Mohammed Shami: ಪಾಕಿಗಳ ಟೀಕೆಯ ಹೊಡೆತಕ್ಕೆ ಬೌನ್ಸರ್​ ಎಸೆತ ಮೊಹಮ್ಮದ್ ಶಮಿ - Vistara News

ಕ್ರಿಕೆಟ್

Mohammed Shami: ಪಾಕಿಗಳ ಟೀಕೆಯ ಹೊಡೆತಕ್ಕೆ ಬೌನ್ಸರ್​ ಎಸೆತ ಮೊಹಮ್ಮದ್ ಶಮಿ

ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಟೀಕೆ ಮಾಡಿದ್ದ ಪಾಕಿಸ್ತಾನಕ್ಕೆ, ಟೀಮ್ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರು ತಕ್ಕ ಉತ್ತರ ನೀಡಿದ್ದಾರೆ.

VISTARANEWS.COM


on

mohammed shami
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಈ ಬಾರಿಯ ವಿಶ್ವಕಪ್(icc world cup 2023)​ ಟೂರ್ನಿಯುದ್ದಕ್ಕೂ ಭಾರತ ತಂಡದ ಮತ್ತು ಆಟಗಾರರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಟೀಕೆ ಮಾಡಿದ್ದ ಪಾಕಿಸ್ತಾನಕ್ಕೆ, ಟೀಮ್ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರು ತಕ್ಕ ಉತ್ತರ ನೀಡಿದ್ದಾರೆ.

ವಿಶ್ವಕಪ್​ ಟೂರ್ನಿ ಮುಕ್ತಾಯದ ಬಳಿಕ ಪೂಮಾ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಮಿ, ಸಂಕಷ್ಟದ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುವ ಕಡೆಗೆ ನಾನು ವಿಶ್ವಾಸ ಇಟ್ಟಿದ್ದೇನೆ ಎಂದು ಹೇಳುವ ಮೂಲಕ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗರ ಟೀಕೆಗೆ ಶಮಿ ಖಡಕ್ ಉತ್ತರ ನೀಡಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರರು ಭಾರತ ತಂಡ ತನ್ನ ಲಾಭಕ್ಕಾಗಿ ಬೇರೆ ಚೆಂಡುಗಳನ್ನು ಬಳಕೆ ಮಾಡುತ್ತಿದೆ, ಟಾಸ್​ ಫಿಕ್ಸಿಂಗ್​ ಸೇರಿ ಡಿಆರ್​ಎಸ್​ ರಿವ್ಯೂ ತಮಗೆ ಬೇಕಾದ ರೀತಿಯಲ್ಲಿ ತೋರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಶಮಿ, ಅನಗತ್ಯವಾಗಿ ಕಾಲು ಕೆರೆದು ಜಗಳಕ್ಕೆ ಬರುವುದು ಪಾಕಿಸ್ತಾನದ ಹುಟ್ಟುಗುಣ. ಆಡಲು ಸಾಧ್ಯವಾಗದಿದ್ದಾಗ ಅಂಗಳ ಡೊಂಕು ಎಂದು ಹೇಳುವ ಮನಸ್ಥಿತಿ ಅವರದ್ದು. ಕ್ರಿಕೆಟ್‌ ಆಡದವರಿಗೂ ಕ್ರಿಕೆಟ್​ ನಿಯಮದ ಬಗ್ಗೆ ತಿಳಿಯುತ್ತದೆ. ಆದರೆ, ಕ್ರಿಕೆಟ್‌ ಆಡಿರುವವರೇ ಕೆಲ ಕೀಳು ಮಟ್ಟದ ಹೇಳಿಕೆ ನೀಡಿದರೆ ಹೇಗೆ? ಮಾಜಿ ಆಟಗಾರನಾಗಿ ನಾನು ಈ ರೀತಿ ಮಾತನಾಡಿದರೆ ಹೇಗೆ? ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಖಡಕ್​ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ Mohammed Shami : ಒಳ್ಳೆಯವರು ಮಾತ್ರ ಗೆಲ್ತಾರೆ; ಶಮಿಯ ಪತ್ನಿ ಹೀಗೆ ಹೇಳಿದ್ದು ಯಾರಿಗೆ?

ದಾಖಲೆಗಾಗಿ ಆಡುವ ಆಟಗಾರ ನಾನಲ್ಲ

ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಹಲವು ಶಮಿ ಅವರು ಹಲವು ದಾಖಲಗಳನ್ನು ಬರೆದಿದ್ದಾರೆ. ಇದೇ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಮಿ, ಎಂದೂ ಕೂಡ ದಾಖಲೆಗಾಗಿ ಆಡುವ ಆಟಗಾರ ನಾನಲ್ಲ, ತಂಡಕ್ಕಾಗಿ ಆಡುವುದೇ ನನ್ನ ಪರಮೋಚ್ಛ ಗುರಿ ಎಂದು ಹೇಳಿದ್ದಾರೆ.

“ವಿಶ್ವಕಪ್​ನಲ್ಲಿ ನಾನು ಹಲವು ದಾಖಲೆಗಳನ್ನು ಬರೆದಿರಬಹುದು. ದಿಗ್ಗಜ ಆಟಗಾರರನ್ನು ಹಿಂದಿಕ್ಕಿದ್ದೇನೆ ಎಂಬ ಸಂಗತಿಯೂ ನನಗೆ ತಿಳಿದಿರಲಿಲ್ಲ. ಆದರೆ ವಿಶ್ವಕಪ್‌ನಲ್ಲಿ 40ಕ್ಕೂ ಹೆಚ್ಚು ವಿಕೆಟ್‌ ಪಡೆದಿದ್ದೇನೆ ಎಂಬುದು ನನ ಗಮನದಲ್ಲಿತ್ತು. ವೈಯಕ್ತಿಕ ದಾಖಲೆಗಳ ಬಗ್ಗೆ ನಾನು ಎಂದಿಗೂ ಯೋಚಿಸಿದವನಲ್ಲ. ನನ್ನ ಕೆಲಸ ಏನಿದ್ದರೂ ಉತ್ತಮವಾಗಿ ಬೌಲಿಂಗ್‌ ಮಾಡುವುದಷ್ಟೇ” ಎಂದರು.

ಇದನ್ನೂ ಓದಿ Mohammed Shami : ಪ್ರಧಾನಿ ಮೋದಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ ಮೊಹಮ್ಮದ್ ಶಮಿ

“ಯಾವುದೇ ಪಂದ್ಯಕ್ಕೂ ಮುನ್ನ ಪಿಚ್‌ ಹೇಗಿದೆ ಎಂದು ನಾನು ನೋಡುವುದಿಲ್ಲ. ಪರಿಶೀಲಿಸುವುದೂ ಇಲ್ಲ. ಪಿಚ್‌ ಹೇಗೆ ವರ್ತಿಸುತ್ತದೆ ಎಂದು ತಿಳಿಯಬೇಕಿದ್ದರೆ ನಾವು ಬೌಲಿಂಗ್‌ ಮಾಡಲೇ ಬೇಕು. ಈಗಿನ ಆಧುನಿಕ ತಂತ್ರಜ್ಞಾನದ ಬಗ್ಗೆ ನಾನು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಪಂದ್ಯದಲ್ಲಿ ಮೊದಲ ಓವರ್​ ನಡೆಸುವಾಗ ಪಿಚ್​ ಹೇಗೆ ವರ್ತಿಸುತ್ತದೆ ಎನ್ನುವುದು ನನಗೆ ತಿಳಿಯುತ್ತದೆ. ಇದಕ್ಕೆ ಅನುಗುಣವಾಗಿ ಬೌಲಿಂಗ್​ ನಡೆಸುತ್ತೇನೆ” ಎಂದು ತಮ್ಮ ಬೌಲಿಂಗ್​ ಸ್ಕಿಲ್​ನ ಅನುಭವವನ್ನು​ ಶಮಿ ಮನ ಬಿಚ್ಚಿ ಹೇಳಿಕೊಂಡರು.

ಈ ಬಾರಿಯ ವಿಶ್ವಕಪ್​ನಲ್ಲಿ ಶಮಿಯ ಸಾಧನೆ

ಈ ಬಾರಿ ವಿಶ್ವಕಪ್​ ಟೂರ್ನಿಯಲ್ಲಿ ಮೊಹಮ್ಮದ್‌ ಶಮಿ ಅವರ ಬೌಲಿಂಗ್​ ಸಾಧನೆ ಮರೆಯಲು ಸಾಧ್ಯವಿಲ್ಲ. ಕೇವಲ 7 ಪಂದ್ಯಗಳಲ್ಲಿ ಆಡಿದ್ದರೂ, ಮೊನಚಾದ ದಾಳಿಯಿಂದಾಗಿ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಿದ್ದರು. ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಶಮಿ ಆ ಬಳಿಕ ಪ್ರತಿ ಪಂದ್ಯದಲ್ಲಿಯೂ ಗೆಲುವಿನ ಹೀರೊ ಆಗಿ ಮೆರೆದಾಡಿದ್ದರು. ನ್ಯೂಜಿಲ್ಯಾಂಡ್‌ ವಿರುದ್ಧ 5 ವಿಕೆಟ್‌ ಪಡೆದರು. ಇಂಗ್ಲೆಂಡ್‌ ವಿರುದ್ಧ ಭಾರತ ಕಡಿಮೆ ಸ್ಕೋರ್‌ ಗಳಿಸಿದ್ದರೂ ಶಮಿ ಮಾತ್ರ ತಮ್ಮ ಬೌಲಿಂಗ್​ ಸಾಹಸದಿಂದ 22 ರನ್‌ಗೆ 4 ವಿಕೆಟ್‌ ಪಡೆದು ಮಿಂಚಿದರು. ಲಂಕಾ ವಿರುದ್ಧ ಕೇವಲ 18 ರನ್‌ಗೆ 5 ವಿಕೆಟ್‌ ಪಡೆದರು. ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್‌ ಪಡೆದರು. ನ್ಯೂಜಿಲ್ಯಾಂಡ್‌ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ 7 ವಿಕೆಟ್‌ ಪಡೆದ ಶಮಿ ಹೊಸ ದಾಖಲೆಯನ್ನೇ ನಿರ್ಮಿಸಿದರು. ಫೈನಲ್​ ಪಂದ್ಯದಲ್ಲಿ 1 ವಿಕೆಟ್​ ಕಿತ್ತರು. ಒಟ್ಟಾರೆ 23 ವಿಕೆಟ್​ ಕಿತ್ತು ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಆಟಗಾರನಾಗಿ ಹೊರಹೊಮ್ಮಿದರು. 57ಕ್ಕೆ 7 ವಿಕೆಟ್​ ಗರಿಷ್ಠ ವೈಯಕ್ತಿಕ ಬೌಲಿಂಗ್​ ಸಾಧನೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಐಪಿಎಲ್​ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಸಂಪೂರ್ಣ ವಿವರ

IPL 2024 : ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಾಡಲಿವೆ.

VISTARANEWS.COM


on

MS Dhoni 1
Koo

ಬೆಂಗಳೂರು : ಐಪಿಎಲ್​ 2024ನೇ (IPL 2024) ಅವೃತ್ತಿಯ ಮೊದಲ ಹಂತದ 24 ಪಂದ್ಯಗಳ ವೇಳಾಪಟ್ಟಿ ಗುರುವಾರ (ಫೆಬ್ರವರಿ 22ರಂದು) ಪ್ರಕಟಗೊಂಡಿದೆ. ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

ಮಾರ್ಚ್ 22 ರಿಂದ ಏಪ್ರಿಲ್ 7 ರವರೆಗೆ 21 ಪಂದ್ಯಗಳ ಆರಂಭಿಕ ಸೆಟ್ ಅನ್ನು ಒಳಗೊಂಡ ಭಾಗಶಃ ವೇಳಾಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಗುರುವಾರ ಬಿಡುಗಡೆ ಮಾಡಿದೆ. ಲೋಕ ಸಭಾ ಚುನಾಣೆಯ ಹಿನ್ನೆಲೆಯಲ್ಲಿ ಮೊದಲ ಸೆಟ್​ನ ವೇಳಾಪಟ್ಟಿ ಮಾತ್ರ ಬಿಡುಗಡೆಗೊಂಡಿದೆ. ಬಳಿಕ ಎರಡನೇ ಹಂತದಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ಅಂತೆಯೇ ಐಪಿಎಲ್ ಫೈನಲ್ ಪಂದ್ಯವು ಮೇ 26ರಂದು ನಡೆಯುವ ನಿರೀಕ್ಷೆಯಿದೆ. ನಂತರದ ಕೇವಲ ಐದು ದಿನಗಳ ಬಳಿಕ ಪುರುಷರ ಟಿ 20 ವಿಶ್ವಕಪ್​​ ಆರಂಭವಾಗಲಿದೆ. ಪಂದ್ಯ ಜೂನ್ 1ರಿಂದ ಯುಎಸ್ಎ ಮತ್ತು ವೆಸ್ಟ್​​ ಇಂಡೀಸ್​ನಲ್ಲಿ ನಡೆಯಲಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗಳ ದಿನಾಂಕಗಳನ್ನು ಭಾರತದ ಚುನಾವಣಾ ಆಯೋಗವು ಬಹಿರಂಗಪಡಿಸಿದ ನಂತರ ಪಂದ್ಯಾವಳಿಯ ವೇಳಾಪಟ್ಟಿಯ ದ್ವಿತೀಯಾರ್ಧವನ್ನು ನಿರೀಕ್ಷಿಸಲಾಗಿದೆ.

ನಾಲ್ಕು ಡಬಲ್​ ಹೆಡರ್​ಗಳು

ಆರಂಭಿಕ ವಾರಾಂತ್ಯದಲ್ಲಿ ಎರಡು ಸೇರಿದಂತೆ ಆರಂಭಿಕ ವೇಳಾಪಟ್ಟಿಯಲ್ಲಿ ನಾಲ್ಕು ಡಬಲ್ ಹೆಡರ್​ಗಳಿವೆ. ಮಾರ್ಚ್ 23 ರಂದು ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹಗಲು ಪಂದ್ಯವನ್ನು ಆಯೋಜನೆಗೊಂಡಿದೆ. ನಂತರ ಕೋಲ್ಕತಾ ನೈಟ್ ರೈಡರ್ಸ್ ಈಡನ್ ಗಾರ್ಡನ್ಸ್​ನಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧ ಆಡಲಿದೆ. ಮಾರ್ಚ್ 24 ರಂದು ರಾಜಸ್ಥಾನ್ ರಾಯಲ್ಸ್ ತನ್ನ ಮೊದಲ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದ್ದು, ಅದೇ ದಿನ ಸಂಜೆ ಗುಜರಾತ್ ಟೈಟಾನ್ಸ್ ತನ್ನ ಮೊದಲ ಪಂದ್ಯವನ್ನು ಮುಂಬೈನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕೆ ಇಳಿಯಲಿದೆ.

ಇದನ್ನೂ ಓದಿ :

ಆರಂಭಿಕ ವೇಳಾಪಟ್ಟಿ ಬದಲು

ಸಾಮಾನ್ಯವಾಗಿ ಪ್ರತಿ ಬಾರಿಯೂ ಆರಂಭಿಕ ಪಂದ್ಯವು ಅದಕ್ಕಿಂತ ಹಿಂದಿನ ಋತುವಿನ ಫೈನಲ್ ಪಂದ್ಯ ಆಡಿದ ತಂಡಗಳ ನಡುವೆ ನಡೆಯುತ್ತದೆ. ಹೀಗಾಗಿ ಎಂಎಸ್ ಧೋನಿ ಅವರ ಸಿಎಸ್​ಕೆ ಟೈಟಾನ್ಸ್ ವಿರುದ್ಧ ಆಡಬೇಕಾಗಿತ್ತು. ಆದರೆ ಈ ಬಾರಿ ಬದಲಾಗಿದೆ. ಸಿಎಸ್​ಕೆ ವಿರುದ್ದ ಆರ್​ಸಿಬಿ ಉದ್ಘಾಟನಾ ಪಂದ್ಯದಲ್ಲಿ ಆಡಲಿದೆ.

ಮಾರ್ಚ್ 22 ರಿಂದ ಏಪ್ರಿಲ್ 7 ರ ಅವಧಿಯಲ್ಲಿ ತಮ್ಮ ತವರು ಮೈದಾನವಾದ ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ಯಾವುದೇ ಪಂದ್ಯಗಳನ್ನು ಆಡದ ಏಕೈಕ ಫ್ರಾಂಚೈಸಿ ಕ್ಯಾಪಿಟಲ್ಸ್. ಆ ಎರಡೂ ಪಂದ್ಯಗಳು ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಮಾರ್ಚ್ 17 ರವರೆಗೆ ಫೈನಲ್ ಸೇರಿದಂತೆ 11 ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ನಡೆಯಲಿದೆ. ಹೀಗಾಗಿ ಡೆಲ್ಲಿಗೆ ತವರು ಮೈದಾನ ದೊರೆಯುತ್ತಿಲ್ಲ.

ಮೊದಲ ಹಂತದಲ್ಲಿ ಆರ್​​ಸಿಬಿಗೆ ಐದು ಪಂದ್ಯ

ಕ್ಯಾಪಿಟಲ್ಸ್, ಟೈಟಾನ್ಸ್ ಮತ್ತು ಆರ್​ಸಿ ಬಿ ತಂಡಗಳು 14 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಆಡಲಿವೆ. ಕೆಕೆಆರ್ ಕೇವಲ ಮೂರು ಪಂದ್ಯಗಳನ್ನು ಆಡಲಿದೆ. ಉಳಿದ ಎಲ್ಲಾ ಫ್ರಾಂಚೈಸಿಗಳಿಗೆ ನಾಲ್ಕು ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಪಂಜಾಬ್ ಕಿಂಗ್ಸ್ ತನ್ನ ತವರು ಪಂದ್ಯಗಳನ್ನು ಚಂಡೀಗಢದ ಹೊರವಲಯದಲ್ಲಿರುವ ಮುಲ್ಲಾನ್ಪುರದ ಹೊಚ್ಚ ಹೊಸ ಸ್ಥಳದಲ್ಲಿ ಆಡುವ ಸಾಧ್ಯತೆಯಿದೆ.

ನಾಲ್ಕು ಪ್ಲೇಆಫ್ ಪಂದ್ಯಗಳು ಸೇರಿದಂತೆ ಒಟ್ಟು 74 ಪಂದ್ಯಗಳು ನಡೆಯಲಿವೆ.

Continue Reading

ಪ್ರಮುಖ ಸುದ್ದಿ

Sachin Tendulkar : ಸಚಿನ್​, ಸಚಿನ್​… ವಿಮಾನವನ್ನೇ ಸ್ಟೇಡಿಯಮ್​ ಮಾಡಿಕೊಂಡ ಫ್ಯಾನ್ಸ್; ಇಲ್ಲಿದೆ ವಿಡಿಯೊ

Sachin Tendulkar : ಸಚಿನ್​​ ತೆಂಡೂಲ್ಕರ್ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ಅಭಿಮಾನಿಗಳಿಂದ ಆಹ್ಲಾದಕರ ಅಭಿಮಾನವನ್ನು ಸ್ವೀಕರಿಸಿದರು.

VISTARANEWS.COM


on

Sachin Tendulkar
Koo

ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಎಂದರೆ ಸಚಿನ್​ ತೆಂಡೂಲ್ಕರ್​ (Sachin Tendulkar); ತೆಂಡೂಲ್ಕರ್​ ಎಂದರೆ ಕ್ರಿಕೆಟ್​​ ಎಂಬ ಮಾತಿದೆ. ಸಚಿನ್​ ತೆಂಡೂಲ್ಕರ್​​ಗೆ ಅಷ್ಟೊಂದು ದೊಡ್ಡ ಅಭಿಮಾನಿ ವರ್ಗವಿದೆ. ಭಾರತದ ಕ್ರಿಕೆಟ್​ ಕ್ಷೇತ್ರವನ್ನು ಎರಡು ದಶಕಕ್ಕೂ ಹೆಚ್ಚು ಕಾಲ ಆಳಿದವರು ಅವರು. ಅದೇ ರೀತಿ ಅತ್ಯುತ್ತಮ ವರ್ತನೆಯನ್ನೂ ತೋರಿದವರು. ಹೀಗಾಗಿ ಸಚಿನ್​​ ಎಲ್ಲಿಗೆ ಹೋದರೂ ಅಭಿಮಾನಿಗಳು ಸ್ವಯಂಪ್ರೇರಿತವಾಗಿ ವಾತಾವರಣವನ್ನು ‘ಸಚಿನ್​ ಮಯ’ ಮಾಡುತ್ತಾರೆ. “ಸಚಿನ್, ಸಚಿನ್” ಎಂದು ಅವರ ಹೆಸರನ್ನು ಕೂಗುವ ಮೂಲಕ ಕ್ರಿಕೆಟ್ ದೇವರ ಆಗಮನವನ್ನು ಸಂಭ್ರಮಿಸುತ್ತಾರೆ.

ಅಂತಹ ಒಂದು ಘಟನೆ ಇತ್ತೀಚೆಗೆ ನಡೆಯಿತು. ಅವರು ಪ್ರಯಾಣ ಮಾಡುತ್ತಿದ್ದ ವಿಮಾನದಲ್ಲಿ ಈ ಪ್ರಸಂಗ ನಡೆಯಿತು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ,ಸಚಿನ್ ತೆಂಡೂಲ್ಕರ್ ಮೈದಾನಕ್ಕೆ ಬರುವಾಗ ಸಚಿನ್​, ಸಚಿನ್ ಎಂದು ಅಭಿಮಾನಿಗಳು ಕೂಗುವ ರೀತಿಯಲ್ಲೇ ವಿಮಾನದ ಪ್ರಯಾಣಿಕರು ಘೋಷಣೆ ಕೂಗಿದ ಪ್ರಸಂಗ ನಡಯಿತು. ಅದಕ್ಕೆ ಸಚಿನ್​ ತೆಂಡೂಲ್ಕರ್ ಕೂಡ ಉತ್ತಮವಾಗಿ ಸ್ಪಂದಿಸಿದರು.

ಸಚಿನ್ ತೆಂಡೂಲ್ಕರ್ 24 ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದಲ್ಲಿ ಪ್ರಭಾವಶಾಲಿ ಆಟಗಾರ ಎನಿಸಿಕೊಂಡಿದ್ದರು. ಲೆಜೆಂಡರಿ ಬ್ಯಾಟರ್​ ಏಕದಿನ ಮತ್ತು ಟೆಸ್ಟ್ ಎರಡರಲ್ಲೂ 34,000 ಕ್ಕೂ ಹೆಚ್ಚು ರನ್ ಪೇರಿಸಿದ್ದರು. ಎರಡೂ ಸ್ವರೂಪಗಳಲ್ಲಿ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದ ಅವರು ತಮ್ಮ ವೃತ್ತಿಜೀವನ ಕೊನೆಗೊಳಿಸಿದರು. ಸಚಿನ್ ತೆಂಡೂಲ್ಕರ್ 100 ಶತಕಗಳೊಂದಿಗೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಭಾರತದ ಮಾಜಿ ಆಟಗಾರ ಮುಂಬರುವ ಐಪಿಎಲ್ 2024 ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಶಿಬಿರಕ್ಕೆ ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡಲಿದ್ದಾರೆ.

ಕಾಶ್ಮೀರದ ಗಲ್ಲಿಯಲ್ಲಿ ಕ್ರಿಕೆಟ್​ ಆಡಿದ ದಿಗ್ಗಜ ಸಚಿನ್​ ತೆಂಡೂಲ್ಕರ್​; ವಿಡಿಯೊ ವೈರಲ್​

ಶ್ರೀನಗರ: ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ(jammu and kashmir) ಕುಟುಂಬ ಸಮೇತರಾಗಿ ಮೊದಲ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ಅವರು ಇಲ್ಲಿನ ಹಳ್ಳಿಯೊಂದ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಕ್ರಿಕೆಟ್​ ಆಡಿದ್ದಾರೆ. ಈ ವಿಡಿಯೊ ಇದೀಗ ವೈರಲ್(viral video)​ ಆಗಿದೆ.

ಕಳೆದ ವಾರ ಸಚಿನ್​ ತಮ್ಮ ಪತ್ನಿ ಅಂಜಲಿ, ಪುತ್ರಿ ಸಾರಾ ಜತೆ ಜಮ್ಮು ಮತ್ತು ಕಾಶ್ಮೀರದ ಹಲವು ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಇಲ್ಲಿನ ಸ್ಥಳೀಯ ಮನೆಗಳಿಗೂ ಭೇಟಿ ನೀಡಿ ಚಹಾ ಸೇವಿಸಿದ್ದರು. ಸ್ಥಳೀಯ ಬ್ಯಾಟ್ ಫ್ಯಾಕ್ಟರಿಗೆ ಭೇಟಿ ನೀಡಿದ್ದ ಸಚಿನ್​, ಈ ವೇಳೆ ತಮ್ಮ ಸಹೋದರಿ ಉಡುಗೊರೆಯಾಗಿ ನೀಡಿದ ತಮ್ಮ ಮೊದಲ ಕಾಶ್ಮೀರ ವಿಲ್ಲೋ ಬ್ಯಾಟ್ ಅನ್ನು ನೆನಪಿಸಿಕೊಂಡರು. ಈ ಫೋಟೊ ಮತ್ತು ವಿಡಿಯೊಗಳು ವೈರಲ್​ ಆಗಿತ್ತು. ಇದೀಗ ಕ್ರಿಕೆಟ್​ ಆಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಇದನ್ನೂ ಓದಿ : IPL 2024: ಐಪಿಎಲ್​ನಿಂದ ಹೊರಬಿದ್ದ ಮೊಹಮ್ಮದ್ ಶಮಿ; ಗುಜರಾತ್​ ತಂಡಕ್ಕೆ ಹಿನ್ನಡೆ

ಸಚಿನ್​ ಅವರು ಗುಲ್ಮಾರ್ಗ್ ಪ್ರದೇಶದ ರಸ್ತೆಯೊಂದರಲ್ಲಿ ಇಲ್ಲಿನ ಸ್ಥಳೀಯರೊಂದಿಗೆ ಕ್ರಿಕೆಟ್​ ಆಡಿದ್ದಾರೆ. ಬ್ಯಾಟಿಂಗ್​ ನಡೆಸಿದ ಸಚಿನ್​ ತಮ್ಮ ನೆಚ್ಚಿನ ಕ್ರಿಕೆಟ್ ಶಾಟ್​ಗಳ ಮೂಲಕ ಗಮನಸೆಳೆದರು. ಸ್ಥಳೀಯರು ಕೂಡ ದಿಗ್ಗಜ ಆಟಗಾರನೊಂದಿಗೆ ಆಡಿದ ಸಂತಸವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟ್​ ದೇವರ ಜತೆ ಆಡಿದ್ದು ನಮ್ಮ ಪುಣ್ಯ ಎಂದು ಇಲ್ಲಿನ ಓರ್ವ ನೆಟ್ಟಿಗ ಬರೆದುಕೊಂಡಿದ್ದಾನೆ​.

Continue Reading

ಕ್ರಿಕೆಟ್

IND vs ENG: 4ನೇ ಟೆಸ್ಟ್​ ಪಂದ್ಯದಲ್ಲಾದರೂ ವಿಶ್ವ ದಾಖಲೆ ಪೂರ್ಣಗೊಳಿಸಲಿದ್ದಾರಾ ಇಂಗ್ಲೆಂಡ್​ ವೇಗಿ?

ಆ್ಯಂಡರ್ಸನ್​ 4ನೇ ಪಂದ್ಯದಲ್ಲಿ 4 ವಿಕೆಟ್​ ಕಿತ್ತರೆ ಟೆಸ್ಟ್​ನಲ್ಲಿ 700 ವಿಕೆಟ್​ ಕಿತ್ತ ವಿಶ್ವದ ಮೊದಲ ವೇಗಿ ಎನ್ನುವ ದಾಖಲೆ ಬರೆಯಲಿದ್ದಾರೆ.

VISTARANEWS.COM


on

james anderson
Koo

ರಾಂಚಿ: ಇಂಗ್ಲೆಂಡ್(IND vs ENG) ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್(James Anderson) ಅವರ 700 ಟೆಸ್ಟ್​ ವಿಕೆಟ್​ ವಿಶ್ವ ದಾಖಲೆ ಕಳೆದ ಪಂದ್ಯಲ್ಲಿ ಕೈತಪ್ಪಿ ಹೋಗಿತ್ತು. ಇದೀಗ ನಾಲ್ಕನೇ ಪಂದ್ಯದಲ್ಲಾದರೂ ಪೂರ್ಣಗೊಂಡಿದೇ ಎಂಬುದು ರಾಂಚಿ ಟೆಸ್ಟ್​ನ ಕುತೂಹಲ.

ಮೂರನೇ ಟೆಸ್ಟ್​ ಪಂದ್ಯದಲ್ಲಿ ಆ್ಯಂಡರ್ಸನ್​ ಐದು ವಿಕೆಟ್ ಪಡೆದಿದ್ದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳ ಸರದಾರನಾಗುತ್ತಿದ್ದರು. ಜತೆಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್​ ಎನಿಸಿಕೊಕೊಳ್ಳುತ್ತಿದ್ದರು. ಆದರೆ ಅವರು ಆ ಪಂದ್ಯದಲ್ಲಿ ಕೇವಲ ಒಂದು ವಿಕೆಟ್​ಗೆ ಮಾತ್ರ ಸೀಮಿತರಾಗಿದ್ದರು. ಹೀಗಾಗಿ ಈ ದಾಖಲೆಯ ಸರದಿ ನಾಲ್ಕನೇ ಪಂದ್ಯಕ್ಕೆ ಮುಂದೂಡಿತ್ತು. ಇದೀಗ ರಾಂಚಿಯಲ್ಲಿ ನಾಳೆಯಿಂದ ಆರಂಭಗೊಳ್ಳುವ ಪಂದ್ಯದಲ್ಲಿ ಅವರು 700 ವಿಕೆಟ್​ ಸಾಧನೆಗಾಗಿ 4 ವಿಕೆಟ್​ ಕೀಳುವ ಅಗತ್ಯವಿದೆ.

ಒಂದೊಮ್ಮೆ ಆ್ಯಂಡರ್ಸನ್​ 4ನೇ ಪಂದ್ಯದಲ್ಲಿ 4 ವಿಕೆಟ್​ ಕಿತ್ತು 700 ವಿಕೆಟ್​ ಪೂರ್ತಿಗೊಳಿಸಿದರೆ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಆಗಲಿದ್ದಾರೆ. ವೇಗಿಗಳ ಪೈಕಿ ಮೊದಲನೆಯವರಾಗಲಿದ್ದಾರೆ. ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಈ ಸಾಧಕರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಕ್ರಿಕೆಟ್​ ಆಡುತ್ತಿರುವ ಆಟಗಾರರ ಪೈಕಿ ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಕಿತ್ತ ದಾಖಲೆ ಕೂಡ ಜೇಮ್ಸ್ ಆಂಡರ್ಸನ್ ಹೆಸರಿನಲ್ಲಿದೆ. 513* ವಿಕೆಟ್​ ಪಡೆದಿರುವ ಆಸ್ಟ್ರೇಲಿಯಾದ ಸ್ಪಿನ್ನರ್​ ನಥಾನ್​ ಲಿಯೋನ್​ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಶ್ವಿನ್​ಗೆ ಮೂರನೇ ಸ್ಥಾನ. ಅಶ್ವಿನ್​ 501* ವಿಕೆಟ್​ ಕಿತ್ತಿದ್ದಾರೆ.

ಇದನ್ನೂ ಓದಿ IND vs ENG 4th Test: ರಾಂಚಿ ಟೆಸ್ಟ್​ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್​; ಘಾತಕ ವೇಗಿ ಆಗಮನ

ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿ

ಆಟಗಾರದೇಶವಿಕೆಟ್​
ಮುತ್ತಯ್ಯ ಮುರಳೀಧರನ್ಶ್ರೀಲಂಕಾ800
ಶೇನ್ ವಾರ್ನ್ ಆಸ್ಟ್ರೇಲಿಯಾ708
ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್​696*
ಅನಿಲ್ ಕುಂಬ್ಳೆಭಾರತ619
ಸ್ಟುವರ್ಟ್ ಬ್ರಾಡ್ಇಂಗ್ಲೆಂಡ್​604
ಗ್ಲೆನ್ ಮೆಕ್‌ಗ್ರಾತ್ಆಸ್ಟ್ರೇಲಿಯಾ563
ಕರ್ಟ್ನಿ ವಾಲ್ಷ್ ವೆಸ್ಟ್​ ಇಂಡೀಸ್​519
ನಾಥನ್ ಲಿಯಾನ್ಆಸ್ಟ್ರೇಲಿಯಾ512*
ರವಿಚಂದ್ರನ್ ಅಶ್ವಿನ್ಭಾರತ501*
ಡೇಲ್ ಸ್ಟೈನ್ದಕ್ಷಿಣ ಆಫ್ರಿಕಾ439


2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜೇಮ್ಸ್​ ಆ್ಯಂಡರ್ಸನ್​ ಅವರು ಇಂಗ್ಲೆಂಡ್​ ಕಂಡ ಶ್ರೇಷ್ಠ ಬೌಲರ್​ಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 2003ರಲ್ಲಿ ಅವರು ಟೆಸ್ಟ್​ ಕ್ರಿಕೆಟ್​ಗೆ ಅಡಿ ಇರಿಸಿದ್ದರು. ಇದುವರೆಗೆ ಇಂಗ್ಲೆಂಡ್​ ಪರ ಅವರು 185 ಟೆಸ್ಟ್​ ಪಂದ್ಯ ಆಡಿ 696* ವಿಕೆಟ್​ ಕಿತ್ತಿದ್ದಾರೆ. 32 ಬಾರಿ 5 ವಿಕೆಟ್​ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಮೂರು ಸಲ 10 ವಿಕೆಟ್​ ಪಡೆದಿದ್ದಾರೆ. 194 ಏಕದಿನ ಪಂದ್ಯ ಆಡಿದ್ದರೂ ಕೂಡ ಆ್ಯಂಡರ್ಸನ್ ಯಶಸ್ಸು ಸಾಧಿಸಿದ್ದು ಟೆಸ್ಟ್​ ಕ್ರಿಕೆಟ್​ನಲ್ಲಿ.

ವಾರ್ನ್ ದಾಖಲೆ ಮುರಿಯುವ ಅವಕಾಶ


ಆಸ್ಟ್ರೇಲಿಯಾದ ದಿವಂಗತ ಕ್ರಿಕೆಟಿಗ ಶೇನ್​ ವಾರ್ನ್ ಅವರು ಸದ್ಯ 708 ಟೆಸ್ಟ್​ ವಿಕೆಟ್​ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಜೇಮ್ಸ್​ ಆ್ಯಂಡರ್ಸನ್​ ಅವರು ಭಾರತ ವಿರುದ್ಧ ಉಳಿದಿರುವ 2 ಟೆಸ್ಟ್​ ಪಂದ್ಯಗಳಲ್ಲಿ 12 ವಿಕೆಟ್​ ಕಿತ್ತರೆ ವಾರ್ನ್​ ಅವರ ದಾಖಲೆ ಪತನಗೊಳ್ಳಲಿದೆ. ಆ್ಯಂಡರ್ಸನ್ ದ್ವಿತೀಯ ಸ್ಥಾನ ಅಲಂಕರಿಸಲಿದ್ದಾರೆ. ಆದರೆ 800 ವಿಕೆಟ್​ ಕಿತ್ತು ಅಗ್ರಸ್ಥಾನ ಪಡೆದಿರುವ ಮುತ್ತಯ್ಯ ಮುರಳೀಧರನ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿಯುವುದು ಕಷ್ಟ ಸಾಧ್ಯ. ಏಕೆಂದರೆ ಈಗ ದೀರ್ಘ ಕಾಲ ಟೆಸ್ಟ್​ ಪಂದ್ಯಗಳನ್ನು ಆಡುವ ಆಟಗಾರರೇ ಕಡಿಮೆ.

Continue Reading

ಪ್ರಮುಖ ಸುದ್ದಿ

Shoaib Malik : ಮೂರು ಮದುವೆಯಾಗಿರುವ ಶೋಯೆಬ್​ ಮಲಿಕ್​ ಫಿಟ್ನೆಸ್​ ಸೀಕ್ರೆಟ್ ಬಹಿರಂಗ!

Shoaib Malik : ಶೋಯೆಬ್ ಮಲಿಕ್​ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಿ ನಟಿ ಸನಾ ಜಾವೆದ್ ಅವರನ್ನು ಇತ್ತೀಚೆಗೆ ಮದುವೆಯಾಗಿದ್ದಾರೆ.

VISTARANEWS.COM


on

Shoaib Malik
Koo

ಕರಾಚಿ: ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆಲ್​ರೌಂಡರ್​​ ಶೋಯೆಬ್ ಮಲಿಕ್ (Shoaib Malik) ಇತ್ತೀಚೆಗೆ ಪೇಶಾವರ್ ಝಲ್ಮಿ ಮತ್ತು ಕರಾಚಿ ಕಿಂಗ್ಸ್ ನಡುವಿನ ಪಾಕಿಸ್ತಾನ ಸೂಪರ್ ಲೀಗ್ 2024 ರ 6 ನೇ ಪಂದ್ಯದ ಮಧ್ಯದ ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ. ಇನ್ನಿಂಗ್ಸ್ ವಿರಾಮದ ಸಮಯದಲ್ಲಿ, ಆ್ಯಂಕರ್​ ಝೈನಬ್ ಅಬ್ಬಾಸ್ ಅವರು ಮಲಿಕ್​ಗೆ ಮೂರನೇ ಮದುವೆಗಾಗಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಲಿಕ್ ತಮ್ಮ ಫಿಟ್ನೆಸ್ ಸೀಕ್ರೆಟ್​ ಬಗ್ಗೆ ಮಾತನಾಡಿದ್ದಾರೆ.

ಪಾಕಿಸ್ತಾನದ ನಟಿ ಸನಾ ಜಾವೇದ್ ಅವರೊಂದಿಗಿನ ವಿವಾಹದ ನಂತರ ಶೋಯೆಬ್ ಮಲಿಕ್ ಹೆಚ್ಚು ಫಿಟ್ ಆಗಿ ಕಾಣುತ್ತಿದ್ದಾರೆ ಎಂದು ಝೈನಬ್​ ಅಬ್ಬಾಸ್​ ಹೇಳಿದ್ದಾರೆ. ಹೀಗಾಗಿ ಅವರು ಫಿಟ್ನೆಸ್ ರಹಸ್ಯಗಳ ಹೇಳುವಂತೆ ಶೋಯೆಬ್ ಮಲಿಕ್ ಅವರನ್ನು ಪ್ರಶ್ನಿಸಿದ್ದಾರೆ. ಮೂರು ಮದುವೆಯಾದ ಬಳಿಕವೂ ಇಷ್ಟೊಂದು ಫಿಟ್​ ಆಗಿರುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : IPL 2024: ಐಪಿಎಲ್​ನಿಂದ ಹೊರಬಿದ್ದ ಮೊಹಮ್ಮದ್ ಶಮಿ; ಗುಜರಾತ್​ ತಂಡಕ್ಕೆ ಹಿನ್ನಡೆ

ಕಠಿಣ ಪರಿಶ್ರಮ ಮತ್ತು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುವುದು ಮತ್ತು ಆರೋಗ್ಯಕರ ಆಹಾರ ಸೇವನೆಯೇ ತಮ್ಮ ಫಿಟ್ನೆಸ್​ ರಹಸ್ಯ ಎಂಬುದಾಗಿ ಅವರು ಆ ವೇಳೆ ಹೇಳಿದ್ದಾರೆ.

ಇಬ್ಬರ ನಡುವಿನ ಸಂಭಾಷಣೆ ಇಲ್ಲಿದೆ

ಝೈನಬ್ ಅಬ್ಬಾಸ್ ಈ ರೀತಿ ಕೇಳಿದರು. ಮದುವೆಯಾದ ನಂತರ ನೀವು ಇನ್ನೂ ಸದೃಢರಾಗಿ ಕಾಣುತ್ತಿದ್ದೀರಿ. ಇದರ ರಹಸ್ಯವೇನು? ಇದಕ್ಕೆ ಉತ್ತರಿಸಿದ ಶೋಯೆಬ್ ಮಲಿಕ್, ಸ್ವಚ್ಛವಾಗಿ ತಿನ್ನಿ, ಕಷ್ಟಪಟ್ಟು ಕೆಲಸ ಮಾಡಿ ಮತ್ತು ನೀವು ಏನು ಮಾಡಿದರೂ ಸಂತೋಷದಿಂದ ಮಾಡಿ ಎಂಬುದೇ ನನ್ನ ಯಶಸ್ಸಿನ ಗುಟ್ಟು ಎಂದು ಹೇಳಿದರು. .

ಈ ಪಂದ್ಯದಲ್ಲಿ ಮಲಿಕ್ 29 ಎಸೆತಗಳಲ್ಲಿ 100 ಸ್ಟ್ರೈಕ್ ರೇಟ್ನೊಂದಿಗೆ 29 ರನ್ ಗಳಿಸಿದ್ದರು. ಕರಾಚಿ ಕಿಂಗ್ಸ್ ಪರ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ ನಂತರ ತಂಡವು ಪಂದ್ಯವನ್ನು ಏಳು ವಿಕೆಟ್​ಗಳಿಂದ ಗೆದ್ದುಕೊಂಡಿತು.

ಊಹಾಪೋಹಗಳಿಗೆ ತೆರೆ ಎಳೆದ ಶೋಯೆಬ್ ಮಲಿಕ್

ಬಾಂಗ್ಲಾದೇಶ ಪ್ರೀಮಿಯರ್ ಲೀಗ್ 2024 ರಲ್ಲಿ ಖುಲ್ನಾ ಟೈಗರ್ಸ್​​ ತಂಡವನ್ನು ಪ್ರತಿನಿಧಿಸುವ ಶೋಯೆಬ್ ಮಲಿಕ್ ಇತ್ತೀಚೆಗೆ ಅನೇಕ ವಿವಾದಗಳಲ್ಲಿ ಸಿಲುಕಿದ್ದರು. ಆದಾಗ್ಯೂ, ಅವರು ಅವುಗಳನ್ನು ವದಂತಿಗಳು ಎಂದು ಶೋಯೆಬ್​ ಮಲಿಕ್ ಹೇಳಿದ್ದರು.

ಅರೆಕಾಲಿಕ ಸ್ಪಿನ್ನರ್ ಆಗಿರುವ ಶೋಯೆಬ್ ಮಲಿಕ್ ಅವರು ಪಂದ್ಯದಲ್ಲಿ ಸತತವಾಗಿ ನೋ ಬಾಲ್​ ಎಸೆದಿದ್ದರು. ಇದು ಅನುಮಾನಕ್ಕೆ ಕಾರಣವಾಗಿತ್ತು. ಸ್ಪಿನ್ನರ್ ಆಗಿರುವ ಅವರು ಉದ್ದೇಶಪೂರ್ವಕವಾಗಿ ಮ್ಯಾಚ್​ ಫಿಕ್ಸಿಂಗ್ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ಮದುವೆಯಲ್ಲಿ ವಿವಾದಕ್ಕೆ ಒಳಗಾದ ಶೋಯೆಬ್​

ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ಅವರ ದಾಂಪತ್ಯದಲ್ಲಿ ಹಲವು ವರ್ಷಗಳ ಒಡಕು ಮೂಡಿತ್ತು. ಅದಕ್ಕೆ ಅವರ ಮೂರನೇ ಪತ್ನಿ ಸನಾ ಜಾವೆದ ಅವರೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ. ಅವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂದು ಸುದ್ದಿಯಾಗುವ ಸಮಯದಲ್ಲಿ ಮಲಿಕ್ ಸನಾ ಜೊತೆಗೆ ಸೋಶಿಯಲ್ ಮೀಡಿಯಾ ಪೋಸ್ಟ್​ ಹಾಕಿದ್ದರು. ಈ ವೇಳೆ ಸಾನಿಯಾ ಮಿರ್ಜಾ ವಿವಾಹ ವಿಚ್ಛೇದನ ಸುದ್ದಿ ಬಹಿರಂಗ ಮಾಡಿದ್ದರು.

Continue Reading
Advertisement
Sringeri Jagadguru inaugurates Shivashakti Dhama at Palikoppa in Hubballi
ಧಾರವಾಡ12 mins ago

Shivshakti Dhama: ಹುಬ್ಬಳ್ಳಿಯ ಪಾಲಿಕೊಪ್ಪದಲ್ಲಿ ಶೃಂಗೇರಿ ಜಗದ್ಗುರುಗಳಿಂದ ಶಿವಶಕ್ತಿ ಧಾಮ ಲೋಕಾರ್ಪಣೆ

Tax on temples and money used for other community Fictitious accusation Says CM Siddaramaiah
ದೇಶ24 mins ago

ದೇಗುಲಗಳಿಗೆ ತೆರಿಗೆ, ಅನ್ಯಧರ್ಮೀಯರಿಗೆ ಹಣ ಬಳಕೆ ಕಪೋಲಕಲ್ಪಿತ ಆರೋಪ; ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು!

Nitin Gadkari highways
ಬೆಂಗಳೂರು49 mins ago

Nitin Gadkari : ಪೆಟ್ರೋಲ್‌ ಬೆಲೆ ಶೀಘ್ರವೇ 50 ರೂ.ಗೆ ಇಳಿಯಲಿದೆ ಎಂದ ನಿತಿನ್‌ ಗಡ್ಕರಿ

BJP hits out at Rahul Gandhi for insulting Actor aishwarya rai bachchan
ದೇಶ1 hour ago

Rahul Gandhi: ಐಶ್ವರ್ಯಾ ರೈರನ್ನು ಅವಮಾನಿಸಿದ ರಾಹುಲ್‌ ಗಾಂಧಿಗೆ ಬಿಜೆಪಿ ತರಾಟೆ

INDIA Alliance partners Congress and AAP Seal seat deal for Goa, Haryana, Gujarat
ದೇಶ2 hours ago

INDIA Alliance: ದಿಲ್ಲಿ ಬಳಿಕ ಗೋವಾ, ಹರ್ಯಾಣ, ಗುಜರಾತ್‌ನಲ್ಲೂ ಕಾಂಗ್ರೆಸ್-ಆಪ್ ಸೀಟು ಹಂಚಿಕೆ ಫೈನಲ್!

Aryaman Ashok Shankar
ಚಾಮರಾಜನಗರ2 hours ago

Social Sevice : ಶ್ರವಣದೋಷವುಳ್ಳ ಮಕ್ಕಳ ಕೇಂದ್ರಕ್ಕೆ ಕ್ರೀಡಾಪರಿಕರಗಳ ವಿತರಣೆ

ರಾಜಕೀಯ2 hours ago

Karnataka Budget Session 2024: ಈ ಸರ್ಕಾರದಿಂದ ಹಿಂದೂಗಳಿಗೆ ದ್ರೋಹ: ಆರ್‌. ಅಶೋಕ್‌

Mudda Hanumegowda joins Congress
ತುಮಕೂರು2 hours ago

Mudda hanumegowda : ಕೆಲವರ ಅತೃಪ್ತಿ ನಡುವೆ ಮತ್ತೆ ಕೈ ಸೇರಿದ ಮುದ್ದಹನುಮೇಗೌಡ

D. hiremath foundation
ಉತ್ತರ ಕನ್ನಡ2 hours ago

Arun Yogiraj : ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್​ ಯೋಗಿರಾಜ್​ಗೆ ‘ಅಭಿನವ ಅಮರ ಶಿಲ್ಪಿ’ ಪುರಸ್ಕಾರ

For Registration Movie Telugu Dubbing Rights sold for huge amount
ಸಿನಿಮಾ2 hours ago

For Registration Movie: ರಿಲೀಸ್‌ಗೂ ಮೊದ್ಲೇ ’ಫಾರ್ ರಿಜಿಸ್ಟ್ರೇಷನ್’ಗೆ ಡಿಮ್ಯಾಂಡ್! ತೆಲುಗಿಗೂ ಹೊರಟ ಪೃಥ್ವಿ-ಮಿಲನಾ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Catton Candy contain cancer Will there be a ban in Karnataka
ಬೆಂಗಳೂರು4 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ8 hours ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ5 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ5 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ6 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ6 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

ಟ್ರೆಂಡಿಂಗ್‌