ್​ ಟೂರ್ನಿಯಲ್ಲಿ ಸ್ಟುವರ್ಟ್​ ಬ್ರಾಡ್​ ಓವರ್​ಗೆ ಸತತವಾಗಿ 6 ಸಿಕ್ಸರ್​ ಬಾರಿಸಿದ ಯುವರಾಜ್​ ಸಿಂಗ್ ಈ ಸಾಲಿನಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ಯುವಿ ಒಟ್ಟು 31 ವಿಶ್ವ ಕಪ್​ ಪಂದ್ಯಗಳನ್ನು ಆಡಿದ್ದು 33 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಭಾರತ 2007 ಮತ್ತು 2011 ರ ವಿಶ್ವ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ ಎನ್ನುವ ಕೀರ್ತಿಯೂ ಇವರದ್ದಾಗಿದೆ.


ವಿರಾಟ್​ ಕೊಹ್ಲಿ


ಕಳೆದ 2 ವರ್ಷಗಳ ಬಳಿಕ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ, ಈ ಆವೃತ್ತಿ ಐಪಿಎಲ್​ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ಕಿಂಗ್ ಖ್ಯಾತಿಯ​ ವಿರಾಟ್​ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. 2012ರಿಂದ ಟಿ20 ವಿಶ್ವಕಪ್​ ಆಡುತ್ತಿರುವ ಕೊಹ್ಲಿ ಇದುವರೆಗೆ 27 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 28 ಸಿಕ್ಸರ್​ ಬಾರಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಕೇವಲ 4 ಸಿಕ್ಸರ್​ ಬಾರಿಸಿದರೆ ಯುವರಾಜ್​ ಸಿಂಗ್​ ದಾಖಲೆ ಮುರಿಯಲಿದ್ದಾರೆ.

ಇದನ್ನೂ ಓದಿ T20 World Cup 2024: ಮಿನಿ ವಿಶ್ವಕಪ್​ ಸಮರದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ದಾಂಡಿಗರಿವರು!


ಎಂ.ಎಸ್​ ಧೋನಿ


ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಈ ಯಾದಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಧೋನಿ 2007ರಿಂದ 2016ರ ತನಕ 33 ಪಂದ್ಯಗಳನ್ನಾಡಿ ಒಟ್ಟು 16 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಆದರೆ ಧೋನಿ ಚೊಚ್ಚಲ ಟಿ20 ವಿಶ್ವಕಪ್​ನಲ್ಲಿಯೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ ಖ್ಯಾತಿ ಹೊಂದಿದ್ದಾರೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳಿವು


ಕೆ.ಎಲ್​ ರಾಹುಲ್​


ಕನ್ನಡಿಗ ಕೆ.ಎಲ್​ ರಾಹುಲ್​ ಅವರು ಇದುವರೆಗೆ 11 ಟಿ20 ವಿಶ್ವಕಪ್​ ಆಡಿದ್ದು 15 ಸಿಕ್ಸರ್​ ಬಾರಿಸಿದ್ದಾರೆ. ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಅವರಿಗೆ 5ನೇ ಸ್ಥಾನ. ವಿಪರ್ಯಾಸವೆಂದರೆ ಈ ಬಾರಿ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.

Continue Reading

ಕ್ರೀಡೆ

Team India Coach: ಟೀಮ್​ ಇಂಡಿಯಾದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಪ್ರಧಾನಿ ಮೋದಿ, ಅಮಿತ್ ಶಾ!

Team India Coach: ಮೂಲಗಳ ಪ್ರಕಾರ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌(Team India Coach) ಹುದ್ದೆಗೆ ಈಗಾಗಲೇ 3,000 ಅರ್ಜಿಗಳು ಬಂದಿಗೆ ಎಂದು ಹೇಳಲಾಗಿದೆ. ಇದರಲ್ಲಿ ಬಹುಪಾಲು ನಕಲಿ ಅರ್ಜಿಗಳಾಗಿವೆ.

VISTARANEWS.COM


on

Team India Coach
Koo

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌(Team India Coach) ಹುದ್ದೆಗೆ(Team India Coach Applications) ಯಾರು ಸೂಕ್ತ ಎಂದು ಚಿಂತಿಸುತ್ತಿರುವ ಮಧ್ಯೆ ಬಿಸಿಸಿಐಗೆ ಅಚ್ಚರಿಯೊಂದು ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi), ಸಚಿನ್​ ತೆಂಡೂಲ್ಕರ್​(Sachin Tendulkar) , ಎಂ.ಎಸ್​ ಧೋನಿ(MS Dhoni), ಅಮಿತ್ ಶಾ(Amit Shah) ಸೇರಿ ಹಲವು ಪ್ರಮುಖರು ಅರ್ಜಿ ಸಲ್ಲಿದ್ದಾರೆ. ಅಸಲಿಗೆ ಇವರ್‍ಯಾರು‌ ಈ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. ಬದಲಾಗಿ ನೆಟ್ಟಿಗರು ಇವರ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸಲು ಮೇ 27 ಅಂತಿಮ ಗಡುವಾಗಿತ್ತು. ಹೀಗಾಗಿ ಕೆಲ ನೆಟ್ಟಿಗರು ಮೋದಿ, ಸಚಿನ್​, ಅಮಿತ್ ಶಾ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸಿ ಬಿಸಿಸಿಐಗೆ ಚಕಮ್​ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಅನೇಕ ಕ್ರಿಕೆಟ್​ ಅಭಿಮಾನಿಗಳು(Cricket Fans Apply For India’s Head Coach) ಗೂಗಲ್​ ಅರ್ಜಿ ಪಡೆದುಕೊಂಡು ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತ ಟ್ವೀಟ್​ಗಳು ವೈರಲ್​ ಆಗಿತ್ತು. ಮೂಲಗಳ ಪ್ರಕಾರ ಈಗಾಗಲೇ 3,000 ಅರ್ಜಿಗಳು ಬಂದಿಗೆ ಎಂದು ಹೇಳಲಾಗಿದೆ.

ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. 

ಇದನ್ನೂ ಓದಿ Team India Coach Applications: ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಸಾವಿರಾರು ಅಭಿಮಾನಿಗಳು; ಫಜೀತಿಗೆ ಸಿಲುಕಿದ ಬಿಸಿಸಿಐ

2011ರಲ್ಲಿ ಗ್ಯಾರಿ ಕಸ್ಟನ್ ಮಾರ್ಗದರ್ಶನದಲ್ಲಿ ಭಾರತ 2ನೇ ಬಾರಿಗೆ ವಿಶ್ವಕಪ್​ ಗೆದ್ದಿತ್ತು. ಬಳಿಕ 2013ರಲ್ಲಿ ಡಂಕನ್​ ಪ್ಲೆಚರ್​ ಮಾರ್ಗದರ್ಶನದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ರವಿಶಾಸ್ತ್ರಿ ಮತ್ತು ರಾಹುಲ್​ ದ್ರಾವಿಡ್​ ಮಾರ್ಗದರ್ಶನಲ್ಲಿ 2 ಏಕದಿನ ವಿಶ್ವಕಪ್​ ಆಡಿದರೂ ಭಾರತ ಕಪ್​ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ವಿದೇಶಿ ಕೋಚ್​ ಆಯ್ಕೆಯೇ ಉತ್ತಮ ಎಂದು ಬಿಸಿಸಿಐ ಆರಂಭಿಕ ಹಂತದಲ್ಲಿ ಯೋಚಿಸಿತ್ತು. ಆದರೆ ಅನೇಕ ವಿದೇಶಿ ಆಟಗಾರರು ಕೋಚ್​ ಆಗಲಿ ಆಸಕ್ತಿ ಹೊಂದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಹೀಗಾಗಿ ಬಿಸಿಸಿಐ ದೇಶೀಯ ಆಟಗಾರರ ಮೊರೆ ಹೋದಂತಿದೆ.

ಮೂಲಗಳ ಪ್ರಕಾರ ಗೌತಮ್​ ಗಂಭೀರ್​ ಅವರು ಭಾರತ ತಂಡದ ಕೋಚ್ ಆಗುವ ಸಾಧ್ಯತೆ ಕಂಡುಬಂದಿದೆ. ಭಾನುವಾರ ಮುಕ್ತಾಯ ಕಂಡ 17ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಕೆಕೆಆರ್​ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಗೌತಮ್​ ಗಂಭೀರ್​ ತಂಡದ ಮೆಂಟರ್​ ಆಗಿದ್ದರು. ಪಂದ್ಯದ ಮುಕ್ತಾಯದ ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಗಂಭೀರ್​ ಜತೆ ಅತ್ಯಂತ ಆತ್ಮೀಯವಾಗಿ ಸುರ್ದೀಘ ಚರ್ಚೆ ಕೂಡ ನಡೆಸಿದ್ದರು. ಇದನ್ನೆಲ್ಲ ನೋಡುವಾಗ ಗಂಭೀರ್​ ಕೋಚ್​ ಆಗುವುದು ಬಹುತೇಖ ಖಚಿತವಾದಂತಿದೆ.

Continue Reading
Advertisement
WhatsApp Update
ತಂತ್ರಜ್ಞಾನ13 mins ago

WhatsApp Update : ವಾಯ್ಸ್ ನೋಟ್ ಅವಧಿ ಹೆಚ್ಚಿಸಲಿದೆ ವಾಟ್ಸ್ಆ್ಯಪ್; ವಿಸ್ತರಣೆ ಅವಧಿ ಎಷ್ಟು ಗೊತ್ತೇ?

Mango For Diabetes
ಆರೋಗ್ಯ18 mins ago

Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

T20 World Cup 2024
ಕ್ರೀಡೆ23 mins ago

T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು ಯಾರು?

Love Case
ವಿಜಯಪುರ33 mins ago

Love Case : ಪ್ರೀತಿಸಿದವಳೇ ಬೇಕೆಂದ ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ರಾ ಯುವತಿ ಕುಟುಂಬಸ್ಥರು!

Bengaluru Traffic
ಬೆಂಗಳೂರು35 mins ago

Bengaluru Traffic: ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಹೊಸ ತಂತ್ರಜ್ಞಾನ; ಸಂಚಾರ ಇಲಾಖೆಯ ಪ್ಲಾನ್

car care tips
ಆಟೋಮೊಬೈಲ್53 mins ago

Car Care Tips : ಕಾಸು ಉಳಿಸಿ ಎಂಜಿನ್ ಬೆಳಗಿಸಿ, ಕಾರಿನ ಎಂಜಿನ್ ನೀವೇ ​ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್​​​

Viral Video
ವೈರಲ್ ನ್ಯೂಸ್1 hour ago

Viral Video: ದಿಗಂಬರ ಜೈನ ಮುನಿಗಳಿಗೆ ಈ ಪಾಪಿ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case
ಕರ್ನಾಟಕ1 hour ago

Prajwal Revanna Case: ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

assault case
ದಕ್ಷಿಣ ಕನ್ನಡ1 hour ago

Assault Case : ರೊಚ್ಚಿಗೆದ್ದ ಸ್ಥಳೀಯರು; ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ

T20 World Cup 2024
ಕ್ರೀಡೆ2 hours ago

T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

tumkur murder
ತುಮಕೂರು6 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ24 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

ಟ್ರೆಂಡಿಂಗ್‌