Wrestlers Protest : ಕುಸ್ತಿಪಟುಗಳ ಪ್ರತಿಭಟನಾ ಸ್ಥಳದಲ್ಲಿ ಮಧ್ಯರಾತ್ರಿ ಗಲಾಟೆ - Vistara News

ಕ್ರೀಡೆ

Wrestlers Protest : ಕುಸ್ತಿಪಟುಗಳ ಪ್ರತಿಭಟನಾ ಸ್ಥಳದಲ್ಲಿ ಮಧ್ಯರಾತ್ರಿ ಗಲಾಟೆ

ಕುಸ್ತಿಪಟುಗಳು ಪೊಲೀಸರ ಗೂಂಡಾಗಿರಿ ಎಂದು ಆರೋಪಿಸಿದರೆ, ಪೊಲೀಸರು ಪ್ರತಿಭಟನಾಕಾರರರ ಅಶಿಸ್ತು ಎಂಬುದಾಗಿ ಹೇಳಿದ್ದಾರೆ.

VISTARANEWS.COM


on

Midnight brawl at wrestlers' protest site
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಸಿಂಗ್ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿಸಬೇಕು ಎಂದು ಒತ್ತಾಯಿಸಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ನವ ದೆಹಲಿಯ ಜಂತರ್​ಮಂತರ್​ನಲ್ಲಿ ಬುಧವಾರ ಮಧ್ಯರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ಜಟಾಪಟಿ ನಡೆದಿದೆ ಎಂಬುದಾಗಿ ವರದಿಯಾಗಿದೆ.

ಆಪ್​ ನಾಯಕ ಸೋಮ್​ನಾಥ್​ ಬಾರ್ತಿ ಅವರೊಂದಿಗೆ ಹಲವಾರು ಮಂದಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಜಂತರ್​ಮಂತರ್​ಗೆ ಬಂದಿದ್ದಾರೆ. ಅವರು ಯಾವುದೇ ಅನುಮತಿ ತೆಗೆದುಕೊಂಡಿರಲಿಲ್ಲ. ಅವರನ್ನು ತಡೆಯಲು ಹೋದಾಗ ಪ್ರತಿಭಟನಾಕಾರರು ಪ್ರತಿರೋಧ ತೋರಿದ್ದಾರೆ ಎಂದು ಡೆಲ್ಲಿ ಪೊಲೀಸರು ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಮಾಧ್ಯಮ ಮುಂದೆ ಮಾತನಾಡಿ, ನಮ್ಮ ಮೇಳೆ ಡೆಲ್ಲಿ ಪೊಲೀಸರು ದೌರ್ಜನ್ಯ ಆರಂಭಿಸಿದ್ದಾರೆ. ನನಗೆ ದೇಶದ ಬೆಂಬಲ ಬೇಕು. ನಮ್ಮ ಜತೆಗೆ ಇರುವ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನಾಳೆ ಎಲ್ಲರೂ ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿ ಎಂದು ಕರೆಕೊಟ್ಟಿದ್ದಾರೆ. ರೈತರು ಹಾಗೂ ಮುಖಂಡರು ಜಂತರ್​ಮಂತ್​ನಲ್ಲಿ ಸೇರುವ ಮೂಲಕ ನಮಗೆ ಬೆಂಬಲ ಸೂಚಿಸಬೇಕು ಎಂದು ಇದೇ ವೇಳೆ ತಿಳಿಸಿದ್ದಾರೆ.

ಡೆಲ್ಲಿ ಪೊಲೀಸರು ಗೂಂಡಾಗಿರಿ ಆರಂಭಿಸಿದ್ದಾರೆ. ಅವರ ಆಟ ನಡೆಯುವುದಿಲ್ಲ. ರೈತರೇ ನಮ್ಮ ಬೆಂಬಲಕ್ಕೆ ಬನ್ನಿ. ಇಂಥದ್ದನ್ನು ಸಹಿಸಿಕೊಳ್ಳುವುದು ಬೇಡ. ಟ್ರ್ಯಾಕ್ಟರ್​ ಮತ್ತು ಟ್ರಾಲಿಗಳು ಏನೇ ಇರಲಿ. ಹತ್ತಿಕೊಂಡು ಬಂದು ನಮಗೆ ಬೆಂಬಲ ಸೂಚಿಸಿ ಎಂದು ಪ್ರತಿಭಟನಾಕಾರು ಕೋರಿದ್ದಾರೆ.

ಹೊಸದಿಲ್ಲಿ ಡಿಸಿಪಿ ಪ್ರಣವ್ ತಾಯಲ್​ ಪ್ರತಿಕ್ರಿಯಿಸಿ, ಆಪ್​ ಕಾರ್ಯಕರ್ತರ ದೊಡ್ಡ ಗುಂಪೊಂದು ಪ್ರತಿಭಟನೆ ನಡೆಯುತ್ತಿದ್ದ ಜಾಗದಲ್ಲಿ ಜಮಾಯಿಸಿದೆ. ಪೊಲೀಸರು ಹಾಕಿರುವ ಬ್ಯಾರಿಕೇಡ್​​ಗಳನ್ನು ಎಸೆದು ಒಳಕ್ಕೆ ಹೋಗಿದ್ದಾರೆ. ಪೊಲೀಸರು ಮಧ್ಯ ಪ್ರವೇಶ ಮಾಡಿ ಅವರನ್ನು ತಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮಾಜಿ ಕುಸ್ತಿಪಟು ರಾಜ್​ವೀರ್​ ಪ್ರತಿಕ್ರಿಯೆ ನೀಡಿ, ಮಳೆಯಿಂದಾಗಿ ನಮ್ಮ ಹಾಸಿಗೆಗಳು ಒದ್ದೆಯಾಗಿವೆ. ಹೀಗಾಗಿ ಬೇರೆ ಹಾಸಿಗೆಗಳನ್ನು ಮಡಚಿಕೊಂಡು ಒಳಗೆ ತರುತ್ತಿದ್ದೆವು. ಮದ್ಯದ ಅಮಲಿನಲ್ಲಿರುವ ಪೊಲೀಸರು ನಮ್ಮನ್ನು ತಡೆದರು. ಅಲ್ಲದೆ, ವಿನೇಶ್​ಗೆ ನಿಂದಿಸಿದರು. ಇದರಿಂದ ಸಮಸ್ಯೆ ಉಂಟಾಯಿತು ಎಂದು ಹೇಳಿದ್ದಾರೆ.

ಬುಧವಾರ ಸಂಜೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್​ ಅಧ್ಯಕ್ಷರಾದ ಪಿ ಟಿ ಉಷಾ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಕುಸ್ತಿಪಟುಗಳ ಜತೆ ಮಾತನಾಡಿದ್ದರು. ಈ ವೇಳೆಯೂ ಸಣ್ಣ ಪ್ರಮಾಣದ ತಳ್ಳಾಟ ನಡೆಯಿತು ಎಂಬುದಾಗಿ ವರದಿಯಾಗಿತ್ತು.

ಕುಸ್ತಿಪಟುಗಳು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪಿಟಿ ಉಷಾ ವಾರದ ಹಿಂದೆ ಬೇಸರ ವ್ಯಕ್ತಪಡಿಸಿದ್ದರು. ಅವರು ನಮ್ಮ ದೇಶದ ಮಾನ ಕಳೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಉಷಾ ಅವರ ಅಭಿಪ್ರಾಯ ಟೀಕೆಗಳಿಗೆ ಈಡಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup: ಟಿ20 ವಿಶ್ವಕಪ್​ನಲ್ಲಿ ಈ ಆಟಗಾರರಿಗೆ ಅವಕಾಶ ಸಿಗುವುದು ಡೌಟ್​

T20 World Cup: ಈ ಬಾರಿಯ ಐಪಿಎಲ್‌ನಲ್ಲಿ ಶರವೇಗದ ಎಸೆತಗಳ ಮೂಲಕ ಭಾರೀ ಸಂಚಲನ ಮೂಡಿಸಿದ ಲಕ್ನೋ ತಂಡದ ಮಾಯಾಂಕ್‌ ಯಾದವ್‌ ಮತ್ತು ಹರ್ಷಿತ್​ ರಾಣಾ ಟಿ20 ವಿಶ್ವಕಪ್​(T20 World Cup 20BAr24) ನಲ್ಲಿ ಮೀಸಲು ಬೌಲರ್​ಗಳಾಗಿ ತಂಡದೊಂದಿಗೆ ಪ್ರಯಾಣಿಸಬಹುದು ಎಂದು ತಿಳಿದುಬಂದಿದೆ.

VISTARANEWS.COM


on

T20 World Cup
Koo

ಮುಂಬಯಿ: ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್​(T20 World Cup) ಟೂರ್ನಿ ಜೂನ್ 1 ರಿಂದ 29 ರ ವರೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಟೂರ್ನಿಯ ಪಂದ್ಯಾವಳಿಗಾಗಿ ಟೀಮ್​ ಇಂಡಿಯಾದ 15 ಸದಸ್ಯರ ತಂಡ ಏಪ್ರಿಲ್‌ ಕೊನೆಯ ವಾರದಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಬಿಸಿಸಿಐ ತಂಡದ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿದುಬಂದಿದೆ.

ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ರವೀಂದ್ರ ಜಡೇಜಾ, ಕುಲ್​ದೀಪ್​ ಯಾದವ್​ ಮೊಹಮ್ಮದ್​ ಸಿರಾಜ್​, ಅರ್ಶ್​ದೀಪ್​ ಸಿಂಗ್, ರಿಂಕು ಸಿಂಗ್​​ ಆಯ್ಕೆಯಾಗುವುದು ಬಹುತೇಕ ಖಚಿತ. ಸದ್ಯಕ್ಕೆ
ಆರಂಭಿಕ ಸ್ಥಾನಕ್ಕೆ ಶುಭಮನ್​ ಗಿಲ್​, ಯಶಸ್ವಿ ಜೈಸ್ವಾಲ್​, ಆಲ್​ರೌಂಡರ್​ ಕೋಟಾದಲ್ಲಿ ಶಿವಂ ದುಬೆ ಮತ್ತು ಹಾರ್ದಿಕ್​ ಪಾಂಡ್ಯ ನಡುವೆ ತೀವ್ರ ಪೈಪೋಟಿ ಇದೆ.

ರಿಷಭ್​ ಪಂತ್​ ಅವರು ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಆಗಿದ್ದರೆ, 2ನೇ ಕೀಪರ್ ಆಯ್ಕೆಗೆ ಒಟ್ಟು 4 ಮಂದಿ ಆಟಗಾರರ ನಡುವೆ ತೀವ್ರ ಸ್ಪರ್ಧೆ ಇದೆ. ರಾಹುಲ್​, ಜಿತೇಶ್​ ಶರ್ಮ, ಇಶಾನ್​ ಕಿಶನ್​ ಮತ್ತು ಸಂಜು ಸ್ಯಾಮ್ಸನ್ ಇರಲ್ಲಿ ಒಬ್ಬರು ಆಯ್ಕೆಯಾಗಬಹುದು. ಈ ಬಾರಿಯ ಐಪಿಎಲ್‌ನಲ್ಲಿ ಶರವೇಗದ ಎಸೆತಗಳ ಮೂಲಕ ಭಾರೀ ಸಂಚಲನ ಮೂಡಿಸಿದ ಲಕ್ನೋ ತಂಡದ ಮಾಯಾಂಕ್‌ ಯಾದವ್‌ ಮತ್ತು ಹರ್ಷಿತ್​ ರಾಣಾ ಮೀಸಲು ಬೌಲರ್​ಗಳಾಗಿ ತಂಡದೊಂದಿಗೆ ಪ್ರಯಾಣಿಸಬಹುದು. ರವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್​ ಅಯ್ಯರ್​ಗೆ ಸ್ಥಾನ ಸಿಗುವುದು ಬಹುತೇಕ ಡೌಟ್​ ಎನ್ನಲಾಗಿದೆ.

ಇದನ್ನೂ ಓದಿ T20 World Cup: ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಜತೆ ವಿರಾಟ್​ ಕೊಹ್ಲಿ ಆರಂಭಿಕನಾಗಿ ಕಣಕ್ಕೆ

ಹಾರ್ದಿಕ್​ ಪಾಂಡ್ಯ ಬೌಲಿಂಗ್​ ಮಾಡಿದರೆ ಮಾತ್ರ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂದು ಬಿಸಿಸಿಐ ತಿಳಿಸಿರುವದಾಗಿ ದೈನಿಕ್​ ಜಾಗರಣ್​ ತನ್ನ ವರದಿಯಲ್ಲಿ ತಿಳಿಸಿತ್ತು. ಜತೆಗೆ ಈಗಾಗಲೇ ಪಾಂಡಗೆ ಈ ವಿಚಾರವಾಗಿ ಬಿಸಿಸಿಐ ಸೂಚನೆಯನ್ನು ಕೂಡ ನೀಡಿದೆ ಎಂದು ತಿಳಿಸಿತ್ತು.

ಈಗಾಗಲೇ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಇದೇ ಕಾರಣದಿಂದ ಆಯ್ಕೆ ಸಮಿತಿಯು ಭಾರತದ ಮೊದಲ ಸಂಭಾವ್ಯ ತಂಡವನ್ನು ಎಪ್ರಿಲ್‌ ಕೊನೆಯ ವಾರದಲ್ಲಿ ಪ್ರಕಟಿಸಲಿದೆ ಎನ್ನಲಾಗಿದೆ. ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

Continue Reading

ಕ್ರೀಡೆ

MS Dhoni: ಧೋನಿ ಐಪಿಎಲ್​ ನಿವೃತ್ತಿ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸುರೇಶ್​ ರೈನಾ

MS Dhoni: ಜಿಯೋ ಸಿನಿಮಾ ಸಂದರ್ಶನದಲ್ಲಿ ಮಾತನಾಡಿದ ಸುರೇಶ್​ ರೈನಾ, ಧೋನಿ ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿಯೂ ಆಡಲಿದ್ದಾರೆ ಎಂದು ಹೇಳಿದರು. ರೈನಾ ಅವರ ಈ ಮಾತು ಕೇಳಿ ಧೋನಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.

VISTARANEWS.COM


on

MS Dhoni
Koo

ಮುಂಬಯಿ: ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ(ms dhoni ipl retirement) ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅವರು ನಾಯಕತ್ವದಿಂದ ಕೆಳಗಿಳಿದು ಈ ಸ್ಥಾನವನ್ನು ಯುವ ಆಟಗಾರ ಗಾಯಕ್ವಾಡ್​ಗೆ ನೀಡಿದ್ದು ಎನ್ನಲಾಗಿದೆ. ಆದರೆ, ಧೋನಿ ವಿದಾಯದ ಬಗ್ಗೆ ಅವರ ಆಪ್ತ ಗೆಳೆಯ, ಚೆನ್ನೈ ತಂಡದ ಮಾಜಿ ಆಟಗಾರ ಸುರೇಶ್​ ರೈನಾ(Suresh Raina) ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಜಿಯೋ ಸಿನಿಮಾ ಸಂದರ್ಶನದಲ್ಲಿ ಮಾತನಾಡಿದ ಸುರೇಶ್​ ರೈನಾ, ಧೋನಿ ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿಯೂ ಆಡಲಿದ್ದಾರೆ ಎಂದು ಹೇಳಿದರು. ರೈನಾ ಅವರ ಈ ಮಾತು ಕೇಳಿ ಧೋನಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.

‘ಧೋನಿಯ ಗಾಯಗಳ ಬಗ್ಗೆ ಅವರಿಗಿಂತ ಹೆಚ್ಚು ಬೇರೆಯವರು ಕಾಳಜಿ ಹೊಂದಿದ್ದಾರೆ. ನಾನು ನೋಡಿರುವ ಜನರಲ್ಲೇ ಧೋನಿ ಅತ್ಯಂತ ಕಠಿಣ ವ್ಯಕ್ತಿ. ಅವರು ಎಷ್ಟು ಗಾಯ ಅನುಭವಿಸುತ್ತಿದ್ದಾರೆ ಅಥವಾ ಅನುಭವಿಸುತ್ತಿಲ್ಲ ಎನ್ನುವುದು ನಮಗೆ ಯಾರಿಗೂ ಗೊತ್ತಿಲ್ಲ. ಅವರು ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಮುಂದಿನ ಆವೃತ್ತಿಯಲ್ಲಿಯೂ ಆಡುವ ಮೂಲಕ ಅವರ ಅಭಿಮಾನಿಗಳಿಗೆ ಖುಷಿ ನೀಡಲಿದ್ದಾರೆ” ಎಂದು ರೈನಾ ಹೇಳಿದರು.

ಇದನ್ನೂ ಓದಿ IPL 2024 POINTS TABLE: ಗುಜರಾತ್​​ ಮಣಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಜಿಗಿತ ಕಂಡ ಡೆಲ್ಲಿ

ಧೋನಿ (MS Dhoni) ಮೊಣಕಾಲು ಗಾಯದಿಂದ ಬಳಲುತ್ತಿದ್ದರೂ ಕ್ರಿಕೆಟ್​ ಕುರಿತ ಅಚಲ ಬದ್ಧತೆಗಾಗಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿಎಸ್​ಕೆ ಬೌಲಿಂಗ್ ಸಲಹೆಗಾರ ಎರಿಕ್ ಸಿಮನ್ಸ್ ಧೋನಿಯ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದ್ದು, ಅವರ ದೃಢನಿಶ್ಚಯದ ಬಲವನ್ನು ಬಹಿರಂಗಪಡಿಸಿದ್ದರು. ಮೊಣಕಾಲು ಗಾಯಕ್ಕೆ ಸಂಬಂಧಿಸಿದ ನೋವು ಮತ್ತು ಸಂಭಾವ್ಯ ಅಪಾಯಗಳ ಹೊರತಾಗಿಯೂ, ಧೋನಿ ಅದನ್ನು ಅವರ ಪ್ರದರ್ಶನ ಅಥವಾ ಉತ್ಸಾಹವನ್ನು ಕಡಿಮೆ ಮಾಡುತ್ತಿಲ್ಲ ಎಂದು ಹೇಳಿದ್ದರು.

ಮುಂಬೈ ಇಂಡಿಯನ್ಸ್ ವಿರುದ್ಧದ ಗಮನಾರ್ಹ ಪಂದ್ಯದಲ್ಲಿ ಧೋನಿ ಇನಿಂಗ್ಸ್​ನ ಕೊನೆಯ ನಾಲ್ಕು ಎಸೆತಗಳಲ್ಲಿ ಪರಾಕ್ರಮ ತೋರಿದ್ದರು. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಓವರ್​ನಲ್ಲಿ 26 ರನ್ ಗಳಿಸಿದ್ದರು. ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದರು. ಮಿಂಚಿನ ದಾಳಿಯು ಸಿಎಸ್​ಕೆ ತಂಡಕ್ಕೆ 20 ರನ್​ಗಳ ಗೆಲುವಿಗೆ ಕಾರಣವಾಯಿತು.

Continue Reading

ಕ್ರೀಡೆ

IPL 2024 POINTS TABLE: ಗುಜರಾತ್​​ ಮಣಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಜಿಗಿತ ಕಂಡ ಡೆಲ್ಲಿ

IPL 2024 Points Table: ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧ 6 ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ಅಂಕಪಟ್ಟಿಯಲ್ಲಿ(IPL 2024 POINTS TABLE) ಬರೋಬ್ಬರಿ 3 ಸ್ಥಾನಗಳ ಜಿಗಿತ ಕಂಡು 6ನೇ ಸ್ಥಾನಕ್ಕೆ ಬಂದು ನಿಂತಿದೆ.

VISTARANEWS.COM


on

IPL 2024 Points Table
Koo

ಅಹಮದಾಬಾದ್​: ಬುಧವಾರ ರಾತ್ರಿ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡ ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧ 6 ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 POINTS TABLE) ಬರೋಬ್ಬರಿ 3 ಸ್ಥಾನಗಳ ಜಿಗಿತ ಕಂಡು 6ನೇ ಸ್ಥಾನಕ್ಕೆ ಬಂದು ನಿಂತಿದೆ. ಈ ಗೆಲುವಿಗೂ ಮುನ್ನ ಡೆಲ್ಲಿ 9ನೇ ಸ್ಥಾನದಲ್ಲಿತ್ತು. ಇದೀಗ ಡೆಲ್ಲಿ ಗೆಲುವಿನಿಂದಾಗಿ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​76112 (+0.677)
ಕೆಕೆಆರ್​​6428 (+1.399)
ಚೆನ್ನೈ ಸೂಪರ್​ ಕಿಂಗ್ಸ್​​6428 (+0.726)
ಹೈದರಾಬಾದ್​​6428(+0.502)
ಲಕ್ನೋ6336 (+0.038)
ಡೆಲ್ಲಿ ಕ್ಯಾಪಿಟಲ್ಸ್​​7346 (-0.074)
ಗುಜರಾತ್​7346 (-1.303)
ಪಂಜಾಬ್6244 (-0.218)
ಮುಂಬೈ​6244 (-0.234)
ಆರ್​ಸಿಬಿ7162 (-1.185)

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಡೆಲ್ಲಿ(Delhi Capitals) ತಂಡಕ್ಕೆ. ಬೌಲರ್​ಗಳು ತಮ್ಮ ಘಾತಕ ದಾಳಿಯ ಮೂಲಕ ಎದುರಾಳಿ ಗುಜರಾತ್​ ತಂಡವನ್ನು 89 ರನ್​ಗಳಿಗೆ ಆಲೌಟ್​ ಮಾಡಿದರು. ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ 8.5 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 92 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್​ ವೇಳೆ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಬಿರುಸಿನ ಬ್ಯಾಟಿಂಗ್​ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರ ಈ ಆಕ್ರಮಣಕಾರಿ ಬ್ಯಾಟಿಂಗ್​ನಿಂದಾಗಿ 2 ಓವರ್​ ಮುಕ್ತಾಯಗೊಳ್ಳುವ ಮುನ್ನವೇ ತಂಡಕ್ಕೆ 25 ರನ್​ ಹರಿದುಬಂತು. ಆದರೆ ಇವರ ಈ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ಸ್ಪೆನ್ಸರ್ ಜಾನ್ಸನ್ ಎಸೆದ ವೈಡ್​ ಲೆಂತ್​ ಬಾಲ್​ನ ಮರ್ಮವನರಿಯದೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಅವರ ಗಳಿಕ 10 ಎಸೆತಗಳಿಂದ 20 ರನ್. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಅಭಿಷೇಕ್​ ಪೋರೆಲ್(15)​ ಮತ್ತು ಶಾಯ್ ಹೋಪ್(19)​ ಬೇಗನೆ​ ವಿಕೆಟ್​ ಕಳೆದುಕೊಂಡು ತಂಡಕ್ಕೆ ಆತಂಕ ತಂದೊಡ್ಡಿದರು. ಈ ವೇಳೆ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ನಾಯಕ ಪಂತ್​(16) ಮತ್ತು ಸುಮೀತ್​ ಕುಮಾರ್​(9) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್​ ಪರ ಸಂದೀಪ್​ ವಾರಿಯರ್​ 2 ವಿಕೆಟ್​ ಕಿತ್ತರು.

ಇದನ್ನೂ ಓದಿ IPL 2024: ಕೆಕೆಆರ್ ಸೋಲು ಕಂಡು ಕಣ್ಣೀರು ಸುರಿಸಿದ ನಟ ಶಾರೂಖ್ ಖಾನ್‌; ಫೋಟೊ ವೈರಲ್​

ಇನಿಂಗ್ಸ್​ ಆರಂಭಿಸಿದ ಗುಜರಾತ್​ ತಂಡದ ಬ್ಯಾಟರ್​ಗಳು ಡೆಲ್ಲಿ ಬೌಲರ್​ಗಳಾದ ಇಶಾಂತ್​ ಶರ್ಮ, ಮುಕೇಶ್​ ಕುಮಾರ್​ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಕರಾರುವಾಕ್ ಬೌಲಿಂಗ್ ಎದುರು ಅಬ್ಬರಿಸಲು ವಿಫಲರಾದರು. ನಾಯಕ ಶುಭಮನ್​​ ಗಿಲ್​(8), ವೃದ್ಧಿಮಾನ್​ ಸಾಹಾ(2), ಡೇವಿಡ್​ ಮಿಲ್ಲರ್​(2), ಅಭಿನವ್​ ಮನೋಹರ್​(8) ಮತ್ತು ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾನ್ನಾಡಿದ ಶಾರುಖ್ ಖಾನ್(0) ಸಿಂಗಲ್​ ಡಿಜಿಟ್​ಗೆ ಸೀಮಿತರಾಗಿ ಪೆವಿಲಿಯನ್​ ಪರೇಡ್​ ನಡೆಸಿದರು.

ಇನ್ನೇನು ತಂಡ 50ರನ್​ ಒಳಗಡೆ ಗಂಟು-ಮೂಟೆ ಕಟ್ಟುತ್ತದೆ ಎನ್ನುವ ಹಂತದಲ್ಲಿ 8ನೇ ಕ್ರಮಾಂಕದಲ್ಲಿ ಆಡಲಿಳಿದ ರಶೀದ್​ ಖಾನ್​ ಏಕಾಂಗಿ ಹೋರಾಟ ನಡೆಸಿ 24 ಎಸೆತಗಳಿಂದ 31 ರನ್​ ಚಚ್ಚಿ ತಂಡದ ಮೊತ್ತವನ್ನು 80ರ ಗಡಿ ದಾಟಿಸಿ ಮಾನ ಉಳಿಸಿದರು. ಒಟ್ಟಾರೆಯಾಗಿ ತಂಡದ ಪರ ಮೂರು ಮಂದಿ ಮಾತ್ರ ಎರಡಂಕಿ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಂಡರು. ಸಾಯಿ ಸುದರ್ಶನ್​(12) ಮತ್ತು ರಾಹುಲ್​ ತೆವಾಟಿಯ(10) ರನ್​ ಬಾರಿಸಿದರು.

Continue Reading

ಕ್ರೀಡೆ

Times Influential list 2024: ಟೈಮ್ಸ್‌ ಪ್ರಭಾವಿ ಪಟ್ಟಿಯಲ್ಲಿ ಸ್ಥಾನ ಪಡೆದ ಸಾಕ್ಷಿ ಮಲಿಕ್,ಆಲಿಯಾ ಭಟ್

Times Influential list 2024: ಮೂಲತಃ ಆಂಧ್ರದವರಾದ ಸತ್ಯ ನಾದೆಲ್ಲಾ, 2014ರಲ್ಲಿ ಮೈಕ್ರೋಸಾಫ್ಟ್ ನ ಸ್ಟೀವ್‌ ಬಾಲ್ಮರ್‌ ಅವರಿಂದ ಸಿಇಒ ಹುದ್ದೆ ಸ್ವೀಕರಿಸಿದ ಇವರು, ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

VISTARANEWS.COM


on

Times Influential list 2024
Koo

ನ್ಯೂಯಾರ್ಕ್: ಟೈಮ್ ಮ್ಯಾಗಜೀನ್‌ನ ಈ ವರ್ಷದ 100 ಪ್ರಭಾವಿ(Times Influential list 2024) ವ್ಯಕ್ತಿಗಳ ಪಟ್ಟಿ ಬಿಡುಗಡೆಗೊಂಡಿದ್ದು, ಅಚ್ಚರಿ ಎಂಬಂತೆ ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ಗಂಭೀರ ಆರೋಪ ಮಾಡಿ ಕುಸ್ತಿಗೆ ವಿದಾಯ ಹೇಳಿದ್ದ ಒಲಿಂಪಿಯನ್​ ಕುಸ್ತಿಪಟು ಸಾಕ್ಷಿ ಮಲಿಕ್(Sakshi Malik) ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಜತೆಗೆ, ಬಾಲಿವುಡ್ ನಟಿ ಆಲಿಯಾ ಭಟ್(Alia Bhatt)​, ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ(Satya Nadella) ಕೂಡ ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ನಡೆಸಿದ್ದ ಪ್ರತಿಭಟನೆಯಲ್ಲಿ ಸಾಕ್ಷಿ ಮಲಿಕ್ ಕೂಡ ಪ್ರಮುಖ ಪಾತ್ರವಹಿಸಿದ್ದರು. ಕುಸ್ತಿ ಫೆಡರೇಷನ್​ಗೆ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಅವರು ಕಳೆದ ವರ್ಷದ ಡಿಸೆಂಬರ್‌ನಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ 31 ವರ್ಷದ ಸಾಕ್ಷಿ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ಒಲಿಂಪಿಕ್ ಅರ್ಹತಾ ಪಂದ್ಯಗಳಿಗಾಗಿ ನಡೆದಿದ್ದ ರಾಷ್ಟ್ರೀಯ ಟ್ರಯಲ್ಸ್‌ನಿಂದಲೂ ಹೊರಗುಳಿದಿದ್ದರು.

ಇದನ್ನೂ ಓದಿ Sakshi Malik: ಸಂಜಯ್ ಸಿಂಗ್ ನೇತೃತ್ವದ ಕುಸ್ತಿ ಟೂರ್ನಿಯಲ್ಲಿ ಸ್ಪರ್ಧಿಸಬೇಡಿ: ಸಾಕ್ಷಿ ಮಲಿಕ್

ಭಾರತೀಯ ಮೂಲದ ಸತ್ಯ ನಾದೆಲ್ಲಾ ಅವರು 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ನೂತನ ಸಿಇಒ ಆಗಿ ನೇಮಕಗೊಂಡಿದ್ದರು. ನಾದೆಲ್ಲಾ ಅವರು ಮೈಕ್ರೋಸಾಫ್ಟ್ ಪ್ರವೇಶಿಸಿದ ನಂತರ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸರ್ಚ್ ಮಾರುಕಟ್ಟೆಯಲ್ಲಿ ಮತ್ತೆ ವಹಿವಾಟು ಚೇತರಿಸಿಕೊಂಡಿತ್ತು. ಮೂಲತಃ ಆಂಧ್ರದವರಾದ ಸತ್ಯ ನಾದೆಲ್ಲಾ, ಕರ್ನಾಟಕದಲ್ಲಿರುವ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಬಿಇ ಮುಗಿಸಿದ್ದರು. ಹಾಗೆಯೇ ಎಂಎಸ್‌ ಅನ್ನು ಸ್ಟಾನ್‌ಫೋರ್ಡ್‌ ಮತ್ತು ಎಂಬಿಎ ಅನ್ನು ವಾರ್ಟನ್‌ನಲ್ಲಿ ಮುಗಿಸಿದ್ದಾರೆ. 2014ರಲ್ಲಿ ಮೈಕ್ರೋಸಾಫ್ಟ್ ನ ಸ್ಟೀವ್‌ ಬಾಲ್ಮರ್‌ ಅವರಿಂದ ಸಿಇಒ ಹುದ್ದೆ ಸ್ವೀಕರಿಸಿದ ಇವರು, ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

Continue Reading
Advertisement
Nikhil Siddhartha reveals his son name
ಟಾಲಿವುಡ್14 mins ago

Nikhil Siddhartha: ಮಗನ ಹೆಸರನ್ನು ರಿವೀಲ್‌ ಮಾಡಿದ ʻಕಾರ್ತಿಕೇಯʼ ಸಿನಿಮಾ ಖ್ಯಾತಿಯ ನಟ!

T20 World Cup
ಕ್ರೀಡೆ15 mins ago

T20 World Cup: ಟಿ20 ವಿಶ್ವಕಪ್​ನಲ್ಲಿ ಈ ಆಟಗಾರರಿಗೆ ಅವಕಾಶ ಸಿಗುವುದು ಡೌಟ್​

Fact Check
Fact Check17 mins ago

Fact Check: 10 ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟಕ್ಕೆ 200 ಸ್ಥಾನ ಎಂಬ ವರದಿ ನಿಜವೇ? ಇಲ್ಲಿದೆ ಸತ್ಯ!

Kannada New Movie nalkane ayama movie
ಸ್ಯಾಂಡಲ್ ವುಡ್50 mins ago

Kannada New Movie: ʻಮಾಸ್ಟರ್‌ ಆನಂದ್‌ʼ ಮಗಳ ಮೊದಲ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ!

MS Dhoni
ಕ್ರೀಡೆ50 mins ago

MS Dhoni: ಧೋನಿ ಐಪಿಎಲ್​ ನಿವೃತ್ತಿ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸುರೇಶ್​ ರೈನಾ

Modi Biden
ದೇಶ55 mins ago

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಿ ಎಂಬ ಮಸ್ಕ್‌ ಆಗ್ರಹಕ್ಕೆ ಅಮೆರಿಕವೂ ಸಾಥ್, ಶೀಘ್ರವೇ ಗುಡ್‌ ನ್ಯೂಸ್?

Veera Dheera Sooran Title Teaser OUT
ಕಾಲಿವುಡ್1 hour ago

Veera Dheera Sooran: ಚಿಯಾನ್ ವಿಕ್ರಮ್ 62ನೇ ಸಿನಿಮಾದ ಟೈಟಲ್‌ ಟೀಸರ್‌ ಔಟ್‌!

Lok Sabha Election 2024 by raghavendra pc gaddigoudar umesh jadhav
Lok Sabha Election 20241 hour ago

Lok Sabha Election 2024: ಇಂದು ಬಿವೈ ರಾಘವೇಂದ್ರ, ಗದ್ದಿಗೌಡರ್‌, ಉಮೇಶ್‌ ಜಾಧವ್ ನಾಮಪತ್ರ; ಬಿಜೆಪಿ ಶಕ್ತಿ ಪ್ರದರ್ಶನ

IPL 2024 Points Table
ಕ್ರೀಡೆ1 hour ago

IPL 2024 POINTS TABLE: ಗುಜರಾತ್​​ ಮಣಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಜಿಗಿತ ಕಂಡ ಡೆಲ್ಲಿ

Ram Navami
ದೇಶ2 hours ago

Ram Navami: ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ವೇಳೆ ಸ್ಫೋಟ, ಹಿಂದುಗಳಿಗೆ ಕಲ್ಲೇಟು!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌